ಗ್ಯಾಜೆಟ್ಸ್
Google: ಗೂಗಲ್‌ಗೆ 1337 ಕೋಟಿ ರೂ. ದಂಡ, 30 ದಿನದಲ್ಲಿ ಪಾವತಿಸಲು ನ್ಯಾಯಮಂಡಳಿ ಆದೇಶ!
Google: ಆಂಡ್ರಾಯ್ಡ್ ಮೊಬೈಲ್ ಸಾಧನಗಳಿಗೆ ಸಂಬಂಧಿಸಿದಂತೆ ನ್ಯಾಯಸಮ್ಮತವಲ್ಲದ ಪದ್ಧತಿಗಳನ್ನು ಅನುಸರಿಸಿದ್ದ ಟೆಕ್ ದೈತ್ಯ ಗೂಗಲ್‌ಗೆ ಭಾರತೀಯ ಸ್ಪರ್ಧಾತ್ಮಕ ಆಯೋಗವು 1,337 ಕೋಟಿ ರೂ. ದಂಡವನ್ನು ವಿಧಿಸಿತ್ತು.
ನವದೆಹಲಿ: ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ(NCLAT)ಯು 30 ದಿನಗಳವರೆಗೆ 1,337.76 ಕೋಟಿ ರೂ. ದಂಡವನ್ನು ಪಾವತಿಸುವಂತೆ ಟೆಕ್ ದೈತ್ಯ ಕಂಪನಿಯ ಗೂಗಲ್‌ಗೆ (Google) ಆದೇಶಿಸಿದೆ. ಎನ್‌ಸಿಎಲ್ಎಟಿಯ ಇಬ್ಬರು ನ್ಯಾಯಾಧೀಶರ ಪೀಠವು ಈ ಆದೇಶವನ್ನು ಮಾಡಿದೆ. ಗೂಗಲ್ ವಿರುದ್ಧ ಇಷ್ಟು ಬೃಹತ್ ಪ್ರಮಾಣದ ದಂಡವನ್ನುಭಾರತೀಯ ಸ್ಪರ್ಧಾತ್ಮಕ ಆಯೋಗ(CCI) ವಿಧಿಸಿತ್ತು. ಸಿಸಿಐನ ಈ ಆದೇಶನ್ನು ಗೂಗಲ್, ನ್ಯಾಯಮಂಡಳಿಯಲ್ಲಿ ಪ್ರಶ್ನಿಸಿತ್ತು.
ಭಾರತೀಯ ಸ್ಪರ್ಧಾತ್ಮಕ ಆಯೋಗವು ಕಳೆದ ವರ್ಷ, ಅಕ್ಟೋಬರ್ 20 ರಂದು, ಆಂಡ್ರಾಯ್ಡ್ ಮೊಬೈಲ್ ಸಾಧನಗಳಿಗೆ ಸಂಬಂಧಿಸಿದಂತೆ ಸ್ಪರ್ಧಾತ್ಮಕ ವಿರೋಧಿ ಚಟುವಟಿಕೆಗಳಿಗಾಗಿ ಗೂಗಲ್‌ಗೆ 1,337.76 ಕೋಟಿ ದಂಡವನ್ನು ವಿಧಿಸಿತ್ತು. ಅಲ್ಲದೇ, ಅಳವಡಿಸಿಕೊಂಡಿರುವ ನ್ಯಾಯಸಮ್ಮತವಲ್ಲದ ಪದ್ಧತಿಗಳನ್ನು ನಿಲ್ಲಿಸುವಂತೆಯೂ ಗೂಗಲ್ ಸೂಚಿಸಿತ್ತು.
ಇದನ್ನೂ ಓದಿ: Google service down : ಗೂಗಲ್ ಸೇವೆಯಲ್ಲಿ ವ್ಯತ್ಯಯ, ಯೂಟ್ಯೂಬ್, ಡ್ರೈವ್, ಜಿಮೇಲ್‌ಗೆ ಅಡಚಣೆ, ಬಳಕೆದಾರರ ಪರದಾಟ
ದೈತ್ಯ ಸರ್ಚ್ ಎಂಜಿನ್ ಆಗಿರುವ ಗೂಗಲ್, ಸಿಸಿಐ ನೀಡಿರುವ ಆದೇಶವನ್ನು ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯಲ್ಲಿ ಪ್ರಶ್ನಿಸಿತ್ತು. ಆದರೆ, ಗೂಗಲ್ ಮನವಿಯನ್ನು ತಿರಸ್ಕರಿಸಿರುವ ಎನ್‌ಸಿಎಲ್ಎಟಿ, ಸಿಸಿಐ ನಡೆಸಿರುವ ವಿಚಾರಣೆಯಲ್ಲಿ ಯಾವುದೇ ಸಹಜ ನ್ಯಾಯ ಪರಿಪಾಲನೆಯನ್ನು ಉಲ್ಲಂಘಿಸಿಲ್ಲ ಎಂದು ಹೇಳಿತು. ಅಲ್ಲದೇ, 30 ದಿನಗಳಲ್ಲಿ ದಂಡವನ್ನು ಪಾವತಿಸುವಂತೆ ಗೂಗಲ್‌ಗೆ ಸೂಚಿಸಿತು.
ಗ್ಯಾಜೆಟ್ಸ್
WhatsApp New Feature: ಫೋನ್ ನಂಬರ್ ಬದಲಿಗೆ ಯೂಸರ್ ನೇಮ್! ವಾಟ್ಸಾಪ್‌ನಿಂದ ಹೊಸ ಫೀಚರ್
WhatsApp New Feature: ಜನಪ್ರಿಯ ಮೆಸೇಜಿಂಗ್ ಆ್ಯಪ್ ಮತ್ತೊಂದು ವೈಶಿಷ್ಟ್ಯ ಕುರಿತು ಕೆಲಸ ಮಾಡುತ್ತಿದ್ದು, ಶೀಘ್ರವೇ ಬಳಕೆದಾರರಿಗೆ ದೊರೆಯಲಿದೆ.
