ಜೂ.6ರಂದು ಸರ್‌ ಎಂ.ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್‌ ಉದ್ಘಾಟನೆ - Vistara News

ಕರ್ನಾಟಕ

ಜೂ.6ರಂದು ಸರ್‌ ಎಂ.ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್‌ ಉದ್ಘಾಟನೆ

ಯಶವಂತಪುರ ಮತ್ತು ಕೆಎಸ್‌ಆರ್‌(ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ) ನಿಲ್ದಾಣ ಮೇಲಿನ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ₹300 ಕೋಟಿ ವೆಚ್ಚದಲ್ಲಿ 4,200 ಚದರ ಮೀಟರ್‌ ವಿಸ್ತೀರ್ಣದಲ್ಲಿ ವಿಮಾನ ನಿಲ್ದಾಣ ರೀತಿಯಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಈ ಟರ್ಮಿನಲ್‌ ಅನ್ನು ನಿರ್ಮಿಸಲಾಗಿದೆ

VISTARANEWS.COM


on

SIR M Visvesvaraya terminal
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ನಗರದ ಬೈಯ್ಯಪ್ಪನಹಳ್ಳಿ ಬಳಿಯ ಸರ್‌ ಎಂ.ವಿಶ್ವೇಶ್ವರಯ್ಯ ಟರ್ಮಿನಲ್‌ ಉದ್ಘಾಟನೆಗೆ ಮುಹೂರ್ತ ನಿಗದಿಯಾಗಿದೆ. ಜೂ.6ರಂದು ರೈಲುಗಳ ಸಂಚಾರಕ್ಕೆ ನೈರುತ್ಯ ರೈಲ್ವೆ ಹಸಿರು ನಿಶಾನೆ ತೋರಲಿದೆ.

ಕಾಮಗಾರಿ ಮುಗಿದು 14 ತಿಂಗಳ ನಂತರ ಟರ್ಮಿನಲ್‌ ಲೋಕಾರ್ಪಣೆಗೊಳ್ಳುತ್ತಿದೆ. ಮೊದಲ ಹಂತದಲ್ಲಿ ಮೂರು ದಿನ ಬೆಂಗಳೂರಿನಿಂದ ಹೊರಡುವ ಬಾಣಸವಾಡಿ-ಎರ್ನಾಕುಲಂ ಎಕ್ಸ್‌ಪ್ರೆಸ್‌ ರೈಲು (ರೈಲು ಗಾಡಿ ಸಂಖ್ಯೆ 12684), ಬಾಣಸವಾಡಿ-ತಿರುವನಂತಪುರಂ (16320), ಬಾಣಸವಾಡಿ-ಪಾಟ್ನಾ(22354) ರೈಲುಗಳ ಸಂಚಾರ ಈ ಟರ್ಮಿನಲ್‌ನಿಂದ ಆರಂಭವಾಗಲಿದೆ.

ಇದನ್ನೂ ಓದಿ | ರೈಲಿನಲ್ಲಿ ಹಸುಳೆಗಳಿಗಾಗಿ ʼಬೇಬಿ ಬರ್ತ್ ́, ತಾಯಿ-ಮಕ್ಕಳಿಗೆ ಇನ್ನು ಆರಾಮ ಪಯಣ

ಬೈಯಪ್ಪನಹಳ್ಳಿ ಹಾಗೂ ಬಾಣಸವಾಡಿ ರೈಲು ನಿಲ್ದಾಣಗಳ ನಡುವೆ‌ ನಿರ್ಮಾಣವಾಗಿರುವ ಸರ್‌ ಎಂ.ವಿ ಟರ್ಮಿನಲ್ ಕಾಮಗಾರಿ ಪೂರ್ಣಗೊಂಡು 14 ತಿಂಗಳುಗಳೇ ಕಳೆದರೂ ಕಾರ್ಯಾಚರಣೆ ಆರಂಭವಾಗಿರಲಿಲ್ಲ. ಪ್ರಧಾನಮಂತ್ರಿ ಅವರೇ ಉದ್ಘಾಟನೆ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದ್ದವು, ಆದರೆ ಇದನ್ನು ನೈರುತ್ಯ ರೈಲ್ವೆ ಅಲ್ಲಗಳೆದಿದೆ.

ಯಶವಂತಪುರ ಮತ್ತು ಕೆಎಸ್‌ಆರ್‌ (ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ) ನಿಲ್ದಾಣ ಮೇಲಿನ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ₹300 ಕೋಟಿ ವೆಚ್ಚದಲ್ಲಿ 4,200 ಚದರ ಮೀಟರ್‌ ವಿಸ್ತೀರ್ಣದಲ್ಲಿ ವಿಮಾನ ನಿಲ್ದಾಣ ರೀತಿಯಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಈ ಟರ್ಮಿನಲ್‌ ಅನ್ನು ನಿರ್ಮಿಸಲಾಗಿದೆ. ಇದು ಸಂಪೂರ್ಣ ಕೇಂದ್ರೀಕೃತ ಹವಾನಿಯಂತ್ರಿತ(ಎಸಿ) ಟರ್ಮಿನಲ್‌ ಆಗಿದ್ದು, ಏಳು ಸ್ಟಬ್ಲಿಂಗ್‌ ಲೈನ್‌ ಹಾಗೂ ಮೂರು ಪಿಟ್‌ ಲೈನ್‌ ಹೊಂದಿದೆ.

ಇದನ್ನೂ ಓದಿ | ರೈಲಿನಲ್ಲಿ ಹಸುಳೆಗಳಿಗಾಗಿ ʼಬೇಬಿ ಬರ್ತ್ ́, ತಾಯಿ-ಮಕ್ಕಳಿಗೆ ಇನ್ನು ಆರಾಮ ಪಯಣ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಬೆಂಗಳೂರು

Murder case : ಹುಡುಗಿ ವಿಷ್ಯಕ್ಕೆ ಬಿತ್ತು ಹೆಣ; ಕಲ್ಲು ಎತ್ತಿ ಹಾಕಿ ಸ್ನೇಹಿತನನ್ನೇ ಕೊಂದ

Murder Case : ಸ್ನೇಹಿತರಿಬ್ಬರು ಒಂದೆ ಹುಡುಗಿಯ ಜತೆ ಡೇಟಿಂಗ್‌ ಮಾಡುತ್ತಿದ್ದರು. ಹುಡುಗಿ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.

