ವಿಸ್ತಾರ Details: ಡೀಲ್ ಸುಳಿಯಲ್ಲಿ ರೈತ ನಾಯಕ ಕೋಡಿಹಳ್ಳಿ; ಆಪ್‌ ಈಗ ಏನು ಮಾಡಬಹುದು? - Vistara News

ಕರ್ನಾಟಕ

ವಿಸ್ತಾರ Details: ಡೀಲ್ ಸುಳಿಯಲ್ಲಿ ರೈತ ನಾಯಕ ಕೋಡಿಹಳ್ಳಿ; ಆಪ್‌ ಈಗ ಏನು ಮಾಡಬಹುದು?

ಕೆಎಸ್ಆರ್‌ಟಿಸಿ ನೌಕರರ ಹಾಗೂ ರೈತ ಹೋರಾಟದ ಸಂದರ್ಭದಲ್ಲಿ ಕೋಡಿಹಳ್ಳಿ ಚಂದ್ರಶೇಖರ್‌ ʼಡೀಲ್ʼ ನಡೆಸಿದ ಆರೋಪ ಕೇಳಿಬಂದಿದ್ದು, ಅವರ ವಿರುದ್ಧ ರೈತಸಂಘದ ಕಾರ್ಯಕರ್ತರೇ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರ ಬಗ್ಗೆ ಆಮ್‌ ಆದ್ಮಿ ಪಕ್ಷದ ನಿಲುವೇನು ಎಂಬುದು ತೀವ್ರ ಕುತೂಹಲ ಮೂಡಿಸಿದೆ

VISTARANEWS.COM


on

ಕೋಡಿಹಳ್ಳಿ ಚಂದ್ರಶೇಖರ್‌
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಇತ್ತೀಚೆಗಷ್ಟೇ ಆಮ್‌ ಆದ್ಮಿ ಪಕ್ಷ‌ ಸೇರಿದ ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್‌ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಹಸಿರು ಶಾಲು ಹೊದ್ದು, ರೈತ ನಾಯಕ ದಿವಂಗತ ಪ್ರೊ. ನಂಜುಂಡಸ್ವಾಮಿಯವರಂತೆ ಸರ್ಕಾರವನ್ನು, ರೈತ ವಿರೋಧಿಗಳನ್ನು ತಿವಿಯುತ್ತಿದ್ದ ಕೋಡಿಹಳ್ಳಿಯವರ ಮೇಲೆ ರೈತ ಸಂಘ ಮತ್ತು ಕೆಎಸ್‌ಆರ್‌ಟಿಸಿ ನೌಕರರು ತಿರುಗಿ ಬಿದ್ದಿದ್ದಾರೆ. ಹೋರಾಟವನ್ನೇ ಮಾರಿಕೊಳ್ಳುತ್ತಿರುವ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಹಿಂದೊಮ್ಮೆ ರೈತ ಸಂಘ ಇಬ್ಭಾಗವಾಗಿದ್ದಾಗ ಒಂದು ಬಣದ ನೇತೃತ್ವ ವಹಿಸಿದ್ದ ಕೋಡಿಹಳ್ಳಿ ಚಂದ್ರಶೇಖರ್‌ ಅವರನ್ನು ಮತ್ತೊಂದು ಬಣದ ನಾಯಕರು ʼಡೀಲ್‌ ಲೀಡರ್‌ʼ ಎಂದೇ ದೂಷಿಸಿದ್ದರು. ಬೆಂಗಳೂರಿನಲ್ಲಿಯೇ ಬೀಡು ಬಿಟ್ಟು, ರಾಜಕಾರಣಿಗಳೊಂದಿಗೇ ಹೆಚ್ಚಾಗಿ ಓಡಾಡಿಕೊಂಡಿರುವ ಕೋಡಿಹಳ್ಳಿ ಅದು ಹೇಗೆ ರೈತ ನಾಯಕರಾಗುತ್ತಾರೆ ಎಂಬೆಲ್ಲಾ ಮಾತುಗಳು ಕೇಳಿ ಬಂದ್ದಿದ್ದವು. ಈಗ ಕೋಡಿಹಳ್ಳಿ ಚಂದ್ರದೇಖರ್‌ ಹಸಿರು ಶಾಲು ಹೊದ್ದು ಓಡಾಡಬಾರದು, ಹಾಗೇನಾದರೂ ಮಾಡಿದರೆ ಅವರು ಭಾಗವಹಿಸುವ ಕಾರ್ಯಕ್ರಮಗಳಲ್ಲಿಯೇ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ರೈತ ಸಂಘದ ರಾಜ್ಯ ಹಸಿರು ಸೇನೆ ಎಚ್ಚರಿಕೆ ನೀಡಿದೆ.

ಇದರ ಬೆನ್ನಲ್ಲೇ ಬೆಂಗಳೂರಿನಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಲು ಪ್ರೆಸ್‌ ಕ್ಲಬ್‌ಗೆ ಆಗಮಿಸಿದ ಕೋಡಿಹಳ್ಳಿ ಚಂದ್ರಶೇಖರ್‌ ಮೇಲೆ ಮಸಿ ಎರಚಲಾಗಿದೆ. ಈ ಸಂದರ್ಭದಲ್ಲಿ ಚಂದ್ರಶೇಖರ್‌ ಜತೆಗಿದ್ದ ಕಾರ್ಯಕರ್ತರು ಮತ್ತು ಪ್ರತಿಭಟನಾಕಾರರ ನಡುವೆ ಹೊಡೆದಾಟ ನಡೆದಿದೆ. ಕಲ್ಲು, ದೊಣ್ಣೆ ಹಿಡಿದು ಹೊಡೆದಾಡಿಕೊಂಡಿದ್ದು, ಇದನ್ನು ತಪ್ಪಿಸಲು ಪೊಲೀಸರು ಹರಸಾಹಸಪಟ್ಟಿದ್ದಾರೆ. ಪ್ರತಿಭಟನೆ ನಡೆಸಿದವರು ಜೆಡಿಎಸ್‌ ಕಾರ್ಯಕರ್ತರು ಎಂದು ಕೋಡಿಹಳ್ಳಿ ಚಂದ್ರಶೇಖರ್‌ ಜತೆಗಿದ್ದವರು ದೂರಿದ್ದಾರೆ.

ವಿವಾದಗಳಿಂದಾಗಿಯೇ ಸುದ್ದಿಯಲ್ಲಿರುವ ನಾಯಕ

ವಿವಾದಗಳಿಂದಾಗಿಯೇ ಸದಾ ಸುದ್ದಿಯಲ್ಲಿರುವ ಕೋಡಿಹಳ್ಳಿ ಚಂದ್ರಶೇಖರ್‌ ಹಾಸನ ಜಿಲ್ಲೆ ಅರಸಿಕೆರೆ ತಾಲೂಕಿನ ಕೋಡಿಹಳ್ಳಿಯ ಚಿಕ್ಕ  ರೈತ ಕುಟುಂಬದಿಂದ ಬಂದವರು. ರೈತ ಸಂಘದ ಚಳವಳಿ ಉತ್ತುಂಗದಲ್ಲಿದ್ದ ಸಂದರ್ಭದಲ್ಲಿ ಸಾಮಾನ್ಯ ಕಾರ್ಯಕರ್ತರಂತೆ ಭಾಗವಹಿಸುತ್ತಲೇ ನಾಯಕರಾಗಿ ಬೆಳೆದವರು. ಪ್ರೊ. ನಂಜುಂಡಸ್ವಾಮಿಯವರ ಆಪ್ತರಾಗಿ ಹಲವಾರು ರೈತ ಹೋರಾಟ ಕಟ್ಟಿದವರು. ರೈತ ಸಂಘದಲ್ಲಿದ್ದಾಗಲೂ ಅವರ ನಡೆ ಹಲವಾರು ಬಾರಿ ವಿವಾದಕ್ಕೊಳಗಾಗಿತ್ತು.

