Team India | ಕಷ್ಟ ಕಾಲದಲ್ಲಿ ಗೆಳೆಯ ರಾಹುಲ್‌ ಜತೆಗೆ ಸದಾ ನಿಲ್ಲುವ ವಿರಾಟ್ ಕೊಹ್ಲಿ - Vistara News

T20 ವಿಶ್ವಕಪ್

Team India | ಕಷ್ಟ ಕಾಲದಲ್ಲಿ ಗೆಳೆಯ ರಾಹುಲ್‌ ಜತೆಗೆ ಸದಾ ನಿಲ್ಲುವ ವಿರಾಟ್ ಕೊಹ್ಲಿ

ಟೀಮ್‌ ಇಂಡಿಯಾದ (Team India) ಅಭ್ಯಾಸದ ವೇಳೆ ಕೆ. ಎಲ್‌ ರಾಹುಲ್‌ ಅವರಿಗೆ ವಿರಾಟ್‌ ಕೊಹ್ಲಿ ಸಲಹೆ ಕೊಡುತ್ತಿರುವ ವಿಡಿಯೊ ವೈರಲ್‌ ಆಗಿದೆ.

VISTARANEWS.COM


on

Team India
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಅಡಿಲೇಡ್‌ : ಟೀಮ್ ಇಂಡಿಯಾದ (Team India) ಆರಂಭಿಕ ಬ್ಯಾಟರ್‌ ಕೆ ಎಲ್‌ ರಾಹುಲ್‌ ಫಾರ್ಮ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ಅವರ ವಿರುದ್ಧ ಕ್ರಿಕೆಟ್‌ ಫ್ಯಾನ್‌ಗಳು ತಿರುಗಿ ಬಿದ್ದಿದ್ದಾರೆ. ಹಿರಿಯ ಹಾಗೂ ಮಾಜಿ ಕ್ರಿಕೆಟಿಗರು ಟೀಕೆಗಳ ಸುರಿಮಳೆ ಸುರಿಸುತ್ತಿದ್ದಾರೆ. ಹೀಗಾಗಿ ಕನ್ನಡಿಗ ಕೆ. ಎಲ್‌ ರಾಹುಲ್ ಅವರು ಮುಂದಿನ ಪಂದ್ಯಗಳಲ್ಲಿ ಅಬ್ಬರದ ಬ್ಯಾಟಿಂಗ್ ಮಾಡುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಲೇಬೇಕು. ಅದಕ್ಕಾಗಿ ಅವರು ಸತತವಾಗಿ ಅಭ್ಯಾಸ ಮಾಡುತ್ತಿದ್ದಾರೆ. ಈ ರೀತಿಯಾಗಿ ಕಷ್ಟಕ್ಕೆ ಸಿಲುಕಿರುವ ಕೆ. ಎಲ್ ರಾಹುಲ್‌ಗೆ ಆತ್ಮೀಯ ಗೆಳೆಯ ವಿರಾಟ್‌ ಕೊಹ್ಲಿ ನೆರವು ಕೊಡುತ್ತಿದ್ದಾರೆ.

ಬಾಂಗ್ಲಾದೇಶ ವಿರುದ್ಧದ ಟಿ೨೦ ವಿಶ್ವ ಕಪ್‌ನ ಸೂಪರ್‌-೧೨ ಹಂತದ ಪಂದ್ಯಕ್ಕಾಗಿ ಟೀಮ್‌ ಇಂಡಿಯಾ ಅಡಿಲೇಡ್‌ಗೆ ತಲುಪಿದೆ. ಸೋಮವಾರ ವಿಶ್ರಾಂತಿ ಪಡೆದ ಟೀಮ್‌ ಇಂಡಿಯಾ ಆಟಗಾರರು ಮಂಗಳವಾರ ನೆಟ್‌ ಪ್ರಾಕ್ಟೀಸ್‌ ಮಾಡಿದೆ. ಈ ವೇಳೆ ಕೆ ಎಲ್‌ ರಾಹುಲ್‌ಗೆ ಅವರಿಗೆ ವಿರಾಟ್‌ ಕೊಹ್ಲಿ ಕೆಲವೊಂದು ತಂತ್ರಗಳನ್ನು ಹೇಳಿಕೊಡುತ್ತಿದ್ದರು. ಈ ಮೂಲಕ ಕಷ್ಟಕಾಲದಲ್ಲಿರುವ ಗೆಳೆಯನಿಗೆ ಅವರು ನೆರವು ನೀಡಲು ಮುಂದಾಗಿದ್ದಾರೆ.

ಆಸ್ಟ್ರೇಲಿಯಾದ ಬೌನ್ಸಿ ಪಿಚ್‌ನಲ್ಲಿ ಆರಂಭಿಕ ಬ್ಯಾಟರ್‌ಗಳಿಗೆ ರನ್‌ ಗಳಿಸಲು ಸಾಧ್ಯವಾಗುತ್ತಿಲ್ಲ. ಎಲ್ಲ ತಂಡಗಳ ಆರಂಭಿಕ ಬ್ಯಾಟರ್‌ಗಳು ರನ್‌ ಬರ ಎದುರಿಸುತ್ತಿದ್ದಾರೆ. ಅಂತೆಯೇ ಕೆ. ಎಲ್‌ ರಾಹುಲ್‌ ಕೂಡ ಬೇಗನೆ ವಿಕೆಟ್‌ ಒಪ್ಪಿಸುತ್ತಿದ್ದಾರೆ. ಆದರೆ, ಟೀಕಾಕಾರರು ರಾಹುಲ್‌ ಅವರನ್ನು ಮಾತ್ರ ಗುರಿಯಾಗಿಸುತ್ತಿದ್ದಾರೆ. ಆದರೆ, ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್‌ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಕೆ. ಎಲ್‌ ರಾಹುಲ್‌ ಉತ್ತಮ ಆಟಗಾರ. ಅವರು ಉತ್ತಮ ಪ್ರದರ್ಶನ ಕೊಟ್ಟೇ ಕೊಡುತ್ತಾರೆ ಎಂಬುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ | KL Rahul | ಕೆ.ಎಲ್​. ರಾಹುಲ್​ ಅದ್ಭುತ ಆಟಗಾರ; ಕೋಚ್​ ರಾಹುಲ್‌ ದ್ರಾವಿಡ್​ ವಿಶ್ವಾಸ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕ್ರಿಕೆಟ್

