PFI BANNED | ಹಿಜಾಬ್ ಗಲಾಟೆಯಲ್ಲೂ ಪಿಎಫ್ಐ ಕೈವಾಡ ಇತ್ತೆಂದ ರಘುಪತಿ ಭಟ್; ಭಾರತಕ್ಕೆ ಸಂದ ಜಯ ಅಂದ್ರು ಬಿ.ವೈ.ರಾಘವೇಂದ್ರ - Vistara News

ಉಡುಪಿ

PFI BANNED | ಹಿಜಾಬ್ ಗಲಾಟೆಯಲ್ಲೂ ಪಿಎಫ್ಐ ಕೈವಾಡ ಇತ್ತೆಂದ ರಘುಪತಿ ಭಟ್; ಭಾರತಕ್ಕೆ ಸಂದ ಜಯ ಅಂದ್ರು ಬಿ.ವೈ.ರಾಘವೇಂದ್ರ

ಪಿಎಫ್‌ಐ ಸಂಘಟನೆಯ ವಿರುದ್ಧ ಬಿಜೆಪಿ ನಾಯಕರು ಗುಡುಗಿದ್ದು, ಹಿಜಾಬ್‌ ಸಂಘರ್ಷಕ್ಕೂ ಯಾವ ರೀತಿ ಮುಳುವಾಯಿತು ಎಂಬುದನ್ನು ವಿವರಿಸಿದ್ದಾರೆ.

VISTARANEWS.COM


on

Karnataka police
ಸಾಂದರ್ಭಿಕ ಚಿತ್ರ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಉಡುಪಿ: ಪಿಎಫ್‌ಐ ಸಂಘಟನೆಯನ್ನು (PFI BANNED ) ಸಾಕ್ಷ್ಯಾಧಾರದೊಂದಿಗೆ ನಿಷೇಧ ಮಾಡಲಾಗಿದ್ದು, ಹಿಜಾಬ್‌ ಗಲಾಟೆಯಲ್ಲಿಯೂ ಸಂಘದ ಪಾತ್ರ ಇರುವುದು ಸಾಬೀತಾಗಿತ್ತು ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ಪ್ರತಿಕ್ರಿಯಿಸಿದ್ದಾರೆ.

PFI BANNED

ಪಿಎಫ್ಐ ಸಂಘಟನೆ ನಿಷೇಧಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿ ಮಾತನಾಡಿದ ಅವರು, ಈ ಕೆಲಸ ಎಂದೋ ಆಗಬೇಕಿತ್ತು. ಎಲ್ಲ ರಾಜ್ಯಗಳಲ್ಲಿ ದಾಖಲೆಗಳನ್ನು ಸಂಗ್ರಹಿಸಿದ ನಂತರವೇ ಬ್ಯಾನ್ ಮಾಡಿದ್ದಾರೆ. ವಿದೇಶಿ ಉಗ್ರ ಸಂಘಟನೆಗಳ ಜತೆ ಪಿಎಫ್ಐ ಕೈಜೋಡಿಸಿರುವುದು ಸಾಬೀತಾಗಿದೆ. ಸಮಾಜ ಒಡೆಯುವ ಕೆಲಸದಲ್ಲಿ ಸಂಘಟನೆ ನಿರತವಾಗಿತ್ತು ಎಂದು ಶಾಸಕ ರಘುಪತಿ ಭಟ್‌ ತಿಳಿಸಿದ್ದಾರೆ.

ಉಡುಪಿಯಲ್ಲಿ ಆರಂಭವಾದ ಹಿಜಾಬ್ ಪ್ರಕರಣದಲ್ಲಿ ಪಿಎಫ್ಐ ಪಾತ್ರ ಇರುವುದು ಗೊತ್ತಾಗಿದೆ. ಸಿಎಫ್ಐಗೆ ಸೇರ್ಪಡೆಕೊಂಡ ನಂತರ ವಿದ್ಯಾರ್ಥಿನಿಯರ ವರ್ತನೆ ಬದಲಾಗಿತ್ತು. ವಿದ್ಯಾರ್ಥಿನಿಯರು ಟ್ವಿಟರ್ ಮೂಲಕ ದೇಶ ವಿರೋಧಿ ಹೇಳಿಕೆಗಳನ್ನು ಪೋಸ್ಟ್‌ ಮಾಡಿದ್ದರು.

ಸಿಎಫ್ಐ ನೇರವಾಗಿ ಪಾತ್ರವಹಿಸಿತ್ತು. ಸಿಎಫ್ಐ ಇರದಿದ್ದರೆ ಹಿಜಾಬ್ ವಿವಾದ ಆಗುತ್ತಿರಲಿಲ್ಲ. ಗುಪ್ತ ಸ್ಥಳದಲ್ಲಿ ಉಡುಪಿಯ ವಿದ್ಯಾರ್ಥಿನಿಯರಿಗೆ ತರಬೇತಿ ನೀಡಲಾಗಿತ್ತು. ಧರ್ಮದ ಅಂದ ಶ್ರದ್ಧೆ ಬೆಳೆಸಲು ತರಬೇತಿ ನೀಡಲಾಗಿತ್ತು. ಈ ಬಗ್ಗೆ ನಾನು ಮೊದಲೇ ಆರೋಪಿಸಿದ್ದೆ, ಈಗ ಎಲ್ಲವೂ ನಿಜವಾಗಿದೆ ಎಂದರು.

ಇನ್ನು ಪಿಎಫ್ಐ ವಿರುದ್ಧದ ಕಾರ್ಯಾಚರಣೆ ಹಿಂದೆ ಆರ್‌ಎಸ್‌ಎಸ್‌ ಇದೆ ಎಂಬ ಆರೋಪದ ಬಗ್ಗೆ ಮಾತನಾಡಿದ ಅವರು, ಪಿಎಫ್ಐ ಬಗ್ಗೆ ಯಾರೂ ಹೇಳಬೇಕಾಗಿಲ್ಲ, ಸಮಾಜಕ್ಕೆ ಗೊತ್ತಿದೆ. ಆರ್‌ಎಸ್‌ಎಸ್ ಹೇಳುವುದು ಬೇಡ, ನೈಜ ಮುಸ್ಲಿಮರ ಬಳಿ ಬೇಕಾದರೆ ಕೇಳಿ ಪಿಎಫ್ಐ ಬ್ಯಾನ್ ಮಾಡಬೇಕು ಎಂದು ಹೇಳುತ್ತಾರೆ.

ಇದನ್ನೂ ಓದಿ | ಪಿಎಫ್‌ಐ ಹುಟ್ಟಿದ್ದು ಹೇಗೆ?

