ಕರ್ನಾಟಕಕ್ಕೆ ತಪ್ಪಿದ ಟೆಸ್ಲಾ ಫ್ಯಾಕ್ಟರಿ ಮಹಾರಾಷ್ಟ್ರ, ತಮಿಳು ನಾಡು, ಗುಜರಾತ್‌ನಲ್ಲಿ ಸ್ಥಾಪನೆ? Vistara News

ಆಟೋಮೊಬೈಲ್

ಕರ್ನಾಟಕಕ್ಕೆ ತಪ್ಪಿದ ಟೆಸ್ಲಾ ಫ್ಯಾಕ್ಟರಿ ಮಹಾರಾಷ್ಟ್ರ, ತಮಿಳು ನಾಡು, ಗುಜರಾತ್‌ನಲ್ಲಿ ಸ್ಥಾಪನೆ?

Tesla Car: ಅಮೆರಿಕದಲ್ಲಿ ತಯಾರಾದ ಕಾರುಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಸಂಬಂಧ ಟೆಸ್ಲಾ ಕಂಪನಿ ಹಾಗೂ ಭಾರತ ಸರ್ಕಾರ ನಡುವಿನ ಒಪ್ಪಂದವು ಅಂತಿಮ ಹಂತಕ್ಕೆ ಬಂದಿದೆ.

VISTARANEWS.COM


on

Tesla May set up factory in Maharashtra, Tamil Nadu and Gujarat Says Report
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಅಮೆರಿಕ ನಿರ್ಮಿತ ಟೆಸ್ಲಾ ಕಾರುಗಳನ್ನು (Tesla Car) ಭಾರತೀಯ ಮಾರುಕಟ್ಟೆಗೆ (Indian Market) ತರುವ ಸಂಬಂಧ ಟೆಸ್ಲಾ ಕಂಪನಿ ಮತ್ತು ಭಾರತೀಯ ಸರ್ಕಾರವು (Indian Government) ಒಪ್ಪಂದವನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ. ಮುಂದಿನ ವರ್ಷ ಟೆಸ್ಲಾ ಭಾರತೀಯ ಮಾರುಕಟ್ಟೆಗೆ ಪ್ರವೇಶ ಪಡೆಯಲಿದೆ ಬ್ಲೂಮ್‌ಬರ್ಗ್ ತಿಳಿಸಿದೆ. 2024ರಲ್ಲಿ ಟೆಸ್ಲಾ ಕಂಪನಿ ಭಾರತದಲ್ಲಿ ಫ್ಯಾಕ್ಟರಿ (Tesla Factory) ಕೂಡ ಆರಂಭಿಸಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಟೆಸ್ಲಾ ಕಂಪನಿ ಭಾರತಕ್ಕೆ ಎಂಟ್ರಿ ಕೊಡಲಿದೆ ಎನ್ನುವ ಸುದ್ದಿಗಳು ಮೊದಲಿಗೆ ಹೊರ ಬಂದಾಗಲೇ ಕರ್ನಾಟಕದಲ್ಲಿ ಫ್ಯಾಕ್ಟರಿ ತೆರೆಯಬಹುದು ಎಂದು ಹೇಳಲಾಗಿತ್ತು. ಆದರೆ, ಈಗ ಕಂಪನಿಯ ಯೋಜನೆಗಳು ಬದಲಾಗಿವೆ.

ಭಾರತ ಸರ್ಕಾರ ಮತ್ತು ಟೆಸ್ಲಾ ಕಂಪನಿ ಒಪ್ಪಂದವನ್ನು ಅಂತಿಮಗೊಳಿಸುವ ಪ್ರಯತ್ನದಲ್ಲಿವೆ. ಈ ಒಪ್ಪಂದ ಅನ್ವಯ ಟೆಸ್ಲಾ ಕಂಪನಿಯ ಅಮೆರಿಕದಲ್ಲಿ ನಿರ್ಮಿತ ಕಾರುಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗಿದೆ. ಹಾಗೆಯೇ, ಮುಂದಿನ ವರ್ಷ ಭಾರತದಲ್ಲಿ ಫ್ಯಾಕ್ಟರಿ ಕೂಡ ಆರಂಭಿಸಲಿದೆ ಎನ್ನಲಾಗಿದೆ.

2024ರ ಜನವರಿಯಲ್ಲಿ ನಡೆಯಲಿರುವ ವೈಬ್ರೆಂಟ್ ಗುಜರಾತ್ ಗ್ಲೋಬಲ್ ಶೃಂಗದಲ್ಲಿ ಈ ಕುರಿತು ಅಂತಿಮ ಘೋಷಣೆ ಹೊರ ಬೀಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಟೆಸ್ಲಾ ಕಂಪನಿಯು ಮಹಾರಾಷ್ಟ್ರ, ತಮಿಳುನಾಡು ಮತ್ತು ಗುಜರಾತ್‌ ರಾಜ್ಯಗಳಲ್ಲಿ ತನ್ನ ಫ್ಯಾಕ್ಟರಿಯನ್ನು ಸ್ಥಾಪಿಸುವ ಯೋಜನೆಯನ್ನು ಹಾಕಿಕೊಂಡಿದೆ. ಟೆಸ್ಲಾ ಕಂಪನಿಯು ಆರಂಭದಲ್ಲಿ 2 ಶತಕೋಟಿ ಡಾಲರ್ ಹೂಡಿಕೆ ಮಾಡಲಾಗಿದೆ. ವಾಹನ ಬಿಡಿಭಾಗಗಳ ಖರೀದಿಗಾಗಿ 15 ಶತಕೋಟಿ ಡಾಲರ್‌ಗೆ ಹೆಚ್ಚಿಸಲು ನೋಡುತ್ತಿದೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ.

ಯೋಜನೆಗಳು ಇನ್ನೂ ಅಂತಿಮಗೊಂಡಿಲ್ಲ ಮತ್ತು ಭವಿಷ್ಯದಲ್ಲಿ ಈಗಿರುವ ಯೋಜನೆಗಳಲ್ಲಿ ಬದಲಾಗಬಹುದು ಎಂದು ಮೂಲಗಳು ತಿಳಿಸಿವೆ. ಎಲಾನ್ ಮಸ್ಕ್ ಅವರ ಕಂಪನಿಯು ಮಹಾರಾಷ್ಟ್ರ ಮತ್ತು ತಮಿಳುನಾಡು ಈಗಾಗಲೇ ಎಲೆಕ್ಟ್ರಿಕ್ ವಾಹನಗಳು ಮತ್ತು ರಫ್ತಿಗಾಗಿ ಸುಸ್ಥಾಪಿತ ಪರಿಸರ ವ್ಯವಸ್ಥೆಯನ್ನು ಹೊಂದಿರುವುದರಿಂದ ಅವುಗಳ ಮೇಲೆ ಕಣ್ಣಿಟ್ಟಿದೆ. ಮೂಲಸೌಕರ್ಯ ಅಭಿವೃದ್ಧಿಯಲ್ಲಿ ತ್ವರಿತ ಹೆಚ್ಚಳದಿಂದಾಗಿ ಗುಜರಾತ್ ಅನ್ನು ಪರಿಗಣಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಆಟೋ ಬಿಡಿ ಭಾಗಗಳು ಮತ್ತು ಇವಿಗಳ ಆಮದು ಹೊರತಾಗಿಯೂ ಟೆಸ್ಲಾ ಕಂಪನಿಯು ವೆಚ್ಚವನ್ನು ಕಡಿತ ಮಾಡುವುದಕ್ಕಾಗಿ ಬ್ಯಾಟರಿಗಳನ್ನು ದೇಶೀಯವಾಗಿ ತಯಾರಿಸುವ ಯೋಜನೆಯನ್ನು ಹಾಕಿಕೊಂಡಿದೆ. ಸದ್ಯಕ್ಕೆ ಚೀನಾ, ಅಮೆರಿಕ, ಜರ್ಮನಿ ದೇಶಗಳಲ್ಲಿ ಟೆಸ್ಲಾ ಫ್ಯಾಕ್ಟರಿಗಳನ್ನು ಹೊಂದಿದೆ. ಈ ಹೊತ್ತಿನಲ್ಲಿ ಭಾರತದಲ್ಲಿ ಮೋದಿ ಸರ್ಕಾರವು ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಹೆಚ್ಚಿನ ಉತ್ತೇಜನ ನೀಡುತ್ತಿರುವುದರಿಂದ ಅದರ ಲಾಭವನ್ನು ಟೆಸ್ಲಾ ಕಂಪನಿ ಬಾಚಿಕೊಳ್ಳಲು ಮುಂದಾಗಿದೆ.

