Dharma Dangal‌ : ಕಾವೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನ ಜಾತ್ರಾ ಮಹೋತ್ಸವಕ್ಕೆ ಧರ್ಮ ದಂಗಲ್‌ ಬಿಸಿ - Vistara News

ಕರ್ನಾಟಕ

Dharma Dangal‌ : ಕಾವೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನ ಜಾತ್ರಾ ಮಹೋತ್ಸವಕ್ಕೆ ಧರ್ಮ ದಂಗಲ್‌ ಬಿಸಿ

Dharma Dangal‌ : ಮಂಗಳೂರಿನ ಕಾವೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಇಂದಿನಿಂದ ಆರಂಭವಾಗಿರುವ ಜಾತ್ರಾ ಮಹೋತ್ಸವಕ್ಕೆ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ಹೇರಲಾಗಿದೆ. ಈ ಬಗ್ಗೆ ವಿಎಚ್‌ಪಿ ಮತ್ತು ಬಜರಂಗದಳ ಮುಖಂಡರು ಬ್ಯಾನರ್‌ ಅಳವಡಿಸಿದ್ದಾರೆ.

VISTARANEWS.COM


on

kavooru jatre Dharma Dangal
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮಂಗಳೂರು: ಬಿಜೆಪಿ ಶಾಸಕ ಡಾ.ಭರತ್ ಶೆಟ್ಟಿ ವಿಧಾನಸಭಾ ಕ್ಷೇತ್ರದಲ್ಲಿ ವ್ಯಾಪಾರಿ ಧರ್ಮ ದಂಗಲ್ (Dharma Dangal‌) ಪ್ರಾರಂಭವಾಗಿದೆ. ದೇವಸ್ಥಾನದಲ್ಲಿ ಅನ್ಯಧರ್ಮೀಯರ ವ್ಯಾಪಾರವನ್ನು ಬಹಿಷ್ಕರಿಸಿ ಬ್ಯಾನರ್ ಅಳವಡಿಕೆ ಮಾಡಲಾಗಿದೆ. ಇದೀಗ ಪರ-ವಿರೋಧ ಚರ್ಚೆಗೆ ಗ್ರಾಸವಾಗಿದೆ.

ಮಂಗಳೂರಿನ ಕಾವೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ಯಾನರ್ ಅಳವಡಿಕೆ ಮಾಡಲಾಗಿದೆ. ದೇವಸ್ಥಾನದ ಆಡಳಿತ ಮಂಡಳಿ ಅನುಮತಿ ಪಡೆದು ವಿಎಚ್‌ಪಿ ಮತ್ತು ಬಜರಂಗದಳ ಕಾರ್ಯಕರ್ತರು ಬ್ಯಾನರ್ ಹಾಕಿದ್ದಾರೆನ್ನಲಾಗಿದೆ.

Dharma Dangal‌

ಸನಾತನ ಧರ್ಮದ ಆಚರಣೆ ಹಾಗೂ ನಂಬಿಕೆಗಳಲ್ಲಿ ವಿಶ್ವಾಸ ಉಳ್ಳ ಹಿಂದು ವ್ಯಾಪಾರಿಗಳಿಗೆ ಮಾತ್ರ ವ್ಯಾಪಾರ ಅವಕಾಶ. ವಿಗ್ರಹಾರಾಧನೆ ಹರಾಂ ಎಂದು ನಂಬಿದ ಯಾರಿಗೂ ವ್ಯಾಪಾರಕ್ಕೆ ಅವಕಾಶವಿಲ್ಲ ಎಂದು ಬ್ಯಾನರ್‌ನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ | Santro Ravi case | ಗುಜರಾತ್‌ನಲ್ಲಿ ಸ್ಯಾಂಟ್ರೋ ರವಿ ಪತ್ತೆಗೆ ನೆರವಾಗಿದ್ದು ಯುವ ಪೊಲೀಸ್‌ ಆಫೀಸರ್‌ಗಳ ಕನೆಕ್ಷನ್

ಶನಿವಾರದಿಂದ (ಜ.೧೪) ಕಾವೂರು ಜಾತ್ರೋತ್ಸವ ಆರಂಭವಾಗಿದ್ದು, ಜ.18ರವರೆಗೆ ನಡೆಯಲಿದೆ. ಈಗಾಗಲೇ ದೇವಸ್ಥಾನದ ಒಳ ಮತ್ತು ಹೊರ ಭಾಗದಲ್ಲಿ ಸ್ಟಾಲ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಧಾರ್ಮಿಕ ದತ್ತಿ ವ್ಯಾಪ್ತಿಗೆ ಒಳಪಡುವ ಕಾವೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಸುತ್ತ ಸಿಎಆರ್ ತುಕಡಿ ಸೇರಿದಂತೆ ಹೆಚ್ಚುವರಿ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದೆ.

ಈ ಜಾತ್ರಾ ಮಹೋತ್ಸವದಲ್ಲಿ ಹಲವು ವರ್ಷಗಳಿಂದ ಮುಸ್ಲಿಂ ವ್ಯಾಪಾರಿಗಳು ವ್ಯಾಪಾರ ನಡೆಸುತ್ತಾ ಬಂದಿದ್ದರು. ಈ ಬಾರಿ ಬಜರಂಗದಳದ ಕಾರ್ಯಕರ್ತರಿಗೆ ಸ್ಟಾಲ್‌ಗಳ ನಿರ್ವಹಣೆ ಉಸ್ತುವಾರಿಯನ್ನು ಕೊಡಲಾಗಿತ್ತು. ಈ ಹಿನ್ನೆಲೆಯಲ್ಲಿ ನಡೆದಿದ್ದ ದೇವಸ್ಥಾನದ ಆಡಳಿತ ಮಂಡಳಿ ಸಭೆಯಲ್ಲೇ ವ್ಯಾಪಾರ ಬಹಿಷ್ಕಾರದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಲಾಗಿದೆ.

ಇದನ್ನೂ ಓದಿ | Hombale Films | ಹೊಂಬಾಳೆ ಮೊದಲ ಮಲಯಾಳಂ ಫಿಲ್ಮ್‌ ʻಧೂಮಂʼ ಸಿನಿಮಾ ಚಿತ್ರೀಕರಣ ಮುಕ್ತಾಯ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಬಂಧನ; ಈತನನ್ನು ಹಿಡಿದುಕೊಟ್ಟವರಿಗಿತ್ತು 5 ಲಕ್ಷ ಬಹುಮಾನ!

ಪ್ರವೀಣ್ ನೆಟ್ಟಾರು (Praveen Nettaru) ಪ್ರಕರಣದಲ್ಲಿ ನಾಲ್ಕನೇ ಆರೋಪಿಯಾಗಿದ್ದ ಮುಸ್ತಾಫನಿಗಾಗಿ ಎನ್‌ಐಎ ವರ್ಷಗಳಿಂದ ಹುಡುಕುತ್ತಿತ್ತು. ಸುಳ್ಯದ ಶಾಂತಿನಗರ ನಿವಾಸಿಯಾದ ಮುಸ್ತಾಫ ಪ್ರಕರಣದ A4 ಆಗಿದ್ದಾನೆ. ಮುಸ್ತಾಫನನ್ನು ಹಿಡಿದುಕೊಟ್ಟವರಿಗೆ 5 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು.

