Panchamasali Reservation | ಜ.13ರಂದು ಸಿಎಂ ನಿವಾಸದ ಎದುರು 2ಎ ಮೀಸಲಾತಿಗೆ ಒತ್ತಾಯಿಸಿ ಪಂಚಮಸಾಲಿ ಸಮಾಜದ ಧರಣಿ - Vistara News

ಕರ್ನಾಟಕ

Panchamasali Reservation | ಜ.13ರಂದು ಸಿಎಂ ನಿವಾಸದ ಎದುರು 2ಎ ಮೀಸಲಾತಿಗೆ ಒತ್ತಾಯಿಸಿ ಪಂಚಮಸಾಲಿ ಸಮಾಜದ ಧರಣಿ

ಪಂಚಮಸಾಲಿ ಸಮುದಾಯಕ್ಕೆ ರಾಜ್ಯ ಸರ್ಕಾರ ನೀಡಿರುವ 2ಡಿ ಮೀಸಲಾತಿಯನ್ನು ಹೈಕೋರ್ಟ್‌ ತಿರಸ್ಕರಿಸಿದೆ. ಹೀಗಾಗಿ ಜ.13ರಂದು ಶಿಗ್ಗಾಂವಿಯ ಸಿಎಂ ಮನೆ ಮುಂದೆ ಧರಣಿ ಕೈಗೊಂಡಿದ್ದೇವೆ ಎಂದು ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.

VISTARANEWS.COM


on

jaya mrutyunjaya swamiji coutions govt over panchamasali-reservation
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹಾವೇರಿ: ಪಂಚಮಸಾಲಿ ಸಮುದಾಯಕ್ಕೆ ಒಬಿಸಿ 2ಡಿ ಹೊಸ ಪ್ರವರ್ಗ ಸೃಷ್ಟಿಸಿ ಮಿಸಲಾತಿ ನೀಡುವ ರಾಜ್ಯ ಸರ್ಕಾರದ ಪ್ರಸ್ತಾವನೆಗೆ ಹೈಕೋರ್ಟ್‌ ತಡೆ ನೀಡಿರುವ ಹಿನ್ನೆಲೆಯಲ್ಲಿ ಈ ಹಿಂದಿನ ಬೇಡಿಕೆಯಂತೆ (Panchamasali Reservation) 2ಎ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿ, ಶಿಗ್ಗಾಂವಿಯ ಸಿಎಂ ಬಸವರಾಜ ಬೊಮ್ಮಾಯಿ ನಿವಾಸದ ಮುಂದೆ ಜನವರಿ ೧೩ರಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಪಂಚಮಸಾಲಿ ಸಮಾಜದಿಂದ ಬೃಹತ್‌ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.

ಪಂಚಮಸಾಲಿಗಳಿಗೆ ರಾಜ್ಯ ಸರ್ಕಾರ ಘೋಷಿಸಿರುವ 2ಡಿ ಮೀಸಲಾತಿಯನ್ನು ಹೈಕೋರ್ಟ್‌ ತಿರಸ್ಕರಿಸಿದೆ. ಹೀಗಾಗಿ ಹಾವೇರಿ ಜಿಲ್ಲೆ ಶಿಗ್ಗಾಂವಿಯ ಸಿಎಂ ಮನೆ ಮುಂದೆ ಶುಕ್ರವಾರ ಧರಣಿ ಸತ್ಯಾಗ್ರಹ ಕೈಗೊಂಡಿದ್ದೇವೆ. ಶಿಗ್ಗಾಂವಿಯ ರಾಣಿ ಚನ್ನಮ್ಮ ಸರ್ಕಲ್‌ಯಿಂದ ಬೆಳಗ್ಗೆ 10 ಗಂಟೆಗೆ ಸಿಎಂ ನಿವಾಸದವರೆಗೂ ಬೃಹತ್ ಪಾದಯಾತ್ರೆ ನಡೆಸಲಾಗುತ್ತದೆ. ಧರಣಿ ಬಳಿಕ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಲು ಚಿಂತನೆ ನಡೆಸಲಾಗಿದೆ ಎಂದು ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.

ಧರಣಿಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌, ವಿಜಯಾನಂದ ಕಾಶಪ್ಪನವರ, ಅರವಿಂದ ಬೆಲ್ಲದ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ವಿನಯ್ ಕುಲಕರ್ಣಿ ಸೇರಿ ಸಾವಿರಾರು ಜನ ಸೇರುವ ನೀರಿಕ್ಷೆ ಇದೆ.

