IND vs ENG | ಸೋಲಿನ ಹತಾಶೆಯಲ್ಲಿ ಕಣ್ಣೀರು ಹಾಕಿದ ಟೀಮ್‌ ಇಂಡಿಯಾದ ನಾಯಕ ರೋಹಿತ್‌ ಶರ್ಮ - Vistara News

T20 ವಿಶ್ವಕಪ್

IND vs ENG | ಸೋಲಿನ ಹತಾಶೆಯಲ್ಲಿ ಕಣ್ಣೀರು ಹಾಕಿದ ಟೀಮ್‌ ಇಂಡಿಯಾದ ನಾಯಕ ರೋಹಿತ್‌ ಶರ್ಮ

ಟಿ20 ವಿಶ್ವ ಕಪ್‌ನ ಸೆಮಿಫೈನಲ್‌ ಪಂದ್ಯದಲ್ಲಿ ಭಾರತ ಸೋಲುತ್ತಿದ್ದಂತೆ ನಾಯಕ ರೋಹಿತ್‌ ಶರ್ಮ ಕಣ್ಣೀರು ಹಾಕಿದರು.

VISTARANEWS.COM


on

ind vs eng
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಅಡಿಲೇಡ್‌ : ಟಿ೨೦ ವಿಶ್ವ ಕಪ್‌ನಲ್ಲಿ ಭಾರತ ತಂಡದ ಅಭಿಯಾನ ಕೊನೆಗೊಂಡಿದೆ. ಇಂಗ್ಲೆಂಡ್‌ ವಿರುದ್ಧದ (IND vs ENG) ಸೆಮಿ ಫೈನಲ್ ಪಂದ್ಯದಲ್ಲಿ ೧೦ ವಿಕೆಟ್‌ ಹೀನಾಯ ಸೋಲು ಅನುಭವಿಸುವ ಮೂಲಕ ನಿರಾಸೆ ಎದುರಿಸಿತು. ಈ ಮೂಲಕ ಸತತ ಐಸಿಸಿ ಟ್ರೋಫಿ ಗೆಲ್ಲುವಲ್ಲಿ ಟೀಮ್‌ ಇಂಡಿಯಾ ಮತ್ತೆ ಎಡವಿತು. ಏತನ್ಮಧ್ಯೆ, ಸೆಮಿ ಫೈನಲ್‌ ಪಂದ್ಯದಲ್ಲಿ ಸೋಲುತ್ತಿದ್ದಂತೆ ಭಾರತ ತಂಡದ ನಾಯಕ ರೋಹಿತ್‌ ಶರ್ಮ ಕಣ್ಣೀರು ಹಾಕಿದ ಪ್ರಸಂಗವೂ ನಡೆಯಿತು.

ಇಂಗ್ಲೆಂಡ್‌ ತಂಡದ ಆರಂಭಿಕ ಬ್ಯಾಟರ್‌ಗಳಾದ ಜೋಸ್‌ ಬಟ್ಲರ್‌ (೮೦) ಹಾಗೂ ಅಲೆಕ್ಸ್‌ ಹೇಲ್ಸ್‌ (೮೬) ಅಜೇಯ ಅರ್ಧ ಶತಕಗಳನ್ನು ಬಾರಿಸುವ ಮೂಲಕ ಭಾರತ ನೀಡಿದ್ದ ೧೬೯ ರನ್‌ಗಳ ಗುರಿಯನ್ನು ೧೬ ಓವರ್‌ನಲ್ಲೇ ಮೀರಿ ನಿಂತರು. ಭಾರತ ತಂಡ ಗೆಲುವು ಸಾಧಿಸುತ್ತಿದ್ದಂತೆ ಟೀಮ್‌ ಇಂಡಿಯಾದ ನಾಯಕ ರೋಹಿತ್ ಶರ್ಮ ಡಗ್‌ಔಟ್‌ನಲ್ಲಿ ಕುಳಿತು ಕಣ್ಣೀರು ಹಾಕಿದರು. ಬಳಿಕ ಹೆಡ್‌ ಕೋಚ್‌ ರಾಹುಲ್‌ ದ್ರಾವಿಡ್ ಅವರು ಸಮಾಧಾನ ಮಾಡಿದರು.

ರೋಹಿತ್‌ ಶರ್ಮ ಅವರಿಗೆ ಇದೇ ಕೊನೇ ಟಿ೨೦ ಟೂರ್ನಿ ಎಂದು ಹೇಳಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಅವರಿಗೆ ಸೆಮಿಫೈನಲ್‌ ಸೋಲು ಹೆಚ್ಚು ನಿರಾಸೆ ಮೂಡಿಸಿರಬಹುದು. ಅಂತೆಯೇ ಹಾಲಿ ವಿಶ್ವ ಕಪ್‌ನಲ್ಲಿ ಅವರು ಫಾರ್ಮ್‌ ಕಳೆದುಕೊಂಡು ಸಮಸ್ಯೆ ಎದುರಿಸಿದ್ದರು. ಹೀಗಾಗಿ ಸೋಲಿನ ಭಾವ ಹೆಚ್ಚಾಗಿ ಕಾಡಿದೆ.

ಹಿಂದೆಯೂ ಅತ್ತಿದ್ದರು

ರೋಹಿತ್‌ ಶರ್ಮ ೨೦೧೯ರ ಏಕ ದಿನ ವಿಶ್ವ ಕಪ್‌ನ ಸೆಮಿ ಫೈನಲ್‌ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್‌ ವಿರುದ್ಧದ ಸೋತಾಗಲೂ ಅತ್ತಿದ್ದರು. ಆ ವೇಳೆ ಮಹೇಂದ್ರ ಸಿಂಗ್‌ ಧೋನಿ ರನ್‌ಔಟ್‌ ಆಗುವ ಮೂಲಕ ಭಾರತ ತಂಡದ ಗೆಲ್ಲುವ ಅವಕಾಶ ಇಲ್ಲದಾಗಿತ್ತು. ಈ ವೇಳೆ ರೋಹಿತ್‌ ಅತ್ತಿದ್ದರು.

ಇದನ್ನೂ ಓದಿ | IND vs ENG | ಸೆಮಿ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ 10 ವಿಕೆಟ್‌ ಸೋಲು, ಟೀಮ್‌ ಇಂಡಿಯಾದ ವಿಶ್ವ ಕಪ್‌ ಅಭಿಯಾನ ಅಂತ್ಯ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

T20 World Cup 2024: ಐನಾಕ್ಸ್‌ ದೈತ್ಯ ಪರದೆಯಲ್ಲೂ ಮೂಡಿಬರಲಿದೆ ಭಾರತದ ಪಂದ್ಯಗಳು

T20 World Cup 2024: ಭಾರತದ ಲೀಗ್​ ಪಂದ್ಯಗಳು ಐನಾಕ್ಸ್‌(INOX), ಪಿವಿಆರ್(PVR)​, ಸಿನೆಪೊಲಿಸ್(CONEPOLIS), ಮಿರಾಜ್​ ಸಿನೆಮಾ(MIRAJ CENIM)ದ ಬಿಗ್‌ ಸ್ಕ್ರೀನ್‌ಗಳಲ್ಲಿ ಮೂಡಿಬರಲಿವೆ. ನವದೆಹಲಿ, ನೋಯ್ಡಾ, ಫ‌ರೀದಾಬಾದ್‌, ಗುರುಗ್ರಾಮ್‌, ಮುಂಬಯಿ, ಬೆಂಗಳೂರು, ಪುಣೆ, ಕೋಲ್ಕತಾ, ಜೈಪುರ, ಇಂದೋರ್‌, ಸೂರತ್‌, ವಡೋದರ ಸೇರಿ ದೇಶದ ಪ್ರಮುಖ ನಗರದಲ್ಲಿ ಈ ವ್ಯವಸ್ಥೆ ಇದೆ

