Fetus in Fetu: ‘ಗರ್ಭಿಣಿ ಪುರುಷ’ನ ಹೊಟ್ಟೆಯಲ್ಲಿ ಕೈಕಾಲು, ದವಡೆ ಮೂಳೆ, ಕೂದಲು ಸಿಕ್ಕವು! Vistara News
Connect with us

ಆರೋಗ್ಯ

Fetus in Fetu: ‘ಗರ್ಭಿಣಿ ಪುರುಷ’ನ ಹೊಟ್ಟೆಯಲ್ಲಿ ಕೈಕಾಲು, ದವಡೆ ಮೂಳೆ, ಕೂದಲು ಸಿಕ್ಕವು!

Fetus in Fetu ಎಂಬ ವಿಚಿತ್ರ ಪರಿಸ್ಥಿತಿಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ಹೊಟ್ಟೆಯೊಳಗೆ ಆತನ್ನದೇ ಅವಳಿಯ ಕೂದಲು, ದವಡೆ ಹಾಗೂ ಕೈಕಾಲು ಮೂಳೆಗಳು ಸಿಕ್ಕಿವೆ.

VISTARANEWS.COM


on

Nagpur Man suffers from Fetus in Fetu
Koo

ನಾಗ್ಪುರ, ಮಹಾರಾಷ್ಟ್ರ: ವ್ಯಕ್ತಿಯೊಬ್ಬ 36 ವರ್ಷಗಳಿಂದ ತನ್ನ ಹೊಟ್ಟೆಯೊಳಗೇ ತನ್ನ ಅವಳಿಯನ್ನು ಇಟ್ಟುಕೊಂಡಿದ್ದ. ಆದರೆ ಆ ವಿಷಯ ಆತನಿಗೇ ಗೊತ್ತೆ ಇರಲಿಲ್ಲ! ಹೌದು, ಮಹಾರಾಷ್ಟ್ರ (Maharashtra) ನಾಗ್ಪುರದ (Nagpur) ಸಂಜಯ್ ಭಗತ್ (Sanjay Bhagat) ಎಂಬಾತನ ಉಬ್ಬಿದ ಹೊಟ್ಟೆ ನೋಡಿದ್ರೆ ಯಾರಾದ್ರೂ ಆತ ಗರ್ಭ ಧರಿಸಿದ್ದಾನೆಂದು ಹೇಳುತ್ತಿದ್ದರು. ಅಸಲಿಗೆ, ಆತನ ಹೊಟ್ಟೆಯು ಹಾಗೆ ಇತ್ತು, ತುಂಬು ಗರ್ಭಿಣಿ ಹೇಗೆ ಹೊಟ್ಟೆ ಉಬ್ಬಿರುತ್ತದೆಯೋ ಅದೇ ರೀತಿ ಆತನ ಹೊಟ್ಟೆ ಉಬ್ಬಿಕೊಂಡಿತ್ತು. ಹಾಗಾಗಿ ಆತನನ್ನು ಎಲ್ಲರೂ ‘ಗರ್ಭಿಣಿ ಗಂಡ್ಸು’ (Pregnant man) ಎಂದು ಕರೆಯುತ್ತಿದ್ದರು. ಅಂತಿಮವಾಗಿ ಆತ Fetus in Fetu(ಭ್ರೂಣದೊಳಗೇ ಭ್ರೂಣ) ಎಂಬ ವಿಚಿತ್ರ ಪರಿಸ್ಥಿತಿಯಿಂದ ಬಳಲುತ್ತಿದ್ದನ್ನು ಪತ್ತೆ ಹಚ್ಚಲಾಯಿತು(Viral News).

1963ರಲ್ಲಿ ಜನಿಸಿದ ಸಂಜಯ್ ಭಗತ್ ಬಾಲಕನಾಗಿದ್ದ ಅಂಥ ವ್ಯತ್ಯಾಸಗಳು ಇರಲಿಲ್ಲ. ಇತರ ಬಾಲಕರಂತೆಯೇ ಇದ್ದರು. 20 ವರ್ಷ ಆಗೋವರೆಗೂ ಅಂಥ ಸಮಸ್ಯೆಯೇನೂ ಆಗಲಿಲ್ಲ. ಆದರೆ, 20 ವರ್ಷಗಳಾಗುತ್ತಿದ್ದಂತೆ ತೊಂದರೆ ಶುರುವಾಯಿತು. ಅಲ್ಲಿವರೆಗೂ ಆತ ಗದ್ದೆಗಳಲ್ಲಿ ಇತರರಂತೆ ಕೆಲಸ ಮಾಡುತ್ತಿದ್ದರು. ದುಡಿದು ಕುಟುಂಬವನ್ನು ಸಾಕುತ್ತಿದ್ದರು. 20 ವರ್ಷದ ಬಳಿಕ ಹೊಟ್ಟೆ ಉಬ್ಬು ಜಾಸ್ತಿಯಾಗತೊಡಗಿತು. ಆದರೂ ಅದನ್ನು ಲೆಕ್ಕಿಸದೇ, ಅವರು ಕೆಲಸ ಮಾಡುತ್ತಿದ್ದರು. ಹೊಟ್ಟೆ ಉಬ್ಬುತ್ತಾ ಹೋದಂತೆ ಅವರಿಗೆ ಉಸಿರಾಡುವುದು ಕಷ್ಟವಾಗ ತೊಡಗಿತು. ಆಗ ನಿಜವಾದ ಸಮಸ್ಯೆಗಳು ಶುರುವಾದವು.

1999ರಲ್ಲಿ ಮುಂಬೈನ ಆಸ್ಪತ್ರೆಗೆ ಅವರು ದಾಖಲಾದರು. ಅಲ್ಲಿ ಡಾ. ಅಜಯ್ ಮೆಹ್ತಾ ಅವರಿಗೆ ಈ ಪ್ರಕರಣವನ್ನು ಒದಗಿಸಲಾಯಿತು. ಭಗತ್ ಅವರ ಹೊಟ್ಟೆಯಲ್ಲಿ ಗಡ್ಡೆ ಇರಬೇಕು. ಹಾಗಾಗಿ, ಹೊಟ್ಟೆ ಉಬ್ಬಿದೆ ಎಂದು ಭಾವಿಸಿದ ವೈದ್ಯರ ತಂಡವು ಶಸ್ತ್ರ ಚಿಕಿತ್ಸೆಯನ್ನು ಕೈಗೊಂಡರು. ಆದರೆ, ವೈದ್ಯರಿಗೆ ಗಡ್ಡೆಯ ಬದಲಿಗೆ, ಹೊಟ್ಟೆಯಲ್ಲಿ ಮಾನವನ ಅವಶೇಷಗಳು ಇರುವುದು ಗೊತ್ತಾಯಿತು. ವೈದ್ಯರಿಗೆ ಇದು ಆಶ್ಚರ್ಯವುಂಟು ಮಾಡಿತು. ಚಿಕಿತ್ಸೆ ಕೈಗೊಂಡ ವೈದ್ಯರ ಪ್ರಕಾರ, ಅವರು ಹೊಟ್ಟೆಯೊಳಗೆ ಕೈ ಹಾಕಿದಾಗ ಸಾಕಷ್ಟು ಮೂಳೆಗಳು ಇದ್ದವು.

ಭಗತ್ ಶಸ್ತ್ರ ಚಿಕಿತ್ಸೆ ನಡೆಸಿದಾಗ ಅವರ ಹೊಟ್ಟೆಯಿಂದ ಕೈ ಕಾಲುಗಳು, ಜನನಾಂಗದ ಕೆಲವು ಭಾಗಗಳು, ಕೂದಲು, ದವಡೆಗಳು ವೈದ್ಯರಿಗೆ ದೊರೆತವು. ಮೂಳೆಗಳನ್ನು ಕಂಡು ನಾವು ಗಾಬರಿಗೊಂಡೆವು. ಗೊಂದಲಕ್ಕೊಳಗಾಗಿದ್ದೇವೆ ಮತ್ತು ಆಶ್ಚರ್ಯಚಕಿತರಾಗಿದ್ದೆವು. ಹೊಟ್ಟೆಯೊಳಗೇ ನಾನು ಯಾರೊಂದಿಗೆ ಹ್ಯಾಂಡ್ ಶೇಕ್ ಮಾಡುತ್ತಿದ್ದೇನೆ ಎಂಬಂತಿತ್ತು. ಇದು ನಿಜಕ್ಕೂ ಭಯಾನಕವಾಗಿತ್ತು. ಇದರಿಂದ ನನಗೆ ಆಘಾತವೂ ಆಯಿತು ಎಂದು ವೈದ್ಯರು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: ವೈರಲ್‌ ನ್ಯೂಸ್ | ಅಧ್ಯಾಪಕರ ಮನೆಗೆ ಕನ್ನ ಹಾಕಿದ ಕಳ್ಳನ ಗುರುಭಕ್ತಿ ಹೀಗಿತ್ತು!