ಇದನ್ನೂ ಓದಿ | National Youth Festival | ಡಿಜಿಟಲ್‌ ಪೇಮೆಂಟ್‌ ಅಸಾಧ್ಯ ಎಂದರು; ಈಗ ನಾವೇ ನಂ.1: ಎದುರಾಳಿಗಳಿಗೆ ಮೋದಿ ತಿರುಗೇಟು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Election Results 2024: ರಾಜ್ಯದ 474 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಿರ್ಧಾರಕ್ಕೆ ಕೌಂಡ್ ಡೌನ್

Election Results 2024: ರಾಜ್ಯದ 28 ಕ್ಷೇತ್ರಗಳ ಮತ ಎಣಿಕಾ ಕೇಂದ್ರಗಳಲ್ಲಿ ಮೂರು ಹಂತದ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಬೆಳಗ್ಗೆ 8ಗಂಟೆಗೆ ಮತ ಎಣಿಕೆ ಆರಂಭವಾಗಿದೆ.

VISTARANEWS.COM


on

Lok Sabha Election Results 2024
Koo

ಬೆಂಗಳೂರು: ರಾಜ್ಯದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ (Election Results 2024) ಸ್ಪರ್ಧಿಸಿದ್ದ ಒಟ್ಟು 474 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಿರ್ಧಾರಕ್ಕೆ ಕೌಂಡ್ ಡೌನ್ ಶುರುವಾಗಿದೆ. ಮತ ಎಣಿಕೆ ಹಿನ್ನೆಲೆಯಲ್ಲಿ ರಾಜ್ಯದ 28 ಕ್ಷೇತ್ರಗಳ ಮತ ಎಣಿಕಾ ಕೇಂದ್ರಗಳಲ್ಲಿ ಮೂರು ಹಂತದ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಬೆಳಗ್ಗೆ 8ಗಂಟೆಗೆ ಮತ ಎಣಿಕೆ ಆರಂಭವಾಗಿದೆ. ಮಧ್ಯಾಹ್ನ 12 ರೊಳಗೆ ಬಹುತೇಕ ಯಾರು ಗೆಲ್ಲಲಿದ್ದಾರೆ ಎಂಬ ಚಿತ್ರಣ ಸಿಗಲಿದ್ದು, ಸಂಜೆ ಅಂತಿಮ ಫಲಿತಾಂಶ ಹೊರಬೀಳಲಿದೆ.

ಬೆಳಗ್ಗೆ 7:45 ರ ಸುಮಾರಿಗೆ ಚುನಾವಣಾಧಿಕಾರಿಗಳ ಸಮ್ಮುಖದಲ್ಲಿ ಸ್ಟ್ರಾಂಗ್ ರೂಂ ಓಪನ್ ಮಾಡಲಾಗಿದ್ದು, ನಂತರ ಮತ ಎಣಿಕೆ ಕೊಠಡಿಗೆ ಇವಿಎಂಗಳನ್ನು ಅಧಿಕಾರಿಗಳು ಕೊಂಡೊಯ್ದರು. ಒಂದು ಕೊಠಡಿಯಲ್ಲಿ 14 ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿದ್ದು, ಕೊಠಡಿ ದೊಡ್ಡದಿದ್ದರೆ ಹೆಚ್ಚುವರಿ ಟೇಬಲ್ ಹಾಕಲು ಅವಕಾಶ ಮಾಡಿಕೊಡಲಾಗಿದೆ. 20-25 ಸುತ್ತಿನವರೆಗೆ ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ.

ಇದನ್ನೂ ಓದಿ | Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

ರಾಜ್ಯದಲ್ಲಿ ಏಪ್ರಿಲ್ 26 ರಂದು ನಡೆದ ಮೊದಲ ಹಂತದಲ್ಲಿ 247 ಅಭ್ಯರ್ಥಿಗಳು ಹಾಗೂ ಮೇ 7 ರಂದು ನಡೆದ ಎರಡನೇ ಹಂತದಲ್ಲಿ 227 ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ. ಒಟ್ಟು 474 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಇಂದು ಬಹಿರಂಗವಾಗಲಿದೆ.

