ಬೆಂಗಳೂರು: ಸೆಪ್ಟೆಂಬರ್ 22ರಂದು ದೇಶಾದ್ಯಂತ ಎನ್‌ಐಎ ದಾಳಿ ನಡೆಸಿ ಬಂಧಿಸಿದ ಇಬ್ಬರು ಪಿಎಫ್‌ಐ ಮುಖಂಡರಿಗೆ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಯ ಲಿಂಕ್ ಇರುವುದು ಖಚಿತವಾಗಿದೆ.
ಸುಳ್ಯದ ಬೆಳ್ಳಾರೆಯಲ್ಲಿ ನಡೆದ ಹಿಂದೂ ಮುಖಂಡ ಪ್ರವೀಣ್ ನೆಟ್ಟಾರ್ ಹತ್ಯೆ ಹಾಗೂ ಪಿಎಫ್‌ಐ ನಡುವೆ ಇರುವ ಲಿಂಕ್ ಶೋಧಿಸುತ್ತಿರುವ ಎನ್‌ಐಎ ತನಿಖಾಧಿಕಾರಿಗಳಿಗೆ, ಬಂಧಿತರಲ್ಲೇ ಇಬ್ಬರು ಈ ಘಟನೆ ಜತೆಗೆ ಸಂಬಂಧ ಹೊಂದಿರುವುದು ಪತ್ತೆಯಾಗಿದೆ. ನೆಟ್ಟಾರು ಹತ್ಯೆ ಸಂಬಂಧ ಇವರಿಬ್ಬರನ್ನು ವಶಕ್ಕೆ ಪಡೆದು ಹೆಚ್ಚಿನ ತನಿಖೆ ನಡೆಸಲು NIA ನಿರ್ಧಾರಿಸಿದೆ.
ಇದನ್ನೂ ಓದಿ | PFI Plot | ರಾಮಮಂದಿರ ಸ್ಫೋಟಿಸಲು ಪಿಎಫ್‌ಐ ಸಂಚು, ರಾಜ್ಯದಲ್ಲಿ ಸಂಘಟನೆ ಮೇಲೆ ನಿಗಾ ಎಂದ ಬೊಮ್ಮಾಯಿ
ಸೆಪ್ಟೆಂಬರ್ 22ರಂದು ದೇಶಾದ್ಯಂತ ಪಿಎಫ್‌ಐ ಕಚೇರಿ, ಮುಖಂಡರ ಮನೆಗಳ ಮೇಲೆ NIA ದಾಳಿ ನಡೆದಿತ್ತು. ಕರ್ನಾಟಕದಲ್ಲೂ ಹಲವೆಡೆ ದಾಳಿ ನಡೆಸಲಾಗಿತ್ತು. ಈ ವೇಳೆ 7 PFI ಮುಖಂಡರನ್ನು ಬಂಧಿಸಿ, ದೆಹಲಿಗೆ ಕರೆದೊಯ್ದು ವಿಚಾರಣೆ ಮಾಡಲಾಗಿತ್ತು. ಇವರಲ್ಲಿ ಇಬ್ಬರು ಮುಖಂಡರಿಗೆ ನೆಟ್ಟಾರ್ ಹತ್ಯೆ ಲಿಂಕ್ ಹಾಗೂ ಹತ್ಯೆ ಆರೋಪಿಗಳ ಜೊತೆಗೆ ನಿಕಟ ಸಂಪರ್ಕ ಇರುವುದು ಪತ್ತೆ ಬಂಧಿತರ ಮೊಬೈಲ್ ಫೋನ್ ಪರಿಶೀಲನೆ ವೇಳೆ ಪತ್ತೆಯಾಗಿದೆ.
ಹತ್ಯೆಯ ಹಿಂದಿನ ದಿನ ಇವರು ಆರೋಪಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಇದರ ಬಗ್ಗೆ ಸಾಕ್ಷ್ಯಗಳು ಕೂಡ ಲಭ್ಯವಾಗಿವೆ. ಇಬ್ಬರ ಮೊಬೈಲ್ ಫೋನ್‌ಗಳನ್ನೂ ಸಂಪೂರ್ಣ ರಿಟ್ರೀವ್ ಮಾಡಲಾಗಿದೆ. ಇಬ್ಬರಿಗೂ ಬಾಡಿ ವಾರೆಂಟ್ ಮೂಲಕ ಬೆಂಗಳೂರಿಗೆ ಕರೆತಂದು ವಿಚಾರಣೆ ಮಾಡಲು ಸಿದ್ಧತೆ ನಡೆಸಲಾಗಿದ್ದು, ಶೀಘ್ರದಲ್ಲೇ NIA ಅಧಿಕಾರಿಗಳು ಬೆಂಗಳೂರಿಗೆ ಕರೆತರಲಿದ್ದಾರೆ.
ಇದನ್ನೂ ಓದಿ | ಪ್ರವೀಣ್ ನೆಟ್ಟಾರು ಪತ್ನಿಗೆ ಮುಖ್ಯಮಂತ್ರಿ ಸಚಿವಾಲಯದಲ್ಲಿ ಉದ್ಯೋಗ ನೀಡಿದ ಸರಕಾರ, 30,350 ರೂ. ವೇತನ