VISTARANEWS.COM


on

mustafa paichar praveen nettar ಪ್ರವೀಣ್‌ ನೆಟ್ಟಾರು
Koo

ಹಾಸನ: ಬಿಜೆಪಿ ಕಾರ್ಯಕರ್ತ, ದಕ್ಷಿಣ ಕನ್ನಡದ ಬೆಳ್ಳಾರೆ ಪ್ರವೀಣ್ ನೆಟ್ಟಾರು ಹತ್ಯೆ (Praveen Nettaru murder Case) ಪ್ರಕರಣದಲ್ಲಿ ಮೂವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಬಂಧಿಸಿದೆ. ಹಾಸನ ಜಿಲ್ಲೆಯಲ್ಲಿ (Hassan news) ಎನ್‌ಐಎ ಮೂವರನ್ನು ವಶಕ್ಕೆ ಪಡೆದುಕೊಂಡಿದೆ. ಸುಳ್ಯ ಮೂಲದ ಮುಸ್ತಾಫ ಪೈಚಾರ್, ಸೋಮವಾರಪೇಟೆ ಮೂಲದ ಇಲಿಯಾಸ್ ಹಾಗೂ ಸಿರಾಜ್‌ ಬಂಧಿತರು. ಇವರಲ್ಲಿ ಮುಸ್ತಾಫನನ್ನು ಹಿಡಿದುಕೊಟ್ಟವರಿಗೆ 5 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು.

ಸಕಲೇಶಪುರ ತಾಲ್ಲೂಕಿನ ಆನೆಮಹಲ್‌ ಎಂಬಲ್ಲಿ ಆರೋಪಿಗಳನ್ನು ಎನ್‌ಐಎ ವಶಕ್ಕೆ ಪಡೆದಿದೆ. ಆನೆಮಹಲ್‌ನ ಸಿರಾಜ್ ಎಂಬವರ ಬಳಿ ಮುಸ್ತಾಫ ಪೈಚಾರ್ ಹಾಗೂ ಇಲಿಯಾಸ್ ಕೆಲಸಕ್ಕೆ ಸೇರಿದ್ದರು. ಆರೋಪಿಗಳಿಗೆ ಆಶ್ರಯ ನೀಡಿದ್ದ ಆರೋಪದಲ್ಲಿ ಸಿರಾಜ್‌ನನ್ನೂ ವಶಕ್ಕೆ ಪಡೆದು ಪ್ರಶ್ನಿಸಲಾಗುತ್ತಿದೆ.

ಪ್ರವೀಣ್ ನೆಟ್ಟಾರು ಪ್ರಕರಣದಲ್ಲಿ ನಾಲ್ಕನೇ ಆರೋಪಿಯಾಗಿದ್ದ ಮುಸ್ತಾಫನಿಗಾಗಿ ಎನ್‌ಐಎ ವರ್ಷಗಳಿಂದ ಹುಡುಕುತ್ತಿತ್ತು. ಸುಳ್ಯದ ಶಾಂತಿನಗರ ನಿವಾಸಿಯಾದ ಮುಸ್ತಾಫ ಪ್ರಕರಣದ A4 ಆಗಿದ್ದಾನೆ. ಹಾಸನ ಜಿಲ್ಲೆ ಸಕಲೇಶಪುರ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಡಗಿದ್ದ ಆರೋಪಿಯನ್ನು NIA ಇನ್‌ಸ್ಪೆಕ್ಟರ್ ಷಣ್ಮುಗಂ ನೇತೃತ್ವದ ತಂಡ ಬಂಧಿಸಿದೆ. ಆರೋಪಿಯನ್ನು ತನಿಖೆಗಾಗಿ ಬೆಂಗಳೂರು ಎನ್ಐಎ ಕಚೇರಿಯತ್ತ ಕೊಂಡೊಯ್ಯಲಾಗಿದೆ.

ಏನಿದು ಪ್ರಕರಣ?

Praveen Nettaru

ಬೆಳ್ಳಾರೆ ಪರಿಸರದಲ್ಲಿ ಹಿಂದೂ ಸಂಘಟನೆಯ ಸಕ್ರಿಯ ನಾಯಕರಾಗಿ ಗಮನ ಸೆಳೆದಿದ್ದ ಪ್ರವೀಣ್‌ ನೆಟ್ಟಾರು ಅವರನ್ನು 2022ರ ಜುಲೈ 26ರಂದು ಮೂವರು ದುಷ್ಕರ್ಮಿಗಳು ಬೈಕ್‌ನಲ್ಲಿ ಬಂದು ಕೊಲೆ ಮಾಡಿ ಪರಾರಿಯಾಗಿದ್ದರು. ಕೊಲೆ ಸಂಬಂಧ ಪಿಎಫ್‌ಐ ಸಂಘಟನೆ ಜತೆ ಸಂಪರ್ಕ ಹೊಂದಿದ್ದಾರೆನ್ನಲಾದ 10ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ. ಈ ನಡುವೆ, ಹಿಂದೂ ಕಾರ್ಯಕರ್ತರಿಗೆ ರಾಜ್ಯದಲ್ಲಿ ರಕ್ಷಣೆ ಇಲ್ಲ ಎಂದು ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು.

ಚಾರ್ಜ್‌ಶೀಟ್‌ ಸಲ್ಲಿಕೆ

ಒಟ್ಟು 20 ಆರೋಪಿಗಳ ವಿರುದ್ಧ ಬೆಂಗಳೂರಿನ ಎನ್​ಐಎ ವಿಶೇಷ ನ್ಯಾಯಾಲಯದಲ್ಲಿ ಸುಮಾರು 1500 ಪುಟಗಳ ಚಾರ್ಜ್​ಶೀಟ್​ ಈ ಹಿಂದೆ ಎನ್‌ಐಎ ಸಲ್ಲಿಸಿತ್ತು. ‘ಸಮಾಜದಲ್ಲಿ-ಜನರಲ್ಲಿ ಭಯ ಹುಟ್ಟಿಸುವ ಸಲುವಾಗಿ ಪ್ರವೀಣ್​ ನೆಟ್ಟಾರು ಅವರನ್ನು ಪಿಎಫ್​ಐ ಹತ್ಯೆ ಮಾಡಿದೆ. ಭಯೋತ್ಪಾದನೆ, ಕೋಮು ದ್ವೇಷ ಮತ್ತು ಅಶಾಂತಿ ಸೃಷ್ಟಿಸುವುದು ಆ ಸಂಘಟನೆ ಮುಖಂಡರ ಪ್ರಮುಖ ಉದ್ದೇಶ. 2047ರ ಹೊತ್ತಿಗೆ ಇಸ್ಲಾಮಿಕ್​ ಆಳ್ವಿಕೆ ಸ್ಥಾಪಿಸುವ ನಿಟ್ಟಿನಲ್ಲಿ ಪಿಎಫ್​ಐ ಕಾರ್ಯಕರ್ತರು ಕಾರ್ಯಾಚರಣೆ ನಡೆಸುತ್ತಿದ್ದರು. ವಿವಿಧ ಹಿಂದು ಮುಖಂಡರ ಹತ್ಯೆಗಳನ್ನು ನಡೆಸಲು ಸೇವಾ ತಂಡಗಳು, ಕಿಲ್ಲರ್​ ಸ್ಕ್ವಾಡ್​​ಗಳು ಎಂಬ ರಹಸ್ಯ ತಂಡಗಳನ್ನು ಪಿಎಫ್​ಐ ರಚನೆ ಮಾಡಿಕೊಂಡಿತ್ತು. ಒಬ್ಬ ವ್ಯಕ್ತಿಯನ್ನು ಟಾರ್ಗೆಟ್​ ಮಾಡಿ, ಆತನನ್ನು ಕೊಲ್ಲಲು ಯೋಜನೆ ರೂಪಿಸುತ್ತಿದ್ದರು. ಅದಕ್ಕಾಗಿ ಸದಸ್ಯರಿಗೆ ತರಬೇತಿ ನೀಡುತ್ತಿದ್ದರು. ಬಳಿಕ ಆಯಾ ಜಿಲ್ಲಾ ಮುಖ್ಯಸ್ಥನಿಗೆ ಸೂಚನೆ ನೀಡುತ್ತಿದ್ದರು. ಹೀಗೆ ಟಾರ್ಗೆಟ್​ ಆದ ವ್ಯಕ್ತಿಗಳಲ್ಲಿ ಪ್ರವೀಣ್​ ನೆಟ್ಟಾರು ಕೂಡ ಒಬ್ಬನಾಗಿದ್ದ’ ಎಂಬ ಅಂಶಗಳನ್ನು ಎನ್​ಐಎ ಚಾರ್ಜ್​ಶೀಟ್​ನಲ್ಲಿ ಉಲ್ಲೇಖಿಸಿದೆ.