Continue Reading

ಮಳೆ

Karnataka Weather : ಹವಾಮಾನ ತಜ್ಞರ ವಾರ್ನಿಂಗ್‌; ಇನ್ನೊಂದು ವಾರ ವಿಪರೀತ ಮಳೆ, ಜೂ.6ರ ವರೆಗೂ ಮೀನುಗಾರಿಕೆಗೆ ಬ್ರೇಕ್‌

Heavy Rain Warning: ರಾಜ್ಯಾದ್ಯಂತ (Karnataka Weather forecast) ಗುಡುಗು ಸಹಿತ ಭಾರಿ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್‌ ಘೋಷಣೆ (Yellow Alert) ಮಾಡಲಾಗಿದೆ. ಜತೆಗೆ ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ (Fisher Waring) ನೀಡಲಾಗಿದೆ

VISTARANEWS.COM


on

By

karnataka weather Forecast
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ನೈರುತ್ಯ ಮುಂಗಾರು (Monsoon rains) ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡು, ಕರಾವಳಿ, ಮಲೆನಾಡಿನ ಕೆಲವು ಭಾಗಗಳಲ್ಲಿ ಮುಂದುವರೆದಿದೆ. ಜೂ.4ರಂದು ದಕ್ಷಿಣ ಒಳನಾಡು, ಉತ್ತರ ಒಳನಾಡಿನಲ್ಲಿ ಪ್ರತ್ಯೇಕವಾಗಿ ಭಾರಿ ಮಳೆಯಾಗುವ (Heavy Rain) ಸಾಧ್ಯತೆಯಿದೆ. ಮಲೆನಾಡು ಮತ್ತು ಕರಾವಳಿ ಭಾಗಗಳಲ್ಲಿ ಸಾಧಾರಣ (Rain News) ಮಳೆಯಾಗಲಿದೆ. ರಾಜ್ಯದ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು, ಮಿಂಚು ಸಹಿತ ಮತ್ತು ಗಂಟೆಗೆ 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka Weather Forecast) ನೀಡಿದೆ.

ದಕ್ಷಿಣ ಒಳನಾಡಿನ ಮಂಡ್ಯ ಮತ್ತು ಮೈಸೂರಿನಲ್ಲಿ ಪ್ರತ್ಯೇಕ ಕಡೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಉಳಿದ ಭಾಗಗಳಲ್ಲಿ ಚದುರಿದಂತೆ ಹಗುರದಿಂದ ಮಧ್ಯಮ ಮಳೆಯಾಗಲಿದೆ. ಉತ್ತರ ಒಳನಾಡಿನ ಬೆಳಗಾವಿ, ವಿಜಯಪುರ, ಧಾರವಾಡ, ಗದಗದಲ್ಲಿ ಭಾರೀ ಮಳೆಯಾಗುವ ಸೂಚನೆ ಇದೆ. ಜತೆಗೆ ಬೀದರ್, ಕಲಬುರಗಿ, ಬಾಗಲಕೋಟೆ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ಉಳಿದೆಡೆ ಹಗುರದಿಂದ ಕೂಡಿದ ಮಳೆಯಾಗಲಿದೆ.

ಮಲೆನಾಡಿನ ಹಾಸನ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಚದುರಿದಂತೆ ಸಾಧಾರಣ ಮಳೆಯಾಗಬಹುದು. ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ಹಗುರದೊಂದಿಗೆ ಶುರುವಾಗಿ ಸಾಧಾರಣ ಮಳೆಯಾಗಲಿದೆ.

ಇದನ್ನೂ ಓದಿ: Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

ಜೂ.6ರ ವರೆಗೆ ಮೀನುಗಾರಿಕೆಗೆ ತೆರಳದಂತೆ ಸೂಚನೆ

ಕರ್ನಾಟಕ ಕರಾವಳಿಯಲ್ಲಿ 35- 45 ಕಿ.ಮೀ ಗಾಳಿ ಬೀಸಲಿದೆ. ಸಮುದ್ರ ಮಟ್ಟದಲ್ಲಿ ಗಂಟೆಗೆ 55 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ ಇದೆ. ಹೀಗಾಗಿ ಜೂನ್ 4 ರಿಂದ ಜೂನ್ 6ವರೆಗೆ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ.