Pakistan Cricket Team: ಪಾಕಿಸ್ತಾನ ಕ್ರಿಕೆಟಿಗರ ವೇತನ ಕಡಿತಕ್ಕೆ ಮುಂದಾದ ಪಾಕ್​ ಕ್ರಿಕೆಟ್ ಮಂಡಳಿ

Pakistan Cricket Team: ಪಾಕ್​ ಮಾಧ್ಯಮ ವರದಿಗಳ ಪ್ರಕಾರ ಮಾಜಿ ಆಟಗಾರರು ಹಾಗೂ ಪಿಸಿಬಿ ಸದಸ್ಯರು ಆಟಗಾರರ ಸಂಬಳ ಕಡಿತಗೊಳಿಸಲು ಪಾಕ್​ ಕ್ರಿಕೆಟ್​ ಮಂಡಳಿಯ ಅಧ್ಯಕ್ಷ ಮೊಹ್ಸಿನ್​ ನಖ್ವಿಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.

VISTARANEWS.COM


on

Pakistan Cricket Team
Koo

ಇಸ್ಲಾಮಾಬಾದ್‌: ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ(T20 World Cup 2024) ಕಳಪೆ ಪ್ರದರ್ಶನ ತೋರುವ ಮೂಲಕ ಟೂರ್ನಿಯಿಂದ ಹೊರಬಿದ್ದು ಆಘಾತ ಕಂಡಿರುವ ಪಾಕಿಸ್ತಾನ ತಂಡದ(Pakistan Cricket Team) ಆಟಗಾರರಿಗೆ ಮತ್ತೊಂದು ಶಾಕ್​ ಎದುರಾಗಿದೆ. ಆಟಗಾರರ ವಾರ್ಷಿಕ ಸಂಭಾವನೆಯಲ್ಲಿ ಕಡಿತ ಮಾಡಲು ಪಾಕ್​ ಕ್ರಿಕೆಟ್​ ಮಂಡಳಿ(PCB) ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ಮೂರು ಪಂದ್ಯಗಳನ್ನು ಆಡಿರುವ ಪಾಕಿಸ್ತಾನವು ಅಮೆರಿಕ ಹಾಗೂ ಭಾರತದ ವಿರುದ್ಧ ಹೀನಾಯವಾಗಿ ಸೋಲನುಭವಿಸಿದೆ. ಕೆನಡಾ ವಿರುದ್ಧ ಮಾತ್ರ ಗೆದ್ದಿರುವ ಕಾರಣ 2 ಪಾಯಿಂಟ್‌ಗಳನ್ನು ಪಡೆದಿದೆ. ಅಮೆರಿಕ ಹಾಗೂ ಐರ್ಲೆಂಡ್‌ ನಡುವಿನ ಪಂದ್ಯವು ಮಳೆಯಿಂದ ರದ್ದಾದ ಕಾರಣ ಅಮೆರಿಕದ ಅಂಕ 5ಕ್ಕೆ ಏರಿಕೆಯಾಯಿತು. ಇದರಿಂದಾಗಿ ಐರ್ಲೆಂಡ್‌ ವಿರುದ್ಧ ಪಾಕ್‌ ಗೆದ್ದರೂ ಯಾವುದೇ ಉಪಯೋಗವಿಲ್ಲದಂತಾಗಿದೆ. ಟೂರ್ನಿಯಿಂದ ಹೊರಬಿದ್ದ ಪಾಕ್​ ತಂಡದ ವಿರುದ್ಧ ಮಾಜಿ ಆಟಗಾರರು ಭಾರೀ ಟೀಕೆ ವ್ಯಕ್ತಪಡಿಸಿದ್ದಾರೆ. ಈ ರೀತಿ ಪ್ರದರ್ಶನ ತೋರುದಕ್ಕಿಂತ ಟೂರ್ನಿಯಲ್ಲಿ ಪಾಲ್ಗೊಳ್ಳದೇ ಇದ್ದಿದ್ದರೆ ಉತ್ತಮವಾಗಿರುತ್ತಿತ್ತು ಎಂದು ಆಕ್ರೋಶ ಹೊರಹಾಕಿದ್ದಾರೆ.

ಪಾಕ್​ ಮಾಧ್ಯಮ ವರದಿಗಳ ಪ್ರಕಾರ ಮಾಜಿ ಆಟಗಾರರು ಹಾಗೂ ಪಿಸಿಬಿ ಸದಸ್ಯರು ಆಟಗಾರರ ಸಂಬಳ ಕಡಿತಗೊಳಿಸಲು ಪಾಕ್​ ಕ್ರಿಕೆಟ್​ ಮಂಡಳಿಯ ಅಧ್ಯಕ್ಷ ಮೊಹ್ಸಿನ್​ ನಖ್ವಿಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಪಾಕ್​ ಕ್ರಿಕೆಟ್​ ಮಂಡಳಿ ಕೂಡ ಈ ವಿಚಾರವನ್ನು ಗಂಭಿರವಾಗಿ ಪರಿಗಣಿಸಿದ್ದು ಉನ್ನತ ಮಟ್ಟದ ಸಭೆ ನಡೆಸಿ ಆಟಗಾರರ ಕೇಂದ್ರೀಯ ಗುತ್ತಿಗೆಯನ್ನು ಮರು ಪರಿಶೀಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಇದನ್ನೂ ಓದಿ Pakistan Cricket Board: ಟಿ20 ವಿಶ್ವಕಪ್​ನಿಂದ ಹೊರಬಿದ್ದ ಬೆನ್ನಲ್ಲೇ ಹೊಸ ನಿಯಮ ಜಾರಿಗೆ ತಂದ ಪಾಕ್​ ಕ್ರಿಕೆಟ್​ ಮಂಡಳಿ

