Nail Art Craze | ಯುವತಿಯರಲ್ಲಿ ಹೆಚ್ಚುತ್ತಿದೆ ನೇಲ್‌ ಆರ್ಟ್ ಕ್ರೇಜ್ - Vistara News

ಫ್ಯಾಷನ್

Nail Art Craze | ಯುವತಿಯರಲ್ಲಿ ಹೆಚ್ಚುತ್ತಿದೆ ನೇಲ್‌ ಆರ್ಟ್ ಕ್ರೇಜ್

ಕೇವಲ ಸೆಲೆಬ್ರೆಟಿಗಳಿಗೆ ಮಾತ್ರ ಸೀಮಿತವಾಗಿದ್ದ, ನೇಲ್ ಆರ್ಟ್ ಲವ್‌ ಇದೀಗ ಸಾಮಾನ್ಯ ಯುವತಿಯರಲ್ಲೂ ಕ್ರೇಜ್ ಹುಟ್ಟಿಸಿದೆ. ಈ ಬಗ್ಗೆ ಇಲ್ಲಿದೆ ವರದಿ.

VISTARANEWS.COM


on

Nail art Craze
ಚಿತ್ರಕೃಪೆ : ಪಿಕ್ಸೆಲ್‌
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಯುವತಿಯರಲ್ಲಿ ಇದೀಗ ನೇಲ್‌ ಆರ್ಟ್ ಕ್ರೇಝ್‌ ಹೆಚ್ಚಿದೆ. ಕೇವಲ ಐಬ್ರೋ, ಫೇಶಿಯಲ್‌, ಹೇರ್‌ ಕಲರಿಂಗ್‌, ಮೇಕ್‌ಓವರ್‌ ಹಾಗೂ ಇತರೇ ಬ್ಯೂಟಿ ಆರೈಕೆಗಳಿಗೆ ಸೀಮಿತವಾಗಿದ್ದ ಹೆಣ್ಣುಮಕ್ಕಳ ಕ್ರೇಜ್ ಇದೀಗ ನೇಲ್‌ ಆರ್ಟ್‌ನತ್ತ ವಾಲಿದೆ.

Nail art Craze

ತಾರೆಯರಿಂದ ಸಾಮಾನ್ಯ ಹುಡುಗಿಯವರೆಗೆ

ಮೊದಲೆಲ್ಲಾ ತಾರೆಯರು, ಮಾಡೆಲ್‌ಗಳು ಮಾತ್ರ ನೇಲ್‌ ಆರ್ಟ್ ಪ್ರಿಯರಾಗಿದ್ದರು. ಈಗ ಹಾಗಿಲ್ಲ. ಬಹುತೇಕ ಜೆನ್‌ ಝಿ ಹುಡುಗಿಯರು ನೇಲ್‌ ಆರ್ಟ್‌ನತ್ತ ವಾಲಿದ್ದಾರೆ. ಇನ್ನು ವಿವಾಹಿತ ಮಹಿಳೆಯರು ಮನೆಯ ಯಾವುದೇ ಸಮಾರಂಭಗಳು ಹಾಗೂ ಕುಟುಂಬದ ಮದುವೆಗಳಿದ್ದಲ್ಲಿ ನೇಲ್ ಆರ್ಟ್ ಮಾಡಿಸಿಕೊಳ್ಳುವುದು ಕಾಮನ್‌ ಆಗಿ ಹೋಗಿದೆ.

Nail art Craze

“ನೇಲ್ಆರ್ಟ್ ಒಂದು ಕಲೆ. ಅದಕ್ಕೆ ಈಗ ಮಾನ್ಯತೆ ದೊರೆತಿದೆ. ಈ ಹಿಂದೆ ನೇಲ್‌ಆರ್ಟ್ ಎಂದರೆ ಕೇವಲ ಸೆಲೆಬ್ರಿಟಿಗಳಿಗೆ ಮಾತ್ರ ಸೀಮಿತವಾಗಿತ್ತು. ಇದೀಗ ಸಾಮಾನ್ಯ ಹುಡುಗಿಯರೂ ನೇಲ್‌ ಆರ್ಟ್ ಪ್ರಿಯರು ಈ ಕ್ರೇಜ್‌ಗೆ ಮೊರೆ ಹೋಗಿದ್ದಾರೆ. ಅದರಲ್ಲೂ ದೊಡ್ಡ ದೊಡ್ಡ ಸಮಾರಂಭಗಳಿಗೆ ನೇಲ್‌ ಆರ್ಟ್ ಮಾಡಿಸಿಕೊಳ್ಳುವವರು ಹೆಚ್ಚು” ಎನ್ನುತ್ತಾರೆ ನೇಲ್ ಆರ್ಟ್ ತಜ್ಞೆ ರಾಶಿ.

Nail art Craze

ನೇಲ್‌ ಬಾರ್‌ಗಳ ಸಂಖ್ಯೆ ಹೆಚ್ಚಳ

ಕೇವಲ ಬ್ಯೂಟಿ ಪಾರ್ಲರ್‌ಗಳಲ್ಲಿ ಮಾತ್ರವಲ್ಲ, ಇದೀಗ ಪ್ರತ್ಯೇಕವಾಗಿ ನೇಲ್‌ ಸಲೂನ್‌ ಇಲ್ಲವೇ ನೇಲ್‌ ಬಾರ್‌ ಹೆಸರಲ್ಲಿ ಇವು ಆರಂಭವಾಗಿವೆ. ಅಷ್ಟೇ ಏಕೆ? ಬಹಳಷ್ಟು ಬ್ಯೂಟಿ ಪಾರ್ಲರ್‌ಗಳು ಕೂಡ ತರಬೇತಿ ಪಡೆದ ನೇಲ್‌ ಆರ್ಟ್ ಎಕ್ಸ್‌ಪರ್ಟ್‌ಗಳನ್ನು ನೇಮಿಸಿಕೊಂಡಿದ್ದಾರೆ. ಸರ್ವೀಸ್‌ ನೀಡುತ್ತಿದ್ದಾರೆ. ಇನ್ನು ಕೆಲವು ನೇಲ್‌ ಆರ್ಟ್‌ ವಿಭಾಗವನ್ನು ಆರಂಭಿಸಿ, ಪ್ಯಾಕೇಜ್‌ ಸೇವೆ ನೀಡುತ್ತಿವೆ.