ಮಹಮ್ಮದ್ ಶಿಯಾಬ್, ಅಬ್ದುಲ್ ಬಶೀರ, ರಿಯಾಝ್, ಮುಸ್ತಫಾ ಪೈಚಾರ್, ಮಸೂದ್ ಕೆ ಎ, ಕೊಡಾಜೆ ಮೊಹಮ್ಮದ್ ಶರೀಫ್, ಅಬೂಬಕ್ಕರ್ ಸಿದ್ದಿಕ್, ನೌಫಲ್ ಎಂ., ಇಸ್ಮಾಯಿಲ್ ಶಾಫಿ.ಕೆ., ಕೆ ಮಹಮ್ಮದ್ ಇಕ್ಬಾಲ್, ಶಹೀದ್ ಎಂ., ಮಹಮ್ಮದ್ ಶಫೀಕ್ ಜಿ., ಉಮ್ಮರ್ ಫಾರೂಕ್ ಎಂ.ಆರ್., ಅಬ್ದುಲ್ ಕಬೀರ್ ಸಿ.ಎ., ಮುಹಮ್ಮದ್ ಇಬ್ರಾಹಿಂ ಶಾ., ಸೈನುಲ್ ಅಬಿದ್ ವೈ., ಶೇಖ್ ಸದ್ದಾಂ ಹುಸೇನ್., ಜಾಕಿಯಾರ್ ಎ., ಎನ್.ಅಬ್ದುಲ್ ಹಾರಿಸ್., ತುಫೈಲ್ ಎಂ. ಎಚ್. ಎಂಬುವರ ಹೆಸರು ಚಾರ್ಜ್​ಶೀಟ್​​ನಲ್ಲಿ ಉಲ್ಲೇಖವಾಗಿದೆ.

ಇದನ್ನೂ ಓದಿ: Praveen Nettaru: ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಇನ್ನೊಂದು ಚಾರ್ಜ್‌ಶೀಟ್‌ ಸಲ್ಲಿಕೆ

Continue Reading

ರಾಜಕೀಯ

Lok Sabha Election 2024: ಲೋಕಸಭಾ ಪ್ರಚಾರಕ್ಕೆ 26 ಸಾವಿರ ಕಿಲೋ ಮೀಟರ್ ಸಂಚಾರ, ದಿನಕ್ಕೆ ಸರಾಸರಿ 14-18 ಗಂಟೆ ಸಿಎಂ ಪ್ರಚಾರ!

Lok Sabha Election 2024: 2024ರ ಲೋಕಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿರುಸಿನ ಪ್ರಚಾರ ಮಾಡಿದ್ದರು. ಒಟ್ಟು 14 ಗ್ಯಾರಂಟಿ ಸಮಾವೇಶಗಳು, 76 ಪ್ರಜಾಧ್ವನಿ ಜನ‌ಸಮಾವೇಶಗಳನ್ನು ನಡೆಸಿದ್ದ ಅವರು, ರಾಜ್ಯಾದ್ಯಂತ 22 ರಿಂದ 26 ಸಾವಿರ ಕಿಲೋ ಮೀಟರ್ ಸಂಚರಿಸಿದ್ದರು. ಸಿಎಂ ರೋಡ್ ಶೋ/ಸಭೆಗಳಲ್ಲಿ ಸರಾಸರಿ 15 ಸಾವಿರ ಮಂದಿ ಭಾಗಿಯಾಗಿದ್ದರು.

VISTARANEWS.COM


on

Lok Sabha Election 2024 26000 km travelled for Lok Sabha campaigning CM to campaign for 14 to 18 hours a day
Koo

ಬೆಂಗಳೂರು: ಈ ಭಾರಿ ಲೋಕಸಭಾ ಚುನಾವಣೆಯನ್ನು (Lok Sabha Election 2024) ಸಿಎಂ ಸಿದ್ದರಾಮಯ್ಯ (CM Siddaramaiah) ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರು. ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಹಗಲು – ರಾತ್ರಿ ನಿರಂತರ ಪ್ರಚಾರ ಹಾಗೂ ಪ್ರವಾಸ ಕೈಗೊಂಡಿದ್ದರು. ಈ ವೇಳೆ ಒಟ್ಟು 14 ಗ್ಯಾರಂಟಿ ಸಮಾವೇಶಗಳು, 76 ಪ್ರಜಾಧ್ವನಿ ಸಮಾವೇಶಗಳನ್ನು ನಡೆಸಿದ್ದಾರೆ. ಇದಕ್ಕಾಗಿ ರಾಜ್ಯಾದ್ಯಂತ ಸುಮಾರು 26 ಸಾವಿರ ಕಿಲೋ ಮೀಟರ್‌ವರೆಗೆ ಸಂಚಾರವನ್ನು ಮಾಡಿದ್ದಾರೆ. ಸಿಎಂ ರೋಡ್‌ ಶೋ (CM Road Show) ಹಾಗೂ ಸಭೆಗಳಲ್ಲಿ ಸರಾಸರಿ 15 ಸಾವಿರ ಮಂದಿ ಭಾಗಿಯಾಗಿದ್ದರು. ಅಲ್ಲದೆ, ದಿನಕ್ಕೆ ಸರಾಸರಿ 14-18 ಗಂಟೆಗಳ ಕಾಲ ಪ್ರಚಾರಗಳಲ್ಲಿ ಭಾಗಿಯಾಗಿದ್ದರು ಎಂದು ತಿಳಿದು ಬಂದಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಸರಾಸರಿ ದಿನಕ್ಕೆ 14-18 ಗಂಟೆ ಪ್ರಯಾಣ ಮಾಡಿದ್ದಾರೆ. ಇದರಲ್ಲಿ ರಸ್ತೆ ಮಾರ್ಗ ಮತ್ತು ವಾಯು ಮಾರ್ಗಗಳು ಸೇರಿವೆ. ಚುನಾವಣೆ ಘೋಷಣೆ ಆಗುವುದಕ್ಕೂ ಮೊದಲು 14 ಗ್ಯಾರಂಟಿ ಸಮಾವೇಶಗಳನ್ನು ನಡೆಸಿದ್ದ ಸಿಎಂ, ಕೆಲವು ಕಡೆ ಆಯಾ ಭಾಗದ ಸಮುದಾಯ ಮುಖಂಡರ ಜತೆ ಸಂವಾದವನ್ನೂ ನಡೆಸಿದ್ದರು.

