ಬೆಂಗಳೂರು: ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ (karnataka Weather Forecast) ಗುಡುಗು ಸಹಿತ ಸಾಧಾರಣ ಮಳೆಯಾದರೆ, ಉತ್ತರ ಒಳನಾಡು ಮತ್ತು ಮಲೆನಾಡು ಭಾಗಗಳಲ್ಲಿ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗುವ (Rain News) ಸಾಧ್ಯತೆಯಿದೆ. ದಕ್ಷಿಣ ಒಳನಾಡಿನಲ್ಲಿ ಪ್ರತ್ಯೇಕವಾಗಿ ಹಗುರದಿಂದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ.
ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ರಾಮನಗರ, ಕೋಲಾರ, ದಾವಣಗೆರೆ, ಮೈಸೂರು ಮತ್ತು ಮಂಡ್ಯ ,ಚಾಮರಾಜನಗರದಲ್ಲಿ ಪ್ರತ್ಯೇಕವಾಗಿ ಹಗುರದಿಂದ ಕೂಡಿದ ಮಳೆಯಾಗುವ ಸಂಭವವಿದೆ.
ಉತ್ತರ ಒಳನಾಡಿನ ಬೀದರ್, ಕಲಬುರಗಿ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಯಾದಗಿರಿ, ವಿಜಯಪುರ, ಬಾಗಲಕೋಟೆ, ಗದಗ, ಹಾವೇರಿ, ಕೊಪ್ಪಳ, ವಿಜಯನಗರ, ರಾಯಚೂರಿನಲ್ಲಿ ಸಣ್ಣ ಮಳೆ ಬರಬಹುದು.
ಮಲೆನಾಡಿನ ಚಿಕ್ಕಮಗಳೂರು, ಕೊಡಗು, ಹಾಸನ, ಶಿವಮೊಗ್ಗ ಭಾಗದಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯ ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಕನ್ನಡದಲ್ಲಿ ಸಾಧಾರಣ ಮಳೆಯಾಗಲಿದೆ.
ಆಗಸ್ಟ್ 27 ರವರೆಗೆ ಕರ್ನಾಟಕದ ಕರಾವಳಿಯಲ್ಲಿ ಗಂಟೆಗೆ 35 ರಿಂದ 45 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಮೇಲೆ ತಿಳಿಸಿದ ಅವಧಿಯಲ್ಲಿ ಮೀನುಗಾರರು ಮೇಲಿನ ಸಮುದ್ರ ಪ್ರದೇಶಗಳಿಗೆ ಹೋಗದಂತೆ ಸೂಚಿಸಲಾಗಿದೆ.
ಇದನ್ನೂ ಓದಿ: Shreyas Patel: ಸಂಸದ ಶ್ರೇಯಸ್ ಪಟೇಲ್ ಆಯ್ಕೆ ಅಸಿಂಧು ಕೋರಿ ಅರ್ಜಿ; ವಿಚಾರಣೆ ಮುಂದೂಡಿದ ಹೈಕೋರ್ಟ್
ಟೀನೇಜ್ ಹುಡುಗಿಯರ ಮಾನ್ಸೂನ್ ಸ್ಟೈಲಿಂಗ್‌ಗೆ ಸಾಥ್ ನೀಡುತ್ತಿರುವ 3 ಫ್ಯಾಷನ್ ವೇರ್ಸ್
ಮಳೆಗಾಲದಲ್ಲಿ (Monsoon Fashion) ಟೀನೇಜ್ ಹುಡುಗಿಯರ ಸ್ಟೈಲಿಂಗ್ ಬದಲಾಗಿದೆ. ಡಿಫರೆಂಟ್ ಲುಕ್‌ಗಳ ಪ್ರಯೋಗಾತ್ಮಕ ಸ್ಟೈಲಿಂಗ್‌ಗೆ 3 ಶೈಲಿಯ ಮಾನ್ಸೂನ್ ಫ್ಯಾಷನ್‌ವೇರ್‌ಗಳು ಸಾಥ್ ನೀಡುತ್ತಿವೆ. “ಈ ಜನರೇಷನ್‌ನ ಟೀನೇಜ್ ಹುಡುಗಿಯರ ಫ್ಯಾಷನ್ ಕಂಪ್ಲೀಟ್ ಡಿಫರೆಂಟ್. ಪ್ರತಿಯೊಂದರಲ್ಲೂ ನಯಾ ಲುಕ್ ಎದ್ದು ಕಾಣಿಸುತ್ತದೆ. ಮೊದಲೇ ಯಂಗ್ ಆಗಿರುವ ಇವರನ್ನು ಮತ್ತಷ್ಟು ಫಂಕಿಯಾಗಿ ಬಿಂಬಿಸುತ್ತವೆ. ಇನ್ನು ಮಾನ್ಸೂನ್ ಸೀಸನ್‌ಗೆ ತಕ್ಕಂತೆ ನಾನಾ ಫ್ಯಾಷನ್‌ವೇರ್‌ಗಳು ಆಗಮಿಸಿದ್ದರೂ, ಪ್ರಯೋಗಾತ್ಮಕ ಸ್ಟೈಲಿಂಗ್‌ಗೆ ಇದೀಗ ಹೆಚ್ಚು ಮಾನ್ಯತೆ ದೊರಕಿದೆ. ಹುಡುಗಿರಲ್ಲಿ ಒಬ್ಬೊಬ್ಬರದ್ದು ಒಂದೊಂದು ಬಗೆಯ ಸ್ಟೈಲಿಂಗ್! ಆಯಾ ಔಟ್‌ಫಿಟ್‌ಗೆ ತಕ್ಕಂತೆ ಕೊಂಚ ಬದಲಾವಣೆ ಕಾಣಬಹುದಷ್ಟೇ!” ಎನ್ನುತ್ತಾರೆ ಸ್ಟೈಲಿಸ್ಟ್ ಜಯ್ ಹಾಗೂ ರಾಣಾ. ಅವರ ಪ್ರಕಾರ, ಪ್ರತಿ ಹುಡುಗಿಯ ಫ್ಯಾಷನ್ ಅವರ ಪ್ರತಿ ದಿನಚರಿಯ ಮೇಲೆ ಹಾಗೂ ಅವರ ಪರಿಸರದ ಮೇಲೆ ನಿರ್ಧರಿತವಾಗಿರುತ್ತದೆ ಎನ್ನುತ್ತಾರೆ. ಸದ್ಯ ಟೀನೇಜ್ ಹುಡುಗಿಯರ ಕ್ರೇಝಿ ಲಿಸ್ಟ್‌ನಲ್ಲಿರುವ 3 ಫ್ಯಾಷನ್‌ವೇರ್‌ಗಳ ಬಗ್ಗೆ ತಿಳಿಸಿದ್ದಾರೆ.