ಹಿಜಾಬ್ ವಿಚಾರ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಚರ್ಚೆಯಾಯಿತು. ಪಾಕಿಸ್ತಾನದಲ್ಲಿ ಅದು ಸುದ್ದಿ ಆಯಿತು. ಪಿಎಫ್ಐ ಮಾಡಿದ ಹೋರಾಟ ಪಾಕಿಸ್ತಾನ ವಾಹಿನಿಗಳಲ್ಲಿ ಹೇಗೆ ಬಂತು? ವಿದೇಶದಿಂದ ಈ ರೀತಿಯ ಕೃತ್ಯಗಳಿಗೆ ಹಣ ಬಂದಿದೆ. ಸರ್ಕಾರ ಈಗ ಪಿಎಫ್ಐ ನಿಷೇಧಿಸಿದೆ. ಅವರು ಇನ್ನೊಂದು ಹೆಸರು ಇಟ್ಟುಕೊಂಡು ಸಂಘಟನೆ ಮಾಡುತ್ತಾರೆ.‌ ಪಿಎಫ್ಐ ಸಂಘಟನೆಯಲ್ಲಿ ಇರುವವರನ್ನು ಸಮಾಜಘಾತಕ ಶಕ್ತಿಗಳಂತೆ ಪರಿಗಣಿಸಿ ಮುಸ್ಲಿಂ ಸಮುದಾಯವೇ ಹೊರಹಾಕಬೇಕು, ಮೌಲ್ವಿಗಳು ಅವರನ್ನು ದೂರವಿಡಬೇಕು. ನಾವು ಮಾಡಿದರೆ ಆರ್‌ಎಸ್‌ಎಸ್ ಮಾಡಿದ್ದು ಎಂದು ಹೇಳುತ್ತಾರೆ. ಮುಸ್ಲಿಮರು ಎಚ್ಚೆತ್ತುಕೊಳ್ಳಲು ಇದು ಸಕಾಲ. ಇಲ್ಲವಾದರೆ ಪಿಎಫ್ಐ, ಸಿಎಫ್ಐ ಜತೆ ಎಲ್ಲ ಮುಸ್ಲಿಮರ ಹೆಸರು ಹಾಳಾಗುತ್ತದೆ ಎಂದು ಎಚ್ಚರಿಸಿದರು.

PFI BANNED

ಶಾಂತಿಯ ಸಂದೇಶ ಸಾರುವ ಭಾರತಕ್ಕೆ ಸಂದ ಜಯ

ಶಿವಮೊಗ್ಗದ ಶಿಕಾರಿಪುರದಲ್ಲಿ ಸಂಸದ ಬಿ.ವೈ. ರಾಘವೇಂದ್ರ ಪ್ರತಿಕ್ರಿಯಿಸಿದ್ದು, ಕೇಂದ್ರ ಸರ್ಕಾರದಿಂದ ಐತಿಹಾಸಿಕ ನಿಲುವು ತಾಳಿದೆ. ಭಯೋತ್ಪಾದಕ ಚಟುವಟಿಕೆಯಲ್ಲಿ ನಿರತ ಪಿಎಫ್ಐ ಸೇರಿದಂತೆ ಐದು ಸಂಘಟನೆಗಳಿಗೆ ಕೇಂದ್ರ ನಿಷೇಧ ಮಾಡಿದೆ. ನಾಡಿನ ಪರವಾಗಿ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಮೊನ್ನೆ 15 ರಾಜ್ಯಗಳಲ್ಲಿ ದಾಳಿ ಮಾಡಿ ನೂರಾರು ಜನರನ್ನು ಬಂಧಿಸಲಾಗಿದೆ. ಈ ಸಂಘಟನೆಗಳ ನಿಷೇಧಕ್ಕೆ ತುಂಬಾ ದಿನಗಳ ಬೇಡಿಕೆಯಿತ್ತು. ಇದು ಶಾಂತಿಯ ಸಂದೇಶ ಸಾರುವ ಭಾರತಕ್ಕೆ ಸಂದ ಜಯ ಎಂದರು.

PFI BANNED

ಮಾತಾಂಧ ಶಕ್ತಿ ದೇಶದಲ್ಲಿ ನಿಷೇಧ; ಯಶ್‌ ಪಾಲ್‌ ಸುವರ್ಣ

ಉಡುಪಿಯಲ್ಲಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ ಪಾಲ್ ಸುವರ್ಣ ಅವರು ದೇಶಾದ್ಯಂತ ಕಾರ್ಯಾಚರಣೆ ಮಾಡಿದ ಎನ್‌ಐಎಗೆ ಧನ್ಯವಾದ ಸಲ್ಲಿಸಿದ್ದಾರೆ. ಮಾತಾಂಧ ಶಕ್ತಿಗಳನ್ನು ದೇಶದಲ್ಲಿ ನಿಷೇಧ ಮಾಡಲಾಗಿದೆ. ನವರಾತ್ರಿ ಸಂದರ್ಭ ದೇಶಕ್ಕೆ ಶುಭಸುದ್ದಿ ಕೊಟ್ಟಿದ್ದಾರೆ. ನವರಾತ್ರಿ ಸಂದರ್ಭ ದೇಶದ್ರೋಹಿಗಳನ್ನು ಮಟ್ಟ ಹಾಕುವ ನಿರ್ಧಾರ ಮಾಡಲಾಗಿದೆ.

ಹಿಜಾಬ್‌ ಬೆನ್ನೆಲುಬಾಗಿ ನಿಂತಿದ್ದ ಸಂಘಟನೆಯನ್ನು ಬ್ಯಾನ್ ಮಾಡಲಾಗಿದೆ. ಕರಾವಳಿ ಭಾಗ ಶಾಂತಿಯುತವಾಗಿರಲು ಎನ್ಐಎಗೆ ಬೆಂಬಲಿಸುತ್ತೇವೆ. ಅಮಿತ್ ಶಾ ಸೂಕ್ತ ದಾಖಲೆಗಳನ್ನು ಪಡೆದು ಕ್ರಮ ಕೈಗೊಂಡಿದ್ದಾರೆ. ಕಾನೂನು ಬಾಹಿರ ಚಟುವಟಿಕೆಯನ್ನು ಮಾಡುವ ಸಂಘಟನೆಗೆ ದೇಶದಲ್ಲಿ ಅವಕಾಶ ಇಲ್ಲ. ವಿದೇಶಿ ಹಣ ವರ್ಗಾವಣೆ, ಹಿಂಸೆ ವಿಚಾರ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದಿದ್ದಾರೆ.

ಕಾಂಗ್ರೆಸ್ ಸರ್ಕಾರ ಇದ್ದಾಗ ಪಿಎಫ್ಐ ಗೆ ಬೆಂಬಲವಾಗಿ ನಿಂತಿತ್ತು. ದುಷ್ಕೃತ್ಯ ದೇಶದ್ರೋಹಿ ಚಟುವಟಿಕೆಗೆ ಕಾಂಗ್ರೆಸ್ ಕಾರಣ ಎಂದು ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ ಸರ್ಕಾರ 150 ಜನರ ಮೇಲೆ ಇದ್ದ ಕೇಸು ವಾಪಸ್ ತೆಗೆದಿತ್ತು. ಪಿಎಫ್ಐ ದೇಶದ ಪರ, ಸಮಾಜದ ಉದ್ಧಾರಕ್ಕೆ ಎಂದೂ ಕೆಲಸ ಮಾಡಿಲ್ಲ. ಗಲಭೆ ಸೃಷ್ಟಿಸುವುದೇ ಪಿಎಫ್ಐ ಕೆಲಸವಾಗಿತ್ತು ಎಂದರು.

