vijayanand kashappanavar | 2ನೇ ಮದುವೆ ಊಹಾಪೋಹ, ಹೊಟ್ಟೆಕಿಚ್ಚಿನಿಂದ ಅಪಪ್ರಚಾರ: ವಿಜಯಾನಂದ ಕಾಶಪ್ಪನವರ್ - Vistara News

ರಾಯಚೂರು

vijayanand kashappanavar | 2ನೇ ಮದುವೆ ಊಹಾಪೋಹ, ಹೊಟ್ಟೆಕಿಚ್ಚಿನಿಂದ ಅಪಪ್ರಚಾರ: ವಿಜಯಾನಂದ ಕಾಶಪ್ಪನವರ್

2ನೇ ಮದುವೆ ಬಗ್ಗೆ ವಿವಾದ ಮಾಡಿ ಬಾಯಿ ಮುಚ್ಚಿಸುವ ಕೆಲಸ ಮಾಡಲಾಗುತ್ತಿದೆ. ಇದೆಲ್ಲಾ ನಮ್ಮ ಪಕ್ಷ ಹಾಗೂ ವಿರೋಧ ಪಕ್ಷದ ಕೆಲವರು ಮಾಡುತ್ತಿರುವ ಹುನ್ನಾರ ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ (vijayanand kashappanavar) ಹೇಳಿದ್ದಾರೆ.

VISTARANEWS.COM


on

Second Marriage
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ರಾಯಚೂರು: ಎರಡನೇ ಮದುವೆ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಬಗ್ಗೆ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ (vijayanand kashappanavar) ಪ್ರತಿಕ್ರಿಯೆ ನೀಡಿದ್ದು, ಇದು ನಮ್ಮ ಪಕ್ಷದವರು ಹಾಗೂ ವಿರೋಧ ಪಕ್ಷದವರ ಹುನ್ನಾರವಾಗಿದೆ. ಎರಡನೇ ಮದುವೆಯೆಲ್ಲಾ ಊಹಾಪೋಹ, ಹೊಟ್ಟೆಕಿಚ್ಚಿಗೆ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.

ಜಿಲ್ಲೆಯ ಲಿಂಗಸುಗೂರು ಪಟ್ಟಣದಲ್ಲಿ ಶನಿವಾರ ಮಾತನಾಡಿ, ನಾನು ಬೆಳೆಯುತ್ತಿದ್ದೇನೆ ಎಂದು ಕೆಲವರು ಹೊಟ್ಟೆಕಿಚ್ಚಿನಿಂದ ಈ ರೀತಿಯ ಅಪಪ್ರಚಾರ ಮಾಡುತ್ತಿದ್ದಾರೆ. ಮದುವೆ ಎಂಬುವುದು ನನ್ನ ವೈಯಕ್ತಿಕ ವಿಚಾರ. ಆದರೆ, ವಿವಾದ ಮಾಡಿ ಬಾಯಿ ಮುಚ್ಚಿಸುವ ಕೆಲಸ ಮಾಡಲಾಗುತ್ತಿದೆ. ಇದೆಲ್ಲಾ ನಮ್ಮ ಪಕ್ಷ ಹಾಗೂ ವಿರೋಧ ಪಕ್ಷದ ಕೆಲವರು ಮಾಡುತ್ತಿರುವ ಹುನ್ನಾರ ಎಂದು ಆಕ್ರೋಶ ಹೊರಹಾಕಿದರು.

ಇದನ್ನೂ ಓದಿ | Border Dispute | ಮಹಾರಾಷ್ಟ್ರದ ಜತ್‌ನಲ್ಲಿ ಹಾರಿತು ಕನ್ನಡ ಧ್ವಜ; ಕರ್ನಾಟಕ, ಸಿಎಂ ಬೊಮ್ಮಾಯಿ ಪರ ಘೋಷಣೆ

ಹುನಗುಂದದ ಕಾಂಗ್ರೆಸ್ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ನಟಿಯೊಬ್ಬರ ಜತೆಗಿದ್ದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಇದರಿಂದ ಮಾಜಿ ಶಾಸಕ 2ನೇ ವಿವಾಹವಾಗಿರಬಹುದೇ ಎಂಬ ವಿಷಯ ಚರ್ಚೆಗೆ ಗ್ರಾಸವಾಗಿತ್ತು.

ನಟಿ ಜತೆಗಿನ ಫೋಟೋಗಳ ಜತೆಗೆ ಮಗುವೊಂದರ ಜನನ ಪ್ರಮಾಣ ಪತ್ರ ವೈರಲ್ ಆಗಿತ್ತು. ಪ್ರಮಾಣಪತ್ರದಲ್ಲಿ ತಂದೆಯ ಹೆಸರಿನ ಕಾಲಂನಲ್ಲಿ ವಿಜಯಾನಂದ ಕಾಶಪ್ಪನವರ ಎಂಬ ಹೆಸರನ್ನು ನಮೂದಿಸಲಾಗಿತ್ತು. ಪ್ರಮಾಣ ಪತ್ರದಲ್ಲಿ ತಾಯಿಯ ಹೆಸರು ಪೂಜಾಶ್ರೀ ಎಸ್ ಎಂದಿತ್ತು. ಹಾಗಾಗಿ ವಿಜಯಾನಂದ ಕಾಶಪ್ಪನವರ ಪೂಜಾಶ್ರೀ ಎಂಬ ನಟಿಯ ಜತೆ ಎರಡನೇ ಮದುವೆ ಆಗಿದ್ದಾರಾ ಎಂಬ ಮಾತುಗಳು ಕೇಳಿಬರುತ್ತಿದ್ದವು. ವಿಜಯಾನಂದ ಕಾಶಪ್ಪನವರ್ ಅವರ ಪತ್ನಿ ವೀಣಾ ಕಾಶಪ್ಪನವರ್‌ ಕೆಪಿಸಿಸಿ ಮಹಿಳಾ ಘಟಕದ ಉಪಾಧ್ಯಕ್ಷರಾಗಿದ್ದಾರೆ.