VISTARANEWS.COM


on

By

Man murdered by friend in Bengaluru
Koo

ಬೆಂಗಳೂರು: ಸಂಜಯನಗರ ವ್ಯಾಪ್ತಿಯಲ್ಲಿ ಹುಡುಗಿ ವಿಚಾರಕ್ಕೆ ಯುವಕನ (Murder case) ಕೊಲೆಯಾಗಿದೆ. ವರುಣ್ ಕೊಲೆಯಾದವನು. ಸಂಜಯ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ. ರೂಮ್ ಮೇಟ್‌ನಿಂದಲೇ ವರುಣ್‌ ಕೊಲೆಯಾಗಿದ್ದಾನೆ.

ವರುಣ್ ಹಾಗೂ ದಿವೇಶ್ ಇಬ್ಬರು ಒಂದೇ ಹುಡುಗಿಯನ್ನು ಪ್ರೀತಿಸುತ್ತಿದ್ದರು. ಮೇಲ್ನೋಟಕ್ಕೆ ಇದೇ ವಿಚಾರಕ್ಕೆ ಕೊಲೆಯಾಗಿರುವ ಮಾಹಿತಿ ಲಭ್ಯವಾಗಿದೆ. ಶನಿವಾರ ಇಬ್ಬರ ನಡುವೆ ಪ್ರೀತಿ ವಿಚಾರಕ್ಕೆ ಗಲಾಟೆ ಆಗಿದ್ದು, ಗಲಾಟೆ ವಿಕೋಪಕ್ಕೆ ತಿರುಗಿದೆ. ಸಿಟ್ಟಿನಲ್ಲಿ ದಿವೇಶ್‌ ವರುಣ್‌ಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.

ಕೊಲೆಯಾದ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಕೊಲೆ ಮಾಡಿ ಸ್ಥಳದಲ್ಲೇ ಇದ್ದ ಕೊಲೆ ಆರೋಪಿ ದಿವೇಶ್‌ನನ್ನು ಪೊಲೀಸರಿ ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಾಥಮಿಕ ತನಿಖೆ ವೇಳೆ ಕೊಲೆಗೆ ಕಾರಣ ಹುಡುಗಿ ವಿಚಾರ ಎಂದು ತಿಳಿದು ಬಂದಿದೆ. ವರುಣ್ ಬಾಗಲೂರಿನಲ್ಲಿ ಸೇಫ್ಟಿ ಆಫೀಸರ್ ಆಗಿ ಕೆಲಸ ಮಾಡುತ್ತಿದ್ದ. ಕಳೆದ ಒಂದು ವರ್ಷದಿಂದ ಇವರಿಬ್ಬರು ಸಂಜಯ್ ನಗರದ ಗೆದ್ದಲಹಳ್ಳಿ ಬಾಡಿಗೆ ಮನೆಯಲ್ಲಿ ವಾಸವಿದ್ದರು.

ಒಂದೇ ಹುಡುಗಿ ಜತೆಗೆ ಇಬ್ಬರು ಡೇಟಿಂಗ್‌

ಸ್ಥಳಕ್ಕೆ ಎಫ್‌ಎಸ್ಎಲ್ ತಂಡ ಹಾಗೂ ಎಸಿಪಿ ಮನೋಜ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ದಿವೇಶ್ ವರುಣ್‌ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ. ಯುವತಿ ಮೊದಲು ದಿವೇಶ್‌ನನ್ನ ಪ್ರೀತಿ ಮಾಡುತ್ತಿದ್ದಳು. ಬಳಿಕ ಅದೇ ಯುವತಿ ವರುಣ್‌ನ ಪ್ರೀತಿಸಲು ಶುರು ಮಾಡಿದ್ದಳು. ಈ ವಿಚಾರಕ್ಕೆ ನಿನ್ನೆ ಶುಕ್ರವಾರ ರಾತ್ರಿ ಇಬ್ಬರ ನಡುವೆ ಜಗಳವಾಗಿದೆ. ಇಂದು ಶನಿವಾರ ಬೆಳಗ್ಗೆಯೂ ಜಗಳವಾಡಿಕೊಂಡು ಇಬ್ಬರು ಹೊರ ಬಂದಿದ್ದಾರೆ. ಬಳಿಕ ಕಲ್ಲು ಎತ್ತಿ ಹಾಕಿ ಆರೋಪಿ ದಿವೇಶ್‌ ಕೊಲೆ ಮಾಡಿದ್ದಾನೆ. ಆರೋಪಿ ದಿವೇಶ್ ವಶಕ್ಕೆ ಪಡೆದು ಸಂಜಯನಗರ ಪೊಲೀಸರಿಂದ ವಿಚಾರಣೆ ನಡೆಯುತ್ತಿದೆ.

