Site icon Vistara News

Actor Darshan : ತನಿಖಾಧಿಕಾರಿಗಳ ವಿರುದ್ಧ ಬ್ಯಾಟಿಂಗ್‌ ಮಾಡಿದ ದರ್ಶನ್‌ ಪರ ವಕೀಲ; ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ

Actor Darshan Renukaswamy murder case

ಬೆಂಗಳೂರು: ಚಿತ್ರದುರ್ಗದ (Chitradurga) ರೇಣುಕಾಸ್ವಾಮಿ ಕೊಲೆ (Renukaswamy Murder case) ಪ್ರಕರಣಕ್ಕೆ ಸಂಬಂಧ ಜೈಲು ಪಾಲಾಗಿರುವ ನಟ ದರ್ಶನ್ (Actor Darshan), ಪವಿತ್ರಗೌಡ, ರವಿಶಂಕರ್, ಲಕ್ಷ್ಮಣ್‌ರ ಜಾಮೀನು ಅರ್ಜಿ‌ ವಿಚಾರಣೆಯು 57ನೇ ಸಿಸಿಹೆಚ್ ಕೋರ್ಟ್‌ನಲ್ಲಿ ಶುಕ್ರವಾರ (ಅ.4) ನಡೆಯಿತು. ನಟ ದರ್ಶನ್ ಪರ ಸಿ.ವಿ ನಾಗೇಶ್, ಪವಿತ್ರಗೌಡ ಗೌಡ ಪರ ಟಾಮಿ ಸೆಬಾಸ್ಟಿಯನ್, ರವಿಶಂಕರ್ ಪರ ರಂಗನಾಥ್ ರೆಡ್ಡಿ, ಲಕ್ಷ್ಮಣ್ ಪರ ಸೂರ್ಯ ಮುಕುಂದ್ ವಾದ ಮಂಡಿಸಿದ್ದರು. ತನಿಖಾಧಿಕಾರಿಗಳ ವಿರುದ್ಧ ಬ್ಯಾಟಿಂಗ್‌ ಮಾಡಿದ ದರ್ಶನ್‌ ಪರ ವಕೀಲ ನಾಗೇಶ್‌, ದೋಷಾರೋಪ ಪಟ್ಟಿಯಲ್ಲಿ ತನಿಖಾಧಿಕಾರಿಗಳ ಲೋಪವನ್ನು ಉಲ್ಲೇಖಿಸಿದರು. ವಾದ ಆಲಿಸಿದ ಕೋರ್ಟ್‌ ಅರ್ಜಿ ವಿಚಾರಣೆಯನ್ನು ಶನಿವಾರ ಮಧ್ಯಾಹ್ನಕ್ಕೆ ಮುಂದೂಡಿದೆ.

