Actor Darshan : ತನಿಖಾಧಿಕಾರಿಗಳ ವಿರುದ್ಧ ಬ್ಯಾಟಿಂಗ್‌ ಮಾಡಿದ ದರ್ಶನ್‌ ಪರ ವಕೀಲ; ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ - Vistara News

ಬೆಂಗಳೂರು

Actor Darshan : ತನಿಖಾಧಿಕಾರಿಗಳ ವಿರುದ್ಧ ಬ್ಯಾಟಿಂಗ್‌ ಮಾಡಿದ ದರ್ಶನ್‌ ಪರ ವಕೀಲ; ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ

Actor Darshan : ನಟ ದರ್ಶನ್‌ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಯಿತು. ದರ್ಶನ್‌ ಪರ ವಾದ ಮಂಡಿಸಿದ ಸಿ.ವಿ ನಾಗೇಶ್‌, ಪ್ರಕರಣದ ದೋಷಾರೋಪ ಪಟ್ಟಿಯಲ್ಲಿ ತನಿಖಾಧಿಕಾರಿಗಳ ಲೋಪ ಇದೆ. ದರ್ಶನ್‌ರನ್ನು ಪ್ರಕರಣದಲ್ಲಿ ಸಿಲುಕಿಸಲಾಗುತ್ತಿದೆ ಎಂದು ವಾದಿಸಿದ್ದಾರೆ. ಸುದೀರ್ಘ ವಾದ ಆಲಿಸಿದ ಕೋರ್ಟ್‌ ನಾಳೆ ಶನಿವಾರಕ್ಕೆ ವಿಚಾರಣೆಯನ್ನು ಮುಂದೂಡಿದೆ.

VISTARANEWS.COM


on

Actor Darshan Renukaswamy murder case
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ

ಬೆಂಗಳೂರು: ಚಿತ್ರದುರ್ಗದ (Chitradurga) ರೇಣುಕಾಸ್ವಾಮಿ ಕೊಲೆ (Renukaswamy Murder case) ಪ್ರಕರಣಕ್ಕೆ ಸಂಬಂಧ ಜೈಲು ಪಾಲಾಗಿರುವ ನಟ ದರ್ಶನ್ (Actor Darshan), ಪವಿತ್ರಗೌಡ, ರವಿಶಂಕರ್, ಲಕ್ಷ್ಮಣ್‌ರ ಜಾಮೀನು ಅರ್ಜಿ‌ ವಿಚಾರಣೆಯು 57ನೇ ಸಿಸಿಹೆಚ್ ಕೋರ್ಟ್‌ನಲ್ಲಿ ಶುಕ್ರವಾರ (ಅ.4) ನಡೆಯಿತು. ನಟ ದರ್ಶನ್ ಪರ ಸಿ.ವಿ ನಾಗೇಶ್, ಪವಿತ್ರಗೌಡ ಗೌಡ ಪರ ಟಾಮಿ ಸೆಬಾಸ್ಟಿಯನ್, ರವಿಶಂಕರ್ ಪರ ರಂಗನಾಥ್ ರೆಡ್ಡಿ, ಲಕ್ಷ್ಮಣ್ ಪರ ಸೂರ್ಯ ಮುಕುಂದ್ ವಾದ ಮಂಡಿಸಿದ್ದರು. ತನಿಖಾಧಿಕಾರಿಗಳ ವಿರುದ್ಧ ಬ್ಯಾಟಿಂಗ್‌ ಮಾಡಿದ ದರ್ಶನ್‌ ಪರ ವಕೀಲ ನಾಗೇಶ್‌, ದೋಷಾರೋಪ ಪಟ್ಟಿಯಲ್ಲಿ ತನಿಖಾಧಿಕಾರಿಗಳ ಲೋಪವನ್ನು ಉಲ್ಲೇಖಿಸಿದರು. ವಾದ ಆಲಿಸಿದ ಕೋರ್ಟ್‌ ಅರ್ಜಿ ವಿಚಾರಣೆಯನ್ನು ಶನಿವಾರ ಮಧ್ಯಾಹ್ನಕ್ಕೆ ಮುಂದೂಡಿದೆ.

ಮೊದಲಿಗೆ ದರ್ಶನ್‌ ಪರ ವಕೀಲ ಸಿ.ವಿ ನಾಗೇಶ್‌ ವಾದ ಶುರು ಮಾಡಿದರು. ದರ್ಶನ್ ವಿರುದ್ಧದ ಆರೋಪದ ಚಾರ್ಜ್ ಶೀಟ್ ಕ್ರೋಢೀಕೃತ ವರದಿ ಸಲ್ಲಿಕೆ ಮಾಡಲಾಗಿದೆ. ಚಾರ್ಜ್ ಶೀಟ್‌ನ ಎಲ್ಲಾ ಹೇಳಿಕೆಗಳು, ಸಾಕ್ಷಿಗಳು ಹಾಗೂ ಎಫ್ಎಸ್ಎಲ್ ರಿಪೋರ್ಟ್ ವರದಿಯಾಗಿದೆ. ಪ್ರಕರಣದ ಮೊದಲ ವಿಚಾರಣೆ ( ಟ್ರಯಲ್) ಪತ್ರಿಕೆ ಹಾಗೂ ಎಲೆಕ್ಟ್ರಾನಿಕ್‌ ಮೀಡಿಯಾದಲ್ಲಿ ಆಗಿದೆ. ಈ ವರದಿಯಿಂದ ನನ್ನ ಕಕ್ಷಿದಾರನಿಗೆ ದೊಡ್ಡ ನಷ್ಟವಾಗಿದೆ. ಸುಪ್ರೀಂ ಕೋರ್ಟ್ 2016ರ ಆದೇಶ ಉಲ್ಲೇಖಿಸಿದ ನಾಗೇಶ್‌, ಪ್ರಕರಣದ ಎವಿಡೆನ್ಸ್ ಮತ್ತು ಮೆರಿಟ್ಸ್ ತುಂಬಾ ದೊಡ್ಡ ಪಬ್ಲಿಸಿಟಿ ಆಗಬಾರದು. ಇಲ್ಲಿ ದರ್ಶನ್ ವಿರುದ್ಧ ದೊಡ್ಡ ಮಟ್ಟದ ಪ್ರಚಾರವಾಗಿದೆ. ಇದು ನ್ಯಾಯದಾನದ ಮೇಲೆ ಪರಿಣಾಮ ಬೀರಲಿದೆ ಎಂದು ಆದೇಶದ ಬಗ್ಗೆ ಸಿ.ವಿ. ನಾಗೇಶ್ ಉಲ್ಲೇಖಿಸಿದರು. ಈ ವೇಳೆ ನನಗೆ ಪ್ರತಿ ನೀಡಿಲ್ಲ ಎಂದು ಎಸ್‌ಪಿಪಿ ಪ್ರಸನ್ನ ಕುಮಾರ್ ಹೇಳಿದರು.