ವೇತನ ಮಾತ್ರವಲ್ಲದೆ ನಿರಾಕ್ಷೇಪಣಾ ಪ್ರಮಾಣಪತ್ರ (ಎನ್‌ಒಸಿ) ನಿಯಮವನ್ನು ಜಾರಿಗೆ ತೆರಲಿದೆ ಎಂದು ತಿಳಿದುಬಂದಿದೆ. ಈ ನಿಯಮದ ಪ್ರಕಾರ ದೇಶಿ ಕ್ರಿಕೆಟ್‌ ಹಾಗೂ ಕೇಂದ್ರೀಯ ಗುತ್ತಿಗೆಗೆ ಸಹಿ ಮಾಡಿರುವ ಎಲ್ಲ ಪಾಕ್​ ಆಟಗಾರರು ವರ್ಷವೊಂದರಲ್ಲಿ ಪಾಕಿಸ್ತಾನ ಸೂಪರ್‌ ಲೀಗ್‌ (ಪಿಎಸ್‌ಎಲ್‌) ಹೊರತುಪಡಿಸಿ, ವಿದೇಶಗಳಲ್ಲಿ ನಡೆಯುವ ಎರಡು ಟಿ20 ಲೀಗ್‌ಗಳಲ್ಲಿ ಮಾತ್ರ ಭಾಗವಹಿಸಬಹುದಾಗಿದೆ.

ಪಾಕ್​ ತಂಡದ ವಿರುದ್ಧ ದೇಶದ್ರೋಹದ ಕೇಸ್‌


ನಿರಾಸದಾಯಕ ಪ್ರದರ್ಶನ ತೋರಿರುವ ಪಾಕಿಸ್ತಾನ ತಂಡದ ವಿರುದ್ಧ ಪಾಕ್‌ನ ಗುಜ್ರಾನ್ವಾಲಾ ನಗರದ ವಕೀಲರೊಬ್ಬರು ದೇಶದ್ರೋಹ ಕೇಸ್‌ ದಾಖಲಿಸಿದ್ದಾರೆ. ಈ ಬಗ್ಗೆ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದು, ಕೇಸ್‌ನ ಬಗ್ಗೆ ಜೂನ್​ 21ಕ್ಕೆ ಮುನ್ನ ವರದಿ ಸಲ್ಲಿಸುವಂತೆ ಪೊಲೀಸರಿಗೆ ನ್ಯಾಯಾಲಯ ಸೂಚಿಸಿದೆ ಎಂದು ತಿಳಿದುಬಂದಿದೆ. ಪಾಕ್‌ ತಂಡದ ಕಳಪೆ ಪ್ರದರ್ಶನದಿಂದ ಹಣ ವ್ಯರ್ಥವಾಗುತ್ತಿದೆ ಮತ್ತು ರಾಷ್ಟ್ರದ ನಂಬಿಕೆಗೆ ದ್ರೋಹ ಉಂಟಾಗಿದೆ. ಆಟಗಾರರು ದೇಶದ ಬಗ್ಗೆ ಗೌರವಕ್ಕಿಂತ ಆರ್ಥಿಕ ಲಾಭಕ್ಕೆ ಆದ್ಯತೆ ನೀಡಿದ್ದಾರೆ ಎಂದು ಅರ್ಜಿದಾರ ತನ್ನ ದೂರಿನಲ್ಲಿ ಉಲ್ಲೇಖಿಸಿದ್ದಾಗಿ ವರದಿಯಾಗಿದೆ.

Continue Reading

ಕ್ರೀಡೆ

David Wiese Retirement: ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಡೇವಿಡ್ ವೈಸ್

David Wiese Retirement: ಡೇವಿಡ್ ವೈಸ್ ಅವರು ತಮ್ಮ ಕ್ರಿಕೆಟ್​ ವೃತ್ತಿ ಜೀವನ ಆರಂಭಿಸಿದ್ದು ದಕ್ಷಿಣ ಆಫ್ರಿಕಾ ತಂಡದ ಪರ ಆಡುವ ಮೂಲಕ. 2021ರಲ್ಲಿ ನಮೀಬಿಯಾ ತಂಡ ಸೇರಿದ್ದರು. ಒಟ್ಟು 5 ವರ್ಷಗಳ ಕಾಲ ನಮೀಬಿಯಾ ತಂಡವನ್ನು ಪ್ರತಿನಿಧಿಸಿದ್ದಾರೆ. 2021ರ ಟಿ20 ವಿಶ್ವಕಪ್‌ನಲ್ಲಿ ಆಡುವ ಮೂಲಕ ನಮೀಬಿಯಾ ತಂಡದ ಪರ ಪಾದಾರ್ಪಣೆ ಮಾಡಿದ್ದರು.

VISTARANEWS.COM


on

David Wiese Retirement
Koo

ನ್ಯೂಯಾರ್ಕ್​: ನಮೀಬಿಯಾ(Namibia allrounder David Wiese) ತಂಡದ ಅನುಭವಿ ಆಟಗಾರ ಡೇವಿಡ್ ವೈಸ್(David Wiese) ಅವರು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ(David Wiese Retirement) ಹೇಳಿದ್ದಾರೆ. ಶನಿವಾರ ರಾತ್ರಿ ನಡೆದ ಇಂಗ್ಲೆಂಡ್​ ವಿರುದ್ಧದ ಟಿ20 ವಿಶ್ವಕಪ್​ನ ಅಂತಿಮ ಲೀಗ್​ ಪಂದ್ಯದಲ್ಲಿ ಆಡಿದ ಬಳಿಕ ಡೇವಿಡ್ ವೈಸ್ ತಮ್ಮ ನಿವೃತ್ತಿ ಘೋಷಿಸಿದರು.

