Site icon Vistara News

ಭಾರತದಲ್ಲಿ ಫ್ಯಾಕ್ಟರಿ ಆರಂಭಿಸಲು ಸಿದ್ಧ, ಆದ್ರೆ ಒಂದ್ ಕಂಡೀಷನ್ ಎಂದ ಟೆಸ್ಲಾ!

Tesla is ready to start a factory in India, but it has one condition

ನವದೆಹಲಿ: ಎಲಾನ್ ಮಸ್ಕ್ (Elon Musk) ನೇತೃತ್ವದ ಟೆಸ್ಲಾ ಕಂಪನಿ (Tesla Company) ಮುಂದಿನ ವರ್ಷದಿಂದ ಭಾರತದಲ್ಲಿ ಕಾರ್ಯಾಚಣೆ (India Operation) ನಡೆಸಲಿದೆ. ಈ ಬಗ್ಗೆ ಭಾರತ ಸರ್ಕಾರ (Indian Government) ಮತ್ತು ಕಂಪನಿ ನಡುವಿನ ಒಪ್ಪಂದವು ಅಂತಿಮ ಹಂತದಲ್ಲಿದೆ. ಹಾಗಿದ್ದೂ, ಟೆಸ್ಲಾ ಕಂಪನಿ ಷರತ್ತೊಂದನ್ನು ವಿಧಿಸಿದೆ ಎಂದು ತಿಳಿದು ಬಂದಿದೆ. ತನ್ನ ವಾಹನಗಳ ಮೇಲಿನ ಆಮದು ಸುಂಕವನ್ನು (import duty) ಮೊದಲ ಎರಡು ವರ್ಷಗಳ ಕಾರ್ಯಾಚರಣೆಗೆ ಶೇ.15 ಕಡಿತಗೊಳಿಸಿದರೆ ಭಾರತದಲ್ಲಿ ಕಾರ್ಖಾನೆಯನ್ನು (Factory in India) ಸ್ಥಾಪಿಸಲು 2 ಶತಕೋಟಿ ಹೂಡಿಕೆ ಮಾಡಲು ಸಿದ್ಧವಾಗಿದೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.

ಎಲೆಕ್ಟ್ರಿಕ್ ವಾಹನಗಳಗೆ ಸಂಬಂಧಿಸಿದಂತೆ ಭಾರತವು ಹೊಸ ನೀತಿಯನ್ನು ರೂಪಿಸುತ್ತಿದೆ. ಇದರ ಪ್ರಕಾರ, 40 ಸಾವಿರ ಡಾಲರ್ ಮೇಲ್ಪಟ್ಟ ಇವಿ ಕಾರುಗಳ ಮೇಲಿನ ಆಮದು ಸಂಕವನ್ನು ಶೇ.100 ಬದಲಿಗೆ ಶೇ.15ರಷ್ಟು ಇಳಿಸಲಾಗುತ್ತದೆ ಮತ್ತು ಸ್ಥಳೀಯವಾಗಿ ನಿರ್ಮಾಣದ ಬದ್ಧತೆಯನ್ನು ತೋರುವ ಕಂಪನಿಗಳಿಗೆ ಶೇ.70ರಷ್ಟು ಕಡಿಮೆ ಮಾಡುವ ನೀತಿಯನ್ನು ಒಳಗೊಳ್ಳಲಿದೆ ಎಂದು ಈ ಹಿಂದೆ ವರದಿಯಾಗಿತ್ತು.

ಎಲಾನ್ ಮಸ್ಕ್ ನೇತೃತ್ವದ ಎಲೆಕ್ಟ್ರಿಕ್ ವೆಹಿಕಲ್ (ಇವಿ) ಟೆಸ್ಲಾ ಕಂಪನಿಯು, ಸರ್ಕಾರವು 12,000 ವಾಹನಗಳಿಗೆ ಕಡಿಮೆ ಸುಂಕವನ್ನು ಅನುಮೋದಿಸಿದರೆ 500 ಮಿಲಿಯನ್ ಡಾಲರ್ ಮತ್ತು 30,000 ವಾಹನಗಳಿಗೆ ರಿಯಾಯಿತಿ ನೀಡಿದರೆ 2 ಬಿಲಿಯನ್ ಡಾಲರ್‌ವರೆಗೆ ಹೂಡಿಕೆ ಮಾಡಲು ಸಿದ್ಧವಾಗಿದೆ ಎಂದು ಹೇಳಲಾಗುತ್ತಿದೆ.

