Intestine Transplant | 13 ತಿಂಗಳ ಹೆಣ್ಣುಮಗುವಿಗೆ ಯಶಸ್ವಿ ಕರುಳು ಕಸಿ! ಇದು ಜಗತ್ತಿನ ಮೊದಲ ಪ್ರಕರಣ - Vistara News

ಆರೋಗ್ಯ

Intestine Transplant | 13 ತಿಂಗಳ ಹೆಣ್ಣುಮಗುವಿಗೆ ಯಶಸ್ವಿ ಕರುಳು ಕಸಿ! ಇದು ಜಗತ್ತಿನ ಮೊದಲ ಪ್ರಕರಣ

13 ತಿಂಗಳ ಹೆಣ್ಣುಮಗುವಿಗೆ ಯಶಸ್ವಿಯಾಗಿ ಕರುಳು ಕಸಿ(Intestine Transplant)ಯನ್ನು ಸ್ಪೇನ್‌ನ ಮ್ಯಾಡ್ರಿಡ್ ಆಸ್ಪತ್ರೆ ಕೈಗೊಂಡಿದೆ. ಇದು ಜಗತ್ತಿನ ಮೊದಲ ಪ್ರಕರಣವಾಗಿದೆ.

VISTARANEWS.COM


on

Intestine Transplant
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: 13 ತಿಂಗಳ ಹೆಣ್ಣು ಮಗುವಿಗೆ ಪ್ರಪಂಚದಲ್ಲೇ ಮೊದಲ ಬಾರಿಗೆ ಕರುಳು ಕಸಿ (Intestine Transplant) ಯನ್ನು ಯಶಸ್ವಿಯಾಗಿ ಮಾಡಲಾಗಿದೆ. ಆ ಮೂಲಕ ಕರುಳು ಕಸಿಗೊಳಗಾದ ಮೊದಲು ಮಗು ಎಂಬ ಕೀರ್ತಿ ಸ್ಪೇನ್‌ನ ಬಾಲಕಿಯದ್ದಾಗಿದೆ. ಹೃದಯಾಘಾತದಿಂದ ಮೃತಪಟ್ಟ ವ್ಯಕ್ತಿಯ ಕರುಳನ್ನು ಜೋಡಿಸಲಾಗಿದ್ದು, ಇದು ವೈದ್ಯಲೋಕ ಸಾಧಿಸಿದ ಯಶಸ್ವಿ ಕಸಿಯಾಗಿದೆ. ಕರುಳು ಕಸಿಗೆ ಒಳಗಾಗಿರುವ ಬಾಲಕಿಯನ್ನು ಈಗಾಗಲೇ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಮಗು ತನ್ನ ಪೋಷಕರೊಂದಿಗೆ ಮನೆಯಲ್ಲಿ ಆರಾಮವಾಗಿದೆ ಎಂದು ಮ್ಯಾಡ್ರಿಡ್‌ನ ಲಾ ಪಾಝ್ ಹಾಸ್ಪಿಟಲ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಹೃದಯಾಘಾತದಿಂದ ಮೃತಪಟ್ಟ ವ್ಯಕ್ತಿಯ ಕರುಳನ್ನು ಅಂಗಾಂಗ ದಾನದ ಮೂಲಕ ಪಡೆಯಲಾಗಿತ್ತು. ಈ ರೀತಿಯ ಅಂಗಾಂಗ ದಾನದಿಂದಾಗಿ ಯಶಸ್ವಿಯಾಗಿ ಕಸಿ ಮಾಡಬಹುದು. ಇದರಿಂದ ಅಂಗಾಂಗಗಳು ನಿರುಪಯುಕ್ತವಾಗಿ ಹಾಳಾಗವುದನ್ನು ತಡೆಯಬಹುದು ಎಂದು ಆಸ್ಪತ್ರೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಕರುಳು ಕಸಿಗೆ ಈಗ ಬಳಸಲಾಗಿರುವ ತಂತ್ರವನ್ನು ಈ ಹಿಂದೆಯೂ ಬಳಸಲಾಗುತ್ತಿತ್ತು. ಆದರೆ, ಅದು ಹೆಚ್ಚು ಉಪಯೋಗಕಾರಿಯಲ್ಲ ಎಂದು ನಿರ್ಧರಿಸಲಾಗಿತ್ತು. ಕರುಳು ಕಸಿಗೆ ವೇಟಿಂಗ್ ಲಿಸ್ಟ್‌ನಲ್ಲಿರುವ ಶೇ.30ರಷ್ಟು ಜನರು ಪ್ರಾಣವನ್ನು ಕಳೆದುಕೊಂಡಿದ್ದಾಗ್ಯೂ, ಈ ತಂತ್ರ ಉಪಯೋಗಕಾರಿಯಲ್ಲ ಎಂದು ಭಾವಿಸಲಾಗಿತ್ತು. ಕರುಳು ದುಗ್ಧಗ್ರಂಥಿಗೆ ಸಂಬಂಧಿಸಿದ ಅಂಗವಾಗಿದ್ದು, ವ್ಯಕ್ತಿಯ ಪ್ರತಿಕಾಯ ರಕ್ಷಣಾ ವ್ಯವಸ್ಥೆಯೊಂದಿಗೆ ನಿಕಟ ಸಂಬಂಧ ಹೊಂದಿದೆ. ಅಂದರೆ, ದೇಹದ ಹೊರಗಿನ ಅಂಗವನ್ನು ತಿರಸ್ಕರಿಸುವ ಮತ್ತು ಸೋಂಕುಗೀಡಾಗುವ ಅಪಾಯವೇ ಹೆಚ್ಚಿರುತ್ತದೆ ಎಂದು ಆಸ್ಪತ್ರೆ ಹೇಳಿದೆ.

ಕರುಳು ಕಸಿಯಂಥ ಕ್ಲಿಷ್ಟಕರ ಆಪರೇಷನ್ ಸಾಧ್ಯ ಎಂಬುದನ್ನು ಸಾಬೀತುಪಡಿಸಲು ನಮ್ಮ ಆಸ್ಪತ್ರೆಯಲ್ಲಿ ಸತತ ಮೂರು ವರ್ಷಗಳ ಸಂಶೋಧನೆ ಮತ್ತು ಅನೇಕ ತಂಡಗಳಿಂದ ಪ್ರಯೋಗಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಲಾಗಿದೆ. ಅಂಗಾಂಗ ಕೃಷಿಯಲ್ಲಿ ಸ್ಪೇನ್ ಜಗತ್ತಿನಲ್ಲೇ ಮುಂಚೂಣಿಯಲ್ಲಿರುವ ರಾಷ್ಟ್ರವಾಗಿದೆ. 2021ರ ಅಂಕಿ ಸಂಖ್ಯೆಗಳ ಪ್ರಕಾರ ಒಟ್ಟು ಅಂಗಾಂಗ ದಾನದಲ್ಲಿ ಸ್ಪೇನ್ ಪಾಲು ಶೇ.5ರಷ್ಟಿದೆ.

ಇದನ್ನೂ ಓದಿ | Organ donation | ಮೆದುಳು ನಿಷ್ಕ್ರಿಯ: ಮಹಿಳೆಯ ಅಂಗಾಂಗ ದಾನದಿಂದ 8 ಜನರಿಗೆ ಜೀವ ದಾನ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Protein Powder: ಫಿಟ್‌ನೆಸ್‌ಗಾಗಿ ಪ್ರೊಟೀನ್‌ ಪುಡಿಗಳ ಸೇವನೆ ಮಾಡುತ್ತೀರಾ? ಹಾಗಿದ್ದರೆ ಎಚ್ಚರ!

