Shivamogga News | ಸಿಟಿ ಬಸ್ ನಿಲ್ದಾಣಗಳಲ್ಲಿ ಮಾತ್ರ ಬಸ್‍ಗಳನ್ನು ನಿಲ್ಲಿಸಲು ಡಿಸಿ ಆದೇಶ - Vistara News

ಕರ್ನಾಟಕ

Shivamogga News | ಸಿಟಿ ಬಸ್ ನಿಲ್ದಾಣಗಳಲ್ಲಿ ಮಾತ್ರ ಬಸ್‍ಗಳನ್ನು ನಿಲ್ಲಿಸಲು ಡಿಸಿ ಆದೇಶ

Shivamogga News | ಸಾರ್ವಜನಿಕ ಹಿತದೃಷ್ಟಿಯಿಂದ, ಸಂಚಾರ ವ್ಯವಸ್ಥೆ ಸುಗಮಗೊಳಿಸುವ ನಿಟ್ಟಿನಲ್ಲಿ ಅಧಿಸೂಚಿತ ಬಸ್‍ ಸ್ಟ್ಯಾಂಡ್‍ಗಳಲ್ಲಿ ಮಾತ್ರ ಸಿಟಿ ಬಸ್ ನಿಲ್ಲಿಸಲು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಆದೇಶಿಸಿದ್ದಾರೆ.

VISTARANEWS.COM


on

Shivamogga City Bus
ಬಸ್‍ಸ್ಟ್ಯಾಂಡ್‍ಗಳಲ್ಲಿ ಮಾತ್ರ ಸಿಟಿ ಬಸ್ ನಿಲ್ಲಿಸಲು ಆದೇಶಿಸಿದ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ.
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶಿವಮೊಗ್ಗ: ಶಿವಮೊಗ್ಗ (Shivamogga News) ನಗರದ ಸಂಚಾರ ವೃತ್ತದ ಪೂರ್ವ ಮತ್ತು ಪಶ್ಚಿಮ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ, ಸಂಚಾರ ವ್ಯವಸ್ಥೆ ಸುಗಮಗೊಳಿಸುವ ನಿಟ್ಟಿನಲ್ಲಿ ಸಿಟಿ ಬಸ್‍ ಸ್ಟ್ಯಾಂಡ್‍ಗಳ ಕುರಿತು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅಧಿಸೂಚನೆ ಹೊರಡಿಸಿದ್ದಾರೆ. ಅಧಿಸೂಚಿತ ಬಸ್‍ ಸ್ಟ್ಯಾಂಡ್‍ಗಳಲ್ಲಿ ಮಾತ್ರ ಸಿಟಿ ಬಸ್ ನಿಲ್ಲಿಸಲು ಆದೇಶಿಸಿದ್ದಾರೆ.

ನಗರದ ವ್ಯಾಪ್ತಿಯಲ್ಲಿ ನಿತ್ಯ 61 ಸಿಟಿ ಬಸ್‍ಗಳು ಸಂಚರಿಸುತ್ತಿದ್ದು, ಎಲ್ಲಾ ಸಿಟಿ ಬಸ್ ಚಾಲಕರು ಜಿಲ್ಲಾಡಳಿತದಿಂದ ಅಧಿಕೃತವಾಗಿ ಅಧಿಸೂಚನೆ ಹೊರಡಿಸಿದ ಬಸ್ ನಿಲ್ದಾಣಗಳಲ್ಲಿ ಬಸ್‍ಗಳನ್ನು ನಿಲ್ಲಿಸದೇ ಪ್ರಯಾಣಿಕರು ಕೈ ತೋರಿಸಿದ ಕಡೆಯಲ್ಲೆಲ್ಲ ರಸ್ತೆ ಮಧ್ಯದಲ್ಲೇ ಬಸ್‍ಗಳನ್ನು ನಿಲುಗಡೆ ಮಾಡುತ್ತಿದ್ದಾರೆ. ಈ ರೀತಿ ಮಾಡುವುದರಿಂದ ಅವರ ಹಿಂದೆ ಬರುವ ವಾಹನಗಳು ಮುಂದೆ ಅಥವಾ ಹಿಂದೆ ಹೋಗಲು ಆಗದೆ ಟ್ರಾಫಿಕ್‌ ಜಾಮ್‌ ಉಂಟಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿತ್ತಿದೆ. ಆದ್ದರಿಂದ ಕೆಳಕಂಡ ಅಧಿಸೂಚಿತ ಸಿಟಿ ಬಸ್‍ಗಳಲ್ಲಿ ಮಾತ್ರ ಬಸ್‍ಗಳನ್ನು ನಿಲುಗಡೆ ಮಾಡಬೇಕೆಂದು ಆದೇಶಿಸಲಾಗಿದೆ.

ಇದನ್ನೂ ಓದಿ | Ram Mandir | 2024ರ ಜನವರಿಯಲ್ಲಿ ಭಕ್ತರಿಗೆ ರಾಮಮಂದಿರ ಮುಕ್ತ, ಅಮಿತ್‌ ಶಾ ಮಹತ್ವದ ಘೋಷಣೆ


ಅಧಿಸೂಚಿತ ಬಸ್‍ಸ್ಟ್ಯಾಂಡ್‍ಗಳ ವಿವರ

ಪೂರ್ವ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ಬಿ ಎಚ್ ರಸ್ತೆಯ ಶಿವಪ್ಪ ನಾಯಕ ವೃತ್ತದ ಬಸ್ ಸ್ಟ್ಯಾಂಡ್, ಸರ್ಕಾರಿ ಮೈನ್ ಮಿಡ್ಲ್ ಸ್ಕೂಲ್ ಎದುರು, ಕರ್ನಾಟಕ ಸಂಘ ಬಸ್‌ ಸ್ಟಾಪ್, ಡಿಡಿಪಿಐ ಕಚೇರಿ ದ್ವಾರದ ಬಳಿ, ಕೃಷ್ಣ ಕೆಫೆ ಹೋಟೆಲ್ ಎದುರು, ಮೀನಾಕ್ಷಿ ಭವನ, ಕರ್ನಾಟಕ ಪಬ್ಲಿಕ್ ಶಾಲೆ ಎದುರು, ತುಂಗಾ ಹೊಳೆ ಬಸ್‌ ಸ್ಟಾಪ್, ಹೊಳೆಹೊನ್ನೂರು ಕ್ರಾಸ್ ಎನ್‍ಸಿಸಿ ಆಫೀಸ್ ಹತ್ತಿರ, ಮಹಾದೇವಿ ಟಾಕೀಸ್, ವಿದ್ಯಾನಗರ ಗಣೇಶ್ ಭವನ, ಗಣಪತಿ ದೇವಸ್ಥಾನ ಬಲಭಾಗ ವಿದ್ಯಾನಗರ, ಸಹ್ಯಾದ್ರಿ ಕಾಲೇಜ್ ಹತ್ತಿರ ವಿದ್ಯಾನಗರ, ದೂರದರ್ಶನ ಕೇಂದ್ರದ ಬಳಿ, ಎಂ ಆರ್ ಎಸ್ ಸರ್ಕಲ್ ಎಡಭಾಗ, ಎಂ ಆ‌ರ್ ಎಸ್ ಸರ್ಕಲ್ ಬಲಭಾಗ, ಹರಿಗೆ, ಹಾಥಿನಗರ ಕ್ರಾಸ್, ಶುಗರ್ ಫ್ಯಾಕ್ಟರಿ, ಮಲವಗೊಪ್ಪ ಚನ್ನಬಸವೇಶ್ವರದ ದೇವಸ್ಥಾನದ ಹತ್ತಿರ, ಕಾಡಾ ಆಫೀಸ್ ಎದುರು.‌

