Janapada University | ಕರ್ನಾಟಕ ಜಾನಪದ ವಿವಿಯ 100 ಎಕರೆಗೂ ಹೆಚ್ಚು ಭೂಮಿ ಒತ್ತುವರಿ; ಜಿಲ್ಲಾಡಳಿತಕ್ಕೆ ಮೊರೆ - Vistara News

ಕರ್ನಾಟಕ

Janapada University | ಕರ್ನಾಟಕ ಜಾನಪದ ವಿವಿಯ 100 ಎಕರೆಗೂ ಹೆಚ್ಚು ಭೂಮಿ ಒತ್ತುವರಿ; ಜಿಲ್ಲಾಡಳಿತಕ್ಕೆ ಮೊರೆ

Janapada University | ನಮ್ಮ ಕಲೆ, ಸಂಸ್ಕೃತಿ ಮತ್ತು ಜ್ಞಾನಪರಂಪರೆಗಳು ಅಳಿಸಿ ಹೋಗದಂತೆ ಸಂರಕ್ಷಿಸಿ, ಸಂವರ್ಧನೆಗೊಳಿಸಲು ರಾಜ್ಯ ಸರ್ಕಾರ ಹಾವೇರಿ ಜಿಲ್ಲೆ ಶಿಗ್ಗಾಂವಿಯ ಗೊಟಗೋಡಿಯಲ್ಲಿ ಪ್ರಪಂಚದಲ್ಲೇ ಮೊದಲನೇ ಜಾನಪದ ವಿಶ್ವವಿದ್ಯಾಲಯವನ್ನು ಸ್ಥಾಪಿಸಿ 166 ಎಕರೆ ಜಾಗವನ್ನು ಮಂಜೂರು ಮಾಡಿತ್ತು. ಈಗ ಅದರಲ್ಲಿ ಬಹುಪಾಲು ಜಾಗ ಒತ್ತುವರಿಯಾಗಿದೆ ಎಂಬ ಆರೋಪ ಕೇಳಿಬಂದಿದೆ.

VISTARANEWS.COM


on

Karnataka Janapada University old VV land encroachment
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
ವಿಸ್ತಾರ ವಿಶೇಷ

ಸುರೇಶ್‌ ನಾಯ್ಕ, ಹಾವೇರಿ
ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಗೊಟಗೋಡಿಯಲ್ಲಿರುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ (Janapada University) ೧66 ಎಕರೆ ಜಮೀನಿನಲ್ಲಿ 1೧೩ ಎಕರೆಗೂ ಹೆಚ್ಚಿನ ಭೂಮಿ ಒತ್ತುವರಿಯಾಗಿದೆ. ಪ್ರಸ್ತುತ ವಿವಿ ಇರುವ ಪ್ರದೇಶದ ಹೊರತಾಗಿ ಉಳಿದ ಎಲ್ಲ ಕಡೆಯೂ ಒತ್ತುವರಿಯನ್ನು ಮಾಡಿಕೊಳ್ಳಲಾಗಿದೆ ಎಂದು ವಿವಿ ಆಡಳಿತ ಮಂಡಳಿ ಈಗ ಜಿಲ್ಲಾಡಳಿತದ ಕದ ತಟ್ಟಿದೆ.

Karnataka Janapada University old VV land encroachment

ಜನಪದ ಕಲೆಯನ್ನು ಉಳಿಸಿ, ಬೆಳೆಸುವ ಮಹತ್ವಾಕಾಂಕ್ಷೆಯಿಂದ ೨೦೧೧ರಲ್ಲಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯವನ್ನು ರಾಜ್ಯ ಸರ್ಕಾರ ಪ್ರಾರಂಭ ಮಾಡಿತು. ಜಾನಪದ ಅಧ್ಯಯನಕ್ಕೆ ವಿಸ್ತೃತವಾದ ನೆಲೆಗಳನ್ನು ಒದಗಿಸುವ ಹಾಗೂ ಬಹುಭಾಷಾ ಸಂಸ್ಕೃತಿಯ ದೇಶವಾದ ಭಾರತದಲ್ಲಿ ಕನ್ನಡ ಸಂಸ್ಕೃತಿಯ ಕುರಿತು ಅರ್ಥಪೂರ್ಣವಾಗಿ ಅಧ್ಯಯನ ನಡೆಸುವುದು ಸೇರಿದಂತೆ ಜನಪದ ಸಾಹಿತ್ಯ, ಕಲೆ, ಸಂಗೀತ, ರಂಗಭೂಮಿ, ಕರಕುಶಲ ಕಲೆ, ಜನಪದ ವೈದ್ಯ ಪದ್ಧತಿ, ಆಹಾರ ಪಾನೀಯ, ಗುಡಿ ಕೈಗಾರಿಕೆ ಮೊದಲಾದ ಎಲ್ಲ ವಿಷಯಗಳನ್ನು ಒಳಗೊಂಡ ಕ್ಷೇತ್ರಗಳಲ್ಲಿ ಉನ್ನತ ಶಿಕ್ಷಣ ಮತ್ತು ಸಂಶೋಧನೆಗೆ ಅವಕಾಶವನ್ನು ಕಲ್ಪಿಸುವುದು ಹಾಗೂ ಇನ್ನಿತರ ಮಹದೊದ್ದೇಶದಿಂದ ಈ ವಿವಿಯನ್ನು ಪ್ರಾರಂಭ ಮಾಡಲಾಗಿತ್ತು. ಇದಕ್ಕಾಗಿ ೧೬೬ ಎಕರೆ ವಿಶಾಲ ಪ್ರದೇಶವನ್ನು ಮಂಜೂರು ಮಾಡಲಾಗಿತ್ತು.

Karnataka Janapada University old VV land encroachment
ತಹಸೀಲ್ದಾರ್‌ಗೆ ಕುಲಸಚಿವರು ಬರೆದಿರುವ ಪತ್ರ

ಈಗ ವಿಶ್ವ ವಿದ್ಯಾಲಯವನ್ನು ಕಟ್ಟಿಕೊಂಡಿರುವ 52 ಎಕರೆ ಜಾಗ ಮಾತ್ರ ವಿವಿ ಬಳಿ ಉಳಿದುಕೊಂಡಿದೆ. ಉಳಿದ ಐದಾರು ಕಡೆಗಳಾದ ನಿಡಗುಂದಿ, ಸೋಮಾಪುರ, ರಾಷ್ಟ್ರೀಯ ಹೆದ್ದಾರಿ ೪ರ ಬಳಿ ಇರುವ ಜಾಗಗಳಲ್ಲಿ ಒತ್ತುವರಿಯಾಗಿರುವುದು ಈಗ ವಿವಿ ಗಮನಕ್ಕೆ ಬಂದಿದೆ. ಇನ್ನೂ ಹಲವಾರು ಕಡೆ ಒತ್ತುವರಿಯಾಗಿರುವ ಶಂಕೆ ಇದ್ದು, ಅಲ್ಲೆಲ್ಲ ಕಡೆ ವಿವಿ ಪರಿಶೀಲನೆ ನಡೆಸಲು ಮುಂದಾಗಿದೆ.

ಇದನ್ನೂ ಓದಿ | Voter data | ಚಿಲುಮೆ ಮಾದರಿಯಲ್ಲೇ ವಿಜಯಪುರದಲ್ಲೂ ಗೋಲ್‌ಮಾಲ್‌: ಸಿಕ್ಕಿಬಿದ್ದವನ ಹಿಂದಿದ್ದಾರಾ ಬಿಜೆಪಿ ನಾಯಕ ಯತ್ನಾಳ್‌?

