Happy Birthday ಪ್ರಕಾಶ್ ಪಡುಕೋಣೆ - Vistara News

ಬ್ಯಾಡ್ಮಿಂಟನ್

Happy Birthday ಪ್ರಕಾಶ್ ಪಡುಕೋಣೆ

ಪ್ರಕಾಶ್ ಪಡುಕೋಣೆ‌ 1980ರಲ್ಲಿ ವಿಶ್ವ ನಂ.1 ರ‍್ಯಾಂಕ್ ಪಡೆದಿದ್ದ ಆಟಗಾರ. ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಗೆದ್ದವರಿವರು.

VISTARANEWS.COM


on

pakash padukone
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಇದನ್ನೂ ಓದಿ| Happy Birthday ಮಹೇಶ್ ಭೂಪತಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Thailand Open 2024: ಇಂದಿನಿಂದ ಥಾಯ್ಲೆಂಡ್‌ ಓಪನ್‌ ಟೂರ್ನಿ; ಚಿರಾಗ್‌-ಸಾತ್ವಿಕ್‌ ಜೋಡಿ ಮೇಲೆ ಪದಕ ಭರವಸೆ

Thailand Open 2024: ಸಿಂಧು ಅನುಪಸ್ಥಿತಿಯಲ್ಲಿ, ಅಶ್ಮಿತಾ ಚಲಿಹಾ, ಮಾಳವಿಕಾ ಬನ್ಸೋಡ್ ಮತ್ತು ಆಕರ್ಷಿ ಕಶ್ಯಪ್ ಅವರು ಮಹಿಳಾ ಸಿಂಗಲ್ಸ್‌ನಲ್ಲಿ ಆಡಲಿದ್ದಾರೆ. ಮಾಳವಿಕಾ ಅಗ್ರ ಶ್ರೇಯಾಂಕದ ಚೀನಾದ ಹಾನ್ ಯುಯೆ ಮತ್ತು ಆಕರ್ಷಿ ಥಾಯ್ಲೆಂಡ್‌ನ ಬುಸಾನನ್ ಒಂಗ್‌ಬಮ್ರುಂಗ್‌ಫಾನ್ ವಿರುದ್ಧ ಸೆಣಸಾಡಲಿದ್ದಾರೆ.

VISTARANEWS.COM


on

Thailand Open
Koo

ಬ್ಯಾಂಕಾಕ್‌: ಥಾಯ್ಲೆಂಡ್‌ ಓಪನ್‌(Thailand Open 2024) ಸೂಪರ್‌ 500 ಬ್ಯಾಡ್ಮಿಂಟನ್‌ ಪಂದ್ಯಾವಳಿ ಇಂದು(ಮಂಗಳವಾರ) ಆರಂಭಗೊಳ್ಳಲಿದ್ದು ಲಕ್ಷ್ಯ ಸೇನ್‌ ಮತ್ತು ಪಿ.ವಿ. ಸಿಂಧು(PV Sindhu) ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಭಾರತದ ಸ್ಟಾರ್‌ ಶಟ್ಲರ್‌ಗಳಾದ, ಅಗ್ರ ಶ್ರೇಯಾಂಕದ ಚಿರಾಗ್‌ ಶೆಟ್ಟಿ(Chirag Shetty)-ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ(Satwiksairaj Rankireddy) ಜೋಡಿ ಮೇಲೆ ಪದಕ ಭರವಸೆ ಇರಿಸಲಾಗಿದೆ.

ಪುರುಷರ ಸಿಂಗಲ್ಸ್‌ನಲ್ಲಿ ಎಚ್‌.ಎಸ್‌. ಪ್ರಣಯ್‌, ಕಿರಣ್‌ ಜಾರ್ಜ್‌, ಸತೀಶ್‌ ಕುಮಾರ್‌ ಸೆಣಸಲಿದ್ದಾರೆ. ಚಿರಾಗ್​ ಮತ್ತು ಸಾತ್ವಿಕ್‌ ಮಲೇಷ್ಯಾದ ನೂರ್‌ ಮೊಹಮ್ಮದ್‌ ಅಝ್ರೀನ್‌ ಅಯೂಬ್‌ ಅಝ್ರೀನ್‌-ಟಾನ್‌ ವೀ ಕಿಯೋಂಗ್‌ ವಿರುದ್ಧ ಆಡಲಿದ್ದಾರೆ. ಕೆಲ ದಿನಗಳ ಹಿಂದೆ ನಡೆದಿದ್ದ ಥಾಮಸ್‌ ಕಪ್‌ನಲ್ಲಿ ಭಾರತೀಯ ಜೋಡಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫ‌ಲರಾಗಿದ್ದರು. ಇದೀಗ ಥಾಯ್ಲೆಂಡ್‌ ಟೂರ್ನಿಯಲ್ಲಿ ತಮ್ಮ ಹಿಂದಿನ ಲಯಕ್ಕೆ ಮರಳಿ ಇದೇ ಜುಲೈನಲ್ಲಿ ನಡೆಯಲಿರುವ ಪ್ಯಾರಿಸ್​ ಒಲಿಂಪಿಕ್ಸ್​(Paris Olympics) ಟೂರ್ನಿಗೆ ಸಿದ್ದಗೊಳ್ಳಬೇಕಿದೆ. ಒಲಿಂಪಿಕ್​ಗೆ ಅರ್ಹತೆ ಪಡೆದ ಶಟ್ಲರ್​ಗಳಿಗೆ ಈ ಟೂರ್ನಿ ತಮ್ಮ ಕೌಶಲ್ಯಗಳನ್ನು ಉತ್ತಮಗೊಳಿಸಲು ಒಳ್ಳೆಯ ಅವಕಾಶವಾಗಿದೆ.

