Site icon Vistara News

Karnataka Weather : ಇಂದು ಧ್ವಜಾರೋಹಣ ಆಯ್ತು, ನಾಳೆ ವರಮಹಾಲಕ್ಷ್ಮಿ ಹಬ್ಬಕ್ಕೂ ಮಳೆ ಅಡ್ಡಿ; ಬೆಂಗಳೂರು ಸೇರಿ ಕರಾವಳಿ, ಮಲೆನಾಡಿಗೆ ಅಲರ್ಟ್‌

karnataka Weather Forecast

ಚಿಕ್ಕೋಡಿ: ಗುರುವಾರ ಸಂಜೆ ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯಲ್ಲಿ ಮಳೆ (Rain news) ಅಬ್ಬರ ಜೋರಾಗಿತ್ತು. ಚಿಕ್ಕೋಡಿ, ನಿಪ್ಪಾಣಿ ಹಾಗೂ ಹುಕ್ಕೇರಿ ತಾಲೂಕುಗಳಲ್ಲಿ ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ. ಕಳೆದ ಒಂದು ವಾರದಿಂದ ವಿರಾಮ ನೀಡಿದ್ದ ಮಳೆ (karnataka weather Forecast) ಅಬ್ಬರಿಸಿತ್ತು.

ಶಾಲಾ ಆವರಣದಲ್ಲಿ ನಿಂತ ನೀರು

ರಾತ್ರಿ ಸುರಿದ ಮಳೆಯು ಅವಾಂತರವೇ ಸೃಷ್ಟಿಯಾಗಿದೆ. ಶಾಲಾ ಆವರಣದಲ್ಲಿ ನಿಂತ ನೀರಲ್ಲೇ ವಿದ್ಯಾರ್ಥಿಗಳು ಧ್ವಜಾರೋಹಣ ನೆರವೇರಿಸಿದರು. ಬಾಗಲಕೋಟೆಯ ಜಮಖಂಡಿಯ ಲಿಂಗದಕಟ್ಟಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಘಟನೆ ನಡೆದಿದೆ.

ಇತ್ತ ನಿನ್ನೆ ಬುಧವಾರ ತಡರಾತ್ರಿ ಸುರಿದ ಧಾರಾಕಾರ ಮಳೆಗೆ ಬೆಳೆಗಳು ಜಲಾವೃತಗೊಂಡಿತ್ತು. ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಗುಂಡಾ ಗ್ರಾಮ ಹೊಲಗಳಿಗೆ ಹಳ್ಳದ ನೀರು ನುಗ್ಗಿತ್ತು. ರೈತ ಬಸವರಾಜ್ ಎಂಬುವವರಿಗೆ ಸೇರಿದ ನಾಲ್ಕೈದು ಎಕರೆ ಜಮೀನು ಜಲಾವೃತಗೊಂಡಿದೆ. ಹಿರೆಹಳ್ಳ ಒಡೆದು ಜಮೀನಿಗೆ ನೀರು ನುಗ್ಗಿದ ಪರಿಣಾಮ ಬೋರ್ ವೆಲ್ ಪೈಪ್ ಗಳು ಸೇರಿ ಮೆಕ್ಕೆಜೋಳ ಬೆಳೆ ಕೊಚ್ಚಿ ಹೋಗಿದೆ. ಮಳೆಗಾಲದಲ್ಲಿ ಹಳ್ಳದ ಮೂಲಕ ಗಣಿ ತ್ಯಾಜ್ಯ ಸಹ ಹರಿದು ಬಂದು ಜಮೀನುಗಳಲ್ಲಿ ಶೇಕರಣೆ ಆಗುತ್ತಿದೆ. ಇದರಿಂದಾಗಿ ಭೂಮಿ ಬೆಳೆ ಬೆಳೆಯಲು ಯೋಗ್ಯ ಇಲ್ಲದಂತಾಗಿದೆ.

ಇತ್ತ ಭಾರಿ ಮಳೆಯಿಂದ ನಾಗಲಾಪುರ ಹಳ್ಳ ಮೈದುಂಬಿ ಹರಿಯುತ್ತಿದ್ದು, ನಾಗಲಾಪೂರ- ಬ್ಯಾಲಕುಂದಿ ಸೇತುವೆ ಮುಳುಗಡೆಯಾಗಿದೆ. ಸೇತುವೆ ಮುಳುಗಡೆಯಿಂದ 5 ಹಳ್ಳಿಗಳ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ಸೇತುವೆ ಮೇಲ್ಭಾಗದಲ್ಲಿ 7 ಅಡಿಗಳಷ್ಟು ಹರಿಯುತ್ತಿರುವ ನೀರಿನಿಂದಾಗಿ ನಾಗಲಾಪುರ, ನಾಗಲಾಪುರ ತಾಂಡಾ, ಬ್ಯಾಲಕುಂದಿ, ಗೊಲ್ಲರಹಳ್ಳಿ ಹಾಗೂ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.

ಇದನ್ನೂ ಓದಿ: Electric shock : ಕರೆಂಟ್‌ ಶಾಕ್‌ನಿಂದ ಎಂಜಿನಿಯರ್‌ ಸಾವು; ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ

ಈ ಜಿಲ್ಲೆಗಳಲ್ಲಿ ನಾಳೆ ಭಾರಿ ಮಳೆ

ಶುಕ್ರವಾರದಂದು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಲ್ಲಿ ಪ್ರತ್ಯೇಕವಾದ ಗುಡುಗು ಸಹಿತ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ.

ಯಾದಗಿರಿ, ರಾಯಚೂರು, ಕೊಪ್ಪಳ, ಗದಗ, ಹಾಸನ, ಬಳ್ಳಾರಿ, ತುಮಕೂರು, ಮೈಸೂರು, ಕೊಡಗು ಜಿಲ್ಲೆಗಳಲ್ಲೂ ಪ್ರತ್ಯೇಕವಾಗಿ ಭಾರಿ ವರ್ಷಾಧಾರೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಬಹುತೇಕ ಕಡೆಗಳಲ್ಲಿ ಮತ್ತು ಉತ್ತರ ಒಳನಾಡಿನ ಹಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version