Foreigners Saree Swag | ವಿದೇಶಿ ಮಹಿಳೆಯರಿಗೆ ಸೀರೆ ಪ್ರೇಮ ಹುಟ್ಟಿಸಿದ ಮೈಸೂರಿನ ಶಶಿಕಲಾ ಅಶೋಕ್‌ - Vistara News

ಲೈಫ್‌ಸ್ಟೈಲ್

Foreigners Saree Swag | ವಿದೇಶಿ ಮಹಿಳೆಯರಿಗೆ ಸೀರೆ ಪ್ರೇಮ ಹುಟ್ಟಿಸಿದ ಮೈಸೂರಿನ ಶಶಿಕಲಾ ಅಶೋಕ್‌

ಮೈಸೂರಿಗೆ ಆಗಮಿಸುವ ಬಹುತೇಕ ವಿದೇಶಿ ಪ್ರವಾಸಿ ಹೆಣ್ಣುಮಕ್ಕಳಿಗೆ ಸೀರೆ ಪ್ರೇಮ ಹುಟ್ಟಿಸಿದ (Foreigners Saree Swag) ಕ್ರೆಡಿಟ್‌ ಮೈಸೂರಿನ ಶಶಿಕಲಾ ಅಶೋಕ್‌ ಅವರಿಗೆ ಸಲ್ಲುತ್ತದೆ. ಈ ಕುರಿತಂತೆ ಇಲ್ಲಿದೆ ಒಂದಿಷ್ಟು ಡಿಟೇಲ್ಸ್‌.

VISTARANEWS.COM


on

Foreigners Saree Swag
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು

ವಿದೇಶಿ ಮಹಿಳೆಯರು ಕೂಡ ಸೀರೆಯನ್ನು ಪ್ರೀತಿಸುವಂತಹ (Foreigners Saree Swag) ಕೆಲಸ ಮಾಡುತ್ತಿದ್ದಾರೆ ಮೈಸೂರಿನ ಶಶಿಕಲಾ ಅಶೋಕ್‌. ಭಾರತೀಯ ಸಂಸ್ಕೃತಿ ಬಿಂಬಿಸುವ ಸೀರೆಗಳನ್ನು ಪರಿಚಯಿಸಿ, ಅವರಲ್ಲೂ ಸೀರೆ ಬಗ್ಗೆ ಪ್ರೇಮ ಹುಟ್ಟಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಮೈಸೂರಿನ ಟೂರಿಸ್ಟ್‌ಗಳೇ ಸೀರೆ ಪ್ರೇಮಿಗಳು

“ ಪತಿ ಮೂಲತಃ ಟ್ರಾವೆಲ್‌ ಏಜೆನ್ಸಿ ನಡೆಸುತ್ತಿರುವವರು. ಸರಿ ಸುಮಾರು ದಶಕಗಳ ಹಿಂದೆ ವಿದೇಶದಿಂದ ಬಂದ ಪ್ರವಾಸಿಗರ ಪೈಕಿ ಕೆಲವರು ಸ್ಥಳೀಯ ಸಂಸ್ಕೃತಿಯನ್ನು ತಿಳಿದುಕೊಳ್ಳುವ ಆಸಕ್ತಿ ವ್ಯಕ್ತಪಡಿಸಿದ್ದರು. ಒಂಟಿಕೊಪ್ಪಲ್‌ನಲ್ಲಿ ಹಳ್ಳಿ ಮನೆಯಂತಿದ್ದ ನಮ್ಮ ಮನೆಗೆ ಬಾಳೆ ಎಲೆ ಊಟಕ್ಕೆ ಬಂದವರಲ್ಲಿ, ಕೆಲವು ವಿದೇಶಿ ಮಹಿಳೆಯರು ನನ್ನ ಸೀರೆಯನ್ನು ನೋಡಿ ತಮಗೂ ಉಡಿಸಿಕೊಡುವಂತೆ ಹೇಳಿದರು. ನನ್ನ ಸೀರೆಗಳನ್ನೇ ಉಡಿಸಿಕೊಂಡು ಸಂಭ್ರಮಿಸಿದರು. ಮಲ್ಲಿಗೆ ಮುಡಿಸಿಕೊಂಡರು. ಬರಬರುತ್ತಾ ಈ ವಿಷಯ ಹರಡಿತು. ಬಂದ ವಿದೇಶಿ ಪ್ರವಾಸಿ ಮಹಿಳೆಯರು ಸೀರೆ ಡ್ರೆಪಿಂಗ್‌ ಬೇಡಿಕೆ ಇಡತೊಡಗಿದರು. ಪರಿಣಾಮ, ಸೀರೆ ಡ್ರೆಪಿಂಗ್‌ ಕುರಿತ ಕಾರ್ಯಾಗಾರ ಮಾಡಲಾರಂಭಿಸಿದೆ” ಎನ್ನುತ್ತಾರೆ ಶಶಿಕಲಾ ಅಶೋಕ್‌.

ವಿದೇಶಿಗರಿಗೆ ಸೀರೆ ಡ್ರೆಪಿಂಗ್‌

“ಮೈಸೂರಿಗೆ ಆಗಮಿಸುವ ಬಹುತೇಕ ವಿದೇಶಿ ಮಹಿಳೆಯರೆಲ್ಲಾ ಮೈಸೂರು ಉದ್ಯೋಗ್‌ಗೆ ಭೇಟಿ ನೀಡಿ ಸೀರೆಗಳನ್ನು ಖರೀದಿಸಿ ಬಂದಿರುತ್ತಾರೆ. ಆದರೆ ಅವರಿಗೆ ಸೀರೆ ಹೇಗೆ ಉಡುವುದು ಎಂಬುದು ಗೊತ್ತಿರುವುದಿಲ್ಲ. ಇಂಟರ್‌ನೆಟ್ ನೋಡಿದರೂ, ಪ್ರಾಕ್ಟಿಕಲ್‌ ಆಗಿ ಉಡಿಸಿದಾಗ ಅವರ ಸಂತಸ ಹೇಳತೀರದು. ಸೀರೆಯೊಂದಿಗೆ ಕೆಲವರು ಜಡೆ ಹಾಕಿಸಿಕೊಂಡು ಮಲ್ಲಿಗೆ ಹೂವನ್ನು ಮುಡಿಸಿಕೊಳ್ಳುತ್ತಾರೆ. ನಂತರ ಖುಷಿ ಪಟ್ಟು ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳುತ್ತಾರೆ. ಇದು ಇತ್ತೀಚೆಗೆ ಸಾಮಾನ್ಯವಾದ ವಿಷಯವಾಗಿದೆ” ಎನ್ನುವ ಶಶಿಕಲಾ ಅಶೋಕ್‌ಗೆ ಈ ಕೆಲಸ ಸಂತಸ ನೀಡುತ್ತದಂತೆ.