ಇದನ್ನೂ ಓದಿ | Karnataka Election : ಮುಂದುವರಿದ ಜೆ.ಪಿ. ನಡ್ಡಾ ಮಠ ಯಾತ್ರೆ; ಸಮುದಾಯ ಆಧಾರಿತ ಮತ ಬೇಟೆ ತೀವ್ರ

ಹೊಳೆಹೊನ್ನೂರು ರಸ್ತೆಯ ಸಿದ್ದೇಶ್ವರ ನಗರ 2ನೇ ಕ್ರಾಸ್, ಕೆನರಾ ಬ್ಯಾಂಕ್ ಎದುರು, ಗುರುಪುರ, ಸುಬ್ಬಯ್ಯ ಮೆಡಿಕಲ್ ಕಾಲೇಜ್. ಎನ್‍ಆರ್ ಪುರ ರಸ್ತೆಯಲ್ಲಿ ಜ್ಯೋತಿ ನಗರ, ವಡ್ಡಿನಕೊಪ್ಪ, ಮುಖ್ಯ ಅಂಚೆ ಕಚೇರಿ ಎದುರು, ತಾನಿಷ್ಕ ಜ್ಯುವೆಲರ್ಸ್ ಎದುರು, ತಾಲೂಕು ಕಚೇರಿ ಎದುರು. ಬಾಲರಾಜ್ ಅರಸ್ ರಸ್ತೆಯಲ್ಲಿ ಕೆಇಬಿ ಸರ್ಕಲ್, ಮುಖ್ಯ ರೈಲ್ವೆ ನಿಲ್ದಾಣ. ಹೊನ್ನಾಳಿ ರಸ್ತೆಯಲ್ಲಿ ಸಂಗೊಳ್ಳಿ ರಾಯಣ್ಣ ಸರ್ಕಲ್, ಶ್ರುತಿ ಶೋ ರೂಮ್‌ ಎದುರು ಹೊನ್ನಾಳಿ ರಸ್ತೆ(ಶಾಂತಿನಗರ), ನಾಗಪ್ಪ ರ್ಸಲ್ ಶಾಂತಿನಗರ, ಪೇಸ್ ಕಾಲೇಜ್ ಎದುರು, ತ್ಯಾವರೆ ಚಟ್ನಳ್ಳಿ.
ಸವಳಂಗ ರಸ್ತೆಯ ಈದ್ಗಾ ಮೈದಾನದ ಎದುರು(ಡಿಸಿ ಕಚೇರಿ ಎದುರು), ಜಯನಗರ ಠಾಣೆಯ ಹತ್ತಿರ, ವಂದನಾ ಬೇಕರಿ ಬಳಿ, ಉಷಾ ನರ್ಸಿಂಗ್ ಹೋಂ ಹತ್ತಿರ, ನವುಲೆ, ತ್ರಿಮೂರ್ತಿ ನಗರ ಗಣಪತಿ ದೇವಸ್ಥಾನ, ಕುವೆಂಪು ನಗರ ಕ್ರಾಸ್, ಜೆಎನ್‍ಎನ್‍ಸಿಇ ಕಾಲೇಜ್, ಅಕ್ಷರ ಕಾಲೇಜ್ ಬಳಿ, ಕೃಷಿ ಕಾಲೇಜ್ ಬಳಿ, ಬಸವನಗಂಗೂರು ಕ್ರಾಸ್, ರತ್ನಾಕರ ಬಡಾವಣೆ, ಸರ್ಕಾರಿ ನೌಕರರ ಬಡಾವಣೆ, ಕುವೆಂಪು ನಗರ ಎ ಬ್ಲಾಕ್ ವಿದ್ಯಾಭಾರತಿ ಕಾಲೇಜ್ ಬಳಿ, ಎನ್‍ಇಎಸ್ ಲೇಔಟ್ ಕುವೆಂಪು ನಗರ. 100 ಅಡಿ ರಸ್ತೆಯ ನಿರ್ಮಲ ಹಾಸ್ಪಿಟಲ್ ಹತ್ತಿರ, ರಾಜೇಂದ್ರ ನಗರ ಚಾನಲ್ ಬಳಿ, ಗಾಂಧಿನಗರ, ಗಣಪತಿ ದೇವಸ್ಥಾನ ರವೀಂದ್ರ ನಗರ, ಬ್ಲಡ್ ಬ್ಯಾಂಕ್ ಹತ್ತಿರ ಮಾತ್ರ ನಿಲುಗಡೆ ಮಾಡಬೇಕು.

ಇದನ್ನೂ ಓದಿ | Sumalatha Ambarish | ವರಿಷ್ಠರು ಮಾತಾಡಿದ್ದು ನಿಜ, ಬಿಜೆಪಿ ಸೇರ್ಪಡೆ ಬಗ್ಗೆ ನಿರ್ಧರಿಸಿಲ್ಲ ಎಂದ ಸುಮಲತಾ ಅಂಬರೀಶ್‌


