T20 World Cup | ಪಾಕಿಸ್ತಾನ ತಂಡ ಸೇರಿಕೊಂಡರೇ ರೋಹಿತ್‌ ಶರ್ಮಾ, ಇಲ್ಲಿದೆ ನೋಡಿ ಅವರ ಫೋಟೊ - Vistara News

T20 ವಿಶ್ವಕಪ್

T20 World Cup | ಪಾಕಿಸ್ತಾನ ತಂಡ ಸೇರಿಕೊಂಡರೇ ರೋಹಿತ್‌ ಶರ್ಮಾ, ಇಲ್ಲಿದೆ ನೋಡಿ ಅವರ ಫೋಟೊ

ಪಾಕಿಸ್ತಾನ ತಂಡದಲ್ಲಿರುವ ರೋಹಿತ್ ಶರ್ಮಾ ತದ್ರೂಪಿ ಸಖತ್ ಸುದ್ದಿಯಾಗುತ್ತಿದ್ದಾರೆ. ರೋಹಿತ್​ ಶರ್ಮಾ ಅವರ ಮುಖದ ಚಹರೆಯನ್ನೇ ಹೋಲುವ ಈ ವ್ಯಕ್ತಿಯ ಹೆಸರು ಇಬ್ರಾಹಿಂ ಬಡೀಸ್.

VISTARANEWS.COM


on

rr
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮೆಲ್ಬೋರ್ನ್: ಅಕ್ಟೋಬರ್​ 23ರಂದು ನಡೆಯಲಿರುವ ಭಾರತ-ಪಾಕಿಸ್ತಾನ ನಡುವಿನ ಪಂದ್ಯಕ್ಕೆ (T20 World Cup) ಅಭಿಮಾನಿಗಳು ಎದುರು ನೋಡುತ್ತಿದ್ದರೆ, ಮತ್ತೊಂದೆಡೆ ಭಾರತ-ಪಾಕ್​ ಏಷ್ಯಾ ಕಪ್​ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ಮಧ್ಯೆ ಇದೀಗ ಪಾಕಿಸ್ತಾನ ತಂಡದಲ್ಲಿರುವ ರೋಹಿತ್ ಶರ್ಮಾ ಅವರನ್ನೇ ಹೋಲುವ ವ್ಯಕ್ತಿಯೊಬ್ಬರು ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ.

ಹೌದು ರೋಹಿತ್​ ಶರ್ಮಾ ಅವರ ಮುಖದ ಚಹರೆಯನ್ನೇ ಹೋಲುವ ಈ ವ್ಯಕ್ತಿಯ ಹೆಸರು ಇಬ್ರಾಹಿಂ ಬಡೀಸ್. ಇವರು ಪಾಕ್​ ತಂಡದ ಮ್ಯಾನೇಜರ್. ಇದೀಗ ಇಬ್ರಾಹಿಂ ಮತ್ತು ರೋಹಿತ್​ ಶರ್ಮಾ ಅವರ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಾಕ್ ಅಭಿಮಾನಿಗಳು ನಮ್ಮಲ್ಲೂ ರೋಹಿತ್ ಶರ್ಮಾ ಇದ್ದಾರೆ ಎಂದು ಫೋಟೊವನ್ನು ಶೇರ್ ಮಾಡುತ್ತಿದ್ದಾರೆ. ಇನ್ನು ಕೆಲವರು ಪಾಕ್​ ತಂಡದಲ್ಲಿ ರೋಹಿತ್ ಶರ್ಮಾಗೆ ಏನು ಕೆಲಸ ಎಂದು ತಮಾಷೆ ಮಾಡಿದ್ದಾರೆ.

ಇದನ್ನೂ ಓದಿ | T20 World Cup | ಎರಡನೇ ಪಂದ್ಯದಲ್ಲಿ ಭಾರತಕ್ಕೆ ನೆದರ್ಲೆಂಡ್ಸ್ ಎದುರಾಳಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Hardik Pandya: ಕೌಟುಂಬಿಕ ಸಮಸ್ಯೆ ಬದಿಗೊತ್ತಿ ಭಾರತ ತಂಡದ ಯಶಸ್ಸಿಗಾಗಿ ಕ್ರಿಕೆಟ್​ ಅಭ್ಯಾಸ ಆರಂಭಿಸಿದ ಹಾರ್ದಿಕ್​ ಪಾಂಡ್ಯ

Hardik Pandya: ಹಾರ್ದಿಕ್ ಪಾಂಡ್ಯ(Hardik Pandya) ಅವರು ಪತ್ನಿ, ಸರ್ಬಿಯಾದ ನಟಿ ನತಾಶಾ ಸ್ಟಾನ್‌ಕೋವಿಕ್‌(Natasa Stankovic) ಅವರಿಗೆ ವಿಚ್ಛೇದನ ನೀಡಲಿದ್ದಾರೆ ಎಂಬ ಮಾತುಗಳು ಕೆಲದಿನಗಳಿಂದ ಭಾರೀ ಚರ್ಚೆಗೆ ಗ್ರಾಸವಾಗಿದೆ. ಜತೆಗೆ ವಿಚ್ಛೇದನ(Hardik Pandya and Natasa Stankovic divorce) ಪ್ರಕ್ರಿಯೆಯ ಭಾಗವಾಗಿ, ಹಾರ್ದಿಕ್ ಪಾಂಡ್ಯ ಅವರು ತಮ್ಮ ಆಸ್ತಿಯಲ್ಲಿ ಶೇ. 70 ರಷ್ಟು ಭಾಗವನ್ನು ನತಾಶಾಗೆ ವರ್ಗಾಯಿಸಬೇಕಿದೆ ಎನ್ನಲಾಗಿದೆ.