ಚುನಾವಣೆ ಘೋಷಣೆಯಾದ ಬಳಿಕ ಮೊದಲ ಮತ್ತು ಎರಡನೇ ಹಂತದ 28 ಲೋಕಸಭಾ ಕ್ಷೇತ್ರಗಳ 76 ಸ್ಥಳಗಳಲ್ಲಿ “ಪ್ರಜಾಧ್ವನಿ-2” ಜನ ಸಮಾವೇಶಗಳ ನಡೆಸಿದ ಅವರು, ಕೇಂದ್ರ ಸರ್ಕಾರದಿಂದ ಅನುದಾನ ತಾರತಮ್ಯ ಹಾಗೂ ಜಿಎಸ್‌ಟಿ ಅನುದಾನ ಹಂಚಿಕೆ ವಿರುದ್ಧವಾಗಿ ಭಾಷಣ ಮಾಡುತ್ತಾ ಬಂದರು. ಜತೆಗೆ ಬಿಜೆಪಿ ಮೇಲೆಯೂ ಅಟ್ಯಾಕ್‌ ಹಾಗೂ ಕೌಂಟರ್‌ ಅಟ್ಯಾಕ್‌ಗಳನ್ನು ಮಾಡುತ್ತಾ ಬಂದರು.

ಮತ ಪ್ರಭುವ ಸೆಳೆಯಲು ಸಿಎಂ ಕಸರತ್ತಿನ ಮಾತುಗಳು ಮತ್ತು ಪ್ರಭಾವ

1) ಇಲ್ಲಿ ನಾನೇ ಅಭ್ಯರ್ಥಿ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದರೆ ನಾನು ಗೆದ್ದಂತೆ!

2) ಅಂಬಾನಿ, ಅದಾನಿ ಬಗ್ಗೆ ನೇರವಾದ ಟೀಕೆ ಜತೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕಳೆದ ಹತ್ತು ವರ್ಷಗಳ ಆಡಳಿತದ ಬಗ್ಗೆ ಟೀಕೆ.

3) ಸೋಷಿಯಲ್‌ ಮೀಡಿಯಾ ಸಹಿತ ಸಮಾವೇಶಗಳಲ್ಲಿ “ಖಾಲಿ ಚೊಂಬು” ಪ್ರಸ್ತಾಪ.

4) ಅನ್ನ ಭಾಗ್ಯ ಸೇರಿದಂತೆ ಹಲವು ಭಾಗ್ಯಗಳ ಬಗ್ಗೆ ಅಂಕಿ – ಅಂಶಗಳ ಸಹಿತ ವಿವರಣೆ

5) ಪ್ರಧಾನಿ ನರೇಂದ್ರ ಮೋದಿಯವರ “ಅಚ್ಛೇ ದಿನ್ ಆಯೇಂಗೆ” ಎನ್ನುವ ಪದಗಳನ್ನು ಬಳಕೆ ಮಾಡಿ ಲೇವಡಿ ಮಾಡುತ್ತಿದ್ದ ಸಿಎಂ ಸಿದ್ದರಾಮಯ್ಯ

6) ಐದೂ ಗ್ಯಾರಂಟಿಗಳ ಬಗ್ಗೆ ಪ್ರಸ್ತಾಪ. ಜತೆಗೆ ದೇಶದಲ್ಲಿ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ನೀಡಿರುವ ಗ್ಯಾರಂಟಿಗಳ ಬಗ್ಗೆ ಜನರಿಗೆ ಮನದಟ್ಟಾಗುವ ರೀತಿ ಭಾಷಣವನ್ನು ಸಿಎಂ ಸಿದ್ದರಾಮಯ್ಯ ಮಾಡಿದ್ದಾರೆ.

ಇದನ್ನೂ ಓದಿ: Prajwal Revanna Case: ರೇವಣ್ಣ ಜಾಮೀನು ಅರ್ಜಿ ಸೋಮವಾರಕ್ಕೆ: ಎಸ್‌ಐಟಿಗೆ ಹಿಗ್ಗಾಮುಗ್ಗಾ ತರಾಟೆ; ವಕೀಲ ನಾಗೇಶ್‌ ವಾದ ಹೀಗಿತ್ತು!

7) ಗ್ಯಾರಂಟಿ ಸಮಾವೇಶಗಳು ಮತ್ತು 76 ಪ್ರಜಾಧ್ವನಿ ಜನ ಸಮಾವೇಶಗಳು ಸೇರಿ 90 ಸಭೆಗಳಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಉದ್ದಗಲಕ್ಕೂ ಪ್ರಯಾಣಿಸಿದ್ದು ಅಂದಾಜು 26 ಸಾವಿರ ಕಿಲೋ ಮೀಟರ್ ಆಗಿದೆ. ಈ 90 ಸಭೆಗಳು/ರೋಡ್ ಶೋಗಳಲ್ಲಿ 7 ಸಾವಿರದಿಂದ 60 ಸಾವಿರದವರೆಗೂ ಜನ ಸೇರಿದ್ದರು.

8) ರೋಡ್ ಶೋ/ ಸಭೆಗಳಲ್ಲಿ ಭಾಗವಹಿಸಿದ ಜನರ ಪ್ರಮಾಣ ಸರಾಸರಿ 15 ಸಾವಿರ ಎಂದು ಲೆಕ್ಕ ಹಿಡಿದರೂ ಒಟ್ಟಾರೆ 14 ಲಕ್ಷದಷ್ಟು ಜನರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೇರಾ ನೇರಾ ತಮ್ಮ ಮಾತುಗಳಲ್ಲಿ ಬೆಸೆದಿದ್ದಾರೆ.

Continue Reading

ಕಲಬುರಗಿ

Murder Case : ಕಾಂಗ್ರೆಸ್‌ಗೆ ವೋಟ್‌ ಹಾಕಿದ್ದಕ್ಕೆ ಅಮಾವಾಸ್ಯೆ ದಿನ ಕರೆದು ಕೊಂದರು

Murder Case : ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ (Lok sabha Election 2024) ಯುವಕನೊಬ್ಬ ಕಾಂಗ್ರೆಸ್‌ ಪರ ಪ್ರಚಾರ ಮಾಡಿ, ಮತ ಹಾಕಿದ್ದಕ್ಕೆ ಸಿಟ್ಟಾದ ಕೆಲ ಕಿಡಿಗೇಡಿಗಳು ಅಮಾವಾಸ್ಯೆ ದಿನ ಕರೆದು ಕೊಂದಿದ್ದಾರೆ. ಪಾರ್ಟಿ ಮಾಡುವ ನೆಪದಲ್ಲಿ ಯುವಕನನ್ನು ಕರೆಸಿಕೊಂಡ ದುಷ್ಕರ್ಮಿಗಳು ಕೊಲೆಗೈದು ಬಾವಿಗೆ ಬಿಸಾಡಿದ್ದಾರೆ.

