Site icon Vistara News

Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

Elephant attack

ಚಿಕ್ಕಮಗಳೂರು: ಮಳೆ (Karnataka Rain) ಮಧ್ಯೆ ಮಲೆನಾಡಲ್ಲಿ ಕಾಡಾನೆಗಳ ಕಾಟ (Elephant attack) ಶುರುವಾಗಿದೆ. 18 ಕಾಡಾನೆಗಳ ಹಿಂಡಿನಿಂದ ಮಲೆನಾಡಿಗರು ಕಂಗಾಲಾಗಿದ್ದಾರೆ. ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಪುರ, ಗಬ್ಬಳ್ಳಿ, ಕಾರ್ಬೈಲು ಗ್ರಾಮ ಸುತ್ತಮುತ್ತ ಕಾಡಾನೆಗಳ ಹಿಂಡು ಪ್ರತ್ಯಕ್ಷವಾಗುತ್ತಿದೆ.

ದಿನಕ್ಕೊಂದು ಹಳ್ಳಿಯಲ್ಲಿ ಕಾಡಾನೆಗಳು ಕಾಣಿಸುಕೊಳ್ಳುತ್ತಿದ್ದು, ಕಾಫಿ ತೋಟಗಳನ್ನು ನಾಶ ಮಾಡುತ್ತಿವೆ. ಮಳೆಯಿಂದ ನಾನಾ ಅವಾಂತರವೇ ಸೃಷ್ಟಿಯಾಗಿದೆ. ಇದೀಗ ಮತ್ತೆ ಕಾಡಾನೆಗಳ ದಾಳಿಯಿಂದ ಜನರು ಕಂಗಾಲಾಗಿದದಾರೆ. ಆನೆಗಳನ್ನ ಓಡಿಸುವಂತೆ ಮೂಡಿಗೆರೆಯ ಗ್ರಾಮೀಣ ಭಾಗದ ಜನರು ಆಗ್ರಹಿಸಿದ್ದಾರೆ.

ಮಳೆಗೆ ಮನೆಗಳಿಗೆ ನುಗ್ಗುತ್ತಿರುವ ಹಾವುಗಳು

ಕೊಪ್ಪಳದಲ್ಲಿ ವ್ಯಾಪಕ ಮಳೆಗೆ ಆಶ್ರಯ ಪಡೆಯಲು ಮನೆಗಳಿಗೆ, ಗುಡಿಸಲಿಗೆ ಹಾವುಗಳು ನುಗ್ಗುತ್ತಿವೆ. ಹಾವುಗಳ ರಕ್ಷಣೆ ಮಾಡಿ ಉರಗ ಪ್ರೇಮಿ ಅನಿಲ್ ಕಾಡಿಗೆ ಬಿಡುತ್ತಿದ್ದಾರೆ. 1,500ಕ್ಕೂ ಹೆಚ್ಚು ಹಾವುಗಳ ರಕ್ಷಣೆ ಮಾಡಲಾಗಿದೆ. ಕೊಪ್ಪಳ ತಾಲೂಕಿ ಹಿಟ್ನಾಳ ಗ್ರಾಮದ ಸ್ನೇಕ್ ಅನಿಲ್ ಅವರು, ಮಳೆಗಾಲದಲ್ಲಿ ಹೆಚ್ಚು ಹಾವುಗಳ ರಕ್ಷಣೆ ಮಾಡಿ ಕಾಡಿಗೆ ಬಿಡುತ್ತಾರೆ. ನಾಗರಹಾವು, ರಸೆಲ್ ವೈಪರ್, ಕಾಮನ್ ಕ್ರೇಟ್, ಕೇರೆ ಹಾವು, ತೋಳದ ಹಾವು, ನೀರು ಹಾವು, ಚೆಕ್ ಕೀಲ್ ಬ್ಯಾಕ್ಸ್ ಹಾವುಗಳ ರಕ್ಷಣೆ ಮಾಡಲಾಗಿದೆ.

ಭಾರಿ ಮಳೆಗೆ 150 ಮನೆಗಳು ಜಲಾವೃತ

ಘಟಪ್ರಭಾ ನದಿ ಅಬ್ಬರಕ್ಕೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಪಟಗುಂದಿ ಗ್ರಾಮ ಪತರಗುಟ್ಟಿದೆ. ಇದೊಂದೇ ಗ್ರಾಮದಲ್ಲಿ ಬೆಳಗಾಗುವಷ್ಟರಲ್ಲಿ 150 ಮನೆಗಳು ಜಲಾವೃತಗೊಂಡಿದೆ. ಗ್ರಾಮದಲ್ಲಿರುವ ಚರ್ಚ್‌ವರೆಗೂ ನೀರು ನುಗ್ಗಿದೆ. ಮನೆಗೆ ನೀರು ಬರುತ್ತಿದ್ದಂತೆ ಸಾಮಾಗ್ರಿಗಳನ್ನು ಬಿಟ್ಟು ಜನರು ಕಾಳಜಿ ಕೇಂದ್ರಕ್ಕೆ ಶಿಫ್ಟ್‌ ಆಗಿದ್ದಾರೆ. ಶಾಶ್ವತ ಪರಿಹಾರ ಕಲ್ಪಿಸುವಂತೆ ಸರ್ಕಾರಕ್ಕೆ ನೆರೆ ಸಂತ್ರಸ್ತರ ಒತ್ತಾಯಿಸಿದ್ದಾರೆ. ನಮಗೆ ಪರಿಹಾರ ಬೇಡ ಮನೆಗಳನ್ನು ಕಟ್ಟಿಸಿಕೊಡಿ ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Theft case : ಪೊಲೀಸ್‌ ಮನೆಯಲ್ಲಿ ಕಳ್ಳರ ಕಳ್ಳಾಟ; ಚಿನ್ನಾಭರಣ ಕದ್ದು ಎಸ್ಕೇಪ್‌

ಹರಿಯುವ ನೀರಿನಲ್ಲಿ ಪಂಪ್‌ಸೆಟ್‌ ತಂದ ರೈತರು

ನದಿ ತೀರದಲ್ಲಿ ಇಟ್ಟಿದ್ದ ಮೋಟಾರ್ ಪಂಪ್‌ಸೆಟ್‌ಗಳನ್ನು ಹೊರ ತೆಗೆಯಲು ರೈತರು ಹರಸಾಹಸ ಪಡುತ್ತಿದ್ದಾರೆ. ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಚನ್ನೂರು ಗ್ರಾಮದ ರೈತರು ಕಳೆದ ಎರಡು ತಿಂಗಳ ಹಿಂದೆ ನೀರು ಇಲ್ಲದೇ ಇದ್ದಾಗ, ನದಿ ಸಮೀಪ ಪಂಪ್ ಸೆಟ್ ಬಿಟ್ಟಿದ್ದರು. ಈಗ ನದಿಗೆ ನೀರು ಹರಿದು ಬರುತ್ತಿದ್ದು, ಪಂಪ್ ಸೆಟ್‌ಗಳು ಕೊಚ್ಚಿ ಹೋಗುವ ಆತಂಕವಿದೆ. ಈ ಕಾರಣಕ್ಕೆ ತೆಪ್ಪದ ಮೂಲಕ ತೆರಳಿ ಪಂಪ್ ಸೆಟ್ ತಂದಿದ್ದಾರೆ. ಹರಿಯುವ ನದಿ ನೀರಲ್ಲೇ ಜೀವದ ಹಂಗು ತೊರೆದು ಪಂಪ್ ಸೆಟ್ ಗಳನ್ನು ತಂದಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version