Site icon Vistara News

Actor Darshan : ನಟ ದರ್ಶನ್ ಬಿಡುಗಡೆಗೆ ಮುಹೂರ್ತ ಫಿಕ್ಸ್; ಜನ್ಮ ಜಾತಕದ ಪ್ರಕಾರ ಶುಭ ಸಮಯ ಶುರು

Actor darshan

ತುಮಕೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಜೈಲು ಸೇರಿರುವ ನಟ ದರ್ಶನ್ (Actor Darshan) ಆಶ್ವೀಜ-ಕಾರ್ತಿಕ ಮಾಸದ ಮಧ್ಯ ಭಾಗದಲ್ಲಿ ಬಿಡುಗಡೆ ಆಗುತ್ತಾರೆ ಎಂದು ಸ್ಫೋಟಕ ಭವಿಷ್ಯವನ್ನು ಜ್ಯೋತಿಷಿ ಡಾ.ಲಕ್ಷ್ಮಿಕಾಂತ ಆಚಾರ್ಯ ನುಡಿದಿದ್ದಾರೆ. 2027ಕ್ಕೆ ಶನಿ ದಶಾಬುಕ್ತಿ ಪ್ರಾರಂಭವಾಗಲಿದ್ದು, ದರ್ಶನ್ ರಾಜಕೀಯ ಜೀವನ ತುಂಬಾ ಚೆನ್ನಾಗಿರಲಿದೆ. ತುಮಕೂರು ಸನಿಹದ ಚಿನಗ ಗ್ರಾಮದಲ್ಲಿ ನೆಲೆಸಿರುವ ಶ್ರೀ ಮೂಕಾಂಬಿಕಾ ದೇವಿ ಹೂ ಪ್ರಸಾದ ಕೊಡುವ ಮೂಲಕ ದರ್ಶನ್ ಬಿಡುಗಡೆಗೆ ಮುನ್ಸೂಚನೆ ಕೊಟ್ಟಿದ್ದಾಳೆ.

ದರ್ಶನ್‌ ಕುರಿತು ಜ್ಯೋತಿಷ್ಯ ಹೇಳುವಾಗಲೇ ಬಲಗಡೆಯಿಂದ ಹೂ ಪ್ರಸಾದ ಕೊಟ್ಟ ದೇವಿ

ಮೂಕಾಂಬಿಕಾ ದೇವಿ ಆರಾಧಕರು, ಜ್ಯೋತಿಷಿ ಡಾ. ಲಕ್ಷ್ಮೀಕಾಂತ ಆಚಾರ್ಯ ಅವರು ಈ ಬಗ್ಗೆ ಮಾತಾನಾಡಿದ್ದಾರೆ. ದರ್ಶನ್ ಬಿಡುಗಡೆ ಬಗ್ಗೆ ಜ್ಯೋತಿಷ್ಯ ಹೇಳುತ್ತಿರುವಾಗಲೇ ತಾಯಿ ಮೂಕಾಂಬಿಕಾ ದೇವಿ ಬಲಗಡೆ ಹೂ ಪ್ರಸಾದ ಕೊಟ್ಟಿದೆ. ದೇವಿಯ ಹೂ ಪ್ರಸಾದದಿಂದ ದರ್ಶನ್ ಬಿಡುಗಡೆ ದೃಢೀಕರಿಸಿದ್ದಾರೆ. ಕಾರ್ತಿಕ್ ಮಾಸದ ಅಂತ್ಯದೊಳಗೆ ನಟ ದರ್ಶನ್ ಬಿಡುಗಡೆ ಆಗುತ್ತಾರೆ. ದರ್ಶನ್ ಅವರ ಜನ್ಮ ಜಾತಕದ ಪ್ರಕಾರ ಶುಭ ಸಮಯ ಪ್ರಾರಂಭವಾಗಿದೆ. ದೇವಿಯ ಆಶೀರ್ವಾದ ಸಂಪೂರ್ಣ ಇದ್ದು, ಎಲ್ಲವೂ ಶುಭ ಆಗುತ್ತದೆ. ದರ್ಶನ್‌ರ ದಶಾಬುಕ್ತಿಗಳು ಅಂತ್ಯವಾಗಿ, ಶುಭ ದಶಾಬುಕ್ತಿಗಳು ಪ್ರಾರಂಭವಾಗಿವೆ. ಅಭಿಮಾನಿಗಳಿಗೆ ಯಾವುದೇ ರೀತಿಯ ಆತಂಕ ಬೇಡ. ಪೂಜೆ-ಪುನಸ್ಕಾರ ಎಲ್ಲವನ್ನೂ ನಡೆಸಿಕೊಂಡು ಬಂದಿರುವುದರಿಂದ ಆ ದೇವಿಯ ಅನುಗ್ರಹ ಇರುತ್ತದೆ. ಇದರಲ್ಲಿ ಯಾವುದೇ ರೀತಿಯ ಅನುಮಾನ ಬೇಡ ಎಂದು ಜ್ಯೋತಿಷಿ ಡಾ.ಲಕ್ಷ್ಮೀಕಾಂತ ಆಚಾರ್ಯ ತಿಳಿಸಿದ್ದಾರೆ.