ವೈದ್ಯರು ಆರಂಭದಲ್ಲಿ ಭಗತ್ ಪ್ರಕರಣವು ವ್ಯಾನಿಶಿಂಗ್ ಟ್ವಿನ್ ಸಿಂಡ್ರೋಮ್ ಗೆ ಉದಾಹರಣೆಯಾಗಿದೆ ಎಂದು ಭಾವಿಸಿದ್ದರು. ಅಂದರೆ, ಗರ್ಭಾವಸ್ಥೆಯಲ್ಲಿ ಅವಳಿ ಸತ್ತು ಹೋಗಿರುವ ಪ್ರಕರಣವಾಗಿರುತ್ತದೆ. ಆದರೆ ನಂತರ ಪರೀಕ್ಷೆ ಮತ್ತು ಅಧ್ಯಯನದಲ್ಲಿ ಅದು ಭ್ರೂಣದಲ್ಲಿ ಭ್ರೂಣ (Fetus in Fetu) ಎಂದು ತಿಳಿದು ಬಂತು ಎಂದು ವೈದ್ಯರು ಹೇಳಿದ್ದಾರೆ.

ವಿಜ್ಞಾನದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News Special Face Book ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
ವೈವಿಧ್ಯಮಯ ಸುದ್ದಿಗಳಿಗಾಗಿ Vistara News Twitter ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Side Effects Of Bananas: ಬಾಳೆಹಣ್ಣು ಹೆಚ್ಚು ತಿಂದರೆ ಏನಾಗುತ್ತದೆ?

ಪೌಷ್ಟಿಕವಾದ, ಹೆಚ್ಚು ದುಬಾರಿಯಲ್ಲದೆ, ಎಲ್ಲರ ಕೈಗೆಟುಕುವಂಥ ಆಹಾರ ಎನಿಸಿಕೊಂಡಿರುವ ಬಾಳೆ ಹಣ್ಣು ಎಲ್ಲರಿಗೂ ಅಚ್ಚುಮೆಚ್ಚು. ಶರ್ಕಪಿಷ್ಟ, ನಾರು, ವಿಟಮಿನ್‌ಗಳು, ಖನಿಜಗಳು ಎಲ್ಲವೂ ಇರುವಂಥ ಈ ಹಣ್ಣು ತಿಂದಿದ್ದು ಅತಿಯಾದರೆ (Side Effects Of Bananas) ಸಮಸ್ಯೆಗಳು ಕಾಡಬಹುದೇ? ಈ ಲೇಖನ ಓದಿ.

VISTARANEWS.COM


on

Edited by

Side Effects Of Bananas
Koo

ಬಾಳೆಯ ಹಣ್ಣನ್ನು ಬಯಸದವರು ಅಪರೂಪ. ಇದನ್ನು ತಿನ್ನುವುದಕ್ಕೆ (Side Effects Of Bananas) ಇಂಥದ್ದೇ ಕಾರಣ ಎಂಬುದೂ ಬೇಕಿಲ್ಲ. ದೇವರ ಪ್ರಸಾದದ್ದು, ತಾಂಬೂಲದ ಜೊತೆಗಿನದ್ದು, ತಮ್ಮದೇ ತೋಟದ್ದೆಂದು ಯಾರೋ ಕೊಟ್ಟಿದ್ದು, ನಾವೇ ಅಂಗಡಿಯಿಂದ ತಂದಿದ್ದು, ಇಷ್ಟವೆಂದು ಮೆಂದಿದ್ದು, ಹಸಿವು ತಣಿಸಲು ತಿಂದಿದ್ದು, ಕ್ರೀಡೆಯ ನಡುವಿನ ಬ್ರೇಕ್‌ನಲ್ಲಿ, ಬೆಳಗಿನ ವ್ಯಾಯಾಮದ ಮೊದಲಿನ ಶಕ್ತಿ ಸಂಚಯನಕ್ಕೆ, ಮ್ಯಾರಥಾನ್‌ ಓಡುವಾಗ ಕಾಲಿಗೆ ಬಲ ನೀಡಲು, ಮಲಬದ್ಧತೆ ನಿವಾರಣೆಗೆ… ಕಾರಣಗಳು ಏನು ಬೇಕಿದ್ದರೂ ಆಗಬಹುದು.

banana

ತಪ್ಪೇನಿಲ್ಲ ಬಿಡಿ. ಮಧುಮೇಹದ ಕಾಟವಿಲ್ಲ ಎಂದಾದರೆ ದಿನಕ್ಕೆ ಒಂದೆರಡು ಬಾಳೆಹಣ್ಣು ಮೆಲ್ಲುವುದು ವಿಷಯವೇ ಅಲ್ಲ. ಅಷ್ಟೊಂದು ಪೌಷ್ಟಿಕವಾದ, ಹೆಚ್ಚು ದುಬಾರಿಯಲ್ಲದೆ, ಎಲ್ಲರ ಕೈಗೆಟುಕುವಂಥ ಆಹಾರ ಎನಿಸಿಕೊಂಡಿರುವ ಬಾಳೆ ಹಣ್ಣು ಎಲ್ಲರಿಗೂ ಅಚ್ಚುಮೆಚ್ಚಾಗಿರುವುದರಲ್ಲಿ ಅಚ್ಚರಿಯೇನಿಲ್ಲ. ಶರ್ಕಪಿಷ್ಟ, ನಾರು, ವಿಟಮಿನ್‌ಗಳು, ಖನಿಜಗಳು ಎಲ್ಲವೂ ಇರುವಂಥ ಈ ಹಣ್ಣು ತಿಂದಿದ್ದು ಅತಿಯಾದರೆ ಸಮಸ್ಯೆಗಳು ಕಾಡಬಹುದೇ? ಅತಿಯಾದರೆ ಅಮೃತವೂ ವಿಷ ಎಂಬಂತೆ, ಅತಿಯಾಗಿ ತಿಂದರೆ (eating too many bananas) ಬಾಳೆಯೂ ಬವಣೆ ತರಬಹುದೇ? ಅದಕ್ಕೂ ಮೊದಲು ಬಾಳೆಯ ವಿವರಗಳನ್ನು ಗಮನಿಸೋಣ.

ಏನಿವೆ ಪೌಷ್ಟಿಕಾಂಶಗಳು?

ಸತ್ವಗಳ ಖನಿ ಎಂದೇ ಕರೆಸಿಕೊಂಡಿದೆ ಬಾಳೆಯ ಹಣ್ಣು. ಫ್ಲೆವನಾಯ್ಡ್‌, ಕೆರೊಟಿನಾಯ್ಡ್‌ ಸೇರಿದಂತೆ ಹಲವು ರೀತಿಯ ಉತ್ಕರ್ಷಣ ನಿರೋಧಕಗಳು ಬಾಳೆಹಣ್ಣಿನಲ್ಲಿವೆ. ಹಾಗಾಗಿ ಮೊದಲ ಸುತ್ತಿಗೇ ಇದು ಆರೋಗ್ಯಕ್ಕೆ ಉಪಕಾರಿ ಎನಿಸಿಬಿಡುತ್ತದೆ. ವಿಟಮಿನ್‌ ಸಿ, ವಿಟಮಿನ್‌ ಬಿ೬ ನಂಥ ಜೀವಸತ್ವಗಳು ಜೀವಕ್ಕೆ ಹಿತ ಎನಿಸಿದರೆ, ನಾರು ಜೀರ್ಣಾಂಗಗಳ ದೇಖರೇಖಿ ನೋಡಿಕೊಳ್ಳುತ್ತದೆ. ಪೊಟಾಶಿಯಂ ಸಹ ಹೇರಳವಾಗಿ ಇರುವುದರಿಂದ ರಕ್ತದೊತ್ತಡ ಏರಿಳಿಯದಂತೆ ನಿರ್ವಹಣೆಗೂ ಇದು ನೆರವು ನೀಡುತ್ತದೆ. ಹಾಗಾಗಿ ಹೃದಯದ ಆರೋಗ್ಯಕ್ಕೂ ಇದು ಒಳ್ಳೆಯದು. ಸಕ್ಕರೆ ಮತ್ತು ಪಿಷ್ಟದ ಅಂಶಗಳು ಇದ್ದರೂ, ನಾರು ಸಾಕಷ್ಟು ಇರುವುದರಿಂದ ಹೆಚ್ಚು ಕಾಲ ಹೊಟ್ಟೆ ತುಂಬಿದಂತಿರುವ ಭಾವನೆ ಮೂಡಿಸಬಹುದು ಈ ಹಣ್ಣು. ಇಷ್ಟಲ್ಲಾ ಸದ್ಗುಣಗಳು ಇದರಲ್ಲಿ ಇದ್ದ ಮೇಲೆ, ಸ್ವಲ್ಪ ಹೆಚ್ಚು ತಿಂದರೆ ತಪ್ಪೇನು ಎಂಬ ಪ್ರಶ್ನೆ ಮೂಡಿದರೆ- ಅದು ಸಹಜ. ಆದರೆ…

plantation of green bananas in sunny day

ತೊಂದರೆಗಳಿವೆ!