VISTARANEWS.COM


on

T20 World Cup 2024
Koo

ಮುಂಬಯಿ: ಈ ಬಾರಿಯ ಟಿ20 ವಿಶ್ವಕಪ್​ ಟೂರ್ನಿಯಲ್ಲಿ(T20 World Cup 2024) ಭಾರತದ ಪಂದ್ಯಗಳನ್ನು ಕ್ರಿಕೆಟ್​ ಅಭಿಮಾನಿಗಳು ಮೊಬೈಲ್​ ಮತ್ತು ಟಿವಿ ಮೂಲಕ ಮಾತ್ರವಲ್ಲದೆ ಸಿನೆಮಾ ಥಿಯೇಟರ್​ಗಳಲ್ಲಿಯೂ ಕಣ್ತುಂಬಿಕೊಳ್ಳಬಹುದು. ಹೌದು, ಭಾರತದ ಲೀಗ್​ ಪಂದ್ಯಗಳು ಐನಾಕ್ಸ್‌(INOX), ಪಿವಿಆರ್(PVR)​, ಸಿನೆಪೊಲಿಸ್(CONEPOLIS), ಮಿರಾಜ್​ ಸಿನೆಮಾ(MIRAJ CENIM)ದ ಬಿಗ್‌ ಸ್ಕ್ರೀನ್‌ಗಳಲ್ಲಿ ಮೂಡಿಬರಲಿವೆ. ನವದೆಹಲಿ, ನೋಯ್ಡಾ, ಫ‌ರೀದಾಬಾದ್‌, ಗುರುಗ್ರಾಮ್‌, ಮುಂಬಯಿ, ಬೆಂಗಳೂರು, ಪುಣೆ, ಕೋಲ್ಕತಾ, ಜೈಪುರ, ಇಂದೋರ್‌, ಸೂರತ್‌, ವಡೋದರ ಸೇರಿ ದೇಶದ ಪ್ರಮುಖ ನಗರದಲ್ಲಿ ಈ ವ್ಯವಸ್ಥೆ ಇದೆ.

ಜೂನ್​ 9ರಂದು ನಡೆಯುವ ಹೈವೋಲ್ಟೇಜ್ ಪಂದ್ಯವಾದ ಭಾರತ ಮತ್ತು ಪಾಕ್​ ಪಂದ್ಯಕ್ಕೆ ಭಾರೀ ಬೇಡಿಕೆ ಇರುವ ಸಾಧ್ಯತೆ ಇದೆ. ಭಾರತ ತನ್ನ ಮೊದಲ ಲೀಗ್​ ಪಂದ್ಯವನ್ನು ಜೂನ್​ 5ರಂದು ಐರ್ಲೆಂಡ್​ ವಿರುದ್ಧ ಆಡಲಿದೆ. ಲೀಗ್​ನಲ್ಲಿ ಭಾರತ ಒಟ್ಟು 4 ಪಂದ್ಯಗಳನ್ನು ಆಡಲಿದೆ. ಇಲ್ಲಿ ಅಗ್ರ 2ರೊಳಗೆ ಸ್ಥಾನ ಪಡೆದರೆ ಸೂಪರ್​ 8 ಹಂತಕ್ಕೇರಲಿದೆ.


ಮೊಬೈಲ್​ನಲ್ಲಿ ಉಚಿತ ಪ್ರಸಾರ


ಏಕದಿನ ವಿಶ್ವಕಪ್​ ಟೂರ್ನಿಯಂತೆ ಈ ಬಾರಿಯೂ ಟಿ20 ವಿಶ್ವಕಪ್​ ಪಂದ್ಯಾವಳಿಗಳನ್ನು ಭಾರತೀಯ ಕ್ರಿಕೆಟ್​ ಅಭಿಮಾನಿಗಳು ಉಚಿತವಾಗಿ ನೋಡಬಹುದಾಗಿದೆ. ​ಡಿಸ್ನಿ + ಹಾಟ್‌ಸ್ಟಾರ್(Disney+ Hotstar) ಭಾರತದಲ್ಲಿನ ಸ್ಮಾರ್ಟ್‌ಫೋನ್ ಬಳಕೆದಾರಿಗೆ ಈ ಅವಕಾಶ ಕಲ್ಪಿಸಿದೆ. OTT ಪ್ಲಾಟ್‌ಫಾರ್ಮ್‌ನಲ್ಲಿ ಎಲ್ಲ ಪಂದ್ಯಗಳನ್ನು ಉಚಿತವಾಗಿ ವೀಕ್ಷಿಸಲು ಸಾಧ್ಯವಾಗುತ್ತದೆ.

ಭಾರತದ ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 8ಗಂಟೆಗೆ ಆರಂಭವಾಗಲಿದೆ. ಇತರ ತಂಡಗಳ ಕೆಲವು ಪಂದ್ಯಗಳು ಬೆಳಗ್ಗೆ 6 ಗಂಟೆಗೆ ಪ್ರಸಾರಗೊಳ್ಳಲಿದೆ. ಡಿಸ್ನಿ+ ಹಾಟ್‌ಸ್ಟಾರ್ ಇಂಡಿಯಾದ ಮುಖ್ಯಸ್ಥ ಸಜಿತ್ ಶಿವಾನಂದನ್, “ಐಸಿಸಿ ಪುರುಷರ ಟಿ20 ವಿಶ್ವಕಪ್ 2024 ಅನ್ನು ಮೊಬೈಲ್‌ನಲ್ಲಿ ಉಚಿತವಾಗಿ ನೀಡುವ ಮೂಲಕ, ನಾವು ಕ್ರಿಕೆಟ್ ಆಟವನ್ನು ಬೆಳೆಸುವ, ದೇಶಾದ್ಯಂತ ಹೆಚ್ಚಿನ ಪ್ರೇಕ್ಷಕರನ್ನು ತಲುಪುವ ಗುರಿಯನ್ನು ಹೊಂದಿದ್ದೇವೆ” ಎಂದು ಹೇಳಿದ್ದಾರೆ.

ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 ರ ಸಮಯದಲ್ಲಿ, ಡಿಸ್ನಿ+ ಹಾಟ್‌ಸ್ಟಾರ್ ಅಪ್ಲಿಕೇಶನ್ ಮೂಲಕ ಮೊಬೈಲ್‌ನಲ್ಲಿ ಉಚಿತವಾಗಿ ಸ್ಟ್ರೀಮ್ ಮಾಡಲಾಯಿತು. ಇದು ಏಕಕಾಲದಲ್ಲಿ ಅತ್ಯಧಿಕ ವೀಕ್ಷಣೆ ಕಂಡ 5 ಬಾರಿಯ ದಾಖಲೆಗಳನ್ನು ಮುರಿದಿತ್ತು. ಟೀಮ್ ಇಂಡಿಯಾ ಮತ್ತು ಆಸ್ಟ್ರೇಲಿಯಾ ನಡುವಿನ ಫೈನಲ್‌ನಲ್ಲಿ ಪಂದ್ಯ ಏಕಕಾಲಕ್ಕೆ 5.9 ಕೋಟಿ ವೀಕ್ಷಣೆ ಕಂಡಿತ್ತು. ಈ ದಾಖಲೆ ಟಿ20 ವಿಶ್ವಕಪ್​ನಲ್ಲಿ ಪತನಗೊಳ್ಳುವ ಸಾಧ್ಯತೆ ಇದೆ.