ಮೊದಲಿಗೆ ದರ್ಶನ್‌ ಪರ ವಕೀಲ ಸಿ.ವಿ ನಾಗೇಶ್‌ ವಾದ ಶುರು ಮಾಡಿದರು. ದರ್ಶನ್ ವಿರುದ್ಧದ ಆರೋಪದ ಚಾರ್ಜ್ ಶೀಟ್ ಕ್ರೋಢೀಕೃತ ವರದಿ ಸಲ್ಲಿಕೆ ಮಾಡಲಾಗಿದೆ. ಚಾರ್ಜ್ ಶೀಟ್‌ನ ಎಲ್ಲಾ ಹೇಳಿಕೆಗಳು, ಸಾಕ್ಷಿಗಳು ಹಾಗೂ ಎಫ್ಎಸ್ಎಲ್ ರಿಪೋರ್ಟ್ ವರದಿಯಾಗಿದೆ. ಪ್ರಕರಣದ ಮೊದಲ ವಿಚಾರಣೆ ( ಟ್ರಯಲ್) ಪತ್ರಿಕೆ ಹಾಗೂ ಎಲೆಕ್ಟ್ರಾನಿಕ್‌ ಮೀಡಿಯಾದಲ್ಲಿ ಆಗಿದೆ. ಈ ವರದಿಯಿಂದ ನನ್ನ ಕಕ್ಷಿದಾರನಿಗೆ ದೊಡ್ಡ ನಷ್ಟವಾಗಿದೆ. ಸುಪ್ರೀಂ ಕೋರ್ಟ್ 2016ರ ಆದೇಶ ಉಲ್ಲೇಖಿಸಿದ ನಾಗೇಶ್‌, ಪ್ರಕರಣದ ಎವಿಡೆನ್ಸ್ ಮತ್ತು ಮೆರಿಟ್ಸ್ ತುಂಬಾ ದೊಡ್ಡ ಪಬ್ಲಿಸಿಟಿ ಆಗಬಾರದು. ಇಲ್ಲಿ ದರ್ಶನ್ ವಿರುದ್ಧ ದೊಡ್ಡ ಮಟ್ಟದ ಪ್ರಚಾರವಾಗಿದೆ. ಇದು ನ್ಯಾಯದಾನದ ಮೇಲೆ ಪರಿಣಾಮ ಬೀರಲಿದೆ ಎಂದು ಆದೇಶದ ಬಗ್ಗೆ ಸಿ.ವಿ. ನಾಗೇಶ್ ಉಲ್ಲೇಖಿಸಿದರು. ಈ ವೇಳೆ ನನಗೆ ಪ್ರತಿ ನೀಡಿಲ್ಲ ಎಂದು ಎಸ್‌ಪಿಪಿ ಪ್ರಸನ್ನ ಕುಮಾರ್ ಹೇಳಿದರು.

ಈ ಪ್ರಕರಣದಲ್ಲಿ ಎಲೆಕ್ಟ್ರಾನಿಕ್ ಮೀಡಿಯಾ ಪಬ್ಲಿಸಿಟಿಯೂ ಪರಿಣಾಮ ಬೀರಿದೆ. ಎಫ್ಐಆರ್‌ನಿಂದ ಸಾಕ್ಷಿಗಳ ತನಕ ಎಲ್ಲಾ ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದು, ಸಂಪೂರ್ಣ ಚಾರ್ಜ್ ಶೀಟ್ ಪ್ರತಿ ಸಿಕ್ಕಿದೆ. ಅವರು ನೇರವಾಗಿ ನ್ಯಾಯಾವ್ಯವಸ್ಥೆಯಲ್ಲಿ ಮಧ್ಯಪ್ರವೇಶಿಸಿದ್ದಾರೆ. ಪ್ರಕರಣದ ಟ್ರಾಯಲ್ ನ್ಯಾಯಾಲಯದಲ್ಲಿ ಆಗಬೇಕು ಹೊರತು ಯಾವುದೇ ಪ್ಯಾನಲ್ ಡಿಸ್ಕ್‌ಷನ್‌ನಲ್ಲಿ ಅಲ್ಲ. ಈ ಅಂಶಗಳ ಪರಿಗಣಿಸಿ ತನಿಖಾಧಿಕಾರಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ದರ್ಶನ್ ಪರ ಸಿ ವಿ ನಾಗೇಶ್ ವಾದಿಸಿದರು.