ಒಳ್ಳೆಯದೆಂಬ ಕಾರಣಕ್ಕೆ ಬಾಳೆಹಣ್ಣನ್ನು ಅತಿಯಾಗಿ ತಿಂದರೆ, ಅದರಿಂದ ತೊಂದರೆಗಳು ಅಮರಿಕೊಳ್ಳಬಹುದು ಎನ್ನುತ್ತಾರೆ ತಜ್ಞರು. ಇದೀಗ ಒಂದೆರಡು ಹಣ್ಣುಗಳಿಗೆ ತೊಂದರೆಯಿಲ್ಲ, ಆದರೆ ದಿನವೂ ನಾಲ್ಕಾರು ಹಣ್ಣುಗಳನ್ನು ಗುಳುಂ ಮಾಡಿದರೆ… ಕೆಲವೊಂದು ಸಣ್ಣ ತೊಂದರೆಗಳಿಂದ ಹಿಡಿದು, ದೊಡ್ಡ ಸಮಸ್ಯೆಗಳವರೆಗೂ ಬರುವ ಸಾಧ್ಯತೆಗಳನ್ನು ಪೌಷ್ಟಿಕಾಂಶ ಪರಿಣತರು ತಳ್ಳಿ ಹಾಕುವುದಿಲ್ಲ

Migraine

ಮೈಗ್ರೇನ್‌

ಅತಿಯಾದ ಮೈಗ್ರೇನ್‌ ತಲೆನೋವಿನ ಸಮಸ್ಯೆ ಇರುವವರಿಗೆ ವಿಪರೀತ ಬಾಳೆಹಣ್ಣು ತಿನ್ನುವುದು ಇನ್ನಷ್ಟು ತಲೆನೋವಿಗೆ ಕಾರಣವಾಗುತ್ತದೆ. ಅದರಲ್ಲೂ, ಸರಿಯಾಗಿ ಸಿಪ್ಪೆ ಸುಲಿಯದಿದ್ದರೆ, ಅದರಲ್ಲಿರುವ ಟೈರಮಿನ್‌ ಅಂಶವು ಹೊಟ್ಟೆ ಸೇರುತ್ತದೆ. ಇದರಿಂದ ಮೈಗ್ರೇನ್‌ ಕೆದರುವ ಸಾಧ್ಯತೆ ಹೆಚ್ಚು. ಈ ಟೈರಮಿನ್‌ ಅಂಶವನ್ನು ವಿಘಟಿಸಿ, ದೇಹದಿಂದ ಹೊರಗೆ ದಾಟಿಸುವ ರಾಸಾಯನಿಕಗಳು ಮೈಗ್ರೇನ್‌ ಸಮಸ್ಯೆ ಇರುವವರಲ್ಲಿ ಕಡಿಮೆಯಾದ್ದರಿಂದ, ಈ ಬಗ್ಗೆ ಎಚ್ಚರ ವಹಿಸುವುದು ಒಳಿತು.

Weight gain

ತೂಕ ಹೆಚ್ಚಳ

ಮಿತವಾಗಿ ಬಾಳೆಹಣ್ಣು ತಿನ್ನುವುದು ತೂಕ ಇಳಿಸುವವರಿಗೂ ಕ್ಷೇಮ. ಇದರಲ್ಲಿರುವ ನಾರಿನಿಂದಾಗಿ ಹೆಚ್ಚು ಸಮಯ ಹಸಿವಾಗದಂತೆ ಇದು ತಡೆಯುತ್ತದೆ. ಆದರೆ ಮದ್ದಿನ ಬದಲು ಮದ್ದಿನ ಮರವನ್ನೇ ತಿನ್ನಬಾರದಲ್ಲ! ಅತಿಯಾಗಿ ತಿಂದರೆ ತೂಕ ಏರುವುದರಲ್ಲಿ ಸಂಶಯವಿಲ್ಲ. ಇದರಲ್ಲಿರುವ ಸಕ್ಕರೆ ಮತ್ತು ಕಾರ್ಬ್‌ ಅಂಶಗಳೇ ಹೀಗೆ ತೂಕ ಏರುವುದಕ್ಕೆ ಕಾರಣವಾಗುತ್ತವೆ.

Digestive problems

ಜೀರ್ಣಾಂಗಗಳ ಸಮಸ್ಯೆ

ಇದರಲ್ಲಿ ನಾರು ಇದ್ದರೂ ನೀರಿಲ್ಲ. ಇರುವುದರಲ್ಲಿ ಹೆಚ್ಚಿನಾಂಶ ಕರಗಬಲ್ಲ ನಾರು. ಇದನ್ನು ಮಿತವಾಗಿ ತಿಂದರೆ ಮಲಬದ್ಧತೆ ನಿವಾರಣೆ ಮಾಡುತ್ತದೆ. ಆದರೆ ಅತಿಯಾಗಿ ತಿಂದರೆ ಮಲಬದ್ಧತೆಗೆ ಕಾರಣವಾಗುತ್ತದೆ. ಜೊತೆಗೆ, ಆಸಿಡಿಟಿ, ಹೊಟ್ಟೆಯುಬ್ಬರ, ಅಜೀರ್ಣವನ್ನೂ ತರಬಹುದು. ಹಾಗಾಗಿ ಮಿತಿಮೀರಿದರೆ ತೊಂದರೆ ತಪ್ಪಿದ್ದಲ್ಲ.

Young Woman Sleeping Soundly

ನಿದ್ದೆಗೆ ದಾರಿ!

ಹೊಟ್ಟೆ ಭಾರವಾಗುವಷ್ಟು ಬಾಳೆಹಣ್ಣು ತಿಂದು ಕೆಲಸಕ್ಕೆ ಕುಳಿತು ತೂಕಡಿಸುವವರನ್ನು ನೋಡಿರಬಹುದು. ಒಂದೆರಡು ಹಣ್ಣಿಗೆ ಹೀಗಾಗದಿರಬಹುದು. ಆದರೆ ಒಟ್ಟಾರೆಯಾಗಿ ಬಾಳೆಹಣ್ಣಿನ ಸತ್ವಗಳು ಅತಿಯಾಗಿ ರಕ್ತ ಸೇರುತ್ತಿದ್ದರೆ, ಮೆದುಳನ್ನು ಮಂಕಾಗಿಸುವುದು ನಿಜ. ತೂಕಡಿಕೆ, ಚುರುಕಿಲ್ಲದೆ ಮಬ್ಬಾಗಿರುವುದು ಮುಂತಾದವು ಸಾಮಾನ್ಯವಾಗಬಹುದು. ಈ ಹಣ್ಣಿನಲ್ಲಿರುವ ಟ್ರಿಪ್ಟೊಫ್ಯಾನ್‌ ಅಂಶ ಇದಕ್ಕೆ ಕಾರಣ ಎನ್ನಲಾಗುತ್ತದೆ.

ಹಲ್ಲುಗಳ ಸಮಸ್ಯೆ

ಸಿಹಿ ಹೆಚ್ಚಿರುವ ಇದನ್ನು ಸಿಕ್ಕಾಪಟ್ಟೆ ತಿನ್ನುವುದು, ಆನಂತರ ಬಾಯಿ ಶುಚಿ ಮಾಡದಿರುವುದು ಹಲ್ಲುಗಳ ಸಮಸ್ಯೆಗೂ ಮೂಲವಾಗಬಹುದು. ಇದರಲ್ಲಿ ಹೆಚ್ಚಿರುವ ಪಿಷ್ಟದ ಅಂಶವನ್ನು ಬಾಯಲ್ಲಿರುವ ಬ್ಯಾಕ್ಟೀರಿಯಾಗಳು ವಿಘಟಿಸಿದಾಗ ಆಮ್ಲಗಳು ಬಿಡುಗಡೆಗೊಳ್ಳುತ್ತವೆ. ಅವು ದೀರ್ಘಕಾಲ ಬಾಯಲ್ಲೇ ಇದ್ದರೆ ಹಲ್ಲುಗಳ ಎನಾಮಲ್‌ ಕವಚ ದುರ್ಬಲವಾಗುತ್ತದೆ.

diabetes

ಮಧುಮೇಹ

ಗ್ಲೂಕೋಸ್‌, ಫ್ರಕ್ಟೋಸ್‌ನಂಥ ಪಿಷ್ಟಗಳು ಇದರಲ್ಲಿ ಹೆಚ್ಚಿರುವುದರಿಂದ ಇದನ್ನು ಮಧುಮೇಹಿಗಳು ಹೆಚ್ಚು ತಿನ್ನುವಂತಿಲ್ಲ. ಇದು ಹೊಟ್ಟೆಗೆ ಹೋಗುತ್ತಿದ್ದಂತೆ ತ್ವರಿತವಾಗಿ ರಕ್ತ ಸೇರಿ, ಅಲ್ಲಿನ ಸಕ್ಕರೆಯ ಮಟ್ಟವನ್ನು ಏರಿಸುತ್ತದೆ. ಹಾಗಾಗಿ ಮಧುಮೇಹ-ಪೂರ್ವದ ಸ್ಥಿತಿಯಲ್ಲಿ ಇದ್ದವರಿಗೂ ಇದನ್ನು ತೀರಾ ಮಿತವಾಗಿಯೇ ತಿನ್ನುವುದಕ್ಕೆ ವೈದ್ಯರು ಸೂಚಿಸುತ್ತಾರೆ.

ಇದನ್ನೂ ಓದಿ: Cinnamon Health Benefits: ದಾಲ್ಚಿನ್ನಿಯಲ್ಲಿದೆ ಚಿನ್ನದಂಥಾ ಆರೋಗ್ಯಕಾರಿ ಗುಣ!