ಜಿಮ್‌ಗೆ ಹೋಗುವ, ವ್ಯಾಯಾಮ ಮಾಡುವ, ತೂಕ ಇಳಿಸುವ ಪ್ರಯತ್ನದಲ್ಲಿರುವ ಎಲ್ಲ ಮಂದಿಯೂ ಈಗ ಯಾವ ವೈದ್ಯರ ಸಲಹೆಯನ್ನೂ ಕೇಳದೆ ನೇರವಾಗಿ ಔಟ್‌ಲೆಟ್‌ಗಳಿಂದ ಪ್ರೊಟೀನ್‌ ಪೌಡರನ್ನು ತಂದು ಸೇವಿಸಲು ಆರಂಭಿಸುತ್ತಾರೆ. ಮಾಂಸಖಂಡಗಳ ಬಲವರ್ಧನೆಗೆ, ಪ್ರೊಟೀನ್‌ ಡಯಟ್‌ನಲ್ಲಿರುವ ಮಂದಿ, ಅಥ್ಲೀಟ್‌ಗಳು ಸೇರಿದಂತೆ ಎಲ್ಲರೂ ಇತ್ತೀಚೆಗೆ ಪ್ರೊಟೀನ್‌ ಪೌಡರ್‌ ಶೇಕ್‌ ಮಾಡಿ ಕುಡಿಯುವ ಟ್ರೆಂಡ್‌ ಹೆಚ್ಚಾಗುತ್ತಿದೆ. ಇದು ನಿಜಕ್ಕೂ ಆರೋಗ್ಯಕ್ಕೆ ಒಳ್ಳೆಯದೋ ಕೆಟ್ಟದ್ದೋ? ಈ ಬಗ್ಗೆ (Protein Powder) ಇಲ್ಲಿದೆ ಮಾಹಿತಿ.

VISTARANEWS.COM


on

Protein Powder
Koo

ಬಹಳಷ್ಟು ಮಂದಿಗೆ ನಿತ್ಯವೂ ಪ್ರೊಟೀನ್‌ ಪುಡಿಗಳಿಂದ (Protein Powder) ಮಾಡಿದ ಶೇಕ್‌ಗಳನ್ನು ಕುಡಿಯುವ ಅಭ್ಯಾಸವಿರಬಹುದು. ಜಿಮ್‌ಗೆ ಹೋಗುವ, ವ್ಯಾಯಾಮ ಮಾಡುವ, ತೂಕ ಇಳಿಸುವ ಪ್ರಯತ್ನದಲ್ಲಿರುವ ಎಲ್ಲ ಮಂದಿಯೂ ಈಗ ಯಾವ ವೈದ್ಯರ ಸಲಹೆಯನ್ನೂ ಕೇಳದೆ ನೇರವಾಗಿ ಪ್ರೊಟೀನ್‌ ಪೌಡರ್‌ಗಳು ಸಿಗುವ ಔಟ್‌ಲೆಟ್‌ಗಳಿಂದ ಪೌಡರನ್ನು ಕೊಂಡು ತಂದು ಸೇವಿಸಲು ಆರಂಭಿಸುತ್ತಾರೆ. ಮಾಂಸಖಂಡಗಳ ಬಲವರ್ಧನೆಗೆ, ಪ್ರೊಟೀನ್‌ ಡಯಟ್‌ನಲ್ಲಿರುವ ಮಂದಿ, ಅಥ್ಲೀಟ್‌ಗಳು ಸೇರಿದಂತೆ ಎಲ್ಲರೂ ಇತ್ತೀಚೆಗೆ ಪ್ರೊಟೀನ್‌ ಪೌಡರ್‌ ಶೇಕ್‌ ಮಾಡಿ ಕುಡಿಯುವ ಟ್ರೆಂಡ್‌ ಹೆಚ್ಚಾಗುತ್ತಿದೆ. ಇದು ನಿಜಕ್ಕೂ ಆರೋಗ್ಯಕ್ಕೆ ಒಳ್ಳೆಯದನ್ನೇ ಮಾಡುತ್ತದೆಯೋ ಅಥವಾ ಇದರಿಂದ ಅಡ್ಡ ಪರಿಣಾಮಗಳೇನಾದರೂ ಇವೆಯೇ ಎಂಬ ಯೋಚನೆಯನ್ನೂ ಮಾಡುವುದಿಲ್ಲ. ಇತ್ತೀಚೆಗೆ ಹೆಚ್ಚುತ್ತಿರುವ ಈ ಟ್ರೆಂಡ್‌ಗೆ ಉತ್ತರವಾಗಿ ಇಂಡಿಯನ್‌ ಕೌನ್ಸಿಲ್‌ ಆಫ್‌ ಮೆಡಿಕಲ್‌ ರೀಸರ್ಚ್‌- ನ್ಯಾಷನಲ್‌ ಆಫ್‌ ನ್ಯೂಟ್ರಿಷನ್‌ ಇದೀಗ ಮಾರ್ಗಸೂಚಿಗಳನ್ನೂ ಬಿಡುಗಡೆ ಮಾಡಿದ್ದು ಪ್ರೊಟೀನ್‌ ಪೌಡರುಗಳ ಕುರಿತಾದ ಆಘಾತಕಾರಿ ಸತ್ಯವನ್ನು ವಿವರಿಸಿದ್ದು, ಇದರ ಅಧಿಕ ಸೇವನೆಯಿಂದ ಯಾವೆಲ್ಲ ಪರಿಣಾಮಗಳನ್ನು ಎದುರಿಸಬೇಕಾದೀತು ಎಂಬ ಎಚ್ಚರವನ್ನೂ ನೀಡಿದೆ. ಅಥ್ಲೀಟ್‌ಗಳೂ ಸೇರಿದಂತೆ, ಕ್ರೀಡಾಳುಗಳಿಗೆ ನಿತ್ಯವೂ ಆಹಾರ ಮೂಲಗಳಿಂದಲೇ ಪ್ರೊಟೀನ್‌ ನಮ್ಮ ದೇಹಕ್ಕೆ ಸೇರುವಂತೆ ಮಾಡಬೇಕು ಎಂಬ ನಿಯಮಾವಳಿ ಇದೆ. ಸಪ್ಲಿಮೆಂಟ್‌ಗಳ ಮೂಲಕ ಪ್ರೊಟೀನ್‌ ಅಥವಾ ಪೋಷಕಾಂಶಗಳು ದೇಹಕ್ಕೆ ಸೇರುವಂತೆ ಮಾಡುವುದು ಉತ್ತಮ ವಿಧಾನವಲ್ಲ ಎಂದು ಇದು ಹೇಳಿದೆ. ನಿತ್ಯವೂ ಹೀಗೆ ಪ್ರೊಟೀನ್‌ ಪುಡಿಗಳು ಹಾಗೂ ಇತರ ಸಪ್ಲಿಮೆಂಟ್‌ಗಳನ್ನು ಹೆಚ್ಚು ಪ್ರಮಾಣದಲ್ಲಿ ಸೇವಿಸುತ್ತಲೇ ಇದ್ದರೆ, ಎಲುಬಿನಲ್ಲಿ ಖನಿಜಾಂಶಗಳ ನಷ್ಟ ಸೇರಿದಂತೆ ಕಿಡ್ನಿಯ ಸಮಸ್ಯೆಗಳು ಬರುವ ಸಾಧ್ಯತೆಗಳು ಹೆಚ್ಚು ಎಂದು ಇದು (Protein Powder) ಎಚ್ಚರಿಕೆ ನೀಡಿದೆ.

