ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಮೇ 27ರಿಂದ ಜೂನ್‌ 13ರ ತನಕ ಮಾವು ಮತ್ತು ಹಲಸು ಮಾರಾಟ ಮೇಳ - Vistara News

ಕರ್ನಾಟಕ

ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಮೇ 27ರಿಂದ ಜೂನ್‌ 13ರ ತನಕ ಮಾವು ಮತ್ತು ಹಲಸು ಮಾರಾಟ ಮೇಳ

ಹಣ್ಣುಗಳ ರಾಜ ಮಾವಿನ ಹಣ್ಣಿನ ಮಾರಾಟ ಮೇಳ ಬೆಂಗಳೂರಿನ ಲಾಲ್‌ ಬಾಗ್‌ನಲ್ಲಿ ಆರಂಭವಾಗುತ್ತಿದೆ. ಜತೆಗೆ ಹಲಸಿನ ಹಣ್ಣುಗಳ ಮಾರಾಟವೂ ಕಳೆಗಟ್ಟಲಿದೆ. ಹಣ್ಣುಗಳ ಸೇವನೆ ಆರೋಗ್ಯಕ್ಕೂ ಹಿತ.

VISTARANEWS.COM


on

mango mela
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
  • ಮೇಳದಲ್ಲಿ ಈ ಸಲ 106 ಮಾವಿನ ಮಳಿಗೆ, 16 ಹಲಸಿನ ಮಳಿಗೆ ವ್ಯವಸ್ಥೆ
  • 50 ಕ್ಕೂ ಹೆಚ್ಚು ಮಾವು ತಳಿ, 10ಕ್ಕೂ ಹೆಚ್ಚು ಹಲಸು ತಳಿ ಲಭ್ಯ
  • ಮನೆ ಬಾಗಿಲಿಗೆ ಹಣ್ಣು ತಲುಪಿಸುವ ಸೇವೆ

ಬೆಂಗಳೂರು: ಸಿಲಿಕಾನ್‌ ಸಿಟಿಯ ಮಾವು ಪ್ರಿಯರಿಗೆ ಇದು ಸಿಹಿ ಸುದ್ದಿ. ನಗರದ ಗ್ರಾಹಕರಿಗೆ ಮಾರುಕಟ್ಟೆಗಿಂತ ಕಡಿಮೆ ದರದಲ್ಲಿ ಮಾವು ಕೈಸೇರಲಿದೆ. ಬೆಂಗಳೂರಿನ ಲಾಲ್‌ ಬಾಗ್‌ನಲ್ಲಿ ಮಾವು ಪ್ರದರ್ಶನ ಮತ್ತು ಮಾರಾಟ ಮೇಳವು ಮೇ 27ರಿಂದ ಜೂನ್‌ 13ರ ತನಕ ನಡೆಯಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೇಳವನ್ನು ಉದ್ಘಾಟಿಸಲಿದ್ದಾರೆ.

ಮೇಳಕ್ಕೆ ಬರಲು ಸಾಧ್ಯವಾಗದವರಿಗೆ ಅಂಚೆ ಮೂಲಕ ಮಾವು ಮನೆಬಾಗಿಲಿಗೆ ತಲುಪುವ ವ್ಯವಸ್ಥೆ ಮಾಡಲಾಗಿದೆ. ಈ ಮೇಳದಲ್ಲಿ 106 ಮಾವು ಮಳಿಗೆಗಳು, 16 ಹಲಸಿನ ಮಳಿಗೆಗಳನ್ನು ಹಂಚಿಕೆ ಮಾಡಲಾಗಿದೆ.
ಪ್ರದರ್ಶನದಲ್ಲಿ 50ಕ್ಕೂ ಹೆಚ್ಚು ತಳಿಯ ಮಾವು ಹಾಗೂ 10ಕ್ಕೂ ಹೆಚ್ಚು ತಳಿಯ ಹಲಸು ಇರಲಿವೆ. ರಾಜ್ಯದಲ್ಲಿ 1.60 ಲಕ್ಷ ಹೆಕ್ಟೇರ್‌ ವಿಸ್ತೀರ್ಣದಲ್ಲಿ ಮಾವು ಬೆಳೆಯಲಾಗುತ್ತಿದೆ.

ಬಾದಾಮಿ, ರಸಪುರಿ, ಬೈಗನ್‌ಪಲ್ಲಿ, ಮಲ್ಲಿಕಾ, ಮಲಗೋವಾ, ಸಿಂಧೂರ, ಕೇಸರ್, ತೋತಾಪುರಿ ಸೇರಿದಂತೆ ವಿವಿಧ ತಳಿಗಳ ಮಾವು ಖರೀದಿಗೆ ಲಭ್ಯ. ಉಪ್ಪಿನಕಾಯಿ ತಯಾರಿಗೆ ಉಪಯೋಗಿಸುವ ವಿವಿಧ ಮಾವಿನಕಾಯಿ ಮೇಳದಲ್ಲಿ ಇರಲಿದೆ. ಮಾವು ಬೆಳೆಗೆ ಸಂಬಂಧಿಸಿದ ಬೇಸಾಯ ಪದ್ಧತಿ, ಕಸಿ ಕಟ್ಟುವಿಕೆ, ಮಾವು ಮಾಗಿಸುವುದು, ವಿವಿಧ ಸಂಸ್ಕರಣಾ ಪದಾರ್ಥಗಳ ತಯಾರಿ ಕುರಿತು ಮೇಳದಲ್ಲಿ ತಜ್ಞರು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಚಿಕ್ಕೋಡಿ

Chikkodi Election Result 2024: ಚಿಕ್ಕೋಡಿಯಲ್ಲಿ ಪ್ರಿಯಾಂಕಾ ಜಾರಕಿ’ಹೋಳಿ’; ಜೊಲ್ಲೆಗೆ ಸೋಲು

