Congress Convention | ಬಿಜೆಪಿ ಸುಳ್ಳಿನ ಫ್ಯಾಕ್ಟರಿ ಎಂದು ಜನಕ್ಕೆ ಗೊತ್ತಾಗಿದೆ: ಸಿದ್ದರಾಮಯ್ಯ - Vistara News

ಕರ್ನಾಟಕ

Congress Convention | ಬಿಜೆಪಿ ಸುಳ್ಳಿನ ಫ್ಯಾಕ್ಟರಿ ಎಂದು ಜನಕ್ಕೆ ಗೊತ್ತಾಗಿದೆ: ಸಿದ್ದರಾಮಯ್ಯ

Congress Convention | 2018ರ ಚುನಾವಣೆ ವೇಳೆ ಬಿಜೆಪಿಯವರು 600 ಭರವಸೆಗಳನ್ನು ಕೊಟ್ಟಿದ್ದರು. ಅದರಲ್ಲಿ ಶೇ.10 ಕೂಡ ಈಡೇರಿಸಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

VISTARANEWS.COM


on

Congress Convention
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ತುಮಕೂರು: ಕೇಂದ್ರದಿಂದ ಯಾರೇ ಬಂದರೂ ರಾಜ್ಯ ಸರ್ಕಾರದ ಮೇಲೆ‌ ಇರುವ ಆಡಳಿತ ವಿರೋಧಿ ಅಲೆ ಕಡಿಮೆ ಮಾಡಲು ಸಾಧ್ಯವಿಲ್ಲ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಪ್ರಧಾನಿ ನರೇಂದ್ರ ಮೋದಿ ಯಾರೂ ಇದನ್ನು ಬದಲಿಸಲು ಆಗಲ್ಲ. ಜನ ಈಗಾಗಲೇ ಕಾಂಗ್ರೆಸ್ ಪರವಾಗಿ ಮತ ಹಾಕಲು ತೀರ್ಮಾನ ಮಾಡಿದ್ದಾರೆ. ಹಾಗಾಗಿ ಕರ್ನಾಟಕದಲ್ಲಿ ಕಾಂಗ್ರೆಸ್ (Congress Convention) ಪರವಾಗಿ ಬದಲಾವಣೆಯ ಗಾಳಿ ಬೀಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಜಿಲ್ಲೆಯ ತುರುವೇಕೆರೆಯಲ್ಲಿ ಬುಧವಾರ ಆಯೋಜಿಸಿದ್ದ ಕಾಂಗ್ರೆಸ್‌ ಸಮಾವೇಶದಲ್ಲಿ ಮಾತನಾಡಿ, ಬಿಜೆಪಿಯವರು ಬರೀ ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ಸರ್ಕಾರದ 5 ವರ್ಷದ ಆಡಳಿತವನ್ನು ಜನರು ನೆನಪಿಸಿಕೊಳ್ಳುತ್ತಿದ್ದಾರೆ. ಹಳೇ ಮೈಸೂರು ಪ್ರಾಂತ್ಯವನ್ನು ಬಿಜೆಪಿ ಈಗ ಟಾರ್ಗೆಟ್‌ ಮಾಡಿದೆ. ಹಾಗಾದರೆ, ಉತ್ತರ ಕರ್ನಾಟಕದ ಕ್ಷೇತ್ರಗಳನ್ನೆಲ್ಲ ಇವರು ಗೆದ್ದಾಯ್ತಾ ಎಂದು ಪ್ರಶ್ನಿಸಿದರು.

ಹಳೇ ಮೈಸೂರು ಪ್ರಾಂತ್ಯದ ಜನ ಬಿಜೆಪಿ ಮಾತಿಗೆ ಮಣೆ ಹಾಕಲ್ಲ. ಬಿಜೆಪಿ ಸುಳ್ಳಿನ ಫ್ಯಾಕ್ಟರಿ ಅಂತಾ ಜನಕ್ಕೆ ಗೊತ್ತಾಗಿದೆ. 2018ರಲ್ಲಿ ಬಿಜೆಪಿಯವರು 600 ಭರವಸೆಗಳನ್ನು ಕೊಟ್ಟಿದ್ದರು. ಅದರಲ್ಲಿ ಶೇ.10 ಕೆಲಸ ಮಾಡಿಲ್ಲ. ಅವರು ಕೊಟ್ಟ ಯಾವ ಮಾತನ್ನೂ ಉಳಿಸಿಕೊಂಡಿಲ್ಲ ಎಂದು ಕಿಡಿಕಾರಿದರು.

ಇದನ್ನೂ ಓದಿ | Karnataka Politics : ಸೋನಿಯಾ ಗಾಂಧಿ ಮುಂದೆ ಸಿದ್ದರಾಮಯ್ಯ ಇಲಿ, ಬೆಕ್ಕು, ಜಿರಳೆ ಆಗಿರುತ್ತಾರೆ: ಶ್ರೀರಾಮುಲು ತಿರುಗೇಟು

ರಾಮನಗರದಲ್ಲಿ ರಾಮಮಂದಿರ ನಿರ್ಮಾಣ ವಿಚಾರಕ್ಕೆ ಪ್ರತಿಕ್ರಿಯಿಸಿ,‌ ರಾಮ‌ ಮಂದಿರವನ್ನು ನಮ್ಮೂರಿನಲ್ಲಿ ಕಟ್ಟಿಲ್ಲವೇ? ನಮ್ಮೂರಿನಲ್ಲಿ ಕಟ್ಟಿರುವುದೂ ರಾಮ ಮಂದಿರವಲ್ಲವೇ? ನಮ್ಮೂರಲ್ಲೂ, ಇವರೂರಲ್ಲೂ, ಅವರೂರಲ್ಲೂ ಎಲ್ಲ ಊರಿನಲ್ಲೂ ಕಟ್ಟಿದ್ದಾರೆ. ರಾಮಭಜನೆ ಮಾಡಲು ಶುರು ಮಾಡಿ, ರಾಮ-ರಹೀಮ ಎಲ್ಲರೂ ಒಂದೇ ಎಂದು ಗಾಂಧೀಜಿ ಅವರು ಹೇಳಿದ್ದರು ಎಂದು ತಿಳಿಸಿದರು.

ಸಿದ್ದರಾಮಯ್ಯ ಆಪ್ತ ಹನುಮಂತು ಹಾಗೂ ಜನಾರ್ದನ ರೆಡ್ಡಿ ಭೇಟಿ ಬಗ್ಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್‌ನಲ್ಲಿ ಲಕ್ಷಾಂತರ ಕಾರ್ಯಕರ್ತರಿದ್ದಾರೆ. ಯಾರೋ ಒಬ್ಬರು ಹೋದರೆ ಹೋಗಲಿ. ಈ ತಿಂಗಳ‌ ಕೊನೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಆಗುತ್ತದೆ. 150 ಅಭ್ಯರ್ಥಿಗಳು ಈ ಪಟ್ಟಿಯಲ್ಲಿ ಇರಲಿದ್ದಾರೆ ಎಂದು ಹೇಳಿದರು.

ಮನಮೋಹನ್ ಸಿಂಗ್ ಇದ್ದಾಗ ಸಿದ್ದರಾಮಯ್ಯ ಅನುದಾನ ತರಲು ಆಗಲಿಲ್ಲ ಎಂಬ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆಗೆ ಉತ್ತರಿಸಿ, ಆಹಾರ ಭದ್ರತೆ ಕಾಯ್ದೆ ತಂದವರು ಯಾರು? ಅವರು ನಾನು ಮುಖ್ಯಮಂತ್ರಿ ಆದ ಮೇಲೆ ಪ್ರಧಾನಿಯಾಗಿ ಇದ್ದಿದ್ದು ಒಂದೇ ವರ್ಷ. ಈ ಒಂಬತ್ತು ವರ್ಷ ಅಧಿಕಾರದಲ್ಲಿ ಇದ್ದವರು ಏನೇನು ಕೊಟ್ಟಿದ್ದಾರಂತೆ, 15ನೇ ಹಣಕಾಸಿನ ಆಯೋಗದಲ್ಲಿ 5495 ಕೋಟಿ ರೂ. ವಿಶೇಷ ಅನುದಾನ ನೀಡಲಾಗಿತ್ತು. ಈ ಅನುದಾನ ಬಂತಾ ಎಂದು ಪ್ರಶ್ನಿಸಿದರು.

ಅಧಿವೇಶನದಲ್ಲಿ ಸಿದ್ದರಾಮಯ್ಯ ಮಹದಾಯಿ ಬಗ್ಗೆ ಮಾತನಾಡಿಲ್ಲ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಅಸೆಂಬ್ಲಿ ಇನ್ನೊಂದು ವಾರ ಮಾಡಬೇಕಿತ್ತು. ಆದರೆ, ಯಾಕೆ‌ ಮೊಟಕುಗೊಳಿಸಿದರು? ಉತ್ತರ ಕರ್ನಾಟಕದ ಬಗ್ಗೆ ನೀವು ಮಾತನಾಡಿದ್ದೀರಾ, ಜಗದೀಶ್ ಶೆಟ್ಟರ್ ಮಹದಾಯಿ ಬಗ್ಗೆ ಮಾತನಾಡಿದ್ದಾರಾ? ಅವರಿಗೆ ನೈತಿಕತೆ ಇದೆಯಾ ಎಂದು ಕಿಡಿಕಾರಿದರು.