Continue Reading

ಆರೋಗ್ಯ

Cinnamon Health Benefits: ದಾಲ್ಚಿನ್ನಿಯಲ್ಲಿದೆ ಚಿನ್ನದಂಥಾ ಆರೋಗ್ಯಕಾರಿ ಗುಣ!

ತೂಕ ಇಳಿಕೆ, ಹೃದಯದ ಆರೋಗ್ಯದಂತಹ ಹಲವು ಆರೋಗ್ಯಕಾರಿ ಪ್ರಯೋಜನಗಳನ್ನು (Cinnamon Health Benefits) ದಾಲ್ಚಿನ್ನಿ ಮೂಲಕ ಪಡೆಯಬಹುದು. ಅವು ಯಾವುವು ಅಂತ ನೋಡೋಣ ಬನ್ನಿ.

VISTARANEWS.COM


on

Edited by

Cinnamon health benefits
Koo

ದಾಲ್ಚಿನ್ನಿ ಅಥವಾ ಚಕ್ಕೆ (Cinnamon) ಎಲ್ಲರ ಅಡುಗೆಮನೆಯಲ್ಲಿರುತ್ತದೆ. ಆದರೆ ಇದನ್ನು ಬಿರಿಯಾನಿ ಹಾಗೂ ಪಲಾವ್‌ ಮಾಡುವಾಗ ಉಪಯೋಗಿಸುವುದು (Cinnamon uses) ಬಿಟ್ಟರೆ ಇದರ ಇತರ ಆರೋಗ್ಯ ಲಾಭಗಳನ್ನು (Cinnamon benefits) ತಿಳಿದವರು ವಿರಳ. ದಾಲ್ಚಿನ್ನಿ ಅಥವಾ ಚಕ್ಕೆಯನ್ನು ಸಾಂಪ್ರದಾಯಿಕ ಚೈನೀಸ್‌ ಔಷಧ ಹಾಗೂ ಆಯುರ್ವೇದದಲ್ಲೂ ವಿವಿಧ ರೀತಿಯ ರೋಗಗಳನ್ನು ನಿವಾರಿಸಲು ಬಳಸಲಾಗುತ್ತದೆ. ಒಣ ದಾಲ್ಚಿನ್ನಿ ಎಲೆಗಳು ಮತ್ತು ತೊಗಟೆ ಮಸಾಲೆಗಳ ರೂಪದಲ್ಲಿ ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಆಹಾರದಲ್ಲಿ ದಾಲ್ಚಿನ್ನಿ ಬಳಕೆಯು ರಕ್ತವನ್ನು ಸ್ವಚ್ಛಗೊಳಿಸುತ್ತದೆ, ತೂಕವನ್ನು ಕಡಿಮೆ ಮಾಡುತ್ತದೆ. ಹಾಗೆಯೇ ಅನೇಕ ರೋಗಗಳಿಂದ ದೂರವಿರಿಸುತ್ತದೆ. ಇಷ್ಟೇ ಅಲ್ಲದೆ ಮೈಗ್ರೇನ್​ನಂತಹ ತಲೆನೋವಿಗೂ ಪರಿಹಾರವನ್ನು ನೀಡುತ್ತದೆ. ಇದಲ್ಲದೆ ಇನ್ನೂ ಹಲವು ಆರೋಗ್ಯಕಾರಿ ಪ್ರಯೋಜನಗಳನ್ನು (Cinnamon Health Benefits) ದಾಲ್ಚಿನ್ನಿ ಮೂಲಕ ಪಡೆಯಬಹುದು. ಅವು ಯಾವುವು ಅಂತ ನೋಡೋಣ ಬನ್ನಿ.

ನೆನಪಿನ ಶಕ್ತಿ ಹೆಚ್ಚಳ

ಚಕ್ಕೆ ಅಥವಾ ದಾಲ್ಚಿನ್ನಿಯ ಪರಿಮಳ ನಮ್ಮ ಜ್ಞಾನಗ್ರಹಣ ಕ್ರಿಯೆ ಮತ್ತು ಸ್ಮರಣೆಯನ್ನು ಹೆಚ್ಚಿಸುತ್ತದೆ ಎಂದು ಸೈಂಟಿಫಿಕ್‌ ಅಧ್ಯಯನಗಳಲ್ಲಿ ತಿಳಿದುಬಂದಿದೆ. ಅಷ್ಟೇ ಅಲ್ಲದೇ ಮ್ಯಾಂಗನೀಸ್‌, ಫೈಬರ್, ಐರನ್‌ ಹಾಗೂ ಕ್ಯಾಲ್ಶಿಯಂ ಅಂಶವನ್ನು ದಾಲ್ಚಿನ್ನಿ ಅಥವಾ ಚಕ್ಕೆ ಅಧಿಕ ಪ್ರಮಾಣದಲ್ಲಿ ಹೊಂದಿರುತ್ತದೆ.

ಸಂಧಿವಾತದ ನೋವಿಗೆ ಔಷಧ

ಪ್ರತಿದಿನ ಅರ್ಧ ಟೀ ಸ್ಪೂನ್‌ ಚಕ್ಕೆಯನ್ನು ಒಂದು ಟೇಬಲ್‌ ಸ್ಪೂನ್‌ ಜೇನುತುಪ್ಪದ ಜತೆಗೆ ಸೇರಿಸಿ ಪ್ರತಿದಿನ ಬೆಳಗ್ಗೆ ತಿಂಡಿಗೂ ಮುನ್ನ ಸೇವಿಸಿದರೆ ಒಂದು ವಾರದ ಬಳಿಕ ಆರ್ಥೈಟಿಸ್‌ ನೋವಿಗೆ ಗಮನಾರ್ಹ ಪರಿಹಾರವನ್ನು ನೀಡುತ್ತದೆ ಎಂದು ಕೋಪೆನ್‌ಹೇಗನ್‌ ವಿವಿಯಲ್ಲಿ ರೋಗಿಗಳ ಮೇಲೆ ನಡೆಸಿದ ಅಧ್ಯಯನದಲ್ಲಿ ತಿಳಿದುಬಂದಿದೆ.

ಮಧುಮೇಹ ನಿಯಂತ್ರಣ

ರಕ್ತದಲ್ಲಿನ ಸಕ್ಕರೆ ಮಟ್ಟ ಸಮತೋಲನದಲ್ಲಿ ಇಡಬೇಕಾದರೆ ದಾಲ್ಚಿನ್ನಿ ಎಣ್ಣೆ ಬಳಕೆ ಮಾಡಬಹುದು. ಇದರಲ್ಲಿರುವ ಹಲವಾರು ಅಂಶಗಳು ಮಧುಮೇಹ ನಿಯಂತ್ರಿಸಲು ಸಹಕಾರಿ. ದಾಲ್ಚಿನ್ನಿ ಎಣ್ಣೆಯು ಗ್ಲೂಕೋಸ್ ಸಹಿಷ್ಣುತೆಯನ್ನು ಸುಧಾರಣೆ ಮಾಡುತ್ತದೆ. ಟೈಪ್ 2 ಮಧುಮೇಹಕ್ಕೆ ಇದು ಒಳ್ಳೆಯದು.

ಜೀರ್ಣ ಸಮಸ್ಯೆ

ಜೀರ್ಣಾಂಗ ವ್ಯವಸ್ಥೆಯ ಸಮಸ್ಯೆಗಳು ಕಂಡು ಬರುತ್ತಿದ್ದರೆ, ಸ್ವಲ್ಪ ದಾಲ್ಚಿನ್ನಿ ಪುಡಿಯನ್ನು ಒಂದು ಚಮಚ ಜೇನುತುಪ್ಪದೊಂದಿಗೆ ಬೆರೆಸಿ ತಿನ್ನಿರಿ. ಇದರಿಂದ ಹೊಟ್ಟೆಯ ಆಮ್ಲೀಯತೆ ನಿವಾರಣೆಯಾಗುತ್ತದೆ. ಅಲ್ಲದೆ, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

ತೂಕ ಇಳಿಕೆ

ದಾಲ್ಚಿನ್ನಿ ನಿಮ್ಮ ಹೆಚ್ಚುತ್ತಿರುವ ತೂಕವನ್ನು ಕಡಿಮೆ ಸಹಾಯ ಮಾಡುತ್ತದೆ. ಇದಕ್ಕಾಗಿ, ಉಪಾಹಾರಕ್ಕೆ ಅರ್ಧ ಘಂಟೆಯ ಮೊದಲು ಒಂದು ಟೀ ಚಮಚ ದಾಲ್ಚಿನ್ನಿ ಪುಡಿಯನ್ನು ಬೆರೆಸಿ ಕುದಿಸಿ. ನಂತರ ಅದನ್ನು ಒಂದು ಕಪ್‌ನಲ್ಲಿ ಹಾಕಿ ಮತ್ತು ಎರಡು ಚಮಚ ಜೇನುತುಪ್ಪವನ್ನು ಬೆರೆಸಿ ಕುಡಿಯಿರಿ. ರಾತ್ರಿಯಲ್ಲಿ ಮಲಗುವ ಮೊದಲೇ ಈ ಪ್ರಕ್ರಿಯೆಯನ್ನು ಪುನರಾವರ್ತಿಸಿ. ದಾಲ್ಚಿನ್ನಿ ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ.

