Site icon Vistara News

PAN Card: ಆಧಾರ್ ಕಾರ್ಡ್ ಮೂಲಕ ತ್ವರಿತವಾಗಿ ಪ್ಯಾನ್ ಪಡೆಯುವುದು ಹೇಗೆ?

e-pan

ಭಾರತೀಯ ಆದಾಯ ತೆರಿಗೆ ಇಲಾಖೆಯು(Income Tax Department), ತೆರಿಗೆ ವ್ಯವಹಾರಕ್ಕಾಗಿ ಎಲ್ಲ ವ್ಯಕ್ತಿಗಳು ಮತ್ತು ಕಂಪನಿಗಳಿಗೆ ಪರ್ಮನೆಂಟ್ ಅಕೌಂಟ್ ನಂಬರ್ (Permanent Account Number – PAN) ಎಂಬ 10 ಅಂಕಿಗಳ ಸಂಖ್ಯೆಯನ್ನು ನೀಡುತ್ತದೆ. ಪ್ರತಿ ತೆರಿಗೆದಾರರ ಪ್ಯಾನ್ ನಂಬರ್ ಭಿನ್ನವಾಗಿದ್ದು, ಅವರ ಹಣಕಾಸು ವ್ಯವಹಾರಗಳನ್ನು (Financial Transactions) ಟ್ರ್ಯಾಕ್ ಮಾಡುತ್ತದೆ. ಸಾಂಪ್ರದಾಯಿಕ ರೀತಿಯಲ್ಲಿ ಪ್ಯಾನ್ ಕಾರ್ಡ್ ‌ಪಡೆಯುವುದಾದರೆ ಸಾಕಷ್ಟು ಕಾಲಾವಕಾಶ ಹಿಡಿಯುತ್ತದೆ. ಫಿಜಿಕಲ್ ಪ್ಯಾನ್ ಕಾರ್ಡ್ (PAN Card) ಪಡೆಯಲು ಪ್ರಿಂಟಿಂಗ್, ಪೋಸ್ಟೇಜ್ ಮತ್ತು ಅದರ ನಿರ್ವಹಣೆಗಾಗಿ ಸಮಯ ಬೇಕಾಗುತ್ತದೆ. ಆದರೆ, ಇ-ಪ್ಯಾನ್‌ಗಳನ್ನು ಅತ್ಯಂತ ತ್ವರಿತವಾಗಿ ಪಡೆಯಬಹುದಾಗಿದೆ. ಇ-ಪ್ಯಾನ್‌ ಕಾರ್ಡ್‌ಗಳು ಸಾಕಷ್ಟು ಸಮಯದ ಉಳಿತಾಯಕ್ಕೆ ಕಾರಣವಾಗುತ್ತವೆ.

ಏನಿದು ಇ-ಪ್ಯಾನ್?

ಸಿಂಧುತ್ವಗೊಂಡಿರುವ ಆಧಾರ್ ನಂಬರ್ ಹೊಂದಿರುವವರಿಗೆ ತ್ವರಿತವಾಗಿ ಪ್ಯಾನ್‌ ಒದಗಿಸುವ ಕೆಲಸವನ್ನು ಇ-ಪ್ಯಾನ್ ಮಾಡುತ್ತದೆ. ಪ್ಯಾನ್ ಅನ್ನು ಪಿಡಿಎಫ್ ಫಾರ್ಮಾಟ್‌ನಲ್ಲಿ ನೀಡಲಾಗುತ್ತದೆ. ಇದಕ್ಕೆ ಯಾವುದೇ ವೆಚ್ಚ ತಗಲುವುದಿಲ್ಲ. ಇ-ಪ್ಯಾನ್ ಎಂಬುದು, ಆಧಾರ್‌ನ ಇ-ಕೆವೈಸಿ ಡೇಟಾವನ್ನು ಆಧರಿಸಿ, ಎಲೆಕ್ಟ್ರಾನಿಕ್ ಸ್ವರೂಪದಲ್ಲಿ ನೀಡಲಾದ ಡಿಜಿಟಲ್ ಸಹಿ ಮಾಡಿದ ಪ್ಯಾನ್ ಕಾರ್ಡ್ ಆಗಿರುತ್ತದೆ.

ಇ-ಪ್ಯಾನ್ ಸೇವೆಯು ಎಲ್ಲಾ ವೈಯಕ್ತಿಕ ತೆರಿಗೆದಾರರಿಗೆ ಲಭ್ಯವಿರುತ್ತದೆ. ಆಧಾರ್ ಹೊಂದಿದ್ದು, ಪ್ಯಾನ್ ಕಾರ್ಡ್ ಹೊಂದಿಲ್ಲ ಎಂದಾದರೆ, ಅದೇ ಕಾರ್ಡ್ ಬಳಸಿಕೊಂಡು ಇ ಪ್ಯಾನ್ ಪಡೆದುಕೊಳ್ಳಬಹುದಾಗಿದೆ. ಇ ಪ್ಯಾನ್‌ನಿಂದ ಸಾಕಷ್ಟು ಪ್ರಯೋಜನಗಳಿವೆ. ಇದು ಸುಲಭ ಮತ್ತು ಕಾಗದರಹಿತ ಸೇವೆಯಾಗಿದೆ. ಇ-ಪ್ಯಾನ್ ಕಾನೂನುಬದ್ಧವಾಗಿವೆ. ಐಟಿಆರ್, ಹಣಕಾಸು ವ್ಯವಹಾರಗಳು, ಕೆವೈಸಿ ಅಗತ್ಯಗಳನ್ನು ಪೂರೈಸುವುದು ಸೇರಿದಂತೆ ಪ್ಯಾನ್ ಅಗತ್ಯವಿರುವ ಎಲ್ಲ ಉದ್ದೇಶ ಕಾರ್ಯಗಳಿಗೆ ಇ ಪ್ಯಾನ್ ಸ್ವೀಕಾರ್ಹವಾಗಿವೆ.