VISTARANEWS.COM


on

Hardik Pandya
Koo

ನ್ಯೂಯಾರ್ಕ್​: ಟಿ20 ವಿಶ್ವಕಪ್(T20 world cup 2024)​ ಟೂರ್ನಿಗಾಗಿ ಈಗಾಗಲೇ ನ್ಯೂಯಾರ್ಕ್(eam India in New York)​ ತಲುಪಿರುವ ಟೀಮ್​ ಇಂಡಿಯಾದ(Team India ) ಮೊದಲ ಬ್ಯಾಚ್​ ಅಭ್ಯಾಸ ಆರಂಭಿಸಿದೆ. ಆಟಗಾರರು ಅಭ್ಯಾಸ ನಿರತ ವಿಡಿಯೊವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದೆ. ಕೌಟುಂಬಿಕ ಸಮಸ್ಯೆಯನ್ನು ಬದಿಗೊತ್ತಿ ಹಾರ್ದಿಕ್​ ಪಾಂಡ್ಯ(Hardik Pandya) ಕೂಡ ತಂಡದ ಯಶಸ್ಸಿಗಾಗಿ ಟಿ20 ಆಡಲು ಸಜ್ಜಾಗಿದ್ದಾರೆ. ಲಂಡನ್​ನಿಂದ ನೇರವಾಗಿ ನ್ಯೂಯಾರ್ಕ್​ಗೆ ಬಂದಿಳಿದ ಪಾಂಡ್ಯ ಟೀಮ್​ ಇಂಡಿಯಾ ಜತೆ ಅಭ್ಯಾಸ ನಡೆಸಿದ್ದಾರೆ.

ಟೀಮ್​ ಇಂಡಿಯಾದ ದ್ವಿತೀಯ ಬ್ಯಾಚ್​ ಇಂದು ನ್ಯೂಯಾರ್ಕ್​ಗೆ ತಲುಪಲಿದೆ. ಗುರುವಾರದಿಂದ ಈ ಆಟಗಾರರು ಕೂಡ ಅಭ್ಯಾಸ ಆರಂಭಿಸಲಿದ್ದಾರೆ. ವಿರಾಟ್​ ಕೊಹ್ಲಿ ಮತ್ತು ಸಂಜು ಸ್ಯಾಮ್ಸನ್​ ತಮ್ಮ ವೈಯಕ್ತಿಕ ಕಾರಣಗಳಿಂದ ತಂಡ ಸೇರುವುದು ಕೊಂಚ ತಡವಾಗಲಿದೆ ಎಂದು ಬಿಸಿಸಿಐ ಈಗಾಗಲೇ ತಿಳಿಸಿದೆ. ಕೊಹ್ಲಿ ಬಾಂಗ್ಲಾದೇಶ ವಿರುದ್ಧದ ಏಕೈಕ ಅಭ್ಯಾಸ ಪಂದ್ಯಕ್ಕೂ ಅಲಭ್ಯರಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಕೊಹ್ಲಿ ಮೇ 30ಕ್ಕೆ ಚಾರ್ಟರ್​ ವಿಮಾನದಲ್ಲಿ ಪ್ರಯಾಣಿಸಲಿದ್ದಾರೆ ಎನ್ನಲಾಗಿದೆ.

ಹಾರ್ದಿಕ್ ಪಾಂಡ್ಯ(Hardik Pandya) ಅವರು ಪತ್ನಿ, ಸರ್ಬಿಯಾದ ನಟಿ ನತಾಶಾ ಸ್ಟಾನ್‌ಕೋವಿಕ್‌(Natasa Stankovic) ಅವರಿಗೆ ವಿಚ್ಛೇದನ ನೀಡಲಿದ್ದಾರೆ ಎಂಬ ಮಾತುಗಳು ಕೆಲದಿನಗಳಿಂದ ಭಾರೀ ಚರ್ಚೆಗೆ ಗ್ರಾಸವಾಗಿದೆ. ಜತೆಗೆ ವಿಚ್ಛೇದನ(Hardik Pandya and Natasa Stankovic divorce) ಪ್ರಕ್ರಿಯೆಯ ಭಾಗವಾಗಿ, ಹಾರ್ದಿಕ್ ಪಾಂಡ್ಯ ಅವರು ತಮ್ಮ ಆಸ್ತಿಯಲ್ಲಿ ಶೇ. 70 ರಷ್ಟು ಭಾಗವನ್ನು ನತಾಶಾಗೆ ವರ್ಗಾಯಿಸಬೇಕಿದೆ ಎನ್ನಲಾಗಿದೆ. ಈ ಎಲ್ಲ ಮಾತುಗಳ ಮಧ್ಯೆಯೂ ಪಾಂಡ್ಯ ದೇಶದ ಕರ್ತವ್ಯಕ್ಕೆ ಹಾಜರಾಗಿದ್ದು ಟಿ20 ವಿಶ್ವಕಪ್​ಗೆ ಅಭ್ಯಾಸ ಆರಂಭಿಸಿದ್ದಾರೆ. ಇದಕ್ಕೆ ಅನೇಕ ನೆಟ್ಟಿಗರು ಪಾಂಡ್ಯಗೆ ಮೆಚ್ಚುಗೆ ಸೂಚಿಸಿದ್ದಾರೆ.