ಇದನ್ನೂ ಓದಿ | PFI BANNED | ಪಿಎಫ್‌ಐ ರಾಜ್ಯ ಪ್ರಧಾನ ಕಚೇರಿಗೆ ಬಿಗಿ ಭದ್ರತೆ, ಧಾರ್ಮಿಕ ಮುಖಂಡರ ಜತೆ ಚರ್ಚೆ, ರಾಜ್ಯಾದ್ಯಂತ ಕಟ್ಟೆಚ್ಚರ

PFI BANNED

ಮುಸ್ಲಿಂ ರಾಷ್ಟ್ರ ಮಾಡುವ ಸಂಕಲ್ಪ; ಸಂಸದ ಸಂಗಣ್ಣ ಕರಡಿ

ಕೇಂದ್ರ ಸರ್ಕಾರದಿಂದ ಪಿಎಫ್ಐ ಸಂಘಟನೆ ನಿಷೇಧ ಮಾಡಿರುವ ನಿರ್ಧಾರವನ್ನು ಸ್ವಾಗತ ಮಾಡುತ್ತೇನೆ ಎಂದು ಕೊಪ್ಪಳದಲ್ಲಿ ಸಂಸದ ಸಂಗಣ್ಣ ಕರಡಿ ಹೇಳಿಕೆ ನೀಡಿದ್ದಾರೆ. ರಾಷ್ಟ್ರದಲ್ಲಿ ದುಷ್ಕೃತ್ಯ ಮಾಡುವ ಸಂಸ್ಥೆ ಇದಾಗಿದ್ದು, ಬಿಹಾರದಲ್ಲಿ ಒಂದು ತರಬೇತಿ ಸಂಸ್ಥೆ ನಡೆಸುತ್ತಿದ್ದರು. ಈ ಸಂಘಟನೆಯಲ್ಲಿ 15 ಸಾವಿರ ಯವಕರು ತೊಡಗಿದ್ದಾರೆ. 2047ಕ್ಕೆ ಭಾರತವನ್ನು ಮುಸ್ಲಿಂ ರಾಷ್ಟ್ರ ಮಾಡುವ ಸಂಕಲ್ಪ ಮಾಡಿದ್ದರು. ಈ ದೇಶದ ನೀರು, ಅನ್ನ ಸೇವಿಸಿ ಈ ದೇಶದಲ್ಲಿ ಅಶಾಂತಿ ನಿರ್ಮಾಣ ಮಾಡುತ್ತಿದ್ದರು. ಇದರಿಂದ ಕೇಂದ್ರ ಸರ್ಕಾರ ಒಳ್ಳೆಯ ನಿರ್ಧಾರ ಮಾಡಿದೆ.

ಚುನಾವಣೆಯಲ್ಲಿ ಗೆಲುವಿನ ಹಿನ್ನೆಲೆಯಲ್ಲಿ ಪಿಎಫ್ಐ ನಿಷೇಧ ಮಾಡಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ. ಚುನಾವಣೆ ದೃಷ್ಟಿ ಇಟ್ಟುಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ? ಈ ದೇಶ ಉಳಿಯಬೇಕಾಗಿದೆ. ಒಮ್ಮೆ ಬಿಜೆಪಿ ಗೆಲ್ಲಬಹುದು, ಒಮ್ಮೆ ಕಾಂಗ್ರೆಸ್ ಗೆಲ್ಲಬಹುದು. ಈ ರೀತಿ ಆರೋಪ ಮಾಡಿ ಆ ಜನಾಂಗದ ಮತಗಳನ್ನು ಗಳಿಸುವುದು ಕಾಂಗ್ರೆಸ್‌ ಪಿತೂರಿಯಾಗಿದೆ. ಈ ಹಿಂದೆ ಪಿಎಫ್ಐ ಸಂಘಟನೆ ಮುಖಂಡರ ಮೇಲಿನ ಕೇಸ್‌ಗಳನ್ನು ಕಾಂಗ್ರೆಸ್ ಹಿಂದಕ್ಕೆ ಪಡೆಯಿತು. ಪರೋಕ್ಷವಾಗಿ ಸಿದ್ದರಾಮಯ್ಯ ಬೆಂಬಲ ನೀಡಿದ್ದರು. ರಾಷ್ಟ್ರದ್ರೋಹಿ ಕೆಲಸ ಮಾಡುವ ಸಂಘಟನೆಗಳನ್ನು ನಿಷೇಧ ಮಾಡಬೇಕು. ಪಕ್ಷ ಯಾವುದೇ ಬರಬಹುದು, ನಮ್ಮ ದೇಶ, ಜನರನ್ನು ಉಳಿಸಿಕೊಳ್ಳಬೇಕು. ತರಬೇತಿ ನೀಡಿ ಹಿಂದುಗಳ ಮೇಲೆ ಅಟ್ಯಾಕ್ ಮಾಡಿದರೆ ಹೇಗೆ? ನಮಗೇನು ಸ್ವಾಭಿಮಾನ ಇಲ್ವಾ? ನಾವೂ ಬದುಕಬೇಕು ಅಲ್ವಾ? ಎಂದು ಸಂಸದ ಸಂಗಣ್ಣ ಕರಡಿ ಪ್ರಶ್ನಿಸಿದರು.

PFI BANNED

ಭಯೋತ್ಪಾದನೆಗೆ ಪ್ರೋತ್ಸಾಹ ನೀಡುವ ಪಿಎಫ್‌ಐ

ಪಿಎಫ್‌ಐ ನಿಷೇಧ ವಿಚಾರವನ್ನು ಬಸನಗೌಡ ಪಾಟೀಲ್ ಯತ್ನಾಳ್‌ ಸ್ವಾಗತಿಸಿದ್ದು, ದೇಶ ವಿರೋಧಿ ಚಟುವಟಿಕೆ, ಭಯೋತ್ಪಾದನೆಗೆ ಪ್ರೋತ್ಸಾಹ ನೀಡುವ ಪಿಎಫ್‌ಐ ಬ್ಯಾನ್ ಮಾಡಲು ಆಗ್ರಹ ಇತ್ತು. ನಮ್ಮ ಜನ ನೆಮ್ಮದಿಯಿಂದ ಬದುಕಲು ಐತಿಹಾಸಿಕ ನಿರ್ಣಯ ತೆಗೆದುಕೊಂಡಿದ್ದಾರೆ ಎಂದು ಯತ್ನಾಳ್‌ ಹೇಳಿದರು.

ನಮಗೆ ದೇಶ ಮೊದಲು- ಶಾಸಕ ಪರಣ್ಣ ಮುನವಳ್ಳಿ

ಕೇಂದ್ರ ಗೃಹ ಸಚಿವರು ಹಾಗೂ ಗೃಹ ಸಚಿವಾಲಯ ಒಳ್ಳೆಯ ನಿರ್ಧಾರ ಕೈಗೊಂಡಿದೆ. ದೇಶದ್ರೋಹಿ ಕೆಲಸ ಮಾಡಿದ ಸಂಘಟನೆ ಬ್ಯಾನ್ ಆಗಿರುವುದು ಖುಷಿಯ ವಿಚಾರ. ದೇಶಪ್ರೇಮ ಇಲ್ಲದ, ದೇಶದಲ್ಲಿ ಸಾಮರಸ್ಯ ಹಾಳುಮಾಡುವ ಸಂಘಟನೆಗಳ ಯಾವುದೇ ಆಗಿರಲಿ ಬ್ಯಾನ್ ಮಾಡಬೇಕು. ಎಲ್ಲ ಮಾಹಿತಿ ಪಡೆದೇ ಸರ್ಕಾರ ಈ ಕ್ರಮ ಕೈಗೊಂಡಿದೆ. ಇದು ತುಂಬಾ ಒಳ್ಳೆಯ ನಿರ್ಧಾರ. ನಮಗೆ ದೇಶ ಮೊದಲು, ಅದಕ್ಕಾಗಿ ದೇಶದ್ರೋಹಿಗಳಿಗೆ ತಕ್ಕ ಶಿಕ್ಷೆ ಆಗಲೇಬೇಕು. ಇದು ಮುಸ್ಲಿಂ ಸಮುದಾಯವನ್ನು ಟಾರ್ಗೆಟ್ ಮಾಡಿ ಬ್ಯಾನ್ ಮಾಡಿರುವುದಲ್ಲ . ದೇಶದ್ರೋಹಿಗಳನ್ನು ಮಟ್ಟ ಹಾಕಿರುವುದು. ಸ್ವತಃ ಮುಸ್ಲಿಂ ಸಮುದಾಯವೇ ಇದನ್ನು ಸ್ವಾಗತಿಸಿದೆ ಎಂದು ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಪ್ರತಿಕ್ರಿಯಿಸಿದರು.

