ಧಾರವಾಡ/ಮೈಸೂರು: ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ (Karnataka CM) ಅಧಿಕಾರ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ಅವರ ಅಭೀಮಾನಿಗಳು ರಾಜ್ಯಾದ್ಯಂತ ಸಿಹಿಯೂಟ (Holige oota) ಆಯೋಜನೆ ಮಾಡಿದ್ದಾರೆ. ಅದರಲ್ಲೂ ಪ್ರಮುಖವಾಗಿ ಇಂದಿರಾ ಕ್ಯಾಂಟೀನ್‌ಗಳಲ್ಲಿ ಉಚಿತ ಹೋಳಿಗೆ ಊಟ ನೀಡಲಾಗುತ್ತಿದೆ.
ಸಿದ್ದರಾಮಯ್ಯ (Siddaramaiah Fans) ಅವರ ಕಟ್ಟಾ ಅಭಿಮಾನಿ ಬಸವರಾಜ್ ಎಂಬವವರು ಮೈಸೂರಿನ ಇಂದಿರಾ ಕ್ಯಾಂಟೀನ್‌ನಲ್ಲಿ ಶುಕ್ರವಾರವೇ ( ಮೇ 19) ಹೋಳಿಗೆ ಸಹಿತ ಊಟ ಹಂಚಿದ್ದಾರೆ. ಅವರು ಮೈಸೂರಿನ 11 ಇಂದಿರಾಗಾಂಧಿ ಕ್ಯಾಂಟೀನ್‌ಗಳಲ್ಲಿ ಮೇ 20ರಂದು ಕೂಡಾ ಹೋಳಿಗೆ ಊಟ ನೀಡಲಿದ್ದಾರೆ. ಸಿದ್ದರಾಮಯ್ಯ ಅವರು ಮೈಸೂರಿನವರಾದ ಕಾರಣ ವಿಶೇಷವಾಗಿ ಮೈಸೂರಿನಲ್ಲಿ ಸಂಭ್ರಮಾಚರಣೆ ನಡೆಯುತ್ತಿದೆ ಎಂದಿದ್ದಾರೆ ಬಸವರಾಜ್.
ಧಾರವಾಡದಲ್ಲಿ ಹೋಳಿಗೆ ವಿತರಣೆ
ಧಾರವಾಡದ ಇಂದಿರಾ ಕ್ಯಾಂಟೀನ್‌ಗಳಲ್ಲಿ ಬೆಳಗ್ಗಿನ ಉಪಾಹಾರದ ಜತೆಗೆ ಡಾ.ಮಯೂರ ಮೋರೆ ಹಾಗೂ ಸಿದ್ದರಾಮಯ್ಯ ಅಭಿಮಾನಿಗಳ ಬಳಗದಿಂದ ಹೋಳಿಗೆ ವಿತರಣೆ ನಡೆದಿದೆ.
ಧಾರವಾಡ ಮಿನಿವಿಧಾನಸೌಧ ಆವರಣದಲ್ಲಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ಬೆಳಗಿನ ಉಪಹಾರದ ಜತಗೆ ಹೋಳಿಗೆ ನೀಡಲಾಗುತ್ತಿದೆ. ಧಾರವಾಡ-ಹುಬ್ಬಳ್ಳಿ ದಕ್ಷಿಣ ಕನ್ನಡ, ಬಾಗಲಕೋಟೆ ಸೇರಿ ಮೂರು ಜಿಲ್ಲೆಗಳಲ್ಲಿ 17 ಕ್ಯಾಂಟೀನ್ ಗಳಲ್ಲಿ ಹೊಳಿಗೆ ವಿತರಣೆ ಮಾಡಲು ಪ್ಲ್ಯಾನ್ ಮಾಡಲಾಗಿದೆ. ಇದಕ್ಕಾಗಿ 9 ಸಾವಿರ ಹೋಳಿಗೆ ಸಿದ್ಧಪಡಿಸಲಾಗಿದೆ.
ವರುಣಾದಲ್ಲಿ ಸಿದ್ದರಾಮಯ್ಯ ಕಟೌಟ್‌ಗೆ ಅಭಿಷೇಕ
ಮೈಸೂರಿನ ವರುಣಾ ಕ್ಷೇತ್ರದಿಂದ ಗೆದ್ದಿರುವ ಸಿದ್ದರಾಮಯ್ಯ ಅವರಿಗೆ ತವರು ಕ್ಷೇತ್ರದ ಜನ ವಿಶೇಷ ಪ್ರೀತಿ ತೋರಿಸಿದ್ದಾರೆ. ಅವರು ಸಿದ್ದರಾಮಯ್ಯ ಕಟೌಟ್ ಗೆ ಹಾಲಿನ ಅಭಿಷೇಕ ಮಾಡಿದರು. ರುಮಾಲು ಪೇಟ ಕಟ್ಟಿ ಸಿದ್ದರಾಮಯ್ಯ ಪರ ಘೋಷಣೆ ಕೂಗಿದರು. ʻʻಚಾಮುಂಡಿ ಪುತ್ರ ಸಿದ್ದರಾಮಯ್ಯನಿಗೆʼʼ ಎಂದು ಜೈಕಾರ ಕೂಗಿದರು.
ವರುಣಾ ಕ್ಷೇತ್ರದಿಂದಲೂ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಬೆಂಗಳೂರಿಗೆ ಧಾವಿಸಿದ್ದಾರೆ.
ತಾತನಿಗೆ ಶುಭಾಶಯ ಕೋರಲು ಬಂದ ಧವನ್ ರಾಕೇಶ್
ʻಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅಧಿಕಾರ ಸ್ವೀಕಾರ ಮಾಡುತ್ತಿರುವ ಹಿನ್ನೆಲೆಯಲ್ಲಿ ತಾತನಿಗೆ ಶುಭಾಶಯ ಕೋರಲು ಧವನ್ ರಾಕೇಶ್ ಬೆಂಗಳೂರಿನ ಸಿದ್ದು ನಿವಾಸಕ್ಕೆ ಆಗಮಿಸಿದ್ದಾರೆ
ದಿವಂಗತ ರಾಕೇಶ್ ಪುತ್ರನಾಗಿರುವ ಧವನ್ ಚುನಾವಣಾ ಪ್ರಚಾರದ ವೇಳೆ ತಾತ ಮತ್ತೊಮ್ಮೆ ಸಿಎಂ ಆಗಲೆಂದು ಪ್ರಚಾರ ಮಾಡಿದ್ದರು. ಇದೀಗ ತಾತ ಎರಡನೇ ಬಾರಿಗೆ ಸಿಎಂ ಆಗ್ತಿರೋದಕ್ಕೆ ಶುಭಾಶಯ ಕೋರಲು ಆಗಮಿಸಿದ್ದಾರೆ.
ತಾತನ ಪದ ಗ್ರಹಣ ಕಾರ್ಯಕ್ರಮದಲ್ಲೂ ಧವನ್ ರಾಕೇಶ್ ಪಾಲ್ಗೊಳ್ಳಲಿದ್ದಾರೆ.
ಇದನ್ನೂ ಓದಿ: Karnataka CM: ಸಿದ್ದರಾಮಯ್ಯ ಪದಗ್ರಹಣಕ್ಕೆ ಶ್ರೀರಾಮ ಪಟ್ಟಾಭಿಷೇಕದ ಟಚ್; ಕಂಠೀರವದಲ್ಲಿ ರಾಮನ ಮೂರ್ತಿ