ಉತ್ತರ ವಿಭಾಗ ಡಿಸಿಪಿ ಸೈದುಲು ಅಡಾವತ್ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿದ್ದಾರೆ. ಸಂಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕೃತ್ಯ ನಡೆದಿದೆ. ವರುಣ್ ಹಾಗೂ ದಿವೇಶ್ ಇಬ್ಬರು ಸ್ನೇಹಿತರು ಮೂಲತಃ ಉಡುಪಿಯವರು ಎಂದು ತಿಳಿದು ಬಂದಿದೆ. ಸಂಜಯ್ ನಗರದ ಗೆದ್ದಲಹಳ್ಳಿ ಬಾಡಿಗೆ ಮನೆಯಲ್ಲಿ ಕಳೆದ ಒಂದು ವರ್ಷದಿಂದ ವಾಸವಿದ್ದರು. ಒಟ್ಟಾರೆ ನಾಲ್ವರು ಗೆಳೆಯರು ಒಂದೇ ಮನೆಯಲ್ಲಿ ವಾಸವಿದ್ದರು. ಮೂವರು ಉಡುಪಿ ಮೂಲದವರು, ಇನ್ನೋರ್ವ ಬೆಂಗಳೂರಿನವನು. ವರುಣ್‌ ಹಾಗೂ ದಿವೇಶ್‌ ಇಬ್ಬರು ಸಹ ಒಂದೆ ಹುಡುಗಿಯ ಜತೆ ಡೇಟ್ ಮಾಡುತ್ತಿದ್ದರು. ಹುಡುಗಿ ವಿಚಾರಕ್ಕೆ ಜಗಳವಾಡಿ ಇಂದು ಬೆಳಗ್ಗೆ ಸುಮಾರು 8 ಗಂಟೆಗೆ ಕೊಲೆ ಮಾಡಿದ್ದಾನೆ. ಮರಣೋತ್ತರ ಪರೀಕ್ಷೆ ಬಳಿಕ ಇನ್ನಷ್ಟು ಮಾಹಿತಿ ತಿಳಿಯಲಿದೆ ಎಂದು ತಿಳಿಸಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

Mysuru silk sarees : ಜಸ್ಟ್‌ 7 ನಿಮಿಷದಲ್ಲಿ 200 ಮೈಸೂರು ಸಿಲ್ಕ್‌ ಸೀರೆ ಸೇಲ್; ಕಿ.ಮೀ ಗಟ್ಟಲೇ ಕ್ಯೂ ನಿಂತರೂ ಸಿಗ್ತಿಲ್ಲ

mysore silk sarees : ಜಸ್ಟ್‌ 7 ನಿಮಿಷದಲ್ಲಿ 200ಕ್ಕೂ ಹೆಚ್ಚು ಮೈಸೂರು ಸಿಲ್ಕ್‌ ಸೀರೆ ಸೇಲ್ ಆಗಿದೆ. ಸ್ಕಿಲ್‌ ಸೀರೆಗಾಗಿ ಶನಿವಾರ ಎಂಜಿ ರಸ್ತೆ ಕೆಎಸ್‌ಐಸಿ ಮಳಿಗೆಯಲ್ಲಿ ಕಿ.ಮೀ ಗಟ್ಟಲೇ ಮಹಿಳೆಯರು ಕ್ಯೂ ನಿಂತಿರುವುದು ಕಂಡು ಬಂತು.

VISTARANEWS.COM


on

By

mysuru silk sarees 200 mysore silk sarees sold in just 7 minutes
Koo

ಬೆಂಗಳೂರು: ಸೀರೆಗಳೆಂದರೆ ಹೆಂಗಳೆಯರಿಗೆ ಪಂಚಪ್ರಾಣ. ಅದರಲ್ಲೂ ಮೈಸೂರ್‌ ಸಿಲ್ಕ್‌ ಸ್ಯಾರಿ ಎಂದರೆ ಕೇಳಬೇಕಾ? ಒಂದು ರೀತಿಯ ವಿಶೇಷ ಆಕರ್ಷಣೆ ಇರುವುದು ಸತ್ಯ. ಈ ಸೀರೆಗಳು ಕಡಿಮೆ ದರದಲ್ಲಿ ಸಿಗುತ್ತದೆ ಎಂದರೆ ಸಾಕು ನಾ ಮುಂದು ತಾ ಮುಂದು ಎಂದು ಊಟ, ನಿದ್ದೆ ಬಿಟ್ಟು ಕ್ಯೂನಲ್ಲಿ ನಿಂತು ಬಿಡುತ್ತಾರೆ. ಮೈಸೂರು ಸಿಲ್ಕ್ ಸೀರೆಗೆ (Mysuru silk sarees) ಸಿಕ್ಕಾಪಟ್ಟೆ ಡಿಮ್ಯಾಂಡ್ ಶುರುವಾಗಿದ್ದು, ಕಿಲೋ ಮೀಟರ್‌ ಗಟ್ಟಲೇ ಕ್ಯೂ ನಿಂತರೂ ಸಿಗದಂತಾಗಿದೆ.

ಹೀಗೆ ಈ ಸಿಲ್ಕ್‌ ಸೀರೆಗಾಗಿ (Mysuru silk sarees)‌ ಶನಿವಾರ ಎಲ್ಲ ಮಳಿಗೆಗಳಲ್ಲಿ ಸ್ತ್ರೀಯರ ದಂಡು ದಾಳಿ ನಡೆಸಿದ್ದರು. ಹಣ ಕೊಟ್ಟರು ಮೈಸೂರು ಸಿಲ್ಕ್ ಸೀರೆ ಮಹಿಳೆಯರಿಗೆ ಸಿಗುತ್ತಿಲ್ಲ. ಬೇಡಿಕೆಗೆ ತಕ್ಕಂತೆ ಮೈಸೂರು ಸಿಲ್ಕ್​ ಸೀರೆ ಉತ್ಪಾದನೆ ಆಗುತ್ತಿಲ್ಲ. ಮದುವೆ, ಹಬ್ಬ ಸೇರಿದಂತೆ ವಿಶೇಷ ದಿನಗಳಿಗೂ ಮೈಸೂರು ಸ್ಕಿಲ್‌ ಸೀರೆ ಸಿಗುತ್ತಿಲ್ಲ.

ಹೀಗಾಗಿ ವಾರಕ್ಕೊಮ್ಮೆ ಸಿಗುವ ವೆರೈಟಿ ವೆರೈಟಿ ಸೀರೆಗಳಿಗೆ ಸರ್ಕಾರದ ಮೈಸೂರು ಸಿಲ್ಕ್ ಮಳಿಗೆಗಳ ಮುಂದೆ ಮಹಿಳೆಯರು ಜಮಾಯಿಸಿದ್ದಾರೆ. ಮಳಿಗೆಗಳು ಓಪನ್ ಆಗುವ ಮುಂಚೆಯೇ ಹೆಣ್ಮಕ್ಕಳು ಬಂದು ಕ್ಯೂ ನಿಂತಿರುವ ದೃಶ್ಯ ಕಂಡು ಬಂತು. ಬೆಂಗಳೂರಿನ ಎಂ.ಜಿ ರಸ್ತೆಯ ಕೆಎಸ್‌ಐಸಿ ಮಳಿಗೆ ಎದುರು ಹೆಣ್ಣುಮಕ್ಕಳು ದಂಡು ಕಂಡು ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದ ಸಿಬ್ಬಂದಿಯೇ ಶಾಕ್‌ ಆಗಿದ್ದರು.

