Health Guidelines | ರಾಜ್ಯದಲ್ಲಿ ಭಾರಿ ಮಳೆ, ಚಳಿಯಿಂದ ಆರೋಗ್ಯ ಸಮಸ್ಯೆ; ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ - Vistara News

ಆರೋಗ್ಯ

Health Guidelines | ರಾಜ್ಯದಲ್ಲಿ ಭಾರಿ ಮಳೆ, ಚಳಿಯಿಂದ ಆರೋಗ್ಯ ಸಮಸ್ಯೆ; ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ

ಪ್ರಸ್ತುತ ಮಾಂಡೌಸ್‌ ಚಂಡಮಾರುತದ ಪರಿಣಾಮ ರಾಜ್ಯದಲ್ಲಿ ಭಾರಿ ಪ್ರಮಾಣದಲ್ಲಿ ಮಳೆ, ಶೀತ ಗಾಳಿ ಮತ್ತು ಅತಿ ಕಡಿಮೆ ತಾಪಮಾನವು ವರದಿಯಾಗಿದೆ. ಹೀಗಾಗಿ ಸಾರ್ವಜನಿಕರಿಗೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಆರೋಗ್ಯ ಇಲಾಖೆಯಿಂದ ಕೆಲ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಲು ಸೂಚಿಸಲಾಗಿದೆ.

VISTARANEWS.COM


on

Winter @ ವಿಸ್ತಾರ Explainer
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಹವಾಮಾನ ವೈಪರೀತ್ಯದಿಂದ ರಾಜ್ಯದಲ್ಲಿ ಭಾರಿ ಮಳೆ ಹಾಗೂ ತೀವ್ರ ಚಳಿ ಹಿನ್ನೆಲೆಯಲ್ಲಿ ಮಕ್ಕಳು ಹಾಗೂ ವೃದ್ಧರನ್ನು ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತಿವೆ. ಹೀಗಾಗಿ ಆರೋಗ್ಯದ ಬಗ್ಗೆ ಜನರು ಕಾಳಜಿ ವಹಿಸಬೇಕು ಎಂದು ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ (Health Guidelines) ಬಿಡುಗಡೆ ಮಾಡಲಾಗಿದೆ.

ಚಳಿಗಾಲದಲ್ಲಿ ಮಕ್ಕಳು (ನವಜಾತ ಶಿಶುಗಳು ಸೇರಿ), ಗರ್ಭಿಣಿಯರು, ವೃದ್ಧರು, ವಿಶೇಷವಾಗಿ ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಈ ಕೆಳಗಿನ ಸಲಹೆಗಳನ್ನು ಪಾಲಿಸಬೇಕು ಎಂದು ಮಾರ್ಗಸೂಚಿಯಲ್ಲಿ ಸೂಚಿಸಲಾಗಿದೆ.

ಏನು ಮಾಡಬೇಕು:

  • ಯಾವಾಗಲೂ ಬೆಚ್ಚಗಿನ ನೀರು ಕುಡಿಯುವುದು
  • ಸುಲಭವಾಗಿ ಜೀರ್ಣವಾಗುವ ಹಾಗೂ ಆಗತಾನೆ ತಯಾರಿಸಿದ ಆಹಾರ ಪದಾರ್ಥಗಳನ್ನು ಸೇವಿಸುವುದು
  • ಯಾವಾಗಲೂ ಸ್ವೆಟರ್, ಸಾಕ್ಸ್, ಕೈಗವಸುಗಳನ್ನು ಧರಿಸುವುದು ಹಾಗೂ ಮನೆಯ ಒಳಗಿರುವಾಗಲೂ ಬೆಚ್ಚಗಿರುವುದು ಉತ್ತಮ.
  • ಸ್ನಾನಕ್ಕೆ ಬಿಸಿ ನೀರು ಉಪಯೋಗಿಸುವುದು
  • ಅನಗತ್ಯವಾಗಿ ಹೊರ ಸಂಚಾರವನ್ನು ತಪ್ಪಿಸಿ
  • ಕಿವಿಗಳನ್ನು ಹತ್ತಿಯಿಂದ ಮುಚ್ಚಿ ಅಥವಾ ಸ್ಕಾರ್ಫ್ ಕಟ್ಟಕೊಳ್ಳಬೇಕು ಹಾಗೂ ಹೋಗಲೇಬೇಕಾದಲ್ಲಿ ಮಾಸ್ಕ್ ಧರಿಸಬೇಕು.
  • ನೆಗಡಿ, ಕೆಮ್ಮು ಹಾಗೂ ಜ್ವರದ ಲಕ್ಷಣಗಳಳು ಇರುವವರಿಂದ ದೂರವಿರಬೇಕು.
  • ಮೊಣಕೈ ಒಳಗೆ ಸೀನುವುದು, ಕೆಮ್ಮುವುದು ಅಥವಾ ಸೀನುವಾಗ, ಕೆಮ್ಮುವಾಗ ಟಿಶ್ಯೂ ಅಥವಾ ಕರವಸ್ತ್ರವನ್ನು ಬಳಸಬೇಕು
  • ಕೈಗಳನ್ನು ಆಗಾಗ್ಗೆ ನೀರು ಹಾಗೂ ಸೋಪಿನಿಂದ ತೊಳೆಯಬೇಕು
  • ಜ್ವರ‌ ಲಕ್ಷಣಗಳು ಅಥವಾ ಇತರ ಯಾವುದಾದರೂ ಕಾಯಿಲೆಯ ಲಕ್ಷಣಗಳಿದ್ದಲ್ಲಿ ತಕ್ಷಣವೇ ವೈದ್ಯರ ಸಲಹೆಯನ್ನು ಪಡೆಯುವುದು
  • ಸ್ವಯಂವೈದ್ಯ ಪದ್ಧತಿಗಳನ್ನು ಅನುಸರಿಸಬಾರದು

    ಏನು ಮಾಡಬಾರದು
  • ತಣ್ಣಗಿನ ಪಾನೀಯಗಳು, ಐಸ್ ಕ್ರೀಂಗಳನ್ನು ಸೇವಿಸಬಾರದು
  • ರೆಫ್ರಿಜರೇಟರ್‌ನಲ್ಲಿಟ್ಟ ಅಥವಾ ತಣ್ಣಗಿನ ನೀರನ್ನು ಕುಡಿಯಬಾರದು
  • ಮಳೆಯಲ್ಲಿ ನೆನೆಯುವುದು ಹಾಗೂ ತಣ್ಣನೆಯ ಶೀತ ಗಾಳಿಗೆ ಮೈ ಒಡ್ಡುವುದನ್ನು ತಪ್ಪಿಸಬೇಕು
  • ಹೊರಾಂಗಣ ಪ್ರವಾಸಗಳನ್ನು ಆದಷ್ಟು ಕಡಿಮೆ ಮಾಡಿ (ವಿಶೇಷವಾಗಿ ಗಿರಿಧಾಮಗಳಿಗೆ ವಾರಾಂತ್ಯದ ಪ್ರವಾಸ ಹೋಗುವುದು ಇತ್ಯಾದಿ)
  • ಮಸಾಲಾಯುಕ್ತ ಪದಾರ್ಥಗಳು / ಜಂಕ್ ಫುಡ್‌ ಸೇವಿಸಬಾರದು

ಇದನ್ನೂ ಓದಿ | Zika virus | ರಾಜ್ಯದಲ್ಲಿ ಮೊದಲ ಝಿಕಾ ವೈರಸ್ ರಾಯಚೂರಿನಲ್ಲಿ ಪತ್ತೆ; 5 ವರ್ಷದ ಬಾಲಕಿಗೆ ಪಾಸಿಟಿವ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Chandipura Virus: ಡೆಂಗ್ಯೂ ಹಾವಳಿ ನಡುವೆ ಕಾಡುತ್ತಿದೆ ಚಾಂದಿಪುರ ವೈರಸ್; ಇದುವರೆಗೆ 6 ಮಕ್ಕಳು ಬಲಿ: ಏನಿದರ ಲಕ್ಷಣ?

