ಬೆಂಗಳೂರು: ಕನ್ಯಾಕುಮಾರಿಯಿಂದ ಆರಂಭವಾಗಿ ಒಂದು ಸಾವಿರ ಕಿಲೋಮೀಟರ್ ಸಾಗಿರುವ ಭಾರತ್ ಜೋಡೋ ಯಾತ್ರೆಯ ಬಳ್ಳಾರಿ ರ‍್ಯಾಲಿಯಲ್ಲಿ ಕೇಂದ್ರ ಸರ್ಕಾರ, ಆರ್‌ಎಸ್‌ಎಸ್, ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕರು ಹರಿಹಾಯ್ದಿದ್ದಾರೆ. ಪಾಕಿಸ್ತಾನದ ಕುರಿತು ಮೃದು ಧೋರಣೆ ತಳೆಯುತ್ತಿದ್ದ ಅಮೆರಿಕ ಈಗ ಕಠಿಣ ಮಾತನ್ನಾಡಿದೆ. ಮುರುಘಾ ಶ್ರೀ ವಿರುದ್ಧದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ, ಉಗ್ರರ ದಾಳಿಗೆ ಕಾಶ್ಮೀರಿ ಪಂಡಿತರೊಬ್ಬರು ಮೃತಪಟ್ಟಿದ್ದಾರೆ, ಒಟಿಟಿ ಕುರಿತು ಎರಡು ಪ್ರತ್ಯೇಕ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ, ಮಹಿಳಾ ಕ್ರಿಕೆಟ್ ಜಯಭೇರಿವರೆಗಿನ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.
1. Bharat Jodo | RSS, BJPಯದ್ದು ದೇಶಭಕ್ತಿ ಅಲ್ಲ, ದೇಶದ ಮೇಲಿನ ದಾಳಿ: ರಾಹುಲ್ ವಾಗ್ದಾಳಿ
1. Bharat Jodo | RSS, BJPಯದ್ದು ದೇಶಭಕ್ತಿ ಅಲ್ಲ, ದೇಶದ ಮೇಲಿನ ದಾಳಿ: ಬಳ್ಳಾರಿಯಲ್ಲಿ ರಾಹುಲ್ ವಾಗ್ದಾಳಿ
ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್) ಹಾಗೂ ಭಾರತೀಯ ಜನತಾ ಪಕ್ಷ(ಬಿಜೆಪಿ) ಈ ದೇಶದ ಮೇಲೆ ದಾಳಿ ಮಾಡುತ್ತಿವೆ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ಕನ್ಯಾಕುಮಾರಿಯಿಂದ ಆರಂಭಿಸಿ ಇದೀಗ ಒಂದು ಸಾವಿರ ಕಿಲೋಮೀಟರ್ ಕ್ರಮಿಸಿರುವ ಭಾರತ್ ಜೋಡೋ ಯಾತ್ರೆಯ ಭಾಗವಾಗಿ ಬಳ್ಳಾರಿಯಲ್ಲಿ ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ರಾಹುಲ್ ಗಾಂಧಿ ಮಾತನಾಡಿದರು.
ನಮ್ಮ ಯಾತ್ರೆಯನ್ನು ಆರಂಭಿಸಿದಾಗ ಮುಂದೆ ಸಾಗುವುದು ಹೇಗೆ ಎನ್ನಿಸುತ್ತಿತ್ತು. ಆದರೆ ಒಂದೆರಡು ದಿನ ನಡೆದ ನಂತರ ನಮ್ಮ ನಡಿಗೆ ಸರಾಗವಾಗಿ ಸಾಗುತ್ತಿದೆ. ಯಾತ್ರೆಯಲ್ಲಿ ವಿಭಿನ್ನ ಧರ್ಮ, ಜಾತಿಯ ಜನರು ಒಟ್ಟಿಗೆ ನಮ್ಮೊಂದಿಗೆ ಚಲಿಸುತ್ತಿದ್ದಾರೆ. ಇಡೀ ಯಾತ್ರೆಯಲ್ಲಿ ಎಲ್ಲಿಯೂ ದ್ವೇಷ, ಹಿಂಸೆ ಸಿಗುವುದಿಲ್ಲ ಎಂದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