ಇದನ್ನೂ ಓದಿ T20 World Cup : ಭಾರತ- ಪಾಕ್ ಪಂದ್ಯ ಐಸಿಸ್​ ಉಗ್ರರಿಂದ ಬಾಂಬ್ ಬೆದರಿಕೆ

ಭಾರತ ತನ್ನ ಮೊದಲ ಲೀಗ್​ ಪಂದ್ಯವನ್ನು ಜೂನ್‌ 5 ರಂದು ಐರ್ಲೆಂಡ್​ ವಿರುದ್ಧ ಆಡಲಿದೆ. ಭಾರತವು ತನ್ನ ಗುಂಪು ಹಂತದ ಎಲ್ಲಾ ಪಂದ್ಯಗಳನ್ನು ಅಮೆರಿಕದಲ್ಲೇ ಆಡಲಿದೆ. ಲೀಗ್​ ಮುಕ್ತಾಯದ ಬಳಿಕ ಮುಂದಿನ ಹಂತಕ್ಕೆ ಅರ್ಹತೆ ಪಡೆದರೆ, ಸೂಪರ್ 8 ಪಂದ್ಯಗಳನ್ನು ಸಹ ಇಲ್ಲೇ ಆಡಲಿದೆ.

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್​ ಕೀಪರ್​), ಸಂಜು ಸ್ಯಾಮ್ಸನ್ (ವಿಕೆಟ್​ ಕೀಪರ್​), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಅರ್ಶದೀಪ್​ ಸಿಂಗ್​, ಜಸ್​ಪ್ರೀತ್​ ಬುಮ್ರಾ, ಮೊಹಮ್ಮದ್​ ಸಿರಾಜ್. ಮೀಸಲು ಆಟಗಾರರು ಶುಭಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ ಮತ್ತು ಅವೇಶ್ ಖಾನ್.

ಭಾರತದ ಪಂದ್ಯಗಳು

ದಿನಾಂಕಎದುರಾಳಿಸ್ಥಳ
ಜೂನ್​ 5ಐರ್ಲೆಂಡ್​ನ್ಯೂಯಾರ್ಕ್​
ಜೂನ್​ 9ಪಾಕಿಸ್ತಾನನ್ಯೂಯಾರ್ಕ್​
ಜೂನ್​ 12ಅಮೆರಿಕನ್ಯೂಯಾರ್ಕ್
ಜೂನ್​ 15ಕೆನಡಾಫ್ಲೋರಿಡಾ


Continue Reading

ಕ್ರೀಡೆ

T20 World Cup 2024: ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್​ ಕಿತ್ತ ಟಾಪ್​ 5 ಬೌಲರ್​ಗಳು ಯಾರು?

T20 World Cup 2024: ಪಾಕಿಸ್ತಾನ ತಂಡದ ಮಾಜಿ ನಾಯಕ ಹಾಗೂ ಆಟಗಾರ ಶಾಹೀದ್ ಅಫ್ರಿದಿಗೆ(Shahid Afridi) ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್​ ಕಿತ್ತ ಬೌಲರ್​ಗಳ ಯಾದಿಯಲ್ಲಿ ದ್ವಿತೀಯ ಸ್ಥಾನ. 2007 ರಿಂದ 2016ರ ತನಕ ಒಟ್ಟು 34 ಪಂದ್ಯಗಳನ್ನಾಡಿರುವ ಅಫ್ರಿದಿ 39 ವಿಕೆಟ್​ ಉರುಳಿಸಿದ್ದಾರೆ.

VISTARANEWS.COM


on

T20 World Cup 2024
Koo

ಬೆಂಗಳೂರು: 9ನೇ ಆವೃತ್ತಿಯ ಐಸಿಸಿ ಪುರುಷರ ಟಿ20 ವಿಶ್ವಕಪ್​ ಟೂರ್ನಿ(T20 World Cup 2024) ಆರಂಭಕ್ಕೆ ಇನ್ನು ಬೆರಳೆಣಿಕೆ ದಿನಗಳ ಮಾತ್ರ ಬಾಕಿ ಉಳಿದಿವೆ. ಜೂನ್​ 1ರಿಂದ ಆರಂಭವಾಗಿ 29ರ ತನಕ ಪಂದ್ಯಾವಳಿಗಳು ಸಾಗಲಿದೆ. ಉದ್ಘಾಟನ ಪಂದ್ಯದಲ್ಲಿ ಆತಿಥೇಯ ಅಮೆರಿಕ ಮತ್ತು ಕೆನಾಡ ಮುಖಾಮುಖಿಯಾಗಲಿವೆ. ಇದುವರೆಗಿನ 8 ಆವೃತ್ತಿಯ ಮಿನಿ ವಿಶ್ವಕಪ್​ ಸಮರದಲ್ಲಿ ಅತ್ಯಧಿಕ ವಿಕೆಟ್​ ಕಿತ್ತ ಬೌಲರ್​ಗಳು ಯಾರೆಂಬ ಕುತೂಹಲಕಾರಿ ಮಾಹಿತಿ ಇಂತಿದೆ.

ಶಕೀಬ್ ಅಲ್ ಹಸನ್


ಬಾಂಗ್ಲಾದೇಶ ಕ್ರಿಕೆಟ್ ತಂಡದ ಹಿರಿಯ ಆಲ್​ರೌಂಡರ್​ ಶಕೀಬ್ ಅಲ್ ಹಸನ್(Shakib Al Hasan) ಅವರು ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್​ ಕಿತ್ತ ಬೌಲರ್​ ಎನಿಸಿಕೊಂಡಿದ್ದಾರೆ. ಜತೆಗೆ ಉದ್ಘಾಟನ ಆವೃತ್ತಿಯಿಂದ ಇದುವರೆಗಿನ ಎಲ್ಲ ಆವೃತ್ತಿಯಲ್ಲಿಯೂ ಆಡಿದ ಆಟಗಾರನೂ ಆಗಿದ್ದಾರೆ. ಒಟ್ಟು 36 ಪಂದ್ಯಗಳನ್ನಾಡಿ 47 ವಿಕೆಟ್​ ಕೆಡವಿದ್ದಾರೆ. ಈ ಬಾರಿ ಮೂರು ವಿಕೆಟ್​ ಕಿತ್ತರೆ 50 ವಿಕೆಟ್​ ಕಿತ್ತ ಸಾಧನೆ ಮಾಡಲಿದ್ದಾರೆ. 9 ರನ್​ಗೆ 4 ವಿಕೆಟ್​ ಕಿತ್ತದ್ದು ಅವರ ವೈಯಕ್ತಿಕ ಸಾಧನೆಯಾಗಿದೆ.


