1.ಕಾಂಗ್ರೆಸ್ ಗ್ಯಾರಂಟಿ ವಿರುದ್ಧ ನಾರಿ ಶಕ್ತಿ ಅಸ್ತ್ರ ಪ್ರಯೋಗಿಸಿದ ಮೋದಿ: ಮಹಿಳಾ ಮೀಸಲಾತಿ ಮಸೂದೆ ಮಂಡನೆ
ಲೋಕಸಭೆ (Lok Sabha) ಮತ್ತು ರಾಜ್ಯ ವಿಧಾನಸಭೆಗಳಲ್ಲಿ (State Assembly) ಮಹಿಳೆಯರಿಗೆ ಶೇ.33 ಮೀಸಲು ಕಲ್ಪಿಸುವ ವಿಧೇಯಕವನ್ನು (Women’s Reservation Bill) ಕೇಂದ್ರ ಸರ್ಕಾರವು ಲೋಕಸಭೆಯಲ್ಲಿ ಮಂಗಳವಾರ ಮಂಡಿಸಿದೆ. ಹೊಸ ಸಂಸತ್ ಭವನದಲ್ಲಿ ವಿಶೇಷ ಅಧಿವೇಶನದ ಐತಿಹಾಸಿಕ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಬಹು ದಿನಗಳಿಂದ ನೆನಗುದಿಗೆ ಬಿದ್ದಿದ್ದ ವಿಧೇಯಕವನ್ನು ಪರಿಚಯಿಸಿದೆ. ಇದು ಕಾಂಗ್ರೆಸ್ ನಾನಾ ರಾಜ್ಯಗಳಲ್ಲಿ ಮುಂದಿಡುತ್ತಿರುವ ಗ್ಯಾರಂಟಿಯೋಜನೆಗಳಿಗೆ ವಿರುದ್ಧವಾಗಿ ಮೋದಿ ಬಿಟ್ಟ ನಾರಿ ಶಕ್ತಿ ಅಸ್ತ್ರ ಎಂದು ವ್ಯಾಖ್ಯಾನಿಸಲಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಪೂರಕ ವರದಿ 1. Women’s Reservation Bill: ಏನಿದು ಮಹಿಳಾ ವಿಧೇಯಕ? ಕಾಯ್ದೆ ಯಾವಾಗ ಜಾರಿ?
ಪೂರಕ ವರದಿ 2.: ರಾಜೀವ್ ಗಾಂಧಿಯಿಂದ ಹಿಡಿದು ಮೋದಿಯವರೆಗೆ; ಮಹಿಳಾ ವಿಧೇಯಕ ಸಾಗಿ ಬಂದ ಹಾದಿ
2.ನೂತನ ಸಂಸತ್ ಕಟ್ಟಡಕ್ಕೆ ವಿಶೇಷ ಅಧಿವೇಶನ ಶಿಫ್ಟ್- ಹಳೇ ಸಂಸತ್ ಭವನ ಇನ್ನು ಸಂವಿಧಾನ ಸದನ
ಹಳೆಯ ಸಂಸತ್ ಭವನವನ್ನು (Old Parliament Building) ಇನ್ನು ಮುಂದೆ ʼಸಂವಿಧಾನ ಸದನʼ (Samvidhan Sadan) ಎಂದು ಕರೆಯಲಾಗುವುದು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು. ನೂತನ ಸಂಸತ್ ಭವನಕ್ಕೆ (New Parliament building) ತೆರಳುವ ಮುನ್ನ ಹಳೆಯ ಸಂಸತ್ ಭವನದ ಸೆಂಟ್ರಲ್ ಹಾಲ್‌ನಲ್ಲಿ ವಿಶೇಷ ಅಧಿವೇಶನಕ್ಕೆ ಸೇರಿದ ಎಲ್ಲ ಸಂಸದರನ್ನು ಉದ್ದೇಶಿಸಿ ಮಾತನಾಡಿದರು. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಪೂರಕ ವರದಿ: Special Parliament Session: `ವಂದೇ ಮಾತರಂʼ ಎಂದು ಘೋಷಿಸುತ್ತಾ ಹೊಸ ಸಂಸತ್ ಭವನಕ್ಕೆ ಸಂಸದರ ಎಂಟ್ರಿ ಹೀಗಿತ್ತು!
3.ಚೈತ್ರಾ ಕುಂದಾಪುರ ವಂಚನೆ: ಕೊನೆಗೂ ಪೊಲೀಸರ ಬಲೆಗೆ ಬಿದ್ದ ಅಭಿನವ ಹಾಲಾಶ್ರೀ, ಕಟಕ್‌ನಲ್ಲಿ ಅರೆಸ್ಟ್
ಚೈತ್ರಾ ಕುಂದಾಪುರ (Chaitra Kundapura) ಗ್ಯಾಂಗ್ ನಡೆಸಿದ ಐದು ಕೋಟಿ ರೂ. ವಂಚನೆ ಪ್ರಕರಣದಲ್ಲಿ ಮೂರನೇ ಆರೋಪಿಯಾಗಿರುವ ಶ್ರೀ ಅಭಿನವ ಹಾಲಶ್ರೀ ಸ್ವಾಮೀಜಿಯನ್ನು (Halashri Swameeji) ಕೊನೆಗೂ ಸಿಸಿಬಿ ಪೊಲೀಸರು (CCB police) ಕಟಕ್‌ನಲ್ಲಿ ಬಂಧಿಸಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಪೂರಕ ವರದಿ 1. ಹಾಲ ಮಠಕ್ಕೆ ಕಪ್ಪು ಚುಕ್ಕೆ; ಕರ್ನಾಟಕದ ಯೋಗಿಯಾಗುವ ಕನಸು ಹೊತ್ತಿದ್ದ ಹಾಲಶ್ರೀ!
