ಭ್ರಷ್ಟರ, ಕ್ರಿಮಿನಲ್‌ಗಳ, ಉಗ್ರವಾದಿಗಳ ಪಾರ್ಟಿ ಕಾಂಗ್ರೆಸ್‌: ನಳೀನ್ ಕುಮಾರ್ ಕಟೀಲ್ - Vistara News

ಬಳ್ಳಾರಿ

ಭ್ರಷ್ಟರ, ಕ್ರಿಮಿನಲ್‌ಗಳ, ಉಗ್ರವಾದಿಗಳ ಪಾರ್ಟಿ ಕಾಂಗ್ರೆಸ್‌: ನಳೀನ್ ಕುಮಾರ್ ಕಟೀಲ್

ಶಾಲೆಯಲ್ಲಿ ಮಕ್ಕಳನ್ನು , ಪತ್ರಕರ್ತರನ್ನು, ಸಮಾಜದಲ್ಲಿ ಸಮುದಾಯವನ್ನು, ಕೊನೆಗೆ ವೀರಶೈವ ಲಿಂಗಾಯತ ಸಮಾಜವನ್ನು ಒಡೆಯುವ ಪ್ರಯತ್ನವನ್ನು ಸಿದ್ದರಾಮಯ್ಯ ಮಾಡಿದರು ಎಂದು ನಳಿನ್‌ ಕುಮಾರ್‌ ಕಟೀಲ್‌ ಆರೋಪಿಸಿದರು.

VISTARANEWS.COM


on

ನಳೀನ್ ಕುಮಾರ್ ಕಟೀಲ್
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬಳ್ಳಾರಿ: ಭ್ರಷ್ಟರ ಪಾರ್ಟಿ, ಕ್ರಿಮಿನಲ್‌ಗಳ ಪಾರ್ಟಿ‌, ಉಗ್ರವಾದಿಗಳ ಪಾರ್ಟಿ ಕಾಂಗ್ರೆಸ್‌ ಆಗಿದ್ದು, ಕೇವಲ ಮತ ಬ್ಯಾಂಕ್‌ಗೋಸ್ಕರವಾಗಿ ಸಿದ್ದರಾಮಯ್ಯ ಭಯೋತ್ಪಾದಕರ ಕಾಲು ನೆಕ್ಕುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್ ಹೇಳಿದ್ದಾರೆ.

ಬಳ್ಳಾರಿಯ ತೋರಣಗಲ್‌ನಲ್ಲಿ ನಡೆಯುತ್ತಿರುವ ಬಿಜೆಪಿ ರಾಜ್ಯ ಎಸ್ಟಿ ಮೋರ್ಚಾ ಕಾರ್ಯಕಾರಿಣಿಯಲ್ಲಿ ಮಾತನಾಡಿ, ಸಿದ್ದರಾಮಯ್ಯ ಚಿಂತನೆ ರಾವಣನದ್ದು. ಮುಖ ಮಾತ್ರ ಸಿದ್ದರಾಮಯ್ಯನದು‌. ಬಿಕ್ಷಾಟನೆ ಮಾಡುವ ಸ್ಥಿತಿಗೆ ಹೋಗಿದ್ದಾರೆ. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಸಿದ್ದರಾಮಣ್ಣಾ, ನಿಮ್ಮ ರಾಷ್ಟ್ರೀಯ ಅಧ್ಯಕ್ಷ ಯಾವ ಕಾರಣಕ್ಕೆ ಬೇಲ್ ಮೇಲೆ ಇದ್ದಾರೆ? ನಿಮ್ಮ ರಾಷ್ಟ್ರೀಯ ಮಹಾರಾಜ ಉಪಾಧ್ಯಕ್ಷರು ರಾಹುಲ್ ಗಾಂಧಿ ಯಾಕೆ ಬೇಲ್ ಮೇಲೆ ಇದ್ದಾರೆ? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ | ಗಲಭೆ ನಡೆಸಿ ಅಧಿಕಾರಕ್ಕೇರಲು ಕಾಂಗ್ರೆಸ್‌ ಪ್ರಯತ್ನ: ನಳಿನ್‌ ಕುಮಾರ್‌ ಕಟೀಲ್‌ ಆರೋಪ

ಕಾಂಗ್ರೆಸ್ ಸೇರಬೇಕು ಅಂದರೆ ಅವನ ಮೇಲೆ 50 ಕ್ರಿಮಿನಲ್ ಕೇಸ್ ಇರಬೇಕು. ಅಲ್ಪ ಸಂಖ್ಯಾತರಿಗೆ ಶಾದಿ ಭಾಗ್ಯ ಕೊಟ್ಟಿದ್ದೀರಿ. ಅಲ್ಪಸಂಖ್ಯಾತ ಪತ್ರಕರ್ತರಿಗೆ ಲ್ಯಾಪ್ ಟಾಪ್ ಕೊಟ್ಟಿದ್ದೀರಿ. ಅಲ್ಪಸಂಖ್ಯಾತ ಶಾಲಾ ಮಕ್ಕಳಿಗೆ ಮಾತ್ರ ಪ್ರವಾಸ ಕೊಟ್ಟಿದ್ದೀರಿ. ಶಾಲೆಯಲ್ಲಿ ಮಕ್ಕಳನ್ನು , ಪತ್ರಕರ್ತರನ್ನು, ಸಮಾಜದಲ್ಲಿ ಸಮುದಾಯವನ್ನು, ಕೊನೆಗೆ ವೀರಶೈವ ಲಿಂಗಾಯತ ಸಮಾಜವನ್ನು ಒಡೆಯುವ ಪ್ರಯತ್ನ ಮಾಡಿದ್ದೀರಿ ಎಂದು ಆಕ್ರೋಶ ಹೊರಹಾಕಿದರು.