ಸಿಂಧು ಅನುಪಸ್ಥಿತಿಯಲ್ಲಿ, ಅಶ್ಮಿತಾ ಚಲಿಹಾ, ಮಾಳವಿಕಾ ಬನ್ಸೋಡ್ ಮತ್ತು ಆಕರ್ಷಿ ಕಶ್ಯಪ್ ಅವರು ಮಹಿಳಾ ಸಿಂಗಲ್ಸ್‌ನಲ್ಲಿ ಆಡಲಿದ್ದಾರೆ. ಮಾಳವಿಕಾ ಅಗ್ರ ಶ್ರೇಯಾಂಕದ ಚೀನಾದ ಹಾನ್ ಯುಯೆ ಮತ್ತು ಆಕರ್ಷಿ ಥಾಯ್ಲೆಂಡ್‌ನ ಬುಸಾನನ್ ಒಂಗ್‌ಬಮ್ರುಂಗ್‌ಫಾನ್ ವಿರುದ್ಧ ಸೆಣಸಾಡಲಿದ್ದಾರೆ. ಮಹಿಳೆಯರ ಡಬಲ್ಸ್‌ನಲ್ಲಿ, ಪ್ಯಾರಿಸ್ ಗೇಮ್ಸ್‌ಗೆ ಅರ್ಹತೆ ಪಡೆದಿರುವ ಭಾರತದ ನಾಲ್ಕನೇ ಶ್ರೇಯಾಂಕದ ತನಿಶಾ ಕ್ರಾಸ್ಟೊ ಮತ್ತು ಅಶ್ವಿನಿ ಪೊನ್ನಪ್ಪ ಕೂಡ ಕಣದಲ್ಲಿದ್ದಾರೆ. ಮೊದಲ ಸುತ್ತಿನ ಪಂದ್ಯದಲ್ಲಿ ಬೈ ಪಡೆದ ಕಾರಣ ಈ ಜೋಡಿ ಎರಡನೇ ಸುತ್ತಿನಲ್ಲಿ ತನ್ನ ಅಭಿಯಾನವನ್ನು ಪ್ರಾರಂಭಿಸಲಿದ್ದಾರೆ.

ಇದನ್ನೂ ಓದಿ India Open 2024 Final: ಇಂಡಿಯಾ ಓಪನ್​ ಫೈನಲ್​ನಲ್ಲಿ ಚಿರಾಗ್‌-ಸಾತ್ವಿಕ್‌ ಜೋಡಿಗೆ ಸೋಲು

ಪ್ಯಾರಿಸ್​ ಒಲಿಂಪಿಕ್ಸ್​ಗೆ ಇನ್ನು ಕೆಲವೇ ತಿಂಗಳು ಮಾತ್ರ ಬಾಕಿ ಇರುವ ಕಾರಣದಿಂದ ಅವರು ಕಠಿಣ ಅಭ್ಯಾಸದ ಮೊರೆ ಹೋಗಿರುವ ಕಾರಣ ಅವಳಿ ಒಪಿಂಪಿಕ್​ ಪದಕ ವಿಜೇತೆ ಸಿಂಧು ಈ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಪ್ರತಿಷ್ಠಿತ ಉಬರ್‌ ಕಪ್‌(Uber Cup) ಟೂರ್ನಿಯಿಂದಲೂ ಸಿಂಧು ಹೊರಗುಳಿದಿದ್ದರು. ಸಿಂಧು ಟೋಕಿಯೊ ಒಲಿಂಪಿಕ್ಸ್​ ಬಳಿಕ ಆಡಿದ ಎಲ್ಲ ಪ್ರಮುಖ ಟೂರ್ನಿಯಲ್ಲಿಯೂ ಕಳಪೆ ಪ್ರದರ್ಶನ ತೋರುವ ಮೂಲಕ ಸೋಲು ಕಾಣುತ್ತಲೇ ಬಂದಿದ್ದಾರೆ. ಅದರಲ್ಲೂ ಕಳೆದ ಒಂದು ವರ್ಷಗಳಲ್ಲಿ ನಡೆದ ಟೂರ್ನಿಗಳಲ್ಲಿ ದ್ವಿತೀಯ ಹಂತಕ್ಕೆ ಏರಿದ್ದೇ ಅವರ ದೊಡ್ಡ ಸಾಧನೆಯಾಗಿತ್ತು. 