ನಿರಂತರ ಪ್ರೋತ್ಸಾಹ, ಉತ್ತೇಜನದ ಹೊರತಾಗಿಯೂ ಭಾರತದಲ್ಲಿ ಎಲೆಕ್ಟ್ರಿಕ್ ವೆಹಿಕಲ್‌ಗಳ ಮಾರುಕಟ್ಟೆ ಇನ್ನೂ ಭಾರೀ ಏರಿಕೆಯನ್ನು ಕಂಡಿಲ್ಲ. ಕಳೆದ ವರ್ಷ ಭಾರತದಲ್ಲಿ ಮಾರಾಟದ ಒಟ್ಟು ಪ್ಯಾಸೆಂಜರ್‌ ವೆಹಿಕಲ್‌ಗಳಲ್ಲಿ ಶೇ. 1.3 ಅಷ್ಟೇ ವಿದ್ಯುತ್ ಚಾಲಿತ ವಾಹನಗಳಾಗಿವೆ.

ಈ ಸುದ್ದಿಯನ್ನೂ ಓದಿ: Tesla cars : ಭಾರತದಲ್ಲಿ ಕಾರ್ಖಾನೆ ನಿರ್ಮಾಣಕ್ಕೆ ಟೆಸ್ಲಾ ಮಾತುಕತೆ ಶುರು, 20 ಲಕ್ಷ ರೂ.ಗೆ ಕಾರು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಆಟೋಮೊಬೈಲ್

ಮಾರುತಿ ಸುಜುಕಿ ಕಾರುಗಳನ್ನು ಈಗ್ಲೇ ಖರೀದಿಸಿ; ಜನವರಿಯಿಂದ ಆಗಲಿವೆ ತುಟ್ಟಿ!

Maruti Suzuki: ಮಾರುತಿ ಸುಜುಕಿ ಕಂಪನಿಯು 2024 ಜನವರಿಯಿಂದ ತನ್ನ ಎಲ್ಲ ಮಾದರಿಯ ಕಾರುಗಳ ಬೆಲೆಯನ್ನು ಹೆಚ್ಚಿಸುವುದಾಗಿ ಘೋಷಿಸಿದೆ.

VISTARANEWS.COM


on

Maruti suzuki cars price will be hike in January 2024
Koo

ನವದೆಹಲಿ: ದೇಶದ ಅತಿದೊಡ್ಡ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿ (Maruti Suzuki) ಮುಂದಿನ ವರ್ಷದಿಂದ ತನ್ನ ಕಾರುಗಳ ಬೆಲೆಯನ್ನು ಹೆಚ್ಚಿಸುವ (Car Price Hike) ನಿರ್ಧಾರ ಮಾಡಿದೆ. ಹೆಚ್ಚುತ್ತಿರುವ ಹಣದುಬ್ಬರದ (Inflation) ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗುತ್ತಿದೆ ಎಂದು ಕಂಪನಿಯು ಸೋಮವಾರ ಷೇರು ಮಾರುಕಟ್ಟೆಗೆ ತಿಳಿಸಿದೆ. ಹಾಗಿದ್ದೂ, ಎಷ್ಟರ ಮಟ್ಟಿಗೆ ದರ ಏರಿಕೆಯಾಗಲಿದೆ ನಿಖರ ಮಾಹಿತಿಯನ್ನು ಕಂಪನಿಯೇನೂ ನೀಡಿಲ್ಲ. ಆದರೆ, ಎಲ್ಲ ಮಾದರಿ ಕಾರುಗಳ ಬೆಲೆ ಏರಿಕೆಯಾಗಲಿದೆ.

ಒಟ್ಟಾರೆ ಹಣದುಬ್ಬರ ಮತ್ತು ಸರಕು ಬೆಲೆಗಳು ಹೆಚ್ಚುತ್ತಿರುವ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು 2024ರಿಂದ ಜನವರಿಯಿಂದ ಕಾರುಗಳ ಬೆಲೆಯನ್ನು ಹೆಚ್ಚಿಸುವ ಕುರಿತು ಕಂಪನಿ ಪ್ಲ್ಯಾನ್ ಮಾಡಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ. ಇದೇ ವೇಳೆ, ಕಂಪನಿಯು ಹೆಚ್ಚುತ್ತಿರುವ ವೆಚ್ಚವನ್ನು ತಡೆಯುವ ಎಲ್ಲ ಪ್ರಯತ್ನಗಳನ್ನು ಮಾಡಿದೆ ಎಂದು ಹೇಳಿದೆ.

ಮಾರುತಿ ಸುಜುಕಿ ತನ್ನ ಅತಿ ಹೆಚ್ಚು ಮಾಸಿಕ ಮಾರಾಟವನ್ನು ಅಕ್ಟೋಬರ್‌ನಲ್ಲಿ 1.99 ಲಕ್ಷ ಯುನಿಟ್‌ಗಳಲ್ಲಿ ದಾಖಲಿಸಿದೆ. ಇದು ವರ್ಷದಿಂದ ವರ್ಷಕ್ಕೆ ಶೇ.19 ರಷ್ಟು ಬೆಳವಣಿಗೆಯಾಗಿದೆ. ಏತನ್ಮಧ್ಯೆ, ಕಂಪನಿಯ ನಿವ್ವಳ ಲಾಭವು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇ.80.3 ರಷ್ಟು ಏರಿಕೆಯಾಗಿ 3,716.5 ಕೋಟಿ ರೂಪಾಯಿಗಳಿಗೆ ತಲುಪಿದೆ. ಉತ್ತಮ ಮಾರಾಟ, ಸರಕುಗಳ ಬೆಲೆಗಳನ್ನು ಕಡಿಮೆ ಮತ್ತು ವೆಚ್ಚ ಕಡಿತದ ಪ್ರಯತ್ನಗಳ ಫಲವಾಗಿ ಆದಾಯ ಹೆಚ್ಚಾಗಿದೆ.