Chikkodi Election Result 2024: ಎಂಬಿಎ ಪದವೀಧರೆ, ಯುವ ನಾಯಕಿ ಪ್ರಿಯಾಂಕಾ ಜಾರಕಿಹೊಳಿ ಅವರು ಮೊದಲ ಬಾರಿಗೆ ಸ್ಪರ್ಧಿಸುತ್ತಿದ್ದರೂ ಅಪ್ಪ ಸತೀಶ್‌ ಜಾರಕಿಹೊಳಿ ಅವರ ರಾಜಕೀಯ ಅನುಭವವು ಜತೆಗಿತ್ತು. ಮತ್ತೊಂದೆಡೆ, ಅಣ್ಣಾಸಾಹೇಬ್‌ ಜೊಲ್ಲೆ ಅವರು ಭಿನ್ನಮತವನ್ನು ತಡೆದಿದ್ದು, ಮೋದಿ ಅವರ ಅಲೆ, ಕ್ಷೇತ್ರಕ್ಕೆ ಸಿಕ್ಕ ಯೋಜನೆಗಳೇ ಅವರಿಗೆ ಸಕಾರಾತ್ಮಕವಾಗಲಿವೆ ಎಂದು ರಾಜಕೀಯ ತಜ್ಞರು ಹೇಳಿದ್ದರು.

VISTARANEWS.COM


on

Chikkodi Election Result 2024
Koo

ಚಿಕ್ಕೋಡಿ: ರಾಜ್ಯದ ಗಮನ ಸೆಳೆದಿದ್ದ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಜಯಭೇರಿ ಬಾರಿಸಿದೆ. ಬಿಜೆಪಿಯ ಅಣ್ಣಾಸಾಹೇಬ್‌ ಜೊಲ್ಲೆ (Annasaheb Jolle) ಅವರ ವಿರುದ್ಧ ಸಚಿವ ಸತೀಶ್‌ ಜಾರಕಿಹೊಳಿ ಅವರ ಪುತ್ರಿ, ಯುವ ನಾಯಕಿ ಪ್ರಿಯಾಂಕಾ ಜಾರಕಿಹೊಳಿ (Priyanka Jarkiholi) ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ. ಆ ಮೂಲಕ ಯುವ ನಾಯಕಿ ಪ್ರಯಾಂಕಾ ಜಾರಕಿಹೊಳಿ ಅವರು ಬಿಜೆಪಿಯ ಭದ್ರಕೋಟೆಯನ್ನು ಭೇದಿಸುವ ಜತೆಗೆ ರಾಜ್ಯದ ಗಮನ ಸೆಳೆದಿದ್ದಾರೆ. ಪ್ರಿಯಾಂಕಾ ಜಾರಕಿಹೊಳಿ ಅವರು 96,253 ಮತಗಳ ಅಂತರದಿಂದ ಜಯಿಸಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ 6,80,179 ಮತ ಗಳಿಸಿದರೆ, ಬಿಜೆಪಿ ಅಭ್ಯರ್ಥಿ 5,83,926 ಮತಗಳನ್ನು ಪಡೆದರು.

ಹಾಲಿ ಸಂಸದರೂ ಆಗಿರುವ ಅಣ್ಣಾ ಸಾಹೇಬ್‌ ಜೊಲ್ಲೆ ಅವರಿಗೆ ಟಿಕೆಟ್‌ ತಪ್ಪಿಸಿ, ತಾವು ಟಿಕೆಟ್‌ ಗಿಟ್ಟಿಸಿಕೊಳ್ಳಲು ರಮೇಶ್‌ ಕತ್ತಿ ಅವರು ತಂತ್ರ ಹೆಣೆದರೂ ಅದು ಸಫಲವಾಗಿಲ್ಲ. ಬಳಿಕ ರಮೇಶ್‌ ಕತ್ತಿ ಅವರು ಕಾಂಗ್ರೆಸ್‌ ಸೇರುತ್ತಾರೆ ಎಂಬ ಮಾತುಗಳು ಕೇಳಿಬಂದರೂ, ಅದು ಸಫಲವಾಗಲಿಲ್ಲ. ಅಷ್ಟರಮಟ್ಟಿಗೆ, ಅಣ್ಣಾಸಾಹೇಬ್‌ ಜೊಲ್ಲೆ ಅವರು ಭಿನ್ನಮತವನ್ನು ತಡೆದಿದ್ದು, ಮೋದಿ ಅವರ ಅಲೆ, ಕ್ಷೇತ್ರಕ್ಕೆ ಸಿಕ್ಕ ಯೋಜನೆಗಳೇ ಅವರಿಗೆ ಸಕಾರಾತ್ಮಕವಾಗಲಿವೆ ಎಂದು ರಾಜಕೀಯ ತಜ್ಞರು ಹೇಳುತ್ತಿದ್ದರು. ಅಣ್ಣಾ ಸಾಹೇಬ್‌ ಜೊಲ್ಲೆ ಅವರ ಪತ್ನಿ ಶಶಿಕಲಾ ಜೊಲ್ಲೆ ಅವರು ಶಾಸಕಿ ಆಗಿರುವ ಕಾರಣ ಅವರ ಪ್ರಾಬಲ್ಯ ಜಾಸ್ತಿ ಇತ್ತು. ಇದೆಲ್ಲವನ್ನು ಪ್ರಿಯಾಂಕಾ ಜಾರಕಿಹೊಳಿ ಅವರು ಹಿಮ್ಮೆಟ್ಟಿ ನಿಂತಿದ್ದಾರೆ.