VISTARANEWS.COM


on

By

murder case kalaburagi
Koo

ಕಲಬುರಗಿ: ಚುನಾವಣೆ ಮುಗಿದರೂ ಹಗೆತನ ಮುಗಿಯಲಿಲ್ಲ. ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದಕ್ಕೆ ಯುವಕನೊಬ್ಬ ಕೊಲೆಯಾಗಿದ್ದಾನೆ. ಜಾವೀದ್ ಚಿನ್ನಮಳ್ಳಿ (25)ಹತ್ಯೆಯಾದವನು. ಕಲಬುರಗಿಯ (kalaburagi news) ಅಫಜಲಪುರ ತಾಲೂಕಿನ ಸಂಗಾಪುರ ಗ್ರಾಮದಲ್ಲಿ ಘಟನೆ (Murder case) ನಡೆದಿದೆ.

ಮೇ 7 ರಂದು ನಡೆದ ಲೋಕಸಭೆ ಚುನಾವಣೆಯಲ್ಲಿ ಜಾವೀದ್‌ ಕಾಂಗ್ರೆಸ್ ಪರ ಪ್ರಚಾರ ಮಾಡಿ, ಮತ ಹಾಕಿಸಿದ್ದ. ಇದಕ್ಕೆ ದ್ವೇಷ ಬೆಳೆಸಿಕೊಂಡ ಕೆಲವರು ಅಮಾವಾಸ್ಯೆ ದಿನ ಪಾರ್ಟಿ ಮಾಡಲು ಕರೆಸಿಕೊಂಡಿದ್ದಾರೆ. ಕಿಡಿಗೇಡಿಗಳ ಪ್ಲಾನ್‌ ತಿಳಿಯದೆ ಹೋದ ಜಾವೀದ್‌ ಜತೆಗೆ ಗಲಾಟೆ ಮಾಡಿದ್ದಾರೆ. ನಂತರ ಜಾವೀದ್‌ನನ್ನು ಕೊಲೆಗೈದಿದ್ದಾರೆ.

ಕೊಲೆ ‌ಮಾಡಿ ಮೃತದೇಹವನ್ನು ಅಲ್ಲೆ ಬಾವಿಯಲ್ಲಿ ಬಿಸಾಡಿ ಆರೋಪಿಗಳು ಪರಾರಿ ಆಗಿದ್ದಾರೆ. ಮೃತದೇಹವನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಗಾಣಗಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾವಿಯಲ್ಲಿದ್ದ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.

ಸದ್ಯ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪರಾರಿ ಆಗಿರುವ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ತನಿಖೆಯನ್ನು ಮುಂದುವರಿಸಿದ್ದಾರೆ.

ಪ್ರೀತಿ ವಿಷ್ಯಕ್ಕೆ ಬೀದಿ ಹೆಣವಾದ! ಮಗನ ಡೆಡ್‌ಬಾಡಿ ನೋಡಿ ಮೂರ್ಛೆ ಹೋದ ತಾಯಿ

ಬೆಂಗಳೂರು: ಬೆಂಗಳೂರಿನ ಎಸ್‌ಆರ್‌ ನಗರ ಠಾಣಾ ವ್ಯಾಪ್ತಿಯಲ್ಲಿ ಯುವಕನ ಶವ (Dead Body Found) ಪತ್ತೆಯಾಗಿದೆ. ಮಿಷನ್ ರೋಡ್‌ನ ಪಿ.ಸಿ.ಮೋಹನ್ ಆ್ಯಂಡ್‌ ಕೊ ಕಾಂಪ್ಲೆಕ್ಸ್‌ನ ಗ್ರೌಂಡ್ ಫ್ಲೋರ್‌ನಲ್ಲಿ ಶವ (Murder Case) ಪತ್ತೆಯಾಗಿದೆ. ಮೃತನನ್ನು ಕೆ.ಎಸ್. ಗಾರ್ಡನ್ ನಿವಾಸಿ ಸತ್ಯ (22) ಎಂದು ಗುರುತಿಸಲಾಗಿದೆ.

ಪ್ಲಂಬರ್ ಕೆಲಸ ಮಾಡಿಕೊಂಡಿದ್ದ ಸತ್ಯ ಗುರುವಾರ ರಾತ್ರಿ ಸ್ನೇಹಿತರ ಜತೆಗೆ ಮನೆಯಿಂದ ಹೊರಗಡೆ ಹೋಗಿದ್ದ. ಆದರೆ ಬೆಳಗಾಗುವುದರಲ್ಲಿ ಬೀದಿ ಹೆಣವಾಗಿದ್ದಾನೆ. ಸ್ಥಳೀಯರು ಮೃತದೇಹ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲಿಸಿದಾಗ ಮೃತ ಗುರುತು ಪತ್ತೆ ಮಾಡಿದ್ದಾರೆ. ಸತ್ಯನ ಕಿವಿಯಿಂದ ರಕ್ತ ಬಂದಿರುವುದು ಪತ್ತೆಯಾಗಿದೆ. ಮಗನ ಮೃತದೇಹ ಕಂಡು ಸತ್ಯ ತಾಯಿ ಮೂರ್ಚೆ ಹೋಗಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಪ್ರೀತಿ ವಿಷ್ಯಕ್ಕೆ ಬಲಿ?

ಸತ್ಯ ಹುಡುಗಿಯೊಬ್ಬಳನ್ನು ಪ್ರೀತಿ ಮಾಡುತ್ತಿದ್ದ. ವಿಷಯ ತಿಳಿದ ಯುವತಿಯ ಮನೆಯವರು ಸತ್ಯನಾ ವಿರುದ್ಧ ಬಲವಂತವಾಗಿ ಯುವತಿ ಕಡೆಯಿಂದ ಪೊಲೀಸರಿಗೆ ದೂರು ಕೊಡಿಸಿದ್ದರು. ಈ ಸಂಬಂಧ ಸತ್ಯನನ್ನು ವಶಕ್ಕೆ ಪಡೆದು ಪೊಲೀಸ್ ಠಾಣೆಯಲ್ಲಿಯೇ ಕೂರಿಸಿಕೊಂಡಿದ್ದರು. ಈ ಘಟನೆಯ ಬಳಿಕ ಸತ್ಯ ಸಾಕಷ್ಟು ನೊಂದಿದ್ದ. ಆದರೆ ಇತ್ತೀಚೆಗೆ ಮತ್ತೆ ಯುವತಿಯ ಜತೆ ಮಾತಾಡುತ್ತಿದ್ದ ಎನ್ನಲಾಗಿದೆ. ಈ ವಿಚಾರ ತಿಳಿದು ಯುವತಿಯ ಕಡೆಯವರು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಸದ್ಯ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಇದು ಕೊಲೆಯೋ ಆಕಸ್ಮಿಕ ಸಾವೋ ಎಂಬುದನ್ನು ತಿಳಿಯಲು ಮುಂದಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ನಡೆಸುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಚಿನ್ನದ ದರ