ವಿದೇಶಿ ಮಹಿಳೆಯರ ಸೀರೆ ಲವ್‌

“ಬಾಲಿವುಡ್‌ ಸಿನಿಮಾಗಳಲ್ಲಿ ನೋಡಿದ ನಂತರ ಒಮ್ಮೆಯಾದರೂ ಸೀರೆ ಉಡಬೇಕೆಂಬ ಆಸೆ ಇದೀಗ ನೆರವೇರಿದೆ” ಎನ್ನುತ್ತಾರೆ ಇಸ್ರೇಲ್‌ನ ರೋನಿ. “ಸೀರೆಯನ್ನು ನೋಡಿದ್ದೆ, ಖರೀದಿಸಿದ್ದೆ. ಇದೀಗ ಉಡಿಸಿಕೊಂಡು ಖುಷಿ ಪಟ್ಟೆ” ಎನ್ನುತ್ತಾರೆ ಸೌತ್‌ ಕೊರಿಯಾದ ಎಲ್ಮಿರಾ. ಇನ್ನು ಫ್ರಾನ್ಸ್‌ನ ಎಲ್ಡೋಯಿ, ಬ್ರಿಟನ್‌ನ ಜಾರ್ವೈಸ್‌ ಕೂಡ ಈ ಮಾತುಗಳನ್ನೇ ಹೇಳುತ್ತಾರೆ. ಕಳೆದ ೨೦೧೦ರಲ್ಲಿ ಆರಂಭವಾದ ಈ ಸೀರೆ ಪರಿಣಯ ಇಂದಿಗೂ ಮುಂದುವರೆದಿದೆ. ನಮ್ಮ ನೆಲದ ಸಂಸ್ಕೃತಿಗೆ ಸಾಥ್‌ ನೀಡುತ್ತಿದ್ದೇವೆ ಎಂಬ ಖುಷಿಯಿದೆ. ವಿದೇಶಿ ಪ್ರವಾಸಿಗರಿಗೆ ಸೀರೆಯ ಸಂಕ್ಷೀಪ್ತ ಇತಿಹಾಸದೊಂದಿಗೆ ಆಚಾರ-ವಿಚಾರಗಳನ್ನು ಪರಿಚಯ ಮಾಡುವ ತನಕ ಬೆಳೆದಿದೆ ಎಂದು ಸಂತಸ ವ್ಯಕ್ತಪಡಿಸುತ್ತಾರೆ ಶಶಿಕಲಾ.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Fortis Hospital: 111 ಕೆಜಿ ತೂಕವಿದ್ದ ಬಾಲಕನಿಗೆ ಪಾರ್ಶ್ವವಾಯು ತಪ್ಪಿಸಿದ ʼಬೆನ್ನೆಲುಬಿನ ಡಿಸ್ಕ್ʼ ಶಸ್ತ್ರಚಿಕಿತ್ಸೆ

Fortis Hospital: ಬೆನ್ನುಮೂಳೆಯ ಡಿಸ್ಕ್‌ಲೊಕೇಟ್ ಆಗಿದ್ದ ಪರಿಣಾಮ, ಪಾರ್ಶ್ವವಾಯುಗೆ ಒಳಗಾಗುವ ಸಾಧ್ಯತೆ ಇದ್ದ 111 ಕೆ.ಜಿ. ತೂಕದ 15 ವರ್ಷದ ಬಾಲಕನಿಗೆ, ‘ಮೈಕ್ರೋ-ಲುಂಬಾರ್ ಡಿಸ್ಸೆಕ್ಟಮಿ’ ಎಂಬ ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಯನ್ನು ಬನ್ನೇರುಘಟ್ಟ ಫೋರ್ಟಿಸ್‌ ಆಸ್ಪತ್ರೆ ವೈದ್ಯರ ತಂಡ ಯಶಸ್ವಿಯಾಗಿ ಮಾಡಿದೆ.

VISTARANEWS.COM


on

A 15 year old boy weighing 111 kg underwent successful spinal disc surgery that avoided potential paralysis
Koo

ಬೆಂಗಳೂರು: ಬೆನ್ನುಮೂಳೆಯ ಡಿಸ್‌ಲೋಕೇಟ್ ಆಗಿದ್ದ ಪರಿಣಾಮ ಪಾರ್ಶ್ವವಾಯುವಿಗೆ ಒಳಗಾಗುವ ಸಾಧ್ಯತೆ ಇದ್ದ 111 ಕೆ.ಜಿ. ತೂಕದ 15 ವರ್ಷದ ಬಾಲಕನಿಗೆ, ‘ಮೈಕ್ರೋ-ಲುಂಬಾರ್ ಡಿಸ್ಸೆಕ್ಟಮಿ’ ಎಂಬ ಬೆನ್ನು ಮೂಳೆಯ ಶಸ್ತ್ರಚಿಕಿತ್ಸೆಯನ್ನು ಬನ್ನೇರುಘಟ್ಟ ಫೋರ್ಟಿಸ್‌ ಆಸ್ಪತ್ರೆ (Fortis Hospital) ವೈದ್ಯರ ತಂಡ ಯಶಸ್ವಿಯಾಗಿ ಮಾಡಿದೆ.

ಫೋರ್ಟಿಸ್‌ ಆಸ್ಪತ್ರೆಯ ನರಶಸ್ತ್ರಚಿಕಿತ್ಸಕ ಸಲಹೆಗಾರ ಡಾ. ಗಣೇಶ್ ವಿ. ನೇತೃತ್ವದ ತಂಡ ಒಂದು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿದೆ. ಈ ಕುರಿತು ಮಾತನಾಡಿದ ಅವರು, 111 ಕೆ.ಜಿ. ತೂಕದ ಹೊಂದಿದ್ದ 15 ವರ್ಷದ ಸೈಯದ್ ಸಲಾಹುದೀನ್ ಕ್ವಾದ್ರಿ ಎಂಬ ಬಾಲಕನಿಗೆ ಕಾರಣಾಂತರಗಳಿಂದ ಬೆನ್ನಿನ ಮೂಳೆಯ ಡಿಸ್‌ಲೊಕೇಟ್‌ ನಿಂದ ಅಸಾಧ್ಯ ನೋವು ಕಾಣಿಸಿಕೊಂಡಿತ್ತು. ಈ ನೋವು ಕ್ರಮೇಣ ಬೆನ್ನಿನಿಂದ ಕಣಕಾಲುವರೆಗೂ ಹಬ್ಬಿತ್ತು.

ಇದನ್ನೂ ಓದಿ: Assembly Session: ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ; ಏನೆಲ್ಲ ಅರ್ಹತೆ ಇರಬೇಕು?

ನಾಲ್ಕು ತಿಂಗಳುಗಳ ಕಾಲ ಈ ನೋವನ್ನು ಹಾಗೇ ನಿರ್ಲಕ್ಷಿಸಿದ್ದಾರೆ. ಪರಿಣಾಮ ಈ ಬಾಲಕ ನಡೆಯಲು, ಕೂರಲು ಸಹ ಆಗದಷ್ಟು ಅಗಾಧ ನೋವಿಗೆ ಒಳಗಾಗಿದ್ದ. ಫೋರ್ಟಿಸ್‌ ಆಸ್ಪತ್ರೆಗೆ ದಾಖಲಾದ ಬಳಿಕ ಅವರಿಗೆ ಎಂಆರ್‌ಐ ಸ್ಕ್ಯಾನ್‌ ಮಾಡುವ ಮೂಲಕ ಅವರ ಬೆನ್ನುಮೂಳೆಯ L3-L4 ಮಟ್ಟದಲ್ಲಿ ತೀವ್ರವಾದ ಪೋಸ್ಟರೊಸೆಂಟ್ರಲ್ ಡಿಸ್ಕ್ ಎಕ್ಸ್‌ಟ್ರಶನ್ ಆಗಿರುವುದು ಬಹಿರಂಗವಾಯಿತು. ಹೀಗಾಗಿ ಬಾಲಕನ ಕಣಕಾಲಿನವರೆಗೂ ಡಿಸ್‌ಲೊಕೇಟ್‌ನ ಪರಿಣಾಮ ಸಂಭವಿಸಿತ್ತು.