2018ರಲ್ಲಿ ಯಡಿಯೂರಪ್ಪ, ಮನೋಹರ್ ಪರಿಕ್ಕರ್ ಬಳಿಯಿಂದ ಲೆಟರ್ ತಂದು, ನಾವು ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಮಹದಾಯಿ ಸಮಸ್ಯೆ ಇತ್ಯರ್ಥ ಮಾಡಿ ಕುಡಿಯಲು ನೀರು ಕೊಡುತ್ತೇವೆ. ಇದನ್ನು ರಕ್ತದಲ್ಲಿ ಬರೆದು ಕೊಡುತ್ತೇನೆ ಎಂದಿದ್ದರು, ಹೇಳಿದಂತೆ ಮಾಡಿದರಾ ಎಂದು ಅವರು ಕಿಡಿಕಾರಿದರು.

2018ರ ಅ.14ರಂದು 13.42 ಟಿಎಂಸಿ ಕರ್ನಾಟಕಕ್ಕೆ, 24 ಟಿಎಂಸಿ ನೀರು ಗೋವಾಕ್ಕೆ, 1.3 ಟಿಎಂಸಿ ನೀರು ಮಹಾರಾಷ್ಟ್ರಕ್ಕೆ ಎಂದು ಸುಪ್ರೀಂ ಕೋರ್ಟ್ ತೀರ್ಪು ಕೊಟ್ಟಿತ್ತು. ಅದು ಇವರು ಮಾಡಿದ್ದಲ್ಲ. 2020ರ ಫೆ. 27ರಂದು ಗೆಜೆಟ್‌ ನೋಟಿಫಿಕೇಷನ್ ಆಯಿತು. ಅವತ್ತಿನಿಂದ ಜಗದೀಶ್ ಶೆಟ್ಟರ್, ಬೊಮ್ಮಾಯಿ ಏನು ಮಾಡುತ್ತಿದ್ದರು. ಈಗ ಚುನಾವಣೆ ಬಂದಿದೆ ಎಂದು ಮಹದಾಯಿ ಯೋಜನೆ ಡಿಪಿಆರ್ ಒಪ್ಪಿಕೊಂಡಿದ್ದೇವೆ ಎನ್ನುತ್ತಿದ್ದಾರೆ. ಇದು ಡೋಂಗಿತನ ಅಲ್ಲವೇ ಎಂದು ಹರಿಹಾಯ್ದರು.

ಕರ್ನಾಟಕಕ್ಕೆ ಒಂದು ಹನಿ ನೀರು ಕೊಡಲ್ಲ ಎಂಬ ಸೋನಿಯಾ ಗಾಂಧಿ ಹೇಳಿಕೆ‌ ಬಗ್ಗೆ ಪ್ರತಿಕ್ರಿಯಿಸಿ, ಆ ಮಾತನ್ನು ಅವರು ಗೋವಾದಲ್ಲಿ ಹೇಳಿದ್ದಾರೋ ಇಲ್ಲವೋ ಗೊತ್ತಿಲ್ಲ. ಅದು ಗೋವಾ ಚುನಾವಣೆ ಸಂದರ್ಭದಲ್ಲಿ ಮಾತನಾಡಿರುವುದು ಎಂದರು.

2010ರಲ್ಲಿ ನಮ್ಮ ಸರ್ಕಾರವಿದ್ದಾಗ ಪಾಂಚಾಲ್ ನ್ಯಾಯಾಧೀಕರಣ ಆಯಿತು. ಸೂಕ್ತ ಸಾಕ್ಷ್ಯಾಧಾರ ಕೊಟ್ಟವರು ನಾವು. 2018ರಲ್ಲಿ ಪಾಂಚಾಲ್ ತೀರ್ಪು ಬಂತು. ಗೆಜೆಟ್‌ ನೋಟಿಫಿಕೇಷನ್ ಮಾಡಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಸುಪ್ರೀಂ ಕೋರ್ಟ್‌ಗೆ ಮೆಲ್ಮನವಿ ಹಾಕಿದ್ದೆವು. 2020ರಲ್ಲಿ ನೋಟಿಫಿಕೇಷನ್ ಆಯ್ತು. ಅದು ನಮ್ಮ ಕಾಲದಲ್ಲಿ ಮಾಡಿದ್ದು, ಇವರು ಏನನ್ನು ಮಾಡದೆ ಈಗ ಚುನಾವಣೆ ಬಂದಿದೆ ಎಂದು ಡಿಪಿಆರ್ ಅನುಮೋದನೆ ಮಾಡಿದ್ದೇವೆ ಎಂದು ನೀರಾವರಿ ಇಲಾಖೆಯಿಂದ ಹೇಳಿಸಿದ್ದಾರೆ ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮಾತನಾಡಿ, ತುರುವೇಕೆರೆಯಿಂದ ರಾಜ್ಯ ಮತ್ತು ಜಿಲ್ಲೆಗೆ ಹೊಸ ಸಂದೇಶ ಹೋಗಬೇಕು. ಆ ರೀತಿಯಲ್ಲಿ ಜನ ಸೇರಿದ್ದಾರೆ. ರಾಜ್ಯದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಕಾಂಗ್ರೆಸ್ ಅಲೆ ಜೋರಾಗಿದ್ದು, ಬಿಜೆಪಿ ಸರ್ಕಾರ ಮುಳುಗುತ್ತಾ ಇದೆ. ಆಪರೇಷನ್ ಕಮಲದಿಂದ ಜಗ್ಗೇಶ್ ಹೊರಟು ಹೋದರು. ಅದಾದ ಬಳಿಕ ಯಾರೂ ತುರುವೇಕೆರೆಯಿಂದ ಕಾಂಗ್ರೆಸ್‌‌ನಿಂದ ಗೆದ್ದಿಲ್ಲ. ಹೀಗಾಗಿ ಜಿಲ್ಲೆಯ ಜನತೆ ಈ ಬಾರಿ ಕಾಂಗ್ರೆಸ್‌ಗೆ ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಬೆಮೆಲ್ ಕಾಂತರಾಜು, ಗುಬ್ಬಿ ವಾಸು, ಮಧು ಬಂಗಾರಪ್ಪ ಎಲ್ಲರೂ ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಬಂದಿದ್ದಾರೆ. ವೈ.ಎಸ್.ವಿ. ದತ್ತ ಕೂಡ ಅರ್ಜಿ ಹಾಕಿದ್ದಾರೆ. ಇವರೆಲ್ಲರೂ ಕಾಂಗ್ರೆಸ್ ಕೈ ಬಲಪಡಿಸಲು ಪಕ್ಷಕ್ಕೆ ಬರುತ್ತಿದ್ದಾರೆ. ಯಡಿಯೂರಪ್ಪ ಅಧಿಕಾರ ಬಿಟ್ಟು ಹೋಗುವಾಗ ಕಣ್ಣೀರು ಹಾಕಿದ್ದರು. ಬಿಜೆಪಿ ಉತ್ತಮ ಆಡಳಿತ ಕೊಟ್ಟರೆ ಯಾಕೆ ಅವರು ಕಣ್ಣೀರು ಹಾಕುತ್ತಿದ್ದರು. ಕಾಂಗ್ರೆಸ್ 126 ಸ್ಥಾನ, ಬಿಜೆಪಿ 60 ಸ್ಥಾನ ಎಂದು ನಮ್ಮ ಸಮೀಕ್ಷೆ ಹೇಳುತ್ತಿದೆ. ಹೊಸ ಮನೆ, ಹಳೆ ಮನೆ ಎಂದು‌ ನಾವು ನೋಡಲ್ಲ. ಎಲ್ಲರನ್ನು ಒಳ್ಳೇ ರೀತಿ ನೋಡಿಕೊಳ್ಳುತ್ತೇವೆ ಎಂದು ಹೇಳಿದರು.

ಕಟೀಲ್ ಲವ್ ಜಿಹಾದ್ ಬಗ್ಗೆ ಚರ್ಚೆ ಮಾಡಿ, ಅಭಿವೃದ್ಧಿ ಬಗ್ಗೆ ಬೇಡ ಮಾತುಕತೆ ಎನ್ನುತ್ತಾರೆ. ಸಿದ್ದರಾಮಯ್ಯ ಕಾಲದಲ್ಲಿ ಲಕ್ಷಾಂತರ ಎಕರೆ ನೀರಾವರಿ ಮಾಡಿದ್ದೇವೆ. ಎಲ್ಲೂ ಪವರ್ ಕಟ್‌ ಆಗಿರಲಿಲ್ಲ. ಗುತ್ತಿಗೆದಾರ ತುಮಕೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನೂ ನಾಲ್ಕು ಗುತ್ತಿಗೆದಾರರು ಸಂಕಷ್ಟದಲ್ಲಿ ಇದ್ದಾರೆ. ಕರ್ನಾಟಕ ಎಂದೂ ಇಂತಹ ಭ್ರಷ್ಟ ಸರ್ಕಾರ ಕಂಡಿರಲಿಲ್ಲ. ಬಿಜೆಪಿ ಜನರ ಭಾವನೆಗಳನ್ನು ಒಡೆಯುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಮನಸ್ಸುಳನ್ನು ಒಂದುಗೂಡಿಸುತ್ತದೆ ಎಂದು ಹೇಳಿದರು.