ಇದನ್ನೂ ಓದಿ | Say CM | ಕಡತವನ್ನೇ ರಕ್ಷಿಸಲಾಗದವರು ರಾಜ್ಯ ರಕ್ಷಿಸಲು ಸಾಧ್ಯವೇ?; Say Cm ಎಂದು ಟ್ವೀಟ್‌ ಮಾಡಿದ ಕಾಂಗ್ರೆಸ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮಳೆ

Karnataka Weather : ಬಿರುಗಾಳಿ ಜತೆಗೆ ಅಬ್ಬರಿಸಲಿದ್ದಾನೆ ವರುಣ; ಈ ಜಿಲ್ಲೆಗಳಿಗೆ ರೆಡ್‌ ಅಲರ್ಟ್‌

Karnataka Weather Forecast: ಕರಾವಳಿ-ಮಲೆನಾಡು ಭಾಗದಲ್ಲಿ ವರುಣನ ರೌದ್ರಾವತಾರಕ್ಕೆ ಜನರು ನಲುಗಿ ಹೋಗಿದ್ದಾರೆ. ಮುಂದಿನ ನಾಲ್ಕೈದು ದಿನಗಳು ಗಾಳಿ ಜತೆಗೆ ಭಾರಿ ಮಳೆಯಾಗುವ ಮುನ್ನೆಚ್ಚರಿಕೆಯನ್ನು ಹವಾಮಾನ ಇಲಾಖೆ (Heavy Rain Alert) ನೀಡಿದೆ.

VISTARANEWS.COM


on

By

karnataka Weather Forecast
Koo

ಬೆಂಗಳೂರು: ಜು.17ರಂದು ಕರ್ನಾಟಕದ ಕರಾವಳಿಯಲ್ಲಿ ಸಾಧಾರಣದಿಂದ ಅತಿ ಹೆಚ್ಚು ಮಳೆಯಾಗುವ (Heavy rain) ಎಚ್ಚರಿಕೆ ಇದ್ದು, ಮಲೆನಾಡಿನಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ (Rain News) ಸಾಧ್ಯತೆ ಇದೆ. ದಕ್ಷಿಣ ಹಾಗೂ ಉತ್ತರ ಒಳನಾಡಿನಲ್ಲಿ ಚದುರಿದಂತೆ ವ್ಯಾಪಕವಾಗಿ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka Weather Forecast) ನೀಡಿದೆ.

ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಸೇರಿದಂತೆ ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ವಿಜಯನಗರ, ಕೋಲಾರದಲ್ಲಿ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ.

ಉತ್ತರ ಒಳನಾಡಿನ ಬಾಗಲಕೋಟೆ, ಬೀದರ್‌, ಧಾರವಾಡ, ಗದಗ, ಸೇರಿದಂತೆ ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಯಲ್ಲಿ ಅತ್ಯಂತ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ಬೆಳಗಾವಿಯಲ್ಲಿ ಪ್ರತ್ಯೇಕವಾಗಿ ಭಾರಿ ಮಳೆಯಾಗುವ ಸಾಧ್ಯತೆಯಿದೆ.

ಮಲೆನಾಡು ಜಿಲ್ಲೆಯಾದ್ಯಂತ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಶಿವಮೊಗ್ಗ, ಹಾಸನ, ಕೊಡಗು, ಚಿಕ್ಕಮಗಳೂರಿನಲ್ಲಿ ಮಳೆಯು ಅಬ್ಬರಿಸಲಿದೆ. ಕರಾವಳಿಯಲ್ಲಿ ವ್ಯಾಪಕ ಸಾಧಾರಣದಿಂದ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಿಗೆ ಅಲರ್ಟ್‌ ನೀಡಲಾಗಿದೆ.

ಇದನ್ನೂ ಓದಿ: Rain Effect : ಭಾರಿ ಮಳೆಗೆ ಶಿರೂರು ಗುಡ್ಡ ಕುಸಿತ; ಮಣ್ಣಿನಡಿ ಸಿಲುಕಿದ್ದ ಮಹಿಳೆ ಮೃತದೇಹ ಪತ್ತೆ, ಉಳಿದವರಿಗಾಗಿ ಹುಡುಕಾಟ

ಬೆಂಗಳೂರಿನಲ್ಲಿ ಮರೆಯಾಗುವ ಸೂರ್ಯ

ಬೆಂಗಳೂರು ಸುತ್ತಮುತ್ತ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ವ್ಯಾಪಕವಾಗಿ ಹಗುರದಿಂದ ಕೂಡಿದ ಮಳೆಯಾಗುವ ಸಾಧ್ಯತೆಯಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನಗಳು ಅನುಕ್ರಮವಾಗಿ 24 ಮತ್ತು 20 ಡಿಗ್ರಿ ಸೆಲ್ಸಿಯಸ್‌ ಇರಲಿದೆ.