40 ವರ್ಷದ ಹಫೀಜ್ ಅವರ ಬಳಿ ಸಿಂಧು ಕೆಲ ತಿಂಗಳುಗಳ ಹಿಂದೆಯೇ ತರಬೇತಿ ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ. ಒಟ್ಟಾರೆ ಸಿಂಧು ಅವರು ಹಫೀಜ್ ಅವರ ಮಾರ್ಗದರ್ಶನದಲ್ಲಿ ಉತ್ತಮ ಲಯ ಕಂಡುಕೊಳ್ಳುವ ಮೂಲಕ ಪ್ಯಾರಿಸ್​ನಲ್ಲಿ ನಡೆಯುವ ಒಲಿಂಪಿಕ್ಸ್​ನಲ್ಲಿ ಪದಕ ಗೆಲ್ಲುವಂತಾಗಲಿ ಎನ್ನುವುದು ಸಿಂಧು ಅಭಿಮಾನಿಗಳ ಆಶಯವಾಗಿದೆ.

Continue Reading

ಕ್ರೀಡೆ

Thomas Cup 2024: ಉಬೆರ್‌ ಕಪ್‌ ಬಳಿಕ ಥಾಮಸ್‌ ಕಪ್​ನಲ್ಲಿಯೂ ಮುಗ್ಗರಿಸಿದ ಭಾರತ

Thomas Cup 2024: ಪುರುಷರ ಸಿಂಗಲ್ಸ್‌ನ ಮೊದಲ ಪಂದ್ಯದಲ್ಲಿ ಪ್ರಣಯ್ 15-21 21-11 21-14 ತೀವ್ರ ಹೋರಾಟ ನಡೆಸಿದರೂ ಶಿ ಯು ಕಿ ವಿರುದ್ಧ ಸೋಲು ಕಂಡರು. ಆ ಬಳಿಕ ಆಡಿದ ಡಬಲ್ಸ್​ನಲ್ಲಿ ಬರವಸೆಯ ಜೋಡಿ ವಿಶ್ವ ನಂ.3 ಸಾತ್ವಿಕ್‌-ಚಿರಾಗ್‌ ಶೆಟ್ಟಿ 21-15 11-21 21-12 ಅಂತರದಿಂದ ಲಿಯಾಂಗ್ ವೀ ಕೆಂಗ್- ವಾಂಗ್ ಚಾಂಗ್ ಜೋಡಿ ವಿರುದ್ಧ ಸೋತರು.

VISTARANEWS.COM


on

Thomas Cup 2024
Koo

ಚೆಂಗ್ಡು(ಚೀನಾ): ಸತತ 2ನೇ ಬಾರಿ ಥಾಮಸ್‌ ಕಪ್‌(Thomas Cup 2024) ಗೆಲ್ಲುವ ನಿರೀಕ್ಷೆಯೊಂದಿಗೆ ಕಣಕ್ಕಿಳಿದಿದ್ದ ಭಾರತ ಪುರುಷರ ಬ್ಯಾಡ್ಮಿಂಟನ್​ ತಂಡ ಕ್ವಾರ್ಟರ್​ ಫೈನಲ್​ನಲ್ಲಿ ಚೀನಾ ವಿರುದ್ಧ 1-3 ಅಂತರದಲ್ಲಿ ಪರಾಭವಗೊಳ್ಳುವ ಮೂಲಕ ನಿರಾಸೆ ಮೂಡಿಸಿದೆ. ಇದಕ್ಕೂ ಮುನ್ನ ನಡೆದ ಉಬೆರ್‌ ಕಪ್‌(Uber Cup 2024) ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ಮಹಿಳಾ ತಂಡ ಕೂಡ ಕ್ವಾರ್ಟರ್​ ಫೈನಲ್​ನಲ್ಲಿ ಸೋಲು ಕಂಡಿತ್ತು. ಉಭಯ ತಂಡಗಳು ಕೂಡ ಸೋಲು ಕಾಣುವ ಮೂಲಕ ಭಾರತದ ಪದಕ ನಿರೀಕ್ಷೆ ಹುಸಿಯಾಯಿತು.

ಪುರುಷರ ಸಿಂಗಲ್ಸ್‌ನ ಮೊದಲ ಪಂದ್ಯದಲ್ಲಿ ಪ್ರಣಯ್ 15-21 21-11 21-14 ತೀವ್ರ ಹೋರಾಟ ನಡೆಸಿದರೂ ಶಿ ಯು ಕಿ ವಿರುದ್ಧ ಸೋಲು ಕಂಡರು. ಆ ಬಳಿಕ ಆಡಿದ ಡಬಲ್ಸ್​ನಲ್ಲಿ ಬರವಸೆಯ ಜೋಡಿ ವಿಶ್ವ ನಂ.3 ಸಾತ್ವಿಕ್‌-ಚಿರಾಗ್‌ ಶೆಟ್ಟಿ 21-15 11-21 21-12 ಅಂತರದಿಂದ ಲಿಯಾಂಗ್ ವೀ ಕೆಂಗ್- ವಾಂಗ್ ಚಾಂಗ್ ಜೋಡಿ ವಿರುದ್ಧ ಸೋತರು. ಭಾರತಕ್ಕೆ ಗೆಲುವಿನ ಖಾತೆ ತೆರೆದದ್ದು ಲಕ್ಷ್ಯ ಸೇನ್‌ ಮಾತ್ರ. 2ನೇ ಸಿಂಗಲ್ಸ್​ನಲ್ಲಿ ಆಡಿದ ಸೇನ್ ಗೆಲುವು ಸಾಧಿಸಿ ಪಂದ್ಯವನ್ನು ಜೀವಂತವಿರಿಸಿದರು. ಆದರೆ 4ನೇ ಪಂದ್ಯದಲ್ಲಿ ಅರ್ಜುನ್‌-ಧ್ರುವ್‌ ಕಪಿಲಾ ಸೋಲುವುದರೊಂದಿಗೆ ಭಾರತ ಟೂರ್ನಿಯಿಂದ ಹೊರಬಿದ್ದಿತು. ಈ ಪಂದ್ಯದಲ್ಲಿ ಗೆಲ್ಲುತ್ತಿದ್ದರೆ 2-2 ಸಮಬಲ ಸಾಧಿಸಿ ಅಂತಿಮ ಹೋರಾಟಲ್ಲಿ ಗೆಲ್ಲುವ ಅವಕಾಶವಿತ್ತು.

