ಗ್ಯಾಜೆಟ್ಸ್
PAN Card: ಆಧಾರ್ ಕಾರ್ಡ್ ಮೂಲಕ ತ್ವರಿತವಾಗಿ ಪ್ಯಾನ್ ಪಡೆಯುವುದು ಹೇಗೆ?
PAN Card: ಒಂದೊಮ್ಮೆ ನಿಮ್ಮ ಬಳಿ ಆಧಾರ್ ಇದ್ದು, ಪ್ಯಾನ್ ಕಾರ್ಡ್ ಇಲ್ಲ ಎಂದಾದ್ರೆ, ಆಧಾರ್ ನಂಬರ್ ಬಳಸಿಕೊಂಡು ಇ-ಪ್ಯಾನ್ ಪಡೆಯುಬಹುದು. ಅದು ಹೇಗೆ?
ಭಾರತೀಯ ಆದಾಯ ತೆರಿಗೆ ಇಲಾಖೆಯು(Income Tax Department), ತೆರಿಗೆ ವ್ಯವಹಾರಕ್ಕಾಗಿ ಎಲ್ಲ ವ್ಯಕ್ತಿಗಳು ಮತ್ತು ಕಂಪನಿಗಳಿಗೆ ಪರ್ಮನೆಂಟ್ ಅಕೌಂಟ್ ನಂಬರ್ (Permanent Account Number – PAN) ಎಂಬ 10 ಅಂಕಿಗಳ ಸಂಖ್ಯೆಯನ್ನು ನೀಡುತ್ತದೆ. ಪ್ರತಿ ತೆರಿಗೆದಾರರ ಪ್ಯಾನ್ ನಂಬರ್ ಭಿನ್ನವಾಗಿದ್ದು, ಅವರ ಹಣಕಾಸು ವ್ಯವಹಾರಗಳನ್ನು (Financial Transactions) ಟ್ರ್ಯಾಕ್ ಮಾಡುತ್ತದೆ. ಸಾಂಪ್ರದಾಯಿಕ ರೀತಿಯಲ್ಲಿ ಪ್ಯಾನ್ ಕಾರ್ಡ್ ಪಡೆಯುವುದಾದರೆ ಸಾಕಷ್ಟು ಕಾಲಾವಕಾಶ ಹಿಡಿಯುತ್ತದೆ. ಫಿಜಿಕಲ್ ಪ್ಯಾನ್ ಕಾರ್ಡ್ (PAN Card) ಪಡೆಯಲು ಪ್ರಿಂಟಿಂಗ್, ಪೋಸ್ಟೇಜ್ ಮತ್ತು ಅದರ ನಿರ್ವಹಣೆಗಾಗಿ ಸಮಯ ಬೇಕಾಗುತ್ತದೆ. ಆದರೆ, ಇ-ಪ್ಯಾನ್‌ಗಳನ್ನು ಅತ್ಯಂತ ತ್ವರಿತವಾಗಿ ಪಡೆಯಬಹುದಾಗಿದೆ. ಇ-ಪ್ಯಾನ್ ಕಾರ್ಡ್‌ಗಳು ಸಾಕಷ್ಟು ಸಮಯದ ಉಳಿತಾಯಕ್ಕೆ ಕಾರಣವಾಗುತ್ತವೆ.
ಏನಿದು ಇ-ಪ್ಯಾನ್?
ಸಿಂಧುತ್ವಗೊಂಡಿರುವ ಆಧಾರ್ ನಂಬರ್ ಹೊಂದಿರುವವರಿಗೆ ತ್ವರಿತವಾಗಿ ಪ್ಯಾನ್ ಒದಗಿಸುವ ಕೆಲಸವನ್ನು ಇ-ಪ್ಯಾನ್ ಮಾಡುತ್ತದೆ. ಪ್ಯಾನ್ ಅನ್ನು ಪಿಡಿಎಫ್ ಫಾರ್ಮಾಟ್‌ನಲ್ಲಿ ನೀಡಲಾಗುತ್ತದೆ. ಇದಕ್ಕೆ ಯಾವುದೇ ವೆಚ್ಚ ತಗಲುವುದಿಲ್ಲ. ಇ-ಪ್ಯಾನ್ ಎಂಬುದು, ಆಧಾರ್‌ನ ಇ-ಕೆವೈಸಿ ಡೇಟಾವನ್ನು ಆಧರಿಸಿ, ಎಲೆಕ್ಟ್ರಾನಿಕ್ ಸ್ವರೂಪದಲ್ಲಿ ನೀಡಲಾದ ಡಿಜಿಟಲ್ ಸಹಿ ಮಾಡಿದ ಪ್ಯಾನ್ ಕಾರ್ಡ್ ಆಗಿರುತ್ತದೆ.
ಇ-ಪ್ಯಾನ್ ಸೇವೆಯು ಎಲ್ಲಾ ವೈಯಕ್ತಿಕ ತೆರಿಗೆದಾರರಿಗೆ ಲಭ್ಯವಿರುತ್ತದೆ. ಆಧಾರ್ ಹೊಂದಿದ್ದು, ಪ್ಯಾನ್ ಕಾರ್ಡ್ ಹೊಂದಿಲ್ಲ ಎಂದಾದರೆ, ಅದೇ ಕಾರ್ಡ್ ಬಳಸಿಕೊಂಡು ಇ ಪ್ಯಾನ್ ಪಡೆದುಕೊಳ್ಳಬಹುದಾಗಿದೆ. ಇ ಪ್ಯಾನ್‌ನಿಂದ ಸಾಕಷ್ಟು ಪ್ರಯೋಜನಗಳಿವೆ. ಇದು ಸುಲಭ ಮತ್ತು ಕಾಗದರಹಿತ ಸೇವೆಯಾಗಿದೆ. ಇ-ಪ್ಯಾನ್ ಕಾನೂನುಬದ್ಧವಾಗಿವೆ. ಐಟಿಆರ್, ಹಣಕಾಸು ವ್ಯವಹಾರಗಳು, ಕೆವೈಸಿ ಅಗತ್ಯಗಳನ್ನು ಪೂರೈಸುವುದು ಸೇರಿದಂತೆ ಪ್ಯಾನ್ ಅಗತ್ಯವಿರುವ ಎಲ್ಲ ಉದ್ದೇಶ ಕಾರ್ಯಗಳಿಗೆ ಇ ಪ್ಯಾನ್ ಸ್ವೀಕಾರ್ಹವಾಗಿವೆ.
