ಏರ್‌ ಇಂಡಿಯಾದಿಂದ ಮುಂದಿನ 5 ವರ್ಷಗಳಲ್ಲಿ 200 ಹೊಸ ವಿಮಾನಗಳ ಖರೀದಿಗೆ ಸಿದ್ಧತೆ - Vistara News

ಪ್ರಮುಖ ಸುದ್ದಿ

ಏರ್‌ ಇಂಡಿಯಾದಿಂದ ಮುಂದಿನ 5 ವರ್ಷಗಳಲ್ಲಿ 200 ಹೊಸ ವಿಮಾನಗಳ ಖರೀದಿಗೆ ಸಿದ್ಧತೆ

ಏರ್‌ ಇಂಡಿಯಾ ಟಾಟಾ ಸಮೂಹಕ್ಕೆ ಮರಳಿದ ಬಳಿಕ ಹೊಸ ಹುರುಪಿನಿಂದ ಕಾಯಕಲ್ಪ ಪಡೆಯಲು ಸಜ್ಜಾಗಿದೆ. ಮುಂದಿನ ಐದು ವರ್ಷಗಳಲ್ಲಿ 200ಕ್ಕೂ ಹೆಚ್ಚು ಹೊಸ ವಿಮಾನಗಳನ್ನು ಖರೀದಿಸಲಿದೆ.

VISTARANEWS.COM


on

air india
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಏರ್‌ ಇಂಡಿಯಾದ ತೆಕ್ಕೆಗೆ ಮುಂದಿನ 5 ವರ್ಷಗಳಲ್ಲಿ 200 ವಿಮಾನಗಳು ಸೇರ್ಪಡೆಯಾಗಲಿದೆ.

” ಇನ್ನು ಹೆಚ್ಚು ಸಮಯವಿಲ್ಲ, ಏರ್‌ ಇಂಡಿಯಾ ಅತ್ಯಂತ ತ್ವರಿತವಾಗಿ ವಿಸ್ತರಿಸಲಿದೆ. ಈ ನಿಟ್ಟಿನಲ್ಲಿ ಮುಂದಿನ ಐದು ವರ್ಷಗಳಲ್ಲಿ ಇನ್ನೂರಕ್ಕೂ ಹೆಚ್ಚು ವಿಮಾನಗಳು ಸೇರ್ಪಡೆಯಾಗಲಿದೆʼʼ ಎಂದು ಏರ್‌ ಇಂಡಿಯಾದ ಮೂಲಗಳು ತಿಳಿಸಿವೆ.

ಈ ಸಂಬಂಧ ಏರ್‌ ಇಂಡಿಯಾ, ಏರ್‌ಬಸ್‌ ಮತ್ತು ಬೋಯಿಂಗ್‌ ಜತೆ ಮಾತುಕತೆ ನಡೆಸಿದೆ. ಏರ್‌ ಇಂಡಿಯಾ ಖರೀದಿಸಲಿರುವ ವಿಮಾನಗಳಲ್ಲಿ ೭೦% ವಿಮಾನಗಳು narro-bodied planes ಆಗಿದ್ದರೆ, 30% ವಿಮಾನಗಳು wide-bodied plans ಆಗಿವೆ. ಬೋಯಿಂಗ್‌ ವಿಮಾನಗಳ ಖರೀದಿಯಲ್ಲಿ ವಿಳಂಬ ಆಗುವ ಸಾಧ್ಯತೆ ಇದೆ. ಏರ್‌ಬಸ್‌ ಜತೆ ವಿಮಾನ ಖರೀದಿಗೆ ಕಳೆದ ಆರು ತಿಂಗಳುಗಳಿಂದ ಮಾತುಕತೆ ನಡೆಯುತ್ತಿದೆ. ಈ ಒಪ್ಪಂದಗಳು ನಡೆದರೆ, ವೈಮಾನಿಕ ಇತಿಹಾಸದಲ್ಲೇ ಅತಿ ದೊಡ್ಡ ವಿಮಾನ ಖರೀದಿ ಒಪ್ಪಂದಗಳಲ್ಲಿ ಒಂದೆನ್ನಿಸಲಿವೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

IPL 2024 : ಆರ್​ಸಿಬಿ ಮತ್ತು ಸಿಎಸ್​ಕೆ ನಡುವಿನ ಪಂದ್ಯದ ವಿಜೇತರು ಯಾರು ಎಂದು ತಿಳಿಸಿದ ಬ್ರಿಯಾನ್ ಲಾರಾ

ಐಪಿಎಲ್ 2024 ರ ಕೊನೆಯ ಲೀಗ್ ಪಂದ್ಯದಲ್ಲಿ ಫಾಫ್ ಡು ಪ್ಲೆಸಿಸ್ ನೇತೃತ್ವದ ಆರ್​ಸಿಬಿ ಶನಿವಾರ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಅತಿಥ್ಯ ನೀಡಲಿದೆ. ನಾಳೆ ರಾತ್ರಿ ಗೆಲುವಿನೊಂದಿಗೆ ಕೊನೆಯ 4 ರ ಪಟ್ಟಿಗೆ ಪ್ರವೇಶ ಪಡೆಯಲು ಕಾಯುತ್ತಿದೆ. ಪ್ಲೇಆಫ್​ಗೆ ಎರಡೂ ತಂಡಗಳಿಗೆ ಅವಕಾಶ ಇರುವುದರಿಂದ ಈ ಪಂದ್ಯದಲ್ಲಿ ನಿರೀಕ್ಷೆ ಹಿಂದೆಂದಿಗಿಂತಲೂ ಹೆಚ್ಚಾಗಿದೆ.