Gold Rate Today: ಅಕ್ಷಯ ತದಿಗೆಯಂದು ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ; ಬಂಗಾರ ಕೊಳ್ಳಲು ಮುಗಿಬಿದ್ದ ಜನ; ದರಗಳು ಹೀಗಿವೆ

Gold Rate Today: ಅಕ್ಷಯ ತೃತೀಯದ ಹಿನ್ನೆಲೆಯಲ್ಲಿ ಚಿನ್ನದ ಮಾರುಕಟ್ಟೆಯಲ್ಲಿ ಬೇಡಿಕೆ ಹಾಗೂ ವ್ಯಾಪಾರ ಏರಿದೆ. ಹೀಗಾಗಿ ನಿನ್ನೆಗಿಂತ ಇಂದಿನ ಚಿನ್ನದ ದರಗಳಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಬೆಳ್ಳಿಯ ದರಗಳು ಕೂಡ ಏರಿವೆ.

VISTARANEWS.COM


on

gold rate today
Koo

ಬೆಂಗಳೂರು: ರಾಜ್ಯದ ಚಿನ್ನದ ಮಾರುಕಟ್ಟೆಯಲ್ಲಿ ಇಂದು ಅಕ್ಷಯ ತೃತೀಯ (Akshaya Tritiya 2024) ಸ್ವರ್ಣ ಮಾರಾಟ ಹಾಗೂ ಕೊಳ್ಳುವಿಕೆಯ ಭರಾಟೆ. ಗ್ರಾಹಕರಿಂದ ಬೇಡಿಕೆಯ ಪರಿಣಾಮ ಚಿನ್ನದ ಬೆಲೆಯೂ ಭಾರಿ ಪ್ರಮಾಣದಲ್ಲಿ ಏರಿದೆ. 22 ಕ್ಯಾರಟ್‌ ಮತ್ತು 24 ಕ್ಯಾರಟ್‌ ಬಂಗಾರದ ಧಾರಣೆ (Gold Rate Today) ಕ್ರಮವಾಗಿ ₹85 ಹಾಗೂ ₹93 ಏರಿಕೆಯಾಗಿವೆ.

ಇಂದು ನೀವು ಬೆಂಗಳೂರಿನಲ್ಲಿ ಒಂದು ಗ್ರಾಂ 22 ಕ್ಯಾರಟ್‌ ಚಿನ್ನವನ್ನು ₹6,700ಕ್ಕೆ ಖರೀದಿಸಬಹುದು. ಎಂಟು ಗ್ರಾಂ ಬೆಲೆ ₹53,600 ಇದೆ. 10 ಗ್ರಾಂ ಮತ್ತು 100 ಗ್ರಾಂನ 22 ಕ್ಯಾರಟ್‌ ಚಿನ್ನವನ್ನು ₹67,000 ಮತ್ತು ₹6,70,000 ದರದಲ್ಲಿ ಖರೀದಿಸಬಹುದು. ಒಂದು ಗ್ರಾಂ 24 ಕ್ಯಾರಟ್‌ ಚಿನ್ನದ ಬೆಲೆ ₹7,309 ಆಗಿದ್ದರೆ, ಎಂಟು ಗ್ರಾಂ ಬೆಲೆ ₹58,472 ಆಗಿದೆ. 10 ಗ್ರಾಂ ಮತ್ತು 100 ಗ್ರಾಂ 24 ಕ್ಯಾರಟ್‌ ಚಿನ್ನವನ್ನು ಖರೀದಿಸಲು ಕ್ರಮವಾಗಿ ₹73,090 ಮತ್ತು ₹7,30,900 ವೆಚ್ಚವಾಗಲಿದೆ.

ಇಂದು ನಗರದಲ್ಲಿ ಬೆಳ್ಳಿಯ ಬೆಲೆಯೂ ಹೆಚ್ಚಾಗಿದೆ. ಬೆಳ್ಳಿಯನ್ನೂ ಅಕ್ಷಯ ತದಿಗೆ ಗ್ರಾಹಕರು ಖರೀದಿಸುತ್ತಿದ್ದಾರೆ. ಇಂದು ಒಂದು ಗ್ರಾಂ ಬೆಳ್ಳಿಯ ಬೆಲೆ (Silver rate today) ₹84.75, ಎಂಟು ಗ್ರಾಂ ₹678 ಮತ್ತು 10 ಗ್ರಾಂ ₹847.50ರಷ್ಟಿದೆ. 100 ಗ್ರಾಂಗೆ ಗ್ರಾಹಕರು ₹8,475 ಮತ್ತು 1 ಕಿಲೋಗ್ರಾಂಗೆ ₹84,750 ಪಾವತಿಸಬೇಕಿದೆ. ಇಲ್ಲಿ ನೀಡಲಾದ ದರಗಳು GST, TCS ಮತ್ತು ಇತರ ಲೆವಿಗಳನ್ನು ಒಳಗೊಂಡಿಲ್ಲ.

ನಗರ22 ಕ್ಯಾರಟ್24 ಕ್ಯಾರಟ್
ದಿಲ್ಲಿ67,15073,240
ಮುಂಬಯಿ67,000 73,090
ಬೆಂಗಳೂರು67,000 73,090
ಚೆನ್ನೈ67,05073,150

ಅಕ್ಷಯ ತೃತೀಯದಂದು ಭಾರತದಾದ್ಯಂತ ಹೆಚ್ಚಿನ ಜನರು ಚಿನ್ನವನ್ನು ಖರೀದಿಸುತ್ತಾರೆ. ಅಕ್ಷಯ ತೃತೀಯ 2024 ಚಿನ್ನ ಖರೀದಿಸಲು ಶುಭ ಸಮಯ ಹೀಗಿದೆ:
ಅಕ್ಷಯ ತೃತೀಯ 2024 ಪೂಜೆ ಮುಹೂರ್ತ: 2024 ರ ಮೇ 10 ರಂದು ಮುಂಜಾನೆ 05:33 ರಿಂದ ಮಧ್ಯಾಹ್ನ 12:18 ರವರೆಗೆ ಇರುತ್ತದೆ.
ಅಕ್ಷಯ ತೃತೀಯ ತಿಥಿ ಅವಧಿ: ತೃತೀಯಾ ತಿಥಿಯು ಮೇ 10 ರಂದು ಮುಂಜಾನೆ 04:17 ಪ್ರಾರಂಭವಾಗಿ, ಮೇ 11 ರಂದು ಮಧ್ಯರಾತ್ರಿ 02:50 ಕ್ಕೆ ಕೊನೆಗೊಳ್ಳುತ್ತದೆ.
ಅಕ್ಷಯ ತೃತೀಯ 2024 ಬಂಗಾರ ಖರೀದಿಗೆ ಶುಭ ಮುಹೂರ್ತ: 2024 ರ ಅಕ್ಷಯ ತೃತೀಯ ದಿನದಂದು ಬಂಗಾರ ಖರೀದಿ ಮಾಡಲು ಮೇ 09 ರಂದು ಮುಂಜಾನೆ 04:17ಕ್ಕೆ ಪ್ರಾರಂಭವಾಗುತ್ತದೆ ಮತ್ತು ಮೇ 11 ರಂದು ತೃತೀಯ ತಿಥಿಯ ಅಂತ್ಯದವರೆಗೆ ಮುಂದುವರಿಯುತ್ತದೆ. ಅಂದರೆ ಮೇ 11 ರಂದು ಮಧ್ಯರಾತ್ರಿ 2:50 ರವರೆಗೆ ಬಂಗಾರ ಖರೀದಿಸಬಹುದು.

