Site icon Vistara News

ವಿಸ್ತಾರ TOP 10 NEWS | FIFA ಫುಟ್‌ಬಾಲ್‌ ಚಾಂಪಿಯನ್‌ ಅರ್ಜೆಂಟೀನಾದಿಂದ ಬೆಳಗಾವಿಯಲ್ಲಿ ಅಧಿವೇಶನವರೆಗಿನ ಪ್ರಮುಖ ಸುದ್ದಿಗಳಿವು

vistara-top-10-news FIFA champion Argentina to belagavi session and more news of the day

ಬೆಂಗಳೂರು: ಫಿಫಾ ವಿಶ್ವಕಪ್‌ ರೋಚಕ ಫೈನಲ್‌ ಪಂದ್ಯದಲ್ಲಿ ಅರ್ಜೆಂಟೀನಾ ಜಯಗಳಿಸಿದೆ. ಬೆಳಗಾವಿ ಅಧಿವೇಶನದಲ್ಲಿ ಮೊದಲ ದಿನದಿಂದಲೇ ಹಗ್ಗಜಗ್ಗಾಟ ಆರಂಭವಾಗುವ ಮುನ್ಸೂಚನೆ ಇದೆ, ಬಿಜೆಪಿ ಶಕ್ತಿ ಸಂಗಮದಿಂದ ಅನೇಕ ರಾಜಕೀಯ ಸಂದೇಶ ನೀಡಲಾಗಿದೆ, ಪಾಕಿಸ್ತಾನದ ಯಡವಟ್ಟು ಹೇಳಿಕೆಗಳು ಮುಂದುವರಿದಿವೆ, ಬೆಳಗಾವಿಯಲ್ಲಿ ಮಹಾರಾಷ್ಟ್ರ ಸಂಸದನ ಕಿತಾಪತಿ ತಡೆಯಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎನ್ನುವುದೂ ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.

1. ಬೆಳಗಾವಿ ಅಧಿವೇಶನ | ಕಾಂಗ್ರೆಸನ್ನು ಹಿಂದುತ್ವದ ಚಕ್ರವ್ಯೂಹದಲ್ಲಿ ಸಿಲುಕಿಸಲು ಬಿಜೆಪಿ ತಯಾರಿ; ಸಾವರ್ಕರ್‌ ಭಾವಚಿತ್ರದಿಂದ ಆರಂಭ
ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವಂತೆ ಚುನಾವಣಾ ವಿಷಯಗಳನ್ನು ಜನರ ಮನಸ್ಸಿನಲ್ಲಿ ಗಟ್ಟಿಗೊಳಿಸಲು ಬಿಜೆಪಿ ಈಗಾಗಲೆ ಕಾರ್ಯ ಆರಂಭಿಸಿದ್ದು, ಹಿಂದುತ್ವದ ಚಕ್ರವ್ಯೂಹದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಸಿಲುಕಿಸಲು ಯೋಜನೆ ರೂಪಿಸಿಕೊಂಡಿದೆ. ಬೆಳಗಾವಿಯಲ್ಲಿ ಸೊಮವಾರದಿಂದ ಆರಂಭವಾಗುವ 10 ದಿನಗಳ ಚಳಿಗಾಲದ ಅಧಿವೇಶನ ಆರಂಭಕ್ಕೂ ಮುನ್ನವೇ ಈ ಕುರಿತು ಮುನ್ಸೂಚನೆ ಲಭಿಸುತ್ತಿದ್ದು, ಸಾಮಾನ್ಯವಾಗಿ ಕಾಂಗ್ರೆಸ್‌ ಕೆರಳುವ, ಸ್ವಾತಂತ್ರ್ಯ ವೀರ ಸಾವರ್ಕರ್‌ ಭಾವಚಿತ್ರ ಅನಾವರಣದಿಂದಲೇ ಆರಂಭವಾಗುತ್ತಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