2009ರ ಲೋಕಸಭಾ ಚುನಾವಣೆಯಲ್ಲಿ ಹಾಸನ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ, ಸೋತಿದ್ದರು. 2008 ಮತ್ತು 2013ರಲ್ಲಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದರು. ಈ ಸಂದರ್ಭದಲ್ಲಿ ಅವರು 2 ಎಕರೆ ಐದು ಗುಂಟೆ ಜಮೀನು ಹೊಂದಿರುವುದಾಗಿ ಪ್ರಕಟಿಸಿದ್ದರು.

ಕೋಡಿಹಳ್ಳಿ ಚಂದ್ರಶೇಖರ್‌
ಮೈಸೂರಿನಲ್ಲಿ ರೈತ ಸಂಘದ ಪ್ರತಿಭಟನೆ

ಸದ್ಯ ಬೆಂಗಳೂರಿನಲ್ಲಿ ನೆಲೆಸಿರುವ ಕೋಡಿಹಳ್ಳಿ ಚಂದ್ರಶೇಖರ್‌  ಐಷಾರಾಮಿ ಮನೆ, ಕಾರು, ಹೊಂದಿದ್ದಾರೆ. ಅವರ ಮಕ್ಕಳು ಸಹ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಇದು ಹೇಗೆ ಸಾಧ್ಯ ಎಂಬ ಪ್ರಶ್ನೆ ರೈತ ಸಂಘದ ಕಾರ್ಯಕರ್ತರದ್ದು. ಅವರ ವಿರುದ್ಧ ಈಗ ಕೋಲಾರ, ಮೈಸೂರು, ಚಿತ್ರದರ್ಗ ಸೇರಿದಂತೆ ಹಲವೆಡೆ ರೈತರ ಪ್ರತಿಭಟನೆಗಳು ನಡೆದಿವೆ. ಹೋರಟವನ್ನು ಮಾರಿಕೊಳ್ಳುವ ಇವರು ರೈತರ ಪ್ರತಿನಿಧಿ ಎಂದು ಇನ್ನು ಮುಂದೆ ಎಲ್ಲಿಯೂ ಹೇಳಿಕೊಳ್ಳಬಾರದು ಎಂದು ಒತ್ತಾಯಿಸಿದ್ದಾರೆ.

ಕೆಎಸ್‌ಆರ್‌ಟಿಸಿ ನೌಕರರ ಮುಷ್ಕರದ ನೇತೃತ್ವ

2021ರ ಏಪ್ರಿಲ್‌ನಲ್ಲಿ ನಡೆದ ಕೆಎಸ್‌ಆರ್‌ಟಿಸಿ ನೌಕರರ ಮುಷ್ಕರದ ಸಂದರ್ಭದಲ್ಲಿ ಕೋಡಿಹಳ್ಳಿ ಚಂದ್ರಶೇಖರ್‌ ಹೆಚ್ಚು ಸುದ್ದಿಯಲ್ಲಿದ್ದರು. ನೌಕರರ ಸಂಘದ ಗೌರವಾಧ್ಯಕ್ಷರಾಗಿ ಹೋರಾಟದ ನೇತೃತ್ವ ವಹಿಸಿದ್ದ ಅವರು ಮುಷ್ಕರದ ದಿಕ್ಕು ತಪ್ಪಿಸಿದ್ದರೆಂಬ ಆರೋಪಗಳಿವೆ. ಆಗಿನ ಸಾರಿಗೆ ಸಚಿವ ಲಕ್ಷ್ಮಣ್‌ ಸವದಿಯೊಂದಿಗೆ ಗೌಪ್ಯವಾಗಿ ಮಾತುಕತೆ ನಡೆಸಿದ್ದು, ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರೊಂದಿಗೆ ಯಾರಿಗೂ ತಿಳಿಸದೇ ಒಪ್ಪಂದ ಮಾಡಿಕೊಂಡಿದ್ದು… ಹೀಗೆ ಅವರ ವರ್ತನೆ ಹಲವು ಅನುಮಾನಗಳಿಗೆ ಕಾರಣವಾಗಿದ್ದವು.

ನಿರಂತವಾಗಿ 15 ದಿನಗಳ ಕಾಲ ನಡೆದ ಈ ಮುಷ್ಕರದ ಸಂದರ್ಭದಲ್ಲಿ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದರು. ಸರ್ಕಾರದೊಂದಿಗೆ ಸರಿಯಾಗಿ ಮಾತುಕತೆ ನಡೆಸದ ಕೋಡಿಹಳ್ಳಿ ಚಂದ್ರಶೇಖರ್‌ ಕಾರಣದಿಂದಾಗಿಯೇ ಈ ಮುಷ್ಕರ ಮುಂದುವರಿದಿದೆ ಎಂದು ಸಾರ್ವತ್ರಿಕವಾಗಿ ಆಕ್ರೋಶ ವ್ಯಕ್ತವಾಗಿತ್ತು. ಕೊನೆಗೆ ಯಾವುದೇ ಸ್ಪಷ್ಟ ತೀರ್ಮಾನವಿಲ್ಲದೆ 15 ದಿನಗಳ ಕಾಲ ನಡೆದ ಈ ಮುಷ್ಕರ ಅಂತ್ಯಗೊಂಡಿತ್ತು. ರೈತ ನಾಯಕರಾಗಿ ಕೋಡಿಹಳ್ಳಿ ಚಂದ್ರಶೇಖರ್‌ ಸಾರಿಗೆ ನೌಕರರ ಮುಷ್ಕರದ ನೇತೃತ್ವ ವಹಿಸಿದ್ದ ಔಚಿತ್ಯವನ್ನು ಜನಸಾಮಾನ್ಯರೂ ಪ್ರಶ್ನಿಸಿದ್ದರು.

ಈಗಿನ ಆರೋಪಗಳೇನು?