ಶಾಹೀದ್ ಅಫ್ರಿದಿ


ಪಾಕಿಸ್ತಾನ ತಂಡದ ಮಾಜಿ ನಾಯಕ ಹಾಗೂ ಆಟಗಾರ ಶಾಹೀದ್ ಅಫ್ರಿದಿಗೆ(Shahid Afridi) ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್​ ಕಿತ್ತ ಬೌಲರ್​ಗಳ ಯಾದಿಯಲ್ಲಿ ದ್ವಿತೀಯ ಸ್ಥಾನ. 2007 ರಿಂದ 2016ರ ತನಕ ಒಟ್ಟು 34 ಪಂದ್ಯಗಳನ್ನಾಡಿರುವ ಅಫ್ರಿದಿ 39 ವಿಕೆಟ್​ ಉರುಳಿಸಿದ್ದಾರೆ. 11 ರನ್​ಗೆ 4 ವಿಕೆಟ್​ ಪಡೆದದ್ದು ಅವರ ವೈಯಕ್ತಿಕ ಶ್ರೇಷ್ಠ ಸಾಧನೆಯಾಗಿದೆ.


ಲಸಿತ್ ಮಾಲಿಂಗ


ಶ್ರೀಲಂಕಾ ತಂಡದ ಮಾಜಿ ವೇಗಿ ಲಸಿತ್ ಮಾಲಿಂಗ(Lasith Malinga) 2007 ರಿಂದ 2014ರ ತನಕ ಒಟ್ಟು 31 ಟಿ20 ವಿಶ್ವಕಪ್​ ಪಂದ್ಯಗಳನ್ನಾಡಿ 38 ವಿಕೆಟ್​ ಪಡೆದಿದ್ದಾರೆ. 31 ರನ್​ಗೆ 5 ವಿಕೆಟ್​ ಉರುಳಿಸಿದ್ದು ಅವರ ವೈಯಕ್ತಿಕ ಶ್ರೇಷ್ಠ ಸಾಧನೆಯಾಗಿದೆ. ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್​ ಕಿತ್ತ ಮೂರನೇ ಅಟಗಾರ ಎನಿಸಿಕೊಂಡಿದ್ದಾರೆ.

ಇದನ್ನೂ ಓದಿ T20 World Cup 2024: 2ನೇ ಬ್ಯಾಚ್​ನಲ್ಲಿ ನ್ಯೂಯಾರ್ಕ್​ಗೆ ತೆರಳಿದ ಭಾರತದ ಮೂವರು ಆಟಗಾರರು


ಸಯೀದ್ ಅಜ್ಮಲ್


ಪಾಕಿಸ್ತಾನ ತಂಡದ ಮಾಜಿ ಸ್ಪಿನ್​​ ಬೌಲರ್​ ಸಯೀದ್ ಅಜ್ಮಲ್(Saeed Ajmal) ಅವರು ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್​ ಕಿತ್ತ ಬೌಲರ್​ಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. 2009 ರಿಂದ 2014ರ ತನಕ 23 ಪಂದ್ಯಗಳನ್ನು ಆಡಿದ ಅವರು 36 ವಿಕೆಟ್​ ಕಡೆವಿದ್ದಾರೆ.


ಅಜಂತಾ ಮೆಂಡೀಸ್​


ಶ್ರೀಲಂಕಾ ತಂಡದ ಮಾಜಿ ಸ್ಪಿನ್ನರ್‌ ಅಜಂತಾ ಮೆಂಡೀಸ್‌(Ajantha Mendis) 2009 ರಿಂದ 2014 ತನಕ ಒಟ್ಟು 21 ಪಂದ್ಯಗಳನ್ನಾಡಿ 35 ವಿಕೆಟ್​ ಕಿತ್ತಿದ್ದಾರೆ. ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್​ ಕಿತ್ತ ಬೌಲರ್​ಗಳ ಪಟ್ಟಿಯಲ್ಲಿ 5ನೇ ಸ್ಥಾನ ಪಡೆದಿದ್ದಾರೆ. ಪ್ರಸಕ್ತ ಟಿ20 ಆಡುತ್ತಿರುವ ನ್ಯೂಜಿಲ್ಯಾಂಡ್​ ತಂಡದ ಹಿರಿಯ ವೇಗಿ ಟಿಮ್​ ಸೌಥಿ 7 ವಿಕೆಟ್​ ಕಿತ್ತರೆ ಮೆಂಡೀಸ್​ ದಾಖಲೆ ಪತನಗೊಳ್ಳಲಿದೆ. ಸದ್ಯ ಸೌಥಿ 29* ವಿಕೆಟ್​ ಕಿತ್ತಿದ್ದಾರೆ.