Chandipura Virus: ಗುಜರಾತ್‌ನಲ್ಲಿ ಚಾಂದಿಪುರ ವೈರಸ್ ಪತ್ತೆಯಾಗಿದೆ. ಈಗಾಗಲೇ ವೈರಸ್‌ಗೆ 6 ಮಕ್ಕಳು ಬಲಿಯಾಗಿದ್ದು, ಆತಂಕ ಮೂಡಿಸಿದೆ. ಜುಲೈ 10ರಿಂದ ಗುಜರಾತ್‌ನಲ್ಲಿ ಶಂಕಿತ ಚಂಡಿಪುರ ವೈರಲ್ ಸೋಂಕಿನಿಂದ ಆರು ಮಕ್ಕಳು ಮೃತಪಟ್ಟಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 12ಕ್ಕೆ ತಲುಪಿದೆ ಎಂದು ರಾಜ್ಯ ಆರೋಗ್ಯ ಸಚಿವ ರುಷಿಕೇಶ್ ಪಟೇಲ್ ಮಾಹಿತಿ ನೀಡಿದ್ದಾರೆ. ಚಾಂದಿಪುರ ವೈರಸ್ ಸೋಂಕು ಹೆಚ್ಚಾಗಿ ಮಕ್ಕಳಿಗೆ ಬಾಧಿಸುತ್ತದೆ. ಅದರಲ್ಲಿಯೂ 9 ತಿಂಗಳಿನಿಂದ 14 ವರ್ಷದ ಮಕ್ಕಳಿಗೆ ಬಾಧಿಸುವ ಸಾಧ್ಯತೆ ಅಧಿಕ. ಈ ವೈರಸ್ ಮಕ್ಕಳ ಮೇಲೆ ದಾಳಿ ಮಾಡಿದಾಗ ಮೊದಲಿಗೆ ಜ್ವರ, ಅತಿಸಾರ, ವಾಂತಿ, ಎನ್ಸೆಫಾಲಿಟಿಸ್ ಎಂದು ಕರೆಯಲ್ಪಡುವ ಮೆದುಳಿನ ಜ್ವರದಂತಹ ರೋಗಲಕ್ಷಣಗಳನ್ನು ತೋರಿಸುತ್ತದೆ.

VISTARANEWS.COM


on

Chandipura Virus
Koo

ಗಾಂಧಿನಗರ: ರಾಜ್ಯ ಸೇರಿದಂತೆ ದೇಶದ ಕೆಲವೆಡೆ ಡೆಂಗ್ಯೂ ಹಾವಳಿ ಹೆಚ್ಚಾಗುತ್ತಿದೆ. ಇತ್ತ ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾದ ಹಾವಳಿ ಕಂಡು ಬಂದಿದೆ. ಈ ಮಧ್ಯೆ ಗುಜರಾತ್‌ನಲ್ಲಿ ಚಾಂದಿಪುರ ವೈರಸ್ (Chandipura Virus) ಪತ್ತೆಯಾಗಿದೆ. ಈಗಾಗಲೇ ವೈರಸ್‌ಗೆ 6 ಮಕ್ಕಳು ಬಲಿಯಾಗಿದ್ದು, ಆತಂಕ ಮೂಡಿಸಿದೆ.

ಜುಲೈ 10ರಿಂದ ಗುಜರಾತ್‌ನಲ್ಲಿ ಶಂಕಿತ ಚಂಡಿಪುರ ವೈರಲ್ ಸೋಂಕಿನಿಂದ ಆರು ಮಕ್ಕಳು ಮೃತಪಟ್ಟಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 12ಕ್ಕೆ ತಲುಪಿದೆ ಎಂದು ರಾಜ್ಯ ಆರೋಗ್ಯ ಸಚಿವ ರುಷಿಕೇಶ್ ಪಟೇಲ್ ಮಾಹಿತಿ ನೀಡಿದ್ದಾರೆ. ಎಲ್ಲ ಸೋಂಕಿತರ ರಕ್ತದ ಮಾದರಿಗಳನ್ನು ದೃಢೀಕರಣಕ್ಕಾಗಿ ಪುಣೆಯ ನ್ಯಾಷನಲ್ ಇನ್ಸ್‌ಸ್ಟಿಟ್ಯೂಟ್‌ ಆಫ್ ವೈರಾಲಜಿ (National Institute of Virology)ಗೆ ಕಳುಹಿಸಲಾಗಿದೆ.

ರೋಗ ಲಕ್ಷಣ

ಚಾಂದಿಪುರ ವೈರಸ್ ಸೋಂಕು ಬಾಧಿತರಲ್ಲಿ ಸಾಮಾನ್ಯ ಜ್ವರದ ಲಕ್ಷಣವೇ ಕಂಡು ಬರುತ್ತದೆ. ಬಾಧಿತರಲ್ಲಿ ದಿಢೀರ್ ಜ್ವರ, ತೀವ್ರ ತಲೆನೋವು, ವಾಂತಿ, ಸ್ನಾಯು ಸೆಳೆತ, ಪ್ರಜ್ಞಾಹೀನತೆ, ಅರೆನಿದ್ರಾವಸ್ಥೆ ಕಂಡು ಬರುತ್ತದೆ. ತಕ್ಷಣ ಸೂಕ್ತ ಚಿಕಿತ್ಸೆ ಪಡೆಯದಿದ್ದರೆ ಮಾರಣಾಂತಿಕವಾಗಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. ರಾಬ್ಡೋವೆರಿಡೆ ವರ್ಗಕ್ಕೆ ಸೇರಿದ ವೈರಸ್ ಈ ರೋಗಕ್ಕೆ ಕಾರಣ.

ಯಾಕಾಗಿ ಈ ಹೆಸರು?

ಮಹಾರಾಷ್ಟ್ರದ ಚಾಂದಿಪುರದಲ್ಲಿ 1965ರಲ್ಲಿ ಇದು ಮೊದಲ ಬಾರಿ ಕಾಣಿಸಿಕೊಂಡಿತ್ತು. ಹೀಗಾಗಿ ಇದನ್ನು ಚಾಂದಿಪುರ ವೈರಸ್‌ ಎಂದು ಕರೆಯುತ್ತಾರೆ. ಚಾಂದಿಪುರ ವೈರಸ್ ಸೋಂಕು ಹೆಚ್ಚಾಗಿ ಮಕ್ಕಳಿಗೆ ಬಾಧಿಸುತ್ತದೆ. ಅದರಲ್ಲಿಯೂ 9 ತಿಂಗಳಿನಿಂದ 14 ವರ್ಷದ ಮಕ್ಕಳಿಗೆ ಬಾಧಿಸುವ ಸಾಧ್ಯತೆ ಅಧಿಕ. ಈ ವೈರಸ್ ಮಕ್ಕಳ ಮೇಲೆ ದಾಳಿ ಮಾಡಿದಾಗ ಮೊದಲಿಗೆ ಜ್ವರ, ಅತಿಸಾರ, ವಾಂತಿ, ಎನ್ಸೆಫಾಲಿಟಿಸ್ ಎಂದು ಕರೆಯಲ್ಪಡುವ ಮೆದುಳಿನ ಜ್ವರದಂತಹ ರೋಗಲಕ್ಷಣಗಳನ್ನು ತೋರಿಸುತ್ತದೆ. ಈ ವೈರಸ್ ವಿರುದ್ಧ ಯಾವುದೇ ಲಸಿಕೆ ಇಲ್ಲದ ಕಾರಣ ಇದನ್ನು ಇನ್ನಷ್ಟು ಅಪಾಯಕಾರಿ ಎಂದು ವೈದ್ಯರು ತಿಳಿಸಿದ್ದಾರೆ.