  • 2021ರ ಏಪ್ರಿಲ್‌ನಲ್ಲಿ ಸಾರಿಗೆ ಇಲಾಖೆಯ ನಾಲ್ಕು ನಿಗಮಗಳ ನೌಕರರು ವಿವಿಧ ಬೇಡಿಕೆ ಈಡೇರಿಕೆಗಾಗಿ ಮುಷ್ಕರ ನಡೆಸಿದ್ದರು. ಇದರ ನೇತೃತ್ವವನ್ನು ನೌಕರರ ಸಂಘದ ಗೌರವಾಧ್ಯಕ್ಷರಾಗಿದ್ದ ಕೋಡಿಹಳ್ಳಿ ಚಂದ್ರಶೇಖರ್‌ ವಹಿಸಿಕೊಂಡಿದ್ದರು. ಆದರೆ, ಅಗ ಮುಷ್ಕರ ನಿಲ್ಲಿಸಲು ಕೋಡಿಹಳ್ಳಿ ಚಂದ್ರಶೇಖರ್‌ ಅವರಿಗೆ 35 ಕೋಟಿ ರೂ. ಕಿಕ್‌ ಬ್ಯಾಕ್‌ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಸಾರಿಗೆ ಇಲಾಖೆಯ ನೌಕರರು ಈ ವಿಚಾರವನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿದ್ದಾರೆ. ನೌಕರರ ಫೆಡರೇಷನ್‌ನ ಅಧ್ಯಕ್ಷ ಎಚ್‌ ವಿ ಅನಂತಸುಬ್ಬರಾವ್‌ ಅವರೂ ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿದ್ದಾರೆ.
  • ಬೆಂಗಳೂರು ಸಿಟಿ ಮಾರುಕಟ್ಟೆಯ ಸೊಪ್ಪಿನ ಮಾರಾಟಗಾರರ ಪರವಾಗಿ ಹೋರಾಟ ನಡೆಸಿ, ತಿಂಗಳಿಗೆ 60 ಸಾವಿರ ರೂ. ಪಡೆಯುತ್ತಿದ್ದಾರೆ ಎಂದು ರಾಜ್ಯ ಹಸಿರು ಸೇನೆ ಆರೋಪಿಸಿದೆ.
  • ಕಳೆದ ವರ್ಷ ಮೂರು ಕೃಷಿ ಕಾಯಿದೆಗಳನ್ನು  ಹಿಂಪಡೆಯಬೇಕೆಂದು ದಿಲ್ಲಿಯಲ್ಲಿ ನಡೆದ ಐತಿಹಾಸಿಕ ಹೋರಾಟದ ಸಂದರ್ಭದಲ್ಲಿ “ಚಳವಳಿಯನ್ನು ಹತ್ತಿಕ್ಕಲು” ಅಥವಾ “ಚಳವಳಿಯನ್ನು ಹಿಂಪಡೆಯಲು” ವಕಾಲತ್ತು ವಹಿಸುವಂತೆ ರಾಜ್ಯದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಮಧ್ಯಸ್ತಿಕೆ ವಹಿಸಲು ಸುಮಾರು 3 ಸಾವಿರ ಕೋಟಿ ರೂಪಾಯಿಗಳ ಆಮಿಷ ಒಡ್ಡಿದ್ದು, ಮತ್ತದಕ್ಕೆ ಕೋಡಿಹಳ್ಳಿ ಚಂದ್ರಶೇಖರ್ ಸಮ್ಮತಿ ಸೂಚಿಸಿ ದಿಲ್ಲಿಯ ಎಲ್ಲಾ ಮುಖಂಡರ ನಡುವೆ ಮಾತನಾಡುವುದಾಗಿ /ಮಾತನಾಡಿರುವುದಾಗಿ ಡೀಲು ಕುದುರಿಸುವ  ವಿಡಿಯೋ ತುಣುಕು ಬಹಿರಂಗಗೊಂಡಿದೆ. ಈ ಬಗ್ಗೆ ರೈತ ಹೋರಾಟಗಾರರು ರೊಚ್ಚಿಗೆದ್ದಿದ್ದಾರೆ.

ಆಮ್‌ ಆದ್ಮಿ ಪಕ್ಷದ ಮೂಲಕ ರಾಜಕೀಯ

ಪಂಜಾಬ್‌ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಬೀಗುತ್ತಿದ್ದ ಆಮ್‌ ಆದ್ಮಿ ಪಕ್ಷವು (AAP) ಕರ್ನಾಟಕದಲ್ಲಿಯೂ ಪಕ್ಷವನ್ನು ಬಲಪಡಿಸಲು ಮುಂದಾಗಿದ್ದು, ಇದರ ಮೊದಲ ಹಂತವಾಗಿ ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್‌ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿತ್ತು. ಅವರೊಂದಿಗೆ ರೈತ ನಾಯಕರಾದ ಎಚ್‌. ಆರ್‌. ಬಸವರಾಜಪ್ಪ, ಪ್ರಕಾಶ್‌ ಕಮ್ಮರಡಿ ಮತ್ತಿತರರೂ  ಆಮ್‌ ಆದ್ಮಿಯ ನಾಯಕ , ದೆಹಲಿಯ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಸಮ್ಮುಖದಲ್ಲಿ ಪಕ್ಷ ಸೇರಿದ್ದರು.

ಕೋಡಿಹಳ್ಳಿ ಚಂದ್ರಶೇಖರ್‌
ಕೋಡಿಹಳ್ಳಿ ಚಂದ್ರಶೇಖರ್‌

ಈ ಸಂದರ್ಭದಲ್ಲಿ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್‌ ʼʼಆಮ್‌ ಆದ್ಮಿ ಪಕ್ಷ ರೈತ ಸಂಘದ ರಾಜಕೀಯ ಮುಖವಾಣಿಯಾಗಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ರೈತನಾಯಕರೂ ಸ್ಪರ್ಧಿಸಲಿದ್ದಾರೆ” ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ರೈತ ಸಂಘದ ಇತರ ನಾಯಕರು ವಿರೋಧ ವ್ಯಕ್ತಪಡಿಸಿದ್ದರು. ಈ ಬಗ್ಗೆ ರೈತ ಸಂಘದಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿರುವ ಹೊತ್ತಿಗೇ ಚಂದ್ರಶೇಖರ್‌ ಮೇಲೆ ಹಲವು ಆರೋಪಗಳು ಕೇಳಿಬಂದಿವೆ.

ಇದನ್ನೂ ಓದಿ | ಕೋಡಿಹಳ್ಳಿ ಚಂದ್ರಶೇಖರ್‌ ಮೇಲೆ ಮಸಿ ಎರಚಿ ಪ್ರತಿಭಟನೆ- ಮಾರಾಮಾರಿ

ಪ್ರಮಾಣಿಕತೆಯನ್ನೇ ರಾಜಕೀಯ ಆಸ್ತ್ರವಾಗಿಸಿಕೊಂಡಿರುವ ಆಮ್‌ ಆದ್ಮಿ ಪಕ್ಷ ರಾಜ್ಯದಲ್ಲಿನ ಈ ಬೆಳವಣಿಗೆ ಕುರಿತು ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇಷ್ಟೆಲ್ಲಾ ಆದ ಮೇಲೆಯೂ ಆಪ್‌ ಕೋಡಿಹಳ್ಳಿ ಚಂದ್ರಶೇಖರ್‌ ಅವರನ್ನು ಪಕ್ಷದಲ್ಲಿಯೇ ಇಟ್ಟುಕೊಳ್ಳುತ್ತದೆಯೇ ಎಂಬುದರ ಕುರಿತು ಈಗ ಎಲ್ಲೆಡೆ ಕುತೂಹಲ ಮೂಡಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು

Bhajanotsava: ಓಂಕಾರ ಆಶ್ರಮದಲ್ಲಿ ನಿರಂತರ ಭಜನೋತ್ಸವ ಸಂಪನ್ನ

Bhajanotsava: ಬೆಂಗಳೂರಿನ ಕೆಂಗೇರಿ- ಉತ್ತರಹಳ್ಳಿ ಮುಖ್ಯರಸ್ತೆಯ ಶ್ರೀನಿವಾಸಪುರದ ಓಂಕಾರ ಆಶ್ರಮದಲ್ಲಿ ನಿರಂತರ ಭಜನೋತ್ಸವದ ಸಮಾರೋಪ ಸಮಾರಂಭ ನೆರವೇರಿದೆ.

VISTARANEWS.COM


on

Bhajanotsava
Koo

ಬೆಂಗಳೂರು: ನಶಿಸಿ ಹೋಗುತ್ತಿರುವ ಭಜನಾ ಪದ್ಧತಿಯ ಪುನರುತ್ಥಾನ, ವಿಶ್ವಶಾಂತಿ ಹಾಗೂ ವಿಶ್ವಕ್ಕೆ ಜ್ಞಾನದ ಬೆಳಕನ್ನು ಹರಡಿದ ಹಿಂದು ಧರ್ಮದ ಸಂಘಟನೆಯ ನಿಟ್ಟಿನಲ್ಲಿ ಗಿರಿನಗರದ ಅಖಿಲ ಕರ್ನಾಟಕ ಭಜನಾ ಪರಿಷತ್ತು ವತಿಯಿಂದ ನಗರದ ಕೆಂಗೇರಿ- ಉತ್ತರಹಳ್ಳಿ ಮುಖ್ಯರಸ್ತೆಯ ಶ್ರೀನಿವಾಸಪುರದ ಓಂಕಾರ ಆಶ್ರಮದಲ್ಲಿ ನಿರಂತರ ಭಜನೋತ್ಸವದ (Bhajanotsava) ಸಮಾರೋಪ ಸಮಾರಂಭ ಬುಧವಾರ ನೆರವೇರಿತು.

