ನವದೆಹಲಿ: ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ(NCLAT)ಯು 30 ದಿನಗಳವರೆಗೆ 1,337.76 ಕೋಟಿ ರೂ. ದಂಡವನ್ನು ಪಾವತಿಸುವಂತೆ ಟೆಕ್ ದೈತ್ಯ ಕಂಪನಿಯ ಗೂಗಲ್‌ಗೆ (Google) ಆದೇಶಿಸಿದೆ. ಎನ್‌ಸಿಎಲ್ಎಟಿಯ ಇಬ್ಬರು ನ್ಯಾಯಾಧೀಶರ ಪೀಠವು ಈ ಆದೇಶವನ್ನು ಮಾಡಿದೆ. ಗೂಗಲ್ ವಿರುದ್ಧ ಇಷ್ಟು ಬೃಹತ್ ಪ್ರಮಾಣದ ದಂಡವನ್ನುಭಾರತೀಯ ಸ್ಪರ್ಧಾತ್ಮಕ ಆಯೋಗ(CCI) ವಿಧಿಸಿತ್ತು. ಸಿಸಿಐನ ಈ ಆದೇಶನ್ನು ಗೂಗಲ್, ನ್ಯಾಯಮಂಡಳಿಯಲ್ಲಿ ಪ್ರಶ್ನಿಸಿತ್ತು.
ಭಾರತೀಯ ಸ್ಪರ್ಧಾತ್ಮಕ ಆಯೋಗವು ಕಳೆದ ವರ್ಷ, ಅಕ್ಟೋಬರ್ 20 ರಂದು, ಆಂಡ್ರಾಯ್ಡ್ ಮೊಬೈಲ್ ಸಾಧನಗಳಿಗೆ ಸಂಬಂಧಿಸಿದಂತೆ ಸ್ಪರ್ಧಾತ್ಮಕ ವಿರೋಧಿ ಚಟುವಟಿಕೆಗಳಿಗಾಗಿ ಗೂಗಲ್‌ಗೆ 1,337.76 ಕೋಟಿ ದಂಡವನ್ನು ವಿಧಿಸಿತ್ತು. ಅಲ್ಲದೇ, ಅಳವಡಿಸಿಕೊಂಡಿರುವ ನ್ಯಾಯಸಮ್ಮತವಲ್ಲದ ಪದ್ಧತಿಗಳನ್ನು ನಿಲ್ಲಿಸುವಂತೆಯೂ ಗೂಗಲ್ ಸೂಚಿಸಿತ್ತು.
ಇದನ್ನೂ ಓದಿ: Google service down : ಗೂಗಲ್ ಸೇವೆಯಲ್ಲಿ ವ್ಯತ್ಯಯ, ಯೂಟ್ಯೂಬ್, ಡ್ರೈವ್, ಜಿಮೇಲ್‌ಗೆ ಅಡಚಣೆ, ಬಳಕೆದಾರರ ಪರದಾಟ
ದೈತ್ಯ ಸರ್ಚ್ ಎಂಜಿನ್ ಆಗಿರುವ ಗೂಗಲ್, ಸಿಸಿಐ ನೀಡಿರುವ ಆದೇಶವನ್ನು ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯಲ್ಲಿ ಪ್ರಶ್ನಿಸಿತ್ತು. ಆದರೆ, ಗೂಗಲ್ ಮನವಿಯನ್ನು ತಿರಸ್ಕರಿಸಿರುವ ಎನ್‌ಸಿಎಲ್ಎಟಿ, ಸಿಸಿಐ ನಡೆಸಿರುವ ವಿಚಾರಣೆಯಲ್ಲಿ ಯಾವುದೇ ಸಹಜ ನ್ಯಾಯ ಪರಿಪಾಲನೆಯನ್ನು ಉಲ್ಲಂಘಿಸಿಲ್ಲ ಎಂದು ಹೇಳಿತು. ಅಲ್ಲದೇ, 30 ದಿನಗಳಲ್ಲಿ ದಂಡವನ್ನು ಪಾವತಿಸುವಂತೆ ಗೂಗಲ್‌ಗೆ ಸೂಚಿಸಿತು.