ಒಬ್ಬರಿಂದ ಒಬ್ಬರಿಗೆ ಹರಡುತ್ತಾ?

ಇದು ಸಾಂಕ್ರಾಮಿಕ ರೋಗ ಅಲ್ಲದಿದ್ದರೂ ಸೊಳ್ಳೆ, ನೊಣ, ಉಣ್ಣೆಗಳಿಂದ ಈ ಸೋಂಕು ಹರಡುತ್ತದೆ. ಶುಚಿತ್ವ ಕೊರತೆಯೇ ಮುಖ್ಯ ಕಾರಣ. ಸದ್ಯ ಈ ರೀತಿಯ ಅನೇಕ ಪ್ರಕರಣಗಳು ಗುಜರಾತ್‌ನಲ್ಲಿ ಕಂಡುಬಂದಿವೆ. ಗುಜರಾತ್‌ನ ಸಬರ್‌ಕಾಂಠಾ ರಾವಳಿ, ಮಹಿಸಾರ, ಖೇಡಾ ಜಿಲ್ಲೆಗಳಲ್ಲಿ ಈ ಸೋಂಕು ಕಾಣಿಸಿಕೊಂಡಿದೆ. ಜತೆಗೆ ರಾಜಸ್ಥಾನ, ಮಧ್ಯ ಪ್ರದೇಶದಲ್ಲಿಯೂ ಸೋಂಕು ಬಾಧಿಸಿರುವುದು ವರದಿಯಾಗಿದೆ. ಶಂಕಿತರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ರೋಗದಿಂದ ಪಾರಾಗುವುದು ಹೇಗೆ?

ಚಾಂದಿಪುರ ವೈರಸ್‌ನಿಂದ ತಪ್ಪಿಸಿಕೊಳ್ಳಲು ನೈರ್ಮಲ್ಯ ಕಾಪಾಡುವುದು ಅಗತ್ಯ. ಸೊಳ್ಳೆ, ನೊಣ ಮತ್ತು ಕೀಟಗಳು ಕಡಿಯದಂತೆ ಎಚ್ಚರ ವಹಿಸಿ. ಮಕ್ಕಳಿಗೆ ರಾತ್ರಿ ಪೂರ್ಣ ತೋಳಿನ ಬಟ್ಟೆಗಳನ್ನು ತೊಡಿಸಿ. ಸೊಳ್ಳೆಗಳು ಮತ್ತು ಕೀಟಗಳಿಂದ ತಪ್ಪಿಸಿಕೊಳ್ಳಲು ಬಲೆಗಳನ್ನು ಬಳಸಿ. ಕಿಟಕಿಗಳು ಮತ್ತು ಬಾಗಿಲುಗಳನ್ನು ಮುಚ್ಚಿಡಿ. ಸೊಳ್ಳೆಗಳು ಮನೆಯೊಳಗೆ ಪ್ರವೇಶಿಸಲು ಬಿಡಬೇಡಿ. ಮನೆಯ ಸುತ್ತಮುತ್ತ ನೀಡು ಕಟ್ಟಿ ನಿಲ್ಲದಂತೆ ನೋಡಿಕೊಳ್ಳಿ. ಸಾಕು ಪ್ರಾಣಿಗಳ ಬಳಿಗೆ ತೆರಳುವಾಗ ಎಚ್ಚರವಹಿಸಿ.

ಇದನ್ನೂ ಓದಿ: Brain Eating Amoeba: ಏನಿದು ಮೆದುಳು ತಿನ್ನುವ ಅಮೀಬಾ? ಇದರಿಂದ ನಮಗೂ ಅಪಾಯ ಇದೆಯೆ?

Continue Reading

ಆರೋಗ್ಯ

Tulsi Tea Benefits: ನಿತ್ಯವೂ ತುಳಸಿ ಚಹಾ ಕುಡಿಯುವುದರಿಂದ ಏನೆಲ್ಲ ಲಾಭಗಳಿವೆ ಗೊತ್ತೇ?

Tulsi Tea Benefits: ಮಳೆಗಾಲ ಬಂದರಂತೂ ಕಾಡುವ ಶೀತ, ಕೆಮ್ಮು ನೆಗಡಿ ಸಮಸ್ಯೆಗಳಿಗೆಲ್ಲ ತುಳಸಿ ರಾಮ ಬಾಣದಂತೆ ಕೆಲಸ ಮಾಡುತ್ತದೆ. ನಮ್ಮ ಮನೆಯಂಗಳದ ತುಳಸಿಯ ಆರೋಗ್ಯದ ಲಾಭಗಳ ಬಗ್ಗೆ ಕೆಲವೊಮ್ಮೆ ನಮಗೆ ಅವಜ್ಞೆಯಿದೆ. ಶೀತ, ನೆಗಡಿಯಾದಾಗ ವೈದ್ಯರನ್ನು ಎಡತಾಕುವ ನಾವು ನಿತ್ಯವೂ ಕೆಲವು ಅಭ್ಯಾಸಗಳನ್ನು ಮಾಡಿಕೊಂಡರೆ ಹಲವು ಸಮಸ್ಯೆಗಳಿಂದ ಪಾರಾಗಬಹುದು.