ಎಂಬಿಎ ಪದವೀಧರೆ, ಯುವ ನಾಯಕಿ ಪ್ರಿಯಾಂಕಾ ಜಾರಕಿಹೊಳಿ ಅವರು ಮೊದಲ ಬಾರಿಗೆ ಸ್ಪರ್ಧಿಸಿದ್ದರೂ ಅಪ್ಪ ಸತೀಶ್‌ ಜಾರಕಿಹೊಳಿ ಅವರ ರಾಜಕೀಯ ಅನುಭವವು ಜತೆಗಿತ್ತು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪ್ರಿಯಾಂಕಾ ಜಾರಕಿಹೊಳಿ ಅವರು ಅಪ್ಪನ ಗೆಲುವಾಗಿ ಓಡಾಟ ನಡೆಸಿದ್ದರು. ಇನ್ನು, ಚಿಕ್ಕೋಡಿಯಲ್ಲಿ ಲಿಂಗಾಯತ ಸಮುದಾದಯವರ ಮತಗಳೇ ನಿರ್ಣಾಯಕವಾಗಿದ್ದವು. ಸುಮಾರು 4.10 ಲಕ್ಷ ಲಿಂಗಾಯತ ಮತಗಳಿದ್ದು, ಪರಿಶಿಷ್ಟ ಜಾತಿ 1.65 ಲಕ್ಷ, ಪರಿಶಿಷ್ಟ ಪಂಗಡ 9೦, ಮುಸ್ಲಿಮರ 1.80 ಲಕ್ಷ ಮತಗಳು ಕೂಡ ನಿರ್ಣಾಯಕವಾಗಿದ್ದವು.

2019, 2014ರ ಫಲಿತಾಂಶ ಏನಾಗಿತ್ತು?

2019ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯ ಅಣ್ಣಾ ಸಾಹೇಬ್‌ ಜೊಲ್ಲೆ ಅವರು ಪ್ರಕಾಶ್‌ ಹುಕ್ಕೇರಿ ವಿರುದ್ಧ 1 ಲಕ್ಷಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಿದ್ದರು. ಆದರೆ, 2014ರಲ್ಲಿ ನರೇಂದ್ರ ಮೋದಿ ಅವರ ಅಲೆಯ ಮಧ್ಯೆಯೂ ಕಾಂಗ್ರೆಸ್‌ನ ಪ್ರಕಾಶ್‌ ಹುಕ್ಕೇರಿ ಅವರು ಬಿಜೆಪಿಯ ರಮೇಶ್‌ ಕತ್ತಿ ವಿರುದ್ಧ ಗೆಲುವು ಸಾಧಿಸಿದ್ದರು. ಇನ್ನು 2009ರಲ್ಲಿ ರಮೇಶ್‌ ಕತ್ತಿ, 2004ರಲ್ಲಿ ರಮೇಶ್‌ ಜಿಗಜಿಣಗಿ ಅವರು ಚಿಕ್ಕೋಡಿ ಕ್ಷೇತ್ರದ ಸಂಸದರಾಗಿ ಆಯ್ಕೆಯಾಗಿದ್ದರು.

ಇದನ್ನೂ ಓದಿ: Election Results 2024: 5 ಲಕ್ಷ ಮತಗಳಿಂದ ಗೆದ್ದು ಬೀಗಿದ ಅಮಿತ್‌ ಶಾ; ಬಿಜೆಪಿಗೆ ಮೊದಲ ಗೆಲುವು

Continue Reading

ದಾವಣಗೆರೆ

Davangere Election Result 2024: ದಾವಣಗೆರೆಯಲ್ಲಿ ಕಾಂಗ್ರೆಸ್‌ನ ಪ್ರಭಾ ಮಲ್ಲಿಕಾರ್ಜುನ್‌ಗೆ ಗೆಲುವು

Davangere Election Result 2024: ದಾವಣಗೆರೆ ಲೋಕಸಭೆ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಯಾರು ಗೆದ್ದರೂ ಇತಿಹಾಸ ಸೃಷ್ಟಿಯಾಗಲಿದೆ ಎಂದೇ ಹೇಳಲಾಗುತ್ತಿತ್ತು. ಕಾಂಗ್ರೆಸ್‌ನಿಂದ ಪ್ರಭಾ ಮಲ್ಲಿಕಾರ್ಜುನ್‌, ಬಿಜೆಪಿಯಿಂದ ಗಾಯತ್ರಿ ಸಿದ್ದೇಶ್ವರ್‌ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಜಿ.ಬಿ.ವಿನಯ್‌ ಕುಮಾರ್‌ ಅವರು ಕಣಕ್ಕಿಳಿದಿದ್ದು, ಯಾರು ಗೆಲುವು ಸಾಧಿಸಲಿದ್ದಾರೆ ಎಂಬ ಕುತೂಹಲ ಜಾಸ್ತಿಯಾಗಿತ್ತು. ಈಗ ಪ್ರಭಾ ಮಲ್ಲಿಕಾರ್ಜುನ್‌ ಅವರು ಗೆಲುವಿನ ನಗೆ ಬೀರಿದ್ದಾರೆ.