ಇದನ್ನೂ ಓದಿ | PFI Banned | ಪಿಎಫ್‌ಐ ನಿಷೇಧದಿಂದ ಬಿಜೆಪಿಗಿಂತಲೂ ಕಾಂಗ್ರೆಸ್‌ಗೇ ಖುಷಿ: ಕಾರಣವೇನು? ಪರಿಣಾಮವೆಷ್ಟು?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮಳೆ

Karnataka Weather : ಮೇ 13ರ ತನಕ ಈ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಭಯಂಕರ ಮಳೆ; ಬಿರುಗಾಳಿಯು ಸಾಥ್‌

Karnataka Weather : ರಾಜ್ಯಾದ್ಯಂತ ಇನ್ನೂ ಮೂರು ದಿನಗಳು ಗುಡುಗು ಸಹಿತ ಮಳೆಯು (Rain News) ಅಬ್ಬರಿಸಲಿದೆ. ಗಾಳಿ ವೇಗವು 50 ಕಿ.ಮೀ ವ್ಯಾಪ್ತಿಯಲ್ಲಿ ಬೀಸಲಿದ್ದು, ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ.

VISTARANEWS.COM


on

By

Karnataka Weather Forecast
Koo

ಬೆಂಗಳೂರು: ದಕ್ಷಿಣ ಒಳನಾಡು, ಮಲೆನಾಡು ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಚದುರಿದಂತೆ ಹಗುರದಿಂದ ಮಧ್ಯಮ ಮಳೆಯಾಗುವ (Rain News) ಸಾಧ್ಯತೆಯಿದೆ. ಕರಾವಳಿಯಲ್ಲಿ ವ್ಯಾಪಕವಾಗಿ ಮಧ್ಯಮ ಮಳೆಯಾಗುವ (Karnataka Rain) ಸಾಧ್ಯತೆಯಿದೆ. ಇನ್ನೂ ಚಂಡಮಾರುತದ ಪ್ರಭಾವದಿಂದಾಗಿ ರಾಜ್ಯದ ಪ್ರತ್ಯೇಕ ಸ್ಥಳಗಳಲ್ಲಿ ಮೇ 14ರವರೆಗೆ ಗುಡುಗು ಸಹಿತ ಮಿಂಚು ಮತ್ತು ಗಾಳಿಯೊಂದಿಗೆ (40-50 ಕಿ.ಮೀ) ಭಾರಿ ಮಳೆಯಾಗುವ (Heavy Rain) ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆಯನ್ನು (Karnataka Weather Forecast) ನೀಡಿದೆ.

ಕರಾವಳಿಯಲ್ಲಿ ಮೇ 13ರವರೆಗೆ ಹಾಗೂ ಉತ್ತರ ಒಳನಾಡಿನಲ್ಲಿ ಮೇ 12ರಿಂದ 13ರವರೆಗೆ, ದಕ್ಷಿಣ ಒಳನಾಡಿನಲ್ಲಿ ಮೇ 13ರವರೆಗೆ ಭಾರಿ ಮಳೆಯಾಗುವ ಸಾಧ್ಯತೆಯಿದೆ.

ದಕ್ಷಿಣ ಒಳನಾಡಿನ ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು ನಗರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಉಳಿದ ಭಾಗಗಳಲ್ಲಿ ಚದುರಿದಂತೆ ವ್ಯಾಪಕವಾಗಿ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: Sleeping Tips: ನಿಮಗೆ ರಾತ್ರಿ ನಿದ್ದೆ ಬರುತ್ತಿಲ್ಲವೆ? ಮಲಗುವ ಮುನ್ನ ಈ ಪೇಯಗಳನ್ನು ಕುಡಿಯಿರಿ!

ಬೆಂಗಳೂರು ವ್ಯಾಪ್ತಿಯಲ್ಲಿ ಅಲ್ಲಿಲ್ಲ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮೇಣ 32 ಮತ್ತು 21 ಡಿ.ಸೆ ಇರಲಿದೆ. ಉತ್ತರ ಒಳನಾಡಿನ ಬಳ್ಳಾರಿ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ಉಳಿದ ಭಾಗಗಳಲ್ಲಿ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ.

ಮಲೆನಾಡಿನ ಶಿವಮೊಗ್ಗ ಜಿಲ್ಲೆಯಾದ್ಯಂತ ಗುಡುಗು ಸಹಿತ ಭಾರೀ ಮಳೆಯಾಗಲಿದೆ. ಉಳಿದಂತೆ ಕೊಡಗು, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಮಳೆ

Karnataka Rain: ಶನಿವಾರ ಸಂಜೆ ಅಬ್ಬರಿಸಿದ ಗಾಳಿ ಮಳೆಗೆ ತೊಯ್ದು ತೊಪ್ಪೆಯಾದ ಮಂದಿ; ರಸ್ತೆಗೆ ಬಿದ್ದ ಮರಗಳು

Karnataka Rain: ಬಿಸಿಲಿನಿಂದ ಕಂಗೆಟ್ಟಿದ್ದ ಜನತೆಗೆ ಶನಿವಾರ ಸಂಜೆ ಗಾಳಿಯೊಂದಿಗೆ ಸುರಿದ ಭಾರಿ ಮಳೆಗೆ ಜನರು ತೊಯ್ದು ತೊಪ್ಪೆಯಾದರು. ವಿಜಯಪುರ, ಹುಬ್ಬಳ್ಳಿ, ರಾಯಚೂರು ಸೇರಿ ಚಿಕ್ಕಮಗಳೂರಲ್ಲೂ ಮಳೆಯು (Heavy Rain alert) ಅಬ್ಬರಿಸಿತ್ತು. ರಸ್ತೆ ಮೇಲೆ ನೀರು ಹರಿದುಮ ಕೆಲವೆಡೆ ಕೆರೆಯಂತಾಗಿತ್ತು. ಇನ್ನೂ ನಾಲ್ಕೈದು ದಿನಗಳು ಗುಡುಗು ಸಹಿತ ಮಳೆಯಾಗುವ (Rain News) ಎಚ್ಚರಿಕೆಯನ್ನು ಹವಾಮಾನ ಇಲಾಖೆ (Karnataka Weather Forecast) ನೀಡಿದೆ.