ಇದನ್ನೂ ಓದಿ: Silk Saree Maintanance: ಬೆಲೆಬಾಳುವ ರೇಷ್ಮೆ ಸೀರೆಗಳ ನಿರ್ವಹಣೆ ಹೀಗಿರಲಿ

ಇನ್ನು ಕೇವಲ 7 ನಿಮಿಷದಲ್ಲಿ 200ಕ್ಕೂ ಹೆಚ್ಚು ಸೀರೆಗಳು ಸೇಲ್ ಆಗಿದ್ದವು. ಮೈಸೂರು ಸಿಲ್ಕ್ ಸೀರೆಗೆ ಡಿಮ್ಯಾಂಡ್ ಹಿನ್ನೆಲೆ ಕೇವಲ ಮೂರೇ ಸೀರೆ ಸಿಕ್ತು ಅಂತಾ ಕೆಲ ಮಹಿಳೆಯರು ನಿರಾಸೆ ಪಟ್ಟುಕೊಂಡರು. ಒಂದೊಂದು ಸೀರೆ 30 ಸಾವಿರ ರೂ.ಯಿಂದ ಆರಂಭವಾಗಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

Water supply : ಇಂದು ಮಧ್ಯಾಹ್ನದಿಂದಲೇ ಬೆಂಗಳೂರಿನ ಅರ್ಧಭಾಗಕ್ಕೆ ಕಾವೇರಿ ನೀರಿಲ್ಲ; ಎಲ್ಲೆಲ್ಲಿ ಪೂರೈಕೆ ಸ್ಥಗಿತ

Water supply : ಕಾವೇರಿ ಐದನೇ ಹಂತ ಪೂರ್ವಭಾವಿ ಚಟುವಟಿಕೆ ಹಿನ್ನೆಲೆಯಲ್ಲಿ ಹೆಗ್ಗನಹಳ್ಳಿ ಜಿ.ಎಲ್‌.ಆರ್‌ ಬಳಿ ಶಟ್‌ ಡೌನ್‌ ಆಗಲಿದೆ. ನಗರದ ಕೆಲವು ಭಾಗಗಳಲ್ಲಿ ಸೆಪ್ಟೆಂಬರ್‌ 21 ರಂದು ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

VISTARANEWS.COM


on

By

Cauvery water supply to half of Bengaluru suspended
Koo

ಬೆಂಗಳೂರು: ಕಾವೇರಿ ಐದನೇ ಹಂತ ಪೂರ್ವಭಾವಿ ಕಾರ್ಯನಿರ್ವಹಣೆ ಹಿನ್ನೆಲೆಯಲ್ಲಿ ಬೆಂಗಳೂರಿನ ಅರ್ಧಭಾಗಕ್ಕೆ ನೀರಿನ ಪೂರೈಕೆಯಲ್ಲಿ (Water supply) ಸ್ಥಗಿತಗೊಳ್ಳಲಿದೆ. ಶನಿವಾರ ಮಧ್ಯಾಹ್ನ 1 ರಿಂದ ರಾತ್ರಿ 10 ಗಂಟೆವರೆಗೆ ಬೆಂಗಳೂರಿಗೆ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಹೆಗ್ಗನಹಳ್ಳಿ ಜಿ.ಎಲ್‌.ಆರ್‌ ಬಳಿ ಕೊಳವೆ ಮಾರ್ಗದ ಜೋಡಣೆ ಕಾಮಗಾರಿ ಹಿನ್ನೆಲೆಯಲ್ಲಿ ಒಟ್ಟು 9 ಗಂಟೆಗಳ ಕಾಲ ನೀರು ಪೂರೈಕೆ ಸ್ಥಗಿತಗೊಳ್ಳಲಿದೆ.

ದಾಸರಹಳ್ಳಿ, ಆರ್ ಆರ್ ನಗರ, ಹೆಗ್ಗನಹಳ್ಳಿ, ಅನ್ನಪೂರ್ಣೇಶ್ವರಿ ನಗರ, ಜ್ಞಾನಗಂಗಾ ನಗರ, ರೈಲ್ವೇ ಲೇಔಟ್‌, ಎಂಪಿಎಂ ಲೇಔಟ್‌, ಮಲ್ಲತ್ತಹಳ್ಳಿ, ಭಾಗದಲ್ಲಿ ನೀರು ಸ್ಥಗಿತವಾಗಲಿದೆ. ಗ್ರಾಹಕರು ಸಹಕರಿಸುವಂತೆ ಬೆಂಗಳೂರು ಜಲಮಂಡಳಿ ಮನವಿ ಮಾಡಿದೆ.