ಮುಂದಿನ 2-3 ವರ್ಷಗಳಲ್ಲಿ ಹೆಚ್ಚುತ್ತಿರುವ ಜನರ ಆದಾಯದ ಮಟ್ಟಗಳು ಮತ್ತು ಬೆಳೆಯುತ್ತಿರುವ ಆರ್ಥಿಕತೆಯ ಹಿನ್ನೆಲೆಯಲ್ಲಿ ದೇಶೀಯ ಮಾರುಕಟ್ಟೆಯಲ್ಲಿ, ಕೈಗೆಟುಕುವ ಸಣ್ಣ ಕಾರುಗಳ ಮತ್ತೆ ಪ್ರಾಬಲ್ಯ ಮೆರೆಯುವ ನಿರೀಕ್ಷೆ ಇದೆ ಎಂದು ಮಾರುತಿ ಸುಜುಕಿ ಕಂಪನಿ ಹೇಳಿಕೊಂಡಿದೆ.

ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ, ಹೆಚ್ಚಿನ ಮಾರಾಟದ ಪ್ರಮಾಣ ಮತ್ತು ಉತ್ಪನ್ನ ಮಿಶ್ರಣದ ಕಾರಣದಿಂದಾಗಿ ಕಂಪನಿಯು ಹಿಂದಿನ ಹಣಕಾಸು ವರ್ಷದ ಅದೇ ತ್ರೈಮಾಸಿಕದಲ್ಲಿ 28,543.50 ಕೋಟಿ ರೂ.ಗಳ ವಿರುದ್ಧ 35,535.1 ಕೋಟಿ ರೂ.ಗಳ ನಿವ್ವಳ ಮಾರಾಟವನ್ನು ದಾಖಲಿಸಿದೆ ಎಂದು ಕಂಪನಿ ಹೇಳಿಕೊಂಡಿದೆ.

ಈ ಸುದ್ದಿಯನ್ನೂ ಓದಿ: Maruti Suzuki: ಇನ್‌ಕಮ್‌ ಟ್ಯಾಕ್ಸ್‌ ನೋಟೀಸ್‌, ಮಾರುತಿ ಸುಜುಕಿ ಷೇರು ಬೆಲೆ 2% ಕುಸಿತ

Continue Reading

ಆಟೋಮೊಬೈಲ್

Royal Enfield Himalayan : ಭರ್ಜರಿ ಲುಕ್​ನ ಎನ್​ಫೀಲ್ಡ್​ ಹಿಮಾಲಯನ್​ ಬೆಲೆ ಬಹಿರಂಗ

ರಾಯಲ್​ ಎನ್​ಫೀಲ್ಡ್​ ಬೈಕಿನ (Royal Enfield Himalayan) ಬೆಲೆಯನ್ನು ಕಂಪನಿಯು ಘೋಷಿಸಿದ್ದು ನಾನಾ ವೇರಿಯೆಂಟ್​ಗಳ ಮೂಲಕ ಮಾರಾಟ ಮಾಡಿದೆ.

VISTARANEWS.COM


on

Royal Enfield Himalayan
Koo

ಬೆಂಗಳೂರು : ಇತ್ತೀಚೆಗೆ ಅನಾವರಣಗೊಂಡ ರಾಯಲ್ ಎನ್ ಫೀಲ್ಡ್ (royal Enfield bike price) ಹಿಮಾಲಯನ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರ ರೂ.2.69 ಲಕ್ಷ ರೂಪಾಯಿಗಳಾಗಿವೆ. ಡಿಸೆಂಬರ್ 31ರವರೆಗೆ ಈ ಬೆಲೆಯಲ್ಲಿ ಬೈಕ್ ದೊರೆಯಲಿದೆ. ಹಿಮಾಲಯನ್ 450 ಸರಣಿಯ ಬೇಸ್ ವೇರಿಯೆಂಟ್​ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ 2.74 ಲಕ್ಷ ರೂಪಾಯಿಗಳಾದರೆ, ಪಾಸ್ ಮಾದರಿಯ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.2.79 ಲಕ್ಷ ರೂಪಾಯಿಗಳಾಗಿದೆ. ಬೈಕ್​ಗಳು ಏಕ ರೂಪದಲ್ಲಿ ಇರುವ ಹೊರತಾಗಿಯೂ ಪ್ರತಿ ವೇರಿಯೆಂಟ್​ ವಿಭಿನ್ನ ಬಣ್ಣಗಳನ್ನು ಹೊಂದಿದೆ. ಅಂದ ಹಾಗೆ ಈ ಬೆಲೆಗಳು ಪರಿಚಯಾತ್ಮಕ ಬೆಲೆಯಾಗಿದೆ.

ಈ ಮಾಡೆಲ್​ಗಳು ಗ್ರೌಂಡ್ ಲೆವೆಲ್​ ಅಭಿವೃದ್ಧಿಯಾಗಿದ್ದು. ರಾಯಲ್​ ಎನ್ ಫೀಲ್ಡ್ ನಿಂದ ಹೊಸ ಸರಣಿಯ ಉತ್ಪನ್ನಗಳ ಪ್ರಾರಂಭವನ್ನು ಸೂಚಿಸುತ್ತದೆ. ಟ್ವಿನ್ ಸ್ಪಾರ್ ಫ್ರೇಮ್ ಹೊಂದಿರುವ ಈ ಬೈಕ್ ಅನ್ನು ಹೊಸದಾಗಿ ಅಭಿವೃದ್ಧಿಪಡಿಸಿದ ಶೆರ್ಪಾ 450 ಎಂಜಿನ್ ಪ್ಲಾಟ್ ಫಾರ್ಮ್ ನಲ್ಲಿ ನಿರ್ಮಿಸಲಾಗಿದೆ.

ಇದನ್ನೂ ಓದಿ :

ಎಂಜಿನ್ ಬಗ್ಗೆ ಹೇಳುವುದಾದರೆ, ಹೊಸ ಹಿಮಾಲಯನ್ ನ 452 ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಎಂಜಿನ್​ ಹೊಂದಿದೆ ಈ ಎಂಜಿನ್ 39.4 ಬಿ ಹೆಚ್ ಪಿ ಪವರ್ ಮತ್ತು 40 ಎನ್ ಎಂ ಟಾರ್ಕ್ ಉತ್ಪಾದಿಸುತ್ತದೆ.

ಎಂಜಿನ್​ ಸಾಮರ್ಥ್ಯ ಎಷ್ಟು?

ಹಿಮಾಲಯನ್ 450 ಬೈಕಿನ ಸಸ್ಪೆಂಷನ್ ಸೆಟಪ್ ಮುಂಭಾಗದಲ್ಲಿ ಯುಎಸ್ ಡಿ ಫೋರ್ಕ್ ಗಳು ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಅನ್ನು ಹೊಂದಿದೆ. ಬೈಕಿನ ಮುಂಭಾಗದಲ್ಲಿ 320 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 270 ಎಂಎಂ ಡಿಸ್ಕ್ ಬ್ರೇಕ್ ಅಳವಡಿಸಲಾಗಿದೆ. ಈ ಬೈಕ್ 230 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಸೀಟ್ ಎತ್ತರವನ್ನು ಸರಿಹೊಂದಿಸಬಹುದು, 825 ಎಂಎಂ ನಿಂದ 845 ಎಂಎಂ ವರೆಗೆ ಏರಿಸಲು ಸಾಧ್ಯ. 805 ಎಂಎಂ ಸೀಟ್ ಅಕ್ಸೆಸರಿಯಾಗಿ ಲಭ್ಯವಿದೆ. ರಾಯಲ್ ಎನ್ ಫೀಲ್ಡ್ ಅಡ್ವೆಂಚರ್ ರೇಂಜ್ ಸೇರಿದಂತೆ ಅಡ್ವೆಂಚರ್ ಬೈಕ್ ಗಾಗಿ ವಿವಿಧ ಅಕ್ಸೆಸರಿಗಳನ್ನು ನೀಡುತ್ತದೆ. ಹೆಚ್ಚುವರಿಯಾಗಿ, ಎತ್ತರದ ಸೀಟ್​ ಹಾಗೂ ಸುಧಾರಿತ ರಕ್ಷಣಾ ರ್ಯಾಲಿ ಕಿಟ್ ಆಯ್ಕೆ ನೀಡಲಾಗಿದೆ.