ರೈತರ ಆದಾಯ ಡಬಲ್ ಮಾಡಲು ಬಿಜೆಪಿ ಸಂಕಲ್ಪ ಮಾಡಿತ್ತು. ಅವರ ಆಶ್ವಾಸನೆ ಸುಳ್ಳಾಗಿದೆ. ಕಾಂಗ್ರೆಸ್ ಇತಿಹಾಸ ಈ ದೇಶದ ಇತಿಹಾಸ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜನರು ಅಧಿಕಾರಕ್ಕೆ ಬಂದ ಹಾಗೆ. ಎಲ್ಲ ವರ್ಗದ ಜನರಿಗೆ ಶಕ್ತಿ ಕೊಟ್ಟು ನಾವು ಬಂದಿದ್ದೆವು. ಬಿಜೆಪಿ ಸರ್ಕಾರದಲ್ಲಿ ಅಚ್ಛೇ ದಿನ ಬಂದಿಲ್ಲ. ಜನರ ಆದಾಯ ಹೆಚ್ಚಾಗಿಲ್ಲ. ಇದೆಲ್ಲ ಬದಲಾವಣೆ ಆಗಬೇಕಾದರೆ ನೀವು ಸಹಾಯ ಮಾಡಬೇಕು. ಭ್ರಷ್ಟಾಚಾರ ರಹಿತ ಸರ್ಕಾರ ನಾವು ನೀಡುತ್ತೇವೆ. ಕೈನಾಯಕರಿಗೆ ಶಕ್ತಿ ಕೊಡಿ, ತುರುವೇಕೆರೆಯಲ್ಲಿ ಬಹಳ ವರ್ಷಗಳಿಂದ ಕಾಂಗ್ರೆಸ್ ಸೋತಿದೆ. ಈ ಬಾರಿ ಕಾಂಗ್ರೆಸ್ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಇದನ್ನೂ ಓದಿ | Karnataka Politics : ನಾಯಿ ಮರಿ ಹೇಳಿಕೆ ಸಿದ್ದು ಸಂಸ್ಕೃತಿ ತೋರಿಸುತ್ತದೆ, ಜನರೇ ಬುದ್ಧಿ ಕಲಿಸುತ್ತಾರೆ: ಸಿಎಂ ಬೊಮ್ಮಾಯಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು

HSRP Number Plate: ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ನೋಂದಣಿಗೆ ಡೆಡ್‌ಲೈನ್‌! ಇನ್ನೂ ಎರಡೇ ದಿನ ಬಾಕಿ

HSRP Number Plate : ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ನೋಂದಣಿಗೆ ಈಗಾಗಲೇ ಹಲವು ಬಾರಿ ದಿನಾಂಕವನ್ನು ವಿಸ್ತರಣೆ ಮಾಡಲಾಗಿತ್ತು. ಇದೀಗ ನಂಬರ್‌ ಪ್ಲೇಟ್‌ ನೋಂದಣಿಗೆ ಇನ್ನೆರಡು ದಿನಗಳು ಮಾತ್ರ ಬಾಕಿ ಇವೆ ಅಂದರೆ, ಜೂನ್‌ 12ಕ್ಕೆ ಮುಕ್ತಾಯವಾಗಲಿದೆ.

VISTARANEWS.COM


on

By

HSRP Number Plate
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ‌ರಾಜ್ಯದಲ್ಲಿ ಎಲ್ಲ ಹಳೆಯ ವಾಹನಗಳಿಗೆ (Old Vehicles) ಅತಿ ಸುರಕ್ಷಿತ ನೋಂದಣಿ ಫಲಕ (ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್‌ ನಂಬರ್‌ ಪ್ಲೇಟ್‌ (HSRP Number Plate) ಕಡ್ಡಾಯವಾಗಿ ಅಳವಡಿಸಲು ಇದ್ದ ಗಡುವು ಇನ್ನೂ ಎರಡೇ ದಿನದಲ್ಲಿ ಮುಕ್ತಾಯವಾಗಲಿದೆ. ಈ ಹಿಂದೆ ಫೆಬ್ರವರಿ 17ಕ್ಕೆ ಇದ್ದ ನೋಂದಣಿ ಗಡುವನ್ನು ರಾಜ್ಯ ಸರ್ಕಾರ ಮೇ 31ಕ್ಕೆ ವಿಸ್ತರಣೆ ಮಾಡಿತ್ತು. ಬಳಿಕ ಜೂನ್‌ 12ರವರೆಗೆ ಗಡುವು ನೀಡಿದ್ದು, ಇನ್ನೆರಡು ದಿನದಲ್ಲಿ ಮುಕ್ತಾಯವಾಗಲಿದೆ. ನೋಂದಣಿ ಮಾಡಿಸಿಕೊಳ್ಳದ ವಾಹನ ಸವಾರರ ವಿರುದ್ಧ ಕ್ರಮ ಜರುಗಿಸುವ ತೀರ್ಮಾನಕ್ಕೆ ಸಾರಿಗೆ ಇಲಾಖೆ ಬಂದಿದೆ. ಮೊದಲ ಬಾರಿಗೆ ಸಿಕ್ಕಿಬಿದ್ದರೆ 500 ರೂಪಾಯಿ ದಂಡ, ಎರಡನೇ ಬಾರಿ ಸಿಕ್ಕಿಬಿದ್ದರೆ 1000 ರೂಪಾಯಿಗೆ ಏರಿಕೆ ಮಾಡುವ ನಿಟ್ಟಿನಲ್ಲಿ ನಿರ್ಧಾರವನ್ನು ತೆಗೆದುಕೊಳ್ಳಲು ಚಿಂತಿಸಲಾಗಿದೆ ಎನ್ನಲಾಗಿದೆ.

ಅಧಿಕೃತ ವೆಬ್‌ಸೈಟ್‌ನಲ್ಲಿ ಮಾತ್ರವೇ ನೋಂದಣಿ ಮಾಡಿ

ಅದೆಷ್ಟೋ ಜನರಿಗೆ ಎಲ್ಲಿ ಅಪ್ಲೈ ಮಾಡಬೇಕು ಎಂಬುದೇ ಗೊತ್ತಿಲ್ಲ. ಹೀಗಾಗಿ ಗೊತ್ತಾಗದೇ ಮಧ್ಯವರ್ತಿಗಳ ಮೊರೆ ಹೋಗುತ್ತಿದ್ದಾರೆ ಕೂಡ. ಇನ್ನು ಕೆಲವರು ಯಾವುದ್ಯಾವುದೋ ವೆಬ್‌ಸೈಟ್‌ ಓಪನ್‌ ಮಾಡಿ ವಂಚನೆಗೆ ಒಳಗಾಗುತ್ತಿದ್ದು, ಇದನ್ನು ತಪ್ಪಿಸುವ ಕೆಲಸ ಆಗಬೇಕಿದೆ. ಇನ್ನು ಮೊಬೈಲ್‌ ಇಲ್ಲವೇ ಡೆಸ್ಕ್‌ಟಾಪ್‌ ಮೂಲಕವೇ ನೋಂದಣಿ ಮಾಡಿಸಬಹುದಾಗಿದ್ದು, ಇದಕ್ಕೆ ಸರಳ ವಿಧಾನವಿದೆ.

ರಾಜ್ಯದಲ್ಲಿ 2019ರ ಏಪ್ರಿಲ್ 1ಕ್ಕಿಂತ ಮೊದಲು ನೋಂದಾಯಿಸಲ್ಪಟ್ಟ (ಹಳೆಯ / ಅಸ್ತಿತ್ವದಲ್ಲಿರುವ ವಾಹನಗಳು) ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳು, ಲಘು ಮೋಟಾರು ವಾಹನ, ಪ್ರಯಾಣಿಕ ಕಾರು, ಮಧ್ಯಮ ಮತ್ತು ಭಾರೀ ವಾಣಿಜ್ಯ ವಾಹನ, ಟ್ರೈಲರ್, ಟ್ರ್ಯಾಕ್ಟರ್ ಇತ್ಯಾದಿ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕಗಳನ್ನು ಅಳವಡಿಸುವುದು ಕಡ್ಡಾಯ ಮಾಡಿ ರಾಜ್ಯ ಸರ್ಕಾರ ಆದೇಶಿಸಿತ್ತು.

ಏನಿದು ಎಚ್ಎಸ್ಆರ್‌ಪಿ ನಂಬರ್‌ ಪ್ಲೇಟ್‌?