ಪಶ್ಚಿಮ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ಮಿಳಘಟ್ಟ ಕ್ರಾಸ್‍ನಿಂದ ಗೋಪಾಲಗೌಡ ಬಡಾವಣೆ ಬಸ್ ನಿಲ್ದಾಣದವರೆಗಿನ ರಸ್ತೆಯ ಮಿಳಘಟ್ಟ, ಲಕ್ಷ್ಮೀ ಕ್ಯಾಂಟೀನ್, ಪದ್ಮಾ ಟಾಕಿಸ್, ಅಣ್ಣಾ ನಗರ ಚಾನೆಲ್, ಗೋಪಾಲ ವಿನಾಯಕ ಸರ್ಕಲ್, ಗುಡ್‍ಲಕ್ ಸರ್ಕಲ್, ವೃದ್ಧಾಶ್ರಮ. ಗೋಪಾಲ ಗೌಡ 100 ಅಡಿ ರಸ್ತೆಯ ಗೋಪಾಲ ಗೌಡ ಮೋರ್ ಶಾಪ್ ಹತ್ತಿರ, ಗೋಪಾಲ ಗೌಡ ಬಡಾವಣೆಯ ಎಚ್ ಪಿ ಪೆಟ್ರೋಲ್ ಬಂಕ್ ಎದುರು. ವಿಜಯನಗರ ಮುಖ್ಯ ರಸ್ತೆಯ ನೇತಾಜಿ ಸರ್ಕಲ್, ದ್ರೌಪದಮ್ಮ ಸರ್ಕಲ್. ತುಂಗಾನಗರ 100 ಅಡಿ ರಸ್ತೆಯ ಚಾಲುಕ್ಯ ನಗರ(ಎಲ್‍ಎಚ್‍ಎಸ್), ಚಾಲುಕ್ಯ ನಗರ(ಆರ್‌ಎಚ್‌ಎಸ್‌), ಚಾಲುಕ್ಯ ನಗರ ಓಪನ್ ಗ್ರೌಂಡ್, ತುಂಗಾ ನಗರ ಪಿಎಚ್‍ಸಿ ಹೊರ ವರ್ತುಲ, ತುಂಗಾನಗರ ಪೊಲೀಸ್ ಠಾಣೆ.
ಸಾಗರ ರಸ್ತೆಯ ಮೆಗ್ಗಾನ್ ಆಸ್ಪತ್ರೆ(ಹೊರಗೆ), ಎಸ್‍ಪಿ ಕಚೇರಿ ಎದುರು, ದೊಡ್ಡಪೇಟೆ ಪೊಲೀಸ್(ಎಲ್‍ಎಚ್‍ಎಸ್), ಎಪಿಎಂಸಿ ಹತ್ತಿರ(ಎಲ್‍ಎಚ್‍ಎಸ್), ಎಪಿಎಂಸಿ ಹತ್ತಿರ (ಆರ್‌ಎಚ್‌ಎಸ್‌), ಬಿ. ಕೃಷ್ಣಪ್ಪ ಸರ್ಕಲ್(ಆಲ್ಕೊಳ ಸರ್ಕಲ್), ಡಿವಿಜಿ ಸರ್ಕಲ್ (ಎಲ್‍ಎಚ್‍ಎಸ್), ಹೋಟೆಲ್ ಅಶೋಕ ಗ್ರಾಂಡ್, ಹೋಟೆಲ್ ಅಶೋಕ ಗ್ರಾಂಡ್ ಚರ್ಚ್ ಎದುರು, ನಂಜಪ್ಪ ಲೈಫ್‍ಕೇರ್ ಹತ್ತಿರ, ಗಾಡಿಕೊಪ್ಪ, ಮಹೇಂದ್ರ ಶೋ ರೂಮ್ ಎದುರುಗಡೆ, ಕಾಸ್ಮೊ‌ ಕ್ಲಬ್ ಎದುರು, ಪ್ರೊ. ಬಿ. ಕೃಷ್ಣಪ್ಪ ಫ್ರೀ ಲೆಫ್ಟ್.

ಇದನ್ನೂ ಓದಿ | Actor Kishore | ಕೆಜಿಎಫ್-2 ನೋಡಿಲ್ಲ, ಇದು ನನ್ನ ಪ್ರಕಾರದ ಸಿನಿಮಾ ಅಲ್ಲ ಎಂದ ಕಾಂತಾರ ನಟ ಕಿಶೋರ್!


ಸೋಮಿನಕೊಪ್ಪ ರಸ್ತೆಯ ಕಾಶಿಪುರ ಮುಖ್ಯರಸ್ತೆ, ಎಸ್‍ ಆರ್ ಎಸ್ ಶಾಮಿಯಾನ ಎದುರು, ಸೋಮಿನಕೊಪ್ಪ ಮುಖ್ಯರಸ್ತೆ, ಆದರ್ಶನಗರ, ಸೋಮಿನಕೊಪ್ಪ ಮುಖ್ಯ ರಸ್ತೆ. ವಿನೋಬನಗರ 100 ಅಡಿ ರಸ್ತೆಯ ಕರಿಯಣ್ಣ ಬಿಲ್ಡಿಂಗ್, ಪೊಲೀಸ್ ಚೌಕಿ, ಇಂದಿರಾ ಗಾಂಧಿ ಸರ್ಕಲ್(ಆರ್‌ಎಚ್‌ಎಸ್), ಶಿವಾಲಯ ವಿನೋಬನಗರ, ಹಳೇ ಜೈಲ್ ರಸ್ತೆ ಹತ್ತಿರ(ಫ್ರೀಡಂ ಪಾರ್ಕ್), ಲಕ್ಷ್ಮೀ ಚಿತ್ರಮಂದಿರದ ಬಳಿ, ಮಾಧವ ನೆಲೆ ಹತ್ತಿರ, ಕಲ್ಲಹಳ್ಳಿ, ಕಾಶಿಪುರ ರಸ್ತೆ. ಜೈಲ್ ರಸ್ತೆಯ ಹೊಸಮನೆ ಬಡಾವಣೆ, ಬೊಮ್ಮನಕಟ್ಟೆ ರಸ್ತೆಯ ಬೊಮ್ಮನಕಟ್ಟೆ(ಆರ್‍ಹೆಚ್‍ಎಸ್), ಬೊಮ್ಮನಕಟ್ಟೆ(ಎಲ್‍ಹೆಚ್‍ಎಸ್). ಎನ್‍ಟಿ ರಸ್ತೆಯ ಎನ್‍ಟಿ ರಸ್ತೆ ಎದುರು ಎಚ್‍ ಪಿ ಪೆಟ್ರೋಲ್ ಬಂಕ್, ಮಂಡ್ಲಿ(ಎಲ್‍ ಎಚ್‍ಎಸ್), ಮಂಡ್ಲಿ (ಆರ್‌ಎಚ್‌ಎಸ್‌). ಬೈಪಾಸ್ ರಸ್ತೆಯ ತುಂಗಾ ನದಿಯ ಹೊಸ ಸೇತುವೆ, ಸೂಳೆಬೈಲು(ಎಲ್‍ ಎಚ್‍ಎಸ್), ಊರುಗಡೂರು(ಆರ್‌ಎಚ್‌ಎಸ್‌ ), ಬೈಪಾಸ್ ರಸ್ತೆ ನರ್ಸಿಂಗ್ ಕಾಲೇಜ್ ಹತ್ತಿರ ನಂಜಪ್ಪ ಬಡಾವಣೆ, ಊರುಗಡೂರು(ಎಲ್‍ ಎಚ್‍ಎಸ್), ಸೂಳೆಬೈಲ್(ಆರ್‍ಹೆಚ್‍ಎಸ್), ನಿಸರ್ಗ ಲೇಔಟ್, ಪ್ರಿಯಾಂಕಾ ಲೇಔಟ್ ಈ ಸಿಟಿ ಬಸ್ ನಿಲ್ದಾಣಗಳಲ್ಲಿ ಮಾತ್ರ ಬಸ್‍ಗಳನ್ನು ನಿಲ್ಲಿಸಬೇಕೆಂದು ಆದೇಶಿಸಲಾಗಿದೆ.