ಇದನ್ನೂ ಓದಿ T20 World Cup 2024: ಟಿ20 ವಿಶ್ವಕಪ್​ನಲ್ಲಿ ಅತ್ಯಧಿಕ ಸಿಕ್ಸರ್​ ಬಾರಿಸಿದ ಭಾರತದ ಬ್ಯಾಟರ್​ಗಳಿವರು

Continue Reading

ಕ್ರೀಡೆ

T20 World Cup 2024: 2ನೇ ಬ್ಯಾಚ್​ನಲ್ಲಿ ನ್ಯೂಯಾರ್ಕ್​ಗೆ ತೆರಳಿದ ಭಾರತದ ಮೂವರು ಆಟಗಾರರು

T20 World Cup 2024: ವಿರಾಟ್​ ಕೊಹ್ಲಿ ಮತ್ತು ಸಂಜು ಸ್ಯಾಮ್ಸನ್​ ತಮ್ಮ ವೈಯಕ್ತಿಕ ಕಾರಣಗಳಿಂದ ತಂಡ ಸೇರುವುದು ಕೊಂಚ ತಡವಾಗಲಿದೆ ಎಂದು ಬಿಸಿಸಿಐ ಈಗಾಗಲೇ ತಿಳಿಸಿದೆ. ಕೊಹ್ಲಿ ಬಾಂಗ್ಲಾದೇಶ ವಿರುದ್ಧದ ಏಕೈಕ ಅಭ್ಯಾಸ ಪಂದ್ಯಕ್ಕೂ ಅಲಭ್ಯರಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

VISTARANEWS.COM


on

T20 World Cup 2024
Koo

ಮುಂಬಯಿ: ಟಿ20 ವಿಶ್ವಕಪ್(T20 World Cup 2024)​ ಆಡಲು ಭಾರತ ತಂಡದ 2ನೇ ಬ್ಯಾಚ್​ ಕೂಡ ನ್ಯೂಯಾರ್ಕ್​ಗೆ ಪ್ರಯಾಣ ಬೆಳೆಸಿದೆ. ಸೋಮವಾರ ತಡರಾತ್ರಿ ಯಜುವೇಂದ್ರ ಚಹಲ್(Yuzvendra Chahal)​, ಅವೇಶ್​ ಖಾನ್(Avesh Khan)​ ಮತ್ತು ಯಶಸ್ವಿ ಜೈಸ್ವಾಲ್(Yashasvi Jaiswal)​ ಮೂವರು ಮುಂಬೈಯಿಂದ ಪ್ರಯಾಣಿಸಿದರು. ಮೂರನೇ ಬ್ಯಾಚ್​ ಇಂದು ಪ್ರಯಾಣಿಸಲಿದೆ. ಈಗಾಗಲೇ ಮೊದಲ ಬ್ಯಾಚ್​ನಲ್ಲಿ ಪ್ರಯಾಣಿಸಿದ ತಂಡದ ನಾಯಕ ರೋಹಿತ್​ ಶರ್ಮ, ಕೋಚ್​ ರಾಹುಲ್​ ದ್ರಾವಿಡ್​, ರಿಷಭ್​ ಪಂತ್​, ಕುಲ್​ದೀಪ್​ ಯಾದವ್​, ಜಸ್​ಪ್ರೀತ್​ ಬುಮ್ರಾ ಸೇರಿ ಬಹುತೇಕ ಆಟಗಾರರು ನ್ಯೂಯಾರ್ಕ್​ಗೆ ತಲುಪಿದ್ದಾರೆ. ಆಟಗಾರರು ತಲುಪಿದ ವಿಚಾರವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ವಿಡಿಯೊ ಹಂಚಕೊಳ್ಳುವ ಮೂಲಕ ತಿಳಿಸಿದೆ.

ವಿರಾಟ್​ ಕೊಹ್ಲಿ ಮತ್ತು ಸಂಜು ಸ್ಯಾಮ್ಸನ್​ ತಮ್ಮ ವೈಯಕ್ತಿಕ ಕಾರಣಗಳಿಂದ ತಂಡ ಸೇರುವುದು ಕೊಂಚ ತಡವಾಗಲಿದೆ ಎಂದು ಬಿಸಿಸಿಐ ಈಗಾಗಲೇ ತಿಳಿಸಿದೆ. ಕೊಹ್ಲಿ ಬಾಂಗ್ಲಾದೇಶ ವಿರುದ್ಧದ ಏಕೈಕ ಅಭ್ಯಾಸ ಪಂದ್ಯಕ್ಕೂ ಅಲಭ್ಯರಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಕೊಹ್ಲಿ ಮೇ 30ಕ್ಕೆ ಚಾರ್ಟರ್​ ವಿಮಾನದಲ್ಲಿ ಪ್ರಯಾಣಿಸಲಿದ್ದಾರೆ ಎನ್ನಲಾಗಿದೆ.

ಏಷ್ಯಾ ಕಪ್​ ಮತ್ತು ಏಕದಿನ ವಿಶ್ವಕಪ್​ನಲ್ಲಿ ಅವಕಾಶ ಸಿಗದ ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರಿಗೆ ಐಪಿಎಲ್​ ಪ್ರದರ್ಶನ ನೋಡಿ ಟಿ20ಯಲ್ಲಿ ಅವಕಾಶ ನೀಡಲಾಗಿದೆ. ಚಹಲ್​ ಇದುವರೆಗೆ ಭಾರತ ಪರ 72 ಏಕದಿನ ಪಂದ್ಯಗಳಿಂದ 121 ವಿಕೆಟ್​, 80 ಟಿ20 ಆಡಿ 96 ವಿಕೆಟ್​ ಕಡೆವಿದ್ದಾರೆ. ಇದುವರೆಗೂ ಟೆಸ್ಟ್​ ಕ್ರಿಕೆಟ್​ ಆಡಿಲ್ಲ.


2ನೇ ಬ್ಯಾಚ್​ನಲ್ಲಿ ಪ್ರಯಾಣಿಸಿದ ಯಜುವೇಂದ್ರ ಚಹಲ್​, ಅವೇಶ್​ ಖಾನ್​ ಮತ್ತು ಯಶಸ್ವಿ ಜೈಸ್ವಾಲ್ ರಾಜಸ್ಥಾನ್​ ರಾಯಲ್ಸ್​ ತಂಡದ ಆಟಗಾರರಾಗಿದ್ದಾರೆ. ಸನ್​ರೈಸರ್ಸ್ ಹೈದರಾಬಾದ್​ ವಿರುದ್ಧದ ದ್ವಿತೀಯ ಕ್ವಾಲಿಫೈಯರ್​ ಪಂದ್ಯದಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದಿತ್ತು.