ಇ-ಪ್ಯಾನ್ ಪಡೆಯುವುದು ಹೇಗೆ?

ಮೊದಲಿಗೆ, ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ಪೋರ್ಟಲ್‌ https://www.incometax.gov.in/iec/foportal ಭೇಟಿ ನೀಡಿ. ಮುಖಪುಟದಲ್ಲಿರುವ Instant e-PAN ಮೇಲೆ ಕ್ಲಿಕ್ ಮಾಡಿ. ಇ-ಪ್ಯಾನ್ ಪುಟದಲ್ಲಿರುವ New e-PAN ಆಯ್ಕೆ ಮೇಲೆ ಕ್ಲಿಕ್ ಮಾಡಿ. ನ್ಯೂ ಇ-ಪ್ಯಾನ್ ಪುಟದಲ್ಲಿ ನಿಮ್ಮ 12 ಅಂಕಿಯ ಆಧಾರ್ ನಂಬರ್ ನಮೂದಿಸಿ ಮತ್ತು I ಆಯ್ಕೆ ಮಾಡಿ ಚೆಕ್ ಬಾಕ್ಸ್ ಕನ್ಫರ್ಮ್ ಮಾಡಿ, Continue ಮೇಲೆ ಕ್ಲಿಕ್ ಮಾಡಿ. ಒಟಿಪಿ ವ್ಯಾಲಿಡಿಷನ್ ಪುಟದಲ್ಲಿಪುಟದಲ್ಲಿ, ”ನಾನು ಸಮ್ಮತಿ ನಿಯಮಗಳನ್ನು ಓದಿದ್ದೇನೆ ಮತ್ತು ಮುಂದುವರೆಯಲು ಸಮ್ಮತಿಸುತ್ತೇನೆ” ಎಂಬುದನ್ನು ಚೆಕ್ ಮಾಡಿ ಮತ್ತು Continue ಮೇಲೆ ಕ್ಲಿಕ್ ಮಾಡಿ. ಇದಾದ ಬಳಿಕ ಒಟಿಪಿ ವ್ಯಾಲಿಡಿಷನ್ ಪುಟದಲ್ಲಿ 6 ಅಂಕಿಯುಳ್ಳ ಒಟಿಪಿಯನ್ನು ನಮೂದಿಸಬೇಕು. ಆಧಾರ್‌ನೊಂದಿಗೆ ಲಿಂಕ್ ಆಗಿರುವ ಮೊಬೈಲ್ ನಂಬರ್‌ಗೆ ಈ ಒಟಿಪಿ ಕಳುಹಿಸಲಾಗಿರುತ್ತದೆ. ಆಧಾರ್ ಮೌಲ್ಯೀಕರಿಸುವ ಚೆಕ್‌ಬಾಕ್ಸ್ ಆಯ್ಕೆ ಮಾಡಿ ಮತ್ತು Continue ಮೇಲೆ ಕ್ಲಿಕ್ ಮಾಡಿ. ಬಳಿಕ ವ್ಯಾಲಿಡಿಟ್ ಆಧಾರ್ ಪುಟದಲ್ಲಿ ಐ ಅಕ್ಸೆಪ್ಟ್ ಎಂಬ ಚೆಕ್ ಬಾಕ್ಸ್ ಅನ್ನು ಸೆಲೆಕ್ಟ್ ಮಾಡಿ ಮತ್ತು Continue ಕ್ಲಿಕ್ ಮಾಡಿ.

ಈ ಸುದ್ದಿಯನ್ನೂ ಓದಿ: Money Guide: ಐಟಿಆರ್‌ ರಿಫಂಡ್ ಸಮಸ್ಯೆಯೇ? ಈ ಟಿಪ್ಸ್ ಫಾಲೋ ಮಾಡಿ, ಪ್ರಾಬ್ಲೆಮ್ ಖತಂ

ಮಾಹಿತಿ ನಮೂದಿಸುವುದು ಸಕ್ಸೆಸ್‌ಫುಲ್ ಆದ ಮೇಲೆ ಸ್ವೀಕೃತಿ ನಂಬರ್‌ನೊಂದಿಗೆ ನೋಂದಣಿ ಸಕ್ಸೆಸ್ ಸಂದೇಶವೊಂದು ತೆರೆಯ ಮೇಲೆ ಕಾಣಿಸಿಕೊಳ್ಳುತ್ತದೆ. ಮುಂದಿನ ಉಲ್ಲೇಖಗಳಿಗಾಗಿ ಈ ಸ್ವೀಕೃತಿ ಐಡಿಯನ್ನು ಸೇವ್‌ ಮಾಡಿಟ್ಟುಕೊಳ್ಳಿ. ಹಾಗೆಯೇ, ಆಧಾರ್‌ನೊಂದಿಗೆ ಲಿಂಕ್ ಆದ ಮೊಬೈಲ್‌ ನಂಬರ್‌ಗೆ ಕನ್ಫರ್ಮೇಷನ್ ಸಂದೇಶ ಕೂಡ ಬರುತ್ತೆ.

ತಂತ್ರಜ್ಞಾನ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version