Site icon Vistara News

ನಡುರಾತ್ರಿ ಏನಾಗುತ್ತೆ ಹೃದಯಕ್ಕೆ? ಜಯದೇವ ಆಸ್ಪತ್ರೆ ಹೊರಗೆಡಹಿದ ಸತ್ಯ

heart attack

ಬೆಂಗಳೂರಿನ ಜಯದೇವ ಇನ್‌ಸ್ಟಿಟ್ಯೂಟ್‌ ಆಫ್‌ ಕಾರ್ಡಿವ್ಯಾಸ್ಕ್ಯುಲಾಋ ಸೈನ್ಸಸ್‌ ಮತ್ತು ರಿಸರ್ಚ್‌ನಲ್ಲಿ ಸೇವೆ ಸಲ್ಲಿಸುವ ವೈದ್ಯರು ನೀಡಿರುವ ಮಾಹಿತಿಯಂತೆ, ಪ್ರತಿ ರಾತ್ರಿಯೂ ಸುಮಾರು 80-100 ಪೇಷೆಂಟ್‌ಗಳು ದಿಡೀರ್‌ ಎದೆನೋವು ಎಂದು ಆಸ್ಪತ್ರೆಗೆ ಧಾವಿಸುತ್ತಾರಂತೆ.

ರಾತ್ರಿ 8 ಗಂಟೆಯಿಂದ ಬೆಳಗ್ಗೆ 8 ಗಂಟೆಯವರೆಗಿನ ಈ ಅವಧಿಯಲ್ಲಿ ಈ ಎದೆನೋವು ಕಾಣಿಸಿಕೊಳ್ಳುತ್ತದೆ. ಈ ಎದೆನೋವುಗಳೆಲ್ಲವೂ ಹೃದಯಾಘಾತಗಳಲ್ಲ. ಆದರೆ ನಡುರಾತ್ರಿ ಉಂಟಾಗುವ ಈ ನೋವು ವ್ಯಕ್ತಿ ಹಾಗೂ ಕುಟುಂಬದವರಲ್ಲಿ ಆತಂಕ ಉಂಟುಮಾಡುತ್ತದೆ, ಆಸ್ಪತ್ರೆಗೆ ಧಾವಿಸುವಂತೆ ಮಾಡುತ್ತಿದೆ.

ವೈದ್ಯರ ಪ್ರಕಾರ, ಕೋವಿಡ್‌ ಪೂರ್ವ ಅವಧಿಗೆ ಹೋಲಿಸಿದರೆ, ನಂತರದ ಅವಧಿಯಲ್ಲಿ ಇಂಥ ಪ್ರಕರಣಗಳ ಸಂಖ್ಯೆ 5-10 ಶೇಕಡಾ ಹೆಚ್ಚಿದೆ. ಕೆಲವು ರಾತ್ರಿಗಳಲ್ಲಿ ಈ ಪ್ರಕರಣಗಳು 150ನ್ನೂ ಮೀರುವುದೂ ಉಂಟಂತೆ. ಕೆಲವೊಮ್ಮೆ ಇವುಗಳನ್ನು ನಿಭಾಯಿಸಲು ವೈದ್ಯರ ಸಂಖ್ಯೆ ಸಾಲದೆ ಹೋಗುತ್ತದೆ. ಬೆಂಗಳೂರು ಮಾತ್ರವಲ್ಲ, ಸುತ್ತಮುತ್ತಲಿನ ಜಿಲ್ಲೆಗಳಿಂದಲೂ ಪ್ರಕರಣಗಳು ಬರುತ್ತವೆ. ಯಾಕೆಂದರೆ ಕೆಲವು ಜಿಲ್ಲಾ ಆಸ್ಪತ್ರೆಗಳಲ್ಲಿ ನೈಟ್‌ ಶಿಪ್ಟ್‌ಗಳಲ್ಲಿ ಇಂಥ ಸಮಸ್ಯೆಗಳನ್ನು ನಿಭಾಯಿಸಲು ಬೇಕಾದ ವ್ಯವಸ್ಥೆಗಳಿಲ್ಲ. ಜಯದೇವದಲ್ಲಿ ಇಪ್ಪತ್ತನಾಲ್ಕು ಗಂಟೆಯೂ ಇದನ್ನು ನಿಭಾಯಿಸಲು ಬೇಕಾದ ತಜ್ಞರು ಹಾಗು ವ್ಯವಸ್ಥೆಗಳಿವೆ. ಹೆಚ್ಚಿನ ಪ್ರಕರಣಗಳನ್ನು ಜಿಲ್ಲಾಸ್ಪತ್ರೆಗಳೇ ನಿಭಾಯಿಸಬಹುದು ಎಂದು ಜಯದೇವದ ವೈದ್ಯರು ಹೇಳುತ್ತಾರೆ.