ಇದನ್ನೂ ಓದಿ | ಶಾಸಕ ಅನಿಲ್ ಬೆನಕೆಗೆ ಬೆಳಗಾವಿ ಬಿಜೆಪಿ ನಗರ ಜಿಲ್ಲಾಧ್ಯಕ್ಷ ಸ್ಥಾನ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Ballari News: ಕಂಪ್ಲಿಯ ದೇವಸಮುದ್ರ ಗ್ರಾಮದಲ್ಲಿ ಎರಡು ಕರಡಿ ಪ್ರತ್ಯಕ್ಷ!

Ballari News: ಎರಡು ಕರಡಿಗಳು ಪ್ರತ್ಯಕ್ಷವಾದ ಘಟನೆ ಕಂಪ್ಲಿ ತಾಲೂಕಿನ ದೇವಸಮುದ್ರ ಗ್ರಾಮದ ತುಂಗಾಭದ್ರಾ ಬಲದಂಡೆಯ ಕೆಳಮಟ್ಟದ ಕಾಲುವೆ ಬಳಿ ಮಂಗಳವಾರ ಬೆಳಗ್ಗೆ ಜರುಗಿದೆ.

VISTARANEWS.COM


on

Two bears were spotted in Devasamudra village of Kampli
Koo

ಕಂಪ್ಲಿ: ಎರಡು ಕರಡಿಗಳು ಪ್ರತ್ಯಕ್ಷವಾದ ಘಟನೆ ತಾಲೂಕಿನ ದೇವಸಮುದ್ರ ಗ್ರಾಮದ ತುಂಗಾಭದ್ರಾ ಬಲದಂಡೆಯ ಕೆಳಮಟ್ಟದ ಕಾಲುವೆ ಬಳಿ ಮಂಗಳವಾರ ಬೆಳಗ್ಗೆ (Ballari News) ನಡೆದಿದೆ.

ಗ್ರಾಮದ ತುಂಗಾಭದ್ರಾ ಬಲದಂಡೆಯ ಕೆಳಮಟ್ಟದ ಕಾಲುವೆ ಬಳಿ ಎರಡು ಕರಡಿಗಳು ಕಾಣಿಸಿಕೊಂಡಿದ್ದು, ಇದನ್ನು ಗಮನಿಸಿದ ಗ್ರಾಮಸ್ಥರು ತಕ್ಷಣ ಗ್ರಾಮಕ್ಕೆ ಮರಳಿ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಎರಡು ಕರಡಿಗಳು ಗ್ರಾಮದಲ್ಲೂ ಕಾಣಿಸಿಕೊಂಡಿವೆ.

ಇದನ್ನೂ ಓದಿ: Gold Rate Today: ಆಭರಣ ಖರೀದಿಸುವವರಿಗೆ ಗುಡ್‌ನ್ಯೂಸ್‌; ಮತ್ತೆ ಇಳಿದ ಚಿನ್ನದ ದರ

ಗ್ರಾಮಸ್ಥರು ಕೂಗಾಡುತ್ತ ಗಲಾಟೆ ಮಾಡಿದ್ದರಿಂದ ಒಂದು ದೇವಸಮುದ್ರ- ಕಂಪ್ಲಿ ಸಂಪರ್ಕಿಸುವ ಕ್ರಾಸ್ ಕಡೆ ಓಡಿ ಹೋದರೆ. ಮತ್ತೊಂದು ಕರಡಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ, ತುರಮಂದಿ ಬಸವೇಶ್ವರ ದೇವಸ್ಥಾನದ ಕಡೆಗೆ ಓಡಿ ಹೋಗಿದೆ. ಗ್ರಾಮದಲ್ಲಿ ಕರಡಿ ಕಂಡಂತಹ ಕೆಲ ಜನರು ದಿಕ್ಕಾಪಲಾಗಿ ಓಡಿ ಹೋದರೆ ಇನ್ನು ಕೆಲ ಜನರ ಗುಂಪು ಅಲ್ಲಿಂದ ಚದುರಿಸಲು ಪ್ರಯತ್ನಿಸಿದಾಗ ಗ್ರಾಮದ ಹೊರ ವಲಯದ ಗೋದಾಮು ಬಳಿ ಬೇಲಿಯಲ್ಲಿ ಅವಿತು ಕುಳಿತಿದೆ. ಈ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ಪಡೆದು ಗ್ರಾಮಕ್ಕೆ ಆಗಮಿಸಿ ಕರಡಿ ಸೆರೆಗೆ ಬೋನ್ ಅಳವಡಿಸಿದ್ದಾರೆ.

