Puneeth Parva | ಗಂಧದಗುಡಿ ಎಲ್ಲ ರೆಕಾರ್ಡ್‌ ಬ್ರೇಕ್‌ ಮಾಡಲಿ, ಅಪ್ಪು ಚಿರಸ್ಥಾಯಿಯಾಗಲಿ ಎಂದು ಆಶಿಸಿದ ಯಶ್‌ - Vistara News

ಪುನೀತ ಪರ್ವ

Puneeth Parva | ಗಂಧದಗುಡಿ ಎಲ್ಲ ರೆಕಾರ್ಡ್‌ ಬ್ರೇಕ್‌ ಮಾಡಲಿ, ಅಪ್ಪು ಚಿರಸ್ಥಾಯಿಯಾಗಲಿ ಎಂದು ಆಶಿಸಿದ ಯಶ್‌

ಅಪ್ಪು ಅವರು ಮಾಡುತ್ತಿದ್ದ ಡಾನ್ಸ್‌, ಫೈಟ್‌ ನೋಡಿ, ನಾವೂ ಈ ರೀತಿ ಮಾಡಬೇಕು ಎಂದು ಸಿನಿಮಾರಂಗಕ್ಕೆ ತುಂಬ ಜನ ಬಂದಿದ್ದೇವೆ. ಈಗ ಏನು ಮಾತನಾಡಬೇಕು ಎಂಬುದು ಗೊತ್ತಿಲ್ಲ. ನನ್ನ ಜೀವನದಲ್ಲಿ ಅಪ್ಪು ಸರ್‌ ಘಟನೆ ತುಂಬ ಪರಿಣಾಮ ಬೀರಿದೆ ಎಂದು ಯಶ್‌ (Puneeth Parva) ಹೇಳಿದರು.

VISTARANEWS.COM


on

Yash
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಪುನೀತ್‌ ಪರ್ವ (Puneeth Parva) ಕಾರ್ಯಕ್ರಮದಲ್ಲಿ ಭಾಗವಹಿಸಿದ ಯಶ್‌, ಅವರ ಜತೆ ಕಳೆದ ಹಲವು ನೆನಪುಗಳನ್ನು ಮೆಲುಕು ಹಾಕಿದರು. “ಒಂದು ವರ್ಷದ ಹಿಂದೆ, ಹತ್ತಿರ ಹತ್ತಿರ ಇದೇ ದಿನ, ನಾನು, ಅಪ್ಪು ಸರ್‌, ಶಿವಣ್ಣ ವೇದಿಕೆ ಮೇಲೆ ಡಾನ್ಸ್‌ ಮಾಡುತ್ತಿದ್ದೆವು. ಅದು ಈಗಲೂ ಕಣ್ಣಿಗೆ ಕಟ್ಟಿದಂತಿದೆ. ತುಂಬ ದಿನದ ನಂತರ ಅಪ್ಪು ಸರ್‌ ಸಿಕ್ಕಿದ್ದರು. ಇಬ್ಬರೂ ತುಂಬ ಮಾತನಾಡಿದೆವು. ಆದರೆ, ಅವರು ಈಗ ಇಲ್ಲ ಎಂದರೆ ನಂಬಲು ಆಗಲ್ಲ” ಎಂದು ಹೇಳಿದರು.

“ಅಪ್ಪು ಅವರು ಮಾಡುತ್ತಿದ್ದ ಡಾನ್ಸ್‌, ಫೈಟ್‌ ನೋಡಿ, ನಾವೂ ಈ ರೀತಿ ಮಾಡಬೇಕು ಎಂದು ಸಿನಿಮಾರಂಗಕ್ಕೆ ತುಂಬ ಜನ ಬಂದಿದ್ದೇವೆ. ಈಗ ಏನು ಮಾತನಾಡಬೇಕು ಎಂಬುದು ಗೊತ್ತಿಲ್ಲ. ನನ್ನ ಜೀವನದಲ್ಲಿ ಅಪ್ಪು ಸರ್‌ ಘಟನೆ ತುಂಬ ಪರಿಣಾಮ ಬೀರಿದೆ. ಜೀವನದಲ್ಲಿ ಸಾಧಿಸಬೇಕು ಎಂದು ಓಡುತ್ತಿರುತ್ತೇವೆ. ಅದುವೇ ಜೀವನ ಆಗಿದೆ. ಭರವಸೆಯೇ ಬದುಕಿನ ಮೂಲದ್ರವ್ಯ ಎನ್ನುತ್ತಾರೆ. ಆದರೆ, ಎರಡೇ ಸೆಕೆಂಡ್‌ಗಳಲ್ಲಿ ಜೀವನ ಮುಗಿದರೆ ಆತಂಕ ಮೂಡುತ್ತದೆ. ಅಭಿಮಾನಿ ದೇವರುಗಳು ಇದ್ದಾರಲ್ಲ, ಅವರು ಎಲ್ಲರಿಗೂ ಹುಮ್ಮಸ್ಸು ನೀಡುತ್ತಾರೆ. ಅದೇ ಎಲ್ಲರಿಗೂ ದಾರಿದೀಪವಾಗಿದೆ” ಎಂದು ತಿಳಿಸಿದರು.

“ಡಾ.ರಾಜಕುಮಾರ್‌ ಅವರು ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಪುನೀತ್‌ ರಾಜಕುಮಾರ್‌ ಅವರು ಜನಿಸಿದರು. ಅವರು ಕುಟುಂಬದಲ್ಲಿ ತುಂಬ ಪ್ರೀತಿ ಪಡೆದರು. ಅದೇ ರೀತಿ, ಕರ್ನಾಟಕದ ಜನ ಅವರಿಗೆ ಪ್ರೀತಿ ನೀಡಿದ್ದಾರೆ. ಅವರು ತುಂಬ ಒಳ್ಳೆಯ ಯೋಗದಲ್ಲಿ ಜನಿಸಿದ ವ್ಯಕ್ತಿ. ಮಗುವಾಗಿ ಇದ್ದಾಗಿನ ನಗು ಕೊನೆಯ ದಿನಗಳವರೆಗೂ ಇತ್ತು. ಬದುಕು, ಸಿನಿಮಾ, ಉದ್ಯಮದ ಬಗ್ಗೆ ಎಲ್ಲರಿಗೂ ಗೊತ್ತಿತ್ತು. ಸ್ಟಾರ್‌ಡಮ್‌ ಅನ್ನು ಬದಿಗಿಟ್ಟು, ಒಬ್ಬ ಮನುಷ್ಯ ಆಗಬೇಕು ಎಂದು ಬದುಕಿದ್ದರು. ಪ್ರೀತಿಸಿದವರನ್ನೇ ಮದುವೆಯಾಗಿದ್ದಾರೆ. ಒಳ್ಳೆಯ ಗಂಡ, ಸ್ನೇಹಿತ, ತಂದೆಯಾಗಿದ್ದಾರೆ. ಹಾಗಾಗಿ, ಅವರ ಜೀವನ ಮಾದರಿಯಾಗಿದೆ” ಎಂದರು.