ಡೇವಿಡ್ ವೈಸ್ ಅವರು ತಮ್ಮ ಕ್ರಿಕೆಟ್​ ವೃತ್ತಿ ಜೀವನ ಆರಂಭಿಸಿದ್ದು ದಕ್ಷಿಣ ಆಫ್ರಿಕಾ ತಂಡದ ಪರ ಆಡುವ ಮೂಲಕ. 2021ರಲ್ಲಿ ನಮೀಬಿಯಾ ತಂಡ ಸೇರಿದ್ದರು. ಒಟ್ಟು 5 ವರ್ಷಗಳ ಕಾಲ ನಮೀಬಿಯಾ ತಂಡವನ್ನು ಪ್ರತಿನಿಧಿಸಿದ್ದಾರೆ. 2021ರ ಟಿ20 ವಿಶ್ವಕಪ್‌ನಲ್ಲಿ ಆಡುವ ಮೂಲಕ ನಮೀಬಿಯಾ ತಂಡದ ಪರ ಪಾದಾರ್ಪಣೆ ಮಾಡಿದ್ದರು.

ಆಲ್​ರೌಂಡರ್​ ಆಗಿರುವ ವೈಸ್​ ಅವರು ನಮೀಬಿಯಾ ಪರ 34 ಟಿ20 ಪಂದ್ಯಗಳನ್ನು ಆಡಿ 532 ರನ್ ಗಳಿಸಿದ್ದಾರೆ. ಬೌಲಿಂಗ್​ನಲ್ಲಿಯೂ ಉತ್ತಮ ಪ್ರದರ್ಶನ ತೋರಿರುವ ಅವರು 35 ವಿಕೆಟ್​ ಕಿತ್ತಿದ್ದಾರೆ. ಒಂಬತ್ತು ಏಕದಿನ ಪಂದ್ಯಗಳನ್ನು ಆಡಿ 228 ರನ್ ಗಳಿಸಿದ್ದಾರೆ. ಆರು ವಿಕೆಟ್​ ಪಡೆದಿದ್ದಾರೆ. ದಕ್ಷಿಣ ಆಫ್ರಿಕಾ ಮತ್ತು ನಮೀಬಿಯಾ ತಂಡದ ಪರ ಆಡಿ ಒಟ್ಟಾರೆಯಾಗಿ, ಅವರು 54 ಟಿ20 ಮತ್ತು 15 ಏಕದಿನ ಪಂದ್ಯಗಳನ್ನು ಆಡಿದ್ದಾರೆ.

ಇದನ್ನೂ ಓದಿ SCO vs AUS: ಆಸೀಸ್​ಗೆ 5 ವಿಕೆಟ್​ ಗೆಲುವು; ಸೂಪರ್​-8ಗೆ ಲಗ್ಗೆಯಿಟ್ಟ ಇಂಗ್ಲೆಂಡ್​

“ನನಗೆ ಈಗ 39 ವರ್ಷ, ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಇನ್ನು ಮುಂದುವರಿಯಲು ಇದು ಸೂಕ್ತ ಸಯಯವಲ್ಲ ಎಂದು ತಿಳಿದಿದೆ. ಹೀಗಾಗಿ ನಾನು ಕ್ರಿಕೆಟ್​ನಿಂದ ನಿವೃತ್ತಿಯಾಗುತ್ತಿದ್ದೇನೆ. 2 ದೇಶಗಳನ್ನು ಪ್ರತಿನಿಧಿಸಲು ನನಗೆ ಅವಕಾಶ ಮಾಡಿಕೊಟ್ಟ ಎಲ್ಲ ಸಿಬ್ಬಂದಿ ಮತ್ತು ಸಹ ಆಟಗಾರರಿಗೆ ಧನ್ಯವಾದಗಳು” ಎಂದು ವೈಸ್ ಹೇಳಿದರು.

ಪಂದ್ಯ ಗೆದ್ದ ಇಂಗ್ಲೆಂಡ್​


ಶನಿವಾರ ರಾತ್ರಿ ನಡೆದ ಮಳೆ ಪೀಡಿತ ಪಂದ್ಯದಲ್ಲಿ ಇಂಗ್ಲೆಂಡ್​ ತಂಡ ನಮೀಬಿಯಾ ವಿರುದ್ಧ ಡಕ್​ವರ್ತ್​ ಲೂಯಿಸ್​ ನಿಯಮದನ್ವಯ 41 ರನ್​ ಅಂತರದಿಂದ ಗೆದ್ದು ಬೀಗಿದೆ. ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 10 ಓವರ್ ಗಳಲ್ಲಿ 122 ರನ್ ಗಳಿಸಿದರೆ, ನಮೀಬಿಯಾ ತಂಡವು 84 ರನ್ ಮಾತ್ರ ಗಳಿಸಿ ಸೋಲು ಕಂಡಿತು. ಇಂದು ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಸ್ಕಾಟ್ಲೆಂಡ್​ ವಿರುದ್ಧ 5 ವಿಕೆಟ್​ ಅಂತರದ ಗೆಲುವು ಸಾಧಿಸಿದ ಪರಿಣಾಮ ಇಂಗ್ಲೆಂಡ್​ ಸೂಪರ್​-8 ಹಂತಕ್ಕೇರಿತು.