2. ಬಿಜೆಪಿ ಶಕ್ತಿ ಸಂಗಮ | ಸಿದ್ದರಾಮಯ್ಯ ವಿರುದ್ಧ ಯದ್ವಾತದ್ವಾ ವಾಗ್ದಾಳಿ ನಡೆಸಿದ ಸಿ.ಟಿ. ರವಿ, ಬಿ.ಎಲ್‌. ಸಂತೋಷ್‌
ಬಿಜೆಪಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನಡೆದ ರಾಜ್ಯ ಪ್ರಕೋಷ್ಠಗಳ ಸಮಾವೇಶ ʼಶಕ್ತಿ ಸಂಗಮʼ ಕಾರ್ಯಕ್ರಮದಲ್ಲಿ ಬಿಜೆಪಿ ಪ್ರಮುಖರು ಭಾಗಿಯಾಗಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ವಿರುದ್ಧ ವಾಗ್ದಾಳಿ ನಡೆಸಿದರು. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ಮುಖ್ಯವಾಗಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌, ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. ಬಿಜೆಪಿಯಲ್ಲಿ ಬಿ.ಎಸ್‌. ಯಡಿಯೂರಪ್ಪ ಹವಾ ಶಕ್ತಿ ಸಂಗಮದಲ್ಲಿ ಮತ್ತೆ ಸಾಬೀತು: ಸಿ.ಟಿ. ರವಿ ಪರ ಬಿ.ಎಲ್‌. ಸಂತೋಷ್‌ ದನಿ
ವಯಸ್ಸಿನ ಕಾರಣಕ್ಕೆ ಸಿಎಂ ಸ್ಥಾನದಿಂದ ಕೆಳಗೆ ಇಳಿಸಿದರೂ ಮಾಜಿ ಸಿಎಂ ಹಾಗೂ ರಾಷ್ಟ್ರೀಯ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ ಹವಾ ಬಿಜೆಪಿಯಲ್ಲಿ ಕಡಿಮೆಯಾಗಿಲ್ಲ ಎನ್ನುವುದು ಮತ್ತೆ ಸಾಬೀತಾಗಿದೆ. ಇದೇ ವೇಳೆ ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರಿಗೂ ಕಾರ್ಯಕರ್ತರ ಮೆಚ್ಚುಗೆ ದೊರಕಿದ್ದು, ಇದಕ್ಕೆ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಅವರ ಒಪ್ಪಿಗೆಯ ಮುದ್ರೆಯೂ ಸಿಕ್ಕಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. FIFA World Cup | ಮೆಸ್ಸಿಗೆ ವಿಜಯದ ವಿದಾಯ; ಅರ್ಜೆಂಟೀನಾ ತಂಡ ಚಾಂಪಿಯನ್​
ಅತ್ಯಂತ ರೋಚಕವಾಗಿ ನಡೆದ ಫಿಫಾ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಫ್ರಾನ್ಸ್‌ ತಂಡವನ್ನು ಸೋಲಿಸಿದ ಅರ್ಜೆಂಟೀನಾ
ತಂಡ ಚಾಂಪಿಯನ್‌ ಪಟ್ಟ ಅಲಂಕರಿಸಿತು. ಪಂದ್ಯದ ಪೂರ್ಣ ಅವಧಿ 90 ನಿಮಿಷ ಹಾಗೂ ಹೆಚ್ಚುವರಿ 30 ನಿಮಿಷಗಳ ಆಟದಲ್ಲಿ ಎರಡೂ ತಂಡಗಳು 3-3 ಗೋಲ್‌ಗಳನ್ನು ಬಾರಿಸಿದ ಕಾರಣ ಪೆನಾಲ್ಡಿ ಮೊರೆ ಹೋಗಲಾಯಿತು. ಅಲ್ಲಿ 4-2 ಗೋಲ್‌ಗಳ ಅಂತರದಿಂದ ಗೆದ್ದ ಅರ್ಜೆಂಟೀನಾ ತಂಡ ವಿಜಯೋತ್ಸವ ಆಚರಿಸಿತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. ನಮ್ಮೂರ ಶಾಲೆ ನಮ್ಮೆಲ್ಲರ ಶಾಲೆ | ಗುಣಮಟ್ಟದ ಶಿಕ್ಷಣಕ್ಕೆ ದಿಟ್ಟ ಹೆಜ್ಜೆ, ವಿಸ್ತಾರ ನ್ಯೂಸ್‌ ಅಭಿಯಾನಕ್ಕೆ ಅದ್ಧೂರಿ ಚಾಲನೆ