ಮಹಿಳೆಯರಿಗೂ ಸೋಲು

ಉಬೆರ್‌ ಕಪ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿಯ ಕ್ವಾರ್ಟರ್​ ಫೈನಲ್(Uber Cup 2024 Quarterfinal)​ ಪಂದ್ಯದಲ್ಲಿ ಭಾರತದ(India) ಮಹಿಳಾ ತಂಡ ಜಪಾನ್(Japan)​ ವಿರುದ್ಧ 3-0 ಅಂತರದ ಸೋಲು ಕಾಣುವ ಮೂಲಕ ತನ್ನ ಅಭಿಯಾನವನ್ನು ಅಂತ್ಯಗೊಳಿಸಿತು. ಭಾರತ 1957, 2014 ಮತ್ತು 2016ರಲ್ಲಿ ಮೂರು ಬಾರಿ ಉಬರ್ ಕಪ್‌ನಲ್ಲಿ ಸೆಮಿಫೈನಲ್ ತಲುಪಿತ್ತು.

ಮೊದಲ ಮಹಿಳಾ ಸಿಂಗಲ್ಸ್‌ನಲ್ಲಿ ಅಶ್ಮಿತಾ ಚಲಿಹಾ 10-21, 22-20, 15-21 ರಲ್ಲಿ ಅಯಾ ಒಹೊರಿ ವಿರುದ್ಧ ಸೋತರು. ಮೊದಲ ಗೇಮ್‌ನಲ್ಲಿ ಲಯ ಕಂಡುಕೊಳ್ಳಲು ಹರಸಾಹಸಪಟ್ಟ ಚಲಿಹಾ ಎರಡನೇ ಗೇಮ್​ನಲ್ಲಿ ತಿರುಗಿ ಬಿದ್ದು 22-20 ಅಂತರದಿಂದ ಕೈವಶ ಮಾಡಿಕೊಳ್ಳುವ ಮೂಲಕ ಸಮಬಲ ಸಾಧಿಸಿದರು. ಆದರೆ ನಿರ್ಣಾಯಕ ಗೇಮ್​ನಲ್ಲಿ ಸೋಲು ಕಂಡರು.

ಡಬಲ್ಸ್​ನಲ್ಲಿ ಕೆ.ಪ್ರಿಯಾ-ಶ್ರುತಿ ಮಿಶ್ರಾ ಜೋಡಿಯನ್ನು ನಮಿ ಮತ್ಸುಯಾಮಾ-ಚಿಹರು ಶಿದಾ ಸೇರಿಕೊಂಡು 8-21, 9-21 ನೇರ ಗೇಮ್​ಗಳಿಂದ ಹಿಮ್ಮೆಟ್ಟಿಸಿದರು. ದ್ವಿತೀಯ ಮಹಿಳಾ ಸಿಂಗಲ್ಸ್​ನಲ್ಲಿ ಇಶಾರಾಣಿ ಶಾರಾಣಿ ಬರುಹಾ ಅವರನ್ನು 15-21, 12-21 ನೇರ ಗೇಮ್​ಗಳ ಅಂತದಿಂದ 2017ರ ವಿಶ್ವ ಚಾಂಪಿಯನ್‌ ಜಪಾನಿನ ನೊಜೊಮಿ ಒಕುಹಾರ ಮಣಿಸಿದರು. ಈ ಸೋಲಿನೊಂದಿಗೆ ಭಾರತ ತಂಡದ ಸವಾಲು ಕೂಡ ಅತ್ಯಂಗೊಂಡಿತು.

Continue Reading

ಕ್ರೀಡೆ

Uber Cup 2024 Quarterfinal: ಭಾರತದ ಸವಾಲು ಅಂತ್ಯ; ಜಪಾನ್​ ವಿರುದ್ಧ ಕ್ವಾ. ಫೈನಲ್​ನಲ್ಲಿ ಸೋಲು

Uber Cup 2024 Quarterfinal: ಭಾರತ 1957, 2014 ಮತ್ತು 2016ರಲ್ಲಿ ಮೂರು ಬಾರಿ ಉಬರ್ ಕಪ್‌ನಲ್ಲಿ ಸೆಮಿಫೈನಲ್ ತಲುಪಿತ್ತು. ಈ ಬಾರಿ ಚೊಚ್ಚಲ ಬಾರಿಗೆ ಫೈನಲ್​ ಪ್ರವೇಶಿಸುವ ನಿರೀಕ್ಷೆ ಮಾಡಲಾಗಿತ್ತು. ಆದರೆ ಕ್ವಾರ್ಟರ್​ ಫೈನಲ್​ನಲ್ಲಿ ಸೋಲು ಕಾಣುವ ಮೂಲಕ ನಿರೀಕ್ಷೆ ಹುಸಿಯಾಗಿದೆ.

