Artificial Nail fashion | ಉಗುರಿನ ಅಂದಕ್ಕೂ ಬಂತು ಡಿಸೈನರ್ ಆರ್ಟಿಫಿಷಿಯಲ್‌ ನೇಲ್ಸ್‌ - Vistara News

ಫ್ಯಾಷನ್

Artificial Nail fashion | ಉಗುರಿನ ಅಂದಕ್ಕೂ ಬಂತು ಡಿಸೈನರ್ ಆರ್ಟಿಫಿಷಿಯಲ್‌ ನೇಲ್ಸ್‌

ತಾತ್ಕಾಲಿಕವಾಗಿ ಕೈ ಉಗುರುಗಳ ಸೌಂದರ್ಯವನ್ನು ಹೆಚ್ಚಿಸಲು ಮಾರುಕಟ್ಟೆಯಲ್ಲಿ ನಾನಾ ಬಗೆಯ ವಿನ್ಯಾಸವನ್ನೊಳಗೊಂಡ ಆರ್ಟಿಫಿಶಿಯಲ್‌ ನೇಲ್‌ ಕಿಟ್‌ಗಳು ಬಂದಿವೆ. ಈ ಬಗ್ಗೆ ಇಲ್ಲಿದೆ ವಿವರ.

VISTARANEWS.COM


on

Artificial Nail fashion
ಚಿತ್ರಕೃಪೆ : ಪಿಕ್ಸೆಲ್‌
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಕೈ ಬೆರಳಿನ ಒಂದೊಂದು ಉಗುರುಗಳ ಅಂದವನ್ನು ಹೆಚ್ಚಿಸುವ ನಾನಾ ಬಗೆಯ ಆರ್ಟಿಫಿಶಿಯಲ್‌ ನೇಲ್‌ ಕಿಟ್‌ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಊಹೆಗೂ ಮೀರಿದ ಚಿತ್ರ-ವಿಚಿತ್ರ ಡಿಸೈನ್‌ನಲ್ಲಿ ಇವು ಲಭ್ಯವಿದ್ದು, ಹೆಣ್ಣುಮಕ್ಕಳನ್ನು ಆಕರ್ಷಿಸಿವೆ.

Artificial Nail fashion

ನಿಮ್ಮ ಉಗುರುಗಳು ಸುಂದರವಾಗಿಲ್ಲವೇ! ಆಗಾಗ ಮುರಿದು ಹೋಗುತ್ತದೆಯೇ? ಕಾರ್ಯಕ್ರಮಗಳಿಗೆ ಹೋಗುವಾಗ ಇವನ್ನು ಸುಂದರವಾಗಿ ಬಿಂಬಿಸಬೇಕು ಎಂದನಿಸುತ್ತದೆಯೇ? ಹಾಗಾದಲ್ಲಿ ಯೋಚನೆ ಬಿಡಿ. ನಾನಾ ವಿನ್ಯಾಸದಲ್ಲಿ ಲಭ್ಯವಿರುವ ಆರ್ಟಿಫಿಷಿಯಲ್‌ ನೇಲ್ಸ್ ಕಿಟ್‌ ಕೊಳ್ಳಿ. ಒಂದೊಂದಾಗಿ ಉಗುರುಗಳಿಗೆ ಅಂಟಿಸಿ. ನಂತರ ನೀವೇ ನಂಬಲಾರದಷ್ಟು ಸುಂದರ ತಾತ್ಕಾಲಿಕ ಉಗುರುಗಳು ನಿಮ್ಮದಾಗುತ್ತವೆ ಎನ್ನುತ್ತಾರೆ ನೇಲ್‌ ಕಿಟ್‌ ಮಾರಾಟಗಾರರು.

ಏನಿದು ಆರ್ಟಿಫಿಷಿಯಲ್‌ ನೇಲ್ಸ್‌?

ನಮ್ಮ ನೈಜ ಉಗುರಿನ ಮೇಲೆ ತಾತ್ಕಾಲಿಕವಾಗಿ ಅಂಟಿಸಬಹುದಾದ ಕೃತಕ ಉಗುರುಗಳಿವು. ನೇಲ್‌ ಕಿಟ್‌ನಲ್ಲಿ ದೊರೆಯುವ ಇವನ್ನು ಗಮ್‌ ಬಳಸಿ, ಉಗುರಿನ ಮೇಲೆ ಅಂಟಿಸಬೇಕಾಗುತ್ತದೆ. ಹಾಗಾಗಿ ಇವನ್ನು ಪ್ರೆಸ್‌ ಆನ್‌ ನೇಲ್ಸ್‌ ಎಂದು ಕೂಡ ಹೇಳಲಾಗುತ್ತದೆ. ಉಗುರುಗಳಿಗೆ ಡಿಸೈನ್‌ ಮಾಡಿಸಲು ನಮಗೆ ಸಾಧ್ಯವಾಗದಿದ್ದಾಗ ಅಥವಾ ನೇಲ್‌ ಬಾರ್‌ಗೆ ಹೆಚ್ಚು ಹಣ ಸುರಿಯಲು ಸಾಧ್ಯವಿಲ್ಲದಿದ್ದಾಗ ಈ ಪ್ರೆಸ್‌ ಆನ್‌ ನೇಲ್ಸ್‌ ಖರೀದಿಸಿ ಅಂಟಿಸಿಕೊಂಡು ಸಂತಸ ಪಡಬಹುದು. ಇವು ಕೂಡ ನೋಡಲು ಆಕರ್ಷಕವಾಗಿ ಕಾಣುತ್ತವೆ. ದುಬಾರಿಯೂ ಅಲ್ಲ ಎನ್ನುತ್ತಾರೆ ನೇಲ್‌ ಡಿಸೈನರ್ಸ್‌.

Artificial Nail fashion

ಪ್ರೆಸ್‌ ಆನ್‌ ನೇಲ್ಸ್‌ ಎಲ್ಲೆಡೆ ಲಭ್ಯ

ಸಾಮಾನ್ಯ ಫ್ಯಾನ್ಸಿ ಶಾಫ್‌ಗಳಲ್ಲೂ ಇವು ಇದೀಗ ಲಭ್ಯ. ಆರ್ಟಿಫಿಶಿಯಲ್‌ ನೇಲ್ಸ್‌ ಎಂದು ಕೇಳಿ ಪಡೆದರಾಯಿತು. ಇದರೊಂದಿಗೆ ಅಂಟಿಸಲು ಗಮ್‌ ಕೂಡ ದೊರೆಯುತ್ತದೆ. ನೀವು ಧರಿಸುವ ಡಿಸೈನರ್‌ವೇರ್‌ಗೆ ಮ್ಯಾಚ್‌ ಆಗುವ ನೇಲ್‌ ಕಲರ್‌ ಹಾಗೂ ಡಿಸೈನ್‌ಗಳಲ್ಲೂ ಇವು ದೊರೆಯುತ್ತವೆ. ಹುಡುಕಬೇಕಷ್ಟೇ!

ಟ್ರೆಂಡಿಯಾಗಿರುವ ನೇಲ್‌ ಡಿಸೈನ್‌ಗಳು

ಮನೆಯಲ್ಲಿ ಉಗುರಿಗೆ ಮಾಡಲಾಗದ ಡಿಸೈನ್‌ಗಳು ಈ ಪ್ರೆಸ್‌ ಆನ್‌ ನೇಲ್‌ ಕಿಟ್‌ನಲ್ಲಿ ದೊರೆಯುತ್ತವೆ. ನೇಲ್‌ ಡಿಸೈನಿಂಗ್‌ ಕೂಡ ಒಂದು ಕಲೆ. ಊಹೆಗೂ ಮೀರಿದ ನಾನಾ ಡಿಸೈನ್‌ಗಳನ್ನು ಸೂಕ್ಮವಾಗಿ ಈ ಕೃತಕ ನೇಲ್‌ಗಳ ಮೇಲೆ ಚಿತ್ರಿಸಲಾಗಿರುತ್ತದೆ. ಇಂತಹ ಡಿಸೈನ್‌ ಇರುವ ಕೃತಕ ನೇಲ್‌ಗಳು ಇಂದು ಟ್ರೆಂಡಿಯಾಗಿವೆ.

