Sonu Sood | ಚಲಿಸುತ್ತಿರುವ ರೈಲಿನ ಫುಟ್‌ಬೋರ್ಡ್‌ನಲ್ಲಿ ಕುಳಿತ ವಿಡಿಯೊ ಬಗ್ಗೆ ಕ್ಷಮೆಯಾಚಿಸಿದ ನಟ ಸೋನು ಸೂದ್ - Vistara News

ಬಾಲಿವುಡ್

Sonu Sood | ಚಲಿಸುತ್ತಿರುವ ರೈಲಿನ ಫುಟ್‌ಬೋರ್ಡ್‌ನಲ್ಲಿ ಕುಳಿತ ವಿಡಿಯೊ ಬಗ್ಗೆ ಕ್ಷಮೆಯಾಚಿಸಿದ ನಟ ಸೋನು ಸೂದ್

ಸೋನು ಸೂದ್ (Sonu Sood) ಫುಟ್‌ಬೋರ್ಡ್‌ನಲ್ಲಿ ಕುಳಿತು ಚಲಿಸುತ್ತಿರುವ ರೈಲಿನ ಬಾಗಿಲಿನ ಬಳಿ ಹ್ಯಾಂಡಲ್ ಅನ್ನು ಹಿಡಿದುಕೊಂಡು ಇಣುಕಿ ನೋಡುತ್ತಿರುವ ವಿಡಿಯೊವನ್ನು ಹಂಚಿಕೊಂಡಿದ್ದರು. ನಟ ಈ ಬಗ್ಗೆ ಟ್ವೀಟ್‌ ಮೂಲಕ ಕ್ಷಮೆಯಾಚಿಸಿದ್ದಾರೆ.

VISTARANEWS.COM


on

Sonu Sood
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು : ಬಾಲಿವುಡ್‌ ನಟ ಸೋನು ಸೂದ್ (Sonu Sood) ಅವರು, ಡಿಸೆಂಬರ್ 13 ರಂದು ಚಲಿಸುತ್ತಿರುವ ರೈಲಿನ ಫುಟ್‌ಬೋರ್ಡ್‌ನಲ್ಲಿ ಕುಳಿತು, ಬಾಗಿಲಿನ ಬಳಿ ಹ್ಯಾಂಡಲ್ ಅನ್ನು ಹಿಡಿದುಕೊಂಡು ಇಣುಕಿ ನೋಡುತ್ತಿರುವ ವಿಡಿಯೊವನ್ನು ಹಂಚಿಕೊಂಡಿದ್ದರು. ವಿಡಿಯೊ ನೋಡಿ ರೈಲ್ವೆ ಪೊಲೀಸರು ಎಚ್ಚರಿಕೆಯ ಮೆಸೇಜ್‌ ನೀಡಿದ್ದರು. ಇದೀಗ ನಟ ಈ ಬಗ್ಗೆ ಟ್ವೀಟ್‌ ಮೂಲಕ ಕ್ಷಮೆಯಾಚಿಸಿದ್ದಾರೆ.

ರೈಲಿನ ಪ್ರಯಾಣವನ್ನು ಆನಂದಿಸುತ್ತಿರುವ ವಿಡಿಯೊವನ್ನು ನಟ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಂತೆ ಚರ್ಚೆಗಳು ಶುರುವಾಗಿದ್ದವು. ಸೋನು ಸೂದ್‌ ವಿಡಿಯೊವನ್ನು ಹಂಚಿಕೊಂಡ ತಕ್ಷಣ, ನೆಟ್ಟಿಗರು ಸೋನು ಅವರನ್ನು ಡೌನ್ ಟು ಅರ್ಥ್ ಎಂದು ಶ್ಲಾಘಿಸಿದ್ದಾರೆ. ಇನ್ನೂ ನೆಟ್ಟಿಗರು ಛೀಮಾರಿ ಹಾಕಿದ್ದಾರೆ. ಆದರೆ ಈ ವಿಡಿಯೊ ರೈಲ್ವೆ ಅಧಿಕಾರಿಗಳ ಕಣ್ಣಿಗೂ ಬಿದ್ದಿದ್ದು ಎಚ್ಚರಿಕೆ ಮತ್ತು ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸದಂತೆ ಸಲಹೆಯೊಂದಿಗೆ ಟ್ವೀಟ್‌ ಹಂಚಿಕೊಂಡಿತ್ತು. ಇದೀಗ ಈ ಬಗ್ಗೆ ಸೋನು ಸೂದ್‌ ಟ್ವೀಟ್‌ ಮೂಲಕ ಕ್ಷಮೆಯಾಚಿಸಿದ್ದಾರೆ.

ಟ್ವೀಟ್‌ನಲ್ಲಿ ʻʻನಾನು ಈ ಬಗ್ಗೆ ಕ್ಷಮೆಯಾಚಿಸುತ್ತೇನೆ. ರೈಲುಗಳ ಬಾಗಿಲಿನ ಮೇಲೆ ಲಕ್ಷಾಂತರ ಬಡವರು ತಮ್ಮ ಜೀವನವನ್ನು ಹೇಗೆ ಕಳೆಯುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಾನು ಕೂತಿದ್ದೆʼʼ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ | Sonu Sood | ಟಿಕ್‌ಟಾಕ್‌ ಸ್ಟಾರ್‌ ಖಾಬಿ ಜತೆ ನಟ ಸೋನು ಸೂದ್‌ ರೀಲ್ಸ್‌: ವೈರಲ್‌ ಆಯ್ತು ವಿಡಿಯೊ

ಆಗಿದ್ದೇನು?
ಸೋನು ಸೂದ್ ಅವರು ಫುಟ್‌ಬೋರ್ಡ್‌ನಲ್ಲಿ ಕುಳಿತು ಚಲಿಸುತ್ತಿರುವ ರೈಲಿನ ಬಾಗಿಲಿನ ಬಳಿ ಹ್ಯಾಂಡಲ್ ಅನ್ನು ಹಿಡಿದುಕೊಂಡು ಇಣುಕಿ ನೋಡುತ್ತಿರುವ ವಿಡಿಯೊವನ್ನು ಹಂಚಿಕೊಂಡಿದ್ದರು. ಆದರೆ ಈ ವಿಡಿಯೊ ರೈಲ್ವೆ ಅಧಿಕಾರಿಗಳ ಕಣ್ಣಿಗೂ ಬಿದ್ದಿದ್ದು, ಎಚ್ಚರಿಕೆ ಮತ್ತು ಸಲಹೆಯೊಂದಿಗೆ ಪ್ರತಿಕ್ರಿಯಿಸಿದ್ದರು. ಮುಂಬೈ ವಿಭಾಗದ ರೈಲ್ವೆ ಪೊಲೀಸ್ ಹ್ಯಾಂಡಲ್ ಟ್ವೀಟ್‌ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸದಂತೆ ನಟನಿಗೆ ಸಲಹೆ ನೀಡಿತ್ತು. ಟ್ವೀಟ್‌ ಮೂಲಕ ʻʻಸೋನು ಸೂದ್ ಫುಟ್‌ಬೋರ್ಡ್‌ನಲ್ಲಿ ಪ್ರಯಾಣಿಸುವುದು ಚಲನಚಿತ್ರಗಳಲ್ಲಿ ‘ಮನರಂಜನೆ’ಯ ಮೂಲವಾಗಿರಬಹುದು. ನಿಜ ಜೀವನದಲ್ಲಿ ಅಲ್ಲ! ನಾವು ಎಲ್ಲಾ ಸುರಕ್ಷತಾ ಮಾರ್ಗಸೂಚಿಗಳನ್ನು ಅನುಸರಿಸೋಣ ಮತ್ತು ಎಲ್ಲರಿಗೂ ‘ಹೊಸ ವರ್ಷದ ಶುಭಾಶಯಗಳು” ಎಂದು GRP ಹ್ಯಾಂಡಲ್ ಟ್ವೀಟ್ ಮಾಡಿತ್ತು.