VISTARANEWS.COM


on

Davangere Election Result 2024
Koo

ದಾವಣಗೆರೆ: ಬೆಣ್ಣೆ ದೋಸೆಗೆ ಹೆಸರುವಾಸಿಯಾಗಿರವ ದಾವಣಗೆರೆ ಲೋಕಸಭೆ ಕ್ಷೇತ್ರದಲ್ಲಿ (Davangere Election Result 2024) ಕಾಂಗ್ರೆಸ್‌ನ ಪ್ರಭಾ ಮಲ್ಲಿಕಾರ್ಜುನ್‌ ಅವರು ಗೆಲುವು ಸಾಧಿಸಿದ್ದಾರೆ. ಆ ಮೂಲಕ ದಾವಣಗೆರೆ ಜಿಲ್ಲೆಯ ಮೇಲೆ ಶಾಮನೂರು ಶಿವಶಂಕರಪ್ಪ ಅವರ ಕುಟುಂಬವು ಸಂಪೂರ್ಣ ಹಿಡಿತ ಸಧಿಸಿದಂತಾಗಿದೆ. ಬಿಜೆಪಿಯ ಗಾಯತ್ರಿ ಸಿದ್ದೇಶ್ವರ್‌ ಅವರು ದಾವಣಗೆರೆ ಲೋಕಸಭೆ ಕ್ಷೇತ್ರದಲ್ಲಿ ಸೋಲನುಭವಿಸಿದ್ದು, ಭಾರಿ ಹಿನ್ನಡೆಯಾದಂತಾಗಿದೆ.

ಜಿ.ಎಂ.ಸಿದ್ದೇಶ್ವರ್‌ ಅವರು ಅನಾರೋಗ್ಯದ ಮಧ್ಯೆಯೂ ಪ್ರಚಾರದಲ್ಲಿ ತೊಡಗಿಕೊಂಡಿದ್ದರು. ನರೇಂದ್ರ ಮೋದಿ ಅವರ ಅಲೆಯು ಕೂಡ ಕ್ಷೇತ್ರದಲ್ಲಿತ್ತು. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಮಧ್ಯಸ್ಥಿಕೆಯಿಂದಾಗಿ ಕ್ಷೇತ್ರದಲ್ಲಿ ಭುಗಿಲೆದ್ದಿದ್ದ ಭಿನ್ನಮತವು ಶಮನವಾಗಿತ್ತು. ಹಾಗಾಗಿ, ಗಾಯತ್ರಿ ಸಿದ್ದೇಶ್ವರ್‌ ಅವರಿಗೆ ಗೆಲುವು ಸಿಕ್ಕರೂ ಅಚ್ಚರಿ ಇಲ್ಲ ಎಂದು ಹೇಳಲಾಗುತ್ತಿತ್ತು. ಆದರೂ ಕ್ಷೇತ್ರದಲ್ಲಿ ಕಮಲ ಪಾಳಯಕ್ಕೆ ಹಿನ್ನಡೆಯಾದಂತಾಗಿದೆ.

ದಾವಣಗೆರೆ ಕ್ಷೇತ್ರದಲ್ಲಿ ಶಾಮನೂರು ಶಿವಶಂಕರಪ್ಪ ಅವರ ವರ್ಚಸ್ಸಿದೆ. ಇವರ ಪುತ್ರ ಎಸ್‌.ಎಸ್‌.ಮಲ್ಲಿಕಾರ್ಜುನ್‌ ಸಚಿವರೂ ಆಗಿದ್ದಾರೆ. ಲಿಂಗಾಯತ ಮತಗಳ ಮೇಲೆ ಇವರ ಕುಟುಂಬದ ಹಿಡಿತವಿದೆ. ಡಾ.ಪ್ರಭಾ ಮಲ್ಲಿಕಾರ್ಜುನ್‌ ಅವರು ಕಳೆದ ಒಂದು ವರ್ಷದಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಅವರು ಜನರಿಗೆ ಹತ್ತಿರವಾಗಿದ್ದರು. ಮಾವ, ಪತಿಯ ಬಲದಿಂದ, ಸಮಾಜ ಸೇವೆ, ಕಾಂಗ್ರೆಸ್‌ ಗ್ಯಾರಂಟಿಗಳ ಫಲವಾಗಿ ಪ್ರಭಾ ಮಲ್ಲಿಕಾರ್ಜುನ್‌ ಅವರು ಮುನ್ನಡೆಯ ವಿಶ್ವಾಸದಲ್ಲಿದ್ದರು. ಆದರೆ, ಜಿ.ಬಿ.ವಿನಯ್‌ ಕುಮಾರ್‌ ಅವರು ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಯಾಗಿರುವುದು ಪ್ರಭಾ ಮಲ್ಲಿಕಾರ್ಜುನ್‌ ಅವರಿಗೆ ತುಸು ಹಿನ್ನಡೆ ಎಂದೇ ಹೇಳಲಾಗುತ್ತಿತ್ತು. ಇದೆಲ್ಲವನ್ನೂ ಮೀರಿ ಪ್ರಭಾ ಮಲ್ಲಿಕಾರ್ಜುನ್‌ ಅವರು ಗೆಲುವು ಸಾಧಿಸಿದ್ದಾರೆ.

2019, 2014ರ ಫಲಿತಾಂಶ ಏನಾಗಿತ್ತು?

2019ರಲ್ಲಿ ಬಿಜೆಪಿಯ ಜಿ.ಎಂ.ಸಿದ್ದೇಶ್ವರ್‌ ಅವರು ಕಾಂಗ್ರೆಸ್‌ನ ಎಚ್‌.ಬಿ.ಮಂಜಪ್ಪ ಅವರ ವಿರುದ್ಧ ಸುಮಾರು 1.69 ಲಕ್ಷ ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದರು. ಕಳೆದ 4 ಲೋಕಸಭೆ ಚುನಾವಣೆಗಳಲ್ಲೂ ಬಿಜೆಪಿಯಿಂದ ಜಿ.ಎಂ.ಸಿದ್ದೇಶ್ವರ್‌ ಅವರೇ ಗೆಲುವು ಸಾಧಿಸಿದ್ದಾರೆ. 2004, 2009 ಹಾಗೂ 2014ರಲ್ಲೂ ಜಿ.ಎಂ.ಸಿದ್ದೇಶ್ವರ್‌ ಅವರೇ ಗೆಲುವು ಸಾಧಿಸಿಕೊಂಡು ಬಂದಿದ್ದಾರೆ.

