Appu Namana | ರಕ್ತದಾನ, ಅನ್ನದಾನ ಮಾಡಿ ʻಪುನೀತʼರಾದ ಅಭಿಮಾನಿಗಳು - Vistara News

ಕರ್ನಾಟಕ

Appu Namana | ರಕ್ತದಾನ, ಅನ್ನದಾನ ಮಾಡಿ ʻಪುನೀತʼರಾದ ಅಭಿಮಾನಿಗಳು

ನಟ ಸಾರ್ವಭೌಮ ಡಾ ರಾಜಕುಮಾರ್‌ ಅವರು ಅಭಿಮಾನಿ ದೇವರು ಎಂದರೆ, ಅಭಿಮಾನಿಗಳೇ ನಮ್ಮ ಮನೆ ದೇವರು ಎಂದವರು ಡಾ. ಪುನೀತ್‌ ರಾಜಕುಮಾರ್‌. ವಿವಿಧ ಸಮಾಜಮುಖಿ ಕಾರ್ಯಗಳಲ್ಲಿ ತೊಡಗುವ ಮೂಲಕ ಅಪ್ಪು ಅಭಿಮಾನಿಗಳು ಅವರ ಮೊದಲ ವರ್ಷದ ಪುಣ್ಯ ಸ್ಮರಣೆಯನ್ನು (Appu Namana) ಅರ್ಥಪೂರ್ಣವಾಗಿ ಆಚರಿಸಿದರು.

VISTARANEWS.COM


on

appu namana
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ರಾಜರತ್ನ ಮರೆಯಾಗಿ ವರ್ಷ ಕಳೆದರೂ, ಅಭಿಮಾನಿಗಳಲ್ಲಿ ಇಂದಿಗೂ ಜೀವಂತವಾಗಿದ್ದಾರೆ. ದಿವಂಗತ ಪುನೀತ್‌ ರಾಜಕುಮಾರ್‌ ಪುಣ್ಯಸ್ಮರಣೆ (Appu Namana) ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಅಪ್ಪು ಅಭಿಮಾನಿಗಳು ರಕ್ತದಾನ, ಅನ್ನಸಂತರ್ಪಣೆಗಳನ್ನು ಮಾಡಿದ್ದಾರೆ. ಇನ್ನು ಹಲವು ನೇತ್ರಾದಾನ, ದೇಹದಾನಕ್ಕೆ ಸಹಿ ಹಾಕಿದ್ದಾರೆ. ಕೆಲವರು ಬಡ ವಿದ್ಯಾರ್ಥಿಗಳಿಗೆ ಸೈಕಲ್‌, ಪುಸ್ತಕ ವಿತರಣೆ ಮಾಡಿದ್ದರೆ, ಅಭಿಮಾನಿ ಸಂಘವೊಂದು ವೃದ್ಧಾಶ್ರಮ ಆರಂಭಕ್ಕೆ ಭೂ ಪೂಜೆಯನ್ನೂ ನೆರವೇರಿಸಿದೆ.

ವಿಜಯನಗರದಲ್ಲಿ ಬಡ ವಿದ್ಯಾರ್ಥಿಗಳಿಗೆ ಸೈಕಲ್‌-ಪುಸ್ತಕ ವಿತರಣೆ
ದೊಡ್ಮನೆ ಹುಡುಗ ಅಪ್ಪು ನಮ್ಮನ್ನಗಲಿ ಒಂದು ವರ್ಷ ಕಳೆದಿದೆ. ಈ ಹಿನ್ನೆಲೆಯಲ್ಲಿ ವಿಜಯನಗರದಲ್ಲಿ ಮೊದಲ ವರ್ಷದ ಪುಣ್ಯಸ್ಮರಣೆ ಆಯೋಜನೆ ಮಾಡಲಾಗಿತ್ತು. ಹೊಸಪೇಟೆಯ ಪುನೀತ್ ರಾಜಕುಮಾರ್ ವೃತ್ತದಲ್ಲಿರುವ ಅಪ್ಪು ಕಂಚಿನ ಪ್ರತಿಮೆಯ ಬಳಿ ಬೆಳಗ್ಗೆಯಿಂದಲೇ ಆಗಮಿಸುತ್ತಿದ್ದ ಅಭಿಮಾನಿಗಳು, ಪೂಜೆ ಮಾಡಿ, ಸೆಲ್ಫಿ ತೆಗೆದುಕೊಳ್ಳುತ್ತಿದ್ದ, ಚಿತ್ರಣ ಕಂಡು ಬಂತು.

ಹೊಸಪೇಟೆಯ ಅಭಿಮಾನಿಗಳಾದ ಕಿಚಡಿ ವಿಶ್ವ, ಜೋಗಿ ತಾಯಪ್ಪ ಮತ್ತು ಸಚಿವ ಆನಂದ್ ಸಿಂಗ್ ಪುತ್ರ ಸಿದ್ದಾರ್ಥ್ ಸಿಂಗ್ ಅವರು ಪುತ್ಥಳಿಗೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿದರು. ಪುನೀತ್ ರಾಜಕುಮಾರ್ ಅವರ ಹೆಸರಿನಲ್ಲಿ ಸಮಾಜ ಸೇವೆ ನಾವು ಮಾಡುತ್ತಿದ್ದೇವೆ. ದೇವರು ಎಷ್ಟು ಶಕ್ತಿ ಕೊಟ್ಟಿದ್ದಾನೋ, ಅಷ್ಟು ಸೇವೆ ಮಾಡುತ್ತೇವೆ. ಈಗ ಬಡ ವಿದ್ಯಾರ್ಥಿಗಳಿಗೆ ಸೈಕಲ್ ಹಾಗೂ ಪುಸ್ತಕಗಳನ್ನು ವಿತರಿಸಿದ್ದೇವೆ ಎಂದು ಸಿದ್ದಾರ್ಥ ಸಿಂಗ್ ಹೇಳಿದರು. ಪೂಜೆಗೂ ಮುನ್ನ ಹ‌ಂಪಿಯಿಂದ ಹೊಸಪೇಟೆಯ ಪುನೀತ್ ಸರ್ಕಲ್‌ಗೆ ಜ್ಯೋತಿ ತರಲಾಯಿತು. ಈ ವೇಳೆ ಅಪ್ಪು ಪರ ಜಯಘೋಷ ಕೂಗಲಾಯಿತು.