ಇ-ಪ್ಯಾನ್ ಪಡೆಯುವುದು ಹೇಗೆ?
ಮೊದಲಿಗೆ, ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ಪೋರ್ಟಲ್ https://www.incometax.gov.in/iec/foportal ಭೇಟಿ ನೀಡಿ. ಮುಖಪುಟದಲ್ಲಿರುವ Instant e-PAN ಮೇಲೆ ಕ್ಲಿಕ್ ಮಾಡಿ. ಇ-ಪ್ಯಾನ್ ಪುಟದಲ್ಲಿರುವ New e-PAN ಆಯ್ಕೆ ಮೇಲೆ ಕ್ಲಿಕ್ ಮಾಡಿ. ನ್ಯೂ ಇ-ಪ್ಯಾನ್ ಪುಟದಲ್ಲಿ ನಿಮ್ಮ 12 ಅಂಕಿಯ ಆಧಾರ್ ನಂಬರ್ ನಮೂದಿಸಿ ಮತ್ತು I ಆಯ್ಕೆ ಮಾಡಿ ಚೆಕ್ ಬಾಕ್ಸ್ ಕನ್ಫರ್ಮ್ ಮಾಡಿ, Continue ಮೇಲೆ ಕ್ಲಿಕ್ ಮಾಡಿ. ಒಟಿಪಿ ವ್ಯಾಲಿಡಿಷನ್ ಪುಟದಲ್ಲಿಪುಟದಲ್ಲಿ, ”ನಾನು ಸಮ್ಮತಿ ನಿಯಮಗಳನ್ನು ಓದಿದ್ದೇನೆ ಮತ್ತು ಮುಂದುವರೆಯಲು ಸಮ್ಮತಿಸುತ್ತೇನೆ” ಎಂಬುದನ್ನು ಚೆಕ್ ಮಾಡಿ ಮತ್ತು Continue ಮೇಲೆ ಕ್ಲಿಕ್ ಮಾಡಿ. ಇದಾದ ಬಳಿಕ ಒಟಿಪಿ ವ್ಯಾಲಿಡಿಷನ್ ಪುಟದಲ್ಲಿ 6 ಅಂಕಿಯುಳ್ಳ ಒಟಿಪಿಯನ್ನು ನಮೂದಿಸಬೇಕು. ಆಧಾರ್‌ನೊಂದಿಗೆ ಲಿಂಕ್ ಆಗಿರುವ ಮೊಬೈಲ್ ನಂಬರ್‌ಗೆ ಈ ಒಟಿಪಿ ಕಳುಹಿಸಲಾಗಿರುತ್ತದೆ. ಆಧಾರ್ ಮೌಲ್ಯೀಕರಿಸುವ ಚೆಕ್‌ಬಾಕ್ಸ್ ಆಯ್ಕೆ ಮಾಡಿ ಮತ್ತು Continue ಮೇಲೆ ಕ್ಲಿಕ್ ಮಾಡಿ. ಬಳಿಕ ವ್ಯಾಲಿಡಿಟ್ ಆಧಾರ್ ಪುಟದಲ್ಲಿ ಐ ಅಕ್ಸೆಪ್ಟ್ ಎಂಬ ಚೆಕ್ ಬಾಕ್ಸ್ ಅನ್ನು ಸೆಲೆಕ್ಟ್ ಮಾಡಿ ಮತ್ತು Continue ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ: Money Guide: ಐಟಿಆರ್ ರಿಫಂಡ್ ಸಮಸ್ಯೆಯೇ? ಈ ಟಿಪ್ಸ್ ಫಾಲೋ ಮಾಡಿ, ಪ್ರಾಬ್ಲೆಮ್ ಖತಂ
ಮಾಹಿತಿ ನಮೂದಿಸುವುದು ಸಕ್ಸೆಸ್‌ಫುಲ್ ಆದ ಮೇಲೆ ಸ್ವೀಕೃತಿ ನಂಬರ್‌ನೊಂದಿಗೆ ನೋಂದಣಿ ಸಕ್ಸೆಸ್ ಸಂದೇಶವೊಂದು ತೆರೆಯ ಮೇಲೆ ಕಾಣಿಸಿಕೊಳ್ಳುತ್ತದೆ. ಮುಂದಿನ ಉಲ್ಲೇಖಗಳಿಗಾಗಿ ಈ ಸ್ವೀಕೃತಿ ಐಡಿಯನ್ನು ಸೇವ್ ಮಾಡಿಟ್ಟುಕೊಳ್ಳಿ. ಹಾಗೆಯೇ, ಆಧಾರ್‌ನೊಂದಿಗೆ ಲಿಂಕ್ ಆದ ಮೊಬೈಲ್ ನಂಬರ್‌ಗೆ ಕನ್ಫರ್ಮೇಷನ್ ಸಂದೇಶ ಕೂಡ ಬರುತ್ತೆ.
ತಂತ್ರಜ್ಞಾನ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಗ್ಯಾಜೆಟ್ಸ್
ChatGPT: ಚಾಟ್‌ಜಿಪಿಟಿ ಜತೆ ನೀವಿನ್ನು ಮಾತನಾಡಬಹುದು! ಹೊಸ ಫೀಚರ್ ಪರಿಚಯಿಸಿದ ಓಪನ್ಎಐ
ChatGPT: ತಂತ್ರಜ್ಞಾನದಲ್ಲಿ ಕ್ರಾಂತಿಕಾರಕ ಬದಲಾವಣೆಗೆ ಕಾರಣವಾಗಿರುವ ಚಾಟ್‌ಜಿಪಿಟಿ ಹೊಸ ಸಾಧ್ಯತೆಯನ್ನು ಕಂಡುಕೊಂಡಿದೆ. ಬಳಕೆದಾರರು ಈಗ ಚಾಟ್‌ಜಿಪಿಟಿಯೊಂದಿಗೆ ಧ್ವನಿ ಮೂಲಕ ಸಂಭಾಷಣೆಯನ್ನು ನಡೆಸಬಹುದು.