ಯೆಲ್ಲೋ‌ ಅಲರ್ಟ್‌ ಘೋಷಣೆ

ಗುಡುಗು ಸಹಿತ ಭಾರೀ ಮಳೆಯೊಂದಿಗೆ ಗಂಟೆಗೆ 40-50 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ. ಹೀಗಾಗಿ ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ವಿಜಯಪುರ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಮಗಳೂರು, ಹಾಸನ, ಮಂಡ್ಯ, ರಾಮನಗರ, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಘೋಷಣೆ ಮಾಡಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕೃಷಿ

Arecanut Price: ಅಡಿಕೆ ಧಾರಣೆ ನಿರೀಕ್ಷೆ ಮೀರಿ ಏರಲಿದೆ! ಇದು ರೈತರ ‘ನಂಬಿಕೆ’ ಮತ್ತು ‘ಅಭಿಪ್ರಾಯ’ಗಳ ಎಕ್ಸಿಟ್ ಪೋಲ್!

Arecanut Price: ಅಡಿಕೆ ಬೆಳೆಗಾರರ ನಿರೀಕ್ಷೆ, ಸಮೀಕ್ಷೆ, ಪರೀಕ್ಷೆಗಳ ಲೆಕ್ಕಾಚಾರಕ್ಕೆ ‘ಯಾಕೆ ಹೀಗೆ ಅನ್ನುವ’ ಪ್ರಶ್ನೆಗೆ ಅಡ್ಡ ಬಂದಿದ್ದು ಈ ಬಾರಿಯ ಲೋಕಸಭಾ ಚುನಾವಣೆ!!ಈಗ ಅದೂ ಮುಗಿದು, ಪಲಿತಾಂಶಕ್ಕೆ ಕಾಯುತ್ತಿರುವಾಗ, ಅಡಿಕೆ ದರ ಮೇಲ್ಮುಖವಾಗಿದೆ. ಪುನಃ ₹.55,000 ಗಡಿ ಸಮೀಪ ಬಂದಿದೆ.
ನೀತಿ ಸಂಹಿತೆಯ ಬ್ಯಾರಿಕೇಡ್‌ಗಳು ತೆರವುಗೊಂಡ ಮೇಲೆ ಅಡಿಕೆ ಧಾರಣೆ ಗಣನೀಯವಾಗಿ ಏರಬಹುದು ಎಂದು ಲೆಕ್ಕಾಚಾರದಲ್ಲಿ ರೈತರು ಕಾಯುತ್ತಿದ್ದಾರೆ.

VISTARANEWS.COM


on

Arecanut Price
Koo

-ಅರವಿಂದ ಸಿಗದಾಳ್, ಮೇಲುಕೊಪ್ಪ
ಬೆಂಗಳೂರು: ಜುಲೈ ಕೊನೆಯಲ್ಲಿ ಬಯಲು ಸೀಮೆಯ ಅಡಿಕೆ ಬರಲು ಪ್ರಾರಂಭವಾಗುವ ಕಾಲ. ಆಗಸ್ಟ್‌ನಿಂದ ಸಹಜವಾಗಿ ಅಡಿಕೆ ಪ್ರಮಾಣ ಮಾರುಕಟ್ಟೆಗೆ ಬರುವುದು ಹೆಚ್ಚುವುದರಿಂದ ಅಡಿಕೆ ಧಾರಣೆ ಇಳಿಯಲು ಪ್ರಾರಂಭವಾಗುತ್ತದೆ. ಕಳೆದ ವರ್ಷ ಜುಲೈ‌ನಲ್ಲಿ ₹ 55,000 ದಾಟಿದ ಅಡಿಕೆ ದರ, ಸೆಪ್ಟೆಂಬರ್‌ನಲ್ಲಿ ₹.50,000 ಕ್ಕಿಂತ ಕೆಳಕ್ಕೆ ಬರಲು ಪ್ರಾರಂಭವಾಯಿತು. ಇಳಿದ ಅಡಿಕೆ ಧಾರಣೆ ₹ 47,000 ದಲ್ಲಿ ಕೆಲಕಾಲ ಸ್ಥಿರತೆಯಲ್ಲಿ ಉಳಿದಿತ್ತು. ಈ ವರ್ಷ ಮೇ ತಿಂಗಳ ಪ್ರಾರಂಭದಲ್ಲಿ ₹ 55,000 ದ ಸಮೀಪಕ್ಕೆ ಏರಿ ಬಂದ ರಾಶಿ ಇಡಿ ಅಡಿಕೆ ಧಾರಣೆ ಮತ್ತೆ ಇಳಿಯುವುದಕ್ಕೆ ಶುರವಾಗಿತ್ತು (Arecanut Price).