ಟ್ಯೂಬ್​ ಟಯರ್​ಗಳು

ಹಿಮಾಲಯನ್ 450 ಬೈಕ್ 21 ಇಂಚಿನ ಫ್ರಂಟ್ ಮತ್ತು 17 ಇಂಚಿನ ರಿಯರ್ ಸ್ಪೋಕ್ಡ್ ವ್ಹೀಲ್ ಗಳನ್ನು ಹೊಂದಿದೆ. ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿ ಟ್ಯೂಬ್ ಮಾದರಿಯ ಟೈರ್ ಗಳನ್ನು ಹೊಂದಿದೆ. ರಾಯಲ್ ಎನ್ ಫೀಲ್ಡ್ ಮುಂದಿನ ವರ್ಷ ಟ್ಯೂಬ್ ಲೆಸ್ ಟೈರ್ ಗಳನ್ನು ಸ್ವಲ್ಪ ಹೆಚ್ಚಿನ ಬೆಲೆಗೆ ಪರಿಚಯಿಸುವ ಯೋಜನೆಯನ್ನು ಹೊಂದಿದೆ. ಹೊಸ ಹಿಮಾಲಯನ್ ಬೈಕಿನ ವಿತರಣೆ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಕೆಟಿಎಂ 390 ಅಡ್ವೆಂಚರ್, ಟ್ರಯಂಫ್ ಸ್ಕ್ರಾಂಬ್ಲರ್ 400 ಎಕ್ಸ್ ಮತ್ತು ಯೆಜ್ಡಿ ಅಡ್ವೆಂಚರ್ ಬೈಕುಗಳಿಗೆ ಪೈಪೋಟಿ ನೀಡಲಿದೆ.

ಎನ್​ಫೀಲ್ಡ್ ಶಾಟ್​ಗನ್​ 650 ಅನಾವರಣ

ರಾಯಲ್ ಎನ್ ಫೀಲ್ಡ್ ಕಂಪನಿಯು 2023ರ ಮೋಟೊವರ್ಸ್ ನಲ್ಲಿ ಶಾಟ್ ಗನ್ 650 ಬೈಕ್ ಅನ್ನು ಅನಾವರಣಗೊಳಿಸಿದೆ. ಈಗಾಗಲೇ ಇಂಟರ್ ಸೆಪ್ಟರ್, ಕಾಂಟಿನೆಂಟಲ್ ಜಿಟಿ ಮತ್ತು ಸೂಪರ್ ಮೆಟಿಯೋರ್ ಬೈಕುಗಳನ್ನು ಒಳಗೊಂಡಿರುವ 650 ಸಿಸಿ ಸರಣಿಯನ್ನು ವಿಸ್ತರಿಸಿದೆ.

ಈ ಬೈಕ್ ಬುಲೆಟ್ 350 ಬೈಕಿನಲ್ಲಿ ಕೈಯಿಂದ ಮಾಡಿದ ಪಿನ್ ಸ್ಟ್ರೈಪಿಂಗ್ ನಂತೆಯೇ. ವೈಶಿಷ್ಟ್ಯ ಹೆಚ್ಚಿಸಲು ಕೈಯಿಂದ ಬಣ್ಣ ಬಳಿಯಲಾಗಿದೆ. ವಿಶೇಷವೆಂದರೆ, ಎಂಜಿನ್ ಕೇಸಿಂಗ್ ಅನ್ನು ಹೊಳಪುಳ್ಳ ಕಪ್ಪು ಫಿನಿಶ್ ನಲ್ಲಿ ನೀಡಲಾಗಿದೆ. ಇದು ರಾಯಲ್ ಎನ್ ಫೀಲ್ಡ್ ನಲ್ಲಿ ಸಿಗುವ ಹೊಸ ವಿನ್ಯಾಸವಾಗಿದೆ.

ವಿಶೇಷ ಆವೃತ್ತಿಯ ಶಾಟ್ ಗನ್ 650 ಮೋಟಾರ್ ವರ್ಸ್ ಎಡಿಷನ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.4.25 ಲಕ್ಷಗಳಾಗಿದೆ. 2024ರ ಜನವರಿಯಿಂದ ಈ ಬೈಕಿನ ಡೆಲಿವರಿ ಆರಂಭವಾಗಲಿದೆ. ಈ ಬೆಲೆಯನ್ನು ಒಳಗೊಂಡಂತೆ, ಈ ಬೈಕಿನಲ್ಲಿ ಬಾರ್-ಎಂಡ್ ಮಿರರ್ ಗಳು ಮತ್ತು ಎಲ್ ಇಡಿ ಟರ್ನ್ ಇಂಡಿಕೇಟರ್ ಗಳಂತಹ ಆಯ್ದ ನೈಜ ಬಿಡಿಭಾಗಗಳನ್ನು ಅಳವಡಿಸಲಾಗಿದೆ. ಹೆಚ್ಚುವರಿಯಾಗಿ, ಸೀಮಿತ ಆವೃತ್ತಿಯ ಮೋಟಾರ್ ಸೈಕಲ್ ವಿಸ್ತರಿತ ವಾರಂಟಿ ಸೇವೆಯನ್ನು ಹೊಂದಿರುತ್ತದೆ.

Continue Reading

ಆಟೋಮೊಬೈಲ್

ಭಾರತದಲ್ಲಿ ಫ್ಯಾಕ್ಟರಿ ಆರಂಭಿಸಲು ಸಿದ್ಧ, ಆದ್ರೆ ಒಂದ್ ಕಂಡೀಷನ್ ಎಂದ ಟೆಸ್ಲಾ!

Tesla: ಭಾರತದಲ್ಲಿ ಫ್ಯಾಕ್ಟರಿ ಆರಂಭಿಸುವ ಸಂಬಂಧ ಭಾರತ ಸರ್ಕಾರ ಮತ್ತು ಟೆಸ್ಲಾ ಕಂಪನಿಯ ಮಧ್ಯೆ ಒಪ್ಪಂದವು ಅಂತಿಮ ಹಂತಕ್ಕೆ ತಲುಪಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

VISTARANEWS.COM


on

Tesla is ready to start a factory in India, but it has one condition
Koo

ನವದೆಹಲಿ: ಎಲಾನ್ ಮಸ್ಕ್ (Elon Musk) ನೇತೃತ್ವದ ಟೆಸ್ಲಾ ಕಂಪನಿ (Tesla Company) ಮುಂದಿನ ವರ್ಷದಿಂದ ಭಾರತದಲ್ಲಿ ಕಾರ್ಯಾಚಣೆ (India Operation) ನಡೆಸಲಿದೆ. ಈ ಬಗ್ಗೆ ಭಾರತ ಸರ್ಕಾರ (Indian Government) ಮತ್ತು ಕಂಪನಿ ನಡುವಿನ ಒಪ್ಪಂದವು ಅಂತಿಮ ಹಂತದಲ್ಲಿದೆ. ಹಾಗಿದ್ದೂ, ಟೆಸ್ಲಾ ಕಂಪನಿ ಷರತ್ತೊಂದನ್ನು ವಿಧಿಸಿದೆ ಎಂದು ತಿಳಿದು ಬಂದಿದೆ. ತನ್ನ ವಾಹನಗಳ ಮೇಲಿನ ಆಮದು ಸುಂಕವನ್ನು (import duty) ಮೊದಲ ಎರಡು ವರ್ಷಗಳ ಕಾರ್ಯಾಚರಣೆಗೆ ಶೇ.15 ಕಡಿತಗೊಳಿಸಿದರೆ ಭಾರತದಲ್ಲಿ ಕಾರ್ಖಾನೆಯನ್ನು (Factory in India) ಸ್ಥಾಪಿಸಲು 2 ಶತಕೋಟಿ ಹೂಡಿಕೆ ಮಾಡಲು ಸಿದ್ಧವಾಗಿದೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.