ಇದನ್ನೂ ಓದಿ | Sonu Sood | ಚಲಿಸುತ್ತಿರುವ ರೈಲಿನ ಫುಟ್‌ಬೋರ್ಡ್‌ನಲ್ಲಿ ಸೋನು ಸೂದ್: ರೈಲ್ವೆ ಪೊಲೀಸ್‌ ಟ್ವೀಟ್‌ನಲ್ಲಿ ಹೇಳಿದ್ದೇನು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬಾಲಿವುಡ್

Uorfi Javed: ನೈಟ್‌ ಪಾರ್ಟಿಯ ಕಿಲಾಡಿ ಓರಿ ಮತ್ತು ಉರ್ಫಿ ಮದುವೆ ಆಗ್ತಾರಾ?

Uorfi Javed: ಓರಿ ಹೇಳಿಕೊಂಡಿರುವ ಪ್ರಕಾರ, ಶ್ರೀಮಂತ ಜನರೇ ಓರಿಯನ್ನು ಪಾರ್ಟಿ ಕರೆಯುತ್ತಾರೆ ಮತ್ತು ತಮ್ಮ ಹೆಂಡತಿ, ಮಕ್ಕಳೊಂದಿಗೆ ಫೋಟೋಗೆ ಪೋಸು ನೀಡುವಂತೆ ಕೇಳಿಕೊಳ್ಳುತ್ತಾರೆ. ಹೀಗೆ ನಾನು ಫೋಟೋ ತೆಗೆಸಿಕೊಳ್ಳಲು ಮತ್ತು ಅವುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲು ಹಣ ಪಡೆದುಕೊಳ್ಳುತ್ತೇನೆ. ಈ ಫೋಟೋಗಳಿಗಾಗಿ ಒಂದು ರಾತ್ರಿಯನ್ನು ಕನಿಷ್ಠ 20 ರಿಂದ 30 ಲಕ್ಷ ರೂಪಾಯಿ ಗಳಿಸುತ್ತೇನೆ ಎಂದು ಹೇಳಿಕೊಂಡಿದ್ದರು.

VISTARANEWS.COM


on

Uorfi Javed and Orry were spotted outside a restaurant in Mumbai
Koo

ಬೆಂಗಳೂರು: ಬಿಗ್ ಬಾಸ್ (Big Boss) ಮನೆ ಸೇರಿದ್ದ ಓರ್ಹಾನ್ ಅವತ್ರಮಣಿ ಅಲಿಯಾಸ್ ಓರಿ, ಸೆಲಿಬ್ರೆಟಿ ಪಾರ್ಟಿಗಳಿಗೆ ಹೋಗಿ (Uorfi Javed) ಅಲ್ಲಿನ ನಟ, ನಟಿಯರ ಎದೆಯ ಮೇಲೆ ಕೈಯಿಟ್ಟು ಫೋಟೋ ತೆಗೆಸಿಕೊಳ್ಳುವುದರಲ್ಲೇ ಫೇಮಸ್‌. ಇದೀಗ ಉರ್ಫಿ ಹಾಗೂ ಓರಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಜತೆಗೆ ಉರ್ಫಿ ಅವರು ಓರಿ ಕೆನ್ನೆಗೆ ಮುತ್ತು ಕೊಟ್ಟಿದ್ದಾರೆ. ಮದುವೆ ಬಗ್ಗೆ ಮಾತನಾಡಿ, ತಮ್ಮ ಸಂಬಂಧದ ಬಗ್ಗೆ ಮತ್ತಷ್ಟು ಅನುಮಾನ ಹುಟ್ಟಿಸಿದ್ದಾರೆ.  ಇದೀಗ ಓರಿ ಹಾಗೂ ಉರ್ಫಿ ಫೋಟೊಗಳು ವೈರಲ್‌ ಆಗಿವೆ.

ಡಿನ್ನರ್‌ಗೆ ಉರ್ಫಿ ಹಸಿರು ಉಡುಗೆಯಲ್ಲಿ ಕಂಡು ಬಂದರೆ, ಓರಿ ಮರೂನ್ ಟಿ-ಶರ್ಟ್, ಮ್ಯಾಚಿಂಗ್ ಪ್ಯಾಂಟ್ ಮತ್ತು ಸ್ನೀಕರ್ಸ್‌ನಲ್ಲಿ ಕಾಣಿಸಿಕೊಂಡರು. ಪಾಪರಾಜಿಗಳಿಗೆ ಉರ್ಫಿ ಮತ್ತು ಓರಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಮದುವೆ ಬಗ್ಗೆ ಮಾತನಾಡಿ, ತಮ್ಮ ಸಂಬಂಧದ ಬಗ್ಗೆ ಮತ್ತಷ್ಟು ಅನುಮಾನ ಹುಟ್ಟಿಸಿದ್ದಾರೆ. ಮಾಧ್ಯಮದವರೂ ಓರಿಗೆ ಉರ್ಫಿಯನ್ನು ಮದುವೆಯಾಗುತ್ತೀರಾ ಎಂದು ಕೇಳಿದ್ದಾರೆ. ಉರ್ಫಿ ಮದುವೆಯಾಗೋಕೆ ಓಕೆ ಅಂದ್ರೆ ನನಗೂ ಓಕೆ ಎಂದು ಓರಿ ಹೇಳಿದ್ದಾರೆ.  ಇದಕ್ಕೂ ಮುನ್ನ ಉರ್ಫಿಗೂ ಈ ಪ್ರಶ್ನೆ ಕೇಳಲಾಗಿದೆ. ಅದಕ್ಕೆ ಉರ್ಫಿ ತಮಾಷೆಯಾಗಿಯೇ ಉತ್ತರ ನೀಡಿ, ತಪ್ಪಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ನೀವೆಲ್ಲ ನನ್ನ ಮದುವೆ ಬಗ್ಗೆ ಆತುರದಲ್ಲಿದ್ದೀರಿ ಹೇಳಿದ್ದಾರೆ.