ಜಿಲ್ಲಾಧಿಕಾರಿಗೆ ಪತ್ರ ಬರೆದ ಕುಲಸಚಿವರು
ಕರ್ನಾಟಕ ವಿಶ್ವ ವಿದ್ಯಾಲಯದ 113 ಎಕರೆಗೂ ಹೆಚ್ಚು ಜಾಗವು ಒತ್ತುವರಿಯಾಗಿದೆ. ಈ ಜಾಗವು ಕರ್ನಾಟಕ ಸರ್ಕಾರದಿಂದ ವಿವಿಗೆ ಮಂಜೂರಿಯಾಗಿರುವ ಪ್ರದೇಶವಾಗಿದೆ. ಗೊಟಗೋಡಿ, ಶೀಲವಂತ ಸೋಮಾಪುರ, ಹುಲಸೋಗಿ, ಅಡವಿಸೋಮಾಪುರ, ತಡಸ, ಗುಡಗೇರಿ, ಹಿರೇಬೆಂಡಿಗೇರಿ, ನಿಡಗುಂದಿ, ತಿಮ್ಮಾಪುರ ಗ್ರಾಮಗಳಲ್ಲಿ ಒತ್ತುವರಿಯಾಗಿದೆ. ಈ ಸಂಬಂಧ ದಾಖಲೆ ಸಲ್ಲಿಸಲಾಗಿದ್ದು, ಒತ್ತುವರಿಯಾಗಿರುವ ಸರ್ವೇ ನಂಬರ್‌ ಹೊಂದಿರುವ ಜಮೀನನ್ನು ಹದ್ದುಬಸ್ತು ಮಾಡಿಕೊಡುವಂತೆ ಮನವಿ ವಿವಿ ಕುಲಸಚಿವ ಪ್ರೊ. ಸಿ.ಟಿ. ಗುರುಪ್ರಸಾದ್‌ ಅವರು ತಹಸೀಲ್ದಾರ್‌ ಹಾಗೂ ಜಿಲ್ಲಾಧಿಕಾರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಒತ್ತುವರಿಯಾಗಿರುವ ಪ್ರದೇಶಗಳು ಯಾವುವು?
೧. ಗೊಟಗೋಡಿಯಲ್ಲಿರುವ ಸರ್ವೇ ನಂಬರ್ 116 ಎ ನಲ್ಲಿ 7 ಎಕರೆ 38 ಗುಂಟೆ
೨. ಗೊಟಗೋಡಿಯಲ್ಲಿರುವ ಸರ್ವೇ ನಂಬರ್ 116ಎ ನಲ್ಲಿ 45 ಎಕರೆ 38 ಗುಂಟೆ
೩. ಶೀಲವಂತ ಸೋಮಾಪುರದಲ್ಲಿ‌ ಸರ್ವೆ ನಂಬರ್ 51 ರಲ್ಲಿ 9 ಎಕರೆ 18 ಗುಂಟೆ
೪. ಹುಲಸೋಗಿಯಲ್ಲಿ ಸರ್ವೇ ನಂಬರ್ 107/ಅ ನಲ್ಲಿ 9 ಎಕರೆ 02 ಗುಂಟೆ
೫. ಅಡವಿಸೋಮಾಪುರದಲ್ಲಿರುವ ಸರ್ವೇ ನಂಬರ್ 76ರಲ್ಲಿ‌ 3 ಎಕರೆ 11 ಗುಂಟೆ
೬. ತಡಸದಲ್ಲಿರುವ ಸರ್ವೇ ನಂಬರ್ 168 ರಲ್ಲಿ 11 ಎಕರೆ 12 ಗುಂಟೆ
೭. ಗುಡಗೇರಿಯಲ್ಲಿರುವ ಸರ್ವೇ ನಂಬರ್ 16 ರಲ್ಲಿ 19 ಎಕರೆ 37 ಗುಂಟೆ
೮. ಹಿರೇಬೆಂಡಿಗೇರಿಯಲ್ಲಿ ಸರ್ವೇ ನಂಬರ್ 70/1ಅ ನಲ್ಲಿ 3 ಎಕರೆ 09 ಗುಂಟೆ
೯. ನಿಡಗುಂದಿಯಲ್ಲಿ ಸರ್ವೇ ನಂಬರ್ 42/1ಅ ನಲ್ಲಿರುವ 56 ಎಕರೆ 19 ಗುಂಟೆ
೧೦. ತಿಮ್ಮಾಪುರದ ಸರ್ವೇ ನಂಬರ್ 10ಎ ನಲ್ಲಿರುವ 1 ಎಕರೆ 33 ಗುಂಟೆ ಭೂಮಿ

ಹಾಲಿ ವಿವಿ ಸ್ಥಾಪನೆಗೊಂಡಿರುವ ಗೊಟಗೋಡಿಯಲ್ಲಿರುವ ಭೂಮಿ ಹೊರತುಪಡಿಸಿ ಉಳಿದ ಕಡೆಗಳಲ್ಲಿ ಭೂ ಒತ್ತುವರಿಯಾಗಿದೆ ಎಂದು ವಿವಿ ದೂರಿದೆ. ಜಾನಪದ ವಿವಿ ಭೂಮಿಯಲ್ಲಿ ಜನರು ಉಳುಮೆ ಪ್ರಾರಂಭ ಮಾಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಈ ಎಲ್ಲ ಕಾರಣಗಳಿಂದ ಜಾಗವನ್ನು ಮರಳಿ ಕೊಡಿಸುವಂತೆ ಜಿಲ್ಲಾಡಳಿತದ ಮೊರೆ ಹೋಗಲಾಗಿದೆ.

Karnataka Janapada University old VV land encroachment ಟಿ.ಎಂ ಭಾಸ್ಕರ, ಕರ್ನಾಟಕ ಜಾನಪದ ವಿವಿ ಕುಲಪತಿ

ಸರ್ಕಾರಕ್ಕೆ ವರದಿ ನೀಡಲಾಗಿದೆ
ಕರ್ನಾಟಕ ಜನಪದ ವಿಶ್ವವಿದ್ಯಾಲಯದ ಭೂಮಿ ಒತ್ತುವರಿಯಾಗಿದೆ. ಗೊಟಗೋಡಿಯಲ್ಲಿರುವ 52 ಎಕರೆ ಜಮೀನು ಹೊರತುಪಡಿಸಿ ಉಳಿದ ಕಡೆಗಳಲ್ಲಿರುವ ಭೂಮಿ ಒತ್ತುವರಿಯಾಗಿದೆ. ನಾನು ನಿಡಗುಂದಿ, ಸೋಮಲಾಪುರ ಸೇರಿದಂತೆ ಐದಾರು ಕಡೆ ಬೇಟಿ ನೀಡಿದ್ದೇನೆ. ಎಲ್ಲ ಜಮೀನು ಮೂಲ ಜಾಗವಾಗಿರದೆ, ಒತ್ತುವರಿಯಾಗಿದೆ. ಗೋವಿನಜೋಳ ಸೇರಿದಂತೆ ಇನ್ನಿತರ ಬೆಳೆಯನ್ನು ಬಿತ್ತನೆ ಮಾಡಿದ್ದಾರೆ. ಈ ಕುರಿತಾಗಿ ಜಿಲ್ಲಾಧಿಕಾರಿ ಹಾಗೂ ಸರ್ಕಾರಕ್ಕೆ ವರದಿ ನೀಡಿದ್ದೇನೆ.
| ಟಿ.ಎಂ ಭಾಸ್ಕರ, ಕರ್ನಾಟಕ ಜಾನಪದ ವಿವಿ ಕುಲಪತಿ

ಇದನ್ನೂ ಓದಿ | Criminal politics | ಕ್ರಿಮಿನಲ್‌ ಹಿನ್ನೆಲೆ ಬಗ್ಗೆ ಫೈಟರ್‌ ರವಿಯಿಂದ ಮಾಹಿತಿ ಕೇಳಿದ ನಳಿನ್‌ ಕುಮಾರ್‌ ಕಟೀಲ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Veena Kashappanavar: ರಾಜಕೀಯದಿಂದ ದೂರ ಸರಿದ್ರಾ ವೀಣಾ ಕಾಶಪ್ಪನವರ್‌? ಭಾವನಾತ್ಮಕ ಪೋಸ್ಟ್‌ ಹಾಕಿದ ಕೈ ನಾಯಕಿ!

Veena Kashappanavar: ಸಾಮಾಜಿಕ ಜಾಲತಾಣದಲ್ಲಿ ವೀಣಾ ಕಾಶಪ್ಪನವರ್‌ ಭಾವನಾತ್ಮಕ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ. ಹೀಗಾಗಿ ಅವರು ರಾಜಕೀಯದಿಂದ ದೂರ ಸರಿದ್ರಾ ಎಂಬ ಚರ್ಚೆಗಳು ನಡೆಯುತ್ತಿವೆ.