VISTARANEWS.COM


on

Tulsi Tea Benefits
Koo

ತುಳಸಿ ಗಿಡಕ್ಕೆ ನಮ್ಮ ಮನೆಗಳಲ್ಲಿ ವಿಶೇಷ ಸ್ಥಾನವಿದೆ. ತುಳಸಿಯನ್ನು ದೇವರಂತೆ ಪೂಜಿಸುವ ನಾವು, ಆಯುರ್ವೇದದಲ್ಲಿ ಹೇಳಿರುವಂತೆ ತುಳಸಿಯ ಲಾಭಗಳನ್ನೂ ಪಡೆಯುತ್ತೇವೆ. ನಿತ್ಯವೂ ದೇವರಿಗೆ ಅರ್ಪಿಸುವ ತುಳಸಿಯ ಎಲೆಗಳಲ್ಲಿ ಎಂಥಾ ಶಕ್ತಿಯಿದೆ ಎಂಬುದು ಪ್ರತಿಯೊಬ್ಬರಿಗೂ ತಿಳಿದಿದೆ. ಮಳೆಗಾಲ ಬಂದರಂತೂ ಕಾಡುವ ಶೀತ, ಕೆಮ್ಮು ನೆಗಡಿ ಸಮಸ್ಯೆಗಳಿಗೆಲ್ಲ ತುಳಸಿ ರಾಮ ಬಾಣದಂತೆ ಕೆಲಸ ಮಾಡುವ ನಮ್ಮ ಮನೆಯಂಗಳದ ತುಳಸಿಯ ಆರೋಗ್ಯದ ಲಾಭಗಳ ಬಗ್ಗೆ ಕೆಲವೊಮ್ಮೆ ನಮಗೆ ಅವಜ್ಞೆಯಿದೆ. ಶೀತ, ನೆಗಡಿಯಾದಾಗ ವೈದ್ಯರನ್ನು ಎಡತಾಕುವ ನಾವು ನಿತ್ಯವೂ ಕೆಲವು ಅಭ್ಯಾಸಗಳನ್ನು ಮಾಡಿಕೊಂಡರೆ ಹಲವು ಸಮಸ್ಯೆಗಳಿಂದ ಪಾರಾಗಬಹುದು. ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡಿಕೊಂಡು ಈ ಎಲ್ಲ ಸಮಸ್ಯೆಗಳು ನಮ್ಮ ಹತ್ತಿರ ಸುಳಿಯದಂತೆ ನಮ್ಮನ್ನು ನಾವು ಕಾಪಾಡಬಹುದು. ಬನ್ನಿ, ಕೇವಲ ಒಂದು ತುಳಸಿ ಚಹಾ ಮಾಡಿಕೊಂಡು ನಿತ್ಯವೂ ಕುಡಿಯುವುದರಿಂದ ಯಾವೆಲ್ಲ ಲಾಭಗಳಿವೆ (Tulsi Tea Benefits) ಎಂಬುದನ್ನು ನೋಡೋಣ. ತುಳಸಿ ನಿಮ್ಮ ಮನೆಯಂಗಳದಲ್ಲಿ ಬೇಕಾದಷ್ಟು ಬೇಕಾಬಿಟ್ಟಿಯಾಗಿ ಬೆಳೆದುಕೊಂಡಿದೆ ಎಂದಾದರೆ, ತುಳಸಿಯ ಒಂದೆರಡು ಎಲೆಯನ್ನು ನಿತ್ಯವೂ ಬಾಯಲ್ಲಿ ಹಾಕಿ ಜಗಿಯಬಹುದು. ತುಳಸಿ ಗಿಡ ಇಲ್ಲ ಎಂದಾದಲ್ಲಿ, ಒಣಗಿದ ತುಳಸಿ ಎಲೆಯ ಪುಡಿಯನ್ನು ತರಿಸಿಕೊಳ್ಳಬಹುದು. ಅಥವಾ ಮನೆಯಂಗಳದ ಗಿಡದಿಂದ ನಿತ್ಯವೂ ತುಳಸೀ ಎಲೆಯನ್ನು ಕೊಯ್ದು ಚಹಾ ಮಾಡಿಕೊಂಡು (ನೀರಿನಲ್ಲಿ ಕುದಿಸಿ ಸೋಸಿಕೊಂಡು) ಕುಡಿಯಬಹುದು.

Relaxed woman at home breathing fresh air Horse Gram Benefits

ಉಸಿರಾಟ ಸುಗಮ

ತುಳಸೀ ಚಹಾವನ್ನು ನಿತ್ಯವೂ ಸೇವಿಸುವುದರಿಂದ ಉಸಿರಾಟದ, ಶ್ವಾಸಕೋಶಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಉತ್ತಮ ಪರಿಹಾರ ದೊರೆಯುತ್ತದೆ. ಕಫ ಕಟ್ಟಿಕೊಳ್ಳುವ ಸಮಸ್ಯೆ ಇರುವವರಿಗೆ, ಬಹುಬೇಗನೆ ಶೀತ, ನೆಗಡಿಯಂತಹ ಸಮಸ್ಯೆಯಾಗುವ ಮಂದಿಗೆ, ಅಸ್ತಮಾ ತೊಂದರೆ ಇರುವವರಿಗೆ ತುಳಸೀ ಚಹಾ ಉತ್ತಮ. ಇದು ದೇಹದಲ್ಲಿ ರೋಗನಿರೋಧಕತೆಯನ್ನು ಹೆಚ್ಚಿಸಿ, ಕಟ್ಟಿಕೊಂಡ ಕಫವನ್ನು ಕರಗಿಸುವಲ್ಲಿ ನೆರವಾಗುವ ಮೂಲಕ ಉಸಿರಾಟವನ್ನು ಸುಗಮವಾಗುವಂತೆ ಮಾಡುತ್ತದೆ.

Woman Meditating in the Workplace Sitting in Front of a Laptop Practicing Stress Relief Exercises Diabetes Control

ಮಾನಸಿಕ ಒತ್ತಡ ಕಡಿಮೆ

ಕೆಲವು ಸಂಶೋಧನೆಗಳ ಪ್ರಕಾರ ತುಳಸಿಯ ಚಹಾ ಕುಡಿಯುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ತುಳಸಿ ಚಹಾ ಕಾರ್ಟಿಸೋಲ್‌ ಹಾರ್ಮೋನಿನ ಸಮತೋಲನಕ್ಕೆ ಸಹಾಯ ಮಾಡುವುದರಿಂದ ಒತ್ತಡ, ಖಿನ್ನತೆಯಂತಹ ಮಾನಸಿಕ ಸಮಸ್ಯೆಗಳಿಗೂ ಕೊಂಚ ಮಟ್ಟಿನ ಪರಿಹಾರ ನೀಡುತ್ತದೆ.

heart attack and Diabetes control

ಸಕ್ಕರೆ ಪ್ರಮಾಣ ನಿಯಂತ್ರಿಸುತ್ತದೆ

ನಿತ್ಯವೂ ಕುಡಿಯುವ ಹಾಲು ಹಾಕಿದ ಚಹಾ ಕಾಫಿಗಿಂತ ತುಳಸಿ ಚಹಾ ಒಳ್ಳೆಯದು. ಇದು ದೇಹದಲ್ಲಿನ ಸಕ್ಕರೆಯ ಪ್ರಮಾಣವನ್ನು ಸಮತೋಲನಕ್ಕೆ ತರುವಲ್ಲಿಯೂ ನೆರವಾಗುತ್ತದೆ. ಹಾಗಾಗಿ ಇದು ಮಧುಮೇಹಿಗಳಿಗೆ ಬಹಳ ಒಳ್ಳೆಯದು.

oral health

ಬಾಯಿಯ ಆರೋಗ್ಯ ಚೆನ್ನಾಗಿರುತ್ತದೆ

ತುಳಸಿ ಚಹಾವನ್ನು ಸೇವಿಸುವುದರಿಂದ ಬಾಯಿಯ ಆರೋಗ್ಯ ಚೆನ್ನಾಗಿರುತ್ತದೆ. ತುಳಸಿಯು ಬ್ಯಾಕ್ಟೀರಿಯಾಗಳನ್ನು ಓಡಿಸುವ ಕೆಲಸ ಮಾಡುವುದರಿಂದ ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳ ವಿರುದ್ಧವೂ ಕೆಲಸ ಮಾಡುತ್ತದೆ. ಬಾಯಿಯನ್ನು, ಹಲ್ಲುಗಳನ್ನು ಸ್ವಚ್ಛವಾಗಿಡುತ್ತದೆ. ಮೌತ್‌ ಫ್ರೆಶ್ನರ್‌ನಂತೆ ಕೆಲಸ ಮಾಡುತ್ತದೆ. ಬಾಯಿಯ ದುರ್ವಾಸನೆಗೂ ಇದು ಒಳ್ಳೆಯದು.

Rheumatoid Arthritis

ಸಂಧಿವಾತಕ್ಕೆ ಪರಿಹಾರ

ಸಂಧಿವಾತದಂತಹ ಸಮಸ್ಯೆ ಇರುವ ಮಂದಿಗೆ ತುಳಸಿ ಚಹಾ ಒಳ್ಳೆಯದು. ತುಳಸಿಯಲ್ಲಿರುವ ಯುಗೆನಾಳ್‌ ಎಂಬ ಎಣ್ಣೆಯಂಶದಲ್ಲಿ ಇನ್‌ಫ್ಲಮೇಟರಿ ಗುಣಗಳಿರುವುದರಿಂದ ಇದು ಜೀರ್ಣಾಂಗವ್ಯೂಹ ಹಾಗೂ ದೇಹದ ಗಂಟುಗಳ ಆರೋಗ್ಯದಲ್ಲಿ ಸಹಾಯ ಮಾಡುತ್ತದೆ.