ಈ ಬಾರಿ ಟೂರ್ನಿಯಲ್ಲಿ ಗರಿಷ್ಠ 20 ತಂಡಗಳು ಕಣಕ್ಕಿಳಿಯಲಿವೆ. 2022ರ ಆವೃತ್ತಿಯಲ್ಲಿ 12 ತಂಡಗಳು ಭಾಗಿಯಾಗಿದ್ದವು. ಟೂರ್ನಿಯಲ್ಲೂ ವಿಭಿನ್ನ ಸ್ವರೂಪವಿದೆ. 20 ತಂಡಗಳನ್ನು ತಲಾ ಐದು ತಂಡಗಳಂತೆ ನಾಲ್ಕು ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಗುಂಪು ವಿಭಾಗದಲ್ಲಿ ಪ್ರತಿ ತಂಡಗಳು ತಲಾ ನಾಲ್ಕು ಪಂದ್ಯಗಳನ್ನು ಆಡಲಿವೆ. ಪ್ರತಿ ಗುಂಪಿನಿಂದ ತಲಾ ಎರಡು ತಂಡಗಳು ಸೂಪರ್ ಎಂಟರ ಹಂತಕ್ಕೆ ತೇರ್ಗಡೆ ಪಡೆಯಲಿವೆ. ಅಲ್ಲೂ ತಲಾ ನಾಲ್ಕು ತಂಡಗಳ ಎರಡು ಗುಂಪುಗಳು ಇದ್ದು, ಪ್ರತಿ ಗುಂಪಿನ ಅಗ್ರ ಎರಡು ತಂಡಗಳು ಸೆಮಿಫೈನಲ್‌ಗೆ ಲಗ್ಗೆ ಇಡಲಿವೆ.

Continue Reading

ಕ್ರಿಕೆಟ್

MS Dhoni’s last-ball Heroics: ಧೋನಿ ಮಿಂಚಿನ ವೇಗದ ರನೌಟ್​; ಭಾರತಕ್ಕೆ 1 ರನ್‌ ರೋಚಕ ಜಯ; ಇದು ಮರೆಯಲಾಗದ ನೆನಪು

MS Dhoni’s last-ball Heroics: ಅದು, 2016ರ ಟಿ20 ವಿಶ್ವಕಪ್‌. ಭಾರತ(India vs Bangladesh ICC World T20 2016) ತಂಡ ಬಾಂಗ್ಲಾದೇಶ(MS Dhoni’s last-ball HeroicsMS Dhoni’s last-ball Heroics) ವಿರುದ್ಧ ಅತ್ಯಂತ ರೋಚಕವಾಗಿ 1 ರನ್‌ಗಳಿಂದ ಜಯ ಸಾಧಿಸಿತ್ತು. ಇದನ್ನು ಭಾರತೀಯ ಕ್ರಿಕೆಟ್​ ಅಭಿಮಾನಿಗಳು ಇಂದಿಗೂ ಕೂಡ ಪ್ರತಿ ಟಿ20 ವಿಶ್ವಕಪ್​ ವೇಳೆ ನೆನಪಿಸಿಕೊಳ್ಳುತ್ತಾರೆ.

VISTARANEWS.COM


on

MS Dhoni's last-ball Heroics
Koo

ಬೆಂಗಳೂರು: 2007ರ ಚೊಚ್ಚಲ ವಿಶ್ವಕಪ್ ಗೆಲುವಿನ​ ಬಳಿಕ ಭಾರತೀಯ ಕ್ರಿಕೆಟ್​ ಅಭಿಮಾನಿಗಳು ಎಂದೂ ಮರೆಯದ ಪಂದ್ಯವೆಂದರೆ ಅದು, 2016ರ ಟಿ20 ವಿಶ್ವಕಪ್‌. ಭಾರತ(India vs Bangladesh ICC World T20 2016) ತಂಡ ಬಾಂಗ್ಲಾದೇಶ(MS Dhoni’s last-ball HeroicsMS Dhoni’s last-ball Heroics) ವಿರುದ್ಧ ಅತ್ಯಂತ ರೋಚಕವಾಗಿ 1 ರನ್‌ಗಳಿಂದ ಜಯ ಸಾಧಿಸಿತ್ತು. ಇದನ್ನು ಮರೆಯಲು ಸಾಧ್ಯವೇ ಇಲ್ಲ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ಮಾಡಿದ್ದ ಭಾರತ 7 ವಿಕೆಟ್​ಗೆ 146 ರನ್​ ಬಾರಿಸಿತು. ಸಾಮಾನ್ಯ ಮೊತ್ತದ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ 19.3 ಓವರ್‌ಗಳಲ್ಲಿ 145 ರನ್‌ಗಳಿಗೆ 6 ವಿಕೆಟ್‌ ಕಳೆದುಕೊಂಡು ಆರಾಮಾಗಿತ್ತು. ಆದರೆ ಮುಂದಿನೆರಡು ಎಸೆತಗಳಲ್ಲಿ ಹಾರ್ದಿಕ್‌ ಪಾಂಡ್ಯ ಬಾಂಗ್ಲಾದ ಸತತ 2 ವಿಕೆಟ್‌ ಎಗರಿಸಿದರು. ಕೊನೆಯ ಎಸೆತದಲ್ಲಿ ಬಾಂಗ್ಲಾಕ್ಕೆ ಗೆಲುವಿಗೆ ಎರಡು ರನ್‌ ಗಳಿಸಬೇಕಾದ ಒತ್ತಡ ಎದುರಾಗಿತ್ತು.

ಒಂದು ರನ್​ ಗಳಿಸುತ್ತಿದ್ದರೂ ಪಂದ್ಯವನ್ನು ಟೈ ಮಾಡಬಹುದಿತ್ತು. ಹಾರ್ದಿಕ್‌ ಪಾಂಡ್ಯ ಎಸೆದ ಕೊನೆಯ ಎಸೆತವನ್ನು ಶುವಗತಗೆ ಬಾರಿಸಲು ಆಗಲಿಲ್ಲ. ಚೆಂಡು ಕೀಪರ್​ ಕೈ ಸೇರಿತು. ಆದರೂ ಇನ್ನೊಂದು ತುದಿಯಲ್ಲಿದ್ದ ಮುಸ್ತಫಿಜುರ್‌ ರೆಹಮಾನ್‌ ರನ್‌ ಗಳಿಸಲು ಓಡಿದರು. ಈ ಸಂದರ್ಭದಲ್ಲಿ ಧೋನಿ ತೆಗೆದುಕೊಂಡ ನಿರ್ಧಾರ ಅತ್ಯಂತ ಅಚ್ಚರಿಯದ್ದಾಗಿತ್ತು. ಅವರು ದೂರದಿಂದಲೇ ಚೆಂಡನ್ನು ವಿಕೆಟ್‌ನತ್ತ ಎಸೆಯದೇ, ಅತಿ ವೇಗವಾಗಿ ಓಡಿಬಂದು ನೇರವಾಗಿ ಬೇಲ್ಸ್‌ ಎಗರಿಸಿದರು. ಕೂದಲೆಳೆ ಅಂತರದಲ್ಲಿ ಮುಸ್ತಫಿಜುರ್‌ ರನೌಟಾದರು. ಭಾರತಕ್ಕೆ 1 ರನ್‌ ಜಯ ಲಭಿಸಿತು. ಧೋನಿ ಜತೆಗೆ ಪಾಂಡ್ಯ ಕೂಡ ಗೆಲುವಿನ ಹೀರೊ ಎನಿಸಿಕೊಂಡರು. ಅಂದಿನ ಈ ರನೌಟ್​ ವಿಡಿಯೊವನ್ನು ಈ ಬಾರಿಯ ಟೂರ್ನಿಗೂ ಮುನ್ನ ಐಸಿಸಿ ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಮಾಧ್ಯಮಗಳಲ್ಲಿ ಹಂಚಿಕೊಂಡಿದೆ.