ಭಾರತ ತನ್ನ ಮೊದಲ ಲೀಗ್​ ಪಂದ್ಯವನ್ನು ಜೂನ್‌ 5 ರಂದು ಐರ್ಲೆಂಡ್​ ವಿರುದ್ಧ ಆಡಲಿದೆ. ಭಾರತವು ತನ್ನ ಗುಂಪು ಹಂತದ ಎಲ್ಲಾ ಪಂದ್ಯಗಳನ್ನು ಅಮೆರಿಕದಲ್ಲೇ ಆಡಲಿದೆ. ಲೀಗ್​ ಮುಕ್ತಾಯದ ಬಳಿಕ ಮುಂದಿನ ಹಂತಕ್ಕೆ ಅರ್ಹತೆ ಪಡೆದರೆ, ಸೂಪರ್ 8 ಪಂದ್ಯಗಳನ್ನು ಸಹ ಇಲ್ಲೇ ಆಡಲಿದೆ.

ಇದನ್ನೂ ಓದಿ T20 World Cup 2024: ಟಿ20 ವಿಶ್ವಕಪ್​ನಲ್ಲಿ ಅತ್ಯಧಿಕ ಸಿಕ್ಸರ್​ ಬಾರಿಸಿದ ಭಾರತದ ಬ್ಯಾಟರ್​ಗಳಿವರು

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್​ ಕೀಪರ್​), ಸಂಜು ಸ್ಯಾಮ್ಸನ್ (ವಿಕೆಟ್​ ಕೀಪರ್​), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಅರ್ಶದೀಪ್​ ಸಿಂಗ್​, ಜಸ್​ಪ್ರೀತ್​ ಬುಮ್ರಾ, ಮೊಹಮ್ಮದ್​ ಸಿರಾಜ್. ಮೀಸಲು ಆಟಗಾರರು ಶುಭಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ ಮತ್ತು ಅವೇಶ್ ಖಾನ್.

ಭಾರತದ ಪಂದ್ಯಗಳು

ದಿನಾಂಕಎದುರಾಳಿಸ್ಥಳ
ಜೂನ್​ 5ಐರ್ಲೆಂಡ್​ನ್ಯೂಯಾರ್ಕ್​
ಜೂನ್​ 9ಪಾಕಿಸ್ತಾನನ್ಯೂಯಾರ್ಕ್​
ಜೂನ್​ 12ಅಮೆರಿಕನ್ಯೂಯಾರ್ಕ್
ಜೂನ್​ 15ಕೆನಡಾಫ್ಲೋರಿಡಾ


Continue Reading

ಕ್ರೀಡೆ

T20 World Cup 2024: ಮಿನಿ ವಿಶ್ವಕಪ್​ ಸಮರದಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್‌ ಗಳಿಸಿದ ದಾಂಡಿಗರಿವರು!

T20 World Cup 2024: ಪಾಕಿಸ್ತಾನ ತಂಡದ ಮಾಜಿ ಆಟಗಾರ ಅಹ್ಮದ್​ ಶೆಹಜಾದ್​ 2014ರ ಟಿ20 ವಿಶ್ವ ಕಪ್​ನಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ 62 ಎಸೆತ ಎದುರಿಸಿ 10 ಬೌಂಡರಿ ಹಾಗೂ 5 ಸಿಕ್ಸರ್​ ನೆರವಿನಿಂದ ಅಜೇಯ 111 ರನ್​ ಗಳಿಸಿದ್ದರು. ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್‌ ಗಳಿಸಿದ ಆಟಗಾರರ ಯಾದಿಯಲ್ಲಿ ಶೆಹಜಾದ್ 4ನೇ ಸ್ಥಾನಿಯಾಗಿದ್ದಾರೆ.

VISTARANEWS.COM


on

T20 World Cup 2024
Koo

ಬೆಂಗಳೂರು: ಕಳೆದ ಮೂರು ತಿಂಗಳುಗಳ ಕಾಲ ಐಪಿಎಲ್​ ಗುಂಗಿನಲ್ಲಿದ್ದ ಕ್ರಿಕೆಟ್​ ಪ್ರೇಮಿಗಳು ಇನ್ನು ಟಿ20 ವಿಶ್ವಕಪ್​(T20 World Cup 2024) ಕಡೆ ತೆರೆದುಕೊಳ್ಳಲಿದ್ದಾರೆ. ವೆಸ್ಟ್ ಇಂಡೀಸ್​ ಮತ್ತು ಅಮೆರಿಕ ಆತಿಥ್ಯದಲ್ಲಿ ಟಿ20 ವಿಶ್ವಕಪ್​ ನಡೆಯಲಿದ್ದು ಟೂರ್ನಿ ಆರಂಭಕ್ಕೆ ಇನ್ನು ಕೇವಲ 4 ದಿನ ಮಾತ್ರ ಉಳಿದುಕೊಂಡಿದೆ. ಇದುವರೆಗಿನ 8 ಆವೃತ್ತಿಯ ಟಿ20 ವಿಶ್ವ ಕಪ್​ ಟೂರ್ನಿಯ ಇತಿಹಾಸದಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್‌ ಗಳಿಸಿದ ಅಗ್ರ 5 ಆಟಗಾರರನ್ನು ಪಟ್ಟಿ ಮಾಡಲಾಗಿದ್ದು ಈ ವಿವರ ಇಂತಿದೆ.