VISTARANEWS.COM


on

Uber Cup 2024 Quarterfinal
Koo

ಚೆಂಗ್ಡು (ಚೀನಾ): ಉಬೆರ್‌ ಕಪ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿಯ ಕ್ವಾರ್ಟರ್​ ಫೈನಲ್(Uber Cup 2024 Quarterfinal)​ ಪಂದ್ಯದಲ್ಲಿ ಭಾರತದ(India) ಮಹಿಳಾ ತಂಡ ಜಪಾನ್(Japan)​ ವಿರುದ್ಧ 3-0 ಅಂತರದ ಸೋಲು ಕಾಣುವ ಮೂಲಕ ತನ್ನ ಅಭಿಯಾನವನ್ನು ಅಂತ್ಯಗೊಳಿಸಿದೆ. ಗುರುವಾರ ನಡೆದ ಈ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಜಪಾನ್​ ಸೆಮಿಫೈನಲ್​ಗೆ ಪ್ರವೇಶಿಸಿದೆ. ಶುಕ್ರವಾರ ನಡೆಯಲಿರುವ ಸೆಮಿಫೈನಲ್​ ಪಂದ್ಯದಲ್ಲಿ ಜಪಾನ್​ ತಂಡ 6 ಬಾರಿಯ ಚಾಂಪಿಯನ್​ ​ಚೀನಾದ ಸವಾಲು ಎದುರಿಸಲಿದೆ.

ಮೊದಲ ಮಹಿಳಾ ಸಿಂಗಲ್ಸ್‌ನಲ್ಲಿ ಅಶ್ಮಿತಾ ಚಲಿಹಾ 10-21, 22-20, 15-21 ರಲ್ಲಿ ಅಯಾ ಒಹೊರಿ ವಿರುದ್ಧ ಸೋತರು. ಮೊದಲ ಗೇಮ್‌ನಲ್ಲಿ ಲಯ ಕಂಡುಕೊಳ್ಳಲು ಹರಸಾಹಸಪಟ್ಟ ಚಲಿಹಾ ಎರಡನೇ ಗೇಮ್​ನಲ್ಲಿ ತಿರುಗಿ ಬಿದ್ದು 22-20 ಅಂತರದಿಂದ ಕೈವಶ ಮಾಡಿಕೊಳ್ಳುವ ಮೂಲಕ ಸಮಬಲ ಸಾಧಿಸಿದರು. ಆದರೆ ನಿರ್ಣಾಯಕ ಗೇಮ್​ನಲ್ಲಿ ಸೋಲು ಕಂಡರು.

ಮೊದಲ ಮಹಿಳಾ ಡಬಲ್ಸ್​ನಲ್ಲಿ ಕೆ.ಪ್ರಿಯಾ-ಶ್ರುತಿ ಮಿಶ್ರಾ ಜೋಡಿಯನ್ನು ನಮಿ ಮತ್ಸುಯಾಮಾ-ಚಿಹರು ಶಿದಾ ಸೇರಿಕೊಂಡು 8-21, 9-21 ನೇರ ಗೇಮ್​ಗಳಿಂದ ಹಿಮ್ಮೆಟ್ಟಿಸಿದರು. ದ್ವಿತೀಯ ಮಹಿಳಾ ಸಿಂಗಲ್ಸ್​ನಲ್ಲಿ ಇಶಾರಾಣಿ ಶಾರಾಣಿ ಬರುಹಾ ಅವರನ್ನು 15-21, 12-21 ನೇರ ಗೇಮ್​ಗಳ ಅಂತದಿಂದ 2017ರ ವಿಶ್ವ ಚಾಂಪಿಯನ್‌ ಜಪಾನಿನ ನೊಜೊಮಿ ಒಕುಹಾರ ಮಣಿಸಿದರು. ಈ ಸೋಲಿನೊಂದಿಗೆ ಭಾರತ ತಂಡದ ಸವಾಲು ಕೂಡ ಅತ್ಯಂಗೊಂಡಿತು. ಭಾರತ 1957, 2014 ಮತ್ತು 2016ರಲ್ಲಿ ಮೂರು ಬಾರಿ ಉಬರ್ ಕಪ್‌ನಲ್ಲಿ ಸೆಮಿಫೈನಲ್ ತಲುಪಿತ್ತು. ಈ ಬಾರಿ ಚೊಚ್ಚಲ ಬಾರಿಗೆ ಫೈನಲ್​ ಪ್ರವೇಶಿಸುವ ನಿರೀಕ್ಷೆ ಮಾಡಲಾಗಿತ್ತು. ಆದರೆ ಕ್ವಾರ್ಟರ್​ ಫೈನಲ್​ನಲ್ಲಿ ಸೋಲು ಕಾಣುವ ಮೂಲಕ ನಿರೀಕ್ಷೆ ಹುಸಿಯಾಗಿದೆ.