ಈ ಹಿಂದೆ, ಪೋಸ್ಟ್ ಆಗಿದ್ದ ಮತ್ತೊಂದು ವಿಡಿಯೊದಲ್ಲಿ, ಉರ್ಫಿ ಅವರು ಓರಿಯನ್ನು ಮದುವೆಯಾಗಲು ಬಯಸುವುದಾಗಿ ತಿಳಿಸಿದ್ದರು.

ಇದನ್ನೂ ಓದಿ: Rahul Dravid: ಸುದ್ದಿಗೋಷ್ಠಿಯಲ್ಲಿ ಉರ್ದು ಮಾತನಾಡಿದ ರಾಹುಲ್​ ದ್ರಾವಿಡ್​; ವಿಡಿಯೊ ವೈರಲ್​

ಓರಿ ಯಾರು?

ಓರಿ ಹೇಳಿಕೊಂಡಿರುವ ಪ್ರಕಾರ, ಶ್ರೀಮಂತ ಜನರೇ ಓರಿಯನ್ನು ಪಾರ್ಟಿ ಕರೆಯುತ್ತಾರೆ ಮತ್ತು ತಮ್ಮ ಹೆಂಡತಿ, ಮಕ್ಕಳೊಂದಿಗೆ ಫೋಟೋಗೆ ಪೋಸು ನೀಡುವಂತೆ ಕೇಳಿಕೊಳ್ಳುತ್ತಾರೆ. ಹೀಗೆ ನಾನು ಫೋಟೋ ತೆಗೆಸಿಕೊಳ್ಳಲು ಮತ್ತು ಅವುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲು ಹಣ ಪಡೆದುಕೊಳ್ಳುತ್ತೇನೆ. ಈ ಫೋಟೋಗಳಿಗಾಗಿ ಒಂದು ರಾತ್ರಿಗೆ ಕನಿಷ್ಠ 20ರಿಂದ 30 ಲಕ್ಷ ರೂಪಾಯಿ ಗಳಿಸುತ್ತೇನೆ ಎಂದು ಹೇಳಿಕೊಂಡಿದ್ದರು.

ಓರಿಯನ್ನು ಬಾಲಿವುಡ್ ʻಬೆಸ್ಟ್‌ ​​ಫ್ರೆಂಡ್ ಫಾರೆವರ್ʼ ಎಂದೇ ಹೇಳುತ್ತಾರೆ. ಓರಿ ತನ್ನ ಫ್ಯಾಷನ್​ನಿಂದಾಗಿಯೂ ಸುದ್ದಿಯಾಗುತ್ತಾರೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್​ನ ಚೇರ್​ ಪರ್ಸನ್ ಆಫೀಸ್​ನಲ್ಲಿ ಸ್ಪೆಷಲ್ ಪ್ರಾಜೆಕ್ಟ್ ಮ್ಯಾನೇಜರ್ ಆಗಿದ್ದಾರೆ.ಇತ್ತೀಚೆಗೆ ಜಾಮ್‌ನಗರದಲ್ಲಿ ಅನಂತ್ ಅಂಬಾನಿ ವಿವಾಹ ಪೂರ್ವ ಸಮಾರಂಭದಲ್ಲಿ (anant ambani pre wedding) ರಿಹಾನ್ನಾ ಅವರೊಂದಿಗೆ ಕಾಣಿಸಿಕೊಂಡು ಓರಿ ಸಖತ್‌ ಸುದ್ದಿಯಾಗಿದ್ದರು. ಈ ರೀತಿ ಹಲವು ಸಮಾರಂಭಗಳಲ್ಲಿ ಹಾಜಾರಾಗಲು ಓರಿ ಪಡೆಯುವ ಸಂಭಾವನೆ ಕೇಳಿದರೆ ಶಾಕ್‌ ಆಗೋದು ಗ್ಯಾರಂಟಿ.

ಮಾಧ್ಯಮವೊಂದರ ಸಂದರ್ಶನದಲ್ಲಿ ಹಲವು ಸಮಾರಂಭಗಳಲ್ಲಿ ಹಾಜಾರಾಗಲು ಪಡೆಯುವ ಸಂಭಾವನೆ ಕುರಿತು ಮಾತನಾಡಿದ್ದರು. ʻʻಕಾರ್ಯಕ್ರಮಗಳಿಗೆ ಹಾಜರಾಗಲು ಮುಖ್ಯ ಕಾರಣ ಎಲ್ಲಿರಿಗೂ ಸಂತೋಷ ನೀಡಬೇಕು ಎಂದು. ಸೆಲೆಬ್ರಿಟಿಗಳು ನನ್ನನ್ನು ಮದುವೆಗೆ ಕರೆಯುತ್ತಾರೆ. 15ರಿಂದ 30 ಲಕ್ಷದವರೆಗೆ ಸಂಭಾವನೆ ನೀಡಿ ಸಂತೋಷಪಡುತ್ತಾರೆ. ನಾನು ಅತಿಥಿಯಾಗಿ ಅಲ್ಲಿ ಭಾಗಿಯಾಗಲ್ಲ. ಒಳ್ಳೆಯ ಸ್ನೇಹಿತನಾಗಿ ಹೋಗುತ್ತೇನೆʼʼ ಎಂದಿದ್ದರು. ಓರಿ ಶಾರುಖ್ ಖಾನ್ ಮಗಳು ಸುಹಾನಾ ಖಾನ್​ಗೂ ಬೆಸ್ಟ್ ಫ್ರೆಂಡ್. ಸುಹಾನಾ ಖಾನ್ ಜತೆ ಓರಿ ಹಲವಾರು ಸಲ ಪಾರ್ಟಿಗಳಲ್ಲಿ ಕಾಣಿಸಿಕೊಂಡಿದ್ದಾರೆ.

Continue Reading

ಬಾಲಿವುಡ್

Raveena Tandon: ರವೀನಾ ಟಂಡನ್ ವಿಡಿಯೊ ವೈರಲ್​ ಮಾಡಿದ ವ್ಯಕ್ತಿ ಮೇಲೆ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ

Raveena Tandon: ರವೀನಾ ಟಂಡನ್ ಸುಳ್ಳು ಆರೋಪ ಮಾಡಿದ ವ್ಯಕ್ತಿಯ ಮೇಲೆ ಮಾನನಷ್ಟ ಮೊಕದ್ದಮೆ ನೋಟಿಸ್ ಕಳುಹಿಸಿದ್ದಾರೆ. ಕುಡಿದು ಬಂದು ಹಲ್ಲೆ ನಡೆಸಿದರು ಎಂಬ ಸುಳ್ಳು ಆರೋಪಕ್ಕಾಗಿ ರವೀನಾ ಟಂಡನ್ ಅವರು ಮೊಹ್ಸಿನ್ ಶೇಖ್ ಎಂಬ ವ್ಯಕ್ತಿಗೆ 100 ಕೋಟಿ ರೂ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