ಕಾವೇರಿ ನೀರು ಸರಬರಾಜು ಐದನೇ ಹಂತದ ಚಾಲನೆಯ ಪೂರ್ವಭಾವಿ ಚಾಲನೆಯ ಚಟುವಟಿಕೆಯ ಭಾಗವಾಗಿ, ಐದನೇ ಹಂತದ 700 ಮಿ.ಮೀ ಎಂ.ಎಸ್‌ ಕೊಳವೆ ಮಾರ್ಗವನ್ನು ಹೆಗ್ಗನಹಳ್ಳಿ ಜಿ.ಎಲ್‌.ಆರ್‌ ಆವರಣದಲ್ಲಿ ಹಾಲಿ ಇರುವ 5 ಎಂ.ಎಲ್‌ ಜಿ.ಎಲ್‌.ಆರ್‌ ಗೆ ಇರುವ ಫೇಸ್‌ 2 ಇನ್‌ಲೆಟ್‌ 1000 ಮಿ.ಮೀ ಎಂ.ಎಸ್‌ ಕೊಳವೆ ಮಾರ್ಗಕ್ಕೆ ಜೋಡಣೆ ಮಾಡುವ ಕಾಮಗಾರಿ ನಡೆಸಬೇಕಾಗಿದೆ. ಈ ಹಿನ್ನಲೆಯಲ್ಲಿ ಫೇಸ್‌-2 ಕೊಳವೆ ಮಾರ್ಗದಲ್ಲಿ ನಿರಂತರ 24*7 ನೀರು ಸರಬರಾಜು ಇರುವುದಿಂದ ದಿನಾಂಕ: 21.09.2024 ರಂದು ಮಧ್ಯಾಹ್ನ 1.00 ರಿಂದ ರಾತ್ರಿ 10.00 ಗಂಟೆಯವರೆಗೆ 9 ಗಂಟೆಗಳ ಕಾಲ ಲೋಕಲ್‌ ಶಟ್‌ಡೌನ್‌ ಮಾಡಲಾಗುತ್ತಿದೆ. ಇದರಿಂದ ನಗರದ ಕೆಲವು ಭಾಗಗಳಲ್ಲಿ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

ವ್ಯತ್ಯಯ ಉಂಟಾಗಲಿರುವ ಪ್ರದೇಶಗಳು:

ದಾಸರಹಳ್ಳಿ ವಲಯದ ನೀರು ಸರಬರಾಜಿನಲ್ಲಿ ವ್ಯತ್ಯಯ ಆಗುವ ಪ್ರದೇಶಗಳು .
ನಾರ್ತ್‌ ವೆಸ್ಟ್‌ ವಿಭಾಗ 1
ನಾರ್ತ್‌ ವೆಸ್ಟ್‌ – ಉಪ ವಿಭಾಗ 1 : ಸುಬ್ರಮಣ್ಯನಗರ, ಗಾಯತ್ರಿ ನಗರ, ಪ್ರಕಾಶನಗರ, ನಂದಿನಿ ಲೇಔಟ್‌, ಗೋರುಗುಂಟೆಪಾಳ್ಯ, ಕೃಷ್ಣಾನಂದ ನಗರ, ಶಂಕರ ನಗರ, ಕಂಠೀರವ ನಗರ, ಮಹಾಲಕ್ಷ್ಮಿ ಲೇಔಟ್‌, ಸರಸ್ವತಿ ನಗರ, ಗಣೇಶ ಬ್ಲಾಕ್‌, ರಾಜಾಜಿನಗರ ಮೊದಲನೇ ಹಂತ ದಿಂದ 6 ನೇ ಹಂತದ ವರೆಗೆ

ನಾರ್ತ್‌ ವೆಸ್ಟ್‌ – ಉಪ ವಿಭಾಗ 2 : ರಾಜಗೋಪಾಲನಗರ, ಜಿಕೆಡಬ್ಲೂ ಲೇಔಟ್‌, ಲಕ್ಷ್ಮಿದೇವಿ ನಗರ, ಚಾಮುಂಡಿಪುರ, ಪಾರ್ವತಿನಗರ, ಪೀಣ್ಯ ಕೈಗಾರಿಕಾ ಪ್ರದೇಶ, ಚೊಕ್ಕಸಂದ್ರ, ಹೆಚ್‌ಎಂಟಿ ಲೇಔಟ್‌, ಗೃಹಲಕ್ಷ್ಮಿ ಲೇಔಟ್‌, ಪೀಣ್ಯ ಮೊದಲನೇ ಹಂತ, ಪೀಣ್ಯ ವಿಲೇಜ್‌

ನಾರ್ತ್‌ ವೆಸ್ಟ್‌ ವಿಭಾಗ – 2 :
ನಾರ್ತ್‌ ವೆಸ್ಟ್‌ – ಉಪ ವಿಭಾಗ 3 : ಎಂಇಐ ಲೇಔಟ್‌, ಬಗಲುಗುಂಟೆ, ಮಲ್ಲಸಂದ್ರ, ದಾಸರಹಳ್ಳಿ, ರಾಮಯ್ಯ ಲೇಔಟ್‌, ಪ್ರಶಾಂತ ನಗರ, ಕಮ್ಮಗೊಂಡನಹಳ್ಳಿ, ಭುವನೇಶ್ವರಿ ನಗರ,

ನಾರ್ತ್‌ ವೆಸ್ಟ್‌ – ಉಪ ವಿಭಾಗ 4 : ಹೆಗ್ಗನಹಳ್ಳಿ, ಹೇರೋಹಳ್ಳಿ, ಸುಂಕದಕಟ್ಟೆ, ಪೈಪ್‌ಪೈನ್‌ ರಸ್ತೆ, ಶ್ರೀನಿವಾಸ ನಗರ, ಹೋಯ್ಸಳ ನಗರ, ಸಂಜೀವಿನಿ ನಗರ, ಲಕ್ಷ್ಮಣ ನಗರ, ಶ್ರೀಗಂಧ ನಗರ, ಮಯೂರ ನಗರ, ಶಿವಾನಂದ ನಗರ, ಫ್ರೆಂಡ್ಸ್‌ ಸರ್ಕಲ್‌,

ನಾರ್ತ್‌ ವೆಸ್ಟ್‌ – ಉಪ ವಿಭಾಗ 5 : ಎಜಿಬಿ ಲೇಔಟ್‌, ಚಿಕ್ಕಸಂದ್ರ, ಕಿರ್ಲೋಸ್ಕರ್‌ ಲೇಔಟ್‌, ಸೌಂದರ್ಯ ಲೇಔಟ್‌, ಸಿದ್ದೇಶ್ವರ ಲೇಔಟ್‌

ವೆಸ್ಟ್‌ ವಿಭಾಗ 1 :
ವೆಸ್ಟ್‌ 1-1 ಉಪವಿಭಾಗ : ಕೆ.ಪಿ ಅಗ್ರಹಾರ, ಚೆನ್ನಪ್ಪ ಗಾರ್ಡನ್‌, ಗಾಣಪ್ಪ ಲೇಔಟ್‌, ಮಂಜುನಾಥ ನಗರ, ಚೌಡರಪಾಳ್ಯ, ವಿದ್ಯಾರಣ್ಯನಗರ