ರೆಡ್‌ ಅಲರ್ಟ್‌ ಘೋಷಣೆ

ಗುಡುಗು ಸಹಿತ ವ್ಯಾಪಕ ಮಳೆಯಾಗಲಿದ್ದು, ಗಾಳಿ ವೇಗವು 40-50 ಕಿ.ಮೀ ವೇಗದಲ್ಲಿ ಬೀಸಲಿದೆ. ಹೀಗಾಗಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಹಾಸನ ಜಿಲ್ಲೆಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ಬೆಳಗಾವಿ, ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ ಮತ್ತು ಮೈಸೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಮಳೆ ಅನಾಹುತದ ಚಿತ್ರಣ ಹೀಗಿದೆ ನೋಡಿ

Karnataka Rain
Rain Effect
karnataka Rain
Karnataka Rain
Karnataka Rain
karnataka Rain
karnataka rain
karnataka Rain
karnataka Rain

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಮಳೆ

Karnataka Weather : ನಾಳೆಗೂ ಮಳೆ ಮುನ್ನೆಚ್ಚರಿಕೆ; ಸೆ.30ರವರೆಗೆ ಈ ಪ್ರವಾಸಿ ತಾಣಗಳಲ್ಲಿ ಟ್ರಕ್ಕಿಂಗ್‌ ನಿಷೇಧ

Karnataka Weather Forecast : ಬುಧವಾರವೂ ಗುಡುಗು ಸಹಿತ ಭಾರಿ ಮಳೆಯಾಗುವ (Heavy rain alert) ಸಾಧ್ಯತೆ ಇದೆ. ಚಿಕ್ಕಮಗಳೂರಿನಲ್ಲಿ ಅಬ್ಬರಿಸುತ್ತಿರುವ ಮಳೆ ಕಾರಣಕ್ಕೆ ಎರಡೂವರೆ ತಿಂಗಳು ಕೆಲವು ಪ್ರವಾಸಿತಾಣಗಳಿಗೆ ಟ್ರಕ್ಕಿಂಗ್‌ ನಿಷೇಧಿಸಲಾಗಿದೆ.

VISTARANEWS.COM


on

By

karnataka weather Forecast
Koo

ಚಿಕ್ಕಮಗಳೂರು/ಬೆಂಗಳೂರು: ರಾಜ್ಯಾದ್ಯಂತ ನೈರುತ್ಯ ಮುಂಗಾರು (karnataka Weather Forecast) ಸಕ್ರಿಯವಾಗಿದೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನ ಬಹುತೇಕ ಕಡೆಗಳಲ್ಲಿ ಮಳೆಯು (Heavy Rain Alert) ಅಬ್ಬರಿಸುತ್ತಿದ್ದು, ಆಗುಂಬೆ 33, ಅಂಕೋಲಾ 26, ಕಾರವಾರ 23, ಹಾಗೂ ಗೇರ್ಸೊಪ್ಪ 21 ಸೆಂ.ಮೀ ಮಳೆಯಾಗಿದೆ. ಇನ್ನೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಹೆಚ್ಚಾದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸೆಪ್ಟೆಂಬರ್ 30ರವರೆಗೆ ಚಾರಣಕ್ಕೆ ನಿಷೇಧಿಸಲಾಗಿದೆ.

ಚಿಕ್ಕಮಗಳೂರಿನ ಬಲ್ಲಾಳ ರಾಯನ ದುರ್ಗ, ರಾಣಿಝರಿ, ಬಂಡಾಜೆ ಫಾಲ್ಸ್ ಟ್ರಕ್ಕಿಂಗ್‌ಗೆ ನಿರ್ಬಂಧ ಹಾಕಲಾಗಿದೆ. ಗುಡ್ಡಗಾಡು ಪ್ರದೇಶಗಳಲ್ಲಿ ಭಾರಿ ಮಳೆಯಿಂದಾಗಿ ನೀರಿನ ಹರಿವು ಹೆಚ್ಚಳಗೊಂಡಿದೆ. ಪ್ರವಾಸಿಗರು ಚಾರಣದ ವೇಳೆ ಅಪಾಯಕ್ಕೆ ಸಿಲುಕುವ ಸಾಧ್ಯತೆ ಹೆಚ್ಚಿದೆ. ಪ್ರವಾಸಿಗರ ಹಿತದೃಷ್ಟಿಯಿಂದ ಮೂಡಿಗೆರೆ ತಾಲೂಕಿನ ಬಲ್ಲಾಳ ರಾಯನ ದುರ್ಗ ಪ್ರವಾಸಿ ತಾಣ, ಕಳಸ ತಾಲೂಕಿನ ಬಂಡಾಜೆ ಫಾಲ್ಸ್‌ಗೆ ಕೊಪ್ಪ ವಿಭಾಗದ ಅರಣ್ಯ ಇಲಾಖೆ ಈ ಕ್ರಮಕೈಗೊಂಡಿದೆ.