ಮೊದಲು ಪ್ರಕರಣದ ಸೀಜಿಂಗ್ ವೇಳೆ ಸಿಕ್ಕಿರುವುದು ಏನು? ಮರದ ಕೊಂಬೆಗಳು, ನೈಲಾನ್ ಹಗ್ಗ, ವಾಟರ್ ಬಾಟೆಲ್ ಮತ್ತು ಬಟ್ಟೆ ಮಾತ್ರ. ಆದರೆ ಪೊಲೀಸರು ಅದನ್ನೇ ಇಲ್ಲಿ ಸಾಕ್ಷಿಯನ್ನಾಗಿ ಮಾಡಿದ್ದಾರೆ. ಸುಮಾರು ಅರ್ಧ ಅಡಿ ಉದ್ದದ ಕೋಲು, ವಾಟರ್ ಬಾಟೆಲ್ ಒಂದು ಪತ್ತೆಯಾಗಿದ್ದು, ಅದರಲ್ಲಿ ಸ್ಟೋನಿ ಬ್ರೂಕ್ ಚಿನ್ಹೆ ಇದೆ. ಕೋಲಿನ ಮೇಲೆ ಪಿಂಕ್ ಮತ್ತು ಕೆಂಪು ಬಣ್ಣದ ನೈಲಾನ್ ಹಗ್ಗ ಸಿಕ್ಕಿರುತ್ತದೆ. ಅದರಲ್ಲಿ ರಕ್ತದ ಕಲೆ ಪತ್ತೆಯಾಗಿದೆ. ಪ್ರಕರಣದ ಪಂಚನಾಮೆ ಓದಿ ವಾದ ಮುಂದುವರಿಸಿದ ಸಿ.ವಿ ನಾಗೇಶ್ ಇತರ ಆರೋಪಿಗಳ ಸ್ವ ಇಚ್ಛೆ ಹೇಳಿಕೆಯ ಬಗ್ಗೆ ಉಲ್ಲೇಖಿಸಿದರು. ಆರೋಪಿಗಳ ಬಂಧನ ಮೇ 11ರಂದು ಆಗಿದೆ, 12ರಂದು ಸ್ವ ಇಚ್ಚಾ ಹೇಳಿಕೆ ಪಡೆಯಲಾಗಿದೆ. ಹಾಗಾದರೆ ಅವರಿಗೆ ಮೊದಲೆ ಕೇಸ್ ಅಪರಾಧದ ಅರಿವು ಇರುತ್ತಾ ಎಂದು ಸಿ.ವಿ ನಾಗೇಶ್ ಪ್ರಶ್ನಿಸಿದರು.

ಓರ್ವ ವ್ಯಕ್ತಿ ಗುಪ್ತಾಂಗಕ್ಕೆ ಗುದ್ದಿ ಸಾಯಿಸಿದ್ದಾಗಿ ವಿನಯ್ ಹೇಳಿದ್ದ, ಆದಾದ ಬಳಿಕ ಗಿರೀಶ್ ನಾಯ್ಕ್ ಇನ್ಸ್‌ಪೆಕ್ಟರ್‌ಗೆ ಹೇಳಿದೆ. ಆಗ ಇನ್ಸ್‌ಪೆಕ್ಟರ್‌ ಹೇಳಿದ್ದು, ಅವರ ಕಾನ್ಫಿಡೆನ್ಸ್ ತೆಗೆದುಕೊಂಡು ಕೊಲೆ ಮಾಡಿದವರು ಯಾರು ಅಂತಾ ತಿಳಿದುಕೋ ಅಂದಿದ್ದರಂತೆ. ಕೊಲೆ ಮಾಡಿದ್ದು ದರ್ಶನ್ ಅಭಿಮಾನಿಗಳು ಅಂದಾಗ, ಮೀಡಿಯಾದವರು ಅವರೇ ಕೊಲೆ ಮಾಡಿದ್ದಾರೆ ಅಂತ ಹಾಕುತ್ತಾರೆ ಅಂತಾ ಹೇಳಿದ್ದರಂತೆ. ಇದು ಸಂಪೂರ್ಣವಾಗಿ ತಿರುಚಿದ ಹೇಳಿಕೆಯಾಗಿದೆ. ‌ಪ್ಲ್ಯಾನ್‌ ಮಾಡಿ ಈ ರೀತಿ ಹೇಳಿಕೆ ದಾಖಲಿಸಲಾಗಿದೆ ಎಂದು ದರ್ಶನ್ ಪರ ಸಿ ವಿ ನಾಗೇಶ್ ವಾದಿಸಿದರು.