ನವದೆಹಲಿ: ಜಗತ್ತಿನ ಅತ್ಯಂತ ಜನಪ್ರಿಯ ಮೆಸೇಜಿಂಗ್ ಆ್ಯಪ್ ವಾಟ್ಸಾಪ್ ಹೊಸ ಫೀಚರ್ (WhatsApp New Feature) ಲಾಂಚ್ ಮಾಡುತ್ತಿದ್ದು, ಬಳಕೆದಾರರ ನಂಬರ್ (Phone Number) ಬದಲಿಗೆ ಯೂಸರ್ ನೇಮ್‌ಗೆ (Username) ಅವಕಾಶ ಕಲ್ಪಿಸಲಾಗುತ್ತದೆ. ಗೂಗಲ್ ಪ್ಲೇ ಬೀಟಾ ಪ್ರೋಗ್ರಾಮ್ ಮೂಲಕ ಈ ಹೊಸ ಅಪ್‌ಡೇಟ್ ಮಾಡಲಿದೆ ಕಂಪನಿಯು. ಸದ್ಯಕ್ಕೆ ಈ ಫೀಚರ್ ಪರೀಕ್ಷಾ ಹಂತದಲ್ಲಿದ್ದು ಶೀಘ್ರವೇ ಎಲ್ಲ ಬಳಕೆದಾರರಿಗೆ ದೊರೆಯಲಿದೆ.
ವಾಟ್ಸಾಪ್ ಅಭಿವೃದ್ಧಿಪಡಿಸುತ್ತಿರುವ ಹೊಸ ಫೀಚರ್‌ಗಳ ಬಗ್ಗೆ ನಾವು ಕಳೆದು ತಿಂಗಳ ಸಾಕಷ್ಟು ವರದಿ ಮಾಡಿದ್ದೇವೆ. ಈ ಎಲ್ಲ ಫೀಚರ್‌ಗಳು ಬಳಕೆದಾರರಿಗೆ ಉತ್ತಮ ಅನುಭವವನ್ನು ಒದಗಿಸುವ ಬದ್ಧತೆಯನ್ನು ಹೊಂದಿವೆ ಎಂಬುದನ್ನು ನಾವು ದೃಢೀಕರಿಸುತ್ತೇವೆ. ಆದರೆ, ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಇತ್ತೀಚಿನ ಆಂಡ್ರಾಯ್ಡ್ 2.23.11.15 ಅಪ್‌ಡೇಟ್ ಮಾಡಿದಾಗ, ತುಂಬ ಭಿನ್ನವಾದ ವೈಶಿಷ್ಟ್ಯವನ್ನು ನಾವು ಗುರುತಿಸಿದ್ದೇವೆ ಎಂದು ವಾಟ್ಸಾಪ್ ಬೆಳವಣಿಗೆಗಳ ಮೇಲೆ ನಿಗಾ ಇಡುವ WABetaInfo ತನ್ನ ಪುಟದಲ್ಲಿ ಬರೆದುಕೊಂಡಿದೆ.
ಸರಳವಾಗಿ ಹೇಳಬೇಕು ಎಂದರೆ, ವಾಟ್ಸಾಪ್ ಯೂಸರ್ ನೇಮ್ ಫೀಚರ್(username feature) ಕುರಿತು ಕೆಲಸ ಮಾಡುತ್ತಿದೆ. ತಮ್ಮ ಕಾಂಟಾಕ್ಟ್‌ಗಳಿಗಾಗಿ ಬಳಕೆದಾರರು ತಮಗೆ ಬೇಕಾದ ವಿಶಿಷ್ಟ ಯೂಸರ್‌ನೇಮ್ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಸದ್ಯಕ್ಕೆ ಈ ಫೀಚರ್ ಇನ್ನೂ ಪರೀಕ್ಷಾ ಹಂತದಲ್ಲಿದ್ದು, ಶೀಘ್ರವೇ ಎಲ್ಲ ಬಳಕೆದಾರರಿಗೆ ಸಿಗುವ ಸಾಧ್ಯತೆ ಇದೆ.
ಇದನ್ನೂ ಓದಿ:WhatsApp New Feature: ವಾಟ್ಸಾಪ್ ಬಳಕೆದಾರರಿಗೆ ಖುಷಿಯ ಸುದ್ದಿ, ನೀವಿನ್ನು ಮೆಸೇಜ್ ಎಡಿಟ್ ಮಾಡಬಹುದು!
WABetaInfo ಷೇರ್ ಮಾಡಿರುವ ಸ್ಕ್ರೀನ್‌ಶಾಟ್‌ಗಳ ಪ್ರಕಾರ, ಈ ಫೀಚರ್ ವಾಟ್ಸಾಪ್‌ನ ಸೆಟ್ಟಿಂಗ್ಸ್‌ನ ಪ್ರೊಫೈಲ್‌ನಲ್ಲಿ ಪ್ಲೇಸ್ ಮಾಡುವ ಸಾಧ್ಯತೆ ಇದೆ. ಬಳಕೆದಾರರ ಹೆಸರನ್ನು ಆಯ್ಕೆ ಮಾಡುವ ಸಾಮರ್ಥ್ಯದೊಂದಿಗೆ, ವಾಟ್ಸಾಪ್ ಬಳಕೆದಾರರು ತಮ್ಮ ಖಾತೆಗಳಿಗೆ ಗೌಪ್ಯತೆಯ ಮತ್ತೊಂದು ಪದರವನ್ನು ಸೇರಿಸಲು ಅವಕಾಶವನ್ನು ಹೊಂದಿರುತ್ತಾರೆ.