ಎಚ್‌ಎಸ್‌ಆರ್‌ಪಿ ಎಂದರೆ ಅತಿ ಸುರಕ್ಷಿತ ನೋಂದಣಿ ಫಲಕವಾಗಿದೆ. ಇವುಗಳನ್ನು ಅಲ್ಯೂಮಿನಿಯಂ ಲೋಹದಿಂದ ಮಾಡಿರುತ್ತಾರೆ. ಈ ಪ್ಲೇಟ್‌ನ ಮೇಲ್ಭಾಗದ ಎಡಬದಿಯಲ್ಲಿ ಅಶೋಕ ಚಕ್ರ ಮುದ್ರೆಯ 20X20 ಮಿ.ಮೀ ಅಳತೆಯ ಕ್ರೋಮಿಯಂ ಹೋಲೋಗ್ರಾಮ್‌ ಇರುತ್ತದೆ. ಇಂಗ್ಲಿಷ್ ಅಕ್ಷರಗಳು ಹಾಗೂ ನಂಬರ್‌ಗಳು ಉಬ್ಬಿಕೊಂಡಿರುವ ರೀತಿ ಅಚ್ಚಾಗಿರುತ್ತವೆ. ಈ ನಂಬರ್‌ ಪ್ಲೇಟ್‌ಗಳನ್ನು ಎರಡು ಲಾಕ್‌ ಪಿನ್‌ಗಳನ್ನು ಬಳಸಿ ಅಳವಡಿಸುತ್ತಾರೆ. ಇದರಿಂದ ಒರಿಜಿನಲ್‌ ಯಾವುದು, ನಕಲಿ ಯಾವುದು ಎಂದು ಸುಲಭವಾಗಿ ಗುರುತಿಸಬಹುದು.

ಇದನ್ನೂ ಓದಿ: NEET UG : ನೀಟ್-ಯುಜಿ ಫಲಿತಾಂಶ ಹಿಂಪಡೆಯಲು ಕೋರಿ ಸುಪ್ರೀಂ ಕೋರ್ಟ್​​ಗೆ ಅರ್ಜಿ

ಎಚ್ಎಸ್ಆರ್‌ಪಿ ಪಡೆಯುವುದು ಹೇಗೆ?

ಕರ್ನಾಟಕ ಸಾರಿಗೆ ಇಲಾಖೆ ವೆಬ್‌ಸೈಟ್‌ ಅಥವಾ ಸೊಸೈಟಿ ಆಫ್‌ ಇಂಡಿಯನ್‌ ಆಟೋಮೊಬೈಲ್‌ ಮ್ಯಾನುಫ್ಯಾಕ್ಚರರ್ಸ್‌ (ಎಸ್‌ಐಎಎಂ) ವೆಬ್‌ಸೈಟ್‌ ಭೇಟಿ ನೀಡಿ ಮತ್ತು Book HSRP ಅನ್ನು ಕ್ಲಿಕ್‌ ಮಾಡಿ.
-ನಿಮ್ಮ ವಾಹನ ತಯಾರಕರನ್ನು ಆಯ್ಕೆ ಮಾಡಿ.
-ವಾಹನದ ಮೂಲ ವಿವರಗಳನ್ನು ಭರ್ತಿ ಮಾಡಿ.
-HSRP ಅಳವಡಿಕೆಗಾಗಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ಡೀಲರ್ ಸ್ಥಳವನ್ನು ಆಯ್ಕೆ ಮಾಡಿ.
-HSRP ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸಿ, ಶುಲ್ಕ ಪಾವತಿಯನ್ನು ನಗದು ರೂಪದಲ್ಲಿ ಮಾಡುವಂತಿಲ್ಲ.
-ವಾಹನ ಮಾಲೀಕರ ಮೊಬೈಲ್ ಸಂಖ್ಯೆಗೆ ಒ.ಟಿ.ಪಿ ರವಾನಿಸಲಾಗುವುದು.
-ನಿಮ್ಮ ಅನುಕೂಲಕ್ಕೆ ತಕ್ಕಂತಹ HSRP ಅಳವಡಿಕೆಯ ದಿನಾಂಕ ಮತ್ತು ಸಮಯವನ್ನು ಆಯ್ಕೆ ಮಾಡಿ.
-ನಿಮ್ಮ ವಾಹನದ ಯಾವುದೇ ತಯಾರಕ/ಡೀಲರ್ ಸಂಸ್ಥೆಗೆ ಭೇಟಿ ನೀಡಿ.
-ವಾಹನ ಮಾಲೀಕರ ಕಚೇರಿ ಆವರಣ / ಮನೆಯ ಸ್ಥಳದಲ್ಲಿ HSRP ಅಳವಡಿಕೆಗಾಗಿ ಆಯ್ಕೆಯನ್ನು ಹೊಂದಬಹುದು.

ಎಚ್‌ಎಸ್‌ಆರ್‌ಪಿ ಯಾಕೆ ಮತ್ತು ವಿಶೇಷತೆ ಏನು?

-HSRP ನೋಂದಣಿ ಫಲಕಗಳು ಅತ್ಯಂತ ಸುರಕ್ಷಿತವಾಗಿದ್ದು ಇವುಗಳನ್ನು ಬದಲಿಸುವುದು, ವಿರೂಪಗೊಳಿಸುವುದು ಸಾಧ್ಯವಿಲ್ಲ.

-ನಂಬರ್‌ ಪ್ಲೇಟ್‌ನ ಒಂದು ಬದಿಯಲ್ಲಿ ನೀಲಿ ಬಣ್ಣದ ಚಕ್ರವನ್ನು ಹೋಲುವ ಹಾಲೋಗ್ರಾಮ್‌ ಇರುತ್ತದೆ. ಇದರ ಕೆಳಗಡೆ 10 ನಂಬರಿನ ವಿಶಿಷ್ಟ ಗುರುತಿನ ಸಂಖ್ಯೆ ಇರುತ್ತದೆ. ಅಂಕಿಗಳ ಮೇಲೆ ಆಂಗ್ಲಭಾಷೆಯಲ್ಲಿ ‘ಇಂಡಿಯಾ’ ಎಂಬ ಪದ ಹಲವೆಡೆ ಇರುತ್ತದೆ.
-ಸುರಕ್ಷಿತ ನಂಬರ್‌ ಪ್ಲೇಟ್‌ನಲ್ಲಿ ನಂಬರ್‌ ಪ್ಲೇಟ್‌ ನಕಲು ಮಾಡುವುದು ಸಾಧ್ಯವಿಲ್ಲ.
-ವಾಹನಗಳ ಕಳವು, ಅವುಗಳನ್ನು ಬಳಸಿ ಅಪರಾಧ ಚಟುವಟಿಕೆ ಮಾಡಿದಾಗ ಪರಿಶೀಲಿಸಲು ಎಚ್‌ಎಸ್‌ಆರ್‌ಪಿ ಸಹಕಾರಿಯಾಗಲಿದೆ.
-ರಸ್ತೆಗಳಲ್ಲಿ ಸಂಚರಿಸುವ ಎಲ್ಲ ವಾಹನಗಳನ್ನು ಗುರುತಿಸಲು ಸಹಕಾರಿ.
-ನೋಂದಣಿ ಫಲಕಗಳಲ್ಲಿ ಏಕರೂಪತೆ ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತವೆ.

ಹೆಚ್ಚುತ್ತಿವೆ ನಕಲಿ ಹಾವಳಿ

HSRP ನಂಬರ್‌ ಪ್ಲೇಟ್‌ಗಳನ್ನು ನಕಲಿ ಮಾಡಿ ವಂಚನೆ ಮಾಡುವ ಜಾಲವು ಇದ್ದು, ಸಾರ್ವಜನಿಕರು ಮೋಸ ಹೋಗದಂತೆ ಮನವಿ ಮಾಡಲಾಗುತ್ತಿದೆ. ಈ ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ನಂತೆಯೇ ಹೋಲಿಕೆ ಇರುವಂತೆ ಇಂಥವರು ಸಿದ್ಧಪಡಿಸಿ ಕೊಡುತ್ತಾರೆ. ಇದನ್ನು ಅಗ್ಗದ ಬೆಲೆಯಲ್ಲಿ ಕೊಡುವುದರಿಂದ ಜನರೂ ಗೊತ್ತಿಲ್ಲದೆ ಖರೀದಿ ಮಾಡುತ್ತಾರೆ. ಆದರೆ, ಅದರಲ್ಲಿ ಟ್ಯಾಂಪರ್‌ ಪ್ರೂಫ್‌ ವೈಶಿಷ್ಟ್ಯ, ಯುನೀಕ್‌ ಐಡೆಂಟಿಟಿ ಅಂಶಗಳು ಇರುವುದಿಲ್ಲ. ಇದರಿಂದ ಒಮ್ಮೆ ಆರ್‌ಟಿಒ ಪೊಲೀಸರಿಗೆ ಸಿಕ್ಕಿ ಬಿದ್ದರೆ ದಂಡ ಕಟ್ಟುವುದು ಗ್ಯಾರಂಟಿಯಾಗಿದೆ. ಇಲ್ಲಿ “IND” ಗುರುತಾಗಲೀ, ಅಶೋಕ ಚಕ್ರ ಚಿಹ್ನೆಯ Hot stamp ಆಗಲೀ ಇರುವುದಿಲ್ಲ. ಹೀಗಾಗಿ ಅಧಿಕೃತ ವಿತರಕರಿಂದ ಮಾತ್ರ ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ಗಳನ್ನು ಪಡೆದುಕೊಳ್ಳಬೇಕು ಎಂದು ಸರ್ಕಾರ ಸಹ ಹೇಳಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಪ್ರಮುಖ ಸುದ್ದಿ

PM Narendra Modi: ಇಂದು ಸಂಜೆ ನರೇಂದ್ರ ಮೋದಿ ಸಂಪುಟ ಮೊದಲ ಸಭೆ; ಏನು ಅಜೆಂಡಾ?

