ದೇಶ
Women’s Reservation Bill: ಏನಿದು ಮಹಿಳಾ ಮೀಸಲು ವಿಧೇಯಕ? ಕಾಯ್ದೆ ಯಾವಾಗ ಜಾರಿ?
Women’s Reservation Bill: 27 ವರ್ಷಗಳಿಂದ ನನೆಗುದಿಗೆಗೆ ಬಿದ್ದಿದ್ದ ಮಹಿಳಾ ಮೀಸಲು ವಿಧೇಯಕವನ್ನು ಕೇಂದ್ರ ಸರ್ಕಾರವು ಮಂಗಳವಾರ ವಿಶೇಷ ಸಂಸತ್ ಅಧಿವೇಶನದ ವೇಳೆ ಮಂಡಿಸಿದೆ.
ನವದೆಹಲಿ: ಕೇಂದ್ರ ಸರ್ಕಾರವು (Central Government) ಹೊಸ ಸಂಸತ್ ಭವನದ (New Parliament Building) ಮೊದಲ ವಿಶೇಷ ಅಧಿವೇಶನದ ಕಲಾಪದ ವೇಳೆ, ನಿರೀಕ್ಷೆಯಂತೆ ಮಹಿಳಾ ಮೀಸಲು ವಿಧೇಯಕವನ್ನು ಮಂಡಿಸಿದೆ(Women’s Reservation Bill). ಈ ವಿಧೇಯಕಕ್ಕೆ ಕೇಂದ್ರ ಸರ್ಕಾರ ನಾರಿ ಶಕ್ತಿ ವಂದನ್ ಅಧಿನಿಯಮ್ (Nari Shakti Vandan Adhiniyam) ಎಂದು ಕರೆದಿದೆ. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33 ಮೀಸಲು ಕಲ್ಪಿಸುವ ವಿಧೇಯಕವು 27 ವರ್ಷಗಳಿಂದ ನನೆಗುದಿಗೆಗೆ ಬಿದ್ದಿತ್ತು. ಇದೀಗ ಈ ವಿಧೇಯಕವನ್ನು ಮಂಡಿಸಲಾಗಿದ್ದು, ಬಹುತೇಕ ಒಪ್ಪಿಗೆ ದೊರೆಯುವುದು ಪಕ್ಕಾ ಆಗಿದೆ. ಒಂದೊಮ್ಮೆ ಈ ವಿಧೇಯಕವು ಕಾಯ್ದೆಯಾಗಿ ಬದಲಾದರೂ, ಅದರ ಜಾರಿಗೆ 2029ರವರೆಗೂ ಕಾಯಬೇಕಾಗುತ್ತದೆ. ಈ ವಿಧೇಯಕದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
1/3 ಲೋಕಸಭೆ ಸೀಟು ಮಹಿಳೆಯರಿಗೆ ಮೀಸಲು
ಸಂಸತ್ತಿನ ಕೆಳಮನೆಯಾಗಿರುವ ಲೋಕಸಭೆಯಲ್ಲಿ ಈ ವಿಧೇಯಕ ಮೂಲಕ ಮಹಿಳೆಯರಿಗೆ 1/3ರಷ್ಟು ಸೀಟು ಮೀಸಲು ದೊರೆಯಲಿದೆ. ತಿದ್ದುಪಡಿಯ ಪ್ರಕಾರ, ಲೋಕಸಭೆಯಲ್ಲಿ ಒಟ್ಟು ಸ್ಥಾನಗಳ ಮೂರನೇ ಒಂದು ಭಾಗವು ಮಹಿಳೆಯರಿಗೆ ಮೀಸಲಾಗಿರುತ್ತದೆ. ಈ ಕ್ರಮವು ರಾಷ್ಟ್ರೀಯ ಶಾಸಕಾಂಗದಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯವನ್ನು ಖಾತ್ರಿಪಡಿಸುವ ಪ್ರಯತ್ನವಾಗಿದೆ ಎಂದು ಹೇಳಬಹುದು.
ದಿಲ್ಲಿ ಅಸೆಂಬ್ಲಿಗೂ ಅನ್ವಯ
ವಿಧೇಯಕವು ತನ್ನ ನಿಬಂಧನೆಗಳನ್ನು ದಿಲ್ಲಿ ಶಾಸಕಾಂಗ ಸಭೆಗೆ ಅನ್ವಯಿಸುತ್ತದೆ. ದಿಲ್ಲಿ ಅಸೆಂಬ್ಲಿಯಲ್ಲಿ ಮೂರನೇ ಒಂದು ಭಾಗಗಳ ಸೀಟು ಪರಿಶಿಷ್ಟ ಜಾತಿಗಳಿಗೆ ಮೀಸಲಾಗಿರುತ್ತದೆ. ಅಲ್ಲದೇ, ದೆಹಲಿ ಅಸೆಂಬ್ಲಿಯಲ್ಲಿ ನೇರ ಚುನಾವಣೆಯ ಮೂಲಕ ಭರ್ತಿಯಾಗುವ ಒಟ್ಟು ಸ್ಥಾನಗಳ ಮೂರನೇ ಒಂದು ಭಾಗವು ಮಹಿಳೆಯರಿಗೆ ಮೀಸಲಾಗಿರುತ್ತದೆ ಎನ್ನುತ್ತದೆ ವಿಧೇಯಕ.