ಎಲ್ಲರಿಗೂ ಗುಣಮಟ್ಟದ ಶಿಕ್ಷಣ ದೊರೆಯಲು ಹಾಗೂ ಸರ್ಕಾರಿ ಶಾಲೆಗಳ ಸುಧಾರಣೆ ಉದ್ದೇಶದೊಂದಿಗೆ ವಿಸ್ತಾರ ನ್ಯೂಸ್‌ ಆರಂಭಿಸಿರುವ “ನಮ್ಮೂರ ಶಾಲೆ ನಮ್ಮೆಲ್ಲರ ಶಾಲೆʼʼ ಅಭಿಯಾನಕ್ಕೆ ಶಿವಮೊಗ್ಗ ಜಿಲ್ಲೆಯಲ್ಲಿ ಅದ್ಧೂರಿ ಚಾಲನೆ ದೊರೆತಿದೆ. ಅಭಿಯಾನದ ಭಾಗವಾಗಿ ಸೊರಬ ತಾಲೂಕಿನ ಕುಪ್ಪಗಡ್ಡೆ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಪ್ರಾಥಮಿಕ ಶಾಲೆಯನ್ನು ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ, ಕುಡಚಿ ಕ್ಷೇತ್ರದ ಶಾಸಕ ಪಿ. ರಾಜೀವ್ ಮತ್ತು ಗ್ರಾಮಸ್ಥರು ಭಾನುವಾರ ದತ್ತು ಸ್ವೀಕರಿಸಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. Border Dispute | ಮಹಾಮೇಳಾವ್‌ಗಾಗಿ ಬೆಳಗಾವಿಗೆ ಬರಲಿದ್ದ ಮಹಾ ಸಂಸದನಿಗೆ ಗಡಿ ಪ್ರವೇಶ ನಿಷೇಧ: ಡಿಸಿ ಖಡಕ್‌ ಆದೇಶ
ಟಿಳಕವಾಡಿಯ ವ್ಯಾಕ್ಸಿನ್ ಡಿಪೋ ಮೈದಾನದಲ್ಲಿ ಸೋಮವಾರ (ಡಿ.೧೯) ನಡೆಯಲಿರುವ ಮಹಾಮೇಳಾವ್ ಕಾರ್ಯಕ್ರಮಕ್ಕೆ ಭಾಗವಹಿಸಲು ಮುಂದಾಗಿದ್ದ ಮಹಾರಾಷ್ಟ್ರ ಗಡಿ ವಿವಾದ (Border Dispute) ಉನ್ನತ ಮಟ್ಟದ ಸಮಿತಿ ಅಧ್ಯಕ್ಷ, ಸಂಸದ ಧೈರ್ಯಶೀಲ್ ಮಾನೆ ಅವರ ಬೆಳಗಾವಿ ಗಡಿ ಪ್ರವೇಶಕ್ಕೆ ನಿಷೇಧ ಹೇರಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. Dehati Aurat | ಮನಮೋಹನ್‌ ಸಿಂಗ್‌ರನ್ನು ಪಾಕ್‌ ಹೀಗಳೆದಾಗ ತಿರುಗೇಟು ನೀಡಿದ್ದು ಮೋದಿ, ಕಾಂಗ್ರೆಸ್‌ ಮೌನ ಪ್ರಶ್ನಿಸಿದ ಬಿಜೆಪಿ
ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಟುಕ ಎಂದು ಕರೆದ ಪಾಕಿಸ್ತಾನ ವಿದೇಶಾಂಗ ವ್ಯವಹಾರಗಳ ಸಚಿವ ಬಿಲಾವಲ್‌ ಭುಟ್ಟೋ ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತದೆ. ಇನ್ನು ಭಾರತದ ಪ್ರಧಾನಿ ಬಗ್ಗೆ ಪಾಕ್‌ ಸಚಿವನ ಉದ್ಧಟತನದ ಹೇಳಿಕೆ ಕುರಿತು ಕಾಂಗ್ರೆಸ್‌ ವಹಿಸಿರುವ ಮೌನವನ್ನು ಬಿಜೆಪಿ ಖಂಡಿಸಿದೆ. ಹಾಗೆಯೇ, “ಆಗಿನ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ರನ್ನು ಪಾಕ್‌ ಪ್ರಧಾನಿ ಆಗಿದ್ದಾಗ ನವಾಜ್‌ ಷರೀಫ್‌, ದೆಹಾತಿ ಔರತ್‌ (ಹಳ್ಳಿ ಹೆಂಗಸು) (Dehati Aurat) ಎಂದು ಹೀಗಳೆದಾಗ ಅವರ ವಿರುದ್ಧ ಮೋದಿ ಆಕ್ರೋಶ ವ್ಯಕ್ತಪಡಿಸಿದ್ದರು” ಎಂದಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: ಅವಿವೇಕಿ ಪಾಕಿಸ್ತಾನದ ಮತ್ತೊಂದು ಅಸಂಬದ್ಧ ಹೇಳಿಕೆ; ಸಚಿವೆ ಶಾಜಿಯಾರಿಂದ ಭಾರತಕ್ಕೆ ಅಣ್ವಸ್ತ್ರ ದಾಳಿ ಬೆದರಿಕೆ