ವೆಸ್ಟ್‌1-2 ಉಪವಿಭಾಗ : ಮಾರೇನಹಳ್ಳಿ 20 ನೇ ಮೇನ್‌, ಕೆಹೆಚ್‌ಬಿ ಕ್ವಾಟರ್ಸ್‌, ಹೌಸಿಂಗ್‌ ಬೋರ್ಡ್‌, ಕಾರ್ಪೋರೇಷನ್‌ ಕಾಲೋನಿ, ತಿಮ್ಮನಹಳ್ಳಿ, ಎಂ.ಸಿ ಲೇಔಟ್‌, ಮೂಡಲಪಾಳ್ಯ

ವೆಸ್ಟ್‌ 1-3 ಉಪವಿಭಾಗ : ನಾಗಾಪುರ, ಅಗ್ರಹಾರ ದಾಸರಹಳ್ಳಿ, ರಾಜಾಜಿನಗರ 6ನೇ ಬ್ಲಾಕ್‌, ವೆಸ್ಟ್‌ ಆಫ್‌ ಕಾರ್ಡ್‌ ರೋಡ್‌, ಇಂದಿರನಗರ ಸ್ಲಂ, ಕೆಹೆಚ್‌ಬಿ ಕಾಲೋನಿ, ಮಹಾಗಣಪತಿ ನಗರ, ಶಿವನಹಳ್ಳಿ

ಆರ್‌ ಆರ್‌ ನಗರ ಸಪ್ಲೇ ಶಟ್‌ಡೌನ್‌
ಎನ್‌ ಡಬ್ಲೂ 1 ವಿಭಾಗ
ಎನ್‌ ಡಬ್ಲೂ 1 ಉಪ ವಿಭಾಗ : ರಾಜಾಜಿನಗರ 6ನೇ ಬ್ಲಾಕ್‌

ಎನ್‌ ಡಬ್ಲೂ 2 ಉಪ ವಿಭಾಗ : ಶಿವಪುರ, ನೆಲಗದರನಹಳ್ಳೀ, ಐಪಿನಗರ, ದೊಡ್ಡಣ್ಣ ಇಂಡಸ್ಟ್ರಿಯಲ್‌ ಏರಿಯಾ, ರಾಮಯ್ಯ ಲೇಔಟ್‌, ನಂದಿನ ಲೇಔಟ್‌, ಜೈಭುವನೇಶ್ವರಿ ನಗರ, ಗೃಹಲಕ್ಷ್ಮಿ ಲೇಔಟ್‌, ಸಂಜಯಗಾಂಧಿ ನಗರ, ಲಕ್ಷ್ಮಿದೇವಿ ನಗರ, ಪೀಣ್ಯ ವಿಲೇಜ್‌, ಪೀಣ್ಯ ಮೊದಲನೇ ಹಂತ.

ಎನ್‌ ಡಬ್ಲೂ 2 ವಿಭಾಗ
ಎನ್‌ ಡಬ್ಲೂ 3 ಉಪ ವಿಭಾಗ : ಮಲ್ಲಸಂದ್ರ, ರವೀಂದ್ರ ನಗರ, ಸಂತೋಷ್‌ ನಗರ, ಬಿಹೆಚ್‌ಇಎಲ್‌ ಕಾಲೋನಿ, ಬಾಬಣ್ಣ ಲೇಔಟ್‌, ಕಲ್ಯಾಣ ನಗರ, ಪ್ರಶಾಂತ ನಗರ, ಶನಿಮಹಾತ್ಮ ಟೆಂಪಲ್‌, ಭುವನೇಶ್ವರಿ ನಗರ, ಎಂಇಐ ಲೇಔಟ್‌, ಬಗಲಗುಂಟೆ, ಹಾವನೂರು ಲೇಔಟ್‌, ಡಿಫೆನ್ಸ್‌ ಕಾಲೋನಿ.

ಎನ್‌ ಡಬ್ಲೂ 4 ಉಪ ವಿಭಾಗ : ಹೆಗ್ಗನಹಳ್ಳಿ, ಹೇರೋಹಳ್ಳಿ, ಸುಂಕದಕಟ್ಟೆ, ಪೈಪ್‌ಲೈನ್‌ ರಸ್ತೆ, ಶ್ರೀನಿವಾಸ ನಗರ, ಹೋಯ್ಸಳ ನಗರ

ವೆಸ್ಟ್‌ – 1 ವಿಭಾಗ

ವೆಸ್ಟ್‌ – 1 – 1 ಉಪವಿಭಾಗ : ಶಂಕ್ರಪ್ಪ ಗಾರ್ಡನ್‌ 1 ನೇ ಕ್ರಾಸ್‌ ನಿಂದ 6 ನೇ ಕ್ರಾಸ್‌, ಗೋಪಾಲಪುರ

ವೆಸ್ಟ್‌ – 1 – 2 ಉಪವಿಭಾಗ : ಕಾವೇರಿಪುರ, ರಂಗನಾಥಪುರ, ಬಿಡಿಎ ಲೇಔಟ್‌, ರಾಜೀವ್‌ ಗಾಂಧಿ ಕೊಳಚೆ ಪ್ರದೇಶ, ಮುನೇಶ್ವರ ನಗರ, ಮೂಡಲಪಾಳ್ಯ, ಎಂಟಿ ಲೇಔಟ್‌, ಮಾರೇನಹಳ್ಳಿ, ಜಿಕೆಡಬ್ಲೂ ಲೇಔಟ್‌, ವಿನಾಯಕ ಲೇಔಟ್‌, ಮಾರುತಿ ಮಂದಿರ, ಶಿವಾನಂದ ನಗರ,

ವೆಸ್ಟ್‌ – 1 – 3 ಉಪವಿಭಾಗ : ಕೋಮಲನಗರ, ಸಂಜಯಗಾಂಧಿ ನಗರ, ವಿಶ್ವಭಾರತಿ ನಗರ, ಸಣ್ಣಕ್ಕಿ ಬಯಲು, ಕಾಮಾಕ್ಷಿಪಾಳ್ಯ, ರಾಗ್ಗಿ ನಗರ ಆರನೇ ಬ್ಲಾಕ್‌, ಶಕ್ತಿ ಗಣಪತಿ ನಗರ.

