ಹಾವೇರಿ/ಬೆಂಗಳೂರು: ಹಾವೇರಿಯಲ್ಲಿ ನಿರಂತರ ಮಳೆಗೆ (Karnataka Weather Forecast) ಸರಕಾರಿ ಶಾಲೆ ಕಟ್ಟಡವೊಂದು ಸೋರುತ್ತಿದೆ. ಶತಮಾನ ಕಂಡಿರುವ ಹಾವೇರಿಯ ಕಳಸೂರಿನಲ್ಲಿರುವ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೀರು ಸೋರಿಕೆಯಿಂದಾಗಿ ಮಕ್ಕಳು ಪರದಾಟ ಅನುಭವಿಸುತ್ತಿದ್ದಾರೆ. ಶಿಥಿಲಾವಸ್ಥೆಯಲ್ಲಿರುವ ಶಾಲಾ ಕಟ್ಟಡದ ದುರಸ್ತಿಗೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಮುಂದಿನ ವಾರ ಭಾರಿ ಮಳೆ
ಮುಂದಿನ ಒಂದು ವಾರ ಕೆಲವೆಡೆ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಒಳನಾಡಿನ ಬಹುತೇಕ ಕಡೆಗಳಲ್ಲಿ ಹಗುರದಿಂದ ಮಳೆಯಾಗಲಿದೆ. ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡು ಜಿಲ್ಲೆಯ ಹಲವು ಕಡೆಗಳಲ್ಲಿ ಮತ್ತು ಉತ್ತರ ಒಳನಾಡಿನ ಜಿಲ್ಲೆಗಳ ಕೆಲವು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
ಬೆಂಗಳೂರು ನಗರದಲ್ಲಿ ಮೋಡ ಕವಿದ ವಾತಾವರಣ
ಮುಂದಿನ 24 ಗಂಟೆಯಲ್ಲಿ ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ಹಗುರ ಮಳೆಯಾಗುವ ಸಾಧ್ಯತೆ ಇದ್ದು, ನಿರಂತರ ಗಾಳಿಯ ವೇಗ ಗಂಟೆಗೆ 30 ರಿಂದ 40 ಕಿಮೀ ತಲುಪುವ ಸಾಧ್ಯತೆಯಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 28 ಮತ್ತು 20 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಇದನ್ನೂ ಓದಿ: Road Accident : ಚಲಿಸುತ್ತಿದ್ದ ಬೈಕ್‌ಗೆ ಲಾರಿ ಡಿಕ್ಕಿ; ಪತಿ ಸಾವು, ಪತ್ನಿ ಕಾಲುಗಳು ಕಟ್, ಮಗು ಪಾರು
ಉತ್ತರ ಒಳನಾಡಿನಲ್ಲಿ ದುರ್ಬಲಗೊಂಡ ನೈರುತ್ಯ
ನೈರುತ್ಯ ಮುಂಗಾರು ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಸಾಮಾನ್ಯವಾಗಿತ್ತು. ಉತ್ತರ ಒಳನಾಡಿನಲ್ಲಿ ದುರ್ಬಲವಾಗಿತ್ತು. ಕರಾವಳಿಯ ಹೆಚ್ಚಿನ ಸ್ಥಳಗಳಲ್ಲಿ, ದಕ್ಷಿಣ ಹಾಗೂ ಒಳನಾಡಿನ ಪ್ರತ್ಯೇಕ ಕಡೆಗಳಲ್ಲಿ ಮಳೆಯಾಗಿದೆ. ಉತ್ತರ ಕನ್ನಡದ ಮಂಕಿ 11, ಶಿವಮೊಗ್ಗದ ಆನವಟ್ಟಿ, ಆಗುಂಬೆಯಲ್ಲಿ ತಲಾ 10 ಸೆಂ.ಮೀ ಮಳೆಯಾಗಿದೆ. ಕ್ಯಾಸಲ್ ರಾಕ್, ಗೇರ್ಸೊಪ್ಪ, ಕದ್ರಾ, ಜಗಲಬೆಟ್‌ನಲ್ಲಿ 10ಸೆಂ.ಮೀ ಮಳೆಯಾಗಿದೆ. ಕೋಟ, ಕಮ್ಮರಡಿ,ಶೃಂಗೇರಿ, ಸಿದ್ದಾಪುರ, ಕುಮಟಾದಲ್ಲಿ 6 ಸೆಂ.ಮೀ, ಮೂಲ್ಕಿ, ಮಾಣಿ, ಕಾರವಾರ, ಯಲ್ಲಾಪುರ, ಪುತ್ತೂರು, ಹೊನ್ನಾವರ, ಕೊಪ್ಪ, ಜಯಪುರದಲ್ಲಿ 5 ಸೆಂ.ಮೀ ಮಳೆಯಾಗಿದೆ.
ಧರ್ಮಸ್ಥಳ, ಸಿದ್ದಾಪುರ, ಲಿಂಗನಮಕ್ಕಿ, ದಕ್ಷಿಣ ಕನ್ನಡ, ಜೋಯಿಡಾ, ಶಿರಾಲಿ, ಕುಂದಾಪುರ ಹಾಗೂ ಮಂಗಳೂರು, ಕಾರ್ಕಳ, ಬೆಳಗಾವಿಯಲ್ಲಿ 3 ಸೆಂ.ಮೀ ಮಳೆಯಾಗಿದೆ. ಸುಳ್ಯ, ಗೋಕರ್ಣ, ಮಂಗಳೂರು, ಪಣಂಬೂರು, ಬೆಳ್ತಂಗಡಿ, ಹಳಿಯಾಳ, ಲೋಂಡಾ, ಎನ್‌ಆರ್‌ಪುರ, ಬಾಳೆಹೊನ್ನೂರು, ಮೂರ್ನಾಡು, ಭಾಗಮಂಡಲ, ಕಳಸ, ನಿಲ್ಕುಂದ, ಕಿರವತ್ತಿ, ಬೆಳಗಾವಿ, ತ್ಯಾಗರ್ತಿ ಸೇರಿದಂತೆ ಸೋಮವಾರಪೇಟೆ, ಹುಂಚದಕಟ್ಟೆ, ಹಿರಿಯೂರು, ಹಾಸನ, ಹಾರಂಗಿ, ತೊಂಡೇಬಾವಿ, ಬಿ ದುರ್ಗ, ದೊಡ್ಡಬಳ್ಳಾಪುರ, ಕೊಟ್ಟಿಗೆಹಾರ ಸುತ್ತಮುತ್ತ 1 ಸೆಂ.ಮೀ ಮಳೆಯಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