ಈ ದೇವಿ ಹೂ ಪ್ರಸಾದ ಕೊಟ್ಟರೆ ಇಲ್ಲಿವರೆಗೂ ಯಾವುದೂ ಕೂಡ ಸುಳ್ಳಾಗಿಲ್ಲ. ಸಾಕಷ್ಟು ರೀತಿಯಲ್ಲಿ ಒಳ್ಳೆಯದಾಗಿದೆ ಎಂದು ಭಕ್ತಾಧಿಗಳು ಹೇಳಿಕೊಂಡು ಬಂದಿದ್ದಾರೆ. ಇದಕ್ಕೆ ಸಾಕಷ್ಟು ಉದಾಹರಣೆ ಕೂಡ ಇದೆ. ನಟ ದರ್ಶನ್‌ಗೆ ಇಷ್ಟು ದಿವಸ ಜನ್ಮ‌ ಜಾತಕದಲ್ಲಿ ಗುರುದಶಾಬುಕ್ತಿ ನಡೆಯುತ್ತಿತ್ತು. 2027ಕ್ಕೆ ಶನಿ ದಶಾಬುಕ್ತಿ ಪ್ರಾರಂಭವಾಗಲಿದೆ. ದರ್ಶನ್ ರಾಜಕೀಯ ಜೀವನ ತುಂಬಾ ಚೆನ್ನಾಗಿರಲಿದೆ. 2027ರ ನಂತರ ರಾಜಕೀಯದಲ್ಲಿ ಉನ್ನತ ಸ್ಥಾನ ಪಡೆಯುತ್ತಾರೆ. ಹಾಗಾಗಿ ಇದರಲ್ಲಿ ಯಾವುದೇ ಅನುಮಾನ ಬೇಡ. 2027ರ ನಂತರ ದರ್ಶನ್ ಜೀವನ ಶೈಲಿ ಬದಲಾಗಲಿದೆ. ಈಗ 2024ರ ಅಂತ್ಯದಲ್ಲಿ ಇದ್ದೇವೆ, 2025-2026ರ ನಂತರ 2027ರಿಂದ ಒಳ್ಳೆಯ ಸಮಯ ಪ್ರಾರಂಭವಾಗುತ್ತದೆ. ಒಳ್ಳೆಯ ರೀತಿಯ ಜೀವನ ಕಲ್ಪಿಸಿಕೊಡುತ್ತಾಳೆ. ರಾಜಕೀಯ ಪ್ರವೇಶದ ಯೋಗ ಕೂಡ ದರ್ಶನ್‌ಗೆ ಇದೆ. ದಶಾಬುಕ್ತಿಗಳು ಮನುಷ್ಯನ ಜೀವನ ಶೈಲಿಯನ್ನೇ ಬದಲಾಯಿಸಿ ಬಿಡುತ್ತದೆ.

ಒಳ್ಳೆಯದು ಪ್ರಾರಂಭ ಆಗಬೇಕು ಅಂದಾಗ ಕೆಟ್ಟದು ನಮ್ಮ‌ ಕಣ್ಣಿಗೆ ಯಾವುದು ಕಾಣಿಸಲ್ಲ. ದೇವಿಯು ಆಶೀರ್ವಾದ ಮಾಡಿರುವುದರಿಂದ ಅವರ ಜೀವನ ಸುಗಮವಾಗಿ ನಡೆಯುತ್ತದೆ. ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಚಂಡಿಕಾ ಯಾಗ ಮಾಡಿಸಿದ್ದರು. ಆದಾದ ನಂತರ ಕುಮಾರಸ್ವಾಮಿ ಮುಖ್ಯಮಂತ್ರಿ ಆದರು. ಕ್ಷೇತ್ರಕ್ಕೆ ಸಿರಾದ ದಿವಂಗತ ಸತ್ಯನಾರಾಯಣ್, ವಾಸು, ಬೆಮೆಲ್ ಕಾಂತರಾಜು, ಗೌರಿಶಂಕರ್, ಸುರೇಶ್‌ಗೌಡ ಹಾಗೂ ಪರಮೇಶ್ವರ, ಮುದ್ದಹನುಮೇಗೌಡ ಸಾಕಷ್ಟು ರೀತಿಯ ರಾಜಕೀಯ ವ್ಯಕ್ತಿಗಳು ದೇವಿಯ ಆಶೀರ್ವಾದ ಪಡೆದಿದ್ದಾರೆ. ಎಲ್ಲರಿಗೂ ಒಳ್ಳೆಯದಾಗಿರುವ ನಿದರ್ಶನಗಳಿವೆ ಎಂದು ತುಮಕೂರಿನಲ್ಲಿ ಜ್ಯೋತಿಷಿ ಡಾ. ಲಕ್ಷ್ಮೀಕಾಂತ ಆಚಾರ್ಯ ತಿಳಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version