ಇದನ್ನೂ ಓದಿ: Bagalkot Election Result 2024: ಬಾಗಲಕೋಟೆಯಲ್ಲಿ ಬಿಜೆಪಿಯ ಪಿ.ಸಿ.ಗದ್ದಿಗೌಡರ್‌ಗೆ ಜಯ

Continue Reading

ಪ್ರಮುಖ ಸುದ್ದಿ

Chitrdurga Result 2024 : ಚಿತ್ರದುರ್ಗ ಕ್ಷೇತ್ರದಲ್ಲಿ ಗೋವಿಂದ ಕಾರಜೋಳಗೆ ಗೆಲುವು

Chitrdurga Result 2024 : 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಎ .ನಾರಾಯಣಸ್ವಾಮಿ ಅವರು ಕಾಂಗ್ರೆಸ್​​ನ ಬಿ.ಎನ್.ಚಂದ್ರಪ್ಪ ಅವರನ್ನು 80,178 ಮತಗಳ ಭಾರೀ ಅಂತರದಿಂದ ಸೋಲಿಸಿದ್ದರು. ಈ ಕ್ಷೇತ್ರದಲ್ಲಿ 2019 ರಲ್ಲಿ ಬಿಜೆಪಿ 50.24% ಮತಗಳನ್ನು ಹೊಂದಿತ್ತು.

VISTARANEWS.COM


on

Chitrdurga Result 2024
Koo

ಬೆಂಗಳೂರು: ಮೀಸಲು ಕ್ಷೇತ್ರವಾದ ಚಿತ್ರದುರ್ಗದಲ್ಲಿ ಬಿಜೆಪಿಯ ಗೋವಿಂದ ಕಾರಜೋಳ ಗೆಲುವು ಸಾಧಿಸಿದ್ದಾರೆ (Chitrdurga Result 2024 ). ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿಚಂದ್ರಪ್ಪ ವಿರುದ್ಧ ಭಾರೀ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

2019ರ ಸಾರ್ವತ್ರಿಕ ಚುನಾವಣೆಯಲ್ಲಿ ಎ .ನಾರಾಯಣಸ್ವಾಮಿ ಅವರು ಕಾಂಗ್ರೆಸ್​​ನ ಬಿ.ಎನ್.ಚಂದ್ರಪ್ಪ ಅವರನ್ನು 80,178 ಮತಗಳ ಭಾರೀ ಅಂತರದಿಂದ ಸೋಲಿಸಿದ್ದರು. ಈ ಕ್ಷೇತ್ರದಲ್ಲಿ 2019 ರಲ್ಲಿ ಬಿಜೆಪಿ 50.24% ಮತಗಳನ್ನು ಹೊಂದಿತ್ತು.

2014ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿ.ಎನ್.ಚಂದ್ರಪ್ಪ ಅವರು ಬಿಜೆಪಿಯ ಜನಾರ್ಧನ ಸ್ವಾಮಿ ಅವರನ್ನು 1,01,291 ಮತಗಳ ಭಾರೀ ಅಂತರದಿಂದ ಸೋಲಿಸಿದ್ದರು. ಕಾಂಗ್ರೆಸ್ 42.64% ಮತಗಳನ್ನು ಗಳಿಸಿತ್ತು.

2009ರ ಸಾರ್ವತ್ರಿಕ ಚುನಾವಣೆಯಲ್ಲಿ ಜನಾರ್ದನ ಸ್ವಾಮಿ ಅವರು ಕಾಂಗ್ರೆಸ್​​ನ ಡಾ.ಬಿ.ತಿಪ್ಪೇಸ್ವಾಮಿ ಅವರನ್ನು 1,35,571 ಮತಗಳ ಭಾರೀ ಅಂತರದಿಂದ ಸೋಲಿಸಿದ್ದರು. ಈ ಕ್ಷೇತ್ರದಲ್ಲಿ ಬಿಜೆಪಿ ಶೇ.44.35ರಷ್ಟು ಮತಗಳನ್ನು ಪಡೆದಿತ್ತು.

ವಿಶೇಷ ಕ್ಷೇತ್ರ

ಚಿತ್ರದುರ್ಗ ಲೋಕಸಭೆ ಕ್ಷೇತ್ರ ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ಮೀಸಲಾಗಿದೆ. ಇದು ಇಡೀ ಚಿತ್ರದುರ್ಗ ಜಿಲ್ಲೆ ಮತ್ತು ತುಮಕೂರು ಜಿಲ್ಲೆಯ ಕೆಲವು ಭಾಗಗಳನ್ನು ಒಳಗೊಂಡಿದೆ. ಚಿತ್ರದುರ್ಗ ಲೋಕಸಭಾ ಕ್ಷೇತ್ರವು ಮೊಳಕಾಲ್ಮೂರು (ಎಸ್ಟಿ), ಚಳ್ಳಕೆರೆ (ಎಸ್ಟಿ), ಚಿತ್ರದುರ್ಗ, ಹಿರಿಯೂರು, ಹೊಸದುರ್ಗ, ಹೊಳಲ್ಕೆರೆ (ಎಸ್ಸಿ), ಶಿರಾ ಮತ್ತು ಪಾವಗಡ (ಎಸ್ಸಿ) ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಚಿತ್ರದುರ್ಗ ಲೋಕಸಭಾ ಕ್ಷೇತ್ರವು ಆರಂಭದಲ್ಲಿ ಮೈಸೂರು ರಾಜ್ಯದ ಭಾಗವಾಗಿತ್ತು . 1977 ರಿಂದ ಈ ಸ್ಥಾನವು ಕರ್ನಾಟಕ ರಾಜ್ಯದ ಭಾಗವಾಯಿತು.