ಇದನ್ನೂ ಓದಿ | Virat Kohli | ಬಾಬಾ ನೀಮ್ ಕರೋಲಿ ಆಶ್ರಮಕ್ಕೆ ಭೇಟಿ ಕೊಟ್ಟ ವಿರಾಟ್ ದಂಪತಿ: ಮಗಳ ವಿಡಿಯೊ ವೈರಲ್‌!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮಳೆ

Karnataka Weather : ಹವಾಮಾನ ತಜ್ಞರ ವಾರ್ನಿಂಗ್‌; ಇನ್ನೊಂದು ವಾರ ವಿಪರೀತ ಮಳೆ, ಜೂ.6ರ ವರೆಗೂ ಮೀನುಗಾರಿಕೆಗೆ ಬ್ರೇಕ್‌

Heavy Rain Warning: ರಾಜ್ಯಾದ್ಯಂತ (Karnataka Weather forecast) ಗುಡುಗು ಸಹಿತ ಭಾರಿ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್‌ ಘೋಷಣೆ (Yellow Alert) ಮಾಡಲಾಗಿದೆ. ಜತೆಗೆ ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ (Fisher Waring) ನೀಡಲಾಗಿದೆ

VISTARANEWS.COM


on

By

karnataka weather Forecast
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ನೈರುತ್ಯ ಮುಂಗಾರು (Monsoon rains) ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡು, ಕರಾವಳಿ, ಮಲೆನಾಡಿನ ಕೆಲವು ಭಾಗಗಳಲ್ಲಿ ಮುಂದುವರೆದಿದೆ. ಜೂ.4ರಂದು ದಕ್ಷಿಣ ಒಳನಾಡು, ಉತ್ತರ ಒಳನಾಡಿನಲ್ಲಿ ಪ್ರತ್ಯೇಕವಾಗಿ ಭಾರಿ ಮಳೆಯಾಗುವ (Heavy Rain) ಸಾಧ್ಯತೆಯಿದೆ. ಮಲೆನಾಡು ಮತ್ತು ಕರಾವಳಿ ಭಾಗಗಳಲ್ಲಿ ಸಾಧಾರಣ (Rain News) ಮಳೆಯಾಗಲಿದೆ. ರಾಜ್ಯದ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು, ಮಿಂಚು ಸಹಿತ ಮತ್ತು ಗಂಟೆಗೆ 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka Weather Forecast) ನೀಡಿದೆ.

ದಕ್ಷಿಣ ಒಳನಾಡಿನ ಮಂಡ್ಯ ಮತ್ತು ಮೈಸೂರಿನಲ್ಲಿ ಪ್ರತ್ಯೇಕ ಕಡೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಉಳಿದ ಭಾಗಗಳಲ್ಲಿ ಚದುರಿದಂತೆ ಹಗುರದಿಂದ ಮಧ್ಯಮ ಮಳೆಯಾಗಲಿದೆ. ಉತ್ತರ ಒಳನಾಡಿನ ಬೆಳಗಾವಿ, ವಿಜಯಪುರ, ಧಾರವಾಡ, ಗದಗದಲ್ಲಿ ಭಾರೀ ಮಳೆಯಾಗುವ ಸೂಚನೆ ಇದೆ. ಜತೆಗೆ ಬೀದರ್, ಕಲಬುರಗಿ, ಬಾಗಲಕೋಟೆ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ಉಳಿದೆಡೆ ಹಗುರದಿಂದ ಕೂಡಿದ ಮಳೆಯಾಗಲಿದೆ.

ಮಲೆನಾಡಿನ ಹಾಸನ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಚದುರಿದಂತೆ ಸಾಧಾರಣ ಮಳೆಯಾಗಬಹುದು. ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ಹಗುರದೊಂದಿಗೆ ಶುರುವಾಗಿ ಸಾಧಾರಣ ಮಳೆಯಾಗಲಿದೆ.

ಇದನ್ನೂ ಓದಿ: Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

ಜೂ.6ರ ವರೆಗೆ ಮೀನುಗಾರಿಕೆಗೆ ತೆರಳದಂತೆ ಸೂಚನೆ

ಕರ್ನಾಟಕ ಕರಾವಳಿಯಲ್ಲಿ 35- 45 ಕಿ.ಮೀ ಗಾಳಿ ಬೀಸಲಿದೆ. ಸಮುದ್ರ ಮಟ್ಟದಲ್ಲಿ ಗಂಟೆಗೆ 55 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ ಇದೆ. ಹೀಗಾಗಿ ಜೂನ್ 4 ರಿಂದ ಜೂನ್ 6ವರೆಗೆ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ.

ಯೆಲ್ಲೋ‌ ಅಲರ್ಟ್‌ ಘೋಷಣೆ

ಗುಡುಗು ಸಹಿತ ಭಾರೀ ಮಳೆಯೊಂದಿಗೆ ಗಂಟೆಗೆ 40-50 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ. ಹೀಗಾಗಿ ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ವಿಜಯಪುರ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಮಗಳೂರು, ಹಾಸನ, ಮಂಡ್ಯ, ರಾಮನಗರ, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಘೋಷಣೆ ಮಾಡಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕೃಷಿ

Arecanut Price: ಅಡಿಕೆ ಧಾರಣೆ ನಿರೀಕ್ಷೆ ಮೀರಿ ಏರಲಿದೆ! ಇದು ರೈತರ ‘ನಂಬಿಕೆ’ ಮತ್ತು ‘ಅಭಿಪ್ರಾಯ’ಗಳ ಎಕ್ಸಿಟ್ ಪೋಲ್!

Arecanut Price: ಅಡಿಕೆ ಬೆಳೆಗಾರರ ನಿರೀಕ್ಷೆ, ಸಮೀಕ್ಷೆ, ಪರೀಕ್ಷೆಗಳ ಲೆಕ್ಕಾಚಾರಕ್ಕೆ ‘ಯಾಕೆ ಹೀಗೆ ಅನ್ನುವ’ ಪ್ರಶ್ನೆಗೆ ಅಡ್ಡ ಬಂದಿದ್ದು ಈ ಬಾರಿಯ ಲೋಕಸಭಾ ಚುನಾವಣೆ!!ಈಗ ಅದೂ ಮುಗಿದು, ಪಲಿತಾಂಶಕ್ಕೆ ಕಾಯುತ್ತಿರುವಾಗ, ಅಡಿಕೆ ದರ ಮೇಲ್ಮುಖವಾಗಿದೆ. ಪುನಃ ₹.55,000 ಗಡಿ ಸಮೀಪ ಬಂದಿದೆ.
ನೀತಿ ಸಂಹಿತೆಯ ಬ್ಯಾರಿಕೇಡ್‌ಗಳು ತೆರವುಗೊಂಡ ಮೇಲೆ ಅಡಿಕೆ ಧಾರಣೆ ಗಣನೀಯವಾಗಿ ಏರಬಹುದು ಎಂದು ಲೆಕ್ಕಾಚಾರದಲ್ಲಿ ರೈತರು ಕಾಯುತ್ತಿದ್ದಾರೆ.

