Site icon Vistara News

Health Apps | ಆರೋಗ್ಯಸೇತು, ಕೋವಿನ್ ಆ್ಯಪ್ ಇನ್ನು ಡಿಜಿಟಲ್ ಹೆಲ್ತ್ ಪರಿಹಾರಗಳಿಗೆ ಬಳಕೆ!

Health Apps

ನವ ದೆಹಲಿ: ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಅಭಿವೃದ್ಧಿಪಡಿಸಲಾದ ಆರೋಗ್ಯ ಸೇತು (Aarogya Setu) ಮತ್ತು ಕೋವಿನ್ (CoWIN) ಆ್ಯಪ್‌ಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಎರಡೂ ಆ್ಯಪ್‌ಗಳ್ನು ಇತರ ಆರೋಗ್ಯ (Health) ಸೇವೆಗಳನ್ನು ಒದಗಿಸಲು ಬಳಸಿಕೊಳ್ಳಲಿದೆ. ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಅಡಿ ಈ ಎರಡೂ ಡಿಜಿಟಲ್ ಹೆಲ್ತ್ ಸಿಸ್ಟಮ್‌ಗಳನ್ನು ಹೊಸ ಉದ್ದೇಶಕ್ಕೆ ಉಪಯೋಗಿಸಲು ಸಜ್ಜಾಗಿದೆ ಸರ್ಕಾರ.

ಕೋವಿಡ್ ಸೋಂಕಿತರನ್ನು ಪತ್ತೆ ಹಚ್ಚುವುದಕ್ಕಾಗಿ ಅಭಿವೃದ್ಧಿಪಡಿಸಲಾದ ಆರೋಗ್ಯ ಸೇತು ಆ್ಯಪ್ ಇನ್ನು ಮುಂದೆ ಆರೋಗ್ಯ ಮತ್ತು ಕ್ಷೇಮ ಅಪ್ಲಿಕೇಷನ್ ಆಗಿ ಬಳಕೆಯಾಗಲಿದೆ. ಹಾಗೆಯೇ, ಕೋವಿಡ್-19 ಲಸಿಕೆ ಹಾಕಿಸಿಕೊಂಡವರನ್ನು ಟ್ರ್ಯಾಕ್ ಮಾಡಲು ಅಭಿವೃದ್ಧಿಪಡಿಸಲಾದ ಕೋವಿನ್ ಆ್ಯಪ್ ಅನ್ನು ಭಾರತದ ಸಾರ್ವತ್ರಿಕ ರೋಗ ನಿರೋಧಕ ಕಾರ್ಯಕ್ರಮಕ್ಕಾಗಿ ಬಳಸಿಕೊಳ್ಳಲು ವೇದಿಕೆಯನ್ನು ಸಜ್ಜುಗೊಳಿಸಲಾಗಿದೆ.

ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಮುಖ್ಯ ನಿರ್ವಹಣಾ ಅಧಿಕಾರಿ ಆರ್ ಎಸ್ ಶರ್ಮಾ ಅವರು ಈ ಬಗ್ಗೆ ಮಾಹಿತಿಯನ್ನು ನೀಡಿದ್ದು, ಡಿಜಿಟಲ್ ಹೆಲ್ತ್ ಸಲ್ಯೂಷನ್‌ಗಳಾಗಿರುವ ಆರೋಗ್ಯಸೇತು ಮತ್ತು ಕೋವಿನ್ ಆ್ಯಪ್‌ಗಳನ್ನು ಮರುಉದ್ದೇಶಗೊಳಿಸುತ್ತಿದ್ದೇವೆ. ಕೊರೊನಾ ಕಾಲದಲ್ಲಿ ಈ ಎರಡು ಪ್ರಮುಖ ಆ್ಯಪ್‌ಗಳನ್ನು ಅಭಿವೃದ್ಧಿಪಡಿಸಲಾಯಿತು. ಈವರೆಗೆ 24 ಕೋಟಿ ಜನರು ಆರೋಗ್ಯ ಸೇತು ಆ್ಯಪ್ ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಈಗ ಈ ಆ್ಯಪ್ ಅನ್ನು ಭಾರತೀಯ ಆರೋಗ್ಯಕ್ಕೆ ಸಂಬಂಧಿಸಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಬಳಸಲಾಗುವುದು. ಈ ಆ್ಯಪ್ ಬಳಸಿಕೊಂಡು ಆಸ್ಪತ್ರೆಯ ಸೇವೆಗಳನ್ನು ತ್ವರಿತವಾಗಿ ಪಡೆದುಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.

ಅದೇ ರೀತಿ ಕೋವಿನ್ ಆ್ಯಪ್ ಕೋವಿಡ್ ವ್ಯಾಕ್ಸಿನೇಷನ್ ಅಪ್ಲಿಕೇಷನ್ ಆಗಿದೆ. ಈ ಆ್ಯಪ್ ಕೂಡ ಆರೋಗ್ಯ ಸೇವೆಗಾಗಿ ಬಳಕೆಯಾಗಲಿದೆ. ಸಾರ್ವತ್ರಿಕ ರೋಗನಿರೋಧಕ ಕಾರ್ಯಕ್ರಮಕ್ಕಾಗಿ ನಾವು ಈ ಕೋವಿನ್ ಆ್ಯಪ್ ಬಳಸಿಕೊಳ್ಳಲಿದ್ದೇವೆ. ರಾಷ್ಟ್ರೀಯ ರೋಗನಿರೋಧಕ ಪ್ರೋಗ್ರಾಮ್‌ನಲ್ಲಿ ಜನರು 12 ಅಗತ್ಯ ವ್ಯಾಕ್ಸಿನೇಷನ್ ಪಡೆದುಕೊಳ್ಳಬಹುದಾಗಿದೆ. ಇದರಲ್ಲಿ ಪೋಲಿಯೋ ಡ್ರಾಪ್ ಕೂಡ ಸೇರ್ಪಡೆಯಾಗಿರುತ್ತದೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ | Vistara Health | ವಿಸ್ತಾರ ಹೆಲ್ತ್ ಯುಟ್ಯೂಬ್ ಚಾನೆಲ್ ಪರಿಸರ ವೈದ್ಯ ಆಗಲಿ: ಡಾ. ಸಿ.ಎನ್ ಮಂಜುನಾಥ್ ಹಾರೈಕೆ

Exit mobile version