ಇದನ್ನೂ ಓದಿ: Mosquito Repellent Plants: ನಿಮಗೆ ಗೊತ್ತೆ? ಈ 5 ಬಗೆಯ ಗಿಡಗಳು ಸೊಳ್ಳೆಗಳನ್ನು ಓಡಿಸುತ್ತವೆ!

ಕಫ ನೀರಾಗುತ್ತದೆ

ತುಳಸಿಯ ಜೊತೆಗೆ ಶುಂಠಿ, ಕರಿಮೆಣಸು, ವೀಳ್ಯದೆಲೆ ಇತ್ಯಾದಿಗಳನ್ನೂ ಸೇರಿಸಿ ನೀರಿನಲ್ಲಿ ಕುದಿಸಿ ಸೋಸಿಕೊಂಡು ಕಷಾಯ ಮಾಡಿಕೊಂಡು ಕುಡಿದರೆ ಎದೆಯಲಲಿ ಕಟ್ಟಿಕೊಂಡ ಕಫ ನೀರಾಗುತ್ತದೆ. ಒಣಕೆಮ್ಮು, ಕಫದ ಜೊತೆಗೆ ಬರುವ ಕೆಮ್ಮು, ಗಂಟಲು ಕೆರೆತ/ನೋವು ಇತ್ಯಾದಿಗಳಿಗೂ ದಿವ್ಯೌಷಧವಾಗಿ ಕೆಲಸ ಮಾಡುತ್ತದೆ.

Tulsi Tea

ಹೆಚ್ಚು ಸೇವನೆ ಒಳ್ಳೆಯದಲ್ಲ

ತುಳಸಿ ಸ್ವಲ್ಪ ಅಸಿಡಿಕ್‌ ಗುಣವನ್ನೂ ಹೊಂದಿರುವುದರಿಂದ ಹೆಚ್ಚು ಸೇವನೆ ಒಳ್ಳೆಯದಲ್ಲ. ದಿನಕ್ಕೊಮ್ಮೆ ಕುಡಿಯುವುದಕ್ಕೆ ಅಡ್ಡಿಯಿಲ್ಲ. ದಿನಕ್ಕೊಂದೆರಡು ಎಲೆ ಜಗಿಯುವುದರಿಂದ ಸಮಸ್ಯೆ ಬಾರದು. ಆದರೆ ಅತಿಯಾದರೆ ಒಳ್ಳೆಯದಲ್ಲ ಎಂಬುದನ್ನು ನೆನಪಿಡಿ.

Continue Reading

ಕರ್ನಾಟಕ

Fortis Hospital: 111 ಕೆಜಿ ತೂಕವಿದ್ದ ಬಾಲಕನಿಗೆ ಪಾರ್ಶ್ವವಾಯು ತಪ್ಪಿಸಿದ ʼಬೆನ್ನೆಲುಬಿನ ಡಿಸ್ಕ್ʼ ಶಸ್ತ್ರಚಿಕಿತ್ಸೆ

Fortis Hospital: ಬೆನ್ನುಮೂಳೆಯ ಡಿಸ್ಕ್‌ಲೊಕೇಟ್ ಆಗಿದ್ದ ಪರಿಣಾಮ, ಪಾರ್ಶ್ವವಾಯುಗೆ ಒಳಗಾಗುವ ಸಾಧ್ಯತೆ ಇದ್ದ 111 ಕೆ.ಜಿ. ತೂಕದ 15 ವರ್ಷದ ಬಾಲಕನಿಗೆ, ‘ಮೈಕ್ರೋ-ಲುಂಬಾರ್ ಡಿಸ್ಸೆಕ್ಟಮಿ’ ಎಂಬ ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಯನ್ನು ಬನ್ನೇರುಘಟ್ಟ ಫೋರ್ಟಿಸ್‌ ಆಸ್ಪತ್ರೆ ವೈದ್ಯರ ತಂಡ ಯಶಸ್ವಿಯಾಗಿ ಮಾಡಿದೆ.

VISTARANEWS.COM


on

A 15 year old boy weighing 111 kg underwent successful spinal disc surgery that avoided potential paralysis
Koo

ಬೆಂಗಳೂರು: ಬೆನ್ನುಮೂಳೆಯ ಡಿಸ್‌ಲೋಕೇಟ್ ಆಗಿದ್ದ ಪರಿಣಾಮ ಪಾರ್ಶ್ವವಾಯುವಿಗೆ ಒಳಗಾಗುವ ಸಾಧ್ಯತೆ ಇದ್ದ 111 ಕೆ.ಜಿ. ತೂಕದ 15 ವರ್ಷದ ಬಾಲಕನಿಗೆ, ‘ಮೈಕ್ರೋ-ಲುಂಬಾರ್ ಡಿಸ್ಸೆಕ್ಟಮಿ’ ಎಂಬ ಬೆನ್ನು ಮೂಳೆಯ ಶಸ್ತ್ರಚಿಕಿತ್ಸೆಯನ್ನು ಬನ್ನೇರುಘಟ್ಟ ಫೋರ್ಟಿಸ್‌ ಆಸ್ಪತ್ರೆ (Fortis Hospital) ವೈದ್ಯರ ತಂಡ ಯಶಸ್ವಿಯಾಗಿ ಮಾಡಿದೆ.

ಫೋರ್ಟಿಸ್‌ ಆಸ್ಪತ್ರೆಯ ನರಶಸ್ತ್ರಚಿಕಿತ್ಸಕ ಸಲಹೆಗಾರ ಡಾ. ಗಣೇಶ್ ವಿ. ನೇತೃತ್ವದ ತಂಡ ಒಂದು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿದೆ. ಈ ಕುರಿತು ಮಾತನಾಡಿದ ಅವರು, 111 ಕೆ.ಜಿ. ತೂಕದ ಹೊಂದಿದ್ದ 15 ವರ್ಷದ ಸೈಯದ್ ಸಲಾಹುದೀನ್ ಕ್ವಾದ್ರಿ ಎಂಬ ಬಾಲಕನಿಗೆ ಕಾರಣಾಂತರಗಳಿಂದ ಬೆನ್ನಿನ ಮೂಳೆಯ ಡಿಸ್‌ಲೊಕೇಟ್‌ ನಿಂದ ಅಸಾಧ್ಯ ನೋವು ಕಾಣಿಸಿಕೊಂಡಿತ್ತು. ಈ ನೋವು ಕ್ರಮೇಣ ಬೆನ್ನಿನಿಂದ ಕಣಕಾಲುವರೆಗೂ ಹಬ್ಬಿತ್ತು.

ಇದನ್ನೂ ಓದಿ: Assembly Session: ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ; ಏನೆಲ್ಲ ಅರ್ಹತೆ ಇರಬೇಕು?