Artificial Nail fashion

ಪ್ರೆಸ್‌ ಆನ್‌ ನೇಲ್ಸ್‌ ಪ್ರಿಯರ ಗಮನಕ್ಕಿರಲಿ

ಉಗುರಿಗೆ ಅಂಟಿಸಿದ ನಂತರ ನೀರು ಹೆಚ್ಚು ಸೋಕಿಸಬಾರದು.

ಕೃತಕ ನೇಲ್‌ ಅಂಟಿಸಿದ ಬೆರಳುಗಳಿಂದ ಕೆಲಸ ಮಾಡಿದಲ್ಲಿ ಮುರಿದು ಹೋಗಬಹುದು.

ಒಂದು ಬಾರಿ ಹಚ್ಚಿದಲ್ಲಿ ಸುಮಾರು ೪-೫ ದಿನ ಬಾಳಿಕೆ ಬರುವುದು.

ನಿರ್ವಹಣೆ ಕೊಂಚ ಕಷ್ಟ ಎಂಬುದು ಮೊದಲೇ ತಿಳಿದಿರಲಿ.

ನಿಮ್ಮ ಉಗುರಿನ ಆಕಾರಕ್ಕೆ ತಕ್ಕಂತ ಶೇಪ್‌ ಇರುವುದನ್ನು ಆಯ್ಕೆ ಮಾಡಿ.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ )

ಇದನ್ನೂ ಓದಿ| Gown Fashion | ಪ್ರಿ ವೆಡ್ಡಿಂಗ್‌ ಫೋಟೋಶೂಟ್‌ ಫ್ಯಾಷನ್‌ನಲ್ಲಿ ಕಲರ್‌ಫುಲ್‌ ಗೌನ್‌ಗಳದ್ದೇ ಹವಾ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಫ್ಯಾಷನ್

Ready Saree Fashion Tips: ರೆಡಿ ಸೀರೆ ಪ್ರಿಯರು ಮರೆಯದೇ ಗಮನದಲ್ಲಿಟ್ಟುಕೊಳ್ಳಬೇಕಾದ 5 ಸಂಗತಿಗಳು

ಫಟಾಫಟ್ ಸೀರೆ ಉಡುವ ಯುವತಿಯರ ವಾರ್ಡ್ರೋಬ್‌ ಲಿಸ್ಟ್‌ಗೆ ಇದೀಗ ರೆಡಿ ಸೀರೆಗಳು (Ready Saree Fashion Tips) ಸೇರಲಾರಂಭಿಸಿವೆ. ಹಾಗಾದಲ್ಲಿ, ಈ ಸೀರೆಗಳನ್ನು ಆಯ್ಕೆ ಮಾಡುವುದು ಹೇಗೆ? ಇವುಗಳನ್ನು ಸ್ಟೈಲಿಶ್‌ ಆಗಿ ಸ್ಟೈಲಿಂಗ್‌–ಡ್ರೇಪಿಂಗ್‌ ಮಾಡುವುದು ಹೇಗೆ? ಎಂಬುದರ ಬಗ್ಗೆ ಸೀರೆ ಡ್ರೇಪಿಂಗ್‌ ಸ್ಪೆಷಲಿಸ್ಟ್‌ಗಳು ಇಲ್ಲಿ ತಿಳಿಸಿದ್ದಾರೆ.

VISTARANEWS.COM


on

Ready Saree Fashion Tips
ಚಿತ್ರಕೃಪೆ: ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ರೆಡಿಮೇಡ್‌ ಸೀರೆಗಳು (Ready Saree Fashion Tips) ಇದೀಗ ಯುವತಿಯರನ್ನು ಸೆಳೆದಿದ್ದು, ಲೆಕ್ಕವಿಲ್ಲದಷ್ಟು ಬಗೆಯ ಡಿಸೈನ್‌ನಲ್ಲಿ ಈ ಸೀರೆಗಳು ಸೀರೆ ಲೋಕಕ್ಕೆ ಕಾಲಿಟ್ಟಿವೆ. ಆದರೆ, ಎಲ್ಲಾ ರೆಡಿ ಸೀರೆಗಳು ಒಂದೇ ಬಗೆಯಲ್ಲಿ ಕಾಣಿಸುವುದಿಲ್ಲ. ಒಂದೊಂದು ಡಿಫರೆಂಟ್‌ ಲುಕ್‌ ನೀಡುತ್ತವೆ. ಹಾಗಾಗಿ ರೆಡಿ ಸೀರೆಗಳನ್ನು ಖರೀದಿಸುವಾಗ ಅವುಗಳ ವಿನ್ಯಾಸ ನೋಡಿ ಆಯ್ಕೆ ಮಾಡುವುದು ಹಾಗೂ ನಂತರ ಸ್ಟೈಲಿಂಗ್‌-ಡ್ರೇಪಿಂಗ್‌ ಮಾಡುವ ರೀತಿ-ನೀತಿ ಪಾಲಿಸುವುದು ಮುಖ್ಯ ಎನ್ನುತ್ತಾರೆ ಸೀರೆ ಡ್ರೇಪರ್‌ ನವನೀತಾ.
ಹೌದು, ಇಂದು ಫಟಾಫಟ್ ಆಗಿ ಸೀರೆ ಉಡುವ ಯುವತಿಯರ ವಾರ್ಡ್ರೋಬ್‌ ಲಿಸ್ಟ್‌ಗೆ ಬಗೆಬಗೆಯ ರೆಡಿಮೇಡ್‌ ಸೀರೆಗಳು ದಾಳಿ ಇಡಲಾರಂಭಿಸಿವೆ. ಒಂದಕ್ಕಿಂತ ಒಂದು ಆಕರ್ಷಕ ವಿನ್ಯಾಸದಲ್ಲಿ ದೊರೆಯುತ್ತಿವೆ. ಆದರೆ, ಈ ಸೀರೆಗಳನ್ನು ಖರೀದಿಸುವಾಗ ಮಾತ್ರ ಒಂದಿಷ್ಟು ಅಂಶಗಳನ್ನು ಗಮನದಲ್ಲಿಟ್ಟುಕೊಂಡಲ್ಲಿ ಕೊಟ್ಟ ಬೆಲೆಗೆ ತಕ್ಕನಾಗಿ ಉಡಬಹುದು ಹಾಗೂ ನಾನಾ ಸ್ಟೈಲಿಂಗ್‌ನಲ್ಲಿ ಡ್ರೇಪಿಂಗ್‌ ಮಾಡಿ ಆಕರ್ಷಕವಾಗಿ ಕಾಣಿಸಬಹುದು ಎನ್ನುವ ಸೀರೆ ಡ್ರೇಪರ್ ಮೋಹಿನಿ ಒಂದಿಷ್ಟು ಐಡಿಯಾಗಳನ್ನು ನೀಡಿದ್ದಾರೆ.