VISTARANEWS.COM


on

By

Karnataka rain
Koo

ವಿಜಯಪುರ/ಹುಬ್ಬಳ್ಳಿ: ಶನಿವಾರ ಹಲವೆಡೆ ದಿಢೀರ್‌ ಸುರಿದ ಮಳೆಗೆ (Rain News) ಜನರು ತತ್ತರಿಸಿ ಹೋಗಿದ್ದರು. ಉತ್ತರ ಒಳನಾಡಿನ ವಿಜಯಪುರ, ರಾಯಚೂರು, ಹುಬ್ಬಳ್ಳಿ, ಧಾರವಾಡ ಹಾಗೂ ಮಲೆನಾಡಿನ ಚಿಕ್ಕಮಗಳೂರಿನಲ್ಲೂ ವರುಣಾರ್ಭಟ (Karnataka Rain) ಜೋರಾಗಿತ್ತು. ಮೇ 15ರವರೆಗೆ ಬಿರುಗಾಳಿಯೊಂದಿಗೆ ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗುವ (Heavy Rain) ಎಚ್ಚರಿಕೆಯನ್ನು ಹವಾಮಾನ ಇಲಾಖೆ (Karnataka Weather Forecast) ನೀಡಿದೆ.

ವಿಜಯಪುರ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಸುರಿದ ಮಳೆಯು ಬಿಸಿಲಿನಿಂದ ಕಂಗೆಟ್ಟಿದ್ದ ಜನತೆಗೆ ತಂಪು ತಂದಿತ್ತು. ಬಿರು ಬಿಸಿಲಿಗೆ ಕಂಗೆಟ್ಟು ಹೋಗಿದ್ದ ಜನರು, ಶನಿವಾರ ಸುರಿದ ಅರ್ಧ ಗಂಟೆಗೂ ಆಧಿಕ ಕಾಲ ಮಳೆಗೆ ಸಂತಸಗೊಂಡರು. ಇನ್ನೂ ರೈತರು ಮುಂಗಾರು ಹಂಗಾಮಿಗೆ ಉತ್ತಮ ಮಳೆಯ ನಿರೀಕ್ಷೆಯಲ್ಲಿದ್ದಾರೆ. ಈವರೆಗೂ ಮಳೆಯಿಂದ ಯಾವುದೇ ಹಾನಿಯಾದ ವರದಿಯಾಗಿಲ್ಲ.

Karnataka Rain

ಹುಬ್ಬಳ್ಳಿ, ಬೆಳಗಾವಿಯಲ್ಲಿ ಗುಡುಗು -ಸಿಡಿಲಿನ ಮಳೆ ಅಬ್ಬರ

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಧಾರಾಕಾರ ಮಳೆಯಾಗಿದೆ. ಕೆಲವೆಡೆ ಗುಡುಗು, ಸಿಡಿಲು ಸಹಿತ ಆಲಿಕಲ್ಲು ಮಳೆಯಾಗಿದೆ. ಎಡೆಬಿಡದೆ ಆರ್ಭಟಿಸುತ್ತಿರುವ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿತ್ತು. ರಸ್ತೆಗಳಲ್ಲಿ ನೀರು ತುಂಬಿ ಹರಿದು ಸಂಚಾರಕ್ಕೆ ಅಡ್ಡಿಯಾಗಿತ್ತು. ಇತ್ತ ಬೆಳಗಾವಿಯಲ್ಲಿ ಗುಡುಗು ಸಿಡಿಲು ಮಿಶ್ರಿತ ಧಾರಾಕಾರ ಮಳೆಯಾಗುತ್ತಿದೆ. ಬಿಸಿಲಿನ ಬೇಗೆಗೆ ಬೇಸೆತ್ತು ಹೋಗಿದ್ದ ಕುಂದಾನಗರಿ ಜನರಿಗೆ ವರುಣ ತಂಪೆರೆದಿದ್ದಾನೆ. ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿದೆ.

ಇದನ್ನೂ ಓದಿ: Heavy Rain: ಬೆಂಗಳೂರಿನಲ್ಲಿ ಮಳೆಯ ಅಬ್ಬರ; ಹಲವೆಡೆ ರಸ್ತೆಯಲ್ಲೇ ಹರಿದ ನೀರು, ಸಂಚಾರ ಅಸ್ತವ್ಯಸ್ತ

ಜೋರು‌ ಮಳೆಯಲ್ಲೇ ಶನಿವಾರದ ಸಂತೆ ಸಂಭ್ರಮ

ರಾಯಚೂರು ಜಿಲ್ಲೆ ದೇವದುರ್ಗ ಪಟ್ಟಣದಲ್ಲಿ ವರುಣಾರ್ಭಟದ ನಡುವೆಯೇ ಶನಿವಾರದ ಸಂತೆ ಜೋರಾಗಿತ್ತು. ಧಾರಾಕಾರ ಮಳೆ‌‌ಯಲ್ಲೇ ವ್ಯಾಪಾರಸ್ಥರು ಸಂತೆ ಮಾಡಿದರು. ಮಳೆಗೆ ಡೋಂಟ್ ಕೇರ್ ಎಂದ ಸಾವಿರಾರು ಜನರು ಖರೀದಿಯಲ್ಲಿ ಬ್ಯುಸಿಯಾಗಿದ್ದರು.

ಧಾರವಾಡದಲ್ಲಿ ಮಳೆ ಗಾಳಿಗೆ ಜಖಂ ಆದ ಬಸ್‌ಗಳು

ಧಾರವಾಡದಲ್ಲಿ ಗಾಳಿ ಸಹಿತ ಧಾರಾಕಾರವಾಗಿ ಮಳೆಗೆ ನಗರದ ಬಹುತೇಕ ಕಡೆ ಮರಗಳು ನೆಲಕ್ಕುರುಳಿದ್ದವು. ಮಳೆ ಗಾಳಿಗೆ ಬಸ್‌ಗಳು ಜಖಂ ಆಗಿದ್ದವು. ನಿರ್ಮಾಣ ಹಂತದಲ್ಲಿದ್ದ ಈಜುಕೊಳದ ಕಟ್ಟಿಗೆ ಸೆಂಟ್ರಿಂಗ್ ಬಿದ್ದು ಖಾಸಗಿ ಬಸ್ ಜಖಂಗೊಂಡಿತ್ತು. ನಗರದ ಡಿಸಿ ಕಂಪೌಂಡ್‌ಗೆ ಹೊಂದಿಕೊಂಡಿರುವ ನಿರ್ಮಾಣ ಹಂತದ ಕಟ್ಟಡದಲ್ಲಿ ಘಟನೆ ನಡೆದಿತ್ತು.

Karnataka Rain

ಚಿಕ್ಕಮಗಳೂರಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆ

ಕಾಫಿನಾಡು ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ. ಗುಡುಗು-ಸಿಡಿಲಿನೊಂದಿಗೆ ಎಡಬಿಡದೆ ಮಳೆ ಸುರಿಯುತ್ತಿದೆ. ರಸ್ತೆಯಲ್ಲಿ ನೀರು ನದಿಯಂತೆ ಹರಿಯುತ್ತಿದೆ. ಚಿಕ್ಕಮಗಳೂರು ನಗರ, ಜಯಪುರ, ಮೂಡಿಗೆರೆ, ಎನ್.ಆರ್.ಪುರ, ಕೊಪ್ಪ ಭಾಗದಲ್ಲಿ ಮಳೆ ಜತೆ ಭಾರಿ ಗಾಳಿ ಬೀಸುತ್ತಿದೆ. ಇನ್ನೂ ಕಳೆದೊಂದು ಗಂಟೆಯಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ವಿದ್ಯುತ್ ತಂತಿ ಮೇಲೆ ಮರ ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಹೀಗಾಗಿ ಭಾರೀ ಗಾಳಿ-ಮಳೆಯಿಂದ ವಿದ್ಯುತ್ ಸಂಪರ್ಕವಿಲ್ಲದೆ ಕುಗ್ರಾಮಗಳು ಕತ್ತಲಲ್ಲಿವೆ. ಮಳೆ ಕಂಡು ರೈತರು, ಅಡಿಕೆ-ಕಾಫಿ-ಮೆಣಸು ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ.