25 ಜಿಲ್ಲೆಗಳಿಗೆ ಆಂಬ್ಯುಲೆನ್ಸ್ ಘೋಷಿಸಿದ ಯಶ್

ನಟ ಪ್ರಕಾಶ್‌ ರೈ ಅವರು ರಾಜ್ಯದ ಎಲ್ಲ ಜಿಲ್ಲೆಗಳಿಗೆ ಆಂಬ್ಯುಲೆನ್ಸ್‌ ನೀಡುವ ಯೋಜನೆಗೆ ಯಶ್‌ ಕೈ ಜೋಡಿಸಿದ್ದಾರೆ. ಪ್ರಕಾಶ್‌ ರೈ ಅವರ ಕನಸಿನಂತೆ ಎಲ್ಲ ಜಿಲ್ಲೆಗಳಿಗೆ ಆಂಬ್ಯುಲೆನ್ಸ್‌ ನೀಡಲಾಗುತ್ತಿದೆ. ಇನ್ನೂ 25 ಜಿಲ್ಲೆಗಳಿಗೆ ನನ್ನ ಯಶೋಮಾರ್ಗದ ಮೂಲಕ ಆಂಬ್ಯುಲೆನ್ಸ್‌ಗಳನ್ನು ನೀಡುತ್ತೇನೆ ಎಂದು ಯಶ್‌ ಘೋಷಿಸಿದರು.

ಅಪ್ಪು ಜೀವನ ಎಲ್ಲರಿಗೂ ಮಾದರಿ ಎಂದ ಸೂರ್ಯ

“ನನ್ನ ಪ್ರೀತಿಯ ಸಹೋದರ ನಮ್ಮೆಲ್ಲರನ್ನೂ ನೋಡುತ್ತಾರೆ ಎಂದೇ ಭಾವಿಸುತ್ತೇನೆ. ಮೈಸೂರಿನ ಸುಜಾತ ಹೋಟೆಲ್‌ನಲ್ಲಿ ನಾನು ಅಪ್ಪು ಅವರನ್ನು ಮೊದಲ ಬಾರಿ ಭೇಟಿಯಾದೆ. ಅವರು ನಾನು ಇದುವರೆಗೆ ಭೇಟಿಯಾದ ವಿನಮ್ರ, ಮಾನವತೆ ಗುಣವುಳ್ಳ ವ್ಯಕ್ತಿಯಾಗಿದ್ದಾರೆ. ಅವರು ಸಿನಿಮಾ ಮಾಡುವ ಜತೆಗೆ ಸಮಾಜಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ಅಪ್ಪು ವ್ಯಕ್ತಿತ್ವವೇ ಅಮೋಘವಾಗಿದೆ. ಹೇಗೆ ಜೀವನ ನಡೆಸಬೇಕು, ಯಾವುದನ್ನು ಬಿಟ್ಟು ಹೋಗಬೇಕು, ಸಮಾಜಕ್ಕೆ ಏನು ನೀಡಬೇಕು ಎಂಬುದಕ್ಕೆ ನನ್ನ ಸಹೋದರ ಅಪ್ಪು ಉದಾಹರಣೆಯಾಗಿದ್ದಾರೆ. ಅಪ್ಪು ಪತ್ನಿ ಅಶ್ವಿನಿ ಅವರೂ ಪುನೀತ್‌ ದಾರಿಯಲ್ಲೇ ಸಾಗುತ್ತಿದ್ದಾರೆ” ಎಂದು ತಮಿಳು ನಟ ಸೂರ್ಯ ಹೇಳಿದರು.

ತಮಿಳು ನಟ ಸೂರ್ಯ.

ಅಪ್ಪು ಅಗಲಿದ ಬಳಿಕ ಐದಾರು ತಿಂಗಳು ನಿದ್ದೆ ಇಲ್ಲ: ಪ್ರಕಾಶ್‌ ರೈ

ಅಪ್ಪುವಿನಿಂದಾಗಿ ಹಲವು ವಿಷಯ ಘಟಿಸಿವೆ. ಅಪ್ಪು ಅವರನ್ನು ಕಳೆದುಕೊಂಡಾಗ ನಾಲ್ಕೈದು ತಿಂಗಳು ನನಗೆ ನಿದ್ದೆ ಬರುತ್ತಿರಲಿಲ್ಲ. ಅಪ್ಪು ಗಂಧದ ಗುಡಿಯಲ್ಲಿರುವ ಒಬ್ಬ ಹೆಮ್ಮರದಂತೆ ಇದ್ದಾರೆ. ಆ ಹೆಮ್ಮರದ ರೆಂಬೆ ಕೊಂಬೆಗಳು ಚಾಚಿಕೊಂಡಿವೆ. ಅಪ್ಪು ಅವರ ಬಗ್ಗೆ ಹೊಗಳುವುದಕ್ಕಿಂತ, ಅಪ್ಪು ಅವರ ಹೆಸರಿನಲ್ಲಿ ಸಮಾಜ ಕಾರ್ಯ ಮಾಡಬೇಕು” ಎಂದು ಹೇಳಿದರು.

“ಇತ್ತೀಚೆಗೆ ಶಿವಣ್ಣನ ಮನೆಗೆ ಹೋದೆ. ಶಿವಣ್ಣ ನನಗೊಂದು ಕನಸಿದೆ. ಅಪ್ಪು ಬಗ್ಗೆ ಮಾತನಾಡುತ್ತಲೇ ಇದ್ದೇವೆ. ಆದರೆ, ಆ ಪರಂಪರೆಯನ್ನು ಮುಂದುವರಿಸಬೇಕು. ಕರ್ನಾಟಕದ ಎಲ್ಲ ಅಪ್ಪು ಎಕ್ಸ್‌ಪ್ರೆಸ್‌ ಎಂಬ ಆಂಬ್ಯುಲೆನ್ಸ್‌ ಓಡಬೇಕು ಎಂದೆ. ಎಲ್ಲ ಜಿಲ್ಲೆಗಳಲ್ಲಿ ಓಡಬೇಕು ಎಂದೆ. ಅದಕ್ಕೆ ಶಿವಣ್ಣ ಪ್ರತಿಕ್ರಿಯಿಸಿ, ನೀವೊಬ್ಬರೇ ಏಕೆ, ನಾನೂ ಒಂದು ಆಂಬ್ಯುಲೆನ್ಸ್‌ ಕೊಡುತ್ತೇನೆ ಎಂದರು. ತಮಿಳು ನಟ ಸೂರ್ಯ ಅವರು ನನ್ನ ಯೋಚನೆ ಬಗ್ಗೆ ತಿಳಿದರು. ಸೂರ್ಯ ಹೇಳಿದರು, ನಿಮಗಷ್ಟೇ ಅಪ್ಪು ಆಸ್ತಿ ಅಲ್ಲ, ನನಗೂ ಆಸ್ತಿ. ನಾನೂ ಒಂದು ಆಂಬುಲೆನ್ಸ್‌ ಕೊಡುತ್ತೇನೆ ಎಂದರು. ನಟ ಚಿರಂಜೀವಿ ಅವರೂ ಒಂದು ಆಂಬುಲೆನ್ಸ್‌ ಕೊಡುತ್ತೇನೆ ಎಂದು ತಿಳಿಸಿದರು. ಒಬ್ಬ ವ್ಯಕ್ತಿ ಎಷ್ಟು ಎತ್ತರ ಬೆಳೆಯುತ್ತಾನೆ ಎಂಬುದರ ಜತೆಗೆ ಅವರು ಬೇರೆಯವರನ್ನೂ ಬೆಳೆಸಿದರು. ಹಾಗಾಗಿ, ಅವರು ತುಂಬ ಎತ್ತರ ಬೆಳೆದಿದ್ದಾರೆ” ಎಂದು ವಿವರಿಸಿದರು.