ಹೃದಯದ ಆರೋಗ್ಯ

ದಾಲ್ಚಿನ್ನಿ ನಿಮ್ಮ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಇದಕ್ಕಾಗಿ ದಾಲ್ಚಿನ್ನಿ ಪುಡಿ ಮತ್ತು ಜೇನು ಪೇಸ್ಟ್ ತಯಾರಿಸಿ ರೊಟ್ಟಿ ಜೊತೆ ತಿನ್ನಿರಿ. ಇದು ಅಪಧಮನಿಗಳಲ್ಲಿ ಕೊಲೆಸ್ಟ್ರಾಲ್ ಅನ್ನು ಸಂಗ್ರಹಿಸುವುದಿಲ್ಲ. ಹಾಗೆಯೇ ಇದು ಹೃದಯ ಸಂಬಂಧಿತ ಕಾಯಿಲೆಗಳ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಹೃದ್ರೋಗ ಹೊಂದಿರುವ ಜನರಿಗೆ, ಈ ಪರಿಹಾರ ರಾಮಬಾಣವಾಗಿದೆ.

ಚರ್ಮದ ಸಮಸ್ಯೆ ನಿವಾರಣೆ

ಚರ್ಮದಲ್ಲಿ ತುರಿಕೆ ಮುಂತಾದ ಸಮಸ್ಯೆಗಳು ಉಂಟಾದರೆ, ದಾಲ್ಚಿನ್ನಿ ಪುಡಿಯಲ್ಲಿ ಜೇನುತುಪ್ಪವನ್ನು ಬೆರೆಸಿ ಪೇಸ್ಟ್ ಮಾಡಿ ತುರಿಕೆ ಇರುವಲ್ಲಿ ಹಚ್ಚಿ. ಒಣಗಿದ ಬಳಿಕ ತೊಳೆಯಿರಿ.

ಇದನ್ನೂ ಓದಿ: Clove Health Benefits: ಲವಂಗದಲ್ಲಿ ನಿಮ್ಮ ದೇಹದ ಪ್ರತಿ ಅಂಗಕ್ಕೂ ಆರೋಗ್ಯವಿದೆ!

Continue Reading

ಆರೋಗ್ಯ

Ridge Gourd Benefits: ಹೀರೆಕಾಯಿ ರುಚಿಕರ ಮಾತ್ರವಲ್ಲ, ಪೋಷಕಾಂಶಗಳ ಮೂಲವೂ ಹೌದು

ಹಲವಾರು ರೀತಿಯ ಖನಿಜಗಳು, ಸೂಕ್ಷ್ಮ ಪೋಷಕಾಂಶಗಳು, ನಾರು ಸೇರಿದಂತೆ ಬಗೆಬಗೆಯ ಸತ್ವಗಳು ಹೀರೆಕಾಯಿ (Ridge Gourd benefits) ತಿನ್ನುವುದರಿಂದ ದೊರೆಯುತ್ತದೆ. ಆರೋಗ್ಯಕರ ಅಂಶಗಳು ಬಹಳಷ್ಟಿವೆ ಹೀರೆಕಾಯಿಯಲ್ಲಿ.

VISTARANEWS.COM


on

Edited by

Ridge Gourd Benefits
Koo

ಹೀರೆಕಾಯಿ, ಸೋರೆಕಾಯಿ, ಗೋರಿಕಾಯಿ ಮುಂತಾದ ಹತ್ತು ಹಲವು ದೇಸಿ ತರಕಾರಿಗಳು ಭಾರತೀಯ ಅಡುಗೆಗಳ ರುಚಿ, ಘಮ ಹಾಗೂ ಆರೋಗ್ಯವನ್ನು ಹೆಚ್ಚಿಸುತ್ತಿವೆ. ಸಮೀಪದ ಯಾವುದೇ ತರಕಾರಿ ಅಂಗಡಿಗಳಲ್ಲಿ ಲಭ್ಯವಾಗುವ ಇವು ಗ್ರಾಹಕರ ಇಷ್ಟದ ಆಲ್‌ಲೈನ್‌ ಆರ್ಡರ್‌ಗಳ ಮೂಲಕವೂ ಮನೆ ಬಾಗಿಲು ತಲುಪುತ್ತವೆ. ಹೀರೆಕಾಯಿಯ (Ridge Gourd benefits) ಉದಾಹರಣೆಯನ್ನೇ ತೆಗೆದುಕೊಂಡರೆ, ತೊವ್ವೆ, ಗೊಜ್ಜು, ಪಲ್ಯ, ಕೂಟುಗಳಿಂದ ಹಿಡಿದು, ಹೀರೆ ಸಿಪ್ಪೆಯ ಚಟ್ನಿ, ಹೀರೆಕಾಯಿ ಬೋಂಡಾ ಸೇರಿದಂತೆ ಬಗೆಬಗೆಯ ವ್ಯಂಜನಗಳಿಗೆ ಒದಗಿ ಬರುವ ಈ ತರಕಾರಿ ಪಾಕಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ.

Ridges Gourd stock with seed

ಇದರ ರುಚಿ, ಘಮಗಳು ಬರೀ ಜಿಹ್ವೆಯನ್ನು ತಣಿಸಿದರೆ ಸಾಕೇ? ತಿಂದಿದ್ದಕ್ಕೆ ಆರೋಗ್ಯಕ್ಕೂ ಏನಾದರೂ ಲಾಭವಾಗಬೇಕಲ್ಲ. ಅಂಥ ಸದ್ಗುಣಗಳು ಏನಿವೆ ಹೀರೆ ಕಾಯಿಯಲ್ಲಿ? ಆರೋಗ್ಯಕರ ಅಂಶಗಳು ಬಹಳಷ್ಟಿವೆ ಹೀರೆಕಾಯಿಯಲ್ಲಿ. ಹಲವಾರು ರೀತಿಯ ಖನಿಜಗಳು, ಸೂಕ್ಷ್ಮ ಪೋಷಕಾಂಶಗಳು, ನಾರು ಸೇರಿದಂತೆ ಹಲವಾರು ಸತ್ವಗಳು ಹೀರೆಕಾಯಿ (Ridge Gourd benefits) ತಿನ್ನುವುದರಿಂದ ದೊರೆಯುತ್ತದೆ. ಏನೇನಿವೆ ಇದರಲ್ಲಿ ಎಂದು ನೋಡಿದರೆ-

Ridge gourd

ವಿಟಮಿನ್‌ಗಳು

ಇದರಲ್ಲಿರುವ ವಿಟಮಿನ್‌ ಎ ಅಂಶಗಳು ಕಣ್ಣು ಮತ್ತು ಚರ್ಮದ ಆರೋಗ್ಯಕ್ಕೆ ಒಳ್ಳೆಯದು. ಇದರಲ್ಲಿ ಸಿ ವಿಟಮಿನ್‌ ಸಹ ಹೇರಳವಾಗಿದ್ದು, ದೇಹದ ರೋಗ ನಿರೋಧಕ ಶಕ್ತಿಯನ್ನು ಚುರುಕುಗೊಳಿಸುತ್ತದೆ. ಹೀರೆಕಾಯಿಯಲ್ಲಿ ಫೋಲೇಟ್‌ ಸೇರಿದಂತೆ ಹಲವು ರೀತಿಯ ಬಿ ವಿಟಮಿನ್‌ಗಳಿವೆ. ಭ್ರೂಣದ ಮೆದುಳು ಹಾಗೂ ಬೆನ್ನು ಮೂಳೆಗಳ ಬೆಳವಣಿಗೆಗೆ ಅಗತ್ಯವಾಗಿ ಬೇಕಾದ ಅಂಶ ಫೋಲೇಟ್‌. ಹಾಗಾಗಿ ಗರ್ಭಿಣಿಯರಿಗೂ ಹಿತ-ಮಿತವಾಗಿ ಹೀರೆಕಾಯಿ ಸೇವನೆ ಒಳ್ಳೆಯದು

Green Ridge Gourd on Shop

ಕ್ಯಾಲರಿ ಕಡಿಮೆ

ದೇಹಕ್ಕೆ ಹೆಚ್ಚಿನ ಕ್ಯಾಲರಿ ತುರುಕದೆ, ಕಡಿಮೆ ಕ್ಯಾಲರಿಯಲ್ಲಿ ಹೆಚ್ಚಿನ ಸತ್ವಗಳನ್ನು ನೀಡುವಂಥ ತರಕಾರಿಯಿದು. ನಾರಿನಂಶ ಹೇರಳವಾಗಿ ಇರುವುದರಿಂದ, ಬೇಗನೆ ಹೊಟ್ಟೆ ತುಂಬಿದ ಭಾವನೆ ನೀಡುತ್ತದೆ ಮತ್ತು ದೀರ್ಘಕಾಲದವರೆಗೆ ಹಸಿವಾಗದಂತೆ ತಡೆಯುತ್ತದೆ. ಹಾಗಾಗಿ ತೂಕ ಇಳಿಸುವವರಿಗೆ ಅನುಕೂಲಕರವಾದ ತರಕಾರಿಯಿದು. ಮಾತ್ರವಲ್ಲ, ನಾರು ಸಾಕಷ್ಟು ಇರುವುದರಿಂದ ಜೀರ್ಣಾಂಗಗಳ ಸಾಮರ್ಥ್ಯವನ್ನು ಹೆಚ್ಚಿಸಿ, ಮಲಬದ್ಧತೆಯನ್ನು ದೂರ ಮಾಡುತ್ತದೆ.