ನವದೆಹಲಿ: ಮೈಕ್ರೋಸಾಫ್ಟ್ (Microsoft) ಬೆಂಬಲಿತ ಓಪನ್ಎಐ (OpenAI) ತನ್ನ ಜನರೇಟಿವ್ ಕೃತಕ ಬುದ್ಧಿಮತ್ತೆ (Generative AI) ಆಧರಿತ ಚಾಟ್‌ಬಾಟ್ ಚಾಟ್‌ಜಿಪಿಟಿಗೆ (ChatGPT) ಹೊಸ ಫೀಚರ್ ಪರಿಚಯಿಸಿದೆ. ಧ್ವನಿ ಮತ್ತು ಇಮೇಜ್ ಸಾಮರ್ಥ್ಯಗಳನ್ನು ಪಡೆದುಕೊಳ್ಳುತ್ತಿರುವ ಚಾಟ್ ಜಿಪಿಟಿ, ಬಳಕೆದಾರರಿಗೆ ಐದು ವಿಭಿನ್ನ ಧ್ವನಿಗಳಲ್ಲಿ ಉತ್ತರಗಳನ್ನು ನೀಡಲು ಮತ್ತು ಅವರು ಸಲ್ಲಿಸುವ ಚಿತ್ರಗಳಿಗೆ ಉತ್ತರಗಳನ್ನು ಪಡೆದುಕೊಳ್ಳಲು ಅನುಮತಿಸುತ್ತದೆ ಎಂದು ಕಂಪನಿಯು ಹೇಳಿದೆ. ಈ ಕುರಿತು ಎಕ್ಸ್ ವೇದಿಕೆಯಲ್ಲಿ ಮಾಹಿತಿ ನೀಡಿರುವ ಓಪನ್ಎಐ, ಚಾಟ್‌ಜಿಪಿಟಿ ಈಗ ನೋಡುತ್ತದೆ, ಕೇಳುತ್ತದೆ ಮತ್ತು ಮಾತನಾಡುತ್ತದೆ. ಮುಂದಿನ ಎರಡು ವಾರಗಳಲ್ಲಿ ಪ್ಲಸ್ ಬಳಕೆದಾರರು ಚಾಟ್‌ಜಿಪಿಟಿ ಜತೆ ಇಮೇಜ್ ಸಂಭಾಷಣೆ ಜತೆಗೆ ಧ್ವನಿ ಸಂಭಾಷಣೆ ಕೂಡ ನಡೆಸಬಹುದು ಎಂದು ಹೇಳಿದೆ.
Use your voice to engage in a back-and-forth conversation with ChatGPT. Speak with it on the go, request a bedtime story, or settle a dinner table debate.
— OpenAI (@OpenAI) September 25, 2023
Sound on 🔊 pic.twitter.com/3tuWzX0wtS
ಧ್ವನಿ ಮತ್ತು ಇಮೇಜ್ ಸಾಮರ್ಥ್ಯಗಳು ನಿಮಗೆ ಧ್ವನಿ ಸಂಭಾಷಣೆ ನಡೆಸಲು ಅಥವಾ ಚಾಟ್‌ಜಿಪಿಟಿಗೆ ನೀವು ಏನು ಮಾತನಾಡುತ್ತಿರುವಿರಿ ಎಂಬುದನ್ನು ತೋರಿಸಲು ಅನುಮತಿಸುವ ಮೂಲಕ ಹೊಸ, ಹೆಚ್ಚು ಅರ್ಥಗರ್ಭಿತ ಇಂಟರ್ಫೇಸ್ ಅನ್ನು ಒದಗಿಸುತ್ತವೆ ಎಂದು ಸ್ಯಾಮ್ ಆಲ್ಟ್‌ಮ್ಯಾನ್ ನೇತೃತ್ವದ ಕಂಪನಿಯು ಬ್ಲಾಗ್ ಪೋಸ್ಟ್‌ನಲ್ಲಿ ಹೇಳಿದೆ.
ಈ ಸುದ್ದಿಯನ್ನೂ ಓದಿ: ChatGPT: 3 ವರ್ಷವಾದ್ರೂ 17 ವೈದ್ಯರಿಗೆ ಗೊತ್ತಾಗದ ಬಾಲಕನ ಹಲ್ಲು ನೋವಿನ ಕಾರಣ ಪತ್ತೆ ಹಚ್ಚಿದ ಚಾಟ್‌ಜಿಪಿಟಿ!
ಐದು ವಿಭಿನ್ನ ಧ್ವನಿಗಳಲ್ಲಿ ಚಾಟ್‌ಜಾಪಿಟಿಯು ಬಳಕೆದಾರರ ಪ್ರಶ್ನೆಗಳಿಗೆ ಉತ್ತರಿಸುವ ಸಾಮರ್ಥ್ಯವನ್ನು ಹೊಂದಿದೆ. ಬಳಕೆದಾರರು ತಮ್ಮ ಆದ್ಯತೆಗೆ ಅನುಗುಣವಾಗಿ ಧ್ವನಿಯನ್ನು ಆಯ್ಕೆ ಮಾಡಬಹುದಾಗಿದೆ. ಪ್ರತಿ ವಿಭಿನ್ನ ಧ್ವನಿಯನ್ನು ರಚಿಸಲು ವೃತ್ತಿಪರ ಧ್ವನಿ ನಟರ ಸಹಾಯವನ್ನು ಪಡೆದಿದೆ. ಹಾಗೆಯೇ ಮಾತನಾಡುವ ಪದಗಳನ್ನು ಪಠ್ಯಕ್ಕೆ ನಕಲಿಸಲು ಕಂಪನಿಯ ಸ್ವಾಮ್ಯದ ವಿಸ್ಪರ್ ಸ್ಪೀಚ್ ಗುರುತಿಸುವಿಕೆ ವ್ಯವಸ್ಥೆಯನ್ನು ಬಳಸುತ್ತದೆ ಎಂದು ಓಪನ್ ಎಐ ಹೇಳಿದೆ.