ಪೂರಕ ವರದಿ 2. 4 ಮೊಬೈಲ್, 4 ಸಿಮ್, 50 ಲಕ್ಷ ರೂ.; ಇದು ಹಾಲಶ್ರೀ ಸ್ವಾಮೀಜಿಯ ಟ್ರಾವೆಲ್ ಸ್ಟೋರಿ!
ಪೂರಕ ವರದಿ 3. ಹಾಲಶ್ರೀ ಸ್ವಾಮೀಜಿ ಬೆಂಗಳೂರು ಪುರಪ್ರವೇಶ; ಚೈತ್ರಾ ಕುಂದಾಪುರ ಫುಲ್ ಖುಷ್!
4. ಕಾವೇರಿ ಜಲ ವಿವಾದ: ನಾಳೆ ದೆಹಲಿಯಲ್ಲಿ ಸಂಸದರ ಸಭೆ ಕರೆದ ಸಿದ್ದರಾಮಯ್ಯ
ಕಾವೇರಿ ನದಿ ನೀರು ಹಂಚಿಕೆ ವಿವಾದ ಕೇಂದ್ರ ಸರ್ಕಾರದ ಮುಂದೆ ಬಾಕಿ ಇರುವ ರಾಜ್ಯದ ಯೋಜನೆಗಳು ಹಾಗೂ ಬರ ಪರಿಹಾರ ವಿಷಯಗಳಿಗೆ ಸಂಬಂಧಿಸಿದಂತೆ ಚರ್ಚಿಸಲು ದೆಹಲಿಯ ಖಾಸಗಿ ಹೋಟೆಲ್‌ನಲ್ಲಿ ಬುಧವಾರ ಬೆಳಗ್ಗೆ ರಾಜ್ಯದ ಸಂಸದರ ಮಹತ್ವದ ಸಭೆಯನ್ನು ಕರೆಯಲಾಗಿದೆ. ಅಲ್ಲದೆ, ಕಾನೂನು ತಜ್ಞರ ಜತೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಚರ್ಚೆ ನಡೆಸಲಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
5. ರಾಜ್ಯದ ಜನರಿಗೆ ಮತ್ತೊಂದು ಆಘಾತ: ಅ.1ರಿಂದಲೇ ಆಸ್ತಿ ನೋಂದಣಿ ಮಾರ್ಗಸೂಚಿ ದರ ಪರಿಷ್ಕರಣೆ
ರಾಜ್ಯದಲ್ಲಿ ಈ ಅಕ್ಟೋಬರ್ 1ರಿಂದ ಆಸ್ತಿ ಮಾರ್ಗಸೂಚಿ ದರ ಪರಿಷ್ಕರಣೆ ಮಾಡಲಾಗುತ್ತಿದೆ. ಕಳೆದ ಐದು ವರ್ಷಗಳಿಂದ ದರ ಹೆಚ್ಚಳ ಮಾಡಿರಲಿಲ್ಲ. ಹಾಗಾಗಿ ಈಗ ಹೆಚ್ಚಳ ಮಾಡಲಾಗಿದೆ ಎಂದು ಕೃಷ್ಣ ಬೈರೇಗೌಡ ಹೇಳಿದ್ದಾರೆ. ಇದು ರಾಜ್ಯದ ಜನರಿಗೆ ಮತ್ತೊಂದು ಬರೆ ಎಂದು ವಿಶ್ಲೇಷಿಸಲಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
6. ಅಂತಿಮ ಹಂತಕ್ಕೆ ಬಿಜೆಪಿ, ಜೆಡಿಎಸ್ ಲೋಕ ಮೈತ್ರಿ- 25/3 ಸೂತ್ರಕ್ಕೆ ಜೆಡಿಎಸ್ ಬಹುತೇಕ ಸಮ್ಮತಿ
ರಾಜ್ಯದಲ್ಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ -ಜೆಡಿಎಸ್ ಮೈತ್ರಿಗೆ (BJP-JDS alliance) ಪಕ್ಕಾ ಆಗಿದೆ. ಈಗ ಸೀಟು ಹಂಚಿಕೆ ಸಹ ಬಹುತೇಕ ಪಕ್ಕಾ ಎನ್ನಲಾಗಿದ್ದು, 25 + 3ರ ಸೂತ್ರವು ಬಹುತೇಕ ಪಕ್ಕಾ ಆಗಿವೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
7. ಖಲಿಸ್ತಾನಿ ಉಗ್ರನ ಹತ್ಯೆಯನ್ನು ಭಾರತದ ತಲೆಗೆ ಕಟ್ಟಿದ ಕೆನಡಾ: ರಾಯಭಾರಿ ಉಚ್ಚಾಟಿಸಿ ದರ್ಪ