VISTARANEWS.COM


on

Raveena Tandon sues man for Rs 100 crore for defamatory
Koo

ಬೆಂಗಳೂರು: ಮುಂಬೈನ ಬಾಂದ್ರಾ ಉಪನಗರದಲ್ಲಿ ಶನಿವಾರ ತಡರಾತ್ರಿ ಬಾಲಿವುಡ್ ನಟಿ ರವೀನಾ ಟಂಡನ್ ಸಂಚರಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿತ್ತು. ರವೀನಾ ಮದ್ಯ ಕುಡಿದಿದ್ದರು ಎನ್ನಲಾಗಿತ್ತು. ಸಾರ್ವಜನಿಕರು ರವೀನಾ ಮೇಲೆ ಹಲ್ಲೆ ನಡೆಸಿರುವುದಾಗಿ (Raveena Tandon) ವರದಿಯಾಗಿತ್ತು. ಸ್ಥಳೀಯರು ನಟಿಯನ್ನು ಸುತ್ತುವರೆದು ಹಲ್ಲೆ ಮಾಡಿರುವ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿತ್ತು. ಬಳಿಕ ಇದು ಸುಳ್ಳು ಎಂದು ತಿಳಿದು ಬಂದಿತ್ತು. ಇದೀಗ ರವೀನಾ ಟಂಡನ್ ಸುಳ್ಳು ಆರೋಪ ಮಾಡಿದ ವ್ಯಕ್ತಿಯ ಮೇಲೆ ಮಾನನಷ್ಟ ಮೊಕದ್ದಮೆ ನೋಟಿಸ್ ಕಳುಹಿಸಿದ್ದಾರೆ. ಕುಡಿದು ಬಂದು ಹಲ್ಲೆ ನಡೆಸಿದರು ಎಂಬ ಸುಳ್ಳು ಆರೋಪಕ್ಕಾಗಿ ರವೀನಾ ಟಂಡನ್ ಅವರು ಮೊಹ್ಸಿನ್ ಶೇಖ್ ಎಂಬ ವ್ಯಕ್ತಿಗೆ 100 ಕೋಟಿ ರೂ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

ರವೀನಾ ಟಂಡನ್​ ಮೇಲೆ ಕೇಳಿಬಂದ ಈ ಆರೋಪಗಳೆಲ್ಲ ಸುಳ್ಳು ಎಂದು ನಂತರದಲ್ಲಿ ಪೊಲೀಸರು ಹೇಳಿಕೆ ನೀಡಿದರು. ಆ ಬಳಿಕ ವೈರಲ್​ ವಿಡಿಯೋವನ್ನು ಡಿಲೀಟ್​ ಮಾಡುವಂತೆ ಆ ವ್ಯಕ್ತಿಗೆ ಮನವಿ ಮಾಡಿಕೊಳ್ಳಲಾಯಿತು. ಆದರೆ ವಿಡಿಯೋ ಡಿಲೀಟ್​ ಮಾಡಲು ಆತ ಒಪ್ಪಿಲ್ಲ. ಆದ್ದರಿಂದ ಕಾನೂನಿನ ಮೂಲಕ ಬುದ್ಧಿ ಕಲಿಸಲು ರವೀನಾ ಟಂಡನ್​ ಮುಂದಾಗಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿದೆ.

ಈ ಬಗ್ಗೆ ಮಾತನಾಡಿದ ನಟಿಯ ವಕೀಲ ಸನಾ ರಯೀಸ್ ಖಾನ್, “ನಟಿಯವಿರುದ್ಧ ಯಾವುದೇ ದೂರು ದಾಖಲಾಗಿಲ್ಲ. ಆದರೆ, ಇತ್ತೀಚೆಗೆ, ಒಬ್ಬ ವ್ಯಕ್ತಿ ಎಕ್ಸ್‌ ಖಾತೆ ಮೂಲಕ ಸುಳ್ಳು ಮಾಹಿತಿಯನ್ನು ಪ್ರಸಾರ ಮಾಡಿದ್ದರು. ಉದ್ದೇಶಪೂರ್ವಕವಾಗಿ ರವೀನಾ ಅವರ ಹೆಸರಿಗೆ ಕಳಂಕ ತರುವ ಉದ್ದೇಶದಿಂದ ತೋರುತ್ತಿದೆ. ಹೀಗಾಗಿ ನಾವು ಕಾನೂನು ಕ್ರಮಗಳನ್ನು ತೆಗೆದುಕೊಂಡಿದ್ದೇವೆʼʼಎಂದು ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: Raveena Tandon: ರವೀನಾ ಟಂಡನ್ ವಿರುದ್ಧ ಸುಳ್ಳು ದೂರು ನೀಡಿದ್ರಾ? ಪೊಲೀಸರು ಹೇಳೋದೇನು?

ಏನಿದು ಪ್ರಕರಣ?

ಆರಂಭಿಕ ಮಾಹಿತಿಯ ಪ್ರಕಾರ, ರಿಜ್ವಿ ಕಾಲೇಜು ಬಳಿಯ ಕಾರ್ಟರ್ ರಸ್ತೆಯಲ್ಲಿ ರವೀನಾ ಅವರ ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿ ಮೂವರಿಗೆ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿತ್ತು. ನಟಿ ಕುಡಿದ ಅಮಲಿನಲ್ಲಿ ತನ್ನ ಕಾರಿನಿಂದ ಇಳಿದು ಸಂತ್ರಸ್ತರಿಗೆ ನಿಂದಿಸಿ ಹಲ್ಲೆ ನಡೆಸಿರುವುದಾಗಿಯೂ ವರದಿಯಾಗಿತ್ತು. ವೈರಲ್ ಆಗಿರುವ ವಿಡಿಯೋದಲ್ಲಿ ಸಂತ್ರಸ್ತರು ಮತ್ತು ಸ್ಥಳೀಯರು ರವೀನಾಳನ್ನು ಸುತ್ತುವರಿದು ಪೊಲೀಸರಿಗೆ ಕರೆ ಮಾಡಿದ್ದರು. “ತಳ್ಳಬೇಡಿ, ದಯವಿಟ್ಟು ನನಗೆ ಹೊಡೆಯಬೇಡಿ” ಎಂದು ರವೀನಾ ಮೊರೆ ಇಡುತ್ತಿರುವುದು ವಿಡಿಯೊದಲ್ಲಿ ಇತ್ತು.