ಮಂತ್ರಾಲಯಕ್ಕೂ ಪುನೀತ್‌ಗೂ ಉಂಟು ನಂಟು
ನಟ ಪುನೀತ್ ರಾಜಕುಮಾರ್‌ಗೆ ಗುರು ರಾಘವೇಂದ್ರ ಎಂದರೆ ಅದೇನೋ ಪ್ರೀತಿ. ಮಂತ್ರಾಲಯಕ್ಕೂ ಅವರಿಗೂ ಬಹಳಷ್ಟು ನಂಟು ಇತ್ತು. ಈ ಹಿನ್ನೆಲೆ ಮಂತ್ರಾಲಯದಲ್ಲಿ ಅಪ್ಪು ಫ್ಯಾನ್ಸ್ ನಿರ್ಗತಿಕರಿಗೆ ಮಾರ್ನಿಂಗ್ ಟಿಫಿನ್ ವಿತರಣೆ ಮಾಡಿದ್ದಾರೆ. ರಾಯಚೂರಿನ‌ ಅಪ್ಪು ಯೂತ್ ಬ್ರಿಗೇಡ್ ವತಿಯಿಂದ ಸುಮಾರು 300 ಜನರಿಗೆ ಉಪಾಹಾರ ‌ವಿತರಣೆ ಮಾಡಿದರು. ಜತೆಗೆ ಪಲಾವ್, ಬಾಳೆಹಣ್ಣು ವಿತರಣೆ ‌ಮಾಡಲಾಯಿತು.

Appu Namana

ಅಪ್ಪು ಹೆಸರಿನಲ್ಲಿ ವೃದ್ಧಾಶ್ರಮ
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಭೌತಿಕವಾಗಿ ಅಗಲಿ ಒಂದು ವರ್ಷವಾಗುತ್ತಿದ್ದು, ಅವರ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಅಭಿಮಾನಿಗಳು ಸಾಮಾಜಿಕ ಕೆಲಸಗಳನ್ನು ಮುಂದುವರಿಸಿದ್ದಾರೆ‌. ಕೊಪ್ಪಳ ಜಿಲ್ಲೆಯ ಗಂಗಾವತಿಯ ಅಪ್ಪು ಅಭಿಮಾನಿಗಳು ಅವರ ಹೆಸರಿನಲ್ಲಿ ವೃದ್ಧಾಶ್ರಮದ ಭೂಮಿಪೂಜೆ ನೆರವೇರಿಸಲಾಗಿದೆ. ಗಂಗಾವತಿ ನಗರದ ಹೊಸಳ್ಳಿ ರಸ್ತೆಯಲ್ಲಿರುವ ಎಲ್‌ವಿಟಿ ಕಾಲೋನಿಯಲ್ಲಿ ಪುನೀತ್ ರಾಜಕುಮಾರ್‌ ಅವರ ಅಭಿಮಾನಿಗಳಿಂದ ವೃದ್ಧಾಶ್ರಮ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗಿದೆ. ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಭೂಪೂಜೆ ನೆರವೇರಿಸಿದ್ದಾರೆ.

ಮತ್ತೊಂದು ಕಡೆ ನಗರದ ಕೇಂದ್ರೀಯ ಬಸ್ ನಿಲ್ದಾಣದ ಬಳಿ ನೂರಾರು ಜನರಿಗೆ ಅನ್ನ ಸಂತರ್ಪಣೆ ಮಾಡಲಾಯಿತು. ಒಂದು ಕ್ವಿಂಟಾಲ್ ಅಕ್ಕಿಯಲ್ಲಿ ತಯಾರಿಸಿದ್ದ ವಿವಿಧ ಖಾದ್ಯಗಳನ್ನು ನೀಡಲಾಯಿತು. ಇದರ ಜತೆಗೆ ಅನೇಕರು ನೇತ್ರದಾನಕ್ಕೆ ಒಪ್ಪಿಗೆ ಪತ್ರ ನೀಡಿದರು. ಬಸ್ ನಿಲ್ದಾಣದ ಬಳಿ ನಡೆದ ಕಾರ್ಯಕ್ರಮದಲ್ಲಿ ಅಭಿಮಾನಿಗಳು ಭಾವಚಿತ್ರದ ಬಳಿ ಸೆಲ್ಫಿ ತೆಗೆದುಕೊಂಡು ನೆಚ್ಚಿನ ನಟನನ್ನು ಸ್ಮರಿಸಿದರು.

2 ಸಾವಿರಕ್ಕೂ ಹೆಚ್ಚು ಜನರಿಗೆ ಊಟದ ವ್ಯವಸ್ಥೆ
ಕೋಲಾರದ ಶ್ರೀನಿವಾಸಪುರ ಪಟ್ಟಣದ ಪುರಸಭೆ ಕಚೇರಿ ಮುಂಭಾಗದಲ್ಲಿ ಪುನೀತ್ ರಾಜಕುಮಾರ್ ಅಭಿಮಾನಿಗಳ ಬಳಗದ ವತಿಯಿಂದ ಅಪ್ಪು ಭಾವಚಿತ್ರವಿಟ್ಟು ಅಲಂಕರಿಸಿ ಪುಷ್ಪ ನಮನ ಸಲ್ಲಿಸಲಾಯಿತು. ಸುಮಾರು ಎರಡು ಸಾವಿರಕ್ಕೂ ಹೆಚ್ಚು ಜನರಿಗೆ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.

ಅರಮನೆ ನಗರಿ ಮೈಸೂರಿನಲ್ಲಿ ಅಭಿಮಾನಿಗಳಿಂದ ರಕ್ತದಾನ
ಮೈಸೂರಿನಲ್ಲೂ ಅಪ್ಪು ಪುಣ್ಯ ಸ್ಮರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಲಯನ್ಸ್ ಜೀವಾಧಾರ ರಕ್ತ ನಿಧಿ ವತಿಯಿಂದ ಶಿಬಿರ ಆಯೋಜನೆ ಆಯೋಜಿಸಲಾಗಿತ್ತು. ನ್ಯೂ ಸಯ್ಯಾಜಿರಾವ್ ರಸ್ತೆಯ ರಕ್ತನಿಧಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅಭಿಮಾನಿಗಳು ರಕ್ತದಾನ ಮಾಡಿದರು. ಡಾ.ಪುನೀತ್ ರಾಜಕುಮಾರ್ ಅವರಿಂದ ಸ್ಫೂರ್ತಿ ಪಡೆದ ಅಭಿಮಾನಿಗಳು ರಕ್ತದಾನ, ನೇತ್ರದಾನಕ್ಕೆ ಆಸಕ್ತಿ ತೋರುತ್ತಿದ್ದಾರೆ.

ಡಾ.ಪುನೀತ್ ರಾಜಕುಮಾರ್ ಬಸ್ ನಿಲ್ದಾಣವೆಂದು ನಾಮಕರಣ
ಚಾಮರಾಜನಗರ ಜಿಲ್ಲೆಯ ಯಳಂದೂರು ಪಟ್ಟಣದಲ್ಲಿ ಪುನೀತ್ ಅಭಿಮಾನಿಗಳು ಬಸ್ ತಂಗುದಾಣಕ್ಕೆ “ಕರ್ನಾಟಕ ರತ್ನ ಡಾ.ಪುನೀತ್ ರಾಜಕುಮಾರ್ ಬಸ್ ನಿಲ್ದಾಣ”ವೆಂದು ನಾಮಕರಣ ಮಾಡಿದ್ದಾರೆ.