ಮಂಗಳೂರಿನ ಕುಕ್ಕೆ ಸುಬ್ರಹ್ಮಣ್ಯದಲ್ಲೂ ಗಾಳಿ,ಗುಡುಗು ಸಹಿತ ಮಳೆಯಾಗುತ್ತಿದೆ. ಸುಮಾರು ಅರ್ಧಗಂಟೆಗಳ ಕಾಲ ಮಳೆಯು ಸುರಿದಿದೆ. ಬಿಸಿಲ ಬೇಗೆಯಿಂದ ತತ್ತರಿಸಿದ ಸುಬ್ರಹ್ಮಣ್ಯದಲ್ಲಿ ಹಠಾತ್‌ ಮಳೆಯು ಕ್ಷೇತ್ರಕ್ಕೆ ಆಗಮಿಸಿದ ಭಕ್ತರಲ್ಲಿ ಸಂತಸ ಮೂಡಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಸಿನಿಮಾ

Pooja Hegde: ಕಾರ್ಕಳದ ಕಣಜಾರು ದೇಗುಲಕ್ಕೆ ಭೇಟಿ ನೀಡಿದ ನಟಿ ಪೂಜಾ ಹೆಗ್ಡೆ

Pooja Hegde: ಬಹುಭಾಷಾ ನಟಿ, ಕರಾವಳಿ ಮೂಲದ ಪೂಜಾ ಹೆಗ್ಡೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕಣಜಾರು ಬ್ರಹ್ಮಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಬ್ರಹ್ಮಕಲಶೋತ್ಸವ ಸಭಾ ಕಾರ್ಯಕ್ರಮದಲ್ಲಿಯೂ ಭಾಗಿಯಾಗಿದ್ದ ಪೂಜಾ ಹೆಗ್ಡೆ ಅವರನ್ನು ದೇವಸ್ಥಾನದ ಸಮಿತಿಯ ಸದಸ್ಯರು ಗೌರವಿಸಿದರು. ಸನ್ಮಾನದ ವೇಳೆ ಅಭಿಮಾನಿಯೊರ್ವ ರಚಿಸಿದ ತಮ್ಮ ಭಾವಚಿತ್ರವನ್ನು ನಟಿ ಸ್ವೀಕರಿಸಿದರು.

VISTARANEWS.COM


on

Pooja Hegde
Koo

ಉಡುಪಿ: ಬಹುಭಾಷಾ ನಟಿ, ಕರಾವಳಿ ಮೂಲದ ಪೂಜಾ ಹೆಗ್ಡೆ (Pooja Hegde) ಇತ್ತೀಚೆಗೆ ಕಾರ್ಕಳಕ್ಕೆ ಭೇಟಿ ನೀಡಿದರು. ಬ್ರಹ್ಮಕಲಶೋತ್ಸವ ಹಿನ್ನೆಲೆಯಲ್ಲಿ ಅವರು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕಣಜಾರು ಬ್ರಹ್ಮಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ಬ್ರಹ್ಮಕಲಶೋತ್ಸವ ಸಭಾ ಕಾರ್ಯಕ್ರಮದಲ್ಲಿಯೂ ಭಾಗಿಯಾಗಿದ್ದ ಪೂಜಾ ಹೆಗ್ಡೆ ಅವರನ್ನು ದೇವಸ್ಥಾನದ ಸಮಿತಿಯ ಸದಸ್ಯರು ಗೌರವಿಸಿದರು. ಸನ್ಮಾನದ ವೇಳೆ ಅಭಿಮಾನಿಯೊರ್ವ ರಚಿಸಿದ ತಮ್ಮ ಭಾವಚಿತ್ರವನ್ನು ನಟಿ ಸ್ವೀಕರಿಸಿದರು. ಪ್ರತಿವರ್ಷ ದೈವಕೋಲ, ದೇವಸ್ಥಾನದ ಜಾತ್ರೆ, ಉತ್ಸವದಲ್ಲಿ ಪೂಜಾ ಹೆಗ್ಡೆ ಭಾಗಿಯಾಗುತ್ತಾರೆ.

ಈ ವೇಳೆ ಅವರು ಕಣಜೂರಿನ ತನ್ನ ಬಾಲ್ಯದ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ. ಭೂತಾರಾಧನೆ, ದೈವರಾಧನೆ ಕುರಿತೂ ಮಾತನಾಡಿದ್ದಾರೆ. ಮುಂಬೈಯಲ್ಲಿ ಹುಟ್ಟಿ ಬೆಳೆದ ಪೂಜಾ ಹೆಗ್ಡೆ ಪ್ರತಿವರ್ಷದ ರಜೆಯಲ್ಲಿ ತಮ್ಮ ಅಜ್ಜನ ಮನೆಯಾದ ಕಣಜೂರಿಗೆ ಭೇಟಿ ನೀಡುತ್ತಿದ್ದರಂತೆ. ʼʼಬೇಸಿಗೆ ರಜೆಯನ್ನು ಇಲ್ಲಿ ಬಹಳ ಖುಷಿಯಿಂದ ಕಳೆಯುತ್ತಿದ್ದೆವು. ನಮಗೆ ಊರು ಬಿಟ್ಟು ಹೋಗಲು ಮನಸ್ಸಾಗುತ್ತಲೇ ಇರಲಿಲ್ಲ” ಎಂದು ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ದೇವರ ಅನುಗ್ರಹ ಇಲ್ಲದೆ ಏನೂ ಸಾಧನೆ ಮಾಡಲಾಗದು. ಸಿನಿಮಾ ಕುಟುಂಬವಲ್ಲದ ಕಡೆಯಿಂದ ನಾನು ಈ ಕ್ಷೇತ್ರಕ್ಕೆ ಬಂದಿದ್ದೇನೆ. ನಾನು ಸಾಧನೆ ಮಾಡಲು ದೇವರ ಅನುಗ್ರಹವೇ ಕಾರಣʼʼ ಎಂದು ಹೇಳಿದ್ದಾರೆ.

2012ರಲ್ಲಿ ತಮಿಳಿನ ʼಮುಗಮೂಡಿʼ ಸಿನಿಮಾದ ಮೂಲ ಪೂಜಾ ಹೆಗ್ಡೆ ಸಿನಿ ರಂಗಕ್ಕೆ ಕಾಲಿಟ್ಟರು. ಜೀವ ನಾಯಕನಾಗಿ ನಟಿಸಿದ್ದ ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಹಿಟ್‌ ಆಗದಿದ್ದರೂ ಪೂಜಾ ಗಮನ ಸೆಳೆದಿದ್ದರು. 2014ರಲ್ಲಿ ʼಒಕ ಲೈಲ ಕೋಸಮ್‌ʼ ಮತ್ತು ʼಮುಕುಂದʼ ಚಿತ್ರಗಳ ಮೂಲಕ ಟಾಲಿವುಡ್‌ ಪ್ರವೇಶಿಸಿದರು. ಬಳಿಕ ನೇರ ಬಾಲಿವುಡ್‌ ತೆರಳಿದರು. 2016ರಲ್ಲಿ ರಿಲೀಸ್‌ ಆದ ʼಮೊಹೆಂಜದಾರೊ’ ಸಿನಿಮಾದಲ್ಲಿ ಹೃತಿಕ್‌ ರೋಷನ್‌ಗೆ ನಾಯಕಿಯಾಗಿ ಗಮನ ಸೆಳೆದರು.