PM Narendra Modi: ಮೋದಿ 3.0 ಸರ್ಕಾರದ ಮೊದಲ ಸಂಪುಟ ಸಭೆ ಇದಾಗಿದೆ. ಇದೇ ಸಂದರ್ಭದಲ್ಲಿ ನೂತನ ಸಚಿವರಿಗೆ ಔತಣಕೂಟವನ್ನೂ ಮೋದಿ ಏರ್ಪಡಿಸಿದ್ದಾರೆ. ಇದೇ ಸಭೆಯಲ್ಲಿ ಖಾತೆ ಹಂಚಿಕೆ ಸಂಬಂಧ ಚರ್ಚೆ ನಡೆಯಲಿದೆ ಎನ್ನಲಾಗಿದೆ. ಮಿತ್ರ ಪಕ್ಷಗಳು ನಿರ್ದಿಷ್ಟ ಖಾತೆಗೆ ಡಿಮ್ಯಾಂಡ್ ಮಾಡಿವೆ.

VISTARANEWS.COM


on

pm narendra Modi Cabinet
Koo

ಹೊಸದಿಲ್ಲಿ: ಇಂದು ಸಂಜೆ 5 ಗಂಟೆಗೆ ನರೇಂದ್ರ ಮೋದಿ (PM Narendra Modi) ಅವರ ಮೂರನೇ ಅವಧಿಯ ಸರ್ಕಾರದ (Modi 3.0) ಮೊದಲ ಸಂಪುಟ ಸಭೆ (Cabinet meeting) ನಡೆಯಲಿದೆ. ಪ್ರಧಾನಿಯವರ ಲೋಕ ಕಲ್ಯಾಣ ಮಾರ್ಗದ ನಿವಾಸದಲ್ಲಿ ಸಭೆ ಆಯೋಜನೆಗೊಂಡಿದೆ.

ನಿನ್ನೆ ನರೇಂದ್ರ ಮೋದಿ ನೇತೃತ್ವದಲ್ಲಿ ಎನ್‌ಡಿಎ ಸರ್ಕಾರ ರಚನೆಯಾಗಿದೆ. ಪ್ರಧಾನಿಯಾಗಿ ಮೋದಿ ಇನ್ನಿತರ 72 ಸಚಿವರೊಂದಿಗೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು (Draupadi Murmu) ಅವರಿಂದ ಪ್ರಮಾಣ ವಚನ ಸ್ವೀಕರಿಸಿದವರಲ್ಲಿ ಕರ್ನಾಟಕದ ಐವರೂ ಸೇರಿದ್ದಾರೆ. ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದವರೊಂದಿಗೆ ಇಂದು ಮೋದಿ ಸಭೆ ನಡೆಸಲಿದ್ದಾರೆ.

ಮೋದಿ 3.0 ಸರ್ಕಾರದ ಮೊದಲ ಸಂಪುಟ ಸಭೆ ಇದಾಗಿದೆ. ಇದೇ ಸಂದರ್ಭದಲ್ಲಿ ನೂತನ ಸಚಿವರಿಗೆ ಔತಣಕೂಟವನ್ನೂ ಮೋದಿ ಏರ್ಪಡಿಸಿದ್ದಾರೆ. ಇದೇ ಸಭೆಯಲ್ಲಿ ಖಾತೆ ಹಂಚಿಕೆ ಸಂಬಂಧ ಚರ್ಚೆ ನಡೆಯಲಿದೆ ಎನ್ನಲಾಗಿದೆ. ಮಿತ್ರ ಪಕ್ಷಗಳು ನಿರ್ದಿಷ್ಟ ಖಾತೆಗೆ ಡಿಮ್ಯಾಂಡ್ ಮಾಡಿವೆ.

ಬಿಹಾರದ ನಿತೀಶ್‌ ಕುಮಾರ್‌ ಅವರು ಜೆಡಿಯುಗೆ ಕೃಷಿ ಖಾತೆ ನೀಡುವಂತೆ ಡಿಮ್ಯಾಂಡ್‌ ಮಾಡಿದ್ದಾರೆ. ಆದರೆ ಕರ್ನಾಟಕದ ಎಚ್‌.ಡಿ ಕುಮಾರಸ್ವಾಮಿ ಅವರೂ ಕೃಷಿ ಖಾತೆ ನೀಡಿದರೆ ನಿರ್ವಹಿಸಲು ತಾನು ಸಿದ್ಧ ಎಂಬ ಸಂದೇಶ ರವಾನಿಸಿದ್ದಾರೆ. ತೆಲುಗು ದೇಶಂನ ಚಂದ್ರಬಾಬು ನಾಯ್ಡು ಅವರೂ ಮಹತ್ವದ ಖಾತೆಗಳನ್ನು ಕೇಳಿದ್ದಾರೆ.

ಆದರೆ ಈಗ ಪ್ರಮಾಣ ವಚನ ತೆಗೆದುಕೊಂಡಿರುವ ಹಿನ್ನೆಲೆಯಲ್ಲಿ ನೋಡಿದರೆ, ಕ್ಯಾಬಿನೆಟ್‌ ದರ್ಜೆಯ 11 ಸ್ಥಾನಗಳನ್ನು ಬಿಜೆಪಿ ತನ್ನ ಜೊತೆಗೇ ಇಟ್ಟುಕೊಂಡಿದೆ. ಟಿಡಿಪಿಗೆ 2, ಜೆಡಿಯುಗೆ 2, ಜೆಡಿಎಸ್‌, ಶಿವಸೇನೆ, ಎಲ್‌ಜೆಪಿ, ಆರ್‌ಎಲ್‌ಡಿ ಮುಂತಾದ ಪಕ್ಷಗಳಿಗೆ ತಲಾ ಒಂದೊಂದು ಸ್ಥಾನಗಳನ್ನು ನೀಡಿದೆ. ಈಗ ಯಾವ ಖಾತೆ ಯಾರಿಗೆ ಎಂಬ ನಿರ್ಣಯ ಇನ್ನು ಆಗಬೇಕಿದೆ. ಮಿತ್ರಪಕ್ಷಗಳು ಮಹತ್ವದ ಖಾತೆಗಾಗಿ ಪಟ್ಟು ಹಿಡಿಯುತ್ತವೆಯೇ ಅಥವಾ ಕೊಟ್ಟದ್ದಕ್ಕೆ ತೃಪ್ತವಾಗುತ್ತವೆಯೇ ಎಂದು ನೋಡಬೇಕಿದೆ.

“ಒಕ್ಕೂಟ ವ್ಯವಸ್ಥೆಯ ಆಶಯ…” ನೂತನ ಪ್ರಧಾನಿ ಮೋದಿಗೆ ಶುಭ ಕೋರಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಪ್ರಧಾನ ಮಂತ್ರಿಯಾಗಿ (Prime minister) ಮೂರನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ ನರೇಂದ್ರ ಮೋದಿ (Narendra Modi) ಅವರಿಗೆ ಕರ್ನಾಟಕ ಸಿಎಂ ಸಿದ್ದರಾಮಯ್ಯ (CM Siddaramaiah) ಸಾಮಾಜಿಕ ಜಾಲತಾಣ X ಖಾತೆ ಮೂಲಕ ಶುಭ ಕೋರಿದ್ದಾರೆ.

“3ನೇ ಬಾರಿಗೆ ದೇಶದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಪ್ರಧಾನಿ @narendramodi ಅವರಿಗೆ ಅಭಿನಂದನೆಗಳು. ಕರುನಾಡಿನ ಅಭಿವೃದ್ಧಿಯ ನಮ್ಮ ಸಂಕಲ್ಪಕ್ಕೆ ನಿಮ್ಮ ಸಹಕಾರ ಇರಲಿದೆ, ಒಕ್ಕೂಟ ವ್ಯವಸ್ಥೆಯ ಆಶಯಗಳನ್ನು ಎತ್ತಿಹಿಡಿಯುತ್ತಾ ರಾಜ್ಯಗಳ ಹಿತಾಸಕ್ತಿಯನ್ನು ನೀವು ಗೌರವಿಸುತ್ತೀರೆಂದು ಭಾವಿಸಿದ್ದೇನೆ. ಸಂಪದ್ಭರಿತ ಕರ್ನಾಟಕದ ಮೂಲಕ ಸದೃಢ ಭಾರತ ನಿರ್ಮಾಣಕ್ಕಾಗಿ ನಿಮ್ಮ ಜೊತೆಯಾಗಿ ಶ್ರಮಿಸುವ ದಿನಗಳನ್ನು ಎದುರು ನೋಡುತ್ತಿದ್ದೇನೆ” ಎಂದು ಸಿದ್ದರಾಮಯ್ಯ ಹಾರೈಸಿದ್ದಾರೆ.