ಇದನ್ನೂ ಓದಿ: Tumkur Result 2024 : ತುಮಕೂರಿನಲ್ಲಿ ಸೋಮಣ್ಣಗೆ ಗೆಲುವು, ಕಾಂಗ್ರೆಸ್​ಗೆ ಹಿನ್ನಡೆ

ಚಿತ್ರದುರ್ಗ ಕ್ಷೇತ್ರದಲ್ಲಿ ಒಟ್ಟು 16 ಲೋಕಸಭಾ ಚುನಾವಣೆಗಳು ನಡೆದಿದ್ದು, ಕಾಂಗ್ರೆಸ್ 11 ಬಾರಿ ಗೆದ್ದಿದೆ. ಇದಲ್ಲದೆ, ಪ್ರಜಾ ಸೋಷಿಯಲಿಸ್ಟ್ ಪಾರ್ಟಿ, ಸ್ವತಂತ್ರ ಅಭ್ಯರ್ಥಿ , ಜನತಾದಳ ಮತ್ತು ಜೆಡಿಯು ಅಭ್ಯರ್ಥಿಗಳು ಇಲ್ಲಿ ಗೆಲುವು ದಾಖಲಿಸಿದ್ದಾರೆ. 2009 ರಲ್ಲಿ ಮೊದಲ ಬಾರಿಗೆ ಬಿಜೆಪಿ ಈ ಸ್ಥಾನದಿಂದ ಗೆದ್ದಿತ್ತು. 2019 ರಲ್ಲಿ ಮತ್ತೆ ಸ್ಥಾನ ಕಸಿದುಕೊಂಡಿತು. ಕರ್ನಾಟಕದ ಚಿತ್ರದುರ್ಗ ಲೋಕಸಭಾ ಕ್ಷೇತ್ರವನ್ನು ಸಾಮಾನ್ಯವಾಗಿ ಕಾಂಗ್ರೆಸ್ ನ ಸಾಂಪ್ರದಾಯಿಕ ಕ್ಷೇತ್ರವೆಂದು ಪರಿಗಣಿಸಲಾಗುತ್ತದೆ.

ಬಿಜೆಪಿ ಈ ಬಾರಿ ಹಿರಿಯ ನಾಯಕ ಗೋವಿಂದ ಕಾರಜೋಳ ಅವರನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್ ನಿಂದ ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮೂರನೇ ಬಾರಿಗೆ ಕಣದಲ್ಲಿದ್ದಾರೆ. ಈ ಕ್ಷೇತ್ರದಲ್ಲಿ ಗಣನೀಯ ಸಂಖ್ಯೆಯ ಎಸ್ಸಿ ಮತ್ತು ಎಸ್ಟಿ ಮತದಾರರಿದ್ದಾರೆ. 2019ರಲ್ಲಿ ಇಲ್ಲಿ 17.61 ಲಕ್ಷ ಮತದಾರರು ಇದ್ದರೆ 2024ರಲ್ಲಿ 18. 49 ಲಕ್ಷ ಮತದಾರರು ಕಾಣಿಸಿಕೊಂಡಿದ್ದಾರೆ.

ಮತದಾರರ ಸಂಖ್ಯೆ ಎಷ್ಟಿದೆ?

2011ರ ಜನಗಣತಿಯ ಅಂಕಿಅಂಶಗಳ ಪ್ರಕಾರ ಜಿಲ್ಲೆಯ ಜನಸಂಖ್ಯೆ 1659456. ಸರಾಸರಿ ಸಾಕ್ಷರತಾ ಪ್ರಮಾಣವು 73.71% – ಮಹಿಳೆಯರಲ್ಲಿ 65.88% ಮತ್ತು ಪುರುಷರಲ್ಲಿ 81.37% ಆಗಿತ್ತು. ಸಂಸತ್ತಿನಲ್ಲಿ ಎಸ್ಸಿ ಮತದಾರರು ಸುಮಾರು 23.7% ರಷ್ಟಿದ್ದರೆ, ಎಸ್ಟಿ ಮತದಾರರು 16.8% ರಷ್ಟಿದ್ದಾರೆ. ಗ್ರಾಮೀಣ ಮತದಾರರು ಮತದಾರರಲ್ಲಿ ಸುಮಾರು 80% ರಷ್ಟಿದ್ದಾರೆ. ಈ ಕ್ಷೇತ್ರದಲ್ಲಿ ಮತದಾರರ ಲಿಂಗ ಅನುಪಾತ (1000 ಪುರುಷ ಮತದಾರರಿಗೆ ಮಹಿಳಾ ಮತದಾರರ ಸಂಖ್ಯೆ) 2024 ರಲ್ಲಿ 1,006, 2019 ರಲ್ಲಿ ಇದು 979, 2014 ರಲ್ಲಿ 966 ಮತ್ತು 2009 ರಲ್ಲಿ 967 ಆಗಿತ್ತು.