ದುಬಾರಿ ನೇಲ್ಆರ್ಟ್

ಅಂದ ಹಾಗೆ, ನೇಲ್ಆರ್ಟ್ ದರ ಆಯಾ ಡಿಸೈನ್‌ಗೆ ತಕ್ಕಂತಿರುತ್ತದೆ. ಅದರಲ್ಲೂ ಈ ನೇಲ್ಆರ್ಟ್ ಮಾಡಲು ಗಂಟೆಗಟ್ಟಲೆ ಸಮಯ ಬೇಕಾಗುತ್ತದೆ. ನೇಲ್‌ ಆರ್ಟ್ ತಜ್ಞರು ಎರಡು ಕೈಗಳಿಗೆ ನೇಲ್ಆರ್ಟ್ ಮಾಡಲು ಕನಿಷ್ಠವೆಂದರೂ ೨ ಗಂಟೆ ತೆಗೆದುಕೊಳ್ಳುತ್ತಾರೆ. ನೇಲ್‌ ಆರ್ಟ್‌ನಲ್ಲೂ ನಾನಾ ವಿಧಗಳಿವೆ. ಸಿಂಪಲ್‌, ಫಂಕಿ, ಸ್ಟಿಕ್ಕರ್‌, ಸ್ಟೆನ್ಸಿಲ್‌, ಏರ್ಬ್ರಶ್‌ ನೇಲ್ಆರ್ಟ್‌ಗಳು ಸೇರಿದಂತೆ ಸಾಕಷ್ಟು ಬಗೆಯವು ಪಾಪ್ಯುಲರ್‌ ಆಗಿವೆ. ಆದರೆ, ಇತರೇ ಬ್ಯೂಟಿ ಸರ್ವೀಸ್‌ಗಳಿಗಿಂತ ದುಬಾರಿ ಎಂಬುದನ್ನು ಮರೆಯಬಾರದು.

Nail art Craze

ನೇಲ್ಆರ್ಟ್ ಪ್ರಿಯರಿಗೆ ಒಂದಿಷ್ಟು ಸಲಹೆಗಳು

  • ನೇಲ್ ಆರ್ಟ್ ಡಿಸೈನ್‌ಗೆ ತಕ್ಕಂತೆ ಬೆಲೆ ನಿಗದಿಯಾಗಿರುತ್ತದೆ.
  • ನೇಲ್ ಆರ್ಟ್ ಗೂ ಮುನ್ನ ಮೆನಿಕ್ಯೂರ್‌-ಪೆಡಿಕ್ಯೂರ್‌ಗೆ ಒಳಗಾಗುವುದು ಅಗತ್ಯ.
  • ಮೊದಲೇ ಯಾವ ಆರ್ಟ್ ಸೂಟ್‌ ಆಗುವುದು ಎಂಬುದನ್ನು ತಿಳಿದುಕೊಳ್ಳಿ.
  • ಮನೆಯ ಬೇಸಿಕ್‌ ಕೆಲಸ ಮಾಡುವವರಿಗೆ ನೇಲ್ಆರ್ಟ್ ಬೇಡ.
  • ನೀರಿನಲ್ಲಿ ಕೆಲಸ ಮಾಡಿದಲ್ಲಿ ನೇಲ್‌ಆರ್ಟ್ ನಿಲ್ಲದು.
  • ನೇಲ್‌ಆರ್ಟ್ ಮಾಡಿಸಿದ ನಂತರ ಉಗುರುಗಳನ್ನು ಯಾವುದೇ ಸಮಯದಲ್ಲೂ ಬಳಸಕೂಡದು. ಮುರಿದು ಹೋಗುವ ಸಂಭವವಿರುತ್ತದೆ.

    (ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ| Fashion trend | ಯಂಗ್‌ಲುಕ್‌ಗೆ ಸಾಥ್‌ ನೀಡುವ ವ್ರಾಪ್‌ ಹೆಡ್‌ಬ್ಯಾಂಡ್ಸ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಫ್ಯಾಷನ್

Haldi Shastra Fashion: ಮದುವೆಯ ಹಳದಿ ಶಾಸ್ತ್ರದ ಡ್ರೆಸ್‌ ಕೋಡ್‌ಗೆ 5 ಸಿಂಪಲ್‌ ಐಡಿಯಾ

ಮದುವೆಗೂ ಮುನ್ನ ನಡೆಯುವ ಹಳದಿ ಶಾಸ್ತ್ರಕ್ಕೂ (Haldi Shastra Fashion) ಇದೀಗ ನಾನಾ ಬಗೆಯ ಡ್ರೆಸ್‌ ಕೋಡ್‌ಗಳು ಕಾಲಿಟ್ಟಿವೆ. ಆ ದಿನ ಹಳದಿ ಉಡುಗೆ-ತೊಡುಗೆ ಧರಿಸುವುದಷ್ಟೇ ಅಲ್ಲ! ಸ್ಟೈಲಿಂಗ್‌ ಕೂಡ ಆಕರ್ಷಕವಾಗಿರಬೇಕು? ಅದು ಹೇಗೆ? ಎಂಬುದರ ಬಗ್ಗೆ ವೆಡ್ಡಿಂಗ್‌ ಸ್ಟೈಲಿಸ್ಟ್‌ಗಳು 5 ಸಿಂಪಲ್‌ ಐಡಿಯಾ ನೀಡಿದ್ದಾರೆ.

VISTARANEWS.COM


on

Haldi Shastra Fashion
ಚಿತ್ರಕೃಪೆ: ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸಂಪ್ರದಾಯಕ್ಕೆ ತಕ್ಕಂತೆ ನಡೆಯುವ ಮದುವೆಯ ಹಳದಿ ಶಾಸ್ತ್ರಕ್ಕೂ (Haldi Shastra Fashion) ಇದೀಗ ಫ್ಯಾಷನ್‌ ಟಚ್‌ ದೊರಕಿದೆ. ಹೌದು, ಮದುವೆಗೂ ಮುನ್ನ ನಡೆಯುವ ಈ ಕಾರ್ಯಕ್ರಮದಲ್ಲಿ ಮೊದಲಿನಂತೆ ಹಳೆಯ ಅಥವಾ ಯಾವುದೋ ಒಂದು ಹಳದಿ ಅಥವಾ ಶ್ವೇತ ವರ್ಣದ ಸೀರೆ ಅಥವಾ ಔಟ್‌ಫಿಟ್‌ ಧರಿಸಿದರೇ ಸಾಲದು. ಇದಕ್ಕೆಂದೇ ನಾನಾ ಬಗೆಯ ಡ್ರೆಸ್‌ಕೋಡ್‌ಗಳು ಕಾಲಿಟ್ಟಿವೆ. ಆ ದಿನದಂದು ಮದುಮಕ್ಕಳು ಮಾತ್ರವಲ್ಲ, ಭಾಗವಹಿಸುವ ಇತರರು ಕೂಡ ಹೇಗೆಲ್ಲಾ ಔಟ್‌ಫಿಟ್‌ ಧರಿಸಬಹುದು? ಆಕರ್ಷಕವಾಗಿ ಕಾಣುವಂತೆ ಹೇಗೆಲ್ಲಾ ಸ್ಟೈಲಿಂಗ್‌ ಮಾಡಬಹುದು ಎಂಬುದರ ಬಗ್ಗೆ ವೆಡ್ಡಿಂಗ್‌ ಸ್ಟೈಲಿಸ್ಟ್‌ಗಳು ಸಿಂಪಲ್ 5 ಟಿಪ್ಸ್ ನೀಡಿದ್ದಾರೆ.