8. ಎಲೆಕ್ಷನ್‌ ಹವಾ | ಜಗಳೂರು | ಬಿಜೆಪಿಯ ರಾಮಚಂದ್ರಪ್ಪ ವಿರುದ್ಧ ಜಗಳಕ್ಕೆ ಯಾರು ನಿಲ್ಲುತ್ತಾರೆ ಎನ್ನುವುದೇ ಅಸ್ಪಷ್ಟ
ದಾವಣಗೆರೆಯ ಜಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಹಾಲಿ ಶಾಸಕ ಎಸ್‌.ವಿ. ರಾಮಚಂದ್ರ ಅವರಿಗೆ ಟಿಕೆಟ್‌ ನೀಡುವುದು ಬಹುತೇಕ ಖಚಿತವಾಗಿದ್ದು, ಜೆಡಿಎಸ್‌ ಹಾಗೂ ಕಾಂಗ್ರೆಸ್‌ನಲ್ಲಿ ಪೈಪೋಟಿ ನಡೆಯುತ್ತಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. ವಿಸ್ತಾರ Explainer | ಜಾರ್ಖಂಡ್‌ನ ಜಾಮತಾಡಾ- ಇದು ಸೈಬರ್ ಕ್ರೈಮ್ ಕ್ಯಾಪಿಟಲ್! ಇಲ್ಲಿಯ ಜನರ ಕಸುಬೇ ಆನ್‌ಲೈನ್ ವಂಚನೆ!
ದೇಶದ ಹಿಂದುಳಿದ ಜಿಲ್ಲೆಗಳ ಪೈಕಿ ಜಾರ್ಖಂಡ್‍ನ ಜಾಮತಾಡವೂ ಒಂದು. ಆದರೆ, ಈ ಜಿಲ್ಲೆಯು ಸೈಬರ್ ಕ್ರೈಮ್‌ಗಳಿಂದಾಗಿಯೇ ಇಂದು ಕುಖ್ಯಾತಿಗಳಿಸಿದೆ. ಬಹುತೇಕ ಆನ್‌ಲೈನ್ ವಂಚನೆಗಳ ಮೂಲ ಜಾಮತಾಡಾ ಆಗಿರುತ್ತದೆ. ಈ ಕುರಿತು ವಿಸ್ತಾರ Explainer ಓದಲು ಇಲ್ಲಿ ಕ್ಲಿಕ್‌ ಮಾಡಿ.

ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. Vistara Impact | ಲಿಂಗಸುಗೂರು ತಾಲೂಕು ಆಸ್ಪತ್ರೆಯಲ್ಲಿ ಹೆರಿಗೆಗೆ ಹಣ ವಸೂಲಿ ಪ್ರಕರಣ; ಇಬ್ಬರು ನರ್ಸ್‌ಗಳ ಅಮಾನತು
ಲಿಂಗಸುಗೂರು ತಾಲೂಕು ಆಸ್ಪತ್ರೆಯಲ್ಲಿ ಹೆರಿಗೆಗಾಗಿ ಹಣ ವಸೂಲಿ ಮಾಡಿರುವ ಬಗ್ಗೆ ವಿಸ್ತಾರ ನ್ಯೂಸ್‌ನಲ್ಲಿ ಸುದ್ದಿ ಪ್ರಸಾರವಾಗಿತ್ತು. ಇದಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಸ್ಪಂದಿಸಿ, ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಂಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

ಮತ್ತಷ್ಟು ಪ್ರಮುಖ ಸುದ್ದಿಗಳಿವು

  1. ಪೋಸ್ಟ್‌ ಬಾಕ್ಸ್‌ 143 | ಪ್ರೇಮಲೋಕದ ಬಾಗಿಲು ಯಾವಾಗ ತೆಗೆಯುತ್ತೆ?
  2. Sunday read | ಹೊಸ ಪುಸ್ತಕ | ಮತ್ತೆ ಹಾಡಾಗಿದೆ ಮಳೆ ಸಂಗೀತ
  3. IND VS BAN | ಮೊದಲ ಟೆಸ್ಟ್​: ಬಾಂಗ್ಲಾ ವಿರುದ್ಧ ಭಾರತಕ್ಕೆ 188 ರನ್​ ಅಂತರದ ಗೆಲುವು
  4. Karnataka Election | ಬಾದಾಮಿ ಜನರಿಂದ ಸಿದ್ದರಾಮಯ್ಯಗೆ ಹೆಲಿಕಾಪ್ಟರ್ ಗಿಫ್ಟ್; ಚಂದಾ ವಸೂಲಿಯಾಗುತ್ತಿದೆ ಎಂದ ಜಮೀರ್‌!
  5. ಗರ್ಭಿಣಿ ನೀನು, ಚೆನ್ನಾಗಿರಬೇಕು ಎನ್ನುತ್ತ ಪತ್ನಿಗೆ ಎಚ್​ಐವಿ ಸೋಂಕಿನ ರಕ್ತ ಇಂಜೆಕ್ಟ್​ ಮಾಡಿಸಿದ ಪತಿ; ನಂಬಿ ಮೋಸ ಹೋದ ಹೆಂಡತಿ
  6. ಇವಳೆಂಥಾ ಧೂರ್ತ ಹೆಂಗಸು!; ಪುತ್ರನ ಕಾಮದಾಹ ತಣಿಸಲು ಬಾಲಕಿಗೆ ಡ್ರಗ್ಸ್​ ಕೊಟ್ಟು, ಎಚ್ಚರ ತಪ್ಪಿಸಿದ ತಾಯಿ
  7. Shahrukh Khan | ʻದೇಶಭಕ್ತಿ ಸಾರುವ ಚಿತ್ರ ಪಠಾಣ್‌ʼ: ಟ್ವೀಟ್‌ನಲ್ಲಿ ಅಭಿಮಾನಿಗಳ ಜತೆ ಶಾರುಖ್‌ ಹೇಳಿದ್ದೇನು?
  8. Viral post | ಎದುರು ಮನೆಯ ಹುಂಜದ ಕೂಗಿನಿಂದ ನಿದ್ದೆಯಿಲ್ಲ, ಪೊಲೀಸರೇ ಕ್ರಮ ತಗೊಳ್ಳಿ!
Exit mobile version