ಇದನ್ನೂ ಓದಿ: Muharram 2024: ರಾಯಚೂರಿನಲ್ಲಿ ಮೊಹರಂನಲ್ಲಿ ಕೊಂಡ ಹಾಯುವಾಗ ಆಯತಪ್ಪಿ ಬಿದ್ದ ವ್ಯಕ್ತಿ ಸುಟ್ಟು ಭಸ್ಮ

ಶಿವಮೊಗ್ಗದಲ್ಲಿ ಕುಸಿದು ಬಿದ್ದ ಮನೆ

ಶಿವಮೊಗ್ಗ ಜಿಲ್ಲೆಯಲ್ಲಿ ಧಾರಾಕಾರ ಮಳೆ ಮುಂದುವರಿದಿದ್ದು, ಮನೆಯೊಂದು ಕುಸಿದು ಬಿದ್ದಿದೆ. ಶಿವಮೊಗ್ಗದ ಶಿಕಾರಿಪುರ ತಾಲೂಕಿನ ಕುಸ್ಕೂರು ಗ್ರಾಮದಲ್ಲಿ ಘಟನೆ ನಡೆದಿದೆ. ಮಂಜಾನಾಯ್ಕ ಎಂಬುವವರಿಗೆ ಸೇರಿದ ಮನೆ ಕುಸಿದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಮನೆಯಲ್ಲಿದ್ದ ಗೃಹ ಬಳಕೆ ವಸ್ತುಗಳು ನೀರುಪಾಲಾಗಿವೆ.

ಉಡುಪಿಯಲ್ಲಿ ಮಳೆಗೆ ಉಕ್ಕಿ ಹರಿದ ಬ್ರಹ್ಮಾವರ ಮಡಿಸಾಲು ಹೊಳೆ

ಉಡುಪಿ ಜಿಲ್ಲೆಯಾದ್ಯಂತ ಭಾರಿ ಮಳೆ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಮಳೆಗೆ ಬ್ರಹ್ಮಾವರ ಮಡಿಸಾಲು ಹೊಳೆ ಉಕ್ಕಿ ಹರಿದಿದೆ. ಇದರಿಂದಾಗಿ ಆರೂರು ಬೆಳ್ಮಾರು ನೆರೆ ಹಾವಳಿ ಸೃಷ್ಟಿಯಾಗಿದೆ. ನೂರಾರು ಎಕರೆ ಕೃಷಿ ಭೂಮಿ ನೆರೆ ನೀರಿನಲ್ಲಿ ಮುಳುಗಿ ನಷ್ಟವಾಗಿದೆ. ಮಂಗಳವಾರ ಮಧ್ಯಾಹ್ನದ ನಂತರ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕಡಿಮೆ ಆಗಿದೆ. ಆದರೂ ಘಟ್ಟ ಪ್ರದೇಶದಿಂದ ಹರಿದು ಬರುತ್ತಿರುವ ನೀರಿನಿಂದಾಗಿ ನೆರೆ ಸೃಷ್ಟಿಯಾಗುತ್ತಿದೆ.

ಮುಂದಿನ 24 ಗಂಟೆಯಲ್ಲಿ ಭಾರಿ ಮಳೆ

ಮುಂದಿನ 24 ಗಂಟೆಯಲ್ಲಿ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ. ಗಾಳಿಯ ವೇಗವು 30-40 ಕಿಮೀ ತಲುಪುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ವ್ಯಾಪಕ ಮಳೆಯಾಗಲಿದೆ. ಜತೆಗೆ ನಿರಂತರ ಗಾಳಿಯ ವೇಗವು 40-50 ಕಿಮೀ ಇರಲಿದೆ. ಒಳನಾಡಿನ ಬೆಳಗಾವಿ ಮತ್ತು ಹಾಸನ ಜಿಲ್ಲೆಗಳ ಒಂದು ಅಥವಾ ಎರಡು ಸ್ಥಳಗಳಲ್ಲಿ ಮಳೆಯು ಅಬ್ಬರಿಸಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ರಾಯಚೂರು

Muharram 2024: ರಾಯಚೂರಿನಲ್ಲಿ ಮೊಹರಂನಲ್ಲಿ ಕೊಂಡ ಹಾಯುವಾಗ ಆಯತಪ್ಪಿ ಬಿದ್ದ ವ್ಯಕ್ತಿ ಸುಟ್ಟು ಭಸ್ಮ

Muharram 2024 : ಮೊಹರಂನಲ್ಲಿ ಕೊಂಡ ಹಾಯುವಾಗ ಆಯತಪ್ಪಿ ಬಿದ್ದ ವ್ಯಕ್ತಿ ಸುಟ್ಟು ಭಸ್ಮವಾಗಿದ್ದಾರೆ. ಬೆಂಕಿಯಲ್ಲಿ ಬೇಯುವ ದೃಶ್ಯ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ.

VISTARANEWS.COM


on

By

Muharram 2024 Man dies in fire during
Koo

ರಾಯಚೂರು: ರಾಯಚೂರಿನಲ್ಲಿ ಮೊಹರಂ ಆಚರಣೆ ವೇಳೆ ಕೊಂಡ ಹಾಯುವಾಗ (Muharram 2024) ವ್ಯಕ್ತಿಯೊಬ್ಬ ಆಯತಪ್ಪಿ ಬಿದ್ದು ಸುಟ್ಟು ಭಸ್ಮವಾಗಿದ್ದಾರೆ. ರಾಯಚೂರಿನ ಮಸ್ಕಿ ತಾಲೂಕಿನ ಬೊಮ್ಮನಾಳ ಗ್ರಾಮದಲ್ಲಿ ತಡರಾತ್ರಿ ಘಟನೆ ನಡೆದಿದೆ. ಸ್ಥಳೀಯ ನಿವಾಸಿ ಯಮನಪ್ಪ ನಾಯಕ್ (45)ಮೃತ ದುರ್ದೈವಿ.