ವಾಟ್ಸಾಪ್ ಲಿಂಕ್ಸ್ ಸ್ಕ್ಯಾಮ್‌ನಿಂದ ತಪ್ಪಿಸಿಕೊಳ್ಳುವುದು ಹೇಗೆ? ಸುರಕ್ಷತೆಗೆ ಹೀಗೆ ಮಾಡಿ…
ವಾಟ್ಸಾಪ್‌ಗೆ ಬಂದ ಲಿಂಕ್ (WhatsApp Links Scam) ಮೇಲೆ ಕ್ಲಿಕ್ ಮಾಡಿದ ವ್ಯಕ್ತಿಯೊಬ್ಬ 22 ಲಕ್ಷ ರೂಪಾಯಿ ಕಳೆದುಕೊಂಡ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಗೋಮತಿನಗರ ಸೈಬರ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಎಫ್ಐಆರ್ ದಾಖಲಾಗಿದೆ. ವಾಟ್ಸಾಪ್‌ನಲ್ಲಿ ಸಿಂಪಲ್ ಕೆಲಸ ಮಾಡುವುದರ ಮೂಲಕ ಹಣ ಗಳಿಸುವ ಆಮಿಷವನ್ನು ವಾಟ್ಸಾಪ್ ಮೂಲಕವೇ ಒಡ್ಡಲಾಗಿತ್ತು. ಲಿಂಕ್‌ಗಳನ್ನು ಮತ್ತು ವೆಬ್‌ಸೈಟ್‌ಗಳನ್ನು ಲೈಕ್ ಮಾಡುವ ಉದ್ಯೋಗದ ಆಮಿಷ ನೀಡಲಾಗಿತ್ತು. ಸಂತ್ರಸ್ತ ವ್ಯಕ್ತಿ ಈ ಆಫರ್ ನಿಜವೆಂದು ಭಾವಿಸಿದ್ದ. ಆರಂಭದಲ್ಲಿ ಸಂಬಳವಾಗಿ 48,450 ರೂ. ನೀಡಿದ್ದರು. ಬಳಿಕ ವಂಚನೆಗಾರರು, ಇನ್ನೂ ಹೆಚ್ಚಿನ ಹಣ ಗಳಿಸಲು 4.84 ಲಕ್ಷ ರೂ. ಹೂಡಿಕೆ ಮಾಡಿಸಿಕೊಂಡಿದ್ದರು. ಹೀಗೆ ಆತನಿಂದ 22 ಲಕ್ಷದವರೆಗೂ ಹಣ ಕಿತ್ತಿದ್ದಾರೆ. ಬಳಿಕ, ಸಂತ್ರಸ್ತ ವ್ಯಕ್ತಿಯ ಕರೆಗಳಿಗೆ ಉತ್ತರಿಸುವುದನ್ನು ನಿಲ್ಲಿಸಿದ್ದಾರೆ. ಆಗ ಆತನಿಗೆ ತಾನು ಮೋಸ ಹೋಗಿರುವುದು ಗೊತ್ತಾಗಿದೆ. ಗುರುಗಾಂವದಲ್ಲೂ ವ್ಯಕ್ತಿಯೊಬ್ಬ ಇಂಥದ್ದೇ ಜಾಲಕ್ಕೆ ಒಳಗಾಗಿ 45 ಲಕ್ಷ ರೂ. ಕಳೆದುಕೊಂಡಿದ್ದಾನೆ. ಈ ರೀತಿಯ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ(Cyber Fraud).
ಈ ವಾಟ್ಸಾಪ್ ಲಿಂಕ್ ವಂಚನೆಯಿಂದ ತಪ್ಪಿಸಿಕೊಳ್ಳಬೇಕಾದ ಅಗತ್ಯವಿದೆ. ವಾಟ್ಸಾಪ್‌ಗೆ ಬರುವ ಯಾವುದೇ ಲಿಂಕ್‌ಗಳನ್ನು ಕ್ಲಿಕ್ ಮಾಡುವ ಮುಂಚೆ ಅದರ ಅಸಲಿಯತ್ತು ತಿಳಿದುಕೊಳ್ಳಬೇಕು. ಇಲ್ಲದಿದ್ದರೆ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಖಾಲಿಯಾಗುವುದು ತಪ್ಪಲ್ಲ. ಸೈಬರ್ ವಂಚನೆ ಮತ್ತು ವಾಟ್ಸಾಪ್ ವಂಚನೆಯಿಂದ ತಪ್ಪಿಸಿಕೊಳ್ಳಲು ಕೆಲವು ಟಿಪ್ಸ್‌ಗಳನ್ನು ಇಲ್ಲಿ ನೀಡಿದ್ದೇವೆ. ಓದಿ.
ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡಲು ಹೋಗಬೇಡಿ. ವಾಟ್ಸಾಪ್ ಸ್ಕ್ಯಾಮ್ ಅಥವಾ ಯಾವುದೇ ರೀತಿಯ ಸೈಬರ್ ವಂಚನೆಯಿಂದ ತಪ್ಪಿಸಿಕೊಳ್ಳಬೇಕಿದ್ದರೆ, ಬಳಕೆದಾರರು ಎಚ್ಚರವಹಿಸಬೇಕಾದ ಮಹತ್ವದ ಸಂಗತಿ ಇದು. ಯಾವುದೇ ಕಾರಣಕ್ಕೂ ಅನುಮಾನಾಸ್ಪದ ಹಾಗೂ ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡಲು ಹೋಗಬಾರದು. ಯಾವುದೇ ಲಿಂಕ್ ಕ್ಲಿಕ್ ಮಾಡುವ ಮುಂಚೆ ಅದರ ಸಾಚಾತನ ತಿಳಿಯುವುದು ಅತ್ಯಗತ್ಯ. ಚೂರೇ ಚೂರು ಅನುಮಾನ ಬಂದರೂ ಕ್ಲಿಕ್ ಮಾಡಲು ಹೋಗಬಾರದು.
ಸೈಬರ್ ವಂಚನೆ ತಡೆಯಲು ಎರಡು ಹಂತದ ದೃಢೀಕರಣ ಅಗತ್ಯವಾಗಿ ಬೇಕು. ವಾಟ್ಸಾಪ್ ಲಿಂಕ್ ಸ್ಕ್ಯಾಮ್‌ನಿಂದ ತಪ್ಪಿಸಿಕೊಳ್ಳಬೇಕಿದ್ದರೆ, ವಾಟ್ಸಾಪ್‌ನ ಟು ಸ್ಟೆಪ್ಸ್ ವೆರಿಫೀಕೆಷನ್(ಎರಡು ಹಂತದ ದೃಢೀಕರಣ) ಫೀಚರ್ ಆನ್ ಮಾಡಿ. ಇದರಿಂದಾಗಿ, ನಿಮ್ಮ ಖಾತೆಯ ದೃಢೀಕರಣಕ್ಕೆ 6 ಅಂಕಿಗಳ ಪಿನ್ ನೀಡಬೇಕಾಗುತ್ತದೆ. ಇದರಿಂದ ನಿಮ್ಮನ್ನು ಫಿಶಿಂಗ್ ಅಟಾಕ್ಸ್ ಮತ್ತು ಸೈಬರ್ ವಂಚನೆಯಿಂದ ರಕ್ಷಿಸಿಕೊಳ್ಳಬಹುದಾಗಿದೆ.