Appu Namana

ಶ್ರೀಗಂಧದ ಸಸಿ ವಿತರಣೆ
ಕೋಲಾರದ ಬಂಗಾರಪೇಟೆ ಪಟ್ಟಣದ ವಿಜಯ ಚಿತ್ರಮಂದಿರದ ಎದುರು ಅನ್ನ ಸಂತರ್ಪಣೆ ಕಾರ್ಯಕ್ರಮ ನೆರವೇರಿಸಲಾಯಿತು. ಜತೆಗೆ ಗಂಧದ ಗುಡಿ ಸಿನಿಮಾ ಬಿಡುಗಡೆ ಹಿನ್ನೆಲೆ ಶ್ರೀಗಂಧದ ಸಸಿಯನ್ನು ಅಭಿಮಾನಿಗಳ ಸಂಘದ ವತಿಯಿಂದ ವಿತರಣೆ ಮಾಡಲಾಗಿದೆ.

ಗಾಜನೂರಿನಲ್ಲಿ ಎಡೆ ಇಟ್ಟು ಸ್ಮರಣೆ
ಚಾಮರಾಜನಗರದ ಡಾ.ರಾಜಕುಮಾರ್‌ ಹುಟ್ಟೂರು ಗಾಜನೂರಿನಲ್ಲಿ ಅಪ್ಪು ಪುಣ್ಯಸ್ಮರಣೆಯನ್ನು ವಿಶೇಷವಾಗಿ ಮಾಡಲಾಯಿತು. ತೋಟದ ಕಾರ್ಮಿಕರು ಹಾಗೂ ಅಭಿಮಾನಿಗಳು ಅಪ್ಪು ಭಾವಚಿತ್ರವಿಟ್ಟು, ಇಷ್ಟ ತಿನಿಸುಗಳನ್ನು ಎಡೆ ಇಟ್ಟು ನಮಿಸಿದರು. ಇದೇ ವೇಳೆ 300 ಕಿಲೋ ಮೀಟರ್ ದೂರದ ಶಿವಮೊಗ್ಗದಿಂದ ಬಂದ ಅಪ್ಪು ಅಭಿಮಾನಿಗಳು, ಕಟೌಟ್ ಹಾಗೂ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಜತೆಗೆ ದೀರ್ಘದಂಡ ನಮಸ್ಕರಿಸಿ ಮತ್ತೆ ಹುಟ್ಟಿ ಬನ್ನಿ ಎಂದು ಘೋಷಣೆ ಕೂಗಿದರು.

ಇದನ್ನೂ ಓದಿ | Appu Namana | ಅಪ್ಪು ಇಲ್ಲದೆ 1 ವರ್ಷ: ಅಂದು ಮುತ್ತಿಟ್ಟು ಕಳುಹಿಸಿಕೊಟ್ಟಿದ್ದ ಸಿಎಂ ಬೊಮ್ಮಾಯಿ ವರ್ಷದ ಬಳಿಕ ಹೇಳಿದ್ದೇನು?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಪ್ರಮುಖ ಸುದ್ದಿ

Rain News : ಬೆಂಗಳೂರಿನಲ್ಲಿ ಸಂಜೆ ಸುರಿದ ಸಣ್ಣ ಮಳೆಗೆ ಕೆಲವೆಡೆ ಅನಾಹುತ

ಬೆಂಗಳೂರಿನಲ್ಲಿ ಹಗಲಡೀ 38 ಡಿಗ್ರಿ ಸೆಲ್ಸಿಯಸ್​ ತಾಪಮಾನವಿತ್ತು. ಸಂಜೆ ವೇಳೆ ಜೋಉ ಗಾಳಿಯೊಂದಿಗೆ ಮಳೆ ಬಂತು. ಮಳೆ ಜೋರಾಗಿರಲಿಲ್ಲ ಗಾಳಿಯ ವೇಗ ಮಿತಿ ಮೀರಿತ್ತು. ಹೀಗಾಗಿ ಕೊಂಬೆಗಳು ಉರುಳಿ ಬಿದ್ದವು. ಕೊಡಿಗೆಹಳ್ಳಿಯ ರೈಲ್ವೆ ಪ್ಯಾರಲ್ ರಸ್ತೆಯಲ್ಲಿ ಸಂಜೆ ವೇಳೆ ಮರ ಬಿದ್ದು ಬೈಕ್ ಸವಾರ ಗಾಯಗೊಂಡಿದ್ದಾನೆ. ಅವರು ಮರ ಬಿದ್ದ ರಭಸಕ್ಕೆ ಆಘಾತಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

VISTARANEWS.COM


on

Rain News
Koo

ಬೆಂಗಳೂರು: ಮಿತಿಮೀರಿದ ತಾಪಮಾನದಿಂದ ಬೇಸತ್ತಿದ ಬೆಂಗಳೂರಿನ ಮಂದಿಗೆ ಗುರುವಾರ ಸಂಜೆ ಸುರಿದ ಸಣ್ಣ ಮಳೆ ಸಮಾಧಾನ (Rain News) ತಂದಿತು. ಆದರೆ, ಮಳೆಗಿಂತ ಅಧಿಕ ಗಾಳಿಯೇ ಬೀಸಿದ ಕಾರಣ ಕೆಲವೆಡೆ ಸಣ್ಣ ಪುಟ್ಟ ಅನಾಹುತಗಳು ಸಂಭವಿಸಿದವು. ವಾಹನಗಳ ಮೇಲೆ ಮರದ ಕೊಂಬೆಗಳು ಬಿದ್ದು ಹಾನಿಗೊಂಡವು. ಬೈಕ್​ ಸವಾರರೊಬ್ಬರು ಏಟು ಬಿದ್ದು ಆಸ್ಪತ್ರೆ ಸೇರಿದರು. ಅದೇ ರೀತಿ ಮೊದಲ ಮಳೆಗೆ ಆಯಿಲ್​ ಬಿದ್ದಿದ್ದ ರಸ್ತೆಗಳು ಒದ್ದೆಯಾಗಿ 30ಕ್ಕೂ ಹೆಚ್ಚು ಬೈಕ್​ಗಳು ಸ್ಕಿಡ್ ಆಗಿ ಬಿದ್ದವು.

ಬೆಂಗಳೂರಿನಲ್ಲಿ ಹಗಲಿಡೀ 38 ಡಿಗ್ರಿ ಸೆಲ್ಸಿಯಸ್​ ತಾಪಮಾನವಿತ್ತು. ಸಂಜೆ ವೇಳೆ ಜೋಉ ಗಾಳಿಯೊಂದಿಗೆ ಮಳೆ ಬಂತು. ಮಳೆ ಜೋರಾಗಿರಲಿಲ್ಲ ಗಾಳಿಯ ವೇಗ ಮಿತಿ ಮೀರಿತ್ತು. ಹೀಗಾಗಿ ಕೊಂಬೆಗಳು ಉರುಳಿ ಬಿದ್ದವು. ಕೊಡಿಗೆಹಳ್ಳಿಯ ರೈಲ್ವೆ ಪ್ಯಾರಲ್ ರಸ್ತೆಯಲ್ಲಿ ಸಂಜೆ ವೇಳೆ ಮರ ಬಿದ್ದು ಬೈಕ್ ಸವಾರ ಗಾಯಗೊಂಡಿದ್ದಾನೆ. ಅವರು ಮರ ಬಿದ್ದ ರಭಸಕ್ಕೆ ಆಘಾತಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅದೇ ರೀತಿ ಕಾರಿನ ಮೇಲೆ ಮೇಲೆ ಮರ ಬಿದ್ದ ಪರಿಣಾಮ ಕಾರಿಗೆ ಹಾನಿಯಾಗಿದೆ. ಕಾರಿನಲ್ಲಿದ್ದ ಇಬ್ಬರಿಗೆ ಸಣ್ಣಪುಟ್ಟ ಪೆಟ್ಟಾಗಿದೆ.