ಇದನ್ನೂ ಓದಿ: Narendra Modi: 3ನೇ ಬಾರಿ ಪ್ರಧಾನಿಯಾಗಿ ಮೋದಿ ಪ್ರಮಾಣ; ಇಲ್ಲಿದೆ ಬಾಲ್ಯದಿಂದ ವಿಶ್ವನಾಯಕತನಕದ ಜೀವನ ಚಿತ್ರಣ

Continue Reading

ಪ್ರಮುಖ ಸುದ್ದಿ

PM Narendra Modi: “ಒಕ್ಕೂಟ ವ್ಯವಸ್ಥೆಯ ಆಶಯ…” ಪ್ರಧಾನಿ ಮೋದಿಗೆ ಶುಭ ಕೋರಿದ ಸಿಎಂ ಸಿದ್ದರಾಮಯ್ಯ

ನೂತನ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರಿಗೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಒಕ್ಕೂಟ ವ್ಯವಸ್ಥೆಯನ್ನು ನೆನಪಿಸುತ್ತಲೇ ಶುಭ ಕೋರಿದ್ದಾರೆ.

VISTARANEWS.COM


on

PM Narendra Modi and Siddaramaiah
Koo

ಬೆಂಗಳೂರು: ಪ್ರಧಾನ ಮಂತ್ರಿಯಾಗಿ (Prime minister) ಮೂರನೇ ಬಾರಿಗೆ ಪ್ರಮಾಣ ವಚನ (Oath) ಸ್ವೀಕರಿಸಿದ ನರೇಂದ್ರ ಮೋದಿ (Narendra Modi) ಅವರಿಗೆ ಕರ್ನಾಟಕ (Karnataka) ಸಿಎಂ ಸಿದ್ದರಾಮಯ್ಯ (CM Siddaramaiah) ಸಾಮಾಜಿಕ ಜಾಲತಾಣ X ಖಾತೆ ಮೂಲಕ ಶುಭ ಕೋರಿದ್ದಾರೆ.

“3ನೇ ಬಾರಿಗೆ ದೇಶದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಪ್ರಧಾನಿ @narendramodi ಅವರಿಗೆ ಅಭಿನಂದನೆಗಳು. ಕರುನಾಡಿನ ಅಭಿವೃದ್ಧಿಯ ನಮ್ಮ ಸಂಕಲ್ಪಕ್ಕೆ ನಿಮ್ಮ ಸಹಕಾರ ಇರಲಿದೆ, ಒಕ್ಕೂಟ ವ್ಯವಸ್ಥೆಯ ಆಶಯಗಳನ್ನು ಎತ್ತಿಹಿಡಿಯುತ್ತಾ ರಾಜ್ಯಗಳ ಹಿತಾಸಕ್ತಿಯನ್ನು ನೀವು ಗೌರವಿಸುತ್ತೀರೆಂದು ಭಾವಿಸಿದ್ದೇನೆ. ಸಂಪದ್ಭರಿತ ಕರ್ನಾಟಕದ ಮೂಲಕ ಸದೃಢ ಭಾರತ ನಿರ್ಮಾಣಕ್ಕಾಗಿ ನಿಮ್ಮ ಜೊತೆಯಾಗಿ ಶ್ರಮಿಸುವ ದಿನಗಳನ್ನು ಎದುರು ನೋಡುತ್ತಿದ್ದೇನೆ” ಎಂದು ಸಿದ್ದರಾಮಯ್ಯ ಹಾರೈಸಿದ್ದಾರೆ.

ಬೆಂಗಳೂರು: ಸತತ ಮೂರನೇ ಬಾರಿಗೆ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ(NDA) ಅಧಿಕಾರಕ್ಕೆ ಬಂದಿದೆ. ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ (Narendra Modi) ಇಂದು (ಜೂನ್‌ 9) ಸಂಜೆ ಪ್ರಮಾಣ ವಚನ ಸ್ವೀಕರಿಸಲಿದ್ದು, ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇದಕ್ಕಾಗಿ ಸಿದ್ಧತೆ ಪೂರ್ಣಗೊಂಡಿದೆ. ಈ ಬಾರಿ ಬಿಜೆಪಿಗೆ ಜೆಡಿಎಸ್‌ ಕೂಡ ಬೆಂಬಲ ಸೂಚಿಸಿದ್ದು, ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸಚಿವರಾಗಿ ಆಯ್ಕೆಯಾಗಿದ್ದಾರೆ. ಆದರೆ ಅನಾರೋಗ್ಯ ಕಾರಣದಿಂದ ಮಾಜಿ ಪ್ರಧಾನ ಮಂತ್ರಿ ಎಚ್‌.ಡಿ.ದೇವೇಗೌಡ (HD Deve Gowda) ಅವರಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಅಭಿನಂದನೆ ತಿಳಿಸಿದ್ದಾರೆ.

ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ದೇವೇಗೌಡ ಅವರು ಅದನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ʼʼನರೇಂದ್ರ ಮೋದಿ ಅವರು ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾನ ವಚನ ಸ್ವೀಕರಿಸುತ್ತಿದ್ದಾರೆ. ಈ ಐತಿಹಾಸಿಕ ಸಂದರ್ಭದಲ್ಲಿ ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತಿದ್ದೇನೆ. ಅನಾರೋಗ್ಯದ ಕಾರಣದಿಂದ ನನಗೆ ಈ ಕಾರ್ಯಕ್ರಮದಲ್ಲಿ ಭಾವಹಿಸಲು ಸಾಧ್ಯವಾಗುತ್ತಿಲ್ಲ. ಆದರೆ ಖಂಡಿತವಾಗಿಯೂ ನಾನು ಟಿವಿಯಲ್ಲಿ ಲೈವ್‌ನಲ್ಲೇ ಕಾರ್ಯಕ್ರಮವನ್ನು ವೀಕ್ಷಿಸುತ್ತೇನೆ. ಕಾಂಗ್ರೆಸ್ ಏನೇ ಹೇಳಲಿ, ಭಾರತೀಯ ಪ್ರಜಾಪ್ರಭುತ್ವವು ದೃಢವಾಗಿದೆʼʼ ಎಂದು ದೇವೇಗೌಡ ಅವರು ಬರೆದುಕೊಂಡಿದ್ದಾರೆ.

ಬಿಜೆಪಿ ಗೆದ್ದಿದ್ದಕ್ಕೆ ತನ್ನ ಬೆರಳನ್ನೇ ಕತ್ತರಿಸಿ ದೇವಿಗೆ ಅರ್ಪಿಸಿದ ಮೋದಿ ‘ಭಕ್ತ’!

ರಾಯ್‌ಪುರ: ದೇಶದಲ್ಲಿ ನರೇಂದ್ರ ಮೋದಿ ಅವರನ್ನು ಬೆಂಬಲಿಸುವ, ಆರಾಧಿಸುವ, ಅವರ ಪರವಾಗಿ ವಾದ ಮಾಡುವ, ಸಮಯ ಬಂದರೆ ಜಗಳಕ್ಕೂ ನಿಲ್ಲುವ ‘ಭಕ್ತರು’ ಇದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ, ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಛತ್ತೀಸ್‌ಗಢದಲ್ಲಿ (Chhattisgarh) ನರೇಂದ್ರ ಮೋದಿ (Narendra Modi) ನೇತೃತ್ವದ ಎನ್‌ಡಿಎ ಮೈತ್ರಿಕೂಟ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ದೇವರಿಗೆ ತನ್ನ ಬೆರಳನ್ನೇ ಅರ್ಪಿಸಿದ್ದಾನೆ. ಆ ಮೂಲಕ ಆತ ಅಭಿಮಾನ ಮೆರೆದಿದ್ದಾನೆ.

ಹೌದು, ಛತ್ತೀಸ್‌ಗಢದ ಬಲರಾಮ್‌ಪುರದಲ್ಲಿ ದುರ್ಗೇಶ್‌ ಪಾಂಡೆ ಎಂಬ 30 ವರ್ಷದ ವ್ಯಕ್ತಿಯು ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಬಹುಮತ ಪಡೆದ ಹಿನ್ನೆಲೆಯಲ್ಲಿ ದೇವಾಲಯ ತೆರಳಿ, ಕಾಳಿ ದೇವಿಗೆ ತನ್ನ ಬೆರಳನ್ನೇ ಅರ್ಪಿಸಿದ್ದಾನೆ. ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಜೂನ್‌ 4ರಂದೇ ಆತನು ಕಾಳಿ ದೇವಸ್ಥಾನಕ್ಕೆ ತೆರಳಿ, ತನ್ನ ಎಡಗೈ ಬೆರಳನ್ನು ಕತ್ತರಿಸಿ ದೇವತೆಗೆ ಅರ್ಪಿಸಿದ್ದಾನೆ. ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟವು 290 ಅಧಿಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಇದರ ಖುಷಿ ತಾಳದೆ ಆತ ಬೆರಳು ಕತ್ತರಿಸಿಕೊಳ್ಳುವ ಸಾಹಸಕ್ಕೆ ಕೈ ಹಾಕಿದ್ದಾನೆ ಎಂದು ತಿಳಿದುಬಂದಿದೆ.