ಎಲ್ಲ ರಾಜ್ಯ ವಿಧಾನಸಭೆಗಳಲ್ಲೂ ಮೀಸಲು
ಲೋಕಸಭೆ ಮತ್ತು ದಿಲ್ಲಿ ಅಸೆಂಬ್ಲಿಗೆ ಅನ್ವಯವಾಗುವ ರೀತಿಯಲ್ಲೇ ದೇಶದ ಎಲ್ಲ ರಾಜ್ಯ ವಿಧಾನಸಭೆಗಳಿಗೂ ಈ ಮಹಿಳಾ ಮೀಸಲು ವಿಧೇಯಕವು ಅನ್ವಯವಾಗಲಿದೆ. ಲೋಕಸಭೆ ಮತ್ತು ದೆಹಲಿ ಅಸೆಂಬ್ಲಿ ನಿಬಂಧನೆಗಳಂತೆಯೇ, ಅನ್ವಯವಾಗುವ ಷರತ್ತಿನ ಅಡಿಯಲ್ಲಿ ಮೀಸಲಾದ ಒಟ್ಟು ಸ್ಥಾನಗಳ ಮೂರನೇ ಒಂದು ಭಾಗದಷ್ಟು ಮಹಿಳೆಯರಿಗೆ ಮೀಸಲು ಇರುತ್ತದೆ. ಇದರಲ್ಲಿ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳು ಸೇರಿವೆ.
ಈ ಸುದ್ದಿಯನ್ನೂ ಓದಿ: Women’s Reservation Bill : ರಾಜೀವ್ ಗಾಂಧಿಯಿಂದ ಹಿಡಿದು ಮೋದಿಯವರೆಗೆ; ಮಹಿಳಾ ಮೀಸಲಾತಿ ವಿಧೇಯಕ ಸಾಗಿ ಬಂದ ಹಾದಿ
ಕ್ಷೇತ್ರ ಮರುವಿಂಗಡಣೆ ಬಳಿಕ ಲಾಗೂ, 2029ರವರೆಗೆ ಕಾಯಬೇಕು
ಲೋಕಸಭೆ, ದಿಲ್ಲಿ ಅಸೆಂಬ್ಲಿ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮೂರನೇ ಒಂದು ಭಾಗ ಮಹಿಳೆಯರಿಗೆ ಮೀಸಲು ಕಲ್ಪಿಸುವ ಈ ವಿಧೇಯಕವು, ಕ್ಷೇತ್ರಗಳ ಮರು ವಿಂಗಡಣೆಯ ಬಳಿಕ ಅನ್ವಯವಾಗಲಿದೆ. ಅಂದರೆ, ಸದ್ಯಕ್ಕೆ ವಿಧೇಯಕವು ಕಾಯ್ದೆಯಾಗಿ ಬದಲಾದರೂ, ಜಾರಿಗೆ ಸಾಕಷ್ಟು ಸಮಯವಿದೆ. ಇದಕ್ಕೂ ಮೊದಲು ಜನಗಣತಿಯನ್ನು ಕೈಗೊಳ್ಳಬೇಕು. ಅದಾದ ಮೇಲೆ, ಮಹಿಳಾ ಮೀಸಲು ಜಾರಿಗೆ ಬರಲಿದೆ. ಅಂದರೆ, ಮಹಿಳಾ ಮೀಸಲು ಜಾರಿಗೆ ಮಹಿಳೆಯರು 2029ರವರೆಗೂ ಕಾಯಬೇಕಾಗಬಹುದು.
ಮಹಿಳಾ ಮೀಸಲಿನಲ್ಲಿ ರೊಟೇಷನ್
ಸಂಸತ್ತು ನಿರ್ಧಾರದಂತೆ ಕ್ಷೇತ್ರ ಮರು ವಿಂಗಡಣೆಯ ಬಳಿಕವೇ ಲೋಕಸಭೆ, ದಿಲ್ಲಿ ವಿಧಾನಸಭೆ ಮತ್ತು ಎಲ್ಲ ರಾಜ್ಯ ವಿಧಾನಸಭೆಗಳಲ್ಲಿ ಈ ಮಹಿಳಾ ಮೀಸಲಿನಲ್ಲಿ ರೊಟೇಷನ್ ಪದ್ಧತಿ ಇರಲಿದೆ. ನಿಗದಿತ ಸಮಯದ ಬಳಿಕ ರೊಟೇಷನ್ ಬದಲಾಗಲಿದೆ.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ದೇಶ
Sanatan Dharma row: ತಮಿಳುನಾಡು ಸಿಎಂ ಪುತ್ರ ಉದಯನಿಧಿ ವಿರುದ್ಧ ದಿಲ್ಲಿಯಲ್ಲಿ ಸಂತರ ಪ್ರತಿಭಟನೆ, ಕ್ರಮಕ್ಕೆ ಆಗ್ರಹ
Sanatan Dharma row: ತಮಿಳುನಾಡು ಸಚಿವರೂ ಆಗಿರುವ, ಮುಖ್ಯಮಂತ್ರಿ ಪುತ್ರ ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮದ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿ, ವಿವಾದಕ್ಕೆ ಕಾರಣರಾಗಿದ್ದಾರೆ.