ಈ ಪ್ರಕರಣದಲ್ಲಿ ಎಲೆಕ್ಟ್ರಾನಿಕ್ ಮೀಡಿಯಾ ಪಬ್ಲಿಸಿಟಿಯೂ ಪರಿಣಾಮ ಬೀರಿದೆ. ಎಫ್ಐಆರ್‌ನಿಂದ ಸಾಕ್ಷಿಗಳ ತನಕ ಎಲ್ಲಾ ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದು, ಸಂಪೂರ್ಣ ಚಾರ್ಜ್ ಶೀಟ್ ಪ್ರತಿ ಸಿಕ್ಕಿದೆ. ಅವರು ನೇರವಾಗಿ ನ್ಯಾಯಾವ್ಯವಸ್ಥೆಯಲ್ಲಿ ಮಧ್ಯಪ್ರವೇಶಿಸಿದ್ದಾರೆ. ಪ್ರಕರಣದ ಟ್ರಾಯಲ್ ನ್ಯಾಯಾಲಯದಲ್ಲಿ ಆಗಬೇಕು ಹೊರತು ಯಾವುದೇ ಪ್ಯಾನಲ್ ಡಿಸ್ಕ್‌ಷನ್‌ನಲ್ಲಿ ಅಲ್ಲ. ಈ ಅಂಶಗಳ ಪರಿಗಣಿಸಿ ತನಿಖಾಧಿಕಾರಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ದರ್ಶನ್ ಪರ ಸಿ ವಿ ನಾಗೇಶ್ ವಾದಿಸಿದರು.

ಮೊದಲು ಪ್ರಕರಣದ ಸೀಜಿಂಗ್ ವೇಳೆ ಸಿಕ್ಕಿರುವುದು ಏನು? ಮರದ ಕೊಂಬೆಗಳು, ನೈಲಾನ್ ಹಗ್ಗ, ವಾಟರ್ ಬಾಟೆಲ್ ಮತ್ತು ಬಟ್ಟೆ ಮಾತ್ರ. ಆದರೆ ಪೊಲೀಸರು ಅದನ್ನೇ ಇಲ್ಲಿ ಸಾಕ್ಷಿಯನ್ನಾಗಿ ಮಾಡಿದ್ದಾರೆ. ಸುಮಾರು ಅರ್ಧ ಅಡಿ ಉದ್ದದ ಕೋಲು, ವಾಟರ್ ಬಾಟೆಲ್ ಒಂದು ಪತ್ತೆಯಾಗಿದ್ದು, ಅದರಲ್ಲಿ ಸ್ಟೋನಿ ಬ್ರೂಕ್ ಚಿನ್ಹೆ ಇದೆ. ಕೋಲಿನ ಮೇಲೆ ಪಿಂಕ್ ಮತ್ತು ಕೆಂಪು ಬಣ್ಣದ ನೈಲಾನ್ ಹಗ್ಗ ಸಿಕ್ಕಿರುತ್ತದೆ. ಅದರಲ್ಲಿ ರಕ್ತದ ಕಲೆ ಪತ್ತೆಯಾಗಿದೆ. ಪ್ರಕರಣದ ಪಂಚನಾಮೆ ಓದಿ ವಾದ ಮುಂದುವರಿಸಿದ ಸಿ.ವಿ ನಾಗೇಶ್ ಇತರ ಆರೋಪಿಗಳ ಸ್ವ ಇಚ್ಛೆ ಹೇಳಿಕೆಯ ಬಗ್ಗೆ ಉಲ್ಲೇಖಿಸಿದರು. ಆರೋಪಿಗಳ ಬಂಧನ ಮೇ 11ರಂದು ಆಗಿದೆ, 12ರಂದು ಸ್ವ ಇಚ್ಚಾ ಹೇಳಿಕೆ ಪಡೆಯಲಾಗಿದೆ. ಹಾಗಾದರೆ ಅವರಿಗೆ ಮೊದಲೆ ಕೇಸ್ ಅಪರಾಧದ ಅರಿವು ಇರುತ್ತಾ ಎಂದು ಸಿ.ವಿ ನಾಗೇಶ್ ಪ್ರಶ್ನಿಸಿದರು.

ಓರ್ವ ವ್ಯಕ್ತಿ ಗುಪ್ತಾಂಗಕ್ಕೆ ಗುದ್ದಿ ಸಾಯಿಸಿದ್ದಾಗಿ ವಿನಯ್ ಹೇಳಿದ್ದ, ಆದಾದ ಬಳಿಕ ಗಿರೀಶ್ ನಾಯ್ಕ್ ಇನ್ಸ್‌ಪೆಕ್ಟರ್‌ಗೆ ಹೇಳಿದೆ. ಆಗ ಇನ್ಸ್‌ಪೆಕ್ಟರ್‌ ಹೇಳಿದ್ದು, ಅವರ ಕಾನ್ಫಿಡೆನ್ಸ್ ತೆಗೆದುಕೊಂಡು ಕೊಲೆ ಮಾಡಿದವರು ಯಾರು ಅಂತಾ ತಿಳಿದುಕೋ ಅಂದಿದ್ದರಂತೆ. ಕೊಲೆ ಮಾಡಿದ್ದು ದರ್ಶನ್ ಅಭಿಮಾನಿಗಳು ಅಂದಾಗ, ಮೀಡಿಯಾದವರು ಅವರೇ ಕೊಲೆ ಮಾಡಿದ್ದಾರೆ ಅಂತ ಹಾಕುತ್ತಾರೆ ಅಂತಾ ಹೇಳಿದ್ದರಂತೆ. ಇದು ಸಂಪೂರ್ಣವಾಗಿ ತಿರುಚಿದ ಹೇಳಿಕೆಯಾಗಿದೆ. ‌ಪ್ಲ್ಯಾನ್‌ ಮಾಡಿ ಈ ರೀತಿ ಹೇಳಿಕೆ ದಾಖಲಿಸಲಾಗಿದೆ ಎಂದು ದರ್ಶನ್ ಪರ ಸಿ ವಿ ನಾಗೇಶ್ ವಾದಿಸಿದರು.