ಇದನ್ನೂ ಓದಿ T20 World Cup 2024: ಟಿ20 ವಿಶ್ವಕಪ್​ ಪಂದ್ಯವನ್ನು ಉಚಿತವಾಗಿ ವೀಕ್ಷಿಸುವುದು ಹೇಗೆ?

ಶ್ರೀಶಾಂತ್‌ ಕ್ಯಾಚ್‌; ಭಾರತಕ್ಕೆ ವಿಶ್ವಕಪ್‌


2007ರ ಟಿ20 ವಿಶ್ವಕಪ್‌ ಫೈನಲ್‌ ಸೆ.24ರಂದು ಜೊಹಾನ್ಸ್‌ಬರ್ಗ್‌ನಲ್ಲಿ ನಡೆದಿತ್ತು. ಅಲ್ಲಿ ಭಾರತ ರೋಚಕವಾಗಿ 5 ರನ್‌ಗಳಿಂದ ಗೆದ್ದಿದ್ದು ಮಾತ್ರವಲ್ಲ, ಟಿ20 ಇತಿಹಾಸದ ಮೊದಲ ವಿಶ್ವಕಪ್ಪನ್ನು ಜೈಸಿತು. ಕೊನೆಯ ಓವರ್‌ನಲ್ಲಿ ಪಾಕಿಸ್ತಾನಕ್ಕೆ 13 ರನ್‌ ಬೇಕಿತ್ತು. ಜೋಗಿಂದರ್‌ ಶರ್ಮ ಈ ಓವರ್​ ಎಸೆದಿದ್ದರು. ಪಾಕ್​ ಕೈಯಲ್ಲಿ ಇದ್ದಿದ್ದು ಒಂದು ವಿಕೆಟ್. ಜೋಗಿಂದರ್ ಶರ್ಮಾರ ಎರಡನೇ ಎಸೆತವನ್ನು ಸಿಕ್ಸರ್​ಗೆ ಅಟ್ಟಿದ ಮಿಸ್ಬಾ ಮೂರನೇ ಎಸೆತವನ್ನು ಫೈನ್ ಲೆಗ್​ಗೆ ಸ್ಕೂಪ್ ಮಾಡಿದ್ದರು. ಆದರೆ ಚೆಂಡು ಶ್ರೀಶಾಂತ್ ಕೈ ಸೇರಿತ್ತು. ಪಾಕಿಸ್ತಾನ ಆಲ್​ಔಟ್​ ಆಯಿತು. ಭಾರತ ಕೇವಲ 5 ರನ್​ ಅಂತರದಿಂದ ಗೆದ್ದು ಟ್ರೋಫಿ ಎತ್ತಿ ಹಿಡಿಯಿತು. ಇಲ್ಲಿಂದ ಧೋನಿ ಯುಗ ಕೂಡ ಆರಂಭವಾಯಿತು. ಭಾರತ ಪರ ಬೌಲಿಂಗ್​ನಲ್ಲಿ ಇರ್ಫಾನ್​ ಪಠಾಣ್​ (16 ಕ್ಕೆ 3), ಆರ್​.ಪಿ ಸಿಂಗ್​(24ಕ್ಕೆ 3), ಜೋಗಿಂದರ್ ಶರ್ಮಾ(20ಕ್ಕೆ 2) ವಿಕೆಟ್​ ಕಿತ್ತು ಮಿಂಚಿದ್ದರು.

Continue Reading

ಕ್ರೀಡೆ

T20 World Cup Records: ಟಿ20 ವಿಶ್ವಕಪ್​ ಇತಿಹಾಸದ ಸ್ವಾರಸ್ಯಕರ ಸಂಗತಿಗಳು ಇಲ್ಲಿವೆ

T20 World Cup Records: ಉದ್ಘಾಟನಾ ಆವೃತ್ತಿಯ ಟಿ20 ವಿಶ್ವಕಪ್​ ಆಡಿದ ಇಬ್ಬರು ಆಟಗಾರರು ಈ ಬಾರಿಯ ವಿಶ್ವ ಕಪ್​ನಲ್ಲಿಯೂ ಕಾಣಿಸಿಕೊಂಡಿದ್ದಾರೆ. ಇವರೆಂದರೆ, ಭಾರತ ಕ್ರಿಕೆಟ್​ ತಂಡದ ನಾಯಕ ರೋಹಿತ್​ ಶರ್ಮಾ ಮತ್ತು ಬಾಂಗ್ಲಾದೇಶದ ಶಕಿಬ್​ ಅಲ್​ ಹಸನ್.

VISTARANEWS.COM


on

T20 World Cup Records
Koo

ಬೆಂಗಳೂರು: 9ನೇ ಆವೃತ್ತಿಯ ಟಿ20 ವಿಶ್ವಕಪ್​ ಟೂರ್ನಿಗೆ(T20 World Cup 2024) ಕ್ಷಣಗಣನೆ ಆರಂಭವಾಗಿದೆ. ಇದೇ ಮೊದಲ ಬಾರಿಗೆ ಅಮೆರಿಕ ಜಂಟಿಯಾಗಿ ವೆಸ್ಟ್​ ಇಂಡೀಸ್​ ಜತೆ ಟೂರ್ನಿಯ ಆತಿಥ್ಯವಹಿಸಿಕೊಂಡಿದೆ. ಇದುವರೆಗಿನ 8 ಆವೃತ್ತಿಯ ಟೂರ್ನಿಯಲ್ಲಿ(T20 World Cup Records) ದಾಖಲಾದ ಸ್ವಾರಸ್ಯಕರ ದಾಖಲೆಗಳ ಪಟ್ಟಿ ಇಂತಿದೆ.

ಅತಿ ಹೆಚ್ಚು ಪಂದ್ಯ: ಟೀಮ್​ ಇಂಡಿಯಾದ ನಾಯಕ ರೋಹಿತ್​ ಶರ್ಮ ಅವರು ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಅತ್ಯಧಿಕ ಪಂದ್ಯವನ್ನಾಡಿದ ದಾಖಲೆ ಹೊಂದಿದ್ದಾರೆ. 39 ಪಂದ್ಯಗಳನ್ನು ಆಡಿದ್ದಾರೆ. ವಿಶೇಷವೆಂದರೆ ಎಲ್ಲ 8 ಆವೃತ್ತಿಯ ವಿಶ್ವಕಪ್​ ಆಡಿದ ಆಟಗಾರನು ಆಗಿದ್ದಾರೆ.