VISTARANEWS.COM


on

IPL 2024
Koo

ಬೆಂಗಳೂರು: ಐಪಿಎಲ್​ 2024ರ (IPL 2024 ) ಅತ್ಯಂತ ರೋಚಕ ಪಂದ್ಯವಾಗಿರುವ ಸಿಎಸ್​ಕೆ ಮತ್ತು ಆರ್​ಸಿಬಿ ನಡುವಿನ ಕದನದಲ್ಲಿ ಯಾರು ಗೆಲ್ಲುತ್ತಾರೆ ಎಂದು ಹೈದರಾಬಾದ್ ತಂಡದ ಮಾಜಿ ಮುಖ್ಯ ಕೋಚ್ ಬ್ರಿಯಾನ್ ಲಾರಾ (Brian Lara) ಊಹಿಸಿದ್ದಾರೆ. ಅವರು ಆರ್​ಸಿಬಿಗೆ ಬೆಂಬಲ ವ್ಯಕ್ತಪಡಿಸಿದ್ದು ರಿವರ್ಸ್ ಪಂದ್ಯದಲ್ಲಿ ಸಿಎಸ್​ಕೆ ವಿರುದ್ಧ ಮಿಂಚಲಿರುವ ಆರ್​ಸಿಬಿ ಪ್ಲೇಆಫ್​ಗೇರಲಿದೆ ಎಂದು ಹೇಳಿದ್ದಾರೆ.

ಐಪಿಎಲ್ 2024 ರ ಕೊನೆಯ ಲೀಗ್ ಪಂದ್ಯದಲ್ಲಿ ಫಾಫ್ ಡು ಪ್ಲೆಸಿಸ್ ನೇತೃತ್ವದ ಆರ್​ಸಿಬಿ ಶನಿವಾರ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಅತಿಥ್ಯ ನೀಡಲಿದೆ. ನಾಳೆ ರಾತ್ರಿ ಗೆಲುವಿನೊಂದಿಗೆ ಕೊನೆಯ 4 ರ ಪಟ್ಟಿಗೆ ಪ್ರವೇಶ ಪಡೆಯಲು ಕಾಯುತ್ತಿದೆ. ಪ್ಲೇಆಫ್​ಗೆ ಎರಡೂ ತಂಡಗಳಿಗೆ ಅವಕಾಶ ಇರುವುದರಿಂದ ಈ ಪಂದ್ಯದಲ್ಲಿ ನಿರೀಕ್ಷೆ ಹಿಂದೆಂದಿಗಿಂತಲೂ ಹೆಚ್ಚಾಗಿದೆ.

ಇದಕ್ಕೂ ಮುನ್ನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಇತ್ತಂಡಗಳ ನಡುವಿನ ಪಂದ್ಯದಲ್ಲಿ ಸಿಎಸ್​ಕೆ ಗೆಲುವು ಸಾಧಿಸಿತ್ತು. ಆದಾಗ್ಯೂ, ಶನಿವಾರದ ರಿವರ್ಸ್ ಪಂದ್ಯದಲ್ಲಿ ಬೆಂಗಳೂರು ತಂಡ ವಿಭಿನ್ನ ಮನಸ್ಥಿತಿ ಮತ್ತು ಕಳೆದ 5 ಪಂದ್ಯಗಳ ಉಜ್ವಲ ಫಾರ್ಮ್​ನೊಂದಿಗೆ ಆಡಲಿದೆ.

ಲಾರಾ ಅಭಿಮತನವೇನು?

ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿದ ಬ್ರಿಯಾನ್ ಲಾರಾ ಪಂದ್ಯದ ಫಲಿತಾಂಶದ ಬಗ್ಗೆ ದಿಟ್ಟ ಭವಿಷ್ಯ ನುಡಿದಿದ್ದಾರೆ. ಲಾರಾ ಬೆಂಗಳೂರು ಮೂಲದ ಫ್ರಾಂಚೈಸಿಯನ್ನು ಬೆಂಬಲಿಸಿದ್ದಾರೆ. ಸೂಪರ್ ಕಿಂಗ್ಸ್​​ಗೆ ಪ್ಲೇ ಆಫ್ ಸ್ಥಾನ ನಿರಾಕರಿಸಲು ಆರ್​ಸಿಬಿ ಎಲ್ಲಾ ಸಿದ್ಧತೆಗಳನ್ನು ನಡೆಸಿದೆ ಎಂದು ವೆಸ್ಟ್ ಇಂಡೀಸ್​​ ಮಾಜಿ ನಾಯಕ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: RCB vs CSK: ವಾಹನ ಸವಾರರೇ ಗಮನಿಸಿ, ನಾಳೆ ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತ ಸಂಚಾರ ಬದಲಾವಣೆ

ಋತುವಿನ ದ್ವಿತೀಯಾರ್ಧ ಪ್ರಾರಂಭವಾದಾಗಿನಿಂದ ಆರ್​ಸಿಬಿ ಸಂಪೂರ್ಣವಾಗಿ ವಿಭಿನ್ನ ತಂಡವಾಗಿ ಕಾಣುತ್ತಿದೆ ಎಂದು ಬ್ರಿಯಾನ್ ಲಾರಾ ಹೇಳಿದ್ದಾರೆ. ಬೆಂಗಳೂರು ಎಂದಿಗೂ ಐಪಿಎಲ್ ಪ್ರಶಸ್ತಿಯನ್ನು ಗೆಲ್ಲದ ಕಾರಣ ಅವರು ಪ್ರಶಸ್ತಿ ಗೆಲ್ಲಲು ಹಸಿದಿದ್ದಾರೆ ಎಂದು ಲಾರಾ ಹೇಳಿದ್ದಾರೆ. ಈ ಪಂದ್ಯವು ಪ್ಲೇಆಫ್ ತಲುಪಲು ಅವರಿಗೆ ಸಹಾಯ ಮಾಡಲಿದೆ. ಹೀಗಾಗಿ ಪಂದ್ಯವನ್ನು ಕಳೆದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ಸಿಎಸ್​ಕೆ ವಿರುದ್ಧದ ಪಂದ್ಯವು ಆರ್​ಸಿಸಿ ತಮ್ಮ ರೆಡ್-ಹಾಟ್ ಫಾರ್ಮ್ ಅನ್ನು ಮುಂದುವರಿಸಲು ಉತ್ತಮ ಅವಕಾಶವಾಗಿದೆ ಎಂದು ಬ್ರಿಯಾನ್ ಲಾರಾ ಅಭಿಪ್ರಾಯಪಟ್ಟಿದ್ದಾರೆ.

ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ ಮತ್ತು ಮೊಹಮ್ಮದ್ ಸಿರಾಜ್ ಉತ್ತಮ ಪ್ರದರ್ಶನ ನೀಡುತ್ತಿರುವುದರಿಂದ ಮತ್ತು ಕೆಲವು ಆಟಗಾರರ ಅನುಪಸ್ಥಿತಿಯ ಹೊರತಾಗಿಯೂ ಬೆಂಗಳೂರು ಸಿಎಸ್​ಕೆ ತಂಡವನ್ನು ಸೋಲಿಸುವಲ್ಲಿ ಯಶಸ್ವಿಯಾಗಲಿದೆ ಎಂದು ಅವರು ಹೇಳಿದ್ದಾರೆ.

“ಆರ್​ಸಿಬಿ ಎಂದಿಗೂ ಐಪಿಎಲ್ ಗೆದ್ದಿಲ್ಲ ಮತ್ತು ಅದನ್ನು ಗೆಲ್ಲಲು ಅವರು ಹಸಿದಿದ್ದಾರೆ. ಈ ಪಂದ್ಯವು ಪ್ಲೇಆಫ್ ತಲುಪಲು ಅವರಿಗೆ ಸಹಾಯ ಮಾಡುತ್ತದೆ. ಇದು ಉತ್ತಮ ಅವಕಾಶ, ತಂಡದ ಫಾರ್ಮ್ ಉತ್ತಮವಾಗಿದೆ, ಗೆಲುವಿನ ಹಸಿವು ಇದೆ. ಡು ಪ್ಲೆಸಿಸ್, ಸಿರಾಜ್ ಮತ್ತು ವಿರಾಟ್ ಅವರಂತಹ ಹಿರಿಯ ಆಟಗಾರರು ಸಹ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ” ಎಂದು ಲಾರಾ ಸ್ಟಾರ್ ಸ್ಪೋರ್ಟ್ಸ್ ಮೂಲಕ ಹೇಳಿದರು.

ದೊಡ್ಡ ಅಂತರದ ಗೆಲುವು ಸಾಧಿಸಬೇಕು

ಪ್ಲೇ ಆಫ್​ಗೆ ಅರ್ಹತೆ ಪಡೆಯಲು ಆರ್​ಸಿಬಿಗೆ ಇರುವ ಏಕೈಕ ಮಾರ್ಗವೆಂದರೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ದೊಡ್ಡ ಅಂತರದ ಗೆಲುವು ಸಾಧಿಸುವುದು. ಫಾಫ್ ಡು ಪ್ಲೆಸಿಸ್ ಪಡೆ 2ನೇ ಇನ್ನಿಂಗ್ಸ್​​ನ್ಲಿ ಸಿಎಸ್ಕೆ ತಂಡವನ್ನು 18 ರನ್​ಗಳಿಂದ ಸೋಲಿಸಬೇಕು ಮತ್ತು ಮೊತ್ತವನ್ನು ಬೆನ್ನಟ್ಟಬೇಕಾದರೆ ಅವರು ಪಂದ್ಯವನ್ನು 18.1 ಓವರ್​ಗಳಲ್ಲಿ ಗುರಿ ಮುಟ್ಟಬೇಕು.

ಆ ಸಂದರ್ಭದಲ್ಲಿ, ಬೆಂಗಳೂರಿನ ನೆಟ್ ರನ್ ರೇಟ್ ಸುಧಾರಿಸುತ್ತದೆ ಮತ್ತು ಅವರು ಸಿಎಸ್​ಕೆ ಮಾತ್ರವಲ್ಲದೆ ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಹಿಂದಿಕ್ಕಿ ಕೊನೆಯ ಹಂತಕ್ಕೆ ಅರ್ಹತೆ ಪಡೆಯುತ್ತಾರೆ.

Continue Reading

ಉದ್ಯೋಗ

Job Alert: ಬಂಧನ್‌ ಬ್ಯಾಂಕ್‌ನಲ್ಲಿದೆ ಉದ್ಯೋಗಾವಕಾಶ; ದ್ವಿತೀಯು ಪಿಯು ಪಾಸಾದವರೂ ಅಪ್ಲೈ ಮಾಡಿ

Job Alert: ಭಾರತದ ಪ್ರಮುಖ ಖಾಸಗಿ ವಲಯದ ಬ್ಯಾಂಕ್‌ಗಳಲ್ಲಿ ಒಂದಾದ ಬಂಧನ್‌ ಬ್ಯಾಂಕ್‌ ದೇಶಾದ್ಯಂತ ಖಾಲಿ ಇರುವ 31 ಬ್ಯಾಂಕ್ ಸಹಾಯಕ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. 12ನೇ ತರಗತಿ ತೇರ್ಗಡೆ ಹೊಂದಿದವರು ಮತ್ತು ತತ್ಸಮಾನ ವಿದ್ಯಾರ್ಹತೆ ಹೊಂದಿರುವವರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಗೆ ಮೇ 31 ಕೊನೆಯ ದಿನ. ಅಭ್ಯರ್ಥಿಗಳು ಕಂಪ್ಯೂಟರ್‌ ಜ್ಞಾನ ಹೊಂದಿರುವುದು ಕಡ್ಡಾಯ.

