Site icon Vistara News

Fetus in Fetu: ‘ಗರ್ಭಿಣಿ ಪುರುಷ’ನ ಹೊಟ್ಟೆಯಲ್ಲಿ ಕೈಕಾಲು, ದವಡೆ ಮೂಳೆ, ಕೂದಲು ಸಿಕ್ಕವು!

Nagpur Man suffers from Fetus in Fetu

ನಾಗ್ಪುರ, ಮಹಾರಾಷ್ಟ್ರ: ವ್ಯಕ್ತಿಯೊಬ್ಬ 36 ವರ್ಷಗಳಿಂದ ತನ್ನ ಹೊಟ್ಟೆಯೊಳಗೇ ತನ್ನ ಅವಳಿಯನ್ನು ಇಟ್ಟುಕೊಂಡಿದ್ದ. ಆದರೆ ಆ ವಿಷಯ ಆತನಿಗೇ ಗೊತ್ತೆ ಇರಲಿಲ್ಲ! ಹೌದು, ಮಹಾರಾಷ್ಟ್ರ (Maharashtra) ನಾಗ್ಪುರದ (Nagpur) ಸಂಜಯ್ ಭಗತ್ (Sanjay Bhagat) ಎಂಬಾತನ ಉಬ್ಬಿದ ಹೊಟ್ಟೆ ನೋಡಿದ್ರೆ ಯಾರಾದ್ರೂ ಆತ ಗರ್ಭ ಧರಿಸಿದ್ದಾನೆಂದು ಹೇಳುತ್ತಿದ್ದರು. ಅಸಲಿಗೆ, ಆತನ ಹೊಟ್ಟೆಯು ಹಾಗೆ ಇತ್ತು, ತುಂಬು ಗರ್ಭಿಣಿ ಹೇಗೆ ಹೊಟ್ಟೆ ಉಬ್ಬಿರುತ್ತದೆಯೋ ಅದೇ ರೀತಿ ಆತನ ಹೊಟ್ಟೆ ಉಬ್ಬಿಕೊಂಡಿತ್ತು. ಹಾಗಾಗಿ ಆತನನ್ನು ಎಲ್ಲರೂ ‘ಗರ್ಭಿಣಿ ಗಂಡ್ಸು’ (Pregnant man) ಎಂದು ಕರೆಯುತ್ತಿದ್ದರು. ಅಂತಿಮವಾಗಿ ಆತ Fetus in Fetu(ಭ್ರೂಣದೊಳಗೇ ಭ್ರೂಣ) ಎಂಬ ವಿಚಿತ್ರ ಪರಿಸ್ಥಿತಿಯಿಂದ ಬಳಲುತ್ತಿದ್ದನ್ನು ಪತ್ತೆ ಹಚ್ಚಲಾಯಿತು(Viral News).

1963ರಲ್ಲಿ ಜನಿಸಿದ ಸಂಜಯ್ ಭಗತ್ ಬಾಲಕನಾಗಿದ್ದ ಅಂಥ ವ್ಯತ್ಯಾಸಗಳು ಇರಲಿಲ್ಲ. ಇತರ ಬಾಲಕರಂತೆಯೇ ಇದ್ದರು. 20 ವರ್ಷ ಆಗೋವರೆಗೂ ಅಂಥ ಸಮಸ್ಯೆಯೇನೂ ಆಗಲಿಲ್ಲ. ಆದರೆ, 20 ವರ್ಷಗಳಾಗುತ್ತಿದ್ದಂತೆ ತೊಂದರೆ ಶುರುವಾಯಿತು. ಅಲ್ಲಿವರೆಗೂ ಆತ ಗದ್ದೆಗಳಲ್ಲಿ ಇತರರಂತೆ ಕೆಲಸ ಮಾಡುತ್ತಿದ್ದರು. ದುಡಿದು ಕುಟುಂಬವನ್ನು ಸಾಕುತ್ತಿದ್ದರು. 20 ವರ್ಷದ ಬಳಿಕ ಹೊಟ್ಟೆ ಉಬ್ಬು ಜಾಸ್ತಿಯಾಗತೊಡಗಿತು. ಆದರೂ ಅದನ್ನು ಲೆಕ್ಕಿಸದೇ, ಅವರು ಕೆಲಸ ಮಾಡುತ್ತಿದ್ದರು. ಹೊಟ್ಟೆ ಉಬ್ಬುತ್ತಾ ಹೋದಂತೆ ಅವರಿಗೆ ಉಸಿರಾಡುವುದು ಕಷ್ಟವಾಗ ತೊಡಗಿತು. ಆಗ ನಿಜವಾದ ಸಮಸ್ಯೆಗಳು ಶುರುವಾದವು.