Continue Reading

ಬಾಗಲಕೋಟೆ

Bagalkot Election Result 2024: ಬಾಗಲಕೋಟೆಯಲ್ಲಿ ಬಿಜೆಪಿಯ ಪಿ.ಸಿ.ಗದ್ದಿಗೌಡರ್‌ಗೆ ಜಯ

Bagalkot Election Result 2024: ಬಿಜೆಪಿಯ ಪಿ.ಸಿ. ಗದ್ದಿಗೌಡರ್‌ ಅವರು 2004ರಿಂದಲೂ ಬಾಗಲಕೋಟೆಯ ಸಂಸದರಾಗಿದ್ದಾರೆ. ಇವರು ಈಗ ಸತತ ಐದನೇ ಬಾರಿಗೆ ಗೆಲುವು ಸಾಧಿಸುವ ಉತ್ಸಾಹದಲ್ಲಿದ್ದರು. ಇನ್ನು, ಸಂಯುಕ್ತಾ ಪಾಟೀಲ್‌ ಅವರು ಯುವ ನಾಯಕಿಯಾಗಿದ್ದು, ತಂದೆ ಶಿವಾನಂದ್‌ ಪಾಟೀಲ್‌ ಅವರ ಬಲದಿಂದ ಗೆಲುವು ಸಾಧಿಸುವ ಛಲದೊಂದಿಗೆ ಮುನ್ನುಗ್ಗಿದ್ದರು. ಇಲ್ಲಿ ಅನುಭವ ವರ್ಸಸ್‌ ಉತ್ಸಾಹ ಎಂಬಂತಾಗಿತ್ತು. ಕೊನೆಗೆ ಅನುಭವದ ಕೈ ಮೇಲಾಗಿದೆ.

VISTARANEWS.COM


on

Bagalkot Election Result 2024
Koo

ಬಾಗಲಕೋಟೆ: ಬಿಜೆಪಿಯ ಸಿ.ಗದ್ದಿಗೌಡರ್‌ (PC Gaddigoudar) ಅವರು ಬಾಗಲಕೋಟೆ ಲೋಕಸಭೆ ಕ್ಷೇತ್ರದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಇದರೊಂದಿಗೆ ಸತತ ಐದನೇ ಬಾರಿಗೆ ಗೆಲುವು ಸಾಧಿಸುವ ಮೂಲಕ ಪಿ.ಸಿ.ಗದ್ದಿಗೌಡರ್‌ ಅವರು ಇತಿಹಾಸ ಸೃಷ್ಟಿಸಿದ್ದಾರೆ. ಇನ್ನು ತುಸು ಭರವಸೆ ಮೂಡಿಸಿದ್ದ ಯುವ ನಾಯಕಿ, ಸಚಿವ ಶಿವಾನಂದ್‌ ಪಾಟೀಲ್‌ ಅವರ ಪುತ್ರಿ ಸಂಯುಕ್ತಾ ಪಾಟೀಲ್‌ (Samyukta Patil) ಅವರು ಪರಾಜಯಗೊಂಡಿದ್ದಾರೆ.

ಪಿ.ಸಿ.ಗದ್ದಿಗೌಡರ್‌ ಅವರು 2004ರಲ್ಲಿ ಬಾಗಲಕೋಟೆ ಕ್ಷೇತ್ರದಲ್ಲಿ ಮೊದಲ ಬಾರಿಗೆ ಬಿಜೆಪಿಯ ಪತಾಕೆ ಹಾರಿಸಿದ್ದು, ಅದಾದ ನಂತರ ಅವರು ತಿರುಗಿ ನೋಡಿರಲ್ಲ. ಕ್ಷೇತ್ರದ ಜನರ ಜತೆ ಒಡನಾಟ, ಅಭಿವೃದ್ಧಿ ಯೋಜನೆಗಳು, ಸರಳತೆಯಿಂದ ಮನೆಮಾತಾಗಿರುವ ಇವರಿಗೆ ನರೇಂದ್ರ ಮೋದಿ ಅವರ ಅಲೆಯ ಕೃಪಾಕಟಾಕ್ಷವೂ ಇತ್ತು. ಅದರಲ್ಲೂ, ಸಂಯುಕ್ತಾ ಪಾಟೀಲ್‌ ಅವರು ಹೊರಗಿನವರು ಎಂಬ ಭಾವನೆ ಜನರಲ್ಲಿರುವುದು ಕೂಡ ಗದ್ದಿಗೌಡರ್‌ ಅವರಿಗೆ ನೆರವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿತ್ತು. ಅದರಂತೆ, ಗದ್ದಿಗೌಡರ್‌ ಅವರು ವಿಜಯ ಸಾಧಿಸಿದ್ದಾರೆ.

Bagalkot Lok Sabha Constituency

ಸಂಯುಕ್ತಾ ಪಾಟೀಲ್‌ ಅವರು ಬಾಗಲಕೋಟೆ ಕ್ಷೇತ್ರದ ಆಡಳಿತ ವಿರೋಧಿ ಅಲೆ, ತಂದೆ ಶಿವಾನಂದ್‌ ಪಾಟೀಲರ ಬಲವಿದೆ. ಪ್ರಚಾರದ ವೇಳೆ ಯುವಕರು, ಅದರಲ್ಲೂ, ಯುವತಿಯರನ್ನು ಸೆಳೆಯುವಲ್ಲಿ ಸಂಯುಕ್ತಾ ಪಾಟೀಲ್‌ ಅವರು ಯಶಸ್ವಿಯಾಗಿದ್ದರು. ಹೊರಗಿನವಳು ಎಂಬ ಮನೋಭಾವವನ್ನು ತೊಡೆದುಹಾಕಿ, ನಾನೂ ನಿಮ್ಮ ಮನೆಮಗಳು ಎಂಬ ಭಾವನೆಯು ಜನರಲ್ಲಿ ಮೂಡುವಂತೆ ಮಾಡಿದ್ದರು. ಆ ಮೂಲಕ, ಬಾಗಲಕೋಟೆಯಲ್ಲಿ ಸಂಯುಕ್ತಾ ಪಾಟೀಲ್‌ ಅವರು ಪಿ.ಸಿ.ಗದ್ದಿಗೌಡರ್‌ ಅವರಿಗೆ ತೀವ್ರ ಪೈಪೋಟಿ ನೀಡಿದ್ದರು.

2019, 2014ರ ಫಲಿತಾಂಶ ಏನಾಗಿತ್ತು?