ಈ ನೋವನ್ನು ಹೀಗೆ ನಿರ್ಲಕ್ಷ್ಯ ಮಾಡಿದ್ದರೆ ಮುಂದೊಂದು ದಿನ ಆ ಕಾಲು ಪಾರ್ಶ್ವವಾಯು ಆಗುವ ಸಾಧ್ಯತೆ ತುಂಬಾ ಇತ್ತು. ಬಾಲಕನ ಆರೋಗ್ಯದ ಗಂಭೀರತೆಯನ್ನು ಪರಿಗಣಿಸಿ ಆತನಿಗೆ ಮೈಕ್ರೊ-ಲುಂಬರ್ ಡಿಸೆಕ್ಟಮಿ ಶಸ್ತ್ರಚಿಕಿತ್ಸೆಯನ್ನು ಶಿಫಾರಸು ಮಾಡಿದೆವು, ಇದು ನರಗಳ ಮೇಲಿನ ಒತ್ತಡವನ್ನು ನಿವಾರಿಸಲು ಡಿಸ್‌ಲೊಕೇಟ್‌ ಆಗಿರುವ ಡಿಸ್ಕ್ ಅನ್ನು ತೆಗೆದುಹಾಕುವ ಶಸ್ತ್ರಚಿಕಿತ್ಸಾ ವಿಧಾನವಾಗಿದೆ.

ಇದನ್ನೂ ಓದಿ: Assembly Session: ಕಾರ್ಮಿಕ ಇಲಾಖೆಯಿಂದ ಸಿನಿ ಕಾರ್ಮಿಕರಿಗೆ ಭರ್ಜರಿ ಗಿಫ್ಟ್!

ಬಾಲಕನ ತೂಕ ಅಧಿಕವಾಗಿದ್ದರಿಂದ ಈ ಶಸ್ತ್ರಚಕಿತ್ಸೆ ಸಾಕಷ್ಟು ಸವಾಲಾಗಿತ್ತು, ಆದರೂ ನಮ್ಮ ತಂಡ ಕಾರ್ಯಕ್ಷಮತೆಯಿಂದ ಸುರಕ್ಷತೆಯಾಗಿ ಈ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ್ದೇವೆ. ಈ ಶಸ್ತ್ರಚಿಕಿತ್ಸೆಯ ನಂತರ ಬಾಲಕನ ನೋವು ಸಂಪೂರ್ಣ ನಿವಾರಣೆಯಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.

Continue Reading

ಆರೋಗ್ಯ

Children Mobile Addiction: ನಮ್ಮ ಮಕ್ಕಳು ಎಷ್ಟು ಹೊತ್ತು ಮೊಬೈಲ್‌ ನೋಡಬಹುದು?

Children Mobile Addiction: ಮಕ್ಕಳಿಗೆ ದಿನದ ಸ್ಕ್ರೀನ್‌ ಸಮಯ ಎಷ್ಟಿರಬೇಕು? ಚಿಣ್ಣರು ಕೇಳುವಷ್ಟು ಹೊತ್ತೇ? ಹೆತ್ತವರಿಗೆ ಅನುಕೂಲ ಅಥವಾ ಪುರುಸೊತ್ತು ಆಗುವಲ್ಲಿಯವರೆಗೇ? ದಿನಕ್ಕಿಷ್ಟು ಹೊತ್ತು ಎಂದು ನಿಗದಿ ಮಾಡುವುದು ಸೂಕ್ತವೇ? ಹೆಚ್ಚು ಸಮಯ ಪರದೆಗೆ ಅಂಟಿಕೊಂಡಿದ್ದರೆ ಸಮಸ್ಯೆಯೇನು? ಇಂಥ ಹಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ. ಮಕ್ಕಳ ಕೈಯಲ್ಲಿ ಸದಾ ಗೆಜೆಟ್‌ ಇದ್ದರೆ ಏನಾಗುತ್ತದೆ ಎಂಬುದನ್ನು ಅರ್ಥ ಮಾಡಿಸುವ ಮಾಹಿತಿ ಇಲ್ಲಿದೆ.

VISTARANEWS.COM


on

By

Children Mobile Addiction
Koo

ಮಕ್ಕಳೆಂದರೆ ಹಾರಾಡುವ (Children Mobile Addiction) ಬಣ್ಣದ ಚಿಟ್ಟೆಗಳೆಂಬ (butterfly) ಭಾವ ಇತ್ತೀಚೆಗೆ ಕಡಿಮೆಯಾಗುತ್ತಿದೆ. ಕೂತಲ್ಲೇ ಅಂಟಿಕೊಂಡು, ಕರೆದರೂ ಕೇಳದ ಸ್ಥಿತಿಯಲ್ಲಿ, ಮಾತು ಬಾರದವರಂತೆ, ಎದುರಿನವರ ಪರಿಚಯವೂ ಇಲ್ಲದಂತೆ, ಹಸಿವೆ-ನೀರಡಿಕೆಗಳ ಪರಿವೆಯಿಲ್ಲದಂತೆ ಕೂತಿರುತ್ತಾರೆ… ಕೈಯಲ್ಲೊಂದು ಮೊಬೈಲು (mobile) ಹಿಡಿದು.

ಅದನ್ನು ಅವರ ಕೈಯಿಂದ ಕಿತ್ತರೆ ಟ್ಯಾಬ್‌ ಹಿಡಿಯುತ್ತಾರೆ, ಅದನ್ನೂ ಕಸಿದುಕೊಂಡರೆ ಎಲ್ಲಿ ಲ್ಯಾಪ್‌ಟಾಪ್‌ ಸಿಗುವಂತಿದೆ ನೋಡುತ್ತಾರೆ, ಕಡೆಗೆ ಟಿವಿಯಾದರೂ ಬೇಕು. ಅಂತೂ ಕೈಯಲ್ಲೊಂದು ಸ್ಕ್ರೀನ್‌ ಇಲ್ಲದಿದ್ದರೆ ಮಕ್ಕಳು ತಾವಾಗಿರುವುದಿಲ್ಲ ಎಂಬಂತೆ ಭಾಸವಾಗುತ್ತದೆ. ಅವರನ್ನೇ ಬಿಟ್ಟರೆ ಎಚ್ಚರ ಇದ್ದಷ್ಟೂ ಹೊತ್ತು ಕೈಯಲ್ಲಿ ಗೆಜೆಟ್‌ ಹಿಡಿದೇ ಇರುತ್ತಾರೆ. ಆದರೆ ಚಿಕ್ಕ ಮಕ್ಕಳು, ಅಂದರೆ ನಾಲ್ಕು-ಐದು ವರ್ಷದ ಒಳಗಿನ ಮಕ್ಕಳು ದಿನಕ್ಕೆ ಎಷ್ಟು ಹೊತ್ತು ಸ್ಕ್ರೀನ್‌ ನೋಡಬಹುದು?