ನಂತರ ಮಹಮ್ಮದ್ ಎನ್ನುವ ವ್ಯಕ್ತಿ ಈ ಘಟನೆಯನ್ನು ವಿವರಿಸಿದ್ದರು. ವಿಡಿಯೋದಲ್ಲಿ ಮಾತನಾಡಿದ ವ್ಯಕ್ತಿ ʻʻತನ್ನ ತಾಯಿ, ತಂಗಿ ಹಾಗೂ ಸೊಸೆ ರಿಜ್ವಿ ಕಾಲೆಜು ಬಳಿಯಲ್ಲಿ ಹೋಗುತ್ತಿರುವಾಗ ರವೀನಾ ಅವರ ಡ್ರೈವರ್ ತನ್ನ ತಾಯಿಗೆ ಡಿಕ್ಕಿ ಹೊಡೆದಿದ್ದಾನೆʼʼ ಎಂದಿದ್ದರು. ʻʻಚಾಲಕ ನನ್ನ ಸೊಸೆ ಮತ್ತು ನನ್ನ ತಾಯಿಯ ಮೇಲೂ ಹಲ್ಲೆ ನಡೆಸಿದ್ದಾನೆ. ನಂತರ ರವೀನಾ ಕೂಡ ಮದ್ಯದ ಅಮಲಿನಲ್ಲಿ ಹೊರಬಂದು ನನ್ನ ತಾಯಿಗೆ ಹೊಡೆದಿದ್ದರಿಂದ ಆಕೆಯ ತಲೆಗೆ ಗಂಭೀರ ಗಾಯಗಳಾಗಿವೆ. ನಾಲ್ಕು ಗಂಟೆಗಳ ಕಾಲ ಖಾರ್ ಪೊಲೀಸ್ ಠಾಣೆಯಲ್ಲಿ ಕಾಯುತ್ತಿದ್ದರೂ ಅವರ ದೂರನ್ನು ಸ್ವೀಕರಿಸುತ್ತಿಲ್ಲ . ರವೀನಾ ಪೊಲೀಸ್ ಠಾಣೆಯಲ್ಲಿ ಕೇಸ್‌ವನ್ನು ಇತ್ಯರ್ಥಪಡಿಸುವಂತೆ ನಮ್ಮಲ್ಲಿ ಮನವಿ ಮಾಡಿದರು. ಆದರೆ ನಾವು ಏಕೆ ಇತ್ಯರ್ಥಗೊಳಿಸಬೇಕು? ನನ್ನ ತಾಯಿಯ ಮೇಲೆ ಹಲ್ಲೆ ಮಾಡಲಾಗಿದೆ ಮತ್ತು ನಾನು ನ್ಯಾಯಕ್ಕಾಗಿ ಹೋರಾಡುತ್ತೇನೆ” ಎಂದು ಹೇಳಿಕೆ ನೀಡಿದ್ದರು.

ಬಳಿಕ ರವೀನಾ ಟಂಡನ್ ಕುಡಿದಿರಲಿಲ್ಲ, ಸುಳ್ಳು ದೂರು ದಾಖಲಾಗಿದೆ ಎಂದು ಸಿಸಿಟಿವಿ ದೃಶ್ಯಗಳ ಮೂಲಕ ತಿಳಿದು ಬಂದಿತ್ತು. ದೂರುದಾರರು ಸುಳ್ಳು ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದರು. ಉಪ ಪೊಲೀಸ್ ಆಯುಕ್ತ (ಡಿಸಿಪಿ) ರಾಜ್ತಿಲಕ್ ರೋಷನ್ ಈ ಬಗ್ಗೆ ಮಾತನಾಡಿ ʻʻದೂರುದಾರರು ಸುಳ್ಳು ದೂರು ನೀಡಿದ್ದಾರೆ. ನಾವು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದೇವೆ. ಆದರೆ ಕಾರು ಡಿಕ್ಕಿ ಹೊಡೆದಿರಲಿಲ್ಲ. ನಟಿ ರವೀನಾ ಟಂಡನ್ ಚಾಲಕನ ಪರ ಇದ್ದಾಗ ಸಾರ್ವಜನಿ ಕರು ನಟಿಯ ಮೇಲೆ ಮಾತಿಗಿಳಿದಿದ್ದಾರೆ. ಬಳಿಕ ರವೀನಾ ಟಂಡನ್ ಮತ್ತು ಕುಟುಂಬ ಇಬ್ಬರೂ ಖಾರ್ ಪೋಲೀಸ್ ಠಾಣೆಗೆ ಹೋಗಿ ಲಿಖಿತ ದೂರುಗಳನ್ನು ನೀಡಿದ್ದರು. ಇನ್ನು ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ಕಾರು ಯಾರಿಗೂ ಡಿಕ್ಕಿ ಹೊಡೆದಿಲ್ಲʼʼಎಂದಿದ್ದರು.

Continue Reading

ಸಿನಿಮಾ

Sunny Leone: ಸನ್ನಿ ಲಿಯೋನ್ ಬೇಕೇಬೇಕೆಂದು ವಿದ್ಯಾರ್ಥಿಗಳ ಪಟ್ಟು; ಕೇರಳ ವಿವಿಗೆ ಇಕ್ಕಟ್ಟು!

ತಿರುವನಂತಪುರಂನ ಕಾರ್ಯವಟ್ಟಂನ ಯೂನಿವರ್ಸಿಟಿ ಕಾಲೇಜ್ ಆಫ್ ಎಂಜಿನಿಯರಿಂಗ್ ನಲ್ಲಿ ಬಾಲಿವುಡ್ ನಟಿ ಸನ್ನಿ ಲಿಯೋನ್ (Sunny Leone) ಅವರ ನೃತ್ಯ ಪ್ರದರ್ಶನ ಜುಲೈ 5ರಂದು ಆಯೋಜಿಸಲಾಗಿತ್ತು. ಆದರೆ ಕೇರಳ ವಿಶ್ವವಿದ್ಯಾಲಯ ಈ ಜನಪ್ರಿಯ ಕಾರ್ಯಕ್ರಮಕ್ಕೆ ಇದೀಗ ಅನುಮತಿ ನಿರಾಕರಿಸಿದೆ. ಹಾಗಾಗಿ ವಿದ್ಯಾರ್ಥಿಗಳು ಮತ್ತು ವಿಶ್ವವಿದ್ಯಾಲಯದ ಮಧ್ಯೆ ಸಂಘರ್ಷ ಶುರುವಾಗಿದೆ. ಸನ್ನಿ ಲಿಯೋನ್‌ ಕಾರ್ಯಕ್ರಮ ಬೇಕೇಬೇಕೆಂದು ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ!

VISTARANEWS.COM


on

By

Sunny Leone
Koo

ತಿರುವಂತನಂತಪುರ: ಇತ್ತೀಚೆಗೆ ನಡೆದ ಕಾಲ್ತುಳಿತದ ಹಿನ್ನೆಲೆಯಲ್ಲಿ ಕೇರಳ (kerala) ಸರ್ಕಾರವು ಹೊರಗಿನ ಡಿಜೆ ಪಾರ್ಟಿಗಳು (DJ party) ಮತ್ತು ಕಾಲೇಜು ಕ್ಯಾಂಪಸ್‌ಗಳಲ್ಲಿ ರಾತ್ರಿ ಸಂಗೀತ ಕಾರ್ಯಕ್ರಮಗಳನ್ನು (music event) ನಿಷೇಧಿಸಿತ್ತು. ಆದರೂ ಬಾಲಿವುಡ್ ನಟಿ (bollywood actress) ಸನ್ನಿ ಲಿಯೋನ್ (Sunny Leone) ಅವರ ನೃತ್ಯ (dance) ಕಾರ್ಯಕ್ರಮಕ್ಕೆ ಕೇರಳ ವಿಶ್ವವಿದ್ಯಾಲಯ (kerala university) ವಿದ್ಯಾರ್ಥಿಗಳು ತಯಾರಿ ನಡೆಸಿದ್ದರು. ಈ ಕಾರ್ಯಕ್ರಮಕ್ಕೆ ವಿಶ್ವವಿದ್ಯಾಲಯ ಅನುಮತಿ ನಿರಾಕರಿಸಿದೆ.