ಎಲೆಕ್ಟ್ರಿಕ್ ವಾಹನಗಳಗೆ ಸಂಬಂಧಿಸಿದಂತೆ ಭಾರತವು ಹೊಸ ನೀತಿಯನ್ನು ರೂಪಿಸುತ್ತಿದೆ. ಇದರ ಪ್ರಕಾರ, 40 ಸಾವಿರ ಡಾಲರ್ ಮೇಲ್ಪಟ್ಟ ಇವಿ ಕಾರುಗಳ ಮೇಲಿನ ಆಮದು ಸಂಕವನ್ನು ಶೇ.100 ಬದಲಿಗೆ ಶೇ.15ರಷ್ಟು ಇಳಿಸಲಾಗುತ್ತದೆ ಮತ್ತು ಸ್ಥಳೀಯವಾಗಿ ನಿರ್ಮಾಣದ ಬದ್ಧತೆಯನ್ನು ತೋರುವ ಕಂಪನಿಗಳಿಗೆ ಶೇ.70ರಷ್ಟು ಕಡಿಮೆ ಮಾಡುವ ನೀತಿಯನ್ನು ಒಳಗೊಳ್ಳಲಿದೆ ಎಂದು ಈ ಹಿಂದೆ ವರದಿಯಾಗಿತ್ತು.

ಎಲಾನ್ ಮಸ್ಕ್ ನೇತೃತ್ವದ ಎಲೆಕ್ಟ್ರಿಕ್ ವೆಹಿಕಲ್ (ಇವಿ) ಟೆಸ್ಲಾ ಕಂಪನಿಯು, ಸರ್ಕಾರವು 12,000 ವಾಹನಗಳಿಗೆ ಕಡಿಮೆ ಸುಂಕವನ್ನು ಅನುಮೋದಿಸಿದರೆ 500 ಮಿಲಿಯನ್ ಡಾಲರ್ ಮತ್ತು 30,000 ವಾಹನಗಳಿಗೆ ರಿಯಾಯಿತಿ ನೀಡಿದರೆ 2 ಬಿಲಿಯನ್ ಡಾಲರ್‌ವರೆಗೆ ಹೂಡಿಕೆ ಮಾಡಲು ಸಿದ್ಧವಾಗಿದೆ ಎಂದು ಹೇಳಲಾಗುತ್ತಿದೆ.

2 ಶತಕೋಟಿ ಡಾಲರ್ ಹೂಡಿಕೆ ಮಾಡುವ ಟೆಸ್ಲಾ ಪ್ರಸ್ತಾವನೆಯ ಕಾರ್ಯಸಾಧ್ಯತೆಯನ್ನು ಸರ್ಕಾರವು ಪರಿಶೀಲಿಸುತ್ತಿದೆ. ಆದರೆ ಟೆಸ್ಲಾದ ಪ್ರಸ್ತಾಪಕ್ಕೆ ಹೋಲಿಸಿದರೆ ಕಡಿಮೆ ಸುಂಕದ ಮೇಲೆ ಆಮದು ಮಾಡಿಕೊಳ್ಳುವ ಕಾರುಗಳ ಸಂಖ್ಯೆಯನ್ನು ಕಡಿಮೆ ಮಾಡಲು ಬಯಸುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಆದರೆ, ಈ ಬಗ್ಗೆ ಟೆಸ್ಲಾ ಕಂಪನಿಯಾಗಲಿ ಅಥವಾ ಸಂಬಂಧಿ ಕೇಂದ್ರ ಸರ್ಕಾರದ ಇಲಾಖೆಗಳಾಗಿ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.

ತಮಿಳುನಾಡು, ಮಹಾರಾಷ್ಟ್ರ, ಗುಜರಾತ್‌ ರಾಜ್ಯದಲ್ಲಿ ಫ್ಯಾಕ್ಟರಿ?

ಅಮೆರಿಕ ನಿರ್ಮಿತ ಟೆಸ್ಲಾ ಕಾರುಗಳನ್ನು (Tesla Car) ಭಾರತೀಯ ಮಾರುಕಟ್ಟೆಗೆ (Indian Market) ತರುವ ಸಂಬಂಧ ಟೆಸ್ಲಾ ಕಂಪನಿ ಮತ್ತು ಭಾರತೀಯ ಸರ್ಕಾರವು (Indian Government) ಒಪ್ಪಂದವನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ. ಮುಂದಿನ ವರ್ಷ ಟೆಸ್ಲಾ ಭಾರತೀಯ ಮಾರುಕಟ್ಟೆಗೆ ಪ್ರವೇಶ ಪಡೆಯಲಿದೆ ಬ್ಲೂಮ್‌ಬರ್ಗ್ ತಿಳಿಸಿದೆ. 2024ರಲ್ಲಿ ಟೆಸ್ಲಾ ಕಂಪನಿ ಭಾರತದಲ್ಲಿ ಫ್ಯಾಕ್ಟರಿ (Tesla Factory) ಕೂಡ ಆರಂಭಿಸಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಟೆಸ್ಲಾ ಕಂಪನಿ ಭಾರತಕ್ಕೆ ಎಂಟ್ರಿ ಕೊಡಲಿದೆ ಎನ್ನುವ ಸುದ್ದಿಗಳು ಮೊದಲಿಗೆ ಹೊರ ಬಂದಾಗಲೇ ಕರ್ನಾಟಕದಲ್ಲಿ ಫ್ಯಾಕ್ಟರಿ ತೆರೆಯಬಹುದು ಎಂದು ಹೇಳಲಾಗಿತ್ತು. ಆದರೆ, ಈಗ ಕಂಪನಿಯ ಯೋಜನೆಗಳು ಬದಲಾಗಿವೆ.

ಭಾರತ ಸರ್ಕಾರ ಮತ್ತು ಟೆಸ್ಲಾ ಕಂಪನಿ ಒಪ್ಪಂದವನ್ನು ಅಂತಿಮಗೊಳಿಸುವ ಪ್ರಯತ್ನದಲ್ಲಿವೆ. ಈ ಒಪ್ಪಂದ ಅನ್ವಯ ಟೆಸ್ಲಾ ಕಂಪನಿಯ ಅಮೆರಿಕದಲ್ಲಿ ನಿರ್ಮಿತ ಕಾರುಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗಿದೆ. ಹಾಗೆಯೇ, ಮುಂದಿನ ವರ್ಷ ಭಾರತದಲ್ಲಿ ಫ್ಯಾಕ್ಟರಿ ಕೂಡ ಆರಂಭಿಸಲಿದೆ ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ: Tesla Inc: ಟೆಸ್ಲಾ ಕಂಪನಿಗೆ ಭಾರತೀಯ ಮೂಲದ ವೈಭವ್ ತನೇಜಾ ಹೊಸ ಸಿಎಫ್ಒ

Continue Reading

ಆಟೋಮೊಬೈಲ್

ಇವಿ ಕ್ರಾಂತಿ ಮಧ್ಯದಲ್ಲಿ ಸಿಎನ್‌ಜಿ ಅವಕಾಶ ಬಳಸಿಕೊಳ್ಳಲು ಟಾಟಾ ಮೋಟಾರ್ಸ್ ಕಾರ್ಯತಂತ್ರ

TATA Motors: 2030ರ ವೇಳೆಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯ ಶೇ.25ರಷ್ಟನ್ನು ಸಿಎನ್‌ಜಿ ಆವರಿಸಿಕೊಳ್ಳಲಿದೆ. ಈ ಅವಕಾಶವನ್ನು ಟಾಟಾ ಬಾಚಿಕೊಳ್ಳಲು ಮುಂದಾಗಿದೆ.