ಇದನ್ನೂ ಓದಿ: Kalki 2898 AD: ʼಕಲ್ಕಿ 2898 ADʼ ಚಿತ್ರದ ಭೈರವ ಆಂಥಮ್‌ ರಿಲೀಸ್‌!

ಹೊಸಪೇಟೆ ವಲಯ ಅರಣ್ಯ ಅಧಿಕಾರಿ ಭರತ್‌ ರಾಜ್ ತಂಡದವರು ಕರಡಿ ಸೆರೆಗಾಗಿ ಸದ್ಯ ಕಾರ್ಯಾಚರಣೆ ಮುಂದುವರಿಸಿದ್ದಾರೆ.

Continue Reading

ಮಳೆ

Karnataka Weather : ಗುಡುಗು, ಸಿಡಿಲಿನ ಮಳೆಗೆ ಮನೆಯ ಗೋಡೆ ಕುಸಿತ; ನಾಳೆಗೂ ಇದೆ ಅಲರ್ಟ್‌

Karnataka Weather Forecast : ಗುಡುಗು, ಸಿಡಿಲು ಸಹಿತ ಸುರಿದ ಮಳೆಗೆ (Rain News) ಮನೆಯ ಗೋಡೆ ಕುಸಿದಿದ್ದು, ಕುಟುಂಬಸ್ಥರು ಪವಾಡ ಸದೃಶ್ಯದಂತೆ ಪಾರಾಗಿದ್ದಾರೆ. ರಾಜ್ಯದ ಹಲವೆಡೆ ಮಳೆಯಾಗಿರುವ ವರದಿ ಆಗಿದೆ.

VISTARANEWS.COM


on

By

Karnataka Weather Forecast
Koo

ಬೆಂಗಳೂರು/ದೊಡ್ಡಬಳ್ಳಾಪುರ: ಸಿಡಿಲು ಬಡಿದು ಮನೆಯ ಗೋಡೆ ಕುಸಿದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಮುಕ್ಕಡಿಘಟ್ಟ ಗ್ರಾಮದಲ್ಲಿ (Karnataka Weather Forecast) ನಡೆದಿದೆ. ಸೋಮವಾರ ರಾತ್ರಿ ಗುಡುಗು, ಸಿಡಿಲು ಸಹಿತ ಜಡಿ (Rain News) ಮಳೆಯಾಗಿದೆ.

ಈ ವೇಳೆ ಸಿಡಿಲು ಬಡಿದ ಪರಿಣಾಮ ಗೋಡೆ ಕುಸಿತವಾಗಿದೆ. ಗಂಗರಾಜ್ ಎಂಬುವವರಿಗೆ ಸೇರಿದ ಮನೆ ಹಾನಿಯಾಗಿದೆ. ಮನೆಯ ಕುಟುಂಬಸ್ಥರು ಬೇರೆ ಕೋಣೆಯಲ್ಲಿದ್ದ ಕಾರಣ ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನೂ ಗೋಡೆ ಕುಸಿದ ಪರಿಣಾಮ ಮನೆಯಲ್ಲಿದ್ದ ವಸ್ತುಗಳು ಜಖಂಗೊಂಡಿವೆ. ದೊಡ್ಡಬಳ್ಳಾಪುರ ಗ್ರಾಮಾಂತರ ‌ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: Electric shock : ಮೀನು ಹಿಡಿಯಲು ಹೋದಾಗ ವಿದ್ಯುತ್‌ ಪ್ರವಹಿಸಿ ಬಾಲಕರಿಬ್ಬರು ಮೃತ್ಯು; ಕುಟುಂಬಸ್ಥರ ಆಕ್ರಂದನ

ಚಿಕ್ಕಮಗಳೂರಲ್ಲಿ ಅಬ್ಬರ ಮಳೆ

ಚಿಕ್ಕಮಗಳೂರಿನ ಕೊಟ್ಟಿಗೆಹಾರದಲ್ಲಿ ಭಾರಿ ಮಳೆಯಾಗಿದ್ದು, 8 ಸೆಂ.ಮೀ ದಾಖಲಾಗಿದೆ. ಧರ್ಮಸ್ಥಳದಲ್ಲಿ 6 ಸೆಂ.ಮೀ, ಕಾರ್ಕಳ , ಕಕ್ಕೇರಿ, ಯಗಟಿಯಲ್ಲಿ ತಲಾ 5 ಸೆಂ.ಮೀ ಮಳೆಯಾಗಿದೆ. ಮಂಗಳೂರು ವಿಮಾನ ನಿಲ್ದಾಣ, ಹೊಸದುರ್ಗ, ಹಾರಂಗಿ, ರಾಯಲ್ಪಾಡು, ಚನ್ನಗಿರಿ, ಕೋಲಾರ, ಎಂಎಂ ಹಿಲ್ಸ್‌ನಲ್ಲಿ 4 ಸೆಂ.ಮೀ ಮಳೆಯಾಗಿದೆ.