VISTARANEWS.COM


on

Veena kashappanavar
Koo

ಬಾಗಲಕೋಟೆ: ಲೋಕಸಭಾ ಚುನಾವಣೆಯಲ್ಲಿ ಬಾಗಲಕೋಟೆ ಕಾಂಗ್ರೆಸ್‌ ಟಿಕೆಟ್‌ ಕೈ ತಪ್ಪಿದ ಬಳಿಕ ಕಾಂಗ್ರೆಸ್‌ ನಾಯಕಿ ವೀಣಾ ಕಾಶಪ್ಪನವರ್‌ (Veena Kashappanavar) ಅವರು ಪಕ್ಷೇತರವಾಗಿ ಸ್ಪರ್ಧಿಸಬೇಕು ಎಂದು ಬೆಂಬಲಿಗರು ಒತ್ತಾಯ ಮಾಡಿದ್ದರು. ಹೀಗಾಗಿ ಅವರ ಮನವೊಲಿಸಲು ಸಿಎಂ, ಡಿಸಿಎಂ ಸಮ್ಮುಖದಲ್ಲಿ ಸಂಧಾನ ಸಭೆ ನಡೆದಿತ್ತು. ಬಳಿಕ ಮೇಲೆ ಪಕ್ಷದ ಚಟುವಟಿಕೆಗಳಿಂದ ದೂರು ಉಳಿದಿದ್ದ ವೀಣಾ ಕಾಶಪ್ಪನವರ್‌, ಇದೀಗ ರಾಜಕೀಯದಿಂದ ದೂರ ಸರಿದ್ರಾ ಎಂಬ ಪ್ರಶ್ನೆ ಅವರ ಬೆಂಬಲಿಗರಲ್ಲಿ ಮೂಡಿದೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ ವೀಣಾ ಕಾಶಪ್ಪನವರ್‌ ಭಾವನಾತ್ಮಕ ಸಂದೇಶವೊಂದನ್ನು ಹಂಚಿಕೊಂಡಿರುವುದು ಈ ಚರ್ಚೆಗೆ ಇಂಬು ನೀಡುವಂತಿದೆ.

ಫೇಸ್‌ಬುಕ್‌ ಪೋಸ್ಟ್‌ನಲ್ಲಿ ಏನಿದೆ?

ಫೇಸ್‌ಬುಕ್‌ನಲ್ಲಿ ಭಾವನಾತ್ಮಕ ಪೋಸ್ಟ್‌ ಹಾಕಿರುವ ವೀಣಾ ಕಾಶಪ್ಪನವರ್‌, ಕಣ್ಣು ನಕ್ಕರೂ ಒದ್ದೆಯಾಗುತ್ತದೆ, ಅತ್ತರೂ ಒದ್ದೆಯಾಗುತ್ತದೆ. ಆದರೆ ನಗಿಸಿದವರು ನಾಲ್ಕು ದಿನ ನೆನಪಿನಲ್ಲಿದ್ದರೆ, ನೋಯಿಸಿದವರು ಜೀವನವಿಡಿ ನೆನಪಿನಲ್ಲಿರುತ್ತಾರೆ. ನಮಸ್ಕಾರಗಳು ಶುಭದಿನ ಎಂದು ಹೇಳಿದ್ದಾರೆ.

ಬಾಗಲಕೋಟೆ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ್‌ ನಾಮಪತ್ರ ಸಲ್ಲಿಕೆ ವೇಳೆ ಮಾತ್ರ ಇತ್ತೀಚೆಗೆ ವೀಣಾ ಕಾಶಪ್ಪನವರ್‌ ಭಾಗಿಯಾಗಿದ್ದರು. ಈ ವೇಳೆಯೂ ಕಾಂಗ್ರೆಸ್‌ನಲ್ಲಿ ಇನ್ನು ಅಸಮಾಧಾನ ತಣ್ಣಗಾಗಿಲ್ಲ ಎಂಬ ಅಂಶ ಬೆಳಕಿಗೆ ಬಂದಿತ್ತು. ಇನ್ನು ನಾಮಪತ್ರ ಸಲ್ಲಿಕೆ ವೇಳೆ ಶಾಸಕ ವಿಜಯಾನಂದ ಕಾಶಪ್ಪನವರ್ ಗರಂ ಆಗಿದ್ದರು, ನಾಮಪತ್ರ ಸಲ್ಲಿಕೆಗೆ ನಮ್ಮನ್ನು ಕರೆದಿಲ್ಲ. ಯಾರಿಗೆ ಹೇಳಿದ್ದೀರಿ ನೀವು, ಯಾರನ್ನು ಕರೆಯುತ್ತೀರಿ. ಒಂದು ಫೋನ್ ಮಾಡೋಕೆ ಆಗಲ್ಲವೇ? ಹೇಳುವ ಸೌಜನ್ಯ ಇದೆ ಏನ್ರೀ ನಿಮಗೆ ಎಂದು ಮುಖಂಡರನ್ನು ತರಾಟೆಗೆ ತೆಗೆದುಕೊಂಡಿದ್ದರು.

ಇದನ್ನೂ ಓದಿ | Hassan Pen Drive Case: ವಿಚಾರಣೆಗೆ ಹಾಜರಾಗಲು 7 ದಿನ ಸಮಯ ಕೇಳಿದ ಪ್ರಜ್ವಲ್‌; ಶೀಘ್ರ ಸತ್ಯ ಹೊರಬರಲಿದೆ ಎಂದು ಟ್ವೀಟ್‌!

ಬಾಗಲಕೋಟೆ ಕ್ಷೇತ್ರದಲ್ಲಿ ವೀಣಾ ಉಳಿದೆಲ್ಲ ಸ್ಥಳೀಯ ನಾಯಕರಿಗಿಂತ ಹೆಚ್ಚು ಪ್ರಭಾವಿ ಮತ್ತು ಜನಪ್ರಿಯರು. ಈ ಹಿಂದೆ ಟಿಕೆಟ್‌ ಕೈತ್ಪಪ್ಪಿದ್ದಕ್ಕೆ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದ ವೀಣಾ ಕಾಶಪ್ಪನವರ್‌, ಬಾಗಲಕೋಟೆಯಿಂದ ಬೇರೆಯವರಿಗೆ ಟಿಕೆಟ್ ಸಿಕ್ಕಿರುವುದು ಕೇವಲ ನಮ್ಮ ಸಮುದಾಯ ಮಾತ್ರವಲ್ಲ ಬೇರೆ ಸಮುದಾಯದ ಜನರಿಗೂ ಆಘಾತವನ್ನುಂಟು ಮಾಡಿದೆ, ಕಳೆದ 5 ವರ್ಷಗಳಿಂದ ನಿರಂತರವಾಗಿ ಕೆಲಸ ಮಾಡುತ್ತಿರುವ ತನಗೆ ಹೇಗೆ ಟಿಕೆಟ್ ತಪ್ಪುವುದು ಸಾಧ್ಯ ಅಂತ ಬೇರೆ ಬೇರೆ ಜಿಲ್ಲೆಗಳ ಜನ ಸಹ ಫೋನ್ ಮಾಡಿ ಕೇಳುತ್ತಿದ್ದಾರೆ ಎಂದು ಭೇಸರ ಹೊರಹಾಕಿದ್ದರು.

ಇನ್ನು ಸಂಯುಕ್ತ ಪಾಟೀಲ್‌ ಪರ ಪ್ರಚಾರ ಮಾಡಲು ಹೋಗುವುದಿಲ್ಲ ಅಂತ ಹಠ ಹಿಡಿದು ಕೆಲದಿನಗಳ ಕಾಲ ಬೆಂಗಳೂರಲ್ಲೇ ವೀಣಾ ಕಾಶಪ್ಪನವರ್ ಉಳಿದುಬಿಟ್ಟಿದ್ದರು. ನಂತರ ಮುನಿಸು ಮರೆತು ಸಂಯಕ್ತ ನಾಮಪತ್ರ ಸಲ್ಲಿಸುವ ಮೊದಲು ನಡೆದ ಬೃಹತ್ ರ್ಯಾಲಿಯಲ್ಲಿ ಪಾಲ್ಗೊಂಡು ಕಾರ್ಯಕರ್ತರಲ್ಲಿ ಹರ್ಷ ಮೂಡಿಸಿದ್ದರು. ಆದರೆ, ಇದೀಗ ಭಾವನಾತ್ಮಕ ಪೋಸ್ಟ್‌ನಿಂದ ಅವರ ಮುಂದಿನ ನಡೆ ಏನು ಎಂಬುವುದು ಕುತೂಹಲ ಮೂಡಿಸಿದೆ.

Continue Reading

ಮಳೆ

Karnataka Weather : ಮಳೆಗಾಗಿ ಕಪ್ಪೆಗಳಿಗೆ ಮದುವೆ; ಶಾಖದ ಹೊಡೆತಕ್ಕೆ 6 ಜಿಲ್ಲೆಗಳಿಗೆ ರೆಡ್‌ ಅಲರ್ಟ್‌

Karnataka weather Forecast : ಮಳೆಗಾಗಿ (Rain News) ಕಸರತ್ತು ಶುರುವಾಗಿದ್ದು ಮೈಸೂರಲ್ಲಿ ಕಪ್ಪೆಗಳಿಗೆ ಮದುವೆ ಮಾಡಲಾಗಿದೆ. ತೊಪ್ಪೆಯಾಗುವಂತೆ ಮಳೆ ಹೊಯ್ಯಲೆಂದು ಕಪ್ಪೆಗಳ ಕಟ್ಟಿಕೊಂಡು ಬಂದು ಗ್ರಾಮಸ್ಥರು ತಾಳಿ ಕಟ್ಟಿಸಿದ್ದಾರೆ. ಇತ್ತ 6 ಜಿಲ್ಲೆಗಳಿಗೆ ಹೀಟ್‌ ವೇವ್‌ ಅಪ್ಪಳಿಸಲಿದ್ದು, ಹವಾಮಾನ ಇಲಾಖೆಯು ರೆಡ್‌ ಅಲರ್ಟ್‌ ಘೋಷಿಸಿದೆ.