ಸ್ಥಳ ಮಹಜರ್ ಮಾಡಿದ ಪಿಡಬ್ಲ್ಯೂಡಿ ಎಂಜಿನಿಯರ್ ಹೇಳಿಕೆಯನ್ನು ಓದಿದ ನಾಗೇಶ್‌, ಪ್ರಕರಣದಲ್ಲಿ ಐ ವಿಟ್ನೇಸ್ ಸೆಕ್ಯೂರಿಟಿ ಗಾರ್ಡ್, ಆತನ 164 ಹೇಳಿಕೆ ದಾಖಲಾಗಿದೆ. ಆತನಿಗೆ ಕನ್ನಡವೇ ಬರಲ್ಲ ಆದರೆ ಕನ್ನಡದಲ್ಲಿ ಹೇಳಿಕೆ ದಾಖಲಾಗಿದೆ. ಇದೊಂದು ಕ್ಲಾಸಿಕ್ ಕೇಸ್ ಆಫ್ ಫ್ಯಾಬ್ರಿಕ್ ಎವಿಡೆನ್ಸ್.. ಮರುದಿನ ಬೆಳಗ್ಗೆ ಅಂದರೆ ಮಂಗಳವಾರ 10:30ಕ್ಕೆ ಪೊಲೀಸರು ಬಂದು, ಆಚೆ ಕಳಿಸಿದರು. ಈ ಪ್ರಕಾರ ಪೊಲೀಸರು ಗೋಡಾನ್ ವಶಕ್ಕೆ ಪಡೆದಿದ್ದಾರೆ. ಪ್ಲೇಸ್ ಆಫ್ ಕ್ರೈಂ ಸೀಜ್ ಮಾಡಿದ್ದಾರೆ. ಆದಾದ ಬಳಿಕ ಏಕೆ 12ನೇ ತಾರೀಕಿನ ತನಕ ಸಾಕ್ಷಿಗಳ ಕಲೆ ಹಾಕಲು, ಕೋಲು, ಹಗ್ಗ ಎಲ್ಲಾ ಕಲೆಕ್ಟ್ ಮಾಡಲು ಕಾಯ್ದರು. ಇದೆಲ್ಲವೂ ದರ್ಶನ್ ವಿರುದ್ಧ ಸಾಕ್ಷಿಗಳ ಪ್ಲಾಂಟ್ ಮಾಡಲು ಮಾಡಿದ್ದಾರೆ.

9,10 ಹಾಗೂ 11ನೇ ತಾರೀಖು ಬಿಟ್ಟು ಆಮೇಲೆ ಮಾಡಿದ್ದಾರೆ. ಲಾಕ್ ಮಾಡಿ ಸೀಲ್ ಮಾಡಿದ ಮೇಲೆ ಏಕೆ ತಡವಾಗಿ ರಿಕವರಿ ಮಾಡಿದ್ದಾರೆ. ಅಲ್ಲಿ ಮರದ ಕೊಂಬೆಗಳು, ನೈಲಾನ್ ಹಗ್ಗ, ಎಲ್ಲವನ್ನು ಆಮೇಲೆ ಇಟ್ಟು, ಪ್ಲಾಂಟ್ ಮಾಡಿದ್ದಾರೆ. ನನ್ನ ಕಕ್ಷಿದಾರನ ವಿರುದ್ಧ ಇಟ್ಟು ಪ್ರಕರಣದಲ್ಲಿ ಸಿಲುಕಿಸಿದ್ದಾರೆ. ಇಷ್ಟು ತಡವಾಗಿ ಮಾಡಿರುವುದು ಅನುಮಾನ ಮೂಡಿಸಿದೆ. ಕೃತ್ಯದಲ್ಲಿ ವೆಫನ್ ಫ್ಯಾಬ್ರಿಕೇಟ್ ಮಾಡಲಾಗಿದೆ ಎಂದು ನಾಗೇಶ್‌ ವಾದಿಸಿದಾಗ, ಮಧ್ಯಪ್ರವೇಶಿಸಿದ ಎಸ್‌ಪಿಪಿ ಪ್ರಸನ್ನ ಕುಮಾರ್ ಇದಕ್ಕೆ ನಾನು ಉತ್ತರ ಆಮೇಲೆ ಹೇಳುತ್ತೇನೆ ಎಂದರು.

ತನಿಖಾಧಿಕಾರಿಗಳ ಲೋಪ?

ಪ್ರಕರಣದಲ್ಲಿ ಪೊಲೀಸರ ಹಾಗೂ ತನಿಖಾಧಿಕಾರಿಯ ಲೋಪದ ಬಗ್ಗೆ ಉಲ್ಲೇಖಿಸಿದ ನಾಗೇಶ್‌, ಪೊಲೀಸರಿಗೆ ಪ್ರಕರಣ ಕೃತ್ಯದ ಜಾಗ, ಬಳಸಿದ ವಸ್ತುಗಳ ಬಗ್ಗೆ ಮಾಹಿತಿ ಇತ್ತು. ಆದರೂ ಏಕೆ ತಡವಾಗಿ ಪಂಚನಾಮೆ ಮಾಡಿದರು. 11ನೇ ತಾರೀಖು ಆದರೂ ಮಾಡಬೇಕಿತ್ತು, ಸದ್ಯ ಇರುವ ಮಿಸ್ಟರಿ ಎಂದು ಸಿವಿ‌ ನಾಗೇಶ್ ಪ್ರಕರಣದ ಐಒ ನೀಡಿರುವ ಸಾಕ್ಷಿ ಹೇಳಿಕೆಯ ಅಂಶಗಳ ಓದಿದ್ರು.