ಜಾರಿಕೊಳ್ಳುತ್ತಿದ್ದಾರೆ ಹೆತ್ತವರು

ಹೆತ್ತವರ ವಿಷಯಕ್ಕೆ ಬಂದರೆ, ಬಹಳ ಮಂದಿಗೆ ಮಕ್ಕಳು ತಮ್ಮಷ್ಟಕ್ಕೆ ತಾವಿರುವುದು ಅನುಕೂಲವೇ. ಅವರು ಏನಾದರೂ ಮಾಡಿಕೊಳ್ಳಲಿ, ತಮ್ಮ ತಂಟೆಗೆ ಬಾರದಿದ್ದರೆ ಸಾಕು ಎಂಬ ಮನಸ್ಥಿತಿ ಹೆಚ್ಚಿವರದ್ದು. ಇದಕ್ಕೆ ಕಾರಣಗಳೂ ಇಲ್ಲದಿಲ್ಲ.

ದಿನವಿಡೀ ದುಡಿದು ಹೈರಾಣಾಗಿ ಬಂದ ದೊಡ್ಡವರಿಗೂ ತಮ್ಮದೇ ಆದ ಸಮಯ ಬೇಕು. ಮನೆಯದ್ದೇ ಆದ ನಿತ್ಯದ ಕೆಲಸಗಳನ್ನು ನಿಭಾಯಿಸಬೇಕು. ಮಾರನೇ ದಿನಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಇದಿಷ್ಟರ ನಡುವೆ ಮಕ್ಕಳನ್ನೂ ಸುಧಾರಿಸಬೇಕೆಂದರೆ…? ಹಾಗಾಗಿ ಸುಲಭದ ಉಪಾಯವೆಂಬಂತೆ ಅವರ ಕೈಗೊಂದು ಗೆಜೆಟ್‌ ಕೊಟ್ಟರೆ ಮುಗಿಯಿತು ಸಮಸ್ಯೆ. ಆದರಿದು ಸಾಧುವೇ? ಮಕ್ಕಳ ದೈಹಿಕ, ಮಾನಸಿಕ ಬೆಳವಣಿಗೆಗಳ ಗತಿಯೇನು?ಮನೆಯಲ್ಲಿ ದೊಡ್ಡವರೂ ಕೈಯಲ್ಲಿರುವ ಮೊಬೈಲ್‌ ಗೀರುವುದನ್ನೇ ಮಕ್ಕಳು ಸದಾ ಕಾಣುವಾಗ ಅದನ್ನು ತಪ್ಪು ಎಂದು ಹೇಳುವುದು ಹೇಗೆ? ಅದು ಒಳ್ಳೆಯದಲ್ಲ ಎಂದು ಅರ್ಥ ಮಾಡಿಸುವುದು ಹೇಗೆ?

Children Mobile Addiction


ಏನಾಗುತ್ತದೆ?

ಮಕ್ಕಳ ಕೈಯಲ್ಲಿ ಸದಾ ಗೆಜೆಟ್‌ ಇದ್ದರೆ ಏನಾಗುತ್ತದೆ ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳೋಣ. ದಿನಕ್ಕೆ ಮಿತಿಮೀರಿದ ಸ್ಕ್ರೀನ್‌ ಸಮಯದಿಂದಾಗಿ ಮಕ್ಕಳಲ್ಲಿ ಏಕಾಗ್ರತೆಯ ತೀವ್ರ ಸಮಸ್ಯೆ ಉಂಟಾಗುತ್ತದೆ. ಸಾಮಾಜಿಕ ಸಂಬಂಧಗಳು ಕಳಚಿ ಒಂಟಿತನದ ಭಾವನೆ ಎಳವೆಯಿಂದಲೇ ಬರುತ್ತದೆ. ಗಮನ ಸೆಳೆಯುವುದಕ್ಕಾಗಿ ರಚ್ಚೆ ಹಿಡಿಯುವ, ಅತಿಯಾದ ಚಂಚಲತೆಯನ್ನು ತೋರಿಸುತ್ತಾರೆ.

ಗಮನ ಕೊರತೆಯ ಅಸ್ವಸ್ಥತೆ (hyperactivity and attention deficit disorder) ಎಂದು ಕರೆಯಲಾಗುವ ಈ ಸಮಸ್ಯೆಯು ಮೆದುಳಿನ ಸಾಮರ್ಥ್ಯವನ್ನು ಕುಗ್ಗಿಸುತ್ತದೆ. ಈ ಎಲ್ಲವುಗಳ ಫಲವಾಗಿ, ಈ ಮಕ್ಕಳಲ್ಲಿ ಋಣಾತ್ಮಕ ವರ್ತನೆಗಳು ಕಂಡುಬರುತ್ತವೆ. ಶಿಸ್ತಿಲ್ಲದ, ಯಾವ ನಿಬಂಧನೆಗಳಿಗೂ ಒಳಪಡದ, ನಂಟುಗಳನ್ನೂ ಹಚ್ಚಿಕೊಳ್ಳದ ಬೀಡುಬೀಸಾದ ವರ್ತನೆ ಚಿಕ್ಕಂದಿನಲ್ಲೇ ಕಾಣಿಸಿಕೊಳ್ಳುತ್ತದೆ.

ದೃಷ್ಟಿದೋಷ

ಕೈಯಲ್ಲಿ ಹಿಡಿದು ನೋಡುವಂಥ ಗೆಜೆಟ್‌ಗಳನ್ನು ಸಾಮಾನ್ಯವಾಗಿ 2 ಅಡಿಗಿಂತ ಕಡಿಮೆ ಅಂತರಲ್ಲಿ ಇರಿಸಿಕೊಂಡು ವಾಚಿಸುತ್ತಾರೆ ಮಕ್ಕಳು. ಇದರಿಂದ ದೃಷ್ಟಿದೋಷವೂ ಹೆಚ್ಚುತ್ತದೆ. ಮೊದಲಿಗಿಂತ ಅತಿ ಹೆಚ್ಚಿನ ಪ್ರಮಾಣದಲ್ಲಿ ಬಾಲವಾಡಿಯ ಮಕ್ಕಳ ಕಣ್ಣಿಗೆ ಕನ್ನಡಕಗಳು ಬಂದಿರುವುದನ್ನು ಕಾಣಬಹುದು.

ದೈಹಿಕ ಆರೋಗ್ಯ

ಕೂತಲ್ಲೇ ಕೂತು ಕಳೆಯುವುದಾದರೆ ದೇಹ ಸ್ವಾಸ್ಥ್ಯ ಹಾಳಾಗುವುದೇ ತಾನೇ? ಮಕ್ಕಳೆಂದರೆ ಚಟುವಟಿಕೆಯ ಚಿಲುಮೆಗಳಂತೆ ಇರಬೇಕಾದವರು. ಓಡುವವರನ್ನು ಹಿಡಿದು ಕೂರಿಸುವುದು ಹೇಗೆ ಎಂದು ಹೆತ್ತವರು ಚಿಂತಿಸಬೇಕು. ಆದರೆ ಈಗಿನ ದಿನಗಳಲ್ಲಿ ಕೂತವರನ್ನು ಎಬ್ಬಿಸಿ ಆಡುವುದಕ್ಕೆ ಹೊರಗೆ ಕಳಿಸುವುದು ಹೇಗೆ ಎಂಬ ಚಿಂತೆಯಲ್ಲಿದ್ದರೆ ಸಹ.