VISTARANEWS.COM


on

Arecanut Price
Koo

-ಅರವಿಂದ ಸಿಗದಾಳ್, ಮೇಲುಕೊಪ್ಪ
ಬೆಂಗಳೂರು: ಜುಲೈ ಕೊನೆಯಲ್ಲಿ ಬಯಲು ಸೀಮೆಯ ಅಡಿಕೆ ಬರಲು ಪ್ರಾರಂಭವಾಗುವ ಕಾಲ. ಆಗಸ್ಟ್‌ನಿಂದ ಸಹಜವಾಗಿ ಅಡಿಕೆ ಪ್ರಮಾಣ ಮಾರುಕಟ್ಟೆಗೆ ಬರುವುದು ಹೆಚ್ಚುವುದರಿಂದ ಅಡಿಕೆ ಧಾರಣೆ ಇಳಿಯಲು ಪ್ರಾರಂಭವಾಗುತ್ತದೆ. ಕಳೆದ ವರ್ಷ ಜುಲೈ‌ನಲ್ಲಿ ₹ 55,000 ದಾಟಿದ ಅಡಿಕೆ ದರ, ಸೆಪ್ಟೆಂಬರ್‌ನಲ್ಲಿ ₹.50,000 ಕ್ಕಿಂತ ಕೆಳಕ್ಕೆ ಬರಲು ಪ್ರಾರಂಭವಾಯಿತು. ಇಳಿದ ಅಡಿಕೆ ಧಾರಣೆ ₹ 47,000 ದಲ್ಲಿ ಕೆಲಕಾಲ ಸ್ಥಿರತೆಯಲ್ಲಿ ಉಳಿದಿತ್ತು. ಈ ವರ್ಷ ಮೇ ತಿಂಗಳ ಪ್ರಾರಂಭದಲ್ಲಿ ₹ 55,000 ದ ಸಮೀಪಕ್ಕೆ ಏರಿ ಬಂದ ರಾಶಿ ಇಡಿ ಅಡಿಕೆ ಧಾರಣೆ ಮತ್ತೆ ಇಳಿಯುವುದಕ್ಕೆ ಶುರವಾಗಿತ್ತು (Arecanut Price).

ಅಡಿಕೆ ಬೆಳೆಗಾರರ ನಿರೀಕ್ಷೆ, ಸಮೀಕ್ಷೆ, ಪರೀಕ್ಷೆಗಳ ಲೆಕ್ಕಾಚಾರಕ್ಕೆ ‘ಯಾಕೆ ಹೀಗೆ ಅನ್ನುವ’ ಪ್ರಶ್ನೆಗೆ ಅಡ್ಡ ಬಂದಿದ್ದು ಈ ಬಾರಿಯ ಲೋಕಸಭಾ ಚುನಾವಣೆ! ಈಗ ಅದೂ ಮುಗಿದು, ಪಲಿತಾಂಶಕ್ಕೆ ಕಾಯುತ್ತಿರುವಾಗ, ಅಡಿಕೆ ದರ ಮೇಲ್ಮುಖವಾಗಿದೆ. ಪುನಃ ₹ 55,000 ಗಡಿ ಸಮೀಪ ಬಂದಿದೆ.

ನೀತಿ ಸಂಹಿತೆಯ ಬ್ಯಾರಿಕೇಡ್‌ಗಳು ತೆರವುಗೊಂಡ ಮೇಲೆ ಅಡಿಕೆ ಧಾರಣೆ ಗಣನೀಯವಾಗಿ ಏರಬಹುದು ಎಂದು ಲೆಕ್ಕಾಚಾರದಲ್ಲಿ ರೈತರು ಕಾಯುತ್ತಿದ್ದಾರೆ.

ಅಡಿಕೆ ಧಾರಣೆಯ ವಿಚಾರದಲ್ಲಿ ಇರುವ ‘ನಂಬಿಕೆ’ಗಳು

ಅಡಿಕೆ ಧಾರಣೆಯ ಏರಿಕೆಯ ವಿಚಾರದಲ್ಲಿ ಮಲೆನಾಡಿನಲ್ಲಿ ಕೆಲವು ನಂಬಿಕೆಗಳು ಇವೆ. ವೈಜ್ಞಾನಿಕ ವಿಶ್ಲೇಷಣೆಗೆ ಹೊರತಾಗಿದ್ದರೂ, ನಂಬಿಕೆಗಳನ್ನು ಇಟ್ಟುಕೊಂಡೇ ಅನೇಕ ಅಡಿಕೆ ಬೆಳೆಗಾರರು ಇಂದಿಗೂ ವ್ಯವಹಾರ ನೆಡೆಸುತ್ತಾರೆ.
‘ವರ್ಷದ ಯಾವುದೇ ತಿಂಗಳಲ್ಲಿ ಮಂಗಳವಾರ ಅಮವಾಸ್ಯೆ ಬಂದರೆ ಆ ವರ್ಷ ಅಡಿಕೆಗೆ ಅತ್ಯಧಿಕ ಬೆಲೆ’, ‘ಶ್ರಾವಣ ಮಾಸದಲ್ಲಿ ಅಡಿಕೆಗೆ ರೇಟಾಗುವುದು’, ‘ಮುತ್ತುಗದ ಮರದ ನೆತ್ತಿಯಲ್ಲಿ ಮಾತ್ರ ಹೂವಾದರೆ ಅಡಿಕೆ ದರ ಎತ್ತರಕ್ಕೇರುತ್ತದೆ’ ಕಾಡು ಕೋಳಿ ಕಾಡಂಚಿಗೆ ಬಂದು ಕೂಗಿದರೆ. ಅದು ಅಡಿಕ ದರ ಏರುವಿಕೆಯ ಸೂಚನೆಯಂತೆ! ಪಂಚಾಂಗದ ಪ್ರಕಾರ ‘ಕುಜ’ ರಾಜನಾದಾಗ ಅಡಿಕೆ ದರ ನಿರೀಕ್ಷೆ ಮಟ್ಟವನ್ನು ಮೀರಿ ಏರುತ್ತದೆ… ಇತ್ಯಾದಿ ಹತ್ತಾರು ನಂಬಿಕೆಗಳು ಮಲೆನಾಡಿನ ಅಡಿಕೆ ಬೆಳೆಗಾರರಲ್ಲಿವೆ. ಅಡಿಕೆ ಧಾರಣೆಯ ವಿಷಯ ಚರ್ಚೆಗೆ ಬಂದಾಗ ಇಂತಹ ನಂಬಿಕೆಗಳು ಗಾದೆ ಮಾತಿನಂತೆ ಹೊರಗೆ ಬರುತ್ತವೆ.

ಈ ನಂಬಿಕೆಗಳಿಗೆ ಪೂರಕವಾಗಿ ಎಂಬಂತೆ ಹತ್ತು ವರ್ಷಗಳ ಹಿಂದೆ ಅಡಿಕೆ ಧಾರಣೆ ಲಕ್ಷ ರೂ. ದಾಟಿದಾಗ ಪಂಚಾಂಗದ ಪ್ರಕಾರ ಕುಜ ರಾಜನಾಗಿದ್ದನಂತೆ! ಈ ವರ್ಷವೂ ಕುಜನೇ ಅಧಿಪತಿಯಂತೆ. ಅನಿರೀಕ್ಷಿತ ಅಡಿಕೆ ಧಾರಣೆ ಈ ವರ್ಷವೂ ಏರಲಿದೆ ಅನ್ನುವುದು ಜ್ಯೋತಿಷ್ಯ ನಂಬಿಕೆಯ ಅಭಿಪ್ರಾಯ. ಈ ನಂಬಿಕೆಗೆ ಬೇಷರತ್ ಬೆಂಬಲದಂತೆ ಈ ವರ್ಷ ಅನೇಕ ಕಡೆ ಮುತ್ತುಗದ ಮರದ ನೆತ್ತಿಯಲ್ಲಿ ಹೋವು ಅರಳಿತ್ತಂತೆ.