ಕೇರಳ ರಾಜಧಾನಿ ತಿರುವನಂತಪುರಂನ ಕಾರ್ಯವಟ್ಟಂನ ಯೂನಿವರ್ಸಿಟಿ ಕಾಲೇಜ್ ಆಫ್ ಎಂಜಿನಿಯರಿಂಗ್ ನಲ್ಲಿ ಬಾಲಿವುಡ್ ನಟಿ ಸನ್ನಿ ಲಿಯೋನ್ ಅವರ ನೃತ್ಯ ಪ್ರದರ್ಶನ ಜುಲೈ 5ರಂದು ಆಯೋಜಿಸಲಾಗಿತ್ತು. ಆದರೆ ಅದಕ್ಕೂ ಮುನ್ನ ಕೇರಳ ವಿಶ್ವವಿದ್ಯಾಲಯ ಈ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿದೆ.

ಕೇರಳ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ. ಮೋಹನನ್ ಕುನ್ನುಮ್ಮಾಲ್ ಅವರು ಈ ಕಾರ್ಯಕ್ರಮವನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ಕಾರ್ಯಕ್ರಮದ ಪಟ್ಟಿಯಲ್ಲಿ ವಿಶ್ವವಿದ್ಯಾನಿಲಯವು ಮಿಸ್ ಲಿಯೋನ್ ಅವರ ಪ್ರದರ್ಶನವನ್ನು ಸೇರಿಸದಂತೆ ನೋಡಿಕೊಳ್ಳಲು ರಿಜಿಸ್ಟ್ರಾರ್‌ಗೆ ಸೂಚನೆ ನೀಡಿದ್ದಾರೆ. ಕ್ಯಾಂಪಸ್ ಒಳಗೆ ಅಥವಾ ಹೊರಗೆ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲು ಒಕ್ಕೂಟಕ್ಕೆ ಅನುಮತಿ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.
ಕಾರ್ಯಕ್ರಮವನ್ನು ನಡೆಸಲು ವಿಶ್ವವಿದ್ಯಾಲಯದ ಅಧಿಕಾರಿಗಳಿಂದ ಪೂರ್ವಾನುಮತಿ ಪಡೆಯುವಲ್ಲಿ ಕಾಲೇಜು ಒಕ್ಕೂಟವೂ ವಿಫಲವಾಗಿದೆ ಎನ್ನಲಾಗಿದೆ.

ಯಾಕೆ ನಿಷೇಧ?

ಕೊಚ್ಚಿನ್‌ನ ವಿಶ್ವವಿದ್ಯಾನಿಲಯದಲ್ಲಿ ನೂಕುನುಗ್ಗಲು ಸಂಭವಿಸಿ ಹಲವು ವಿದ್ಯಾರ್ಥಿಗಳ ಸಾವು ಸಂಭವಿಸಿದ ನಂತರ ರಾಜ್ಯ ಸರ್ಕಾರವು ಕಾಲೇಜು ಕ್ಯಾಂಪಸ್‌ಗಳಲ್ಲಿ ಹೊರಗಿನ ಡಿಜೆ ಪಾರ್ಟಿಗಳು, ರಾತ್ರಿ ಸಂಗೀತ ಕಾರ್ಯಕ್ರಮಗಳನ್ನು ನಿಷೇಧಿಸಿದೆ. ಕಳೆದ ವರ್ಷ ಕೊಚ್ಚಿನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ (CUSAT) ಕಾಲ್ತುಳಿತದಲ್ಲಿ ನಾಲ್ಕು ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, 64 ಮಂದಿ ಗಾಯಗೊಂಡಿದ್ದರು. ಕ್ಯಾಂಪಸ್‌ನ ಬಯಲು ಸಭಾಂಗಣದಲ್ಲಿ ನಡೆದ ನಿಖಿತಾ ಗಾಂಧಿ ನೇತೃತ್ವದ ಸಂಗೀತ ಕಛೇರಿಯಲ್ಲಿ ಈ ದುರಂತ ಸಂಭವಿಸಿತ್ತು. ಪಾಸ್‌ಗಳನ್ನು ಹೊಂದಿರದವರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಆದರೆ ಮಳೆ ಪ್ರಾರಂಭವಾದಾಗ ಪರಿಸ್ಥಿತಿಯು ಬದಲಾಗಿತ್ತು. ಹೊರಗೆ ಕಾಯುತ್ತಿದ್ದ ಜನರು ಆಶ್ರಯಕ್ಕಾಗಿ ಸಭಾಂಗಣಕ್ಕೆ ನುಗ್ಗಿದರು. ಇದು ಕಾಲ್ತುಳಿತಕ್ಕೆ ಕಾರಣವಾಗಿ ದುರಂತ ನಡೆದಿತ್ತು.


ಮಲಯಾಳಂ ಚಿತ್ರರಂಗಕ್ಕೆ ಕಾಲಿಟ್ಟ ಸನ್ನಿ ಲಿಯೋನ್

43 ವರ್ಷದ ಸನ್ನಿ ಲಿಯೋನ್ ಬಾಲಿವುಡ್ ಚಿತ್ರಗಳಾದ ಜಿಸ್ಮ್ 2, ಜಾಕ್‌ಪಾಟ್, ಶೂಟೌಟ್ ಅಟ್ ವಡಾಲಾ ಮತ್ತು ರಾಗಿಣಿ ಎಂಎಂಎಸ್ 2ನಲ್ಲಿ ನಟಿಸಿದ್ದಾರೆ. ಅವರು ಇತ್ತೀಚೆಗೆ ಮಲಯಾಳಂ ಚಿತ್ರರಂಗಕ್ಕೆ ಕಾಲಿಟ್ಟಿದ್ದು, ಏಪ್ರಿಲ್‌ನಲ್ಲಿ ಈ ಚಲನಚಿತ್ರದ ಚಿತ್ರೀಕರಣ ಪ್ರಾರಂಭವಾಗಿದೆ. ಇದರ ಮುಹೂರ್ತ ಸಮಾರಂಭದ ದೃಶ್ಯವನ್ನು ಹಂಚಿಕೊಂಡಿದ್ದ ಅವರು, ಈ ಅದ್ಭುತ ಮಲಯಾಳಂ ಚಿತ್ರದ ಭಾಗವಾಗಲು ನಾನು ತುಂಬಾ ಉತ್ಸುಕನಾಗಿದ್ದೇನೆ ಎಂದು ಅವರು ತಮ್ಮ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದರು.