2. ಗಾಂಧಿ ಕುಟುಂಬ ದೇಶಕ್ಕೆ ಪ್ರಾಣ ತ್ಯಾಗ ಮಾಡಿದೆ; ಮೋದಿ, ಶಾ ಏನು ಮಾಡಿದ್ದಾರೆಂದ ಸಿದ್ದರಾಮಯ್ಯ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಐತಿಹಾಸಿಕ ಪಾದಯಾತ್ರೆ (Bharat Jodo) ಕೈಗೊಂಡಿದ್ದಾರೆ. ಆದರೆ, ಈ ಪಾದಯಾತ್ರೆ ಬಗ್ಗೆ ಬಿಜೆಪಿಯವರು ಲಘುವಾಗಿ ಮಾತನಾಡುತ್ತಿದ್ದಾರೆ. ಗಾಂಧಿ ಕುಟುಂಬದವರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ಹಾಗಾದರೆ, ಪ್ರಧಾನಿ ನರೇಂದ್ರ ಮೋದಿ, ಗೃಹ ಮಂತ್ರಿ ಅಮಿತ್ ಶಾ ಈ ದೇಶಕ್ಕಾಗಿ ಮಾಡಿದ ತ್ಯಾಗ ಏನು? ಎಂಬುದನ್ನು ಬಹಿರಂಗಪಡಿಸಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಹಿರಂಗವಾಗಿ ಸವಾಲು ಹಾಕಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
⭕ Bharat Jodo | ಪಾದಯಾತ್ರೆಯಿಂದ ರಾಜ್ಯದಲ್ಲಿ 150 ಸೀಟು ಗೆಲ್ಲುವ ಅವಕಾಶ ಸೃಷ್ಟಿ: ಡಿಕೆಶಿ ವಿಶ್ವಾಸ
ರಾಜ್ಯದಲ್ಲಿ ಕಾಂಗ್ರೆಸ್ ಕಷ್ಟದಲ್ಲಿದ್ದಾಗ ನನಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ ಕೊಟ್ಟರು. ನಾನು ನಿದ್ದೆ ಮಾಡಲಿಲ್ಲ. ನಿಮಗೂ(ಕಾರ್ಯಕರ್ತರು) ನಿದ್ದೆ ಮಾಡಲು ಬಿಡಲಿಲ್ಲ. ನನ್ನ ತಾಯಿ ಸೋನಿಯಾ ಗಾಂಧಿ ನಮ್ಮ ಜತೆ ರಾಜ್ಯದಲ್ಲಿ (Bharat Jodo) ಹೆಜ್ಜೆ ಹಾಕಿದ್ದಾರೆ. ಕುಗ್ರಾಮದಲ್ಲಿ ದಸರಾ ಆಚರಣೆ ಮಾಡಿದ್ದಾರೆ. ನಮಗೆ ದುರ್ಗಾದೇವಿ ರೀತಿಯಲ್ಲಿ ಆಶೀರ್ವಾದ ಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
3. ಮುರುಘಾಶ್ರೀ ಪ್ರಕರಣ | ಎರಡನೇ ಕೇಸ್‌ನಲ್ಲಿ ಟ್ವಿಸ್ಟ್; ಇನ್ನಿಬ್ಬರು ಪೋಷಕರ ಉಲ್ಟಾ ಹೇಳಿಕೆ?
ಮುರುಘಾ ಮಠದ ಶ್ರೀ ಶಿವಮೂರ್ತಿ ಮುರುಘಾಶರಣರ ಮೇಲೆ ಮೈಸೂರಿನಲ್ಲಿ ಮತ್ತಿಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಶುಕ್ರವಾರ ದಾಖಲಾಗಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.