ಗಂಧದಗುಡಿ ಚಿತ್ರ ತಂಡದ ಜತೆ ಅಶ್ವಿನಿ ಪುನೀತ್‌ ರಾಜಕುಮಾರ್.

“ಏನಿದು ಗಂಧದ ಗುಡಿ? ಅಪ್ಪುಗೆ ಯಾವಾಗ ಕಾಡು ನೋಡಬೇಕು ಎಂದು ಎನಿಸಿತು? ಅಪ್ಪು ಒಬ್ಬ ಪ್ರಕೃತಿ ಪ್ರೇಮಿ. ಇದನ್ನು ಅವರು ನನ್ನ ಬಳಿಯೂ ಹೇಳಿದ್ದರು. ಒಂದು ಕಾಡನ್ನು ಉಳಿಸಲು ಹೊರಡುವುದು ಸುಲಭವಾದ ಕೆಲಸ ಅಲ್ಲ. ಕಾಡು ಎಂದರೆ ಪಾರ್ಕ್‌ಗೆ ಹೋದಹಾಗೆ ಅಲ್ಲ. ಅಪ್ಪು ಒಂದು ವರ್ಷ ಕಾಡಲ್ಲಿ ಸುತ್ತಾಡಿದ್ದಾರೆ. ಇದು ಅಪ್ಪು ಅವರ ಜೀವನ ಪ್ರೀತಿಯನ್ನು ತೋರಿಸುತ್ತದೆ. ಪುನೀತ್‌ ಅವರು ಕಾಡು ಸುತ್ತಾಡಿದ ಸಾರ್ಥಕತೆ ಈಗ ಗಂಧದ ಗುಡಿಯಾಗಿ ಹೊರಬಂದಿದೆ. ಗಂಧದ ಗುಡಿ ಸಿನಿಮಾ ಅಲ್ಲ, ಅದು ಅಪ್ಪುವಿನ ಕೊನೆಯ ಕನಸು. ಆ ಕನಸನ್ನು ನಾವು ನಿಜ ಮಾಡಬೇಕು. ಅವರ ಸ್ಫೂರ್ತಿಯ ದಾರಿಯಲ್ಲಿ ಸಾಗಬೇಕು” ಎಂದು ಕರೆ ನೀಡಿದರು.

ಅಪ್ಪು ಪರೋಪಕಾರಿ: ಸಾಯಿ ಕುಮಾರ್‌

ಪುನೀತ್‌ ರಾಜಕುಮಾರ್‌ ಅವರು ಪರೋಪಕಾರಿ. ಅಪ್ಪು ಗಂಧದ ಗುಡಿಯ ತಿಲಕ. ಇದು ಪ್ರೀತಿಯ ಸೆಲೆಬ್ರೇಷನ್‌ ಆಗಿದೆ. ಎಲ್ಲರೂ ಅವರ ಆಶಯಗಳನ್ನು ರೂಢಿಸಿಕೊಳ್ಳೋಣ. ಅಪ್ಪು ಅವರ ಜತೆ ಕಳೆದ ಒಂದೊಂದು ಕ್ಷಣವೂ ಅಮೂಲ್ಯ” ಎಂದರು.

ಅಪ್ಪು ದೇವತಾ ಮನುಷ್ಯ ಎಂದ ನಿಖಿಲ್‌

ಪುನೀತ ಪರ್ವಕ್ಕೆ ಆಗಮಿಸುವುದು ಕನ್ನಡಿಗರ ಕರ್ತವ್ಯ. ಅಶ್ವಿನಿ ಅಕ್ಕ ನನಗೆ ಕರೆ ಮಾಡಿದಾಗ, ನೀವು ಕರೆಯದಿದ್ದರೂ ನಾನು ಬರುತ್ತೇನೆ ಎಂದೆ. ಅಪ್ಪು ಸರ್‌ ಅವರು ದಾನ ಧರ್ಮ ಮಾಡಿದರು. ಹಾಗೆಯೇ, ಒಂದು ಕೈಯಲ್ಲಿ ಕೊಟ್ಟಿದ್ದನ್ನು ಇನ್ನೊಂದು ಕೈಗೆ ಗೊತ್ತಾಗಬಾರದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಅವರು ದೇವತಾ ಮನುಷ್ಯ” ಎಂದು ಹೇಳಿದರು.

ನಿಖಿಲ್‌ ಕುಮಾರಸ್ವಾಮಿ

ಇದನ್ನೂ ಓದಿ | Puneeth Parva | ಬೊಂಬೆ ಹೇಳುತೈತೆ ಎಂದು ಹಾಡಿದ ಶಿವಣ್ಣ, ವೇದಿಕೆ ಮೇಲೆ ಅಶ್ವಿನಿ ಪುನೀತ್‌ ಕಣ್ಣೀರು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Puneeth Rajkumar: ಪೋಸ್ಟರ್‌ಗೆ ಸೀಮಿತವಾಯಿತು ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದ ಸ್ಫೂರ್ತಿ ದಿನ

ಪುನೀತ್‌ ರಾಜಕುಮಾರ್‌ (Puneeth Rajkumar) ತೆರೆಯ ಮೇಲೆ ಸಾಮಾಜಿಕ ಸಂದೇಶಗಳನ್ನು ನೀಡುವುದರ ಜತೆಗೆ ನಿಜ ಜೀವನದಲ್ಲೂ ಸೇವೆ ಮಾಡುತ್ತಿದ್ದರು.

VISTARANEWS.COM


on

puneeth rajkumar inspiration day
Koo

ಬೆಂಗಳೂರು: ಚಲನಚಿತ್ರಗಳಲ್ಲಿ ಸಾಮಾಜಿಕ ಸಂದೇಶಗಳ ಮೂಲಕ ಹಾಗೂ ನಿಜ ಜೀವನದಲ್ಲಿ ಸಾಮಾಜಿಕ ಕಾರ್ಯಗಳ ಮೂಲಕ ಯುವಕರಿಗೆ ಸ್ಫೂರ್ತಿಯಾಗಿದ್ದವರು ಕರ್ನಾಟಕ ರತ್ನ ಪುನೀತ್‌ ರಾಜಕುಮಾರ್‌(Puneeth Rajkumar). ಅವರ ಜನ್ಮದಿನವನ್ನು ಸ್ಫೂರ್ತಿ ದಿನವನ್ನಾಗಿ ಆಚರಿಸಲಾಗುತ್ತದೆ ಎಂದು ಕಳೆದ ವರ್ಷ ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದರು.

ಪುನೀತ್‌ ರಾಜಕುಮಾರ್‌ ಅವರಿಗೆ ಕರ್ನಾಟಕ ರತ್ನ ಪ್ರದಾನ ಮಾಡಿ ಗೌರವಿಸಲಾಯಿತು. ಅವರ ಕಾರ್ಯಗಳು ಯುವಕರಿಗೆ ಸ್ಫೂರ್ತಿ ಎಂದು ತಿಳಿಸಿದ್ದ ಸಿಎಂ ಬಸವರಾಜ ಬೊಮ್ಮಾಯಿ, ಸ್ಫೂರ್ತಿ ದಿನವನ್ನಾಗಿ ಆಚರಿಸಬೇಕು ಎಂದು ತಿಳಿಸಿದ್ದರು.