ಇದನ್ನೂ ಓದಿ: ಆಸ್ಪತ್ರೆಯಲ್ಲಿ ಟಾರ್ಚ್‌ ಬಳಸಿ ಹೆರಿಗೆ; ತಾಯಿ, ಮಗು ಸಾವು; 3 ಈಡಿಯಟ್ಸ್‌ ಸಿನಿಮಾ ದೃಶ್ಯ ಇಲ್ಲಿ ದುರಂತ!

ಕೆಲ ರಸ್ತೆಗಳು ಆಯಿಲ್‌ ಮಯ

ಸಂಜೆ ವೇಳೆ ಮಳೆ ಸುರಿದ ಕಾರಣ ಬೇಸಿಗೆಯಲ್ಲಿ ರಸ್ತೆ ಮೇಲೆ ಬಿದ್ದಿದ್ದ ಆಯಿಲ್ ಮೇಲಕ್ಕೆ ಬಂದು ನಿಂತಿತು. ಇದರಿಂದಾಗಿ ದ್ವಿಚಕ್ರ ವಾಹನಗಳು ಆಯತಪ್ಪಿ ಬಿದ್ದವು ಸಣ್ಣ ಮಳೆ ಬಿದ್ದ ಕಡೆಗಳಲ್ಲಿ ರಸ್ತೆಗಳಲ್ಲಿ ಆಯಿಲ್ ಕಾಣಿಸಿಕೊಂಡಿತು. ವಿಚಾರ ತಿಳಿಯದೆ ವೇಗವಾಗಿ ಹೋದ ಸ್ಕೂಟರ್​ಗಳು ಬಿದ್ದವು. ವಿಧಾನಸೌಧದ ಮುಂಭಾಗದ ರಸ್ತೆ , ಹಾಗು ಪೀಣ್ಯ ಎಲಿವೇಟೆಡ್ ಫ್ಲೈ ಓವರ್ , ಸಿಐಡಿ ಮುಂಭಾಗದ ರಸ್ತೆಯಲ್ಲಿ ಅವಾಂತರ ನಡೆಯಿತು.

ರಸ್ತೆ ಮೇಲೆ ಮಣ್ಣು ಹಾಕಿ ದ್ವಿಚಕ್ರ ವಾಹನ ಸಂಚಾರಕ್ಕೆ ಪೊಲೀಸರು ಅವಕಾಶ ಮಾಡಿಕೊಟ್ಟರು.

Continue Reading

ರಾಜಕೀಯ

Lok Sabha Election 2024: ಬಾಗಲಕೋಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ್‌ ಪರ ಭರ್ಜರಿ ಪ್ರಚಾರ

Lok Sabha Election 2024: ಬಾಗಲಕೋಟೆಯ ನವನಗರದ ಅಂಜುಮಾನ್‌ ಇಸ್ಲಾಂ ಸಂಸ್ಥೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್‌ ಪಕ್ಷದ ಪ್ರಜಾಧ್ವನಿ ಸಮಾವೇಶದಲ್ಲಿ ಬಾಗಲಕೋಟೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸಂಯುಕ್ತ ಪಾಟೀಲ್‌ ಅವರ ಪರ ಭರ್ಜರಿ ಮತಯಾಚನೆ ಮಾಡಲಾಯಿತು. ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸೇರಿದಂತೆ ಹಲವು ಸಚಿವರು, ಮುಖಂಡರು ಅಭ್ಯರ್ಥಿ ಪರ ಮತಯಾಚಿಸಿದರು.

VISTARANEWS.COM


on

Election campaign for Congress candidate Samyukta Patil in Prajadhwani convention at Bagalkot
Koo

ಬಾಗಲಕೋಟೆ: ಇಲ್ಲಿನ ನವನಗರದ ಅಂಜುಮಾನ್‌ ಇಸ್ಲಾಂ ಸಂಸ್ಥೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್‌ ಪಕ್ಷದ ಪ್ರಜಾಧ್ವನಿ ಸಮಾವೇಶದಲ್ಲಿ ಬಾಗಲಕೋಟೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸಂಯುಕ್ತ ಪಾಟೀಲ್‌ ಅವರ ಪರ ಭರ್ಜರಿ ಮತಯಾಚನೆ (Lok Sabha Election 2024) ಮಾಡಲಾಯಿತು.

ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸೇರಿದಂತೆ ಹಲವು ಸಚಿವರು, ಮುಖಂಡರು ಮಾತನಾಡಿದರು. ಯುವನಾಯಕಿಯನ್ನು ಗೆಲ್ಲಿಸಿ, ಸಂಸತ್ತಿನಲ್ಲಿ ಜಿಲ್ಲೆಯ ಧ್ವನಿಯಾಗಿ ಕೆಲಸ ಮಾಡಲಿದ್ದಾರೆ. ಅವರಿಗೆ ಮತವೆಂಬ ಆಶೀರ್ವಾದ ನೀಡಿ ಎಂದು ಮತದಾರರಲ್ಲಿ ಮನವಿ ಮಾಡಿದರು.

ಇದನ್ನೂ ಓದಿ: AC Blast : ಕಲ್ಯಾಣ್​ ಜ್ಯುವೆಲರಿಯಲ್ಲಿ ಭಾರಿ ಅವಘಡ; ಏರ್​ ಕಂಡೀಷನರ್​ ಬ್ಲಾಸ್ಟ್​ ಆಗಿ ಮೂವರಿಗೆ ಗಾಯ

ಕಾಂಗ್ರೆಸ್‌ ಮುಖಂಡ ನಿಕೇತ್‌ ರಾಜ್‌ ಮೌರ್ಯ ಮಾತನಾಡಿ, ಕರ್ನಾಟಕ ಕಾಂಗ್ರೆಸ್‌ ಗ್ಯಾರಂಟಿ ಬಗ್ಗೆ ಇಡೀ ದೇಶದ ಜನ ಚರ್ಚೆ ಮಾಡುತ್ತಿದ್ದಾರೆ. ರಾಜ್ಯ ಕಾಂಗ್ರೆಸ್‌ ಸರ್ಕಾರವು ನುಡಿದಂತೆ ನಡೆದಿದ್ದು, 5 ಗ್ಯಾರೆಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿ, ಜನರಿಗೆ ತಲುಪಿಸಿದೆ. ಆದರೆ ಗ್ಯಾರಂಟಿ ನೋಡಿ ಸಹಿಸಲು ಸಾಧ್ಯವಾಗದೇ ಬಿಜೆಪಿ ವಿನಾಕಾರಣ ಟೀಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಈ ಬಾರಿಯ ಚುನಾವಣೆಯಲ್ಲಿ ಬಾಗಲಕೋಟೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸಂಯುಕ್ತ ಪಾಟೀಲ್‌ ಗೆದ್ದೇ ಗೆಲ್ಲುತ್ತಾರೆ. ಸಂಸದರಾಗುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ತಿಳಿಸಿದರು.

ಸಮಾವೇಶದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಬಿ. ತಿಮ್ಮಾಪುರ ಮಾತನಾಡಿದರು.

ಇದನ್ನೂ ಓದಿ: Lok Sabha Election 2024: ಮಹಾರಾಷ್ಟ್ರ ಸಿಎಂ ಕರೆಸಿ ಕನ್ನಡಿಗರಿಗೆ ಅವಮಾನ ಮಾಡಿದ ಜೋಶಿ: ಸಂತೋಷ್‌ ಲಾಡ್‌

ಸಮಾವೇಶದಲ್ಲಿ ಸಚಿವರಾದ ಕೆ.ಎನ್‌. ರಾಜಣ್ಣ, ಶಿವಾನಂದ ಪಾಟೀಲ್‌, ಶಾಸಕರಾದ ವಿಜಯಾನಂದ ಕಾಶಪ್ಪನವರ್‌, ಭೀಮಸೇನ್‌ ಚಿಮ್ಮನಕಟ್ಟಿ, ಎಚ್‌.ವೈ. ಮೇಟಿ, ಪ್ರದೀಪ್‌ ಈಶ್ವರ್‌, ಮಾಜಿ ಶಾಸಕಿ ಸೌಮ್ಯಾ ರೆಡ್ಡಿ, ಮೊಹಮ್ಮದ್‌ ನಲಪಾಡ್‌ ಹ್ಯಾರಿಸ್‌, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ನಂಜಯ್ಯನಮಠ, ಜಿಲ್ಲಾ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ರಕ್ಷಿತಾ ಈಟಿ, ಆನಂದ ನ್ಯಾಮಗೌಡ, ಅಜಯ್‌ ಕುಮಾರ್‌ ಸರ್‌ ನಾಯಕ್‌, ಪಕ್ಷದ ಮುಖಂಡರಾದ ಬಿ.ಆರ್‌. ಯಾವಗಲ್‌, ಎಂ.ಪಿ. ನಾಡಗೌಡ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಸೇರಿದಂತೆ ಇತರರು ಉಪಸ್ಥಿತರಿದ್ದರು.

Continue Reading

ದೇಶ

Lok Sabha Election : ಮೋದಿ ಗ್ಯಾರಂಟಿ ಪಡೆಯಲು ಜೋಶಿ ಗೆಲ್ಲಿಸಿ; ಏಕನಾಥ ಶಿಂಧೆ

Lok Sabha Election: ದೇಶದ ವಿಕಾಸ ಹಾಗೂ ಪ್ರಗತಿಯ ಚುನಾವಣೆ ಇದಾಗಿದೆ. ಜೋಶಿ ಅವರು 5ನೆಯ ಬಾರಿ ಸ್ಪರ್ದೆ ಮಾಡಿದ್ದಾರೆ. ನಿಮ್ಮ ಆಶೀರ್ವಾದದಿಂದ ಮತ್ತೊಮ್ಮೆ ಅವರು ಗೆಲ್ಲಬೇಕು. ಆ ಮೂಲಕ ಮೋದಿಯವರ ಕೈ ಬಲಪಡಿಸಬೇಕು. ನಾನು ಕಾರ್ಯಕರ್ತನಾಗಿ ಕೆಲಸ ಮಾಡಿ ಸಿಎಂ ಆಗಿದ್ದೇನೆ. ಈಗಲೂ ಸಹ ನಾನು ಕಾರ್ಯಕರ್ತನಾಗಿಯೇ ಇದ್ದೇನೆ. ನೀವೆಲ್ಲ ಭಾಗ್ಯವಂತರು ಯಾಕೆಂದರೆ ಜೋಶಿ ಆದರ್ಶ ಸಂಸದರು. ಅವರು ಮೋದಿಯವರ ಹತ್ತಿರವೇ ಇರುವ ಸಂಸದರಾಗಿದ್ದಾರೆ ಎಂದು ನುಡಿದರು.

VISTARANEWS.COM


on

Lok Sabha Election
Koo

ಧಾರವಾಡ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ (Lok Sabha Election) ಧಾರವಾಡ ಕ್ಷೇತ್ರದ ಅಭ್ಯರ್ಥಿ ಪ್ರಲ್ಹಾದ್​ ಜೋಶಿ (pralhad joshi) ಪರ ಗುರುವಾರ ಮಹಾರಾಷ್ಟ್ರ ಸಿಎಂ ಹಾಗೂ ಶಿವಸೇನೆ (Eknath Shinde) ಮುಖ್ಯಸ್ಥ ಏಕನಾಥ ಶಿಂಧೆ ಅವರು ಪ್ರಚಾರ ಭಾಷಣೆ ಮಾಡಿದರು. ನಗರದ ಮೃತ್ಯುಂಜಯ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಮಹಾರಾಷ್ಟ್ರ ಮುಖ್ಯಮಂತ್ರಿ ಮೋದಿ (Narendra Modi) ನೀಡುವ ಗ್ಯಾರಂಟಿ ಪಡೆಯಲು ಪ್ರಲ್ಹಾದ್ ಜೋಶಿಯನ್ನು ಗೆಲ್ಲಿಸಿ ಎಂದು ಕರೆಕೊಟ್ಟರು.

ನಮಸ್ಕಾರಗಳು ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಸಿಎಂ ಶಿಂಧೆ ಅವರು, ಧಾರವಾಡದ ಜನತೆಯನ್ನು ಭೇಟಿ ಮಾಡಿದ್ದು ಖುಷಿ ತಂದಿದೆ ಎಂದು ಹೇಳಿದರು. ಛತ್ರಪತಿ ಶಿವಾಜಿ ಅವರಿಗೂ ಧಾರವಾಡಕ್ಕೂ ಸಂಬಂಧ ಇದೆ. ಪುಣೆ ಹಾಗೂ ಧಾರವಾಡ ಸಾಂಸ್ಕೃತಿಕ, ಶೈಕ್ಷಣಿಕ ಕೇಂದ್ರ ಎಂಬುದಾಗಿ ನುಡಿದರು.