ಓಂಕಾರ ಆಶ್ರಮದ ಪೂಜ್ಯ ಶ್ರೀ ಮಧುಸೂದನಂದಪುರಿ ಸ್ವಾಮಿಗಳು, ಕೆ.ಆರ್. ಪುರಂ ರಾಮಕೃಷ್ಣ ವಿವೇಕಾನಂದ ಸಾಧನ ಕೇಂದ್ರದ ಚಂದ್ರೇಶಾನಂದಜಿ ಅವರ ದಿವ್ಯ ಸಾನ್ನಿಧ್ಯದಲ್ಲಿ ಕರ್ನಾಟಕ ದಕ್ಷಿಣ ಪ್ರಾಂತ ಸಂಘ ಚಾಲಕರಾದ ಜಿ.ಎಸ್ ಉಮಾಪತಿ ದಿಕ್ಸೂಚಿ ಭಾಷಣ ಮಾಡಿದರು.

ಆಯೋಜಕರಾದ ಅಧ್ಯಕ್ಷ ಡಾ.ಕೆ ವಿ ಮುರಳಿಧರ ಶರ್ಮ ಪ್ರಾಸ್ತವಿಕ ಮಾತುಗಳನ್ನು ಆಡುತ್ತಾ, ಸತ್ಸಂಗ ಭಜನಾ ಮಹಾ ಮಂಡಳಿ ಸಭಾ ರಾಷ್ಟ್ರಮಟ್ಟದಲ್ಲಿ ಭಜನಾಮೇಳ ಆಯೋಜಿಸುವಲ್ಲಿ ಒಂದು ದಿಟ್ಟ ಹೆಜ್ಜೆ ಇಟ್ಟು, 365 ದಿನಗಳ ನಿರಂತರ ಭಜನೋತ್ಸವವನ್ನು ಆರಂಭಿಸಿ, ನಶಿಸಿ ಹೋಗುತ್ತಿರುವ ಭಜನಾ ಪದ್ಧತಿಯ ಪುನರುತ್ಥಾನ, ವಿಶ್ವಶಾಂತಿಗಾಗಿ ವಿಶ್ವಕ್ಕೆ ಜ್ಞಾನದ ಬೆಳಕನ್ನು ಹರಡಿದ ಹಿಂದು ಧರ್ಮದ ಸಂಘಟನೆಯ ನಿಟ್ಟಿನಲ್ಲಿ ಆಯೋಜಿಸಿದೆ. ಬೆಂಗಳೂರು ಮಹಾನಗರದ ಹಲವಾರು ಭಜನಾ ಮಂಡಳಿಗಳನ್ನು ಒಂದೇ ವೇದಿಕೆಯಲ್ಲಿ ತರುವ ಉದ್ದೇಶದಿಂದ 2019-20 ರಲ್ಲಿ 365 ದಿನಗಳ ನಿರಂತರ ಭಜನಾ ಉತ್ಸವವನ್ನು ಏರ್ಪಡಿಸಲಾಗಿತ್ತು. ಅದರ ಸಮಾರೋಪ ಸಮಾರಂಭ ಇದಾಗಿದ್ದು, ಮುಂದಿನ ದಿನಗಳಲ್ಲಿ ನಗರದ ನಾನಾ ಭಾಗಗಳಲ್ಲಿ ಧರ್ಮ ಜಾಗೃತಿ ಮಾಡಲು ಸಂಕಲ್ಪ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಸಮಾರಂಭದ ವೇದಿಕೆಯಲ್ಲಿ ಅಖಿಲ ಭಾರತ ಬ್ರಾಹ್ಮಿನ್ ಫೆಡರೇಷನ್‌ನ ಮಾಲಿನಿ, ಗ್ಲೋಬಲ್ ವಿಷ್ಣು ಸಹಸ್ರನಾಮ ಫೆಡರೇಶನ್ ನಿರ್ದೇಶಕಿ ಮಂಗಳ ಭಾಸ್ಕರ್, ಎಕೆ ಬಿಎಮ್ಎಸ್ ಉಪಾಧ್ಯಕ್ಷ ಎಂ.ಆರ್. ಶಿವಶಂಕರ್, ಕೊಟ್ಟೂರು ಅಮರನಾಥ ಯಾತ್ರಾ ಸೇವಾ ಸಮಿತಿಯ ಕಾರ್ಯದರ್ಶಿ ಸಾಯಿ ಸತೀಶ್ ಕೋರಗಲ್ ಮತ್ತು ಎಕೆ ಬಿಪಿಯ ಕಾರ್ಯದರ್ಶಿ ಮಲ್ಲಿಕಾರ್ಜುನ ಟಿ.ಎಸ್. ಉಪಸ್ಥಿತರಿದ್ದರು.

ಇದನ್ನೂ ಓದಿ | ರಾಜಮಾರ್ಗ ಅಂಕಣ: ಶ್ರೀರಾಮ ಆಗುವುದು ಕಷ್ಟ, ರಾವಣ ಆಗುವುದು ಕೂಡ ಕಷ್ಟವೇ!

ಹಿರಿಯ ಭಜನಾ ಸಂಘಟಕ ಕೀರ್ತಿಶೇಷ ಡಾ. ಬ್ರಹ್ಮತೇಜ ವೆಂಕಟರಾಮಯ್ಯ ಮಾರ್ಗದರ್ಶನದಲ್ಲಿ ಅಖಿಲ ಕರ್ನಾಟಕ ಸತ್ಸಂಗ ಭಜನಾ ಮಹಾಮಂಡಳಿಯ ವತಿಯಿಂದ ವರ್ಷಾದ್ಯಂತ ನಡೆದ ಭಜನೋತ್ಸವದಲ್ಲಿ ಪಾಲ್ಗೊಂಡ ಅನೇಕ ಭಜನಾ ಮಂಡಳಿಗಳಿಗೆ ಪ್ರಶಸ್ತಿ ಪತ್ರ ಮತ್ತು ಸ್ಮರಣೆಕೆಯನ್ನು ವಿತರಿಸಲಾಯಿತು. ವಿದ್ವಾನ್ ಖಾಸಿಂಮಲ್ಲಿಗೆ ಮಡುವು ನೇತೃತ್ವದ ತಂಡದ ಮಕ್ಕಳಿಂದ ವಿಶೇಷ ಶಿವ ತಾಂಡವ ಸ್ತೋತ್ರದ ಪ್ರಸ್ತುತಿ ನಡೆಯಿತು.

Continue Reading

ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರದ ವಾಯುದೇವ, ರಾಮಕೃಷ್ಣ ದೇವರ ಸನ್ನಿಧಾನದಲ್ಲಿ ಶತ ಚಂಡಿಕಾ ಯಾಗ ಸಂಪನ್ನ

ಚಿಕ್ಕಬಳ್ಳಾಪುರ ಸಮೀಪದ ವಾಯುದೇವರ ಮತ್ತು ರಾಮಕೃಷ್ಣ ದೇವರ ಸನ್ನಿಧಾನದಲ್ಲಿ ಲೋಕೇಶ ಆಚಾರ್ಯರ ನೇತೃತ್ವದಲ್ಲಿ ಶತ ಚಂಡಿಕಾ ಯಾಗ ಸಂಪನ್ನಗೊಂಡಿತು.