ಜಯದೇವ ಆಸ್ಪತ್ರೆಯ ಸಾಮರ್ಥ್ಯ ಈಗ 1000 ಬೆಡ್‌ಗಳು. ಸದ್ಯ 350 ಹಾಸಿಗೆಗಳ ಇನ್‌ಫೋಸಿಸ್‌ ಬ್ಲಾಕ್‌ ಇದನ್ನು ಸೇರಿದೆ. ದಕ್ಷಿಣ ಏಷ್ಯಾದಲ್ಲೇ ಇದು ಹೃದಯ ಚಿಕಿತ್ಸೆಯ ಬೃಹತ್‌ ಆಸ್ಪತ್ರೆ. ಹೃದಯ ಸಮಸ್ಯೆ ಇರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರುತ್ತಲೇ ಇದೆ. ಆಸ್ಪತ್ರೆಯಲ್ಲಿರುವ 7 ಐಸಿಯುಗಳು ಸದಾ ತುಂಬಿಯೇ ಇರುತ್ತವೆ. ಹಗಲು ಹೊತ್ತಿನಲ್ಲಿ ಸುಮಾರು 1500 ಔಟ್‌ಪೇಷೆಂಟ್‌ಗಳು ಇರುತ್ತಾರಂತೆ.

ರಾತ್ರಿ ಬರುವ ಕೇಸ್‌ಗಳು

ರಾತ್ರಿ ಬರುವ ಕೇಸ್‌ಗಳೆಲ್ಲ ಹೃದಯಾಘಾತಗಳಲ್ಲ. ಇವುಗಳಲ್ಲಿ ಗ್ಯಾಸ್ಟ್ರಿಕ್‌ನಿಂದ ಆದ ಎದೆನೋವು, ಭಾರಿ ಹೃದಯಾಘಾತ ಮತ್ತು ಕಿಡ್ನಿ ವೈಫಲ್ಯ ಇರುತ್ತವೆ. ಯಾವುದೇ ಎದೆನೋವು ಕುಟುಂಬದಲ್ಲಿ ಆತಂಕ ಸೃಷ್ಟಿಸುತ್ತದೆ. ಹೀಗೆ ಬರುವವರಲ್ಲಿ 50% ಮಂದಿಗೆ ಅಡ್ಮಿಶನ್‌ ಅಗತ್ಯವಾಗುತ್ತದೆ. ಕೆಲವೊಮ್ಮೆ ಒಬ್ಬರೋ ಇಬ್ಬರೋ ತರುವಾಗಲೇ ಮೃತಪಟ್ಟಿರುವುದುಂಟು. ರಾತ್ರಿ ಬರುವವರಲ್ಲಿ 50-60% ಪೇಷೆಂಟ್‌ಗಳ ಪ್ರಾಯ 30-50 ನಡುವೆ ಇರುತ್ತದೆ ಎಂಬುದು ಕಳವಳಕಾರಿ ಎಂದು ವೈದ್ಯರು ಹೇಳುತ್ತಾರೆ.

ರಾತ್ರಿಯೇ ಯಾಕೆ?

ಮುನ್ನೆಚ್ಚರಿಕೆ ಏನೇನು?

ಹೆಚ್ಚಿನ ಓದಿಗಾಗಿ: ಹೆಚ್ಚೆಚ್ಚು ಸ್ತ್ರೀಯರನ್ನು ಕೊಲ್ಲುತ್ತಿದೆ ಹಾರ್ಟ್‌ಫೇಲ್, ಈಗಲೇ ಎಚ್ಚೆತ್ತುಕೊಳ್ಳಿ

Exit mobile version