ದೇಶದ ವಿಕಾಸ ಹಾಗೂ ಪ್ರಗತಿಯ ಚುನಾವಣೆ ಇದಾಗಿದೆ. ಜೋಶಿ ಅವರು 5ನೆಯ ಬಾರಿ ಸ್ಪರ್ದೆ ಮಾಡಿದ್ದಾರೆ. ನಿಮ್ಮ ಆಶೀರ್ವಾದದಿಂದ ಮತ್ತೊಮ್ಮೆ ಅವರು ಗೆಲ್ಲಬೇಕು. ಆ ಮೂಲಕ ಮೋದಿಯವರ ಕೈ ಬಲಪಡಿಸಬೇಕು. ನಾನು ಕಾರ್ಯಕರ್ತನಾಗಿ ಕೆಲಸ ಮಾಡಿ ಸಿಎಂ ಆಗಿದ್ದೇನೆ. ಈಗಲೂ ಸಹ ನಾನು ಕಾರ್ಯಕರ್ತನಾಗಿಯೇ ಇದ್ದೇನೆ. ನೀವೆಲ್ಲ ಭಾಗ್ಯವಂತರು ಯಾಕೆಂದರೆ ಜೋಶಿ ಆದರ್ಶ ಸಂಸದರು. ಅವರು ಮೋದಿಯವರ ಹತ್ತಿರವೇ ಇರುವ ಸಂಸದರಾಗಿದ್ದಾರೆ ಎಂದು ನುಡಿದರು.

ಕಾಂಗ್ರೆಸ್ ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದೆ. ಅವರು ಗೆಲ್ಲುವ ಮೊದಲು ಏನೇನೋ ಕೊಡ್ತೀನಿ ಅಂಥ ಹೇಳಿದ್ದರು. ಆದರೆ ಈಗ ನಮ್ಮಲ್ಲಿ ದುಡ್ಡಿಲ್ಲ ಅಂತಾರೆ. ಆದ್ರೆ ದೇಶದಲ್ಲಿ ಚಾಲ್ತಿ ಇರೋದು ಮೋದಿ ಗ್ಯಾರಂಟಿ ಎಂದು ಅವರು ಹೇಳಿದರು.

ಇದನ್ನೂ ಓದಿ: K. Annamalai : ಪ್ರಚಾರ ಸಭೆಯಲ್ಲಿ ಅಣ್ಣಾಮಲೈ ಹೊಗಳಿದಾಗ ಕಣ್ಣೀರು ಹಾಕಿದ ವಿಜಯಪುರ ಅಭ್ಯರ್ಥಿ ಜಿಗಜಿಣಗಿ

ಜಾಗತಿಕ ಅರ್ಥ ವ್ಯವಸ್ಥೆಯಲ್ಲಿ ನಾವು 5ನೆಯ ಪಡೆಯಲು ಮೋದಿ ಕಾರಣ. ದೇಶದಲ್ಲಿ ಮೋದಿ ಅಭಿವೃದ್ಧಿ ಮಾಡಿದ್ದಾರೆ. ಒಂದೇ ಒಂದು ರಜೆ ಸಹ ಪಡೆಯದೆ ಕೆಲಸ ಮಾಡಿದ್ದಾರೆ. ಸ್ವಲ್ಪ ಚಳಿ ಆದರೆ ವಿದೇಶಕ್ಕೆ ತೆರಳುವವರು ಬೇರೆ ಪಾರ್ಟಿಯ ಯುವರಾಜ (ರಾಹುಲ್ ಗಾಂಧಿ) ಎಂದು ಶಿಂಧೆ ಹೇಳಿದರು.

ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ತ್ರಿವರ್ಣ ದ್ವಜ ಹಾರಿಸಿದ ಕೀರ್ತಿ ಜೋಶಿ ಅವರಿಗೆ ಇದೆ. ಪಾಕಿಸ್ತಾನದವರು ಮೊದಲು ನಮ್ಮ ದೇಶದಲ್ಲಿ ಬಾಂಬ್ ಹಾಕುತ್ತಿದ್ದರು. ಈಗ ಭಾರತ ಮೋದಿ ನೇತೃತ್ವದಲ್ಲಿ ಪಾಕ್ ನ ಒಳಗೆ ಹೊಕ್ಕು ಸದೆಬಡಿಯುತ್ತಿದೆ ಎಂದು ಹೇಳಿದರು.

ದ್ವಾರಕಾ ನಗರದಲ್ಲಿ ಸಮುದ್ರದ ಒಳಗೆ ಹೋಗಿ ಮೋದಿ ದೇಶದ ಒಳಿತಿಗೆ ಪ್ರಾರ್ಥನೆ ಮಾಡಿದ್ದಾರೆ. ಮೋದಿ ದೇಶದ ಕೆಲಸಕ್ಕಾಗಿ ಅವರು ಇದ್ದಾರೆ. ಕೋಟ್ಯಾನುಕೋಟಿ ರಾಮನ ಭಕ್ತರ ಸಂಕಲ್ಪ ಪೂರ್ಣ ಆಗಿದೆ. ಈಗ ಎಲ್ಲರೂ ಖುಷಿಯಿಂದ ಇದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಮಾಡಿದ ಚಂದ್ರಯಾನ ಫೇಲ್ ಆಗಿವೆ. ಪದೇ ಪದೇ ತಪ್ಪುಗಳನ್ನು ಮಾಡಿದ್ದಾರೆ. ಆದಾಗ್ಯೂ ಇಂಡಿಯಾ ಬಣ ಮೋದಿಯನ್ನು ಸೋಲಿಸುವುದಕ್ಕೆ ನಿಂತಿದೆ, ಅದು ಅದು ಎಂದಿಗೂ ಆಗುವುದಿಲ್ಲ ಎಂದು ನುಡಿದರು.

Continue Reading

ಪ್ರಮುಖ ಸುದ್ದಿ

K. Annamalai : ಪ್ರಚಾರ ಸಭೆಯಲ್ಲಿ ಅಣ್ಣಾಮಲೈ ಹೊಗಳಿದಾಗ ಕಣ್ಣೀರು ಹಾಕಿದ ವಿಜಯಪುರ ಅಭ್ಯರ್ಥಿ ಜಿಗಜಿಣಗಿ

K. Annamalai: ವಿಜಯಪುರ ನಗರದ ಮೀನಾಕ್ಷಿ ಚೌಕನಲ್ಲಿ ಆಯೋಜಿಸಿದ್ದ ಯುವ ಸಮಾವೇಶದಲ್ಲಿ ಅಣ್ಣಾಮಲೈ ಅವರು ಮಾತನಾಡಿದ್ದರು. 7 ಬಾರಿ ಸತತಯಾಗಿ ಗೆಲ್ಲುವುದು ಸುಲಭವಲ್ಲ. 70 ವರ್ಷ ವಯಸ್ಸಿನ ರಮೇಶ ಜಿಗಜಿಣಗಿ ಅವರು ಗೆದ್ದೇ ಗೆಲ್ಲುತ್ತಾರೆ. ವಿಜಯಪುರ ಕ್ಷೇತ್ರದ ಜನರ ಪ್ರೀತಿ ಜಿಗಜಿಣಗಿಯವರ ಮೇಲಿದೆ ಎಂದು ಅಣ್ಣಾಮಲೈ ಹೇಳಿದರು. ಈ ವೇಳೆ ರಮೇಶ ಜಿಗಜಿಣಗಿ ಆನಂದಬಾಷ್ಪ ಸುರಿಸಿದರು.