ತನ್ನಿಬ್ಬರು ಮಕ್ಕಳ ಸಹಿತ ಇನ್ನೂ ಇಬ್ಬರು ಮಕ್ಕಳ ಮೇಲೆ ಮುರುಘಾಶರಣರು ನಿರಂತರ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಮಠದ ಅಡುಗೆ ಸಹಾಯಕಿಯು ದೂರು ನೀಡಿದ್ದರು. ಮಕ್ಕಳ ಸಹಿತ ತಾಯಿಯನ್ನು ರಕ್ಷಣೆ ಹಿತದೃಷ್ಟಿಯಿಂದ ಮೈಸೂರಿನಲ್ಲಿಯೇ ಉಳಿಸಿಕೊಳ್ಳಲಾಗಿತ್ತು. ಆದರೆ, ಪ್ರಕರಣ ದಾಖಲಾಗುತ್ತಿದ್ದಂತೆ ಕಾನೂನು ಪ್ರಕ್ರಿಯೆಯನ್ನು ಚುರುಕುಗೊಳಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಶನಿವಾರ ಮಕ್ಕಳ ಕಲ್ಯಾಣ ಸಮಿತಿ ಅಧಿಕಾರಿಗಳು ಇನ್ನಿಬ್ಬರು ಮಕ್ಕಳ ಹಾಗೂ ಪೋಷಕರ ಹೇಳಿಕೆಯನ್ನು ದಾಖಲು ಮಾಡಿಕೊಂಡಿದ್ದು, ಆ ವೇಳೆ ತಮ್ಮ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೇ ನಡೆದಿಲ್ಲ ಎಂದು ಪೋಷಕರು ಹೇಳಿದ್ದಾರೆನ್ನಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ | ಮುರುಘಾಶ್ರೀ ಪ್ರಕರಣ | ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿಗೆ ಮುರುಘಾ ಶರಣರ ಪವರ್ ಆಫ್ ಅಟಾರ್ನಿ
4. Rain News | ಒಡೆದ ಬೂದನೂರು ಕೆರೆ ಕೋಡಿ; ಮೈಸೂರು- ಬೆಂಗಳೂರು ಮಾರ್ಗ ಬದಲಾವಣೆ
ಸಕ್ಕರೆನಾಡು ಮಂಡ್ಯದಲ್ಲಿ ರಣಭೀಕರ ಮಳೆಗೆ (Rain News) ಜನರು ತತ್ತರಿಸಿ ಹೋಗಿದ್ದಾರೆ. ತೊಣ್ಣೂರು ಕೆರೆ, ಗುತ್ತಲು ಕೆರೆ, ಬೂದನೂರು ಕೆರೆ ಹಾಗೂ ಹಾಲದಹಳ್ಳಿ ಕೆರೆ, ಕಾರಸವಾಡಿ ಕೆರೆ, ಲೋಕಪಾವನಿ ಕೆರೆಗಳಲ್ಲಿ ನೀರು ಉಕ್ಕಿ ಹರಿಯುತ್ತಿದ್ದು, ಹಲವು ಗ್ರಾಮಗಳು ಪ್ರವಾಹ ಪರಿಸ್ಥಿತಿ ಎದುರಿಸುವಂತಾಗಿದೆ.
ಬೂದನೂರು ಕೆರೆ ಒಡೆದು ಮೈಸೂರು- ಬೆಂಗಳೂರು ಹೆದ್ದಾರಿ ಸಂಚಾರ ಸ್ಥಗಿತವಾಗಿದೆ. ಈ ಹಿನ್ನೆಲೆಯಲ್ಲಿ ಮದ್ದೂರಿನ ಬಳಿ ಮೈ- ಬೆಂ ಹೆದ್ದಾರಿ ಸಂಚಾರ ಮಾರ್ಗವನ್ನು ಬದಲಿಸಲಾಗಿದೆ. ಮದ್ದೂರು ಟಿವಿ ವೃತ್ತದಿಂದ ಮಳವಳ್ಳಿ ಮಾರ್ಗವಾಗಿ ಮೈಸೂರಿಗೆ ತೆರಳಲು ಮಾರ್ಗ ಬದಲಾವಣೆ ಮಾಡಲಾಗಿದೆ. ಮಂಡ್ಯದ ಗುತ್ತಲಿನ ಬಳಿ ರಸ್ತೆ ಕೊಚ್ಚಿಹೋಗಿರುವ ಕಾರಣದಿಂದ ಮಂಡ್ಯ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
5. ಸವಿಸ್ತಾರ ಅಂಕಣ | ಪಿಎಫ್ಐ ಜತೆಗೆ RSS ಬ್ಯಾನ್ ಆಗಲಿ ಎನ್ನುವ ಕಾಂಗ್ರೆಸ್ ಈ ಸತ್ಯವನ್ನು ಅರಿಯಲಿ
ಪಿಎಫ್ಐ ಅನ್ನು ಬ್ಯಾನ್ ಮಾಡಿದ ಕೂಡಲೆ ಕಾಂಗ್ರೆಸ್ ಪಕ್ಷದ ಕೆಲವು ಮುಖಂಡರು, ಆರ್‌ಎಸ್ಎಸ್ ಬ್ಯಾನ್ ಮಾಡಿ ಎನ್ನಲಾರಂಭಿಸುತ್ತಾರೆ. ಇದೊಂದು ರೀತಿಯಲ್ಲಿ ಪೊಲಿಟಿಕಲಿ ಕರೆಕ್ಟ್ ಆಗಿರುವ ಪ್ರಯತ್ನವಷ್ಟೆ. ಅಂದರೆ, ತನ್ನಿಂದ ಬೈಸಿಕೊಂಡ “ತಪ್ಪು ಮಾಡಿದ ಮಗ” ಬೇಸರ ಮಾಡಿಕೊಳ್ಳದಿರಲಿ ಎಂದು, ತಪ್ಪೇ ಮಾಡದ ಮಗನಿಗೂ ಅಪ್ಪನೊಬ್ಬ ಬೈದಂತೆ. ಈ ಮನಃಸ್ಥಿತಿ ಎಲ್ಲಿಂದ ಆರಂಭವಾಗುತ್ತದೆ? ಎಲ್ಲಿಗೆ ಹೋಗಿ ಮುಟ್ಟುತ್ತದೆ? ಈ ಕುರಿತು ವಿಸ್ತಾರ ನ್ಯೂಸ್ ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಅವರ ಸವಿಸ್ತಾರ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ.