Continue Reading

ಕ್ರೀಡೆ

SCO vs AUS: ಆಸೀಸ್​ಗೆ 5 ವಿಕೆಟ್​ ಗೆಲುವು; ಸೂಪರ್​-8ಗೆ ಲಗ್ಗೆಯಿಟ್ಟ ಇಂಗ್ಲೆಂಡ್​

SCO vs AUS: ಆಸ್ಟ್ರೇಲಿಯಾದ ಈ ಗೆಲುವಿನಿಂದಾಗಿ ಹಾಲಿ ಚಾಂಪಿಯನ್​ ಇಂಗ್ಲೆಂಡ್​ ತಂಡ ಸೂಪರ್​-8ಗೆ ಪ್ರವೇಶ ಪಡೆಯುವಂತಾಯಿತು. ಸ್ಕಾಟ್ಲೆಂಡ್​ ಮತ್ತು ಇಂಗ್ಲೆಂಡ್​ ‘ಬಿ’ ಗುಂಪಿನಲ್ಲಿ ತಲಾ 5 ಅಂಕ ಪಡೆದಿದ್ದರೂ ಕೂಡ ರನ್​ ರೇಟ್​ ಆಧಾರದಲ್ಲಿ ಇಂಗ್ಲೆಂಡ್​ ಮುಂದಿದ್ದ ಕಾರಣ ಈ ಲಾಭ ಜಾಸ್​ ಬಟ್ಲರ್​ ಪಡೆಗೆ ಲಭಿಸಿತು.

VISTARANEWS.COM


on

SCO vs AUS
Koo

ಗ್ರಾಸ್‌ ಐಲೆಟ್‌ (ಸೇಂಟ್‌ ಲೂಸಿಯಾ): ಸೂಪರ್​-8 ಪ್ರವೇಶಕ್ಕೆ ಗೆಲ್ಲಲೇ ಬೇಕಿದ್ದ ಪಂದ್ಯದಲ್ಲಿ ಸ್ಕಾಟ್ಲೆಂಡ್(SCO vs AUS)​ ತಂಡ ಆಸ್ಟ್ರೇಲಿಯಾ ವಿರುದ್ಧ 5 ವಿಕೆಟ್​ ಅಂತರದ ಸೋಲು ಕಾಣುವ ಮೂಲಕ ಟೂರ್ನಿಯಿಂದ ಹೊರಬಿದ್ದಿದೆ. ಆಸ್ಟ್ರೇಲಿಯಾದ ಈ ಗೆಲುವಿನಿಂದಾಗಿ ಹಾಲಿ ಚಾಂಪಿಯನ್​ ಇಂಗ್ಲೆಂಡ್​ ತಂಡ ಸೂಪರ್​-8ಗೆ ಪ್ರವೇಶ ಪಡೆಯುವಂತಾಯಿತು. ಸ್ಕಾಟ್ಲೆಂಡ್​ ಮತ್ತು ಇಂಗ್ಲೆಂಡ್​ ‘ಬಿ’ ಗುಂಪಿನಲ್ಲಿ ತಲಾ 5 ಅಂಕ ಪಡೆದಿದ್ದರೂ ಕೂಡ ರನ್​ ರೇಟ್​ ಆಧಾರದಲ್ಲಿ ಇಂಗ್ಲೆಂಡ್​ ಮುಂದಿದ್ದ ಕಾರಣ ಈ ಲಾಭ ಜಾಸ್​ ಬಟ್ಲರ್​ ಪಡೆಗೆ ಲಭಿಸಿತು.

ಇಲ್ಲಿನ ಸೇಂಟ್‌ ಲೂಸಿಯಾದ ಡ್ಯಾರೆನ್​ ಶಮಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಸ್ಕಾಟ್ಲೆಂಡ್​ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ಗೆ 180 ರನ್​ಗಳ ಬೃಹತ್​ ಮೊತ್ತ ಪೇರಿಸಿತು. ಈ ದೊಡ್ಡ ಮೊತ್ತವನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ 19.4 ಓವರ್​ಗಳಲ್ಲಿ 5 ವಿಕೆಟ್​ಗೆ 186 ರನ್​ ಬಾರಿಸಿ ಗೆಲುವು ದಾಖಲಿಸಿತು. ಆಸೀಸ್​ ಬ್ಯಾಟಿಂಗ್​ ಸರದಿಯಲ್ಲಿ ಆರಂಭಿಕ ಆಟಗಾರ ಟ್ರಾವಿಸ್​ ಹೆಡ್​(68) ಮತ್ತು ಮಧ್ಯಮ ಕ್ರಮಾಂಕದ ಬ್ಯಾಟರ್​ ಮಾರ್ಕಸ್​ ಸ್ಟೋಯಿನಿಸ್​(59) ಅರ್ಧಶತಕ ಬಾರಿಸಿ ಮಿಂಚಿದರು. ಉಳಿದಂತೆ ಟಿಮ್​ ಡೇವಿಡ್​ ಅಜೇಯ 24 ರನ್​ ಬಾರಿಸಿದರು. ಡೇವಿಡ್​ ವಾರ್ನರ್​(1) ಮತ್ತು ನಾಯಕ ಮಿಚೆಲ್​ ಮಾರ್ಷ್(8) ಮತ್ತೆ ವಿಫಲರಾದರು.​