Children Mobile Addiction


ಮಿತಿ ಎಷ್ಟು?

ದೊಡ್ಡ ಮಕ್ಕಳಿಗೆ ಶಾಲೆಯಿಂದ ಬರುವ ಹೋಮ್ ವರ್ಕ್‌ ಸಲುವಾಗಿ ಒಂದಿಷ್ಟು ಹೊತ್ತು ಪರದೆಯ ಮುಂದೆ ಕೂರುವುದು ಅನಿವಾರ್ಯವಾಗಬಹುದು. ಅದರ ಹೊರತಾಗಿ ಎಷ್ಟು ಹೊತ್ತು ಪರದೆಗೆ ಅಂಟಿಕೊಂಡಿರುತ್ತಾರೆ ಎಂಬುದನ್ನು ಗಮನಿಸಿ.

ಇದನ್ನೂ ಓದಿ: Smartphone Charging Tips: ನಿಮ್ಮ ಸ್ಮಾರ್ಟ್ ಪೋನ್ ಬ್ಯಾಟರಿ ಹೆಚ್ಚು ಬಾಳಿಕೆ ಬರಲು ಹೀಗೆ ಮಾಡಿ

ಶಾಲೆಯ ದಿನಗಳಲ್ಲಿ ಅನಗತ್ಯ ಸ್ಕ್ರೀನ್‌ ಸಮಯ ಇಲ್ಲದಿದ್ದರೇ ಒಳಿತು. ರಜೆಯ ದಿನಗಳಲ್ಲಿ ಪರದೆಯ ಪರಿಮಿತಿಯನ್ನು ಒಂದು ತಾಸಿಗೆ ನಿಗದಿಗೊಳಿಸಿ. ಬಾಲವಾಡಿ ಅಥವಾ ಅದಕ್ಕಿಂತ ಚಿಕ್ಕ ಮಕ್ಕಳಿಗೆ ದಿನಕ್ಕೆ ಒಂದು ತಾಸಿನ ಸ್ಕ್ರೀನ್‌ ಸಮಯ ಸಾಕಾಗುತ್ತದೆ. ಉಳಿದ ಸಮಯವನ್ನು ಅರ್ಥಪೂರ್ಣವಾಗಿ ಕಳೆಯುವುದು ಹೇಗೆ ಎಂಬುದನ್ನು ಹೆತ್ತವರೇ ನಿರ್ಧರಿಸಬೇಕಾಗುತ್ತದೆ.

Continue Reading

ಫ್ಯಾಷನ್

Dog Ethnicwear: ನಾಯಿಗಳಿಗೂ ಬಂತು ಎಥ್ನಿಕ್‌ ವೇರ್ಸ್! ಎಷ್ಟು ಮುದ್ದಾಗಿ ಕಾಣಿಸುತ್ತಿವೆ!

Dog Ethnicwear: ಇದೀಗ ಮುದ್ದು ಶ್ವಾನಗಳು ಕೂಡ ಗ್ರ್ಯಾಂಡ್‌ ಸಮಾರಂಭಗಳಲ್ಲಿ ಸಿಂಗಾರಗೊಳ್ಳುತ್ತಿವೆ. ಇವಕ್ಕೆ ಪೂರಕ ಎಂಬಂತೆ ನಾನಾ ಪೆಟ್‌ ಶಾಪ್‌ಗಳು ಡಿಸೈನರ್‌ವೇರ್‌ಗಳನ್ನು ಬಿಡುಗಡೆಗೊಳಿಸಿವೆ. ಅವುಗಳಲ್ಲಿ ಯಾವ್ಯಾವ ಬಗೆಯವು ಬೇಡಿಕೆ ಪಡೆದುಕೊಂಡಿವೆ ಎಂಬುದರ ಕುರಿತಂತೆ ಡಾಗ್‌ ಸ್ಟೈಲಿಸ್ಟ್‌ಗಳು ಇಲ್ಲಿ ವಿವರಿಸಿದ್ದಾರೆ.

VISTARANEWS.COM


on

By

Dog Ethnicwear
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಶ್ವಾನಗಳು ಇತ್ತೀಚೆಗೆ (Dog Ethnicwear) ಎಥ್ನಿಕ್‌ವೇರ್‌ಗಳಲ್ಲಿ ಮಿಂಚುತ್ತಿವೆ. ಅಂಬಾನಿ ಫ್ಯಾಮಿಲಿಯ (ambani family) ಮುದ್ದು ಶ್ವಾನಗಳಾದ (dog) ಹ್ಯಾಪಿ ಹಾಗೂ ಪಾಪ್‌ಕಾರ್ನ್‌ ವೆಡ್ಡಿಂಗ್‌ ಔಟ್‌ಫಿಟ್‌ನಲ್ಲಿ (Wedding outfit) ಕಾಣಿಸಿಕೊಂಡು ಸುದ್ದಿಯಾಗಿರುವುದು ಎಲ್ಲರಿಗೂ ಗೊತ್ತೇ ಇದೆ. ಇದಕ್ಕೆ ಪೂರಕ ಎಂಬಂತೆ, ಇದೀಗ ಮುದ್ದು ಶ್ವಾನಗಳು ಕೂಡ ಗ್ರ್ಯಾಂಡ್‌ ಸಮಾರಂಭಗಳಲ್ಲಿ ಸಿಂಗಾರಗೊಳ್ಳುತ್ತಿವೆ. ಮನುಷ್ಯರಂತೆ ಉಡುಪನ್ನು ಧರಿಸಿ ಮೆರೆಯುತ್ತಿವೆ.

ಪೆಟ್‌ ಶಾಪ್‌ಗಳಲ್ಲೂ ಲಭ್ಯ

ಪೆಟ್‌ ಶಾಪ್‌ಗಳು ಡಾಗ್ಗಿಗಳ ನಾನಾ ಬಗೆಯ ವೈವಿಧ್ಯಮಯ ಡಿಸೈನರ್‌ವೇರ್‌ಗಳನ್ನು ಬಿಡುಗಡೆಗೊಳಿಸಿವೆ. ಪುಟ್ಟ ನಾಯಿಮರಿಯಿಂಡಿದು ದೊಡ್ಡ ಗೋಲ್ಡನ್‌ ರಿಟ್ರಿವರ್‌ನಂತಹ ನಾಯಿ ಕೂಡ ಧರಿಸಬಹುದಾದ ಎಥ್ನಿಕ್‌ವೇರ್‌ಗಳನ್ನು ಲಾಂಚ್‌ ಮಾಡಿವೆ.