ಕಲರ್‌ಫುಲ್ ಫಂಕಿ ಲೇಯರ್ ಲುಕ್
ಈ ಫ್ಯಾಷನ್ ಈ ಜನರೇಷನ್‌ನ ಟೀನೇಜ್ ಹುಡುಗಿಯರ ವ್ಯಕ್ತಿತ್ವ ಹಾಗೂ ಅವರ ಪ್ರತಿನಿತ್ಯದ ಪರಿಸರಕ್ಕೆ ತಕ್ಕಂತೆ ಹಾಗೂ ಅಭಿರುಚಿಗೆ ತಕ್ಕಂತೆ ಬದಲಾಗುತ್ತಿದೆ. ಉದಾಹರಣೆಗೆ., ಪ್ಯಾಂಟ್ ಪ್ರಿಂಟ್ಸ್‌ನದ್ದಾದಲ್ಲಿ, ಇದಕ್ಕೆ ಧರಿಸುವ ಟಾಪ್ ಒಂದು ಬಣ್ಣದ್ದು, ಇನ್ನು ಅದರ ಮೇಲೆ ಧರಿಸುವ ಕಾರ್ಡಿಗಾನ್, ಜಾಕೆಟ್ ಅಥವಾ ಕೇಪ್ ಮತ್ತೊಂದು ವರ್ಣದ್ದು. ಹೀಗೆ ಒಂದಕ್ಕೊಂದು ಯಾವುದು ಮ್ಯಾಚ್ ಆಗುವುದಿಲ್ಲ! ಬದಲಿಗೆ ಎಲ್ಲವೂ ಮಿಸ್ ಮ್ಯಾಚ್ ಆಗಿ ಎದ್ದು ಕಾಣುತ್ತವೆ. ಇವು ಈ ಬಾರಿ ಟೀನೇಜ್ ಹುಡುಗಿಯರ ಫಂಕಿ ಲುಕ್‌ಗೆ ಸಾಥ್ ನೀಡಿವೆ.
ಫುಲ್ ಸ್ಲೀವ್ ಕಟೌಟ್ ಕ್ರಾಪ್ ಟಾಪ್ ಸ್ಟೈಲಿಂಗ್
ಪ್ಯಾಂಟ್‌ಗೆ ಸೊಂಟ ಕಾಣಿಸುವಂತಹ ಕ್ರಾಪ್ ಟಾಪ್, ಅಲ್ಲಲ್ಲಿ ಕಟೌಟ್ ಆದ ಫುಲ್ ಸ್ಲೀವ್ ಟಾಪ್, ಹೆಸರಿಗೆ ಮಾತ್ರ ಈ ಔಟ್‌ಫಿಟ್ ಫುಲ್ ಸ್ಲೀವ್. ಈ ಟಾಪ್ ಈ ಮಾನ್ಸೂನ್ ಸೀಸನ್‌ನಲ್ಲಿ ಟೀನೇಜ್ ಹುಡುಗಿಯರ ಸ್ಟೈಲಿಂಗ್‌ಗೆ ಸಾಥ್ ನೀಡುತ್ತಿದೆ.
ಬಿಲೋ ವೇಸ್ಟ್ ಟೊರ್ನ್ ಪ್ಯಾಂಟ್ ಸ್ಟೈಲಿಂಗ್
ಇದುವರೆಗೂ ಹೈ ವೇಸ್ಟ್ ಫ್ಯಾಷನ್‌ನಲ್ಲಿದ್ದ ಟೋರ್ನ್ ಪ್ಯಾಂಟ್ ಇದೀಗ ಸೊಂಟದ ಕೆಳಗೆ ಕೂರುವಂತಹ ಡಿಸೈನ್‌ನಲ್ಲಿ ಈ ಮಾನ್ಸೂನ್ ಫ್ಯಾಷನ್‌ಗೆ ಎಂಟ್ರಿ ನೀಡಿವೆ. ಟೀನೇಜ್ ಹುಡುಗಿಯರ ಬಿಂದಾಸ್ ಸ್ಟೈಲಿಂಗ್‌ಗೆ ಸಾಥ್ ನೀಡುತ್ತಿವೆ. ಪ್ರಯೋಗಾತ್ಮಕ ಸ್ಟೈಲಿಂಗ್‌ನಲ್ಲಿ ಮಿಕ್ಸ್ ಮ್ಯಾಚ್ ಆಗುತ್ತಿವೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