Shaking protein powder

ಝೀರೋ ಫಿಗರ್‌ ಆಸೆ

ಇದೀಗ ಮುಖ್ಯವಾಗಿ ಸಣ್ಣ ವಯಸ್ಸಿನ ಯುವಕ ಯುವತಿಯರು ದೇಹವನ್ನು ಝೀರೋ ಫಿಗರ್‌ ಮಾಡುವ ಆಸೆಯಿಂದ, ಬಳುಕುವ ಬಳ್ಳಿಯಂತಾಗಲು, ಮಾಂಸಖಂಡಗಳ ಬಲವರ್ಧನೆಗೆ ಪ್ರೊಟೀನ್‌ ಪುಡಿಗಳ ಸೇವನೆ ನಿತ್ಯವೂ ಮಾಡುವುದು ಹೆಚ್ಚಾಗುತ್ತಿದೆ. ಸುಲಭವಾಗಿ ಸಿಗುವ, ಯಾವುದೇ ಕಷ್ಟವಿಲ್ಲದೆ ದುಡ್ಡು ಕೊಟ್ಟರೆ ಸಿಗುವ ಈ ದುಬಾರಿ ಪುಡಿಗಳ ಸೇವನೆಯಿಂದ ಬಹುಬೇಗನೆ ತಾವಂದುಕೊಂಡ ದೇಹವನ್ನು ಪಡೆಯುವುದು ಸಾಧ್ಯವಾಗುತ್ತದೆ ಎಂಬುದೇ ಇದರ ಹಿಂದಿನ ಈ ಮಟ್ಟಿನ ಆಕರ್ಷಣೆ. ಆದರೆ, ಇಂತಹ ಸಂಸ್ಕರಿಸಿ ಪ್ರೊಟೀನ್‌ ಪುಡಿಗಳು ಎಷ್ಟೇ ನೈಸರ್ಗಿಕ ಮೂಲಗಳಿಂದ ತಯಾರಿಸಿದ್ದು ಎಂಬ ಸ್ಪಷ್ಟಣೆ ನೀಡಿದರೂ ಅದರಿಂದ ಅಡ್ಡ ಪರಿಣಾಮಗಳಿದ್ದೇ ಇವೆ ಎಂದಿದೆ. ಭಾರತದಲ್ಲಿ ಈ ಟ್ರೆಂಡ್‌ ದಿನೇ ದಿನೇ ಹೆಚ್ಚಾಗುತ್ತಿದ್ದು, 2023ರಲ್ಲಿ ಪ್ರೊಟೀನ್‌ ಪೌಡರ್‌ ಮಾರುಕಟ್ಟೆ 33000 ಕೋಟಿ ವಹಿವಾಟು ನಡೆಸಿದ್ದು, ಪ್ರತೀ ವರ್ಷ ಇದು ಶೇ.15.8 ರಷ್ಟು ವೃದ್ಧಿ ಕಾಣುತ್ತಿದೆ. 2037ರ ವೇಳೆಗೆ ಇದು 1.28 ಕೋಟಿ ವಹಿವಾಟು ನಡೆಸುವ ಕ್ಷೇತ್ರವಾಗಿ ಇದು ಬೆಳೆಯಲಿದೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: World Thyroid Day: ಇಂದು ವಿಶ್ವ ಥೈರಾಯ್ಡ್‌ ದಿನ; ‘ಗಂಟಲ ಚಿಟ್ಟೆ’ಯ ಬಗ್ಗೆ ಈ ಸಂಗತಿ ನಿಮಗೆ ಗೊತ್ತೆ?

ವಿಷಕಾರಿ ಅಂಶಗಳು ಪತ್ತೆ

ಭಾರತದಲ್ಲಿರುವ ಪ್ರೊಟೀನ್‌ ಪೌಡರ್‌ ಮಾರುಕಟ್ಟೆಯಲ್ಲಿ ಲಭ್ಯವಿರುವ ಬ್ರಾಂಡ್‌ಗಳ ಪೈಕಿ ಶೇ.70ರಷ್ಟು ಬ್ರ್ಯಾಂಡ್‌ಗಳು ತಪ್ಪಾಗಿ ತಮ್ಮನ್ನು ಲೇಬಲ್‌ ಮಾಡಿಕೊಂಡಿದ್ದು ಜನರನ್ನು ಹಾದಿ ತಪ್ಪಿಸುತ್ತಿವೆ. ಶೇ.14ರಷ್ಟು ಬ್ರ್ಯಾಂಡ್‌ಗಳಲ್ಲಿ ವಿಷಕಾರಿ ಅಂಶಗಳಿದ್ದು, ಶೇ.8ರಷ್ಟು ಬ್ರ್ಯಾಂಡ್‌ಗಳಲ್ಲಿ ಕ್ರಿಮಿನಾಶಕಗಳ ಅಂಶಗಳೂ ಇದ್ದಿರುವುದು ಪತ್ತೆಯಾಗಿವೆ. ಹರ್ಬಲ್‌ ಪ್ರೊಟೀನ್‌ಗಳೆಂಬ ಹೆಸರಿನಲ್ಲಿರುವ ಪುಡಿಗಳ ಪರೀಕ್ಷೆ ಸರಿಯಾಗಿ ನಡೆಯದೆ, ಮಾರುಕಟ್ಟೆಯನ್ನು ಪ್ರವೇಶಿಸುತ್ತಿವೆ. ಹೀಗಾಗಿ, ಇವೆಲ್ಲವುಗಳ ಸೇವನೆಯಿಂದ ಆರೋಗ್ಯ ವೃದ್ಧಿಯಾಗುವುದಕ್ಕಿಂತ ಹೆಚ್ಚು ಆರೋಗ್ಯದ ಮೇಲೆ ಕೆಟ್ಟ ಪರಿಣಾಮವೇ ಬೀರುತ್ತಿದೆ ಎಂದು ಹೇಳಿದ್ದಾರೆ. ಇನ್ನೂ ಆಘಾತಕಾರಿ ಸುದ್ದಿ ಎಂದರೆ, ಆಕ್ಟಿವ್‌ ಆಗಿ ಚುರುಕಾಗಿರುವ ಆರೋಗ್ಯವಂತ ಮಂದಿಯೂ ಇಂದು ವೈದ್ಯರ ಸಲಹೆ ಪಡೆಯದೆ ನೇರವಾಗಿ ಪ್ರೊಟೀನ್‌ ಪುಡಿಗಳ ಸೇವನೆ ಮಾಡುವ ಮೂಲಕ ದೇಹದ ಆರೋಗ್ಯವನ್ನು ಕೈಯಾರೆ ಹಾಳು ಮಾಡುತ್ತಿದ್ದಾರೆ. ಇಂತಹ ಹಲವು ಪುಡಿಗಳಲ್ಲಿ ಸ್ಟೀರಾಯ್ಡ್‌ ಕೂಡಾ ಇರುವ ಸಂಭವಗಳಿರುವುದರಿಂದ ವೃಥಾ ದೇಹವನ್ನು ಕೆಟ್ಟ ಪರಿಸ್ಥಿತಿಗೆ ದೂಡುತ್ತಿರುವುದು ನಿಜಕ್ಕೂ ಆಘಾತಕಾರಿ ಎಂದು ವರದಿ ನೀಡಿರುವ ಆರೋಗ್ಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

Continue Reading

ಆರೋಗ್ಯ

Speech Fasting: ಸದಾ ವಟವಟ ಮಾತಾಡ್ತಾ ಇರ್ತೀರಾ? ʼಮೌನವ್ರತʼ ಮಾಡಿ, ಆರೋಗ್ಯ ಸುಧಾರಣೆ ನೋಡಿ!

ಮೌನವ್ರತವೆಂದರೆ ಕೆಲವೊಮ್ಮೆ ಹಾಸ್ಯಕ್ಕೆ ವಸ್ತುವಾಗುತ್ತದೆ. ಆದರೆ ಮೌನಕ್ಕೂ ಚಿಕಿತ್ಸಕ ಗುಣವಿದೆ. ದೈಹಿಕವಾಗಿ ಮತ್ತು ಮಾನಸಿಕವಾಗಿ ಇದು ಗುಣವಾಗುವುದಕ್ಕೆ ನೆರವಾಗುತ್ತದೆ. ಹಾಗಾಗಿ ಸದಾ ವಟವಟ ಮಾಡುವವರು ನೀವಾದರೆ, ಆಗೀಗ ಮೌನವ್ರತ ಇರಿಸಿಕೊಳ್ಳಿ (Speech Fasting), ಒಳ್ಳೆಯದು!