Hands presenting a heart model

ಹೃದಯಕ್ಕೆ ಪೂರಕ

ನಾರಿನಂಶ ಹೆಚ್ಚಿರುವ ತರಕಾರಿಗಳು ರಕ್ತದಲ್ಲಿ ಕೊಬ್ಬು ಶೇಖರವಾಗದಂತೆ ತಡೆಯುತ್ತವೆ. ಈ ಕೆಲಸದಲ್ಲಿ ಹೀರೆಕಾಯಿ ಸಹ ಮುಂದು. ಜೊತೆಗೆ, ಇದರಲ್ಲಿರುವ ಪೊಟಾಶಿಯಂ ಅಂಶವು ರಕ್ತದೊತ್ತಡ ಏರದಂತೆ ಕಾಪಾಡುವಲ್ಲಿ ಸಹಕಾರಿ. ಹಾಗಾಗಿ ಒಟ್ಟಾರೆ ಹೃದಯದ ಆರೋಗ್ಯಕ್ಕೆ ಪೂರಕವಾದ ಅಂಶಗಳು ಹೀರೆಕಾಯಿಯಲ್ಲಿವೆ.

ಉತ್ಕರ್ಷಣ ನಿರೋಧಕಗಳು

ದೇಹದಲ್ಲಿ ಉರಿಯೂತ ಹೆಚ್ಚಿದರೆ ರೋಗಗಳೂ ಹೆಚ್ಚಾದಂತೆ. ಇವುಗಳನ್ನು ತಡೆಯಲು ಉತ್ಕರ್ಷಣ ನಿರೋಧಕಗಳು ಬೇಕು. ಉರಿಯೂತ ನಿವಾರಕ ಫ್ಲೆವನಾಯ್ಡ್‌ಗಳು ಹೀರೆಕಾಯಿಯಲ್ಲಿ ಸಾಕಷ್ಟಿವೆ. ಬೀಟಾ ಕ್ಯಾರೊಟಿನ್‌ ಸಹ ಇದ್ದು ದೇಹದ ಒಟ್ಟಾರೆ ಸ್ವಾಸ್ಥ್ಯ ಸುಧಾರಣೆಗೆ ಈ ತರಕಾರಿ ಪೂರಕವಾಗಿದೆ

Woman with Diabetes Measuring Blood Sugar Level at Home

ಮಧುಮೇಹಿಗಳಿಗೆ ಒಳ್ಳೆಯದು

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಈ ತರಕಾರಿ ನೆರವು ನೀಡುತ್ತದೆ. ಹಾಗಾಗಿ ಮಧುಮೇಹದಿಂದ ಬಳಲುವವರಿಗೂ ಹೀರೆಕಾಯಿ ಸೇವನೆ ನಿಷೇಧವೇನಿಲ್ಲ. ಇದರ ಗ್ಲೈಸೆಮಿಕ್‌ ಸೂಚ್ಯಂಕ ಕಡಿಮೆ ಇರುವುದರಿಂದ ಇದನ್ನು ತಿಂದ ಬಳಿಕ, ರಕ್ತದಲ್ಲಿ ಸಕ್ಕರೆಯ ಮಟ್ಟದಲ್ಲಿ ಏರಿಳಿತ ಆಗುವುದಿಲ್ಲ.

ನೀರಿನಿಂದ ಕೂಡಿದೆ

ಕೆಲವು ಹಣ್ಣು ತರಕಾರಿಗಳಲ್ಲಿ ನೀರಿನಂಶ ಭರಪೂರ ಇರುತ್ತದೆ. ಅಂಥವುಗಳಲ್ಲಿ ಹೀರೆಕಾಯಿಯೂ ಒಂದು. ಹೀಗೆ ನೀರಿರುವ ತರಕಾರಿಗಳು ಸಾಮಾನ್ಯವಾಗಿ ಜೀರ್ಣಾಂಗಗಳನ್ನು ಉದ್ದೀಪಿಸುತ್ತವೆ. ಜೊತೆಗೆ ನಾರೂ ಇರುವುದರಿಂದ, ದೇಹಕ್ಕೆ ಬೇಕಾದಂತೆ ನೀರನ್ನೊದಗಿಸಿ, ಪಚನ ಕ್ರಿಯೆಯನ್ನು ಸರಾಗವಾಗಿಸಿ, ದೇಹದ ಉಷ್ಣತೆಯನ್ನು ನಿಯಂತ್ರಿಸಿ, ರಕ್ತ ಪರಿಚಲನೆಗೂ ನೆರವಾಗುತ್ತವೆ

Illustration of the back bones.

ಮೂಳೆಗಳಿಗೆ ಬಲ

ನಮ್ಮ ಮೂಳೆಗಳು ಮತ್ತು ಹಲ್ಲುಗಳನ್ನು ಸದೃಢಗೊಳಿಸಲು ಅಗತ್ಯವಾದ ಕ್ಯಾಲ್ಶಿಯಂ ಮತ್ತು ಫಾಸ್ಫರಸ್‌ ಖನಿಜಗಳು ಹೀರೆಕಾಯಿಯಲ್ಲಿವೆ. ಹಾಗಾಗಿ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲಾ ವಯೋಮಾನದವರಿಗೂ ಬೇಕಾದಂಥ ತರಕಾರಿಯಿದು. ಅದರಲ್ಲೂ ಮೂಳೆ ಸಾಂದ್ರತೆ ಕಡಿಮೆ ಇರುವವರಿಗೆ ಇದು ಅಗತ್ಯವಾಗಿ ಬೇಕು.

ಇದನ್ನೂ ಓದಿ: Brinjal Health Benefits: ಬದನೆ ಅಂತ ಮೂಗು ಮುರಿಯಬೇಡಿ, ಆರೋಗ್ಯ ಲಾಭ ತಿಳಿದು ನೋಡಿ!

Continue Reading

ಆರೋಗ್ಯ

Brinjal Health Benefits: ಬದನೆ ಅಂತ ಮೂಗು ಮುರಿಯಬೇಡಿ, ಆರೋಗ್ಯ ಲಾಭ ತಿಳಿದು ನೋಡಿ!

ಬದನೆ ಎಂದರೆ ಮೂಗು ಮುರಿಯುವವರೇ ಹೆಚ್ಚು. ಆದರೆ ಇದರ ಆರೋಗ್ಯಕಾರಿ ಪ್ರಯೋಜನಗಳನ್ನು (brinjal health benefits) ತಿಳಿದರೆ ನೀವು ಮುಂದೆಂದೂ ಇದನ್ನು ಸೇವಿಸದೇ ಇರಲಾರಿರಿ.

VISTARANEWS.COM


on

Edited by

Brinjal
Koo

ತುಂಬಾ ಮಂದಿ ಬದನೆಕಾಯಿಯನ್ನು (brinjal) ಇಷ್ಟಪಡುವುದಿಲ್ಲ. ಅದ್ಯಾಕೋ ಗೊತ್ತಿಲ್ಲ. ಬದನೆ ಸಾಂಬಾರ್‌ ಎಂದರೆ ಊಟ ಮಾಡದೇ ಇರುವವರೂ ಇದ್ದಾರೆ. ಆದರೆ ಬದನೆಕಾಯಿಯ ಸೇವನೆಯಿಂದ ಆಗುವ ಆರೋಗ್ಯ ಲಾಭಗಳು ಒಂದೆರಡಲ್ಲ. ಅತ್ಯಗತ್ಯವಾಗಿರುವ ಖನಿಜಗಳು, ಜೀವಸತ್ವಗಳು ಮತ್ತು ನಾರಿನಾಂಶ ಬದನೆಯಲ್ಲಿದೆ. ಇದು ನಿಮ್ಮ ತ್ವಚೆಯನ್ನು ಬಲವಾಗಿಡುತ್ತದೆ. ಹಾಗೂ ವಯಸ್ಸಿನ ಕಳೆಯನ್ನು ತೆಗೆಯಲು ನಿಮ್ಮ ಆಹಾರದಲ್ಲಿ ನಿಯಮಿತವಾಗಿ ಸೇವಿಸಬಹುದು. ನೀವು ಬದನೆಯ ಆರೋಗ್ಯ ಪ್ರಯೋಜನಗಳನ್ನು (brinjal health benefits) ತಿಳಿದರೆ ಬದನೆ ಆರೋಗ್ಯಕರವೇ ಅಲ್ಲವೇ ಎನ್ನುವ ಪ್ರಶ್ನೆಗೆ ನೀವೇ ಉತ್ತರ ಕಂಡುಕೊಳ್ಳಬಹುದು.