VISTARANEWS.COM


on

K. Annamalai
Koo

ವಿಜಯಪುರ: ಲೋಕ ಸಭಾ ಕ್ಷೇತದ ವಿಜಯಪುರ ಅಭ್ಯರ್ಥಿ ರಮೇಶ್​ ಜಿಗಜಿಣಗಿ ಪರ ಗುರುವಾರ ಮಾಜಿ ಐಎಎಸ್​ ಅಧಿಕಾರಿ ಹಾಗೂ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ (K. Annamalai) ಅವರು ಮತಯಾಚನೆ ಮಾಡಿದರು. ಈ ವೇಳೆ ಅಣ್ಣಾಮಲೈ ರಮೇಶ್​ ಅವರ ಸಾಧನೆಗಳನ್ನು ಹೊಗಳಿದರು. ತಮ್ಮನ್ನು ಹೊಗಳುತ್ತಿದ್ದಂತೆ ಭಾವುಕರಾದ ಜಿಗಜಿಣಗಿ ಅವರು ಕಣ್ಣೀರು ಹಾಕಿದ ಪ್ರಸಂಗವೂ ನಡೆಯಿತು.

ವಿಜಯಪುರ ನಗರದ ಮೀನಾಕ್ಷಿ ಚೌಕನಲ್ಲಿ ಆಯೋಜಿಸಿದ್ದ ಯುವ ಸಮಾವೇಶದಲ್ಲಿ ಅಣ್ಣಾಮಲೈ ಅವರು ಮಾತನಾಡಿದರು. 7 ಬಾರಿ ಸತತಯಾಗಿ ಗೆಲ್ಲುವುದು ಸುಲಭವಲ್ಲ. 70 ವರ್ಷ ವಯಸ್ಸಿನ ರಮೇಶ ಜಿಗಜಿಣಗಿ ಅವರು ಗೆದ್ದೇ ಗೆಲ್ಲುತ್ತಾರೆ. ವಿಜಯಪುರ ಕ್ಷೇತ್ರದ ಜನರ ಪ್ರೀತಿ ಜಿಗಜಿಣಗಿಯವರ ಮೇಲಿದೆ ಎಂದು ಅಣ್ಣಾಮಲೈ ಹೇಳಿದರು. ಈ ವೇಳೆ ರಮೇಶ ಜಿಗಜಿಣಗಿ ಆನಂದಬಾಷ್ಪ ಸುರಿಸಿದರು.

ನಾವು ದೊಡ್ಡ ಸಂಖ್ಯೆಯಲ್ಲಿ ‌ನಾವು ಸೇರಿದ್ದೇವೆ. ಯುವಕರ ಬದುಕು ದೇಶದಲ್ಲಿ ಹೇಗೆ ಇರಬೇಕೆಂದು ಹೇಳಲು ಸೇರಿದ್ದೇವೆ. 26 ನೇ ವಯಸ್ಸಿನಲ್ಲಿ ಜಿಗಜಿಣಗಿ ಸಚಿವರಾಗಿದ್ದರು. 2014 ಮೇ 30ರಂದು ‌ನಾವು ಹೊಸ ರಾಜಕೀಯ ಅಧ್ಯಾಯ ಬರೆದೆವು. ಮೋದಿ ಅವರು ಪ್ರಧಾನಮಂತ್ರಿ ಆಗಬೇಕೆಂದು ಬಯಸಿದೆವು. ಪಿಎಂ‌ ಜಾಗದಲ್ಲಿ ಮೋದಿ ಅವರನ್ನು ಕೂರಿಸಿದೆವು. ಆ ವೇಳೆ 11 ಕೋಟಿ‌ಜನರಿಗೆ ಶೌಚಾಲಯ ಇರಲಿಲ್ಲ, 42 ಕೋಟಿ ಜನರಿಗೆ ಬ್ಯಾಂಕ್ ಅಕೌಂಟ್ ಇರಲಿಲ್ಲ. ಆದರೆ ಮೋದಿ ಬಂದ ಬಳಿಕ ಎಲ್ಲವೂ ಸಿಕ್ಕಿದೆ ಎಂದು ಅಣ್ಣಾಮಲೈ ಅವರು ಹೇಳಿದರು.

ಇದನ್ನೂ ಓದಿ: Lok Sabha Election 2024: ಮಹಾರಾಷ್ಟ್ರ ಸಿಎಂ ಕರೆಸಿ ಕನ್ನಡಿಗರಿಗೆ ಅವಮಾನ ಮಾಡಿದ ಜೋಶಿ: ಸಂತೋಷ್‌ ಲಾಡ್‌

ಕಾಂಗ್ರೆಸ್ ನವರು ಪ್ರತಿ ಚುನಾವಣೆಯಲ್ಲೂ ಬಡತನ ನಿರ್ಮೂಲನೆ ಮಾಡುತ್ತೇವೆಂದು ಭಾಷಣ ಮಾಡಿಕೊಂಡು ಬಂದಿದ್ದಾರೆ. ಆದರೆ ಬಡತನ ನಿರ್ಮೂಲನೆ ಮಾಡಲಿಲ್ಲ. ಈಗಲೂ ಅದೇ ಮಾತನಾಡುತ್ತಿದ್ದಾರೆ. ವಾಜಪೇಯಿ‌ 13 ದಿನ, 13 ತಿಂಗಳು ಹಾಗೂ ಐದು ವರ್ಷ ಸರ್ಕಾರ ಮಾಡಿದ್ದರು. ಮೋದಿ ಅವರಿಗೆ 10 ವರ್ಷ ಅಧಿಕಾರ ಸಿಕ್ಕಿದೆ. ಕಾಂಗ್ರೆಸ್ ಈಗಲೂ ಅದೇ ಬಡತನದ ಕುರಿತು ಮಾತನಾಡುತ್ತಿದೆ ಎಂದು ಅಣ್ಣಾಮಲೈ ಅವರು ಲೇವಡಿ ಮಾಡಿದರು.

ಒಂದು ವೋಟ್ ನಿಂದ ಏನಾಗುತ್ತದೆ ಎಂದು ಉದಾಸೀನ ಮಾಡಬೇಡಿ. ರಾಜಕೀಯ ವ್ಯವಸ್ಥೆ ಬಗ್ಗೆ ನಿರ್ಧರಿಸಲು ಮೋದಿಗೆ ವೋಟ್ ಮಾಡಿ. ರಮೇಶ ಜಿಗಜಿಣಗಿ ಮತ್ತೇ ಸಂಸದರಾಗಬೇಕು ಎಂದು ಹೇಳಿದರು

197 ದೇಶಗಳಲ್ಲಿ ಭಾರತ ಮುಂಚೂಣಿಯಲ್ಲಿದೆ. ಮೋದಿ ಇಂತ ವ್ಯವಸ್ಥೆ ಮಾಡಿದ್ದಾರೆ. ದೇಶ ಮೊದಲು ಎಂಬುದು ಮೋದಿ‌ಯವರ ಸಿದ್ಧಾಂತ. ತಮಿಳುನಾಡಿನಲ್ಲಿ ಒಂದು‌ ಪಕ್ಷವಿದೆ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಬೆಂಬಲ ನೀಡಿದವರು ಅವರು. ತಮಗೆ ಬೇಕಾದ ಖಾತೆಗಳನ್ನು ಪಡೆದುಕೊಂಡರು. ತಮಿಳುನಾಡಿನಲ್ಲಿ ಏಳು ಕೇಂದ್ರ ಸಚಿವರಾಗಿದ್ದರು. 2 ಜಿ ಸ್ಪೆಕ್ಟ್ರಮ್ ಹಗರಣ ಮಾಡಿದರು ಎಂದು ಇಂಡಿಯಾ ಬ್ಲಾಕ್​ ಬಗ್ಗೆ ದೂರಿದರು.