VISTARANEWS.COM


on

Speech Fasting
Koo

ಇಡೀ ಜಗತ್ತು ಸಂವಹನದ ಸೂತ್ರದಿಂದ ಬಂಧಿಸಲ್ಪಟ್ಟಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಇರಲಿ, ಮುಖಾಮುಖಿ ಭೇಟಿ ಇರಲಿ, ಅಂತೂ ಸಂವಹನ ನಡೆಯುತ್ತಲೇ ಇರಬೇಕು. ಅದರಲ್ಲೂ ಮಾತಿಗೆ ಕೂತರೆ ಸಾಮಾನ್ಯಕ್ಕೆ ನಿಲ್ಲಿಸುವುದಿಲ್ಲ ನಾವು. ಧ್ವನಿಪೆಟ್ಟಿಗೆಯನ್ನು ಶೋಷಿಸುತ್ತಲೇ ಇರುತ್ತೇವೆ. ನಮ್ಮ ದೇಹದ ಉಳಿದೆಲ್ಲ ಭಾಗಗಳಂತೆ ಧ್ವನಿ ಪೆಟ್ಟಿಗೆಗೂ ವಿಶ್ರಾಂತಿ ಬೇಕಾಗುತ್ತದೆ. ಅವಿಶ್ರಾಂತವಾಗಿ ಅದನ್ನು ದುಡಿಸುತ್ತಿದ್ದರೆ ಧ್ವನಿಪೆಟ್ಟಿಗೆಗೂ ಕಷ್ಟ ತಪ್ಪಿದ್ದಲ್ಲ. ಹಾಗಾಗಿಯೇ ಹಳೆಯ ಜನಗಳು ಹಲವಾರು ವ್ರತಗಳ ಜೊತೆಗೆ ʻಮೌನವ್ರತʼವನ್ನೂ ಆಗೀಗ ಇರಿಸಿಕೊಳ್ಳುತ್ತಿದ್ದರು. ಮೌನವ್ರತ ಎಂಬುದು ಕೆಲವೊಮ್ಮೆ ಹಾಸ್ಯಕ್ಕೆ ವಸ್ತುವಾದರೂ, ಇದರಿಂದ ಆರೋಗ್ಯಕ್ಕೆ ಲಾಭಗಳಿರುವುದು ಹೌದು. ಏನು ಪ್ರಯೋಜನ (Speech Fasting) ಮೌನದಿಂದ?

young woman covering closed mouth with hands.

ಏನು ಹಾಗೆಂದರೆ?

ಯಾವುದೇ ಧಾರ್ಮಿಕ ಆಚರಣೆಯ ಸಲುವಾಗಿ ಮಾಡುವಂಥ ವ್ರತವಲ್ಲ ಇದು. ಇದನ್ನು ʻವೋಕಲ್‌ ರೆಸ್ಟ್‌ʼ ಅಥವಾ ಧ್ವನಿಪೆಟ್ಟಿಗೆಗೆ ನೀಡುವ ವಿಶ್ರಾಂತಿ ಎಂದು ಕರೆಯಲಾಗುತ್ತದೆ. ನಿಗದಿತ ಸಮಯದಲ್ಲಿ ಮಾತನಾಡದೆ, ಧ್ವನಿಪೆಟ್ಟಿಗೆಯನ್ನು ಯಾವುದಕ್ಕೂ ಬಳಸದೆ ಇರುವುದು ಎಂದು ಅರ್ಥ. ಇದರಿಂದ ಧ್ವನಿಪೆಟ್ಟಿಗೆಯ ಸುಸ್ತು, ಆಯಾಸವೆಲ್ಲ ಕಡಿಮೆಯಾಗಿ, ದುರಸ್ತಿಯಾಗಲು ಅನುಕೂಲವಾಗುತ್ತದೆ. ಹಾಡುಗಾರರು, ನಟರು, ಪ್ರವಚನ ನೀಡುವವರು, ಉಪನ್ಯಾಸಕರು ಇತ್ಯಾದಿ ಧ್ವನಿಯನ್ನೇ ಪ್ರಧಾನವಾಗಿ ಬಳಸುವವರು ಈ ತಂತ್ರಗಳನ್ನು ಅಳವಡಿಸಿಕೊಂಡರೆ ಅನುಕೂಲವಾದೀತು. ಹಾಡು, ಮಾತು, ಪಿಸುಮಾತಿಗೂ ಸದಾ ಕಾಲ ಕಂಪಿಸುತ್ತಲೇ ಇರುವ ಧ್ವನಿಪೆಟ್ಟಿಗೆಗೆ ಸುಸ್ತಾಗುತ್ತದೆ. ಇದರಿಂದ ಧ್ವನಿ ಬೀಳುವುದು, ಗಂಟಲು ಉಬ್ಬಿದಂತಾಗಿ ನೋವು ಕಾಣುವುದು ಸಾಮಾನ್ಯ. ಇದರಿಂದ ಧ್ವನಿಪೆಟ್ಟಿಗೆಗೆ ಹಾನಿಯಾಗುತ್ತದೆ. ಅದನ್ನು ವಿಶ್ರಾಂತಿಗೆ ದೂಡಿದಾಗ ಆಗುವ ಅನುಕೂಲಗಳು ಬಹಳಷ್ಟು.

Children speech therapy concept.

ಆರೋಗ್ಯ ಮರಳಿಸುತ್ತದೆ

ದೇಹದ ಯಾವುದೇ ಭಾಗಕ್ಕೂ ಅತಿ ಬಳಕೆಯಿಂದ ಆಯಾಸವಾದರೆ ವಿಶ್ರಾಂತಿ ಅಗತ್ಯವಾಗುತ್ತದೆ. ಹೀಗೆ ಮಾತಿನ ಉಪವಾಸದ ಮೂಲಕ ವಿಶ್ರಾಂತಿ ನೀಡುವುದರಿಂದ ಕಳೆದು ಹೋದ ಆರೋಗ್ಯ ಮರಳು ದೊರೆಯುವುದಕ್ಕೆ ಸಾಧ್ಯ. ಇದು ಧ್ವನಿಪೆಟ್ಟಿಗೆಯ ವಿಷಯದಲ್ಲೂ ಹೌದು. ಧ್ವನಿ ಪೆಟ್ಟಿಗೆಯಲ್ಲಿನ ಊತ, ಕಿರಿಕಿರಿ ಮುಂತಾದವುಗಳನ್ನು ಗುಣಪಡಿಸಬಹುದು.

ಗುಣಮಟ್ಟ ಸುಧಾರಣೆ

ಪದೇಪದೆ ಧ್ವನಿ ಬೀಳುತ್ತಿದ್ದರೆ, ಧ್ವನಿಯ ಗುಣಮಟ್ಟ ಹಾಳಾಗಿದ್ದರೆ, ಶೃತಿಯ ಸಮಸ್ಯೆಯಿದ್ದರೆ, ಸ್ಪಷ್ಟತೆ ಕಡಿಮೆಯಿದ್ದರೆ- ಇಂಥ ಎಲ್ಲ ಸಮಸ್ಯೆಗಳಿಗೆ ಮೌನ ಅಥವಾ ಧ್ವನಿಪೆಟ್ಟಿಗೆಯ ವಿಶ್ರಾಂತಿ ಮದ್ದಾಗಬಲ್ಲದು. ಧ್ವನಿ ಚಿಕಿತ್ಸೆಯಲ್ಲಿ ಮೌನವನ್ನೂ ಒಂದು ಸಾಧನವಾಗಿ ಬಳಸಲಾಗುತ್ತದೆ. ಇದರಿಂದ ಧ್ವನಿಯ ಗುಣಮಟ್ಟವನ್ನು ಗಣನೀಯವಾಗಿ ಸುಧಾರಿಸಲು ಸಾಧ್ಯವಿದೆ.