ಅತ್ಯಂತ ಯಶಸ್ವಿ ನಾಯಕ: ವೆಸ್ಟ್​ ಇಂಡೀಸ್​ ತಂಡದ ಡ್ಯಾರೆನ್‌ ಸ್ಯಾಮಿ ಟಿ20 ವಿಶ್ವಕಪ್​ ಟೂರ್ನಿಯ ಅತ್ಯಂತ ಯಶಸ್ವಿ ನಾಯಕ. ಅವರು 2 ಟ್ರೋಫಿ ಗೆದ್ದ ಏಕೈಕ ನಾಯಕ. 2012 ಮತ್ತು 2016ರಲ್ಲಿ ಈ ಸಾಧನೆ ಮಾಡಿದ್ದರು.

ಶೂನ್ಯ ಸಾಧನೆ: ಟಿ20 ವಿಶ್ವ ಕಪ್​ ಇತಿಹಾಸದಲ್ಲಿ ಅತ್ಯಧಿಕ ಶೂನ್ಯ ಸಂಪಾದನೆ ಮಾಡಿದ ಆಟಗಾರರೆಂದರೆ ಪಾಕಿಸ್ತಾನ ಕ್ರಿಕೆಟಿಗ ಶಾಹಿದ್​ ಅಫ್ರಿದಿ ಮತ್ತು ಶ್ರೀಲಂಕಾದ ತಿಲಕರತ್ನೆ ದಿಲ್ಶನ್​. ಇಬ್ಬರು ಆಟಗಾರರು 5 ಬಾರಿ ಶೂನ್ಯಕ್ಕೆ ಔಟಾಗಿ ಜಂಟಿ ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ. ಇವರ ಬಳಿಕ ಇಂಗ್ಲೆಂಡ್​ ತಂಡದ ಅಲೆಕ್ಸ್​ ಹೇಲ್ಸ್​ 3 ಬಾರಿ ಶೂನ್ಯ ಸುತ್ತಿದ ಆಟಗಾರ.

ಅತಿ ಹೆಚ್ಚು ರನ್​ ಗಳಿಕೆ: ಅತಿ ಹೆಚ್ಚು ಮೊತ್ತ ಪೇರಿಸಿದ ದಾಖಲೆ ಶ್ರೀಲಂಕಾ ತಂಡದ ಹೆಸರಿನಲ್ಲಿದೆ. 2007ರ ಉದ್ಘಾಟನಾ ಆವೃತ್ತಿಯಲ್ಲಿ ಟಿ20 ವಿಶ್ವ ಕಪ್​ ಆವೃತ್ತಿಯಲ್ಲಿ ಕೀನ್ಯಾ ತಂಡದ ವಿರುದ್ಧ 6 ವಿಕೆಟ್‌ಗೆ 260 ರನ್​ ಗಳಿಸಿತ್ತು.

ಇದನ್ನೂ ಓದಿ T20 World Cup 2024: ಟಿ20 ವಿಶ್ವಕಪ್​ ಪಂದ್ಯವನ್ನು ಉಚಿತವಾಗಿ ವೀಕ್ಷಿಸುವುದು ಹೇಗೆ?

ಅತಿ ಹೆಚ್ಚು ಬೌಂಡರಿ ಮತ್ತು ಸಿಕ್ಸರ್​ ಮೂಲಕ ರನ್​ ಗಳಿಕೆ: ಕೇವಲ ಬೌಂಡರಿ ಮತ್ತು ಸಿಕ್ಸರ್​ ಮೂಲಕ ಅತ್ಯಧಿಕ ರನ್​ ಗಳಿಸಿದ ಆಟಗಾರ ಎನ್ನುವ ದಾಖಲೆ ಕ್ರಿಸ್​ ಗೇಲ್ ಹೆಸರಿನಲ್ಲಿದೆ.​ ಉದ್ಘಾಟನಾ ಆವೃತ್ತಿಯ ಟೂರ್ನಿಯಲ್ಲಿ 10 ಸಿಕ್ಸರ್​ (60), 7 ಬೌಂಡರಿ (28) ಒಳಗೊಂಡಂತೆ 88 ರನ್​ ಸಿಡಿಸಿದ್ದರು.

ಎಲ್ಲ ಆವೃತ್ತಿ ಆಡಿದ ಆಟಗಾರರು: ಉದ್ಘಾಟನಾ ಆವೃತ್ತಿಯ ಟಿ20 ವಿಶ್ವಕಪ್​ ಆಡಿದ ಇಬ್ಬರು ಆಟಗಾರರು ಈ ಬಾರಿಯ ವಿಶ್ವ ಕಪ್​ನಲ್ಲಿಯೂ ಕಾಣಿಸಿಕೊಂಡಿದ್ದಾರೆ. ಇವರೆಂದರೆ, ಭಾರತ ಕ್ರಿಕೆಟ್​ ತಂಡದ ನಾಯಕ ರೋಹಿತ್​ ಶರ್ಮಾ ಮತ್ತು ಬಾಂಗ್ಲಾದೇಶದ ಶಕಿಬ್​ ಅಲ್​ ಹಸನ್.

ಇದನ್ನೂ ಓದಿ T20 World Cup 2024: ಟಿ20 ವಿಶ್ವಕಪ್​ ಪಂದ್ಯ ನಡೆಯುವ ತಾಣ,ಭಾರತದ ಪಂದ್ಯಗಳ ಪ್ರಸಾರದ ಮಾಹಿತಿ ಹೀಗಿದೆ

ತಂಡವೊಂದರ ಕನಿಷ್ಠ ಸ್ಕೋರ್​: ಇದುವರೆಗಿನ ಟಿ20 ವಿಶ್ವ ಕಪ್​ನಲ್ಲಿ ತಂಡವೊಂದರ ಕನಿಷ್ಠ ಸ್ಕೋರ್‌​ 2014ರಲ್ಲಿ ದಾಖಲಾಗಿತ್ತು. ಶ್ರೀಲಂಕಾ ತಂಡದ ವಿರುದ್ಧ ನೆದರ್ಲೆಂಡ್ಸ್​ ತಂಡ 79 ರನ್​ ಗಳಿಸಿದ್ದು ಈ ವರೆಗಿನ ಕನಿಷ್ಠ ಮೊತ್ತ.

ತಂಡವೊಂದರ ಗರಿಷ್ಠ ಸ್ಕೋರ್: 2007ರ ಚೊಚ್ಚಲ ಆವೃತ್ತಿಯಲ್ಲಿ ಶ್ರೀಲಂಕಾ ತಂಡ ಕೀನ್ಯಾ ವಿರುದ್ಧ 6 ವಿಕೆಟ್​ಗೆ
260 ರನ್​ ಬಾರಿಸಿದ್ದು ಇದುವರೆಗಿನ ಗರಿಷ್ಠ ಮೊತ್ತವಾಗಿದೆ.

ಅತೀ ಹೆಚ್ಚು ಇತರ ರನ್​: ಈ ಕೆಟ್ಟ ದಾಖಲೆ ವೆಸ್ಟ್​ ಇಂಡೀಸ್​ ತಂಡದ ಹೆಸರಿನಲ್ಲಿದೆ. ಬರೋಬ್ಬರಿ 28 ರನ್​ ನೀಡಿದೆ. ಇದರಲ್ಲಿ 23 ವೈಡ್​, ಒಂದು ನೋ ಬಾಲ್​, ನಾಲ್ಕು ಲೆಗ್​ಬೈ ಸೇರಿತ್ತು.

