ವಾಷಿಂಗ್ಟನ್: ಅಮೆರಿಕದ (America) ನಾಗರಿಕ ಬಾಹ್ಯಾಕಾಶ ಪರಿಶೋನಧನೆಯಾಗಿರುವ (civil space exploration) ಆರ್ಟಿಮಿಸ್ ಅಕಾರ್ಡ್ಸ್(Artemis Accords)ಗೆ ಈಗ ಭಾರತ ಕೂಡ ಸೇರ್ಪಡೆಯಾಗಿದೆ. ಆರ್ಟಿಮಿಸ್ ಒಪ್ಪಂದ ಎನ್ನುವುದು, ನಾಗರಿಕ ಬಾಹ್ಯಾಕಾಶ ಆವಿಷ್ಕಾರಕ್ಕಾಗಿ ಸಮಾನ ಮನಸ್ಕ ರಾಷ್ಟ್ರಗಳು ಸೇರಿ ಕೆಲಸ ಮಾಡುವ ಕಾರ್ಯತಂತ್ರವಾಗಿದೆ. ಹಾಗಾಗಿ, ಮುಂದಿನ ವರ್ಷದ ಇಂಟರ್‌ನ್ಯಾಷನಲ್ ಸ್ಪೇಸ್ ಸ್ಟೇಷನ್‌ಗೆ ಜಂಟಿ ಕಾರ್ಯಾಚರಣೆಗಾಗಿ ಅಮೆರಿಕದ ನಾಸಾ ( National Aeronautics and Space Administration – NASA) ಹಾಗೂ ಭಾರತದ ಭಾರತೀಯ ಬಾಹ್ಯಾಕಾಶ ಸಂಸೋಧನಾ ಸಂಸ್ಥೆ (Indian Space Research Organisation – ISRO) ಜತೆಗೂಡಿ ಕೆಲಸ ಮಾಡಲಿವೆ ಎಂದು ಶ್ವೇತಭವನವು ಹೇಳಿದೆ.
ಬಾಹ್ಯಾಕಾಶದಲ್ಲಿ, ಭಾರತವು ಆರ್ಟೆಮಿಸ್ ಒಪ್ಪಂದಗಳಿಗೆ ಸಹಿ ಹಾಕುತ್ತಿದೆ ಎಂದು ಘೋಷಿಸಲು ಸಾಧ್ಯವಾಗಲಿದೆ. ಇದು ಎಲ್ಲಾ ಮಾನವಕುಲದ ಪ್ರಯೋಜನಕ್ಕಾಗಿ ಬಾಹ್ಯಾಕಾಶ ಪರಿಶೋಧನೆಗಾಗಿ ಸಾಮಾನ್ಯ ದೃಷ್ಟಿಯನ್ನು ಮುನ್ನಡೆಸುತ್ತದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಜೋ ಬೈಡೆನ್ ನಡುವಿನ ಸಭೆಗೆ ಗಂಟೆಗಳ ಮೊದಲು ಹಿರಿಯ ಆಡಳಿತ ಅಧಿಕಾರಿಯೊಬ್ಬರು ಹೇಳಿದ್ದಾರೆ.
1967ರ ಬಾಹ್ಯಾಕಾಶ ಒಪ್ಪಂದದ (OST) ಆಧಾರದಲ್ಲಿ ಆರ್ಟೆಮಿಸ್ ಒಪ್ಪಂದಗಳು 21ನೇ ಶತಮಾನದಲ್ಲಿ ನಾಗರಿಕ ಬಾಹ್ಯಾಕಾಶ ಪರಿಶೋಧನೆ ಮತ್ತು ಬಳಕೆಗೆ ಮಾರ್ಗದರ್ಶನ ನೀಡಲು ವಿನ್ಯಾಸಗೊಳಿಸಲಾದ ಒಂದು ಕಾರ್ಯಾಚರಣೆಯಾಗಿದೆ. 2025ರ ವೇಳೆಗೆ ಮಾನವರನ್ನು ಚಂದ್ರನತ್ತ ಕಳುಹಿಸಲು ಅಮೆರಿಕ ಕಳುಹಿಸಲು ಪ್ರಯತ್ನ ನಡೆಸಿದೆ. ಜತೆಗೆ, ಮಂಗಳ ಮತ್ತು ಅದರಾಚೆಗೆ ಬಾಹ್ಯಾಕಾಶ ಪರಿಶೋಧನೆಯನ್ನು ವಿಸ್ತರಿಸುವ ಅಂತಿಮ ಗುರಿಯನ್ನು ಇದು ಹೊಂದಿದೆ.
ಈ ಸುದ್ದಿಯನ್ನೂ ಓದಿ: Amit Kshatriya: ಚಂದ್ರನಿಂದ ಮಂಗಳನ ಅಂಗಳಕ್ಕೆ ನಾಸಾ ಯೋಜನೆ; ಭಾರತ ಮೂಲದ ಅಮಿತ್ ಮುಖ್ಯಸ್ಥ
ನಾಸಾ ಮತ್ತು ಇಸ್ರೋ ಈ ವರ್ಷ ಮಾನವ ಬಾಹ್ಯಾಕಾಶ ಯಾನ ಸಹಕಾರಕ್ಕಾಗಿ ಕಾರ್ಯತಂತ್ರವನ್ನು ಅಭಿವೃದ್ಧಿಪಡಿಸುತ್ತಿವೆ ಎಂದು ಅಧಿಕಾರಿ ಹೇಳಿದರು. ಇದಲ್ಲದೆ, 2024ರಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಜಂಟಿ ಕಾರ್ಯಾಚರಣೆಗೆ ನಾಸಾ ಮತ್ತು ಇಸ್ರೋ ಒಪ್ಪಿಕೊಂಡಿವೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿಜ್ಞಾನದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.