Site icon Vistara News

ವಿಸ್ತಾರ TOP 10 News | ಮೋದಿ ಹವಾದಿಂದ ಕ್ರಿಕೆಟ್‌ ದಾಖಲೆವರೆಗೆ ದಿನದ ಪ್ರಮುಖ ಸುದ್ದಿಗಳು

Top 10 monday 20062022

ಬೆಂಗಳೂರು: ಕರ್ನಾಟಕದಲ್ಲಿ ದಿನಪೂರ್ತಿ ಮೋದಿ ಹವಾ. ದೇಶದಲ್ಲಿ ಅಗ್ನಿಪಥ ಪ್ರತಿಭಟನೆ ಮುಂದುವರಿದಿದೆಯಾದರೂ ಕಳೆದ ಕೆಲ ದಿನಗಳ ಹೋಲಿಕೆಯಲ್ಲಿ ತಣ್ಣಗಾಗಿದೆ. ಮಂಗಳವಾರ ಅಂತಾರಾಷ್ಟ್ರೀಯ ಯೋಗದಿನಕ್ಕೆ ಇಡೀ ದೇಶ, ವಿಶೇಷವಾಗಿ ಮೈಸೂರು ಸಜ್ಜಾಗುತ್ತಿವುದುದು, ಮುಸ್ಲಿಂ ಹೆಣ್ಣು ಮಕ್ಕಳ ವಿವಾಹ ಕುರಿತು ನ್ಯಾಯಾಲಯದ ಆದೇಶ, ಭಾರತ ಕ್ರಿಕೆಟ್‌ ತಂಡದ ವಿಶೇಷ ದಾಖಲೆ, ರಾಷ್ಟ್ರಪತಿ ಚುನಾವಣೆ ಸೇರಿ ದಿನಪೂರ್ತಿ ನಡೆದ ಘಟನಾವಳಿಗಳ ಪ್ರಮುಖ ಹತ್ತು ಸುದ್ದಿಗಳ ಗುಚ್ಛ ವಿಸ್ತಾರ TOP 10 News.

1. Modi In Karnataka | 40 ವರ್ಷದಲ್ಲಿ ಆಗದ ಕೆಲಸವನ್ನು 40 ತಿಂಗಳಲ್ಲಿ ಮಾಡುವೆ ಎಂದ ಮೋದಿ
ಕರ್ನಾಟಕದಲ್ಲಿ ಡಬಲ್‌ ಎಂಜಿನ್‌ ಸರ್ಕಾರವಿದ್ದು, ಇದರಿಂದಾಗಿ ಅಭಿವೃದ್ಧಿಯ ವೇಗ ಹೆಚ್ಚಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ. ಕಳೆದ ೪೦ ವರ್ಷಗಳಿಂದ ಬೆಂಗಳೂರು ಸಬ್‌ಅರ್ಬನ್‌ ಯೋಜನೆ ನನೆಗುದಿಗೆ ಬೀಳಲು ಕಾರಣವಾದ ಹಿಂದಿನ ಸರ್ಕಾರಗಳನ್ನು ಮೋದಿ ಟೀಕಿಸಿದರು. ಬೆಂಗಳೂರಿನ ಕೊಮ್ಮಘಟ್ಟದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬೆಂಗಳೂರು ಸಬ್ ಅರ್ಬನ್ ಸೇರಿ ವಿವಿಧ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಯಲ್ಲಿ ಮಾತನಾಡಿದರು. ಬೆಂಗಳೂರಿನ ಐಐಎಸ್‌ಸಿಯಲ್ಲಿ, ನಂತರ ಜ್ಞಾನಭಾರತಿಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಮೋದಿ ಭಾಗಿಯಾದರು. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