ಅತ್ಯಧಿಕ ಗರಿಷ್ಠ ಸ್ಕೋರರ್: ಈ​ ಪಟ್ಟಿಯಲ್ಲಿ ನ್ಯೂಜಿಲ್ಯಾಂಡ್​​ ತಂಡದ ಬ್ರೆಂಡನ್ ಮೆಕಲಮ್​ (123) ಅಗ್ರಸ್ಥಾನದಲ್ಲಿದ್ದಾರೆ. ದ್ವಿತೀಯ ಸ್ಥಾನದಲ್ಲಿ ಕ್ರಿಸ್​ ಗೇಲ್​(117) ಗುರುತಿಸಿಕೊಂಡಿದ್ದಾರೆ.

ಇದನ್ನೂ ಓದಿ T20 World Cup 2024: ಒಂದೇ ಆವೃತ್ತಿಯಲ್ಲಿ ಅತ್ಯಧಿಕ ರನ್​ ಗಳಿಸಿದ ಬ್ಯಾಟರ್​ಗಳು ಯಾರು?

ಮೂರು ಬಾರಿ ಪಂದ್ಯ ಟೈ: ಈ ವರೆಗಿನ ಟಿ20 ವಿಶ್ವಕಪ್​ ಇತಿಹಾಸದಲ್ಲಿ ಮೂರು ಬಾರಿ ಪಂದ್ಯಗಳು ಟೈ ಕಂಡಿದೆ. ಮೊದಲ ಟೈ ಭಾರತ ಮತ್ತು ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಕಂಡುಬಂತು. ಈ ಪಂದ್ಯದಲ್ಲಿ ಗೆಲುವಿಗೆ ಬಾಲ್​ ಔಟ್​ ನೀಡಲಾಗಿತ್ತು. ಇದರಲ್ಲಿ ಭಾರತ ಮೇಲುಗೈ ಸಾಧಿಸಿತ್ತು. ಇದಾದ ಬಳಿಕ ನ್ಯೂಜಿಲ್ಯಾಂಡ್​​ ಮತ್ತು ಶ್ರೀಲಂಕಾ, ವೆಸ್ಟ್​ ಇಂಡೀಸ್​ ಮತ್ತು ನ್ಯೂಜಿಲ್ಯಾಂಡ್​​ ತಂಡದ ವಿರುದ್ಧ ಪಂದ್ಯ ಟೈ ಗೊಂಡಿತ್ತು. ಆದರೆ ಇಲ್ಲಿ ಸೂಪರ್​ ಓವರ್​ ಮೂಲಕ ಫಲಿತಾಂಶ ನಿರ್ಣಯಿಸಲಾಗಿತ್ತು.

ಅತಿದೊಡ್ಡ ಗೆಲುವು (ವಿಕೆಟ್‌ಗಳಿಂದ): ಆಸ್ಟ್ರೇಲಿಯಾ ಸೆಪ್ಟೆಂಬರ್ 20, 2007 ರಂದು ಕೇಪ್ ಟೌನ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಶ್ರೀಲಂಕಾವನ್ನು 10 ವಿಕೆಟ್‌ಗಳಿಂದ ಸೋಲಿಸಿತು (10.2 ಓವರ್‌ಗಳಲ್ಲಿ 102 ರನ್‌ಗಳನ್ನು ಬೆನ್ನಟ್ಟಿತು).

ಅತಿ ಹೆಚ್ಚಿನ ಸೋಲು: ಈ ಕೆಟ್ಟ ದಾಖಲೆ ಬಾಂಗ್ಲಾದೇಶ ತಂಡದ ಹೆಸರಿನಲ್ಲಿ 38 ಪಂದ್ಯಗಳಲ್ಲಿ 28 ಸೋಲು ಕಂಡಿದೆ.

ಅತಿ ಹೆಚ್ಚು ಗೆಲುವು: ಭಾರತ ಮತ್ತು ಪಾಕಿಸ್ತಾನ, ತಲಾ 28 ಗೆಲುವುಗಳೊಂದಿಗೆ (ಭಾರತ 44 ಪಂದ್ಯ, ಪಾಕಿಸ್ತಾನ 47 ಪಂದ್ಯ) ಅತಿ ಹೆಚ್ಚು ಗೆಲುವು ಕಂಡ ದಾಖಲೆ ಹೊಂದಿದೆ.

ಇದನ್ನೂ ಓದಿ T20 World Cup 2024: ಮಿನಿ ವಿಶ್ವಕಪ್​ ಸಮರದಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್‌ ಗಳಿಸಿದ ದಾಂಡಿಗರಿವರು!

ಕ್ಯಾಚ್​ ದಾಖಲೆ: ಅತಿ ಹೆಚ್ಚು ಕ್ಯಾಚ್​ ಹಿಡಿದ ದಾಖಲೆ ಇಂಗ್ಲೆಂಡ್​ ತಂಡದ ಹಾಲಿ ನಾಯಕ ಜಾಸ್​ ಬಟ್ಲರ್​ ಹೆಸರಿನಲ್ಲಿದೆ. ಬಟ್ಲರ್ 30 ಪಂದ್ಯಗಳನ್ನಾಡಿ 23 ಕ್ಯಾಚ್​ ಹಿಡಿದಿದ್ದಾರೆ.

ಅತಿ ಹೆಚ್ಚು ಅರ್ಧಶತಕ​: ಟೂರ್ನಿಯಲ್ಲಿ ಅತಿ ಹೆಚ್ಚು ಅರ್ಧಶತಕ ಬಾರಿಸಿದ ದಾಖಲೆ ಟೀಮ್​ ಇಂಡಿಯಾದ ವಿರಾಟ್​ ಕೊಹ್ಲಿ ಹೆಸರಿನಲ್ಲಿದೆ. ಕೊಹ್ಲಿ 27 ಪಂದ್ಯಗಳಿಂದ 14 ಅರ್ಧಶತಕ ಬಾರಿಸಿದ್ದಾರೆ.

ಅತಿ ಹೆಚ್ಚು ಶತಕ: ಈ ದಾಖಲೆ ವೆಸ್ಟ್​ ಇಂಡೀಸ್​ ತಂಡದ ಮಾಜಿ ಆಟಗಾರ ಕ್ರಿಸ್​ ಗೇಲ್​ ಹೆಸರಿನಲ್ಲಿದೆ. ಗೇಲ್​ 33 ಪಂದ್ಯಗಳಿಂದ 2 ಶತಕ ಬಾರಿಸಿದ್ದಾರೆ.

ಅತಿ ಹೆಚ್ಚು ವಿಕೆಟ್​: ಅತಿ ಹೆಚ್ಚು ವಿಕೆಟ್​ ಕಿತ್ತ ದಾಖಲೆ ಬಾಂಗ್ಲಾದೇಶದ ಹಿರಿಯ ಆಟಗಾರ ಶಕೀಬ್​ ಅಲ್​ ಹಸನ್​ ಹೆಸರಿನಲ್ಲಿದೆ. ಶಕೀಬ್​ 36 ಪಂದ್ಯಗಳನ್ನಾಡಿ 47 ವಿಕೆಟ್​ ಕಿತ್ತಿದ್ದಾರೆ.

ಅತಿ ಹೆಚ್ಚು ಕಪ್​ ಗೆದ್ದ ದಾಖಲೆ: ವೆಸ್ಟ್​ ಇಂಡೀಸ್​ ಮತ್ತು ಇಂಗ್ಲೆಂಡ್​ ತಲಾ 2 ಬಾರಿ ಕಪ್​ ಗೆದ್ದ ದಾಖಲೆ ಹೊಂದಿದೆ.