ಏರುಮುಖ ನಿರೀಕ್ಷೆ

ಎಲೆಕ್ಷನ್ ಮುಗಿದ ಮೇಲೆ ಅಡಿಕೆ ವ್ಯವಹಾರದಲ್ಲಿ ದರ ಏರುಮುಖ ಕಾಣಲಿದೆ ಎನ್ನುವುದಕ್ಕೆ ಪೂರಕವಾಗಿ, ಚುನಾವಣೆಯ ಪಲಿತಾಂಶದ ಹಿಂದಿನೆರಡು ದಿನಗಳಲ್ಲಿ ಅಡಿಕೆ ಏರಿಕೆಯ ಗ್ರಾಫ್‌ನ ಬಾಣ! ಕುಜ ಅಡಿಕೆಯ ದರ ಎತ್ತಲಿದ್ದಾನಾ? ಮುತ್ತುಗದ ಹೂವಿನ ಸೂಚನೆ ನಿಜವಾ? ನಂಬಿಕೆಗಳು ಕೆಲಸ ಮಾಡುತ್ತವಾ? ಚುನಾವಣೆಯ ನಂತರ ಅಡಿಕೆಗೆ ಬೇಡಿಕೆ ಹೆಚ್ಚಲಿದೆಯಾ? ಅಡಿಕೆ ಧಾರಣೆಯಲ್ಲಿ ರೈತರ ನಂಬಿಕೆಗಳ ಮತ್ತು ಅಭಿಪ್ರಾಯಗಳ ಎಕ್ಸಿಟ್ ಪೋಲ್ ನಿಜ ಆಗಲಿದೆಯಾ? ಕಾದು ನೋಡೋಣ.

ಇದನ್ನೂ ಓದಿ: Arecanut Price: ಮಲೆನಾಡಿನ ರಾಶಿ ಇಡಿ ಅಡಿಕೆ ಧಾರಣೆ ‘ಅಬ್‌ ಕಿ ಬಾರ್ ₹60,000 ಪಾರ್ ಆಗಲಿದೆಯಾ?

Continue Reading

ಉತ್ತರ ಕನ್ನಡ

Uttara Kannada News: ವಿಶ್ವದರ್ಶನ ಕಾಲೇಜಿನಲ್ಲಿ ಪ್ರಥಮ ಪಿಯು ತರಗತಿ ಪ್ರಾರಂಭೋತ್ಸವ

Uttara Kannada News: ಯಲ್ಲಾಪುರ ಪಟ್ಟಣದ ವಿಶ್ವದರ್ಶನ ಕಾಲೇಜಿನಲ್ಲಿ ಪ್ರಥಮ ಪಿಯು ತರಗತಿ ಪ್ರಾರಂಭೋತ್ಸವ ಕಾರ್ಯಕ್ರಮ ಸೋಮವಾರ ನಡೆಯಿತು.

VISTARANEWS.COM


on

First PU Class Commencement Programme at Vishwadarshana College
Koo

ಯಲ್ಲಾಪುರ: ಪಟ್ಟಣದ ವಿಶ್ವದರ್ಶನ ಕಾಲೇಜಿನಲ್ಲಿ ಪ್ರಥಮ ಪಿಯು ತರಗತಿ ಪ್ರಾರಂಭೋತ್ಸವ ಕಾರ್ಯಕ್ರಮ ಸೋಮವಾರ (Uttara Kannada News) ನಡೆಯಿತು.

ವಿಶ್ವದರ್ಶನ ಶಿಕ್ಷಣ ಸಮೂಹದ ಸಿಇಒ ಅಜಯ್ ಭಾರತೀಯ ಕಾರ್ಯಕ್ರಮದಲ್ಲಿ ಮಾತನಾಡಿ, ನಾವು ಮಾಡುವ ಕಾರ್ಯ ಸ್ವಹಿತದ ಜತೆಗೆ ದೇಶದ ಹಿತವನ್ನು ಸಾಧಿಸುವಂತಿರಬೇಕು. ಶಿಕ್ಷಣ ನೀಡಬೇಕಾದ, ಪಡೆಯಬೇಕಾದ ಎಲ್ಲರೂ ರಾಷ್ಟ್ರದ ಘನತೆ, ಗೌರವವನ್ನು ಕಾಪಾಡುವ ಆಲೋಚನೆಯನ್ನು ಸದಾ ಮಾಡುತ್ತಿರಬೇಕು ಎಂದು ಹೇಳಿದರು.

ಇದನ್ನೂ ಓದಿ: Book Release: ಬೆಂಗಳೂರಿನಲ್ಲಿ ಜೂ. 5ರಂದು ಗ್ರಂಥ ಲೋಕಾರ್ಪಣೆ, ಪ್ರಶಸ್ತಿ ಪ್ರದಾನ

ಕಾಲೇಜಿನ ಪ್ರಾಚಾರ್ಯ ಡಿ.ಕೆ. ಗಾಂವ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳಿಗಾಗಿ ಸಂಪತ್ತು ಮಾಡುವುದಕ್ಕಿಂತ ಮಕ್ಕಳನ್ನೇ ಸಂಪತ್ತಾಗಿಸುವುದು ಸೂಕ್ತ. ಜ್ಞಾನ ಸಂಪತ್ತಿನಿಂದ ಮಕ್ಕಳನ್ನು ಶ್ರೀಮಂತರಾಗಿಸುವ ಮಾರ್ಗವೇ ಶ್ರೇಷ್ಠವಾದದ್ದು ಆ ಕಾರ್ಯವನ್ನು ವಿಶ್ವದರ್ಶನ ಮಾಡುತ್ತಿದೆ‌ ಎಂದರು.

ಅದಕ್ಕಾಗಿ ನಮ್ಮ ಪಿಯು ಕಾಲೇಜು ಉತ್ತಮ ಮೂಲಸೌಕರ್ಯ ಮತ್ತು ನುರಿತ ಉಪನ್ಯಾಸಕ ವರ್ಗವನ್ನು ಹೊಂದಿದೆ ಎಂದು ಹೇಳಿದರಲ್ಲದೇ, ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಮತ್ತು ಪಾಲಕರಿಗೆ ಕಾಲೇಜಿನ ಉಪನ್ಯಾಸಕ ವರ್ಗವನ್ನು ಪರಿಚಯಿಸಿ, ಕಾಲೇಜಿನ ವಿಶೇಷತೆಗಳ ಕುರಿತು ಮಾಹಿತಿ ನೀಡಿದರು.

ಕಾಲೇಜಿನ ಮಾಜಿ ವಿದ್ಯಾರ್ಥಿಗಳಾದ ಅಪೂರ್ವ ಹಾಗೂ ಶ್ರೀಗೌರಿ ಭಟ್, ಕಾಲೇಜಿನಲ್ಲಿ ತಮ್ಮ ಅನುಭವ ಜೀವನಪೂರ್ತಿ ಸ್ಮರಿಸುವಂತದ್ದು ಎಂದು ಅನಿಸಿಕೆ ಹಂಚಿಕೊಂಡರು. ಇದೇ ಸಂದರ್ಭದಲ್ಲಿ ಕಳೆದ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 42 ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ, ಗೌರವಿಸಲಾಯಿತು.