ನವದೆಹಲಿ: ಸನಾತನ ಧರ್ಮವನ್ನು (Sanatan Dharma row) ನಿರ್ಮೂಲನೆ ಮಾಡಬೇಕು ಎಂದು ಹೇಳಿಕೆ ನೀಡಿದ್ದ ತಮಿಳುನಾಡಿನ ಸಚಿವರೂ ಆಗಿರುವ, ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್ (Udhayanidhi Stalin) ವಿರುದ್ಧ ಸೋಮವಾರ ದಿಲ್ಲಿಯ ತಮಿಳುನಾಡು ಭವನದ ಬಳಿ ಸಾಧು, ಸಂತರು ಪ್ರತಿಭಟನೆ ನಡೆಸಿದರು(Hindu Saints protest). ಬಳಿಕ, ಉದಯನಿಧಿ ಸ್ಟಾಲಿನ್ ಸೇರಿದಂತೆ ಇತರ ನಾಯಕರ ಪ್ರತಿಕೃತಿ ದಹಿಸಿ ತಮ್ಮ ಆಕ್ರೋಶವನ್ನು ಹೊರ ಹಾಕಿದರು.
ದೆಹಲಿ ಸಂತ ಮಹಾಮಂಡಲದ ಬ್ಯಾನರ್ ಅಡಿಯಲ್ಲಿ ಪ್ರತಿಭಟನಾಕಾರರು ಉದಯನಿಧಿ ಸ್ಟಾಲಿನ್ ಮತ್ತು ಇತರ ನಾಯಕರನ್ನು ಖಂಡಿಸುವ ಫಲಕಗಳನ್ನು ಹಿಡಿದು ಸರೋಜಿನಿ ನಗರದ ದೇವಸ್ಥಾನದಿಂದ ತಮಿಳುನಾಡು ಭವನದ ಕಡೆಗೆ ಮೆರವಣಿಗೆ ನಡೆಸಿದರು. ತಮಿಳು ನಾಡು ಭವನದತ್ತ ಹೋಗುತ್ತಿದ್ದ ಪ್ರತಿಭಟನಾಕಾರರನ್ನು ಪೊಲೀಸರು, ಆಫ್ರಿಕಾ ಅವೆನ್ಯೂದಲ್ಲಿ ತಡೆದರು. ಹಾಗಾಗಿ, ಅದೇ ಪ್ರದೇಶದಲ್ಲಿ ಪ್ರತಿಭಟನಾ ನಿರತ ಸಂದತರು, ತಮಿಳುನಾಡು ಸಚಿವ ಉದಯನಿಧಿ ಮತ್ತು ಇತರರ ಪ್ರತಿಕೃತಿಗಳನ್ನು ಸುಟ್ಟುಹಾಕಿ, ತಮ್ಮ ಆಕ್ರೋಶವನ್ನು ಹೊರ ಹಾಕಿದರು.
ಸನಾತನ ಧರ್ಮದ ವಿರುದ್ಧ ಹೇಳಿಕೆಗಳನ್ನು ನೀಡುವುದರಿಂದ ವಿವಿಧ ರಾಜಕೀಯ ಪಕ್ಷಗಳ ನಾಯಕರು ತಮ್ಮ ಮುಖಂಡರನ್ನು ನಿರ್ಬಂಧಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಅಲ್ಲದೇ, ಸನಾತನ ಧರ್ಮದ ನಿರ್ಮೂಲನೆ ಅಗತ್ಯ ಎಂದು ಹೇಳಿದ್ದ ಪುತ್ರ ಉದಯನಿಧಿಯ ಪರವಾಗಿ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.
ಈ ಸುದ್ದಿಯನ್ನೂ ಓದಿ: Udhayanidhi Stalin: ಸನಾತನ ಧರ್ಮ; ಉದಯನಿಧಿ ಸ್ಟಾಲಿನ್‌ಗೆ ಸುಪ್ರೀಂ ನೋಟಿಸ್, ಎದುರಾಯ್ತು ಸಂಕಷ್ಟ
ಈ ವೇಳೆ ಮಾತನಾಡಿದ ದೆಹಲಿ ಸಂತ ಮಹಾಮಂಡಲ್ ಅಧ್ಯಕ್ಷ ನಾರಾಯಣ ಗಿರಿ ಮಹಾರಾಜ್ ಅವರು ಮಾತನಾಡಿ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರಗಳು ಯಾಕೆ ಮೌನವಾಗಿವೆ ಎಂದು ಪ್ರಶ್ನಿಸಿದರು. ಸನಾತನ ಧರ್ಮದ ವಿರುದ್ಧ ರಾಜಕಾರಣಿಗಳ ದ್ವೇಷದ ಮಾತುಗಳನ್ನು ಸುಪ್ರೀಂ ಕೋರ್ಟ್ ಕೂಡ ಗುರುತಿಸಿದೆ, ಸನಾತನ ಧರ್ಮದ ವಿರುದ್ಧ ರಾಜಕಾರಣಿಗಳು ಬಳಸುತ್ತಿರುವ ಭಾಷೆಯು ಸಮುದಾಯಗಳ ನಡುವೆ ದ್ವೇಷವನ್ನು ಉಂಟುಮಾಡುತ್ತದೆ ಮತ್ತು ಅಂತಹ ರಾಜಕೀಯ ನಾಯಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ದೇಶ
Swara Bhasker: ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಸ್ವರಾ ಭಾಸ್ಕರ್, ಮಗಳ ಹೆಸರು ‘ರಾಬಿಯಾ’
Swara Bhasker: ನಟಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಸ್ವರಾ ಭಾಸ್ಕರ್ ಹಾಗೂ ಸಮಾಜವಾದಿ ಪಕ್ಷದ ಯುವ ನಾಯಕ ಫಹಾದ್ ಅಹ್ಮದ್ ಅವರು ಕಳೆದ ಫೆಬ್ರವರಿ ತಿಂಗಳಲ್ಲಿ ಮದುವೆಯಾಗಿದ್ದರು.