ಹಾನಿ ಕಡಿಮೆ

ಧ್ವನಿಪೆಟ್ಟಿಗೆಯನ್ನು ಅತಿಯಾಗಿ ಮತ್ತು ಸತತ ಬಳಸುವುದರಿಂದ ಧ್ವನಿಪೆಟ್ಟಿಗೆಯಲ್ಲಿ ನಾಡ್ಯೂಲ್‌ ಅಥವಾ ಪಾಲಿಪ್‌ಗಳು ಕಾಣಿಸಿಕೊಳ್ಳಬಹುದು. ಇದಕ್ಕೆ ಸರಿಯಾಗಿ ಚಿಕಿತ್ಸೆ ತೆಗೆದುಕೊಳ್ಳದಿದ್ದರೆ ಧ್ವನಿಪೆಟ್ಟಿಗೆಗೆ ಹಾನಿ ಆಗುವ ಸಂಭವ ಇರುತ್ತದೆ. ಹಾಗಾಗಿ ಚಿಕಿತ್ಸಕ ಉದ್ದೇಶದಿಂದ ಮೌನ ವಹಿಸುವುದರಿಂದ ಇಂಥ ಹಾನಿಯನ್ನು ಕಡಿಮೆ ಮಾಡಲು ಸಾಧ್ಯವಿದೆ.

Mood Enhancement Dark Chocolate Benefits

ಮಾನಸಿಕ ನೆಮ್ಮದಿ

ಹೊರಗಿನ ವ್ಯವಹಾರವನ್ನು ಕೊಂಚ ನಿಲ್ಲಿಸಿದರೆ, ಒಳಗಿನ ಮನೋವ್ಯಾಪಾರಕ್ಕೆ ತೆರೆದುಕೊಳ್ಳುವುದಕ್ಕೆ ಸಾಧ್ಯ. ನಮ್ಮ ಬಗ್ಗೆ ನಮಗೆ ತಿಳಿಯುವುದಕ್ಕೆ, ನಾವೇನು ಮಾಡುತ್ತಿದ್ದೇವೆ, ಅದನ್ನು ಯಾಕಾಗಿ ಮಾಡುತ್ತಿದ್ದೇವೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಮೌನ ಸಾಧನವಾಗಬಲ್ಲದು. ಮಾನಸಿಕ ನೋವುಗಳನ್ನು ದೂರಮಾಡಿ, ಸಾಂತ್ವನಕ್ಕೆ ನಮ್ಮೊಳಗೇ ಜಾಗ ಮಾಡಿಕೊಡುತ್ತದೆ.

ಇದನ್ನೂ ಓದಿ: Egg Benefits: ನೀವು ಮೊಟ್ಟೆ ಪ್ರಿಯರೆ? ಹಾಗಾದರೆ ಎಷ್ಟು ಮೊಟ್ಟೆ ತಿನ್ನಬಹುದು ಎಂಬುದೂ ಅರಿವಿರಲಿ!

ಹೇಗೆ ಮಾಡಬೇಕು?

ಧ್ವನಿಗೆ ಎಷ್ಟು ಸಮಸ್ಯೆಯಾಗಿದೆ ಎಂಬುದರ ಮೇಲೆ ಎಷ್ಟು ಹೊತ್ತು ವಿಶ್ರಾಂತಿ ನೀಡಬೇಕು ಎಂಬುದನ್ನು ನಿರ್ಧರಿಸಬಹುದು. ದಿನದ ಒಂದಿಷ್ಟು ತಾಸು, ಇಡೀ ದಿನ, ವಾರದಲ್ಲಿ ಪ್ರತಿದಿನದ ಒಂದಿಷ್ಟು ಹೊತ್ತು- ಹೀಗೆ. ಮಾತಾಡುವುದಿಲ್ಲ ಎಂದರೆ ಗುನುಗಬಹುದು, ಪಿಸು ಮಾತಾಡಬಹುದು ಎಂದು ಅರ್ಥವಲ್ಲ, ಧ್ವನಿಪೆಟ್ಟಿಗೆಗೆ ಸಂಪೂರ್ಣ ವಿಶ್ರಾಂತಿ ನೀಡಬೇಕು. ಮೌನ ಮುರಿದ ಹೊತ್ತಿನಲ್ಲೂ ಸಿಕ್ಕಾಪಟ್ಟೆ ಕೂಗುವುದು, ಕಿರುಚುವುದು ಸಲ್ಲದು. ದಿನಕ್ಕೆ 3-4 ಲೀಟರ್‌ ನೀರು ಕುಡಿಯುವುದು ಅಗತ್ಯ. ಇದರಿಂದ ಧ್ವನಿಪೆಟ್ಟಿಗೆಗೆ ಬೇಕಾದ ತೇವವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಕೆಮ್ಮುವುದು, ಕ್ಯಾಕರಿಸುವುದು ಇತ್ಯಾದಿಗಳನ್ನು ಮಾಡುವ ಅಗತ್ಯವಿದ್ದರೆ, ನೆಗಡಿಯ ಸಮಸ್ಯೆಯಿದ್ದರೆ, ಬೆಚ್ಚಗಿನ ಉಪ್ಪು ನೀರಿನಿಂದ ಗಂಟಲನ್ನು ಚೆನ್ನಾಗಿ ಗಾರ್ಗಲ್‌ ಮಾಡುವುದು ಒಳ್ಳೆಯದು.

Continue Reading

ಆರೋಗ್ಯ

Life Expectancy: ಕೊರೊನಾದಿಂದ ನಮ್ಮ ಆಯುಷ್ಯದಲ್ಲಿ 2 ವರ್ಷ ಕಡಿತ; WHO ಭೀಕರ ವರದಿ

Life Expectancy: ಕೊರೊನಾ ಸೋಂಕಿನ ಪರಿಣಾಮವು ಜಗತ್ತಿನಾದ್ಯಂತ ಒಂದೇ ರೀತಿಯಾಗಿ ಪರಿಣಾಮ ಬೀರಿಲ್ಲ. ಆಯಾ ದೇಶ, ಖಂಡಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಪರಿಣಾಮ ಬೀರಿದೆ. ಅಮೆರಿಕ ಹಾಗೂ ಆಗ್ನೇಯ ಏಷ್ಯಾದ ಜನರ ಸರಾಸರಿ ಜೀವಿತಾವಧಿಯು 3 ವರ್ಷ ಕಡಿಮೆಯಾಗಿದೆ. ಆರೋಗ್ಯಯುತ ಜೀವನವು ಎರಡೂವರೆ ವರ್ಷ ಕಡಿಮೆಯಾಗಿದೆ ಎಂಬುದಾಗಿ ವಿಶ್ವ ಆರೋಗ್ಯ ಸಂಸ್ಥೆಯು ವರದಿ ನೀಡಿದೆ.