VISTARANEWS.COM


on

Shata Chandika Yaga
Koo

ಚಿಕ್ಕಬಳ್ಳಾಪುರ: ನಗರ ಸಮೀಪದ ವಾಯುದೇವರ ಮತ್ತು ರಾಮಕೃಷ್ಣ ದೇವರ ಸನ್ನಿಧಾನದಲ್ಲಿ ಲೋಕೇಶ ಆಚಾರ್ಯರ ನೇತೃತ್ವದಲ್ಲಿ ಬುಧವಾರ ಶತ ಚಂಡಿಕಾ ಯಾಗ ನೆರವೇರಿತು. ಹರಿದಾಸ ಮಯ್ಯ ಮತ್ತು ವಿಶ್ವಾಸ ಆಚಾರ್ಯ ಮತ್ತತರ ತಂಡ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.

ಲೋಕ ಕಲ್ಯಾಣಕ್ಕಾಗಿ, ದೇಶದಲ್ಲಿ ಒಳ್ಳೆಯ ಮಳೆ ಬೆಳೆಯಾಗಲಿ ಎಂದು ಪ್ರಾರ್ಥಿಸಿ ಯಾಗ ಮಾಡಲಾಯಿತು. ಸುಮಾರು 40ಕ್ಕೂ ಹೆಚ್ಚಿನ ನಮ್ಮ ವಿದ್ಯಾಪೀಠದ ಅನೇಕ ವಿದ್ವಾಂಸರುಗಳು ಭಾಗವಹಿಸಿದ್ದರು. ವಿದ್ವಾಂಸರಾದ ಯು.ಕೇಶವಾಚಾರ್ಯರು ಶತಚಂಡಿಕ ಯಾಗವನ್ನು ನಿರ್ವಿಘ್ನವಾಗಿ ನೆರವೇರಿಸಿಕೊಟ್ಟರು.

ಇದನ್ನೂ ಓದಿ | ರಾಜಮಾರ್ಗ ಅಂಕಣ: ವಾಲ್ಮೀಕಿ ರಾಮಾಯಣ vs ಹನುಮಾನ್ ರಾಮಾಯಣ

Continue Reading

ಕರ್ನಾಟಕ

Prajwal Revanna Case: ಸಂಸದ ಪ್ರಜ್ವಲ್ ರೇವಣ್ಣ ಗೆಸ್ಟ್ ಹೌಸ್‌ನಲ್ಲಿಲ್ಲ ಸಿಸಿ ಕ್ಯಾಮೆರಾ?; ಹಲವು ಅನುಮಾನ

Prajwal Revanna Case: ಹಾಸನದಲ್ಲಿ ಮುಖ್ಯ ರಸ್ತೆ ಪಕ್ಕದಲ್ಲೇ ಸಂಸದ ಪ್ರಜ್ವಲ್‌ ರೇವಣ್ಣ ಅವರ ಹೌಸ್‌ ಇದ್ದರೂ ಅಲ್ಲಿ ಸಿಸಿ ಕ್ಯಾಮೆರಾಗಳು ಇಲ್ಲದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

VISTARANEWS.COM


on

Prajwal Revanna Case
Koo

ಹಾಸನ: ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್‌ ಪ್ರಕರಣದ (Prajwal Revanna Case) ಬಗ್ಗೆ ಸಾಕಷ್ಟು ಆಕ್ರೋಶಗಳು ವ್ಯಕ್ತವಾಗುತ್ತಿದ್ದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಗಳು ಕೇಳಿಬರುತ್ತಿವೆ. ಈ ನಡುವೆ ಪ್ರಜ್ವಲ್‌ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊಗಳನ್ನು ಚಿತ್ರೀಕರಣ ಮಾಡಿರುವುದು ಬೇರೆ ಎಲ್ಲೂ ಅಲ್ಲ, ನಗರದ ಎಂಪಿ ಗೆಸ್ಟ್‌ ಹೌಸ್‌ನಲ್ಲೇ ಎನ್ನಲಾಗಿದೆ. ಮತ್ತೊಂದೆಡೆ ಮುಖ್ಯ ರಸ್ತೆ ಪಕ್ಕದಲ್ಲೇ ಗೆಸ್ಟ್‌ ಹೌಸ್‌ ಇದ್ದರೂ ಅಲ್ಲಿ ಸಿಸಿ ಕ್ಯಾಮೆರಾಗಳು ಇಲ್ಲದಿರುವುದರಿಂದ ಹಲವು ಅನುಮಾನಗಳು ವ್ಯಕ್ತವಾಗಿದೆ.

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಎಂಪಿ ಗೆಸ್ಟ್ ಹೌಸ್‌, ರಸ್ತೆ ಪಕ್ಕದಲ್ಲೇ ಇದ್ದರೂ ಕಟ್ಟಡದ ಹೊರಗೆ ಹಾಗೂ ಒಳಗೆ ಎಲ್ಲೂ ಸಿಸಿ ಕ್ಯಾಮೆರಾ ಪತ್ತೆಯಾಗಿಲ್ಲ. ಸರ್ಕಾರಿ ಬಂಗಲೆಗೆ ಸಿಸಿ ಕ್ಯಾಮೆರಾ ಇಲ್ಲದಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಯಾರು ಬಂದರು, ಹೋದರು ಎಂಬ ಸಾಕ್ಷಿಗೂ ಸಿಸಿ ಕ್ಯಾಮೆರಾಗಳು ಇಲ್ಲದಂತಾಗಿದೆ.

ಇನ್ನು ಪ್ರಜ್ವಲ್‌ ವಿರುದ್ಧ ಪ್ರಕರಣದ ದಾಖಲಾದ ಬಳಿಕ ಹಾಸನ ಎಂಪಿ ಗೆಸ್ಟ್ ಹೌಸ್ ಖಾಲಿ ಖಾಲಿಯಾಗಿದ್ದು, ಅಲ್ಲಿಗೆ ಬಂದಿರುವ ಪತ್ರಗಳು ಬಾಗಿಲಿನಲ್ಲೇ ಸಿಕ್ಕಿಸಿರುವುದು ಕಂಡುಬಂದಿದೆ. ಪತ್ರಗಳು ಬಂದು ಎರಡು ದಿನ ಕಳೆದರೂ ಯಾರೂ ತೆಗೆದುಕೊಂಡಿಲ್ಲ.

ಸಂಸದರಾಗಿದ್ದಾಗ ಹಾಸನದ ಎಂಪಿ ಕ್ವಾರ್ಟರ್ಸ್‌ ​​ದೇವೇಗೌಡರ ಅಧಿಕೃತ ನಿವಾಸವಾಗಿತ್ತು. ಬಳಿಕ ಸಂಸದರಾಗಿ ಪ್ರಜ್ವಲ್ ರೇವಣ್ಣ ಆಯ್ಕೆಯಾಗುತ್ತಲೇ ಪ್ರಜ್ವಲ್​​ಗೆ ಮನೆ ಹಸ್ತಾಂತರ ಮಾಡಲಾಗಿತ್ತು, ಹಾಸನಕ್ಕೆ ಬಂದಾಗ ಸಂಸದರ ನಿವಾಸದಲ್ಲೇ ಪ್ರಜ್ವಲ್ ವಾಸ್ತವ್ಯ ಹೂಡುತ್ತಿದ್ದರು. ಚುನಾವಣಾ ಸಮಯದಲ್ಲಿ ಇದೇ ಮನೆಯಲ್ಲಿ ಪ್ರಜ್ವಲ್ ರೇವಣ್ಣ ನೆಲೆಸಿದ್ದರು. ಅಧಿಕಾರಿಗಳ ಸಭೆ ಸೇರಿದಂತೆ ಜೆಡಿಎಸ್ ಮುಖಂಡರ ಸಭೆಗಳನ್ನು ಪ್ರಜ್ವಲ್ ನಡೆಸುತ್ತಿದ್ದರು.