ನವದೆಹಲಿ: ನಟಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಸ್ವರಾ ಭಾಸ್ಕರ್ (Swara Bhasker) ಅವರು ಸೆಪ್ಟೆಂಬರ್ 23ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ(Baby Girl). ಸಮಾಜವಾದಿ ಪಕ್ಷದ ನಾಯಕ ಫಹಾದ್ ಅಹ್ಮದ್ (Fahad Ahmad) ಅವರು ಸ್ವರಾ ಅವರ ಪತಿಯಾಗಿದ್ದಾರೆ. ತಮಗೆ ಹೆಣ್ಣು ಮಗು ಜನಿಸಿದ ಮಾಹಿತಿಯನ್ನು ದಂಪತಿಯು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ಮಗುವಿನ ಮೊದಲ ಫೋಟೋ ಕೂಡ ಷೇರ್ ಮಾಡಿದ್ದಾರೆ. ಮಗುವಿಗೆ ‘ರಾಬಿಯಾ’ (Raabiyaa) ಎಂದು ನಾಮಕರಣ ಮಾಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಜಂಟಿಯಾಗಿ ಪೋಸ್ಟ್ ಮಾಡಿರುವ ಸ್ವರಾ ಮತ್ತು ಫಹಾದ್ ಅವರು, ನಮ್ಮ ಪ್ರಾರ್ಥನೆ ಫಲಿಸಿತು. ಆಶೀರ್ವಾದ ಲಭಿಸಿತು. ಹಾಡು ಪಿಸುಗುಟ್ಟಿದೆ… ಅದು ಅತೀಂದ್ರಿಯ ಸತ್ಯ…. ಸೆಪ್ಟೆಂಬರ್ 23ರಂದು ನಮಗೆ ಹೆಣ್ಣು ಮಗು ಜನಿಸಿದೆ. ಕೃತಜ್ಞತೆಯ ಮತ್ತು ಸಂತೋಷದ ಹೃದಯಗಳೊಂದಿಗೆ, ನಿಮ್ಮ ಪ್ರೀತಿಗೆ ಧನ್ಯವಾದಗಳು! ಇದು ಸಂಪೂರ್ಣ ಹೊಸ ಜಗತ್ತು ಎಂದು ಬರೆದುಕೊಂಡಿದ್ದಾರೆ.
ಸ್ವರಾ-ಫಹಾದ್ ದಂಪತಿ ಫೋಟೋ ಷೇರ್ ಮಾಡಿದ್ದಾರೆ. ಈ ಪೈಕಿ ಮೊದಲನೆಯ ಫೋಟೋದಲ್ಲಿ ಕೂಸು ರಾಬಿಯಾ ಜತೆ ಸ್ವರ ಭಾಸ್ಕರ್ ಇದ್ದಾರೆ. ಆಸ್ಪತ್ರೆಯಿಂದ ಬಿಡುಗಡೆಯಾಗುವ ಸಮಯದಲ್ಲಿ, ತೊಟ್ಟಿಲಲ್ಲಿ ಮಗುವಿನ ಪಕ್ಕದಲ್ಲಿ ಸ್ವರಾ ಮತ್ತು ಫಹಾದ್ ಇದ್ದಾರೆ. ಆಸ್ಪತ್ರೆಯ ಹಾಸಿಗೆಯ ಮೇಲೆ ತನ್ನ ನವಜಾತ ಮಗಳೊಂದಿಗೆ ಸ್ವರಾ ಇರುವ ಮತ್ತೊಂದು ಫೋಟೋ ಇದೆ. ಇನ್ನೂ ಒಂದು, ಫಹಾದ್ ಮಗುವನ್ನು ತನ್ನ ತೋಳುಗಳಲ್ಲಿ ಎತ್ತಿಕೊಂಡಿರುವ ಹಾಗೂ ಕೊನೆಯದು ಮೂವರು ಇರುವ ಕುಟುಂಬದ ಮತ್ತೊಂದು ಫೋಟೋವನ್ನು ಕಾಣಬಹುದಾಗಿದೆ.
ಈ ಸುದ್ದಿಯನ್ನೂ ಓದಿ: Swara Bhaskar: ನಟಿ ಸ್ವರಾ ಭಾಸ್ಕರ್ ಆರತಕ್ಷತೆಯಲ್ಲಿ ರಾಹುಲ್ ಗಾಂಧಿ ಭಾಗಿ
ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ತಾಯಿ, ತಂದೆಯಾದ ಸ್ವರಾ ಮತ್ತು ಫಹಾದ್ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಅಭಿಮಾನಿಗಳಿಂದ ಸೆಲೆಬ್ರಿಟಿಗಳವರೆಗೆ ಹಲವಾರು ಜನರು ಈಗ ದಂಪತಿಗಳಿಗೆ ಶುಭಾಶಯ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. ತಿಲೋತಮಾ ಶೋಮ್, ಗುನೀತ್ ಮೊಂಗಾ ಮತ್ತು ಪಾರ್ವತಿ ಕಾಮೆಂಟ್‌ಗಳಲ್ಲಿ ದಂಪತಿಗಳನ್ನು ಅಭಿನಂದಿಸಿದ್ದಾರೆ.