VISTARANEWS.COM


on

Life Expectancy
Koo

ನ್ಯೂಯಾರ್ಕ್‌: ಚೀನಾದಲ್ಲಿ ಹರಡಿ, ಜಗತ್ತಿನಾದ್ಯಂತ ಪಸರಿಸಿ, ಕೋಟ್ಯಂತರ ಜನರ ಸಾವಿಗೆ ಕಾರಣವಾದ ಕೊರೊನಾ (Covid 19) ಮಹಾಮಾರಿಯ ಹಾವಳಿ ಕಡಿಮೆಯಾದರೂ ಅದು ಜನರ ಜೀವನದ ಮೇಲೆ ಬೀರುವ ಪರಿಣಾಮವು ಇನ್ನೂ ನಿಂತಿಲ್ಲ. ಕೊರೊನಾ ಲಸಿಕೆ ಪಡೆದವರಿಗೆ ಅಡ್ಡ ಪರಿಣಾಮ, ರೆಮ್ಡಿಸಿವಿರ್‌ ಪಡೆದವರು, ಐಸಿಯುಗೆ ದಾಖಲಾಗಿ ಜೀವಂತವಾಗಿ ಹೊರಬಂದವರು ಒಂದಲ್ಲ ಒಂದು ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದರ ಬೆನ್ನಲ್ಲೇ, ವಿಶ್ವ ಆರೋಗ್ಯ ಸಂಸ್ಥೆಯು (WHO) ಭೀಕರ ವರದಿ ಬಿಡುಗಡೆ ಮಾಡಿದ್ದು, ಕೊರೊನಾದಿಂದ ಜಾಗತಿಕವಾಗಿ ಜನರ ಜೀವಿತಾವಧಿಯು (Life Expectancy) 2 ವರ್ಷ ಕಡಿಮೆಯಾಗಿದೆ ಎಂದು ತಿಳಿಸಿದೆ.

“2019ರಿಂದ 2021ರ ಅವಧಿಯಲ್ಲಿ ಕೊರೊನಾ ಮಹಾಮಾರಿಯು ಜಗತ್ತಿನಾದ್ಯಂತ ಭೀಕರ ಪರಿಣಾಮ ಉಂಟುಮಾಡಿತು. ಇದರಿಂದಾಗಿ 2019-21ರ ಅವಧಿಯಲ್ಲಿ ಜಗತ್ತಿನಾದ್ಯಂತ ಮನುಷ್ಯರ ಸರಾಸರಿ ಜೀವಿತಾವಧಿಯು 71.4 ವರ್ಷಕ್ಕೆ ಇಳಿದಿದೆ. ಜನರ ಸರಾಸರಿ ಜೀವಿತಾವಧಿಯು 1.8 ವರ್ಷ ಕಡಿಮೆಯಾಗಿದೆ. ಅಷ್ಟೇ ಅಲ್ಲ, ಇದೇ ಅವಧಿಯಲ್ಲಿ ಜನರ ಆರೋಗ್ಯಯುತ ಜೀವನ ಪ್ರಮಾಣದಲ್ಲೂ 1.5 ವರ್ಷ ಕಡಿಮೆಯಾಗಿದ್ದು, 61.9 ವರ್ಷಕ್ಕೆ ಕುಸಿದಿದೆ” ಎಂಬುದಾಗಿ ಡಬ್ಲ್ಯೂಎಚ್‌ಒ ವರದಿಯಿಂದ ತಿಳಿದುಬಂದಿದೆ.

ಏಷ್ಯಾ ಭಾಗಕ್ಕೇ ತೀವ್ರ ಪರಿಣಾಮ

“ಕೊರೊನಾ ಸೋಂಕಿನ ಪರಿಣಾಮವು ಜಗತ್ತಿನಾದ್ಯಂತ ಒಂದೇ ರೀತಿಯಾಗಿ ಪರಿಣಾಮ ಬೀರಿಲ್ಲ. ಆಯಾ ದೇಶ, ಖಂಡಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಪರಿಣಾಮ ಬೀರಿದೆ. ಅಮೆರಿಕ ಹಾಗೂ ಆಗ್ನೇಯ ಏಷ್ಯಾದ ಜನರ ಸರಾಸರಿ ಜೀವಿತಾವಧಿಯು 3 ವರ್ಷ ಕಡಿಮೆಯಾಗಿದೆ. ಆರೋಗ್ಯಯುತ ಜೀವನವು ಎರಡೂವರೆ ವರ್ಷ ಕಡಿಮೆಯಾಗಿದೆ. ಇದು ಜಗತ್ತಿನಲ್ಲೇ ಕೊರೊನಾದಿಂದ ಅತಿ ಹೆಚ್ಚು ಪರಿಣಾಮ ಬೀರಿದ ಭಾಗಗಳಾಗಿವೆ. ವೆಸ್ಟರ್ನ್‌ ಪೆಸಿಫಿಕ್‌ ರೀಜನ್‌ನಲ್ಲಿ ಅತಿ ಕಡಿಮೆ ಪರಿಣಾಮ ಬೀರಿದೆ. ಈ ಭಾಗದಲ್ಲಿ ಜನರ ಸರಾಸರಿ ಜೀವಿತಾವಧಿಯು ಶೇ.0.1ರಷ್ಟು ಕಡಿಮೆಯಾಗಿದೆ” ಎಂಬುದಾಗಿ ವರದಿಯಿಂದ ತಿಳಿದುಬಂದಿದೆ.

ಮತ್ತೊಂದು ಸೋಂಕು ಸೃಷ್ಟಿಸಿದ ಚೀನಾ

ಕೊರೊನಾ ಮೂಲಕ ಕೋಟ್ಯಂತರ ಜನರ ಪ್ರಾಣಕ್ಕೆ ಕುತ್ತು ತಂದ ಚೀನಾ ಈಗ ಮತ್ತೊಂದು ಜೈವಿಕ ಯುದ್ಧಕ್ಕೆ ಮುಂದಾಗಿದೆ. ಮಾರಣಾಂತಿಕ ಎಬೋಲಾ ರೂಪಾಂತರಿ ಸೋಂಕನ್ನು (Ebola Mutant Virus) ಚೀನಾದ ವಿಜ್ಞಾನಿಗಳು ಸೃಷ್ಟಿಸಿದ್ದು, ಇದರಿಂದ ಜಗತ್ತಿಗೇ ಆತಂಕ ಎದುರಾಗಿದೆ. ಹೆಬೈ ಮೆಡಿಕಲ್‌ ಯುನಿವರ್ಸಿಟಿಯಲ್ಲಿ ವಿಜ್ಞಾನಿಗಳು ಎಬೋಲಾ ರೂಪಾಂತರಿ ವೈರಸ್‌ಅನ್ನು ಸೃಷ್ಟಿಸಿದ್ದಾರೆ. ಹ್ಯಾಮ್‌ಸ್ಟರ್‌ಗಳಿಗೆ (ಕಿರುಕಡಿಗ-ಇಲಿಯಂತ ಚಿಕ್ಕ ಪ್ರಾಣಿ) ವೈರಸ್‌ ಇಂಜೆಕ್ಟ್‌ ಮಾಡಿದರೆ, ಮೂರೇ ದಿನಗಳಲ್ಲಿ ಅವರು ಸಾಯುತ್ತವೆ ಎಂದು ಸೈನ್ಸ್‌ ಡೈರೆಕ್ಟ್‌ ಜರ್ನಲ್‌ನಲ್ಲಿ ವರದಿ ಪ್ರಕಟವಾಗಿದೆ.

ಇದನ್ನೂ ಓದಿ: Covaxin: ಕೋವಾಕ್ಸಿನ್‌ ಲಸಿಕೆ ಪಡೆದವರಿಗೂ ಬಿಗ್‌ ಶಾಕ್‌! ಆಘಾತಕಾರಿ ವರದಿ ಔಟ್‌

Continue Reading

ಆರೋಗ್ಯ

Egg Benefits: ನೀವು ಮೊಟ್ಟೆ ಪ್ರಿಯರೆ? ಹಾಗಾದರೆ ಎಷ್ಟು ಮೊಟ್ಟೆ ತಿನ್ನಬಹುದು ಎಂಬುದೂ ಅರಿವಿರಲಿ!