Haldi Shastra Fashion

ಹಳದಿ ಶೇಡ್‌ ಔಟ್‌ ಫಿಟ್ಸ್ ಪ್ಲಾನಿಂಗ್‌

ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಹಳದಿ ವರ್ಣದ ಅಥವಾ ಸನ್‌ಕಲರ್‌ ಶೇಡ್‌ನ ಔಟ್‌ಫಿಟ್‌ ಹಾಗೂ ಸೀರೆ ಧರಿಸಲು ಮುನ್ನವೇ ಸೂಚಿಸಬೇಕು. ಆ ನಂತರವಷ್ಟೇ ಎಲ್ಲರೂ ಯೂನಿಫಾರ್ಮ್‌ನಂತೆ ಹಳದಿಮಯವಾಗಿ ಕಾಣಿಸಲು ಸಾಧ್ಯ.

Haldi Shastra Fashion

ಮದುಮಕ್ಕಳಿಗೆ ಶ್ವೇತ ವರ್ಣ

ಹಳದಿ ಶಾಸ್ತ್ರದಲ್ಲಿ ಭಾಗವಹಿಸುವವರೆಲ್ಲರೂ ಹಳದಿ ದಿರಸಿದಲ್ಲಿ ಮುಖ್ಯ ಪಾತ್ರದಾರಿಗಳಾದ ಮದುಮಗಳು ಹಾಗೂ ಮದುವೆ ಗಂಡು ಶ್ವೇತಾ ವರ್ಣದ ಔಟ್‌ಫಿಟ್‌ ಧರಿಸುವುದು ಉತ್ತಮ. ಹಳದಿ ನೀರನ್ನು ಎರಚಿದಾಗ ಈ ಉಡುಪುಗಳು ವಿಡಿಯೋ ಹಾಗೂ ಫೋಟೋಗಳಲ್ಲಿ ಆಕರ್ಷಕವಾಗಿ ಕಾಣಿಸುತ್ತವೆ.

ಟ್ವಿನ್ನಿಂಗ್‌ ಕಾನ್ಸೆಪ್ಟ್

ಮದುವೆಯಾಗುವ ಹೆಣ್ಣು ಹಾಗೂ ಗಂಡು ಟ್ವಿನ್ನಿಂಗ್‌ ಡ್ರೆಸ್‌ಕೋಡ್‌ ಪ್ಲಾನ್‌ ಮಾಡಬಹುದು. ಇಲ್ಲವೇ ಒಂದೇ ಬಗೆಯ ಫ್ಯಾಬ್ರಿಕ್‌ ಉಡುಪನ್ನು ಧರಿಸಬಹುದು. ಇದು ಕೂಡ ಆಕರ್ಷಕವಾಗಿ ಬಿಂಬಿಸುತ್ತವೆ.

Haldi Shastra Fashion

ಥೀಮ್‌ಗೆ ತಕ್ಕಂತೆ ಹಳದಿ ಶಾಸ್ತ್ರ

ಹಳದಿ ಶಾಸ್ತ್ರಕ್ಕೂ ಇದೀಗ ನಾನಾ ಬಗೆಯ ಥೀಮ್‌ ಡ್ರೆಸ್‌ಕೋಡ್‌ಗಳು ಬಂದಿವೆ. ಉದಾಹರಣೆಗೆ., ಹುಡುಗಿಗೆ ಶಕುಂತಲಾ ಸ್ಟೈಲಿಂಗ್‌, ಫ್ಲವರ್‌ ಗರ್ಲ್, ರಾಣಿ-ಮಹಾರಾಣಿ ಲುಕ್‌ ಹೀಗೆ ನಾನಾ ಬಗೆಯವನ್ನು ಕಾಣಬಹುದು. ಆಯಾ ಥೀಮ್‌ಗೆ ತಕ್ಕಂತೆ ಫ್ಯಾಷನ್‌ವೇರ್‌ಗಳನ್ನು ಧರಿಸಬಹುದು.

ಇದನನೂ ಓದಿ: Summer Dress Fashion: ಸೀಸನ್‌ ಎಂಡ್‌ ಫ್ಯಾಷನ್‌ಗೆ ಕಾಲಿಟ್ಟ ಸಮುದ್ರದ ಅಲೆ ಬಿಂಬಿಸುವ ವೆವಿ ಡ್ರೆಸ್‌!

ಹೂವಿನ ಆಭರಣಗಳ ಮ್ಯಾಚಿಂಗ್‌

ನೈಜ ಹೂವುಗಳ ಅಥವಾ ಕೃತಕ ಹೂವುಗಳ ಆಭರಣಗಳನ್ನು ಆಯ್ಕೆ ಮಾಡಿರುವ ಹಳದಿ ಶಾಸ್ತ್ರದ ಉಡುಪಿಗೆ ಹಾಗೂ ಸೀರೆಗೆ ತಕ್ಕಂತೆ ಮದುಮಗಳು ಮ್ಯಾಚ್‌ ಮಾಡಬಹುದು. ದುಂಡು ಮಲ್ಲಿಗೆ, ಮಿನಿ ಬಟನ್‌ ರೋಸ್‌ ಹೀಗೆ ನಾನಾ ಬಗೆಯ ಮಿನಿ ಹೂವುಗಳ ಆಭರಣಗಳನ್ನು ಧರಿಸಿದಾಗ ಹಳದಿ ಶಾಸ್ತ್ರದ ಉಡುಗೆಗಳು ಹೈಲೈಟಾಗುತ್ತವೆ.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading

ಫ್ಯಾಷನ್

Holiday Fashion: ಹಾಲಿ ಡೇ ಫ್ಯಾಷನ್‌ಗೆ ಮರಳಿ ಬಂತು ಹಿಪ್ಪಿ ಪ್ಯಾಂಟ್ಸ್!

ಹಾಲಿ ಡೇ ಹಾಗೂ ಔಟಿಂಗ್‌ಗೆ (Holiday Fashion) ಧರಿಸುವಂತಹ ಹಿಪ್ಪಿ ಪ್ಯಾಂಟ್‌ಗಳು ಇದೀಗ ಈ ಸೀಸನ್‌ಎಂಡ್‌ನಲ್ಲಿ ಎಂಟ್ರಿ ನೀಡಿವೆ. ನಾನಾ ಪ್ರಿಂಟ್ಸ್‌ನಲ್ಲಿ ಹುಡುಗಿಯರನ್ನು ಸವಾರಿ ಮಾಡತೊಡಗಿವೆ. ಯಾವ್ಯಾವ ವಿನ್ಯಾಸದವು ಹೆಚ್ಚು ಟ್ರೆಂಡಿಯಾಗಿವೆ? ಹೇಗೆಲ್ಲಾ ಸ್ಟೈಲಿಂಗ್‌ ಮಾಡಬಹುದು? ಎಂಬುದರ ಬಗ್ಗೆ ಫ್ಯಾಷನಿಸ್ಟ್‌ಗಳು ಇಲ್ಲಿ ವಿವರಿಸಿದ್ದಾರೆ.