VISTARANEWS.COM


on

tata motors
Koo

ಬೆಂಗಳೂರು: ಭಾರತದ ಮುಂಚೂಣಿಯ ಆಟೋಮೊಬೈಲ್ ತಯಾರಕರಾದ ಟಾಟಾ ಮೋಟಾರ್ಸ್ (TATA Motors) ಸಂಸ್ಥೆ ಸಿಎನ್‌ಜಿ ವಾಹನಗಳನ್ನು (CNG Vehicle) ಅಪೇಕ್ಷಣೀಯ ಮತ್ತು ಪ್ರಾಕ್ಟಿಕಲ್ ಮಾಡುವ ಮೂಲಕ ದಿಟ್ಟ ಹೆಜ್ಜೆಯನ್ನು ಇಟ್ಟಿದೆ. ಟಾಟಾ ಮೋಟಾರ್ಸ್ ಅದರ ಟ್ವಿನ್-ಸಿಲಿಂಡರ್ ತಂತ್ರಜ್ಞಾನದೊಂದಿಗೆ (Twin Cylinder Technology) ಸಿಎನ್‌ಜಿ ಆಧರಿತ ವಾಹನಗಳಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಖಚಿತಪಡಿಸಿದೆ. ಈ ಕಾರ್ಯತಂತ್ರದ ನಿರ್ಧಾರದಿಂದಾಗಿ ಸುಸ್ಥಿರತೆಯೆಡೆಗಿನ ಟಾಟಾ ಮೋಟರ್ಸ್‌ನ ಬದ್ಧತೆ ಪ್ರತಿಬಿಂಬಿತವಾಗಿದೆ ಮತ್ತು ದೇಶದಲ್ಲಿ ಹೆಚ್ಚುತ್ತಿರುವ ಸಿಎನ್‌ಜಿ ವಾಹನಗಳ ಜನಪ್ರಿಯತೆಯನ್ನು ಎತ್ತಿ ತೋರಿಸುತ್ತದೆ.

ಕಳೆದ ಮೂರರಿಂದ ನಾಲ್ಕು ವರ್ಷಗಳಲ್ಲಿ, ಸಿಎನ್‌ಜಿ ಕಾರುಗಳು, ಅದರಲ್ಲೂ ವಿಶೇಷವಾಗಿ ವೈಯಕ್ತಿಕ ವಾಹನ ಸೆಗ್‌ಮೆಂಟಿನಲ್ಲಿ ಗಮನಾರ್ಹ ಸೆಳೆತವನ್ನು ಸಾಧಿಸಿವೆ. ಈ ಗಮನಾರ್ಹ ಏರಿಕೆಗೆ ಕಾರಣವಾಗಿರುವ ಎರಡು ಪ್ರಮುಖ ಅಂಶಗಳೆಂದರೆ- ವೈವಿಧ್ಯಮಯವಾದ ಮಾಡೆಲ್ ಒದಗಿಸುವಿಕೆ ಮತ್ತು ಮೂಲಭೂತ ಸೌಕರ್ಯಗಳ ವಿಸ್ತರಣೆ.

ಭಾರತೀಯ ಮಾರುಕಟ್ಟೆ ಪ್ರಸ್ತುತ ವಿವಿಧ ಶ್ರೇಣಿಯ ಸಿಎನ್‌ಜಿ ಮಾಡೆಲ್‌ಗಳನ್ನು ಹೊಂದಿವೆ. ವಿವಿಧ ರೀತಿಯ ಬೆಲೆ, ದೇಹಾಕಾರಗಳನ್ನು ಹೊಂದಿರುವ, ಹಲವು ಒರಿಜಿನಲ್ ಈಕ್ವಿಪ್‌ಮೆಂಟ್ ತಯಾರಕರು (ಓಇಎಂ) ಒದಗಿಸುವ ಸುಮಾರು 17-18 ವೇರಿಯೆಂಟ್‌ಗಳು ಲಭ್ಯವಿವೆ. ಬೆಲೆಗಳಿಗೆ ಹೋಲಿಸಿದರೆ ಮಾಲೀಕರಿಗೆ ಕಡಿಮೆ ನಿರ್ವಹಣಾ ವೆಚ್ಚವನ್ನು ನೀಡುವ ಸಿಎನ್ ಜಿ ವಾಹನಗಳು ಪೆಟ್ರೋಲ್‌ನಲ್ಲಿ ಗಮನಾರ್ಹ ವ್ಯತ್ಯಾಸವಿದೆ. ದೇಶದಾದ್ಯಂತ ಸಿಎನ್‌ಜಿ ರಿಫ್ಯುಯಲ್ ಮಾಡುವ ಸ್ಟೇಷನ್‌ಗಳ ವಿಸ್ತರಣೆಯು ಈ ಸೆಗ್‌ಮೆಂಟಿನ ಗೇಮ್ ಚೇಂಜರ್ ಆಗಲಿದೆ. ಮೂರು ವರ್ಷದ ಹಿಂದೆ ಸುಮಾರು 1500 ಸ್ಟೇಷನ್‌ಗಳು ಇದ್ದುವು. ಈಗ ಆ ಸಂಖ್ಯೆಯು ಅಂದಾಜು 5,500ವರೆಗೆ ಏರಿಕೆ ಕಂಡಿದೆ. ಗಮನಾರ್ಹವಾಗಿ, ಹರಿಯಾಣ, ದೆಹಲಿ, ಗುಜರಾತ್ ಮತ್ತು ಮಹಾರಾಷ್ಟ್ರದಂತಹ ರಾಜ್ಯಗಳು ಸಿಎನ್‌ಜಿ ವಾಹನಗಳನ್ನು ಹೆಚ್ಚು ಅಳವಡಿಸಿಕೊಂಡಿವೆ, ಅದರಿಂದಾಗಿ ಈ ಪ್ರದೇಶಗಳಲ್ಲಿ ವಿಸ್ತಾರವಾದ ಮಾರುಕಟ್ಟೆ ಬೆಳವಣಿಗೆ ಸಾಧ್ಯವಾಗಿದೆ.