6. Dangerous Pakistan | ಅತ್ಯಂತ ಅಪಾಯಕಾರಿ ರಾಷ್ಟ್ರ ಪಾಕಿಸ್ತಾನ ಎಂದ ಅಮೆರಿಕ ಅಧ್ಯಕ್ಷ ಬೈಡೆನ್
ಜಗತ್ತಿನಲ್ಲೇ ಪಾಕಿಸ್ತಾನವು ಅತ್ಯಂತ ಅಪಾಯಕಾರಿ ರಾಷ್ಟ್ರ (Dangerous Pakistan) ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಅವರು ಹೇಳಿದ್ದಾರೆ. ಪಾಕಿಸ್ತಾನದ ಜತೆಗೆ ಆರಂಭದಿಂದಲೂ ಅಮೆರಿಕ ಸಾಫ್ಟ್ ಕಾರ್ನರ್ ತೋರುತ್ತಲೇ ಬಂದಿದೆ. ಪಾಕಿಸ್ತಾನಕ್ಕೆ ಸೇನಾ ಸಹಾಯದ ಜತೆಗೆ ಆರ್ಥಿಕ ನೆರವು ನೀಡುತ್ತಾ ಬಂದಿದೆ. ಹಾಗಾಗಿ, ಹಾಲಿ ಅಧ್ಯಕ್ಷ ಜೋ ಬೈಡೆನ್ ಅವರು ಜಗತ್ತಿನಲ್ಲೇ ಪಾಕಿಸ್ತಾನವು ಅತ್ಯಂತ ಅಪಾಯಕಾರಿ ರಾಷ್ಟ್ರ ಎಂದು ಹೇಳಿರುವುದು ಚರ್ಚೆಗೆ ಕಾರಣವಾಗಿದೆ. ಅಮೆರಿಕದ ಈ ಹೇಳಿಕೆ ಪಾಕಿಸ್ತಾನದ ವಿದೇಶಾಂಗ ನೀತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯೂ ಇದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
7. ಮನೆ ಬಾಗಿಲಲ್ಲೇ ಗುಂಡಿಟ್ಟ ಭಯೋತ್ಪಾದಕರು: ಉಗ್ರರ ದಾಳಿಗೆ ಮತ್ತೊಬ್ಬ ಕಾಶ್ಮೀರಿ ಪಂಡಿತ ಬಲಿ
ಜಮ್ಮು-ಕಾಶ್ಮೀರದಲ್ಲಿ ಮತ್ತೊಬ್ಬ ಕಾಶ್ಮೀರಿ ಪಂಡಿತನನ್ನು ಉಗ್ರರು ಹತ್ಯೆ ಮಾಡಿದ್ದಾರೆ. ಶೋಪಿಯಾನ್ನ ಚೌದ್ರಿ ಗುಂಡ್ನ ನಿವಾಸಿಯಾಗಿರುವ ಪೋರಣ್ ಕ್ರಿಶನ್ ಭಟ್ ಉಗ್ರರ ದಾಳಿಯಿಂದ ಹತ್ಯೆಗೀಡಾಗಿದ್ದು, ಇವರು ತಾರಕ್ನಾಥ್ ಭಟ್ ಎಂಬುವರ ಪುತ್ರ. ಉಗ್ರರ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಪೋರಣ್ರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆಗಲೇ ಪರಿಸ್ಥಿತಿ ತುಂಬ ಗಂಭೀರವಾಗಿದೆ, ಬದುಕುವುದು ಕಷ್ಟ ಎಂದು ವೈದ್ಯರು ಹೇಳಿದ್ದರು. ಅಂತೆಯೇ, ಪೋರಣ್ ಸಾವನ್ನಪ್ಪಿದ್ದಾರೆ. ಪೋರಣ್ ಮನೆಯ ಗೇಟ್ ಬಳಿ ನಿಂತಿದ್ದಾಗಲೇ ಉಗ್ರರು ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಕೋರರು ಯಾರೆಂದು ಇನ್ನೂ ಗೊತ್ತಾಗಿಲ್ಲ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