VISTARANEWS.COM


on

Holiday Fashion
ಚಿತ್ರಗಳು: ಶಿವಲೀಕಾ ಒಬಿರಾಯ್‌ ಪಾಠಕ್‌, ನಟಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಫಂಕಿ ಲುಕ್‌ ನೀಡುವ ಹಿಪ್ಪಿ ಪ್ಯಾಂಟ್‌ಗಳು ಹಾಲಿ ಡೇ ಫ್ಯಾಷನ್‌ಗೆ (Holiday Fashion) ಮರಳಿವೆ. ಹೌದು, ನೋಡಲು ವೆರೈಟಿ ಪ್ರಿಂಟ್ಸ್ ಹಾಗೂ ವಿಂಟೇಜ್‌ ಪ್ರಿಂಟ್ಸ್‌ನಲ್ಲಿ ದೊರಕುತ್ತಿರುವ ಹಿಪ್ಪಿ ಪ್ಯಾಂಟ್‌ಗಳು )Hippie pants) ಹೊಸ ರೂಪದಲ್ಲಿ ಮರಳಿವೆ. ಬೀಚ್‌ ಹಾಲಿ ಡೇ ಮಾತ್ರವಲ್ಲ, ವೀಕೆಂಡ್‌ ಔಟಿಂಗ್‌ನಲ್ಲೂ ಇವು ಹುಡುಗಿಯರನ್ನು ಸವಾರಿ ಮಾಡತೊಡಗಿವೆ.

Holiday Fashion

ವಿದೇಶಿಗರ ಟ್ರಾವೆಲ್‌ ಪ್ಯಾಂಟ್ಸ್

“ಮೊದಲೆಲ್ಲಾ ಹಿಪ್ಪಿ ಪ್ಯಾಂಟ್‌ಗಳೆಂದಾಕ್ಷಣಾ (Hippie pants) ವಿದೇಶಿಗರು ಪ್ರಯಾಣ ಹಾಗೂ ಟೂರ್‌ ಮಾಡುವ ಸಂದರ್ಭದಲ್ಲಿ ಧರಿಸುವ ಪ್ಯಾಂಟ್‌, ದೊಗಲೆ ಪ್ಯಾಂಟ್‌ ಎಂದೆಲ್ಲಾ ಅಭಿಪ್ರಾಯ ಪಡಲಾಗುತ್ತಿತ್ತು. ಇದೀಗ ಈ ಕಾನ್ಸೆಪ್ಟ್ ಬದಲಾಗಿದೆ. ನಮ್ಮಲ್ಲೂ ಹುಡುಗಿಯರು, ಈ ಸೀಸನ್‌ನ ಸೆಕೆಯಿಂದ ಪಾರಾಗಲು ಈ ಪ್ಯಾಂಟ್‌ಗಳನ್ನು ಆಯ್ಕೆ ಮಾಡತೊಡಗಿದ್ದಾರೆ. ಪರಿಣಾಮ, ಈ ಪ್ಯಾಂಟ್‌ಗಳು ಇದೀಗ ಹಾಲಿ ಡೇ ಹಾಗೂ ಔಟಿಂಗ್‌ಗೆ ಮಾತ್ರವಲ್ಲದೇ, ಇತರೇ ಸಮಯದಲ್ಲೂ ಧರಿಸುವುದು ಹೆಚ್ಚಾಗುತ್ತಿದೆ” ಎನ್ನುವ ಫ್ಯಾಷನಿಸ್ಟ್‌ ಛಾಯಾ ಪ್ರಕಾರ, ಇದೀಗ ಜೆನ್‌ ಜಿ ಹುಡುಗಿಯರ ಸೀಸನ್‌ ಲಿಸ್ಟ್‌ನಲ್ಲಿ ಇವು ಸೇರಿವೆ ಎನ್ನುತ್ತಾರೆ.

ಟ್ರೆಂಡಿ ಹಿಪ್ಪಿ ಪ್ಯಾಂಟ್ಸ್

ಹಿಪ್ಪಿ ಪ್ಯಾಂಟ್‌ಗಳಲ್ಲಿ (Hippie pants) ಯೂನಿಸೆಕ್ಸ್ ಪ್ರಿಂಟ್ಸ್ ಹಾಗೂ ಡಿಸೈನ್‌ನವು ಲಭ್ಯ. ಆದರೆ ಹುಡುಗ-ಹುಡುಗಿಯರ ಸೊಂಟದಳತೆಗೆ ಇವು ಹೊಂದಬೇಕಷ್ಟೇ! ಹಾಗಾಗಿ, ಅವರವರ ಸೊಂಟದ ಫಿಟ್ಟಿಂಗ್‌ಗೆ ತಕ್ಕಂತೆ ಧರಿಸುವುದು ಸೂಕ್ತ ಎನ್ನುತ್ತಾರೆ ಸ್ಟೈಲಿಸ್ಟ್ ಖಾನ್‌.

Holiday Fashion

ಪಲ್ಹಾಜೋ ಹಿಪ್ಪಿ ಪ್ಯಾಂಟ್ಸ್

ಪಲ್ಹಾಜೋ ಶೈಲಿಯ ಅಗಲವಾದ ಪ್ರಿಂಟೆಡ್‌ ಹಿಪ್ಪಿ ಪ್ಯಾಂಟ್‌ಗಳು (Hippie pants) ಚಾಲ್ತಿಯಲ್ಲಿವೆ. ಇವುಗಳಲ್ಲಿ ವಿಂಟೇಜ್‌ ಕಲೆಕ್ಷನ್‌ನವು ಹೆಚ್ಚು ಬೇಡಿಕೆ ಪಡೆದುಕೊಂಡಿವೆ.

ವೈಡ್‌ ಲೆಗ್‌ ಹಿಪ್ಪಿ ಪ್ಯಾಂಟ್ಸ್

ಅಗಲವಾಗಿರುವ ದೊಗಲೆಯಾಗಿರುವ ಪ್ಯಾಂಟ್‌ಗಳಿವು. ಹಾಗಾಗಿ ಪ್ರಿಂಟ್ಸ್‌ನಲ್ಲಿನ ಚಿತ್ತಾರಗಳು ಕೂಡ ಅಗಲವಾಗಿ ಹರಡಿಕೊಂಡಂತೆ ಇರುತ್ತವೆ. ನೋಡಲು ಫಂಕಿ ಲುಕ್‌ ನೀಡುತ್ತವೆ. ಪರ್ಫೆಕ್ಟ್ ರಿಲ್ಯಾಕ್ಸಿಂಗ್‌ ಮೂಡ್‌ ಸೃಷ್ಟಿಸುತ್ತವೆ.

Holiday Fashion

ಬೆಲ್‌ ಬಾಟಮ್‌ ಹಿಪ್ಪಿ ಪ್ಯಾಂಟ್ಸ್

ಹೆಸರೇ ಹೇಳುವಂತೆ, ಒಂದು ಕಾಲದಲ್ಲಿ, ರೆಟ್ರೋ ಸ್ಟೈಲ್‌ನಲ್ಲಿ ಸಖತ್‌ ಪಾಪುಲರ್‌ ಆಗಿದ್ದ ಪ್ಯಾಂಟ್‌ಗಳಿವು. ಫ್ಲೇರ್ ಹೊಂದಿದಂತೆ ಕಾಣುವ ಇವು ಧರಿಸಿದಾಗ ಕಂಪ್ಲೀಟ್‌ ರೆಟ್ರೋ ಲುಕ್‌ ನೀಡುತ್ತವೆ ಎನ್ನಬಹುದು.