ಇದನ್ನೂ ಓದಿ | Prajwal Revanna: ಜರ್ಮನಿಯಲ್ಲಿ ಪ್ರಜ್ವಲ್‌ ಅಜ್ಞಾತವಾಸ, ಮಲೇಷ್ಯಾದಲ್ಲಿ ಕಾರ್ತಿಕ್‌ ಹಾಲಿಡೇಸ್?

ಮಾಜಿ ಪ್ರಧಾನಿ ದೇವೇಗೌಡರು ಹಾಸನದ ಸಂಸದರಾಗಿದ್ದಾಗ ಸರ್ಕಾರದಿಂದ ನಿವೇಶನ ಮಂಜೂರಾಗಿ, ಅವರ ವಾಸ್ತವ್ಯಕ್ಕಾಗಿ 2019ರಲ್ಲಿ ಕಟ್ಟಡ ನಿರ್ಮಾಣ ಮಾಡಲಾಗಿತ್ತು. ಕಟ್ಟಡದಲ್ಲಿ ಒಟ್ಟು ನಾಲ್ಕು ಕೊಠಡಿ ಇದ್ದು, ನೆಲ ಮಹಡಿಯಲ್ಲಿ ಎರಡು ಹಾಗೂ ಮೊದಲ ಅಂತಸ್ತಿನಲ್ಲಿ ಎರಡು ಕೊಠಡಿಗಳಿವೆ. ದೇವೇಗೌಡರು ಹಾಸನಕ್ಕೆ ಬಂದಾಗ ಹೆಚ್ಚಾಗಿ ಇದೇ ಗೆಸ್ಟ್ ಹೌಸ್​ನಲ್ಲಿ ಉಳಿಯುತ್ತಿದ್ದರು.

Continue Reading

ಕರ್ನಾಟಕ

Bangalore University: ಬೆಂಗಳೂರು ವಿವಿ ಕ್ಯಾಂಪಸ್‌ನಲ್ಲಿ ಪಿಎಚ್‌ಡಿ ವಿದ್ಯಾರ್ಥಿ ಅನುಮಾನಾಸ್ಪದ ಸಾವು

Bangalore University: ಬೆಂಗಳೂರು ವಿವಿ ಜ್ಞಾನಭಾರತಿ ಕ್ಯಾಂಪಸ್‌ನ ಹಾಸ್ಟೆಲ್‌ನಲ್ಲಿ ಬೆಳಗ್ಗೆ ತಿಂಡಿ ತಿಂದು ಮಲಗಿದಾತ ಅನುಮಾನಾಸ್ಪವಾಗಿ ಮೃತಪಟ್ಟಿದ್ದಾನೆ.

VISTARANEWS.COM


on

Bangalore University
Koo

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್‌ನ ಹಾಸ್ಟೆಲ್‌ನಲ್ಲಿ ಪಿಎಚ್‌ಡಿ ವಿದ್ಯಾರ್ಥಿ ಅನುಮಾನಾಸ್ಪವಾಗಿ ಮೃತಪಟ್ಟಿರುವ ಘಟನೆ ನಡೆದಿದೆ. ಬೆಳಗ್ಗೆ ತಿಂಡಿ ತಿಂದು ಮಲಗಿದಾತ ಹೇಗೆ ಸಾವನ್ನಪ್ಪಿದ್ದಾನೆ ಎಂಬುವುದು ತಿಳಿದುಬಂದಿಲ್ಲ.

ಚಿಕ್ಕಬಳ್ಳಾಪುರ ಮೂಲದ ರಂಗನಾಥ್ ನಾಯಕ್‌(27) ಮೃತ ವಿದ್ಯಾರ್ಥಿ. ಪಿಎಚ್‌ಡಿ ವ್ಯಾಸಾಂಗ ಮಾಡುತ್ತಿದ್ದ ವಿದ್ಯಾರ್ಥಿ ಕಳೆದ ಕೆಲ ತಿಂಗಳುಗಳ ಹಿಂದೆ ಬಸ್ ಅಪಘಾತದಲ್ಲಿ ಗಾಯಗೊಂಡಿದ್ದ. ನಂತರ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರಿಂದ ಆಯುರ್ವೇದಿಕ್ ಚಿಕಿತ್ಸೆ ಪಡೆಯುತ್ತಿದ್ದ ಎನ್ನಲಾಗಿದೆ.

ಬುಧವಾರ ಬೆಳಗ್ಗೆ ಬೆಳಗ್ಗೆ ಕ್ಯಾಂಟೀನ್‌ಗೆ ಹೋಗಿ ತಿಂಡಿ ತಿಂದು ರೂಮಿಗೆ ಹೋಗಿ ರೂಮ್‌ ಲಾಕ್ ಹಾಕಿಕೊಂಡಿದ್ದ. ಮಧ್ಯಾಹ್ನ ರೂಮ್‌ಮೇಟ್ ಹೋಗಿ ಬಾಗಿಲು ಬಡಿದಾಗ ತೆಗೆದಿಲ್ಲ. ಡೋರ್ ಒಡೆದು ನೋಡಿದಾಗ ವಿದ್ಯಾರ್ಥಿ ಮೃತಪಟ್ಟಿದ್ದ. ಮೇಲ್ನೋಟಕ್ಕೆ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ | Neha Murder Case: ಮಗಳ ಸಾವಿಗೆ ನ್ಯಾಯ ದೊರಕಿಸಿಕೊಡಿ: ಅಮಿತ್‌ ಶಾಗೆ ನೇಹಾ ತಂದೆ ಮನವಿ

ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಜ್ಞಾನ ಭಾರತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನನ್ನ ಪ್ರೇಯಸಿಗೆ ಮೆಸೇಜ್ ಮಾಡ್ತೀಯಾ ಎಂದು ಬೆರಳು ಕಟ್!

assault case finger cut basavanagudi

ಬೆಂಗಳೂರು: ತನ್ನ ಪ್ರಿಯತಮೆ (Lover) ಜೊತೆ ಗೆಳೆತನ‌ (Friendship) ಬೆಳೆಸಿದ್ದಕ್ಕೆ ಯುವಕನ ಮೇಲೆ ಮಾಜಿ ಪ್ರಿಯಕರ ಲಾಂಗು ಮಚ್ಚುಗಳಿಂದ ಹಲ್ಲೆ ನಡೆಸಿ (Assault Case) ಯುವಕನೊಬ್ಬನ ಬೆರಳುಗಳನ್ನೇ ಕತ್ತರಿಸಿ (Finger cut) ಹಾಕಿದ್ದಾನೆ. ಬಸವನಗುಡಿ ಬುಲ್ ಟೆಂಬಲ್ ರಸ್ತೆಯಲ್ಲಿರುವ ಪುಲ್ವಾಡಿ ಫ್ಲವರ್ ಶಾಪ್‌ನಲ್ಲಿ ಏಪ್ರಿಲ್ 28ರಂದು ರಾತ್ರಿ 8.30ಕ್ಕೆ ಈ ಘಟನೆ (Crime news) ನಡೆದಿದೆ.