2019ರ ಲೋಕಸಭೆ ಚುನಾವಣೆಯಲ್ಲಿ ಪಿ.ಸಿ.ಗದ್ದಿಗೌಡರ್‌ ಅವರು ಕಾಂಗ್ರೆಸ್‌ ಅಭ್ಯರ್ಥಿ ವೀಣಾ ಕಾಶಪ್ಪನವರ್‌ ಅವರ ವಿರುದ್ಧ 1.68 ಲಕ್ಷ ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದರು. 2014ರ ಲೋಕಸಭೆ ಚುನಾವಣೆಯಲ್ಲೂ ನರೇಂದ್ರ ಮೋದಿ ಅವರ ಅಲೆಯನ್ನು ಸದ್ಬಳಕೆ ಮಾಡಿಕೊಂಡಿದ್ದ ಪಿ.ಸಿ.ಗದ್ದಿಗೌಡರ್‌ ಅವರು ಕಾಂಗ್ರೆಸ್‌ನ ಅಜಯ್‌ ಕುಮಾರ್‌ ಸರನಾಯ್ಕ ಅವರ ವಿರುದ್ಧ 1 ಲಕ್ಷಕ್ಕೂ ಅಧಿಕ ಮತಗಳಿಂದ ಜಯಭೇರಿ ಬಾರಿಸಿದ್ದರು.

ಇದನ್ನೂ ಓದಿ: Uttara Kannada Election Result 2024: ಉತ್ತರ ಕನ್ನಡದಲ್ಲಿ ಗೆದ್ದು ಬೀಗಿದ ವಿಶ್ವೇಶ್ವರ ಹೆಗಡೆ ಕಾಗೇರಿ

Continue Reading
Advertisement
Chikkodi Election Result 2024
ಚಿಕ್ಕೋಡಿ58 seconds ago

Chikkodi Election Result 2024: ಚಿಕ್ಕೋಡಿಯಲ್ಲಿ ಪ್ರಿಯಾಂಕಾ ಜಾರಕಿ’ಹೋಳಿ’; ಜೊಲ್ಲೆಗೆ ಸೋಲು

Davangere Election Result 2024
ದಾವಣಗೆರೆ8 mins ago

Davangere Election Result 2024: ದಾವಣಗೆರೆಯಲ್ಲಿ ಕಾಂಗ್ರೆಸ್‌ನ ಪ್ರಭಾ ಮಲ್ಲಿಕಾರ್ಜುನ್‌ಗೆ ಗೆಲುವು

Chitrdurga Result 2024
ಪ್ರಮುಖ ಸುದ್ದಿ11 mins ago

Chitrdurga Result 2024 : ಚಿತ್ರದುರ್ಗ ಕ್ಷೇತ್ರದಲ್ಲಿ ಗೋವಿಂದ ಕಾರಜೋಳಗೆ ಗೆಲುವು

Election Results 2024
ದೇಶ12 mins ago

Election results 2024: ಜಮ್ಮು-ಕಾಶ್ಮೀರದಲ್ಲಿ ಮಾಜಿ ಸಿಎಂಗಳಿಗೆ ಹೀನಾಯ ಸೋಲು

election results 2024 Congress party
ಪ್ರಮುಖ ಸುದ್ದಿ16 mins ago

Election Results 2024: 2014ರ ಬಳಿಕ ಮೊದಲ ಬಾರಿಗೆ ಕಾಂಗ್ರೆಸ್‌ಗೆ 100 ಸೀಟು, ಮತ್ತೆ ಚಿಗುರಿದ ಪುರಾತನ ಪಕ್ಷ!

Bagalkot Election Result 2024
ಬಾಗಲಕೋಟೆ17 mins ago

Bagalkot Election Result 2024: ಬಾಗಲಕೋಟೆಯಲ್ಲಿ ಬಿಜೆಪಿಯ ಪಿ.ಸಿ.ಗದ್ದಿಗೌಡರ್‌ಗೆ ಜಯ

Tumkur Result 2024
ಪ್ರಮುಖ ಸುದ್ದಿ18 mins ago

Tumkur Result 2024 : ತುಮಕೂರಿನಲ್ಲಿ ಸೋಮಣ್ಣಗೆ ಗೆಲುವು, ಕಾಂಗ್ರೆಸ್​ಗೆ ಹಿನ್ನಡೆ

Election Results 2024
Lok Sabha Election 202418 mins ago

Election Results 2024: ಮೈತ್ರಿಕೂಟಕ್ಕೆ ಕಡಿಮೆ ಸ್ಥಾನ; ವಿಷಯ ತಿಳಿದು ಬಿಜೆಪಿ ಅಭಿಮಾನಿ ಹೃದಯಾಘಾತಕ್ಕೆ ಬಲಿ

Rahul Dravid
ಕ್ರೀಡೆ21 mins ago

Rahul Dravid: ಕೋಚ್ ಹುದ್ದೆಯಲ್ಲಿ ಮುಂದುವರಿಯಲ್ಲ; ಅಧಿಕೃತ ಹೇಳಿಕೆ ನೀಡಿದ ದ್ರಾವಿಡ್

Dakshina Kannada Result 2024
ಪ್ರಮುಖ ಸುದ್ದಿ25 mins ago

Dakshina Kannada Result 2024 : ದಕ್ಷಿಣ ಕನ್ನಡದಲ್ಲಿ ಬ್ರಿಜೇಶ್​ ಚೌಟಾಗೆ ಭರ್ಜರಿ ವಿಜಯ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok Sabha Election Result 2024 Live
ದೇಶ7 hours ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ22 hours ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ23 hours ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ2 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು3 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ5 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ7 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು1 week ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ1 week ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 week ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

ಟ್ರೆಂಡಿಂಗ್‌