ಅಡಿಕೆ ಬೆಳೆಗಾರರ ನಿರೀಕ್ಷೆ, ಸಮೀಕ್ಷೆ, ಪರೀಕ್ಷೆಗಳ ಲೆಕ್ಕಾಚಾರಕ್ಕೆ ‘ಯಾಕೆ ಹೀಗೆ ಅನ್ನುವ’ ಪ್ರಶ್ನೆಗೆ ಅಡ್ಡ ಬಂದಿದ್ದು ಈ ಬಾರಿಯ ಲೋಕಸಭಾ ಚುನಾವಣೆ! ಈಗ ಅದೂ ಮುಗಿದು, ಪಲಿತಾಂಶಕ್ಕೆ ಕಾಯುತ್ತಿರುವಾಗ, ಅಡಿಕೆ ದರ ಮೇಲ್ಮುಖವಾಗಿದೆ. ಪುನಃ ₹ 55,000 ಗಡಿ ಸಮೀಪ ಬಂದಿದೆ.

ನೀತಿ ಸಂಹಿತೆಯ ಬ್ಯಾರಿಕೇಡ್‌ಗಳು ತೆರವುಗೊಂಡ ಮೇಲೆ ಅಡಿಕೆ ಧಾರಣೆ ಗಣನೀಯವಾಗಿ ಏರಬಹುದು ಎಂದು ಲೆಕ್ಕಾಚಾರದಲ್ಲಿ ರೈತರು ಕಾಯುತ್ತಿದ್ದಾರೆ.

ಅಡಿಕೆ ಧಾರಣೆಯ ವಿಚಾರದಲ್ಲಿ ಇರುವ ‘ನಂಬಿಕೆ’ಗಳು

ಅಡಿಕೆ ಧಾರಣೆಯ ಏರಿಕೆಯ ವಿಚಾರದಲ್ಲಿ ಮಲೆನಾಡಿನಲ್ಲಿ ಕೆಲವು ನಂಬಿಕೆಗಳು ಇವೆ. ವೈಜ್ಞಾನಿಕ ವಿಶ್ಲೇಷಣೆಗೆ ಹೊರತಾಗಿದ್ದರೂ, ನಂಬಿಕೆಗಳನ್ನು ಇಟ್ಟುಕೊಂಡೇ ಅನೇಕ ಅಡಿಕೆ ಬೆಳೆಗಾರರು ಇಂದಿಗೂ ವ್ಯವಹಾರ ನೆಡೆಸುತ್ತಾರೆ.
‘ವರ್ಷದ ಯಾವುದೇ ತಿಂಗಳಲ್ಲಿ ಮಂಗಳವಾರ ಅಮವಾಸ್ಯೆ ಬಂದರೆ ಆ ವರ್ಷ ಅಡಿಕೆಗೆ ಅತ್ಯಧಿಕ ಬೆಲೆ’, ‘ಶ್ರಾವಣ ಮಾಸದಲ್ಲಿ ಅಡಿಕೆಗೆ ರೇಟಾಗುವುದು’, ‘ಮುತ್ತುಗದ ಮರದ ನೆತ್ತಿಯಲ್ಲಿ ಮಾತ್ರ ಹೂವಾದರೆ ಅಡಿಕೆ ದರ ಎತ್ತರಕ್ಕೇರುತ್ತದೆ’ ಕಾಡು ಕೋಳಿ ಕಾಡಂಚಿಗೆ ಬಂದು ಕೂಗಿದರೆ. ಅದು ಅಡಿಕ ದರ ಏರುವಿಕೆಯ ಸೂಚನೆಯಂತೆ! ಪಂಚಾಂಗದ ಪ್ರಕಾರ ‘ಕುಜ’ ರಾಜನಾದಾಗ ಅಡಿಕೆ ದರ ನಿರೀಕ್ಷೆ ಮಟ್ಟವನ್ನು ಮೀರಿ ಏರುತ್ತದೆ… ಇತ್ಯಾದಿ ಹತ್ತಾರು ನಂಬಿಕೆಗಳು ಮಲೆನಾಡಿನ ಅಡಿಕೆ ಬೆಳೆಗಾರರಲ್ಲಿವೆ. ಅಡಿಕೆ ಧಾರಣೆಯ ವಿಷಯ ಚರ್ಚೆಗೆ ಬಂದಾಗ ಇಂತಹ ನಂಬಿಕೆಗಳು ಗಾದೆ ಮಾತಿನಂತೆ ಹೊರಗೆ ಬರುತ್ತವೆ.