ಇದನ್ನೂ ಓದಿ Thomas Cup 2024: ಅಂತಿಮ ಲೀಗ್​ ಪಂದ್ಯದಲ್ಲಿ ಇಂಡೊನೇಷ್ಯಾಕ್ಕೆ ಮಣಿದ ಭಾರತ

ಥಾಮಸ್‌ ಕಪ್‌: ಇಂದು ಭಾರತ-ಚೀನಾ ಸೆಣಸಾಟ


ಇಂದು ನಡೆಯುವ ಪುರುಷರ ಥಾಮಸ್‌ ಕಪ್‌(Thomas Cup 2024) ಟೂರ್ನಿಯ ಕ್ವಾರ್ಟರ್​ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಗಿರುವ ಭಾರತ(Indian men’s Badminton team) ತಂಡ ಬದ್ಧ ಎದುರಾಳಿ ಚೀನಾ ತಂಡದ ಸವಾಲು ಎದುರಿಸಲಿದೆ. ಬುಧವಾರ ನಡೆದಿದ್ದ ಅಂತಿಮ ಲೀಗ್​ ಪಂದ್ಯದಲ್ಲಿ ಭಾರತ 14 ಬಾರಿಯ ಚಾಂಪಿಯನ್ ಇಂಡೊನೇಷ್ಯಾ ವಿರುದ್ಧ 1-4 ಅಂತರದಿಂದ ಸೋಲನುಭವಿಸಿತ್ತು. ಸೋಮವಾರ ನಡೆದಿದ್ದ ‘ಸಿ’ ಗುಂಪಿನ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್‌ ವಿರುದ್ಧ 5-0 ಅಂತರದಿಂದ, ಮೊದಲ ಪಂದ್ಯದಲ್ಲಿ ಥಾಯ್ಲೆಂಡ್ ವಿರುದ್ಧ 4-1 ಅಂತರದ ಭರ್ಜರಿ ಗೆಲುವು ಸಾಧಿಸಿತ್ತು.

Continue Reading

ಬ್ಯಾಡ್ಮಿಂಟನ್

Thomas Cup 2024: ಅಂತಿಮ ಲೀಗ್​ ಪಂದ್ಯದಲ್ಲಿ ಇಂಡೊನೇಷ್ಯಾಕ್ಕೆ ಮಣಿದ ಭಾರತ

Thomas Cup 2024: ಥಾಮಸ್‌ ಕಪ್‌(Thomas Cup 2024) ಟೂರ್ನಿಯ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಭಾರತ ತಂಡ ಚೀನಾದ ಸವಾಲು ಎದುರಿಸಲಿದೆ.

VISTARANEWS.COM


on

Thomas Cup 2024
Koo

ಚೆಂಗ್ಡು (ಚೀನಾ): ಥಾಮಸ್‌ ಕಪ್‌(Thomas Cup 2024) ಟೂರ್ನಿಯಲ್ಲಿ ಈಗಾಗಗಲೇ ಕ್ವಾರ್ಟರ್​ ಫೈನಲ್​ ಪ್ರವೇಶಿಸಿರುವ ಹಾಲಿ ಚಾಂಪಿಯನ್ ಭಾರತ(Indian men’s Badminton team) ತಂಡ ತನ್ನ ಅಂತಿಮ ಲೀಗ್​ ಪಂದ್ಯದಲ್ಲಿ 14 ಬಾರಿಯ ಚಾಂಪಿಯನ್ ಇಂಡೊನೇಷ್ಯಾ ವಿರುದ್ಧ 1-4 ಅಂತರದಿಂದ ಸೋಲನುಭವಿಸಿದೆ. ಭಾರತ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಚೀನಾದ ಸವಾಲು ಎದುರಿಸಲಿದೆ. ಇಂಡೊನೇಷ್ಯಾ ತಂಡ ಕೊರಿಯಾ ವಿರುದ್ಧ ಆಡಲಿದೆ.

ಬುಧವಾರ ನಡೆದ ‘ಸಿ’ ಗುಂಪಿನ ಪಂದ್ಯದಲ್ಲಿ ಭಾರತ ಮೊದಲು ಗೆಲುವಿನಿ ಖಾತೆ ತೆರೆದರೂ ಕೂಡ ಆ ಬಳಿಕದ ಪಂದ್ಯಗಳಲ್ಲಿ ಇದೇ ಲಯವನ್ನು ಮುಂದುವರಿಸುವಲ್ಲಿ ವಿಫವಾಗಿ ಸೋಲನುಭವಿಸಿತು. ಇಂಡೊನೇಷ್ಯಾ ಲೀಗ್​ನಲ್ಲಿ ಆಡಿದ ಎಲ್ಲ ಮೂರೂ ಪಂದ್ಯ ಗೆದ್ದು ಅಗ್ರಸ್ಥಾನ ಪಡೆಯಿತು. ಭಾರತ ಎರಡು ಗೆಲುವಿನೊಂದಿಗೆ ಎರಡನೇ ಸ್ಥಾನ ಪಡೆಯಿತು.