VISTARANEWS.COM


on

Job Alert
Koo

ಬೆಂಗಳೂರು: ಬ್ಯಾಂಕ್‌ ಉದ್ಯೋಗಕ್ಕಾಗಿ(Bank Job) ಹುಡುಕಾಟ ನಡೆಸುತ್ತಿದ್ದೀರಾ? ಹಾಗಾದರೆ ಇಲ್ಲಿದೆ ಗೋಲ್ಡನ್‌ ಚಾನ್ಸ್‌. ಭಾರತದ ಪ್ರಮುಖ ಖಾಸಗಿ ವಲಯದ ಬ್ಯಾಂಕ್‌ಗಳಲ್ಲಿ ಒಂದಾದ ಬಂಧನ್‌ ಬ್ಯಾಂಕ್‌ (Bandhan Bank) ದೇಶಾದ್ಯಂತ ಖಾಲಿ ಇರುವ 31 ಬ್ಯಾಂಕ್ ಸಹಾಯಕ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ (Bandhan Bank Assistant Notification 2024). 12ನೇ ತರಗತಿ ತೇರ್ಗಡೆ ಹೊಂದಿದವರು ಮತ್ತು ತತ್ಸಮಾನ ವಿದ್ಯಾರ್ಹತೆ ಹೊಂದಿರುವವರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಗೆ ಮೇ 31 ಕೊನೆಯ ದಿನ (Job Alert).

ವಿದ್ಯಾರ್ಹತೆ ಮತ್ತು ವಯೋಮಿತಿ

ದ್ವಿತೀಯ ಪಿಯುಸಿ ಪಾಸಾದವರು, ಪದವಿ ಪಡೆದವರು ಮತ್ತು ತತ್ಸಮಾನ ವಿದ್ಯಾರ್ಹತೆ ಹೊಂದಿದರವರು ಅರ್ಜಿ ಸಲ್ಲಿಬಹುದು. ಅಭ್ಯರ್ಥಿಗಳು ಕಂಪ್ಯೂಟರ್‌ ಜ್ಞಾನ ಹೊಂದಿರುವುದು ಕಡ್ಡಾಯ. ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 30 ವರ್ಷ. ಅಂದರೆ ಅಭ್ಯರ್ಥಿಗಳು 1994ರ ಏಪ್ರಿಲ್‌ 3 ಮತ್ತು 2006ರ ಏಪ್ರಿಲ್‌ 3ರೊಳಗೆ ಜನಿಸಿರಬೇಕು. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳ ರಿಯಾಯಿತಿ ಇದೆ.

ಆಯ್ಕೆ ವಿಧಾನ ಮತ್ತು ಅರ್ಜಿ ಶುಲ್ಕ

ಸಂದರ್ಶನ, ದಾಖಲಾತಿ ಪರಿಶೀಲನೆ, ವೈದ್ಯಕೀಯ ಪರೀಕ್ಷೆ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಆನ್‌ಲೈನ್‌ ಮೂಲಕ ಸಂದರ್ಶನ ನಡೆಯಲಿದೆ. ಯಾವುದೇ ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿಸಬೇಕಾಗಿಲ್ಲ.

ಕಾರ್ಯ ವೈಖರಿ

ಆಯ್ಕೆಯಾಗುವ ಉದ್ಯೋಗಿಗಳು ಗ್ರಾಹಕರ ಖಾತೆಗಳನ್ನು ನಿರ್ವಹಿಸುವುದು, ಹಣ ವರ್ಗಾವಣೆಗಳು ಮತ್ತು ಠೇವಣಿಗಳನ್ನು ಪ್ರಕ್ರಿಯೆ ನಡೆಸುವುದು, ಡ್ರಾಫ್ಟ್‌ ಮತ್ತು ಚೆಕ್‌ ನೀಡುವುದು, ಲಾಕರ್‌ಗಳ ನಿರ್ವಹಣೆ, ಗ್ರಾಹಕರ ಪ್ರಶ್ನೆಗಳಿಗೆ ಉತ್ತರ ನೀಡುವುದು ಮತ್ತು ಸಮಸ್ಯೆಗಳನ್ನು ಪರಿಹರಿಸುವುದು, ಬ್ಯಾಂಕಿನ ನಿಯಮಗಳು ಮತ್ತು ನಿಬಂಧನೆಗಳನ್ನು ಅನುಸರಿಸುವುದು, ಕ್ಯಾಶ್ ನಿರ್ವಹಣೆ ಮುಂತಾದ ಜವಾಬ್ದಾರಿ ನಿರ್ವಹಿಸಬೇಕಾಗುತ್ತದೆ. ಉದ್ಯೋಗದ ಸ್ಥಳ: ಭಾರತಾದ್ಯಂತ.

ಬ್ಯಾಂಕ್‌ ಬಗ್ಗೆ

ಕೋಲ್ಕತ್ತಾದಲ್ಲಿ ಕೇಂದ್ರ ಕಚೇರಿ ಹೊಂದಿರುವ ಬಂಧನ್‌ ಬ್ಯಾಂಕ್‌ ದೇಶದ 34 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಶಾಖೆಗಳನ್ನು ಹೊಂದಿದೆ. ಬ್ಯಾಂಕ್‌ಗೆ ಸುಮಾರು 2.51 ಕೋಟಿ ಗ್ರಾಹಕರಿದ್ದಾರೆ.

Bandhan Bankನ ಸಹಾಯಕ ಹುದ್ದೆಗಳ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸುವ ವಿಧಾನ

  • ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ.
  • ಮೊದಲು ನಿಮ್ಮ ಹೆಸರು ನೋಂದಾಯಿಸಿ.
  • ಈಗ ಕಂಡುಬರುವ ಪಾಸ್‌ವರ್ಡ್‌ ಬಳಸಿ ಲಾಗಿನ್‌ ಆಗಿ.
  • ಅಪ್ಲಿಕೇಷನ್‌ ಫಾರಂ ಭರ್ತಿ ಮಾಡಿ.
  • ಅಗತ್ಯ ಡಾಕ್ಯುಮೆಂಟ್‌, ಸಹಿ, ಫೋಟೊ ಅಪ್‌ಲೋಡ್‌ ಮಾಡಿ.
  • ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿಯಿದ್ದರೆ Submit ಬಟನ್‌ ಕ್ಲಿಕ್‌ ಮಾಡಿ.