ಪಂದ್ಯದ ತಿರುವು


17 ಓವರ್​ ತನಕ ಪಂದ್ಯ ಸ್ಕಾಟ್ಲೆಂಡ್ ತಂಡದ ಪರ ಇತ್ತು. ಆದರೆ 18ನೇ ಓವರ್​ನಲ್ಲಿ ಪಂದ್ಯದ ಚಿತ್ರಣವೇ ಬದಲಾಯಿತು. ಬ್ರಾಡ್ ವೀಲ್ ಓವರ್​ನಲ್ಲಿ ಕ್ಯಾಮರೂನ್​ ಗ್ರೀನ್​ ಹ್ಯಾಟ್ರಿಕ್​ ಬೌಂಡರಿ ಬಾರಿಸಿ ಒಟ್ಟು 13 ರನ್​ ಕಸಿದರು. ಇದಕ್ಕೂ ಮುನ್ನ 2 ಓವರ್​ ನಡೆಸಿ ಒಂದು ಮೇಡನ್​ ಸಹಿತ ವಿಕೆಟ್ ಕಿತ್ತಿದ್ದ ಬ್ರಾಡ್ ವೀಲ್ ಈ ಓವರ್​ನಲ್ಲಿ ದುಬಾರಿಯಾದರು. ಇದು ಸ್ಕಾಟ್ಲೆಂಡ್​ ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು. ಒಂದೊಮ್ಮೆ ಈ ಓವರ್​ ಕಂಟ್ರೋಲ್​ ಆಗುತ್ತಿದ್ದರೆ ಸ್ಕಾಟ್ಲೆಂಡ್​ಗೆ ಗೆಲುವಿನ ಅವಕಾಶ ಇರುತ್ತಿತ್ತು.

ಇದನ್ನೂ ಓದಿ T20 World Cup 2024 Super 8: ಸೂಪರ್​-8 ಪಂದ್ಯಗಳ ವೇಳಾಪಟ್ಟಿ ಪ್ರಕಟ; ಭಾರತಕ್ಕೆ ಆಫ್ಘಾನ್​ ಮೊದಲ ಎದುರಾಳಿ

ಮೊದಲು ಬ್ಯಾಟಿಂಗ್​ ನಡೆಸಿದ ಸ್ಕಾಟ್ಲೆಂಡ್​ ಬಿರುಸಿನ ಆಟಕ್ಕೆ ಒತ್ತು ನೀಡಿ ದೊಡ್ಡ ಮೊತ್ತವನ್ನು ಕಲೆಹಾಕಿತು. ಆರಂಭಿಕ ಆಟಗಾರ ಜಾರ್ಜ್ ಮುನ್ಸಿ ಆರಂಭದಿಂದಲೇ ಆಸೀಸ್​ ಬೌಲರ್​ಗಳ ಮೇಲೆರಗಿ ಮೂರು ಸಿಕ್ಸರ್ ಮತ್ತು 2 ಸಿಕ್ಸರ್​ ನೆರವಿನಿಂದ 35 ರನ್​ ಬಾರಿಸಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಈ ವಿಕೆಟ್​ ಪತನದ ಬಳಿಕ ಬಂದ ಬ್ರಾಂಡನ್ ಮೆಕ್‌ಮುಲ್ಲೆನ್ ಕೂಡ ಆಕ್ರಮಣಕಾರಿ ಬ್ಯಾಟಿಂಗ್​ ನಡೆಸಿ ಗಮನಸೆಳೆದರು. ಕೇವಲ 34 ಎಸೆತಗಳಿಂದ 60 ರನ್​ ಬಾರಿಸಿ ಅರ್ಧಶತಕ ಪೂರ್ತಿಗೊಳಿಸಿದರು. ಇವರ ಈ ಸೊಗಸಾದ ಬ್ಯಾಟಿಂಗ್​ ವೇಳೆ ಬರೋಬ್ಬರಿ 6 ಸಿಕ್ಸರ್​ ಮತ್ತು 2 ಬೌಂಡರಿ ಸಿಡಿಯಿತು. ಇವರಿಗೆ ಮತ್ತೊಂದು ತುದಿಯಲ್ಲಿ ನಾಯಕ ರಿಚಿ ಬೆರಿಂಗ್ಟನ್ ಕೂಡ ಉತ್ತಮ ಸಾಥ್​ ನೀಡಿದರು. ಬೆರಿಂಗ್ಟನ್ 31 ಎಸೆತಗಳಿಂದ 42 ರನ್​ ಬಾರಿಸಿ ಅಜೇಯರಾಗಿ ಉಳಿದರು. ಆದರೆ ಪಂದ್ಯ ಸೋತ ಕಾರಣ ಇವರ ಬ್ಯಾಟಿಂಗ್​ ಸಾಹಸ ವ್ಯರ್ಥಗೊಂಡಿತು. ಆಸೀಸ್​ ಪರ ಗ್ಲೆನ್​ ಮ್ಯಾಕ್ಸ್​ವೆಲ್​ 44 ರನ್​ ವೆಚ್ಚದಲ್ಲಿ 2 ವಿಕೆಟ್​ ಕಿತ್ತರು.

Continue Reading

T20 ವಿಶ್ವಕಪ್

T20 World Cup 2024: ಭಾರತ-ಕೆನಡಾ ಪಂದ್ಯ ಮಳೆಯಿಂದ ರದ್ದು; ಅಗ್ರಸ್ಥಾನಿಯಾಗಿ ರೋಹಿತ್‌ ಪಡೆ ಸೂಪರ್‌ 8ಕ್ಕೆ ಎಂಟ್ರಿ

T20 World Cup 2024: ಕಳೆದ ಹಲವು ದಿನಗಳಿಂದ ಲಾಡರ್‌ಹಿಲ್‌ನಲ್ಲಿ ಭಾರಿ ಮಳೆಯಾಗುತ್ತಿದ್ದು, ಶುಕ್ರವಾರ ನಡೆಯಬೇಕಿದ್ದ ಎರಡೂ ಪಂದ್ಯಗಳು ರದ್ದಾಗಿದ್ದವು. ಭಾರತ ಹಾಗೂ ಕೆನಡಾ ಪಂದ್ಯಕ್ಕೂ ಮಳೆಯ ಭೀತಿ ಇತ್ತು. ಹವಾಮಾನ ಇಲಾಖೆಯೂ ಎಚ್ಚರಿಕೆ ನೀಡಿತ್ತು. ಅದರಂತೆ, ಕೊನೆಗೆ ಟಾಸ್‌ ಕೂಡ ನಡೆಯದೆ ಪಂದ್ಯವನ್ನು ರದ್ದುಗೊಳಿಸಿ, ಅಂಕಗಳನ್ನು ಸಮನಾಗಿ ಹಂಚಿಕೆ ಮಾಡಲಾಗಿದೆ.