ಇನ್ನೂ ಮಣಿ, ಶಿರಾಲಿ, ಬೆಳ್ತಂಗಡಿ, ಕೊಣನೂರಿನಲ್ಲಿ ತಲಾ 3 ಸೆಂ.ಮೀ ಹಾಗೂ ಹೊನ್ನಾವರ, ಪುತ್ತೂರು, ಮಂಗಳೂರು, ತುಮಕೂರು, ಭಾಗಮಂಡಲ, ವಿರಾಜಪೇಟೆ, ಕುಶಾಲನಗರದಲ್ಲಿ ತಲಾ 2 ಸೆಂ.ಮೀನಷ್ಟು ಮಳೆಯಾಗಿದೆ. ಮಂಕಿ, ಪಣಂಬೂರು , ಮೂಲ್ಕಿ, ಉಪ್ಪಿನಂಗಡಿ, ಕುಮಟಾ, ಮಧುಗಿರಿ, ಪರಶುರಾಂಪುರ, ತೊಂಡೇಭಾವಿಯಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.

ಕರಾವಳಿ ಭಾಗಕ್ಕೆ ಮಳೆ ಅಲರ್ಟ್‌

ಜೂನ್‌ 19ರಂದು ಕರಾವಳಿ ಭಾಗಕ್ಕೆ ಮಳೆ ಎಚ್ಚರಿಕೆ ನೀಡಲಾಗಿದೆ. ಕರಾವಳಿಯ ಬಹುತೇಕ ಕಡೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ. ಒಳನಾಡಿನಲ್ಲಿ ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ. ರಾಜಧಾನಿ ಬೆಂಗಳೂರಲ್ಲಿ ಕೆಲವೊಮ್ಮೆ ಹಗುರದಿಂದ ಕೂಡಿದ ಮಳೆಯಾಗಲಿದೆ. ಗರಿಷ್ಠ 30 ಹಾಗೂ ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್‌ ಇರಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕೊಡಗು

Wild Animals Attack : ಮನೆಯಂಗಳವನ್ನು ಧ್ವಂಸ ಮಾಡಿದ ಆನೆಗಳು; ಗ್ರಾಮಕ್ಕೆ ಓಡೋಡಿ ಬಂದ ಕರಡಿ

Wild Animals Attack : ಆಹಾರ ಅರಸುತ್ತಾ ಕಾಡು ಬಿಟ್ಟು ನಾಡಿಗೆ ಆನೆಗಳ ಹಿಂಡು ಬಂದಿದ್ದು, ದಾಂಧಲೆ ನಡೆಸಿದೆ. ಇತ್ತ ಕರಡಿಯೊಂದು ಗ್ರಾಮಕ್ಕೆ ನುಗ್ಗಿ ಆತಂಕವನ್ನು ಹೆಚ್ಚಿಸಿತ್ತು. ಕೊಡಗಿನಲ್ಲಿ ಕಾಡಾನೆಯೊಂದು ಬಾವಿಗೆ ಬಿದ್ದು ಮೃತಪಟ್ಟಿತ್ತು.

VISTARANEWS.COM


on

By

wild animals Attack
Koo

ಕೊಡಗು/ಬಳ್ಳಾರಿ: ರಾಜ್ಯದ ಹಲವೆಡೆ ಕಾಡು ಪ್ರಾಣಿಗಳ ಹಾವಳಿ (Wild Animals Attack) ಹೆಚ್ಚಾಗಿದೆ. ಆಹಾರ ಅರಸಿ ಕಾಡಂಚಿನ ಗ್ರಾಮಗಳಿಗೆ ಕಾಡು ಪ್ರಾಣಿಗಳು ಲಗ್ಗೆ ಇಡುತ್ತಿವೆ. ಕೊಡಗಿನಲ್ಲಿ ಮನೆಯಂಗಳಕ್ಕೆ ಆನೆಗಳ ಹಿಂಡು ಲಗ್ಗೆ ಇಟ್ಟು, ದಾಂಧಲೆ ನಡೆಸಿದೆ.

ಕೊಡಗಿನ ಸಿದ್ದಾಪುರ ಸಮೀಪದ ಗುಹ್ಯ ಗ್ರಾಮದ ಮೂಕೊಂಡ ಸುಬ್ರಮಣಿ ಎಂಬುವವರ ಮನೆಯೊಳಗೆ ಮರಿಯಾನೆಗಳು ನುಗ್ಗಲು ಯತ್ನಿಸಿದೆ. ಮನೆಯಂಗಳದಲ್ಲಿದ್ದ ಹೂಕುಂಡಗಳನ್ನು ಧ್ವಂಸ ಮಾಡಿ, ಪ್ಲ್ಯಾಸ್ಟಿಕ್ ಚೇರ್‌ಗಳನ್ನು ಹೊಡೆದು ಹಾಕಿವೆ.