ಇದೀಗ ಚುನಾವಣೆಗಳು ಹತ್ತಿರವಾಗಿದ್ದು, ಯಾವುದೇ ಕಾರ್ಯಕ್ರಮಗಳನ್ನು ನಡೆಸಲು ಸರ್ಕಾರದಲ್ಲಿ ಆಸಕ್ತಿ ಉಳಿದಿಲ್ಲ. ಇನ್ನು ಕೇವಲ ಏಳೆಂಟು ದಿನದಲ್ಲೆ ಚುನಾವಣೆ ನೀತಿ ಸಂಹಿತೆ ಘೋಷಣೆ ಆಗಲಿದೆ. ನಂತರ ಟಿಕೆಟ್‌ ಘೊಷಣೆ ಪ್ರಕ್ರಿಯೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮಗಳನ್ನು ನಡೆಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಾಗಲಿ, ಯುವಜನ ಸಬಲೀಕರಣ ಇಲಾಖೆಗಾಗಲಿ ಸಿಎಂ ಸೂಚನೆ ನೀಡಿಲ್ಲ.

ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ಶುಕ್ರವಾರ ಶಿವಮೊಗ್ಗ ಪ್ರವಾಸದಲ್ಲಿದ್ದಾರೆ. ಅವರ ಸಾಮಾಜಿಕ ಜಾಲತಾಣದಲ್ಲಿ ಪುನೀತ್‌ ರಾಜಕುಮಾರ್‌ ಜನ್ಮದಿನದಂದು ಶುಭಾಶಯ ಕೋರಿದ್ದಾರೆ. “ಅತಿ ಚಿಕ್ಕ ವಯಸ್ಸಿನಲ್ಲಿಯೇ ಅಗಾಧವಾದ ಸಾಧನೆಗೈದು, ಎಲ್ಲರಿಗೂ ಮಾದರಿಯಾಗಿರುವ ಪ್ರೀತಿಯ ಅಪ್ಪು, ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಅವರ ಜನ್ಮಸ್ಮರಣೆಯಂದು ಗೌರವಪೂರ್ವಕ ನಮನಗಳು. ಅಪ್ಪು ಸದಾ ಅಜರಾಮರ” ಎಂದಿದ್ದಾರೆ.

ಶುಭಾಶಯ ಕೋರುವ ಪೋಸ್ಟರ್‌ನಲ್ಲಿ ಸ್ಫೂರ್ತಿ ದಿನ ಎಂದು ನಮೂದಿಸಲಾಗಿದೆ. ಅದನ್ನು ಹೊರತುಪಡಿಸಿ ಸ್ಫೂರ್ತಿ ದಿನಕ್ಕೆ ಯಾವುದೇ ಕಾರ್ಯಕ್ರಮಗಳು ನಡೆದಿಲ್ಲ.

ಇದನ್ನೂ ಓದಿ: Puneeth Rajkumar: ಅಪ್ಪು ಸಮಾಧಿ ದರ್ಶನಕ್ಕೆ ಬಂದ 80ರ ವೃದ್ಧ, 19 ದಿನಗಳ ನವಜಾತ ಶಿಶು ಜತೆ ಬಂದ ತಾಯಿ!

Continue Reading

ಕರ್ನಾಟಕ

Gandhada gudi | ಶಿವಮೊಗ್ಗದಲ್ಲಿ ಗಂಧದ ಗುಡಿ ವೀಕ್ಷಿಸಿದ ಬಿಎಸ್‌ವೈ: ಮಗುವಿಗೆ ಶೇಕ್‌ಹ್ಯಾಂಡ್‌, ಸೆಲ್ಫಿಗೆ ಮುತ್ತಿಗೆ!

ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಗುರುವಾರ ಶಿವಮೊಗ್ಗದಲ್ಲಿ ಗಂಧದ ಗುಡಿ ಸಿನಿಮಾ ವೀಕ್ಷಿಸಿದರು. ಅವರಿಗೆ ಪುತ್ರ ರಾಘವೇಂದ್ರ ಮತ್ತು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಸಾಥ್‌ ನೀಡಿದ್ದರು.

VISTARANEWS.COM


on

BSY gandhada gudi
ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ಅವರು ಗಂಧದ ಗುಡಿ ಸಿನಿಮಾ ನೋಡಲು ಮಾಲ್‌ಗೆ ಆಗಮಿಸಿದಾಗ ಪುಟ್ಟ ಮಗುವಿನ ಕೈಕುಲುಕಿದರು
Koo

ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಷ್ಟ್ರೀಯ ಸಲಹಾ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ ಅವರು ಗುರುವಾರ ಶಿವಮೊಗ್ಗದಲ್ಲಿ ಪುನೀತ್‌ ರಾಜ್‌ ಕುಮಾರ್‌ ಅಭಿನಯದ ʻಗಂಧದ ಗುಡಿʼ ಚಿತ್ರವನ್ನು ವೀಕ್ಷಿಸಿದರು.

ನಗರದಲ್ಲಿರುವ ಶಿವಪ್ಪ ನಾಯಕ ಮಾಲ್‌ಗೆ ಭೇಟಿ ನೀಡಿದ ಅವರು ಚಿತ್ರವನ್ನು ವೀಕ್ಷಿಸಿದರು. ಅವರಿಗೆ ಪುತ್ರ, ಸಂಸದ ಬಿ.ವೈ. ರಾಘವೇಂದ್ರ, ಅವರ ಪತ್ನಿ ತೇಜಸ್ವಿನಿ, ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ, ಸೂಡಾ ಮಾಜಿ ಅಧ್ಯಕ್ಷ ಜ್ಯೋತಿಪ್ರಕಾಶ, ಡಿಸಿಸಿ ಅಧ್ಯಕ್ಷ ಎಂ ಬಿ ಚನ್ನವೀರಪ್ಪ ಮತ್ತಿತರರು ಸಾಥ್‌ ನೀಡಿದರು.

ಯಡಿಯೂರಪ್ಪ ಅವರು ಮಾಲ್‌ಗೆ ಬರುತ್ತಿದ್ದಂತೆಯೇ ಎದುರು ಸಿಕ್ಕ ಪುಟ್ಟ ಮಗುವಿನ ಕೈ ಹಿಡಿದು ಶೇಕ್‌ ಹ್ಯಾಂಡ್‌ ಮಾಡಿ ಖುಷಿಪಟ್ಟರು. ಹಲವಾರು ಮಂದಿ ಬಿಎಸ್‌ವೈ ಅವರ ಜತೆ ಸೆಲ್ಫಿಗೆ ತೆಗೆಸಿಕೊಳ್ಳಲು ಮುಗಿಬಿದ್ದರು. ಫೋಟೊ ತೆಗೆಸಿಕೊಳ್ಳಲು ಮುಂದಾದ ಪ್ರತಿಯೊಬ್ಬರಿಗೂ ಬಿಎಸ್‌ವೈ ಚೆನ್ನಾಗಿ ಸಹಕರಿಸಿದರು. ಭಾರತ್‌ ಮಲ್ಟಿಪ್ಲೆಕ್ಸ್‌ನಲ್ಲಿ ಅವರು ಚಿತ್ರ ವೀಕ್ಷಿಸಿದರು.

ಪುನೀತ್‌ ರಾಜ್‌ ಕುಮಾರ್‌ ಅವರ ಅಭಿನಯದ ಕೊನೆಯ ಚಿತ್ರ ಇದಾಗಿದ್ದು, ಕರ್ನಾಟಕದ ವನ್ಯ ಸಂಪತ್ತನ್ನು ಅಪೂರ್ವವಾಗಿ ತೋರಿಸಲಾಗಿದೆ. ಪುನೀತ್‌ ಬಗ್ಗೆ ಅಭಿಮಾನ ಹೊಂದಿರುವ ಬಿಎಸ್‌ವೈ ಅವರು ಎರಡೂ ಕಾರಣಕ್ಕಾಗಿ ಚಿತ್ರದ ವೀಕ್ಷಣೆಗೆ ತೆರಳಿದ್ದಾರೆ.