ಹೀಗೆ ಬಹುಭಾಷಾ ನಟಿಯಾಗಿ ಗುರುತಿಸಿಕೊಂಡ ಪೂಜಾ ಹೆಗ್ಡೆ ಟಾಪ್‌ ನಾಯಕಿಯರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ಟಾಲಿವುಡ್‌, ಬಾಲಿವುಡ್‌ನ ಟಾಪ್‌ ನಾಯಕರ ಜತೆಗೆ ತೆರೆ ಹಂಚಿಕೊಂಡಿದ್ದಾರೆ. ಸದ್ಯ ಶಾಹಿದ್ ಕಪೂರ್ ಜತೆಗೆ ‘ದೇವ’ ಹಿಂದಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ರೋಶನ್‌ ಆಂಡ್ರ್ಯೂಸ್ ನಿರ್ದೇಶನದ ಈ ಸಿನಿಮಾ ಆ್ಯಕ್ಷನ್ ಥ್ರಿಲ್ಲರ್ ಕಥಾ ಹಂದರ ಹೊಂದಿದೆ ಎನ್ನಲಾಗಿದೆ. ಜತೆಗೆ ಅಹನ್‌ ಶೆಟ್ಟಿ ಅಭಿನಯದ ಮುಂದಿನ ಸಿನಿಮಾದಲ್ಲಿಯೂ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: Pooja Hegde: 45 ಕೋಟಿ ರೂ. ಬೆಲೆಯ ಹೊಸ ಮನೆ ಖರೀದಿಸಿದ ಪೂಜಾ ಹೆಗ್ಡೆ

ಕೆಲವು ದಿನಗಳ ಹಿಂದೆಯಷ್ಟೇ ಪೂಜಾ ಹೆಗ್ಡೆ ಖ್ಯಾತ ಕ್ರಿಕೆಟಿಗನ ಜತೆ ಹೊಸ ಬಾಳಿಗೆ ಕಾಲಿಡುತ್ತಿದ್ದಾರೆ ಎಂದು ವರದಿಯಾಗಿತ್ತು. ಮದುವೆಗೆ ಎಲ್ಲ ಸಿದ್ಧತೆ ನಡೆಯುತ್ತಿದೆ ಎಂತಲೂ ಸುದ್ದಿಯಾಗಿತ್ತು. ಆ ಖ್ಯಾತ ಕ್ರಿಕೆಟಿಗ ಯಾರು ಎಂಬುದರ ಬಗ್ಗೆ ಎಲ್ಲೂ ರಿವೀಲ್ ಆಗಿರಲಿಲ್ಲ. ಈ ಬಗ್ಗೆ ನಟಿ ಯಾವುದೇ ಸ್ಪಷ್ಟನೆ ನೀಡಿಲ್ಲ. ಆದರೆ ತೆಲುಗು ಮಾಧ್ಯಮಗಳು ಈ ಬಗ್ಗೆ ಸುದ್ದಿ ಮಾಡಿದ್ದವು. ಸದ್ಯ ಈ ವಿಚಾರ ತಣ್ಣಗಾಗಿದೆ.

Continue Reading

ಮಳೆ

Karnataka Weather : ವಾರಾಂತ್ಯದಲ್ಲಿ ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ ಅಬ್ಬರ

Karnataka Weather Forecast : ವಾರಾಂತ್ಯದಲ್ಲಿ ಬೆಂಗಳೂರು ಸೇರಿದಂತೆ ಗುಡುಗು ಸಹಿತ ಭಾರಿ ಮಳೆಯಾಗುವ (Heavy Rain alert) ಸಾಧ್ಯತೆ ಇದ್ದು, ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ಬಿರುಗಾಳಿ ವೇಗವು 50 ಕಿ.ಮೀ ವ್ಯಾಪ್ತಿಯಲ್ಲಿ ಬೀಸಲಿದ್ದು, ಮುಂಜಾಗ್ರತೆ ವಹಿಸುವಂತೆ ಸೂಚನೆ ನೀಡಲಾಗಿದೆ.

VISTARANEWS.COM


on

By

karnataka Weather Forecast
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ರಾಜ್ಯದ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು ಮಿಂಚು ಸಹಿತ 40-50 ಕಿ.ಮೀ ವೇಗದಲ್ಲಿ ಬೀಸುವ ಗಾಳಿಯೊಂದಿಗೆ ಭಾರಿ ಮಳೆಯಾಗುವ (Rain News) ಸಾಧ್ಯತೆಯಿದೆ. ಮಲೆನಾಡು ಮತ್ತು ದಕ್ಷಿಣ ಒಳನಾಡಿನಲ್ಲಿ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಹಗುರದಿಂದ ಮಧ್ಯಮ ಮಳೆಯಾಗುವ (Karnataka weather Forecast) ಸಾಧ್ಯತೆಯಿದೆ.

ದಕ್ಷಿಣ ಒಳನಾಡಿನ ಚಾಮರಾಜನಗರ ಜಿಲ್ಲೆಯಾದ್ಯಂತ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಜತೆಗೆ ಮೈಸೂರು, ಮಂಡ್ಯ, ರಾಮನಗರ, ತುಮಕೂರು, ಚಿತ್ರದುರ್ಗ, ಕೋಲಾರದಲ್ಲೂ ಮಳೆಯು ಅಬ್ಬರಿಸಲಿದೆ.

ಉತ್ತರ ಒಳನಾಡಿನ ಬಳ್ಳಾರಿ, ವಿಜಯನಗರ, ರಾಯಚೂರು, ಕೊಪ್ಪಳ, ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ಬೀದರ್, ಗದಗ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಚದುರಿದಂತೆ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: Self Harming : ಕೊಡಗಿನಲ್ಲಿ ಬಾಲಕಿಯ ರುಂಡ ಕತ್ತರಿಸಿದ್ದ ಪ್ರೇಮಿ ನೇಣಿಗೆ ಶರಣು

ಮಲೆನಾಡಿನ ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾದರೆ, ಶಿವಮೊಗ್ಗ ಜಿಲ್ಲೆಯಾದ್ಯಂತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಧಾರಣ ಮಳೆಯಾದರೆ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ ಇದೆ.

ಬೆಂಗಳೂರಲ್ಲಿ ಸಾಧಾರಣ ಮಳೆ

ಬೆಂಗಳೂರು ವ್ಯಾಪ್ತಿಯಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಮುಂಜಾನೆ ಮೋಡ ಕವಿದ ವಾತಾವರಣದೊಂದಿಗೆ ತಂಪು ಗಾಳಿ ಬೀಸಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು 32 ಮತ್ತು 21 ಡಿ.ಸೆ ಇರಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Queen's Premier League start
ಕ್ರಿಕೆಟ್6 mins ago

Queen’s Premier League: ಕಿರುತೆರೆ ,ಹಿರಿತೆರೆ ಹೆಣ್ಮಕ್ಕಳಿಗಾಗಿ ಶುರುವಾಯ್ತು ಕ್ವೀನ್ಸ್‌ ಪ್ರೀಮಿಯರ್ ಲೀಗ್!