Continue Reading

Latest

Sonakshi Sinha: ನಟಿ ಸೋನಾಕ್ಷಿ ಸಿನ್ಹಾ ಐಷಾರಾಮಿ ಅಪಾರ್ಟ್‌ಮೆಂಟ್ ಹೇಗಿದೆ? ವಿಡಿಯೊ ನೋಡಿ!

Sonakshi Sinha: ಸಿನಿಮಾ ನಟಿಯರು ಎಂದಾಕ್ಷಣ ಜನರಿಗೆ ಕುತೂಹಲವಿರುತ್ತದೆ. ಅವರು ಉಂಡಿದ್ದು, ತಿಂದಿದ್ದು, ಮುಖಕ್ಕೆ ಹಚ್ಚಿಕೊಳ್ಳುವ ಮೇಕಪ್ ತನಕನೂ ಕುತೂಹಲದಿಂದ ಗಮನಿಸುವ ಮಂದಿ ಇದ್ದಾರೆ. ಸಿನಿಮಾ ಮಂದಿ ಏನೇ ಮಾಡಿದರೂ ಸುದ್ದಿಯಾಗುತ್ತದೆ. ಇತ್ತೀಚೆಗೆ ಹೀರಾಮಂಡಿಯಲ್ಲಿ ಅಭಿನಯಿಸಿ ಎಲ್ಲರ ಗಮನಸೆಳೆದ ನಟಿ ಸೋನಾಕ್ಷಿ ಸಿನ್ಹಾ ಸುದ್ದಿಯಲ್ಲಿದ್ದಾರೆ. ಅವರು 7 ವರ್ಷಗಳಿಂದ ಸಂಬಂಧದಲ್ಲಿದ್ದ ಜಹೀರ್ ಇಕ್ಬಾಲ್ ಅವರನ್ನು ಮದುವೆಯಾಗಲಿದ್ದಾರೆ. ಇದರ ಮಧ್ಯೆ ಈಗ ಎಲ್ಲರ ಕುತೂಹಲ ಕೆರಳಿಸಿದ್ದು ಸೋನಾಕ್ಷಿ ಸಿನ್ಹಾ ಅವರ ಮನೆ!

VISTARANEWS.COM


on

Sonakshi Sinha
Koo

ಮುಂಬೈ : ಸಿನಿಮಾ ತಾರೆಯರು ಏನೇ ಮಾಡಿದರೂ ಅದು ಸುದ್ದಿಯಾಗುತ್ತದೆ. ಸಿನಿಮಾ ತಾರೆಯರು ಯಾವುದೇ ಸ್ಥಳಕ್ಕೆ ಹೋದರೂ, ಯಾರನ್ನೇ ಭೇಟಿ ಮಾಡಿದರೂ, ಮನೆ ಖರೀದಿಸಿದರೂ, ತಮ್ಮ ಸಂಗಾತಿ ಜೊತೆ ಸುತ್ತಾಡಿದರೂ, ಮದುವೆ ವಿಚಾರಕ್ಕೆ ಹೀಗೆ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇರುತ್ತಾರೆ. ಅಂದಹಾಗೇ ಇದೀಗ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ (Sonakshi Sinha) ಸುದ್ದಿಯಲ್ಲಿದ್ದಾರೆ.

ನಟಿ ನಟಿ ಸೋನಾಕ್ಷಿ ಸಿನ್ಹಾ ಅವರು ಬಾಲಿವುಡ್ ಖ್ಯಾತ ನಟಿಯರಲ್ಲಿ ಒಬ್ಬರು. ಇವರು ಬಾಲಿವುಡ್‌ನಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ತಮ್ಮ ನಟನೆಯ ಮೂಲಕ ಜನಪ್ರಿಯರಾದ ನಟಿ ಇದೀಗ ತಮ್ಮ ಮದುವೆ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ನಟಿ ಸೋನಾಕ್ಷಿ ಸಿನ್ಹಾ ಅವರು ಜೂನ್ 23, 2024ರಂದು ಮದುವೆಯಾಗಲಿದ್ದಾರೆ ಎಂಬ ವದಂತಿಗಳು ಕೇಳಿಬರುತ್ತಿದೆ. ವರದಿ ಪ್ರಕಾರ ಅವರು 7 ವರ್ಷಗಳಿಂದ ಪ್ರೇಮ ಸಂಬಂಧದಲ್ಲಿದ್ದ ಜಹೀರ್ ಇಕ್ಬಾಲ್ ಅವರನ್ನು ಮದುವೆಯಾಗಲಿದ್ದಾರೆ ಎಂಬ ಗುಸುಗುಸು ಕೇಳಿಬರುತ್ತಿದೆ.

Sonakshi Sinha

ಕಳೆದ ಒಂದು ವರ್ಷದಿಂದ ಇಬ್ಬರು ಜೊತೆಯಲ್ಲಿ ವಾಸಿಸುತ್ತಿದ್ದು, ನಟಿ ಸೋನಾಕ್ಷಿ ಸಿನ್ಹಾ ಅವರು ಮುಂಬೈನಲ್ಲಿ ದೊಡ್ಡದಾದ ಐಷಾರಾಮಿ ಮನೆಯನ್ನು ಖರೀದಿಸಿದ್ದಾರೆ. ಮಾರ್ಚ್ 2020ರಲ್ಲಿ ಮನೆಯನ್ನು ಖರೀದಿಸಿ ನಂತರ 2023ರಲ್ಲಿ ಆ ಮನೆಗೆ ತೆರಳಿ ತಮ್ಮ ಪ್ರೇಮಿ ಜೊತೆ ಅಲ್ಲಿ ವಾಸವಾಗಿದ್ದಾರೆ ಎನ್ನಲಾಗಿದೆ. ಸೋನಾಕ್ಷಿ ಸಿನ್ಹಾ ಖರೀದಿಸಿದ ಆ ಮನೆ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ನಟಿ ಸೋನಾಕ್ಷಿ ಸಿನ್ಹಾ ಅವರು ಖರೀದಿಸಿದ ಮುಂಬೈ ಮನೆ ಸಮುದ್ರಕ್ಕೆ ಮುಖ ಮಾಡಿದೆ. ಅದು 4,628 ಚದರ ಅಡಿಗಳಷ್ಟು ವಿಸ್ತಾರವಾಗಿದೆಯಂತೆ. ಮನೆಯು ಪ್ರೀಮಿಯಂ ರೆಸಿಡೆನ್ಸಿಯಲ್ ಟವರ್‌ನಲ್ಲಿ 16ನೇ ಮಹಡಿಯಲ್ಲಿದೆ.

