ದಾವಣಗೆರೆ: ಸತತ ಮಳೆಯಿಂದ ಗೋಡೆ ಕುಸಿದು ವೃದ್ಧ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಕುಳಗಟ್ಟೆ ಬಸವರಾಜಪ್ಪ (81) ಗೋಡೆ ಬಿದ್ದು ಮೃತಪಟ್ಟವರು. ದಾವಣಗೆರೆಯ ಚನ್ನಗಿರಿ ತಾಲೂಕಿನ ಸಂತೇಬೆನ್ನೂರಿನ ಪುಷ್ಕರಣಿ ಬೀದಿಯ ಮನೆಯ ಗೋಡೆ ಕುಸಿದಿದೆ. ರಾತ್ರಿ ಗೋಡೆ ಒಂದು ಕಡೆ ವಾಲುತ್ತಿದ್ದ ವೇಳೆ ಬಸವರಾಜಪ್ಪ ಅವರ ಮಗ-ಸೊಸೆ ಮನೆ ಹೊರಗೆ ಬಂದಿದ್ದಾರೆ. ಬಸವರಾಜಪ್ಪ ಹೊರ ಬರುವಷ್ಟರಲ್ಲೇ ಗೋಡೆ ಕುಸಿದಿದೆ.
ಗೋಡೆ ಕುಸಿದು ಬಿದ್ದ ಹಿನ್ನೆಲೆಯಲ್ಲಿ ತೀವ್ರ ಗಾಯಗೊಂಡು ವೃದ್ಧ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಚನ್ನಗಿರಿ ತಹಶೀಲ್ದಾರ್ ರುಕ್ಮಿಣಿಬಾಯಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರ ಕುಟುಂಬಕ್ಕೆ ಐದು ಲಕ್ಷ ಪರಿಹಾರ ಚೆಕ್ ಅನ್ನು ತಹಸೀಲ್ದಾರ್ ನೀಡಿದ್ದಾರೆ. ಸಂತೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: karnataka Rain : ಬೆಂಗಳೂರಿನಲ್ಲಿ ಮಳೆ ಬಂದೋಯ್ತು, ಯಡವಟ್ಟು ಆಯ್ತು; ಜನರಿಗೆ ತಲೆ ಕೆಟ್ಟು ಹೋಯಿತು
50ಕ್ಕೂ ಹೆಚ್ಚು ಮನೆಗಳಿಗೆ ಹಾನಿ
ವಿಜಯನಗರ ಜಿಲ್ಲೆಯಾದ್ಯಂತ ಭಾರಿ ಮಳೆಯಾಗಿದ್ದು, ಸುಮಾರು 49 ಮನೆಗಳಿಗೆ ಹಾನಿಯಾಗಿದೆ. ಆರು ತಾಲೂಕುಗಳ ಪೈಕಿ, ಕೂಡ್ಲಿಗಿ ತಾಲ್ಲೂಕಿನಲ್ಲಿ 42 ಮನೆ ಸೇರಿ ಜಿಲ್ಲೆಯಲ್ಲಿ 49 ಮನೆಗಳಿಗೆ ಹಾನಿಯಾಗಿದೆ. ಹೊಸಪೇಟೆಯಲ್ಲಿ ಒಂದು ಮನೆಗೆ ಭಾಗಶಃ ಹಾನಿಯಾಗಿದೆ. ಹಡಗಲಿ, ಹರಪನಹಳ್ಳಿ ತಾಲೂಕುಗಳಲ್ಲಿ ತಲಾ ಒಂದೊಂದು ಮನೆ, ಕೊಟ್ಟೂರು ತಾಲೂಕಿನಲ್ಲಿ 4 ಮನೆಗೆ ಹಾನಿಯಾಗಿದೆ. ಹಡಗಲಿ ತಾಲೂಕಿನ ಕೆಂಚಮನಹಳ್ಳಿ ಗ್ರಾಮದಲ್ಲಿ ಎರಡು ಕುರಿಗಳು ಮೃತಪಟ್ಟಿವೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