Ready Saree Fashion Tips

ರೆಡಿಮೇಡ್‌ ಸೀರೆ ಆಯ್ಕೆ

ರೆಡಿಮೇಡ್‌ ಸೀರೆಗಳನ್ನು ಆಯ್ಕೆ ಮಾಡುವಾಗ ಮೊದಲು ಅವು ಟ್ರೆಂಡ್‌ನಲ್ಲಿವೆಯೇ ಎಂಬುದನ್ನು ನೋಡಿಕೊಳ್ಳಬೇಕು. ಇದಕ್ಕಾಗಿ ಬಾಲಿವುಡ್‌ ಸೆಲೆಬ್ರೆಟಿಗಳ ಸೋಷಿಯಲ್‌ ಮೀಡಿಯಾ ಪೋಸ್ಟ್ ನೋಡಿದಲ್ಲಿ ಹೊಸ ಟ್ರೆಂಡಿ ರೆಡಿ ಸೀರೆಗಳ ಬಗ್ಗೆ ತಿಳಿದುಕೊಳ್ಳಬಹುದು.

Ready Saree Fashion Tips

ಪರ್ಸನಾಲಿಟಿಗೆ ತಕ್ಕಂತಿರಲಿ ಸೀರೆ ಆಯ್ಕೆ

ನಿಮ್ಮ ಪರ್ಸನಾಲಿಟಿಗೆ ತಕ್ಕಂತೆ ರೆಡಿ ಸೀರೆ ಆಯ್ಕೆ ಮಾಡಬೇಕು. ಇಲ್ಲವಾದಲ್ಲಿ ಸೆರಗು ಒಂದು ಕಡೆ, ಪಲ್ಲು ಒಂದು ಕಡೆ ಸರಿಯಾಗಿ ಕೂರದಿರಬಹುದು. ಅಲ್ಲದೇ, ಸ್ಲಿಮ್‌ ಇರುವವರ ರೆಡಿ ಸೀರೆ ದಪ್ಪ ಇರುವವರಿಗೆ ಆಗದಿರಬಹುದು. ಹಾಗಾಗಿ ಈ ಸೀರೆಗಳನ್ನು ಉಡುವವರ ಪರ್ಸನಾಲಿಟಿಗೆ ತಕ್ಕಂತೆ ಆಯ್ಕೆ ಮಾಡಬೇಕು.

ಇಂಡೋ-ವೆಸ್ಟರ್ನ್‌ ರೆಡಿ ಸೀರೆ ಆಯ್ಕೆ

ಬಹುತೇಕ ರೆಡಿ ಸೀರೆಗಳು ಇಂಡೋ–ವೆಸ್ಟರ್ನ್ ಲುಕ್‌ ನೀಡುತ್ತವೆ. ಟ್ರೆಡಿಷನಲ್‌ ಲುಕ್‌ ನೀಡುವ ರೆಡಿ ಸೀರೆಗಳು ಹೆಚ್ಚಿನ ಡಿಸೈನ್‌ನಲ್ಲಿ ದೊರೆಯುವುದಿಲ್ಲ. ಹಾಗಾಗಿ ಆದಷ್ಟೂ ಟ್ರೆಡಿಷನಲ್‌ ಸೀರೆಗಳನ್ನು ರೆಡಿಮೇಡ್‌ ಆಗಿ ಖರೀದಿಸದಿರಿ. ಬದಲಿಗೆ ವೆಸ್ಟರ್ನ್‌ ಲುಕ್‌ ನೀಡುವಂತಹದ್ದನ್ನೇ ಸೆಲೆಕ್ಟ್‌ ಮಾಡಿ.

Ready Saree Fashion Tips

ಸೀರೆ ಡ್ರೇಪಿಂಗ್‌ಗೆ ಪ್ರಾಮುಖ್ಯತೆ

ಸೀರೆ ಖರೀದಿಸುವಾಗ ಮೊದಲೇ ನೀವು ಆಯ್ಕೆ ಮಾಡುವ ರೆಡಿ ಸೀರೆ ಹೇಗೆಲ್ಲಾ ಉಡಬಹುದು ಎಂಬುದನ್ನು ಮೊದಲೇ ತಿಳಿದುಕೊಳ್ಳಿ. ಎಲ್ಲದಕ್ಕಿಂತ ಹೆಚ್ಚಾಗಿ, ತೀರಾ ಸಿಂಪಲ್‌ ಆಗಿ ಉಡುವುದಾದಲ್ಲಿ ರೆಡಿ ಸೀರೆ ಖರೀದಿಸುವುದೇ ಬೇಕಾಗಿಲ್ಲ. ಕೆಲವು ಮೂರ್ನಾಲ್ಕು ಶೈಲಿಯಲ್ಲಿ ಡ್ರೇಪಿಂಗ್‌ ಮಾಡುವ ರೆಡಿ ಸೀರೆಗಳು ದೊರೆಯುತ್ತವೆ. ಅಂತದ್ದನ್ನೇ ಕೊಳ್ಳಿ. ಆದಷ್ಟೂ ಡ್ರೇಪಿಂಗ್‌ಗೆ ಪ್ರಾಮುಖ್ಯತೆ ನೀಡಿ.

ಇದನ್ನೂ ಓದಿ: Wedding Jewel Fashion: ವೆಡ್ಡಿಂಗ್‌ ಜ್ಯುವೆಲ್‌ ಫ್ಯಾಷನ್‌ನಲ್ಲಿ ಮಹಿಳೆಯರನ್ನು ಸೆಳೆಯುತ್ತಿವೆ ಈ 3 ಟ್ರೆಡಿಷನಲ್‌ ಮಾಟಿಗಳು

ರೆಡಿ ಸೀರೆ ಸ್ಟೈಲಿಂಗ್‌ ಹೀಗಿರಲಿ

ರೆಡಿ ಸೀರೆಗಳ ಸ್ಟೈಲಿಂಗ್‌ ಆಯಾ ಸೀರೆಯ ವಿನ್ಯಾಸಕ್ಕೆ ಮ್ಯಾಚ್‌ ಆಗುವಂತಿರಲಿ. ಉದಾಹರಣೆಗೆ, ಕಾಕ್‌ಟೈಲ್‌ ರೆಡಿ ಸೀರೆ, ಪಾರ್ಟಿವೇರ್‌ ರೆಡಿ ಸೀರೆ, ಗೌನ್‌ ರೆಡಿ ಸೀರೆ, ಲೆಹೆಂಗಾ ರೆಡಿ ಸೀರೆ ಹೀಗೆ ಆಯಾ ಸೀರೆಯ ವಿನ್ಯಾಸಕ್ಕೆ ತಕ್ಕಂತೆ ಸ್ಟೈಲಿಂಗ್‌ ಇರಲಿ. ಹೇರ್‌ಸ್ಟೈಲ್‌ ಸೇರಿದಂತೆ ಮೇಕಪ್‌ ಕೂಡ ಹೊಂದಬೇಕು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading

ಫ್ಯಾಷನ್

Fish Spa Awareness: ಫಿಶ್‌ ಸ್ಪಾಗೂ ಮುನ್ನ ನೂರು ಬಾರಿ ಯೋಚಿಸಿ!

ನೀವು ಫಿಶ್‌ ಸ್ಪಾ ಪ್ರಿಯರೇ? ಕಂಡ ಕಂಡಲ್ಲೆಲ್ಲಾ ಈ ಪೆಡಿಕ್ಯೂರ್‌ ಮಾಡಿಸಿ, ಸಂತಸ ಪಡುತ್ತೀರಾ! ಹಾಗಾದಲ್ಲಿ ಎಚ್ಚರವಹಿಸಿ. ಈ ವಿಧಾನದಿಂದ ನಿಮ್ಮ ಪಾದಗಳಿಗೆ ಕ್ಷಣಕಾಲ ರಿಲ್ಯಾಕ್ಸೆಷನ್‌ ದೊರಕಿದರೂ ನಂತರ ನಿಮಗೆ ತಿಳಿಯದಂತೆಯೇ ಸೋಂಕು ತಗುಲಬಹುದು (Fish Spa Awareness) ಎನ್ನುತ್ತಾರೆ ಸ್ಕಿನ್‌ ಸ್ಪೆಷಲಿಸ್ಟ್‌ಗಳು.