ಗುಹ್ಯ ಗ್ರಾಮದಲ್ಲಿ ನಿರಂತರ ಕಾಡಾನೆ ಹಾವಳಿ ಹೆಚ್ಚಾಗಿದ್ದು, ಇದನ್ನೂ ತಡೆಗಟ್ಟಲು ಅರಣ್ಯ ಇಲಾಖೆ ವಿಫಲವಾಗಿದೆ. ಅರಣ್ಯ ಇಲಾಖೆ ವಿರುದ್ಧ ಸುಬ್ರಮಣಿ ಆಕ್ರೋಶ ಹೊರಹಾಕಿದ್ದಾರೆ. ಜನರು ಭಯದ ವಾತಾವರಣದಲ್ಲೇ ಓಡಾಡುವಂತಾಗಿದೆ. ತೋಟದಲ್ಲಿ ಕಾಫಿ ಬೆಳೆಗಳ ನಾಶ ಮಾಡುತ್ತಿವೆ, ಇದರಿಂದಾಗಿ ಲಕ್ಷಾಂತರ ರೂ. ನಷ್ಟವಾಗಿದೆ. ಸರ್ಕಾರ ಕೂಡಲೇ ಪರಿಹಾರವನ್ನು ನೀಡಬೇಕೆಂದು ಒತ್ತಾಯಿಸಿದ್ದಾರೆ.

wild animals attack

‌ಗ್ರಾಮಕ್ಕೆ ಓಡೋಡಿ ಬಂದ ಕರಡಿ

ಆಹಾರ ಅರಸಿ ಮಂಗಳವಾರ ಬೆಳಗ್ಗೆ ಕರಡಿಯೊಂದು ಗ್ರಾಮಕ್ಕೆ ಓಡೋಡಿ ಬಂದಿದೆ. ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ದೇವಸಮುದ್ರ ಗ್ರಾಮಕ್ಕೆ ಕರಡಿಯೊಂದು ನುಗ್ಗಿದ್ದು,ಜನರು ಚೆಲ್ಲಾಪಿಲ್ಲಿಯಾಗಿ ಓಡಿದ್ದರು. ಕೆಲಕಾಲ ಆತಂಕ ಸೃಷ್ಟಿಸಿದ ಕರಡಿಯು ಜನರ ಕೂಗಾಟಕ್ಕೆ ಗ್ರಾಮದಿಂದ ಕಾಡಿನ ಕಡೆಗೆ ಓಡಿ ಹೋಗಿದೆ.

ಇದನ್ನೂ ಓದಿ: Kolar news : ಬ್ಲಾಸ್ಟಿಂಗ್‌ ವೇಳೆ ಉರುಳಿ ಬಿದ್ದ ಬಂಡೆಕಲ್ಲು, ಟ್ರ್ಯಾಕ್ಟರ್‌-ಹಿಟಾಚಿ ಅಪ್ಪಚ್ಚಿ; ಮೂವರು ಕಾರ್ಮಿಕರು ನಾಪತ್ತೆ

ಬಾವಿಗೆ ಬಿದ್ದು ಕಾಡಾನೆ ಸಾವು

ಮನೆ ಮುಂದೆ ಇದ್ದ ಬಾವಿಗೆ ಬಿದ್ದು ಕಾಡಾನೆಯೊಂದು ಮೃತಪಟ್ಟಿದೆ. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕೆದಮುಳ್ಳೂರು ಎಂಬಲ್ಲಿ ಘಟನೆ ನಡೆದಿದೆ.

ಗ್ರಾಮದ ಬಿದ್ದಪ್ಪ ಎಂಬುವರು ಉದ್ಯೋಗ ಖಾತ್ರಿ ಯೋಜನೆಯಡಿ ಕುಡಿಯುವ ನೀರಿಗಾಗಿ ಬಾವಿಯನ್ನು ತೆರೆದಿದ್ದರು. ಆಹಾರ ಅರಸುತ್ತಾ ಬಂದಿದ್ದ ಕಾಡಾನೆಯು ಬಾವಿ ಕಾಣದೆ ತೆರೆದಿದ್ದ ಬಾವಿಗೆ ತಡರಾತ್ರಿ ಬಿದ್ದಿದೆ. ಬಿದ್ದ ರಭಸಕ್ಕೆ ಗಂಭೀರ ಗಾಯಗೊಂಡ ಕಾಡಾನೆ ಮೇಲೆ ಬರಲು ಆಗದೆ ನರಳಾಡಿ ಪ್ರಾಣ ಬಿಟ್ಟಿದೆ.

wild animals attack

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾವಿಯೊಳಗೆ ಬಿದ್ದು ಸಾವನ್ನಪ್ಪಿದ ಕಾಡಾನೆಯನ್ನು ಮೇಲಕ್ಕೆತ್ತಿದ್ದಾರೆ. ಸದ್ಯ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಯಾದಗಿರಿ

Drowned in Water : ಯಾದಗಿರಿಯಲ್ಲಿ ತೆರೆದ ಗುಂಡಿಗೆ ಬಾಲಕ ಬಲಿ; ಬಳ್ಳಾರಿಯಲ್ಲಿ ಕೃಷಿ ಹೊಂಡಕ್ಕೆ ಬಿದ್ದವನು ಮೃತ್ಯು

Drowned in Water : ಪ್ರತ್ಯೇಕ ಕಡೆಗಳಲ್ಲಿ ಬಾಲಕರಿಬ್ಬರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಯಾದಗಿರಿಯಲ್ಲಿ ತೆರೆದ ಗುಂಡಿಗೆ ಬಾಲಕನೊಬ್ಬ ಬಲಿಯಾದರೆ, ಬಳ್ಳಾರಿಯಲ್ಲಿ ಕೃಷಿ ಹೊಂಡಕ್ಕೆ ಬಿದ್ದು ಮತ್ತೊಬ್ಬ ಬಾಲಕ ಅಸುನೀಗಿದ್ದಾನೆ.

VISTARANEWS.COM


on

By

Drowned in water
ಮೃತ ದುರ್ದೈವಿಗಳು
Koo

ಯಾದಗಿರಿ: ತೆರೆದ ಗುಂಡಿಯಲ್ಲಿ ಬಿದ್ದು ಬಾಲಕನೊರ್ವ (Drowned in Water) ಮೃತಪಟ್ಟಿದ್ದಾನೆ. ಯಾದಗಿರಿಯ ಗುರುಮಠಕಲ್ ತಾಲೂಕಿನ ಚಂಡರಕಿ ಗ್ರಾಮದಲ್ಲಿ ನಿನ್ನೆ ಸೋಮವಾರ ಸಂಜೆ ಘಟನೆ ನಡೆದಿದೆ. ಮನೋಜಕುಮಾರ (8) ಮೃತ ದುರ್ದೈವಿ.

ಮನೋಜಕುಮಾರ ತೋಟದ ಮನೆಯಲ್ಲಿ ಆಟವಾಡುತ್ತಿದ್ದ. ಆಟವಾಡುವಾಗ ಕಾಲು ಜಾರಿದ್ದು ತೆರೆದ ಗುಂಡಿಯಲ್ಲಿ ಬಿದ್ದಿದ್ದಾನೆ. ಬಿದ್ದ ರಭಸಕ್ಕೆ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಯಲ್ಲಪ್ಪ ಅವರಿಗೆ ಸೇರಿದ ಜಮೀನಿನಲ್ಲಿ ಈ ದುರ್ಘಟನೆ ನಡೆದಿದೆ. ಗುರುಮಠಕಲ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಬಳ್ಳಾರಿಯಲ್ಲಿ ಕೃಷಿ ಹೊಂಡಕ್ಕೆ ಬಿದ್ದು ಬಾಲಕ ಸಾವು

ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ಸಿರಗೇರಿ ಗ್ರಾಮದಲ್ಲಿ ಕೃಷಿ ಹೊಂಡಕ್ಕೆ ಬಿದ್ದು ಬಾಲಕನೊಬ್ಬ ಮೃತಪಟ್ಟಿದ್ದಾನೆ. ಹತ್ತು ವರ್ಷದ ವಸಂತ್‌ ಮೃತದುರ್ದೈವಿ.

ವಸಂತ್‌ ನೀರು ಕುಡಿಯಲು ಕೃಷಿ ಹೊಂಡಕ್ಕೆ‌ ತೆರಳಿದ್ದ ಈ ವೇಳೆ ಕಾಲು ಜಾರಿ ಹೊಂಡಕ್ಕೆ ಬಿದ್ದಿದ್ದಾನೆ. ಹೊಂಡದ ನೀರಿನ ಆಳದಲ್ಲಿ ಸಿಲುಕಿದ್ದ, ಇತ್ತ ಕೂಡಲೇ ಬಾಲಕನ ರಕ್ಷಣೆಗೆ ಗ್ರಾಮಸ್ಥರು ಮುಂದಾಗಿದ್ದರು. ಆದರೆ ಉಸಿರುಗಟ್ಟಿ ಹೊಂಡದ ನೀರಲ್ಲಿ ವಸಂತ ಪ್ರಾಣ ಬಿಟ್ಟಿದ್ದಾನೆ. ಬಳ್ಳಾರಿಯ ಸಿರಗೇರಿ‌ ಪೊಲೀಸ್ ಠಾಣೆಯಲ್ಲಿ‌ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Murder case : ರಸ್ತೆಯಲ್ಲಿ ಅಡ್ಡಗಟ್ಟಿ ಚಿಕ್ಕಮ್ಮನನ್ನು ಹೊಡೆದು ಕೊಂದ ದುಷ್ಟ