ಈ ನಂಬಿಕೆಗಳಿಗೆ ಪೂರಕವಾಗಿ ಎಂಬಂತೆ ಹತ್ತು ವರ್ಷಗಳ ಹಿಂದೆ ಅಡಿಕೆ ಧಾರಣೆ ಲಕ್ಷ ರೂ. ದಾಟಿದಾಗ ಪಂಚಾಂಗದ ಪ್ರಕಾರ ಕುಜ ರಾಜನಾಗಿದ್ದನಂತೆ! ಈ ವರ್ಷವೂ ಕುಜನೇ ಅಧಿಪತಿಯಂತೆ. ಅನಿರೀಕ್ಷಿತ ಅಡಿಕೆ ಧಾರಣೆ ಈ ವರ್ಷವೂ ಏರಲಿದೆ ಅನ್ನುವುದು ಜ್ಯೋತಿಷ್ಯ ನಂಬಿಕೆಯ ಅಭಿಪ್ರಾಯ. ಈ ನಂಬಿಕೆಗೆ ಬೇಷರತ್ ಬೆಂಬಲದಂತೆ ಈ ವರ್ಷ ಅನೇಕ ಕಡೆ ಮುತ್ತುಗದ ಮರದ ನೆತ್ತಿಯಲ್ಲಿ ಹೋವು ಅರಳಿತ್ತಂತೆ.

ಏರುಮುಖ ನಿರೀಕ್ಷೆ

ಎಲೆಕ್ಷನ್ ಮುಗಿದ ಮೇಲೆ ಅಡಿಕೆ ವ್ಯವಹಾರದಲ್ಲಿ ದರ ಏರುಮುಖ ಕಾಣಲಿದೆ ಎನ್ನುವುದಕ್ಕೆ ಪೂರಕವಾಗಿ, ಚುನಾವಣೆಯ ಪಲಿತಾಂಶದ ಹಿಂದಿನೆರಡು ದಿನಗಳಲ್ಲಿ ಅಡಿಕೆ ಏರಿಕೆಯ ಗ್ರಾಫ್‌ನ ಬಾಣ! ಕುಜ ಅಡಿಕೆಯ ದರ ಎತ್ತಲಿದ್ದಾನಾ? ಮುತ್ತುಗದ ಹೂವಿನ ಸೂಚನೆ ನಿಜವಾ? ನಂಬಿಕೆಗಳು ಕೆಲಸ ಮಾಡುತ್ತವಾ? ಚುನಾವಣೆಯ ನಂತರ ಅಡಿಕೆಗೆ ಬೇಡಿಕೆ ಹೆಚ್ಚಲಿದೆಯಾ? ಅಡಿಕೆ ಧಾರಣೆಯಲ್ಲಿ ರೈತರ ನಂಬಿಕೆಗಳ ಮತ್ತು ಅಭಿಪ್ರಾಯಗಳ ಎಕ್ಸಿಟ್ ಪೋಲ್ ನಿಜ ಆಗಲಿದೆಯಾ? ಕಾದು ನೋಡೋಣ.

ಇದನ್ನೂ ಓದಿ: Arecanut Price: ಮಲೆನಾಡಿನ ರಾಶಿ ಇಡಿ ಅಡಿಕೆ ಧಾರಣೆ ‘ಅಬ್‌ ಕಿ ಬಾರ್ ₹60,000 ಪಾರ್ ಆಗಲಿದೆಯಾ?

Continue Reading

ಉತ್ತರ ಕನ್ನಡ

Uttara Kannada News: ವಿಶ್ವದರ್ಶನ ಕಾಲೇಜಿನಲ್ಲಿ ಪ್ರಥಮ ಪಿಯು ತರಗತಿ ಪ್ರಾರಂಭೋತ್ಸವ

Uttara Kannada News: ಯಲ್ಲಾಪುರ ಪಟ್ಟಣದ ವಿಶ್ವದರ್ಶನ ಕಾಲೇಜಿನಲ್ಲಿ ಪ್ರಥಮ ಪಿಯು ತರಗತಿ ಪ್ರಾರಂಭೋತ್ಸವ ಕಾರ್ಯಕ್ರಮ ಸೋಮವಾರ ನಡೆಯಿತು.

VISTARANEWS.COM


on

First PU Class Commencement Programme at Vishwadarshana College
Koo

ಯಲ್ಲಾಪುರ: ಪಟ್ಟಣದ ವಿಶ್ವದರ್ಶನ ಕಾಲೇಜಿನಲ್ಲಿ ಪ್ರಥಮ ಪಿಯು ತರಗತಿ ಪ್ರಾರಂಭೋತ್ಸವ ಕಾರ್ಯಕ್ರಮ ಸೋಮವಾರ (Uttara Kannada News) ನಡೆಯಿತು.