VISTARANEWS.COM


on

By

karnataka weather Forecast
Koo

ಮೈಸೂರು/ಬೆಂಗಳೂರು: ಮಳೆ ಆಗದೆ ನೀರಿಗಾಗಿ ಎಲ್ಲಿಲ್ಲದ ಸಂಕಷ್ಟ ಎದುರಾಗುತ್ತಿದ್ದು, ಜನರು ಮಳೆಗಾಗಿ ದೇವರಲ್ಲಿ ಮೊರೆ ಹೋಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಒಂದೊಂದು ಕಡೆ ಒಂದೊಂದು ಸಂಪ್ರದಾಯಗಳೂ ಚಾಲ್ತಿಯಲ್ಲಿವೆ. ಈಗ ಮೈಸೂರಿನ ನಂಜನಗೂಡು ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಮಳೆಗಾಗಿ ಕಪ್ಪೆಗಳಿಗೆ ಮದುವೆ ಮಾಡಿದ್ದಾರೆ. ಮಳೆ ಬಾರದಿರುವ ಸಂಕಟದ (Karnataka Weather Forecast) ಮಧ್ಯೆ ಮಳೆ ಬರಲಿ (Rain News), ವರುಣ ದೇವ ಸಂತುಷ್ಟಗೊಳ್ಳಲಿ, ದಿನವೂ ಮೈ ತೊಪ್ಪೆಯಾಗುವಷ್ಟು ಮಳೆ ಸುರಿಯಲಿ, ಕೃಷಿ ಚಟುವಟಿಕೆಗೆ ತೊಂದರೆಯಾಗದಿರಲಿ, ಭೂತಾಯಿಗೆ ಬೇಕಾಗುವಷ್ಟು ಮಳೆ ಸುರಿಯಲಿ, ಅಂತರ್ಜಲ ಪೂರ್ಣಗೊಳ್ಳಲಿ, ನದಿ, ಹಳ್ಳಕೊಳ್ಳಗಳು ತುಂಬಿಕೊಳ್ಳಲಿ ಎಂದು ಪ್ರಾರ್ಥನೆ ಮಾಡಿದ್ದಾರೆ. ಬಿಸಿಲಿನ ಬೇಗೆಗೆ ತತ್ತರಿಸಿದ ಜನರು ಮಳೆ ಸುರಿಯುವಂತೆ ಪ್ರಾರ್ಥಿಸಿ ಕಪ್ಪೆಗಳಿಗೆ ಮದುವೆ ಮಾಡಿದರು. ಗ್ರಾಮದ ಬೀದಿ ಬೀದಿಗಳಲ್ಲಿ ಕಪ್ಪೆಗಳ ಮೆರವಣಿಗೆ ಮಾಡಿ ತಮಟೆ ಬಾರಿಸಿದ್ದಾರೆ. ಹುಯ್ಯೋ ಹುಯ್ಯೋ ಮಳೆರಾಯ ಬಾಳೆ ತೋಟಕ್ಕೆ ನೀರಿಲ್ಲ ಎಂದು ಘೋಷಣೆ ಕೂಗಿದರು.

ಇದನ್ನೂ ಓದಿ: Prajwal Revanna Case: ಏನಿದು ಡಿಪ್ಲೊಮ್ಯಾಟಿಕ್‌ ಪಾಸ್‌ಪೋರ್ಟ್‌? ಕೇಂದ್ರ ರದ್ದು ಮಾಡಿದರೆ ಪ್ರಜ್ವಲ್‌ ರೇವಣ್ಣ ಅರೆಸ್ಟ್!

ಮುಂದುವರಿಯಲಿದೆ ಒಣಹವೆ

ರಾಜ್ಯಾದ್ಯಂತ ಇನ್ನೆರಡು ದಿನಗಳು ಒಣಹವೆ ಇರುವ ಸಾಧ್ಯತೆ ಇದೆ. ಏ.2-3ರಂದು ಶುಷ್ಕ ವಾತಾವರಣ ಇದ್ದರೆ, ಏಪ್ರಿಲ್‌ 4ರಂದು ಚಾಮರಾಜನಗರದಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ.

ಶಾಖದ ಅಲೆಯ ಎಚ್ಚರಿಕೆ

ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ಕೊಪ್ಪಳ ಜಿಲ್ಲೆಗಳಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ತೀವ್ರ ಬಿಸಿಗಾಳಿ ಪರಿಸ್ಥಿತಿಗಳು ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಬಳ್ಳಾರಿ, ಕಲಬುರಗಿ, ವಿಜಯಪುರ, ರಾಯಚೂರು, ಚಿತ್ರದುರ್ಗ, ದಾವಣಗೆರೆ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ತುಮಕೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಶಾಖದ ಅಲೆಯ ವಾತಾವರಣವು ಹೆಚ್ಚಾಗಿರುತ್ತದೆ.

ರಾತ್ರಿ ಬೆಚ್ಚನೆಯ ವಾತಾವರಣ

ಮುಂದಿನ 5 ದಿನಗಳವರೆಗೆ ಕರ್ನಾಟಕದ ಉತ್ತರ ಒಳಭಾಗದಲ್ಲಿ ಬೆಚ್ಚನೆಯ ರಾತ್ರಿಯ ಪರಿಸ್ಥಿತಿಗಳು ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಮೇ 5ರಂದು ಉತ್ತರ ಕನ್ನಡ ಬಿಸಿ ಮತ್ತು ಆರ್ದ್ರತೆಯ ಪರಿಸ್ಥಿತಿಗಳು ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ರಾಜ್ಯಾದ್ಯಂತ ಗರಿಷ್ಠ ತಾಪಮಾನದಲ್ಲಿ ಯಾವುದೇ ದೊಡ್ಡ ಬದಲಾವಣೆ ಇಲ್ಲ.

6 ಜಿಲ್ಲೆಗಳಿಗೆ ರೆಡ್ ಅಲರ್ಟ್

ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ಕೊಪ್ಪಳ ಜಿಲ್ಲೆಗಳಿಗೆ ರೆಡ್‌ ಅಲರ್ಟ್‌ ನೀಡಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಹಾಸನ

Prajwal Revanna Case: ಏನಿದು ಡಿಪ್ಲೊಮ್ಯಾಟಿಕ್‌ ಪಾಸ್‌ಪೋರ್ಟ್‌? ಕೇಂದ್ರ ರದ್ದು ಮಾಡಿದರೆ ಪ್ರಜ್ವಲ್‌ ರೇವಣ್ಣ ಅರೆಸ್ಟ್!

Prajwal Revanna Case: ಏನಿದು ಡಿಪ್ಲೊಮ್ಯಾಟಿಕ್‌ ಪಾಸ್‌ಪೋರ್ಟ್‌? ಈ ಪಾಸ್‌ಪೋರ್ಟ್‌ ಇರುವವರಿಗೆ ಹಲವು ದೇಶಗಳು ವೀಸಾ ವಿಸ್ತರಿಸುತ್ತವೆ. ವೀಸಾ ಮನ್ನಾ ಸೌಲಭ್ಯವೂ ಸಿಗಬಹುದು. ಅಧಿಕೃತ ಪ್ರವಾಸ ಕಾರ್ಯಕ್ರಮಗಳು ಸುಗಮವಾಗುತ್ತದೆ. ಭಾರತೀಯ ರಾಯಭಾರ ಕಚೇರಿಯ ಸಂಪರ್ಕ ಸೌಲಭ್ಯಗಳು ಸಿಗುತ್ತವೆ. ಒಂದು ವೇಳೆ ಕೇಂದ್ರ ಸರ್ಕಾರ ಕ್ರಮ ಕೈಗೊಂಡರೆ ಏನಾಗುತ್ತದೆ? ಇದನ್ನು ಯಾರು ಯಾರು ಪಡೆದುಕೊಳ್ಳಬಹುದು? ಇದರ ಅವಧಿ ಎಷ್ಟು ವರ್ಷ ಇರುತ್ತದೆ? ಇದನ್ನು ಹೇಗೆ ಪಡೆದುಕೊಳ್ಳಬಹುದು? ವಿಶೇಷ ಸೌಲಭ್ಯಗಳು, ಮಾನ್ಯತೆಗಳು ಏನು ಎಂಬ ವಿವರವನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