ಸೇಡು ತೀರಿಸಿಕೊಂಡ ಇಂಡೊನೇಷ್ಯಾ


ಈ ಹಿಂದಿನ ಆವೃತ್ತಿಯ ಫೈನಲ್‌ನಲ್ಲಿ ಭಾರತ 3-0 ಅಂತರದಿಂದ ಇಂಡೊನೇಷ್ಯಾಗೆ ಹೀನಾಯವಾಗಿ ಸೋಲುಣಿಸಿ ಚೊಚ್ಚಲ ಪ್ರಶಸ್ತಿ ಗೆದ್ದಿತ್ತು. ಆ ಸೋಲಿಗೆ ಈ ಬಾರಿಯ ಟೂರ್ನಿಯಲ್ಲಿ ಇಂಡೊನೇಷ್ಯಾ ಸೇಡು ತೀರಿಸಿಕೊಂಡಿತು. ಸಿಂಗಲ್ಸ್​ನಲ್ಲಿ ಕಣಕ್ಕಿಳಿದ ಅನುಭವಿ ಎಚ್‌.ಎಸ್‌.ಪ್ರಣಯ್ 13-21, 21-12, 21-12 ಮೂರು ಗೇಮ್​ಗಳ ತೀವ್ರ ಹೋರಾಟದಿಂದ ಅಂಥೋನಿ ಜಿಂಟಿಂಗ್ ಅವರನ್ನು ಸೋಲಿಸಿ ಭಾರತಕ್ಕೆ ಆರಂಭಿಕ ಮುನ್ನಡೆ ಒದಗಿಸಿದ್ದರು. ಆದರೆ ಡಬಲ್ಸ್‌ನಲ್ಲಿ ಬರವಸೆಯ ಜೋಡಿ ಸಾತ್ವಿಕ್‌ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ 24-22, 22-24, 19-21 ಗೇಮ್​ಗಳ ಅಂತರದಲ್ಲಿ ಮುಹಮ್ಮದ್ ಶೊಹಿನುಲ್ ಫಿಕ್ರಿ- ಬಗಾಸ್ ಮೌಲಾನಾ ಎದುರು ಶರಣಾದರು.

1-1 ಸಮಬಲಗೊಂಡ ವೇಳೆ ಮೂರನೇ ಪಂದ್ಯದಲ್ಲಿ ಆಡಲಿಳಿದ 22 ವರ್ಷದ ಲಕ್ಷ್ಯ ಸೇನ್ 18-21, 21-16, 17-21ರಲ್ಲಿ ಆಲ್‌ ಇಂಗ್ಲೆಂಡ್ ಸಿಂಗಲ್ಸ್ ಚಾಂಪಿಯನ್ ಜೊನಾಥನ್ ಕ್ರಿಸ್ಟಿ ವಿರುದ್ಧ ಸೋಲು ಕಂಡರು. ಎದುರಾಳಿ ಇಂಡೊನೇಷ್ಯಾ 2-1 ಅಂತರದ ಮುನ್ನಡೆ ಸಾಧಿಸಿತು. ನಾಲ್ಕನೇ ಪಂದ್ಯದಲ್ಲಿ ಧ್ರುವ್ ಕಪಿಲ- ಸಾಯಿ ಪ್ರತೀಕ್ ಜೋಡಿ 20-22, 11-21ರಲ್ಲಿ ಲಿಯೊ ರೋಲಿ ಕರ್ನಾಲ್ಡೊ – ಡೇನಿಯಲ್ ಮಾರ್ಟಿನ್ ಅವರಿಗೆ ನೇರ ಗೇಮ್‌ಗಳಲ್ಲಿ ಮಣಿದರು. ಅಂತಿಮ ಸಿಂಗಲ್ಸ್‌ ಪಂದ್ಯದಲ್ಲಿ ಕಿದಂಬಿ ಶ್ರೀಕಾಂತ್ 21-19, 22-24, 14-21ರಲ್ಲಿ ಚಿಕೊ ಆರೊ ದ್ವಿ ವಾರ್ಡೊಯೊ ಎದುರು ಸೋಲು ಕಾಣುವ ಮೂಲಕ ಭಾರತದ ಸವಾಲು ಅಂತ್ಯಗೊಂಡಿತು.

ಇದನ್ನೂ ಓದಿ Thomas Cup 2024: ಕ್ವಾರ್ಟರ್‌ ಫೈನಲ್​ಗೆ ಲಗ್ಗೆಯಿಟ್ಟ ಹಾಲಿ ಚಾಂಪಿಯನ್​ ಭಾರತ

ಸೋಮವಾರ ನಡೆದಿದ್ದ ‘ಸಿ’ ಗುಂಪಿನ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್‌ ವಿರುದ್ಧ 5-0 ಅಂತರದಿಂದ ಭರ್ಜರಿ ಗೆಲುವು ಸಾಧಿಸಿತ್ತು. ಮೊದಲ ಪಂದ್ಯದಲ್ಲಿ ಭಾರತ 4-1 ಅಂತರದಿಂದ ಥಾಯ್ಲೆಂಡ್ ತಂಡವನ್ನು ಸೋಲಿಸಿತ್ತು.

ಉಬೆರ್‌ ಕಪ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿಯ “ಎ’ ವಿಭಾಗದ ಕೊನೆಯ ಸುತ್ತಿನ ಪಂದ್ಯದಲ್ಲಿ ಭಾರತದ ಮಹಿಳೆಯರು ಆತಿಥೇಯ ಚೀನಕ್ಕೆ 5-0 ಅಂತರದಿಂದ ಸೋಲು ಕಂಡಿದ್ದರು.