ವಿಶ್ವದರ್ಶನ ಶಿಕ್ಷಣ ಸಮೂಹದ ಸಿಇಒ ಅಜಯ್ ಭಾರತೀಯ ಕಾರ್ಯಕ್ರಮದಲ್ಲಿ ಮಾತನಾಡಿ, ನಾವು ಮಾಡುವ ಕಾರ್ಯ ಸ್ವಹಿತದ ಜತೆಗೆ ದೇಶದ ಹಿತವನ್ನು ಸಾಧಿಸುವಂತಿರಬೇಕು. ಶಿಕ್ಷಣ ನೀಡಬೇಕಾದ, ಪಡೆಯಬೇಕಾದ ಎಲ್ಲರೂ ರಾಷ್ಟ್ರದ ಘನತೆ, ಗೌರವವನ್ನು ಕಾಪಾಡುವ ಆಲೋಚನೆಯನ್ನು ಸದಾ ಮಾಡುತ್ತಿರಬೇಕು ಎಂದು ಹೇಳಿದರು.

ಇದನ್ನೂ ಓದಿ: Book Release: ಬೆಂಗಳೂರಿನಲ್ಲಿ ಜೂ. 5ರಂದು ಗ್ರಂಥ ಲೋಕಾರ್ಪಣೆ, ಪ್ರಶಸ್ತಿ ಪ್ರದಾನ

ಕಾಲೇಜಿನ ಪ್ರಾಚಾರ್ಯ ಡಿ.ಕೆ. ಗಾಂವ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳಿಗಾಗಿ ಸಂಪತ್ತು ಮಾಡುವುದಕ್ಕಿಂತ ಮಕ್ಕಳನ್ನೇ ಸಂಪತ್ತಾಗಿಸುವುದು ಸೂಕ್ತ. ಜ್ಞಾನ ಸಂಪತ್ತಿನಿಂದ ಮಕ್ಕಳನ್ನು ಶ್ರೀಮಂತರಾಗಿಸುವ ಮಾರ್ಗವೇ ಶ್ರೇಷ್ಠವಾದದ್ದು ಆ ಕಾರ್ಯವನ್ನು ವಿಶ್ವದರ್ಶನ ಮಾಡುತ್ತಿದೆ‌ ಎಂದರು.

ಅದಕ್ಕಾಗಿ ನಮ್ಮ ಪಿಯು ಕಾಲೇಜು ಉತ್ತಮ ಮೂಲಸೌಕರ್ಯ ಮತ್ತು ನುರಿತ ಉಪನ್ಯಾಸಕ ವರ್ಗವನ್ನು ಹೊಂದಿದೆ ಎಂದು ಹೇಳಿದರಲ್ಲದೇ, ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಮತ್ತು ಪಾಲಕರಿಗೆ ಕಾಲೇಜಿನ ಉಪನ್ಯಾಸಕ ವರ್ಗವನ್ನು ಪರಿಚಯಿಸಿ, ಕಾಲೇಜಿನ ವಿಶೇಷತೆಗಳ ಕುರಿತು ಮಾಹಿತಿ ನೀಡಿದರು.

ಕಾಲೇಜಿನ ಮಾಜಿ ವಿದ್ಯಾರ್ಥಿಗಳಾದ ಅಪೂರ್ವ ಹಾಗೂ ಶ್ರೀಗೌರಿ ಭಟ್, ಕಾಲೇಜಿನಲ್ಲಿ ತಮ್ಮ ಅನುಭವ ಜೀವನಪೂರ್ತಿ ಸ್ಮರಿಸುವಂತದ್ದು ಎಂದು ಅನಿಸಿಕೆ ಹಂಚಿಕೊಂಡರು. ಇದೇ ಸಂದರ್ಭದಲ್ಲಿ ಕಳೆದ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 42 ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ, ಗೌರವಿಸಲಾಯಿತು.

ಇದನ್ನೂ ಓದಿ: Samsung: ಸ್ಯಾಮ್‌ಸಂಗ್‌ನ ʼಬಿಗ್‌ ಟಿವಿ ಡೇಸ್‌ʼ ಸೇಲ್‌; ದೊಡ್ಡ ಟಿವಿಗಳ ಮೇಲೆ ಅತ್ಯಾಕರ್ಷಕ ಆಫರ್‌!