ಬ್ಲಾಕ್ ಮಾಡುವುದು ಮತ್ತು ರಿಪೋರ್ಟ್ ಮಾಡುವುದು ಕೂಡ ಉತ್ತಮ ಸುರಕ್ಷತೆಯ ನಡೆಯಾಗಿದೆ. ವಾಟ್ಸಾಪ್‌ಗೆ ಬರುವ ಯಾವುದೇ ಅಪರಿಚಿತ ಮತ್ತು ಅನುಮಾನಾಸ್ಪದ ಕರೆಗಳ ಕುರಿತು ರಿಪೋರ್ಟ್ ಮಾಡಬೇಕು. ಅಲ್ಲದೇ ಬ್ಲಾಕ್ ಮಾಡುವುದು ಸುರಕ್ಷತೆಯ ದೃಷ್ಟಿಯಿಂದ ಒಳ್ಳೆಯ ನಡೆಯಾಗುತ್ತದೆ. ಒಂದು ವೇಳೆ, ಯಾವುದೇ ಕಂಪನಿಯು ಹೆಸರಿನಲ್ಲಿ ಉದ್ಯೋಗ ಆಫರ್ ಮಾಡುವ ಸಂದೇಶಗಳಿದ್ದರೆ, ಮೂಲ ಕಂಪನಿಗಳ ಜತೆ ಮಾತುಕತೆ ನಡೆಸಿ ಮಾಹಿತಿ ತಿಳಿದುಕೊಳ್ಳುವುದು ಉತ್ತಮ. ಇಲ್ಲದಿದ್ದರೆ ಅಪಾಯ ತಪ್ಪಿದ್ದಲ್ಲ.
ಪ್ರೈವಸಿ ಸೆಟ್ಟಿಂಗ್ ಕೂಡ ಈ ನಿಟ್ಟಿನಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತವೆ. ವಾಟ್ಸಾಪ್ ಗ್ರೂಪ್ ಪ್ರೈವಸಿ ಸೆಟ್ಟಿಂಗ್ಸ್ ಖಚಿತಪಡಿಸಿಕೊಳ್ಳಬೇಕು. ನಿಮ್ಮ ಪ್ರೊಫೈಲ್ ಫೋಟೋ ಮತ್ತು ಆನ್‌ಲೈನ್ ಸ್ಟೇಟಸ್ ಯಾರು ನೋಡಬಹುದು ಎಂಬುದರ ಕುರಿತು ನೀವು ಪ್ರೈವಸಿ ಸೆಟ್ಟಿಂಗ್ ಮಾಡಬಹುದು. ನಿಮ್ಮ ವೈಯಕ್ತಿಕ ಮಾಹಿತಿಯನ್ನು ನೀವು ನಂಬಬಹುದಾದ ಜನರೊಂದಿಗೆ ಮಾತ್ರ ಹಂಚಿಕೊಳ್ಳುವುದು ಉತ್ತಮ.
ವಾಟ್ಸಾಪ್ ಲಿಂಕ್ಡ್ ಡಿವೈಸ್ಡ್‌ಗಳನ್ನು ಚೆಕ್ ಮಾಡಿಕೊಳ್ಳಿ. ಯಾವುದಾದರೂ ಅನುಮಾನಾಸ್ಪದ ಡಿವೈಸ್ ಲಾಗಿನ್ ಆಗಿದ್ದರೂ ಕೂಡಲೇ ಲಾಗ್ ಔಟ್ ಮಾಡಿ. ಇದರಿಂದ ಸಂಭಾವ್ಯ ಅಪಾಯವನ್ನು ತಪ್ಪಿಸಬಹುದಾಗಿದೆ.
ತಂತ್ರಜ್ಞಾನ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಗ್ಯಾಜೆಟ್ಸ್
Super Computer: ವಿಶ್ವದಲ್ಲೇ 75ನೇ ಸ್ಥಾನ ಪಡೆದುಕೊಂಡ ಭಾರತದ ಸೂಪರ್ ಕಂಪ್ಯೂಟರ್ ‘ಐರಾವತ್’!
Super Computer: ಜರ್ಮನಿಯಲ್ಲಿ ನಡೆಯುತ್ತಿರುವ ಐಎಸ್‌ಸಿ 2023 ಸಮಾವೇಶದಲ್ಲಿ ವಿಶ್ವದ 500 ಸೂಪರ್ ಕಂಪ್ಯೂಟರ್‌ಗಳ ಪಟ್ಟಿ ಮಾಡಲಾಗಿದ್ದು, ಇದರಲ್ಲಿ ಭಾರತದ ಐರಾವತ್ (AIRAWAT) ಸೂಪರ್ ಕಂಪ್ಯೂಟರ್ 75ನೇ ಸ್ಥಾನ ಪಡೆದುಕೊಂಡಿದೆ.
ನವದೆಹಲಿ: ಜರ್ಮನಿಯಲ್ಲಿ ನಡೆದ ಅಂತಾರಾಷ್ಟ್ರೀಯ ಸೂಪರ್‌ಕಂಪ್ಯೂಟಿಂಗ್ ಸಮ್ಮೇಳನದಲ್ಲಿ (ISC 2023) ಭಾರತದ (India) ಕೃತಕ ಬುದ್ಧಿಮತ್ತೆ ಸೂಪರ್ ಕಂಪ್ಯೂಟರ್ ಐರಾವತ್ (AIRAWAT Super Computer) ಜಗತ್ತಿನಲ್ಲೇ 75ನೇ ಸ್ಥಾನದಲ್ಲಿದೆ. ಮಹಾರಾಷ್ಟ್ರದ ಪುಣೆಯ ಸಿ-ಡಾಕ್‌ನಲ್ಲಿ ಈ ಐರಾವತ್ ಸೂಪರ್ ಕಂಪ್ಯೂಟರ್ ಸ್ಥಾಪಿಸಲಾಗಿದೆ. ಇತ್ತೀಚೆಗೆ ಬಿಡುಗಡೆಯಾದ ಟಾಪ್ 500 ಗ್ಲೋಬಲ್ ಸೂಪರ್ ಕಂಪ್ಯೂಟಿಂಗ್ ಪಟ್ಟಿಯ 61ನೇ ಆವೃತ್ತಿಯಲ್ಲಿ ಭಾರತದ ಸೂಪರ್‌ಕಂಪ್ಯೂಟರ್ ಸ್ಥಾನವನ್ನು ಪಡೆದುಕೊಂಡಿದೆ. ಐರಾವತ್ ಪಿಎಸ್ಎಐ, 3,170 ಟೆರಾಫ್ಲಾಪ್‌ಗಳ (Rpeak) ಗಮನಾರ್ಹ ವೇಗದೊಂದಿಗೆ ಭಾರತದ ಅತಿದೊಡ್ಡ ಮತ್ತು ವೇಗವಾದ ಕೃತಕ ಬುದ್ಧಿಮತ್ತೆಯಾಧರಿತ ಸೂಪರ್‌ಕಂಪ್ಯೂಟಿಂಗ್ ವ್ಯವಸ್ಥೆಯಾಗಿದೆ.