ಆಯಾ ಜಾತಿಯ ಶ್ವಾನಗಳಿಗೆ ಅನುಗುಣವಾಗಿ ಎಥ್ನಿಕ್‌ವೇರ್‌ಗಳ ಆಯ್ಕೆ ಮಾಡಬಹುದು ಎನ್ನುವ ಡಾಗ್‌ ಸ್ಟೈಲಿಸ್ಟ್ ರಾಕೇಶ್‌, ಈ ಕುರಿತಂತೆ ಒಂದಿಷ್ಟು ಮಾಹಿತಿ ನೀಡಿದ್ದಾರೆ.

Dog Ethnicwear
ಚಿತ್ರಕೃಪೆ: ಇನ್ ಸ್ಟಾಗ್ರಾಮ್


ಟ್ರೆಂಡಿಯಾಗಿರುವ ಡಾಗ್‌ ಎಥ್ನಿಕ್‌ವೇರ್ಸ್

ಸ್ಯಾಟಿನ್‌, ವೆಲ್ವೆಟ್‌, ಕಾಟನ್‌, ಕಾಟನ್‌ ಸಿಲ್ಕ್‌ ಹೀಗೆ ನಾನಾ ಫ್ಯಾಬ್ರಿಕ್‌ನ ಫ್ರಾಕ್‌ ಶೈಲಿಯ ಡ್ರೆಸ್‌ಗಳು, ಹೆಣ್ಣು ನಾಯಿಮರಿಗಳಿಗೆ ನಾನಾ ಡಿಸೈನ್‌ನಲ್ಲಿ ಬಿಡುಗಡೆಗೊಂಡಿದ್ದರೇ, ಗಂಡು ನಾಯಿಮರಿಗಳಿಗೆ ನೋಡಲು ಕೋಟ್‌ ಎಂದೆನಿಸುವ ವೇಸ್ಟ್ಕೋಟ್‌ ಶೈಲಿಯಂತವು ಬಂದಿವೆ ಎನ್ನುತ್ತಾರೆ ಪೆಟ್‌ ಶಾಪ್‌ವೊಂದರ ಮಾಲೀಕರು.

Dog Ethnicwear
ಚಿತ್ರಕೃಪೆ: ಇನ್ ಸ್ಟಾಗ್ರಾಮ್


ಕಸ್ಟಮೈಸ್ಡ್ ಡಾಗ್‌ ಎಥ್ನಿಕ್‌ವೇರ್ಸ್

ಇನ್ನು ಸಾಕಷ್ಟು ಬೋಟಿಕ್‌ಗಳು ಮುದ್ದು ನಾಯಿಮರಿಗಳಿಗೂ ಎಥ್ನಿಕ್‌ವೇರ್‌ಗಳನ್ನು ಹೊಲಿದು ಡಿಸೈನ್‌ ಮಾಡಿಕೊಡುತ್ತಿವೆ. ಆಯಾ ಕುಟುಂಬದವರ ಸಮಾರಂಭಗಳಿಗೆ ಅನುಗುಣವಾಗಿ ಡಿಸೈನ್‌ ಮಾಡಿ, ರೆಡಿ ಮಾಡಿಕೊಡುತ್ತವೆ.

Dog Ethnicwear
ಚಿತ್ರಕೃಪೆ: ಇನ್ ಸ್ಟಾಗ್ರಾಮ್


ಆನ್‌ಲೈನ್‌ನಲ್ಲಿ ಡಾಗ್‌ ಡಿಸೈನರ್‌ವೇರ್ಸ್

ಇನ್ನು, ಆನ್‌ಲೈನ್‌ಗಳಲ್ಲಂತೂ ಲೆಕ್ಕವಿಲ್ಲದಷ್ಟೂ ಬಗೆಯ ಡಾಗ್‌ ಎಥ್ನಿಕ್‌ವೇರ್‌ಗಳು ದೊರೆಯುತ್ತಿವೆ. ಅದರಲ್ಲೂ ವೆಡ್ಡಿಂಗ್‌, ಬರ್ತ್ ಡೇ ಸೆಲೆಬ್ರೇಷನ್‌ ಹೀಗೆ ನಾನಾ ಸಮಾರಂಭಗಳಿಗೆ ಮ್ಯಾಚ್‌ ಆಗುವಂತಹ ಕ್ಯೂಟ್‌ ಡಿಸೈನರ್‌ವೇರ್‌ಗಳು ಇಲ್ಲಿ ಲಭ್ಯ ಎನ್ನುತ್ತಾರೆ ಡಾಗ್‌ ಪ್ರೇಮಿ ಜೀವಿತಾ ಹಾಗೂ ದೀಕ್ಷಾ.

ಇದನ್ನೂ ಓದಿ: Summer Fashion: ಉರಿ ಬಿಸಿಲಿನಲ್ಲಿ ಗಮನ ಸೆಳೆವ ನಟ ಶೈನ್‌ ಶೆಟ್ಟಿಯ ಕೂಲ್‌ ಸ್ಮೈಲ್‌ & ಸ್ಟೈಲ್‌!

· ಆನ್‌ಲೈನ್‌ನಲ್ಲಿ ಕೆಲವೊಮ್ಮೆ ಆಫರ್‌ಗಳಲ್ಲಿ ಕಡಿಮೆ ಬೆಲೆಯಲ್ಲಿ ದೊರೆಯುತ್ತವೆ.
· ನಿಮ್ಮ ಶ್ವಾನದ ಸೈಜ್‌ಗೆ ತಕ್ಕಂತೆ ಖರೀದಿಸಿ. ದೊಗಲೆಯಾದಲ್ಲಿ ಚೆನ್ನಾಗಿ ಕಾಣಿಸುವುದಿಲ್ಲ.
· ಗ್ರ್ಯಾಂಡ್‌ ಆಗಿರುವಂಥವು ಚೆನ್ನಾಗಿ ಕಾಣಿಸುತ್ತವೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)
Continue Reading

ಫ್ಯಾಷನ್

Ananth Ambani Fashion: ಅನಂತ್‌ ಅಂಬಾನಿ ಬಳಿ ಇದೆ ಡೈಮಂಡ್‌ ಬ್ರೂಚ್‌ಗಳ ಕಲೆಕ್ಷನ್‌! ಇವುಗಳ ಮೌಲ್ಯ ಎಷ್ಟಿರಬಹುದು?

Ananth Ambani Fashion: ಅನಂತ್‌ ಅಂಬಾನಿಯವರಿಗೆ ಡೈಮಂಡ್‌ ಹಾಗೂ ಎಮರಾಲ್ಡ್‌ನ ಬ್ರೂಚ್‌ ಕಲೆಕ್ಷನ್‌ ಕ್ರೇಜ್‌ ಇದೆ! ಇದಕ್ಕೆ ಸಾಕ್ಷಿ ಎಂಬಂತೆ ಅವರ ಬಳಿ ನೂರಾರು ಕೋಟಿ ರೂ. ಬೆಲೆಬಾಳುವ ಹಲವಾರು ಬ್ರೂಚ್‌ಗಳಿವೆ. ಅವುಗಳಲ್ಲಿ ಒಂದಿಷ್ಟು ಬ್ರೂಚ್‌ಗಳ ಕುರಿತಂತೆ ಇಲ್ಲಿದೆ ಡಿಟೇಲ್ಸ್.