ಚಾಟ್‌ಜಿಪಿಟಿಯ ಹೊಸ ಧ್ವನಿ ಸಾಮರ್ಥ್ಯಗಳು ಹೊಸ ಪಠ್ಯದಿಂದ ಭಾಷಣದ ಮಾದರಿಯಿಂದ ಚಾಲಿತವಾಗಿದೆ. ಓಪನ್ಎಐ ಹೇಳಿಕೊಳ್ಳುವ ಪ್ರಕಾರ, ಪಠ್ಯ ಮತ್ತು ಕೆಲವು ಸೆಕೆಂಡುಗಳ ಮಾತಿನ ಮಾದರಿಗಳಿಂದ ಮಾನವ ತರಹದ ಆಡಿಯೊವನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಹೊಸ ತಾಂತ್ರಿಕ ವ್ಯವಸ್ಥೆಯು ಇದು ಅನೇಕ “ಸೃಜನಶೀಲ ಮತ್ತು ಪ್ರವೇಶಿಸುವಿಕೆ-ಕೇಂದ್ರಿತ ಅಪ್ಲಿಕೇಶನ್‌ಗಳಿಗೆ” ಬಾಗಿಲು ತೆರೆಯಲಿದೆ ಎಂದು ಓಪನ್ಎಐ ಅಭಿಪ್ರಾಯಪಟ್ಟಿದೆ.
ಗ್ಯಾಜೆಟ್ಸ್
WhatsApp update: ಈ ಹಳೇ ಫೋನ್‌ಗಳಲ್ಲಿ ಇನ್ನು ವಾಟ್ಸ್ಯಾಪ್ ಸಿಗೋಲ್ಲ! ನಿಮ್ಮ ಫೋನ್ ಕೂಡ ಇದೆಯಾ ನೋಡಿಕೊಳ್ಳಿ
ಇತ್ತೀಚಿನ ಪ್ರಕಟಣೆಯಲ್ಲಿ WhatsApp ಅಕ್ಟೋಬರ್ 24ರ ನಂತರ ಆಂಡ್ರಾಯ್ಡ್ ಆವೃತ್ತಿ 4.1 (Android OS version 4.1) ಮತ್ತು ಅದಕ್ಕಿಂತ ಹಳೆಯ ಸ್ಮಾರ್ಟ್‌ಫೋನ್‌ಗಳಲ್ಲಿ ಕಾರ್ಯಾಚರಣೆ ನಿಲ್ಲಿಸುವುದಾಗಿ ತಿಳಿಸಿದೆ.
ಹೊಸದಿಲ್ಲಿ: ಹಲವಾರು ಹಳೆಯ ಆಂಡ್ರಾಯ್ಡ್ (Android) ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸ್ಯಾಪ್ ಸದ್ಯದಲ್ಲಿಯೇ ಕಾರ್ಯನಿರ್ವಹಣೆ ನಿಲ್ಲಿಸಲಿದೆ.
ಇತ್ತೀಚಿನ ಪ್ರಕಟಣೆಯಲ್ಲಿ WhatsApp ಅಕ್ಟೋಬರ್ 24ರ ನಂತರ ಆಂಡ್ರಾಯ್ಡ್ ಆವೃತ್ತಿ 4.1 (Android OS version 4.1) ಮತ್ತು ಅದಕ್ಕಿಂತ ಹಳೆಯ ಸ್ಮಾರ್ಟ್‌ಫೋನ್‌ಗಳಲ್ಲಿ ಕಾರ್ಯಾಚರಣೆ ನಿಲ್ಲಿಸುವುದಾಗಿ ತಿಳಿಸಿದೆ.
ಬಳಕೆದಾರರ ಅನುಭವ, ಖಾಸಗಿತನ ಮತ್ತು ಸುರಕ್ಷತೆಯನ್ನು ಸುಧಾರಿಸಲು WhatsApp ನಿಯಮಿತವಾಗಿ ತನ್ನ ಆಫ್ ಅನ್ನು ಹೊಸ ಫೀಚರ್‌ಗಳು ಮತ್ತು ಸೆಕ್ಯುರಿಟಿ ವ್ಯವಸ್ಥೆಗಳೊಂದಿಗೆ ನವೀಕರಿಸುತ್ತದೆ. Android, iOS ಮತ್ತು ವೆಬ್ ಸೇರಿದಂತೆ ಎಲ್ಲಾ WhatsApp ಆವೃತ್ತಿಗಳು ಹೊಸ ಆಪರೇಟಿಂಗ್ ಸಿಸ್ಟಮ್‌ಗಳಿಗೆ ಹೊಂದಿಕೊಳ್ಳಲು ಪ್ರತಿ ತಿಂಗಳು ಹೊಸ ಅಪ್‌ಡೇಟ್‌ಗಳನ್ನು ಸ್ವೀಕರಿಸುತ್ತವೆ. ಇದರೊಂದಿಗೆ, ಹಳೆಯ ಕೆಲವು ಆಪರೇಟಿಂಗ್ ಸಿಸ್ಟಮ್‌ಗಳಿಗೆ ಸಪೋರ್ಟ್ ತೆಗೆದುಹಾಕುತ್ತದೆ.
“ಏನನ್ನು ಬೆಂಬಲಿಸುವುದನ್ನು ನಿಲ್ಲಿಸಬೇಕು ಎಂಬುದನ್ನು ಆಯ್ಕೆ ಮಾಡಲು,
ʼʼಪ್ರತಿ ವರ್ಷ ನಾವು ಇತರ ಟೆಕ್ ಕಂಪನಿಗಳಂತೆ, ಯಾವ ಸಾಧನಗಳು ಮತ್ತು ಸಾಫ್ಟ್‌ವೇರ್ ಹಳೆಯದು ಮತ್ತು ಅವುಗಳನ್ನು ಎಷ್ಟು ಜನ ಇನ್ನೂ ಬಳಸುತ್ತಿದ್ದಾರೆ ಎಂಬುದನ್ನು ನೋಡುತ್ತೇವೆ. ಈ ಸಾಧನಗಳು ಇತ್ತೀಚಿನ ಸೆಕ್ಯುರಿಟಿ ವ್ಯವಸ್ಥೆಗಳನ್ನು ಹೊಂದಿಲ್ಲ. ಅಥವಾ ಅವುಗಳಲ್ಲಿ ಇರಬಹುದು ವಾಟ್ಸ್ಯಾಪ್ ನಡೆಸಲು ಅಗತ್ಯವಿರುವ ಕ್ರಿಯಾಶೀಲತೆಯ ಕೊರತೆಯಿದೆ” ಎಂದು WhatsApp ತಿಳಿಸಿದೆ.