೨. yoga day 2022 | ಸಾಂಸ್ಕೃತಿಕ ನಗರಿ ಮೈಸೂರು ಯೋಗ ನಗರಿಯಾಗಿದ್ದು ಹೇಗೆ?
ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಧಾನ ಕಾರ್ಯಾಕ್ರಮ ಈ ಬಾರಿ ನಮ್ಮ ಸಾಂಸ್ಕೃತಿಕ ನಗರಿ, ಯೋಗ ನಗರಿ ಮೈಸೂರಿನಲ್ಲಿ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದರಿಂದ ಇಡೀ ಜಗತ್ತು ಮೈಸೂರಿನತ್ತ ನೋಡುತ್ತಿದೆ. ಮೈಸೂರಿಗೂ ಯೋಗಕ್ಕೂ ಇರುವ ಸಂಬಂಧವೇನು?, ಸಾಂಸ್ಕೃತಿಕ ನಗರಿ ಯೋಗ ನಗರಿಯಾಗಿದ್ದು ಹೇಗೆ? ಇಲ್ಲಿದೆ ಕುತೂಹಲಕರ ಮಾಹಿತಿ.(ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)
ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುವ ಕಾರ್ಯಕ್ರಮಕ್ಕೆ ಮಳೆ ಅಡ್ಡಿ ಉಂಟುಮಾಡುತ್ತದೆಯೇ ಎಂಬುದೂ ಕುತೂಹಲದ ವಿಚಾರವಾಗಿದೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

೩. ರಾಹುಲ್‌ಗೆ ಇಂದೂ ಇ.ಡಿ ಅಗ್ನಿ ಪರೀಕ್ಷೆ: ನಾಲ್ಕನೇ ಬಾರಿ ವಿಚಾರಣೆಯ ಬಿಸಿ
ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನಾಲ್ಕನೇ ಬಾರಿಗೆ ಜಾರಿ ನಿರ್ದೇಶನಾಲಯಕ್ಕೆ ಸೋಮವಾರ ಹಾಜರಾಗಿದ್ದಾರೆ. ನ್ಯಾಷನಲ್‌ ಹೆರಾಲ್ಡ್‌ಗೆ ಸಂಬಂಧಿಸಿ ನಡೆದಿದೆ ಎನ್ನಲಾಗಿರುವ ಅಕ್ರಮ ಹಣಕಾಸು ವರ್ಗಾವಣೆ ಹಗರಣ ಕುರಿತು ರಾಹುಲ್‌ ಗಾಂಧಿ ಇಡಿ ವಿಚಾರಣೆಯನ್ನು ಎದುರಿಸುತ್ತಿದ್ದಾರೆ. ಕಾಂಗ್ರೆಸ್‌ ಇದರ ವಿರುದ್ಧ ಪ್ರತಿಭಟನೆ ನಡೆಸುತ್ತಿದೆ.(ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

೪. Agnipath | ಅಗ್ನಿಪಥ್‌ ಯೋಜನೆ ವಿರೋಧಿಸಿ ಭಾರತ ಬಂದ್‌ ಕರೆ, ಹಲವು ರಾಜ್ಯಗಳಲ್ಲಿ ಹೈ ಅಲರ್ಟ್
ಹತ್ತಕ್ಕೂ ಹೆಚ್ಚು ರಾಜ್ಯಗಳಲ್ಲಿ ನೂತನ ಸೇನಾ ನೇಮಕಾತಿ ಅಗ್ನಿಪಥ್‌ ಯೋಜನೆ ವಿರೋಧಿಸಿ ಪ್ರತಿಭಟನೆ ಮುಂದುವರಿದಿದ್ದು, ಸೋಮವಾರ ಕೆಲ ಗುಂಪುಗಳು ಭಾರತ ಬಂದ್‌ಗೆ ಕರೆ ನೀಡಿದ್ದವು. ಅಗ್ನಿಪಥ್‌ ಯೋಜನೆಯನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಸೇನಾ ಮುಖ್ಯಸ್ಥರು ಭಾನುವಾರ ಹೇಳಿಕೆ ನೀಡಿದ ಬೆನ್ನಲ್ಲೇ ಪ್ರತಿಭಟನಾಕಾರರು ಭಾರತ ಬಂದ್‌ ನಡೆಸಲು ನಿರ್ಧರಿಸಿದ್ದರು.‌ ಆದರೆ ಪ್ರತಿಭಟನೆಯ ಬಿಸಿ ತಣ್ಣಗಾಗುವ ಲಕ್ಷಣ ಗೋಚರಿಸಿದೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)
ಒಂದೆಡೆ ಪ್ರತಿಭಟನೆಗಳು ನಡೆಯುತ್ತಿರುವಂತೆಯೇ ಮತ್ತೊಂದೆಡೆ ಅಗ್ನಿಪಥ್‌ ಮೂಲಕ ಮೊದಲ ಬಾರಿಗೆ ನೌಕಾಪಡೆಗೆ ಮಹಿಳಾ ನಾವಿಕರ ನೇಮಕಕ್ಕೆ ಚಾಲನೆ ದೊರೆತಿದೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