ಕಳೆದ ಮೂರು ವರ್ಷಗಳಲ್ಲಿ ಕಾಂಪೌಂಡ್ ಆ್ಯನ್ಯುವಲ್ ಗ್ರೋತ್ ರೇಟ್ (ಸಿಎಜಿಆರ್) 35%ನಷ್ಟು, ವೈಓವೈ ಗ್ರೋತ್ ರೇಟ್ 52%ನಷ್ಟು ಹೆಚ್ಚಿಸುವ ಮೂಲಕ ಈ ಎರಡು ಅಂಶಗಳು ಸಿಎನ್‌ಜಿ ಸೆಗ್‌ಮೆಂಟಿನ ಪರಿಣಾಮಕಾರಿ ಬೆಳವಣಿಗೆಗೆ ಕೊಡುಗೆಯವನ್ನು ನೀಡಿವೆ. ಕಳೆದ ವರ್ಷವೊಂದರಲ್ಲೇ, ಮಾರುಕಟ್ಟೆಯು 4 ಲಕ್ಷ ಸಿಎನ್‌ಜಿ ಕಾರುಗಳ ಮಾರಾಟಕ್ಕೆ ಸಾಕ್ಷಿಯಾಗಿವೆ. ಅದರಲ್ಲಿ ಸುಮಾರು 50000ದಷ್ಟು ಯುನಿಟ್‌ಗಳು ಟಾಟಾ ಮೋಟಾರ್ಸ್‌ನದ್ದಾಗಿವೆ.

ಸಿಎಎಫ್ಇ(CAFE) ಮಾನದಂಡಗಳನ್ನು ಮತ್ತು ಕಟ್ಟುನಿಟ್ಟಾಗಿ ಎಮಿಷನ್ ಅವಶ್ಯಕತೆಗಳನ್ನು ಪಾಲಿಸುವ ಮೂಲಕ ಟಾಟಾ ಮೋಟಾರ್ಸ್ ಮಲ್ಟಿ-ಪವರ್ ಟ್ರೇನ್ ಕಾರ್ಯತಂತ್ರವನ್ನು ಅಳವಡಿಸಿಕೊಂಡಿದೆ. ಕಂಪನಿಯು ಈಗಾಗಲೇ ತನ್ನ ಟಿಗೋರ್ ಮತ್ತು ಟಿಯಾಗೋ ಮಾಡೆಲ್‌ಗಳಲ್ಲಿ ಸಿಎನ್‌ಜಿ ಆಯ್ಕೆಗಳನ್ನು ಪರಿಚಯಿಸಿದೆ, ಇದು ಆಯಾ ಕುಟುಂಬಗಳಲ್ಲಿ ಶೇ.40ರಷ್ಟು ಮಾರಾಟವನ್ನು ದಾಖಲಿಸಿದೆ. ಪ್ರೀಮಿಯಂ ಹ್ಯಾಚ್ ಬ್ಯಾಕ್ ಸೆಗ್‌ಮೆಂಟಿನಲ್ಲಿನ ಶೂನ್ಯವನ್ನು ಅಲ್ಟ್ರೋಜ್ ಐಸಿಎನ್‌ಜಿ ಪರಿಚಯಿಸುವ ಮೂಲಕ ತುಂಬಲಾಗಿದೆ.

ಸನ್ ರೂಫ್ ಮತ್ತು ವೈರ್‌ಲೆಸ್ ಚಾರ್ಜರ್‌ನಂತಹ ಮಹತ್ವಾಕಾಂಕ್ಷಿ ಫೀಚರ್‌ಗಳು ಮತ್ತು ಹೆಚ್ಚುವರಿ ಬೂಟ್ ಸ್ಪೇಸ್‌ಗಾಗಿ ಟ್ವಿನ್-ಸಿಲಿಂಡರ್ ತಂತ್ರಜ್ಞಾನ ಹೊಂದುವ ಮೂಲಕ ಈ ಉತ್ಪನ್ನಗಳು ಟಾಟಾ ಮೋಟಾರ್ಸ್‌ನ ರಾಜಿಯಾಗದೆ ಗುಣಮಟ್ಟ ಕಾಪಾಡುವ ಬದ್ಧತೆಗೆ ಸಾಕ್ಷಿಯಾಗಿವೆ.

ಭಾರತೀಯ ಆಟೋಮೋಟಿವ್ ಉದ್ಯಮದಲ್ಲಿ ಸಿಎನ್‌ಜಿ ಹರಡುವಿಕೆ ಶೇ.15ರಷ್ಟಿದೆ. ಉದ್ಯಮ ಪರಿಣತರು ಊಹಿಸಿರುವ ಪ್ರಕಾರ ಅದರ ಪರಿಸರ ಸ್ನೇಹಿ ಸ್ವಭಾವದಿಂದಾಗಿ ದಶಕದ ಅಂತ್ಯಕ್ಕೆ ಈ ಪರ್ಸೆಂಟೇಜ್ ಶೇ.20-25ರವರೆಗೆ ತಲುಪಲಿದೆ. ಎಲ್ಲಾ ಒರಿಜಿನಲ್ ಈಕ್ವಿಪ್‌ಮೆಂಟ್ ಮ್ಯಾನುಫ್ಯಾಕ್ಚರ್ (ಓಇಎಂ)ಗಳು ಸಿಎಎಫ್‌ಇ ಮಾನದಂಡಗಳನ್ನು ಪೂರೈಸುವ ಒತ್ತಡದಲ್ಲಿವೆ, ಇದು ಸಿಎನ್‌ಜಿಯ ಅಳವಡಿಕೆಯನ್ನು ಮತ್ತಷ್ಟು ಹೆಚ್ಚಿಸಲಿದೆ.

ಟಾಟಾ ಮೋಟಾರ್ಸ್‌ನ ಮಲ್ಟಿ-ಪವರ್‌ಟ್ರೇನ್ ಕಾರ್ಯತಂತ್ರ, ವೈವಿಧ್ಯಮಯ ಸಿಎನ್‌ಜಿ ಮಾಡೆಲ್‌ಗಳ ಲಭ್ಯತೆ ಮತ್ತು ಸಿಎನ್‌ಜಿ ಫಿಲ್ಲಿಂಗ್ ಸ್ಟೇಷನ್‌ಗಳ ನೆಟ್‌ವರ್ಕ್ ವಿಸ್ತರಣೆ ಇವೆಲ್ಲವೂ ಸಿಎನ್‌ಜಿ ಸೆಗ್‌ಮೆಂಟಿನ ಬೆಳವಣಿಗೆಗೆ ಕಾರಣವಾಗಿದೆ.

ಪ್ರಸ್ತುತ, ಮಾಸಿಕವಾಗಿ ಸರಿಸುಮಾರು 52,000 ಸಿಎನ್‌ಜಿ ವಾಹನಗಳನ್ನು ಮಾರಾಟ ಮಾಡಲಾಗುತ್ತದೆ, ಈ ಮಾರಾಟದಲ್ಲಿನ ಗಮನಾರ್ಹ ಭಾಗವನ್ನು ಖಾಸಗಿ ಕಾರು ಖರೀದಿದಾರರು ಹೊಂದಿದ್ದಾರೆ. ಟಾಟಾ ಮೋಟಾರ್ಸ್ ಭಾರತೀಯ ಗ್ರಾಹಕರ ಹೆಚ್ಚುತ್ತಿರುವ ಅಗತ್ಯಗಳನ್ನು ಪೂರೈಸಲು ನವೀನ, ಪರಿಸರ ಸ್ನೇಹಿ ಮತ್ತು ಮಹತ್ವಾಕಾಂಕ್ಷೆಯ ವಾಹನಗಳನ್ನು ಒದಗಿಸುವ ಮೂಲಕ ತನ್ನ ಬದ್ಧತೆಯನ್ನು ಸಾರುತ್ತಾ ಅಚಲ ಹೆಜ್ಜೆಯನ್ನಿರಿಸಿಕೊಂಡು ಮುನ್ನಡೆಯುತ್ತಿದೆ.