ಟೂರ್ನಿಯೊಂದರಲ್ಲಿ ಗರಿಷ್ಠ ರನ್​: ಟೂರ್ನಿಯೊಂದರಲ್ಲಿ ಗರಿಷ್ಠ ರನ್​ ಪೇರಿಸಿದ ದಾಖಲೆ ವಿರಾಟ್​ ಕೊಹ್ಲಿ ಹೆಸರಿನಲ್ಲಿದೆ. ಕೊಹ್ಲಿ 2014ರ ಆವೃತ್ತಿಯಲ್ಲಿ 319 ರನ್​ ಬಾರಿಸಿದ್ದರು.

Continue Reading

ಕ್ರೀಡೆ

T20 World Cup 2024: ನ್ಯೂಯಾರ್ಕ್​ನಲ್ಲಿ ಕಳಪೆ ಗುಣಮಟ್ಟದ ಆಹಾರ; ಟೀಮ್​ ಇಂಡಿಯಾ ಆಟಗಾರರಿಂದ ಅಸಮಾಧಾನ

T20 World Cup 2024: ಕಳೆದ ಮೂರು ದಿನಗಳಿಂದ ಟೀಮ್​ ಇಂಡಿಯಾದ ಆಟಗಾರರು ನ್ಯೂಯಾರ್ಕ್​ನಲ್ಲಿ ಅಭ್ಯಾಸ ನಡೆಸುತ್ತಿದೆ. ಆಟಗಾರರು ಇಂದು ಬ್ಯಾಟಿಂಗ್​ ಮತ್ತು ಬೌಲಿಂಗ್​ ಅಭ್ಯಾಸ ಕೂಡ ಆರಂಭಿಸಿದ್ದಾರೆ. ಆದರೆ ಇಲ್ಲಿ ಅಭ್ಯಾಸ ನಡೆಸಲು ಉನ್ನತ ಸೌಲಭ್ಯಗಳಿಲ್ಲ ಎಂದು ನಾಯಕ ರೋಹಿತ್ ಮತ್ತು ಕೋಚ್ ರಾಹುಲ್ ದ್ರಾವಿಡ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.

VISTARANEWS.COM


on

T20 World Cup 2024
Koo

ನ್ಯೂಯಾರ್ಕ್​: ಟಿ20 ವಿಶ್ವಕಪ್(T20 World Cup 2024)​ ಆಡಲು ನ್ಯೂಯಾರ್ಕ್​ನಲ್ಲಿ(New York) ಬೀಡು ಬಿಟ್ಟಿರುವ ಟೀಮ್​ ಇಂಡಿಯಾ(Team India) ಆಟಗಾರರಿಗೆ ಸರಿಯಾದ ಗುಣಮಟ್ಟದ ಆಹಾರ ಸಿಗುತ್ತಿಲ್ಲ ಎಂದು ತಂಡದ ನಾಯಕ ರೋಹಿತ್​ ಶರ್ಮ ಮತ್ತು ಕೋಚ್​ ರಾಹುಲ್​ ದ್ರಾವಿಡ್​ ಬಿಸಿಸಿಐಗೆ ದೂರು ಸಲ್ಲಿಸಿದ್ದಾರೆ ಎನ್ನಲಾಗಿದೆ. ಜತೆಗೆ ಅಭ್ಯಾಸ ನಡೆಸಲು ಸರಿಯಾದ ಸೌಲಭ್ಯವಿಲ್ಲ ಎಂದು ತಗಾದೆ ಎತ್ತಿದೆ.

ಕಳೆದ ಮೂರು ದಿನಗಳಿಂದ ಟೀಮ್​ ಇಂಡಿಯಾದ ಆಟಗಾರರು ನ್ಯೂಯಾರ್ಕ್​ನಲ್ಲಿ ಅಭ್ಯಾಸ ನಡೆಸುತ್ತಿದೆ. ಆಟಗಾರರು ಇಂದು ಬ್ಯಾಟಿಂಗ್​ ಮತ್ತು ಬೌಲಿಂಗ್​ ಅಭ್ಯಾಸ ಕೂಡ ಆರಂಭಿಸಿದ್ದಾರೆ. ಆದರೆ ಇಲ್ಲಿ ಅಭ್ಯಾಸ ನಡೆಸಲು ಉನ್ನತ ಸೌಲಭ್ಯಗಳಿಲ್ಲ ಎಂದು ನಾಯಕ ರೋಹಿತ್ ಮತ್ತು ಕೋಚ್ ರಾಹುಲ್ ದ್ರಾವಿಡ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ. ನ್ಯೂಸ್​ 18 ವರದಿಯ ಪ್ರಕಾರ ಭಾರತ ತಂಡದ ಆಟಗಾರಿಗೆ ಗುಣಮಟ್ಟದ ಆಹಾರ ಸಿಗುತ್ತಿಲ್ಲ. ಈ ವಿಚಾರಗಳನ್ನು ಬಿಸಿಸಿಐ ಆಯೋಜಕ ಐಸಿಸಿ ಗಮನಕ್ಕೆ ತಂದಿದೆ ಎಂದು ವರದಿಯಾಗಿದೆ.

ನಾಯಕ ರೋಹಿತ್‌ ಶರ್ಮಾ, ಶುಭಮನ್​ ಗಿಲ್​, ಉಪನಾಯಕ ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜಾ, ಜಸ್‌ಪ್ರೀತ್‌ ಬುಮ್ರಾ, ರಿಷಭ್‌ ಪಂತ್‌, ಮೊಹಮದ್ ಸಿರಾಜ್‌, ಸೂರ್ಯಕುಮಾರ್‌ ಯಾದವ್‌, ಕುಲ್ದೀಪ್‌ ಯಾದವ್‌, ಸಂಜು ಸ್ಯಾಮ್ಸನ್‌, ಅರ್ಶ್‌ದೀಪ್‌ ಸಿಂಗ್‌, ಶಿವಂ ದುಬೆ ಸೇರಿದಂತೆ ಬಹುತೇಕ ಆಟಗಾರರು ಬ್ಯಾಟಿಂಗ್​ ಅಭ್ಯಾಸ ನಡೆಸಿದರು. ಅಮೆರಿಕದ ವಾತಾವರಣಕ್ಕೆ ಹೊಂದಿಕೊಳ್ಳುವ ಸಲುವಾಗಿ ಬುಧವಾರ ಮತ್ತು ಗುರುವಾರ ಆಟಗಾರರು ಕೇವಲ ಜಾಗಿಂಗ್‌ ನಡೆಸಿ, ಫುಟ್ಬಾಲ್‌ ಆಡಿದ್ದರು.