ನಾಲ್ಕು ತಿಂಗಳುಗಳ ಕಾಲ ಈ ನೋವನ್ನು ಹಾಗೇ ನಿರ್ಲಕ್ಷಿಸಿದ್ದಾರೆ. ಪರಿಣಾಮ ಈ ಬಾಲಕ ನಡೆಯಲು, ಕೂರಲು ಸಹ ಆಗದಷ್ಟು ಅಗಾಧ ನೋವಿಗೆ ಒಳಗಾಗಿದ್ದ. ಫೋರ್ಟಿಸ್‌ ಆಸ್ಪತ್ರೆಗೆ ದಾಖಲಾದ ಬಳಿಕ ಅವರಿಗೆ ಎಂಆರ್‌ಐ ಸ್ಕ್ಯಾನ್‌ ಮಾಡುವ ಮೂಲಕ ಅವರ ಬೆನ್ನುಮೂಳೆಯ L3-L4 ಮಟ್ಟದಲ್ಲಿ ತೀವ್ರವಾದ ಪೋಸ್ಟರೊಸೆಂಟ್ರಲ್ ಡಿಸ್ಕ್ ಎಕ್ಸ್‌ಟ್ರಶನ್ ಆಗಿರುವುದು ಬಹಿರಂಗವಾಯಿತು. ಹೀಗಾಗಿ ಬಾಲಕನ ಕಣಕಾಲಿನವರೆಗೂ ಡಿಸ್‌ಲೊಕೇಟ್‌ನ ಪರಿಣಾಮ ಸಂಭವಿಸಿತ್ತು.

ಈ ನೋವನ್ನು ಹೀಗೆ ನಿರ್ಲಕ್ಷ್ಯ ಮಾಡಿದ್ದರೆ ಮುಂದೊಂದು ದಿನ ಆ ಕಾಲು ಪಾರ್ಶ್ವವಾಯು ಆಗುವ ಸಾಧ್ಯತೆ ತುಂಬಾ ಇತ್ತು. ಬಾಲಕನ ಆರೋಗ್ಯದ ಗಂಭೀರತೆಯನ್ನು ಪರಿಗಣಿಸಿ ಆತನಿಗೆ ಮೈಕ್ರೊ-ಲುಂಬರ್ ಡಿಸೆಕ್ಟಮಿ ಶಸ್ತ್ರಚಿಕಿತ್ಸೆಯನ್ನು ಶಿಫಾರಸು ಮಾಡಿದೆವು, ಇದು ನರಗಳ ಮೇಲಿನ ಒತ್ತಡವನ್ನು ನಿವಾರಿಸಲು ಡಿಸ್‌ಲೊಕೇಟ್‌ ಆಗಿರುವ ಡಿಸ್ಕ್ ಅನ್ನು ತೆಗೆದುಹಾಕುವ ಶಸ್ತ್ರಚಿಕಿತ್ಸಾ ವಿಧಾನವಾಗಿದೆ.

ಇದನ್ನೂ ಓದಿ: Assembly Session: ಕಾರ್ಮಿಕ ಇಲಾಖೆಯಿಂದ ಸಿನಿ ಕಾರ್ಮಿಕರಿಗೆ ಭರ್ಜರಿ ಗಿಫ್ಟ್!

ಬಾಲಕನ ತೂಕ ಅಧಿಕವಾಗಿದ್ದರಿಂದ ಈ ಶಸ್ತ್ರಚಕಿತ್ಸೆ ಸಾಕಷ್ಟು ಸವಾಲಾಗಿತ್ತು, ಆದರೂ ನಮ್ಮ ತಂಡ ಕಾರ್ಯಕ್ಷಮತೆಯಿಂದ ಸುರಕ್ಷತೆಯಾಗಿ ಈ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ್ದೇವೆ. ಈ ಶಸ್ತ್ರಚಿಕಿತ್ಸೆಯ ನಂತರ ಬಾಲಕನ ನೋವು ಸಂಪೂರ್ಣ ನಿವಾರಣೆಯಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.

Continue Reading

ಆರೋಗ್ಯ

Children Mobile Addiction: ನಮ್ಮ ಮಕ್ಕಳು ಎಷ್ಟು ಹೊತ್ತು ಮೊಬೈಲ್‌ ನೋಡಬಹುದು?

Children Mobile Addiction: ಮಕ್ಕಳಿಗೆ ದಿನದ ಸ್ಕ್ರೀನ್‌ ಸಮಯ ಎಷ್ಟಿರಬೇಕು? ಚಿಣ್ಣರು ಕೇಳುವಷ್ಟು ಹೊತ್ತೇ? ಹೆತ್ತವರಿಗೆ ಅನುಕೂಲ ಅಥವಾ ಪುರುಸೊತ್ತು ಆಗುವಲ್ಲಿಯವರೆಗೇ? ದಿನಕ್ಕಿಷ್ಟು ಹೊತ್ತು ಎಂದು ನಿಗದಿ ಮಾಡುವುದು ಸೂಕ್ತವೇ? ಹೆಚ್ಚು ಸಮಯ ಪರದೆಗೆ ಅಂಟಿಕೊಂಡಿದ್ದರೆ ಸಮಸ್ಯೆಯೇನು? ಇಂಥ ಹಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ. ಮಕ್ಕಳ ಕೈಯಲ್ಲಿ ಸದಾ ಗೆಜೆಟ್‌ ಇದ್ದರೆ ಏನಾಗುತ್ತದೆ ಎಂಬುದನ್ನು ಅರ್ಥ ಮಾಡಿಸುವ ಮಾಹಿತಿ ಇಲ್ಲಿದೆ.

VISTARANEWS.COM


on

By

Children Mobile Addiction
Koo

ಮಕ್ಕಳೆಂದರೆ ಹಾರಾಡುವ (Children Mobile Addiction) ಬಣ್ಣದ ಚಿಟ್ಟೆಗಳೆಂಬ (butterfly) ಭಾವ ಇತ್ತೀಚೆಗೆ ಕಡಿಮೆಯಾಗುತ್ತಿದೆ. ಕೂತಲ್ಲೇ ಅಂಟಿಕೊಂಡು, ಕರೆದರೂ ಕೇಳದ ಸ್ಥಿತಿಯಲ್ಲಿ, ಮಾತು ಬಾರದವರಂತೆ, ಎದುರಿನವರ ಪರಿಚಯವೂ ಇಲ್ಲದಂತೆ, ಹಸಿವೆ-ನೀರಡಿಕೆಗಳ ಪರಿವೆಯಿಲ್ಲದಂತೆ ಕೂತಿರುತ್ತಾರೆ… ಕೈಯಲ್ಲೊಂದು ಮೊಬೈಲು (mobile) ಹಿಡಿದು.

ಅದನ್ನು ಅವರ ಕೈಯಿಂದ ಕಿತ್ತರೆ ಟ್ಯಾಬ್‌ ಹಿಡಿಯುತ್ತಾರೆ, ಅದನ್ನೂ ಕಸಿದುಕೊಂಡರೆ ಎಲ್ಲಿ ಲ್ಯಾಪ್‌ಟಾಪ್‌ ಸಿಗುವಂತಿದೆ ನೋಡುತ್ತಾರೆ, ಕಡೆಗೆ ಟಿವಿಯಾದರೂ ಬೇಕು. ಅಂತೂ ಕೈಯಲ್ಲೊಂದು ಸ್ಕ್ರೀನ್‌ ಇಲ್ಲದಿದ್ದರೆ ಮಕ್ಕಳು ತಾವಾಗಿರುವುದಿಲ್ಲ ಎಂಬಂತೆ ಭಾಸವಾಗುತ್ತದೆ. ಅವರನ್ನೇ ಬಿಟ್ಟರೆ ಎಚ್ಚರ ಇದ್ದಷ್ಟೂ ಹೊತ್ತು ಕೈಯಲ್ಲಿ ಗೆಜೆಟ್‌ ಹಿಡಿದೇ ಇರುತ್ತಾರೆ. ಆದರೆ ಚಿಕ್ಕ ಮಕ್ಕಳು, ಅಂದರೆ ನಾಲ್ಕು-ಐದು ವರ್ಷದ ಒಳಗಿನ ಮಕ್ಕಳು ದಿನಕ್ಕೆ ಎಷ್ಟು ಹೊತ್ತು ಸ್ಕ್ರೀನ್‌ ನೋಡಬಹುದು?