Prajwal Revanna Case What is diplomatic passport
Koo

ಬೆಂಗಳೂರು: ಹಾಸನ ಸಂಸದ (Hassan MP), ಮಾಜಿ ಸಚಿವ ಎಚ್.ಡಿ. ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ (Prajwal Revanna Case) ಅಶ್ಲೀಲ ವಿಡಿಯೊ ಎನ್ನಲಾದ ಪೆನ್‌ಡ್ರೈವ್‌ ಪ್ರಕರಣಕ್ಕೆ (Hassan Pen Drive Case) ಸಂಬಂಧಪಟ್ಟಂತೆ ಅವರ ಡಿಪ್ಲೊಮ್ಯಾಟಿಕ್‌ ಪಾಸ್‌ಪೋರ್ಟ್‌ (Diplomatic Passport) ಅನ್ನು ರದ್ದು ಮಾಡಲು ಈಗಾಗಲೇ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ಈ ಪಾಸ್‌ಪೋರ್ಟ್‌ ರದ್ದು ಮಾಡದೇ ಇದ್ದರೆ ಪ್ರಜ್ವಲ್‌ ಬಂಧನ ಅಸಾಧ್ಯವಾಗಿದ್ದು, ಅವರು ದೇಶದಿಂದ ದೇಶಕ್ಕೆ ಆರಾಮವಾಗಿ ಸಂಚಾರ ಮಾಡಬಹುದಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನ‌ು ಸಂಕಷ್ಟಕ್ಕೆ ದೂಡಲು ಸಿದ್ದರಾಮಯ್ಯ ಪ್ಲ್ಯಾನ್‌ ಮಾಡಿದ್ದು, ಚೆಂಡನ್ನು ಕೇಂದ್ರ ಸರ್ಕಾರದ ಅಂಗಳಕ್ಕೆ ಹಾಕಿದ್ದಾರೆ.

ಒಂದು ವೇಳೆ ಕೇಂದ್ರ ಸರ್ಕಾರ ಕ್ರಮ ಕೈಗೊಂಡರೆ ಏನಾಗುತ್ತದೆ? ಏನಿದು ಡಿಪ್ಲೊಮ್ಯಾಟಿಕ್‌ ಪಾಸ್‌ಪೋರ್ಟ್‌? ಇದನ್ನು ಯಾರು ಯಾರು ಪಡೆದುಕೊಳ್ಳಬಹುದು? ಇದರ ಅವಧಿ ಎಷ್ಟು ವರ್ಷ ಇರುತ್ತದೆ? ಇದನ್ನು ಹೇಗೆ ಪಡೆದುಕೊಳ್ಳಬಹುದು? ವಿಶೇಷ ಸೌಲಭ್ಯಗಳು, ಮಾನ್ಯತೆಗಳು ಏನು ಎಂಬ ವಿವರವನ್ನು ಇಲ್ಲಿ ನೀಡಲಾಗಿದೆ.

ಏನಿದು ಡಿಪ್ಲೊಮ್ಯಾಟಿಕ್‌ ಪಾಸ್‌ಪೋರ್ಟ್?‌ (diplomatic passport)

ಡಿಪ್ಲೊಮ್ಯಾಟಿಕ್‌ ಪಾಸ್‌ಪೋರ್ಟ್‌ ಅನ್ನು ಟೈಪ್‌ ಡಿ (Type D) ಪಾಸ್‌ ಪೋರ್ಟ್‌ ಎಂದೂ ಕರೆಯುತ್ತಾರೆ. ಭಾರತೀಯ ರಾಜತಾಂತ್ರಿಕರು, ಸರ್ಕಾರಿ ಅಧಿಕಾರಿಗಳು ಹಾಗೂ ಭಾರತ ಸರ್ಕಾರದ ಪರ ಪ್ರತಿನಿಧಿಸುವ ವ್ಯಕ್ತಿಗಳಿಗೆ ಇದನ್ನು ನೀಡಲಾಗುತ್ತದೆ. ಭಾರತ ಸರ್ಕಾರದ ಪರ ಅಧಿಕೃತ ವಿದೇಶ ಪ್ರಯಾಣದ ಸಂದರ್ಭ ಬಳಸುತ್ತಾರೆ.

ಡಿಪ್ಲೊಮ್ಯಾಟಿಕ್‌ ಪಾಸ್‌ಪೋರ್ಟ್‌ 28 ಪುಟಗಳನ್ನು ಒಳಗೊಂಡಿರುತ್ತದೆ. ಸಾಮಾನ್ಯ ಪಾಸ್‌ಪೋರ್ಟ್‌ ಕಡು ನೀಲಿ ಕವರ್‌ ಅನ್ನು ಹೊಂದಿದ್ದರೆ, ಇದು ಮರೂನ್‌ ಬಣ್ಣದಲ್ಲಿ ಇರುತ್ತದೆ. ಸಾಮಾನ್ಯ ಪಾಸ್‌ಪೋರ್ಟ್‌ ವಯಸ್ಕರಿಗೆ 10 ವರ್ಷ ಹಾಗೂ ಅಪ್ರಾಪ್ತರಿಗೆ 5 ವರ್ಷ ವ್ಯಾಲಿಡಿಟಿಯನ್ನು ಹೊಂದಿರುತ್ತದೆ. ಡಿಪ್ಲೊಮ್ಯಾಟಿಕ್‌ ಪಾಸ್‌ಪೋರ್ಟ್‌ 5 ಅಥವಾ ಕಡಿಮೆ ಅವಧಿಗೆ ಬಿಡುಗಡೆಯಾಗುತ್ತದೆ.

ಡಿಪ್ಲೊಮ್ಯಾಟಿಕ್‌ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವುದು ಹೇಗೆ?

ದಿಲ್ಲಿಯಲ್ಲಿ ವಿದೇಶಾಂಗ ಇಲಾಖೆಯ ಪಾಸ್‌ಪೋರ್ಟ್‌ ಸೇವಾ ಪ್ರೋಗ್ರಾಮ್‌ ವಿಭಾಗದಲ್ಲಿ ಮಾತ್ರ ಡಿಪ್ಲೊಮ್ಯಾಟಿಕ್‌ ಪಾಸ್‌ ಪೋರ್ಟ್‌ ಬಗ್ಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.

ಪ್ರಯೋಜನವೇನು?

ಡಿಪ್ಲೊಮ್ಯಾಟಿಕ್‌ ಪಾಸ್‌ಪೋರ್ಟ್‌ ಭಾರತ ಸರ್ಕಾರವನ್ನು ರಾಜತಾಂತ್ರಿಕ ಉದ್ದೇಶಗಳಿಗೆ ವಿದೇಶಗಳಲ್ಲಿ ಪ್ರತಿನಿಧಿಸುವವರಿಗೆ ಅಧಿಕೃತ ಗುರುತಿನ ದೃಢೀಕರಣವಾಗಿ ಬಳಕೆಯಾಗುತ್ತದೆ. ಇದು ಅವರಿಗೆ ಗುರುತು ಮತ್ತು ಅಧಿಕೃತ ಸ್ಥಾನಮಾನವನ್ನು ಒದಗಿಸುತ್ತದೆ.

ಇದನ್ನೂ ಓದಿ: Hassan Pen Drive Case: SIT ತನಿಖೆಗೆ ಸಂತ್ರಸ್ತೆಯರ ಹಿಂದೇಟು; ವಿಚಾರಣೆ ಅಂತ ತೊಂದರೆ ಕೊಟ್ಟರೆ ಸೂಸೈಡ್‌ ಬೆದರಿಕೆ!

ಅರೆಸ್ಟ್‌ ಮಾಡುವುದು ಸಾಧ್ಯವೇ ಇಲ್ಲ

ಈ ಪಾಸ್‌ಪೋರ್ಟ್‌ ಇರುವವರಿಗೆ ಅಂತಾರಾಷ್ಟ್ರೀಯ ಕಾನೂನು ಅಡಿಯಲ್ಲಿ ಕೆಲವು ವಿಶೇಷ ಸೌಲಭ್ಯಗಳು, ಮಾನ್ಯತೆಗಳು ಸಿಗುತ್ತದೆ. ಆತಿಥೇಯ ರಾಷ್ಟ್ರದಲ್ಲಿ ಅರೆಸ್ಟ್‌, ವಶಕ್ಕೆ ತೆಗೆದುಕೊಳ್ಳುವುದು ಸಾಧ್ಯವಾಗುವುದಿಲ್ಲ.