VISTARANEWS.COM


on

T20 World Cup 2024
Koo

ಲಾಡರ್‌ಹಿಲ್‌ (ಯುಎಸ್‌ಎ): ಅಮೆರಿಕದಲ್ಲಿ ನಡೆಯುತ್ತಿರುವ ಟಿ-20 ವಿಶ್ವಕಪ್‌ (T20 World Cup 2024) ಟೂರ್ನಿಯ ಗ್ರೂಪ್‌ ಹಂತದ ಭಾರತ ಹಾಗೂ ಕೆನಡಾ ನಡುವಿನ (India vs Canada Match) ಪಂದ್ಯವು ಒಂದೂ ಎಸೆತ ಕಾಣದೆ ರದ್ದಾಗಿದೆ. ಭಾರಿ ಮಳೆಯಿಂದಾಗಿ ಶನಿವಾರ (ಜೂನ್‌ 15) ಲಾಡರ್‌ಹಿಲ್‌ನಲ್ಲಿರುವ ಮೈದಾನದಲ್ಲಿ ನಡೆಯಬೇಕಿದ್ದ ಪಂದ್ಯವು ರದ್ದಾಯಿತು. ಇದರಿಂದಾಗಿ ಎರಡೂ ತಂಡಗಳಿಗೆ ತಲಾ ಒಂದು ಅಂಕ ಹಂಚಿಕೆ ಮಾಡಲಾಯಿತು. ಗ್ರೂಪ್‌ ಹಂತದಲ್ಲಿ ಒಂದೂ ಪಂದ್ಯ ಸೋಲದ ಭಾರತ ತಂಡವು 7 ಅಂಕಗಳೊಂದಿಗೆ ಪಾಯಿಂಟ್‌ ಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿ ಸೂಪರ್‌ 8 ಹಂತಕ್ಕೆ ಪ್ರವೇಶ ಪಡೆದಿದೆ.

ಕಳೆದ ಹಲವು ದಿನಗಳಿಂದ ಲಾಡರ್‌ಹಿಲ್‌ನಲ್ಲಿ ಭಾರಿ ಮಳೆಯಾಗುತ್ತಿದ್ದು, ಶುಕ್ರವಾರ ನಡೆಯಬೇಕಿದ್ದ ಎರಡೂ ಪಂದ್ಯಗಳು ರದ್ದಾಗಿದ್ದವು. ಭಾರತ ಹಾಗೂ ಕೆನಡಾ ಪಂದ್ಯಕ್ಕೂ ಮಳೆಯ ಭೀತಿ ಇತ್ತು. ಹವಾಮಾನ ಇಲಾಖೆಯೂ ಎಚ್ಚರಿಕೆ ನೀಡಿತ್ತು. ಅದರಂತೆ, ಕೊನೆಗೆ ಟಾಸ್‌ ಕೂಡ ನಡೆಯದೆ ಪಂದ್ಯವನ್ನು ರದ್ದುಗೊಳಿಸಿ, ಅಂಕಗಳನ್ನು ಸಮನಾಗಿ ಹಂಚಿಕೆ ಮಾಡಲಾಗಿದೆ. ಇದರೊಂದಿಗೆ ಭಾರತ ಹಾಗೂ ಅಮೆರಿಕ ತಂಡವು ಸೂಪರ್‌ 8 ಪ್ರವೇಶಿಸಿವೆ. ಭಾನುವಾರ ಐರ್ಲೆಂಡ್‌ ಹಾಗೂ ಪಾಕಿಸ್ತಾನ ತಂಡಗಳು ಗ್ರೂಪ್‌ ಹಂತದ ಹಾಗೂ ಟೂರ್ನಿಯ ಕೊನೆಯ ಪಂದ್ಯವನ್ನು ಆಡಲಿವೆ.

ಭಾರತ ಹಾಗೂ ಕೆನಡಾ ಪಂದ್ಯವನ್ನು ಆಡಲಿಸಲು ಪ್ರಯತ್ನ ಮಾಡಲಾಯಿತು. ಹಲವು ಬಾರಿ ಪಿಚ್‌ ಹಾಗೂ ಮೈದಾನವನ್ನು ಪರಿಶೀಲನೆ ನಡೆಸಲಾಯಿತು. ಕೊನೆಗೆ ಐದು ಓವರ್‌ಗಳ ಪಂದ್ಯವನ್ನಾದರೂ ಆಡಿಸಲು ಪ್ರಯತ್ನಿಸಲಾಯಿತು. ಆದರೆ, ಮಳೆ ಕಡಿಮೆಯಾದರೂ ಮೈದಾನದಲ್ಲಿ ತೇವಾಂಶ ರದ್ದಿರುವ ಕಾರಣ ಪಂದ್ಯವನ್ನು ರದ್ದುಗೊಳಿಸಲಾಯಿತು. ಸೂಪರ್‌ 8ರಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಒಂದೇ ಗ್ರೂಪ್‌ನಲ್ಲಿವೆ. ಜೂನ್‌ 19ರಿಂದ ಸೂಪರ್‌ 8 ಪಂದ್ಯಗಳು ಆರಂಭವಾಗಲಿವೆ. ಸೂಪರ್‌ 8 ಪಂದ್ಯಗಳು ವೆಸ್ಟ್‌ ಇಂಡೀಸ್‌ನಲ್ಲಿ ನಡೆಯಲಿವೆ.