ಚಿನ್ನದ ದರದ ಮೇಲೆ ಪರಿಣಾಮ ಬೀರುವ ಅಂಶಗಳು

ಬೇಡಿಕೆ ಮತ್ತು ಪೂರೈಕೆ: ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ಮತ್ತು ಪೂರೈಕೆಯಿಂದ ಚಿನ್ನದ ದರವನ್ನು ಹೆಚ್ಚಾಗಿ ನಿರ್ಧರಿಸಲಾಗುತ್ತದೆ. ಚಿನ್ನಕ್ಕೆ ಬೇಡಿಕೆ ಹೆಚ್ಚಾದರೆ ದರವೂ ಹೆಚ್ಚಾಗಲಿದೆ. ವ್ಯತಿರಿಕ್ತವಾಗಿ, ಚಿನ್ನದ ಪೂರೈಕೆ ಹೆಚ್ಚಾದರೆ, ದರ ಕಡಿಮೆಯಾಗುತ್ತದೆ.

ಜಾಗತಿಕ ಆರ್ಥಿಕ ಪರಿಸ್ಥಿತಿಗಳು: ಚಿನ್ನದ ದರದ ಮೇಲೆ ಜಾಗತಿಕ ಆರ್ಥಿಕ ಪರಿಸ್ಥಿತಿಗಳು ಕೂಡ ಪರಿಣಾಮ ಬೀರುತ್ತದೆ. ಉದಾಹರಣೆಗೆ, ಜಾಗತಿಕ ಆರ್ಥಿಕತೆಯು ಕಳಪೆಯಾಗಿ ಕಾರ್ಯನಿರ್ವಹಿಸುತ್ತಿದ್ದರೆ, ಹೂಡಿಕೆದಾರರು ಚಿನ್ನವನ್ನು ಸುರಕ್ಷಿತ ಹೂಡಿಕೆಯಾಗಿ ಕಾಣಬಹುದು. ಇದು ಚಿನ್ನದ ದರವನ್ನು ಹೆಚ್ಚಿಸುತ್ತದೆ.

ರಾಜಕೀಯ ಅಸ್ಥಿರತೆ: ರಾಜಕೀಯ ಅಸ್ಥಿರತೆ ಚಿನ್ನದ ದರದ ಮೇಲೂ ಪರಿಣಾಮ ಬೀರಬಹುದು. ಉದಾಹರಣೆಗೆ, ಒಂದು ದೊಡ್ಡ ದೇಶದಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾದರೆ, ಹೂಡಿಕೆದಾರರು ಅನಿಶ್ಚಿತತೆಯ ವಿರುದ್ಧ ಸುರಕ್ಷಿತರಾಗಲು ಚಿನ್ನವನ್ನು ಖರೀದಿಸಬಹುದು, ಇದು ಚಿನ್ನದ ದರವನ್ನು ಹೆಚ್ಚಿಸುತ್ತದೆ.

ಇದಲ್ಲದೆ, ಭಾರತದಲ್ಲಿನ ಚಿಲ್ಲರೆ ಚಿನ್ನದ ಬೆಲೆಯು ಭಾರತದಲ್ಲಿ ಗ್ರಾಹಕರಿಗೆ ಚಿನ್ನವನ್ನು ಮಾರಾಟ ಮಾಡುವ ಬೆಲೆಯಾಗಿದೆ. ಜಾಗತಿಕ ಚಿನ್ನದ ಬೆಲೆ, ಭಾರತೀಯ ರೂಪಾಯಿ, ಮತ್ತು ಚಿನ್ನದ ಆಭರಣಗಳ ತಯಾರಿಕೆಯಲ್ಲಿ ತೊಡಗಿರುವ ಕಾರ್ಮಿಕ ಮತ್ತು ಸಾಮಗ್ರಿಗಳ ವೆಚ್ಚ ಸೇರಿದಂತೆ ಹಲವಾರು ಅಂಶಗಳಿಂದ ಇದನ್ನು ನಿರ್ಧರಿಸಲಾಗುತ್ತದೆ. ಭಾರತದಲ್ಲಿ ಚಿಲ್ಲರೆ ಚಿನ್ನದ ಬೆಲೆಯು ಸಾಮಾನ್ಯವಾಗಿ ಜಾಗತಿಕ ಚಿನ್ನದ ಬೆಲೆಗಿಂತ ಹೆಚ್ಚಾಗಿರುತ್ತದೆ, ಏಕೆಂದರೆ ಇದು ಆಭರಣ ಮತ್ತು ಇತರ ವೆಚ್ಚ ಒಳಗೊಂಡಿರುತ್ತದೆ.

ಇದನ್ನೂ ಓದಿ: Gold Rate Today: ವೀಕೆಂಡ್‌ನಲ್ಲಿ ಬೆಲೆ ಏರಿಕೆ ಕಾಣದ ಚಿನ್ನ, ಈಗಲೇ ಖರೀದಿಸಿದರೆ ಚೆನ್ನ

Continue Reading
Advertisement
mustafa paichar praveen nettar ಪ್ರವೀಣ್‌ ನೆಟ್ಟಾರು
ಪ್ರಮುಖ ಸುದ್ದಿ8 mins ago

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಬಂಧನ; ಈತನನ್ನು ಹಿಡಿದುಕೊಟ್ಟವರಿಗಿತ್ತು 5 ಲಕ್ಷ ಬಹುಮಾನ!

Narendra Dabholkar
ದೇಶ9 mins ago

Narendra Dabholkar Case: ವಿಚಾರವಾದಿ ದಾಭೋಲ್ಕರ್ ಹತ್ಯೆ ಪ್ರಕರಣ; ಹಂತಕರಿಗೆ ಜೀವಾವಧಿ ಶಿಕ್ಷೆ

Star Suvarna
ಕಿರುತೆರೆ10 mins ago

Star Suvarna: ಬಹುಮಾನದ ಜತೆಗೆ ಮನೋರಂಜನೆ ಹೊತ್ತು ಬರುತ್ತಿದೆ ʼಸುವರ್ಣ ಗೃಹಮಂತ್ರಿʼ; ಯಾವಾಗ ಪ್ರಸಾರ?