ಹೆಚ್ಚಿನ ವಿವರಗಳಿಗೆ ಎಚ್‌ಆರ್‌ ವಿಭಾಗದ ಫೋನ್‌ ನಂಬರ್‌: 7501496783 ಅಥವಾ ಇಮೇಲ್‌ hrraj.bankingofficial@gmail.com ಅನ್ನು ಸಂಪರ್ಕಿಸಿ.

ಇದನ್ನೂ ಓದಿ: Job Alert: ಗಮನಿಸಿ; ಬಿಎಂಟಿಸಿಯ 2,500 ಕಂಡಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸಲು ಮೇ 18 ಕೊನೆಯ ದಿನ

Continue Reading

ಕ್ರೀಡೆ

RCB vs CSK: ವಾಹನ ಸವಾರರೇ ಗಮನಿಸಿ, ನಾಳೆ ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತ ಸಂಚಾರ ಬದಲಾವಣೆ

RCB vs CSK: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅತ್ಯಾಧುನಿಕ ಸಬ್ ಏರ್ ಸಿಸ್ಟಂ ಹೊಂದಿರುವ ಕಾರಣ. ಮಳೆ ಬಂದರೂ ಶೀಘ್ರವಾಗಿ ಮೈದಾನದಲ್ಲಿನ ನೀರನ್ನು ಹೀರಿಕೊಳ್ಳುತ್ತದೆ. ಹೀಗಾಗಿ ಎಷ್ಟೇ ಮಳೆಯಾದರೂ ಕೆಲವೇ ನಿಮಿಷಗಳಲ್ಲಿ ಮೈದಾನವನ್ನು ಸಜ್ಜುಗೊಳಿಸಬಹುದು. ಈ ಕಾರಣದಿಂದಾಗಿ ಬೆಂಗಳೂರಿನಲ್ಲಿ ಮಳೆ ಬಂದರೂ ಸೀಮಿತ ಓವರ್​ಗಳ ಪಂದ್ಯವನ್ನು ನಿರೀಕ್ಷಿಸಬಹುದು.

VISTARANEWS.COM


on

RCB vs CSK
Koo

ಬೆಂಗಳೂರು: ಕನ್ನಡಿಗರ ನೆಚ್ಚಿನ ತಂಡವಾದ ಆರ್​ಸಿಬಿ(Royal Challengers Bengaluru) ನಾಳೆ (ಮೇ​ 18) ತವರು ಮೈದಾನ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ (chinnaswamy stadium) ಹಾಲಿ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್(Chennai Super Kings)​ ವಿರುದ್ಧ ಕಣಕ್ಕಿಳಿಯಲಿದೆ. ಕ್ರಿಕೆಟ್ ಪಂದ್ಯಾವಳಿಯ ಹಿನ್ನೆಲೆಯಲ್ಲಿ ಸುಗಮ ಸಂಚಾರಕ್ಕಾಗಿ ಬೆಂಗಳೂರು ಟ್ರಾಫಿಕ್ ಪೊಲೀಸರು ಸೂಕ್ತ ಸಂಚಾರ ವ್ಯವಸ್ಥೆಯನ್ನು ಮಾಡಿಲಾಗಿದ್ದು ಚಿನ್ನಸ್ವಾಮಿ ಕ್ರೀಡಾಂಗಣ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂಪೂರ್ಣವಾಗಿ ಪಾರ್ಕಿಂಗ್ ನಿಷೇಧ ಮಾಡಲಾಗಿದೆ. ಶನಿವಾರ ಮಧ್ಯಾಹ್ನ 3.00 ಗಂಟೆಯಿಂದ ರಾತ್ರಿ 11.00ರವರೆಗೆ ಈ ವ್ಯತ್ಯಾಸಗಳು ಜಾರಿಯಲ್ಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಕೋರಲಾಗಿದೆ.

ಇಲ್ಲಿ ಪಾರ್ಕಿಂಗ್​ ನಿಷೇಧ


ನಗರದ ಕ್ರೀನ್ಸ್ ರಸ್ತೆ, ಎಂ.ಜಿ ರಸ್ತೆ, ಎಂ.ಜಿ ರಸ್ತೆ ಯಿಂದ ಕಬ್ಬನ್ ರಸ್ತೆ, ರಾಜಭವನ ರಸ್ತೆ, ಸೆಂಟ್ರಲ್ ಸ್ಟ್ರೀಟ್ ರಸ್ತೆ, ಕಬ್ಬನ್‌ರಸ್ತೆ, ಸೆಂಟ್ ಮಾರ್ಕ್ಸ್ ರಸ್ತೆ, ಮ್ಯೂಸಿಯಂ ರಸ್ತೆ, ಕಸ್ತೂರಿ ಬಾ ರಸ್ತೆ, ಅಂಬೇಡ್ಕರ್ ವೀದಿ ರಸ್ತೆ, ಟ್ರಿನಿಟಿ ವೃತ್ತ, ಲ್ಯಾವೆಲ್ಲೆ ರಸ್ತೆ, ವಿಠಲ್ ಮಲ್ಯ ರಸ್ತೆ, ಕಿಂಗ್ಸ್ ರಸ್ತೆ & ನೃಪತುಂಗ ರಸ್ತೆಯಲ್ಲಿ ಪಾರ್ಕಿಂಗ್​ ನಿಷೇಧ ಮಾಡಲಾಗಿದೆ.

ಎಲ್ಲಿ ಪಾರ್ಕಿಂಗ್​ ಮಾಡಬಹುದು?


ಸೆಂಟ್ ಜೋಸೆಫ್ ಇಂಡಿಯನ್ ಸ್ಕೂಲ್ ಮೈದಾನ, ಬಿ.ಎಂ.ಟಿ.ಸಿ ಬಸ್ ನಿಲ್ದಾಣದ ಮೊದಲನೆ ಮಹಡಿ & ಓಲ್ಸ್ ಕೆ.ಜಿ.ಐ.ಡಿ ಬಿಲ್ಡಿಂಗ್, ಕಿಂಗ್ಸ್ ರಸ್ತೆ, (ಕಬ್ಬನ್‌ಪಾರ್ಕ್ ಒಳಭಾಗ) ಈ ಪ್ರದೇಶದಲ್ಲಿ ಸಾರ್ವಜನಿಕ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.