ಸ್ಥಳ ಮಹಜರ್ ಮಾಡಿದ ಪಿಡಬ್ಲ್ಯೂಡಿ ಎಂಜಿನಿಯರ್ ಹೇಳಿಕೆಯನ್ನು ಓದಿದ ನಾಗೇಶ್‌, ಪ್ರಕರಣದಲ್ಲಿ ಐ ವಿಟ್ನೇಸ್ ಸೆಕ್ಯೂರಿಟಿ ಗಾರ್ಡ್, ಆತನ 164 ಹೇಳಿಕೆ ದಾಖಲಾಗಿದೆ. ಆತನಿಗೆ ಕನ್ನಡವೇ ಬರಲ್ಲ ಆದರೆ ಕನ್ನಡದಲ್ಲಿ ಹೇಳಿಕೆ ದಾಖಲಾಗಿದೆ. ಇದೊಂದು ಕ್ಲಾಸಿಕ್ ಕೇಸ್ ಆಫ್ ಫ್ಯಾಬ್ರಿಕ್ ಎವಿಡೆನ್ಸ್.. ಮರುದಿನ ಬೆಳಗ್ಗೆ ಅಂದರೆ ಮಂಗಳವಾರ 10:30ಕ್ಕೆ ಪೊಲೀಸರು ಬಂದು, ಆಚೆ ಕಳಿಸಿದರು. ಈ ಪ್ರಕಾರ ಪೊಲೀಸರು ಗೋಡಾನ್ ವಶಕ್ಕೆ ಪಡೆದಿದ್ದಾರೆ. ಪ್ಲೇಸ್ ಆಫ್ ಕ್ರೈಂ ಸೀಜ್ ಮಾಡಿದ್ದಾರೆ. ಆದಾದ ಬಳಿಕ ಏಕೆ 12ನೇ ತಾರೀಕಿನ ತನಕ ಸಾಕ್ಷಿಗಳ ಕಲೆ ಹಾಕಲು, ಕೋಲು, ಹಗ್ಗ ಎಲ್ಲಾ ಕಲೆಕ್ಟ್ ಮಾಡಲು ಕಾಯ್ದರು. ಇದೆಲ್ಲವೂ ದರ್ಶನ್ ವಿರುದ್ಧ ಸಾಕ್ಷಿಗಳ ಪ್ಲಾಂಟ್ ಮಾಡಲು ಮಾಡಿದ್ದಾರೆ.

9,10 ಹಾಗೂ 11ನೇ ತಾರೀಖು ಬಿಟ್ಟು ಆಮೇಲೆ ಮಾಡಿದ್ದಾರೆ. ಲಾಕ್ ಮಾಡಿ ಸೀಲ್ ಮಾಡಿದ ಮೇಲೆ ಏಕೆ ತಡವಾಗಿ ರಿಕವರಿ ಮಾಡಿದ್ದಾರೆ. ಅಲ್ಲಿ ಮರದ ಕೊಂಬೆಗಳು, ನೈಲಾನ್ ಹಗ್ಗ, ಎಲ್ಲವನ್ನು ಆಮೇಲೆ ಇಟ್ಟು, ಪ್ಲಾಂಟ್ ಮಾಡಿದ್ದಾರೆ. ನನ್ನ ಕಕ್ಷಿದಾರನ ವಿರುದ್ಧ ಇಟ್ಟು ಪ್ರಕರಣದಲ್ಲಿ ಸಿಲುಕಿಸಿದ್ದಾರೆ. ಇಷ್ಟು ತಡವಾಗಿ ಮಾಡಿರುವುದು ಅನುಮಾನ ಮೂಡಿಸಿದೆ. ಕೃತ್ಯದಲ್ಲಿ ವೆಫನ್ ಫ್ಯಾಬ್ರಿಕೇಟ್ ಮಾಡಲಾಗಿದೆ ಎಂದು ನಾಗೇಶ್‌ ವಾದಿಸಿದಾಗ, ಮಧ್ಯಪ್ರವೇಶಿಸಿದ ಎಸ್‌ಪಿಪಿ ಪ್ರಸನ್ನ ಕುಮಾರ್ ಇದಕ್ಕೆ ನಾನು ಉತ್ತರ ಆಮೇಲೆ ಹೇಳುತ್ತೇನೆ ಎಂದರು.

ತನಿಖಾಧಿಕಾರಿಗಳ ಲೋಪ?