೫. ಮುಸ್ಲಿಂ ಹುಡುಗಿಯರು 16ನೇ ವರ್ಷಕ್ಕೆ ಮದುವೆಯಾಗಬಹುದು ಎಂದ ಕೋರ್ಟ್‌
ದೇಶದಲ್ಲಿ ಹೆಣ್ಮಕ್ಕಳಿಗೆ ಮದುವೆ ಮಾಡಬೇಕಾದರೆ ೧೮ ವರ್ಷ ತುಂಬಿರಬೇಕು. ಮುಂದಿನ ದಿನಗಳಲ್ಲಿ ಇದನ್ನು ೨೧ ವರ್ಷಕ್ಕೆ ಏರಿಸುವ ಪ್ರಸ್ತಾಪವನ್ನು ಕೇಂದ್ರ ಸರಕಾರ ಹೊಂದಿದೆ. ಅದರ ನಡುವೆಯೇ ಹುಡುಗಿಯೊಬ್ಬಳಿಗೆ ೧೬ ವರ್ಷಕ್ಕೇ ಮದುವೆ ಮಾಡಬಹುದು ಎಂದು ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ. (ಸಂಪೂರ್ಣಸುದ್ದಿಗಾಗಿ ಇಲ್ಲಿ ಓದಿ)

೬. ಸೋಲೇ ಇಲ್ಲ: ತವರಿನಲ್ಲಿ 9 ಸೋಲು ರಹಿತ ಸರಣಿ ಸಾಧನೆ ಮಾಡಿ ಆಸ್ಟ್ರೇಲಿಯಾ ದಾಖಲೆ ಮುರಿದ ಭಾರತ
ತವರಿನ ನೆಲದಲ್ಲಿ ಸೋಲು ರಹಿತ 9 ಟಿ೨೦ ಸರಣಿಯಲ್ಲಿ (ಗೆಲುವು ಮತ್ತು ಡ್ರಾ ಸೇರಿಕೊಂಡು) ಪಾಲ್ಗೊಂಡ ಶ್ರೇಯಸ್ಸಿಗೆ ಭಾರತ ಕ್ರಿಕೆಟ್‌ ತಂಡ ಪಾತ್ರವಾಗಿದೆ. ಈ ಮೂಲಕ 12 ವರ್ಷಗಳ ಹಿಂದೆ ಆಸ್ಟ್ರೇಲಿಯಾ ತಂಡ 8 ಸರಣಿಯಲ್ಲಿ ಸೋಲು ಕಾಣದೇ ನಿರ್ಮಿಸಿದ್ದ ದಾಖಲೆ ಮುರಿದಿದೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