ಇದೇ ವರ್ಷದ ಫೆಬ್ರವರಿಯಲ್ಲಿ ಸ್ವರಾ ಭಾಸ್ಕರ್ ಮ್ತತು ಫಹಾದ್ ಅಹ್ಮದ್ ಅವರು ಕೋರ್ಟ್‌ನಲ್ಲಿ ವಿವಾಹವಾಗಿದ್ದರು. ಬಳಿಕ ಮಾರ್ಚ್ ತಿಂಗಳಲ್ಲಿ ಹಳದಿ, ಸಂಗೀತ, ವೆಡ್ಡಿಂಗ್ ರಿಸೆಪ್ಷನ್ ಸೇರಿದಂತೆ ಅನೇಕ ಮದುವೆಯ ಕಾರ್ಯಕ್ರಮಗಳನ್ನು ನಡೆಸಿದ್ದರು. ಜೂನ್ ತಿಂಗಳಲ್ಲಿ ತಾವು ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಸ್ವರಾ ಭಾಸ್ಕರ್ ಹಾಗೂ ಫಹಾದ್ ಅಹ್ಮದ್ ಅವರು ಘೋಷಿಸಿದ್ದರು. ಈಗ ಮುದ್ದಾದ ಹೆಣ್ಣುಮಗಳ ತಂದೆತಾಯಿಯಾಗಿದ್ದಾರೆ.
ಸಿನಿಮಾದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಕರ್ನಾಟಕ
Weather Update: ಭಾರತದಲ್ಲಿ ಮುಗೀತು ಮಳೆಗಾಲ! ಎಷ್ಟು ಮಳೆ ಕೊರತೆ, ಬರಗಾಲ ಪಕ್ಕಾ?
Weather Update: ಜೂನ್ 1ರಿಂದ ಆರಂಭವಾಗುವ ಮುಂಗಾರು, ಸಾಮಾನ್ಯವಾಗಿ ಸೆಪ್ಟೆಂಬರ್ 17ರಿಂದ ಕ್ಷೀಣಿಸಲಾರಂಭಿಸುತ್ತದೆ. ಆದರೆ, ಬಾರಿ ಸೆಪ್ಟೆಂಬರ್ 25ರಿಂದ ಮಳೆ ಹಿಂತೆಗೆಯುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ನವದೆಹಲಿ: ವಾಡಿಕೆಗಿಂತ ಎಂಟು ದಿನಗಳಷ್ಟು ತಡವಾಗಿ ಭಾರತದಲ್ಲಿ (India) ಮುಂಗಾರು ಕ್ಷೀಣಿಸುತ್ತಿದೆ (Monsoon Withdrawing) ಎಂದು ಭಾರತೀಯ ಹವಾಮಾನ ಇಲಾಖೆ (India Meteorological Department) ಸೋಮವಾರ ಹೇಳಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ವಾಡಿಕೆಯಂತೆ ಸೆಪ್ಟೆಂಬರ್ 17ರಿಂದಲೇ ಮುಂಗಾರು ದುರ್ಬಲವಾಗಬೇಕಿತ್ತು. ಆದರೆ, ಸೆಪ್ಟೆಂಬರ್ 25ರಿಂದ ಮುಂಗಾರು ಕ್ಷೀಣವಾಗುತ್ತಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ(Weather Update).
ನೈಋತ್ಯ ರಾಜಸ್ಥಾನದ ಭಾಗಗಳಿಂದ ನೈಋತ್ಯ ಮಾನ್ಸೂನ್ ಸೆಪ್ಟೆಂಬರ್ 25ರಿಂದಲೇ ಕ್ಷೀಣಿಸಲಾರಂಭಿಸಿದೆ. ರಾಜಸ್ಥಾನದಲ್ಲಿ ಸಾಮಾನ್ಯವವಾಗಿ ಸೆಪ್ಟೆಂಬರ್ 17ರಿಂದಲೇ ಮುಂಗಾರು ಹಿಂತೆಗೆಯಲಾರಂಭಿಸುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ವಾಯುವ್ಯ ಭಾರತದಲ್ಲಿ ಮುಂಗಾರು ಕ್ಷೀಣವಾಗಲಾರಂಭಿಸಿದರೆ ಭಾರತದಲ್ಲಿ ಒಟ್ಟಾರೆ ಮಳೆಗಾಲ ಅಂತ್ಯವಾಗುವ ಕಾಲ ಸನ್ನಿಹಿತವಾದಂತೆಯೇ ಎನ್ನಲಾಗುತ್ತದೆ. ಪ್ರಸಕ್ತ ಮುಂಗಾರಿನಲ್ಲಿ ಭಾರತದಲ್ಲಿ 780.3 ಮಿಲಿ ಮೀಟರ್ ಮಳೆಯಾಗಿದೆ. ಆದರೆ, ವಾಡಿಕೆಯಂತೆ 832.4 ಮಿಲಿ ಮೀಟರ್ ಮಳೆಯಾಗಬೇಕಿತ್ತು. ಅಂದರೆ, ಈ ವರ್ಷ ಮಳೆ ಕೊರತೆಯಾಗಿದೆ.
ವಾಯುವ್ಯ ಭಾರತದಿಂದ ಮಾನ್ಸೂನ್ ಹಿಂದೆ ಸರಿಯುವ ಪ್ರಕ್ರಿಯೆಯು ಭಾರತೀಯ ಉಪಖಂಡದಿಂದ ಮಳೆಗಾಲ ಅಂತ್ಯವಾಗುವುದನ್ನು ಸೂಚಿಸುತ್ತದೆ. ಮಾನ್ಸೂನ್ ಹಿಂದೆ ಸರಿಯುವುದು ಯಾವುದೇ ವಿಳಂಬವು ದೀರ್ಘವಾದ ಮಳೆಗಾಲವನ್ನು ಅರ್ಥೈಸುತ್ತದೆ. ಇದು ಕೃಷಿ ಉತ್ಪಾದನೆಯ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರಲಿದೆ. ವಿಶೇಷವಾಗಿ ವಾಯುವ್ಯ ಭಾರತದಲ್ಲಿ ಮಾನ್ಸೂನ್ ಮಳೆಯು ರಾಬಿ ಬೆಳೆ ಉತ್ಪಾದನೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.