ಇದನ್ನೂ ಓದಿ: Star Fashion: ಪಂಚೆ ಜೊತೆ ಟ್ರೋಫಿ ಜಾಕೆಟ್‌ ಧರಿಸಿದ ನಟಿ ತಮನ್ನಾಳ ಯೂನಿಕ್‌ ಫ್ಯಾಷನ್‌!

ಹಿಪ್ಪಿ ಪ್ಯಾಂಟ್ಸ್ ಸಿಂಪಲ್‌ 3 ಟಿಪ್ಸ್

  • ಕಚೇರಿಗೆ ಧರಿಸಲು ಇವು ಸೂಕ್ತವಲ್ಲ!
  • ಸರಿಯಾದ ಟಾಪ್‌ ಮ್ಯಾಚ್‌ ಮಾಡಿದಾಗ ಅಂದವಾಗಿ ಕಾಣಬಲ್ಲವು.
  • ಮಿಕ್ಸ್-ಮ್ಯಾಚ್‌ ಮಾಡುವ ಚಾಕಚಕ್ಯತೆ ಇದ್ದಲ್ಲಿ ಇವನ್ನು ಹಾಲಿಡೇ ಹೊರತುಪಡಿಸಿಯೂ ಧರಿಸಬಹುದು. ಆಕರ್ಷಕವಾಗಿ ಕಾಣುತ್ತವೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading

ಪ್ರಮುಖ ಸುದ್ದಿ

Prajwal Revanna : ಪ್ರಜ್ವಲ್​ ರೇವಣ್ಣ ಅರೆಸ್ಟ್​ ಆಗುವಾಗ ಧರಿಸಿದ್ದ ಬಟ್ಟೆಯ ಬ್ರಾಂಡ್ ಗಮನಿಸಿ! ಅದರ ಬೆಲೆ ಎಷ್ಟಿರಬಹುದು?

Prajwal Revanna : ಪ್ರಜ್ವಲ್ ರೇವಣ್ಣ ಅವರು ಜರ್ಮನಿಯಿಂದ ಬೆಂಗಳೂರಿಗೆ ಬರುವಾಗ ಬೂದು ಬಣ್ಣದ ಹೂಡಿ ಬಟ್ಟೆಯನ್ನು ಧರಿಸಿದ್ದರು. ಅದು ಅಂಡರ್​ ಆರ್ಮರ್​ ಬ್ರಾಂಡ್​ನ ಕರಿ ಬಿಗ್ ಸ್ಲ್ಪಾಷ್​ ಹೂಡಿ ಟಿಶರ್ಟ್​. ಅಂಡರ್ ಆರ್ಮರ್ ಅಮೆರಿಕ ಮೂಲದ ಸ್ಪೋರ್ಟ್ಸ್​ ಬ್ರಾಂಡ್​ ಆಗಿದೆ. ಇದು ನಾನಾ ರೀತಿಯ ಸ್ಪೋರ್ಟ್ಸ್​ ಮೆಟೀರಿಯಲ್​ ಅನ್ನು ಉತ್ಪಾದನೆ ಮಾಡುತ್ತದೆ.

VISTARANEWS.COM


on

Prajwal revanna
Koo

ಬೆಂಗಳೂರು : ಪೆನ್​ಡ್ರೈವ್​ ಅಶ್ಲೀಲ ವಿಡಿಯೊ ಪ್ರಕರಣದಲ್ಲಿ ಎಸ್​ಐಟಿ ವಶದಲ್ಲಿರುವ ಪ್ರಜ್ವಲ್ ರೇವಣ್ಣ (Prajwal Revanna) ಜರ್ಮನಿಯಿಂದ ಬರುವಾಗ ಹಾಕಿಕೊಂಡು ಬಂದಿರುವ ಬಟ್ಟೆಯ ಬಗ್ಗೆ ಜೋರು ಚರ್ಚೆ ನಡೆಯುತ್ತಿದೆ. ಜರ್ಮನಿಯಿ ಮ್ಯೂನಿಕ್​ನಿಂದ ವಿಮಾನ ಏರುವಾಗ ಹಾಕಿದ್ದ ಬಟ್ಟೆಯಲ್ಲಿಯೇ ಅವರು ಪೊಲೀಸರ ವಶಕ್ಕೆ ಸಿಕ್ಕಿದ್ದಾರೆ. ಈ ವೇಳೆ ಅವರ ಬೂದು ಬಣ್ಣದ ಬಟ್ಟೆಯಲ್ಲಿ ಕಾಣಿಸಿಕೊಂಡಿದ್ದರು. ಶುಕ್ರವಾರ ಅವರನ್ನು ಎಸ್​ಐಟಿ ಅಧಿಕಾರಿಗಳು ಮೆಡಿಕಲ್​ ಟೆಸ್ಟ್​ ಹಾಗೂ ನ್ಯಾಯಾಲಯಕ್ಕೆ ಕರೆದುಕೊಂಡು ಹೋಗುವ ವೇಳೆಯೂ ಅದೇ ಬಟ್ಟೆಯನ್ನು ಧರಿಸಿದ್ದರು. ಹೀಗಾಗಿ ಆ ಬಟ್ಟೆಯ ಬಗ್ಗೆ ಚರ್ಚೆ ನಡೆದಿದೆ.

ಪ್ರಜ್ವಲ್ ರೇವಣ್ಣ ಅವರು ಜರ್ಮನಿಯಿಂದ ಬೆಂಗಳೂರಿಗೆ ಬರುವಾಗ ಬೂದು ಬಣ್ಣದ ಹೂಡಿ ಬಟ್ಟೆಯನ್ನು ಧರಿಸಿದ್ದರು. ಅದು ಅಂಡರ್​ ಆರ್ಮರ್​ ಬ್ರಾಂಡ್​ನ ಕರಿ ಬಿಗ್ ಸ್ಲ್ಪಾಷ್​ ಹೂಡಿ ಟಿಶರ್ಟ್​. ಅಂಡರ್ ಆರ್ಮರ್ ಅಮೆರಿಕ ಮೂಲದ ಸ್ಪೋರ್ಟ್ಸ್​ ಬ್ರಾಂಡ್​ ಆಗಿದೆ. ಇದು ನಾನಾ ರೀತಿಯ ಸ್ಪೋರ್ಟ್ಸ್​ ಮೆಟೀರಿಯಲ್​ ಅನ್ನು ಉತ್ಪಾದನೆ ಮಾಡುತ್ತದೆ. ಭಾರತದಲ್ಲೂ ಈ ಬ್ರಾಂಡ್​ ಸಿಕ್ಕಾಪಟ್ಟೆ ಫೇಮಸ್. ಆದರೆ, ಇದರ ಬೆಲೆ ಕನಿಷ್ಠ 6 ಸಾವಿರ ರೂಪಾಯಿಂದ ಆರಂಭಗೊಳ್ಳುತ್ತದೆ. ಅಂತೆಯೇ ಪ್ರಜ್ವಲ್ ರೇವಣ್ಣ ಬಂಧನದ ವೇಳೆ ಹಾಕಿಕೊಂಡಿದ್ದ ಬಟ್ಟೆಗೆ ಆನ್​ಲೈನ್​ನಲ್ಲಿ 7 ಸಾವಿರ ರೂಪಾಯಿ ತೋರಿಸುತ್ತಿದೆ. ಅದು ಡಿಸ್ಕೌಂಟ್ ಬೆಲೆಯಲ್ಲಿ. ಅಲ್ಲದೆ , ಪ್ರಜ್ವಲ್ ಹಾಕಿದ ಬಟ್ಟೆಯ ಬಗ್ಗೆಯೇ ಹುಡುಕಿಕೊಂಡು ಹೋದರೆ ಬೆಲೆಗಳನ್ನು ಡಾಲರ್​ ಲೆಕ್ಕದಲ್ಲಿ ತೋರಿಸುತ್ತಿದೆ.