೭. ವಿಸ್ತಾರ Explainer: ಅಮೆರಿಕಕ್ಕೆ ರಿಸೆಷನ್ ಭೀತಿ, ಭಾರತಕ್ಕೂ ಫಜೀತಿ?
ಆರ್ಥಿಕ ಹಿಂಜರಿತದ ಕಡೆಗೆ ಅಮೆರಿಕ ಜಾರಿದೆಯೇ ಎಂಬ ಪ್ರಶ್ನೆ ಎದ್ದಿದೆ. ಬಿಲಿಯನೇರ್‌ ಹೂಡಿಕೆದಾರ ಲಿಯೋನ್‌ ಕೂಪರ್‌ಮ್ಯಾನ್‌ ಹೇಳುವ ಪ್ರಕಾರ, ಮುಂದಿನ ವರ್ಷ ಅಮೆರಿಕದ ಆರ್ಥಿಕತೆ ಹಿಂಜರಿತಕ್ಕೀಡಾಗಲಿದೆ. ಇದಕ್ಕೆ ಕಾರಣ ಒಟ್ಟಾರೆ ಎಕಾನಮಿಯ ಮಂದಗತಿ. ಅಮೆರಿಕದ ಕಂಪನಿಗಳ ಆದಾಯ ಇಳಿಕೆಯಾಗಲಿದ್ದು, ಪರಿಣಾಮವಾಗಿ ಷೇರು ಸೂಚ್ಯಂಕ ಎಸ್‌ ಆಂಡ್‌ಪಿ 40% ಕುಸಿಯಲಿದೆ. ಸದ್ಯದ ಭವಿಷ್ಯದಲ್ಲಿ ಷೇರು ಪೇಟೆಯಲ್ಲಿ ಗೂಳಿಯ ಅಬ್ಬರ ಕಾಣಲು ಸಿಗಲಿಕ್ಕಿಲ್ಲ. ಅಮೆರಿಕದಲ್ಲಿ ಆರ್ಥಿಕ ಹಿಂಜರಿತ ಸಂಭವಿಸಿದರೆ ಏನಾದೀತು? ಭಾರತದ ಮೇಲೆ ಇದರ ಪರಿಣಾಮ ಏನು? ಇಲ್ಲಿದೆ ವಿಸ್ತೃತ ಮಾಹಿತಿ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

೮. ವಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿಯಾಗಲು ಒಪ್ಪದ ಗಾಂಧಿ ಮೊಮ್ಮಗ; ದೇಶ ಒಪ್ಪುವವರನ್ನು ಆರಿಸಲು ಸಲಹೆ
ರಾಷ್ಟ್ರಪತಿ ಚುನಾವಣೆಯಲ್ಲಿ (President Election) ಎಲ್ಲರೂ ಒಟ್ಟಾಗಿ ಅಭ್ಯರ್ಥಿಯನ್ನೊಬ್ಬರನ್ನು ಕಣಕ್ಕೆ ಇಳಿಸುವ ಪ್ರಯತ್ನದಲ್ಲಿ ಪ್ರತಿಪಕ್ಷಗಳೆಲ್ಲ ತೊಡಗಿವೆ. ಅಭ್ಯರ್ಥಿ ಯಾರು? ಎಂದು ಪ್ರಶ್ನೆ ಬಂದಾಗ ಮೊದಲಿಗೆ ಕೇಳಿಬಂದಿದ್ದು ಶರದ್‌ ಪವಾರ್‌. ಆದರೆ ಶರದ್‌ ಪವಾರ್‌ ತಾವು ರಾಷ್ಟ್ರಪತಿ ಹುದ್ದೆ ರೇಸ್‌ನಲ್ಲಿ ಇರಲು ಇಷ್ಟಪಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ ಮೇಲೆ, ಪ್ರತಿಪಕ್ಷಗಳ ಪ್ರಮುಖರೆಲ್ಲ ಸೇರಿ, ಮಹಾತ್ಮ ಗಾಂಧಿ ಮೊಮ್ಮಗ, ಪಶ್ಚಿಮ ಬಂಗಾಳ ಮಾಜಿ ರಾಜ್ಯಪಾಲ ಗೋಪಾಲಕೃಷ್ಣ ಗಾಂಧಿಯವರ ಬಳಿ ಪ್ರಸ್ತಾಪ ಇಟ್ಟಿದ್ದರು. ಅಂದರೆ ರಾಷ್ಟ್ರಪತಿ ಹುದ್ದೆಗೆ ಪ್ರತಿಪಕ್ಷಗಳ ಜಂಟಿ ಅಭ್ಯರ್ಥಿಯಾಗುವಂತೆ ಮನವಿ ಮಾಡಿದ್ದರು. ಆದರೆ ಅವರೀಗ ಈ ಆಫರ್‌ನ್ನು ಒಪ್ಪಿಕೊಳ್ಳಲಿಲ್ಲ. ಪ್ರೆಸಿಡೆಂಟ್‌ ಎಲೆಕ್ಷನ್‌ಗೆ ನಿಲ್ಲುವುದಿಲ್ಲ ಎಂದು ಪ್ರಕಟಣೆಯನ್ನು ಹೊರಡಿಸಿದ್ದಾರೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