ಬಿಎಸ್‌ವೈ ಅವರಿಗೆ ಸಿನಿಮಾ ನೋಡುವಲ್ಲಿ ಸಾಕಷ್ಟು ಆಸಕ್ತಿ ಇದ್ದು, ಇತ್ತೀಚೆಗಷ್ಟೇ ಶರಣ್‌ ಅಭಿನಯದ ಗುರುಶಿಷ್ಯರು ಎಂಬ ಸಿನಿಮಾ ನೋಡಿದ್ದರು. ತನುಜಾ ಎಂಬ ಸಿನಿಮಾದಲ್ಲಿ ಅವರು ಮುಖ್ಯಮಂತ್ರಿ ಪಾತ್ರದಲ್ಲೇ ನಟಿಸಿದ್ದರು.

ಇದನ್ನೂ ಓದಿ | Guru Shishyaru | ಶರಣ್‌ ಅಭಿನಯದ ಗುರು ಶಿಷ್ಯರು ಸಿನಿಮಾ ವೀಕ್ಷಿಸಿದ ಯಡಿಯೂರಪ್ಪ, ಅಶೋಕ್‌

Continue Reading

ಕನ್ನಡ ರಾಜ್ಯೋತ್ಸವ

Appu Namana | ಅಪ್ಪುಗಾಗಿ 336 ಕಿ.ಮೀ. ನಡೆದೇ ಬೆಂಗಳೂರಿಗೆ ಬಂದ ಅಭಿಮಾನಿ; ಹುಕ್ಕೇರಿಯಲ್ಲಿ ಅಪ್ಪು ಹೆಸರಲ್ಲಿ ಬಾವುಟ ಹಂಚಿಕೆ

ಅಪ್ಪು ಎಂದರೆ ಅಭಿಮಾನಿಗಳಿಗೆ ಅಚ್ಚುಮೆಚ್ಚು. ಪುನೀತ್‌ ಅಗಲಿ 1 ವರ್ಷವಾದರೂ ಅವರ ಮೇಲಿನ ಅಭಿಮಾನ ಕಿಂಚಿತ್ತೂ ಕಡಿಮೆ ಆಗಿಲ್ಲ. ಪುನೀತ್‌ ಅವರಿಗೆ ಕೊಡಮಾಡಲಾದ ಕರ್ನಾಟಕ ರತ್ನ ಪ್ರಶಸ್ತಿ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಕಡೆಗಳಲ್ಲಿ ಅಪ್ಪು ಅಭಿಮಾನಿಗಳು ವಿಭಿನ್ನ ರೀತಿಯಲ್ಲಿ ಸಂಭ್ರಮಿಸುತ್ತಿದ್ದಾರೆ.

VISTARANEWS.COM


on

By

Appu namana
Koo

ಬೆಂಗಳೂರು: ರಾಜ್ಯ ಸರ್ಕಾರದ ವತಿಯಿಂದ ಕನ್ನಡ ರಾಜ್ಯೋತ್ಸವ ಮತ್ತು ದಿ| ಪುನೀತ್ ರಾಜಕುಮಾರ್ (Appu Namana) ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಹಿನ್ನೆಲೆಯಲ್ಲಿ ಅಪ್ಪುವಿಗಾಗಿ ದೂರದ ಹಾವೇರಿಯಿಂದ ಅಭಿಮಾನಿಯೊಬ್ಬ ಪಾದಯಾತ್ರೆ ಮಾಡಿದ್ದಾರೆ.

ಕೈಯಲ್ಲಿ ಅಪ್ಪು ಫೋಟೊ ಹಿಡಿದು ಹಾವೇರಿಯಿಂದ ಉದ್ಯಾನನಗರಿ ಬೆಂಗಳೂರಿಗೆ ಶಾಂತಯ್ಯ ಮಳೀಮಠ್ ಎಂಬುವವರು ನಡೆದುಕೊಂಡೇ ಬಂದಿದ್ದಾರೆ. ಅಕ್ಟೋಬರ್ 22ಕ್ಕೆ ಹಾವೇರಿಯಿಂದ ಹೊರಟ ಶಾಂತಯ್ಯ ಅಕ್ಟೋಬರ್ 31ಕ್ಕೆ ಬೆಂಗಳೂರು ತಲುಪಿದ್ದಾರೆ.

Appu Namana

ಪುನೀತ್ ರಾಜಕುಮಾರ್‌ಗಾಗಿ 10 ದಿನಗಳ ಏಕಾಂಗಿ ನಡಿಗೆ ನಡೆಸಿರುವ ಶಾಂತಯ್ಯ 336 ಕಿ.ಮೀ ಕ್ರಮಿಸಿದ್ದಾರೆ. ಅಲ್ಲಿಂದ ಇಲ್ಲಿವರೆಗೂ ಬರೀ ಕಾಲಲ್ಲಿ ನಡೆದ ಪರಿಣಾಮ ಕಾಲಿನಲ್ಲಿ ಬೊಬ್ಬೆಯಾಗಿದೆ. ಆದರೂ ಅದರ ನಡುವೆಯೇ ಸೋಮವಾರ ಅಪ್ಪು ಮನೆಗೆ ಹೋಗಿ, ಅಶ್ವಿನಿ ಪುನೀತ್‌ ರಾಜಕುಮಾರ್‌ರನ್ನು ಭೇಟಿ ಮಾಡಿದರು. ಇವರ ಈ ಪ್ರಯತ್ನಕ್ಕೆ ಅಶ್ವಿನಿ ಅವರು ಧನ್ಯವಾದವನ್ನು ತಿಳಿಸಿದ್ದಾರೆ. ಮಂಗಳವಾರ ನಟ ಶಿವರಾಜಕುಮಾರ್‌ ಅವರನ್ನು ಭೇಟಿ ಮಾಡಿ ಮಾತನಾಡಿಸಿ ಹೋಗುತ್ತೇನೆ ಎಂದಿದ್ದಾರೆ.

ಒಂದಿಡೀ ಊರಿಗೆ ಅಪ್ಪು ಹೆಸರಲ್ಲಿ ಬಾವುಟ ಹಂಚಿಕೆ
ಕರ್ನಾಟಕ ರಾಜ್ಯೋತ್ಸವ ಹಾಗೂ ದಿವಂಗತ ಡಾ.‌ಪುನೀತ್ ರಾಜಕುಮಾರ ಅವರಿಗೆ ಕರ್ನಾಟಕ ರತ್ನ‌ ಪ್ರಶಸ್ತಿ ನೀಡಿ ಗೌರವಿಸುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ನೌಕರರೆಲ್ಲ ಸೇರಿ ಪ್ರತಿ ಮನೆಗೆ ಕನ್ನಡ ಧ್ವಜ‌ ನೀಡಿ ಪುನೀತ್ ರಾಜಕುಮಾರ್ ಅವರಿಗೆ ಗೌರವ ಸಲ್ಲಿಸಿದ್ದಾರೆ.