ಜೂನ್‌11 ರಂದು ದರ್ಶನ್‌ನಿಂದ ಸ್ವ ಇಚ್ಛೆ ಹೇಳಿಕೆ ಪಡೆದಿದ್ದರೆ, ಆದರೆ ರಿಕವರಿ ಮಾಡಿದ್ದು ಮಾತ್ರ 14 ಮತ್ತು‌15 ರಂದು? ಅಲ್ಲಿಯವರೆಗೆ ಪೊಲೀಸರು ಏನು ಮಾಡುತ್ತಾ ಇದ್ದರು. ದರ್ಶನ್ ಹೇಳಿದ‌ ರೀತಿ ಅಂದು ಧರಿಸಿದ್ದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಇಲ್ಲಿ ದರ್ಶನ್ ಅಂದು ಧರಿಸಿದ್ದು ಚಪ್ಪಲಿಯೋ? ಶೂ ವೋ? ದರ್ಶನ್ ಧರಿಸಿದ್ದ ಬಟ್ಟೆಗಳನ್ನು ಬಿನ್‌ನಲ್ಲಿ ಹಾಕಿದ್ದಾಗಿ ಹೇಳಿಕೆ ನೀಡಿದ್ದರು. ಮನೆಯಲ್ಲಿ ಪಂಚನಾಮೆ ವೇಳೆ ಬಿನ್‌ನಲ್ಲಿ‌ ಬಟ್ಟೆಗಳು ದೊರಕಿಲ್ಲ. ಮನೆ ಕೆಲಸದಾಕೆ ಬಟ್ಟೆ ಒಗೆದಿರಬಹುದು ‌ಎಂದು ಟೆರೆಸ್‌ ಹೋಗಿ ನೋಡಲಾಗಿದೆ. ಬಟ್ಟೆ ಒಣಹಾಕಿದ್ದು ಪತ್ತೆಯಾಗಿದೆ. ಸರ್ಫ್ ಸೋಪ್‌ನಲ್ಲಿ ತೊಳೆದಿದ್ದಾರೆ ಅಂತಲೂ ಉಲ್ಲೇಖ ಮಾಡಲಾಗಿದೆ. ಮನೆ ಕೆಲಸದಾಕೆ ಹೇಳಿಕೆ ಪಡೆದಿದ್ದು, ಸರ್ಫ್ ಪೌಡರ್‌ನಲ್ಲಿ ನೆನೆ ಹಾಕಿ ಕೈಯಿಂದ ಕುಕ್ಕಿ ಕುಕ್ಕಿ ಒಗೆದಿದ್ದಾಗಿ ಹೇಳಿಕೆ ನೀಡಿದ್ದಾಳೆ. ಒಂದು ರೀತಿ ಅರೇಬಿಯನ್‌ ನೈಟ್ ಕಥೆ ಇದ್ದ ಹಾಗೆ ಇದೆ ಎಂದು ತನಿಖಾ ರೀತಿಯನ್ನು ಸಿ.ವಿ ನಾಗೇಶ್‌ ಪ್ರಶ್ನಿಸಿದರು.

ಹೀಗಿದ್ದಾಗ ಬಟ್ಟೆಯಲ್ಲಿ ಕಲೆ ಇದೆ ಅಂತಾ ರಿಕವರಿ ಅಂತಾರೆ ಹೇಗೆ? ರಿಕವರಿ ಮತ್ತು ಸ್ವ ಇಚ್ಚಾ ಹೇಳಿಕೆಯ ಸಂದೇಹ ಮತ್ತು ವ್ಯತ್ಯಾಸಗಳ ಬಗ್ಗೆ ಸಿ ವಿ‌ ನಾಗೇಶ್ ವಾದಿಸಿದರು. ಸ್ವ ಇಚ್ಚಾ ಹೇಳಿಕೆಗಳ ಸಾಕ್ಷಿಗಳಾಗಿ ಪರಿಗಣಿಸುವ ಬಗ್ಗೆ ಹಿಂದಿನ ಆದೇಶಗಳ ಉಲ್ಲೇಖಿಸಿದರು. ದರ್ಶನ್ ಎಲ್ಲೂ ಸಹ ತನ್ನ ಸ್ವ ಇಚ್ಚಾ ಹೇಳಿಕೆಯಲ್ಲಿ ನಾನು ಯಾವ ಡ್ರೆಸ್ ಹಾಕಿದ್ದೆ, ಯಾವ ಬಣ್ಣದ ಶರ್ಟ್ ಪ್ಯಾಂಟ್ ಅಂತ ಹೇಳಿಲ್ಲ. ಆದರೂ ಬಹಳ‌ ನಾಜೂಕಾಗಿ ಬ್ಲ್ಯಾಕ್ ಕಲರ್ ಶರ್ಟ್, ಬ್ಲೂ ಜೀನ್ಸ್ ವಶಪಡಿಸಿಕೊಂಡಿದ್ದಾರೆ.

ಸುಬ್ರಮಣ್ಯ ವರ್ಸಸ್ ಸ್ಟೇಟ್ ಆಫ್ ಕರ್ನಾಟಕ ಕೇಸ್ ಬಗ್ಗೆ ಉಲ್ಲೇಖಿಸಿದ ನಾಗೇಶ್‌, ಈ ಕೇಸ್‌ನಲ್ಲಿ ಸ್ವ ಇಚ್ಛೆ ಹೇಳಿಕೆ, ಐ ವಿಟ್ನೇಸ್ ಹೇಳಿಕೆ ಮತ್ತು ರಿಕವರಿ ತಾಳೆಯಾಗಬೇಕು. ಆದರೆ ಇಲ್ಲಿ‌ ಒಂದಕ್ಕೊಂದು ತೀರಾ ವ್ಯತ್ಯಾಸ ಇದೆ. ದರ್ಶನ್ ಚಪ್ಪಲಿ ಹಾಕಿದ್ದಾಗಿ‌ ಸ್ವ ಇಚ್ಛೆ ಹೇಳಿಕೆಯಿದೆ. ಆದರೆ ರಿಕವರಿ ಪಂಚನಾಮೆಯಲ್ಲಿ ಶೂ ಅಂತಾ ಹೇಳಲಾಗಿದೆ. ಇಲ್ಲಿ ಸ್ವ ಇಚ್ಛೆ ಹೇಳಿಕೆ ನೈಜವಾಗಿದೆ, ಪಂಚನಾಮೆ ಹೇಳಿಕೆಯೂ ಪ್ಯಾಬ್ರಿಕೇಟ್ ಆಗಿದೆ ಎಂದು ಸಿ.ವಿ ‌ನಾಗೇಶ್ ವಾದಿಸಿದರು. ಬಳಿಕ ವಾದ ಆಲಿಸಿದ ಕೋರ್ಟ್‌ ನಾಳೆ ಶನಿವಾರ (ಅ.5) ಮಧ್ಯಾಹ್ನ 12.30ಕ್ಕೆ ವಿಚಾರಣೆಯನ್ನು ಮುಂದೂಡಿದೆ. ಉಳಿದ ಆರೋಪಿಗಳ ಜಾಮೀನು ಅರ್ಜಿಗಳು ಮುಂದೂಡಿಕೆ ಆಗಿವೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Latest