VISTARANEWS.COM


on

By

Ananth Ambani Fashion
Koo
ಶೀಲಾ ಸಿ. ಶೆಟ್ಟಿ, ಬೆಂಗಳೂರು

ಅನಂತ್‌ ಅಂಬಾನಿಯವರ (Ananth Ambani Fashion) ಬ್ರೂಚ್‌ (Brooch) ಜ್ಯುವೆಲರಿಗಳು ಇದೀಗ ಮೆನ್ಸ್ ವೆಡ್ಡಿಂಗ್‌ ಜ್ಯುವೆಲರಿ ಫ್ಯಾಷನ್‌ನಲ್ಲಿ (Mens Wedding Jewelery Fashion) ಟಾಪ್‌ ಲಿಸ್ಟ್‌ಗೆ ಸೇರಿವೆ.

ಮೆನ್ಸ್ ಜ್ಯುವೆಲರಿ ಲಿಸ್ಟ್‌ಗೆ ಬ್ರೂಚ್‌

ಕೇವಲ ರಾಯಲ್‌ ವೆಡ್ಡಿಂಗ್‌ ಜ್ಯುವೆಲರಿ ಕಲೆಕ್ಷನ್‌ನಲ್ಲಿ ಮಾತ್ರವಲ್ಲ, ಸಾಮಾನ್ಯ ಮೆನ್ಸ್ ಆಭರಣಗಳ ಲಿಸ್ಟ್‌ಗೂ ಇವು ಸೇರಿಕೊಂಡಿವೆ.

Ananth Ambani Fashion


ಹೌದು, ಅಂಬಾನಿ ಫ್ಯಾಮಿಲಿಯ ಮದುವೆಗಳಲ್ಲಿ ಜ್ಯುವೆಲರಿಗಳಲ್ಲಿ ಅತಿ ಹೆಚ್ಚು ಹೈಲೈಟಾಗಿದ್ದು, ಮಹಿಳೆಯರ ನೆಕ್ಲೇಸ್‌ ಹಾಗೂ ಆಭರಣದ ಸೆಟ್‌ಗಳು. ಆದನ್ನು ಹೊರತುಪಡಿಸಿದಲ್ಲಿ ಮೆನ್ಸ್ ಲುಕ್‌ಗೆ ಸಾಥ್‌ ನೀಡುವಂತಹ ಶೆರ್ವಾನಿ ಹಾಗೂ ಬಂದ್ಗಾಲ ಡಿಸೈನ್‌ಗಳು ಕೊಂಚ ಫ್ಯಾಷನ್‌ ಲೋಕದಲ್ಲಿ ಹೈಲೈಟ್‌ ಆಯಿತಾದರೂ, ಬಂಗಾರದ ಡಿಸೈನರ್‌ವೇರ್‌ಗಳನ್ನು ಯಾರೂ ವಿನ್ಯಾಸ ಮಾಡಿಸಲು ಸಾಧ್ಯವಿಲ್ಲದ್ದರಿಂದ ಇವುಗಳು ಕೇವಲ ಫ್ಯಾಷನ್‌ ಹಿಸ್ಟರಿ ಪುಸ್ತಕದಲ್ಲಿಯೇ ಉಳಿದವು.

ಇನ್ನು ಅಂಬಾನಿ ಮನೆಯ ಮೆನ್ಸ್ ಜ್ಯುವೆಲರಿ ಫ್ಯಾಷನ್‌ನಲ್ಲಿ ಅತಿ ಹೆಚ್ಚು ಹೈಲೈಟ್‌ ಆಗಿದ್ದು, ಅನಂತ್‌ ಧರಿಸಿದ್ದ ಬ್ರೂಚ್‌ಗಳು. ಅಂದಹಾಗೆ, ಯಾವ್ಯಾವ ಬಗೆಯ ಬ್ರೂಚ್‌ ಅತಿ ಹೆಚ್ಚು ಆಕರ್ಷಿಸಿದವು? ಅವುಗಳ ವಿಶೇಷತೆಯೇನು? ಎಂಬುದರ ಬಗ್ಗೆ ಜ್ಯುವೆಲ್‌ ಡಿಸೈನರ್‌ಗಳು ಇಲ್ಲಿ ವಿವರಿಸಿದ್ದಾರೆ.

Ananth Ambani Fashion


14 ಕೋಟಿ ರೂ.ಗಳ ಗಣೇಶನ ಆಕೃತಿಯ ಬ್ರೂಚ್‌

ಮದುವೆಯ ಹಿಂದಿನ ದಿನ ಅನಂತ್‌ ಅಂಬಾನಿಯವರು 214 ಕೋಟಿಯ ಗೋಲ್ಡನ್‌ ಶೆರ್ವಾನಿಯೊಂದಿಗೆ 14 ಕೋಟಿ ರೂ. ಬೆಲೆ ಬಾಳುವ ವಂತರಾ ಡ್ರೀಮ್‌ ಪ್ರಾಜೆಕ್ಟ್ ಪ್ರತಿನಿಧಿಸುವ ಗಣೇಶನ ಮುಖ ಹೊಂದಿರುವ ಆನೆಯ ಆಕೃತಿಯ ಮುಖವನ್ನು ಹೋಲುವ ಅತ್ಯಾಕರ್ಷಕ ಬ್ರೂಚ್‌ ಮೆನ್ಸ್ ಜ್ಯುವೆಲರಿ ಫ್ಯಾಷನ್‌ನಲ್ಲಿ ಹಿಟ್‌ ಲಿಸ್ಟ್ ಸೇರಿತು.

ಎಮರಾಲ್ಡ್ ಚಿರತೆಯ ಬ್ರೂಚ್‌

ಎಮರಾಲ್ಡ್ ಸ್ಟೋನ್‌ ಮೇಲೆ ಚಿರತೆ ಕುಳಿತಿರುವಂತಹ ಅಪರೂಪದ ಬ್ರೂಚ್‌ ಅನಂತ್‌ ಮದುವೆಯ ಸಮಾರಂಭಗಳಲ್ಲಿ ಎಲ್ಲರನ್ನು ಸೆಳೆದಿತ್ತು. ಇನ್ನು, ಇದೇ ಸಂದರ್ಭದಲ್ಲಿ ಪೇಟಾಗೆ ಧರಿಸಿದ್ದ ಡೈಮಂಡ್‌ನ ಸರ್ಪೆಚ್‌ ಕೂಡ ರಾಜ-ಮಹಾರಾಜರ ಜ್ಯುವೆಲರಿ ಕಲೆಕ್ಷನನ್ನು ಪ್ರತಿನಿಧಿಸಿತ್ತು. ಇದಕ್ಕೂ ಬಹಳ ಹಿಂದೆ
ರೋಕಾ ಕಾರ್ಯಕ್ರಮದಲ್ಲೂ ಪ್ಲಾಟಿನಂ ಹಾಗೂ ಚಿನ್ನದಿಂದ ತಯಾರಾದ ಚಿರತೆಯ ಆಕೃತಿಯ ಡೈಮಂಡ್‌ ಬ್ರೂಚನ್ನು ಅನಂತ್‌ ಧರಿಸಿದ್ದರು.