ಜಾರಿಕೊಳ್ಳುತ್ತಿದ್ದಾರೆ ಹೆತ್ತವರು

ಹೆತ್ತವರ ವಿಷಯಕ್ಕೆ ಬಂದರೆ, ಬಹಳ ಮಂದಿಗೆ ಮಕ್ಕಳು ತಮ್ಮಷ್ಟಕ್ಕೆ ತಾವಿರುವುದು ಅನುಕೂಲವೇ. ಅವರು ಏನಾದರೂ ಮಾಡಿಕೊಳ್ಳಲಿ, ತಮ್ಮ ತಂಟೆಗೆ ಬಾರದಿದ್ದರೆ ಸಾಕು ಎಂಬ ಮನಸ್ಥಿತಿ ಹೆಚ್ಚಿವರದ್ದು. ಇದಕ್ಕೆ ಕಾರಣಗಳೂ ಇಲ್ಲದಿಲ್ಲ.

ದಿನವಿಡೀ ದುಡಿದು ಹೈರಾಣಾಗಿ ಬಂದ ದೊಡ್ಡವರಿಗೂ ತಮ್ಮದೇ ಆದ ಸಮಯ ಬೇಕು. ಮನೆಯದ್ದೇ ಆದ ನಿತ್ಯದ ಕೆಲಸಗಳನ್ನು ನಿಭಾಯಿಸಬೇಕು. ಮಾರನೇ ದಿನಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಇದಿಷ್ಟರ ನಡುವೆ ಮಕ್ಕಳನ್ನೂ ಸುಧಾರಿಸಬೇಕೆಂದರೆ…? ಹಾಗಾಗಿ ಸುಲಭದ ಉಪಾಯವೆಂಬಂತೆ ಅವರ ಕೈಗೊಂದು ಗೆಜೆಟ್‌ ಕೊಟ್ಟರೆ ಮುಗಿಯಿತು ಸಮಸ್ಯೆ. ಆದರಿದು ಸಾಧುವೇ? ಮಕ್ಕಳ ದೈಹಿಕ, ಮಾನಸಿಕ ಬೆಳವಣಿಗೆಗಳ ಗತಿಯೇನು?ಮನೆಯಲ್ಲಿ ದೊಡ್ಡವರೂ ಕೈಯಲ್ಲಿರುವ ಮೊಬೈಲ್‌ ಗೀರುವುದನ್ನೇ ಮಕ್ಕಳು ಸದಾ ಕಾಣುವಾಗ ಅದನ್ನು ತಪ್ಪು ಎಂದು ಹೇಳುವುದು ಹೇಗೆ? ಅದು ಒಳ್ಳೆಯದಲ್ಲ ಎಂದು ಅರ್ಥ ಮಾಡಿಸುವುದು ಹೇಗೆ?

Children Mobile Addiction


ಏನಾಗುತ್ತದೆ?

ಮಕ್ಕಳ ಕೈಯಲ್ಲಿ ಸದಾ ಗೆಜೆಟ್‌ ಇದ್ದರೆ ಏನಾಗುತ್ತದೆ ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳೋಣ. ದಿನಕ್ಕೆ ಮಿತಿಮೀರಿದ ಸ್ಕ್ರೀನ್‌ ಸಮಯದಿಂದಾಗಿ ಮಕ್ಕಳಲ್ಲಿ ಏಕಾಗ್ರತೆಯ ತೀವ್ರ ಸಮಸ್ಯೆ ಉಂಟಾಗುತ್ತದೆ. ಸಾಮಾಜಿಕ ಸಂಬಂಧಗಳು ಕಳಚಿ ಒಂಟಿತನದ ಭಾವನೆ ಎಳವೆಯಿಂದಲೇ ಬರುತ್ತದೆ. ಗಮನ ಸೆಳೆಯುವುದಕ್ಕಾಗಿ ರಚ್ಚೆ ಹಿಡಿಯುವ, ಅತಿಯಾದ ಚಂಚಲತೆಯನ್ನು ತೋರಿಸುತ್ತಾರೆ.

ಗಮನ ಕೊರತೆಯ ಅಸ್ವಸ್ಥತೆ (hyperactivity and attention deficit disorder) ಎಂದು ಕರೆಯಲಾಗುವ ಈ ಸಮಸ್ಯೆಯು ಮೆದುಳಿನ ಸಾಮರ್ಥ್ಯವನ್ನು ಕುಗ್ಗಿಸುತ್ತದೆ. ಈ ಎಲ್ಲವುಗಳ ಫಲವಾಗಿ, ಈ ಮಕ್ಕಳಲ್ಲಿ ಋಣಾತ್ಮಕ ವರ್ತನೆಗಳು ಕಂಡುಬರುತ್ತವೆ. ಶಿಸ್ತಿಲ್ಲದ, ಯಾವ ನಿಬಂಧನೆಗಳಿಗೂ ಒಳಪಡದ, ನಂಟುಗಳನ್ನೂ ಹಚ್ಚಿಕೊಳ್ಳದ ಬೀಡುಬೀಸಾದ ವರ್ತನೆ ಚಿಕ್ಕಂದಿನಲ್ಲೇ ಕಾಣಿಸಿಕೊಳ್ಳುತ್ತದೆ.

ದೃಷ್ಟಿದೋಷ

ಕೈಯಲ್ಲಿ ಹಿಡಿದು ನೋಡುವಂಥ ಗೆಜೆಟ್‌ಗಳನ್ನು ಸಾಮಾನ್ಯವಾಗಿ 2 ಅಡಿಗಿಂತ ಕಡಿಮೆ ಅಂತರಲ್ಲಿ ಇರಿಸಿಕೊಂಡು ವಾಚಿಸುತ್ತಾರೆ ಮಕ್ಕಳು. ಇದರಿಂದ ದೃಷ್ಟಿದೋಷವೂ ಹೆಚ್ಚುತ್ತದೆ. ಮೊದಲಿಗಿಂತ ಅತಿ ಹೆಚ್ಚಿನ ಪ್ರಮಾಣದಲ್ಲಿ ಬಾಲವಾಡಿಯ ಮಕ್ಕಳ ಕಣ್ಣಿಗೆ ಕನ್ನಡಕಗಳು ಬಂದಿರುವುದನ್ನು ಕಾಣಬಹುದು.

ದೈಹಿಕ ಆರೋಗ್ಯ

ಕೂತಲ್ಲೇ ಕೂತು ಕಳೆಯುವುದಾದರೆ ದೇಹ ಸ್ವಾಸ್ಥ್ಯ ಹಾಳಾಗುವುದೇ ತಾನೇ? ಮಕ್ಕಳೆಂದರೆ ಚಟುವಟಿಕೆಯ ಚಿಲುಮೆಗಳಂತೆ ಇರಬೇಕಾದವರು. ಓಡುವವರನ್ನು ಹಿಡಿದು ಕೂರಿಸುವುದು ಹೇಗೆ ಎಂದು ಹೆತ್ತವರು ಚಿಂತಿಸಬೇಕು. ಆದರೆ ಈಗಿನ ದಿನಗಳಲ್ಲಿ ಕೂತವರನ್ನು ಎಬ್ಬಿಸಿ ಆಡುವುದಕ್ಕೆ ಹೊರಗೆ ಕಳಿಸುವುದು ಹೇಗೆ ಎಂಬ ಚಿಂತೆಯಲ್ಲಿದ್ದರೆ ಸಹ.