ಭಾರತ ನಾಳೆ(ಶನಿವಾರ) ಬಾಂಗ್ಲಾದೇಶ ವಿರುದ್ಧ ಏಕೈಕ ಅಭ್ಯಾಸ ಪಂದ್ಯವನ್ನಾಡಲಿದೆ. ವ್ಯಾಪಕ ಪ್ರಯಾಣ ಮತ್ತು ಐಪಿಎಲ್​ನಿಂದ ದಣಿದಿರುವ ಕಾರಣ ಕೇವಲ ಒಂದು ಅಭ್ಯಾಸ ಪಂದ್ಯಕ್ಕೆ ಮೊರೆ ಹೋಗಿದೆ. ಭಾರತ ತನ್ನ ಮೊದಲ ಪಂದ್ಯವನ್ನು ಜೂನ್‌ 5 ರಂದು ಐರ್ಲೆಂಡ್​ ವಿರುದ್ಧ ಆಡಲಿದೆ. ಭಾರತವು ತನ್ನ ಗುಂಪು ಹಂತದ ಎಲ್ಲಾ ಪಂದ್ಯಗಳನ್ನು ಅಮೆರಿಕದಲ್ಲೇ ಆಡಲಿದೆ. ಲೀಗ್​ ಮುಕ್ತಾಯದ ಬಳಿಕ ಮುಂದಿನ ಹಂತಕ್ಕೆ ಅರ್ಹತೆ ಪಡೆದರೆ, ಸೂಪರ್ 8 ಪಂದ್ಯಗಳನ್ನು ಸಹ ಇಲ್ಲೇ ಆಡಲಿದೆ. ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯ ಜೂನ್ 9 ರಂದು ನ್ಯೂಯಾರ್ಕ್‌ನಲ್ಲಿ ನಡೆಯಲ್ಲಿದೆ.

ಇದನ್ನೂ ಓದಿ T20 World Cup 2024: ಟಿ20 ವಿಶ್ವಕಪ್​ ಪಂದ್ಯವನ್ನು ಉಚಿತವಾಗಿ ವೀಕ್ಷಿಸುವುದು ಹೇಗೆ?

ಉಚಿತ ಪ್ರಸಾರ


ಟಿ20 ವಿಶ್ವಕಪ್​ ಟೂರ್ನಿ ಆರಂಭಕ್ಕೂ ಮುನ್ನವೇ ​ಡಿಸ್ನಿ + ಹಾಟ್‌ಸ್ಟಾರ್(Disney+ Hotstar) ಕ್ರಿಕೆಟ್​ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಭಾರತದಲ್ಲಿನ ಸ್ಮಾರ್ಟ್‌ಫೋನ್ ಬಳಕೆದಾರರು ಈ ವರ್ಷದ ಐಸಿಸಿ ಪುರುಷರ ಟಿ20 ಕ್ರಿಕೆಟ್ ವಿಶ್ವಕಪ್ ಅನ್ನು OTT ಪ್ಲಾಟ್‌ಫಾರ್ಮ್‌ನಲ್ಲಿ ಉಚಿತವಾಗಿ ವೀಕ್ಷಿಸಲು ಸಾಧ್ಯವಾಗುತ್ತದೆ ಎಂದು ಡಿಸ್ನಿ + ಹಾಟ್‌ಸ್ಟಾರ್ ಈಗಾಗಲೇ ಘೋಷಿಸಿದೆ. ಕಳೆದ ವರ್ಷ ಏಕದಿನ ವಿಶ್ವಕಪ್ ಮತ್ತು ಏಷ್ಯಾ ಕಪ್‌ ಟೂರ್ನಿಯನ್ನು ಕೂಡ ಡಿಸ್ನಿ + ಹಾಟ್‌ಸ್ಟಾರ್, ಮೊಬೈಲ್​ ಬಳಕೆ ದಾರರಿಗೆ ಉಚಿತ ವೀಕ್ಷಣೆಯನ್ನು ನೀಡಿತ್ತು. ಇದೀಗ ಟಿ20 ವಿಶ್ವಕಪ್​ ಟೂರ್ನಿಯಲ್ಲಿಯೂ ಇದೇ ನಿಲುವನ್ನು ಮುಂದುವರಿಸಿದೆ.

Continue Reading
Advertisement
Heat Wave
ದೇಶ7 mins ago

Heat Wave: ಬಿಹಾರದಲ್ಲಿ ಬಿಸಿಲಾಘಾತ; ಶಾಖಕ್ಕೆ 10 ಮತಗಟ್ಟೆ ಸಿಬ್ಬಂದಿ ಸೇರಿ 14 ಮಂದಿ ಬಲಿ

driving licence
ಪ್ರಮುಖ ಸುದ್ದಿ13 mins ago

New Driving Licence Rules: ಇಂದಿನಿಂದ ಹೊಸ ಟ್ರಾಫಿಕ್‌ ರೂಲ್ಸ್: ತರಬೇತಿ ಕೇಂದ್ರಗಳಲ್ಲೇ ಟೆಸ್ಟ್‌, ಅಪ್ರಾಪ್ತರಿಗೆ ವಾಹನ ಕೊಟ್ರೆ ನೋಂದಣಿ ರದ್ದು

Cardamom Benefits
ಆರೋಗ್ಯ48 mins ago

Cardamom Benefits: ಏಲಕ್ಕಿ ಕೇವಲ ಘಮದಲ್ಲಷ್ಟೇ ಅಲ್ಲ, ಇದರ ಪ್ರಯೋಜನಗಳು ಎಷ್ಟೊಂದು!

Karnataka Weather Forecast
ಮಳೆ1 hour ago

Karnataka Weather : ವಾರಾಂತ್ಯದಲ್ಲಿ ಈ ಜಿಲ್ಲೆಗಳಲ್ಲಿ ಮಿಸ್‌ಯಿಲ್ಲದೇ ಮಳೆ ಹಾಜರ್‌

Healthy Salad Tips
ಆಹಾರ/ಅಡುಗೆ2 hours ago

Healthy Salad Tips: ನೀವು ಸಲಾಡ್‌ ಪ್ರಿಯರೇ? ಸಲಾಡ್‌ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ!

Lok Sabha Election
ದೇಶ3 hours ago

Lok Sabha Election: ಇಂದು ಕೊನೇ ಹಂತದ ಮತದಾನ; ಸಂಜೆ ಎಕ್ಸಿಟ್‌ ಪೋಲ್, ಇಂದೇ ತಿಳಿಯಲಿದೆ ಭವಿಷ್ಯ!

Dina Bhavishya
ಭವಿಷ್ಯ3 hours ago

Dina Bhavishya : ತಿಂಗಳ ಮೊದಲ ದಿನವೇ ಉದ್ಯೋಗದ ಸ್ಥಳದಲ್ಲಿ ಈ ರಾಶಿಯವರಿಗೆ ಕಿರಿಕಿರಿ ಅನುಭವ

Anti Islam Rally
ವಿದೇಶ8 hours ago

Anti Islam Rally: ಇಸ್ಲಾಂ ವಿರೋಧಿ ರ‍್ಯಾಲಿಯಲ್ಲಿ ಸಿಕ್ಕಸಿಕ್ಕವರಿಗೆ ಚಾಕು ಇರಿದ ವ್ಯಕ್ತಿ; ಗುಂಡಿಕ್ಕಿದ ಪೊಲೀಸರು

Modi Meditation
ದೇಶ8 hours ago

Modi Meditation: ವಿವೇಕಾನಂದರ ಮೂರ್ತಿ ಎದುರು ಮೋದಿ ಗಾಢ ಧ್ಯಾನ; ಇಲ್ಲಿವೆ ಫೋಟೊಗಳು

Yamaha has opened a new Blue Square outlet in Bengaluru
ಬೆಂಗಳೂರು10 hours ago

Yamaha: ಬೆಂಗಳೂರಿನಲ್ಲಿ ಹೊಸ ‘ಬ್ಲೂ ಸ್ಕ್ವೇರ್’ ಔಟ್‌ಲೆಟ್ ತೆರೆದ ಯಮಹಾ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Assault Case in Shivamogga
ಕ್ರೈಂ2 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ4 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು4 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ5 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ6 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು6 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ7 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ2 weeks ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

ಟ್ರೆಂಡಿಂಗ್‌