ಇದನ್ನೂ ಓದಿ: Samsung: ಸ್ಯಾಮ್‌ಸಂಗ್‌ನ ʼಬಿಗ್‌ ಟಿವಿ ಡೇಸ್‌ʼ ಸೇಲ್‌; ದೊಡ್ಡ ಟಿವಿಗಳ ಮೇಲೆ ಅತ್ಯಾಕರ್ಷಕ ಆಫರ್‌!

ಶ್ರಾವ್ಯ ಪ್ರಾರ್ಥಿಸಿದಳು. ಉಪನ್ಯಾಸಕ ಗುರುರಾಜ್ ಭಟ್ ನಿರ್ವಹಿಸಿದರು. ಉಪ ಪ್ರಾಂಶುಪಾಲ ನಾಗರಾಜ ಹೆಗಡೆ ವಂದಿಸಿದರು.

Continue Reading

ಉದ್ಯೋಗ

Job News: ಗುಡ್‌ನ್ಯೂಸ್‌; 35 ಸಾವಿರ ಅತಿಥಿ ಶಿಕ್ಷಕರ ನೇಮಕಾತಿಗೆ ಸರ್ಕಾರದಿಂದ ಅನುಮತಿ

Job News: ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ 35 ಸಾವಿರ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಶಾಲಾ ಶಿಕ್ಷಣ ಇಲಾಖೆ ಅನುಮತಿ ನೀಡಿದೆ. ಪ್ರಸ್ತುತ ಖಾಲಿ ಇರುವ 33,863 ಹುದ್ದೆಗಳಿಗೆ ಮೊದಲ ಹಂತದಲ್ಲಿ ಜಿಲ್ಲಾವಾರು ಮತ್ತು ತಾಲೂಕುವಾರು ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ.

VISTARANEWS.COM


on

Job News
Koo

ಬೆಂಗಳೂರು: ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿರುವವರಿಗೆ ರಾಜ್ಯ ಸರ್ಕಾರ ಗುಡ್‌ನ್ಯೂಸ್‌ ನೀಡಿದೆ. ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ 35 ಸಾವಿರ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಶಾಲಾ ಶಿಕ್ಷಣ ಇಲಾಖೆ ಅನುಮತಿ ನೀಡಿದೆ. ಶೀಘ್ರದಲ್ಲಿಯೇ ಈ ಕುರಿತಾದ ಅಧಿಸೂಚನೆ ಹೊರ ಬೀಳಲಿದೆ (Job News).

ಶಾಲಾ ಶಿಕ್ಷಣ ಇಲಾಖೆ ಈ ಕುರಿತು ಜೂನ್‌ 3ರಂದು ಪ್ರಕಟಣೆ ಹೊರಡಿಸಿದೆ. 2024-25ನೇ ಶೈಕ್ಷಣಿಕ ಸಾಲಿನಲ್ಲಿ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಅನೇಕ ಬೋಧಕ ಹುದ್ದೆಗಳು ಖಾಲಿ ಇವೆ. ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ, ಖಾಯಂ ಶಿಕ್ಷಕರ ನೇಮಕವಾಗುವವರೆಗೆ ಅಥವಾ ಶೈಕ್ಷಣಿಕ ವರ್ಷದ ಅಂತ್ಯದವರೆಗೆ-ಇದರಲ್ಲಿ ಯಾವುದು ಮೊದಲೊ ಅಲ್ಲಿಯವರೆಗೆ ಶಿಕ್ಷಕರ ಕೊರತೆಯನ್ನು ನೀಗಿಸುವ ದೃಷ್ಟಿಯಿಂದ ಒಟ್ಟು 35 ಸಾವಿರ ಅತಿಥಿ ಶಿಕ್ಷಕರನ್ನು ತಾತ್ಕಾಲಿಕ ನೇಮಕಾತಿ ಮಾಡಿಕೊಳ್ಳಲು ಸರ್ಕಾರದ ಪತ್ರದಲ್ಲಿ ಅನುಮತಿ ನೀಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಕಟಣೆಯಲ್ಲಿ ಏನಿದೆ?

ಅತಿಥಿ ಶಿಕ್ಷಕರ ಹಾಜರಾತಿಯನ್ನು ಪ್ರತ್ಯೇಕವಾಗಿ ನಿರ್ವಹಿಸಲಾಗುವುದು, ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ವೇತನ 10 ಸಾವಿರ ರೂ. ನಿಗದಿಪಡಿಸಲಾಗಿದೆ ಎಂದು ತಿಳಿಸಲಾಗಿದೆ. ಅಲ್ಲದೆ, ಅತಿಥಿ ಶಿಕ್ಷಕರು ನೇಮಕಗೊಂಡ ಸ್ಥಳಕ್ಕೆ ಮುಂದೆ ಖಾಯಂ ಶಿಕ್ಷಕರು ನಿಯುಕ್ತಿಗೊಂಡರೆ ಅತಿಥಿ ಶಿಕ್ಷಕರನ್ನು ಕರ್ತವ್ಯದಿಂದ ಕೈ ಬಿಟ್ಟು, ತಾಲೂಕಿನಲ್ಲಿ ಖಾಲಿ ಇರುವ ಇತರ ಕಡೆಗೆ ನೇಮಕ ಮಾಡಲಾಗುವುದು ಎಂದು ಹೇಳಲಾಗಿದೆ.

ಪ್ರಸ್ತುತ ಖಾಲಿ ಇರುವ 33,863 ಹುದ್ದೆಗಳಿಗೆ ಮೊದಲ ಹಂತದಲ್ಲಿ ಜಿಲ್ಲಾವಾರು ಮತ್ತು ತಾಲೂಕುವಾರು ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ.

ತಾಲೂಕುವಾರು ಖಾಲಿ ಇರುವ ಅತಿಥಿ ಶಿಕ್ಷಕರ ಹುದ್ದೆಯ ಮಾಹಿತಿ ತಿಳಿಯಲು ಇಲ್ಲಿ ಕ್ಲಿಕ್‌ ಮಾಡಿ.

ಉದ್ಯೋಗ ಹುಡುಕಾಟದಲ್ಲಿರುವ ಪದವೀಧರರಿಗೆ ಲಿಂಕ್ಡ್‌ಇನ್‌ ಸಲಹೆಗಳು ಪ್ರಕಟ

ವಿಶ್ವದ ಅತಿದೊಡ್ಡ ಪ್ರೊಫೆಷನಲ್ ನೆಟ್‌ವರ್ಕ್ ಆಗಿರುವ ಲಿಂಕ್ಡ್‌ಇನ್ (LinkedIn) ಉದ್ಯೋಗ ಹುಡುಕಾಟದಲ್ಲಿರುವ ಇತ್ತೀಚಿನ ಪದವೀಧರರಿಗಾಗಿ ಭಾರತದಲ್ಲಿ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಹುದ್ದೆಗಳು, ಕೈಗಾರಿಕೆಗಳು, ಕೆಲಸಗಳು ಮತ್ತು ಕೌಶಲ್ಯಗಳ ಕುರಿತು ಹೊಸ ಮಾಹಿತಿಯನ್ನು ಬಹಿರಂಗಪಡಿಸಿದೆ. ಪ್ರಸ್ತುತ ಸಂದರ್ಭದಲ್ಲಿ ಆರಂಭಿಕ ಹಂತದ ಹುದ್ದೆಗಳಿಗೆ ಡಿಸೈನ್ (ವಿನ್ಯಾಸ), ಅನಾಲಿಟಿಕ್ಸ್ (ವಿಶ್ಲೇಷಣೆ) ಮತ್ತು ಪ್ರೋಗ್ರಾಮಿಂಗ್‌ಗಳು ಅತ್ಯುನ್ನತ ಕೌಶಲ್ಯಗಳು ಎಂದು ಲಿಂಕ್ಡ್‌ಇನ್ ತಿಳಿಸಿದೆ.