ಇದನ್ನೂ ಓದಿ: Bhavani Reavanna : ಭವಾನಿ ರೇವಣ್ಣಗೆ ಬಂಧನ ಭೀತಿ; ಜಾಮೀನು ಅರ್ಜಿ ತೀರ್ಪು ಮುಂದಕ್ಕೆ

ಪ್ರಜ್ವಲ್ ರೇವಣ್ಣ ಈ ಬಟ್ಟೆಯನ್ನು ಜರ್ಮನಿಯಿಂದಲೇ ಖರೀದಿ ಮಾಡಿರಬಹುದು ಎಂದು ಅಂದಾಜಿಸಲಾಗಿದೆ. ಅಂತಾರಾಷ್ಟ್ರೀಯ ಬ್ರಾಂಡ್​ ಆಗಿರುವ ಕಾರಣ ಅವರು ಅಲ್ಲಿಯೇ ಖರೀದಿ ಮಾಡಿ ಬಂದಿರಬಹುದು. ಹೀಗಾಗಿ ಅವರು ಡಾಲರ್ ಲೆಕ್ಕದಲ್ಲಿಯೇ ದುಡ್ಡು ಪಾವತಿ ಮಾಡಿರಬಹುದು. ಹೀಗಾಗಿ ಅವರು ಕನಿಷ್ಠ 10 ಸಾವಿರ ರೂಪಾಯಿ ಕೊಟ್ಟಿರಬಹುದು ಎಂದು ಅಂದಾಜಿಸಲಾಗಿದೆ.

ನಾನವನಲ್ಲ, ನಾನವನಲ್ಲ; ಪೊಲೀಸರ ಪ್ರಶ್ನೆಗೆ ಈ ಒಂದೇ ಉತ್ತರ ನೀಡುತ್ತಿರುವ ಪ್ರಜ್ವಲ್​ ರೇವಣ್ಣ!

ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದ ಪೆನ್​ಡ್ರೈವ್ ಹಗರಣದ ಪ್ರಮುಖ ಆರೋಪಿಯಾಗಿರುವ ಪ್ರಜ್ವಲ್ ರೇವಣ್ಣನನ್ನು (Prajwal Revanna) ಎಸ್​ಐಟಿ ತನಿಖಾಧಿಕಾರಿಗಳು ಪ್ರಾಥಮಿಕ ತನಿಖೆ ನಡೆಸಿದ್ದಾರೆ. ಆದರೆ, ಪೊಲೀಸರು ಕೇಳುವ ಎಲ್ಲ ಪ್ರಶ್ನೆಗಳಿಗೆ ಪ್ರಜ್ವಲ್ ರೇವಣ್ಣ ‘ನಾನವನಲ್ಲ, ನನಗೆ ಗೊತ್ತಿಲ್ಲ’ ಎಂಬ ಉತ್ತರವನ್ನೇ ನೀಡುತ್ತಿದ್ದಾರೆ. ಈ ಮೂಲಕ ಆರಂಭಿಕ ಹಂತದಲ್ಲಿ ಯಾವುದೇ ಮಾಹಿತಿಯನ್ನು ಪೊಲೀಸರಿಗೆ ನೀಡಲು ಸಿದ್ದತೆ ನಡೆಸಿಕೊಂಡು ಬಂದಿದ್ದಾನೆ ಪ್ರಜ್ವಲ್ ರೇವಣ್ಣ

ಎಸ್​ಐಟಿ ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರುಪಡಿಸುವ ಮೂದಲು 24 ಗಂಟೆಗಳ ಅವಧಿಯನ್ನು ಹೊಂದಿದ್ದಾರೆ. ಹೀಗಾಗಿ ಪೊಲೀಸರು ಪ್ರಾಥಮಿಕ ಹಂತದ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಆದರೆ, ಪ್ರಜ್ವಲ್ ರೇವಣ್ಣ ಮಾತ್ರ ಯಾವುದೆಕ್ಕೂ ಸಮರ್ಥ ಉತ್ತರ ನೀಡುತ್ತಿಲ್ಲ ಎಂದು ಹೇಳಲಾಗಿದೆ.

ಎಸ್​ಐಟಿ ಪೊಲೀಸರು ಪ್ರಜ್ವಲ್ ರೇವಣ್ಣ ಅವರ ವಿರುದ್ಧ ದಾಖಲಾಗಿರುವ ಮೂರು ಎಫ್​ಐಆರ್ ಕುರಿತಾಗಿ ಪ್ರಶ್ನೆಗಳನ್ನು ಕೇಳುತತಿದ್ದಾರೆ. ಅವರ ಹೇಳಿಕೆಗಳ ಕುರಿತು ವಿಡಿಯೊ ದಾಖಲೆಯನ್ನು ಸೃಷ್ಟಿಸಲು ಪೊಲೀಸರು ಮುಂದಾಗಿದ್ದಾರೆ. ಅದೇ ರೀತಿ ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಿಸಿದ್ದು ಎಂದು ಹೇಳಲಾದ ವಿಡಿಯೊಗಳಲ್ಲಿರುವ ಕೆಲವು ದೃಶ್ಯಗಳ ಕುರಿತೂ ಅವರಿಗೆ ಪ್ರಶ್ನೆಗಳನ್ನು ಕೇಳಲಾಗುತ್ತಿದೆ.

Continue Reading

ಫ್ಯಾಷನ್

Star Fashion: ಪಂಚೆ ಜೊತೆ ಟ್ರೋಫಿ ಜಾಕೆಟ್‌ ಧರಿಸಿದ ನಟಿ ತಮನ್ನಾಳ ಯೂನಿಕ್‌ ಫ್ಯಾಷನ್‌!