ನಿಗಿ ನಿಗಿ ಕೆಂಡದಲ್ಲಿ ಬೇಯುವ ದೃಶ್ಯ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಮೊಹರಂ ಹಬ್ಬ ಆಚರಣೆ ವೇಳೆ ಕೊಂಡ ಹಾಯುವುದು ಪದ್ಧತಿ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಿದೆ. ಅದರಂತೆ ಬೆಂಕಿ ಹಾಯಲು ಯಮನಪ್ಪ ಮುಂದಾಗಿದ್ದರು. ಕೊಂಡ ಹಾಯುವಾಗ ಆಯತಪ್ಪಿ ಬೆಂಕಿಯೊಳಗೆ ಬಿದ್ದ ಪರಿಣಾಮ ಸುಟ್ಟುಕರಕಲಾಗಿದ್ದಾರೆ.

ಕೂಡಲೇ ಅಲ್ಲಿದ್ದವರು ಬೆಂಕಿ ಹಾರಿಸಲು ನೀರು ಎರಚಿ ರಕ್ಷಣೆ ಮುಂದಾದರೂ, ಆದರೆ ತೀವ್ರ ಬೆಂಕಿ ಆವರಿಸಿ ಯಮನಪ್ಪ ಸುಟ್ಟುಭಸ್ಮವಾದರು. ತುರುವಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸ್‌ರಿಂದ ಲಾಠಿ ಚಾರ್ಜ್

ಮೊಹರಂ ಹಬ್ಬದ ಆಚರಣೆ ವೇಳೆ ಪೊಲೀಸ್‌ರಿಂದ ಲಾಠಿ ಚಾರ್ಜ್ ನಡೆದಿದೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಪಾಶ್ಚಾಪೂರ ಗ್ರಾಮದಲ್ಲಿ ಘಟನೆ ನಡೆದಿದೆ. ಪಾಶ್ಚಾಪುರ ಗ್ರಾಮದ ನಡುವಿನ ಪೇಟೆ ಬಳಿ ಬಂದಾಗ ಏಕಾಏಕಿ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಲಾಗಿದೆ ಎನ್ನಲಾಗಿದೆ. ಹೀಗಾಗಿ ಪೊಲೀಸರು ಲಾಠಿ ಚಾರ್ಜ್ ಮಾಡಿದರು. ಎರಡು ದೇವರ ಭೇಟಿ ಸಂದರ್ಭದಲ್ಲಿ ಟೊನ್ನೆಬಾವು, ಕರಬಾಲ ಎಂಬ ಸಂಪ್ರದಾಯದ ಆಚರಣೆ ವೇಳೆ ಘಟನೆ ನಡೆದಿದೆ. ಸ್ಥಳದಲ್ಲಿದ್ದ ಯಮಕನಮರಡಿ ಪೊಲೀಸ್ ಠಾಣೆಯ ಎಎಸ್‌ಐ ಮುರಗೋಡ ಹಾಗೂ ಓರ್ವ ಪೋಲಿಸ್ ಪೇದೆ ಮೇಲೆ ಹಲ್ಲೆ ನಡೆಸಲಾಗಿದೆ. ಉದ್ದೇಶಪೂರ್ವಕವಾಗಿ ಪೊಲೀಸರ ಮೇಲೆ ಹಲ್ಲೆ ನಡೆದಿದೆ ಎಂಬ ಆರೋಪಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಮಳೆ

Karnataka Rain : ಭಾರಿ ಮಳೆ ಎಫೆಕ್ಟ್‌-ಮಲಗಿದ್ದ‌ ವ್ಯಕ್ತಿ ಮೇಲೆ ಬಿದ್ದ ಗೋಡೆ; ಮರ ಬಿದ್ದು ಕಾರು ಜಖಂ, ಚಾಲಕ ಜಸ್ಟ್‌ ಮಿಸ್‌

Karnataka Rain : ಹಾಸನದಲ್ಲಿ ಭಾರಿ ಮಳೆಗೆ (Rain Effect) ತೆಂಗಿನ ಮರ ಧರೆಗುರುಳಿ ಕಾರು ಜಖಂಗೊಂಡರೆ, ಹಾವೇರಿಯಲ್ಲಿ ಮಲಗಿದ್ದ ವ್ಯಕ್ತಿ ಮೇಲೆ ಗೋಡೆ ಕುಸಿದಿದೆ. ನಾವುಂದ ಬಡಾಕೆರೆಯಲ್ಲಿ ನೆರೆ ಸೃಷ್ಟಿಯಾಗಿದ್ದು, ಜನರನ್ನು ಬೋಟ್‌ ಮೂಲಕ ರಕ್ಷಣೆ ಮಾಡಲಾಗಿದೆ.