ವೆಸ್ಟ್‌ – 2 ವಿಭಾಗ:

ವೆಸ್ಟ್‌ – 2 – 1 ಉಪವಿಭಾಗ : ಆರ್‌ ಆರ್‌ ನಗರ, ಬಿಹೆಚ್‌ಇಎಲ್‌ ಲೇಔಟ್‌, ಕನ್ನಹಳ್ಳೀ, ಐಡಿಐಲ್‌ ಹೋಮ್‌ ಟೌನ್‌ಶಿಪ್‌, ಬಿಇಎಂಎಲ್‌ ಮೂರು, ನಾಲ್ಕು ಮತ್ತು ಐದನೇ ಹಂತ, ಮೈಲಾಸಂದ್ರ, ಕೆಂಗೇರಿ, ಕೆಂಗೇರಿ ಸ್ಯಾಟಲೈಟ್‌ ಟೌನ್‌, ಬಂಡೇ ಮಠ, ಕೆಂಗೇರಿ ಪೋರ್ಟ್‌, ಸ್ವಾತಿ ಲೇಔಟ್‌, ಕೋಡಿ ಪಾಳ್ಯ, ವಿಜಯಶ್ರೀ ಲೇಔಟ್‌, ಭುವನೇಶ್ವರ ನಗರ, ಜ್ಞಾನಭಾರತಿ, ದುಬಾಸಿಪಾಳ್ಯ, ನಾಗದೇವನಹಳ್ಳಿ.

ವೆಸ್ಟ್‌ – 2 – 2 ಉಪವಿಭಾಗ : ಅನ್ನಪೂರ್ಣೇಶ್ವರಿ ನಗರ, ಜ್ಞಾನಗಂಗಾ ನಗರ, ರೈಲ್ವೇ ಲೇಔಟ್‌, ಎಂಪಿಎಂ ಲೇಔಟ್‌, ಮಲ್ಲತ್ತಹಳ್ಳಿ, ಪಾಪರೆಡ್ಡಿಪಾಳ್ಯ, ಐಪಿಎ ಲೇಔಟ್‌, ಡಿ ಗ್ರೂಪ್‌ ಬ್ಲಾಕ್‌, ನಾಗರಭಾವಿ, ಎನ್‌ಜಿಎಫ್‌ ಲೇಔಟ್‌, ಟೆಲಿಕಾಂ ಲೇಔಟ್‌

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಮಳೆ

Karnataka Weather : ವಾರಾಂತ್ಯದಲ್ಲಿ ರಾಜ್ಯಾದ್ಯಂತ ಸಾಧಾರಣ ಮಳೆ ಮುನ್ಸೂಚನೆ

Karnataka weather Forecast : ರಾಜ್ಯಾದ್ಯಂತ ಮಳೆ ಅಬ್ಬರ ಕಡಿಮೆ ಆಗಿದೆ. ನಾಲ್ಕೈದು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ (Rain News) ನೀಡಿದೆ.

VISTARANEWS.COM


on

By

Karnataka Weather Forecast
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ಕರ್ನಾಟಕ ಕರಾವಳಿ ಮತ್ತು ಮಲೆನಾಡು ಸುತ್ತಮುತ್ತ ಅಲ್ಲಲ್ಲಿ ಅತಿ ಕಡಿಮೆ ಮಳೆಯಾಗುವ (Rain News) ಸಾಧ್ಯತೆ ಇದೆ. ಉಳಿದಂತೆ ಉತ್ತರ ಒಳನಾಡು ಚದುರಿದ ಅತ್ಯಂತ ಹಗುರದಿಂದ ಸಾಧಾರಣ ಮಳೆಯಾದರೆ, ದಕ್ಷಿಣ ಒಳನಾಡಿನ ಸುತ್ತಮುತ್ತ ಅತಿ ಹಗುರದಿಂದ ಕೂಡಿದ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka weather Forecast) ನೀಡಿದೆ.

ದಕ್ಷಿಣ ಒಳನಾಡಿನಲ್ಲಿ ಹಗುರದಿಂದ ಲಘು ಮಳೆಯಾಗುವ ಸಾಧ್ಯತೆಯಿದೆ. ಮಂಡ್ಯ ಮತ್ತು ತುಮಕೂರು ಜಿಲ್ಲೆಗಳಲ್ಲಿ ಪ್ರತ್ಯೇಕ ಸಾಧಾರಣ ಮಳೆಯಾಗಲಿದೆ. ಉತ್ತರ ಒಳನಾಡಿನ ಬೀದರ್ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಚದುರಿದಂತೆ ಅಲ್ಲಲ್ಲಿ ತುಂಬಾ ಹಗುರದಿಂದ ಸಾಧಾರಣ ಮಳೆಯಾಗಲಿದ್ದು, ಉಳಿದ ಭಾಗಗಳಲ್ಲಿ ಚದುರಿದಂತೆ ಚದುರಿದ ಸಣ್ಣ ಮಳೆಯಾಗಲಿದೆ.