ಸದಾ ಡಿಫರೆಂಟ್‌ ಸ್ಟೈಲಿಂಗ್‌ನಲ್ಲಿ (Star Fashion) ಕಾಣಿಸಿಕೊಳ್ಳುವ ಬಾಲಿವುಡ್‌ ನಟಿ ತಮನ್ನಾ, ಇದೀಗ ಖ್ಯಾತ ಸೆಲೆಬ್ರೆಟಿ ಡಿಸೈನರ್‌ ಮಸಾಬಾ ಅವರ ಕ್ರಿಯೇಷನ್‌ನ ಟ್ರೋಫಿ ಜಾಕೆಟ್‌, ಬಿಸ್ಕೆಟ್‌ ಬ್ರಾಲೆಟ್‌ ಜೊತೆ ಗ್ಲಾಮರಸ್‌ ಆಗಿ ಪಂಚೆ ಉಟ್ಟು ಕಾಣಿಸಿಕೊಂಡಿದ್ದಾರೆ. ಏನಿದು ಟ್ರೋಫಿ ಜಾಕೆಟ್‌? ಇದ್ಯಾವ ಬಗೆಯ ಸ್ಟೈಲಿಂಗ್‌ ಎಂಬುದರ ಬಗ್ಗೆ ಫ್ಯಾಷನ್‌ ವಿಮರ್ಶಕರು ವಿವರಿಸಿದ್ದಾರೆ.

VISTARANEWS.COM


on

Star Fashion
ಚಿತ್ರಗಳು: ತಮನ್ನಾ ಬಾಟಿಯಾ , ಬಾಲಿವುಡ್‌ ನಟಿ, ಫೋಟೋಗ್ರಾಫಿ : ಪಿಕ್ಸೆಲ್‌ ಎಕ್ಸ್‌ಫೋಷರ್ಸ್
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬಾಲಿವುಡ್‌ ನಟಿ ತಮನ್ನಾ ಬಾಟಿಯಾ ಪಂಚೆ ಜೊತೆ ಟ್ರೋಫಿ ಜಾಕೆಟ್‌ನಲ್ಲಿ ಗ್ಲಾಮರಸ್‌ ಲುಕ್‌ನಲ್ಲಿ (Star Fashion) ಕಾಣಿಸಿಕೊಂಡಿದ್ದಾರೆ. ಹೌದು, ಸದಾ ಒಂದಲ್ಲ ಒಂದು ಡಿಫರೆಂಟ್‌ ಸ್ಟೈಲಿಂಗ್‌ನಲ್ಲಿ ಅದರಲ್ಲೂ ಗ್ಲಾಮರಸ್‌ ಲುಕ್‌ನಲ್ಲಿ ಕಾಣಿಸಿಕೊಳ್ಳುವ ನಟಿ ತಮನ್ನಾ, ಇದೀಗ ಖ್ಯಾತ ಸೆಲೆಬ್ರೆಟಿ ಡಿಸೈನರ್‌ ಮಸಾಬಾ ಅವರ ಕ್ರಿಯೇಷನ್‌ನ ಟ್ರೋಫಿ ಜಾಕೆಟ್‌, ಬಿಸ್ಕೆಟ್‌ ಬ್ರಾಲೆಟ್‌ ಹಾಗೂ ಪಂಚೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇದರಲ್ಲೇನು ವಿಶೇಷ ಎಂದು ಯೋಚಿಸುತ್ತಿದ್ದೀರಾ? ಊಹೆಗೂ ಮೀರಿದ ಫ್ಯಾಷನ್‌ ಕಾನ್ಸೆಪ್ಟ್ ಇದು ಎನ್ನುತ್ತಿದ್ದಾರೆ ಫ್ಯಾಷನ್‌ ಅನಾಲಿಸ್ಟ್‌ಗಳು.

Star Fashion tamanna bhatia

ಮಸಾಬಾ ಕ್ರಿಯೇಷನ್‌ ಫ್ಯಾಷನ್‌

ಅಂದಹಾಗೆ, ನಟಿ ತಮನ್ನಾ ಧರಿಸಿರುವ ಈ ಫ್ಯಾಷನ್‌ವೇರ್‌ಗಳು ಖ್ಯಾತ ಸೆಲೆಬ್ರೆಟಿ ಡಿಸೈನರ್‌ ಹಾಗೂ ನಟಿಯಾದ ಮಸಾಬಾ ಡಿಸೈನ್‌ ಮಾಡಿದ್ದು, ಹೊಸ ಪ್ರಯೋಗ ಕೂಡ ಮಾಡಿದ್ದಾರೆ. ನೋಡಲು ತಕ್ಷಣ ಇದ್ಯಾವುದೋ ಟೈಯಿಂಗ್‌ ಸ್ಕಾರ್ಫ್‌ ಮಿಡಿ ಸ್ಕರ್ಟ್ ಹಾಗೂ ಬ್ಲೇಝರ್‌ ಎಂದೆನಿಸಿದರೂ ಇವು ಅವಲ್ಲ! ಕಂಪ್ಲೀಟ್‌ ಡಿಫರೆಂಟ್‌ ಕಾನ್ಸೆಪ್ಟ್‌ನಲ್ಲಿ ಡಿಸೈನ್‌ ಆಗಿರುವಂತವು ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರಾದ ರಿಚಾ.

Star Fashion tamanna bhatia

ಏನಿದು ಟ್ರೋಫಿ ಜಾಕೆಟ್‌?

ಕೋಟ್‌ ಅಥವಾ ಬ್ಲೇಝರ್‌ನಂತೆ ಕಾಣುವ ಮಸ್ಟರ್ಡ್ ಶೇಡ್‌ನ ಜಾಕೆಟ್‌ನ ಕಾಲರ್‌ ತುಂಬೆಲ್ಲಾ ಚಿಕ್ಕ ಪುಟ್ಟ ಬ್ರೋಚರ್‌ನಂತೆ ಕಾಣುವ ಗೋಲ್ಡ್ ಪ್ಲೇಟೆಡ್‌ನ ಟ್ರೊಫಿಯಂತಹ ಮಿನಿಯೇಚರ್‌ಗಳನ್ನು ಅಂಟಿಸಲಾಗಿದೆ. ಇದರೊಳಗೆ ಧರಿಸಿರುವ ಬ್ರಾಲೆಟ್‌ ಕೂಡ ಹೀಗೆಯೇ ಡಿಸೈನ್‌ ಮಾಡಲಾಗಿದೆ. ಅದಕ್ಕೂ ಕೂಡ ಗೋಲ್ಡ್ ಪ್ಲೇಟೆಡ್‌ ಡಿಸೈನ್‌ ಮಾಡಲಾಗಿದೆ. ಇದು ಯೂನಿಕ್‌ ಫ್ಯಾಷನ್‌ಗೆ ನಾಂದಿ ಹಾಡಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