ದೇವಸ್ಥಾನದಲ್ಲಿ ಬೆರಳು ಕತ್ತರಿಸಿಕೊಂಡ ಬಳಿಕ ವಿಪರೀತ ರಕ್ತಸ್ರಾವ ಉಂಟಾಗಿದೆ. ಇದರಿಂದ ಆತಂಕಕ್ಕೀಡಾದ ಕುಟುಂಬಸ್ಥರು ವ್ಯಕ್ತಿಯನ್ನು ಸಮಾರಿಯಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾರೆ. ಪ್ರಾಥಮಿಕ ಚಿಕಿತ್ಸೆ ನೀಡಿದ ವೈದ್ಯರು ಕೂಡಲೇ ಅಂಬಿಕಾಪುರ ಮೆಡಿಕಲ್‌ ಕಾಲೇಜಿಗೆ ಹೋಗಿ ಎಂದು ಸೂಚಿಸಿದ್ದಾರೆ. ಅದರಂತೆ, ದುರ್ಗೇಶ್‌ ಪಾಂಡೆ ಅವರನ್ನು ಅಂಬಿಕಾಪುರ ಮೆಡಿಕಲ್‌ ಕಾಲೇಜಿಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ, ಶಸ್ತ್ರಚಿಕಿತ್ಸೆ ಮೂಲಕ ವೈದ್ಯರು ರಕ್ತಸ್ರಾವವನ್ನು ನಿಲ್ಲಿಸಿದ್ದಾರೆ. ಸದ್ಯ, ದುರ್ಗೇಶ್‌ ಪಾಂಡೆ ಅಪಾಯದಿಂದ ಪಾರಾಗಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ: Mamata Banerjee: 15 ದಿನಗಳಲ್ಲೇ ಮೋದಿ ಸರ್ಕಾರ ಪತನ; ಸ್ಫೋಟಕ ಭವಿಷ್ಯ ನುಡಿದ ಮಮತಾ ಬ್ಯಾನರ್ಜಿ!

Continue Reading

ಕ್ರೈಂ

Assault Case: ತುರ್ತು ಚಿಕಿತ್ಸೆಗೆ ತೆರಳುತ್ತಿದ್ದ ಆಂಬ್ಯುಲೆನ್ಸ್ ತಡೆಗಟ್ಟಿ ಹಲ್ಲೆ ಮಾಡಿದ ಕ್ರೂರಿಗಳು!

Assault Case: ಈ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲ ಟೋಲ್‌ನಲ್ಲಿ ನಿನ್ನೆ ಸಂಜೆ ನಡೆದಿದೆ. ಆಂಬ್ಯುಲೆನ್ಸ್‌ ಅತಿ ವೇಗವಾಗಿ ಓಡಿಸ್ತಿದೀಯಾ ಎಂದು ಕೆಣಕಿ ಕಾರಿನಲ್ಲಿದ್ದ ನಾಲ್ವರಿಂದ ಆಂಬ್ಯುಲೆನ್ಸ್ ಚಾಲಕನ ಮೇಲೆ ಹಲ್ಲೆ ನಡೆದಿದೆ. ಆಂಬ್ಯುಲೆನ್ಸ್ ಚಾಲಕನ ಬಟ್ಟೆ ಹರಿದುಹಾಕಿ ಆತನ ಮೇಲೆ ಹಲ್ಲೆ ನಡೆಸಿದ್ದಾರೆ.

VISTARANEWS.COM


on

road rage assault case
ಆಂಬ್ಯುಲೆನ್ಸ್‌ ತಡೆದು ಹಲ್ಲೆ ನಡೆಸಿದ ಪುಂಡರು
Koo

ಬೆಂಗಳೂರು: ರೋಡ್‌ ರೇಜ್‌ (Road Rage) ಆಯ್ತು, ರಸ್ತೆಯಲ್ಲೇ ಹಲ್ಲೆ ಆಯ್ತು. ಇದೀಗ ಪುಂಡರು ತುರ್ತು ಚಿಕಿತ್ಸೆಗೆ (Emergency) ತೆರಳುತ್ತಿದ್ದ ಆಂಬ್ಯುಲೆನ್ಸ್‌ (Ambulance) ಅನ್ನೂ ಬಿಟ್ಟಿಲ್ಲ. ಸೈರನ್‌ ಹಾಕಿಕೊಂಡು ಧಾವಿಸುತ್ತಿದ್ದ ಆಂಬ್ಯುಲೆನ್ಸನ್ನೂ ಚೇಸ್‌ ಮಾಡಿ, ಅಡ್ಡಗಟ್ಟಿ, ಉಸಿರಾಟದ ತೊಂದರೆ ಇರೋ ಮಗುವಿದೆ ಬಿಟ್ಬಿಡಿ ಎಂದು ಬೇಡಿಕೊಂಡರೂ ಕೇಳದೆ ಡ್ರೈವರ್‌ ಮೇಲೆ ಹಲ್ಲೆ (Assault Case) ನಡೆಸಿದ್ದಾರೆ.

ಈ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲ ಟೋಲ್‌ನಲ್ಲಿ ನಿನ್ನೆ ಸಂಜೆ ನಡೆದಿದೆ. ಆಂಬ್ಯುಲೆನ್ಸ್‌ ಅತಿ ವೇಗವಾಗಿ ಓಡಿಸ್ತಿದೀಯಾ ಎಂದು ಕೆಣಕಿ ಕಾರಿನಲ್ಲಿದ್ದ ನಾಲ್ವರಿಂದ ಆಂಬ್ಯುಲೆನ್ಸ್ ಚಾಲಕನ ಮೇಲೆ ಹಲ್ಲೆ ನಡೆದಿದೆ. ಆಂಬ್ಯುಲೆನ್ಸ್ ಚಾಲಕನ ಬಟ್ಟೆ ಹರಿದುಹಾಕಿ ಆತನ ಮೇಲೆ ಹಲ್ಲೆ ನಡೆಸಿದ್ದಾರೆ.

ತುಮಕೂರಿನ ಖಾಸಗಿ ಆಸ್ಪತ್ರೆಯಿಂದ ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಗೆ ಖಾಸಗಿ ಆಂಬ್ಯುಲೆನ್ಸ್ ಬರುತ್ತಿತ್ತು. ಐದು ತಿಂಗಳ ಮಗುವಿಗೆ ತುರ್ತು ಚಿಕಿತ್ಸೆಗಾಗಿ, ಆಕ್ಸಿಜನ್ ಹಾಕಿಸಿ ಕರೆ ತರಲಾಗುತ್ತಿತ್ತು. KA01 MJ9996 ನಂಬರಿನ ಇನ್ನೋವಾ ಕಾರಿನಲ್ಲಿದ್ದ ನಾಲ್ವರು ವಿನಾಕಾರಣ ಆಂಬ್ಯುಲೆನ್ಸ್‌ ಚಾಲಕನನ್ನು ಕೆಣಕಿದ್ದಾರೆ. ಐದಾರು ಕಿಲೋಮೀಟರ್ ಚೇಸ್ ಮಾಡಿಕೊಂಡು ಬಂದು, ಟೋಲ್ ಬಳಿ ಆಂಬ್ಯುಲೆನ್ಸ್ ನಿಂತಾಗ ಅಡ್ಡಗಟ್ಟಿ ಏಕಾಏಕಿ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ.

ಮಗುವಿನ ಕಂಡಿಷನ್ ಕ್ರಿಟಿಕಲ್ ಇದೆ, ಬಿಟ್ಬಿಡಿ ಎಂದು ಮಗುವಿನ ಪೋಷಕರು ಕೈ ಮುಗಿದರೂ ಕ್ರೂರಿ ಪುಂಡರು ಬಿಡಲಿಲ್ಲ. ಚಾಲಕನಿಗೆ ಥಳಿಸಿ ಆಂಬ್ಯುಲೆನ್ಸ್ ಕೀ ಕಿತ್ತುಕೊಂಡು ಗಲಾಟೆ ಮಾಡಿದ್ದಾರೆ. ನಂತರ ಸ್ಥಳದಲ್ಲಿದ್ದ ಪೊಲೀಸರು ಗಲಾಟೆ ತಡೆದು ಆಂಬ್ಯುಲೆನ್ಸ್ ಅನ್ನು ಆಸ್ಪತ್ರೆಗೆ ಕಳಿಸಿದ್ದಾರೆ. ಹಲ್ಲೆ ಮಾಡಿದವರ ಬಂಧನಕ್ಕೆ ಆಗ್ರಹಿಸಿ ಇಂದು ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯ ಬಳಿ ಆಂಬ್ಯೂಲೆನ್ಸ್ ಚಾಲಕರು ಪ್ರತಿಭಟಿಸುವ ಸಾಧ್ಯತೆ ಇದೆ.