ಬಹಳಷ್ಟು ಮನೆಗಳಲ್ಲಿ ನಿತ್ಯದ ಬೆಳಗಿನ ಆಹಾರವಾಗಿ ಮೊಟ್ಟೆ ಸೇವನೆ ರೂಢಿಯಲ್ಲಿದೆ. ಬೆಳಗ್ಗೆದ್ದ ಕೂಡಲೇ ಉಪಹಾರಕ್ಕೆ ಮೊಟ್ಟೆಯ ಆಮ್ಲೆಟ್‌ ಬಹಳ ಸರಳವೂ ಸುಲಭವೂ ಆಗಿ ಮಾಡಿಕೊಳ್ಳಬಹುದಾದ್ದರಿಂದ ಅನೇಕರು ಇದನ್ನು ಅವಲಂಬಿಸಿರುತ್ತಾರೆ. ಹೆಚ್ಚು ಶ್ರಮ ಬೇಡದ, ಪೌಷ್ಟಿಕಾಂಶವೂ ಇರುವ ಆಹಾರ ಇದಾದ್ದರಿಂದ ಯಾವ ಯೋಚನೆಯೂ ಇಲ್ಲದೆ, ಮೊಟ್ಟೆಯ (Egg Benefits) ಬಗೆಬಗೆಯ ಆಹಾರಗಳನ್ನು ನಿತ್ಯವೂ ತಯಾರಿಸುತ್ತಾರೆ. ಆದರೆ…

VISTARANEWS.COM


on

Egg Benefits
Koo

ಮೊಟ್ಟೆ ಅತ್ಯಂತ ಪೌಷ್ಟಿಕವಾದ ಆಹಾರಗಳಲ್ಲಿ ಒಂದು ಎಂಬುದರ ಬಗ್ಗೆ ಯಾವ ಅನುಮಾನಗಳೂ ಇಲ್ಲ. ಇದರಲ್ಲಿ ದೇಹಕ್ಕೆ ಅಗತ್ಯವಾದ ಸಾಕಷ್ಟು ಒಳ್ಳೆಯ ಪೋಷಕಾಂಶಗಳು ಇರುವ ಹಾಗೆಯೇ ಕೊಬ್ಬೂ ಇವೆ. ಬಹಳಷ್ಟು ಮನೆಗಳಲ್ಲಿ ನಿತ್ಯದ ಬೆಳಗಿನ ಆಹಾರವಾಗಿ ಮೊಟ್ಟೆ ಸೇವನೆ ರೂಢಿಯಲ್ಲಿದೆ. ಬೆಳಗ್ಗೆದ್ದ ಕೂಡಲೇ ಉಪಹಾರಕ್ಕೆ ಮೊಟ್ಟೆಯ ಆಮ್ಲೆಟ್‌ ಬಹಳ ಸರಳವೂ ಸುಲಭವೂ ಆಗಿ ಮಾಡಿಕೊಳ್ಳಬಹುದಾದ್ದರಿಂದ ಅನೇಕರು ಇದನ್ನು ಅವಲಂಬಿಸಿರುತ್ತಾರೆ. ಹೆಚ್ಚು ಶ್ರಮ ಬೇಡದ, ಪೌಷ್ಟಿಕಾಂಶವೂ ಇರುವ ಆಹಾರ ಇದಾದ್ದರಿಂದ ಯಾವ ಯೋಚನೆಯೂ ಇಲ್ಲದೆ, ಮೊಟ್ಟೆಯ ಬಗೆಬಗೆಯ ಆಹಾರಗಳನ್ನು ನಿತ್ಯವೂ ತಯಾರಿಸುತ್ತಾರೆ. ತೂಕ ಇಳಿಸುವ ಮಂದಿ, ದೇಹದಾರ್ಢ್ಯ ಬಲಪಡಿಸುವ ಮಂದಿ, ಜಿಮ್‌ಗೆ ಹೋಗಿ ವರ್ಕೌಟ್‌ ಮಾಡುವ ಮಂದಿ ಎಲ್ಲರಿಗೂ ಮೊಟ್ಟೆಯೇ ಆರಾಧ್ಯ ದೈವ. ಧಾವಂತದ ಬದುಕಿಗೆ ಹೇಳಿ ಮಾಡಿಸಿದ ಆಹಾರ ಇದಾದರೂ, ಮೊಟ್ಟೆಯನ್ನು ಎಷ್ಟು ತಿನ್ನಬೇಕು, ಹೇಗೆ ತಿನ್ನಬೇಕು ಎಂಬ ಬಗ್ಗೆ ಹೆಚ್ಚು ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ಮೊಟ್ಟೆ ಒಳ್ಳೆಯದೆಂದು ಕೇವಲ ಮೊಟ್ಟೆಯೊಂದನ್ನೇ ತಿಂದರೆ ಅದರಿಂದ ಖಂಡಿತ ಅಡ್ಡ ಪರಿಣಾಮಗಳೂ ಆದೀತು ಎಂಬುದನ್ನು ಪ್ರತಿಯೊಬ್ಬರೂ ನೆನಪಿಡಬೇಕು. ಯಾಕೆಂದರೆ ಮೊಟ್ಟೆಯಲ್ಲಿ ಪ್ರೊಟೀನ್‌ ಇರುವಂತೆಯೇ, ನಮ್ಮ ದೇಹದಲ್ಲಿ ಕೊಲೆಸ್ಟೆರಾಲ್‌ ಕೂಡಾ ಹೆಚ್ಚಿಸುವ ಅಪಾಯವಿದೆ. ಹಾಗಾಗಿ ಮೊಟ್ಟೆ ಎಷ್ಟು ತಿನ್ನಬೇಕು, ಹೇಗೆ ತಿನ್ನಬೇಕು ಎಂಬ ಅರಿವು (Egg Benefits) ಅತ್ಯಂತ ಅಗತ್ಯ.

the egg

ಮೊಟ್ಟೆಯಲ್ಲಿ ಏನೇನಿವೆ?

ಪ್ರೊಟೀನ್‌ನ ಜೊತೆಜೊತೆಗೇ, ಪೊಟಾಶಿಯಂ, ನಿಯಾಸಿನ್‌, ರೈಬೋ ಫ್ಲೇವಿನ್‌, ಮೆಗ್ನೀಷಿಯಂ, ಸೋಡಿಯಂ, ಫಾಸ್ಪರಸ್‌, ಕಬ್ಬಿಣಾಂಶ, ಝಿಂಕ್ ಮತ್ತಿತರ ಖನಿಜಾಂಶಗಳೂ, ವಿಟಮಿನ್‌ ಎ, ವಿಟಮಿನ್‌ ಡಿ, ವಿಟಮಿನ್‌ ಬಿ6, ಬಿ12, ಫೋಲಿಕ್‌ ಆಸಿಡ್‌, ಪ್ಯಾಂಟೋಥೆನಿಕ್‌ ಆಸಿಡ್‌, ಥೈಮೀನ್‌ ಇತ್ಯಾದಿಗಳೆಲ್ಲವೂ ಇವೆ. ಇವೆಲ್ಲವುಗಳ ಜೊತೆಗೆ, ಒಂದು ಮೊಟ್ಟೆಯಲ್ಲಿ 180ರಿಂದ 300 ಮಿಲಿಗ್ರಾಂಗಳಷ್ಟು ಕೊಲೆಸ್ಟೆರಾಲ್‌ ಇವೆ. ಇದು ಮೊಟ್ಟೆಯ ಹಳದಿ ಭಾಗವಾದ ಯೋಕ್‌ನಲ್ಲಿರುವುದರಿಂದ ಮೊಟ್ಟೆ ತಿನ್ನುವಾಗ ಇದನ್ನು ನೆನಪಿನಲ್ಲಿಟ್ಟಿರಬೇಕು. ಪ್ರತಿ ದಿನಕ್ಕೆ 300 ಎಂಜಿಗಿಂತ ಹೆಚ್ಚು ಕೊಲೆಸ್ಟೆರಾಲ್‌ ಸೇವನೆ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲವೆಂದು ತಜ್ಞರ ಲೆಕ್ಕಾಚಾರ. ಮೊಟ್ಟೆಯ ಬಿಳಿಲೋಳೆಯಲ್ಲಿ ಯಾವ ಕೊಲೆಸ್ಟೆರಾಲ್‌ ಕೂಡಾ ಇರುವುದರಿಂದ ಇದನ್ನು ಸೇವಿಸುವುದರಿಂದ ತೊಂದರೆಯಿಲ್ಲ. ಆದರೆ ಹಳದಿ ಭಾಗವನ್ನು ಸೇರಿಸಿಕೊಂಡು ನಿತ್ಯವೂ ಆಮ್ಲೆಟ್‌ ಮಾಡಿ ಸೇವಿಸುತ್ತಿದ್ದರೆ ಯೋಚನೆ ಮಾಡಲೇಬೇಕು. ಹೆಚ್ಚು ತಿನ್ನುವುದರಿಂದ ಕೊಲೆಸ್ಟೆರಾಲ್‌ ಅಗತ್ಯಕ್ಕಿಂತ ಹೆಚ್ಚು ದೇಹ ಸೇರಿ, ಹೃದಯದ ಸಮಸ್ಯೆ, ರಕ್ತದೊತ್ತಡ, ಪಾರ್ಶ್ವವಾಯು ಮತ್ತಿತರ ಸಮಸ್ಯೆಗಳು ಬರುವ ಅಪಾಯವೂ ಇವೆ.