8. OTT Platform | ಒಟಿಟಿ ಕಂಟೆಂಟ್‌ಗಳಿಗೆ ಸೆನ್ಸಾರ್ ಬೇಡ, ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ಕೋವಿಡ್ ನಂತರದ ದಿನಮಾನದಲ್ಲಿ ಒಟಿಟಿಗಳು (OTT Platform) ಚಿತ್ರಮಂದಿರಕ್ಕೆ ಪೈಪೋಟಿ ನೀಡುತ್ತಿದೆ. ಇದರ ಬೆನ್ನಲ್ಲೆ ಒಟಿಟಿಯಲ್ಲಿ ಪ್ರಸಾರವಾಗುವ ಕಂಟೆಂಟ್‌ಗಳ ಮೇಲೆ ನಿಯಂತ್ರಣ ಹೇರಬೇಕು, ಸಿನಿಮಾಗೆ ಇದ್ದ ಹಾಗೆ ಇದಕ್ಕೂ ಸೆನ್ಸಾರ್ ಇರಬೇಕು ಎಂದು ವಾದಗಳು ಕೇಳಿ ಬರುತ್ತಿದ್ದವು. ಒಟಿಟಿಗೆ ಬಿಡುಗಡೆಯಾಗುವ ಮುನ್ನ ಸಿನಿಮಾ ಹಾಗೂ ಸಿರೀಸ್‌ಗಳನ್ನು ಸಮಿತಿಗೆ ತೋರಿಸಬೇಕು ಎಂದು ಅಲಹಾಬಾದ್ ಹೈಕೋರ್ಟ್‌ಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಹೈಕೋರ್ಟ್ ಇದಕ್ಕೆ ಒಪ್ಪಿಗೆ ಸೂಚಿಸಿರಲಿಲ್ಲ. ಈ ಕುರಿತಂತೆ ಸುಪ್ರೀಂ ಕೋರ್ಟ್, ಪ್ರಕರಣದಲ್ಲಿ ಹೈಕೋರ್ಟ್ ನೀಡಿದ್ದ ತೀರ್ಪನ್ನು ಎತ್ತಿ ಹಿಡಿದಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಒಟಿಟಿ ಕುರಿತ ಮತ್ತೊಂದು ಪ್ರಕರಣದಲ್ಲಿ, XXX ವೆಬ್‌ಸೀರೀಸ್‌ನಲ್ಲಿ ಆಕ್ಷೇಪಾರ್ಹ ಕಂಟೆಂಟ್ ಇದ್ದು, ನಿರ್ಮಾಪಕಿ ಏಕ್ತಾ ಕಪೂರ್ (Ekta Kapoor) ಯುವ ಮನಸ್ಸುಗಳನ್ನು ಹಾಳು ಮಾಡುತ್ತಿದ್ದಾರೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ಪಟ್ಟಿದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
9. ತ್ರಿವೇಣಿ ಸಂಗಮದ ಕುಂಭಮೇಳಕ್ಕೆ ಭಾನುವಾರ ತೆರೆ; ಬರಲಾಗದೆಂದು ಪತ್ರ ಬರೆದ ಯೋಗಿ
ಕೆ.ಆರ್.