ಟೆಂಪೋ ಪಲ್ಟಿ; ಓವರ್‌ಟೇಕ್‌ ಧಾವಂತಕ್ಕೆ ಕಾರ್ಮಿಕ ಸಾವು, ಮತ್ತೋರ್ವ ಗಂಭೀರ

ಕಲಬುರಗಿ: ಗೂಡ್ಸ್ ಮಿನಿ ಟೆಂಪೋ ಪಲ್ಟಿಯಾಗಿ (Road Accident) ಸ್ಥಳದಲ್ಲೆ ಓರ್ವ ಮೃತಪಟ್ಟರೆ, ಮತ್ತೊಬ್ಬನ ಸ್ಥಿತಿ ಗಂಭೀರವಾಗಿದೆ. ಕಲಬುರಗಿ ಜಿಲ್ಲೆ ಕಮಲಾಪುರ ತಾಲೂಕಿನ ಡೊಂಗರಗಾಂವ್ ಬಳಿ ಘಟನೆ ನಡೆದಿದೆ. ಹರಕಂಚಿ ಗ್ರಾಮದ ಕೂಲಿ ಕಾರ್ಮಿಕ ಶಿವಪ್ಪ ಸ್ಥಳದಲ್ಲೆ ಮೃತಪಟ್ಟ ದುರ್ದೈವಿ.

ಹರಕಂಚಿ ಗ್ರಾಮದಿಂದ ಕೂಲಿ ಕೆಲಸಕ್ಕೆಂದು ಹುಮನಬಾದ್ ಪಟ್ಟಣಕ್ಕೆ ತೆರಳುತ್ತಿದ್ದರು. ಈ ವೇಳೆ ವಾಹನವೊಂದಕ್ಕೆ ಓವರ್‌ಟೆಕ್ ಮಾಡಲು ಹೋಗಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಟೆಂಪೋ ಪಲ್ಟಿ ಹೊಡೆದಿದೆ. ಪಲ್ಟಿ ಹೊಡೆದ ರಭಸಕ್ಕೆ ಶಿವಪ್ಪ ಸ್ಥಳದಲ್ಲೇ ಮೃತಪಟ್ಟರೆ, ಗಂಭೀರ ಗಾಯಗೊಂಡ ಮತ್ತೊಬ್ಬನನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಕಮಲಾಪುರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಟೆಂಪೋವನ್ನು ತೆರವು ಮಾಡಿದ್ದಾರೆ.

ಚಿಕ್ಕೋಡಿಯಲ್ಲಿ ರಸ್ತೆ ಅಪಘಾತಕ್ಕೆ ಇಬ್ಬರು ಬಲಿ; ಕಾರು ಬಿಟ್ಟು ಚಾಲಕ ಪರಾರಿ

ಬೆಳಗಾವಿ ಜಿಲ್ಲೆಯ ರಾಯಬಾದ ತಾಲೂಕಿನ ಹಂದಿಗುಂದ ಗ್ರಾಮದಲ್ಲಿ ಭೀಕರ ಅಪಘಾತ (Road Accident) ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿ ಕಾರು (Car Accident) ಅಪಘಾತಕ್ಕೀಡಾಗಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಮೃತಪಟ್ಟಿದ್ದಾರೆ. ಪಾಲಬಾವಿ ಗ್ರಾಮದ ಮಹಾಲಿಂಗ ನಿಂಗನೂರ (47) ಮತ್ತು ಈರಪ್ಪಾ ಉಗಾರೆ (32) ಮೃತ ದುರ್ದೈವಿಗಳು.

ಅಪಘಾತವಾಗುತ್ತಿದ್ದಂತೆ ಕಾರು ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ರಸ್ತೆಯಲ್ಲಿ ವೇಗವಾಗಿ ಬಂದ ಕಾರು ವಿದ್ಯುತ್‌ ಕಂಬ ಡಿಕ್ಕಿ ಹೊಡೆದಿದೆ. ಬಳಿಕ ಕಂಬದ ಸಮೇತ ರಸ್ತೆ ಬದಿಯ ಜಮೀನಿಗೆ ನುಗ್ಗಿದೆ. ಡಿಕ್ಕಿ ರಭಸಕ್ಕೆ ಕಾರಿನ ಹಿಂಬದಿ ಕುಳಿತಿದ್ದ ಇಬ್ಬರಿಗೆ ತೀವ್ರ ರಕ್ತಸ್ರಾವವಾಗಿದೆ. ಅಪಘಾತವಾಗುತ್ತಿದ್ದಂತೆ ಸ್ಥಳೀಯರು ರಕ್ಷಣೆಗೆ ಮುಂದಾಗಿದ್ದಾರೆ. ಕೂಡಲೇ ಕಾರಿನಲ್ಲಿ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದವರನ್ನು ರಕ್ಷಿಸಿದ್ದಾರೆ. ಆದರೆ ಗಂಭೀರ ಗಾಯಗೊಂಡು ಇಬ್ಬರು ಮೃತಪಟ್ಟಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾರೂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ.

ಇದನ್ನೂ ಓದಿ: Shivamogga Accident : ತಿರುವಿನಲ್ಲಿ ಖಾಸಗಿ ಬಸ್‌ ಪಲ್ಟಿ; ಉರುಳಿ ಬಿದ್ದ ಪ್ರಯಾಣಿಕರಿಗೆ ಗಂಭೀರ ಗಾಯ

Continue Reading
Advertisement
IND VS PAK
ಕ್ರೀಡೆ8 mins ago

IND vs PAK : ಪಾಕಿಸ್ತಾನವನ್ನು ಭಾರತ ಸೋಲಿಸಿದ ನಂತರ ತಮಾಷೆಯ ಪೋಸ್ಟ್​​ ಮಾಡಿದ ಡೆಲ್ಲಿ ಪೊಲೀಸರು

HSRP Number Plate
ಬೆಂಗಳೂರು12 mins ago

HSRP Number Plate: ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ನೋಂದಣಿಗೆ ಡೆಡ್‌ಲೈನ್‌! ಇನ್ನೂ ಎರಡೇ ದಿನ ಬಾಕಿ

Narendra Modi And stock market news
ಪ್ರಮುಖ ಸುದ್ದಿ14 mins ago

Stock Market News: ಮೋದಿ ಪ್ರಮಾಣ ವಚನದ ಬಳಿಕ ಷೇರು ಮಾರುಕಟ್ಟೆ ಜಿಗಿತ; ಸೆನ್ಸೆಕ್ಸ್‌ ಹೊಸ ದಾಖಲೆ

Anirudh Jatkar again rise on voice jote joteyali serial issue
ಸ್ಯಾಂಡಲ್ ವುಡ್28 mins ago

Anirudh Jatkar: ʻಜೊತೆ ಜೊತೆಯಲಿ’ ಧಾರಾವಾಹಿಯ ವಿವಾದದ ಬಗ್ಗೆ ಬೇಸರ ಹೊರ ಹಾಕಿದ ಅನಿರುದ್ಧ್!

NEET UG
ಪ್ರೇಮಿಗಳ ದಿನಾಚರಣೆ40 mins ago

NEET UG : ನೀಟ್-ಯುಜಿ ಫಲಿತಾಂಶ ಹಿಂಪಡೆಯಲು ಕೋರಿ ಸುಪ್ರೀಂ ಕೋರ್ಟ್​​ಗೆ ಅರ್ಜಿ

Personality Development
ಪ್ರಮುಖ ಸುದ್ದಿ42 mins ago

Personality Development: ಈ 10 ಸೂತ್ರ ಪಾಲಿಸಿದರೆ ನೆಮ್ಮದಿಯ ಬದುಕು ಗ್ಯಾರಂಟಿ!

reasi terror attack
ಪ್ರಮುಖ ಸುದ್ದಿ1 hour ago

Terror Attack: ಕಂದಮ್ಮನನ್ನೂ ಕೊಂದ ಉಗ್ರರು; ಎದೆಗೆ ಗುಂಡು ಬಿದ್ದರೂ ಪ್ರಯಾಣಿಕರನ್ನು ಉಳಿಸಲು ಯತ್ನಿಸಿದ್ದ ಚಾಲಕ

T20 World Cup
Latest1 hour ago

T20 World Cup : ಪಾಕಿಸ್ತಾನಕ್ಕೆ ಸಂಕಷ್ಟ ತಂದಿಟ್ಟ ಭಾರತ; ಸೂಪರ್ 8 ಹಂತ ಪ್ರವೇಶವೂ ಕಷ್ಟ!

Kangana Ranaut Looks Gorgeous In A White Saree
ಬಾಲಿವುಡ್1 hour ago

Kangana Ranaut: ಪ್ರಮಾಣ ವಚನ ಸಮಾರಂಭದಲ್ಲಿ ಬಿಳಿ ಸೀರೆಯಲ್ಲಿ ಮಿಂಚಿದ ಕಂಗನಾ!

IND vs PAK
ಪ್ರಮುಖ ಸುದ್ದಿ2 hours ago

IND vs PAK : ಪಾಕಿಸ್ತಾನದ ಬೌಲರ್​ ವಿರುದ್ಧ ವಿಶೇಷ ದಾಖಲೆ ಮಾಡಿದ ರೋಹಿತ್ ಶರ್ಮಾ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ3 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ3 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ6 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ7 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ7 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ1 week ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು1 week ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ2 weeks ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ2 weeks ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

ಟ್ರೆಂಡಿಂಗ್‌