ಶ್ರಾವ್ಯ ಪ್ರಾರ್ಥಿಸಿದಳು. ಉಪನ್ಯಾಸಕ ಗುರುರಾಜ್ ಭಟ್ ನಿರ್ವಹಿಸಿದರು. ಉಪ ಪ್ರಾಂಶುಪಾಲ ನಾಗರಾಜ ಹೆಗಡೆ ವಂದಿಸಿದರು.

Continue Reading
Advertisement
Varun Dhawan Natasha Dalal welcome baby girl
ಬಾಲಿವುಡ್16 mins ago

Varun Dhawan: ಹೆಣ್ಣು ಮಗುವಿಗೆ ತಂದೆಯಾದ ಬಾಲಿವುಡ್ ನಟ ವರುಣ್ ಧವನ್

Crude Bomb west bengal election results 2024
ಪ್ರಮುಖ ಸುದ್ದಿ28 mins ago

Election Results 2024: ಪಶ್ಚಿಮ ಬಂಗಾಲದಲ್ಲಿ ಮತ ಎಣಿಕೆಗೂ ಮುನ್ನ ಬಾಂಬ್‌ ಸ್ಫೋಟ, ಐವರಿಗೆ ಗಾಯ

Lok Sabha Election Result 2024
ದೇಶ31 mins ago

Lok Sabha Election Result 2024: ಮುನ್ನಡೆಯಲ್ಲೇ ಮ್ಯಾಜಿಕ್‌ ನಂಬರ್‌ ದಾಟಿದ ಎನ್‌ಡಿಎ; ಇಂಡಿಯಾ ಒಕ್ಕೂಟ ತೀವ್ರ ಪೈಪೋಟಿ

Election Results 2024
Lok Sabha Election 202432 mins ago

Election Results 2024: ಮತ ಎಣಿಕೆ ಆರಂಭ: ಮೋದಿಯಿಂದ ರಾಹುಲ್‌ ಗಾಂಧಿವರೆಗೆ; ಇವರೇ ನೋಡಿ ದೇಶದ ಗಮನ ಸೆಳೆದ ಅಭ್ಯರ್ಥಿಗಳು

Election Results 2024
ಪ್ರಮುಖ ಸುದ್ದಿ46 mins ago

Election Results 2024 : ಲೋಕಸಭಾ ಚುನಾವಣಾ ಮತ ಎಣಿಕೆ ಆರಂಭ; ಇವಿಎಂಗಳಲ್ಲಿದ್ದ ಪಕ್ಷಗಳ ಭವಿಷ್ಯ ಬಹಿರಂಗ

Lok Sabha Election 2024
ದೇಶ55 mins ago

Election Result 2024: ಮತ ಎಣಿಕೆ ಮೊದಲೇ ಕಾಂಗ್ರೆಸ್ ನಾಯಕರಿಂದ ಮತಯಂತ್ರ ದೂಷಣೆ ಆರಂಭ!

Lok Sabha Election Results 2024
ಪ್ರಮುಖ ಸುದ್ದಿ55 mins ago

Election Results 2024: ರಾಜ್ಯದ 474 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಿರ್ಧಾರಕ್ಕೆ ಕೌಂಡ್ ಡೌನ್

Election Results 2024 modi face 400 par
ಪ್ರಮುಖ ಸುದ್ದಿ1 hour ago

Election Results 2024: ಎನ್‌ಡಿಎ 400 ಸ್ಥಾನ ತಲುಪಲು ಈ ರಾಜ್ಯಗಳೇ ಹೆದ್ದಾರಿ! ಸಮೀಕ್ಷೆಗಳು ಹೇಳಿದ್ದೇನು?

Lok Sabha Election Result 2024 Live
ದೇಶ2 hours ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Benefits Of Litchi
ಆರೋಗ್ಯ2 hours ago

Benefits Of Litchi: ಸಿಹಿಯಾದ, ರುಚಿಯಾದ ಲಿಚಿ ಹಣ್ಣನ್ನು ತಿಂದರೆ ಆರೋಗ್ಯ ಲಾಭ ಹಲವಾರು

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok Sabha Election Result 2024 Live
ದೇಶ2 hours ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ17 hours ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ18 hours ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ2 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು3 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ5 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ7 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು7 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ1 week ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 week ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

ಟ್ರೆಂಡಿಂಗ್‌