ಮಹಿಳಾ ಮೀಸಲು ಮಸೂದೆ ಕಾಂಗ್ರೆಸ್‌ ಪಕ್ಷದ ಕನಸು ಮತ್ತು ಕೂಸು: ಡಿ.ಕೆ.ಶಿವಕುಮಾರ್

VISTARANEWS.COM


on

ಬೆಂಗಳೂರು, ಏ.19: ತರಾತುರಿಯಲ್ಲಿ ಸಂವಿಧಾನ ತಿದ್ದುಪಡಿ ಮಾಡಲು ಹೋದ ಕೇಂದ್ರ ಬಿಜೆಪಿ ಸರ್ಕಾರಕ್ಕೆ ಮುಖಭಂಗವಾಗಿದೆ. ಇಂಡಿಯಾ ಒಕ್ಕೂಟಕ್ಕೆ ಜಯವಾಗಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಪ್ರತಿಕ್ರಿಯಿಸಿದರು.
ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಅವರು ಹಾಗೂ ಕ್ಷೇತ್ರ ವಿಂಗಡಣೆ ವಿರುದ್ದ ಪ್ರತಿಭಟಿಸಿದ ದಕ್ಷಿಣ ಭಾರತದ ಎಲ್ಲಾ ಮುಖ್ಯಮಂತ್ರಿಗಳ ಹೋರಾಟಕ್ಕೆ, ಪ್ರಜಾಪ್ರಭುತ್ವಕ್ಕೆ ಸಿಕ್ಕಂತಹ ದೊಡ್ಡ ಜಯ. ಮಹಿಳೆಯರ ಪರವಾಗಿ ಕಾಂಗ್ರೆಸ್ ಪಕ್ಷ ಹಾಗೂ ಇಂಡಿಯಾ ಒಕ್ಕೂಟ ನಿಂತಿದೆ. ಇಲ್ಲಿ ಯಾರಿಗೂ ಅವಮಾನವಾಗಿಲ್ಲ” ಎಂದರು.
ಸಂವಿಧಾನ ತಿದ್ದುಪಡಿ ಮಾಡುವಾಗ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು. ಮಹಿಳಾ ಮೀಸಲಾತಿ ಕಾಯ್ದೆ ಕಾಂಗ್ರೆಸ್ ಪಕ್ಷದ ಕನಸು ಮತ್ತು ಕೂಸು. ಇದರ ಪರವಾಗಿ ಕೆಲಸ ಮಾಡಿದ್ದು ಕಾಂಗ್ರೆಸ್ ಪಕ್ಷ. ಆದರೆ ಈಗ ಬಿಜೆಪಿ ಸರ್ಕಾರ ಮಾಡಿರುವ ನಿರ್ಧಾರ ಸರಿಯಾದ ಸಮಯವಲ್ಲ. ನಮ್ಮದು ಹಿಟ್ಲರ್ ಆಡಳಿತವಲ್ಲ” ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷಗಳ ಜೊತೆ ಚರ್ಚೆ ನಡೆಸಬೇಕಿತ್ತು. ಚುನಾವಣೆ ನಡೆಯುತ್ತಿರುವ ಹೊತ್ತಿನಲ್ಲೇ ತರುವ ಪ್ರಮೇಯವೇನಿತ್ತು. ಇಂಡಿಯಾ ಒಕ್ಕೂಟದ ಎಲ್ಲಾ ಸದಸ್ಯರಿಗೆ ನಾನು ಶುಭಾಶಯಗಳನ್ನು ತಿಳಿಸುತ್ತೇನೆ ಎಂದೂ ಶಿವಕುಮಾರ್‌ ಹೇಳಿದ್ದಾರೆ.
ಸೋಲುತ್ತದೆ ಎಂದರೂ ಬಿಲ್ ತಂದಿದ್ದು ಬಿಜೆಪಿ
ವಿಪಕ್ಷಗಳ ವಿರುದ್ದ ಬಿಜೆಪಿ ಪ್ರತಿಭಟನೆ ಬಗ್ಗೆ ಕೇಳಿದಾಗ, “ಬಿಲ್ ಸೋಲುತ್ತದೆ ಎಂದು ಗೊತ್ತಿದ್ದರೂ ತಂದವರು ಅವರು. ಅವರುಗಳು ಮಹಿಳಾ ವಿರೋಧಿಗಳು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವೆಲ್ಲರೂ ಪ್ರತಿನಿಧಿಗಳಲ್ಲವೇ? ಇವರುಗಳು ಜನರಿಂದ ಗೆದ್ದಿಲ್ಲವೇ? ಅವರುಗಳು ಇದರ ಬಗ್ಗೆ ಮಾತನಾಡಬೇಕಿತ್ತು, ಚರ್ಚೆ ಮಾಡಬೇಕಿತ್ತು. ಮಹಿಳಾ ಮೀಸಲಾತಿ ಬಿಲ್ ಅವರ ಆಸ್ತಿಯಲ್ಲ. ದೇಶದ ಆಸ್ತಿ” ಎಂದರು.
“ಈ ಹಿಂದೆ ರಾಜೀವ್ ಗಾಂಧಿಯವರು ಶೇ 50 ರಷ್ಟು ಮೀಸಲಾತಿ ತಂದಿದ್ದರು. ಸೋನಿಯಾಗಾಂಧಿ ಅವರ ನೇತೃತ್ವದಲ್ಲಿ ರಾಜ್ಯಸಭೆಯಲ್ಲಿ ಮಹಿಳಾ ಮೀಸಲಾತಿ ಬಿಲ್ ಪಾಸ್ ಆಗಿತ್ತು. ಈ ಬಿಲ್ ಅಡಿಯಲ್ಲಿ ದಕ್ಷಿಣ ಭಾರತದ ಕ್ಷೇತ್ರಗಳನ್ನು ಕತ್ತರಿಸಿ ಉತ್ತರ ಭಾರತದ ಕ್ಷೇತ್ರಗಳನ್ನು ಹೆಚ್ಚು ಮಾಡಲು ಹೊರಟಿರುವುದು ಸರಿಯಲ್ಲ. ಇದನ್ನು ಸಹಿಸಲು ಸಾಧ್ಯವಿಲ್ಲ. ನಮ್ಮನ್ನೆಲ್ಲಾ ಕರೆದು ಚರ್ಚೆ ಮಾಡಬೇಕಿತ್ತು” ಎಂದು ಹೇಳಿದರು.