2 ಶತಕೋಟಿ ಡಾಲರ್ ಹೂಡಿಕೆ ಮಾಡುವ ಟೆಸ್ಲಾ ಪ್ರಸ್ತಾವನೆಯ ಕಾರ್ಯಸಾಧ್ಯತೆಯನ್ನು ಸರ್ಕಾರವು ಪರಿಶೀಲಿಸುತ್ತಿದೆ. ಆದರೆ ಟೆಸ್ಲಾದ ಪ್ರಸ್ತಾಪಕ್ಕೆ ಹೋಲಿಸಿದರೆ ಕಡಿಮೆ ಸುಂಕದ ಮೇಲೆ ಆಮದು ಮಾಡಿಕೊಳ್ಳುವ ಕಾರುಗಳ ಸಂಖ್ಯೆಯನ್ನು ಕಡಿಮೆ ಮಾಡಲು ಬಯಸುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಆದರೆ, ಈ ಬಗ್ಗೆ ಟೆಸ್ಲಾ ಕಂಪನಿಯಾಗಲಿ ಅಥವಾ ಸಂಬಂಧಿ ಕೇಂದ್ರ ಸರ್ಕಾರದ ಇಲಾಖೆಗಳಾಗಿ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.

ತಮಿಳುನಾಡು, ಮಹಾರಾಷ್ಟ್ರ, ಗುಜರಾತ್‌ ರಾಜ್ಯದಲ್ಲಿ ಫ್ಯಾಕ್ಟರಿ?

ಅಮೆರಿಕ ನಿರ್ಮಿತ ಟೆಸ್ಲಾ ಕಾರುಗಳನ್ನು (Tesla Car) ಭಾರತೀಯ ಮಾರುಕಟ್ಟೆಗೆ (Indian Market) ತರುವ ಸಂಬಂಧ ಟೆಸ್ಲಾ ಕಂಪನಿ ಮತ್ತು ಭಾರತೀಯ ಸರ್ಕಾರವು (Indian Government) ಒಪ್ಪಂದವನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ. ಮುಂದಿನ ವರ್ಷ ಟೆಸ್ಲಾ ಭಾರತೀಯ ಮಾರುಕಟ್ಟೆಗೆ ಪ್ರವೇಶ ಪಡೆಯಲಿದೆ ಬ್ಲೂಮ್‌ಬರ್ಗ್ ತಿಳಿಸಿದೆ. 2024ರಲ್ಲಿ ಟೆಸ್ಲಾ ಕಂಪನಿ ಭಾರತದಲ್ಲಿ ಫ್ಯಾಕ್ಟರಿ (Tesla Factory) ಕೂಡ ಆರಂಭಿಸಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಟೆಸ್ಲಾ ಕಂಪನಿ ಭಾರತಕ್ಕೆ ಎಂಟ್ರಿ ಕೊಡಲಿದೆ ಎನ್ನುವ ಸುದ್ದಿಗಳು ಮೊದಲಿಗೆ ಹೊರ ಬಂದಾಗಲೇ ಕರ್ನಾಟಕದಲ್ಲಿ ಫ್ಯಾಕ್ಟರಿ ತೆರೆಯಬಹುದು ಎಂದು ಹೇಳಲಾಗಿತ್ತು. ಆದರೆ, ಈಗ ಕಂಪನಿಯ ಯೋಜನೆಗಳು ಬದಲಾಗಿವೆ.

ಭಾರತ ಸರ್ಕಾರ ಮತ್ತು ಟೆಸ್ಲಾ ಕಂಪನಿ ಒಪ್ಪಂದವನ್ನು ಅಂತಿಮಗೊಳಿಸುವ ಪ್ರಯತ್ನದಲ್ಲಿವೆ. ಈ ಒಪ್ಪಂದ ಅನ್ವಯ ಟೆಸ್ಲಾ ಕಂಪನಿಯ ಅಮೆರಿಕದಲ್ಲಿ ನಿರ್ಮಿತ ಕಾರುಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗಿದೆ. ಹಾಗೆಯೇ, ಮುಂದಿನ ವರ್ಷ ಭಾರತದಲ್ಲಿ ಫ್ಯಾಕ್ಟರಿ ಕೂಡ ಆರಂಭಿಸಲಿದೆ ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ: Tesla Inc: ಟೆಸ್ಲಾ ಕಂಪನಿಗೆ ಭಾರತೀಯ ಮೂಲದ ವೈಭವ್ ತನೇಜಾ ಹೊಸ ಸಿಎಫ್ಒ

Exit mobile version