Children Mobile Addiction


ಮಿತಿ ಎಷ್ಟು?

ದೊಡ್ಡ ಮಕ್ಕಳಿಗೆ ಶಾಲೆಯಿಂದ ಬರುವ ಹೋಮ್ ವರ್ಕ್‌ ಸಲುವಾಗಿ ಒಂದಿಷ್ಟು ಹೊತ್ತು ಪರದೆಯ ಮುಂದೆ ಕೂರುವುದು ಅನಿವಾರ್ಯವಾಗಬಹುದು. ಅದರ ಹೊರತಾಗಿ ಎಷ್ಟು ಹೊತ್ತು ಪರದೆಗೆ ಅಂಟಿಕೊಂಡಿರುತ್ತಾರೆ ಎಂಬುದನ್ನು ಗಮನಿಸಿ.

ಇದನ್ನೂ ಓದಿ: Smartphone Charging Tips: ನಿಮ್ಮ ಸ್ಮಾರ್ಟ್ ಪೋನ್ ಬ್ಯಾಟರಿ ಹೆಚ್ಚು ಬಾಳಿಕೆ ಬರಲು ಹೀಗೆ ಮಾಡಿ

ಶಾಲೆಯ ದಿನಗಳಲ್ಲಿ ಅನಗತ್ಯ ಸ್ಕ್ರೀನ್‌ ಸಮಯ ಇಲ್ಲದಿದ್ದರೇ ಒಳಿತು. ರಜೆಯ ದಿನಗಳಲ್ಲಿ ಪರದೆಯ ಪರಿಮಿತಿಯನ್ನು ಒಂದು ತಾಸಿಗೆ ನಿಗದಿಗೊಳಿಸಿ. ಬಾಲವಾಡಿ ಅಥವಾ ಅದಕ್ಕಿಂತ ಚಿಕ್ಕ ಮಕ್ಕಳಿಗೆ ದಿನಕ್ಕೆ ಒಂದು ತಾಸಿನ ಸ್ಕ್ರೀನ್‌ ಸಮಯ ಸಾಕಾಗುತ್ತದೆ. ಉಳಿದ ಸಮಯವನ್ನು ಅರ್ಥಪೂರ್ಣವಾಗಿ ಕಳೆಯುವುದು ಹೇಗೆ ಎಂಬುದನ್ನು ಹೆತ್ತವರೇ ನಿರ್ಧರಿಸಬೇಕಾಗುತ್ತದೆ.

Continue Reading
Advertisement
Yezdi Roadster
ಆಟೋಮೊಬೈಲ್6 mins ago

Yezdi Roadster : ಯೆಜ್ಡಿ ರೋಡ್‌ಸ್ಟರ್ ಜತೆಗೆ ಈ ಹಲವು ಆ್ಯಕ್ಸೆಸರಿಗಳಿರುವ ಟ್ರಯಲ್ ಪ್ಯಾಕ್ ಉಚಿತ

Viral Video
ವೈರಲ್ ನ್ಯೂಸ್36 mins ago

Viral Video: 300 ಮೊಸಳೆಗಳಿರುವ ಕೆರೆಯಲ್ಲಿ ಬೈಕ್‌, ಕಾರು ಸ್ಟಂಟ್‌; ಹುಚ್ಚಾಟ ಮೆರೆದ ಯುವಕರಿಗೆ ಆಗಿದ್ದೇನು ಗೊತ್ತಾ?

ಪ್ರಮುಖ ಸುದ್ದಿ37 mins ago

Karnataka Rain: ವರುಣಾರ್ಭಟಕ್ಕೆ ರಾಜ್ಯದ ಹಲವೆಡೆ ನದಿಗಳು ಉಕ್ಕಿ ಹರಿದು ನೆರೆ ಸೃಷ್ಟಿ; ಕುಸಿದ ಸೇತುವೆಗಳು!

Paris Olympics 2024
ಪ್ರಮುಖ ಸುದ್ದಿ42 mins ago

Paris Olympics 2024 : 8 ಚಿನ್ನ, 1 ಬೆಳ್ಳಿ, 3 ಕಂಚು: ಒಲಿಂಪಿಕ್ಸ್ ಹಾಕಿ ಸ್ಪರ್ಧೆಯಲ್ಲಿ ಭಾರತ ತಂಡದ ಸಾಧನೆಗಳ ವಿವರ ಇಲ್ಲಿದೆ

Viral Video
ವೈರಲ್ ನ್ಯೂಸ್1 hour ago

Viral Video: ಸಫಾರಿಯಲ್ಲಿ ಪ್ರವಾಸಿಗರ ಎದುರೇ ಸಿಂಹಗಳ ಕಾಮಕೇಳಿ!

Olympic Games History
ಕ್ರೀಡೆ1 hour ago

Olympic Games History: ಒಲಿಂಪಿಕ್ಸ್​ನಲ್ಲಿ ಗ್ರೀಸ್​ ದೇಶಕ್ಕೆ ವಿಶೇಷ ಮಾನ್ಯತೆ ನೀಡುವುದೇಕೆ?

Amitabh Bachchan holds umbrella for Jaya Bachchan
ಬಾಲಿವುಡ್1 hour ago

Amitabh Bachchan: ಅಮಿತಾಭ್ ರೊಮ್ಯಾಂಟಿಕ್ ಮೂಡ್‌ನಲ್ಲಿದ್ದರೂ ಮುಖ ಊದಿಸಿಕೊಂಡೇ ಇದ್ದ ಜಯಾ ಬಚ್ಚನ್!

Viral Video
ವೈರಲ್ ನ್ಯೂಸ್2 hours ago

Viral Video: ನೋಡ ನೋಡ್ತಿದ್ದಂತೆ ಮೂರನೇ ಮಹಡಿಯಿಂದ ಬಿದ್ದ ಮಹಿಳೆ; ಶಾಕಿಂಗ್‌ ವಿಡಿಯೋ ವೈರಲ್‌

Tauba Tauba
Latest2 hours ago

Tauba Tauba : ಲಂಡನ್‌ ಬೀದಿಯಲ್ಲಿ ‘ತೌಬಾ ತೌಬಾ’ ಹಾಡಿಗೆ ಸಖತ್‌ ಆಗಿ ಸ್ಟೆಪ್ಸ್‌ ಹಾಕಿದ ಬೆಡಗಿಯರು; ವಿಡಿಯೊ ವೈರಲ್

CM Siddaramaiah karnataka jobs reservation
ಪ್ರಮುಖ ಸುದ್ದಿ2 hours ago

Karnataka Jobs Reservation: ಖಾಸಗಿ ಉದ್ಯಮಗಳಲ್ಲಿ ಕನ್ನಡಿಗರಿಗೆ ಶೇ.75 ಮೀಸಲಾತಿ ಮಾತ್ರ; ಆಡಳಿತ ಹುದ್ದೆಗಳಲ್ಲಿ ಶೇ.50; ಉದ್ಯಮಿಗಳಿಗೆ ಬೆಚ್ಚಿತೇ ಸರ್ಕಾರ?

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ1 day ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ1 day ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ2 days ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ2 days ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ2 days ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ3 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ3 days ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ3 days ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

karnataka Rain
ಮಳೆ3 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ4 days ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

ಟ್ರೆಂಡಿಂಗ್‌