Prajwal Revanna Case What was plan of advocate Devaraje Gowda Why did you leave for Delhi
ಕ್ರೈಂ7 mins ago

Prajwal Revanna Case: ಪ್ರಜ್ವಲ್‌ ಪೆನ್‌ಡ್ರೈವ್‌ ಕೇಸ್‌; ವಕೀಲ ದೇವರಾಜೇಗೌಡ ಪ್ಲ್ಯಾನ್‌ ಏನಿತ್ತು? ದೆಹಲಿಗೆ ಹೊರಟಿದ್ದು ಏಕೆ?

Mental Health Awareness Month
ಆರೋಗ್ಯ7 mins ago

Mental Health Awareness Month: ಮಾನಸಿಕ ಆರೋಗ್ಯ ಜಾಗೃತಿ ಮಾಸ; ಮತ್ತೆ ಮಗುವಿನಂತಾಗಲು ಪ್ರಯತ್ನಿಸಿ!

Narendra Modi
ದೇಶ9 mins ago

Narendra Modi: ತಾಯಂದಿರ ದಿನದಂದು ಮೋದಿಗೆ ವಿಶೇಷ ಉಡುಗೊರೆ ಕೊಟ್ಟ ಫ್ಯಾನ್ಸ್; ಏನದು ನೋಡಿ!

Murder case
ಕ್ರೈಂ10 mins ago

Murder Case : ಪತಿಯ ಡೆಡ್ಲಿ ಅಟ್ಯಾಕ್‌ಗೆ ಪತ್ನಿ ಸಾವು; ರೈಲಿಗೆ ತಲೆ ಕೊಟ್ಟು ಯುವಕ ಆತ್ಮಹತ್ಯೆ

Kannada New Movie Moorane Krishnappa trailer Out
ಸ್ಯಾಂಡಲ್ ವುಡ್20 mins ago

Kannada New Movie: ಮನರಂಜನೆಯ ರಸದೌತಣ ಬಡಿಸಲು ಬಂದ ʻಮೂರನೇ ಕೃಷ್ಣಪ್ಪʼ: ಟ್ರೈಲರ್‌ ಔಟ್‌!

Vimala Raman confirms her relationship with this villan actor
ಸ್ಯಾಂಡಲ್ ವುಡ್27 mins ago

Vimala Raman: ಖಳನಟನ ಜತೆ ಪ್ರೀತಿಲಿ ಬಿದ್ದ ʻಆಪ್ತರಕ್ಷಕʼ ನಟಿ

Money Guide
ಮನಿ-ಗೈಡ್35 mins ago

Money Guide: ಎಫ್‌ಡಿ V/S ಆರ್‌ಡಿ; ಯಾವುದು ಉತ್ತಮ? ಯಾವುದರಲ್ಲಿ ಹೂಡಿಕೆ ಮಾಡಬೇಕು?

Lok Sabha Election
ದೇಶ42 mins ago

Lok Sabha Election: 10 ರಾಜ್ಯಗಳ 96 ಕ್ಷೇತ್ರಗಳಲ್ಲಿ ನಾಳೆ ಮತದಾನ; ಕಣದಲ್ಲಿರುವ ಪ್ರಮುಖರು ಯಾರು?

Neha Murder Case
ಕರ್ನಾಟಕ47 mins ago

Neha Murder Case: ನೇಹಾ ಕೊಲೆ ಪ್ರಕರಣ; ಚಾರ್ಜ್‌ಶೀಟ್ ಸಲ್ಲಿಸಲು ಸಿಐಡಿ ತಯಾರಿ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case: Beware of making a statement Parameshwara warns to HD Kumaraswamy
ಕ್ರೈಂ3 hours ago

Prajwal Revanna Case: ಪ್ರಜ್ವಲ್‌ ರೇವಣ್ಣ ಕೇಸ್‌; ನಿಮ್ಮನ್ನೂ ವಿಚಾರಣೆಗೆ ಕರೆಯಬೇಕಾಗುತ್ತದೆ: ಎಚ್‌ಡಿಕೆಗೆ ಪರಮೇಶ್ವರ್‌ ವಾರ್ನಿಂಗ್‌!

Prajwal Revanna Case Two people of pen drive allottees arrested
ಕ್ರೈಂ4 hours ago

Prajwal Revanna Case: ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೊ ಕೇಸ್‌; ಇಬ್ಬರು ಪೆನ್‌ಡ್ರೈವ್‌ ಹಂಚಿಕೆದಾರರ ಅರೆಸ್ಟ್‌

Dina Bhavishya
ಭವಿಷ್ಯ12 hours ago

Dina Bhavishya: ಹತಾಶೆಯಲ್ಲಿ ಈ ತೀರ್ಮಾನ ಮಾಡಲೇಬೇಡಿ; ಈ ರಾಶಿಯವರು ಜೀವನ ಪೂರ್ತಿ ಕೊರಗಬೇಕಾಗುತ್ತೆ!

Bengaluru News
ಬೆಂಗಳೂರು1 day ago

Bengaluru News : ಕೆಎಎಸ್‌ ಅಧಿಕಾರಿ ಪತ್ನಿ ಅನುಮಾನಾಸ್ಪದ‌ ಸಾವು; ಹೈಕೋರ್ಟ್‌ ವಕೀಲೆಗೆ ಕಾಡಿದ್ದೇನು?

Dina Bhavishya
ಭವಿಷ್ಯ2 days ago

Dina Bhavishya : ಈ ದಿನ ಅತಿರೇಕದ ಮಾತುಗಳು ಅಪಾಯ ತರಬಹುದು

Physical Abuse The public prosecutor called the client woman to the lodge
ಕ್ರೈಂ2 days ago

Physical Abuse : ಲೈಂಗಿಕ ದೌರ್ಜನ್ಯ; ಕಕ್ಷಿದಾರ ಮಹಿಳೆಯನ್ನು ಮಂಚಕ್ಕೆ ಕರೆದ ಪಬ್ಲಿಕ್ ಪ್ರಾಸಿಕ್ಯೂಟರ್!

murder case kalaburagi
ಕಲಬುರಗಿ2 days ago

Murder Case : ಕಾಂಗ್ರೆಸ್‌ಗೆ ವೋಟ್‌ ಹಾಕಿದ್ದಕ್ಕೆ ಅಮಾವಾಸ್ಯೆ ದಿನ ಕರೆದು ಕೊಂದರು

Rain Effect In karnataka
ಮಳೆ2 days ago

Rain Effect : ಬಿರುಗಾಳಿ ರಭಸಕ್ಕೆ ಮನೆಯ ಗೇಟ್ ಬಿದ್ದು ಬಾಲಕಿ ಸಾವು; ಸಿಡಿಲಿಗೆ ಎತ್ತುಗಳು ಬಲಿ

Dina Bhavishya
ಭವಿಷ್ಯ3 days ago

Dina Bhavishya: ಶುಭ ಶುಕ್ರವಾರ ಈ ರಾಶಿಯವರಿಗೆ ಖುಲಾಯಿಸಲಿದೆ ಲಕ್‌

Prajwal Revanna case Revanna bail plea to be heard on Monday Advocate Nagesh argument was as follows
ಕ್ರೈಂ3 days ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ಸೋಮವಾರಕ್ಕೆ: ಎಸ್‌ಐಟಿಗೆ ಹಿಗ್ಗಾಮುಗ್ಗಾ ತರಾಟೆ; ವಕೀಲ ನಾಗೇಶ್‌ ವಾದ ಹೀಗಿತ್ತು!

ಟ್ರೆಂಡಿಂಗ್‌