ಬ್ರೆಂಡನ್ ಮೆಕಲಮ್ (ನ್ಯೂಜಿಲೆಂಡ್‌)


ಟಿ20 ವಿಶ್ವ ಕಪ್ ಕೂಟದಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ಮಾಡಿದ ದಾಖಲೆ ನ್ಯೂಜಿಲ್ಯಾಂಡ್​ ತಂಡದ ಮಾಜಿ ನಾಯಕ ಬ್ರೆಂಡನ್ ಮೆಕಲಮ್(BB McCullum) ಅವರ ಹೆಸರಿನಲ್ಲಿದೆ. ಬಾಂಗ್ಲಾದೇಶದ ವಿರುದ್ಧ 2012ರ ಆವೃತ್ತಿಯ ಆರಂಭಿಕ ಪಂದ್ಯದ ವೇಳೆ ಮೆಕಲಮ್ 58 ಎಸೆತಗಳಲ್ಲಿ 123 ರನ್ ಗಳಿಸಿದ್ದರು. ಈ ಇನಿಂಗ್ಸ್ ವೇಳೆ ಅವರ ಬ್ಯಾಟ್‌ನಿಂದ 11 ಬೌಂಡರಿ ಮತ್ತು ಏಳು ಸಿಕ್ಸರ್​ ಸಿಡಿಯಲ್ಪಟ್ಟಿತು. ಇದು ಸದ್ಯ ದಾಖಲೆಯಾಗಿಯೇ ಉಳಿದಿದೆ.


ಕ್ರಿಸ್​ ಗೇಲ್​ (ವೆಸ್ಟ್‌ ಇಂಡೀಸ್‌)


2007ರ ಟಿ20 ವಿಶ್ವ ಕಪ್‌ನ ಉದ್ಘಾಟನಾ ಆವೃತ್ತಿಯ ಮೊದಲ ಪಂದ್ಯದಲ್ಲಿ “ಯೂನಿವರ್ಸ್ ಬಾಸ್” ಖ್ಯಾತಿಯ ವಿಂಡೀಸ್​ ದೈತ್ಯ ಕ್ರಿಸ್ ಗೇಲ್(Chris Gayl), ದಕ್ಷಿಣ ಆಫ್ರಿಕಾ ವಿರುದ್ಧ ಕೇವಲ 57 ಎಸೆತಗಳಲ್ಲಿ 7 ಬೌಂಡರಿಗಳು ಮತ್ತು 10 ಸಿಕ್ಸರ್‌ಗಳನ್ನು ಒಳಗೊಂಡ ಇನಿಂಗ್ಸ್​ನಲ್ಲಿ 117 ರನ್ ಗಳಿಸಿದರು. ಗೇಲ್​ ಅವರ ಈ ಸ್ಫೋಟಕ ಇನಿಂಗ್ಸ್​ ವೇಳೆ 88 ರನ್​ ಕೇವಲ ಸಿಕ್ಸರ್​ ಮತ್ತು ಬೌಂಡರಿಯಿಂದ ಒಟ್ಟುಗೂಡಿದ್ದವು.


ಅಲೆಕ್ಸ್ ಹೇಲ್ಸ್ (ಇಂಗ್ಲೆಂಡ್‌)

ಇಂಗ್ಲೆಂಡ್​ ಕ್ರಿಕೆಟ್​ ತಂಡದ ಬಲಗೈ ದಾಂಡಿಗ ಅಲೆಕ್ಸ್ ಹೇಲ್ಸ್(Alex Hales) ಈ ಯಾದಿಯಲ್ಲಿ ಮೂರನೇ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ. 2014ರ ಟಿ20 ವಿಶ್ವ ಕಪ್​ನಲ್ಲಿ ಶ್ರೀಲಂಕಾ ವಿರುದ್ಧ 64 ಎಸೆತಗಳಲ್ಲಿ ಅಜೇಯ 116 ರನ್ ಗಳಿಸಿದ್ದರು. ಈ ವೇಳೆ 11 ಬೌಂಡರಿ ಮತ್ತು 6 ಸಿಕ್ಸರ್​ ಸಿಡಿಯಲ್ಪಟ್ಟಿತು.

ಇದನ್ನೂ ಓದಿ T20 World Cup 2024: ಟಿ20 ವಿಶ್ವಕಪ್​ ಇತಿಹಾಸದಲ್ಲಿ ಎಂದೂ ಮರೆಯದ ಸ್ಮರಣೀಯ ಸನ್ನಿವೇಶಗಳಿವು


ಅಹ್ಮದ್​ ಶೆಹಜಾದ್​ (ಪಾಕಿಸ್ತಾನ)


ಪಾಕಿಸ್ತಾನ ತಂಡದ ಮಾಜಿ ಆಟಗಾರ ಅಹ್ಮದ್​ ಶೆಹಜಾದ್​ 2014ರ ಟಿ20 ವಿಶ್ವ ಕಪ್​ನಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ 62 ಎಸೆತ ಎದುರಿಸಿ 10 ಬೌಂಡರಿ ಹಾಗೂ 5 ಸಿಕ್ಸರ್​ ನೆರವಿನಿಂದ ಅಜೇಯ 111 ರನ್​ ಗಳಿಸಿದ್ದರು. ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್‌ ಗಳಿಸಿದ ಆಟಗಾರರ ಯಾದಿಯಲ್ಲಿ ಶೆಹಜಾದ್ 4ನೇ ಸ್ಥಾನಿಯಾಗಿದ್ದಾರೆ.