1999ರಲ್ಲಿ ಮುಂಬೈನ ಆಸ್ಪತ್ರೆಗೆ ಅವರು ದಾಖಲಾದರು. ಅಲ್ಲಿ ಡಾ. ಅಜಯ್ ಮೆಹ್ತಾ ಅವರಿಗೆ ಈ ಪ್ರಕರಣವನ್ನು ಒದಗಿಸಲಾಯಿತು. ಭಗತ್ ಅವರ ಹೊಟ್ಟೆಯಲ್ಲಿ ಗಡ್ಡೆ ಇರಬೇಕು. ಹಾಗಾಗಿ, ಹೊಟ್ಟೆ ಉಬ್ಬಿದೆ ಎಂದು ಭಾವಿಸಿದ ವೈದ್ಯರ ತಂಡವು ಶಸ್ತ್ರ ಚಿಕಿತ್ಸೆಯನ್ನು ಕೈಗೊಂಡರು. ಆದರೆ, ವೈದ್ಯರಿಗೆ ಗಡ್ಡೆಯ ಬದಲಿಗೆ, ಹೊಟ್ಟೆಯಲ್ಲಿ ಮಾನವನ ಅವಶೇಷಗಳು ಇರುವುದು ಗೊತ್ತಾಯಿತು. ವೈದ್ಯರಿಗೆ ಇದು ಆಶ್ಚರ್ಯವುಂಟು ಮಾಡಿತು. ಚಿಕಿತ್ಸೆ ಕೈಗೊಂಡ ವೈದ್ಯರ ಪ್ರಕಾರ, ಅವರು ಹೊಟ್ಟೆಯೊಳಗೆ ಕೈ ಹಾಕಿದಾಗ ಸಾಕಷ್ಟು ಮೂಳೆಗಳು ಇದ್ದವು.

ಭಗತ್ ಶಸ್ತ್ರ ಚಿಕಿತ್ಸೆ ನಡೆಸಿದಾಗ ಅವರ ಹೊಟ್ಟೆಯಿಂದ ಕೈ ಕಾಲುಗಳು, ಜನನಾಂಗದ ಕೆಲವು ಭಾಗಗಳು, ಕೂದಲು, ದವಡೆಗಳು ವೈದ್ಯರಿಗೆ ದೊರೆತವು. ಮೂಳೆಗಳನ್ನು ಕಂಡು ನಾವು ಗಾಬರಿಗೊಂಡೆವು. ಗೊಂದಲಕ್ಕೊಳಗಾಗಿದ್ದೇವೆ ಮತ್ತು ಆಶ್ಚರ್ಯಚಕಿತರಾಗಿದ್ದೆವು. ಹೊಟ್ಟೆಯೊಳಗೇ ನಾನು ಯಾರೊಂದಿಗೆ ಹ್ಯಾಂಡ್ ಶೇಕ್ ಮಾಡುತ್ತಿದ್ದೇನೆ ಎಂಬಂತಿತ್ತು. ಇದು ನಿಜಕ್ಕೂ ಭಯಾನಕವಾಗಿತ್ತು. ಇದರಿಂದ ನನಗೆ ಆಘಾತವೂ ಆಯಿತು ಎಂದು ವೈದ್ಯರು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: ವೈರಲ್‌ ನ್ಯೂಸ್ | ಅಧ್ಯಾಪಕರ ಮನೆಗೆ ಕನ್ನ ಹಾಕಿದ ಕಳ್ಳನ ಗುರುಭಕ್ತಿ ಹೀಗಿತ್ತು!

ವೈದ್ಯರು ಆರಂಭದಲ್ಲಿ ಭಗತ್ ಪ್ರಕರಣವು ವ್ಯಾನಿಶಿಂಗ್ ಟ್ವಿನ್ ಸಿಂಡ್ರೋಮ್ ಗೆ ಉದಾಹರಣೆಯಾಗಿದೆ ಎಂದು ಭಾವಿಸಿದ್ದರು. ಅಂದರೆ, ಗರ್ಭಾವಸ್ಥೆಯಲ್ಲಿ ಅವಳಿ ಸತ್ತು ಹೋಗಿರುವ ಪ್ರಕರಣವಾಗಿರುತ್ತದೆ. ಆದರೆ ನಂತರ ಪರೀಕ್ಷೆ ಮತ್ತು ಅಧ್ಯಯನದಲ್ಲಿ ಅದು ಭ್ರೂಣದಲ್ಲಿ ಭ್ರೂಣ (Fetus in Fetu) ಎಂದು ತಿಳಿದು ಬಂತು ಎಂದು ವೈದ್ಯರು ಹೇಳಿದ್ದಾರೆ.

ವಿಜ್ಞಾನದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version