ಪ್ರಕರಣದಲ್ಲಿ ಪೊಲೀಸರ ಹಾಗೂ ತನಿಖಾಧಿಕಾರಿಯ ಲೋಪದ ಬಗ್ಗೆ ಉಲ್ಲೇಖಿಸಿದ ನಾಗೇಶ್‌, ಪೊಲೀಸರಿಗೆ ಪ್ರಕರಣ ಕೃತ್ಯದ ಜಾಗ, ಬಳಸಿದ ವಸ್ತುಗಳ ಬಗ್ಗೆ ಮಾಹಿತಿ ಇತ್ತು. ಆದರೂ ಏಕೆ ತಡವಾಗಿ ಪಂಚನಾಮೆ ಮಾಡಿದರು. 11ನೇ ತಾರೀಖು ಆದರೂ ಮಾಡಬೇಕಿತ್ತು, ಸದ್ಯ ಇರುವ ಮಿಸ್ಟರಿ ಎಂದು ಸಿವಿ‌ ನಾಗೇಶ್ ಪ್ರಕರಣದ ಐಒ ನೀಡಿರುವ ಸಾಕ್ಷಿ ಹೇಳಿಕೆಯ ಅಂಶಗಳ ಓದಿದ್ರು.

ಜೂನ್‌11 ರಂದು ದರ್ಶನ್‌ನಿಂದ ಸ್ವ ಇಚ್ಛೆ ಹೇಳಿಕೆ ಪಡೆದಿದ್ದರೆ, ಆದರೆ ರಿಕವರಿ ಮಾಡಿದ್ದು ಮಾತ್ರ 14 ಮತ್ತು‌15 ರಂದು? ಅಲ್ಲಿಯವರೆಗೆ ಪೊಲೀಸರು ಏನು ಮಾಡುತ್ತಾ ಇದ್ದರು. ದರ್ಶನ್ ಹೇಳಿದ‌ ರೀತಿ ಅಂದು ಧರಿಸಿದ್ದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಇಲ್ಲಿ ದರ್ಶನ್ ಅಂದು ಧರಿಸಿದ್ದು ಚಪ್ಪಲಿಯೋ? ಶೂ ವೋ? ದರ್ಶನ್ ಧರಿಸಿದ್ದ ಬಟ್ಟೆಗಳನ್ನು ಬಿನ್‌ನಲ್ಲಿ ಹಾಕಿದ್ದಾಗಿ ಹೇಳಿಕೆ ನೀಡಿದ್ದರು. ಮನೆಯಲ್ಲಿ ಪಂಚನಾಮೆ ವೇಳೆ ಬಿನ್‌ನಲ್ಲಿ‌ ಬಟ್ಟೆಗಳು ದೊರಕಿಲ್ಲ. ಮನೆ ಕೆಲಸದಾಕೆ ಬಟ್ಟೆ ಒಗೆದಿರಬಹುದು ‌ಎಂದು ಟೆರೆಸ್‌ ಹೋಗಿ ನೋಡಲಾಗಿದೆ. ಬಟ್ಟೆ ಒಣಹಾಕಿದ್ದು ಪತ್ತೆಯಾಗಿದೆ. ಸರ್ಫ್ ಸೋಪ್‌ನಲ್ಲಿ ತೊಳೆದಿದ್ದಾರೆ ಅಂತಲೂ ಉಲ್ಲೇಖ ಮಾಡಲಾಗಿದೆ. ಮನೆ ಕೆಲಸದಾಕೆ ಹೇಳಿಕೆ ಪಡೆದಿದ್ದು, ಸರ್ಫ್ ಪೌಡರ್‌ನಲ್ಲಿ ನೆನೆ ಹಾಕಿ ಕೈಯಿಂದ ಕುಕ್ಕಿ ಕುಕ್ಕಿ ಒಗೆದಿದ್ದಾಗಿ ಹೇಳಿಕೆ ನೀಡಿದ್ದಾಳೆ. ಒಂದು ರೀತಿ ಅರೇಬಿಯನ್‌ ನೈಟ್ ಕಥೆ ಇದ್ದ ಹಾಗೆ ಇದೆ ಎಂದು ತನಿಖಾ ರೀತಿಯನ್ನು ಸಿ.ವಿ ನಾಗೇಶ್‌ ಪ್ರಶ್ನಿಸಿದರು.