VISTARANEWS.COM


on

Fish Spa awareness
ಚಿತ್ರಕೃಪೆ: ಇನ್‌ಸ್ಟಾಗ್ರಾಮ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ನೀವು ಫಿಶ್‌ ಸ್ಪಾ ಪ್ರಿಯರೇ? ಎಲ್ಲಾದರೂ ಫಿಶ್‌ ಸ್ಪಾ ಕಂಡಾಕ್ಷಣ ನಿಮ್ಮ ಪಾದಾರವಿಂದಗಳನ್ನು ಮೀನುಗಳಿಗೆರುವ ನೀರಿನ ಟ್ಯಾಂಕ್‌ನಲ್ಲಿಟ್ಟು, ನ್ಯಾಚುರಲ್‌ ಪೆಡಿಕ್ಯೂರ್‌ ಇದು ಎಂದು ಸಂತಸ ಪಡುತ್ತೀರಾ! ಹಾಗಾದಲ್ಲಿ, ಇದಕ್ಕೂ ಮುನ್ನ, ಒಮ್ಮೆ ಈ ಲೇಖನ ಓದಿ ಬಿಡಿ (Fish Spa Awareness) ಎನ್ನುತ್ತಾರೆ ಸ್ಕಿನ್‌ ಸ್ಪೆಷಲಿಸ್ಟ್‌ಗಳು.

Fish Spa awareness

ಸ್ವಚ್ಛತೆಗೆ ಆದ್ಯತೆ ನೀಡಿ

ಕೆಲವು ಮಾಲ್‌ಗಳಲ್ಲಿ , ರೆಸಾರ್ಟ್‌ಗಳಲ್ಲಿ, ಎಕ್ಸಿಬೀಷನ್‌ಗಳಲ್ಲಿ, ಜಾತ್ರೆ, ವಸ್ತು ಪ್ರದರ್ಶನಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಅತಿ ಕಡಿಮೆ ಬೆಲೆಗೆ ಫಿಶ್‌ ಸ್ಪಾ ಮಾಡಿಸಿಕೊಳ್ಳಿ ಎಂಬ ನಾಮಫಲಕ ತಗುಲಿ ಹಾಕಿಕೊಂಡಿರುವುದನ್ನು ನಾವು ನೋಡಿರುತ್ತೇವೆ. ಒಂದೇ ಉದ್ದದ ಟ್ಯಾಂಕ್‌ನಲ್ಲಿ ನಾಲ್ಕೈದು ಮಂದಿ ಕಾಲು ಇಳೆ ಬಿಟ್ಟು, ಆರಾಮವಾಗಿ ರಿಲ್ಯಾಕ್ಸ್ ಮಾಡುತ್ತಿರುವುದನ್ನು ಕಾಣುತ್ತಿರುತ್ತೇವೆ. ಅರ್ಧ ಗಂಟೆ, ಒಂದು ಗಂಟೆಗೆ ಇಂತಿಷ್ಟು ಎಂದು ಕೂಲಾಗಿ ಸ್ಪಾ ಟ್ರೀಟ್‌ಮೆಂಟ್‌ ಪಡೆಯುವುದನ್ನು ಕಣ್ಣಾರೆ ಕಂಡಿರುತ್ತೇವೆ. ಆದರೆ, ಇಂತಹ ಆಮಿಷಕ್ಕೆ ನೀವು ಮನಸೋಲಬೇಡಿ. ಕಡಿಮೆ ಬೆಲೆಯಲ್ಲಿ ಫಿಶ್‌ ಸ್ಪಾ ಸಿಗುತ್ತದಲ್ಲ! ಎಂದು ಮುಂದಾಗಬೇಡಿ ಎನ್ನುತ್ತಾರೆ ಸ್ಕಿನ್‌ ಸ್ಪೆಷಲಿಸ್ಟ್‌ಗಳು. ಇನ್ನು, ಸ್ಪಾಗೆ ನೀವು ಒಳಗಾಗಲೇ ಬೇಕಿದ್ದಲ್ಲಿ ಮೊದಲು ಅಲ್ಲಿನ ವಾತಾವರಣ ಹಾಗೂ ಟ್ಯಾಂಕ್‌ ಸ್ವಚ್ಛತೆಗೆ ಮಾನ್ಯತೆ ನೀಡಿರುವುದನ್ನು ನೋಡಿ ಮುಂದುವರೆಯಿರಿ ಎಂದು ಎಚ್ಚರಿಸುತ್ತಾರೆ.

Fish Spa awareness

ನಿಮಗೆ ಇದು ಗೊತ್ತೇ!

ಸಾಮಾನ್ಯವಾಗಿ ಫಿಶ್‌ ಸ್ಪಾಗಳಲ್ಲಿ ಡೆಡ್‌ ಸ್ಕಿನ್‌ ತಿನ್ನುವ ಗಾರ್ರಾ ರುಫಾ ಮೀನುಗಳನ್ನು ಬಳಸಲಾಗುತ್ತದೆ. ಇಲ್ಲಿ ಬಳಸುವ ನೀರಿನಿಂದ ಅತಿ ಸುಲಭವಾಗಿ ಬ್ಯಾಕ್ಟಿರಿಯಾ ಹಾಗೂ ಮೈಕ್ರೋ ವೈರಸ್‌ಗಳು ನಿಮ್ಮ ದೇಹವನ್ನು ಪ್ರವೇಶಿಸುವ ಸಾಧ್ಯತೆಗಳಿವೆಯಂತೆ. ಗಾಯ ಹಾಗೂ ಚರ್ಮಸಂಬಂಧಿ ಖಾಯಿಲೆ ಇರುವವರೇನಾದರೂ ಈ ಫಿಶ್‌ ಸ್ಪಾ ಬಳಸಿದ್ದಲ್ಲಿ, ಅಲ್ಲಿಯೇ ಕಾಲನ್ನು ಹಾಕಿ ಪೆಡಿಕ್ಯೂರ್‌ಗೆ ಒಳಗಾಗುವವರಿಗೂ ಸೋಂಕು ತಗುಲಬಹುದಂತೆ. ಈ ಹಿನ್ನೆಲೆಯಲ್ಲಿ, ಈಗಾಗಲೇ ಹಲವು ರಾಷ್ಟ್ರಗಳಲ್ಲಿ ಫಿಶ್‌ ಸ್ಪಾ ಬ್ಯಾನ್‌ ಕೂಡ ಮಾಡಲಾಗಿದೆ ಎನ್ನುತ್ತಾರೆ ಬ್ಯೂಟಿ ಎಕ್ಸ್‌ಫರ್ಟ್ಸ್‌.