Continue Reading
Advertisement
pm narendra modi yogi adityanath
ಪ್ರಮುಖ ಸುದ್ದಿ3 mins ago

PM Narendra Modi: ʼಗೂಂಡಾರಾಜ್‌ʼ ನೆನಪಿಸಿದ ಮೋದಿ, ʼಯೋಗಿ ಸ್ವಚ್ಛತಾ ಅಭಿಯಾನ…ʼಕ್ಕೆ ಮೆಚ್ಚುಗೆ

Viral video
ವೈರಲ್ ನ್ಯೂಸ್11 mins ago

Viral Video: ಪನ್ನೀರ್‌ ಬಿರಿಯಾನಿಯಲ್ಲಿ ಚಿಕನ್‌ ಪೀಸ್‌.. ಜೊಮ್ಯಾಟೊದಿಂದ ಮತ್ತೊಂದು ಎಡವಟ್ಟು

Head Coach
ಕ್ರೀಡೆ13 mins ago

Head Coach: ದ್ರಾವಿಡ್ ಬಳಿಕ ಕೋಚ್ ಹುದ್ದೆ ನಿರಾಕರಿಸಿದ ಟೀಮ್​ ಇಂಡಿಯಾದ ಸ್ಟಾರ್​ ಮಾಜಿ ಆಟಗಾರ

Drowned in water
ಹಾಸನ37 mins ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

HD DeveGowda Wont celebrate 92nd birthday
ರಾಜಕೀಯ41 mins ago

HD Devegowda: 92ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳಲ್ಲ ಎಂದ ಎಚ್‌ಡಿ ದೇವೇಗೌಡ; ಮೊಮ್ಮಗನ ಕೇಸ್‌ನಿಂದ ಈ ತೀರ್ಮಾನ?

hd revanna case
ಕ್ರೈಂ44 mins ago

HD Revanna Case: ಎಚ್‌ಡಿ ರೇವಣ್ಣ ಮತ್ತೆ ಕೋರ್ಟ್‌ನಲ್ಲಿ; ಎಸ್‌ಐಟಿ ಅಧಿಕಾರಿಗಳು ರೇವಣ್ಣ ನಿವಾಸದಲ್ಲಿ!

Murder case
ದಾವಣಗೆರೆ55 mins ago

Murder Case : ಚಾಕುವಿನಿಂದ ಇರಿದು ಯುವಕನ ಕೊಲೆ; ಹಂತಕರಿಗಾಗಿ ಪೊಲೀಸರ ಹುಡುಕಾಟ

Amruthadhaare Serial bhoomika in birthday chaya singh
ಕಿರುತೆರೆ57 mins ago

Amruthadhaare Serial: ಇಂದು ಭೂಮಿಕಾಗೆ ಹುಟ್ಟು ಹಬ್ಬ: ರೀಲ್‌ ಗಂಡ ಎಸ್ಟೇಟ್​ ಬರೆದು ಕೊಟ್ರು! ರಿಯಲ್‌ ಗಂಡ ಕೊಟ್ಟ ಗಿಫ್ಟ್‌ ಏನು?

Theft in two houses in Kudligi taluk
ವಿಜಯನಗರ60 mins ago

Theft Case: ಕೂಡ್ಲಿಗಿಯ ಎರಡು ಮನೆಗಳಲ್ಲಿ ಕಳ್ಳತನ; ಬಂಗಾರ, ಬೆಳ್ಳಿ, ನಗದು ದೋಚಿದ ಕಳ್ಳರು

Prajwal Revanna Case Lawyer DevarajeGowda sent to police custody for another day
ಕ್ರೈಂ1 hour ago

Prajwal Revanna Case: ವಕೀಲ ದೇವರಾಜೇಗೌಡ ಮತ್ತೊಂದು ದಿನ ಪೊಲೀಸ್‌ ಕಸ್ಟಡಿಗೆ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case
ಕರ್ನಾಟಕ1 day ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ1 day ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ2 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20242 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20242 days ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

HD Revanna Bail I am not happy that Revanna has been released says HD Kumaraswamy
ರಾಜಕೀಯ2 days ago

HD Revanna Bail: ರೇವಣ್ಣ ಬಿಡುಗಡೆಯಾಗಿದ್ದಕ್ಕೆ ನಾನಂತೂ ಖುಷಿ ಪಡಲ್ಲ ಎಂದ ಎಚ್‌ಡಿಕೆ!

karnataka Rain Effected
ಬೆಂಗಳೂರು2 days ago

Karnataka Rain: ಮಿಡ್‌ನೈಟ್‌ ಮಳೆ ಅವಾಂತರ; ಮರಗಳು, ವಿದ್ಯುತ್‌ ಕಂಬಗಳು ಧರೆಗೆ, ಕುಸಿದು ಬಿದ್ದ ಮನೆ

Dina Bhavishya
ಭವಿಷ್ಯ2 days ago

Dina Bhavishya : ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡ್ಬಹುದು ಎಚ್ಚರ!

HD Revanna Bail Revanna will not leave the country condition imposed by the court
ಕ್ರೈಂ3 days ago

HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

HD Revanna Bail
ಕ್ರೈಂ3 days ago

HD Revanna Bail: ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು; ಎಸ್‌ಐಟಿಗೆ ಮುಖಭಂಗ!

ಟ್ರೆಂಡಿಂಗ್‌