ವೀಸಾ ಸೌಲಭ್ಯ

ಈ ಪಾಸ್‌ಪೋರ್ಟ್‌ ಇರುವವರಿಗೆ ಹಲವು ದೇಶಗಳು ವೀಸಾ ವಿಸ್ತರಿಸುತ್ತವೆ. ವೀಸಾ ಮನ್ನಾ ಸೌಲಭ್ಯವೂ ಸಿಗಬಹುದು. ಅಧಿಕೃತ ಪ್ರವಾಸ ಕಾರ್ಯಕ್ರಮಗಳು ಸುಗಮವಾಗುತ್ತದೆ. ಭಾರತೀಯ ರಾಯಭಾರ ಕಚೇರಿಯ ಸಂಪರ್ಕ ಸೌಲಭ್ಯಗಳು ಸಿಗುತ್ತವೆ.

ಪ್ರಜ್ವಲ್‌ಗೆ ಮತ್ತಷ್ಟು ಸಂಕಷ್ಟ ಶುರು

ಪ್ರಜ್ವಲ್‌ ರೇವಣ್ಣ ವಿಚಾರದಲ್ಲಿ ಪ್ರಕರಣವು ರಾಜಕೀಯವಾಗಿ ಭಾರಿ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಮತ್ತೊಂದು ದಾಳ ಉರುಳಿಸಿದ್ದಾರೆ. ಪ್ರಜ್ವಲ್‌ ವಿದೇಶದಲ್ಲಿ ಇರುವುದರಿಂದ ಅವರನ್ನು ಬಂಧಿಸಿ ಎಸ್ಐಟಿ ತನಿಖೆಗೆ ಒಪ್ಪಿಸಬೇಕಿದೆ. ಹೀಗಾಗಿ ಅವರ ಡಿಪ್ಲೊಮ್ಯಾಟಿಕ್‌ ಪಾಸ್‌ಪೋರ್ಟ್‌ ಅನ್ನು ಕೇಂದ್ರ ರದ್ದು ಮಾಡಬೇಕು ಎಂದು ಕೋರುವ ಮೂಲಕ ಹೊಸ ದಾಳ ಉರುಳಿಸಿದ್ದಾರೆ. ಈಗ ಕೇಂದ್ರ ಸರ್ಕಾರ ಮುಂದಿನ ಕ್ರಮವನ್ನು ಕೈಗೊಳ್ಳದೇ ಇದ್ದಲ್ಲಿ ಲೋಕಸಭಾ ಚುನಾವಣೆ ಪ್ರಚಾರದ ವೇಳೆ ಅಸ್ತ್ರವನ್ನಾಗಿ ಮಾಡಿಕೊಳ್ಳಲು ತೀರ್ಮಾನಿಸಿದೆ. ಹೀಗಾಗಿ ಕಾಂಗ್ರೆಸ್‌ಗೆ ಅಸ್ತ್ರ ಕೊಡದಿರಲು ಕೇಂದ್ರ ಸರ್ಕಾರವು ಪ್ರಜ್ವಲ್‌ ರೇವಣ್ಣ ಅವರ ಡಿಪ್ಲೊಮ್ಯಾಟಿಕ್‌ ಪಾಸ್‌ಪೋರ್ಟ್‌ ಅನ್ನು ರದ್ದು ಮಾಡುವ ಸಂಭವ ಜಾಸ್ತಿ ಇದೆ ಎನ್ನಲಾಗಿದೆ.

ಇದನ್ನೂ ಓದಿ: Hassan Pen Drive Case: ವಿಚಾರಣೆಗೆ ಹಾಜರಾಗಲು 7 ದಿನ ಸಮಯ ಕೇಳಿದ ಪ್ರಜ್ವಲ್‌; ಶೀಘ್ರ ಸತ್ಯ ಹೊರಬರಲಿದೆ ಎಂದು ಟ್ವೀಟ್‌!

ಡಿಪ್ಲೊಮ್ಯಾಟಿಕ್‌ ಪಾಸ್‌ಪೋರ್ಟ್‌ ರದ್ದಾದರೆ ಕೂಡಲೇ ಬಂಧನ!

ಡಿಪ್ಲೊಮ್ಯಾಟಿಕ್‌ ಪಾಸ್‌ಪೋರ್ಟ್‌ಗೆ ಅಂತಾರಾಷ್ಟ್ರೀಯ ಕಾನೂನಿನ ಮಾನ್ಯತೆ ಇರುತ್ತದೆ. ಇದನ್ನು ಹೊಂದಿರುವವರು ಗಣ್ಯ ವ್ಯಕ್ತಿಗಳಾಗಿರುತ್ತಾರೆ. ಹೀಗಾಗಿ ಅವರು ಯಾವ ದೇಶದಲ್ಲಿದ್ದರೂ ಆತಿಥೇಯ ರಾಷ್ಟ್ರಗಳಲ್ಲಿ ಬಂಧನ ಮಾಡುವುದು, ವಶಕ್ಕೆ ತೆಗೆದುಕೊಳ್ಳುವಂತಹ ಕ್ರಮಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಒಂದು ವೇಳೆ ಕೇಂದ್ರ ಸರ್ಕಾರವು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮೂಲಕ ಅಂತಹ ವ್ಯಕ್ತಿಯ ಡಿಪ್ಲೊಮ್ಯಾಟಿಕ್‌ ಪಾಸ್‌ಪೋರ್ಟ್‌ ಅನ್ನು ರದ್ದು ಮಾಡಿ, ಕ್ರಮಕ್ಕೆ ಆ ರಾಷ್ಟ್ರಗಳಿಗೆ ಮನವಿ ಮಾಡಿದಲ್ಲಿ ಬಂಧನ ಸಾಧ್ಯವಿದೆ. ಹೀಗಾಗಿ ಕೇಂದ್ರ ಸರ್ಕಾರ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಪ್ರಜ್ವಲ್‌ ಭವಿಷ್ಯ ನಿಂತಿದೆ.

Continue Reading

ಬೆಂಗಳೂರು

Blackmail Case: ಸಹಪಾಠಿಯಿಂದ 35 ಲಕ್ಷ ರೂ. ಚಿನ್ನಾಭರಣ ದೋಚಿದ ಇಬ್ಬರು ವಿದ್ಯಾರ್ಥಿಗಳು ಸೇರಿ ನಾಲ್ವರ ಬಂಧನ

Blackmail Case: ಬೆಂಗಳೂರಿನಲ್ಲಿ ಸಹಪಾಠಿಗೆ ಬ್ಲ್ಯಾಕ್ ಮೇಲ್ ಮಾಡಿ 35 ಲಕ್ಷ ರೂ.ಮೌಲ್ಯದ ಚಿನ್ನಾಭರಣ ದೋಚಿದ ಆರೋಪದಲ್ಲಿ ಇಬ್ಬರು ವಿದ್ಯಾರ್ಥಿಗಳು ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

VISTARANEWS.COM


on

Blackmail Case
Koo

ಬೆಂಗಳೂರು: ಸಹಪಾಠಿಗೆ ಬ್ಲ್ಯಾಕ್ ಮೇಲ್ (Blackmail Case) ಮಾಡಿ 35 ಲಕ್ಷ ರೂ.ಮೌಲ್ಯದ 700 ಗ್ರಾಂ ಚಿನ್ನಾಭರಣ ದೋಚಿದ ಆರೋಪದಲ್ಲಿ ನಗರದ ಖಾಸಗಿ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಕೊಪ್ಪಳ ಜಿಲ್ಲೆಯ ಗಂಗಾವತಿಯ ಸಿಬಿಎಸ್ ವೃತ್ತದ ನಿವಾಸಿ ಎಸ್.ಸುನಿಲ್ (30), ಆರ್.ಆರ್.ನಗರದ ವೇಮನ್ ಎನ್, ಕೆಂಗೇರಿ ಸ್ಯಾಟಲೈಟ್ ಟೌನ್ನ ಆರ್.ವಿವೇಕ್ (19) ಬಂಧಿತ ಆರೋಪಿಗಳು. ಇವರು ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದು, ಇಬ್ಬರು ಅಪ್ರಾಪ್ತ ವಿದ್ಯಾರ್ಥಿಗಳನ್ನು ಬಾಲಾಪರಾಧಿಗಳ ಆರೈಕೆಯಲ್ಲಿ ಇರಿಸಲಾಗಿ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಸಿವಿಲ್ ಗುತ್ತಿಗೆದಾರ ಮತ್ತು ಪಶ್ಚಿಮ ಬೆಂಗಳೂರಿನ ನಿವಾಸಿಯೊಬ್ಬರ ಮಗನನ್ನು ಆರು ತಿಂಗಳಿನಿಂದ ಸುಲಿಗೆ ಮಾಡುತ್ತಿದ್ದರು. ಬಂಧಿತರಿಂದ 400 ಗ್ರಾಂ ಚಿನ್ನಾಭರಣ ಹಾಗೂ 23 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. ಇನ್ನು ವಜ್ರದ ಹಾರವನ್ನು ವಶಪಡಿಸಿಕೊಳ್ಳಲಾಗಿಲ್ಲ ಎಂದು ಆರ್.ಆರ್.ನಗರ ಪೊಲೀಸರು ತಿಳಿಸಿದ್ದಾರೆ.