ಜೂನ್ 4 ರ ಬಳಿಕ 70 ವರ್ಷದ ಮೇಲಿನವರಿಗೆ 5 ಲಕ್ಷ ರೂಪಾಯಿ ಆರೋಗ್ಯ ವಿಮೆ ಕೊಡೊದಾಗಿ ಮೋದಿ ಹೇಳಿದ್ದಾರೆ. ಮೋದಿ ಮನೆಯಿಲ್ಲದವರಿಗರ ಮನೆ ನಿರ್ಮಾಣ ಮಾಡಿ ಕೊಟ್ಟಿದ್ದಾರೆ. 295 ಭರವಸೆಗಳಲ್ಲಿ ಎಲ್ಲ ಭರವಸೆ ಈಡೇರಿಸಿದ್ದೇವೆ ಎಂದು ಅವರು ಹೇಳಿದರು.

ಈ ಚುನಾವಣೆಯಲ್ಲಿ ಶೇಕಡಾ 51 ಮತ ಬಿಜೆಪಿಗೆ ಬೀಳಬೇಕು. ಮೇಡ್ ಇನ್ ಇಂಡಿಯಾದಲ್ಲಿ ಚಂದ್ರನ ದಕ್ಷಿಣ ಕಕ್ಷೆಯಲ್ಲಿ ಇಳಿದಿದ್ದೇವೆ. 14 ದೇಶಗಳಿಗೆ‌ ನಾನಾ ಸರಕು ರಪ್ತು ಮಾಡುತ್ತಿದ್ದೇವೆ. ಕೊರೊನಾ‌ ಕಾಲದಲ್ಲಿ ಅಮೆರಿಕಾಗೂ ಮುನ್ನ ಲಸಿಕೆ ಕಂಡು‌ ಹಿಡಿದೇವು. 10 ವರ್ಷ ಕಾಲ ಭ್ರಷ್ಟಾಚಾರ ರಹಿತ ಆಡಳಿತ ಮಾಡಿದ್ದೇವೆ ಎಂದು ಅಣ್ಣಾಮಲೈ ಹೇಳಿದ್ದಾರೆ.

Continue Reading
Advertisement
IPL 2024
ಪ್ರಮುಖ ಸುದ್ದಿ18 seconds ago

IPL 2024 : ರಾಜಸ್ಥಾನ್ ವಿರುದ್ಧ ಎಸ್​​ಆರ್​ಎಚ್​​ ತಂಡಕ್ಕೆ ರೋಚಕ 1 ರನ್ ಗೆಲುವು

Ragini Khanna
ಸಿನಿಮಾ22 mins ago

Ragini Khanna: ಕ್ರೈಸ್ತ ಧರ್ಮಕ್ಕೆ ಮತಾಂತರ ಆಗಿದ್ದಕ್ಕೆ ಕ್ಷಮೆ ಕೇಳಿದ ನಟ ಗೋವಿಂದ ಸೋದರ ಸೊಸೆ!

Rain News
ಪ್ರಮುಖ ಸುದ್ದಿ23 mins ago

Rain News : ಬೆಂಗಳೂರಿನಲ್ಲಿ ಸಂಜೆ ಸುರಿದ ಸಣ್ಣ ಮಳೆಗೆ ಕೆಲವೆಡೆ ಅನಾಹುತ

Election campaign for Congress candidate Samyukta Patil in Prajadhwani convention at Bagalkot
ರಾಜಕೀಯ34 mins ago

Lok Sabha Election 2024: ಬಾಗಲಕೋಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ್‌ ಪರ ಭರ್ಜರಿ ಪ್ರಚಾರ

Lok Sabha Election
ದೇಶ52 mins ago

Lok Sabha Election : ಮೋದಿ ಗ್ಯಾರಂಟಿ ಪಡೆಯಲು ಜೋಶಿ ಗೆಲ್ಲಿಸಿ; ಏಕನಾಥ ಶಿಂಧೆ

Amit Shah
ದೇಶ54 mins ago

Amit Shah: ಮತದಾನ ಕುಸಿತದಿಂದ ಬಿಜೆಪಿಗೆ ನಷ್ಟ? ಅಮಿತ್ ಶಾ ಹೇಳೋದೇನು?

K. Annamalai
ಪ್ರಮುಖ ಸುದ್ದಿ1 hour ago

K. Annamalai : ಪ್ರಚಾರ ಸಭೆಯಲ್ಲಿ ಅಣ್ಣಾಮಲೈ ಹೊಗಳಿದಾಗ ಕಣ್ಣೀರು ಹಾಕಿದ ವಿಜಯಪುರ ಅಭ್ಯರ್ಥಿ ಜಿಗಜಿಣಗಿ

Mumbai
ದೇಶ1 hour ago

ಆಸ್ಪತ್ರೆಯಲ್ಲಿ ಟಾರ್ಚ್‌ ಬಳಸಿ ಹೆರಿಗೆ; ತಾಯಿ, ಮಗು ಸಾವು; 3 ಈಡಿಯಟ್ಸ್‌ ಸಿನಿಮಾ ದೃಶ್ಯ ಇಲ್ಲಿ ದುರಂತ!

AC Blast
ಪ್ರಮುಖ ಸುದ್ದಿ2 hours ago

AC Blast : ಕಲ್ಯಾಣ್​ ಜ್ಯುವೆಲರಿಯಲ್ಲಿ ಭಾರಿ ಅವಘಡ; ಏರ್​ ಕಂಡೀಷನರ್​ ಬ್ಲಾಸ್ಟ್​ ಆಗಿ ಮೂವರಿಗೆ ಗಾಯ

Tax Returns
ಪ್ರಮುಖ ಸುದ್ದಿ3 hours ago

Tax Returns: ಪಾಕ್‌ ಜನರಿಗೆ ಬೆಲೆಯೇರಿಕೆ ಬೆನ್ನಲ್ಲೇ ತೆರಿಗೆ ಹೊರೆ; ಸರ್ಕಾರ ಯಾವ ಮಟ್ಟಕ್ಕೆ ಇಳಿದಿದೆ ನೋಡಿ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case Another victim gives statement before judge Will Revanna get anticipatory bail
ಕ್ರೈಂ5 hours ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ19 hours ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ3 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20243 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20244 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ4 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20244 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20244 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20244 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20244 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

ಟ್ರೆಂಡಿಂಗ್‌