ವಿಶೇಷ ಮೆಟ್ರೋ ಸೇವೆ

ಕ್ರಿಕೆಟ್‌ ಪಂದ್ಯ ನೋಡಲು ಬರುವ ಕ್ರಿಕೆಟ್‌ ಪ್ರೇಮಿಗಳಿಗಾಗಿ ಮೆಟ್ರೋ ರೈಲು ವಿಶೇಷ ಓಡಾಟಕ್ಕೆ ಅನುಮತಿ ನೀಡಿವೆ. ಹೀಗಾಗಿ ಕ್ರಿಕೆಟ್‌ ನೋಡಲು ಬರುವವರು, ಕ್ರೀಡಾಂಗಣ ತಲುಪುವ ವಿಚಾರದಲ್ಲಿ ಯಾವುದೇ ಚಿಂತೆ ಮಾಡಬೇಕಾಗಿಲ್ಲ. ಪಂದ್ಯ ವೀಕ್ಷಣೆಗಾಗಿ ಬರುವ ಪ್ರಯಾಣಿಕರ ಅನುಕೂಲಕ್ಕಾಗಿ ಎಲ್ಲಾ ನಾಲ್ಕು ಟರ್ಮಿನಲ್ ಮೆಟ್ರೋ ನಿಲ್ದಾಣಗಳಿಂದ ಕೊನೆಯ ರೈಲು ಸೇವೆಗಳನ್ನು ರಾತ್ರಿ 11.30ಕ್ಕೆ ವಿಸ್ತರಿಸಲಾಗಿದೆ.

ಇದನ್ನೂ ಓದಿ IPL Ticket Scam: ಆನ್​ಲೈನ್​ ಟಿಕೆಟ್​ ಖರೀದಿಸಲು ಹೋಗಿ 3 ಲಕ್ಷ ರೂ ಕಳೆದುಕೊಂಡ ಆರ್​ಸಿಬಿ ಅಭಿಮಾನಿ

ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಮಧ್ಯಾಹ್ನ 2 ಗಂಟೆಯಿಂದ ರಿಟರ್ನ್ ಜರ್ನಿ ಪೇಪರ್ ಟಿಕೆಟ್‌ಗಳನ್ನು 50 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇದು ಕಬ್ಬನ್ ಪಾರ್ಕ್ ಮತ್ತು ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣಗಳಿಂದ ಯಾವುದೇ ಇತರ ಮೆಟ್ರೋ ನಿಲ್ದಾಣಕ್ಕೆ ಒಂದೇ ಪ್ರಯಾಣಕ್ಕೆ ವಿತರಣೆಯ ದಿನದಂದು ರಾತ್ರಿ 8.00 ರಿಂದ ದಿನದ ಸೇವೆಗಳು ಕೊನೆಗೊಳ್ಳುವವರೆಗೆ ಮಾನ್ಯವಾಗಿರುತ್ತದೆ. ಈ ನಿಲ್ದಾಣಗಳಲ್ಲಿ ಟೋಕನ್ ಲಭ್ಯವಿರುವುದಿಲ್ಲ.

ಎಂದಿನಂತೆ, ಕ್ಯೂಆರ್‌ ( QR) ಕೋಡ್ ಟಿಕೆಟ್‌ಗಳು, ಸ್ಮಾರ್ಟ್ ಕಾರ್ಡ್‌ಗಳು ಮತ್ತು ಎನ್‌ಸಿಎಂಸಿ (NCMC) ಕಾರ್ಡ್‌ಗಳನ್ನು ಸಹ ಬಳಸಬಹುದು. ವಾಟ್ಸ್ ಆಪ್/ನಮ್ಮ ಮೆಟ್ರೋ ಆ್ಯಪ್/ಪೇ ಟಿಎಂ ಮೂಲಕ ಕ್ರಿಕೆಟ್ ಪಂದ್ಯದ ಆರಂಭಕ್ಕೆ ಮುಂಚಿತವಾಗಿ QR ಟಿಕೆಟ್‌ಗಳನ್ನು ಖರೀದಿಸಲು ಸಾರ್ವಜನಿಕರಿಗೆ ಸೂಚಿಸಲಾಗಿದೆ. ಕಬ್ಬನ್ ಪಾರ್ಕ್ ಮತ್ತು ಎಂಜಿ ರೋಡ್ ಮೆಟ್ರೋ ನಿಲ್ದಾಣಗಳಲ್ಲಿ ಟಿಕೆಟ್ ಖರೀದಿಸಲು ಟಿಕೆಟ್ ಕೌಂಟರ್‌ಗಳಲ್ಲಿ ಜನಸಂದಣಿಯನ್ನು ತಪ್ಪಿಸಲು ಈ ವ್ಯವಸ್ಥೆ ಮಾಡಲಾಗಿದೆ.

Continue Reading

ಪ್ರಮುಖ ಸುದ್ದಿ

Lok Sabha Election 2024: 272 ಸೀಟು ಗೆಲ್ಲದೇ ಹೋದರೆ ಬಿಜೆಪಿಯ ಪ್ಲ್ಯಾನ್ ಬಿ ಏನು? ಅಮಿತ್ ಶಾ ಉತ್ತರ ಹೀಗಿದೆ

Lok Sabha Election 2024: ಲೋಕಸಭೆಯಲ್ಲಿ 400 ಸ್ಥಾನಗಳನ್ನು ಹೊಂದಲಿರುವ ಬಿಜೆಪಿಯು ಗಡಿಗಳನ್ನು ರಕ್ಷಿಸಲು, ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಮಾಡಲು ಮತ್ತು ಬಡವರ ಕಲ್ಯಾಣವನ್ನು ಖಚಿತಪಡಿಸಿಕೊಳ್ಳಲು ಬಯಸುತ್ತದೆ ಎಂದು ಅಮಿತ್‌ ಶಾ ಹೇಳಿದರು.