Appu Namana

ಗ್ರಾಮದ ಪ್ರತಿ ಮನೆಗಳಿಗೂ ಕನ್ನಡದ ಧ್ವಜ ನೀಡಿ ಧ್ವಜಾರೋಹಣ ಮಾಡುವ ಕಾರ್ಯವನ್ನು ನೇರಲಿ ಗ್ರಾಮ ಪಂಚಾಯಿತಿ ವತಿಯಿಂದ ಮಾಡಲಾಗಿದೆ. ರಾಜ್ಯೋತ್ಸವ ದಿನದಂದು ನೇರಲಿ ಗ್ರಾಮದ ಪ್ರತಿ ಮನೆ ಮನೆಗಳಲ್ಲೂ ಕನ್ನಡ ಬಾವುಟ ರಾರಾಜಿಸುತ್ತಿತ್ತು. ಪವರ್ ಸ್ಟಾರ್ ಪುನೀತ್‌ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ದೊರಕಿದ್ದು ಸಂತಸ ತಂದಿದೆ ಎಂದು ಗ್ರಾಮ‌ ಪಂಚಾಯಿತಿ ಅಧಿಕಾರಿಗಳು ಖುಷಿ ಹಂಚಿಕೊಂಡಿದ್ದಾರೆ.

Appu Namana

ಕರ್ನಾಟಕ ರಾಜ್ಯೋತ್ಸವದಲ್ಲೂ ಅಪ್ಪು ಸ್ಮರಣೆ
ವಿಜಯಪುರದ ಗುಮ್ಮಟನಗರಿಯ ದರ್ಗಾ ಪ್ರದೇಶದಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗಿದ್ದು, ಈ ವೇಳೆ ಪುನೀತ್‌ರನ್ನು ಸ್ಮರಿಸಲಾಯಿತು. ದರ್ಗಾ ಪ್ರದೇಶದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಹಾಗೂ ಸ್ಥಳೀಯರು, ಅಪ್ಪು ಭಾವಚಿತ್ರ ಇರಿಸಿ, ಅದಕ್ಕೆ ಪೂಜೆ ಸಲ್ಲಿಸಿ ಧ್ವಜಾರೋಹಣ ನೆರವೇರಿಸಿದರು.

ಇದನ್ನೂ ಓದಿ | ಕನ್ನಡ ರಾಜ್ಯೋತ್ಸವ | ಇಂದು ಪುನೀತ್‌ಗೆ ಕರ್ನಾಟಕ ರತ್ನ ಪ್ರದಾನ, ರಜನಿಕಾಂತ್‌, ಜ್ಯೂ.ಎನ್‌ಟಿಆರ್‌ ಭಾಗಿ

Continue Reading

ಕನ್ನಡ ರಾಜ್ಯೋತ್ಸವ

Appu Namana | ʼಕಲಿಯುಗದ ಮಾರ್ಕಂಡೇಯ, ಪ್ರಹ್ಲಾದ, ನಚಿಕೇತʼ: ಅಪ್ಪು ಕುರಿತು ರಜನಿ ಭಾವುಕ ನುಡಿ

ಕಾರ್ಯಕ್ರಮ ಆರಂಭಕ್ಕೂ ಮುನ್ನವೇ ಶುರುವಾದ ಜಿಟಿಜಿಟಿ ಮಳೆಯ ನಡುವೆಯೇ ಗಣ್ಯರೆಲ್ಲರೂ ತ್ವರಿತ ಗತಿಯಲ್ಲಿ ಮಾತು ಮುಗಿಸಿ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಿದರು.

VISTARANEWS.COM


on

rajanikanth karnataka rathna
Koo

ಬೆಂಗಳೂರು: ಒಂದೊಂದು ಯುಗದಲ್ಲಿ ಭೂಮಿಯಲ್ಲಿ ಜನಿಸಿ ನಮ್ಮೊಂದಿಗಿದ್ದು ಸಂತೋಷ ನೀಡಿ ಮತ್ತೆ ದೇವರ ಬಳಿಗೆ ಸಾಗುವ ದೇವರ ಮಗನಾಗಿ ಕಲಿಯುಗದಲ್ಲಿ ಪುನೀತ್‌ ರಾಜಕುಮಾರ್‌ ಜನಿಸಿದ್ದರು ಎಂದು ಸೂಪರ್‌ ಸ್ಟಾರ್‌ ರಜನಿಕಾಂತ್‌ ಭಾವುಕವಾಗಿ ನುಡಿದಿದ್ದಾರೆ.

ವಿಧಾನಸೌಧದ ಮಹಾ ಮೆಟ್ಟಿಲುಗಳ ಮೇಲೆ ಪುನೀತ್‌ ರಾಜಕುಮಾರ್‌ ಅವರಿಗೆ ಮರಣೋತ್ತರ ʼಕರ್ನಾಟಕ ರತ್ನʼ ಪ್ರಶಸ್ತಿ ನೀಡಿದ ಸಮಾರಂಭದಲ್ಲಿ ಮಾತನಾಡಿದರು.

ಕಾರ್ಯಕ್ರಮ ಆರಂಭಕ್ಕೂ ಮುನ್ನವೇ ಆರಂಭವಾದ ಜಿಟಿಜಿಟಿ ಮಳೆಯ ನಡುವೆಯೇ ಮಾತನಾಡಿದ ರಜನಿಕಾಂತ್‌, ಕರ್ನಾಟಕದ ಎಲ್ಲರೂ ಸಹೋದರರಾಗಿ ಇರಬೇಕೆಂದು ರಾಜರಾಜೇಶ್ವರಿ, ಅಲ್ಲಾಹ್‌, ಜೀಸಸ್‌ನಲ್ಲಿ ಕೇಳಿಕೊಳ್ಳುತ್ತೇನೆ. ಅಪ್ಪು ಅವರು ಮಾರ್ಕಂಡೇಯ, ಪ್ರಹ್ಲಾದ, ನಚಿಕೇತನ ರೀತಿ ಕಲಿಯುಗದಲ್ಲಿ ಅಪ್ಪು ಜನಿಸಿದ್ದಾರೆ. ಅಪ್ಪು ದೇವರ ಮಗು. ನಮ್ಮಲ್ಲಿ ಸ್ವಲ್ಪ ದಿನ ಇದ್ದು ಮತ್ತೆ ದೇವರ ಬಳಿ ಸೇರಿದೆ. ಆ ಮಗುವಿನ ಆತ್ಮ ನಮ್ಮ ಸುತ್ತಲೇ ಇದೆ ಎಂದರು.

ಶಬರಿ ಮಲೆ ಯಾತ್ರೆಯೊಂದರ ಸಂದರ್ಭವನ್ನು ನೆನೆದ ರಜನಿಕಾಂತ್‌, ಶಬರಿ ಮಲೆ ಯಾತ್ರೆಯಲ್ಲಿ ಘೋಷಣೆಗಳನ್ನು ವೀರಮಣಿ ಎಂಬ ದೊಡ್ಡ ಗಾಯಕರು ಹೇಳುತ್ತಿದ್ದಾರೆ. 1979ರಲ್ಲಿ ಒಂದು ಚಿಕ್ಕ ಮಗು ಸ್ವಾಮಿಯೇ ಶರಣಂ ಅಯ್ಯಪ್ಪ ಎಂದು ಕೂಗಿತು. ಎಲ್ಲರಿಗೂ ಇದನ್ನು ಕೇಳಿ ರೋಮಾಂಚನ ಆಯಿತು.