ಕೆನಡಾ: ಖಲಿಸ್ತಾನಿ ಭಯೋತ್ಪಾದಕರನ್ನು (Khalistan terrorist) ಅಪರಿಚಿತರು ಸಾಯಿಸಿದ ಪ್ರಕರಣದಲ್ಲಿ ಭಾರತದ ಕೈವಾಡವಿದೆ ಎಂದು ಆರೋಪಿಸಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ (Justin Trudeau), ಹಿರಿಯ ಭಾರತೀಯ ರಾಜತಾಂತ್ರಿಕರಿಗೆ ಗೇಟ್‌ಪಾಸ್ ನೀಡಿದೆ. ಇದಕ್ಕೆ ಪ್ರತಿಯಾಗಿ ಭಾರತ ಕೂಡಾ ಕೆನಡಾದ ರಾಯಭಾರಿಗಳನ್ನು ಹೊರಹಾಕಿದೆ ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಪೂರಕ ವರದಿ1. ಖಲಿಸ್ತಾನಿಗಳಿಗೆ ಬೆಂಬಲ ಕೊಟ್ಟ ನೆಚ್ಚಿನ ಗಾಯಕನನ್ನು ಅನ್ಫಾಲೋ ಮಾಡಿದ ವಿರಾಟ್
8. ಕಾಶ್ಮೀರದಲ್ಲಿ ಲಷ್ಕರ್ ಕಮಾಂಡರ್ ಉಜೈರ್ ಎನ್‌ಕೌಂಟರ್- ಏಳು ದಿನಗಳ ಆಪರೇಷನ್ ಅನಂತನಾಗ್ ಅಂತ್ಯ
ಜಮ್ಮು ಮತ್ತು ಕಾಶ್ಮೀರದ (Jammu and Kashmir) ಅನಂತನಾಗ್ ಜಿಲ್ಲೆಯ ಗಡೋಲ್ ಅರಣ್ಯದಲ್ಲಿ ನಡೆದ ಸುದೀರ್ಘ ಉಗ್ರರ ವಿರುದ್ಧದ ಕಾರ್ಯಾಚರಣೆಯು (anti-terror operation) ಸ್ಥಳೀಯ ಲಷ್ಕರ್ ಭಯೋತ್ಪಾದಕನನ್ನು ಕೊಲ್ಲುವುದರೊಂದಿಗೆ ಕೊನೆಗೊಂಡಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಪೊಲೀಸರು (J and K Police) ತಿಳಿಸಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
9. ಬೆಂಗಳೂರು ಸೇರಿ 8 ಮೆಟ್ರೋಗಳಲ್ಲಿ ಜಿಯೋ ಏರ್ ಫೈಬರ್ ಚಾಲನೆ, ಅಲ್ಟ್ರಾ ಹೈ ಸ್ಪೀಡ್ ಇಂಟರ್ನೆಟ್!
ಗಣೇಶ ಚತುರ್ಥಿಯ (Ganesh Chaturthi 2023) ವಿಶೇಷ ಸಂದರ್ಭದಲ್ಲಿ ಮುಕೇಶ್ ಅಂಬಾನಿ (Mukesh Ambani) ಒಡೆತನದ ರಿಲಯನ್ಸ್ ಜಿಯೋ(Reliance Jio), ಬೆಂಗಳೂರು ಸೇರಿ ದೇಶದ 8 ಮೆಟ್ರೋ ನಗರಗಳಲ್ಲಿ ಜಿಯೋ ಏರ್ ಫೈಬರ್ (Jio AirFiber) ಸೇವೆಗೆ ಚಾಲನೆ ನೀಡಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
10. ಲಂಕಾ ತಂಡವನ್ನೂ ಮೀರಿಸುವ ಪ್ರದರ್ಶನ ಇದು, ಕೇವಲ 15 ರನ್ಗಳಿಗೆ ಇಡೀ ತಂಡವೇ ಆಲ್ಔಟ್
ಶ್ರೀಲಂಕಾ ತಂಡ ಏಷ್ಯಾ ಕಪ್ ಫೈನಲ್ನಲ್ಲಿ ಭಾರತ ವಿರುದ್ಧ 50 ರನ್ಗಳಿಗೆ ಆಲ್ಔಟ್ ಆಗುವ ಮೂಲಕ ಸುದ್ದಿಯಲ್ಲಿತ್ತು. ಆದರೆ ಇಲ್ಲೊಂದು ತಂಡ ಟಿ20 ಕ್ರಿಕೆಟ್ನಲ್ಲಿ (T20 Cricket) ಕೇವಲ 15 ರನ್ಗಳಿಗೆ ಆಲ್ಔಟ್ ಆಗಿದೆ. ಯಾವ ಟೀಮ್ ಎಂದು ತಿಳಿಬೇಕಾ? ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