VISTARANEWS.COM


on

Amith Shah lok sabha election 2024
Koo

ಹೊಸದಿಲ್ಲಿ: ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಬಿಜೆಪಿ (BJP) ಬಹುಮತಕ್ಕೆ ಬೇಕಾದ 272 ಸೀಟು ಪಡೆಯದಿದ್ದರೆ ಏನು ಮಾಡುತ್ತದೆ? ಈ ಕುರಿತು ಎದುರಾದ ಮಾಧ್ಯಮದ ಪ್ರಶ್ನೆಗೆ ಗೃಹ ಸಚಿವ ಅಮಿತ್ ಶಾ (Home minister Amit Shah) ಖಡಕ್‌ ಆಗಿ ಉತ್ತರಿಸಿದ್ದಾರೆ. ಅಂಥದೊಂದು ಸನ್ನಿವೇಶ ಸಂಭವಿಸುವ ಸಾಧ್ಯತೆ ನನಗೆ ಕಾಣುತ್ತಿಲ್ಲ. ಹೀಗಾಗಿ ಬಿಜೆಪಿಗೆ ಪ್ಲಾನ್ ಬಿ (Plan B) ಬೇಕಾಗಿಲ್ಲ ಎಂದು ಅಮಿತ್‌ ಶಾ ಹೇಳಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ 272ಕ್ಕಿಂತ ಕಡಿಮೆ ಸ್ಥಾನಗಳನ್ನು ಗೆದ್ದರೆ ಬಿಜೆಪಿಯ ನಡೆ ಏನು ಎಂಬ ಪ್ರಶ್ನೆಗೆ ಉತ್ತರಿಸಿದ ಅಮಿತ್ ಶಾ, “ಅಂತಹ ಯಾವುದೇ ಸಾಧ್ಯತೆಗಳು ನನಗೆ ಕಾಣುತ್ತಿಲ್ಲ, 60 ಕೋಟಿ ಫಲಾನುಭವಿಗಳ ಸೈನ್ಯವು ಪ್ರಧಾನಿ ಮೋದಿಯವರೊಂದಿಗೆ ನಿಂತಿದೆ. ಅವರಿಗೆ ಯಾವುದೇ ಜಾತಿಬಲ ಅಥವಾ ವಯೋಮಾನವಿಲ್ಲ. ಈ ಎಲ್ಲಾ ಪ್ರಯೋಜನಗಳನ್ನು ಪಡೆದವರಿಗೆ ನರೇಂದ್ರ ಮೋದಿಯವರಿಗೆ ಹೇಗೇ ಆದರೂ 400 ಸೀಟ್‌ ನೀಡುವುದು ಗೊತ್ತು” ಎಂದು ಶಾ ಹೇಳಿದ್ದಾರೆ.

ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ, ಬಿಜೆಪಿಯ ಪ್ಲಾನ್ ಬಿ ಬಗ್ಗೆ ಕೇಳಲಾಯಿತು. ಆದರೆ ಪಕ್ಷದ ಪ್ಲಾನ್ ಎ ಯಶಸ್ವಿಯಾಗಿಯೇ ಆಗುತ್ತದೆ ಎಂದು ಅಮಿತ್ ಶಾ ಹೇಳಿದರು. “ಪ್ಲಾನ್ ಎ ಯಶಸ್ವಿಯಾಗಲು 60%ಕ್ಕಿಂತ ಕಡಿಮೆ ಅವಕಾಶವಿರುವಾಗ ಮಾತ್ರ ಪ್ಲಾನ್ ಬಿ ಮಾಡಬೇಕು. ಪಿಎಂ ಮೋದಿ ಅವರು ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತಾರೆ ಎಂದು ನನಗೆ ಖಚಿತವಾಗಿದೆ” ಎಂದು ಅವರು ಹೇಳಿದರು.

ʻಉತ್ತರ-ದಕ್ಷಿಣ’ ವಿಭಜನೆಗೆ ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂಬ ಬಿಜೆಪಿ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಮಿತ್ ಶಾ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕದಲ್ಲಿ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಹೇಳಿದರು.‌

“ಇದು ಪ್ರತ್ಯೇಕ ದೇಶ ಎಂದು ಯಾರಾದರೂ ಹೇಳಿದರೆ ಅದು ತುಂಬಾ ಆಕ್ಷೇಪಾರ್ಹ. ಈ ದೇಶವನ್ನು ಇನ್ನು ಎಂದಿಗೂ ವಿಭಜಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರೊಬ್ಬರು ಉತ್ತರ ಮತ್ತು ದಕ್ಷಿಣ ಭಾರತವನ್ನು ವಿಭಜಿಸುವ ಬಗ್ಗೆ ಮಾತನಾಡಿದ್ದಾರೆ. ಕಾಂಗ್ರೆಸ್ ಪಕ್ಷ ಅದನ್ನು ನಿರಾಕರಿಸಿಲ್ಲ. ಜನತೆ ಈ ಹೇಳಿಕೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಸೂಚಿಯ ಬಗ್ಗೆ ಗ್ರಹಿಸಬೇಕು. ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕ 5 ರಾಜ್ಯಗಳನ್ನು ಒಟ್ಟುಗೂಡಿಸಿ ಬಿಜೆಪಿ ಈ ಚುನಾವಣೆಯಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ” ಎಂದು ಅವರು ಹೇಳಿದರು.