ಫ್ಲವರ್‌ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ಹರ್ಷಿತ್ ಎಂಬ ಯುವಕನ ಮೇಲೆ ಹಲ್ಲೆ ನಡೆಸಲಾಗಿದ್ದು, ಶಶಾಂಕ್ ಹಾಗೂ ಹಾಗೂ ಚಂದನ್ ಎಂಬವರು ಲಾಂಗ್‌ ಬೀಸಿದ್ದಾರೆ. ಲಾಂಗು- ಮಚ್ಚಿನಿಂದ ಹಲ್ಲೆ ನಡೆಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದರೂ ಹರ್ಷಿತ್‌ನ ಬಲಗೈನ ಹೆಬ್ಬೆರಳು ಕಟ್ ಆಗಿದೆ. ಎಡಗೈನ ಮುಂಗೈಯನ್ನು ಎರಡು ತುಂಡು ಮಾಡಿದ್ದಾರೆ.

ಪ್ರಕರಣದ ಹಿನ್ನೆಲೆ ಹೀಗಿದೆ: ಬಿಕಾಂ ಮುಗಿಸಿದ್ದ ಹರ್ಷಿತ್ ತಂದೆಯ ಫ್ಲವರ್ ಡೆಕೊರೇಷನ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಅದೇ ಕಟ್ಟಡದಲ್ಲಿ ಒಂದು ಡಯೋಗ್ನಾಸ್ಟಿಕ್ ಸೆಂಟರ್ ಇದೆ. ಡಯೋಗ್ನಾಸ್ಟಿಕ್ ಸೆಂಟರ್‌ನಲ್ಲಿ ಯುವತಿ ಕೆಲಸ ಮಾಡುತ್ತಿದ್ದಳು. ಚಿಲ್ಲರೆ ಕೇಳಲು ಹೋಗಿ‌ ಬಂದಾಗ ಯುವತಿ ಮತ್ತು ಹರ್ಷಿತ್ ಮಧ್ಯೆ ಗೆಳೆತನ ಬೆಳೆದಿದೆ. ಅದೇ ಗೆಳೆತನ ನಂಬರ್ ಎಕ್ಸ್‌ಚೇಂಜ್ ಆಗಿ ಚಾಟ್ ಮಾಡುವ ಹಂತಕ್ಕೆ ಬಂದಿತ್ತು.

ಆದರೆ ಆ ಯುವತಿಯನ್ನು ಪ್ರೀತಿ ಮಾಡುತ್ತಿದ್ದ ಆರೋಪಿ ಶಶಾಂಕ್‌ಗೆ, ಇವರಿಬ್ಬರ ಮಧ್ಯೆ ಏನೋ ನಡೆಯುತ್ತಿದೆ ಅನ್ನುವ ಅನುಮಾನ ಮೂಡಿತ್ತು. ಯುವತಿಯ ಮೊಬೈಲ್ ಪರಿಶೀಲನೆ ವೇಳೆ ಚಾಟ್ ಮಾಡಿರುವುದು ಕಂಡಿದೆ. ಇದರಿಂದ ಶಶಾಂಕ್ ಕೋಪದಿಂದ ಕುದ್ದು ಹೋಗಿದ್ದ. ಕೇವಲ ಸ್ನೇಹಿತರ ನಡುವಿನ ರೀತಿಯ ಮೆಸೇಜ್‌ಗಳಿದ್ದರೂ ಕೋಪದಿಂದ ಕುರುಡಾಗಿದ್ದ ಶಶಾಂಕ್‌ ಅದನ್ನು‌ ಸಹಿಸಿಕೊಳ್ಳಲು ಸಿದ್ಧವಿರಲಿಲ್ಲ. ಹರ್ಷಿತ್‌ಗೆ ಒಂದು ಗತಿ ಕಾಣಿಸಬೇಕು ಎಂದು ನಿರ್ಧರಿಸಿದ್ದ.

ಏಪ್ರಿಲ್ 28ರಂದು ಸ್ನೇಹಿತ ಚಂದನ್‌ನನ್ನು ಕರೆಸಿಕೊಂಡಿದ್ದ. ಇಬ್ಬರೂ ಬಾರ್‌ನಲ್ಲಿ ಕುಡಿದು ಲಾಂಗ್ ಜೊತೆಗೆ ಹರ್ಷಿತ್ ಅಂಗಡಿಗೆ ಬಂದಿದ್ದಾರೆ. ಬಂದವರೇ ಹರ್ಷಿತ್ ಮೇಲೆ ಯದ್ವಾತದ್ವಾ ಲಾಂಗ್‌ ಬೀಸಿ ಪರಾರಿ ಆಗಿದ್ದಾರೆ. ಕೈಯಿಂದ ರಕ್ತ ಸೋರುತ್ತಿದ್ದರೂ‌ ಹರ್ಷಿತ್‌ ಫುಟ್‌ಪಾತ್ ಮೇಲೆ ಬಂದು ನಿಂತಿದ್ದಾನೆ. ಕೆಲವೇ ಹೊತ್ತಲ್ಲಿ ಫುಟ್‌ಪಾತ್ ರಕ್ತದ ಕೋಡಿಯಾಗಿದೆ. ತುಂಡಾದ ಬೆರಳನ್ನು ಬಟ್ಟೆಯಲ್ಲಿ ಸುತ್ತಿಕೊಂಡು ಹರ್ಷಿತ್‌ ಆಸ್ಪತ್ರೆಗೆ ಹೋಗಿದ್ದಾನೆ.

ಹರ್ಷಿತ್‌ನನ್ನು ಪಕ್ಕದಲ್ಲೇ ಇರುವ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿಗಳನ್ನು ಶಂಕರಪುರ ಠಾಣೆ ಪೊಲೀಸರು ಹೆಡೆಮುರಿ ಕಟ್ಟಿ ವಿಚಾರಿಸಿಕೊಳ್ಳುತ್ತಿದ್ದಾರೆ.

Physical Abuse: ಲೈಂಗಿಕ ಕಿರುಕುಳ, ಹೆಂಡತಿಯನ್ನು ಕಳಿಸುವಂತೆ ಗಂಡನಿಗೆ ಒತ್ತಡ

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರು ಹೆಣ್ಮಕ್ಕಳಿಗೆ ಎಷ್ಟು ಸೇಫ್ ಎಂಬ ಪ್ರಶ್ನೆ ಮತ್ತೆ ಮತ್ತೆ ಎದುರಾಗುತ್ತಲೇ ಇದೆ. ಇಂಥ ಕರಾಳ ಪ್ರಕರಣಗಳು ಘಟಿಸುತ್ತಲೇ ಇವೆ. ನಿನ್ನೆ ರಾತ್ರಿ ಬಿಹಾರ ಮೂಲದ ದಂಪತಿಗೆ ಕರಾಳ ಅನುಭವ ಆಗಿದ್ದು, ಅದರಿಂದ ಪಾರಾಗಲು ಇಬ್ಬರೂ ಒದ್ದಾಡಿದ್ದಾರೆ.

ನಗರದಲ್ಲಿ ಪದೇ ಪದೆ ಬೆಳಕಿಗೆ ಬರುತ್ತಿರುವ ಹೆಣ್ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಇದೂ ಒಂದು ಸೇರ್ಪಡೆ. ರಾತ್ರಿ ಸಮಯದಲ್ಲಿ ಯುವತಿಯೊಬ್ಬಳಿಗೆ ಪುಂಡರು ಲೈಂಗಿಕ ಕಿರುಕುಳ ನೀಡಿದ್ದಾರೆ. ನಡು ರಸ್ತೆಯಲ್ಲೇ ಯುವತಿಗೆ ಲೈಂಗಿಕ ಕಿರುಕುಳ ಮಾಡಿದ್ದಾರೆ ಎಂದು ಯುವತಿ ಹಾಗೂ ಆಕೆಯ ಪತಿ ಆರೋಪಿಸಿದ್ದಾರೆ. ಕೊಡಿಗೆಹಳ್ಳಿಯ ವಿರೂಪಾಕ್ಷಪುರದಲ್ಲಿ ನಿನ್ನೆ ರಾತ್ರಿ 10:30ರ ಸುಮಾರಿಗೆ ನಡೆದ ಘಟನೆ ಇದು.