ಐರಾವತ್ ಸೂಪರ್ ಕಂಪ್ಯೂಟರ್‌ವನ್ನು ನೆಟ್‌ವೆಬ್ ಟೆಕ್ನಾಲಜಿಸ್ (Netweb Technologies) ಸಿದ್ಧಪಡಿಸಿದೆ. ಇದು Ubuntu 20.04.2 LTS ಆಪರೇಟಿಂಗ್ ಸಿಸ್ಟಮ್ ಹೊಂದಿದ್ದು, 81,344 ಕೋರ್ಸ್‌ನೊಂದಿಗೆ AMD EPYC 7742 64C 2.25GHz ಪ್ರೊಸೆಸರ್ ಚಾಲಿತವಾಗಿದೆ. ಪ್ರಸಕ್ತ ವರ್ಷವೇ ಈ ಐರಾವ್ ಸೂಪರ್ ಕಂಪ್ಯೂಟರ್ ಸ್ಥಾಪಿಸಲಾಗಿದೆ.
ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಇನ್ಫಾರ್ಮೇಶನ್ ಟೆಕ್ನಾಲಜಿ (MeitY) ಇಲಾಖೆಯ ಕಾರ್ಯದರ್ಶಿ ಅಲ್ಕೇಶ್ ಶರ್ಮಾ ಅವರು, ಈ ಡಿಜಿಟಲ್ ಯುಗದಲ್ಲಿ ಕೃತಕ ಬುದ್ಧಿಮತ್ತೆಯು ಅತ್ಯಂತ ಭರವಸೆಯ ತಂತ್ರಜ್ಞಾನವಾಗಿದೆ. ಅಗಾಧ ಡೇಟಾ ಲಭ್ಯತೆ, ಬಲಶಾಲಿ ಡಿಜಿಟಲ್ ಆರ್ಥಿಕತೆ ಹಾಗೂ ಕೌಶಲಯುಕ್ತ ಕೆಲಸಪಡೆಯಿಂದಾಗಿ ಕೃತಕ ಬುದ್ಧಿಮತ್ತೆಗೆ ಭಾರತವು ಸ್ಟ್ರಾಂಗ್ ಇಕೋಸಿಸ್ಟಮ್ ಮತ್ತು ಸ್ಪರ್ಧಾತ್ಮಕ ಪ್ರಯೋಜನಗಳನ್ನು ಹೊಂದಿದೆ ಎಂದು ಹೇಳಿದರು.
ಇದನ್ನೂ ಓದಿ: 86,500 ಸರ್ಕಾರಿ ನೌಕರರು ಕಂಪ್ಯೂಟರ್ ಪರೀಕ್ಷೆಯಲ್ಲಿ ಫೇಲ್ !
ನ್ಯಾಚುರಲ್ ಲ್ಯಾಂಗ್ವೇಜ್ ಪ್ರೊಸೆಸಿಂಗ್, ಇಮೇಜ್ ಪ್ರೊಸೆಷನ್, ಪ್ಯಾಟರ್ನ್ ರೆಕಗ್ನಿಷನ್, ಅಗ್ರಿಕಲ್ಚರ್, ಮೆಡಿಕಲ್ ಇಮೇಜಿಂಗ್, ಎಜುಕೇಶನ್, ಹೆಲ್ತ್ ಕೇರ್, ಆಡಿಯೋ ಅಸಿಸ್ಟೆನ್ಸ್, ರೋಬೋಟಿಕ್ಸ್ ಮತ್ತು ಆಯಕಟ್ಟಿನ ವಲಯಗಳಿಗೆ ಪರಿಹಾರಗಳನ್ನು ಅಭಿವೃದ್ಧಿಪಡಿಸುವುದರ ಮೇಲೆ ಭಾರತವು ಅನ್ವಯಿಕ ಕೃತಕ ಬುದ್ದಿಮತ್ತೆ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದೆ. ಜಗತ್ತನ್ನು ಉತ್ತಮ ಸ್ಥಳವನ್ನಾಗಿ ಮಾಡಲು ಸಮಾಜ ಮತ್ತು ಆರ್ಥಿಕತೆಯ ಅತ್ಯಂತ ಒತ್ತುವ ಸಮಸ್ಯೆಗಳನ್ನು ಪರಿಹರಿಸಲು ನಾಗರಿಕರು ಮತ್ತು ಸಂಸ್ಥೆಗಳಿಗೆ ಅಧಿಕಾರ ನೀಡಲು ಭಾರತವು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಅನುಸರಿಸುತ್ತದೆ ಎಂದು ಅವರು ಹೇಳಿದರು.
ತಂತ್ರಜ್ಞಾನದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಗ್ಯಾಜೆಟ್ಸ್
Adobe Photoshop: ಫೋಟೋಶಾಪ್‌ಗೆ ಕೃತಕ ಬುದ್ಧಿಮತ್ತೆ ಪರಿಚಯಿಸಿದ ಅಡೋಬ್, ಏನಿದು ಜನರೇಟಿವ್ ಫಿಲ್?
Adobe Photoshop: ಅಡೋಬ್ ಫೋಟೋಶಾಪ್ ಈಗ ತನ್ನ ಬಳಕೆದಾರರಿಗೆ ಮತ್ತಷ್ಟು ವಿಶಿಷ್ಟ ಅನುಭವ ಹಾಗೂ ಲಾಭವನ್ನು ನೀಡಲು ಮುಂದಾಗಿದೆ. ಇದಕ್ಕಾಗಿ ಫೋಟೋಶಾಪ್‌ಗೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಅಳವಡಿಸಿದೆ.
ನವದೆಹಲಿ: ಗೂಗಲ್ ಮತ್ತು ಮೈಕ್ರೋಸಾಫ್ಟ್ ಬಳಿಕ ಈಗ ಅಡೋಬ್ ಕೂಡ ತನ್ನ ಫೋಟೋಶಾಪ್ (Adobe Photoshop) ಪ್ರಾಡಕ್ಟ್‌ಗೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಲು ಮುಂದಾಗಿದೆ. ತನ್ನ ಈ ತಂತ್ರಜ್ಞಾನಕ್ಕೆ ಅಡೋಬ್ ಜನರೇಟಿವ್ ಫಿಲ್ (Generative Fill) ಎಂದು ಹೆಸರಿಟ್ಟಿದೆ. ಇದು ಓಪನ್ ಎಐನ DALL-E 2ನಂಥ ಟೆಕ್ಸ್ಟ್ ಪ್ರಾಂಪ್ಟ್‌ಗಳನ್ನು ಬಳಸಿಕೊಂಡು ಚಿತ್ರಗಳನ್ನು ರಚಿಸಲು ಅಥವಾ ಮಾರ್ಪಡಿಸಲು ಬಳಕೆದಾರರಿಗೆ ನೆರವು ಒದಗಿಸುತ್ತದೆ. ಈ ಫೀಚರ್ ಅನ್ನು ನೇರವಾಗಿ ಅಡೋಬ್ ಫೋಟೋಶಾಪ್‌ಗೆ ಸಂಯೋಜಿಸಲಾಗಿರುತ್ತದೆ.
ಅಡೋಬ್‌ನ ಜನರೇಟಿವ್ ಫಿಲ್ ತಂತ್ರಜ್ಞಾನವು ಅಡೋಬ್ ಫೈರ್‌ಫ್ಲೈನಿಂದ ಚಾಲಿತವಾಗಿದೆ. ಇದು ಅಡೋಬ್‌ನ ಆಂತರಿಕ ಉತ್ಪಾದಕ ಕೃತಕ ಬುದ್ಧಿಮತ್ತೆಯ ಮಾದರಿಯಾಗಿದೆ. ಈ ತಂತ್ರಜ್ಞಾನವನ್ನು ನೀವು ಚಾಟ್‌ಜಿಪಿಟಿ, ಗೂಗಲ್‌ನ ಬಾರ್ಡ್ ಅಥವಾ ಪಾಮ್ 2ಗೆ ಹೋಲಿಸಬಹುದು. ಫೈರ್‌ಫ್ಲೈ ಎಐ ಅಡೋಬ್ ಸ್ಟಾಕ್ ಇಮೇಜಸ್‌ನಲ್ಲಿ ತರಬೇತಿ ಪಡೆದಿದೆ. ಹಕ್ಕುಸ್ವಾಮ್ಯಗಳು, ಬ್ರ್ಯಾಂಡ್‌ಗಳು ಮತ್ತು ಬೌದ್ಧಿಕ ಆಸ್ತಿ ಹಕ್ಕನ್ನು ಮೀರದೇ, ವಾಣಿಜ್ಯಿಕವಾಗಿ ಕಾರ್ಯಸಾಧ್ಯವಾದ ವಿಷಯವನ್ನು ರಚಿಸಬಹುದು ಎಂದು ಅಡೋಬ್ ಹೇಳುತ್ತದೆ.
ಜನರೇಟಿವ್ ಫಿಲ್‌ನಿಂದಾಗಿ ಫೋಟೋಶಾಪ್ ಮತ್ತು ಜನರೇಟಿವ್ ಎಐ ಎಂಬ ಎರಡು ಇಮೇಜಿಂಗ್ ಪವರ್‌ಹೌಸ್‌ಗಳು ಒಟ್ಟಿಗೆ ಬಳಕೆದಾರರಿಗೆ ಸರಳ ಪಠ್ಯ ಪ್ರಾಂಪ್ಟ್‌ನೊಂದಿಗೆ ಫೋಟೋಶಾಪ್‌ನಲ್ಲಿಯೇ ಕಂಟೆಂಟ್ ಕ್ರಿಯೇಟ್ ಮಾಡಲು ಮತ್ತು ನಂತರ ಫೋಟೋಶಾಪ್ ಹೊಂದಿರುವ ಹೆಚ್ಚಿನ ಸಾಧನಗಳನ್ನು ಬಳಸಿಕೊಂಡು ಅದನ್ನು ಸಂಪಾದಿಸಲು ಅನುವು ಮಾಡಿಕೊಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
ಇದನ್ನೂ ಓದಿ: Bill Gates: ಸರ್ಚ್ ಎಂಜಿನ್, ಶಾಪಿಂಗ್ ವೆಬ್‌ಸೈಟ್‌ಗಳನ್ನು ಕೃತಕ ಬುದ್ಧಿಮತ್ತೆ ಬದಲಿಸಲಿದೆ ಎಂದ ಬಿಲ್ ಗೇಟ್ಸ್
ಹೆಚ್ಚುವರಿಯಾಗಿ, ಬಳೆಕದಾರರು ಜನರೇಟಿವ್ ಫಿಲ್ ಬಳಸಿಕೊಂಡು ಚಿತ್ರಗಳನ್ನು ಮತ್ತು ಬ್ಯಾಕ್‍ಗ್ರೌಂಡ್ ರಚಿಸಬಹುದು. ಆಬ್ಜೆಕ್ಟ್‌ಗಳನ್ನು ರಿಮೂವ್ ಮಾಡಬಹುದು. ಅಷ್ಟೇ ಯಾಕೆ ಇಮೇಜ್ ಕೂಡ ವಿಸ್ತರಿಸಬಹುದು ಎಂದು ಕಂಪನಿಯು ಹೇಳಿಕೊಂಡಿದೆ. ಕಂಪನಿಯು ಫೋಟೋಶಾಪ್‌ನಲ್ಲಿ Contextual Task Bar ಸೇರಿಸಿದೆ. ಈ ಮೂಲಕ ಬಳಕೆದಾರರು ಯಾವುದೇ ತ್ರಾಸ್ ಇಲ್ಲದೇ ಕಂಟೆಂಟ್ ಸೃಷ್ಟಿಸಬಹುದಾಗಿದೆ.