Continue Reading

Latest

ಇಡಿ ದಾಳಿ; ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ: ಸಚಿವೆ ಶೋಭಾ ಕರಂದ್ಲಾಜೆ

VISTARANEWS.COM


on

ಬೆಂಗಳೂರು: ಬಿಟ್ ಕಾಯಿನ್ ಮೂಲಕ ಬೇರೆ ಬೇರೆ ದೇಶಗಳಲ್ಲಿ ರಾಜಕಾರಣಿಗಳು ಹೂಡಿಕೆ ಮಾಡಿದ್ದಾರೆ. ಅದರಲ್ಲೂ ವಿಶೇಷವಾಗಿ ಕಾಂಗ್ರೆಸ್ ರಾಜಕಾರಣಿಗಳು ಹೂಡಿಕೆ ಮಾಡಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಗಂಭೀರ ಆರೋಪ ಮಾಡಿದ್ದಾರೆ.
ಬಿಡಿಎ ಅಧ್ಯಕ್ಷ ಹಾಗೂ ಶಾಸಕ ಎನ್.ಎ. ಹ್ಯಾರಿಸ್ ಅವರ ಮನೆ ಮೇಲೆ ಇಡಿ ದಾಳಿ ಕುರಿತು ಅವರು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಇವರು, ನಿರಂತರವಾಗಿ ಕಾಂಗ್ರೆಸ್ ಆರ್ಥಿಕ ಅಪರಾಧಗಳನ್ನು ಮಾಡುತ್ತಲೇ ಬರುತ್ತಿದೆ. ಇದರಲ್ಲಿ ಬಿಟ್ ಕಾಯಿನ್ ಸಹ ಒಂದು. ಬಿಟ್ ಕಾಯಿನ್ ನಲ್ಲಿ ಹೂಡಿಕೆ ಆಗಿದೆ ಎಂಬ ಮಾಹಿತಿ ಆಧರಿಸಿ ದಾಳಿ ನಡೆದಿದೆ ಎಂದರು.
ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು. ಯಾವುದೇ ನಿಖರ ಮಾಹಿತಿ ಇಲ್ಲದೆ ದಾಳಿ ನಡೆದಿಲ್ಲ. ಎಲ್ಲದರಲ್ಲೂ ಕಾಂಗ್ರೆಸ್ ನವರು ತಪ್ಪಿಸಿಕೊಳ್ತಾರೆ. ರಾಜ್ಯದಲ್ಲಿನ ಹಣವನ್ನು ಲೂಟಿ ಮಾಡಿ ಬೇರೆ ದೇಶಗಳಿಗೆ ಸಾಗಿಸಿ, ಅಲ್ಲಿ ಹೂಡಿಕೆ ಮಾಡ್ತಾರೆ. ಕಾಂಗ್ರಸ್ ಸರ್ಕಾರ ಭ್ರಷ್ಟ ಸರ್ಕಾರ ಎಂದು ಟೀಕಿಸಿದರು.

Continue Reading

ರಾಜಕೀಯ

ಟ್ವಿಟರ್ ನಲ್ಲಿ ಶೂರ, ಕೆಲಸದಲ್ಲಿ ಶೂನ್ಯ!: ಸಚಿವ ಪ್ರಿಯಾಂಕ್‌ ಖರ್ಗೆ ವಿರುದ್ಧ ವಿಪಕ್ಷ ನಾಯಕ ಆರ್.ಅಶೋಕ್‌ ವಾಗ್ದಾಳಿ