Fish Spa awareness

ಫಿಶ್‌ ಸ್ಪಾದಿಂದ ಬೆರಳು ಕಳೆದುಕೊಂಡಿದ್ದ ಮಹಿಳೆ ಕಥೆ

ಕಳೆದ 2018ರಲ್ಲಿ ವಿದೇಶಿ ಮಹಿಳೆಯೊಬ್ಬಳು ಥೈಲ್ಯಾಂಡ್‌ನ ಫಿಶ್‌ ಸ್ಪಾದಲ್ಲಿ ಪಾದಗಳಿಗೆ ಸೋಂಕು ತಗುಲಿಸಿಕೊಂಡು, ತನ್ನ ಬಲಪಾದದ ಎಲ್ಲಾ ಬೆರಳುಗಳನ್ನು ಕಳೆದುಕೊಂಡಿದ್ದಳು. ಇದು ಅಂದು ದೊಡ್ಡ ನ್ಯೂಸ್‌ ಆಗಿತ್ತು. ಹಾಲಿಡೇ ಮುಗಿಸಿ, ಮನೆಗೆ ವಾಪಾಸ್ಸಾದಾಗ ಜ್ವರದಿಂದ ನರಳಿದ್ದ ಮಹಿಳೆಗೆ ಸಾಕಷ್ಟು ಪರೀಕ್ಷೆಗಳನ್ನು ಮಾಡಿಸಿದಾಗ ಕಂಡು ಬಂದದ್ದು, ಫಿಶ್‌ ಸ್ಪಾದಲ್ಲಿದ್ದ (Osteomyelitis) ಬ್ಯಾಕ್ಟಿರಿಯಾದಿಂದ ಮೂಳೆ ಸೋಂಕು ತಗುಲಿತ್ತಂತೆ. ನಂತರ ಆಕೆಗೆ ಅರಿವಿಲ್ಲದಂತೆಯೇ ಆ ಬ್ಯಾಕ್ಟಿರಿಯಾಗಳು ಬೆರಳುಗಳನ್ನೇ ತಿಂದು ಹಾಕಿದ್ದವಂತೆ. ಈ ಘಟನೆ ಫಿಶ್‌ ಸ್ಪಾ ಪ್ರಿಯರಿಗೆ ಎಚ್ಚರಿಕೆ ಗಂಟೆ ಬಾರಿಸಿತ್ತು ಎನ್ನುತ್ತಾರೆ ಸ್ಕಿನ್‌ ಸ್ಪೆಷಲಿಸ್ಟ್ ಡಾ. ರುತಿಜಾ.

ಇದನ್ನೂ ಓದಿ: Wedding Jewel Fashion: ವೆಡ್ಡಿಂಗ್‌ ಜ್ಯುವೆಲ್‌ ಫ್ಯಾಷನ್‌ನಲ್ಲಿ ಮಹಿಳೆಯರನ್ನು ಸೆಳೆಯುತ್ತಿವೆ ಈ 3 ಟ್ರೆಡಿಷನಲ್‌ ಮಾಟಿಗಳು

ಯಾರ್ಯಾರು ಫಿಶ್‌ ಪೆಡಿಕ್ಯೂರ್‌ಗೆ ಒಳಗಾಗಬಾರದು?

  • ಡಯಾಬೀಟಿಸ್‌ ಇರುವಂತಹ ವ್ಯಕ್ತಿಗಳು ಯಾವುದೇ ಕಾರಣಕ್ಕೂ ಫಿಶ್‌ ಪೆಡಿಕ್ಯೂರ್‌ಗೆ ಒಳಗಾಗಬಾರದು.
  • ಇಮ್ಯೂನಿಟಿ ಕಡಿಮೆ ಇರುವವರು ಹಾಗೂ ಇಮ್ಯೂನಿಟಿ ಏರುಪೇರಾಗುವಂತವರು ಕೂಡ ಫಿಶ್‌ ಪೆಡಿಕ್ಯೂರ್‌ ಮಾಡಿಸಬಾರದು.
  • ಚರ್ಮದ ಖಾಯಿಲೆ ಇರುವವರು ಫಿಶ್‌ ಸ್ಪಾ ಮಾಡಿಸಬಾರದು.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading

ಫ್ಯಾಷನ್

Wedding Jewel Fashion: ವೆಡ್ಡಿಂಗ್‌ ಜ್ಯುವೆಲ್‌ ಫ್ಯಾಷನ್‌ನಲ್ಲಿ ಮಹಿಳೆಯರನ್ನು ಸೆಳೆಯುತ್ತಿವೆ ಈ 3 ಟ್ರೆಡಿಷನಲ್‌ ಮಾಟಿಗಳು

ವೆಡ್ಡಿಂಗ್‌ ಜ್ಯುವೆಲ್‌ ಫ್ಯಾಷನ್‌ನಲ್ಲಿ (Wedding Jewel Fashion) ಇದೀಗ ಕಿವಿಯ ಸೌಂದರ್ಯವನ್ನು ಹೆಚ್ಚಿಸುವ 3 ಶೈಲಿಯ ಟ್ರೆಡಿಷನಲ್‌ ಲುಕ್‌ ನೀಡುವ ಡಿಸೈನರ್‌ ಮಾಟಿಗಳು ಟ್ರೆಂಡಿಯಾಗಿವೆ. ಅವು ಯಾವುವು? ಆಯ್ಕೆ ಹೇಗಿರಬೇಕು? ಎಂಬುದರ ಬಗ್ಗೆ ಜ್ಯುವೆಲ್‌ ಸ್ಟೈಲಿಸ್ಟ್‌ಗಳು ಇಲ್ಲಿ ವಿವರಿಸಿದ್ದಾರೆ.

VISTARANEWS.COM


on

Wedding Jewel Fashion
ಚಿತ್ರಕೃಪೆ: ಪಿಕ್ಸೆಲ್‌
Koo

-ಶೀಲಾ ಸಿ, ಶೆಟ್ಟಿ, ಬೆಂಗಳೂರು
ವೆಡ್ಡಿಂಗ್‌ ಜ್ಯುವೆಲ್‌ ಫ್ಯಾಷನ್‌ನಲ್ಲಿ (Wedding Jewel Fashion) ಇದೀಗ ಕಿವಿಯ ಸೌಂದರ್ಯವನ್ನು ಹೆಚ್ಚಿಸುವ ನಾನಾ ಬಗೆಯ ಟ್ರೆಡಿಷನಲ್‌ ಲುಕ್‌ ನೀಡುವ ಡಿಸೈನರ್‌ ಮಾಟಿಗಳು ರೀ ಎಂಟ್ರಿ ನೀಡಿದ್ದು, ಅವುಗಳಲ್ಲಿ 3 ಶೈಲಿಯವು ಮಹಿಳೆಯರನ್ನು ಅಲಂಕರಿಸುತ್ತಿವೆ.

Wedding Jewel Fashion

ಟ್ರೆಡಿಷನಲ್‌ ಲುಕ್‌ಗೆ ಸಾಥ್‌ ನೀಡುವ ಮಾಟಿ

“ಕಿವಿಯ ಓಲೆಯೊಂದಿಗೆ ಧರಿಸುವ ಮಾಟಿಗಳು ಮೊದಲಿನಿಂದಲೂ ಟ್ರೆಡಿಷನಲ್‌ ಲುಕ್‌ ಬಯಸುವ ಮಹಿಳೆಯರ ಕಿವಿಯನ್ನು ಶೃಂಗರಿಸುತ್ತಿವೆ. ಮನೆಯ ಸಮಾರಂಭಗಳು ಅದರಲ್ಲೂ ಮದುವೆಯಂತಹ ದೊಡ್ಡ ಕ್ರಾರ್ಯಕ್ರಮಗಳಲ್ಲಿ ಮಾನಿನಿಯರನ್ನು ಸಿಂಗರಿಸುತ್ತಿವೆ. ಸಂತಸದ ವಿಚಾರವೆಂದರೇ, ಇದೀಗ ಮಾಡರ್ನ್‌ ಲುಕ್‌ ಬಯಸುವ ಯುವತಿಯರೂ ಕೂಡ ಇಷ್ಟಪಟ್ಟು ಧರಿಸತೊಡಗಿದ್ದಾರೆ” ಎನ್ನುತ್ತಾರೆ” ಜ್ಯುವೆಲ್‌ ಡಿಸೈನರ್‌ ಧೃತಿ. ಅವರ ಪ್ರಕಾರ, ಈ ಮಾಟಿಗಳು ಯುವತಿಯರ ಹೇರ್‌ಸ್ಟೈಲ್‌ ಸೌಂದರ್ಯಕ್ಕೂ ಸಾಥ್‌ ನೀಡುತ್ತಿವೆಯಂತೆ.