Android OS ಆವೃತ್ತಿ 4.1 ಮತ್ತು ಅದಕ್ಕಿಂತ ಹಳೆಯದಾದ ಕೆಲವು ಜನಪ್ರಿಯ ಸ್ಮಾರ್ಟ್‌ಫೋನ್‌ಗಳ ಪಟ್ಟಿ ಕೆಲಗೆ ನೀಡಲಾಗಿದೆ. ಇವುಗಳಲ್ಲಿ ಅಕ್ಟೋಬರ್ 24ರ ನಂತರ ವಾಟ್ಸ್ಯಾಪ್ ಸಿಗುವುದಿಲ್ಲ.
ನೆಕ್ಸಸ್ 7 (ಆಂಡ್ರಾಯ್ಡ್ 4.2ಗೆ ಅಪ್‌ಗ್ರೇಡ್ ಮಾಡಬಹುದು)
ಸ್ಯಾಮ್ಸಂಗ್ ಗ್ಯಾಲಾಕ್ಸಿ ನೋಟ್ 2
ಎಚ್‌ಟಿಸಿ ಒನ್
ಸೋನಿ ಎಕ್ಸ್‌ಪೀರಿಯಾ ಝಡ್
ಎಲ್ಜಿ ಆಪ್ಟಿಮಸ್ ಜಿ ಪ್ರೊ
ಸ್ಯಾಮ್ಸಂಗ್ ಗ್ಯಾಲಾಕ್ಸಿ ಎಸ್2
ಸ್ಯಾಮ್ಸಂಗ್ ಗ್ಯಾಲಾಕ್ಸಿ ನೆಕ್ಸಸ್
ಎಚ್‌ಟಿಸಿ ಸೆನ್ಸೇಶನ್
ಮೊಟರೋಲಾ ಡ್ರಾಯ್ಡ್ ರೇಝರ್
ಸೋನಿ ಎಕ್ಸ್‌ಪೀರಿಯಾ ಎಸ್2
ಮೋಟರೋಲಾ ಜೂಮ್
ಸ್ಯಾಮ್ಸಂಗ್ ಗ್ಯಾಲಾಕ್ಸಿ ಟ್ಯಾಬ್ 10.1
ಏಸಸ್ ಈ ಪ್ಯಾಡ್ ಟ್ರಾನ್ಸ್ಫಾರ್ಮರ್
ಏಸರ್ ಐಕೋನಿಯಾ ಟ್ಯಾಬ್ ಎ5003
ಸ್ಯಾಮ್ಸಂಗ್ ಗ್ಯಾಲಾಕ್ಸಿ ಎಸ್
ಎಚ್‌ಟಿಸಿ ಡಿಸೈರ್ ಎಚ್‌ಡಿ
ಎಲ್‌ಜಿ ಒಪ್ಟಿಮಸ್ 2ಎಕ್ಸ್
ಸೋನಿ ಎರಿಕ್ಸನ್ ಎಕ್ಸ್‌ಪೀರಿಯಾ ಆರ್ಕ್3
ಈ ಪಟ್ಟಿಯಲ್ಲಿರುವ ಹೆಚ್ಚಿನ ಫೋನ್‌ಗಳು ಇಂದು ಹೆಚ್ಚಿನ ಜನರು ಬಳಸದ ಹಳೆಯ ಮಾದರಿಗಳಾಗಿವೆ. ಆದಾಗ್ಯೂ ನೀವು ಇನ್ನೂ ಈ ಫೋನ್‌ಗಳಲ್ಲಿ ಒಂದನ್ನು ಹೊಂದಿದ್ದರೆ, ನೀವು ಹೊಸ ಸಾಧನಕ್ಕೆ ಅಪ್‌ಗ್ರೇಡ್ ಮಾಡಬೇಕಾದೀತು. ಏಕೆಂದರೆ ವಾಟ್ಸ್ಯಾಪ್ ಮಾತ್ರವಲ್ಲದೆ ಇತರ ಹಲವು ಆ್ಯಪ್‌ಗಳು ಕೂಡ ಈ ಹಳತಾದ ಆಪರೇಟಿಂಗ್ ಸಿಸ್ಟಂಗಳಿಗೆ ತಮ್ಮ ಬೆಂಬಲವನ್ನು ನಿಲ್ಲಿಸುತ್ತಿವೆ. ಜತೆಗೆ ಸೆಕ್ಯುರಿಟಿ ಅಪ್‌ಡೇಟ್ ಕೂಡ ಇಲ್ಲದ್ದರಿಂದ ನಿಮ್ಮ ಫೋನ್ ಸೈಬರ್ ಬೆದರಿಕೆಗಳಿಗೆ ಗುರಿಯಾಗಬಹುದು.
ನಿಮ್ಮ ಸ್ಮಾರ್ಟ್‌ಫೋನ್ Android OS ಆವೃತ್ತಿ 4.1 ಅಥವಾ ಅದಕ್ಕಿಂತ ಹಳೆಯದಾ ಎಂದು ನಿಮಗೆ ಖಚಿತವಿಲ್ಲದಿದ್ದರೆ, ನಿಮ್ಮ ಸಾಧನದಲ್ಲಿನ ಸೆಟ್ಟಿಂಗ್‌ಗಳ ಮೆನುವನ್ನು ಪರಿಶೀಲಿಸಬಹುದು. ಸೆಟ್ಟಿಂಗ್‌ಗಳು > ಅಬೌಟ್ ಫೋನ್ > ಸಾಫ್ಟ್‌ವೇರ್ ಮಾಹಿತಿಗೆ ಹೋಗಿ. ಅದರಲ್ಲಿ ನಿಮ್ಮ Android ಆವೃತ್ತಿ ನಮೂದಿಸಿರುತ್ತದೆ.
WhatsApp ಕಾರ್ಯಾಚರಣೆ ನಿಲ್ಲಿಸಿದರೆ?
ವಾಟ್ಸ್ಯಾಪ್ ಬಳಕೆದಾರರಿಗೆ ಮುಂಚಿತವಾಗಿ ತಿಳಿಸುತ್ತದೆ ಮತ್ತು ಅಪ್‌ಗ್ರೇಡ್ ಮಾಡಲು ಹಲವು ಬಾರಿ ನೆನಪಿಸುತ್ತದೆ. ಗ್ಯಾಜೆಟ್ ಅನ್ನು ನವೀಕರಿಸದಿದ್ದರೆ WhatsApp ಮುಂದೆ ಆ ಸಾಧನದಲ್ಲಿ ಕಾರ್ಯನಿರ್ವಹಿಸುವುದಿಲ್ಲ. ಬಳಕೆದಾರರು ಸಂದೇಶ ಕಳುಹಿಸಲು ಅಥವಾ ಸ್ವೀಕರಿಸಲು, ಕರೆ ಮಾಡಲು ಅಥವಾ ಸ್ವೀಕರಿಸಲು ಸಾಧ್ಯವಿಲ್ಲ.