VISTARANEWS.COM


on

ಬೆಂಗಳೂರು: ಕಲಬುರಗಿ-ಯಾದಗಿರಿ ರಸ್ತೆಯ 90 ಕಿಲೋಮೀಟರ್ ವ್ಯಾಪ್ತಿಯಲ್ಲಿ ಒಂದೇ ಒಂದು ಬಸ್ ನಿಲ್ದಾಣವಿಲ್ಲದೆ ಸಾರ್ವಜನಿಕರು ಒದ್ದಾಡುತ್ತಿದ್ದಾರೆ. ಆದರೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಟ್ವಿಟರ್ ನಲ್ಲಿ ನಿರತರಾಗಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ್‌ ವಾಗ್ದಾಳಿ ನಡೆಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಅವರು, ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ @PriyankKharge ಅವರೇ, ಕಲಬುರಗಿ-ಯಾದಗಿರಿ ರಸ್ತೆಯ 90 ಕಿಲೋಮೀಟರ್ ವ್ಯಾಪ್ತಿಯಲ್ಲಿ ಒಂದೇ ಒಂದು ಬಸ್ ನಿಲ್ದಾಣವಿಲ್ಲದೆ ಜನಸಾಮಾನ್ಯರು ರಣ ಬಿಸಿಲಲ್ಲಿ ಸುಡುತ್ತಿದ್ದಾರೆ ಎನ್ನುವ ಸುದ್ದಿ ನಿಜಕ್ಕೂ ಆಘಾತ ಮೂಡಿಸಿದೆ. ಇದೇನು ಸಾಮಾನ್ಯ ಕೊರತೆಯೋ ಅಥವಾ ವೈಫಲ್ಯವೋ ಅಲ್ಲ. ದಶಕಗಳಿಂದ ಕಲ್ಯಾಣ ಕರ್ನಾಟಕವನ್ನ ಸ್ವಂತ “ಜಹಗೀರು” ಅಂದುಕೊಂಡಿರುವ ನಿಮ್ಮ ಕುಟುಂಬ ಈ ಭಾಗದ ಜನರಿಗೆ ಮಾಡಿದ ಘೋರ ಅನ್ಯಾಯ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಸುಡುವ 45 ಡಿಗ್ರಿ ಬಿಸಿಲಿನಲ್ಲಿ ಮಕ್ಕಳು, ಗರ್ಭಿಣಿಯರು, ವಯೋವೃದ್ಧರು ನೆರಳಿಲ್ಲದೆ ರಸ್ತೆ ಬದಿಯಲ್ಲಿ ನರಳುತ್ತಿದ್ದಾರೆ. ಕುಡಿಯಲು ಹನಿ ನೀರಿಲ್ಲ, ಶೌಚಾಲಯದ ವ್ಯವಸ್ಥೆಯಿಲ್ಲ. ಇದೇನಾ ನಿಮ್ಮ ಕಾರ್ಯವೈಖರಿ? ದಿನಾ ಬೆಳಗಾದರೆ ಸಾಮಾಜಿಕ ಜಾಲತಾಣಗಳಲ್ಲಿ ಬಿಟ್ಟಿ ಉಪದೇಶ ಮಾಡುವ ತಮಗೆ ನಿಮ್ಮ ಸ್ವಂತ ಜಿಲ್ಲೆಯ ಜನರ ಈ ನರಕಯಾತನೆ ಕಣ್ಣಿಗೆ ಕಾಣಿಸುತ್ತಿಲ್ಲವೇ ಸ್ವಾಮಿ?
“ಮತ ನಿಮ್ಮದು, ಮಜ ನಮ್ಮದು” ಎನ್ನುವ ಎನ್ನುವಂತಾಗಿದೆ ನಿಮ್ಮ ಧೋರಣೆ. ಈ ಭಾಗದ ಜನ ನಿಮ್ಮನ್ನ ನಂಬಿ ವೋಟ್ ಹಾಕಿದ್ದು ಅವರು ರಸ್ತೆ ಬದಿಯಲ್ಲಿ ನಿಲ್ಲಲಿ ಅಂತಲ್ಲ, ನೀವು ಬೆಂಗಳೂರು-ದೆಹಲಿಯಲ್ಲಿ ರಾಜಾತಿಥ್ಯ ಅನುಭವಿಸಲಿ ಅಂತಲೂ ಅಲ್ಲ.
ದಶಕಗಳಿಂದ ನೀವು ಮಾಡಿದ್ದು “ಜನ ಕಲ್ಯಾಣ”ವಲ್ಲ, ಬರೀ “ಖರ್ಗೆ ಕುಟುಂಬ ಕಲ್ಯಾಣ”. ಜನರ ಹೆಸರಲ್ಲಿ ಅಧಿಕಾರ ಅನುಭವಿಸಿ, ಅದೇ ಜನರಿಗೆ ಒಂದು ಬಸ್ ತಂಗುದಾಣ ಕೊಡಲಾಗದ ನೀವು ಯಾವ ಮುಖ ಇಟ್ಟುಕೊಂಡು ಮತ ಕೇಳುತ್ತೀರಿ?
ನಿಮ್ಮ ಪ್ರಚಾರದ ಗೀಳು, ಗಿಮಿಕ್‌ಗಳು ಇನ್ನು ನಡೆಯಲ್ಲ. ತಕ್ಷಣ ಈ ಮಾರ್ಗದಲ್ಲಿ ಬಸ್ ನಿಲ್ದಾಣ ಮತ್ತು ಮೂಲಸೌಕರ್ಯ ಕಲ್ಪಿಸದಿದ್ದರೆ, ಕಲ್ಯಾಣ ಕರ್ನಾಟಕದ ಜನರೇ ನಿಮ್ಮನ್ನ ಅಧಿಕಾರದಿಂದ ಕೆಳಗಿಳಿಸಿ ಮನೆಗೆ ಕಳುಹಿಸುವುದು ಗ್ಯಾರಂಟಿ ಎಂದು ಲೇವಡಿ ಮಾಡಿದ್ದಾರೆ.

Continue Reading

Latest

ಪಿಎನ್‌ಎಸ್‌ ವಿಸ್ತಾರ ಮುಂಚೂಣಿ ಸುದ್ದಿವಾಹಿನಿಯಾಗಲಿ: ಬಿಜೆಪಿ ಮುಖಂಡ ಎನ್‌.ಆರ್‌. ರಮೇಶ್‌ ವಿಶ್ವಾಸ