VISTARANEWS.COM


on

By

Karnataka Rain
Koo

ಹಾಸನ/ಹಾವೇರಿ : ಹಾಸನದಲ್ಲಿ ಭಾರಿ ವರ್ಷಧಾರೆಗೆ (Karnataka Rain) ತೆಂಗಿನ ಮರ ಧರೆಗುರುಳಿದೆ. ಏಕಾಏಕಿ ಮಾರುತಿ ಓಮ್ನಿ ಕಾರಿನ ಮೇಲೆ‌ ಮರವು ಮುರಿದು ಬಿದ್ದಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಯಸಳೂರು ಗ್ರಾಮದಲ್ಲಿ ಘಟನೆ ನಡೆದಿದೆ. ಯಸಳೂರು ಪೊಲೀಸ್ ಠಾಣೆ ಎದುರು ಚಾಲಕ ಕಾರು ಪಾರ್ಕಿಂಗ್ ಮಾಡಿ ತೆರಳಿದ್ದರು. ಈ ವೇಳೆ ಏಕಾಏಕಿ ಯಸಳೂರು ಪೊಲೀಸ್ ಠಾಣೆ ಆವರಣದಲ್ಲಿದ್ದ ತೆಂಗಿನಮರ ಕಾರಿನ ಮೇಲೆ ಬಿದ್ದು ಜಖಂಗೊಂಡಿದೆ. ಅದೃಷ್ಟವಶಾತ್ ಕಾರು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಹಾವೇರಿಯಲ್ಲಿ ಮನೆಗಳ ಗೋಡೆ ಕುಸಿತ

ಹಾವೇರಿ: ಜಿಟಿ ಜಿಟಿ ಮಳೆಗೆ ಎರಡು ಮನೆಗಳ ಗೋಡೆ ಕುಸಿದಿದೆ. ಹಾವೇರಿಯ ರಟ್ಟಿಹಳ್ಳಿ ತಾಲೂಕಿನ ‌ಮೇದೂರು ಗ್ರಾಮದ ರೇಷ್ಮಾ ನ್ಯಾಮತಿ ಎಂಬುವರ ಮನೆಗೆ ಹಾನಿಯಾಗಿದೆ. ಶಿಗ್ಗಾವಿ ತಾಲೂಕಿನ ಕುನ್ನೂರು ಗ್ರಾಮದ ಮಹಾದೇವಿ ತಳವಾರ ಎಂಬುವರ ಮನೆ ಗೋಡೆ ಕುಸಿದು ಬಿದ್ದಿದೆ. ಮನೆಯಲ್ಲಿ ‌ಮಲಗಿದ್ದ ವೇಳೆ ಈ ಅವಘಡ ನಡೆದಿದೆ. ರಾಮಪ್ಪ ತಳವಾರ ಎಂಬುವರ ಮೇಲೆ ಗೋಡೆ ಕುಸಿದು ಗಾಯಗೊಂಡಿದ್ದಾದೆ. ರಾಮಪ್ಪ ಗಣೇಶನ ಮೂರ್ತಿಗಳನ್ನು ತಯಾರಿಸಿ ಜೀವನ ನಡೆಸುತ್ತಿದ್ದರು. ಮನೆ ಗೋಡೆ ಕುಸಿದ ಹಿನ್ನೆಲೆಯಲ್ಲಿ 300 ಗಣೇಶನ ಮೂರ್ತಿಗಳಿಗೆ ಹಾನಿಯಾಗಿದೆ.

ನಾವುಂದ ಬಡಾಕೆರೆಯಲ್ಲಿ ನೆರೆ; ಬೋಟ್‌ ಮೂಲಕ ರಕ್ಷಣೆ

ಉಡುಪಿ ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ ನಾವುಂದ ಬಡಾಕೆರೆಯಲ್ಲಿ ಮತ್ತೆ ನೆರೆ ಸೃಷ್ಟಿಯಾಗಿದೆ. ಬೈಂದೂರು ತಾಲೂಕಿನ ನಾವುಂದದಲ್ಲಿ ಮಳೆಗಾಲದಲ್ಲಿ 4 ಬಾರಿ ನೆರೆ ಕಟ್ಟಿಟ್ಟ ಬುತ್ತಿಯಾಗಿದೆ. ನೆರೆಯಿಂದಾಗಿ ನೂರಾರು ಎಕರೆ ಕೃಷಿ ಭೂಮಿ ಜಲಾವೃತಗೊಂಡಿದೆ. ನಾವುಂದ ಬಡಾಕೆರೆಯಲ್ಲಿ ಹಲವಾರು ಮನೆಗಳು ಜಲಾವೃತಗೊಂಡಿದ್ದು, ದೋಣಿ ಮೂಲಕ ರಕ್ಷಣೆ ಮಾಡಲಾಗಿದೆ.

ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನಾದ್ಯಂತ ನೆರೆ ಹಾವಳಿ ಸೃಷ್ಟಿಯಾಗಿದೆ. ಸೀತಾ ನದಿ ತುಂಬಿ ಹರಿಯುತ್ತಿದ್ದು, ಕೋಟ ಬನ್ನಾಡಿ ಭಾಗದಲ್ಲಿ ನೆರೆಯಾಗಿದೆ. ಹೀಗಾಗಿ ಬನ್ನಾಡಿ, ಬೇಳೂರು, ಕೋಟ ವ್ಯಾಪ್ತಿಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಭೇಟಿ ನೀಡಿದರು. ಜತೆಗೆ ಡಿಸಿ ವಿದ್ಯಾಕುಮಾರಿ ,ಸಿಇಒ ಪ್ರತೀಕ್ ಬಾಯಲ್ ಸಾಥ್ ನೀಡಿದರು. ಶಿರಿಯಾರದಲ್ಲಿ ನೆರೆಪೀಡಿತರನ್ನು ಎತ್ತರದ ಪ್ರದೇಶಕ್ಕೆ ಶಿಫ್ಟ್ ಮಾಡಲಾಯಿತು.

ಭಾರಿ ಮಳೆಗೆ ಬಾಯ್ಬಿಟ್ಟ ಭೂಮಿ!