ಬಾಲಕನ ತಂದೆ 2 ವಾರಗಳ ಹಿಂದೆ ನೀಡಿದ ದೂರಿನಲ್ಲಿ, ತನ್ನ ಮಗ ಆನ್‌ಲೈನ್‌ ಗೇಮ್‌ಗಳಿಗೆ ವ್ಯಸನಿಯಾಗಿದ್ದಾನೆ. ಅದರ ಲಾಭವನ್ನು ಹುಡುಗನ ಸಹಪಾಠಿಗಳು ಪಡೆದುಕೊಂಡು, ಅವನನ್ನು ಬ್ಲ್ಯಾಕ್‌ ಮೇಲ್ ಮಾಡಿ, ಆನ್‌ಲೈನ್‌ ಗೇಮ್‌ ಬಗ್ಗೆ ಕುಟುಂಬಕ್ಕೆ ತಿಳಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಇದರಿಂದ ಮಗ ಹೆದರಿ, ಚಿನ್ನದ ಆಭರಣ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಸಹಪಾಟಿಗಳಿಗೆ ಹಸ್ತಾಂತರಿಸಿದ್ದಾನೆ.

ಇದನ್ನೂ ಓದಿ | Assault Case: ಶವದ ಮುಂದೆ ಎರಡು ಗುಂಪುಗಳ ಹೊಡಿಬಡಿ; 12 ಮಂದಿ ಅರೆಸ್ಟ್‌

ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಎರಡನೇ ಮಗಳು ಮತ್ತು ಆಕೆಯ ಪತಿಗೆ ಸೇರಿದ ವಸ್ತುಗಳು ಕಾಣೆಯಾದಾಗ ಕಳ್ಳತನ ಬೆಳಕಿಗೆ ಬಂದಿದ್ದರಿಂದ, ಬಾಲಕನ ತಂದೆ ಆರ್.ಆರ್.ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹೀಗಾಗಿ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಪೊಲೀಸರು ಪೊಲೀಸರು ಬಂಧಿಸಿದ್ದಾರೆ.

ಅಂಬೇಡ್ಕರ್‌ ಪ್ರತಿಮೆ ಅಪಮಾನ ಕೇಸ್‌; ಜಾಮೀನು ಪಡೆದ ಆರೋಪಿ ಮನೆಗೆ ಕಲ್ಲು ತೂರಾಟ

Ambedkar Statue in kalaburagi news

ಕಲಬುರಗಿ: ಕಳೆದ ಜನವರಿಯಲ್ಲಿ ಕಲಬುರಗಿ ನಗರದ (Kalaburagi News) ಕೊಟನೂರ (ಡಿ) ಬಡಾವಣೆಯಲ್ಲಿ ಡಾ. ಬಿ.ಆರ್‌. ಅಂಬೇಡ್ಕರ್ ಪ್ರತಿಮೆಗೆ (Ambedkar statue) ಅಪಮಾನ ಮಾಡಲಾಗಿತ್ತು. ಪ್ರತಿಮೆಗೆ ಅಪಮಾನ ಮಾಡಿದ ಆರೋಪಿ ಸಂಗಮೇಶ್‌ ಎಂಬಾತನಿಗೆ ನಿನ್ನೆ ಮಂಗಳವಾರ ಕೋರ್ಟ್‌ನಿಂದ ಜಾಮೀನು ಮಂಜೂರು ಆಗಿತ್ತು. ಜಾಮೀನಿನ‌ ಮೇಲೆ ಹೊರ ಬಂದಿದ್ದ ಸಂಗಮೇಶ್‌ ಮನೆ ಮೇಲೆ ಮಂಗಳವಾರ ರಾತ್ರಿ 12 ಗಂಟೆಗೆ ಸುಮಾರು 50 ರಿಂದ 60 ಜನರ ತಂಡವೊಂದು ದಿಢೀರ್‌ ದಾಳಿ ಮಾಡಿದೆ.

ಆರೋಪಿ ಕುಟುಂಬಸ್ಥರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಕಿಡಿಗೇಡಿಗಳು ದಾಂಧಲೆ ನಡೆಸಿದ್ದಾರೆ. ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿ ಬೈಕ್ ಜಖಂಗೊಳಿಸಿದ್ದಾರೆ. ಆರೋಪಿ ಸಂಗಮೇಶ್‌ ಮನೆಯಲ್ಲದೇ ಬಡಾವಣೆಯಲ್ಲಿರುವ ಇತರೆ ಮನೆಗಳ ಮೇಲೂ ದಾಳಿ ಮಾಡಿದ್ದಾರೆ. ಹಲವು ಬೈಕ್‌ಗಳ ಜಖಂಗೊಳಿಸಿ, ಕಾರುಗಳ ಗಾಜು ಪುಡಿ ಪುಡಿ ಮಾಡಿದ್ದಾರೆ.

ಇನ್ನೂ ಕಿಡಿಗೇಡಿಗಳ ದಾಳಿಗೆ ವೀರಶೈವ-ಲಿಂಗಾಯತ ಜನರು ತೀವ್ರ ಆಕ್ರೋಶವನ್ನು ಹೊರಹಾಕಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು, ಇಲ್ಲವಾದಲ್ಲಿ ಕಲಬುರಗಿ ಬಂದ್‌ಗೆ ಕರೆ ಕೊಡಲಾಗುವುದು ಎಂದು ಎಚ್ಚರಿಸಿದ್ದಾರೆ. ಸದ್ಯ ಕಲಬುರಗಿ ವಿವಿ ಠಾಣಾ ವ್ಯಾಪ್ತಿಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಹೆದ್ದಾರಿ ಬಂದ್‌ ಮಾಡಿ ಪ್ರತಿಭಟನೆ

ಕಿಡಿಗೇಡಿಗಳು ಮನೆ ಮೇಲೆ ‌ದಾಳಿ ಮಾಡಿದ್ದನ್ನು ಖಂಡಿಸಿ ವೀರಶೈವ ಲಿಂಗಾಯ ಸಮುದಾಯದಿಂದ ಕಲಬುರಗಿ ಬೆಂಗಳೂರು ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಯಿತು. ರಸ್ತೆಯಲ್ಲಿ ಟೈರ್‌ಗೆ ಬೆಂಕಿ ‌ಹಚ್ಚಿ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಆಗಮಿಸುವಂತೆ ಒತ್ತಾಯಿಸಿದರು. ಇನ್ನೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮನವಿ ಮಾಡಿದರು.

ದಾಳಿ ಖಂಡಿಸಿ ಸಂಸದ ಡಾ.ಉಮೇಶ್ ಜಾಧವ್ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ, ಜಿಲ್ಲಾಧಿಕಾರಿ ‌ಫೌಜಿಯಾ ತರನ್ನುಮ್ ಆಗಮಿಸುವಂತೆ ಪಟ್ಟು ಹಿಡಿದರು. ಬಳಿಕ ಘಟನಾ ಸ್ಥಳಕ್ಕೆ ಆಗಮಿಸಿದ ನಗರ ಪೊಲೀಸ್ ಆಯುಕ್ತ ಆರ್. ಚೇತನ್ ಹಾಗೂ ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆಯಿತು. ಪರಿಸ್ಥಿತಿ ಇನ್ನಷ್ಟು ಗಂಭೀರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಹಿನ್ನೆಲೆಯಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

ಶಾಸಕ ಅಲ್ಲಮಪ್ರಭು ಪಾಟೀಲ್ ಭೇಟಿ ನೀಡಿದ್ದು ಪ್ರತಿಭಟನಕಾರರ ಮನವೊಲಿಕೆ ಮಾಡಲು ಮುಂದಾದರು. ಆರೋಪಿ ಸಂಗಮೇಶ್ ಮನೆಗೆ ನುಗ್ಗಿ ದಾಂಧಲೆ‌ ಹಾಗೂ ಹಲ್ಲೆ ವಿಚಾರವಾಗಿ ಪ್ರತಿಕ್ರಿಯಿಸಿದ ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ್, ಕಾನೂನು ಪ್ರಕಾರ ಆರೋಪಿಗೆ ಶಿಕ್ಷೆಯಾಗಿದೆ. ಮೂರು ತಿಂಗಳು ಸಜೆಯಾಗಿತ್ತು, ಜಾಮೀನು ಪಡೆದು ಹೊರ ಬಂದಿದ್ದಾನೆ. ಶಿಕ್ಷೆ ಅನುಭವಿಸಿ ಬಂದ ಮೇಲೆ ಹಲ್ಲೆ ಮಾಡಿದ್ದು ತಪ್ಪು, ಯಾರೆ ಆಗಿರಲಿ ಅವರ ಮೇಲೆ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ಕೆಲವರು ಇದನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ. ಹಲ್ಲೆ ಮಾಡಿದವರ ಮೇಲೆ ಕ್ರಮ ಕೈಗೊಳ್ಳುತ್ತಾರೆ ಎಂದರು.