ಈ ಸುದ್ದಿಯನ್ನೂ ಓದಿ: Weather Report : ಮಾಸಾಂತ್ಯದವರೆಗೂ ಮಳೆ; 6 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಭಾರತದಲ್ಲಿ ಮುಂಗಾರು ಮಳೆಯ ಜೂನ್ 1ರಂದು ಕೇರಳದ ಮೂಲಕ ಪ್ರವೇಶಿಸುತ್ತದೆ. ಜುಲೈ 8ರ ವೇಳೆಗೆ ಇಡೀ ದೇಶವನ್ನು ಮುಂಗಾರು ಆವರಿಸುತ್ತದೆ. ಸೆಪ್ಟೆಂಬರ್ 17ರ ಹೊತ್ತಿಗೆ ಕ್ಷೀಣವಾಗಲಾರಂಭಿಸುತ್ತದೆ. ಅಕ್ಟೋಬರ್ 15ರ ವೇಳೆ ಮಾನ್ಸೂನ್ ಸಂಪೂರ್ಣವಾಗಿ ದೇಶದಿಂದ ಮಾಯವಾಗುತ್ತದೆ ಎಂದು ಭಾರತೀಯ ಹವಮಾನ ಇಲಾಖೆ ತಿಳಿಸಿದೆ.
ಮುಂಗಾರಿನಲ್ಲಿ ಭಾರತವು ಇಲ್ಲಿಯವರೆಗೆ 796.4 ಮಿಮೀ ಮಳೆಯನ್ನು ಪಡೆದಿದೆ. ಇದು, ವಾಡಿಕೆ ಮಳೆ 843.2 ಮಿಮೀಗೆ ಹೋಲಿಸಿದರೆ, ಶೇ.6ರಷ್ಟು ಕೊರತೆಯಾಗಿದೆ. ಸಾಮಾನ್ಯವಾಗಿ, ಜೂನ್‌ನಿಂದ ಸೆಪ್ಟೆಂಬರ್‌ವರೆಗಿನ ನಾಲ್ಕು ತಿಂಗಳ ಅವಧಿಯಲ್ಲಿ ದೇಶವು ಸರಾಸರಿ 870 ಮಿಮೀ ಮಳೆಯನ್ನು ಪಡೆಯುತ್ತದೆ. ಆದರೆ, ಪ್ರಸಕ್ತ ಮಳೆಗಾಲದಲ್ಲಿ ಕೊರತೆ ಎದುರಾಗಿದ್ದು, ಬರಗಾಲದ ಛಾಯೆ ಆವರಿಸಿದೆ. ಈಗಾಗಲೇ, ಕರ್ನಾಟಕದಲ್ಲಿ ಬರಗಾಲಪೀಡಿತ ತಾಲೂಕುಗಳನ್ನು ಘೋಷಣೆ ಮಾಡಲಾಗಿದೆ.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಕರ್ನಾಟಕ
Congress Politics : ಕೆ.ಎನ್. ರಾಜಣ್ಣಗೆ ಖಡಕ್ ವಾರ್ನಿಂಗ್ ಕೊಟ್ಟ ಸುರ್ಜೇವಾಲ!
Congress Politics : ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಮೂರು ಡಿಸಿಎಂ ಹುದ್ದೆ ಸೃಷ್ಟಿ ಮಾಡದೇ ಇದ್ದರೆ ರಾಜ್ಯ ಸರ್ಕಾರ ಪತನ ಆಗುತ್ತದೆ ಎಂದು ಹೇಳಿಕೆ ನೀಡಿದ್ದ ಸಚಿವ ಕೆ.ಎನ್. ರಾಜಣ್ಣ ಅವರಿಗೆ ಖಡಕ್ ವಾರ್ನಿಂಗ್ ನೀಡಿದ್ದಾಗಿ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದ್ದಾರೆ.