ಭಾರಿ ಮಳೆಗೆ ಏಕಾಏಕಿ ಮನೆಯೊಂದರ ಪಕ್ಕ ಅಪಾಯಕಾರಿ ಗುಂಡಿ ನಿರ್ಮಾಣವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ರಾಜಾರಾಂಪುರ ಕಾಲನಿಯಲ್ಲಿ ಘಟನೆ ನಡೆದಿದೆ. ರಾಜಾರಾಂಪರ ಕಾಲನಿ ನಿವಾಸಿ ವಿಶೇಷ ಚೇತನ ಬಾಳಪ್ಪ ಎಂಬುವವರ ಮನೆ ಪಕ್ಕ ಸುಮಾರು ಒಂದು ಫೀಟ್ ಅಂತರದಲ್ಲೇ ಭೂಮಿ ಬಾಯ್ಬಿಟ್ಟಿದೆ. ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಸುಮಾರು 15-20ಫೀಟ್ ಆಳವಾಗದ ಸುರಂಗದ ರೀತಿಯ ಗುಂಡಿ ನಿರ್ಮಾಣವಾಗಿದೆ. ಜತೆಗೆ ಗುಂಡಿ ಒಳಗಿನ ಸುರಂಗದಿಂದ ನೀರು ಉಕ್ಕಿ ಬರುತ್ತಿದೆ. ಅಪಾಯದಂಚಿನಲ್ಲಿರುವ ಸಂಪಾಜೆ ಗ್ರಾಮದ ನಿವಾಸಿ ಬಾಳಪ್ಪ ಮನೆಯವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ.

ಕೆರೆಯಂತಾದ ರೈಲ್ವೆ ಅಂಡರ್‌ ಪಾಸ್‌

ರಾಯಚೂರಲ್ಲಿ ರಾತ್ರಿಯಿಡೀ ಸುರಿದ ಮಳೆಗೆ ಅವಾಂತರ ಸೃಷ್ಟಿಯಾಗಿದೆ. ನೀರು ನಿಂತು ರೈಲ್ವೆ ಅಂಡರ್ ಪಾಸ್ ಕೆರೆಯಂತಾಗಿತ್ತು. ಕರೇಕಲ್ ಗ್ರಾಮದ ರೈಲ್ವೆ ಅಂಡರ್ ಪಾಸ್‌ನಲ್ಲಿ ನೀರು ನಿಂತಿದ್ದರಿಂದ ವಾಹನ ಸವಾರರು ಪರದಾಡಿದರು. ಇತ್ತ ವರದಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗುತ್ತಿದ್ದು, ಜೀವದ ಹಂಗು ತೊರೆದು ಜನರು ಬ್ರಿಜ್ಡ್ ಕಂ ಬ್ಯಾರೇಜ್ ಮೇಲೆ ವಾಹನ ಚಲಾಯಿಸುತ್ತಿದ್ದಾರೆ. ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಕಳಸೂರು ಗ್ರಾಮದ ಬ್ರಿಜ್ಡ್ ಕಂ ಬ್ಯಾರೇಜ್ ಮೇಲೆ ನೀರು ಹರಿಯುತ್ತಿದೆ. ಕಳಸೂರು ಮತ್ತು ಕೊಳೂರ ನಡುವೆ ಸಂಪರ್ಕ ಕಲ್ಪಿಸುವ ಸೇತುವೆ ಇದಾಗಿದೆ.

ಅವೈಜ್ಞಾನಿಕ ಕಾಮಗಾರಿಯಿಂದ ರಸ್ತೆ ಕುಸಿತ

ಅವೈಜ್ಞಾನಿಕ ಕಾಮಗಾರಿಯಿಂದ ಭಾರಿ ಮಳೆಗೆ ರಸ್ತೆ ಕುಸಿದಿದೆ. ನಿಂತ ಜಾಗದಲ್ಲಿಯೇ ಲಾರಿಯೊಂದು ಒಂದು ಬದಿಗೆ ಜಾರಿದೆ. ಮಂಗಳೂರಿನಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಸರಕು ತುಂಬಿದ್ದ ಲಾರಿ ರಸ್ತೆ ಪಕ್ಕಕ್ಕೆ ಜಾರಿದ್ದು, ತಡೆಗೋಡೆ ಇಲ್ಲದಿದ್ದರೆ ಪ್ರಪಾತಕ್ಕೆ ಉರುಳಿ ಬೀಳುವ ಸಾಧ್ಯತೆ ಇದೆ. ಅದೃಷ್ಟವಶಾತ್ ಯಾವುದೇ ಅಪಾಯವಾಗಿಲ್ಲ. ಹಾಸನ ರಾಷ್ಟ್ರೀಯ ಹೆದ್ದಾರಿ 75 ರ ಸಕಲೇಶಪುರ ತಾಲ್ಲೂಕಿನ ಬಾಳ್ಳುಪೇಟೆ ಬಳಿ ಘಟನೆ ನಡೆದಿದೆ. ಸ್ಥಳಕ್ಕೆ ಸಕಲೇಶಪುರ ಎಸಿ ಶೃತಿ ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಳೆ ಅವಾಂತರ ಮುಂದುವರಿದಿದೆ. ಭಾರಿ ಮಳೆಗೆ ಗ್ರಾಮದ ಮುಖ್ಯ ರಸ್ತೆ ನದಿಯಂತಾಗಿತ್ತು. ಚಿಕ್ಕಮಗಳೂರು ತಾಲೂಕಿನ ಬಾಸಪುರ ಗ್ರಾಮದಲ್ಲಿ ಗುಡ್ಡದಿಂದ ರಸ್ತೆಗೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಬಾಸಾಪುರ ಸೇರಿ ಹಲವು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ತೋಟಕ್ಕೆ ನೀರು ನುಗ್ಗಿ ಕಾಫಿ ಬೆಳೆ ನಾಶವಾಗಿದೆ.