ಮಹಿಳೆಯನ್ನು ತಿವಿದು ರಸ್ತೆಯುದ್ದಕ್ಕೂ ಎಳೆದೊಯ್ದ ಎಮ್ಮೆ! ವಿಡಿಯೊ ಇದೆ

ಚೆನ್ನೈ : ಮಹಿಳೆಯೊಬ್ಬಳನ್ನು ಎಮ್ಮೆಯೊಂದು ರಸ್ತೆಯುದ್ದಕ್ಕೂ 500 ಮೀಗಳಷ್ಟು ದೂರ ತಿವಿದುಕೊಂಡು ಹೋಗಿ ಗಂಭೀರವಾಗಿ ಗಾಯಗೊಳಿಸಿದ ಆಘಾತಕಾರಿ ಘಟನೆ ಚೆನ್ನೈನ ತಿರುವೊಟ್ರಿಯೂರ್‌ನಲ್ಲಿ ನಡೆದಿದೆ. ಈ ಘಟನೆ ಸಿಸಿಟಿಯಲ್ಲಿ ಸೆರೆಯಾಗಿದ್ದು, ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದೆ. ಇದೀಗ ಸಿಕ್ಕಾಪಟ್ಟೆ ವೈರಲ್ (Video Viral) ಆಗಿದೆ.

ವಿಡಿಯೊದಲ್ಲಿ ಮಹಿಳೆಯನ್ನು ಎಮ್ಮೆ ಎಳೆದುಕೊಂಡು ಹೋಗುತ್ತಿದ್ದು, ಅನೇಕರು ಮಹಿಳೆಗೆ ಸಹಾಯ ಮಾಡಲು ಅದರ ಹಿಂದೆ ಓಡಿ ಬರುತ್ತಿರುವ ದೃಶ್ಯ ಕಂಡುಬಂದಿದೆ. ಭಾನುವಾರ ಮಧ್ಯಾಹ್ನದ ವೇಳೆ 35 ವರ್ಷದ ಈ ಮಹಿಳೆ ಗ್ರಾಮದ ಕಿರಿದಾದ ಓಣಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಎದುರು ಬದಿಯಿಂದ ಓಡಿ ಬರುತ್ತಿರುವ ಎಮ್ಮೆ ಆಕೆಯನ್ನು ತಿವಿದಿದೆ. ಆಗ ಎಮ್ಮೆಯ ಕೊಂಬಿಗೆ ಮಹಿಳೆಯ ಉಡುಪು ಸಿಕ್ಕಿಹಾಕಿಕೊಂಡಿದ್ದ ಪರಿಣಾಮ ಬೀದಿಯಲ್ಲಿ 500 ಮೀಗಳಷ್ಟು ದೂರ ಅದು ಎಳೆದುಕೊಂಡು ಹೋಗಿದೆ. ಕೊನೆಗೆ ಸ್ಥಳೀಯರು ಎಮ್ಮೆಯಿಂದ ಮಹಿಳೆಯನ್ನು ಕಾಪಾಡಿದ್ದಾರೆ. ಹಾಗೇ ಆಕೆಗೆ ಗಂಭೀರ ಗಾಯಗಳಾದ ಹಿನ್ನೆಲೆ ಆಕೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಮಹಿಳೆಗೆ ದೇಹದ ಹಲವು ಭಾಗಗಳಲ್ಲಿ ಗಾಯಗಳಾಗಿದ್ದು ಆಕೆ ಚಿಕಿತ್ಸೆ ಪಡೆಯುತ್ತಿದ್ದಾಳೆ ಮತ್ತು ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಮಹಿಳೆಯನ್ನು ಎಮ್ಮೆಯಿಂದ ಬಿಡಿಸಿದ ನಂತರ ಆ ಎಮ್ಮೆ ರಸ್ತೆ ಬದಿಯಲ್ಲಿ ನಿಲ್ಲಿಸಿದ ಸಿಕ್ಕ ಸಿಕ್ಕ ವಾಹನಗಳನ್ನು ಕೆಡವಿದೆ. ಹಾಗಾಗಿ ಎಮ್ಮೆಯನ್ನು ಸೆರೆ ಹಿಡಿಯಲು ಗ್ರೇಟರ್ ಚೆನ್ನೈ ಕಾರ್ಪೋರೇಷನ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಅದನ್ನು ಹಿಡಿದು, ಪುಲಿಯಂಥೋಪ್‌ನಲ್ಲಿರುವ ಗ್ರೇಟರ್ ಚೆನ್ನೈ ಕಾರ್ಪೋರೇಷನ್‌ ಆಶ್ರಯಕ್ಕೆ ಕರೆದೊಯ್ಯಲಾಯಿತು ಎಂಬುದಾಗಿ ತಿಳಿದುಬಂದಿದೆ.