ನವ ದೆಹಲಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ (Congress Government) ಅಧಿಕಾರಕ್ಕೆ ಬಂದು ನಾಲ್ಕು ತಿಂಗಳಾಗಿದೆ. ಆದರೆ, ಪಕ್ಷದ ಆಂತರಿಕ ರಾಜಕೀಯ (Congress Politics) ಮಾತ್ರ ಹದಗೆಟ್ಟಿದೆ. ಒಬ್ಬರಾದ ಮೇಲೆ ಒಬ್ಬರು ಸರ್ಕಾರ ಹಾಗೂ ಸಚಿವರ ವಿರುದ್ಧ ಹರಿಹಾಯುತ್ತಲೇ ಇದ್ದಾರೆ. ಇದು ಸಿಎಂ ಸಿದ್ದರಾಮಯ್ಯ (CM Siddaramaiah) ಸೇರಿದಂತೆ ಪಕ್ಷದ ವರಿಷ್ಠರಿಗೆ ತಲೆನೋವಾಗಿ ಪರಿಣಮಿಸಿತ್ತು. ಮೊದಲಿಗೆ ಸಚಿವರ ವಿರುದ್ಧವೇ ಭ್ರಷ್ಟಾಚಾರ, ವರ್ಗಾವಣೆ ದಂಧೆ ಬಗ್ಗೆ ಆರೋಪಿಸಿ ಹಿರಿಯ ಶಾಸಕರು ಪತ್ರ ಬರೆದಿದ್ದರು. ಬಳಿಕ ವಿಧಾನ ಪರಿಷತ್ ಸದಸ್ಯ, ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ (BK Hariprasad) ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸುವ ಮಾತುಗಳನ್ನಾಡಿದ್ದರು. ಈಚೆಗೆ ಮೂರು ಡಿಸಿಎಂ ಹುದ್ದೆ ಸೃಷ್ಟಿ ಮಾಡದೇ ಹೋದರೆ ಕಾಂಗ್ರೆಸ್ ಸರ್ಕಾರ ಪತನ ಆಗುತ್ತದೆ ಎಂದು ಸಚಿವ ಕೆ.ಎನ್. ರಾಜಣ್ಣ (Minister KN Rajanna) ಹೇಳಿಕೆ ನೀಡಿದ್ದರು. ಈ ಹೇಳಿಕೆ ರಾಜ್ಯ ರಾಜಕೀಯದಲ್ಲಿ (Karnataka Politics) ಗದ್ದಲವನ್ನು ಎಬ್ಬಿಸಿತ್ತು. ಪ್ರತಿಪಕ್ಷಗಳಿಗೆ ಆಹಾರವೂ ಆಗಿತ್ತು. ಈಗ ಕಾಂಗ್ರೆಸ್ ಹೈಕಮಾಂಡ್ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ(Congress state in-charge Randeep Singh Surjewala) ಅವರು ಕೆ.ಎನ್. ರಾಜಣ್ಣ ಸಹಿತ ಕಾಂಗ್ರೆಸ್ ನಾಯಕರಿಗೆ ಬಹಿರಂಗವಾಗಿಯೇ ವಾರ್ನಿಂಗ್ ನೀಡಿದ್ದಾರೆ.
ಸಚಿವ ಕೆ.ಎನ್. ರಾಜಣ್ಣ ಮೂರು ಡಿಸಿಎಂ ಸೃಷ್ಟಿ ಮಾಡಬೇಕು ಎಂಬ ಹೇಳಿಕೆ ವಿಚಾರದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಈಗಾಗಲೇ ಈ ಬಗ್ಗೆ ಕೆ.ಸಿ. ವೇಣುಗೋಪಾಲ್ ಸೂಚನೆ ಕೊಡುವ ಕೆಲಸವನ್ನು ಮಾಡಿದ್ದಾರೆ. ಕೆಲ ನಾಯಕರಿಂದ ಈ ರೀತಿಯ ಹೇಳಿಕೆ ಹೊರಬರುತ್ತಿದೆ. ನಾವು ಕರ್ನಾಟಕ ಸರ್ಕಾರದ ಯೋಜನೆ ಮತ್ತು ಮಾಡೆಲ್ ಬಗ್ಗೆ ಮಾತನಾಡಬೇಕು. ಬಿಜೆಪಿ ಮತ್ತು ಜೆಡಿಎಸ್ ನಾಯಕರು ತಂತ್ರ ಮಾಡುತ್ತಿದ್ದಾರೆ. ನಾನು ಮಾಧ್ಯಮಗಳ ಮೂಲಕ ವಾರ್ನಿಂಗ್ ಕೊಡುತ್ತಿದ್ದೇನೆ. ಈ ರೀತಿಯ ವಿಚಾರ ಪಕ್ಷದ ಒಳಗೆಯಾಗಲಿ, ಹೊರಗಡೆಯಾಗಲಿ ಹೇಳಿಕೆ ಕೊಡುವುದನ್ನು ನಾನು ಸಹಿಸುವುದಿಲ್ಲ ಎಂದು ಹೇಳಿದರು.
ಮುಂದೆ ಹೇಳಿಕೆ ನೀಡದಂತೆ ಎಚ್ಚರಿಕೆ
ನಾನು ಈಗಾಗಲೇ ಇಂತಹ ಹೇಳಿಕೆ ಬಗ್ಗೆ ಕೆ.ಎನ್. ರಾಜಣ್ಣ ಅವರ ಜತೆ ಮಾತನಾಡಿದ್ದೇನೆ. ಅವರು ತಮ್ಮ ಅಭಿಪ್ರಾಯವನ್ನು ಹೇಳಿದ್ದೇನೆ ಎಂದು ಹೇಳಿದ್ದಾರೆ. ಆದರೆ, ಈ ರೀತಿಯ ಹೇಳಿಕೆಯನ್ನು ಮುಂದೆ ನೀಡದಿರಲು ಸೂಚನೆ ನೀಡಿದ್ದೇನೆ ಎಂದು ರಣದೀಪ್ ಸಿಂಗ್ ಸುರ್ಜೇವಾಲ ಮಾಧ್ಯಮಗಳಿಗೆ ತಿಳಿಸಿದರು.