ಗೋಲ್ಡ್ ಪ್ಲೇಟೆಡ್‌ ಡಿಸೈನ್‌ನ ಪಂಚೆ

ಬ್ರಾಲೆಟ್‌ ಹಾಗೂ ಟ್ರೋಫಿ ಜಾಕೆಟ್‌ ಜೊತೆಗೆ ವಿಭಿನ್ನವಾಗಿ ಕಾಣುವಂತೆ ಪಂಚೆ ಮ್ಯಾಚ್‌ ಮಾಡಲಾಗಿದೆ. ಬೀಚ್‌ ಸ್ಟೈಲಿಂಗ್‌ ಶೈಲಿಯಲ್ಲಿ ಟೈಯಿಂಗ್‌ ಮಾಡಿರುವುದು ಈ ಔಟ್‌ಫಿಟ್‌ಗೆ ಗ್ಲಾಮರಸ್‌ ಟಚ್‌ ನೀಡಿದೆ. ಪಂಚೆಯ ಒಡಲೆಲ್ಲಾ ಗೋಲ್ಡ್ ಪ್ಲೇಟೆಡ್‌ ಡಿಸೈನ್‌ ಹಾಗೂ ಬಾರ್ಡರ್ ಹೈಲೈಟ್‌ ಮಾಡಲಾಗಿದೆ. ಇದು ಹೌಸ್‌ ಆಫ್‌ ಮಸಾಬಾರ ಕ್ರಿಯೇಟಿವಿಟಿಯನ್ನು ಎದ್ದು ತೋರಿಸುತ್ತಿದೆ. ಇತರೇ ಡಿಸೈನರ್‌ಗಳು ಕೂಡ ಒಮ್ಮೆ ತಮ್ಮನ್ನಾರ ಈ ಡಿಸೈಬರ್‌ವೇರ್‌ ಕುರಿತಂತೆ ಚಿಂತನೆ ನಡೆಸುವಂತೆ ಮಾಡಿದೆ. ಒಟ್ಟಾರೆ, ತಮನ್ನಾರ ಈ ಯೂನಿಕ್‌ ಫ್ಯಾಷನ್‌ವೇರ್‌ ಇತರೇ ನಟಿಯರನ್ನು ಒಮ್ಮೆ ತಿರುಗಿ ನೋಡುವಂತೆ ಮಾಡಿದೆ. ಮಸಾಬಾರ ಡಿಸೈನ್‌ ಸದ್ಯ ಫ್ಯಾಷನ್‌ ಲೋಕದಲ್ಲಿ ಸುದ್ದಿ ಮಾಡಿದೆ.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

ಇದನ್ನೂ ಓದಿ: Summer Dress Fashion: ಸೀಸನ್‌ ಎಂಡ್‌ ಫ್ಯಾಷನ್‌ಗೆ ಕಾಲಿಟ್ಟ ಸಮುದ್ರದ ಅಲೆ ಬಿಂಬಿಸುವ ವೆವಿ ಡ್ರೆಸ್‌!

Continue Reading
Advertisement
Nandamuri Balakrishna touch actress anjali back
ಟಾಲಿವುಡ್16 mins ago

Nandamuri Balakrishna: ನಟಿ ಅಂಜಲಿಯ ಹಿಂಭಾಗ ಟಚ್ ಮಾಡಿದ್ರಾ ಬಾಲಯ್ಯ?

Shubman Gill
ಕ್ರೀಡೆ18 mins ago

Shubman Gill: ಕಿರುತೆರೆ​ ನಟಿಯೊಂದಿಗೆ ಶುಭಮನ್​ ಗಿಲ್ ಮದುವೆ?; ಸ್ವತಃ ಸ್ಪಷ್ಟನೆ ನೀಡಿದ ನಟಿ

Narendra Modi
Lok Sabha Election 202422 mins ago

Narendra Modi: ದಾಖಲೆಯ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಯುವ ಜನತೆಗೆ ಕರೆ ನೀಡಿದ ಪ್ರಧಾನಿ ಮೋದಿ

Murder Case in tumkur
ತುಮಕೂರು25 mins ago

Murder case : ಸ್ನೇಹಿತರೇ ದುಷ್ಮನ್‌ಗಳು; ಕಂಠಪೂರ್ತಿ ಕುಡಿಸಿ ಗೆಳೆಯನ ತಲೆ ಮೇಲೆ‌ ಕಲ್ಲು ಎತ್ತಿಹಾಕಿ ಕೊಲೆ

OpenAI
Lok Sabha Election 202454 mins ago

OpenAI: ಇಸ್ರೇಲ್‌ನ ಸಂಸ್ಥೆಯಿಂದ ಬಿಜೆಪಿ ವಿರುದ್ಧ ಪ್ರಚಾರ; ಶಾಕಿಂಗ್‌ ಮಾಹಿತಿ ಹಂಚಿಕೊಂಡ ಓಪನ್ಎಐ

Murder Case in Mysuru
ಕ್ರೈಂ55 mins ago

Murder case : ಜಸ್ಟ್‌ ಗುರಾಯಿಸಿದ್ದಕ್ಕೆ ಯುವಕನ ಬರ್ಬರ ಹತ್ಯೆ; ಸಾವಿನ ಕೊನೆ ಕ್ಷಣ ಸೆರೆ

Ambati Rayudu
ಕ್ರೀಡೆ56 mins ago

Ambati Rayudu: ಸ್ಟಾಂಡರ್ಡ್​ ಕಮ್ಮಿ ಮಾಡಿದರೆ ಉತ್ತಮ ಎಂದು ಕೊಹ್ಲಿಯ ಕಾಲೆಳೆದ ರಾಯುಡು

cm Siddaramaiah And DK Shivakumar
ಪ್ರಮುಖ ಸುದ್ದಿ60 mins ago

CM Siddaramaiah: ಸಿಎಂ, ಡಿಸಿಎಂ ಕೂಡ ಇಂದು ಕೋರ್ಟ್‌ ಕಟಕಟೆಯಲ್ಲಿ! ಏನಿದು ಕೇಸ್?‌

Cannes Film Festival Ukrainian model Sawa Pontyjska assault by security guard
ಸಿನಿಮಾ1 hour ago

Cannes Film Festival:  ಮಾಡೆಲ್‌ನನ್ನು ಒರಟಾಗಿ ಹೊರ ದಬ್ಬಿದ ಕಾನ್‌ ಚಲನಚಿತ್ರೋತ್ಸವ ಸಂಘಟಕರು; ವಿಡಿಯೊ ವೈರಲ್‌!

shatru bhairavi yaga
ಪ್ರಮುಖ ಸುದ್ದಿ2 hours ago

Shatru Bhairavi Yaga: ಶತ್ರು ಭೈರವಿ ಯಾಗ ನಡೆದಿಲ್ಲ, ಪ್ರಾಣಿಬಲಿಯೂ ಇಲ್ಲ: ಕೇರಳ ಸರಕಾರದಿಂದಲೇ ತನಿಖೆ, ಸ್ಪಷ್ಟನೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Assault Case in Shivamogga
ಕ್ರೈಂ2 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ4 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು4 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ5 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ6 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು6 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ7 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ2 weeks ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

ಟ್ರೆಂಡಿಂಗ್‌