ಈ ವರ್ಷದ ಕಾರ್ಪೋರೇಷನ್ ಬಜೆಟ್ ಮಂಡನೆಯ ವೇಳೆ ಮೇಯರ್ ಆರ್. ಪ್ರಿಯಾ ಅವರು ನಗರದಾದ್ಯಂತ ಹಸುಗಳಿಗೆ ಪರವಾನಗಿ ಮತ್ತು ದಕ್ಷಿಣ ಚೆನ್ನೈನಲ್ಲಿ ಹೆಚ್ಚುವರಿ ಆಶ್ರಯಗಳ ಸ್ಥಾಪನೆಯ ಯೋಜನೆ ಜಾರಿಗೊಳಿಸಿದ್ದರು. ಆದರೆ ಲೋಕಸಭಾ ಚುನಾವಣೆಯ ಕಾರಣದಿಂದ ಈ ಎರಡೂ ಯೋಜನೆಗಳಿಗೆ ಕೆಲಸ ಪ್ರಾರಂಭಿಸಲು ಸಾಧ್ಯವಾಗಿಲ್ಲ ಎಂಬುದಾಗಿ ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Sonakshi Sinha
ಬಾಲಿವುಡ್29 mins ago

Sonakshi Sinha: ಮುಸ್ಲಿಂ ಯುವಕನ ಜತೆ ಸೋನಾಕ್ಷಿ ಸಿನ್ಹಾ ವಿವಾಹ; ತಾಯಿ, ಸಹೋದರನೂ ಮದುವೆಗೆ ಹೋಗಲ್ಲ?

Construction of International Cricket Stadium at Shira MLA T B Jayachandra KSCA team inspection
ಕರ್ನಾಟಕ1 hour ago

Shira News: ಶಿರಾದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ; ಶಾಸಕ ಜಯಚಂದ್ರ ಪರಿಶೀಲನೆ

Malayali actress Honey Rose starring Rachel movie Teaser release
ಕರ್ನಾಟಕ1 hour ago

Rachel Movie: ಮಲಯಾಳಿ ನಟಿ ಹನಿ ರೋಸ್ ನಾಯಕಿಯಾಗಿ ನಟಿಸಿರುವ ‘ರೆಚೆಲ್’ ಚಿತ್ರದ ಟೀಸರ್ ರಿಲೀಸ್‌

IPS Officer
ದೇಶ1 hour ago

IPS Officer: ಕ್ಯಾನ್ಸರ್‌ನಿಂದ ಪತ್ನಿ ಸಾವಿನ ಸುದ್ದಿ ತಿಳಿದ ಕೆಲವೇ ನಿಮಿಷದಲ್ಲಿ ಐಪಿಎಸ್‌ ಅಧಿಕಾರಿ ಆತ್ಮಹತ್ಯೆ!

Sambhavami Yuge Yuge movie release on June 21
ಕರ್ನಾಟಕ1 hour ago

Kannada New Movie: ಜೂ.21ಕ್ಕೆ ‘ಸಂಭವಾಮಿ ಯುಗೇ ಯುಗೇ’ ಚಿತ್ರ ರಿಲೀಸ್‌

Kodi Mutt Swamiji
ಪ್ರಮುಖ ಸುದ್ದಿ2 hours ago

Kodi Mutt Swamiji: ದೇಶದಲ್ಲಿ ಶುಭಕ್ಕಿಂತ ಅಶುಭಗಳೇ ಹೆಚ್ಚು, ರಾಜ್ಯದಲ್ಲಿ ಅತಿವೃಷ್ಟಿ: ಕೋಡಿಮಠ ಶ್ರೀ ಭವಿಷ್ಯ!

Vijayapura News
ಕರ್ನಾಟಕ2 hours ago

Vijayapura News: ಗುಂಡಿಗೆ ಬಿದ್ದು ಮೂವರ ಸಾವು; ಬಾಲಕಿಯನ್ನು ರಕ್ಷಿಸಲು ಹೋದವರೂ ನೀರುಪಾಲು

Pakistan Begger
Latest2 hours ago

Pakistan Begger: ಪಾಕಿಸ್ತಾನವೇ ಒಂದು ಭಿಕ್ಷುಕ ದೇಶ! ಆದರೆ ಅಲ್ಲಿಯ ಈ ಭಿಕ್ಷುಕ ಎಷ್ಟು ಶ್ರೀಮಂತ ನೋಡಿ!

Union Budget 2024
ದೇಶ3 hours ago

Union Budget 2024: ಬಜೆಟ್‌ನಲ್ಲಿ ಆದಾಯ ತೆರಿಗೆ ವಿನಾಯಿತಿ ಮಿತಿ 5 ಲಕ್ಷ ರೂ.ಗೆ ಏರಿಕೆ? ಇಲ್ಲಿದೆ ಮಹತ್ವದ ಅಪ್‌ಡೇಟ್

Wild boar hunting in Hebbatti village Arrest of two accused
ಉತ್ತರ ಕನ್ನಡ3 hours ago

Banavasi News: ಹೆಬ್ಬತ್ತಿ ಗ್ರಾಮದಲ್ಲಿ ಕಾಡುಹಂದಿ ಬೇಟೆ; ಇಬ್ಬರ ಬಂಧನ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Actor Darshan
ಮೈಸೂರು1 day ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 day ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ2 days ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ2 days ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ2 days ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ3 days ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ4 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು4 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು4 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ4 days ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

ಟ್ರೆಂಡಿಂಗ್‌