Wedding Jewel Fashion

ಬ್ರೈಡಲ್‌ ಲುಕ್‌ಗೆ ಸಾಥ್‌

ಮದುಮಗಳ ಜುವೆಲರಿ ಸೆಟ್‌ನಲ್ಲಿ ಇದೀಗ ನಾನಾ ಬಗೆಯ ಮಾಟಿಗಳು ಟ್ರೆಂಡಿಯಾಗಿದ್ದು, ಅವುಗಳಲ್ಲಿ ಆಂಟಿಕ್‌ ಮಾಟಿಗಳು ಪ್ರಾಮುಖ್ಯತೆ ಪಡೆದುಕೊಂಡಿವೆ. ಇನ್ನು, ಸಾಮಾನ್ಯವಾಗಿ ಎರಡು ಬಗೆಯ ಮಾಟಿಗಳು ದೊರೆಯುತ್ತವೆ. ಅವುಗಳಲ್ಲಿ, ಕೂದಲಿಗೆ ಸಿಕ್ಕಿಸುವ ಮಾಟಿಗಳು ಹಾಗೂ ಕಿವಿಯ ಮುಂದಿನ ಭಾಗದಿಂದ ಕಿವಿಯ ಓಲೆಯ ಹಿಂದಿನ ಭಾಗಕ್ಕೆ ಸಿಕ್ಕಿಸುವ ಮಾಟಿಗಳು ದೊರೆಯುತ್ತವೆ. ಕೂದಲಿಗೆ ಸಿಕ್ಕಿಸುವಂತವು ಹೇರ್‌ಸ್ಟೈಲನ್ನು ಹೈಲೈಟ್‌ ಮಾಡುತ್ತವೆ. ಕಿವಿಯಿಂದ ಹಿಂದಿನ ಓಲೆಯ ಭಾಗಕ್ಕೆ ಧರಿಸುವಂತವು ಸಿಂಪಲ್ಲಾಗಿ ಕಾಣುತ್ತವೆ. ಒಟ್ಟಿನಲ್ಲಿ, ಮಹಿಳೆಯರಿಗೆ ಟ್ರೆಡಿಷನಲ್‌ ಲುಕ್‌ ನೀಡುತ್ತವೆ ಎನ್ನುತ್ತಾರೆ ಜ್ಯುವೆಲ್‌ ಡಿಸೈನರ್‌ ದಿಯಾ.

Wedding Jewel Fashion

ಪರ್ಲ್‌ ಲೇಯರ್‌ ಮಾಟಿ

ಮೂರ್ನಾಲ್ಕು ಸಾಲುಗಳ ಮುತ್ತಿನ ಎಳೆಗಳಿರುವ ಪರ್ಲ್‌ ಮಾಟಿಯು ಇಂದು ಮದುಮಗಳನ್ನು ಮಾತ್ರವಲ್ಲ, ಇತರೇ ಮಹಿಳೆಯರನ್ನು ಸೆಳೆದಿದೆ. ಮುತ್ತಿನ ಎಳೆಗಳಿರುವಂತವು ಇಂದು ಹೆಚ್ಚು ಬೇಡಿಕೆ ಪಡೆದುಕೊಂಡಿವೆ.

Wedding Jewel Fashion

ಹರಳಿನ ಮಾಟಿ

ಇದು ಹಳೆಯ ಕಾಲದ ಡಿಸೈನ್‌ನ ಮಾಟಿಯಿದು. ಅಜ್ಜಿ ಕಾಲದ ಮಾಟಿ ಎಂದು ಕರೆಯಲಾಗುತ್ತಾದರೂ ಇದೀಗ ಚಾಲ್ತಿಯಲ್ಲಿರುವ ಟ್ರೆಡಿಷನಲ್‌ ಜ್ಯುವೆಲರಿಗಳಲ್ಲಿ ಇವು ಒಂದಾಗಿವೆ. ಕಿವಿಯ ಮುಂದಿನಿಂದ, ಓಲೆಯ ಹಿಂದಿನವರೆಗೆ ಎಳೆದು ಧರಿಸಲಾಗುತ್ತದೆ.

ಸಾದಾ ಗೋಲ್ಡ್ ಮಾಟಿ

ಸಾದಾ ಡಿಸೈನ್‌ನ ಮಾಟಿಗಳಲ್ಲಿ ನಾನಾ ಡಿಸೈನ್‌ನವು ಲಭ್ಯ. ಕೆಲವು ಸಾದಾ ಚೈನ್‌ನೊಂದಿಗೆ ಬೀಡ್ಸ್ ಡಿಸೈನ್‌ ಹೊಂದಿರುತ್ತವೆ. ಇಲ್ಲವೇ ಡಿಸ್ಕೋ ಚೈನ್‌, ರೋಪ್‌ ಚೈನ್‌ ಸೇರಿದಂತೆ ನಾನಾ ವಿನ್ಯಾಸದಲ್ಲಿ ದೊರೆಯುತ್ತವೆ.

ಇದನ್ನೂ ಓದಿ: Kangana Ranaut Saree Fashion: ದೇಸಿ ಸೀರೆ ನೇಯ್ದ ನೇಕಾರರಿಗೆ ಥ್ಯಾಂಕ್ಸ್ ಹೇಳಿದ ಕಂಗನಾ ರಣಾವತ್!

ಮಾಟಿ ಪ್ರಿಯರಿಗೆ ಟಿಪ್ಸ್

  • ಕಿವಿಗೆ ಹೊಂದುವಂತಹ ಡಿಸೈನ್‌ನವನ್ನು ಆಯ್ಕೆ ಮಾಡಿ.
  • ಚಿಕ್ಕ ಕಿವಿಗೆ ಲೇಯರ್‌ ಮಾಟಿ ಧರಿಸಿ. ಅಂದವಾಗಿ ಕಾಣಿಸುವುದು.
  • ದೊಡ್ಡ ಕಿವಿಗೆ ಆದಷ್ಟೂ ಸ್ಟೋನ್ಸ್ ಡಿಸೈನ್‌ನವನ್ನು ಧರಿಸಿ.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading

ಫ್ಯಾಷನ್

Mens Stripe Shirt Fashion: ಮೆನ್ಸ್ ಕ್ಯಾಶುವಲ್‌ ಲುಕ್‌ಗೆ ರೀ ಎಂಟ್ರಿ ನೀಡಿದ ಸ್ಟ್ರೈಪ್ಡ್ ಶರ್ಟ್ಸ್

ಮೆನ್ಸ್ ಫ್ಯಾಷನ್‌ನಲ್ಲಿ ಇದೀಗ ಸ್ಟ್ರೈಪ್ಡ್ ಶರ್ಟ್ಸ್ (Mens Stripe Shirt Fashion) ರೀ ಎಂಟ್ರಿ ನೀಡಿವೆ. ಲೆನಿನ್‌, ಕಾಟನ್‌ ಫ್ಯಾಬ್ರಿಕ್‌ನವು ಸ್ಲಿಮ್‌ ಫಿಟ್‌ ಶೈಲಿಯಲ್ಲಿ ಬಿಡುಗಡೆಗೊಂಡಿವೆ. ಬ್ಲ್ಯೂ & ವೈಟ್‌ ಕಾಂಬಿನೇಷನ್‌ನವು ಹೆಚ್ಚು ಟ್ರೆಂಡಿಯಾಗಿವೆ. ಹಾಗಾದಲ್ಲಿ ಇವನ್ನು ಹೇಗೆಲ್ಲಾ ಸ್ಟೈಲಿಂಗ್‌ ಮಾಡಬಹುದು ಎಂಬುದರ ಬಗ್ಗೆ ಮೆನ್ಸ್ ಸ್ಟೈಲಿಸ್ಟ್‌ಗಳು ಸಿಂಪಲ್‌ ಸಲಹೆ ನೀಡಿದ್ದಾರೆ.