Lok Sabha Election 2024 26000 km travelled for Lok Sabha campaigning CM to campaign for 14 to 18 hours a day
ರಾಜಕೀಯ12 mins ago

Lok Sabha Election 2024: ಲೋಕಸಭಾ ಪ್ರಚಾರಕ್ಕೆ 26 ಸಾವಿರ ಕಿಲೋ ಮೀಟರ್ ಸಂಚಾರ, ದಿನಕ್ಕೆ ಸರಾಸರಿ 14-18 ಗಂಟೆ ಸಿಎಂ ಪ್ರಚಾರ!

murder case kalaburagi
ಕಲಬುರಗಿ25 mins ago

Murder Case : ಕಾಂಗ್ರೆಸ್‌ಗೆ ವೋಟ್‌ ಹಾಕಿದ್ದಕ್ಕೆ ಅಮಾವಾಸ್ಯೆ ದಿನ ಕರೆದು ಕೊಂದರು

gold rate today
ಚಿನ್ನದ ದರ38 mins ago

Gold Rate Today: ಅಕ್ಷಯ ತದಿಗೆಯಂದು ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ; ಬಂಗಾರ ಕೊಳ್ಳಲು ಮುಗಿಬಿದ್ದ ಜನ; ದರಗಳು ಹೀಗಿವೆ

Yogi Adityanath
ದೇಶ39 mins ago

Yogi Adityanath: ʼಅಕ್ಬರ್‌ಪುರʼದ ಮೇಲೆ ಯೋಗಿ ಆದಿತ್ಯನಾಥ್ ಮಾಸ್ಟರ್‌ ಸ್ಟ್ರೋಕ್‌; ಹೆಸರು ಬದಲಾವಣೆಯ ಸೂಚನೆ

mani shankar iyer
ದೇಶ43 mins ago

Mani Shankar Aiyar: ಪಾಕಿಸ್ತಾನವನ್ನು ಕೆಣಕಿದರೆ ಅಣು ಬಾಂಬ್ ಬೀಳಬಹುದು ಹುಷಾರ್! ಮೋದಿಗೆ ಮಣಿಶಂಕರ್ ಅಯ್ಯರ್ ಎಚ್ಚರಿಕೆ!

ICMR Dietary Guidelines
ಆರೋಗ್ಯ56 mins ago

ICMR Dietary Guidelines: ಬೊಜ್ಜು ತಡೆಯಲು ಏನು ಮಾಡಬೇಕು? ಮಾರ್ಗಸೂಚಿ ಬಿಡುಗಡೆ ಮಾಡಿದ ಸಂಶೋಧನಾ ಸಂಸ್ಥೆ

Murder Case
ಬೆಂಗಳೂರು60 mins ago

Murder case : ಪ್ರೀತಿ ವಿಷ್ಯಕ್ಕೆ ಬೀದಿ ಹೆಣವಾದ! ಮಗನ ಡೆಡ್‌ಬಾಡಿ ನೋಡಿ ಮೂರ್ಛೆ ಹೋದ ತಾಯಿ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Rain Effect In karnataka
ಮಳೆ2 hours ago

Rain Effect : ಬಿರುಗಾಳಿ ರಭಸಕ್ಕೆ ಮನೆಯ ಗೇಟ್ ಬಿದ್ದು ಬಾಲಕಿ ಸಾವು; ಸಿಡಿಲಿಗೆ ಎತ್ತುಗಳು ಬಲಿ

Dina Bhavishya
ಭವಿಷ್ಯ8 hours ago

Dina Bhavishya: ಶುಭ ಶುಕ್ರವಾರ ಈ ರಾಶಿಯವರಿಗೆ ಖುಲಾಯಿಸಲಿದೆ ಲಕ್‌

Prajwal Revanna case Revanna bail plea to be heard on Monday Advocate Nagesh argument was as follows
ಕ್ರೈಂ15 hours ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ಸೋಮವಾರಕ್ಕೆ: ಎಸ್‌ಐಟಿಗೆ ಹಿಗ್ಗಾಮುಗ್ಗಾ ತರಾಟೆ; ವಕೀಲ ನಾಗೇಶ್‌ ವಾದ ಹೀಗಿತ್ತು!

Prajwal Revanna Case Hasanambe is going to destroy this government HD Kumaraswamy curse
ರಾಜಕೀಯ16 hours ago

Prajwal Revanna Case: ಈ ಸರ್ಕಾರವನ್ನು ಹಾಸನಾಂಬೆ ಧ್ವಂಸ ಮಾಡಲಿದ್ದಾಳೆ: ಎಚ್‌ಡಿಕೆ ಶಾಪ

Prajwal Revanna Case DK Shivakumar alleged mastermind in 25000 pen drive allotment
ಹಾಸನ17 hours ago

Prajwal Revanna Case: 25,000 ಪೆನ್ ಡ್ರೈವ್ ಹಂಚಿಕೆಯಲ್ಲಿ ಡಿ.ಕೆ. ಶಿವಕುಮಾರ್ ಮಾಸ್ಟರ್ ಮೈಂಡ್ ಎಂದು ರಾಜ್ಯಪಾಲರಿಗೆ ದೂರು!

SSLC Result 2024 what is the reason for most of the students fail in SSLC
ಕರ್ನಾಟಕ24 hours ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚಿನ ಮಕ್ಕಳು ಫೇಲ್‌ ಆಗಲು ಶಿಕ್ಷಣ ಇಲಾಖೆಯ ಈ ನಿರ್ಧಾರವೇ ಕಾರಣ!

Sslc exam Result 2024
ಶಿಕ್ಷಣ24 hours ago

SSLC Result 2024 : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲಾದರೂ, ಕಡಿಮೆ ಅಂಕ ಬಂದರೂ ಡೋಂಟ್‌ ವರಿ; ಇನ್ನೂ ಇದೆ ಎರಡು ಚಾನ್ಸ್‌!

SSLC Result 2024 secret behind 20 percent grace marks
ಕರ್ನಾಟಕ1 day ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಈ ಬಾರಿ ನೂರಕ್ಕೆ 25 ಅಂಕ ಪಡೆದವರೂ ಪಾಸ್! ಶೇ. 20 ಗ್ರೇಸ್ ಮಾರ್ಕ್ಸ್ ಕೊಟ್ಟಿದ್ದರ ಹಿಂದಿದೆ ಇಂಟರೆಸ್ಟಿಂಗ್ ಕತೆ!

SSLC Result 2024 78 schools get zero results in SSLC exams
ಬೆಂಗಳೂರು1 day ago

SSLC Result 2024: ಎಸ್‌ಎಸ್‌ಎಲ್‌ಸಿ ಎಕ್ಸಾಂನಲ್ಲಿ ಸಿಕ್ಸರ್‌ ಬಾರಿಸಿದ ಗ್ರಾಮೀಣ ಪ್ರತಿಭೆಗಳು; 78 ಶಾಲೆಗಳಲ್ಲಿ ಶೂನ್ಯ ರಿಸಲ್ಟ್‌!

SSLC Result 2024 SSLC students get 20 percent grace marks but result is very poor
ಶಿಕ್ಷಣ1 day ago

SSLC Result 2024: ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಸಿಕ್ತು 20 ಪರ್ಸೆಂಟ್ ಗ್ರೇಸ್ ಮಾರ್ಕ್ಸ್‌! ಆದ್ರೂ ಫಲಿತಾಂಶ ತೀರಾ ಕಳಪೆ

ಟ್ರೆಂಡಿಂಗ್‌