ತಂತ್ರಜ್ಞಾನದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಗ್ಯಾಜೆಟ್ಸ್
Twitter: ಡಿಲಿಟ್ ಮಾಡಿದ ಟ್ವೀಟ್ಸ್ ಮತ್ತೆ ಪ್ರತ್ಯಕ್ಷ! ಬೆಚ್ಚಿ ಬಿದ್ದ ಬಳಕೆದಾರರು
Twitter: ಅಮೆರಿಕದ ಕೆಲವು ಟ್ವಿಟರ್ ಬಳಕೆದಾರರು ವಿಚಿತ್ರ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈ ಬಳಕೆದಾರರು ಡಿಲಿಟ್ ಮಾಡಿದ ಟ್ವೀಟ್ಸ್ ಮತ್ತೆ ಕಾಣಿಸಿಕೊಂಡಿವೆ.
ನವದೆಹಲಿ: ಎಲಾನ್ ಮಸ್ಕ್ (Elon Musk) ಒಡೆತನದ ಮೈಕ್ರೋಬ್ಲಾಗಿಂಗ್ ಟ್ವಿಟರ್‌ನಲ್ಲಿ (Twitter) ಮತ್ತೊಂದು ಸಮಸ್ಯೆ ಕಾಣಿಸಿಕೊಂಡಿದೆ. ಬಳಕೆದಾರರು ಡಿಲಿಟ್ ಮಾಡಿದ ಟ್ವೀಟ್‌ಗಳು ಮತ್ತೆ ರಿಪೋಸ್ಟ್ ಆಗುತ್ತಿವೆ! ಹೌದು, ಅಮೆರಿಕದ ಪತ್ರಕರ್ತರೊಬ್ಬರಿಗೆ ಮೊದಲಿಗೆ ಈ ರೀತಿಯ ಅನುಭವವಾಗಿದ್ದು, ಆ ಬಳಿಕ ಬಹಳಷ್ಟು ಬಳಕೆದಾರರು ಕೂಡ ತಾವು ಈ ಹಿಂದೆ ಡಿಲಿಟ್ ಮಾಡಿದ ಪೋಸ್ಟ್‌ಗಳು ಮತ್ತೆ ಕಾಣಿಸಿಕೊಳ್ಳುತ್ತಿವೆ ಎಂದು ಹೇಳಿಕೊಂಡಿದ್ದಾರೆ. ಟ್ವಿಟರ್‌ನಲ್ಲಿನ ತಾಂತ್ರಿಕ ಸಮಸ್ಯೆಯೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
ದಿ ವರ್ಜ್ ಪತ್ರಕರ್ತ ಜೇಮ್ಸ್ ವಿನ್ಸೆಂಟ್ ಅವರು ಮೊದಲಿಗೆ ಈ ಬಗ್ಗೆ ರಿಪೋರ್ಟ್ ಮಾಡಿದ್ದರು. ಎರಡು ವಾರಗಳ ಹಿಂದೆ ತಮ್ಮೆಲ್ಲ ಟ್ವೀಟ್‌ಗಳನ್ನು ಅವರು ಡಿಲಿಟ್ ಮಾಡಿದ್ದರು. ಆದರೆ, ಅವರಿಗೆ ಸೋಮವಾರ ಆಶ್ಚರ್ಯ ಕಾದಿತ್ತು. ಡಿಲಿಟ್ ಮಾಡಿದ್ದ ಎಲ್ಲ ಟ್ವೀಟ್‌ಗಳು ಮತ್ತೆ ಕಾಣಿಸಿಕೊಂಡಿವೆ. 2020ರಲ್ಲಿ ಸಂವಹನ ನಡೆಸಿದ ಟ್ವೀಟ್‌ಗಳೂ ಕೂಡ ಮತ್ತೆ ಪೋಸ್ಟ್ ಆಗಿವೆ ಎಂದು ಅವರು ಹೇಳಿಕೊಂಡಿದ್ದಾರೆ. ಆದರೆ, ಈ ರೀತಿಯ ಸಮಸ್ಯೆ ಎದುರಾಗಿದ್ದು ಅವರಿಗೊಬ್ಬರಿಗೆ ಮಾತ್ರ ಅಲ್ಲ. ಇನ್ನೂ ಹಲವರು ಇದೇ ರೀತಿಯ ಸಮಸ್ಯೆಗೆ ಸಿಲುಕಿದ್ದರು. ಬಹಳಷ್ಟು ಜನರು ತಾವು ಡಿಲಿಟ್ ಮಾಡಿದ ಟ್ವೀಟ್‌ಗಳು ಮತ್ತೆ ಪೋಸ್ಟ್ ಆಗುತ್ತಿವೆ ಎಂದು ರಿಪೋರ್ಟ್ ಮಾಡುತ್ತಿದ್ದರು.
ಸಾಮಾಜಿಕ ಮಾಧ್ಯಮ ವೇದಿಕೆ ಮಾಸ್ಟೋಡಾನ್ ಬಳಸುವ ಡಿಕ್ ಮೊರೆಲ್ ಎಂಬುವವರು ಕಳೆದ ನವೆಂಬರ್‌ನಲ್ಲಿ, ರೆಡಾಕ್ಟ್ ಎಂಬ ಸಾಧನವನ್ನು ಬಳಸಿಕೊಂಡು ತಮ್ಮ ಎಲ್ಲಾ ಟ್ವೀಟ್‌ಗಳು, ಲೈಕ್ಸ್, ಮೀಡಿಯಾ ಫೈಲ್‌ಗಳು ಮತ್ತು ರಿಟ್ವೀಟ್‌ಗಳನ್ನು ಡಿಲಿಟ್ ಮಾಡಿದ್ದರು. ಅವರು ತಮ್ಮ ಪ್ರೊಫೈಲ್‌ನಿಂದ 38,000 ಟ್ವೀಟ್‌ಗಳನ್ನು ಯಶಸ್ವಿಯಾಗಿ ಅಳಿಸಿ ಹಾಕಿದ್ದರು. ಆದರೆ, ಟ್ವಿಟರ್‌ನಲ್ಲಿ ಕಾಣಿಸಿಕೊಂಡ ಬಗ್ ಪರಿಣಾಮ, ಅವರು ಅಳಿಸಿ ಹಾಕಿದ್ದ ಅಷ್ಟೂ ಟ್ವೀಟ್‌ಗಳು ಮತ್ತೆ ಮರುಸ್ತಾಪನೆಯಾಗಿದ್ದನ್ನು ಕಂಡು ಆಘಾತಕ್ಕೊಳಗಾದರು. ಇದೇ ರೀತಿಯ ಅನುಭವ ಅನೇಕ ಬಳಕೆದಾರರಿಗೆ ಆಗಿದೆ.