ಹೃದಯದ ಆರೋಗ್ಯ ಕಾಪಾಡುತ್ತದೆ

ಕೊಲೆಸ್ಟ್ರಾಲ್ ಮಟ್ಟವನ್ನು ನಿಯಮಿತವಾಗಿ ಬದನೆ ಸೇವನೆಯ ಮೂಲಕ ಕಡಿಮೆ ಮಾಡಬಹುದು. ಇದು ನಿಮ್ಮ ರಕ್ತದೊತ್ತಡ ನಿರ್ವಹಿಸಲು ಸಹ ಸಹಾಯ ಮಾಡುತ್ತದೆ. ಸಾಧಾರಣ ಕೊಲೆಸ್ಟ್ರಾಲ್ ಮಟ್ಟ ಮತ್ತು ರಕ್ತದೊತ್ತಡ ನಿಯಂತ್ರಣ ಹೃದಯ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತವೆ.

ಮಿದುಳಿನ ಕಾರ್ಯ ಚುರುಕು

ಇದು ಬದನೆ ಸೇವನೆಯ ಪ್ರಮುಖ ಆರೋಗ್ಯ ಪ್ರಯೋಜನಗಳಲ್ಲಿ ಒಂದಾಗಿದೆ. ಬದನೆ, ಯಾವುದೇ ಹಾನಿಯಿಂದ ಸುರಕ್ಷಿತವಾಗಿ ಕೋಶಪೊರೆಯನ್ನು ರಕ್ಷಿಸಲು ಸಹಾಯ ಮಾಡುವ ಫೈ ಟೋನ್ಯೂಟ್ರಿಯೆಂಟ್ಸ್ ಅನ್ನು ಹೊಂದಿದೆ. ಇದು ಆರೋಗ್ಯಕರ ನೆನಪಿನ ಶಕ್ತಿಯನ್ನು ಸುಧಾರಿಸಲೂ ಸಹಾಯ ಮಾಡುತ್ತದೆ.

ಫ್ರೀ ರಾಡಿಕಲ್ ಜೊತೆ ಹೋರಾಡುತ್ತದೆ

ರಾಡಿಕಲ್‌ಗಳು ದೇಹದಲ್ಲಿರುವ ಜೀವಕೋಶಗಳನ್ನು ಹಾನಿಗೊಳಗಾಗಿಸುತ್ತವೆ. ಬದನೆ ಆಂಟಿ ಆಕ್ಸಿಡೆಂಟ್ ಅಂಶಗಳನ್ನು ಹೊಂದಿರುವುದರಿಂದ ರಾಡಿಕಲ್ಸ್ ವಿರುದ್ಧ ಹೋರಾಡುತ್ತದೆ. ಕ್ಲೊರೋಜೆನಿಕ್ (Chlorogenic) ಆಮ್ಲ, ಬದನೆಯಲ್ಲಿರುವ ಪ್ರಮುಖ ಆಂಟಿ ಆಕ್ಸಿಡೆಂಟ್ ಎಂದು ಪರಿಗಣಿಸಲಾಗುತ್ತದೆ. ಇದು ರಾಡಿಕಲ್ಸ್ ಅನ್ನು ಹೋಗಲಾಡಿಸಿ ರೋಗದಿಂದ ಮುಕ್ತರಾಗಲು ಸಹಾಯ ಮಾಡುತ್ತದೆ.

ಮಿತಿಮೀರಿದ ಕಬ್ಬಿಣಾಂಶ ತೆಗೆದುಹಾಕುತ್ತದೆ

ನಿಯಮಿತವಾಗಿ ಬದನೆ ಸೇವಿಸುವುದರಿಂದ ಇದು ದೇಹದಲ್ಲಿ ಹೆಚ್ಚುವರಿ ಕಬ್ಬಿಣದ ಅಂಶವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದು ಪಾಲಿಸಿಥಿಮಿಯಾ ರೋಗಿಗಳಿಗೆ ಹೆಚ್ಚು ಉಪಯುಕ್ತ. ಬದನೆಯಲ್ಲಿರುವ ನಸುನಿನ್ (Nasunin) ಎಂಬ ಒಂದು ಸಂಯುಕ್ತ ಪ್ರಸ್ತುತ ದೇಹದ ಅತಿಯಾದ ಕಬ್ಬಿಣದ ಅಂಶವನ್ನು ತೆಗೆದುಹಾಕುವಲ್ಲಿ ಸಹಾಯ ಮಾಡುತ್ತದೆ.

ಸೋಂಕುಗಳಿಂದ ಮುಕ್ತಿ

ಸೋಂಕುಗಳಿಂದ ನಿಮ್ಮನ್ನು ದೂರ ಇರಿಸುವ ಸಾಮರ್ಥ್ಯ ಬದನೆಯ ಪ್ರಮುಖ ಆರೋಗ್ಯ ಪ್ರಯೋಜನಗಳಲ್ಲಿ ಒಂದಾಗಿದೆ. ಬದನೆಯಲ್ಲಿ ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುವ ವಿಟಮಿನ್ ಸಿ ಅಂಶ ಅಧಿಕ ಪ್ರಮಾಣದಲ್ಲಿದೆ. ಈ ಪ್ರಯೋಜನವನ್ನು ಅನುಭವಿಸಲು ನಿಮ್ಮ ಆಹಾರದ ಒಂದು ಭಾಗವಾಗಿ ಬದನೆಯನ್ನು ಸೇವಿಸಿ.

ರೋಗ ನಿರೋಧಕತೆ ಸುಧಾರಣೆ

ಬದನೆ ನಿಮ್ಮ ರೋಗ ನಿರೋಧಕ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ಸಹಾಯ ಮಾಡುತ್ತದೆ. ನಿಮ್ಮನ್ನು ಆರೋಗ್ಯಕರ ಮತ್ತು ಸದೃಢರಾಗಿರುವಂತೆ ಮಾಡುತ್ತದೆ. ಆಂಟಿ ಆಕ್ಸಿಡೆಂಟ್, ಪೋಷಕಾಂಶಗಳು ಮತ್ತು ಸಿ ಜೀವಸತ್ವದ ಉಪಸ್ಥಿತಿ ಬದನೆಯನ್ನು ಇನ್ನಷ್ಟು ಪ್ರಯೋಜನಕಾರಿಯನ್ನಾಗಿಸಿವೆ.

ಇದನ್ನೂ ಓದಿ: Health Tips: ಶೀತ, ನೆಗಡಿಯಾದಾಗ ಈ ಎಲ್ಲ ಹಣ್ಣುಗಳಿಂದ ದೂರವಿರುವುದು ಒಳ್ಳೆಯದು!

ಧೂಮಪಾನ ತ್ಯಜಿಸಲು ಸಹಾಯ

ನೀವು ಧೂಮಪಾನ ಬಿಡಲು ನಿಕೊಟೀನ್ ಬದಲಾವಣೆಯ ಚಿಕಿತ್ಸೆಯ ನೈಸರ್ಗಿಕ ವಿಧಾನವನ್ನು ಹುಡುಕುತ್ತಿದ್ದರೆ, ಬದನೆ ಅತ್ಯುತ್ತಮ ಆಯ್ಕೆ. ಈ ಏಕೆಂದರೆ ಬದನೆಯಲ್ಲಿ ನಿಕೋಟಿನ್ ಅಂಶ ಹೇರಳವಾಗಿದೆ.

ಕೂದಲಿನ ಆರೈಕೆ

ಬದನೆ ಸೇವಿಸುವುದರಿಂದ ನಿಮ್ಮ ನೆತ್ತಿ ತೇವಾಂಶದಿಂದ ಕೂಡಿರಲು ಸಹಾಯ ಮಾಡುತ್ತದೆ. ಬದನೆಯಲ್ಲಿರುವ ಕೆಲವು ಕಿಣ್ವಗಳು ಕೂದಲಿನ ರಕ್ಷಕರಂತೆ ಕೆಲಸ ಮಾಡುತ್ತವೆ. ಈ ಕೂದಲು ಬೆಳವಣಿಗೆ ಉಂಟು ಮಾಡುತ್ತದೆ ಮತ್ತು ನಿಮ್ಮ ಕೂದಲಿನ ಆರೋಗ್ಯಕರ ವಿನ್ಯಾಸ ನಿರ್ವಹಿಸಲು ಸಹಾಯಕವಾಗಿದೆ.

ಚರ್ಮದಲ್ಲಿ ತೇವಾಂಶ

ಇದು ಬದನೆಯ ಆರೋಗ್ಯ ಪ್ರಯೋಜನಗಳಲ್ಲಿ ಒಂದಾಗಿದೆ. ಬದನೆಯಲ್ಲಿ ಗಣನೀಯ ಪ್ರಮಾಣದಲ್ಲಿ ನೀರಿನ ಅಂಶವಿದೆ. ಇದು ನಿಮ್ಮ ತ್ವಚೆಯನ್ನು ಅಗತ್ಯದಷ್ಟು ತೇವಾಂಶಯುಕ್ತವಾಗಿಡಲು ಸಹಾಯ ಮಾಡುತ್ತದೆ. ಇದು ನಿಮ್ಮ ಶುಷ್ಕ ತ್ವಚೆಯಿಂದ ಮುಕ್ತಿ ನೀಡುತ್ತದೆ ಮತ್ತು ಆ ಸಂಬಂಧಿತ ಸಮಸ್ಯೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: Health Tips: ಎಳನೀರು ಒಳ್ಳೆಯದೆಂದು ಕುಡಿಯುವ ಮೊದಲು ಅದರ ಅವಗುಣಗಳೂ ಗೊತ್ತಿರಲಿ!