ದೇಶದ ರಾಜಕೀಯದಲ್ಲಿ ಸ್ಥಿರತೆ ತರಲು 400ಕ್ಕೂ ಹೆಚ್ಚು ಸ್ಥಾನಗಳ ಅಗತ್ಯವಿದೆ. ಸಂವಿಧಾನವನ್ನು ಬದಲಾಯಿಸುವ ಜನಾದೇಶ ಬಿಜೆಪಿಗಿದೆ. ಆದರೆ ನಾವು ಎಂದಿಗೂ ಹಾಗೆ ಮಾಡಲಿಲ್ಲ. ಲೋಕಸಭೆಯಲ್ಲಿ 400 ಸ್ಥಾನಗಳನ್ನು ಹೊಂದಲಿರುವ ಬಿಜೆಪಿಯು ಗಡಿಗಳನ್ನು ರಕ್ಷಿಸಲು, ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಮಾಡಲು ಮತ್ತು ಬಡವರ ಕಲ್ಯಾಣವನ್ನು ಖಚಿತಪಡಿಸಿಕೊಳ್ಳಲು ಬಯಸುತ್ತದೆ ಎಂದು ಅವರು ಹೇಳಿದರು.

ಬಿಜೆಪಿ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಸಂವಿಧಾನವನ್ನು ತಿದ್ದುಪಡಿ ಮಾಡಲು ಬಯಸುತ್ತದೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ. ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳ ಮೀಸಲಾತಿ ಪ್ರಯೋಜನಗಳನ್ನು ಕಿತ್ತುಕೊಂಡು ಮುಸ್ಲಿಂ ಸಮುದಾಯಕ್ಕೆ ನೀಡಲು ಕಾಂಗ್ರೆಸ್ ಉದ್ದೇಶಿಸಿದೆ ಎಂದು ಮೋದಿ, ಶಾ ಸೇರಿದಂತೆ ಬಿಜೆಪಿ ನಾಯಕರು ಆರೋಪಿಸಿದ್ದಾರೆ.

ಇದನ್ನೂ ಓದಿ: Amit Shah: ಪ್ರಚಾರದ ವೇಳೆ ಕೇಜ್ರಿವಾಲ್‌ ನೀಡಿದ ಹೇಳಿಕೆಯಿಂದ ನ್ಯಾಯಾಂಗ ನಿಂದನೆ; ಅಮಿತ್‌ ಶಾ ವಾಗ್ದಾಳಿ

Continue Reading
Advertisement
IPL 2024
ಪ್ರಮುಖ ಸುದ್ದಿ7 mins ago

IPL 2024 : ಆರ್​ಸಿಬಿ ಮತ್ತು ಸಿಎಸ್​ಕೆ ನಡುವಿನ ಪಂದ್ಯದ ವಿಜೇತರು ಯಾರು ಎಂದು ತಿಳಿಸಿದ ಬ್ರಿಯಾನ್ ಲಾರಾ

Job Alert
ಉದ್ಯೋಗ7 mins ago

Job Alert: ಬಂಧನ್‌ ಬ್ಯಾಂಕ್‌ನಲ್ಲಿದೆ ಉದ್ಯೋಗಾವಕಾಶ; ದ್ವಿತೀಯು ಪಿಯು ಪಾಸಾದವರೂ ಅಪ್ಲೈ ಮಾಡಿ

Bomb Blast
ದೇಶ14 mins ago

Bomb Blast: ಚೆಂಡೆಂದು ಭಾವಿಸಿ ಬಾಂಬ್‌ ಎತ್ತಿಕೊಂಡ ಮದರಸಾ ವಿದ್ಯಾರ್ಥಿ; ಸ್ಫೋಟಕ್ಕೆ ಮೌಲಾನಾ ಸಾವು

KSRTC BUS Woman locks in window of KSRTC bus after going to spit
ಬೆಂಗಳೂರು17 mins ago

KSRTC Bus : ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ

banned plastic seized by corporation in Mysore
ಮೈಸೂರು19 mins ago

Mysore News: ಮೈಸೂರಿನಲ್ಲಿ ಪಾಲಿಕೆಯಿಂದ ನಿಷೇಧಿತ ಪ್ಲಾಸ್ಟಿಕ್‌ ವಶ; 1.61 ಲಕ್ಷ ರೂ. ದಂಡ

RCB vs CSK
ಕ್ರೀಡೆ41 mins ago

RCB vs CSK: ವಾಹನ ಸವಾರರೇ ಗಮನಿಸಿ, ನಾಳೆ ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತ ಸಂಚಾರ ಬದಲಾವಣೆ

Amith Shah lok sabha election 2024
ಪ್ರಮುಖ ಸುದ್ದಿ59 mins ago

Lok Sabha Election 2024: 272 ಸೀಟು ಗೆಲ್ಲದೇ ಹೋದರೆ ಬಿಜೆಪಿಯ ಪ್ಲ್ಯಾನ್ ಬಿ ಏನು? ಅಮಿತ್ ಶಾ ಉತ್ತರ ಹೀಗಿದೆ

PM Narendra Modi
ದೇಶ1 hour ago

PM Narendra Modi: ಬುಲ್ಡೋಜರ್‌ ಹೇಗೆ ಬಳಸಬೇಕೆಂಬುದನ್ನು ಯೋಗಿಯಿಂದ ಕಲಿಯಬೇಕು: ಪ್ರಧಾನಿ ಮೋದಿ

Raveena tandon Saree fashion magic in Jayanthi Ballal designer
ಫ್ಯಾಷನ್1 hour ago

Raveena tandon Saree fashion: ಜಯಂತಿ ಬಲ್ಲಾಳ್‌ ಡಿಸೈನರ್‌ ಸೀರೆಯಲ್ಲಿ ನಟಿ ರವೀನಾ ಟಂಡನ್‌ ಜಾದೂ!

Prajwal Revanna Case Lawyer Devarajegowda sent to judicial custody End of police custody
ಕ್ರೈಂ2 hours ago

Prajwal Revanna Case: ವಕೀಲ ದೇವರಾಜೇಗೌಡರಿಗೆ ನ್ಯಾಯಾಂಗ ಬಂಧನ; ಪೊಲೀಸ್‌ ಕಸ್ಟಡಿ ಅಂತ್ಯ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ10 hours ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ11 hours ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ23 hours ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ1 day ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು1 day ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ2 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ2 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ3 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20243 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20243 days ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

ಟ್ರೆಂಡಿಂಗ್‌