ಆಗ ರಾಜಕುಮಾರ್‌ ಮಡಿಲಲ್ಲಿ ಅಪ್ಪು ಎಂಬ ಮಗು ಚಂದ್ರನಂತಹ ಕಳೆ, ನಕ್ಷತ್ರದಂತಹ ಕಣ್ಗಳಿಂದ ಕುಳಿತಿತ್ತು. ಆ ಮಗುವನ್ನು ಅಣ್ಣಾವ್ರು ಹೆಗಲ ಮೇಲೆ ಕೂರಿಸಿಕೊಂಡು ನಡೆದರು. ನಾನು ನೋಡಿದ ಆ ಮಗು ಬೆಳೆಯಿತು. ಅಪ್ಪು ಸಿನಿಮಾ ಬಂದಿದೆ, ನೋಡುತ್ತೀರ ಎಂದು ಅಣ್ಣಾವ್ರು ಕೇಳಿದರು. ಅಪ್ಪು ಸಿನಿಮಾದಲ್ಲಿ ಅವರ ಡ್ಯಾನ್ಸ್‌, ಫೈಟ್‌ ನೋಡಿದೆ. 100 ದಿನ ಈ ಚಿತ್ರ ಸಾಗಿದರೆ ನೀವೇ ಶೀಲ್ಡ್‌ ಕೊಡಬೇಕು ಎಂದು ಅಣ್ಣಾವ್ರು ಹೇಳಿದ್ದರು. ಸಿನಿಮಾ 100 ದಿನ ಆದ ನಂತರ ಅಂಬೇಡ್ಕರ್‌ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾನೇ ಶೀಲ್ಡ್‌ ನೀಡಿದೆ ಎಂದರು.

ಆ ಸಮಾರಂಭ ಅಪ್ಪುಗೆ ಸೇರಿದ್ದು. ಈ ಸಮಾರಂಭವೂ ಅಪ್ಪು ಸಮಾರಂಭ, ಅವನೇ ನಾಯಕ. ಅವನು ನಮ್ಮೊಂದಿಗೆ ಇಲ್ಲ ಎಂದು ಜೀರ್ಣ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಪ್ಪು ನಿಧನವಾದಾಗ ನಾನು ಶಸ್ತ್ರಚಿಕಿತ್ಸೆಗೆ ಒಳಗಾಗಿ ಐಸಿಯುನಲ್ಲಿದ್ದೆ. ಆಗ ನನಗೆ ಯಾರೂ ವಿಷಯ ಹೇಳಿರಲಿಲ್ಲ. ಇದನ್ನು ಕೇಳಿದ ನಂತರ ನನಗೆ ನಂಬಲು ಆಗಲೇ ಇಲ್ಲ. ಈ ಕಷ್ಟವನ್ನು ಪುನೀತ್‌ ಪತ್ನಿ ಅಶ್ವಿನಿ ಹೇಗೆ ತಡೆದುಕೊಂಡಿದ್ದಾರೆ ಗೊತ್ತಾಗುತ್ತಿಲ್ಲ ಎಂದು ಹೇಳಿದರು.

ಅಪ್ಪು ನಿಧನರಾದಾಗ ಅಷ್ಟು ಜನರು ಏಕೆ ಬಂದರು? ಆತನ ಮನುಷ್ಯತ್ವಕ್ಕೆ, ದಾನ ಮಾಡುವ ಗುಣಕ್ಕೆ ಆಗಮಿಸಿದರು. ಒಂದು ಕೈಯಲ್ಲಿ ಮಾಡಿದ ದಾನ ಇನ್ನೊಂದು ಕೈಗೆ ಗೊತ್ತಾಗಬಾರದು ಎಂದು ಅಪ್ಪು ದಾನ ಮಾಡಿದ್ದರು. ನಟ ನಿಜ ಜೀವನದಲ್ಲಿ ಹೇಗೆ ಬಾಳುತ್ತಾನೆ ಎನ್ನುವುದರ ಆಧಾರದಲ್ಲಿ ಆತ ಜನರ ಮನಸ್ಸಿನಲ್ಲಿ ಉಳಿಯುತ್ತಾನೆ ಎಂದು ತಮಿಳುನಾಡಿನ ಎಂಜಿಆರ್‌ ಹೇಳಿದ್ದರು. ಅದೇ ರೀತಿ ಅಪ್ಪು ನಡೆದುಕೊಂಡರು. ಅದೇ ರೀತಿ ಎನ್‌ಟಿಆರ್‌ ಬಾಳಿದರು. ಅದೇ ರೀತಿ ಡಾ. ರಾಜಕುಮಾರ್‌ ಸಹ ಜನರ ಆರಾಧ್ಯ ದೈವವಾಗಿದ್ದರು. ಅವರೆಲ್ಲರೂ ಅರವತ್ತು-ಎಪ್ಪತ್ತು ವರ್ಷದಲ್ಲಿ ಮಾಡಿದ ಸಾಧನೆಯನ್ನು ಕೇವಲ 21 ವರ್ಷದಲ್ಲಿ ಮಾಡಿ ಹೋಗಿದ್ದಾನೆ. ಅಪ್ಪು ಯಾವಾಗಲೂ ನಮ್ಮ ಜತೆಯಲ್ಲೇ ಇರುತ್ತಾನೆ. ಕರ್ನಾಟಕ ರತ್ನ ಪ್ರಶಸ್ತಿಯನ್ನು ಇದೇ ವೇದಿಕೆಯಲ್ಲಿ ರಾಜಕುಮಾರ್‌ ಅವರಿಗೆ ನೀಡಲಾಗಿತ್ತು. ಅಂದಿನ ದಿನವೂ ಮಳೆ ಬಂದಿತ್ತು ಎಂದು ಕೇಳಲ್ಪಟ್ಟಿದ್ದೇನೆ. ಇಂದು ಮಳೆ ಆಗಮಿಸುತ್ತಿದೆ. ಈ ಪ್ರಶಸ್ತಿ ನೀಡಿದ ಕರ್ನಾಟಕಕ್ಕೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.

ಪುನೀತ್‌ ರಾಜ್‌ ಕುಮಾರ್‌ ಅವರೇ ಕರ್ನಾಟಕ ರತ್ನ
ಜೂನಿಯರ್‌ ಎನ್‌ಟಿಆರ್‌ ಮಾತನಾಡಿ, ಇಡೀ ಕರ್ನಾಟಕ ರಾಜ್ಯಕ್ಕೆ ಹಾಗೂ ಪ್ರಪಂಚಾದ್ಯಂತ ಇರುವ ಎಲ್ಲ ಕನ್ನಡ ಜನರಿಗೆ ರಾಜ್ಯೋತ್ಸವ ಶುಭಾಶಯಗಳು. ಪರಂಪರೆ ಹಾಗೂ ಉಪನಾಮ ಹಿರಿಯರಿಂದ ಬರುತ್ತದೆ, ಆದರೆ ವ್ಯಕ್ತಿತ್ವ ಎನ್ನುವುದು ವ್ಯಕ್ತಿಯ ಸ್ವಂತ ಸಂಪಾದನೆ. ಅಹಂಕಾರ, ಅಹಂ ಇಲ್ಲದೆ ತಮ್ಮ ನಗುವಿನಿಂದ ಒಂದು ರಾಜ್ಯವನ್ನೇ ಗೆದ್ದ ರಾಜಕುಮಾರ ಇದ್ದರೆ ಅದು ಪುನೀತ್‌ ರಾಜಕುಮಾರ್‌ ಮಾತ್ರ.