2024ರಲ್ಲಿ ಕಂಪನಿಗಳು ಹೊಂದಿಕೊಳ್ಳುವ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವುದನ್ನು ಮುಂದುವರೆಸುತ್ತಿವೆ. ಹೆಚ್ಚು ಹೊಂದಿಕೊಳ್ಳುವ ಕೆಲಸದ ವ್ಯವಸ್ಥೆಗಳ ಕಡೆಗೆ ಗಮನ ಕೊಡುವ ಟ್ರೆಂಡ್ ಈಗ ನಡೆಯುತ್ತಿದೆ. ಆನ್-ಸೈಟ್ ಹುದ್ದೆಗಳು 15% ರಷ್ಟು ಕಡಿಮೆಯಾಗುತ್ತಿವೆ ಮತ್ತು ವರ್ಷದಿಂದ ವರ್ಷಕ್ಕೆ ಆರಂಭಿಕ ಹಂತದ ಹುದ್ದೆಗಳಿಗೆ 52% ರಷ್ಟು ಹೈಬ್ರಿಡ್ ಸ್ಥಾನಗಳು ಹೆಚ್ಚಾಗುತ್ತಿವೆ. ಈ ಬದಲಾವಣೆಯು ಹೊಸ ಪದವೀಧರರಿಗೆ ಆಯ್ಕೆ ಮಾಡಲು ಮತ್ತು ವೃತ್ತಿ ಜೀವನ ಮುಂದುವರಿಸಲು ವಿಸ್ತಾರವಾದ ಕೆಲಸದ ಅವಕಾಶಗಳನ್ನು ಒದಗಿಸುತ್ತದೆ. ಲಿಂಕ್ಡ್‌ಇನ್‌ನ ಕರಿಯರ್ ಸ್ಟಾರ್ಟರ್ 2024 ವರದಿಯ ಪ್ರಕಾರ, ಯುಟಿಲಿಟೀಸ್ ಕ್ಷೇತ್ರ ಬಹಳ ವೇಗವಾಗಿ ಬೆಳೆಯುತ್ತಿರುವ ಉದ್ಯಮವಾಗಿದ್ದು, ಬ್ಯಾಚುಲರ್ ಡಿಗ್ರಿ ಅಥವಾ ಪದವಿ ಹೊಂದಿರುವ ಯುವ ವೃತ್ತಿಪರರು ಆಯ್ಕೆಗೆ ಪರಿಗಣಿಸಬಹುದಾಗಿದೆ.

ಇದನ್ನೂ ಓದಿ: Job Alert: ಯುಪಿಎಸ್‌ಸಿಯಿಂದ 312 ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ; ಆನ್‌ಲೈನ್‌ ಮೂಲಕ ಅಪ್ಲೈ ಮಾಡಿ

Continue Reading
Advertisement
Lok Sabha Election Result 2024 Live
ದೇಶ24 mins ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Benefits Of Litchi
ಆರೋಗ್ಯ24 mins ago

Benefits Of Litchi: ಸಿಹಿಯಾದ, ರುಚಿಯಾದ ಲಿಚಿ ಹಣ್ಣನ್ನು ತಿಂದರೆ ಆರೋಗ್ಯ ಲಾಭ ಹಲವಾರು

Exit Poll 2024
ಪ್ರಮುಖ ಸುದ್ದಿ28 mins ago

Election Results 2024: ಇಂದು ಹೊರಬೀಳಲಿದೆ ಫಲಿತಾಂಶ; ಎಕ್ಸಿಟ್‌ ಪೋಲ್‌ಗಳು ಹೇಳಿದ್ದೇನು?

karnataka weather Forecast
ಮಳೆ54 mins ago

Karnataka Weather : ಹವಾಮಾನ ತಜ್ಞರ ವಾರ್ನಿಂಗ್‌; ಇನ್ನೊಂದು ವಾರ ವಿಪರೀತ ಮಳೆ, ಜೂ.6ರ ವರೆಗೂ ಮೀನುಗಾರಿಕೆಗೆ ಬ್ರೇಕ್‌

Home Remedies For Mosquito Bite
ಆರೋಗ್ಯ1 hour ago

Home Remedies For Mosquito Bite: ಸೊಳ್ಳೆ ಕಚ್ಚಿದ ಜಾಗದಲ್ಲಿ ವಿಪರೀತ ಉರಿಯೇ? ಈ ಸರಳ ಮನೆಮದ್ದುಗಳನ್ನು ಬಳಸಿ

Lok Sabha Election Result
ದೇಶ2 hours ago

Lok Sabha Election Result 2024: ಇಂದು ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಶುರು; ದೇಶದ ಚುಕ್ಕಾಣಿ ಹಿಡಿಯೋರು ಯಾರು?

Dina Bhavishya
ಭವಿಷ್ಯ2 hours ago

Dina Bhavishya : ಹೂಡಿಕೆ ವ್ಯವಹಾರದಲ್ಲಿ ಡಬಲ್‌ ಲಾಭ; ಈ ರಾಶಿಯವರಿಗೆ ಖುಲಾಯಿಸಲಿದೆ ಲಕ್‌

Mallikarjun Kharge
Lok Sabha Election 20248 hours ago

Mallikarjun Kharge: ನಿರ್ಭೀತಿಯಿಂದ ಕರ್ತವ್ಯ ನಿರ್ವಹಿಸಿ: ಮತ ಎಣಿಕೆ ಸಿಬ್ಬಂದಿಗೆ ಮಲ್ಲಿಕಾರ್ಜುನ ಖರ್ಗೆ ಕರೆ

SA vs SL
ಕ್ರೀಡೆ8 hours ago

SA vs SL: ಲಂಕಾ ದಹನ ಮಾಡಿದ ನೋರ್ಜೆ; ಹರಿಣ ಪಡೆಗೆ 6 ವಿಕೆಟ್​ ಜಯ

Arecanut Price
ಕೃಷಿ8 hours ago

Arecanut Price: ಅಡಿಕೆ ಧಾರಣೆ ನಿರೀಕ್ಷೆ ಮೀರಿ ಏರಲಿದೆ! ಇದು ರೈತರ ‘ನಂಬಿಕೆ’ ಮತ್ತು ‘ಅಭಿಪ್ರಾಯ’ಗಳ ಎಕ್ಸಿಟ್ ಪೋಲ್!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok Sabha Election Result 2024 Live
ದೇಶ24 mins ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ16 hours ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ16 hours ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ2 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು3 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ5 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ7 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು7 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ1 week ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 week ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

ಟ್ರೆಂಡಿಂಗ್‌