ಇನ್ನು ಮಲೆನಾಡಿನ ಅಲ್ಲಲ್ಲಿ ಅತಿ ಕಡಿಮೆ ಮಳೆಯಾಗುವ ನಿರೀಕ್ಷೆಯಿದೆ. ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಪ್ರತ್ಯೇಕ ಸಾಧಾರಣ ಮಳೆಯಾಗಬಹುದು. ಕರಾವಳಿಯಲ್ಲಿ ಅಲ್ಪ ಮಳೆಯಾಗುವ ಸಾಧ್ಯತೆ ಇದೆ. ರಾಜಧಾನಿ ಬೆಂಗಳೂರಿನ ಸುತ್ತಮುತ್ತ ಒಣಹವೆ ಇರುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 31 ಮತ್ತು 20 ಡಿ.ಸೆ ಇರಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Man murdered by friend in Bengaluru
ಬೆಂಗಳೂರು23 ನಿಮಿಷಗಳು ago

Murder case : ಹುಡುಗಿ ವಿಷ್ಯಕ್ಕೆ ಬಿತ್ತು ಹೆಣ; ಕಲ್ಲು ಎತ್ತಿ ಹಾಕಿ ಸ್ನೇಹಿತನನ್ನೇ ಕೊಂದ

mysuru silk sarees 200 mysore silk sarees sold in just 7 minutes
ಬೆಂಗಳೂರು58 ನಿಮಿಷಗಳು ago

Mysuru silk sarees : ಜಸ್ಟ್‌ 7 ನಿಮಿಷದಲ್ಲಿ 200 ಮೈಸೂರು ಸಿಲ್ಕ್‌ ಸೀರೆ ಸೇಲ್; ಕಿ.ಮೀ ಗಟ್ಟಲೇ ಕ್ಯೂ ನಿಂತರೂ ಸಿಗ್ತಿಲ್ಲ

Cauvery water supply to half of Bengaluru suspended
ಬೆಂಗಳೂರು1 ಗಂಟೆ ago

Water supply : ಇಂದು ಮಧ್ಯಾಹ್ನದಿಂದಲೇ ಬೆಂಗಳೂರಿನ ಅರ್ಧಭಾಗಕ್ಕೆ ಕಾವೇರಿ ನೀರಿಲ್ಲ; ಎಲ್ಲೆಲ್ಲಿ ಪೂರೈಕೆ ಸ್ಥಗಿತ

Karnataka Weather Forecast
ಮಳೆ7 ಗಂಟೆಗಳು ago

Karnataka Weather : ವಾರಾಂತ್ಯದಲ್ಲಿ ರಾಜ್ಯಾದ್ಯಂತ ಸಾಧಾರಣ ಮಳೆ ಮುನ್ಸೂಚನೆ

Dina Bhavishya
ಭವಿಷ್ಯ8 ಗಂಟೆಗಳು ago

Dina Bhavishya : ದಿನದ ಮಟ್ಟಿಗೆ ಖರ್ಚು ಹೆಚ್ಚು; ಉದ್ಯೋಗದ ಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Use nandini ghee compulsorily in temple prasadam Order of the Department of Religious Endowments
ಕರ್ನಾಟಕ20 ಗಂಟೆಗಳು ago

Nandini ghee: ದೇವಸ್ಥಾನಗಳ ಪ್ರಸಾದದಲ್ಲಿ ಕಡ್ಡಾಯವಾಗಿ ನಂದಿನಿ ತುಪ್ಪವನ್ನೇ ಬಳಸಿ; ಧಾರ್ಮಿಕ ದತ್ತಿ ಇಲಾಖೆ ಆದೇಶ

Temporary additional coaches to be attached to 34 trains for Dasara 2024
ಬೆಂಗಳೂರು20 ಗಂಟೆಗಳು ago

Dasara 2024: ಪ್ರಯಾಣಿಕರಿಗೆ ಗುಡ್‌ನ್ಯೂಸ್‌; ದಸರಾ ಹಬ್ಬಕ್ಕೆ 34 ರೈಲುಗಳಿಗೆ ತಾತ್ಕಾಲಿಕ ಹೆಚ್ಚುವರಿ ಬೋಗಿಗಳ ಜೋಡಣೆ

Theft case
ಬೆಂಗಳೂರು21 ಗಂಟೆಗಳು ago

Theft case : ಮಧ್ಯರಾತ್ರಿಯಲ್ಲಿ ವಕೀಲನಿಗೆ ಚಾಕು ತೋರಿಸಿ ಸುಲಿಗೆ ಮಾಡಿ ಬೆದರಿಕೆ ಹಾಕಿದ ಖದೀಮರು

Also test the prasadam of the holy places of the state Pralhad Joshi urges state government
ಬೆಂಗಳೂರು23 ಗಂಟೆಗಳು ago

Tirupati laddu Row : ತಿರುಪತಿ ಲಡ್ಡು ಬಳಿಕ ರಾಜ್ಯದ ಪವಿತ್ರ ಕ್ಷೇತ್ರಗಳ ಪ್ರಸಾದವನ್ನೂ ಪರೀಕ್ಷೆಗೊಳಪಡಿಸಿ; ರಾಜ್ಯ ಸರ್ಕಾರಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಗ್ರಹ

Road Accident
ಬೆಂಗಳೂರು1 ದಿನ ago

Road Accident : ಚಾಲಕ ಕಾರಿನೊಳಗೆ ಮಲಗಿದ್ದಾಗಲೇ ನಡುರಾತ್ರಿ ಹೊತ್ತಿ ಉರಿದ ಕಾರು! ಅಗ್ನಿ ಅವಘಡಕ್ಕೆ ಕಾರಣ ನಿಗೂಢ!

Kannada Serials
ಕಿರುತೆರೆ11 ತಿಂಗಳುಗಳು ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ12 ತಿಂಗಳುಗಳು ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ12 ತಿಂಗಳುಗಳು ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ11 ತಿಂಗಳುಗಳು ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ12 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

galipata neetu
ಕಿರುತೆರೆ10 ತಿಂಗಳುಗಳು ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Bigg Boss' dominates TRP; Sita Rama fell to the sixth position
ಕಿರುತೆರೆ11 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ9 ತಿಂಗಳುಗಳು ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ10 ತಿಂಗಳುಗಳು ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Sudeep's birthday location shift
ಸ್ಯಾಂಡಲ್ ವುಡ್3 ವಾರಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್3 ವಾರಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ4 ವಾರಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ1 ತಿಂಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ1 ತಿಂಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ1 ತಿಂಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 ತಿಂಗಳುಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 ತಿಂಗಳುಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 ತಿಂಗಳುಗಳು ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

ಟ್ರೆಂಡಿಂಗ್‌