ಕರ್ನಾಟಕದ ಸೂಪರ್‌ ಸ್ಟಾರ್‌, ಉತ್ತಮ ಪತಿ, ನಟ, ಸ್ನೇಹಿತ ಹಾಗೂ ಮಾನವೀಯ ವ್ಯಕ್ತಿತ್ವ ಅಪ್ಪುವಿನದ್ದು. ಅವರ ನಗುವಿನಲ್ಲಿದ್ದ ಶ್ರೀಮಂತಿಕೆಯನ್ನು ಎಲ್ಲಿಯೂ ನೋಡಲು ಸಿಗುವುದಿಲ್ಲ. ಕರ್ನಾಟಕ ರತ್ನ ಪ್ರಶಸ್ತಿಯನ್ನು ಅವರಿಗೆ ನೀಡುವುದಲ್ಲ, ಕರ್ನಾಟಕ ರತ್ನದ ಅರ್ಥವೇ ಪುನೀತ್‌ ರಾಜಕುಮಾರ್‌. ಈ ಗೌರವ ನೀಡಿದ ಕರ್ನಾಟಕ ಸರ್ಕಾರಕ್ಕೆ ಧನ್ಯವಾದಗಳು. ನನ್ನನ್ನು ತಮ್ಮ ಕುಟುಂಬದಂತೆ ಭಾವಿಸಿದ್ದಕ್ಕೆ ಧನ್ಯವಾದಗಳು ಎಂದರು.

ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ದೇವರು ಮಳೆಯ ರೂಪದಲ್ಲಿ ದೊಡ್ಡ ಪ್ರಮಾಣದಲ್ಲಿ ಆಶೀರ್ವಾದ ಮಾಡುತ್ತಿದ್ದಾನೆ. ಅಪ್ಪುಗೆ ಇಡೀ ಕರ್ನಾಟಕದಲ್ಲಿ, ಪ್ರತಿ ಗ್ರಾಮದಲ್ಲಿ ಆಚರಣೆ ಆಗುತ್ತಿದೆ. ಪ್ರಶಸ್ತಿ ನೀಡುತ್ತಿರುವುದು ನನ್ನ, ಸರ್ಕಾರದ ಪುಣ್ಯ ಭಾಗ್ಯ. ಇಂತಹ ಸೌಭಾಗ್ಯ ನಮಗೆ ಸಿಕ್ಕಿದೆ. ಪುನೀತ್‌ ಕೆಳಗೆ ಬಂದು ನೋಡಿ, ಜನರು ಎಷ್ಟು ಅಭಿಮಾನಿಗಳು ಬಂದಿದ್ದಾರೆ. ಇಲ್ಲಿ ಮತ್ತೊಮ್ಮೆ ಕನ್ನಡ ನಾಡಿನಲ್ಲಿ ಹುಟ್ಟಿ ಬಾ ಎಂದು ಆಶಿಸುತ್ತೇವೆ. ಅಪ್ಪು ಎಲ್ಲರ ಮನದಲ್ಲಿ ನೆಲೆಸಿದ್ದಾರೆ ಎಂದು ಭಾವುಕವಾಗಿ ನುಡಿದರು.

ಇದನ್ನೂ ಓದಿ | Appu Namana | ಕರ್ನಾಟಕ ರತ್ನ ಕಾರ್ಯಕ್ರಮಕ್ಕೆ ಜನಸಾಗರ, ಮೋಡಿ ಮಾಡಿದ ವಿಜಯಪ್ರಕಾಶ್‌ ಗಾಯನ

Continue Reading
Advertisement
gold rate today sruthi hassan
ಚಿನ್ನದ ದರ51 seconds ago

Gold Rate Today: ಚಿನ್ನದ ಬೆಲೆಯಲ್ಲಿ ಇಂದು ಇಳಿಕೆ, ಗ್ರಾಹಕರಿಗೆ ತುಸು ನಿರಾಳ

India Head Coach
ಕ್ರೀಡೆ8 mins ago

India Head Coach: ಭಾರತ ತಂಡದ ಕೋಚ್​ ಆಗಲು ಫ್ಲೆಮಿಂಗ್​ಗೆ ಮನವೊಲಿಸುವಂತೆ ಧೋನಿಗೆ ಮನವಿ ಮಾಡಿದ ಬಿಸಿಸಿಐ!

Viral Video
ವೈರಲ್ ನ್ಯೂಸ್17 mins ago

Viral Video: ಪೆಟ್ರೋಲ್ ಬಂಕ್‌ನಲ್ಲಿ ಹೊತ್ತಿಕೊಂಡ ಬೆಂಕಿಯನ್ನು ಈತ ಏಕಾಂಗಿಯಾಗಿ ಹೇಗೆ ನಂದಿಸಿದ ನೋಡಿ!

Contaminated Water
ಮೈಸೂರು26 mins ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Viral video
ವೈರಲ್ ನ್ಯೂಸ್32 mins ago

Chudidar Gang: ಚಡ್ಡಿ ಗ್ಯಾಂಗ್ ಆಯ್ತು, ಈಗ ದರೋಡೆಕೋರರ ಚೂಡಿದಾರ್ ಗ್ಯಾಂಗ್ ಆ್ಯಕ್ಟಿವ್ ಆಗಿದೆ; ಹುಷಾರ್! ವಿಡಿಯೊ ನೋಡಿ

Actor Upendra Ajaneesh Visited Hangary To Record Music
ಸ್ಯಾಂಡಲ್ ವುಡ್53 mins ago

Actor Upendra: ಹಂಗೆರಿಯಲ್ಲಿ ಉಪೇಂದ್ರ, ಅಜನೀಶ್: ʻUIʼ ಸಿನಿಮಾದ ಬಿಗ್‌ ಅಪ್‌ಡೇಟ್‌!

RCB
ಕ್ರೀಡೆ57 mins ago

RCB: ಅಮೆರಿಕದ ಘಟಿಕೋತ್ಸವದಲ್ಲೂ ಆರ್​ಸಿಬಿಯದ್ದೇ ಹವಾ: ವಿಡಿಯೊ ವೈರಲ್​

Dog Attack in raichur
ರಾಯಚೂರು1 hour ago

Dog Attack: ಆಟವಾಡುತ್ತಿದ್ದವಳ ಕಿತ್ತು ತಿಂದ ಬೀದಿ ನಾಯಿ; ರಕ್ತಸ್ರಾವವಾಗಿ 4 ವರ್ಷದ ಬಾಲಕಿ ಸಾವು

jain monk samadhi sena chikkodi sallekhana
ಚಿಕ್ಕೋಡಿ1 hour ago

Sallekhana: ಸಲ್ಲೇಖನ ವ್ರತ ಸ್ವೀಕರಿಸಿ ಸಮಾಧಿಸೇನ ಮುನಿ ಜಿನೈಕ್ಯ

Viral Video
ವೈರಲ್ ನ್ಯೂಸ್1 hour ago

Viral Video: ಅಬ್ಬಾ…ಇವರೆಂಥಾ ರಾಕ್ಷಸರು! ಸೊಸೆ ಮೇಲೆ ಅತ್ತೆ, ನಾದಿನಿಯಿಂದ ಅಟ್ಯಾಕ್‌; ವಿಡಿಯೋ ವೈರಲ್‌

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ22 hours ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ2 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ2 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ2 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ4 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ4 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ5 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ5 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು5 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

ಟ್ರೆಂಡಿಂಗ್‌