ಇದನ್ನೂ ಓದಿ: Physical Abuse: ಮಾನಸಿಕ ಅಸ್ವಸ್ಥ ಬಾಲಕಿ ಮೇಲೆ ಅತ್ಯಾಚಾರ ಎಸಗಿದವನಿಗೆ 106 ವರ್ಷ ಜೈಲು ಶಿಕ್ಷೆ

ಜೊತೆಗಿದ್ದ ದಂಪತಿಯ ಬಳಿ ಬಂದ ಮೂರ್ನಾಲ್ಕು ಪುಂಡರು, ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಯುವತಿಗೆ ಒತ್ತಾಯ ಮಾಡಿದ್ದಾರೆ. ಒಪ್ಪದಿದ್ದಾಗ ಕಿಡ್ನ್ಯಾಪ್ ಮಾಡುವ ಬೆದರಿಕೆ ಹಾಕಿದ್ದಾರೆ. ಈ ದಂಪತಿ ಬಿಹಾರ ಮೂಲದವರಾಗಿದ್ದು, ಈ ದಂಪತಿಗೆ ನಿನ್ನೆ ರಾತ್ರಿ ಕರಾಳ ಅನುಭವವಾಗಿದೆ. ಹೆಂಡತಿಯನ್ನು ಕಳಿಸುವಂತೆ ಪುಂಡರು ಗಂಡನಿಗೆ ಬೆದರಿಕೆ ಹಾಕಿದ್ದಾರೆ. ಗಂಡನ ಸ್ನೇಹಿತನಿಂದಲೇ ಕೃತ್ಯ ನಡೆದಿದೆ.

ಇದನ್ನೂ ಓದಿ: Hassan Pen Drive Case: ಪ್ರಜ್ವಲ್ ರೇವಣ್ಣ ಮೃಗಕ್ಕಿಂತ ಕಡೆ; ಕಿಡಿ ಕಾರಿದ ಬಹುಭಾಷಾ ನಟಿ ಪೂನಂ ಕೌರ್

ಇದರಿಂದ ಭಯಭೀತರಾದ ದಂಪತಿ ಸಹಾಯ ಕೋರಿ ಬೆಂಗಳೂರು ಪೋಲಿಸರಿಗೆ ಫೋನ್ ಮಾಡಿದರೂ ಸರಿಯಾದ ರೆಸ್ಪಾನ್ಸ್ ಸಿಕ್ಕಿಲ್ಲ. ಕಿರುಕುಳದ ಬಗ್ಗೆ ಬೆಂಗಳೂರು ಪೋಲಿಸ್ ಸಹಾಯವಾಣಿಗೆ ಕರೆ ಮಾಡಿದ್ದರು. ಬೆಂಗಳೂರು ಪೋಲಿಸರು ಸ್ಪಂದಿಸದಿದ್ದುದರಿಂದ ಬಿಹಾರ ಪೋಲಿಸರಿಗೆ ದಂಪತಿ ಫೋನ್ ಮಾಡಿದ್ದಾರೆ. ಕೊಡಿಗೆಹಳ್ಳಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Continue Reading
Advertisement
Bhajanotsava
ಬೆಂಗಳೂರು22 mins ago

Bhajanotsava: ಓಂಕಾರ ಆಶ್ರಮದಲ್ಲಿ ನಿರಂತರ ಭಜನೋತ್ಸವ ಸಂಪನ್ನ

Shata Chandika Yaga
ಚಿಕ್ಕಬಳ್ಳಾಪುರ2 hours ago

ಚಿಕ್ಕಬಳ್ಳಾಪುರದ ವಾಯುದೇವ, ರಾಮಕೃಷ್ಣ ದೇವರ ಸನ್ನಿಧಾನದಲ್ಲಿ ಶತ ಚಂಡಿಕಾ ಯಾಗ ಸಂಪನ್ನ

Prajwal Revanna Case
ಕರ್ನಾಟಕ2 hours ago

Prajwal Revanna Case: ಸಂಸದ ಪ್ರಜ್ವಲ್ ರೇವಣ್ಣ ಗೆಸ್ಟ್ ಹೌಸ್‌ನಲ್ಲಿಲ್ಲ ಸಿಸಿ ಕ್ಯಾಮೆರಾ?; ಹಲವು ಅನುಮಾನ

Danesh Palyani
ವಿದೇಶ2 hours ago

Danesh Palyani: ಪಾಕಿಸ್ತಾನದಲ್ಲಿ ಹಿಂದು ಯುವತಿಯರ ಮತಾಂತರ; ಕರಾಳ ಮುಖ ಬಿಚ್ಚಿಟ್ಟ ಸಂಸದ!

Bangalore University
ಕರ್ನಾಟಕ3 hours ago

Bangalore University: ಬೆಂಗಳೂರು ವಿವಿ ಕ್ಯಾಂಪಸ್‌ನಲ್ಲಿ ಪಿಎಚ್‌ಡಿ ವಿದ್ಯಾರ್ಥಿ ಅನುಮಾನಾಸ್ಪದ ಸಾವು

Prajwal Revanna
ಕರ್ನಾಟಕ3 hours ago

Prajwal Revanna: ಜರ್ಮನಿಯಲ್ಲಿ ಪ್ರಜ್ವಲ್‌ ಅಜ್ಞಾತವಾಸ, ಮಲೇಷ್ಯಾದಲ್ಲಿ ಕಾರ್ತಿಕ್‌ ಹಾಲಿಡೇಸ್?

CSK vs PBKS
ಕ್ರೀಡೆ3 hours ago

CSK vs PBKS: ಚೆನ್ನೈಗೆ ತವರಿನಲ್ಲೇ ಆಘಾತವಿಕ್ಕಿ ಪ್ಲೇ ಆಫ್​ ಆಸೆ ಜೀವಂತವಿರಿಸಿದ ಪಂಜಾಬ್​

Neha Murder Case
ಕರ್ನಾಟಕ3 hours ago

Neha Murder Case: ಮಗಳ ಸಾವಿಗೆ ನ್ಯಾಯ ದೊರಕಿಸಿಕೊಡಿ: ಅಮಿತ್‌ ಶಾಗೆ ನೇಹಾ ತಂದೆ ಮನವಿ

Love Jihad
ದೇಶ3 hours ago

Love Jihad: ಹಿಂದು ಎಂಬಂತೆ ಬಿಂಬಿಸಿ, ಯುವತಿಯನ್ನು ನಂಬಿಸಿ, ಕೊನೆಗೆ ಅತ್ಯಾಚಾರ ಎಸಗಿದ ಮುಸ್ಲಿಂ ಯುವಕ!

Union Minister Pralhad Joshi election campaign in kalaghatagi
ಧಾರವಾಡ4 hours ago

Lok Sabha Election 2024: ಕಾಂಗ್ರೆಸ್ಸಿನ 1 ಲಕ್ಷ ರು. ಬೋಗಸ್ ಗ್ಯಾರಂಟಿ: ಪ್ರಲ್ಹಾದ್‌ ಜೋಶಿ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for April 30 2024
ಭವಿಷ್ಯ2 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20243 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20243 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Narendra Modi
Lok Sabha Election 20243 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20243 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20244 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20244 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest4 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

ಟ್ರೆಂಡಿಂಗ್‌