ಈ ಸುದ್ದಿಯನ್ನೂ ಓದಿ: Tata Motors : ಇವಿ ಮಾರಾಟದಲ್ಲಿ ಹೊಸ ದಾಖಲೆ ಸೃಷ್ಟಿಸಿದ ಟಾಟಾ ಮೋಟಾರ್ಸ್​

Continue Reading
Advertisement
Kodagu News
ಕರ್ನಾಟಕ24 seconds ago

ಕೊಡಗು ಜಿಲ್ಲೆಯ ಹೊಳೆಯಲ್ಲಿ ತಾಯಿ, ಇಬ್ಬರು ಯುವತಿಯರ ಶವ ಪತ್ತೆ; ಸಾವಿಗೆ ಕಾರಣ?

Ishwar Sahu
ದೇಶ47 mins ago

ಮುಸ್ಲಿಮರಿಂದ ಹತ್ಯೆಗೀಡಾದ ಯುವಕನ ತಂದೆ 7 ಬಾರಿಯ ಕಾಂಗ್ರೆಸ್ ಶಾಸಕನನ್ನು ಸೋಲಿಸಿದರು!

Jyothi Reddy CEO of American Company
ಅಂಕಣ50 mins ago

Raja Marga Column : ಅನ್ನಕ್ಕಾಗಿ ಕಲ್ಲು ಒಡೆಯೋ ಕೆಲಸ ಮಾಡ್ತಿದ್ದ ಆಕೆ ಈಗ ಅಮೆರಿಕನ್‌ ಕಂಪನಿ ಸಿಇಓ!

Venkataramana Reddy
ದೇಶ1 hour ago

ತೆಲಂಗಾಣದಲ್ಲಿ ಹಾಲಿ, ಭಾವಿ ಸಿಎಂಗಳನ್ನೇ ಸೋಲಿಸಿದ ಬಿಜೆಪಿಯ ವೆಂಕಟರಮಣ ರೆಡ್ಡಿ; ಯಾರಿವರು?

Complaint to CM Siddaramaiah
ಕರ್ನಾಟಕ1 hour ago

Complaint to CM : ಸಿಎಂಗೆ ದೂರು ನೀಡಬೇಕೇ? ಈ ನಂಬರ್‌ಗೆ ಕರೆ ಮಾಡಿ!

women enjoying in rain
ಉಡುಪಿ2 hours ago

Karnataka Weather : ಮಳೆಯೊಂದಿಗೆ 30 ಕಿ.ಮೀ ವೇಗದಲ್ಲಿ ಬೀಸಲಿದೆ ಗಾಳಿ

Mizoram Election Result
ದೇಶ2 hours ago

Mizoram Election Result: ಮಿಜೋರಾಂ ಫಲಿತಾಂಶಕ್ಕೆ ಕ್ಷಣಗಣನೆ; ಯಾರಿಗೆ ಗೆಲುವು?

4 state election results shows us that, freebies are not the way for win elections
ದೇಶ2 hours ago

ವಿಸ್ತಾರ ಸಂಪಾದಕೀಯ: ವಿಧಾನಸಭೆ ಚುನಾವಣೆ ಫಲಿತಾಂಶ; ‘ಗ್ಯಾರಂಟಿ’ಯೇ ಅಂತಿಮವಲ್ಲ!

ead your daily horoscope predictions for december 4th 2023
ಪ್ರಮುಖ ಸುದ್ದಿ3 hours ago

Dina Bhavishya : ಇಂದು ಹೂಡಿಕೆ ಮಾಡಿದ್ರೆ ಈ ರಾಶಿಯವರಿಗೆ ಡಬಲ್‌ ಧಮಾಕಾ!

Sphoorti Salu
ಸುವಚನ3 hours ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

ead your daily horoscope predictions for december 4th 2023
ಪ್ರಮುಖ ಸುದ್ದಿ3 hours ago

Dina Bhavishya : ಇಂದು ಹೂಡಿಕೆ ಮಾಡಿದ್ರೆ ಈ ರಾಶಿಯವರಿಗೆ ಡಬಲ್‌ ಧಮಾಕಾ!

Police call off protest FIR against lawyer who slapped police
ಕರ್ನಾಟಕ20 hours ago

Police Protest : ಪ್ರತಿಭಟನೆ ಕೈ ಬಿಟ್ಟ ಪೊಲೀಸರು; ಕಪಾಳಕ್ಕೆ ಹೊಡೆದ ವಕೀಲನ ಮೇಲೆ ಎಫ್‌ಐಆರ್‌

Dina Bhavihsya
ಪ್ರಮುಖ ಸುದ್ದಿ1 day ago

Dina Bhavishya : ಸಂಡೇ ಆದರೂ ಈ ರಾಶಿಯವರಿಗೆ ಟೆನ್ಷನ್‌ ತಪ್ಪಲ್ಲ! ಇವರಿಂದ ದೂರ ಇರಿ

Cockroaches bite baby born 2 days ago in vanivilas hospital
ಆರೋಗ್ಯ2 days ago

Vanivilas Hospital : 2 ದಿನಗಳ ಹಿಂದಷ್ಟೇ ಜನಿಸಿದ ಮಗುವನ್ನು ಕಚ್ಚಿ ಹಾಕಿದ ಜಿರಳೆಗಳು!

Dina Bhavishya
ಪ್ರಮುಖ ಸುದ್ದಿ2 days ago

Dina Bhavishya : ಯಾರನ್ನೂ ನಂಬಿ ಇನ್ವೆಸ್ಟ್ಮೆಂಟ್‌ ಮಾಡ್ಬೇಡಿ!

DK Shiakumar and MLA Munirathna
ಕರ್ನಾಟಕ3 days ago

DK Shivakumar : ಡಿಕೆಶಿಯನ್ನು ಗೇಟ್‌ ಒಳಗೇ ಬಿಟ್ಟಿಲ್ಲ, ಸಿಎಂ ಮಾಡುವಂತೆಯೂ ಹೇಳಿಲ್ಲವೆಂದ ಮುನಿರತ್ನ!

Tigre Found in Mysuru again Beware of this village
ಕರ್ನಾಟಕ3 days ago

Operation Tiger : ಮೈಸೂರಲ್ಲಿ ಮತ್ತೆ ಹುಲಿ ಕಾಟ; ಈ ಗ್ರಾಮದವರು ಹುಷಾರು!

Infosys Narayana Murthy and Congress Guarantee
ಕರ್ನಾಟಕ4 days ago

Congress Guarantee : ಯಾವುದನ್ನೂ ಪುಕ್ಕಟೆ ಕೊಡಬೇಡಿ; ‘ಗ್ಯಾರಂಟಿ’ಗೆ ನಾರಾಯಣ ಮೂರ್ತಿ ಆಕ್ಷೇಪ!

Justice for Ajay Protests against NIMHANS Hospital
ಆರೋಗ್ಯ4 days ago

Child Death : ಜಸ್ಟಿಸ್ ಫಾರ್ ಅಜಯ್; ಶುರುವಾಯ್ತು ನಿಮ್ಹಾನ್ಸ್‌ ವಿರುದ್ಧ ಪ್ರತಿಭಟನೆ

Dina Bhavishya
ಪ್ರಮುಖ ಸುದ್ದಿ5 days ago

Dina Bhavishya : ಯಾರಾದರೂ ಕಾಳಜಿ ತೋರಿದರೆ ಈ ರಾಶಿಯವರು ನೆಗ್ಲೆಕ್ಟ್‌ ಮಾಡ್ಬೇಡಿ!

ಟ್ರೆಂಡಿಂಗ್‌