VISTARANEWS.COM


on

Mens Stripe Shirt Fashion
ಚಿತ್ರಗಳು: ಕಾರ್ತಿಕ್‌ ಆರ್ಯನ್‌, ನಟ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮೆನ್ಸ್ ಫ್ಯಾಷನ್‌ನಲ್ಲಿ ಇದೀಗ ಮತ್ತೊಮ್ಮೆ ಸ್ಟ್ರೈಪ್ಡ್ ಶರ್ಟ್ಸ್ (Mens Stripe Shirt Fashion) ರೀ ಎಂಟ್ರಿ ನೀಡಿವೆ. ಈ ಹಿಂದೆ ಚಾಲ್ತಿಯಲ್ಲಿದ್ದ ಚಿಕ್ಕ ಸ್ಟ್ರೈಪ್ಸ್ ಶರ್ಟ್ಸ್, ಇದೀಗ ಸೈಡಿಗೆ ಸರಿದಿದ್ದು, ದೊಡ್ಡ ದೊಡ್ಡ ಸ್ಟ್ರೈಪ್ಸ್ ಶರ್ಟ್ಸ್ ಚಾಲ್ತಿಗೆ ಬಂದಿವೆ. ಅದರಲ್ಲೂ ಸ್ಲಿಮ್‌ ಫಿಟ್‌ ಹಾಗೂ ಲಾಂಗ್‌ ಸ್ಲೀವ್‌ನ ಈ ಶರ್ಟ್‌ಗಳು ಯುವಕರ ಸ್ಟೈಲ್‌ ಸ್ಟೇಟ್ಮೆಂಟ್‌ಗೆ ಸಾಥ್‌ ನೀಡುತ್ತಿವೆ.

Mens Stripe Shirt Fashion

ಮೆನ್ಸ್ ಕ್ಯಾಶುವಲ್‌ ಲುಕ್‌ಗೆ ಸ್ಟ್ರೈಪ್ಸ್ ಶರ್ಟ್ ಸಾಥ್

“ಮೆನ್ಸ್ ಫ್ಯಾಷನ್‌ನಲ್ಲಿ ಆಗಾಗ ನಾನಾ ಫ್ಯಾಬ್ರಿಕ್‌ನ ಹಾಗೂ ಶೇಡ್‌ನ ಶರ್ಟ್‌ಗಳು ಆಗಮಿಸುತ್ತಿರುತ್ತವೆ. ಅಲ್ಲದೇ, ಸೀಸನ್‌ಗೆ ತಕ್ಕಂತೆ ಬದಲಾಗುತ್ತಿರುತ್ತವೆ. ಇನ್ನು ಸ್ಟ್ರೈಪ್ಸ್ ಶರ್ಟ್ಸ್ ಮೊದಲಿನಿಂದಲೂ ಪುರುಷರ ಫ್ಯಾಷನ್‌ನಲ್ಲಿದ್ದು, ಉದ್ಯೋಗಸ್ಥರ ಲೈಫ್‌ಸ್ಟೈಲ್‌ನಲ್ಲಿ ಒಂದಾಗಿವೆ. ಕಚೇರಿಗೆ ತೆರಳುವ ಪುರುಷರ ಸಿಂಪಲ್‌ ಸ್ಟೈಲ್‌ ಸ್ಟೇಟ್‌ಮೆಂಟ್ಸ್‌ಗೆ ಇವು ಜೊತೆಯಾಗಿವೆ. ಇನ್ನು, ಫ್ಯಾಷೆನಬಲ್‌ ಯುವಕರ ವಿಷಯಕ್ಕೆ ಬಂದಲ್ಲಿ, ಈ ಶರ್ಟ್ಸ್ ಕೆಲಕಾಲ ಹುಡುಗರ ಫ್ಯಾಷನ್‌ನಿಂದ ದೂರವಿದ್ದವು. ಆದರೆ, ಇದೀಗ ಈ ಬಿಗ್‌ ಸ್ಟ್ರೈಪ್ಸ್ ಪ್ರಿಂಟ್ಸ್ ಯುವಕರಿಗೆ ಪ್ರಿಯವಾಗಿವೆ. ಇದಕ್ಕೆ ಕಾರಣ, ಕೊಂಚ ಬದಲಾದ ಲುಕ್‌ನಲ್ಲಿ ಹಾಗೂ ಕಾಂಬಿನೇಷನ್‌ನಲ್ಲಿ ಬಂದಿರುವುದು. ಕ್ಯಾಶುವಲ್‌ ಲುಕ್‌ಗೆ ಸಾಥ್‌ ನೀಡುತ್ತಿರುವುದು” ಎನ್ನುತ್ತಾರೆ ಮೆನ್ಸ್ ಸ್ಟೈಲಿಸ್ಟ್ ರಜತ್‌.

Mens Stripe Shirt Fashion

ಪಾಪ್ಯುಲರ್‌ ಆಗಿರುವ ಸ್ಟ್ರೈಪ್ಸ್ ಶರ್ಟ್ಸ್

ಈ ಸೀಸನ್‌ನಲ್ಲಿ ಅತಿ ಹೆಚ್ಚು ಪಾಪ್ಯುಲರ್‌ ಆಗಿರುವ ಸ್ಟ್ರೈಪ್ಸ್ ಶರ್ಟ್‌ಗಳೆಂದರೆ ಸ್ಲಿಮ್‌ ಫಿಟ್‌ ಶೈಲಿಯ ಲೆನಿನ್‌ ಹಾಗೂ ಕಾಟನ್‌ ಫ್ಯಾಬ್ರಿಕ್‌ನ ಬ್ಲ್ಯೂ & ವೈಟ್‌ ಕಾಂಬಿನೇಷನ್‌ನ ಶರ್ಟ್ಸ್ ಹಾಗೂ ಬ್ಲ್ಯಾಕ್‌ ಅಥವಾ ಗ್ರೇ ಶೇಡ್‌ನ ಶರ್ಟ್ಸ್. ಇನ್ನು, ಕೆಲವು ಪೀಚ್‌ ಹಾಗೂ ಪಿಸ್ತಾ ಶೇಡ್‌ನವು ಬಂದಿದ್ದು, ಒಂದಿಷ್ಟು ಹುಡುಗರಿಗೆ ಇಷ್ಟವಾಗಿವೆ ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು.