ಉತ್ತಮ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ವಿಭಾಗವನ್ನು ಹೊಂದಿದ್ದರೂ ಸಂಘಟಿತ ಪ್ರದರ್ಶನ ನೀಡುವಲ್ಲಿ ವಿಫಲವಾಗುವ ಜತೆಗೆ ಅದೃಷ್ಟದಾಟದಲ್ಲೂ ಹಿನ್ನಡೆ ಅನುಭವಿಸಿದ ಪಾಕಿಸ್ತಾನ ಕ್ರಿಕೆಟ್‌ ತಂಡವು ಅಮೆರಿಕ ಹಾಗೂ ವೆಸ್ಟ್‌ ಇಂಡೀಸ್‌ನಲ್ಲಿ ನಡೆಯುತ್ತಿರುವ ಟಿ-20 ವಿಶ್ವಕಪ್‌ ಟೂರ್ನಿಯಿಂದಲೇ ಹೊರಬಿದ್ದಿದೆ. ಸೂಪರ್‌ 8ರ ರೇಸ್‌ನಲ್ಲಿ ಹಿನ್ನಡೆ ಅನುಭವಿಸಿದ ಬಾಬರ್‌ ಅಜಂನೇತೃತ್ವದ ತಂಡವು ಟೂರ್ನಿಯಿಂದ ಹೊರಬಿದ್ದಿದ್ದು, ಪಾಕ್‌ ಕ್ರಿಕೆಟ್‌ ಅಭಿಮಾನಿಗಳು ತಂಡದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: T20 World Cup 2024: ಟಿ-20 ವಿಶ್ವಕಪ್‌ನಿಂದ ಪಾಕಿಸ್ತಾನ ಔಟ್;‌ ಸೂಪರ್‌ 8ಕ್ಕೆ ಲಗ್ಗೆ ಇಟ್ಟ ಅಮೆರಿಕ

Continue Reading
Advertisement
Actor Darshan Renukaswamy Send His Photos To Pavitra Gowda
ಕ್ರೈಂ19 seconds ago

Actor Darshan: ಹತ್ಯೆಯಾದ ರೇಣುಕಾಸ್ವಾಮಿ ಮೊಬೈಲ್‌ ಹೋಯಿತೆಲ್ಲಿ?

bakrid 2024
ಧಾರ್ಮಿಕ24 mins ago

Bakrid 2024: ತ್ಯಾಗ, ಬಲಿದಾನವನ್ನು ಸ್ಮರಿಸುವ ಈದುಲ್ ಅಝ್ಹಾ

Karnataka weather Forecast
ಮಳೆ59 mins ago

Karnataka weather : ಇಂದು ಕರಾವಳಿ, ಮಲೆನಾಡಿನಲ್ಲಿ ಹಗುರ, ಒಳನಾಡಿನಲ್ಲಿ ಸಾಧಾರಣ ಮಳೆ ಸಾಧ್ಯತೆ

Dina Bhavishya
ಭವಿಷ್ಯ2 hours ago

Dina Bhavishya : ಗೌಪ್ಯ ವಿಷಯವನ್ನು ಹಂಚಿಕೊಂಡರೆ ಈ ರಾಶಿಯವರಿಗೆ ಅಪಾಯ ಗ್ಯಾರಂಟಿ!

World War 3
ಪ್ರಮುಖ ಸುದ್ದಿ8 hours ago

World War 3: ಜೂನ್ 18ರಿಂದ 3ನೇ ಮಹಾಯುದ್ಧ ಶುರು; ಖ್ಯಾತ ಜ್ಯೋತಿಷಿಯ ಭವಿಷ್ಯವಾಣಿ ಸಂಚಲನ

Cholera outbreak
ಕರ್ನಾಟಕ11 hours ago

Cholera outbreak: ಕಲುಷಿತ ನೀರು ಸೇವನೆ; ಮಧುಗಿರಿಯ ಚಿನ್ನೇನಹಳ್ಳಿಯಲ್ಲಿ ವ್ಯಕ್ತಿಗೆ ಕಾಲರಾ ದೃಢ

NCERT Textbooks
ಪ್ರಮುಖ ಸುದ್ದಿ11 hours ago

NCERT Textbooks: ರಾಜಕೀಯ ಶಾಸ್ತ್ರದ ಪಠ್ಯದಿಂದ ‘ಬಾಬ್ರಿ ಮಸೀದಿ’ ಅಧ್ಯಾಯ ತೆಗೆದ ಎನ್‌ಸಿಇಆರ್‌ಟಿ!

Parenting Tips
ಪ್ರಮುಖ ಸುದ್ದಿ11 hours ago

Parenting Tips: ನೀವು ಹೊಸ ಅಪ್ಪ ಅಮ್ಮಂದಿರೇ? ನಿಮಗಿದೆ ಇಲ್ಲಿ ಮುಖ್ಯವಾದ ಟಿಪ್ಸ್!

Drowns in Lake
ಕರ್ನಾಟಕ11 hours ago

Drowns in lake: ಸ್ನೇಹಿತರ ಜತೆ ಕೆರೆಗೆ ಈಜಲು ಹೋದ ಬಾಲಕ ನೀರುಪಾಲು

Petrol Diesel Price
ಕರ್ನಾಟಕ12 hours ago

Petrol Diesel Price: ಪೆಟ್ರೋಲ್, ಡೀಸೆಲ್ ದರ ಏರಿಕೆಗೂ ಚುನಾವಣಾ ಫಲಿತಾಂಶಕ್ಕೂ ಸಂಬಂಧವಿಲ್ಲ ಎಂದ ಸಿಎಂ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Renukaswamy murder case The location of the accused is complete
ಸಿನಿಮಾ13 hours ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ14 hours ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ19 hours ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ2 days ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ3 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು3 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು3 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ3 days ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

karnataka weather Forecast
ಮಳೆ6 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ6 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

ಟ್ರೆಂಡಿಂಗ್‌