WhatsApp ಯಾವುದರಲ್ಲೆಲ್ಲಾ ಲಭ್ಯ?
ಅಕ್ಟೋಬರ್ 24ರ ನಂತರ WhatsApp ಅನ್ನು ಬೆಂಬಲಿಸುವ ಸಾಫ್ಟ್‌ವೇರ್ ಇರುವ ಗ್ಯಾಜೆಟ್‌ಗಳ ಪಟ್ಟಿ ಇಲ್ಲಿದೆ.
- Android OS ಆವೃತ್ತಿ 5.0 ಮತ್ತು ಹೊಸದು
- ಐಒಎಸ್ 12 ಮತ್ತು ಹೊಸದರಲ್ಲಿ ಚಾಲನೆಯಲ್ಲಿರುವ ಐಫೋನ್
- JioPhone ಮತ್ತು JioPhone 2 ಸೇರಿದಂತೆ KaiOS 2.5.0 ಮತ್ತು ಹೊಸದು
ಗ್ಯಾಜೆಟ್ಸ್
Reliance Jio: ಅಬ್ಬಬ್ಬಾ ಲಾಟರಿ..! ಐಫೋನ್ 15 ಖರೀದಿಸಿದರೆ 6 ತಿಂಗಳು ರಿಲಯನ್ಸ್ ಜಿಯೋ ಫ್ರೀ ಪ್ಲಾನ್
Reliance Jio: ಹೊಸದಾಗಿ ಲಾಂಚ್ ಆಗಿರುವ ಆ್ಯಪಲ್ ಐಫೋನ್ 15 ಖರೀದಿಯ ಮೇಲೆ ರಿಲಯನ್ಸ್ ಜಿಯೋ ಬಂಪರ್ ಆಫರ್ ಘೋಷಣೆ ಮಾಡಿದೆ.
ಮುಂಬೈ, ಮಹಾರಾಷ್ಟ್ರ: ರಿಲಯನ್ಸ್ ರಿಟೇಲ್ ಸ್ಟೋರ್‌ಗಳು (Reliance Retail), ರಿಲಯನ್ಸ್ ಡಿಜಿಟಲ್ ಆನ್‌ಲೈನ್ (Reliance Digital Online) ಅಥವಾ ಜಿಯೋಮಾರ್ಟ್‌ನಲ್ಲಿ (Jio Mart) ಜಿಯೋ ಐಫೋನ್ 15 (iPhone 15) ಖರೀದಿ ಮಾಡಿದರೆ 2,394 ರೂ. ಮೌಲ್ಯದ ಆರು ತಿಂಗಳ ಪ್ಲಾನ್ (Reliance Jio) ಅನ್ನು ಉಚಿತವಾಗಿ ಬಳಕೆದಾರರಿಗೆ ನೀಡಲಿದೆ. ಭಾರತೀಯ ಮಾರುಕಟ್ಟೆಯಲ್ಲಿ ಬಳಕೆದಾರರ ನಾಡಿ ಮಿಡಿತವನ್ನು ಅರಿತು ಕೊಂಡಿರುವ ರಿಲಯನ್ಸ್ ಜಿಯೋ, ಆಪಲ್ ಐಫೋನ್ 15 ಖರೀದಿಸುವವರಿಗೆ 399 ರೂ. ಪ್ಲಾನ್ ಅನ್ನು ಆರು ತಿಂಗಳುಗಳ ವರೆಗೆ ಉಚಿತವಾಗಿ ನೀಡಲಿದೆ. ಇದರ ಒಟ್ಟು ಮೌಲ್ಯ 2,394 ರೂ.ಗಳಾಗಲಿದ್ದು, ಬಳಕೆದಾರರಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡಲಿದೆ.
ರಿಲಯನ್ಸ್ ಜಿಯೋ, ಆಪಲ್ ಐಫೋನ್ 15 ಖರೀದಿಸುವವರಿಗೆ ನೀಡುತ್ತಿರುವ ರೂ. 399 ಪ್ಲಾನ್ ನಲ್ಲಿ ಬಳಕೆದಾರರಿಗೆ ಪ್ರತಿ ನಿತ್ಯ 3 ಜಿಬಿ ಹೈ ಸ್ಪೀಡ್ ಡೇಟಾ ಬಳಕೆಗೆ ದೊರೆಯಲಿದ್ದು, ಜೊತೆಗೆ ಸಂಪೂರ್ಣ ಅನ್ ಲಿಮಿಟೆಡ್ ಕಾಲಿಂಗ್ ಸಹ ಸಿಗಲಿದೆ. ಅಲ್ಲದೇ ಪ್ರತಿನಿತ್ಯ 100 ಎಸ್ಎಂಎಸ್ ಗಳನ್ನು ಸಹ ಉಚಿತವಾಗಿ ಕಳುಹಿಸಬಹುದಾಗಿದೆ.
ಆದರೆ ರಿಲಯನ್ಸ್ ರಿಟೇಲ್ ಸ್ಟೋರ್‌ಗಳು, ರಿಲಯನ್ಸ್ ಡಿಜಿಟಲ್ ಆನ್‌ಲೈನ್ ಅಥವಾ ಜಿಯೋಮಾರ್ಟ್ ನಲ್ಲಿ ಜಿಯೋ ಐಫೋನ್ 15 ಖರೀದಿ ಮಾಡಿದರೆ ಮಾತ್ರವೇ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು.
ಈ ಸುದ್ದಿಯನ್ನೂ ಓದಿ: Apple iPhone : ಭಾರತದಲ್ಲಿ ಐಫೋನ್ 3ಜಿಯಿಂದ ಮೊದಲ ರಿಟೇಲ್ ಸ್ಟೋರ್ ತನಕ ಆ್ಯಪಲ್‌ನ 15 ವರ್ಷಗಳ ಯಾತ್ರೆ ಹೇಗಿತ್ತು?