ಪೇಟೆಯ ಅಂಬಿಗರಹಳ್ಳಿಯಲ್ಲಿ ನಡೆಯುತ್ತಿರುವ ತ್ರಿವೇಣಿ ಸಂಗಮದ ಮಹಾ ಕುಂಭಮೇಳ (Maha kumbhamela) ಸಂಭ್ರಮವು 3ನೇ ದಿನಕ್ಕೆ ಕಾಲಿಟ್ಟಿದೆ. ಶನಿವಾರ ಮುಂಜಾನೆ 6 ಗಂಟೆಯಿಂದ ಕಳಸ ಪೂಜೆ, ಗಣಪತಿ, ನವಗ್ರಹ, ಮೃತ್ಯುಂಜಯ ಹೋಮ, ಸಹಸ್ರ ಹೋಮ, ಮೋದಕ ಹೋಮ ಸೇರಿದಂತೆ ಹಲವು ಪೂಜಾ ಕೈಂಕರ್ಯಗಳು ನೆರವೇರಿದವು. ರಾಜ್ಯದ ಪ್ರಮುಖ ಮಠಗಳ ಸುಮಾರು 50ಕ್ಕೂ ಮಠಾಧೀಶರು ಧಾರ್ಮಿಕ ಸಭೆ ನಡೆಸಿದರು. ಅಕ್ಟೋಬರ್ 13ಕ್ಕೆ ಶುರುವಾದ ಮಹಾ ಕುಂಭಮೇಳಕ್ಕೆ ಭಾನುವಾರ ತೆರೆಬೀಳಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
10. Women’s Asia Cup | ಶ್ರೀಲಂಕಾವನ್ನು ಮಣಿಸಿ ಏಳನೇ ಬಾರಿ ಚಾಂಪಿಯನ್ ಆದ ಭಾರತ ತಂಡ
ರೇಣುಕಾ ಸಿಂಗ್ (೫ ರನ್‌ಗಳಿಗೆ ೩ ವಿಕೆಟ್) ಅವರ ಮಾರಕ ದಾಳಿ ಹಾಗೂ ಆರಂಭಿಕ ಬ್ಯಾಟರ್ ಸ್ಮೃತಿ ಮಂಧಾನ (೫೧) ಅವರ ಅಜೇಯ ಅರ್ಧ ಶತಕದ ನೆರವು ಪಡೆದ ಭಾರತ ತಂಡ ಏಷ್ಯಾ ಕಪ್‌ನ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ೮ ವಿಕೆಟ್‌ಗಳಿಂದ ಸೋಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಇದು ಭಾರತ ವನಿತೆಯರ ತಂಡಕ್ಕೆ ಲಭಿಸಿದ ಏಳನೇ ಏಷ್ಯಾ ಕಪ್ ಟ್ರೋಫಿ. ಅಂತೆಯೇ ಲಂಕಾ ತಂಡವನ್ನು ಐದನೇ ಭಾರಿ ಫೈನಲ್ ಪಂದ್ಯದಲ್ಲಿ ಸೋಲಿಸಿದ ದಾಖಲೆ ಮಾಡಿತು. ಅತ್ತ ಲಂಕಾ ತಂಡ ಐದು ಬಾರಿ ಫೈನಲ್‌ಗೇರಿದರೂ ಭಾರತದ ವಿರುದ್ಧವೇ ಸೋತು ಕೇವಲ ರನ್ನರ್ ಅಪ್ ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಓದಬೇಕಾದ ಮತ್ತಷ್ಟು ಸುದ್ದಿಗಳು
1️⃣Kohinoor Diamond | ಕೊಹಿನೂರ್ ವಜ್ರ ವಾಪಸ್ ತರಲು ಕೇಂದ್ರ ಸರ್ಕಾರದಿಂದ ನಿರಂತರ ಪ್ರಯತ್ನ
2️⃣Karnataka High Court | ಕರ್ನಾಟಕ ಹೈಕೋರ್ಟ್ ಸಿಜೆ ಆಗಿ ನ್ಯಾ. ಪ್ರಸನ್ನ ಬಿ ವರಳೆ ಪ್ರಮಾಣ ವಚನ ಸ್ವೀಕಾರ
3️⃣Justice D Y Chandrachud | ಡಿ ವೈ ಚಂದ್ರಚೂಡ್ ನ್ಯಾಯನಿಷ್ಠ, ಧೈರ್ಯಶಾಲಿ ನ್ಯಾಯಮೂರ್ತಿ
4️⃣ದೃಶ್ಯ ಕಾವ್ಯ | ಕಾಂತಾರ ಸಿನೆಮಾ ನನಗೇಕೆ ಇಷ್ಟವಾಯಿತು?
5️⃣ಮಹಿಳೆ ತುಂಡುಡುಗೆ ಧರಿಸಿದ ಮಾತ್ರಕ್ಕೆ ಅದು ಪುರುಷನಿಗೆ ಮೈಮುಟ್ಟಲು ನೀಡಿದ ಲೈಸೆನ್ಸ್ ಅಲ್ಲ ಎಂದ ಕೋರ್ಟ್