Eggs with protein and micronutrients are also healthy for eyes Ophthalmia

ದಿನಕ್ಕೆ ಎಷ್ಟು ಮೊಟ್ಟೆ ತಿನ್ನಬಹುದು?

ಆರೋಗ್ಯಕರ ಆಹಾರ ಆಭ್ಯಾಸದ ಪ್ರಕಾರ, ಒಬ್ಬ ವ್ಯಕ್ತಿ ದಿನಕ್ಕೊಂದು ಮೊಟ್ಟೆಯಂತೆ ವಾರದಲ್ಲಿ ಮೂರರಿಂದ ನಾಲ್ಕು ಬಾರಿ ತಿನ್ನಬಹುದು. ಅಂದರೆ ವಾರಕ್ಕೆ ಹೆಚ್ಚೆಂದರೆ ನಾಲ್ಕು ಮೊಟ್ಟೆ ಸೇವನೆ ಆರೋಗ್ಯಕರ. ಮಕ್ಕಳು ದಿನಕ್ಕೊಂದರಂತೆ ಮೊಟ್ಟೆ ಸೇವಿಸಬಹುದು. ಹೃದ್ರೋಗ, ಅತಿಯಾದ ಕೊಲೆಸ್ಟೆರಾಲ್‌ ಇರುವ ಮಂದಿ ವಾರಕ್ಕೆ ಮೂರಕ್ಕಿಂತ ಹೆಚ್ಚು ಮೊಟ್ಟೆ ತಿನ್ನುವುದು ಒಳ್ಳೆಯದಲ್ಲ. ಆದರೆ ಮೊಟ್ಟೆಯ ಹಳದಿ ಭಾಗವನ್ನು ತೆಗೆದು ಕೇವಲ ಬಿಳಿ ಭಾಗವನ್ನು ಮಾತ್ರ ನೀವು ತಿನ್ನುವುದಾದರೆ ಈ ಸಂಖ್ಯೆಯನ್ನು ಅನುಸರಿಸಬೇಕಾಗಿಲ್ಲ.

ಇದನ್ನೂ ಓದಿ: Health Benefits Of Okra: ಬೆಂಡೆಕಾಯಿ ತಿನ್ನುತ್ತೀರಿ ನಿಜ; ಅದರಿಂದಾಗುವ ಪ್ರಯೋಜನಗಳೇನು ಗೊತ್ತಿದೆಯಾ?

Continue Reading
Advertisement
Protein Powder
ಆರೋಗ್ಯ20 mins ago

Protein Powder: ಫಿಟ್‌ನೆಸ್‌ಗಾಗಿ ಪ್ರೊಟೀನ್‌ ಪುಡಿಗಳ ಸೇವನೆ ಮಾಡುತ್ತೀರಾ? ಹಾಗಿದ್ದರೆ ಎಚ್ಚರ!

Dina Bhavishya
ಭವಿಷ್ಯ1 hour ago

Dina Bhavishya : ಅಪರಿಚಿತರೊಂದಿಗೆ ಅತಿಯಾದ ಸಲುಗೆ ಅಪಾಯ ತಂದಿತು

Fire Accident
ಸಂಪಾದಕೀಯ6 hours ago

ವಿಸ್ತಾರ ಸಂಪಾದಕೀಯ: ಗುಜರಾತ್ ಬೆಂಕಿ ದುರಂತ ನಮಗೆ ಎಚ್ಚರಿಕೆಯ ಪಾಠವಾಗಲಿ

election commission
ಪ್ರಮುಖ ಸುದ್ದಿ6 hours ago

Election Commission : ಶೀಘ್ರದಲ್ಲೇ ಜಮ್ಮು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ; ಚುನಾವಣಾ ಆಯೋಗ

Fire Accident
ಪ್ರಮುಖ ಸುದ್ದಿ6 hours ago

Fire Accident: 9 ಮಕ್ಕಳು ಸೇರಿ 27 ಜನರ ಸಾವಿಗೆ ಕಾರಣವಾದ ಗೇಮಿಂಗ್‌ ಜೋನ್‌ಗೆ NOCಯೇ ಇರ್ಲಿಲ್ಲ!

Virat kohli
ಪ್ರಮುಖ ಸುದ್ದಿ7 hours ago

Virat kohli : ಕೊಹ್ಲಿ ಹೆಸರು ಕೂಗಿ ಪಾಕಿಸ್ತಾನ ಬೌಲರ್​​ನನ್ನು ಲೇವಡಿ ಮಾಡಿದ ಅಭಿಮಾನಿಗಳು; ಇಲ್ಲಿದೆ ವಿಡಿಯೊ

Union Minister Pralhad Joshi latest statement about channagiri case
ಕರ್ನಾಟಕ7 hours ago

Pralhad Joshi: ನೇಹಾ, ಅಂಜಲಿ ಹತ್ಯೆ ಪ್ರಕರಣದಲ್ಲಿ ಕೈಗೊಳ್ಳದ ಕ್ರಮ ಚನ್ನಗಿರಿ ಪ್ರಕರಣದಲ್ಲಿ ಏಕೆ ಎಂದ ಪ್ರಲ್ಹಾದ್‌ ಜೋಶಿ

childrens summer camp closing ceremony at yallapur
ಉತ್ತರ ಕನ್ನಡ8 hours ago

Uttara Kannada News: ಭಾರತದ ಭವಿಷ್ಯ ಸಣ್ಣ ಸಣ್ಣ ಊರುಗಳಲ್ಲಿದೆ: ಹರಿಪ್ರಕಾಶ್‌ ಕೋಣೆಮನೆ

Hardik Pandya
ಪ್ರಮುಖ ಸುದ್ದಿ8 hours ago

Hardik Pandya : ಮೊದಲ ಲವ್​ ಬ್ರೇಕ್​ಅಪ್​ ಮಾಡಿಕೊಂಡಿದ್ದ ಪಾಂಡ್ಯ; ಇಲ್ಲಿದೆ ಆರಂಭದ ಪ್ರೇಮ ಕಹಾನಿ!

Siddaramaiah
ಕರ್ನಾಟಕ8 hours ago

Siddaramaiah: ನೀವು 2 ಸಾವಿರ ಕೊಟ್ಟಿದ್ದಕ್ಕೆ ದೇವರ ದರ್ಶನ; ಧರ್ಮಸ್ಥಳದಲ್ಲಿ ಸಿದ್ದರಾಮಯ್ಯಗೆ ಸ್ತ್ರೀಯರ ಮೆಚ್ಚುಗೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ14 hours ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ3 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ4 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು5 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು5 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ6 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ7 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ7 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ7 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

ಟ್ರೆಂಡಿಂಗ್‌