ಝಿರೊ ಪ್ಲಸ್ ಝಿರೊ ಮೈತ್ರಿ ಈಸ್ ಈಕ್ವಲ್ ಟು ಝಿರೊ
ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ರಣದೀಪ್ ಸಿಂಗ್ ಸುರ್ಜೇವಾಲ, ಜೆಡಿಎಸ್ ಬಿಜೆಪಿಯ ಬಿ ಟೀಂ ಎಂದು ಹಿಂದಿನಿಂದಲೇ ಹೇಳುತ್ತಿದ್ದೆ. ಅದು ಈಗ ಬಹಿರಂಗವಾಗಿ ಹೊರ ಬಂದಿದೆ. ಇದು ಅವಕಾಶವಾದಿ ಮೈತ್ರಿಯಾಗಿದೆ. ಸೋತ ಇಬ್ಬರಿಂದ ಮೈತ್ರಿಯಾಗಿದೆ. ಝಿರೊ ಪ್ಲಸ್ ಝಿರೊ ಮೈತ್ರಿ ಈಸ್ ಈಕ್ವಲ್ ಟು ಝಿರೊ ಎಂದು ಟಾಂಗ್ ನೀಡಿದರು.
ಹೊಸ ಮಾಡೆಲ್ ನಿರ್ಮಾಣ ಮಾಡಿದ ಕರ್ನಾಟಕ ಕಾಂಗ್ರೆಸ್
ಕರ್ನಾಟಕ ಕಾಂಗ್ರೆಸ್ ಹೊಸ ಮಾಡೆಲ್ ಅನ್ನು ನಿರ್ಮಾಣವಾಗಿದೆ. ಇದು ಈಗ ದೇಶದ ಮಾಡೆಲ್ ಆಗಿ ಹೊರಹೊಮ್ಮಿದೆ. ನಮ್ಮ ಯೋಜನೆಗಳೆಲ್ಲವನ್ನೂ ಈಗಾಗಲೇ ಅನುಷ್ಠಾನಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಪಕ್ಷಗಳವರು ನಮ್ಮ ಯೋಜನೆಯನ್ನು ತಮ್ಮ ರಾಜ್ಯಗಳಲ್ಲಿ ತರುತ್ತಿದ್ದಾರೆ ಎಂದು ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದರು.
ಇದನ್ನೂ ಓದಿ: Cauvery water dispute : ದೇವೇಗೌಡರ ನೋಡಿ ಕಲಿಯಲು ಬಿಜೆಪಿಗೆ ಸಲಹೆ ನೀಡಿದ ಸಿಎಂ ಸಿದ್ದರಾಮಯ್ಯ!
ಭವಿಷ್ಯವನ್ನಷ್ಟೇ ನೋಡುತ್ತೇವೆ
ಈ ಹಿಂದೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯಾಗಿರುವ ವಿಚಾರದ ಬಗ್ಗೆ ಮಾತನಾಡಿದ ರಣದೀಪ್ ಸಿಂಗ್ ಸುರ್ಜೇವಾಲ, ನಾವು ಹಿಂದಿನದರ ಬಗ್ಗೆ ನೋಡಲ್ಲ, ಭವಿಷ್ಯದ ಬಗ್ಗೆ ನೋಡುತೇವೆ ಎಂದಷ್ಟೇ ಪ್ರತಿಕ್ರಿಯೆ ನೀಡಿದರು.
-
ಸುವಚನ18 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ವಿದೇಶ9 hours ago
Akshardham : ವಿದೇಶದಲ್ಲಿನ ಅತೀ ದೊಡ್ಡ ದೇವಾಲಯ ಉದ್ಘಾಟನೆಗೆ ಸಜ್ಜು; ಏನಿದರ ವಿಶೇಷ?
-
ಕರ್ನಾಟಕ7 hours ago
PSI Scam : ಪಿಎಸ್ಐ ನೇಮಕಾತಿ ಅಕ್ರಮ; ಕೊನೆಗೂ ಅಮೃತ್ ಪಾಲ್ಗೆ ಜಾಮೀನು
-
ದೇಶ23 hours ago
Viral News: ಎಲ್ಕೆಜಿ ಬಾಲಕನಿಗೆ ಕಾಲು ಮುರಿಯುವ ಹಾಗೆ ಬಡಿದ ಮೇಷ್ಟ್ರು , ಗಾಯಗಳನ್ನು ನೋಡಿ ಬೆಚ್ಚಿದ ಅಮ್ಮ
-
ದೇಶ23 hours ago
India Canada Row : ಖಲಿಸ್ತಾನಿ ಉಗ್ರರ ಕಡೆಗೆ ಮೃದು ಧೋರಣೆ; ಟ್ರುಡೊ ವಿರುದ್ಧ ಆರ್ಯ ಮತ್ತೆ ವಾಗ್ದಾಳಿ
-
ಅಂಕಣ9 hours ago
ವಿಧಾನಸೌಧ ರೌಂಡ್ಸ್: ಜೆಡಿಎಸ್ಗೆ ಸಂಜೀವಿನಿಯಾದ ಬಿಜೆಪಿ ಮೈತ್ರಿ; ಬೆಂಗಳೂರು ದಕ್ಷಿಣದಿಂದ ಕಾಂಗ್ರೆಸ್ ಅಚ್ಚರಿ ಅಭ್ಯರ್ಥಿ?
-
ದೇಶ7 hours ago
Army Jawan: ಯೋಧನ ಮೇಲೆ ಹಲ್ಲೆ ನಡೆಸಿ, ಬೆನ್ನಿನ ಮೇಲೆ ‘ಪಿಎಫ್ಐ’ ಎಂದು ಬರೆದ ದುರುಳರು!
-
ಕರ್ನಾಟಕ13 hours ago
BJP-JDS Alliance: ಬಿಜೆಪಿ- ಜೆಡಿಎಸ್ ಮೈತ್ರಿ; ಮುಸ್ಲಿಂ ನಾಯಕರು ಜೆಡಿಎಸ್ಗೆ ಗುಡ್ಬೈ?