೯. ಏರ್‌ ಇಂಡಿಯಾದಿಂದ ಮುಂದಿನ 5 ವರ್ಷಗಳಲ್ಲಿ 200 ಹೊಸ ವಿಮಾನಗಳ ಖರೀದಿಗೆ ಸಿದ್ಧತೆ
ಏರ್‌ ಇಂಡಿಯಾದ ತೆಕ್ಕೆಗೆ ಮುಂದಿನ 5 ವರ್ಷಗಳಲ್ಲಿ 200 ವಿಮಾನಗಳು ಸೇರ್ಪಡೆಯಾಗಲಿದೆ. “ಇನ್ನು ಹೆಚ್ಚು ಸಮಯವಿಲ್ಲ, ಏರ್‌ ಇಂಡಿಯಾ ಅತ್ಯಂತ ತ್ವರಿತವಾಗಿ ವಿಸ್ತರಿಸಲಿದೆ. ಈ ನಿಟ್ಟಿನಲ್ಲಿ ಮುಂದಿನ ಐದು ವರ್ಷಗಳಲ್ಲಿ ಇನ್ನೂರಕ್ಕೂ ಹೆಚ್ಚು ವಿಮಾನಗಳು ಸೇರ್ಪಡೆಯಾಗಲಿದೆʼʼ ಎಂದು ಏರ್‌ ಇಂಡಿಯಾದ ಮೂಲಗಳು ತಿಳಿಸಿವೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

೧೦. ಚಾಮರಾಜಪೇಟೆ ಮೈದಾನದಲ್ಲಿ ಯೋಗಕ್ಕೆ ಬ್ರೇಕ್‌: ಸಂಘಟನೆಗಳಿಗೆ ನಿರಾಸೆ
ಚಾಮರಾಜಪೇಟೆ ಮೈದಾನದಲ್ಲಿ ಯೋಗ ದಿನಾಚರಣೆ ವಿವಾದಕ್ಕೆ ಸಂಬಂಧಪಟ್ಟಂತೆ ಸದ್ಯದ ಪರಿಸ್ಥಿತಿಯಲ್ಲಿ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಬಿಬಿಎಂಪಿ ತಿಳಿಸಿದೆ. ಮಂಗಳವಾರ (ಜೂನ್‌ 21) ದೇಶಾದ್ಯಂತ ಯೋಗ ದಿನಾಚರಣೆ ಅಂಗವಾಗಿ ಹಲವು ಸಂಘಟನೆಗಳು ಯೋಗ ದಿನಾಚರಣೆಗೆ ಅನುಮತಿ ಕೋರಿದ್ದವು. ಆದರೆ ಇದೀಗ ಬಿಬಿಎಂಪಿ ಅನುಮತಿ ನಿರಾಕರಿಸಿರುವುದು ಸಂಘಟನೆಗಳಿಗೆ ಬೇಸರ ಮೂಡಿಸಿದೆ. ನ್ಯಾಯಾಲಯದ ಕದ ತಟ್ಟುವುದಾಗಿ ತಿಳಿಸಿವೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

Exit mobile version