ಶ್ರೀನಾಥ್‌ ದೇವರ ಬ್ರೂಚ್‌

ಶುಭ್‌ ಆಶಿರ್ವಾದ್‌ ಕಾರ್ಯಕ್ರಮದಲ್ಲಿ ಕುಟುಂಬದ ದೈವ ಶ್ರೀನಾಥ್‌ ಭಗವಾನ್‌ ಆಕೃತಿ ಬ್ರೂಚ್‌, ಅನಂತ್‌ರ ಮರೂನ್‌ ಶೆರ್ವಾನಿಯ ಸೌಂದರ್ಯ ಹೆಚ್ಚಿಸಿತ್ತು.

Ananth Ambani Fashion

ಇದನ್ನೂ ಓದಿ: Model Fashion: ಸೀಸನ್‌ ಗೆ ತಕ್ಕಂತೆ ಫ್ಯಾಷನ್‌ ಬದಲಿಸುವ ಮಿಸೆಸ್‌ ಬೆಂಗಳೂರು ಟೈಟಲ್‌ ವಿಜೇತೆ ಪ್ರತಿಭಾ ನಟರಾಜ್‌

ಸಿಂಹದ ಬ್ರೂಚ್‌

ಈ ಮೇಲಿನವುಗಳಲ್ಲದೇ 50 ಕ್ಯಾರೆಟ್‌ ಡೈಮಂಡ್‌ನ ಲೊರೈನ್‌ ಸ್ಕಾವರ್ಟ್ಞ್ ಡಿಸೈನ್‌ ಮಾಡಿದ ಸಿಂಹದ ಆಕೃತಿಯ ಬ್ರೂಚ್‌ ಈ ಹಿಂದೆ ಜಾಮ್‌ನಗರದಲ್ಲಿ ನಡೆದ ಪ್ರಿ-ವೆಡ್ಡಿಂಗ್‌ನಲ್ಲಿ ಸಖತ್‌ ಹೈಲೈಟ್‌ ಆಗಿತ್ತು.
ಈ ಎಲ್ಲಾ ಮೇಲಿನ ಬ್ರೂಚ್‌ ವಿವರಣೆಗಳು ಕೇವಲ ಸ್ಯಾಂಪಲ್‌ ಅಷ್ಟೇ! ಇದೇ ರೀತಿ ಅನಂತ್‌ ಅವರ ಬಳಿ ನೂರಾರು ಡೈಮಂಡ್‌ ಹಾಗೂ ಎಮರಾಲ್ಡ್ನ ಬ್ರೂಚ್‌ಗಳಿವೆಯಂತೆ. ಕಡಿಮೆಯೆಂದರೂ ನೂರಾರು ಕೋಟಿ ರೂ.ಗಳು ಬೆಲೆಬಾಳುತ್ತವಂತೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ )
Continue Reading
Advertisement
T20 World Cup 2024
ಪ್ರಮುಖ ಸುದ್ದಿ22 mins ago

T20 World Cup 2024 : 30 ಎಸೆತಕ್ಕೆ 30 ರನ್​ ಇದ್ದಾಗ ದಿಕ್ಕೇ ತೋಚದಂತಾಗಿದ್ದೆ! ಆ ತಲ್ಲಣ ವಿವರಿಸಿದ ಶರ್ಮಾ

Assembly Session
ಕರ್ನಾಟಕ36 mins ago

Assembly Session: ಅಧಿಕಾರಿಗಳು ಮಾಡಿದ ಅಕ್ರಮಕ್ಕೆ ಸಚಿವರ ವಿರುದ್ಧ ಆರೋಪಿಸುವುದು ಸರಿಯಲ್ಲ ಎಂದ ಡಿಕೆಶಿ!

A 15 year old boy weighing 111 kg underwent successful spinal disc surgery that avoided potential paralysis
ಕರ್ನಾಟಕ43 mins ago

Fortis Hospital: 111 ಕೆಜಿ ತೂಕವಿದ್ದ ಬಾಲಕನಿಗೆ ಪಾರ್ಶ್ವವಾಯು ತಪ್ಪಿಸಿದ ʼಬೆನ್ನೆಲುಬಿನ ಡಿಸ್ಕ್ʼ ಶಸ್ತ್ರಚಿಕಿತ್ಸೆ

Pooja Khedkar
ದೇಶ48 mins ago

Pooja Khedkar: ಪೂಜಾ ಖೇಡ್ಕರ್‌ ಪುಣೆ ಜಿಲ್ಲಾಧಿಕಾರಿ ವಿರುದ್ಧ ಲೈಂಗಿಕ ಕಿರುಕುಳದ ಆರೋಪ

Larva survey Show the old photo without GPS and get crores of rupees to the government Cheating Alleged by MLC TA Sharavana
ಕರ್ನಾಟಕ49 mins ago

Assembly Session: ಲಾರ್ವಾ ಸರ್ವೇ; ಜಿಪಿಎಸ್ ಇಲ್ಲದ ಹಳೆ ಫೋಟೋ ತೋರಿಸಿ ಕೋಟ್ಯಂತರ ರೂ. ಮೋಸ; ಶರವಣ ಆರೋಪ

A permanent solution to artificial flood on national highways says MP Vishweshwar Hegde Kageri
ಉತ್ತರ ಕನ್ನಡ52 mins ago

Uttara Kannada News: ರಾಷ್ಟ್ರೀಯ ಹೆದ್ದಾರಿಯಲ್ಲಿ ಕೃತಕ ನೆರೆ ತಡೆಗೆ ಶಾಶ್ವತ ಪರಿಹಾರ; ಕಾಗೇರಿ

ಕರ್ನಾಟಕ53 mins ago

Dengue Fever: ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳಲ್ಲಿ ತೀವ್ರ ಏರಿಕೆ; ಮಂಗಳವಾರ 487 ಕೇಸ್‌ ಪತ್ತೆ!

Chennai Super King
ಕ್ರೀಡೆ1 hour ago

Chennai Super King : ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಕ್ರಿಕೆಟ್ ಅಕಾಡೆಮಿ ಆರಂಭಿಸಿದ ಚೆನ್ನೈ ಸೂಪರ್ ಕಿಂಗ್ಸ್​

Anushka Sharma
ಪ್ರಮುಖ ಸುದ್ದಿ2 hours ago

Anushka Sharma : ಪತ್ನಿ ಅನುಷ್ಕಾ ಬರ್ತ್​​ಡೇಗೆ ಕೊಹ್ಲಿ ಕೇಕ್​ ಆರ್ಡರ್​ ಮಾಡಿದ್ದು ಬೆಂಗಳೂರಿನಿಂದ; ತಿಂಗಳುಗಳ ಬಳಿಕ ಮಾಹಿತಿ ಬಹಿರಂಗ

Muscat Terrorist Attack
ವಿದೇಶ2 hours ago

Muscat Terrorist Attack: ಮಸ್ಕತ್‌ನಲ್ಲಿ ಉಗ್ರರ ಅಟ್ಟಹಾಸ; ಭಾರತೀಯ ಸೇರಿ 9ಮಂದಿ ಸಾವು

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ9 hours ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ11 hours ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ1 day ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ1 day ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ2 days ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ2 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ2 days ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ2 days ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

karnataka Rain
ಮಳೆ2 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ3 days ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

ಟ್ರೆಂಡಿಂಗ್‌