ಜಿಯೋ ಬಳಕೆದಾರರಲಲ್ಲದವರಿಗೂ ಈ ಯೋಜನೆಯ ಲಾಭವು ದೊರೆಯಲಿದ್ದು, ಇದಕ್ಕಾಗಿ ಅವರು ಹೊಸ ಜಿಯೋ ಸಿಮ್ ಖರೀದಿ ಮಾಡಬೇಕು ಇಲ್ಲವೇ ಮೊಬೈಲ್ ನಂಬರ್ ಪೊರ್ಟಬಲಿಟಿ ಆಯ್ಕೆಯನ್ನು ತಮ್ಮದಾಗಿಸಿಕೊಳ್ಳಬೇಕಾಗಿದೆ.
ಈ ಪ್ಲಾನ್ ಸೆಪ್ಟೆಂಬರ್ 22ರಿಂದ ಆರಂಭವಾಗಲಿದ್ದು, ಐಫೋನ್ 15 ಖರೀದಿ ಮಾಡಿ ಜಿಯೋ ಸಿಮ್ ಅನ್ನು ಆಕ್ಟಿವ್ ಮಾಡಿದರೆ ಈ ಹೊಸ ಯೋಜನೆಯು 72 ಗಂಟೆಗಳ ಒಳಗೆ ನಿಮ್ಮ ಬಳಕೆಗೆ ಲಭ್ಯವಾಗಲಿದೆ. ಈ ಯೋಜನಯೂ ಕೇವಲ ಐಫೋನ್ 15 ನಲ್ಲಿ ಮಾತ್ರವೇ ಕಾರ್ಯನಿರ್ವಹಿಸಲಿದೆ.
ತಂತ್ರಜ್ಞಾನದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಗ್ಯಾಜೆಟ್ಸ್
YouTube: ಯುಟ್ಯೂಬ್ ವಿಡಿಯೋ ಮಾಡುವುದು ಇನ್ನೂ ಸುಲಭ! ಹೊಸ ಎಡಿಟಿಂಗ್ ಆ್ಯಪ್ ಲಾಂಚ್
YouTube: ಮೇಡ್ ಆನ್ ಯುಟ್ಯೂಬ್ ಇವೆಂಟ್‌ನಲ್ಲಿ ಕಂಪನಿಯು ಹೊಸ ಎಡಿಟಿಂಗ್ ಆ್ಯಪ್ ಲಾಂಚ್ ಮಾಡಿದೆ.
ನವದೆಹಲಿ: ಜನಪ್ರಿಯ ವಿಡಿಯೋ ಸ್ಟ್ರೀಮಿಂಗ್ (Video Streaming) ವೇದಿಕೆಯಾಗಿರುವ ಯುಟ್ಯೂಬ್ (YouTube) ಹೊಸ ವಿಡಿಯೋ ಎಡಿಟಿಂಗ್ ಆ್ಯಪ್ (Editing App) ಯುಟ್ಯೂಬ್ ಕ್ರಿಯೇಟ್ (YouTube Create) ಘೋಷಿಸಿದೆ. ಈ ಮೂಲಕ ಬಳಕೆದಾರರಿಗೆ ವಿಡಿಯೋ ಕ್ರಿಯೇಟ್ ಮತ್ತು ಷೇರ್ ಮಾಡಲು ಅನುಮತಿಸಲಿದೆ. ಗುರುವಾರ ನಡೆದ ಮೇಡ್ ಆನ್ ಯುಟ್ಯೂಬ್ ಇವೆಂಟ್‌ನಲ್ಲಿ ಈ ಹೊಸ ಆ್ಯಪ್ ಕುರಿತು ಘೋಷಣೆ ಮಾಡಲಾಗಿದೆ. ಸದ್ಯ ಈ ಆ್ಯಪ್ ಬೀಟಾ ವರ್ಷನ್‌ನಲ್ಲಿದ್ದು, ಭಾರತ, ಅಮೆರಿಕ, ಜಮರ್ಮನಿ, ಫ್ರಾನ್ಸ್, ಇಂಗ್ಲೆಂಡ್, ಇಂಡೋನೇಷ್ಯಾ, ಕೋರಿಯಾ, ಸಿಂಗಾಪುರ್ ಮಾರುಕಗಳಲ್ಲಿ ಲಭ್ಯವಾಗಲಿದೆ. 2024ರಲ್ಲಿ ಐಒಎಸ್‌ಗೆ ಅಪ್‌ಡೇಟ್ ದೊರೆಯಲಿದೆ.
ವಿಡಿಯೋಗಳ ಉತ್ಪಾದನಾ ಪ್ರಕ್ರಿಯೆಯು ಕಷ್ಟಕರವಾಗಿರುತ್ತದೆ ಎಂದು ನಮಗೆ ತಿಳಿದಿದೆ. ಇದರಿಂದಾಗಿ ಮೊದಲ ಬಾರಿಗೆ ವಿಡಿಯೋ ಮಾಡುವವರು ತಮ್ಮ ಮೊದಲ ವೀಡಿಯೊವನ್ನು ಅಪ್‌ಲೋಡ್ ಮಾಡುವುದಕ್ಕೆ ತುಂಬ ಕಷ್ಟಪಡುತ್ತಾರೆ. ಈ ಪ್ರಕ್ರಿಯೆಯನ್ನು ಸರಳೀಕರಿಸಲು ಮತ್ತು ಯುಟ್ಯೂಬ್‌ನಲ್ಲಿ ವಿಡಿಯೋಗಳನ್ನು ರಚಿಸಲು ಮತ್ತು ಹಂಚಿಕೊಳ್ಳಲು ಅನುಮತಿಸಲು ನಾವು ಯುಟ್ಯೂಬ್ ಕ್ರಿಯೇಟ್ ಎಂಬ ಹೊಸ ಮೊಬೈಲ್ ಅಪ್ಲಿಕೇಷನ್ ಆರಂಭಿಸುತ್ತಿದ್ದೇವೆ ಎಂದು ಕಂಪನಿಯು ಮೇಡ್ ಆನ್ ಯುಟ್ಯೂಬ್ ಇವೆಂಟ್‌ನಲ್ಲಿ ಹೇಳಿದೆ.