Rain Effect.. karnataka Rain Effect

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Vicky Kaushal Kissing Scenes of 27 Seconds deleated From Bad Newz
ಬಾಲಿವುಡ್4 mins ago

Vicky Kaushal: 27 ಸೆಕೆಂಡುಗಳ ಕಾಲ ಚುಂಬಸಿದ ವಿಕ್ಕಿ ಕೌಶಲ್ -ತೃಪ್ತಿ; ಸೆನ್ಸಾರ್‌ ಬೋರ್ಡ್‌ನಿಂದ ಬಿತ್ತು ಕತ್ತರಿ!

uttara kannada landslide shirur
ಉತ್ತರ ಕನ್ನಡ15 mins ago

Uttara Kannada Landslide: ಭೂಕುಸಿತದ ಜಾಗದ ಬಳಿಯೇ ʼಸುನಾಮಿʼ ಎಫೆಕ್ಟ್‌; ನೀರಿನ ರಭಸಕ್ಕೆ ಕೊಚ್ಚಿಹೋದ ಮಹಿಳೆ

Ajit Pawar
ರಾಜಕೀಯ16 mins ago

Ajit Pawar: ಮಹಾರಾಷ್ಟ್ರದಲ್ಲಿ ಅಜಿತ್‌ ಪವಾರ್‌ಗೆ ಶಾಕ್‌; ಎನ್‌ಸಿಪಿಗೆ ರಾಜೀನಾಮೆ ನೀಡಿದ ಆಪ್ತ

KL Rahul
ಕ್ರೀಡೆ19 mins ago

KL Rahul: ಮುಂದಿನ ವರ್ಷ ಆರ್​ಸಿಬಿ ಪರ ಆಡಲಿದ್ದಾರೆ ಕೆ.ಎಲ್​ ರಾಹುಲ್​; ಪೋಸ್ಟರ್ ವೈರಲ್

Samarjit Lankesh Monalisa Kannada Movie 20 Years Celebration Gowri Movie 2 Songs Released
ಸ್ಯಾಂಡಲ್ ವುಡ್52 mins ago

Samarjit Lankesh: ‘ಮೊನಾಲಿಸಾ’ ಚಿತ್ರಕ್ಕೆ 20 ವರ್ಷಗಳ ಸಂಭ್ರಮ: ರಿಲೀಸ್ ಆಯ್ತು ‘ಗೌರಿ’ ಚಿತ್ರದ ಹಾಡುಗಳು

gt world mall
ಪ್ರಮುಖ ಸುದ್ದಿ53 mins ago

GT World Mall: ಪಂಚೆ ಧರಿಸಿ ಬಂದ ರೈತರಿಗೆ ಪ್ರವೇಶ ನಿರಾಕರಿಸಿ ಅವಮಾನಿಸಿದ ಜಿಟಿ ವರ್ಲ್ಡ್‌ ಮಾಲ್‌

Kylian Mbappe
ಕ್ರೀಡೆ54 mins ago

Kylian Mbappe: ಬಾಲ್ಯದ ಕನಸಿನ ರಿಯಲ್‌ ಮ್ಯಾಡ್ರಿಡ್‌ ತಂಡ ಸೇರಿದ ಕೀಲಿಯನ್‌ ಎಂಬಾಪೆ

SIIMA 2024 nomination list announced kaatera
ಸ್ಯಾಂಡಲ್ ವುಡ್1 hour ago

SIIMA 2024: ಸೈಮಾ ನಾಮಿನೇಷನ್ ರೇಸ್‌ನಲ್ಲಿ ʻಕಾಟೇರʼ, ʻಸಪ್ತ ಸಾಗರದಾಚೆ ಎಲ್ಲೋ ಸೈಡ್-ಎʼ!

Chandipura Virus
ಆರೋಗ್ಯ1 hour ago

Chandipura Virus: ಡೆಂಗ್ಯೂ ಹಾವಳಿ ನಡುವೆ ಕಾಡುತ್ತಿದೆ ಚಾಂದಿಪುರ ವೈರಸ್; ಇದುವರೆಗೆ 6 ಮಕ್ಕಳು ಬಲಿ: ಏನಿದರ ಲಕ್ಷಣ?

Double-Decker Flyover
ಪ್ರಮುಖ ಸುದ್ದಿ1 hour ago

Double-Decker Flyover: ಇಂದು ಬೆಂಗಳೂರಿನ ಡಬಲ್ ಡೆಕ್ಕರ್ ಫ್ಲೈಓವರ್‌ಗೆ ಚಾಲನೆ; ದಕ್ಷಿಣ ಭಾರತದ ಪ್ರಥಮ ಮೆಟ್ರೋ ಕಂ ಮೇಲ್ಸೇತುವೆ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ21 hours ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ23 hours ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ2 days ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ2 days ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ2 days ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ3 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ3 days ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ3 days ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

karnataka Rain
ಮಳೆ3 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ4 days ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

ಟ್ರೆಂಡಿಂಗ್‌