ಹೀಗಿದ್ದಾಗ ಬಟ್ಟೆಯಲ್ಲಿ ಕಲೆ ಇದೆ ಅಂತಾ ರಿಕವರಿ ಅಂತಾರೆ ಹೇಗೆ? ರಿಕವರಿ ಮತ್ತು ಸ್ವ ಇಚ್ಚಾ ಹೇಳಿಕೆಯ ಸಂದೇಹ ಮತ್ತು ವ್ಯತ್ಯಾಸಗಳ ಬಗ್ಗೆ ಸಿ ವಿ‌ ನಾಗೇಶ್ ವಾದಿಸಿದರು. ಸ್ವ ಇಚ್ಚಾ ಹೇಳಿಕೆಗಳ ಸಾಕ್ಷಿಗಳಾಗಿ ಪರಿಗಣಿಸುವ ಬಗ್ಗೆ ಹಿಂದಿನ ಆದೇಶಗಳ ಉಲ್ಲೇಖಿಸಿದರು. ದರ್ಶನ್ ಎಲ್ಲೂ ಸಹ ತನ್ನ ಸ್ವ ಇಚ್ಚಾ ಹೇಳಿಕೆಯಲ್ಲಿ ನಾನು ಯಾವ ಡ್ರೆಸ್ ಹಾಕಿದ್ದೆ, ಯಾವ ಬಣ್ಣದ ಶರ್ಟ್ ಪ್ಯಾಂಟ್ ಅಂತ ಹೇಳಿಲ್ಲ. ಆದರೂ ಬಹಳ‌ ನಾಜೂಕಾಗಿ ಬ್ಲ್ಯಾಕ್ ಕಲರ್ ಶರ್ಟ್, ಬ್ಲೂ ಜೀನ್ಸ್ ವಶಪಡಿಸಿಕೊಂಡಿದ್ದಾರೆ.

ಸುಬ್ರಮಣ್ಯ ವರ್ಸಸ್ ಸ್ಟೇಟ್ ಆಫ್ ಕರ್ನಾಟಕ ಕೇಸ್ ಬಗ್ಗೆ ಉಲ್ಲೇಖಿಸಿದ ನಾಗೇಶ್‌, ಈ ಕೇಸ್‌ನಲ್ಲಿ ಸ್ವ ಇಚ್ಛೆ ಹೇಳಿಕೆ, ಐ ವಿಟ್ನೇಸ್ ಹೇಳಿಕೆ ಮತ್ತು ರಿಕವರಿ ತಾಳೆಯಾಗಬೇಕು. ಆದರೆ ಇಲ್ಲಿ‌ ಒಂದಕ್ಕೊಂದು ತೀರಾ ವ್ಯತ್ಯಾಸ ಇದೆ. ದರ್ಶನ್ ಚಪ್ಪಲಿ ಹಾಕಿದ್ದಾಗಿ‌ ಸ್ವ ಇಚ್ಛೆ ಹೇಳಿಕೆಯಿದೆ. ಆದರೆ ರಿಕವರಿ ಪಂಚನಾಮೆಯಲ್ಲಿ ಶೂ ಅಂತಾ ಹೇಳಲಾಗಿದೆ. ಇಲ್ಲಿ ಸ್ವ ಇಚ್ಛೆ ಹೇಳಿಕೆ ನೈಜವಾಗಿದೆ, ಪಂಚನಾಮೆ ಹೇಳಿಕೆಯೂ ಪ್ಯಾಬ್ರಿಕೇಟ್ ಆಗಿದೆ ಎಂದು ಸಿ.ವಿ ‌ನಾಗೇಶ್ ವಾದಿಸಿದರು. ಬಳಿಕ ವಾದ ಆಲಿಸಿದ ಕೋರ್ಟ್‌ ನಾಳೆ ಶನಿವಾರ (ಅ.5) ಮಧ್ಯಾಹ್ನ 12.30ಕ್ಕೆ ವಿಚಾರಣೆಯನ್ನು ಮುಂದೂಡಿದೆ. ಉಳಿದ ಆರೋಪಿಗಳ ಜಾಮೀನು ಅರ್ಜಿಗಳು ಮುಂದೂಡಿಕೆ ಆಗಿವೆ.

Exit mobile version