ಯೂಟ್ಯೂಬ್ ಕ್ರಿಯೇಟ್ ಎನ್ನುವುದು ಕಿರುಚಿತ್ರಗಳು ಮತ್ತು ದೀರ್ಘವಾದ ವೀಡಿಯೊಗಳೆರಡಕ್ಕೂ ವಿಡಿಯೋ ನಿರ್ಮಾಣವನ್ನು ಸರಳ ಮತ್ತು ಸುಲಭ ಮಾಡಲು ವಿನ್ಯಾಸಗೊಳಿಸಿದ ಉಚಿತ ಅಪ್ಲಿಕೇಶನ್ ಎಂದು ಕಂಪನಿಯು ಹೇಳಿದೆ. ಆ ಆ್ಯಪ್ ಸಹಾಯದಿಂದ ವಿಡಿಯೋ ಕ್ರಿಯೇಟರ್ಸ್, ಇತರ ಕೆಲಗಳ ಮೇಲೆ ಹೆಚ್ಚು ಗಮನವನ್ನು ಕೇಂದ್ರೀಕರಿಸುವ ಬದಲು ತಮ್ಮ ಸೃಜನಾತ್ಮಕವಾಗಿ ರೂಪಿಸಲು ನೆರವು ಸಾಧ್ಯವಾಗುತ್ತದೆ.
ಈ ಸುದ್ದಿಯನ್ನು ಓದಿ: YouTube New Feature: ನಿಮ್ಮಿಷ್ಟದ ಹಾಡು ಗುನುಗಿದ್ರೂ ಸಾಕು ಯುಟ್ಯೂಬ್ ಆ ಹಾಡನ್ನು ಹೆಕ್ಕಿ ತೆಗೆಯುತ್ತದೆ!
ಹೊಸ ಜನರೇಟಿವ್ ಕೃತಕ ಬುದ್ಧಿಮತ್ತೆ ಚಾಲಿತ ಅಪ್ಲಿಕೇಶನ್ ನಿಖರವಾದ ಎಡಿಟಿಂಗ್ ಟ್ರಿಮ್ಮಿಂಗ್, ಸ್ವಯಂಚಾಲಿತ ಶೀರ್ಷಿಕೆ, ವಾಯ್ಸ್‌ಓವರ್ ಮತ್ತು ಪರಿವರ್ತನೆಗಳಂತಹ ಫೀಚರ್‌ಗಳನ್ನು ಒಳಗೊಂಡಿರುತ್ತದೆ. ಟಿಕ್‌ಟಾಕ್‌ನಂತೆಯೇ ಬೀಟ್-ಮ್ಯಾಚಿಂಗ್ ತಂತ್ರಜ್ಞಾನದೊಂದಿಗೆ ರಾಯಲ್ಟಿ-ಮುಕ್ತ ಸಂಗೀತದ ಶ್ರೇಣಿಯನ್ನು ಆಯ್ಕೆ ಮಾಡಲು ಅಪ್ಲಿಕೇಶನ್ ಬಳಕೆದಾರರಿಗೆ ಅವಕಾಶ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
ಸುಮಾರು ಮೂರು ಸಾವಿರ ಜನರಿಂದ ಫೀಡ್‌ಬ್ಯಾಕ್ ಪಡೆದುಕೊಂಡ ಬಳಿಕ ಈ ಹೊಸ ಆ್ಯಪ್ ರೂಪಿಸಲಾಗಿದೆ. ಅಲ್ಲದೇ, ಮುಂದಿನ ದಿನಗಳಲ್ಲಿ ಈ ಆ್ಯಪ್‌ಗೆ ಇನ್ನಷ್ಟು ಹೊಸ ಫೀಚರ್‌ಗಳು ಸೇರಲಿವೆ. ಬಳಕೆದಾರರು ಈ ಆ್ಯಪ್ ಬಳಸಿಕೊಂಡು ಎಐ ಸೃಜಿತ ಬ್ಯಾಕ್‌ಗ್ರೌಂಡ್ ಕೂಡ ಬಳಸಿಕೊಳ್ಳಬಹುದು.
ತಂತ್ರಜ್ಞಾನದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
-
Live News20 hours ago
Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!
-
ವಿದೇಶ11 hours ago
Great auction: ಅಮೆರಿಕದ ಅಪರೂಪದ ನೋಟು 3.9 ಕೋಟಿ ರೂ.ಗೆ ಮಾರಾಟ!
-
ದೇಶ3 hours ago
UNGA Speech: ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಿ, ವಿಶ್ವ ಸಂಸ್ಥೆಯಲ್ಲಿ ಭಾರತೀಯ ವಿದೇಶಾಂಗ ಸಚಿವ ಜೈಶಂಕರ್ ಪಾಠ!
-
South Cinema14 hours ago
Heart attack : ಹಿರಿಯ ನಟ ಬ್ಯಾಂಕ್ ಜನಾರ್ದನ್ಗೆ ಹೃದಯಾಘಾತ?
-
ಕರ್ನಾಟಕ14 hours ago
Bengaluru Bandh : ಪೊಲೀಸರಿಗೆ ಕೊಟ್ಟ ಊಟದಲ್ಲಿ ಸಿಕ್ಕಿತು ಫ್ರೈಡ್ ಇಲಿ!
-
ಆಟೋಮೊಬೈಲ್10 hours ago
Viral News : ಅಮ್ಮನ ಕಾರಿನಲ್ಲಿಯೇ ಮನೆ ಬಿಟ್ಟು ಹೋದ ಪುಟಾಣಿ ಮಕ್ಕಳು, 300 ಕಿ. ಮೀ ದೂರ ಹೋಗಿ ಸಿಕ್ಕಿಬಿದ್ದರು
-
ಕರ್ನಾಟಕ11 hours ago
Assault Case : ರಸ್ತೆ ವಿಚಾರಕ್ಕೆ ವಕೀಲನಿಗೆ ಹಿಗ್ಗಾಮುಗ್ಗಾ ಥಳಿಸಿದ ಗ್ರಾಮಸ್ಥರು!
-
ಕ್ರಿಕೆಟ್14 hours ago
ರಾಜ್ಕೋಟ್ನಲ್ಲಿ ಈಡೇರಲಿ ಭಾರತದ ಕ್ಲೀನ್ ಸ್ವೀಪ್ ಯೋಜನೆ; ನಾಳೆ ಅಂತಿಮ ಏಕದಿನ