Continue Reading
Advertisement
Vivek Ramaswamy offering rs 80 lakh to nanny Says media report
ಪ್ರಮುಖ ಸುದ್ದಿ5 hours ago

ಮಕ್ಕಳನ್ನು ನೋಡಿಕೊಳ್ಳುವ ಆಯಾ ಕೆಲಸಕ್ಕೆ 80 ಲಕ್ಷ ರೂ. ಸ್ಯಾಲರಿ ಆಫರ್!

MLC TA Sharavana
ಬೆಂಗಳೂರು5 hours ago

TA Sharavana: ಅನಾಮಿಕರಾಗಿದ್ದ ಜಮೀರ್‌ಗೆ ರಾಜಕೀಯ ಬದುಕು ಕೊಟ್ಟಿದ್ದೇ ಜೆಡಿಎಸ್: ಟಿ.ಎ.ಶರವಣ

Justin Trudeau
ದೇಶ5 hours ago

India Canada Row: ಥಂಡಾ ಹೊಡೆದ ಕೆನಡಾ ಪಿಎಂ! ಭಾರತದೊಂದಿಗೆ ಇನ್ನು ಜಗಳ ಮಾಡಲ್ಲ ಎಂದ ಟ್ರೂಡೋ

Netherlands cricket team
ಕ್ರಿಕೆಟ್6 hours ago

ICC World Cup 2023 : ವಿಶ್ವ ಕಪ್​ನಲ್ಲಿ ಆಡಲಿರುವ ನೆದರ್ಲ್ಯಾಂಡ್ಸ್​​ ತಂಡದ ಬಲವೇನು? ದೌರ್ಬಲ್ಯವೇನು?

Modi and KTR
ದೇಶ6 hours ago

ಎನ್‌ಡಿಎಗೆ ಸೇರಿಸಿಕೊಳ್ಳಿ ಎಂದಿದ್ದ ಕೆಸಿಆರ್; ಮೋದಿ! ಬಿಜೆಪಿ ಜತೆ ಹೋಗಲು ನಮಗೇನು ಹುಚ್ಚು ನಾಯಿ ಕಚ್ಚಿದೆಯಾ; ಕೆಟಿಆರ್

Child dies
ಕರ್ನಾಟಕ6 hours ago

Anekal News: ಮಹಡಿ ಮೇಲಿಂದ ಬಿದ್ದು 2 ವರ್ಷದ ಮಗು ಸಾವು

MB Patil visits america
ಕರ್ನಾಟಕ6 hours ago

MB Patil : ಬೆಂಗಳೂರಿನಲ್ಲಿ 800 ಕೋಟಿ ರೂ. ಹೂಡಲು ಕ್ರಿಪ್ಟನ್ ಸೊಲ್ಯೂಷನ್ಸ್ ಒಲವು: ಎಂ.ಬಿ. ಪಾಟೀಲ್

Top 10 news
ಟಾಪ್ 10 ನ್ಯೂಸ್7 hours ago

VISTARA TOP 10 NEWS : ಜಾತಿ ಗಣತಿಗೆ ಮೋದಿ ವಿರೋಧ, ಶಿವಮೊಗ್ಗದಲ್ಲಿ ಪೊಲೀಸರಿಗೇ ಬೆದರಿಕೆ ಹಾಕಿದ್ದ ಕಿಡಿಗೇಡಿಗಳು ಮತ್ತಿತರ ದಿನದ ಪ್ರಮುಖ ಸುದ್ದಿಗಳು

Agriculture Minister N Cheluvarayaswamy latest pressmeet at Kalaburagi
ಕರ್ನಾಟಕ7 hours ago

Kalaburagi News: ಮುಂದಿನ ವಾರ ರಾಜ್ಯಕ್ಕೆ ಬರ ಅಧ್ಯಯನ ತಂಡ : ಕೃಷಿ ಸಚಿವ ಚೆಲುವರಾಯಸ್ವಾಮಿ

PM Narenra Modi will stay advaita Ashram where Swami vivekand stayed in 1901
ದೇಶ7 hours ago

PM Narendra Modi: ಸ್ವಾಮಿ ವಿವೇಕಾನಂದರು ತಂಗಿದ್ದ ಆಶ್ರಮದಲ್ಲಿ ಪ್ರಧಾನಿ ಮೋದಿ ವಾಸ್ತವ್ಯ!

7th Pay Commission
ನೌಕರರ ಕಾರ್ನರ್11 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Karnataka bandh Majestic
ಕರ್ನಾಟಕ1 week ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

DCC Bank Recruitment 2023
ಉದ್ಯೋಗ8 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Sphoorti Salu
ಸುವಚನ4 months ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

kpsc recruitment 2023 pdo recruitment 2023
ಉದ್ಯೋಗ3 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Govt employees ssociation
ಕರ್ನಾಟಕ8 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

Rajendra Singh Gudha
ದೇಶ3 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

Village Accountant Recruitment
ಉದ್ಯೋಗ8 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike; Order from Govt
ನೌಕರರ ಕಾರ್ನರ್7 months ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ10 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

The maintenance train finally lifted Metro services as usual
ಕರ್ನಾಟಕ13 hours ago

Namma Metro : ಕೊನೆಗೂ ಲಿಫ್ಟ್ ಆಯ್ತು ಮೆಂಟೈನ್ಸ್‌ ವೆಹಿಕಲ್‌; ಎಂದಿನಂತೆ ಮೆಟ್ರೋ ಓಡಾಟ

BBK Season 10 KicchaSudeep
ಕಿರುತೆರೆ14 hours ago

BBK Season 10 : ಅಕ್ಟೋಬರ್‌ 8 ರಿಂದ ಬಿಗ್‌ ಬಾಸ್‌ ಆಟ; ಚಾರ್ಲಿ ಎಂಟ್ರಿ ಕನ್ಫರ್ಮ್, ಉಳಿದವರು ಯಾರು ?

dina bhavishya
ಪ್ರಮುಖ ಸುದ್ದಿ24 hours ago

Dina Bhavishya : ಈ ರಾಶಿಯವರಿಗೆ ಮಾತೇ ಮುತ್ತು, ಮಾತೇ ಮೃತ್ಯು!

Actor Nagabhushana
ಕರ್ನಾಟಕ2 days ago

Actor Nagabhushana : ಡ್ರಂಕ್‌ ಆ್ಯಂಡ್‌ ಡ್ರೈವ್‌ನಲ್ಲಿ ನಟ ನಾಗಭೂಷಣ್‌ ನೆಗಟಿವ್‌; ವಿಚಾರಣೆಗೆ ಕರೆದ ಪೊಲೀಸರು

Dina Bhavishya
ಪ್ರಮುಖ ಸುದ್ದಿ2 days ago

Dina Bhavishya : ಆಪ್ತರೊಂದಿಗೆ ಮಾಡುವ ವ್ಯಾಪಾರ ನಷ್ಟ ತಂದೀತು ಹುಷಾರ್‌!

Terrorist Attack in Turkey Suicide bomber blows himself near parliament
ಪ್ರಮುಖ ಸುದ್ದಿ2 days ago

Terrorist Attack: ಟರ್ಕಿ ಸಂಸತ್ ಬಳಿ ಆತ್ಮಹತ್ಯಾ ಬಾಂಬ್ ದಾಳಿ, ಸಿಸಿಟಿವಿಯಲ್ಲಿ ಸೆರೆಯಾಯ್ತು ಸ್ಫೋಟದ ಕ್ಷಣಗಳು!

prajwal and yashswini
ಕರ್ನಾಟಕ2 days ago

Actor Nagabhushana : ಆ್ಯಕ್ಟಿಂಗ್‌ ನೋಡಿ ಮೆಚ್ಚಿದವರ ಪಾಲಿಗೆ ಯಮನಾಗಿಬಿಟ್ಟ; ಮೃತ ಕುಟುಂಬಸ್ಥರ ಆಕ್ರೋಶ

Dina Bhavishya
ಪ್ರಮುಖ ಸುದ್ದಿ3 days ago

Dina Bhavishya : ಆಪ್ತರೊಂದಿಗೆ ಅತಿಯಾದ ಸಲುಗೆ ಈ ರಾಶಿಯವರಿಗೆ ಒಳ್ಳೆಯದಲ್ಲ!

dina bhavishya
ಪ್ರಮುಖ ಸುದ್ದಿ4 days ago

Dina Bhavishya : ದಿನ ಪೂರ್ತಿ ಈ ರಾಶಿಯವರಿಗೆ ಟೆನ್ಷನ್‌ ಜತೆಗೆ ಪ್ರೆಶರ್‌

Dina Bhavishya
ಪ್ರಮುಖ ಸುದ್ದಿ5 days ago

Dina Bhavishya : ಈ ರಾಶಿಯವರಿಗೆ ಮನೆಯಲ್ಲೂ ಕಿರಿಕಿರಿ, ಆಫೀಸ್‌ನಲ್ಲೂ ಕಿರಿಕ್‌!

ಟ್ರೆಂಡಿಂಗ್‌