ಇದನ್ನೂ ಓದಿ: Suspicious Death : ಗೃಹಿಣಿಯ ಕುತ್ತಿಗೆಯಲ್ಲಿತ್ತು ರಕ್ತ ಹೆಪ್ಪುಗಟ್ಟಿರುವ ಕಲೆ; ಈ ಸಾವು ಕೊಲೆಯೋ, ಆತ್ಮಹತ್ಯೆಯೋ

ಏನಿದು ಪ್ರಕರಣ

ಕಳೆದ ಜನವರಿ 22ರ ರಾತ್ರಿ ಕಲಬುರಗಿಯ ಕೋಟನೂರ ಬಡಾವಣೆಯಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ (Ambedkar Statue) ಯಾರೋ ದುಷ್ಕರ್ಮಿಗಳು ಅಪಮಾನ (Desecration of Ambedkar statue) ಮಾಡಿದ್ದರಿಂದ ಈ ಭಾಗದಲ್ಲಿ ಆಕ್ರೋಶ ಭುಗಿಲೆದಿತ್ತು. ಅಂಬೇಡ್ಕರ್‌ ಪ್ರತಿಮೆಗೆ ಚಪ್ಪಲಿ ಹಾರ ಹಾಕಿದ್ದರಿಂದ ಆಕ್ರೋಶಗೊಂಡಿದ್ದ ದಲಿತ ಸಮುದಾಯದವರು ರಸ್ತೆ ತಡೆ (Road block in kalaburagi) ನಡೆಸಿ ಪ್ರತಿಭಟನೆ ನಡೆಸಿದ್ದರು. ಕಲಬುರಗಿಯ ಒಂದು ಪೆಟ್ರೋಲ್‌ ಪಂಪ್‌ಗೆ ಹಾನಿ ಮಾಡಲಾಗಿತ್ತು.

Ambedkar Statue
ಘಟನೆಯಿಂದ ರೊಚ್ಚಿಗೆದ್ದು ಪ್ರತಿಭಟನೆ ನಡೆಸಿದ್ದ ದಲಿತ ಸಮುದಾಯ

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕೋಟನೂರ ಬಡಾವಣೆಯಲ್ಲಿರುವ ಪ್ರತಿಮೆಗೆ ಚಪ್ಪಲಿ ಹಾರ ಹಾಕಿರುವುದು ಮರುದಿನ ಬೆಳಗ್ಗೆ ಗಮನಕ್ಕೆ ಬಂದಿತ್ತು. ಇದನ್ನು ನೋಡಿ ಆಕ್ರೋಶಿತರಾದ ಜನರು ಪ್ರತಿಭಟನೆಗೆ ಇಳಿದರು. ರಸ್ತೆ ತಡೆಯ ವಿಷಯ ತಿಳಿಯುತ್ತಲೇ ಪೊಲೀಸರು ಆಗಮಿಸಿದರು. ಸ್ಥಳಕ್ಕೆ ಆಗಮಿಸಿದ ಡಿಸಿಪಿ ಕನ್ನಿಕಾ ಸಿಕ್ರಿವಾಲ್‌ ಅವರು ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಿದರು. ವಿಶ್ವವಿದ್ಯಾಲಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆಯನ್ನು ನಿಯಂತ್ರಿಸಲು ಪೊಲೀಸರು ಒಂದು ಹಂತಕ್ಕೆ ಸಫಲರಾದರೂ ಅದು ಬೇರೆ ಬೇರೆ ಭಾಗಗಳಿಗೆ ಹರಡಿತು.

Ambedkar statue in kalaburagi
ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದ ದಲಿತ ಸಮುದಾಯ
Continue Reading
Advertisement
Chaitra Achar
ಫ್ಯಾಷನ್14 mins ago

Chaitra Achar: ನೋಡುಗರ ಹುಬ್ಬೇರಿಸಿದ ನಟಿ ಚೈತ್ರಾ ಆಚಾರ್‌ ಪಾರದರ್ಶಕ ನಿಟ್‌ವೇರ್

Veena kashappanavar
ಕರ್ನಾಟಕ39 mins ago

Veena Kashappanavar: ರಾಜಕೀಯದಿಂದ ದೂರ ಸರಿದ್ರಾ ವೀಣಾ ಕಾಶಪ್ಪನವರ್‌? ಭಾವನಾತ್ಮಕ ಪೋಸ್ಟ್‌ ಹಾಕಿದ ಕೈ ನಾಯಕಿ!

Mayank Yadav
ಕ್ರೀಡೆ50 mins ago

Mayank Yadav: ಗಾಯಾಳು ಮಾಯಾಂಕ್‌ ಯಾದವ್‌ ಐಪಿಎಲ್​ನಿಂದ ಔಟ್​?

Bomb threat
ದೇಶ1 hour ago

Bomb Threat: ದೆಹಲಿ ಶಾಲೆಗಳಿಗೆ ಬಾಂಬ್‌ ಬೆದರಿಕೆ; ಇ-ಮೇಲ್‌ ಮಾಡಿದವ 16 ವರ್ಷದ ಪೋರ?

Saree Fashion
ಫ್ಯಾಷನ್1 hour ago

Saree Fashion: ಸೀರೆಯ ಹೊಸ ಟ್ರೆಂಡ್‌ ಬಗ್ಗೆ ರ‍್ಯಾಪರ್‌ ಇಶಾನಿಯ ವ್ಯಾಖ್ಯಾನ ಇದು!

karnataka weather Forecast
ಮಳೆ1 hour ago

Karnataka Weather : ಮಳೆಗಾಗಿ ಕಪ್ಪೆಗಳಿಗೆ ಮದುವೆ; ಶಾಖದ ಹೊಡೆತಕ್ಕೆ 6 ಜಿಲ್ಲೆಗಳಿಗೆ ರೆಡ್‌ ಅಲರ್ಟ್‌

Lottery
ವೈರಲ್ ನ್ಯೂಸ್1 hour ago

Lottery: ಕೋಟಿ ರೂ. ಲಾಟರಿ ಗೆದ್ದಿದ್ದೀರಿ ಎಂದರೆ, ಸ್ಕ್ಯಾಮ್‌ ಎಂದು ಫೋನಿಟ್ಟ ಮಹಿಳೆ; ಕೊನೆಗೆ ದುಡ್ಡು ಸಿಕ್ತಾ?

Prajwal Revanna Case What is diplomatic passport
ಹಾಸನ2 hours ago

Prajwal Revanna Case: ಏನಿದು ಡಿಪ್ಲೊಮ್ಯಾಟಿಕ್‌ ಪಾಸ್‌ಪೋರ್ಟ್‌? ಕೇಂದ್ರ ರದ್ದು ಮಾಡಿದರೆ ಪ್ರಜ್ವಲ್‌ ರೇವಣ್ಣ ಅರೆಸ್ಟ್!

Money Guide
ಮನಿ-ಗೈಡ್2 hours ago

Money Guide: ಹೆಣ್ಣು ಮಕ್ಕಳ ಶಿಕ್ಷಣಕ್ಕೆ ನೆರವು ನೀಡುವ ಯೋಜನೆಗಳಿವು

T20 World Cup 2024
ಕ್ರೀಡೆ2 hours ago

T20 World Cup 2024: ಡ್ರಾಪ್ -ಇನ್ ಪಿಚ್ ಅಳವಡಿಕೆ ಕಾರ್ಯ ಆರಂಭಿಸಿದ ಐಸಿಸಿ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for April 30 2024
ಭವಿಷ್ಯ2 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20242 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20242 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Narendra Modi
Lok Sabha Election 20243 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20243 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20243 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20243 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest3 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

ಟ್ರೆಂಡಿಂಗ್‌