ರಿಲೀ ರೋಸೊ


ದಕ್ಷಿಣ ಆಫ್ರಿಕಾ ತಂಡದ ಮಧ್ಯಮ ಕ್ರಮಾಂಕದ ಎಡಗೈ ಬ್ಯಾಟರ್​ ರಿಲೀ ರೋಸೊ ಅವರು ವಿಶ್ವಕಪ್​ ಟೂರ್ನಿಯಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್‌ ಗಳಿಸಿದ ಆಟಗಾರರ ಯಾದಿಯಲ್ಲಿ 5ನೇ ಸ್ಥಾನಿಯಾಗಿದ್ದಾರೆ. ಕಳೆದ 2022ರಲ್ಲಿ ಆಸ್ಟ್ರೇಲಿಯಾ ಆತಿಥ್ಯದಲ್ಲಿ ನಡೆದಿದ್ದ ಟೂರ್ನಿಯಲ್ಲಿ ರೋಸೊ ಬಾಂಗ್ಲಾದೇಶ ವಿರುದ್ಧ ಸಿಡ್ನಿಯಲ್ಲಿ ನಡೆದಿದ್ದ ಪಂದ್ಯದಲ್ಲಿ 56 ಎಸೆತಗಳಿಂದ 7 ಬೌಂಡರಿ ಮತ್ತು 8 ಸಿಕ್ಸರ್​ ನೆರವಿನಿಂದ 109 ರನ್​ ಬಾರಿಸಿದ್ದರು. ಸದ್ಯ ಈ ಆಟಗಾರರ ಹೆಸರಿನಲ್ಲಿರುವ ದಾಖಲೆಯನ್ನು ಈ ಬಾರಿ ಯಾರು ಮುರಿಯಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ T20 World Cup 2024: ಟಿ20 ವಿಶ್ವ ಕಪ್​ನಲ್ಲಿ ಟೀಮ್​ ಇಂಡಿಯಾದ ಮುಂದಿರುವ ಸವಾಲುಗಳೇನು?

Continue Reading
Advertisement
Missing Case
ಕರ್ನಾಟಕ5 mins ago

Missing Case: ಚಿಕ್ಕಬಳ್ಳಾಪುರದಲ್ಲಿ ಯುವತಿಯರ ನಾಪತ್ತೆ ಕೇಸ್‌ಗಳು ಹೆಚ್ಚಳ; ಒಂದೇ ವಾರದಲ್ಲಿ ಇಬ್ಬರು ಮಿಸ್ಸಿಂಗ್‌!

Prajwal Revanna Case
ಕರ್ನಾಟಕ11 mins ago

Prajwal Revanna Case: ಭಾರತಕ್ಕೆ ಬರುವ ಮೊದಲೇ ಜಾಮೀನಿಗಾಗಿ ಪ್ರಜ್ವಲ್‌ ಅರ್ಜಿ ಸಲ್ಲಿಕೆ; ಮುಂದೇನಾಗತ್ತೆ?

Virat Kohli
ಕ್ರೀಡೆ29 mins ago

Virat Kohli: ನ್ಯೂಯಾರ್ಕ್‌ನಲ್ಲಿ ಭಾರತ ತಂಡದ ಕಠಿಣ ಅಭ್ಯಾಸ; ಮುಂಬೈನಲ್ಲಿ ಪಾರ್ಟಿ ಮಾಡುತ್ತಾ ಎಂಜಾಯ್​ ಮಾಡುತ್ತಿರುವ ಕೊಹ್ಲಿ

PM Narendra Modi
ದೇಶ42 mins ago

PM Narendra Modi: ಒಡಿಶಾ ಸಿಎಂ ಆರೋಗ್ಯ ಹದಗೆಟ್ಟಿರುವ ಹಿಂದೆ ಇದ್ಯಾ ಭಾರೀ ಸಂಚು? ಏನಂದ್ರು ಪ್ರಧಾನಿ ಮೋದಿ?-ವಿಡಿಯೋ ಇದೆ

Arvind Kejriwal
ದೇಶ43 mins ago

Arvind Kejriwal: ಕಾಂಗ್ರೆಸ್‌ ಜತೆ ನಮ್ಮ ‘ಮದುವೆ’ ಶಾಶ್ವತ ಅಲ್ಲ ಎಂದ ಕೇಜ್ರಿವಾಲ್;‌ ‘ಡಿವೋರ್ಸ್‌’ ಯಾವಾಗ?

Love Jihad
ಪ್ರಮುಖ ಸುದ್ದಿ46 mins ago

Love Jihad: ಲವ್ ಜಿಹಾದ್ ತಡೆಗೆ ಹೆಲ್ಪ್‌ಲೈನ್‌ ಆರಂಭಿಸಿದ ಶ್ರೀರಾಮಸೇನೆ

Karan Bhushan Singh
ದೇಶ58 mins ago

Karan Bhushan Singh: ಬಿಜೆಪಿ ಅಭ್ಯರ್ಥಿಯ ಬೆಂಗಾವಲು ವಾಹನ ಡಿಕ್ಕಿಯಾಗಿ ಇಬ್ಬರ ಸಾವು

mlc election
ರಾಜಕೀಯ1 hour ago

MLC Election: ಒಂದಾದ ಸಿಎಂ- ಡಿಸಿಎಂ, ಪರಂ ಗರಂ; ಅಖಾಡಕ್ಕಿಳಿದ ರಮೇಶ್‌ ಕುಮಾರ್‌

Viral Run Out Video
ಕ್ರೀಡೆ1 hour ago

Viral Run Out Video: 11 ಆಟಗಾರರಿಂದ ರನೌಟ್​ ಪ್ರಯತ್ನ; ಕೊನೆಗೂ ನಾಟೌಟ್​ ಆದ ಬ್ಯಾಟರ್​

Ambareesh Birthday during Sumalatha Ambareesh Talks About Abhishek Ambareesh And Aviva
ಸ್ಯಾಂಡಲ್ ವುಡ್1 hour ago

Ambareesh Birthday: ಸಿಹಿ ಸುದ್ದಿ ಕೊಡಲಿದ್ದಾರಾ ಅಭಿಷೇಕ್‌-ಅವಿವಾ? ಸುಮಲತಾ ಹೇಳಿದ್ದೇನು?

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ21 hours ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು1 day ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ2 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ3 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು3 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ6 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು1 week ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

ಟ್ರೆಂಡಿಂಗ್‌