ಟ್ವಿಟರ್‌ನಲ್ಲಿ ಕಾಣಿಸಿಕೊಂಡಿರುವ ಸಮಸ್ಯೆಗೆ ಮೂಲ ಕಾರಣ ಏನೆಂದು ಇನ್ನೂ ತಿಳಿದು ಬಂದಿಲ್ಲ. ಆದರೆ, ಈ ಸಮಸ್ಯೆ ಎಲ್ಲ ಬಳಕೆದಾರರಿಗೆ ಆಗಿಲ್ಲ. ಕೆಲವರಿಗೆ ಮಾತ್ರವೇ ಈ ಅನುಭವ ಆಗಿದೆ. ಆದರೆ, ಮೊರೆಲ್ ಅವರು ಹೇಳುವ ಪ್ರಕಾರ, ಸುಮಾರು 400 ಜನರು ಈ ಸಮಸ್ಯೆಯನ್ನು ಗಮನಕ್ಕೆ ತಂದಿದ್ದಾರೆ. ಈ ಕುರಿತು ಮಾಹಿತಿ ಪಡೆಯಲು ದಿ ವರ್ಜ್ ಪತ್ರಕರ್ತ ವಿನ್ಸೆಂಟ್ ಅವರು ಟ್ವಿಟರ್ ಸಂಪರ್ಕಿಸಲು ಪ್ರಯತ್ನಿಸಿದ್ದಾರೆ. ಅವರಿಗೆ ಕೇವಲ ಆಟೋಮೆಟೆಡ್ ಪ್ರತಿಕ್ರಿಯೆ ಮಾತ್ರವೇ ದೊರೆತಿದೆ ಹೊರತು ಯಾವುದೇ ಪರಿಹಾರ ಸಿಕ್ಕಿಲ್ಲ.
ಇದನ್ನೂ ಓದಿ: Instagram: ಟ್ವಿಟರ್ಗೆ ಪೈಪೋಟಿ ಕೊಡಲು ಮುಂದಾದ ಇನ್ಸ್ಟಾಗ್ರಾಂ; ಶೀಘ್ರವೇ ಹೊಸ ಆ್ಯಪ್ ಬಿಡುಗಡೆ?!
ಇದು ಟ್ವಿಟ್ಟರ್ ಬಳಕೆದಾರರಿಗೆ ಟ್ವೀಟ್‌ಗಳನ್ನು ಅಳಿಸಲು ಅನುವು ಮಾಡಿಕೊಡುವ ಮೂರನೇ ವ್ಯಕ್ತಿಯ ಪರಿಕರಗಳಲ್ಲಿನ ದೋಷದಿಂದ ಉಂಟಾಗಿರಬಹುದು ಎಂದು ಅಂದಾಜಿಸಲಾಗುತ್ತಿದೆ. ಅಲ್ಲದೇ ಟ್ವಿಟರ್‌ನ ಸರ್ವರ್-ಸಂಬಂಧಿತ ಸಮಸ್ಯೆ ಕೂಡ ಆಗಿರುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
ತಂತ್ರಜ್ಞಾನ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
-
ಕರ್ನಾಟಕ22 hours ago
ವಿಸ್ತಾರ ಯುಗಾದಿ ಕಥಾ ಸ್ಪರ್ಧೆ ಬಹುಮಾನ: ಚಂದ್ರಶೇಖರ್ ಡಿ.ಆರ್ ಪ್ರಥಮ, ದಾದಾಪೀರ್ ಜೈಮನ್ ದ್ವಿತೀಯ, ಪೂರ್ಣಿಮಾ ಮಾಳಗಿಮನಿ ತೃತೀಯ
-
ಕರ್ನಾಟಕ22 hours ago
Karnataka Cabinet Expansion: ಪ್ರಮಾಣ ವಚನ ಸಮಾರಂಭ ಬಹಿಷ್ಕಾರ; ಊರಿಗೆ ಹೊರಟ ಒಂದೇ ಜಿಲ್ಲೆಯ 5 ಶಾಸಕರು!
-
ಕಿರುತೆರೆ21 hours ago
Deepak Gowda: ‘ಶ್ರೀರಸ್ತು ಶುಭಮಸ್ತು’ಧಾರಾವಾಹಿಯಿಂದ ಹೊರನಡೆದ ದೀಪಕ್ ಗೌಡ; ಪಾತ್ರಕ್ಕೆ ಬಂದವರು ಕಿರುತೆರೆಗೆ ಹೊಸಬರಲ್ಲ!
-
ಕರ್ನಾಟಕ16 hours ago
Karnataka Cabinet: ತಾತನನ್ನು ಮಿನಿಸ್ಟರ್ ಮಾಡಿ ಪ್ಲೀಸ್: ರಾಹುಲ್ ಗಾಂಧಿಗೆ ಪತ್ರ ಬರೆದ ಟಿ.ಬಿ. ಜಯಚಂದ್ರ ಮೊಮ್ಮಗಳು
-
ಕ್ರಿಕೆಟ್12 hours ago
World Cup 2023 : ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ವೇಳೆ ವಿಶ್ವಕಪ್ ವೇಳಾಪಟ್ಟಿ ಪ್ರಕಟ
-
ದೇಶ5 hours ago
New Parliament Building: ಇಂದು ಹೊಸ ಸಂಸತ್ ಭವನ ಉದ್ಘಾಟನೆ; ಹೇಗೆ ನಡೆಯಲಿದೆ ಕಾರ್ಯಕ್ರಮ?
-
ಕರ್ನಾಟಕ13 hours ago
Tumkur News: ಹೆಜ್ಜೇನು ದಾಳಿ; ಮೂವರು ಮಕ್ಕಳು ಸೇರಿ 9 ಮಂದಿಗೆ ಗಾಯ
-
EXPLAINER3 hours ago
ವಿಸ್ತಾರ Explainer: ಹೊಸ ಸಂಸತ್ ಭವನದಲ್ಲಿ ಸ್ಥಾಪಿತಗೊಂಡ ತಮಿಳುನಾಡಿನ ಚಿನ್ನದ ಸೆಂಗೋಲ್; ಏನಿದರ ಮಹತ್ವ?