Sonakshi Sinha

ವರದಿಗಳ ಪ್ರಕಾರ ಅವರ ಮುಂಬೈ ಮನೆ ಮಾರುಕಟ್ಟೆ ಮೌಲ್ಯ 14 ಕೋಟಿ ರೂಪಾಯಿ. ಅವರ ಮನೆ ಕಿತ್ತಳೆ ಮತ್ತು ನೀಲಿ ಬಣ್ಣವನ್ನು ಹೊಂದಿದ್ದು, ಟೆರಾಕೋಟಾ ಲುಕ್‌ ನೀಡುತ್ತದೆ. ಮಲಗುವ ಕೋಣೆ ಸ್ಲೈಡಿಂಗ್ ವಾಲ್ ಅನ್ನು ಹೊಂದಿದ್ದು, ಅದರ ಎಲ್ಲಾ ಬದಿಯಲ್ಲಿ ನೀಲಿ ಬಣ್ಣದ ಕಪಾಟುಗಳೊಂದಿಗೆ ಮರ್ಫಿ ಬೆಡ್ ಇದೆ. ಮನೆಯ ಬಾಲ್ಕನಿಯಿಂದ ಬಾಂದ್ರಾ-ವಲ್ಲಿ ಸಮುದ್ರದ ನೋಟವನ್ನು ಸುಲಭವಾಗಿ ಆನಂದಿಸಬಹುದು. ನಾಲ್ಕು ಬೆಡ್ ರೂಮ್‌ ಅಪಾರ್ಟ್‌ಮೆಂಟ್ ಅನ್ನು 1.5 ಬೆಡ್ ರೂಮ್ ಮನೆಯನ್ನಾಗಿ ಪರಿವರ್ತಿಸಲಾಗಿದೆಯಂತೆ. ಅವರ ಮನೆಯಲ್ಲಿ ಆರ್ಟ್ ಸ್ಟುಡಿಯೋ, ಯೋಗ ಮಾಡುವುದಕ್ಕೆ ಜಾಗ ಹಾಗೂ ಡ್ರೆಸ್ಸಿಂಗ್ ರೂಮ್‌ ಕೂಡ ಇದೆಯಂತೆ. ಇನ್ನು ಇವರ ರೂಂನಲ್ಲಿರುವ ವಾಕ್ ಇನ್ ವಾರ್ಡ್‌ರೋಬ್ ತುಂಬಾ ಚೆನ್ನಾಗಿದೆ.

ಇದನ್ನೂ ಓದಿ: flight problems: ವಿಮಾನದಲ್ಲಿ ಕೈಕೊಟ್ಟ ಎಸಿ; ಸೆಕೆ ತಾಳಲಾರದೆ ಬಟ್ಟೆ ಬಿಚ್ಚಿದ ಪ್ರಯಾಣಿಕರು!

ನಟಿ ಸೋನಾಕ್ಷಿ ಸಿನ್ಹಾ ಅವರು ಪ್ರಸ್ತುತ ಸಂಜಯ್ ಲೀಲಾ ಬನ್ಸಾಲಿ ಅವರ ಚೊಚ್ಚಲ ವೆಬ್ ಸರಣಿ ಹೀರಾಮಂಡಿ ಯಶಸ್ಸಿನಲ್ಲಿ ಮುಳುಗಿದ್ದಾರೆ. ಅಲ್ಲಿ ಅವರು ವೇಶ್ಯೆಯ ಪಾತ್ರವನ್ನು ನಿರ್ವಹಿಸಿದ್ದಾರೆ.

Continue Reading
Advertisement
Drowns in Lake
ಕರ್ನಾಟಕ9 mins ago

Drowns in lake: ಸ್ನೇಹಿತರ ಜತೆ ಕೆರೆಗೆ ಈಜಲು ಹೋದ ಬಾಲಕ ನೀರುಪಾಲು

Petrol Diesel Price
ಕರ್ನಾಟಕ44 mins ago

Petrol Diesel Price: ಪೆಟ್ರೋಲ್, ಡೀಸೆಲ್ ದರ ಏರಿಕೆಗೂ ಚುನಾವಣಾ ಫಲಿತಾಂಶಕ್ಕೂ ಸಂಬಂಧವಿಲ್ಲ ಎಂದ ಸಿಎಂ

Amit Shah
ದೇಶ45 mins ago

Amit Shah: ಕಾಶ್ಮೀರದಲ್ಲಿ ಒಬ್ಬನೇ ಒಬ್ಬ ಉಗ್ರ ಉಳಿಯಬಾರದು; ಖಡಕ್‌ ಆದೇಶ ಕೊಟ್ಟ ಅಮಿತ್‌ ಶಾ

Karnataka Weather Forecast
ಮಳೆ1 hour ago

Karnataka weather : ಭಾನುವಾರ ರಾಯಚೂರಿನಲ್ಲಿ ಅಬ್ಬರಿಸಿದ ವರುಣ; ನಾಳೆಗೂ ಇದೆ ಮಳೆ ಅಲರ್ಟ್‌

Actor Darshan
ಪ್ರಮುಖ ಸುದ್ದಿ1 hour ago

Actor Darshan: ರೇಣುಕಾಸ್ವಾಮಿ ಕುಟುಂಬಕ್ಕಷ್ಟೇ ಅಲ್ಲ, ಚಿತ್ರರಂಗಕ್ಕೂ ನ್ಯಾಯ ಸಿಗಬೇಕು: ಕಿಚ್ಚ ಸುದೀಪ್‌

Lok Sabha Speaker
ದೇಶ2 hours ago

Lok Sabha Speaker: ಸ್ಪೀಕರ್‌ ಆಯ್ಕೆ ವಿಚಾರದಲ್ಲಿ ಟಿಡಿಪಿಗೆ ಬೆಂಬಲ ಎಂದ ಇಂಡಿಯಾ ಒಕ್ಕೂಟ; ಯಾರಾಗ್ತಾರೆ ಸ್ಪೀಕರ್?

Renukaswamy murder case The location of the accused is complete
ಸಿನಿಮಾ2 hours ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Petrol Diesel Price
ಕರ್ನಾಟಕ3 hours ago

Petrol Diesel Price: ಚುನಾವಣೆ ಸೋಲಿನ ಸೇಡು ತೀರಿಸಿಕೊಳ್ಳಲು ತೈಲ ದರ ಏರಿಸಿದ ಕಾಂಗ್ರೆಸ್ ಸರ್ಕಾರ: ಆರ್‌. ಅಶೋಕ್‌ ಕಿಡಿ

Renuka swamy murder
ಚಿತ್ರದುರ್ಗ3 hours ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Road Accident
ಕರ್ನಾಟಕ3 hours ago

Road Accident: ಸುಂಟಿಕೊಪ್ಪ‌ ಬಳಿ ಖಾಸಗಿ ಬಸ್- ಸ್ಕೂಟರ್ ಡಿಕ್ಕಿಯಾಗಿ ಸವಾರ ಸಾವು

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Renukaswamy murder case The location of the accused is complete
ಸಿನಿಮಾ2 hours ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ3 hours ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ8 hours ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ1 day ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ2 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು2 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು2 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ2 days ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

karnataka weather Forecast
ಮಳೆ5 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ5 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

ಟ್ರೆಂಡಿಂಗ್‌