VISTARANEWS.COM


on

ಬೆಂಗಳೂರು: ಪಿಎನ್‌ ಎಸ್‌ ವಿಸ್ತಾರ ಸುದ್ದಿವಾಹಿನಿಗೆ ಬೆಂಗಳೂರಿನ ಬಿಜೆಪಿ ಮುಖಂಡ, ಬಿಬಿಎಂಪಿ ಮಾಜಿ ಆಡಳಿತ ಪಕ್ಷದ ನಾಯಕ ಎನ್.‌ ಆರ್.‌ ರಮೇಶ್‌ ಶುಭ ಹಾರೈಸಿದ್ದಾರೆ.
ಇಂಡಿಯನ್‌ ಎಕ್ಸ್‌ ಪ್ರೆಸ್‌ ಕಟ್ಟಡದಲ್ಲಿರುವ ಚಾನೆಲ್‌ ನ ಕಚೇರಿಗೆ ಆಗಮಿಸಿ ಶುಭ ಕೋರಿದ ಅವರು, ಪಿಎನ್‌ ಎಸ್‌ ವಿಸ್ತಾರ ಚಾನೆಲ್‌ ಮುಂಚೂಣಿ ಸುದ್ದಿವಾಹಿನಿಯಾಗಿ ಪರಿವರ್ತನೆಯಾಗಲಿ ಎಂದು ಹಾರೈಸಿದರು.
ಚಾನೆಲ್‌ ಹೊಸ ಆಡಳಿತ ಮಂಡಳಿಯೊಂದಿಗೆ ಕಾರ್ಯಾರಂಭ ಮಾಡುತ್ತಿರುವುದು ಹೆಮ್ಮೆಯ ವಿಷಯ. ಈ ಚಾನೆಲ್‌ ನಿಷ್ಪಕ್ಷಪಾತ, ಸಮಾಜಮುಖಿ ಸುದ್ದಿಗಳನ್ನು ಯಾವುದೇ ಪೂರ್ವಾಗ್ರಹಪೀಡಿತವಾಗದೆ ಬಿತ್ತರಿಸಲಿ. ನೈಜ, ಸತ್ಯ ವರದಿಗಳನ್ನು ದಾಖಲೆಗಳ ಸಹಿತ ವೀಕ್ಷಕರಿಗೆ ಮುಟ್ಟಿಸಲಿ ಎಂದರು. ಮುಖ್ಯವಾಗಿ ವಿದ್ಯಾರ್ಥಿಗಳಿಗೆ ಪ್ರಯೋಜನವಾಗುವ, ಅವರ ಜೀವನಕ್ಕೆ ನೆರವಾಗುವ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವಂತೆಯೂ ಅವರು ಕೋರಿದರು.
ಚಾನೆಲ್‌ ನ ಧ್ಯೇಯೋದ್ದೇಶಗಳನ್ನು ತಿಳಿದುಕೊಂಡ ರಮೇಶ್‌ ಅವರು ಮೆಚ್ಚುಗೆ ಸೂಚಿಸಿದರು.

Continue Reading
Advertisement
Latest11 ಗಂಟೆಗಳು ago

ಹೆಣ್ಣು ಮಗುವಿನ ತಂದೆಯಾದ ಖ್ಯಾತ ನಿರ್ದೇಶಕ ಅಟ್ಲಿ; ಅಭಿನಂದನೆಗಳ ಮಹಾಪೂರ

Latest11 ಗಂಟೆಗಳು ago

ಮಹಿಳಾ ಮೀಸಲು ಮಸೂದೆ ಕಾಂಗ್ರೆಸ್‌ ಪಕ್ಷದ ಕನಸು ಮತ್ತು ಕೂಸು: ಡಿ.ಕೆ.ಶಿವಕುಮಾರ್

ಅವಿಭಾಗೀಕೃತ12 ಗಂಟೆಗಳು ago

ಕಾಶ್ಮೀರ: ಕಂದಕಕ್ಕೆ ಉರುಳಿದ ಬಸ್; 15 ಸಾವು, ಹಲವರ ಸ್ಥಿತಿ ಗಂಭೀರ

ದೇಶ12 ಗಂಟೆಗಳು ago

ದೇಶದ ಪ್ರಧಾನಿಗೆ ಕೈಯಾರ ಚುರುಮುರಿ ಕೊಟ್ಟರೂ ಇಲ್ಲ ಖುಷಿ! ಆ ತಪ್ಪು ಮಾಡಬಾರದಿತ್ತು ಅಂದ ವ್ಯಾಪಾರಿ

Latest12 ಗಂಟೆಗಳು ago

ಗ್ಯಾಂಗ್‌ಸ್ಟರ್ ಸಿನಿಮಾ ಎಂಬ ಭ್ರಮೆಯಲ್ಲಿದ್ದವರಿಗೆ ಶಾಕ್ ಕೊಟ್ಟ ಯಶ್; ‘ಟಾಕ್ಸಿಕ್’ ಹಿಂದಿದೆ ಬೇರೆಯದೇ ಪ್ಲ್ಯಾನ್‌!

ಅವಿಭಾಗೀಕೃತ12 ಗಂಟೆಗಳು ago

ಅಹಿಂದ ರಕ್ಷಣೆ ಹೊಣೆ ಹೊತ್ತ ಸಚಿವ ಜಾರಕಿಹೊಳಿ: ಇದರ ಮರ್ಮವೇನು?

Latest13 ಗಂಟೆಗಳು ago

ಸಾಧ್ವಿ ಸೈಲ್ ಮಿಸ್ ವರ್ಲ್ಡ್ ಪ್ರಶಸ್ತಿ ಗೆಲ್ಲಲಿ: ಸಿಎಂ ಸಿದ್ದರಾಮಯ್ಯ ಆಶಯ

Latest13 ಗಂಟೆಗಳು ago

ಮೋದಿ-ಸಿದ್ದರಾಮಯ್ಯ ಗುಸುಗುಸು: ಇಬ್ಬರೂ ಮಾತನಾಡಿದ ವಿಷಯ ಬಹಿರಂಗ

Latest14 ಗಂಟೆಗಳು ago

ಪ್ರಧಾನಿ ಮೋದಿ ಸಾಮಾಜಿಕ ನ್ಯಾಯದ ಪರವಾಗಿಲ್ಲ: ಸಿಎಂ ಸಿದ್ದರಾಮಯ್ಯ ಟೀಕೆ

Latest14 ಗಂಟೆಗಳು ago

ಬಸವಣ್ಣನವರನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸಬಾರದು: ಸಚಿವ ಸತೀಶ್‌ ಜಾರಕಿಹೊಳಿ

galipata neetu
ಕಿರುತೆರೆ2 ವರ್ಷಗಳು ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ3 ವರ್ಷಗಳು ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ3 ವರ್ಷಗಳು ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ3 ವರ್ಷಗಳು ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ3 ವರ್ಷಗಳು ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ3 ವರ್ಷಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ2 ವರ್ಷಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 ವರ್ಷಗಳು ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ3 ವರ್ಷಗಳು ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ2 ವರ್ಷಗಳು ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 ವರ್ಷಗಳು ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 ವರ್ಷಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 ವರ್ಷಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 ವರ್ಷಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 ವರ್ಷಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 ವರ್ಷಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 ವರ್ಷಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 ವರ್ಷಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 ವರ್ಷಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 ವರ್ಷಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