Mens Stripe Shirt Fashion

ವರ್ಟಿಕಲ್‌ ಸ್ಟ್ರೈಪ್ಸ್ ಫ್ಯಾಷನ್‌

ಹಾರಿಝಾಂಟಲ್‌ ಸ್ಟ್ರೈಪ್ಸ್ ಶರ್ಟ್ಸ್ ದಪ್ಪನಾಗಿ ಅಥವಾ ಪ್ಲಂಪಿಯಾಗಿ ಕಾಣಿಸುವಂತೆ ಮಾಡುತ್ತವೆ. ಹಾಗಾಗಿ ವರ್ಟಿಕಲ್‌ ಸ್ಟ್ರೈಪ್ಸ್‌ನ ಶರ್ಟ್ಸ್ ಪುರುಷರನ್ನು ಸ್ಲಿಮ್‌ ಆಗಿ ಕಾಣಿಸುವಂತೆ ಬಿಂಬಿಸುತ್ತವೆ. ಹಾಗಾಗಿ ಮೆನ್ಸ್ ಫ್ಯಾಷನ್‌ನಲ್ಲಿ ಇವು ಟ್ರೆಂಡಿಯಾಗಲು ಪ್ರಮುಖ ಕಾರಣವಾಗಿದೆ ಎನ್ನುತ್ತಾರೆ ಮೆನ್ಸ್ ಫ್ಯಾಷನ್‌ ಡಿಸೈನರ್‌ ದಿಗಂತ್‌.

ಇದನ್ನೂ ಓದಿ: Students Fashion: ಕಾಲೇಜು ಹುಡುಗಿಯರ ಫ್ಯಾಷನ್‌ ಲಿಸ್ಟ್‌ಗೆ ಸೇರಿದ ಮಾರ್ಬಲ್‌ ಪ್ರಿಂಟೆಡ್‌ ಕ್ರಾಪ್‌ ಟಾಪ್ಸ್!

ಸ್ಟ್ರೈಪ್ಸ್ ಶರ್ಟ್ಸ್ ಮಿಕ್ಸ್ ಮ್ಯಾಚ್‌ ಮಾಡುವುದು ಹೀಗೆ

  • ಯಾವುದೇ ಜೀನ್ಸ್ ಪ್ಯಾಂಟ್‌ ಜೊತೆಗೂ ಇವನ್ನು ಧರಿಸಬಹುದು.
  • ನೋಡಲು ಕ್ಯಾಶುವಲ್‌ ಲುಕ್‌ ನೀಡುತ್ತವೆ. ಸೀಸನ್‌ಗೆ ತಕ್ಕಂತೆ ಲೇಯರ್‌ ಲುಕ್‌ ಕೂಡ ನೀಡಬಹುದು.
  • ಆಯಾ ಶೇಡ್‌ಗಳಿಗೆ ತಕ್ಕಂತೆಯೂ ಪ್ಯಾಂಟ್‌ ಧರಿಸಬಹುದು.
  • ಚಿಕ್ಕ ವರ್ಟಿಕಲ್‌ ಸ್ಟ್ರೈಪ್ಸ್ ಇರುವ ಶರ್ಟ್ಸ್ ಕಾಪೋರೇಟ್‌ ಮೆನ್ಸ್ ಲುಕ್‌ಗೆ ಸಹಕಾರಿ.
  • ದೊಡ್ಡ ವರ್ಟಿಕಲ್‌ ಸ್ಟ್ರೈಪ್ಸ್ ಶರ್ಟ್ಸ್ ಹುಡುಗರಿಗೆ ಆಕರ್ಷಕವಾಗಿ ಕಾಣಿಸುತ್ತವೆ.
  • ಈ ಶರ್ಟ್‌ ಜೊತೆಗೆ ಸನ್‌ಗ್ಲಾಸ್‌ ಧರಿಸಿದಲ್ಲಿ ನೋಡಲು ಚೆನ್ನಾಗಿ ಕಾಣಿಸುತ್ತದೆ.
  • ಸ್ನೀಕರ್‌ ಅಥವಾ ಸ್ಪೋಟ್ಸ್ ಶೂ ಇವುಗಳೊಂದಿಗೆ ಆಕರ್ಷಕವಾಗಿ ಕಾಣಿಸುತ್ತವೆ.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading
Advertisement
Actor Darshan case ram gopal varma Reaction
ಸ್ಯಾಂಡಲ್ ವುಡ್6 mins ago

Actor Darshan: ಆರಾಧನೆ ಅತಿರೇಕವಾದರೆ ದುರಂತ ಖಚಿತ; ದರ್ಶನ್​ ಬಗ್ಗೆ ರಾಮ್​ಗೋಪಾಲ್ ವರ್ಮಾ ಹೇಳಿದ್ದು ಹೀಗೆ…

Gold Rate Today
ಚಿನ್ನದ ದರ18 mins ago

Gold Rate Today: ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ಬೆಲೆ; ಇಂದಿನ ದರ ಚೆಕ್‌ ಮಾಡಿ

Karnataka Rain Effect
ಮಳೆ19 mins ago

Karnataka Rain : ಮಳೆ ಅವಾಂತರ: ತರಗತಿ ನಡೆಯುವಾಗಲೇ ಮಕ್ಕಳ ಮೇಲೆ ಕುಸಿದು ಬಿದ್ದ ಚಾವಣಿ

Lionel Messi Retirement
ಕ್ರೀಡೆ33 mins ago

Lionel Messi Retirement: ನಿವೃತ್ತಿಯ ಸುಳಿವು ನೀಡಿದ ಲಿಯೋನೆಲ್​ ಮೆಸ್ಸಿ

wild elephant attack
ಪ್ರಮುಖ ಸುದ್ದಿ38 mins ago

Wild Elephant Attack : ನಾಡಿಗೆ ಬಂದ ಕಾಡಾನೆಯಿಂದ ರೈತನ ಮೇಲೆ ದಾಳಿ, ಕಾಲು ಮುರಿತ

Pema Khandu
ದೇಶ54 mins ago

Pema Khandu: ಅರುಣಾಚಲ ಪ್ರದೇಶದ ಸಿಎಂ ಆಗಿ ಪೇಮಾ ಖಂಡು ಪ್ರಮಾಣ ವಚನ ಸ್ವೀಕಾರ

Duniya Vijay nagaratna Divorce case verdict to be announced
ಸ್ಯಾಂಡಲ್ ವುಡ್58 mins ago

Duniya Vijay: ಇಂದು ದುನಿಯಾ ವಿಜಯ್‌-ನಾಗರತ್ನ ವಿಚ್ಛೇದನ ತೀರ್ಪು, ಕೀರ್ತಿ ಗೌಡ ಜತೆಗಿನ ದಾಂಪತ್ಯಕ್ಕೆ ಸಿಗುವುದೇ ಅಂಕಿತ?

Priyanka Chopra’s Brother-In-Law Kevin Jonas Diagnosed With Skin Cancer
ಸಿನಿಮಾ1 hour ago

Priyanka Chopra: ಪ್ರಿಯಾಂಕಾ ಚೋಪ್ರಾ ಮೈದುನ, ಗಾಯಕ ಕೆವಿನ್​ ಜೋನಸ್‌ಗೆ ಕ್ಯಾನ್ಸರ್!

Actor Darshan
ಮಂಡ್ಯ1 hour ago

Actor Darshan : ನಟ ದರ್ಶನ್‌ ವಿರುದ್ಧ ಸಿಡಿದೆದ್ದ ಮಂಡ್ಯ ರೈತರು; ಆರೋಪಿಗಳಿಗೆ ಗಲ್ಲು ಶಿಕ್ಷೆಗೆ ಆಗ್ರಹ

Sonakshi Sinha Zaheer Iqbal confirm their wedding in leaked audio
ಬಾಲಿವುಡ್1 hour ago

Sonakshi Sinha: ಸೋನಾಕ್ಷಿ ಸಿನ್ಹಾ – ಜಹೀರ್ ಇಕ್ಬಾಲ್ ಮದುವೆಯ ಆಮಂತ್ರಣದ ಆಡಿಯೊ ಕ್ಲಿಪ್‌ ಲೀಕ್‌!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ2 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ2 days ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ2 days ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ2 days ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ3 days ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

Karnataka weather Forecast
ಮಳೆ6 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ6 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ1 week ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

ಟ್ರೆಂಡಿಂಗ್‌